ಸಂಪಾದಕೀಯ

@@NEWS_SUBHEADLINE_BLOCK@@

Lohkarya - Udyam Prakashan    20-Jul-2021   
Total Views |

sdfghjk_1  H x
 
ಉದ್ಯಮ ಪ್ರಕಾಶನದ ವತಿಯಿಂದ ಪ್ರಕಟಿಸಲಾಗುವ ಮರಾಠಿ ‘ಧಾತುಕಾಮ’ ಈ ಮಾಸ ಪತ್ರಿಕೆಯ 50 ನೇ ಸಂಚಿಕೆಯನ್ನು ಜುಲೈ 2021 ರಲ್ಲಿ ಪ್ರಕಟಿಸಲಾಯಿತು. ಮರಾಠಿ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದ ನಂತರ ಮುಂದಿನ ಎರಡು ವರ್ಷಗಳಲ್ಲಿಯೇ ‘ಲೋಹಕಾರ್ಯ’ (ಕನ್ನಡ), ‘ಧಾತುಕಾರ್ಯ’ (ಹಿಂದಿ) ಮತ್ತು ‘ಧಾತುಕಾಮ’ (ಗುಜರಾಥಿ) ಭಾಷೆಗಳಲ್ಲಿ ಈ ಮಾಸ ಪತ್ರಿಕೆಯನ್ನು ಪ್ರಸ್ತುತ ಪಡಿಸಲಾಯಿತು. ಲಘು ಮಧ್ಯಮ ಕೈಗಾರಿಕೋದ್ಯಮಗಳ ಶಾಪ್ ಫ್ಲೋರ್ ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಕಣ್ಣೆದುರು ಇಟ್ಟುಕೊಂಡು ಪ್ರತಿಯೊಂದು ಸಂಚಿಕೆಯು ಹೇಗೆ ಮೂಡಿ ಬರಬೇಕು, ಈ ಬಗ್ಗೆ ನೀತಿಗಳನ್ನು ನಿರ್ಧರಿಸಿ ಮಾಸ ಪತ್ರಿಕೆಯನ್ನು ಪ್ರಾರಂಭಿಸಲಾಗಿತ್ತು. ಆಯಾ ಸಮಯದಲ್ಲಿರುವ ಔದ್ಯೋಗಿಕ ಸ್ಥಿತಿ, ದೇಶದ ಪ್ರಗತಿಯಲ್ಲಿರುವ ರಾಷ್ಟ್ರೀಯ GDP ಮತ್ತು ಅದಕ್ಕೆ ಪೂರಕವಾಗಿರುವ ಎಲ್ಲ ವಲಯಗಳಲ್ಲಿ ಅಪೇಕ್ಷಿಸಲಾಗಿರುವ ಹೆಚ್ಚಳವು ಕಳೆದ ಒಂದುವರೆ ವರ್ಷದ ಕಾಲಾವಧಿಯಲ್ಲಿ ಬದಲಾವಣೆಗೊಂಡಿರುವುದು ಗಮನಕ್ಕೆ ಬರುತ್ತಿದೆ.
 
 
ತಮ್ಮ ವ್ಯವಸಾಯದಲ್ಲಿ ವೃದ್ಧಿಯನ್ನು ಮಾಡುವುದಾದಲ್ಲಿ ಮಾರುಕಟ್ಟೆಯಲ್ಲಿರುವ ಬೇಡಿಕೆಗೆ ಪೂರಕವಾಗುವ ಸಂಪನ್ಮೂಲಗಳನ್ನು ತಮ್ಮ ಕಾರ್ಖಾನೆಗಳಲ್ಲಿ ಬಳಸುವುದು ಅತ್ಯಾವಶ್ಯಕವಾಗಿದೆ. ಇಂತಹ ಸಂಪನ್ಮೂಲಗಳನ್ನು ಕಲೆಹಾಕುವಲ್ಲಿ ಅತ್ಯಾವಶ್ಯಕವಾಗಿರುವ ಜ್ಞಾನ ಮತ್ತು ಮಾಹಿತಿಯನ್ನು ಈ ಸಂಚಿಕೆಗಳಿಂದ ನೀಡುವಲ್ಲಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಅದಕ್ಕೆ ಬೇಕಾಗುವ ಲೇಖನಗಳ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಮಾಡುತ್ತಿದ್ದೇವೆ. ಕಳೆದ ಒಂದುವರೆ ವರ್ಷದಲ್ಲಿ ಜಗತ್ತಿನೆಲ್ಲೆಡೆ ಉದ್ಭವಿಸಿರುವ ಸಾಂಕ್ರಾಮಿಕ ರೋಗ ಮತ್ತು ಲಘು ಮಧ್ಯಮ ಕೈಗಾರಿಕೋದ್ಯಮಗಳಲ್ಲಿ ಪ್ರಸ್ತುತ ಇರುವ ಪರಿಸ್ಥಿತಿಯು ಕುರಿತು ಅನೇಕರೊಂದಿಗೆ ಮಾತುಕತೆಯನ್ನು ಮಾಡಲಾಯಿತು. ನದಿಯಲ್ಲಿ ಹರಿಯುವ ಪ್ರವಾಹದಲ್ಲಿ ದೊಡ್ಡ ಮರಗಳು ಮುಂದೆ ಸಾಗುತ್ತವೆ, ಆದರೆ ಈ ಪ್ರವಾಹದಲ್ಲಿ ಚಿಕ್ಕ-ಪುಟ್ಟ ಗಿಡಗಳು ಅಲ್ಲಲ್ಲೇ ಉಳಿಯುತ್ತವೆ. ಇದೇ ನೀತಿಯ ಕುರಿತು ವಿಚಾರ ಮಾಡಿದಲ್ಲಿ ಪ್ರಸ್ತುತ ಪರಿಸ್ಥಿತಿ ಹೀಗಿದೆ ಎಂದೆನಿಸುತ್ತದೆ. ಹಲವಾರು ವರ್ಷಗಳಿಂದ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಸಾರವಾಗಿ ವಸ್ತುಗಳನ್ನು ಪೂರೈಸಲು ಸ್ಥಾಪಿಸಿರುವ ಉದ್ಯಮಗಳು ಮಾತ್ರ ಪ್ರಸ್ತುತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ ಸ್ಥಿತಿಯನ್ನು ಅನೇಕ ಉದ್ಯಮಿಗಳು ಅನುಭವಿಸುತ್ತಿದ್ದಾರೆ. ಈ ರೀತಿಯಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಎದುರಿಸಲು ತಮ್ಮ ಕಾರ್ಖಾನೆಗಳಲ್ಲಿ ಹಲವರು ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿದ್ದಾರೆ. ಅಲ್ಲದೇ ಹೊಸದಾಗಿ ನಿರ್ಮಾಣವಾಗಿರುವ ಮಾರುಕಟ್ಟೆಯೊಂದಿಗೆ ಹೊಂದಾಣಿಕೆಯನ್ನು ಮಾಡಲು ಪ್ರಾರಂಭಿಸಿದರು. ಈ ಬದಲಾವಣೆಗಳು ಮಾರುಕಟ್ಟೆಯಲ್ಲಿ ಸ್ಥಿರವಾಗಿ ಉದ್ಯಮದಲ್ಲಿ ಹೆಚ್ಚಳವೂ ಆಯಿತು. ಹಲವಾರು ಉದ್ಯಮಿಗಳು ಪಾರಂಪಾರಿಕವಾದ ಗ್ರಾಹಕರಿಂದ, ಬೇಡಿಕೆಯಲ್ಲಾದ ಇಳಿತವನ್ನು ಬಹು ದೊಡ್ಡ ಸಮಸ್ಯೆ ಎಂಬುದಾಗಿ ಪರಿಗಣಿಸದೇ, ಹೊಸ ಹೊಸ ಗ್ರಾಹಕರನ್ನು ಕಲೆಹಾಕುವುದನ್ನು, ಒಂದು ಸದವಕಾಶ ಎಂಬುದಾಗಿ ವಿಚಾರ ಮಾಡಿದರು. ಇದರಿಂದಾಗಿ ಈ ಕೈಗಾರಿಕೋದ್ಯಮಗಳಲ್ಲಿ ಯಾವುದೇ ರೀತಿಯ ಗೊಂದಲವುಂಟಾಗಲಿಲ್ಲ. ಲಾಕ್ ಡೌನ್ ನಲ್ಲಿ ಸಿಕ್ಕಿರುವ ಸಮಯವನ್ನು ಸೂಕ್ತ ರೀತಿಯಲ್ಲಿ ಬಳಸಿ ಹಲವಾರು ಕೈಗಾರಿಕೋದ್ಯಮಿಗಳು ರಫ್ತು ಮಾಡುವಲ್ಲಿ ಸಕ್ಷಮರಾಗಲು ಬೇಕಾಗಿರುವ ಎಲ್ಲ ರೀತಿಯ ಪೂರ್ವಸಿದ್ಧತೆಯನ್ನು ಮಾಡಿದರು.
 
 
ನದಿಯ ಪ್ರವಾಹದಲ್ಲಿ ಉಳಿದಿರುವ ಚಿಕ್ಕ-ಪುಟ್ಟ ಗಿಡಗಳಂತೆ ಯಾವ ಕೈಗಾರಿಕೋದ್ಯಮಿಗಳು ತಮ್ಮಲ್ಲಿ ಫ್ಲೆಕ್ಸಿಬಿಲಿಟಿಯನ್ನು ಇಟ್ಟುಕೊಂಡರೋ, ಅವರಲ್ಲಿ ಕೆಲಸದ ಕೊರತೆ ಇಲ್ಲ, ಎಂಬ ಅಂಶವು ಈ ಕಾಲಾವಧಿಯಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಂಭಾಷಣೆಯನ್ನು ಮಾಡುವಾಗ ಗಮನಕ್ಕೆ ಬಂತು. ಚಿಕ್ಕ-ಪುಟ್ಟ ಉದ್ಯಮಿಗಳಿರಲಿ ಅಥವಾ ಬೃಹತ್ ಉದ್ಯಮಿಗಳಿರಲಿ, ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಧಿಗೆ ಹೆಚ್ಚೆಚ್ಚು ಸಹಾಯವಾಗಬಲ್ಲ ಉದ್ದೇಶವನ್ನು ಇಟ್ಟಿರುವುದು, ವಿಶೇಷವಾಗಿ ಗಮನಕ್ಕೆ ಬಂದಿರುವ ಅಂಶವಾಗಿದೆ. ಇದರಲ್ಲಿ ನುರಿತ ಕೆಲಸಗಾರರು ಮುಂದೆ ಮಾಡಲಾಗುವ ಉತ್ಪಾದನೆ ಮತ್ತು ಗುಣಮಟ್ಟದ ಕುರಿತಾದ ಬೇಡಿಕೆಗಳನ್ನು ಪೂರ್ತಿಗೊಳಿಸಲು ಇರಲೇ ಬೇಕು, ಈ ಕುರಿತು ವಿಚಾರ ಮಾಡಿದರೂ ಕೂಡಾ ಅದರಲ್ಲಿರುವ ಮಾನವೀಯತೆ ಮಾತ್ರ ಹೆಮ್ಮೆಯ ವಿಷಯವೇ ಸರಿ. ಮುಂಬರುವ ಸವಾಲುಗಳನ್ನು ಎದುರಿಸಲು ಆತ್ಯಾವಶ್ಯಕವಾದ ಸಿದ್ಧತೆಯನ್ನು ಮಾಡುವಲ್ಲಿ ತಾಂತ್ರಿಕ ಅಂಶಗಳ ಮಾಹಿತಿ ಮತ್ತು ನಿಪುಣತೆಯನ್ನು ವೃದ್ಧಿಸಲು ಈ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುವ ವಿಶ್ಲೇಷಣಾತ್ಮಕವಾದ ಲೇಖನಗಳು ಉಪಯುಕ್ತವಾಗಬಲ್ಲವು.
 
 
‘ಲೋಹಕಾರ್ಯ’ದ ಪ್ರಸ್ತುತ ಸಂಚಿಕೆಯಲ್ಲಿ ಥ್ರೆಡ್ ಗಳನ್ನು ತಯಾರಿಸಲು ಬಳಸಲಾಗುವ ಥ್ರೆಡಿಂಗ್ ಪ್ರಕ್ರಿಯೆಯ ಕುರಿತು ವಿಸ್ತಾರವಾದ ಮಾಹಿತಿ ಕೂಡಿರುವ ಲೇಖನವನ್ನು ಪ್ರಕಟಿಸಲಾಗಿದೆ. ಶಾಪ್ ನಲ್ಲಿ ಯಾವಾಗಲೂ ಬಳಸಲಾಗುವ ಈ ಪ್ರಕ್ರಿಯೆಯ ಕುರಿತು ಕೆಲವು ಹೊಸ ವಿಚಾರಗಳನ್ನು ಓದುಗರು ಮೆಚ್ಚಬಲ್ಲರು. ಇದರೊಂದಿಗೆ CMM ಪ್ರೊಗ್ರಾಮಿಂಗ್ ನಲ್ಲಿ ಬಂದಿರುವ ಹೊಸ ತಂತ್ರಜ್ಞಾನ ಮತ್ತು ಕಟಿಂಗ್ ಟೂಲ್ ನ ಸ್ಮಾರ್ಟ್ ಯೋಜನೆಯ ಕುರಿತಾದ ವಿಸ್ತಾರವಾದ ಮಾಹಿತಿಯನ್ನು ನೀಡಬಲ್ಲ ಲೇಖನವೂ ಈ ಸಂಚಿಕೆಯಲ್ಲಿದೆ. ಇದರೊಂದಿಗೆ ಸಿ.ಎನ್.ಸಿ. ಪ್ರೊಗ್ರಾಮಿಂಗ್, ಇಂಡಸ್ಟ್ರಿ 4.0 ಮತ್ತು IoT, ಆರ್ಥಿಕ ಯೋಜನೆ ಇಂತಹ ಲೇಖಮಾಲೆಗಳ ಮೂಲಕ ಅನೇಕ ವಿಷಯಗಳ ಕುರಿತಾದ ಮಾಹಿತಿಯನ್ನು ಈ ಸಂಚಿಕೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಈ ಮಾಸ ಪತ್ರಿಕೆಯಲ್ಲಿ ಅಡಗಿರುವ ಮಾಹಿತಿ ಮತ್ತು ಲೇಖನಗಳ ಕುರಿತು ಓದುಗರಿಂದ ಸಲಹೆ ಸೂಚನೆಗಳನ್ನು ಅಪೇಕ್ಷಿಸುತ್ತೇವೆ. ಮಾಸ ಪತ್ರಿಕೆಯ ಕುರಿತಾದ ಆಪೇಕ್ಷೆಗಳನ್ನು ತಾವು ಆಗಾಗ ಬರೆದು ಕಳುಹಿಸಿರಿ. ಇದರಿಂದಾಗಿ ಓದುಗರಿಗೆ ಸಂಚಿಕೆಗಳ ಕುರಿತು ಇನ್ನಷ್ಟು ತನ್ನತನವು ಉಂಟಾಗಬಲ್ಲದು.
 
 
ದೀಪಕ ದೇವಧರ
@@AUTHORINFO_V1@@