ಕಟಿಂಗ್ ಟೂಲ್ ಸಂಗ್ರಹಣೆಯ ಸ್ಮಾರ್ಟ್ ವ್ಯವಸ್ಥಾಪನೆ

@@NEWS_SUBHEADLINE_BLOCK@@

Total Views |

ಕಂಪನಿಯಲ್ಲಿ ಟೂಲಿಂಗ್ ಗೋಸ್ಕರ ಮಾಡಲಾಗುವ ಖರ್ಚು ಇದೊಂದು ಒಟ್ಟು ಖರ್ಚಿನ ನಿಯಮಿತವಾದ ಘಟಕ. ಪ್ರಭಾವಶಾಲಿಯಾದ ಇನ್ವೆಂಟರಿಯ ವ್ಯವಸ್ಥಾಪನೆಯ ಮೂಲಕ ಈ ಖರ್ಚನ್ನು ಕಡಿಮೆ ಮಾಡಿದಲ್ಲಿ ಉತ್ಪಾದಕರಿಗೆ ಪ್ರತಿ ಪಾರ್ಟ್ ಖರ್ಚು ಕಡಿಮೆ (CPP) ಮಾಡುವುದು, ಲಾಭದಲ್ಲಿ ಹೆಚ್ಚಳ ಮತ್ತು ಅಂತಿಮ ಉತ್ಪಾದನೆಯ ಬೆಲೆ ಹೆಚ್ಚು ಸ್ಪರ್ಧಾತ್ಮಕವಾಗಿ ಇಡುವುದು ಸಾಧ್ಯ. ಟೂಲ್ ನ ವ್ಯವಸ್ಥಾಪನೆ ಸೂಕ್ತ ರೀತಿಯಲ್ಲಿ ಮಾಡಲು ಅಭಿವೃದ್ಧಿ ಪಡಿಸಿದ ಸ್ಮಾರ್ಟ್ ಸ್ಟೋರೇಜ್ ಮತ್ತು ಕಟಿಂಗ್ ಟೂಲ್ ಇನ್ವೆಂಟರಿ ವ್ಯವಸ್ಥಾಪನೆ ಕುರಿತಾದ ಲೇಖನ.
ghjkbfgfgg_1  H
ಇಂದು ಲೋಹಗಳ ಯಂತ್ರಣೆಯ ಉದ್ಯಮದಲ್ಲಿ ಲಾಭಕಾರಿಯಾಗಿ ವ್ಯವಸಾಯವನ್ನು ಮಾಡಲು ಉತ್ಪಾದಕರಿಗೆ ಟೂಲಿಂಗ್ ನ ಖರ್ಚಿನೆಡೆಗೆ ಗಮನ ಹರಿಸುವುದು ಅತ್ಯಾವಶ್ಯವಾಗಿದೆ. ಉತ್ಪಾದಕರ ಗಮನವು ಯಾವಾಗಲೂ ಯಾವುದರಲ್ಲಿ ಬೃಹತ್ ಪ್ರಮಾಣದ ಬಂಡವಾಳವನ್ನು ಹೂಡುವದರಲ್ಲಿ, ಉಪಕರಣಗಳಿಗೆ ತಗಲುವ ಖರ್ಚಿನಲ್ಲಿಯೇ ಗಮನವು ಕೇಂದ್ರೀಕರಿಸಲ್ಪಡುತ್ತವೆ. ಆದ್ದರಿಂದ ಟೂಲಿಂಗ್ ನ ಖರ್ಚಿನೆಡೆಗೆ ನಿರ್ಲಕ್ಷವಾಗುತ್ತದೆ. ಆದರೆ ಟೂಲಿಂಗ್ ನ ಖರ್ಚು ಕಂಪನಿಯ ಒಟ್ಟು ಖರ್ಚಿನ ಒಂದು ಘಟಕವಾಗಿದ್ದು ಇದು ಆಗಾಗ ಮಾಡಬೇಕಾಗಿರುವ ಪ್ರತಿದಿನದ ಖರ್ಚಾಗಿರುತ್ತದೆ. ಈ ಅಂಶವನ್ನು ಅವರಿಗೆ ಮನದಟ್ಟಾಗುವಂತೆ ಹೇಳಬೇಕು. ಪ್ರಭಾವಶಾಲಿಯಾಗಿ ವಸ್ತುಗಳ ಶೇಖರಣೆಯ (ಇನ್ವೆಂಟರಿ) ವ್ಯವಸ್ಥಾಪನೆಯ ಮೂಲಕ ಈ ಖರ್ಚನ್ನು ಕಡಿಮೆ ಮಾಡಿದಲ್ಲಿ ಉತ್ಪಾದಕರಿಗೆ ಪ್ರತಿ ಭಾಗಕ್ಕೆ (ಪಾರ್ಟ್) ಮಾಡಬೇಕಾಗಿರುವ ಖರ್ಚನ್ನು (CPP) ಕಡಿಮೆ ಮಾಡುವುದು, ಲಾಭವನ್ನು ಹೆಚ್ಚಿಸುವುದು ಮತ್ತು ಅಂತಿಮವಾಗಿ ಉತ್ಪಾದನೆಯ ಬೆಲೆಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಇಡುವುದು ಸಾಧ್ಯವಾಗಬಲ್ಲದು.
ಇದರಲ್ಲಿ ಹೊಸದಾಗಿ ಬರುವ ಮತ್ತು ಬಳಸಲಾಗುವ ಟೂಲ್ ಗಳ ಪ್ರಭಾವಶಾಲಿಯಾದ ವ್ಯವಸ್ಥಾಪನೆ, ಅವುಗಳ ಹಿನ್ನೆಲೆಯ ಕ್ಷಮತೆ (ಟ್ರೆಸೆಬಿಲಿಟಿ), ಟೂಲ್ ಗಳನ್ನು ಹುಡುಕಲು ಬೇಕಾಗುವ ಸಮಯವನ್ನು ಕಡಿಮೆ ಮಾಡುವುದು ಮತ್ತು ಕೈಯಿಂದ ನೊಂದಾಣಿಕೆಯನ್ನು ಮಾಡುವ ಪ್ರಕ್ರಿಯೆಯ ಜಾಗದಲ್ಲಿ ಒಂದು ಸೂಕ್ತ ರೀತಿಯ ಸಾಫ್ಟ್ ವೇರ್ ಗೆ ಆಧರಿಸಿರುವ ಟೂಲ್ ಗಳ ವ್ಯವಸ್ಥಾಪನೆಗೆ ಉಪಾಯಗಳನ್ನು ಕಾರ್ಯಗತಗೊಳಿಸುವುದು, ಇಂತಹ ಉಪಾಯಗಳು ಒಳಗೊಂಡಿವೆ.
 


ghjkbfgfggcdfgdf_1 & 
ಚಿತ್ರ ಕ್ರ. 1 : ಕೀಪರ್ ರೇಕ್
 
ಪ್ರಚಲಿತ ಪದ್ಧತಿಯಲ್ಲಿರುವ ಸಮಸ್ಯೆಗಳು
1. ಕೈಯಿಂದ ನೊಂದಣಿಯನ್ನು ಮಾಡುವಲ್ಲಿ ಹೆಚ್ಚು ಶ್ರಮ ಮತ್ತು ತಪ್ಪುಗಳಾಗುವ ಸಾಧ್ಯತೆಯೂ ಹೆಚ್ಚು ಪ್ರಮಾಣದಲ್ಲಿರುತ್ತದೆ.
2. ಟೂಲ್ ಗಳನ್ನು ಹುಡುಕುವಲ್ಲಿ ತುಂಬಾ ಸಮಯವು ಬೇಕಾಗುವುದರಿಂದ ಆಪರೇಟರ್ ಗೆ ಕಿರಿಕಿರಿಯಾಗುವುದು ಮತ್ತು ಉತ್ಪಾದಕತೆಯು ಕಡಿಮೆಯಾಗುವ ಸಾಧ್ಯತೆಯು ಇರುತ್ತದೆ.
3. ಕಾರ್ಖಾನೆಯಲ್ಲಿ ಯಾವ ಕಟಿಂಗ್ ಟೂಲ್ ಎಲ್ಲಿರಬಲ್ಲದು, ಎಂಬ ಮಾಹಿತಿಯ ಅಭಾವವು ಇರುತ್ತದೆ.
4. ಬಳಸಲಾಗಿರುವ ಟೂಲ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಲಾಗುವುದಿಲ್ಲ.
5. ಸ್ಕ್ರ್ಯಾಪ್ ಮಾಡಲಾಗಿರುವ ಟೂಲ್ ಗಳ ವ್ಯವಸ್ಥೆಯ ಅತ್ಯಂತ ಕೀಳು ಮಟ್ಟದ್ದು.
6. ಎಲ್ಲೆಡೆಯಲ್ಲಿ ಉಪಯೋಗಿಸಲ್ಪಡುವ ಶೇಖರಣೆಯ ವಿಶ್ಲೇಷಣೆಯ ವರದಿಯು ಲಭ್ಯವಿಲ್ಲದಿರುವುದು.
7. ಪಾರಂಪಾರಿಕ ರೇಕ್ ನಿಂದಾಗಿ ಟೂಲ್ ರೂಮ್ ನಲ್ಲಿರುವ ಜಾಗದ ಯೋಗ್ಯ ರೀತಿಯ ಬಳಕೆಯನ್ನು ಮಾಡದಿರುವುದು.
8. ಇವೆಲ್ಲ ಕಾರಣಗಳಿಂದಾಗಿ ಟೂಲಿಂಗ್ ಖರ್ಚು ಮತ್ತು ಅನುತ್ಪಾದಕತೆಯ ಸಮಯ ಹೆಚ್ಚು ಇರುವುದು.
 
ಪರ್ಯಾಯಗಳು
ಮೇಲಿನ ಎಲ್ಲ ಸಮಸ್ಯೆಗಳನ್ನು ನೀಗಿಸಲು ಮತ್ತು ಲೋಹಗಳ ಯಂತ್ರಣೆಯನ್ನು ಮಾಡಬಲ್ಲ ಕಾರ್ಖಾನೆಗಳಲ್ಲಿ ಬಳಸಲಾಗುವ ಟೂಲ್ ಗಳ ಒಟ್ಟು ಖರ್ಚು ಕಡಿಮೆ ಮಾಡಲು, ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗ್ರಾಹಕರಿಗೆ ಅನುಗುಣವಾಗಿ ತಯಾರಿಸಿ ಅನೇಕ ಪರ್ಯಾಯಗಳನ್ನು ‘ಝೋಲರ್’ ಈ ಕಂಪನಿಯು ನೀಡಬಲ್ಲದು. ಇದರಿಂದಾಗಿ ಟೂಲ್ ವ್ಯವಸ್ಥಾಪನೆಯ ಕೆಲಸದಲ್ಲಿ ಶಿಸ್ತು ಮತ್ತು ಸುಲಲಿತವಾದ ವ್ಯವಸ್ಥೆಯು ಇರಬಲ್ಲದು.
 

dfergtyhuji_1   
ಚಿತ್ರ ಕ್ರ. 2 : ಟೂಲ್ ಆರ್ಗನೈಝರ್
 
ಹಾರ್ಡ್ ವೇರ್ – ಸ್ಮಾರ್ಟ್ ಕಪಾಟು
1. ಝೋಲರ್ ಕೀಪರ್
ಕೀಪರ್ ಕಪಾಟು ಇದೊಂದು ವರ್ಟಿಕಲ್ ಶೇಖರಣೆಯ ಪ್ರಣಾಳಿಕೆಯಾಗಿದೆ. ಪಾರಂಪಾರಿಕವಾದ ಪದ್ಧತಿಯಲ್ಲಿ ಹೆಚ್ಚು ಜಾಗವನ್ನು ಆಕ್ರಮಿಸುವ ಓಪನ್ ರೇಕ್ ನ ಬದಲಾಗಿ ಈ ಪ್ರಣಾಳಿಕೆಯನ್ನು ಬಳಸಿದ್ದರಿಂದ 1x1 ಸ್ಕ್ವೇರ್ ಮೀಟರ್ ನಷ್ಟು ಚಿಕ್ಕದಾದ ಜಾಗದಲ್ಲಿ, 240 ರಿಂತ 480 ಟೂಲ್ ಹೋಲ್ಡರ್ (ಟೂಲ್ ಹೋಲ್ಡರ್ ಗಳ ಆಕಾರ ಮತ್ತು ವಿಧಕ್ಕೆ ಅನುಗುಣವಾಗಿ) ಮತ್ತು/ಅಥವಾ ಅಸೆಂಬ್ಲಿ ಇಡುವುದೂ ಸಾಧ್ಯವಾಗಿದೆ. ಇದರಲ್ಲಿ ಎತ್ತರಕ್ಕೆ ಅನುಸಾರವಾಗಿ ಎರಡು ಪರ್ಯಾಯಗಳು (1000 ಮಿ.ಮೀ. ಮತ್ತು 2000 ಮಿ.ಮೀ.) ಮತ್ತು ಅಂತಸ್ತುಗಳಿಗೆ (ಡ್ರಾವರ್) ಅನುಸಾರವಾಗಿ ಎರಡು ಪರ್ಯಾಯಗಳು (3 ಅಂತಸ್ತುಗಳು ಮತ್ತು 5 ಅಂತಸ್ತುಗಳು) ಇರುತ್ತವೆ. ವರ್ಟಿಕಲ್ ಅಂತಸ್ತುಗಳ ಒಳಭಾಗದಲ್ಲಿರುವ ಪಾಕೇಟ್ ಗಳ ರಚನೆ ಟೂಲ್ ಹೋಲ್ಡರ್ ನ ಅಥವಾ ಅಸೆಂಬ್ಲಿಯ ಎತ್ತರಕ್ಕೆ ಅನುಸಾರವಾಗಿ ಹೇಗೂ ಸರಿಹೊಂದಿಸಬಹುದಾಗಿದೆ. ಪ್ರತಿಯೊಂದು ಪಾಕೇಟ್ ನಲ್ಲಿ 1000 ಕಿ.ಗ್ರಾಂ. ಭಾರವನ್ನು ಇಡುವ ಕ್ಷಮತೆಯು ಇರುತ್ತದೆ. 5 ಪಾಕೇಟ್ ಗಳ ವಿಧದಲ್ಲಿ ಇಡಲಾಗುವ ವಸ್ತುಗಳಿಗೆ ವ್ಯಾಸದ ಮಿತಿ 150 ಮಿ.ಮೀ. ಇರುತ್ತದೆ. ಆದರೆ 3 ಪಾಕೇಟ್ ಗಳ ವಿಧದಲ್ಲಿ 300 ಮಿ.ಮೀ.ತನಕ ವ್ಯಾಸದ ವಸ್ತುಗಳನ್ನು ಇಡಬಹುದಾಗಿದೆ. ಟೂಲ್ ಹೋಲ್ಡರ್ ಗಳ ವಿಧಗಳಿಗೆ ಅನುಸಾರವಾಗಿ (BT40, HSK63, Capto C4 ಮುಂತಾದವುಗಳು) ಅವುಗಳನ್ನು ಇಡುವ ಅನೇಕ ವಿಧದ ಪ್ಲಾಸ್ಟಿಕ್ ಇನ್ಸರ್ಟ್ ಪೂರೈಸಲಾಗುತ್ತದೆ. ಕೀಪರ್ ರೇಕ್ ಮ್ಯಾನ್ಯುವಲ್ ಮತ್ತು ಇಲೆಕ್ಟ್ರಾನಿಕ್ ಇವುಗಳು ಎರಡು ವಿಧದ ಲಾಕಿಂಗ್ ವಿಧದಲ್ಲಿ ಲಭ್ಯವಿವೆ. ಇಲೆಕ್ಟ್ರಾನಿಕ್ ವಿಧದಲ್ಲಿ ಪಾಕೇಟ್ ನ ಲಾಕಿಂಗ್ ಟೂಲ್ ಮ್ಯಾನೆಜ್ ಮೆಂಟ್ ಸಲ್ಯೂಶನ್ (TMS) ರೇಕ್ ಕಂಟ್ರೋಲ್ ಸಾಫ್ಟ್ ವೇರ್ ಮೂಲಕ ನಿಯಂತ್ರಿಸಲಾಗುತ್ತದೆ. ಸುರಕ್ಷಿತವಾಗಿ ಶೇಖರಿಸುವುದು, ಹೆಚ್ಚು ಭಾರದವನ್ನು ಇಡಬಹುದಾದ ಕ್ಷಮತೆ ಮತ್ತು ಜಾಗದ ಉತ್ಕೃಷ್ಟವಾದ ಉಪಯೋಗ ಇವೆಲ್ಲವೂ ಈ ರೇಕ್ ನ ಪ್ರಮುಖ ಲಾಭಗಳಾಗಿವೆ.
 
2. ಝೋಲರ್ ಟೂಲ್ ಆರ್ಗನೈಝರ್
ಈ ರೇಕ್ ನಲ್ಲಿ ಉತ್ಪಾದಕರ ಬೇಡಿಕೆಗೆ ಅನುಸಾರವಾಗಿ ಬೇಕಾದಷ್ಟು ಪರ್ಯಾಯಗಳು ಲಭ್ಯವಾಗಬಲ್ಲವು, ಇಂತಹ ಹಾರಿಝಾಂಟಲ್ ರೇಕ್ ನ ರಚನೆ ಇರುತ್ತದೆ. ಕಟಿಂಗ್ ಟೂಲ್ (ಇನ್ಸರ್ಟ್ ಮತ್ತು ಉರುಟಾದ ಟೂಲ್) ಮತ್ತು ಅದಕ್ಕೆ ಸಂಬಂಧಪಟ್ಟ ಉಪಸಾಧನೆಗಳಿಗೆ ಟೂಲ್ ಆರ್ಗನೈಝರ್ ಎಲ್ಲಕ್ಕಿಂತಲೂ ಯೋಗ್ಯವಾಗಿದೆ. ಇದರಲ್ಲಿ ಎತ್ತರಕ್ಕೆ ಅನುಸಾರವಾಗಿ 600 ಮಿ.ಮೀ., 900 ಮಿ.ಮೀ. ಮತ್ತು 1225 ಮಿ.ಮೀ. ಎಂಬ ಮೂರು ಪ್ರಮುಖ ಪರ್ಯಾಯಗಳಿವೆ. ಉತ್ಪಾದಕರ ಬೇಡಿಕೆಗೆ ಅನುಸಾರವಾಗಿ ರೇಕ್ ಗಳ ಎತ್ತರವು 50 ಮಿ.ಮೀ.ನಿಂದ 300 ಮಿ.ಮೀ. ತನಕ ಬದಲಾಯಿಸುವುದು ಸಾಧ್ಯ. ಪ್ರತಿಯೊಂದು ರೇಕ್ ನಲ್ಲಿರುವ ಅಂತಸ್ತುಗಳ ಸಂಖ್ಯೆಯು 4 ರಿಂದ 48 ರ ತನಕ ಅಳವಡಿಸುವುದು ಸಾಧ್ಯವಿದೆ. ಈ ರೇಕ್ ನಲ್ಲಿ ಮೂರು ವಿಧದ ಲಾಕಿಂಗ್ ಉಪಲಬ್ಧವಿದೆ. ಮೆಕ್ಯಾನಿಕಲ್ ರೇಕ್ ಗಳ ಲಾಕಿಂಗ್ (ರೇಕ್ ಇಲೆಕ್ಟ್ರಾನಿಕ್ ರೀತಿಯಲ್ಲಿ ಲಾಕ್ ಮಾಡಲಾಗಿರುತ್ತವೆ ಮತ್ತು ಸಾಫ್ಟ್ ವೇರ್ ಮೂಲಕ ನಿಯಂತ್ರಿಸಲಾಗುತ್ತದೆ. ಆದರೆ ಅಂತಸ್ತುಗಳು ತೆರೆದಿರುತ್ತವೆ), ಅಂತಸ್ತುಗಳ ಲಾಕಿಂಗ್ (ಸ್ವತಂತ್ರ ಅಂತಸ್ತುಗಳು ಅಥವಾ ಪಾಕೇಟ್, ಇಲೆಕ್ಟ್ರಾನಿಕ್ ಪದ್ಧತಿಯಲ್ಲಿ ಲಾಕ್ ಮಾಡಲಾಗಿರುತ್ತದೆ ಮತ್ತು ಸಾಫ್ಟ್ ವೇರ್ ನಿಂದ ನಿಯಂತ್ರಿಸಲಾಗಿರುತ್ತವೆ). ಸುರಕ್ಷಿತ ಸಂಗ್ರಹಣೆ, ಹೆಚ್ಚು ನಿಯಂತ್ರಣೆ ಮತ್ತು ಶೇಖರಣೆಯ ನಿರ್ದೋಷವಾದ ವರ್ಗೀಕರಣ ಇದು ಟೂಲ್ ಗಳ ಆರ್ಗನೈಝೆರ್ ರೇಕ್ ನ ಹಲವಾರು ಪ್ರಮುಖ ವೈಶಿಷ್ಟ್ಯಗಳಾಗಿವೆ.
 

ewrtyuio_1  H x 
ಚಿತ್ರ ಕ್ರ. 3 : ಟ್ವಿಸ್ಟರ್ ರೇಕ್
 
 
3. ಝೋಲರ್ ಟ್ವಿಸ್ಟರ್
ಟ್ವಿಸ್ಟರ್ ರೇಕ್ ಗಳೆಂದರೆ ಕಟಿಂಗ್ ಟೂಲ್ ಗಳ ವೆಂಡಿಂಗ್ ಮಶಿನ್. ವಿಮಾನ ನಿಲ್ದಾಣಗಳಲ್ಲಿ ಅಥವಾ ಕಾರ್ಯಾಲಯಗಳ ಕಟ್ಟಡಗಳಲ್ಲಿ ಸಾಫ್ಟ್ ಡ್ರಿಂಕ್ಸ್ ಗಳ ಬಾಟ್ಲಿಗಳು ಅಥವಾ ತಿನ್ನುವ ಪದಾರ್ಥಗಳನ್ನು ಖರೀದಿಸುವಾಗ ನಾವು ಹೇಗೆ ಮಶಿನ್ ಗಳನ್ನು ನೋಡುತ್ತೆವೆಯೋ, ಹಾಗೆಯೇ ಟ್ವಿಸ್ಟರ್ ಹೊಸ ಕಟಿಂಗ್ ಟೂಲ್ ಸರಬರಾಜು ಮಾಡುತ್ತದೆ. ಇವುಗಳ ಆಕಾರದಲ್ಲಿ ಟ್ವಿಸ್ಟರ್ L ಇದರಲ್ಲಿ (ದೊಡ್ಡದು) 70, ಟ್ವಿಸ್ಟರ್ S ನಲ್ಲಿ 42 (ಚಿಕ್ಕದಾದ) ಮತ್ತು ಮೈಕ್ರೋಟ್ವಿಸ್ಟರ್ ನಲ್ಲಿ 24 ವಿಧದ ಟೂಲ್ ಗಳನ್ನು ಶೇಖರಿಸುವುದು ಸಾಧ್ಯವಿದೆ. ಪ್ರತಿಯೊಂದು ಹೆಲಿಕ್ಸ್ ನಲ್ಲಿ ಆಯ್ಕೆ ಮಾಡಿರುವ ಕಾನ್ಪಿಗರೇಶನ್ ಗೆ ಅನುಸಾರವಾಗಿ 10 ರಿಂದ 24 ಸಂಗ್ರಹಣೆಯನ್ನು ಮಾಡಲು ಜಾಗವು ಇರುತ್ತದೆ.
ಈ ಸಾಫ್ಟ್ ವೇರ್ ನಿಯಂತ್ರಿಸುವ ರೇಕ್ ಬಳಸಿದ್ದರಿಂದ ಬಳಕೆಗಾರರು ಬಳಸಲು ಒಂದೇ ಬಾರಿ ಒಂದೇ ವಸ್ತುವನ್ನು ಪಡೆಯಬಲ್ಲರು. ಇದರಿಂದಾಗಿ ಹೊಸ ಟೂಲ್ ಗಳ ಇನ್ವೆಂಟರಿಯಲ್ಲಿ ಸಂಪೂರ್ಣ ನಿಯಂತ್ರಣೆಯನ್ನು ಇಡುವುದು ಸಾಧ್ಯ. ಈ ರೇಕ್ ಉರುಟು ಟೂಲ್, ಇನ್ಸರ್ಟ್ ಬಾಕ್ಸ್ ಮತ್ತು ಸ್ವತಂತ್ರ ಬಾಕ್ಸ್ ನಲ್ಲಿ ಇಟ್ಟಿರುವ ಇನ್ಸರ್ಟ್ ಇವುಗಳಿಗೋಸ್ಕರ ಯೋಗ್ಯವಾಗಿದೆ. ಒಂದೇ ಸಮಯದಲ್ಲಿ ಒಂದೇ ಟೂಲ್ ನೀಡಬಹುದು. ಉಚ್ಚಮಟ್ಟದ ಇನ್ವೆಂಟರಿ ನಿಯಂತ್ರಣೆ ಮತ್ತು ಸುರಕ್ಷಿತವಾದ ಶೇಖರಣೆ, ಇವುಗಳು ಟ್ವಿಟರ್ ರೇಕ್ ನ ವೈಶಿಷ್ಟ್ಯಗಳಾಗಿವೆ.
 
 
ಸಾಫ್ಟ್ ವೇರ್ – TMS (ಕ್ಯಾಬಿನೆಟ್ ನಿಯಂತ್ರಣೆ)
ಝೋಲರ್ TMS (ಟೂಲ್ ಮ್ಯಾನೆಜ್ ಮೆಂಟ್ ಸಲ್ಯೂಶನ್) ಸಾಫ್ಟ್ ವೇರ್ ಇದು ಉತ್ಪಾದನೆಯ ಪ್ರಕ್ರಿಯೆಯ ಬೆನ್ನೆಲುವಾಗಿದೆ. ಇದರ ಮೂಲಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅನೇಕ ವಿಭಾಗಗಳಲ್ಲಿರುವ ಎಲ್ಲ ಸಂಬಂಧಪಟ್ಟ ಕೆಲಸಗಾರರು ಒಂದೇ ಸಾಮೂಹಿಕ ಡಾಟಾ ಬೇಸ್ ನಲ್ಲಿ ಮಾಹಿತಿಯನ್ನು ಹಸ್ತಾಂತರಿಸುವುದು ಸುಲಭವಾಗಬೇಕು, ಇದಕ್ಕೋಸ್ಕರ ಒಂದೇ ಸಾಮೂಹಿಕವಾದ ಡಾಟಾಬೇಸ್ ಗೆ ಆಧರಿಸಿರುವ ಒಂದು ಪ್ಲಾಟ್ ಫಾರ್ಮ್ ಲಭ್ಯ ಮಾಡಿಕೊಡಲಾಗುತ್ತದೆ. ‘ಇಂಡಸ್ಟ್ರಿ 4.0’ ಕುರಿತು ವಿಚಾರ ವಿಮರ್ಷೆಯನ್ನು ಮಾಡುವಾಗ ನಮ್ಮಲ್ಲಿ ಮೂಡಿಬರುವ ಮೊದಲ ಶಬ್ದವೆಂದರೆ ‘ಮಾಹಿತಿ’. ಆದರೆ ಉತ್ಪಾದನೆಯ ಪ್ರಕ್ರಿಯೆಯು ಹೆಚ್ಚು ಸ್ಮಾರ್ಟ್ ಮಾಡುವಲ್ಲಿ ಯೋಗ್ಯ ದಾರಿಯಲ್ಲಿ ಮಾಹಿತಿಯ ವ್ಯವಸ್ಥಾಪನೆಯನ್ನು ಮಾಡುವುದು, ಇದೊಂದು ಸವಾಲಾಗಿರುತ್ತದೆ. ಝೋಲರ್ TMS ಸಾಫ್ಟ್ ವೇರ್ ನಲ್ಲಿ ಅನೇಕ ಪ್ರಣಾಳಿಕೆಗಳೊಂದಿಗೆ ಇಂಟರ್ ಫೇಸ್ ಮಾಡುವ ಕ್ಷಮತೆ ಇರುತ್ತದೆ. ಇದರಲ್ಲಿ CAD/CAM ಮತ್ತು ERP ಇವುಗಳೂ ಒಳಗೊಂಡಿವೆ. ಆದರೆ ಈ ಕ್ಷಮತೆಯು ಅಷ್ಟಕ್ಕೇ ಸೀಮಿತವಾಗಿಲ್ಲ. ಈ ಸಾಫ್ಟ್ ವೇರ್ ನಲ್ಲಿ ಸ್ಟಾಕ್ ನ ವ್ಯವಸ್ಥಾಪನೆಯನ್ನು ಮಾಡುವುದು ಮತ್ತು ಇಂಟರ್ ಡಿಪಾರ್ಟ್ ಮೆಂಟ್ ಮಾಹಿತಿಯನ್ನು ನಿರ್ವಹಿಸುವುದು, ಈ ರೀತಿಯ ಕ್ಷಮತೆಯೂ ಇರುತ್ತದೆ. ಇದರಿಂದಾಗಿ ಯಾವುದೇ ಕಂಪನಿಗೆ ಅವರ ಉತ್ಪಾದನೆಯ ಪ್ರಕ್ರಿಯೆಯು ಹೆಚ್ಚು ಸ್ಮಾರ್ಟ್ ಮಾಡುವುದು ಸುಲಭವಾಗುತ್ತದೆ ಮತ್ತು ಅದು ನಿಧಾನವಾಗಿ ‘ಸ್ಮಾರ್ಟ್ ಫ್ಯಾಕ್ಟರಿ’ ಆಗುವಲ್ಲಿ ಮುಂದುವರಿಯುತ್ತದೆ. ಈ ಲೇಖನದಲ್ಲಿ ಕ್ಯಾಬಿನೆಟ್ ಕಂಟ್ರೋಲ್ ಸಾಫ್ಟ್ ವೇರ್ ಪ್ಯಾಕೇಜ್ ಕುರಿತು ಚರ್ಚೆಯನ್ನು ಮಾಡಲಾಗಿದೆ. ಇದು TMS ನ ಒಂದು ಮಹತ್ವದ ಭಾಗವಾಗಿದೆ.
 
 
1. ವೇರ್ ಹೌಸ್ ವ್ಯವಸ್ಥಾಪನೆ
ಕ್ಯಾಬಿನೆಟ್ ಕಂಟ್ರೋಲ್ ಸಾಫ್ಟ್ ವೇರ್ ನ ‘ಸ್ಟೋರ್’ ಮೋಡ್ಯುಲ್ ನಲ್ಲಿ ಉತ್ಪಾದಕರಿಗೆ ನೇರವಾಗಿ ರೇಕ್ ನ ಪ್ರತಿನಿಧಿತ್ವವನ್ನು ಮಾಡಬಲ್ಲ ರೂಪರೇಖೆಯನ್ನು ತಯಾರಿಸುವುದು ಸಾಧ್ಯವಿದೆ ಮತ್ತು ಪ್ರತ್ಯಕ್ಷವಾಗಿರುವಂತಹ ಸಂಗ್ರಹಣೆಯ ಜಾಗವನ್ನು ಸಾಫ್ಟ್ ವೇರ್ ನಲ್ಲಿ ಅಳವಡಿಸಲಬಹುದಾಗಿದೆ. ಸಾಪ್ಟ್ ವೇರ್ ನಲ್ಲಿ ಎಲ್ಲ ರೀತಿಯ ಸ್ಮಾರ್ಟ್ ಹಾಗೆಯೇ ಪಾರಂಪಾರಿಕ ರೇಕ್/ ಕಪಾಟುಗಳಿಗೋಸ್ಕರ ಸಂಗ್ರಹಣೆಯ ಜಾಗವನ್ನು ಮತ್ತು ನಿರ್ಧರಿಸಬಲ್ಲದು. ಇದರಿಂದಾಗಿ ಎಲ್ಲ ರೀತಿಯ ಟೂಲ್ ಗಳ ಸಂಗ್ರಹಣೆಯ ಸಂಪೂರ್ಣ ನಿಯಂತ್ರಣೆಯನ್ನು ಇಡಬಹುದಾಗಿದೆ ಮತ್ತು ಟೂಲ್ ಗಳನ್ನು ಹುಡುಕುವಲ್ಲಿ ಬೇಕಾಗುವ ಸಮಯವನ್ನು ತಡೆಯಬಹುದಾಗಿದೆ. ಸಾಮಾನ್ಯವಾಗಿ ಇಂತಹ ಪಾರಂಪಾರಿಕ ಸೆಟಪ್ ನಲ್ಲಿ ಪ್ರತಿಯೊಂದು ವಸ್ತುಗಳನ್ನು ಇಡುವ ಸ್ಥಾನವು ಅದೇ ಇರುವುದಿಲ್ಲ ಮತ್ತು ಇದರಿಂದಾಗಿ ಗೊಂದಲವು ಉಂಟಾಗುತ್ತದೆ. ವಸ್ತುಗಳನ್ನು ಹುಡುಕಲು ತುಂಬಾ ಸಮಯವು ಬೇಕಾಗುತ್ತದೆ. ಉತ್ಪಾದಕತೆಯು ಕಡಿಮೆಯಾಗುತ್ತದೆ ಮತ್ತು ಆಪರೇಟರ್ ಗೆ ನಿರಾಸೆಯು ಉಂಟಾಗುತ್ತವೆ. ಈ ಸಮಸ್ಯೆಗೆ ಸಾಫ್ಟ್ ವೇರ್ ಮೂಲಕ ಪರಿಹಾರವು ಸಿಗುತ್ತದೆ. ಕಾರಣ ಇದರಲ್ಲಿ ವಸ್ತು ಯಾವಾಗಲೂ ನಿಗದಿತ ಜಾಗದಲ್ಲಿಯೇ ಇಡಲಾಗುತ್ತದೆ. ಪ್ರತಿಯೊಂದು ವಸ್ತುವಿಗೆ ಕನಿಷ್ಠ ಮತ್ತು ಗರಿಷ್ಠ ಸಂಗ್ರಹಣೆಯ ಸಂಖ್ಯೆಯನ್ನು ನಿರ್ಧರಿಸುವುದು ಸಾಧ್ಯವಾಗಿದೆ. ಯಾವುದೇ ವಸ್ತುಗಳ ಸಂಗ್ರಹಣೆ ರೀಆರ್ಡರ್ ನ ಹಂತದಲ್ಲಿ ಬರುತ್ತದೆ, ಆಗ ಅದನ್ನು ಖರೀದಿಸಲು ಆವಶ್ಯಕವಿರುವ ಸೂಚನೆಗಳನ್ನು ತಯಾರಿಸಲಾಗುತ್ತದೆ.
 
 
2. ಕ್ವಿಕ್ ಪಿಕ್ ಮಾಡ್ಯುಲ್
ಆಪರೇಟರ್ ಗೆ ಸಾಫ್ಟ್ ವೇರ್ ಬಳಸುವಲ್ಲಿ ಯಾವುದೇ ರೀತಿಯ ಅಡಚಣೆಯು ಇರಬಾರದು ಮತ್ತು ಯೋಗ್ಯ ರೀತಿಯ ಟೂಲ್ ಗಳನ್ನು ಹುಡುಕುವಲ್ಲಿ ಅವನಿಗೆ ಯಾವುದೇ ರೀತಿಯ ಒತ್ತಡ ಇರಬಾರದು, ಇದಕ್ಕೋಸ್ಕರ ಒಂದು ಸುಲಭವಾದ ವ್ಯವಸ್ಥೆಯನ್ನು ನೀಡುವುದು ಅತ್ಯಾವಶ್ಯಕವಾಗಿದೆ. ಸ್ಕ್ರೀನ್ ನಲ್ಲಿ ನಿಗದಿತ ಬಟನ್ ಗಳು ಮತ್ತು ಟೂಲ್ ಗಳು ಅಥವಾ ಉಪಸಾಧನಗಳನ್ನು ಪಡೆಯಲು (ಚೆಕ್ ಔಟ್) ಅಥವಾ ಹಿಂತಿರುಗಿಸಲು (ಚೆಕ್ ಇನ್) ಒಂದು ತರ್ಕಬದ್ಧವಾದ ಕೆಲಸದ ಪದ್ಧತಿಯನ್ನು ಕ್ವಿಕ್ ಪಿಕ್ ಮಾಡ್ಯುಲ್ ನ ವೈಶಿಷ್ಟ್ಯವಾಗಿದೆ. ಯಾವುದೇ ವಸ್ತುವಿನ ಹಿನ್ನೆಲೆಯನ್ನು ಪಡೆಯುವ ಕ್ಷಮತೆಯೇ TMS ಸಾಫ್ಟ್ ವೇರ್ ನಲ್ಲಿರುವ ಪ್ರಾಥಮಿಕ ಗುರಿಯಾಗಿದೆ. ಅದನ್ನು ಪೂರ್ತಿಗೊಳಿಸಲು ಒಂದು ಬೇಡಿಕೆಯ ಪುಟ (ಕ್ವೆರಿ ಪೇಜ್) ತಯಾರಿಸುವುದು ಅತ್ಯಾವಶ್ಯಕವಾಗಿದೆ. ಈ ಪುಟದಲ್ಲಿ ಟೂಲ್ ಗಳಿಗೆ ಆವಶ್ಯಕವಿರುವ ವ್ಯಕ್ತಿಯ ಹೆಸರು, ಸಂಬಂಧಪಟ್ಟ ಮಶಿನಿಂಗ್ ಸೆಂಟರ್, ಕಾಸ್ಟ್ ಸೆಂಟರ್, ಡಿಪಾರ್ಟ್ ಮೆಂಟ್ ಮುಂತಾದ ಮಾಹಿತಿಯು ಇರುತ್ತದೆ. ಈ ಮಾಹಿತಿಯನ್ನು ತುಂಬಿಸದೇ ಸಾಫ್ಟ್ ವೇರ್ ಯಾವುದೇ ವಸ್ತುಗಳನ್ನು ಸ್ಟೋರ್ ನಿಂದ ಹೊರಗೆ ತರಲು ಬಿಡುವುದಿಲ್ಲ. ಇದಕ್ಕೆ ಝೋಲರ್ ಸ್ಮಾರ್ಟ್ ರೇಕ್ ಜೋಡಿಸಿದಲ್ಲಿ ಕೇವಲ ಸಾಫ್ಟ್ ವೇರ್ ಮೂಲಕ ರೇಕ್ ಅಥವಾ ಅಂತಸ್ತು, ಲಾಕ್ ಅಥವಾ ಅನ್ ಲಾಕ್ ಮಾಡಿ ಹೆಚ್ಚು ಪರಿಣಾಮಕಾರಿಯಾದ ನಿಯಂತ್ರಣೆಯನ್ನು ಮಾಡಲಾಗುತ್ತದೆ. ಪ್ರಕ್ರಿಯೆಯಲ್ಲಿ ಗರಿಷ್ಠ ಪ್ರಮಾಣದ ಸುರಕ್ಷೆಯನ್ನು ಕಾಪಾಡಲು, TMS ಸಾಫ್ಟ್ ವೇರ್ ಬಳಸಿ ಟೂಲ್ ಪಡೆಯಲು ನೇಮಿಸಿರುವ ಪ್ರತಿಯೊಂದು ವ್ಯಕ್ತಿಗೆ ಅವರವರ ಲಾಗಿನ್ ID ಮತ್ತು ಪಾಸ್ ವರ್ಡ್ ನೀಡಲಾಗುತ್ತದೆ. ಹೀಗೆ ಮಾಡಿದ್ದರಿಂದ್ ಸಾಫ್ಟ್ ವೇರ್ ನಲ್ಲಿ ವ್ಯಕ್ತಿಗೆ ಅನುಸಾರವಾಗಿ ಕೆಲಸಗಳ ಹಿನ್ನೆಲೆಯನ್ನು ಪಡೆಯಲಾಗುತ್ತದೆ ಮತ್ತು ಆಯಾ ವ್ಯಕ್ತಿಯ ಕೆಲಸಕ್ಕೆ ಅನುಗುಣವಾಗಿ ಕೇವಲ ಆಯ್ಕೆ ಮಾಡುವ ಎಕ್ಸೆಸ್ ನೀಡಲಾಗುತ್ತದೆ.
ವಸ್ತುಗಳನ್ನು ಹಿಂತಿರುಗಿಸುವಾಗ, ಯೋಗ್ಯವಾದ ವಿಂಗಡಣೆ ಮತ್ತು ಟೂಲ್ ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವ ನಿಟ್ಟಿನಲ್ಲಿ ಬಳಕೆಗಾರರಿಗೆ ನಿಖರವಾದ ಪರ್ಯಾಯ (ಸಾಮಾನ್ಯ/ ಹೊಸ/ ಬಳಸಿರುವ/ ನವೀಕರಿಸಿದ/ ರೀವರ್ಕ್/ ಸ್ಕ್ರ್ಯಾಪ್) ನೀಡಲಾಗುತ್ತದೆ. ಈ ವೈಶಿಷ್ಟ್ಯಗಳಿಂದಾಗಿ TMS ಸಾಫ್ಟ್ ವೇರ್ ನ ಖರ್ಚಿನಲ್ಲಿಯೂ ಉಳಿತಾಯ ಮಾಡುವ ಸಾಮರ್ಥ್ಯವು ಕಾರ್ಯಗತವಾಗುತ್ತದೆ. ಪ್ರಭಾವಶಾಲಿಯಾದ ವರ್ಗೀಕರಣಕ್ಕೋಸ್ಕರ ಅನೇಕ ವಿಧದ ಸಂಗ್ರಹಣೆಯ ಅಂತಸ್ತುಗಳ/ ಕ್ಷೇತ್ರದ ವಿಶಿಷ್ಟ ರೀತಿಗೋಸ್ಕರ ನೇಮಿಸಲಾಗುವುದು ಸಾಧ್ಯ. ಕಾರ್ಖಾನೆಯಲ್ಲಿ ಪ್ರಸ್ತುತ ಬಳಸಲಾಗುವ ಎಲ್ಲ ರೀತಿಯ ಟೂಲ್ ಗಳನ್ನು ನಿಯಂತ್ರಿಸಿ (ಮಾನಿಟರಿಂಗ್) ಈ ಸಾಫ್ಟ್ ವೇರ್, ನಿಯಂತ್ರಣೆ ಇನ್ನಷ್ಟು ಮೇಲ್ಪಟ್ಟ ಹಂತದಲ್ಲಿ ತಲುಪಿಸುತ್ತದೆ. ಹಳೆಯ ಟೂಲ್, ಅದು ಯಾವುದೇ ಸ್ಥಿತಿಯಲ್ಲಿರಲು, ಹಿಂತಿರುಗಿಸದೇ ಯಾವುದೇ ವಿನಾಕಾರಣ ಹೊಸ ಟೂಲ್ ಪಡೆಯುವುದು ಅಸಾಧ್ಯ, ಇದನ್ನೂ ಇದರಿಂದಾಗಿ ನಿರ್ಧರಿಸುವುದು ಸಾಧ್ಯ.

dfsghjkl_1  H x 
ಚಿತ್ರ ಕ್ರ. 4 : ಕ್ವಿಕ್ ಪಿಕ್ ಮೋಡ್ಯುಲ್ ನಲ್ಲಿ ಕಂಪ್ಯೂಟರ್ ನಲ್ಲಿ ಮಾಡಬಹುದಾದ ಶೇಖರಣೆಯ ರಚನೆ
 
 
3. ಸ್ಟಾಕ್ ನ ವಿಶ್ಲೇಷಣೆ
ಯಾವುದೇ ಟೂಲ್ ವ್ಯವಸ್ಥಾಪನೆಯು ಸಾಫ್ಟ್ ವೇರ್, ವಿಸ್ತೃತ ಸ್ಟಾಕ್ ವಿಶ್ಲೇಷಣೆಯ ಕೆಲಸದ ಹೊರತಾಗಿ (ಫಂಕ್ಷನ್) ಪರಿಪೂರ್ಣವಾಗುವುದಿಲ್ಲ. TMS ಸಾಫ್ಟ್ ವೇರ್ ಬಳಸಿ ತಮಗೆ ವ್ಯಕ್ತಿ, ಕಾಸ್ಟ್ ಸೆಂಟರ್, ಮಶಿನ್, ವಿಭಾಗ ಮತ್ತು ಸ್ಟೋರ್ ಗಳಿಗೆ ಅನುಗುಣವಾಗಿ ಟೂಲ್ ಗಳನ್ನು ಸಂಗ್ರಹಿಸುವುದು ಮತ್ತು ಬಳಕೆಯ ವಿಶ್ಲೇಷಣೆಯನ್ನು ಮಾಡಬಹುದಾಗಿದೆ. ಈ ಪರ್ಯಾಯವು ಕೇವಲ ತಿಳಿದುಕೊಳ್ಳಲು ಇವೆ. ಆದರೆ ಪ್ರತ್ಯಕ್ಷವಾಗಿ ಸಾಫ್ಟ್ ವೇರ್ ಸ್ಟಾಕ್ ನ ವಿಶ್ಲೇಷಣೆಗೆ ಅನೇಕ ಪರ್ಯಾಯಗಳು ಲಭ್ಯವಿವೆ. ಇದನ್ನು ಬಳಸಿ ಟೂಲ್ ರೂಮ್ ವ್ಯವಸ್ಥಾಪಕರಿಗೆ ಕಾರ್ಖಾನೆಯಲ್ಲಿ ಯಾವ ಕೆಲಸಗಳು ನಡೆದಿವೆ, ಎಂಬುದರ ಕುರಿತಾದ ಸ್ಪಷ್ಟವಾದ ಮಾಹಿತಿಯು ಲಭಿಸುತ್ತದೆ ಮತ್ತು ಯಾವುದೇ (ಉದಾಹರಣೆ, ಮಶಿನಿಂಗ್ ಸೆಂಟರ್ ನ ಅಥವಾ ಕೆಲಸಗಾರರ ಸಮಸ್ಯೆಯಿಂದಾಗಿ ಟೂಲ್ ಗಳ ಹೆಚ್ಚು ಬಳಕೆ) ಮೂಲ ಕಾರಣಗಳನ್ನು ಕಂಡು ಹಿಡಿಯಲು ಸಕ್ಷಮವಾಗಿ ಮಾಡುತ್ತವೆ. ಈ ಮೂಲಕ ಕಂಪನಿಯು ಸಮಸ್ಯೆಯನ್ನು ಪರಿಹರಿಸಬಲ್ಲದು. ಟೂಲ್ ಗಳ ಬಳಕೆ ಮತ್ತು ಟೂಲಿಂಗ್ ನ ಖರ್ಚು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.
ಇಂದಿನ ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಪರಿಣಾಮಕಾರಿಯಾಗಿ ಟೂಲ್ ಗಳ ವ್ಯವಸ್ಥಾಪನೆ ಮತ್ತು ಟೂಲಿಂಗ್ ಖರ್ಚಿನಲ್ಲಿ ಕಡಿತವನ್ನು ಮಾಡುವುದು, ಇವೆಲ್ಲವೂ ಲಾಭವನ್ನು ಹೆಚ್ಚಿಸಲು ಅತ್ಯಾವಶ್ಯಕವಾಗಿದೆ. ಇದನ್ನು ಸಾಧಿಸಲು ಆವಶ್ಯಕವಾದ ತಂತ್ರಜ್ಞಾನವೂ ಲಭ್ಯವಿದೆ. ಮುಕ್ತ ವಿಚಾರಸರಣಿ, ಉತ್ಪಾದನೆಯ ಕ್ಷೇತ್ರದಲ್ಲಿ ಪ್ರತಿದಿನವೂ ಆಗುತ್ತಿರುವ ಪ್ರಗತಿಯನ್ನು ತಿಳಿದುಕೊಳ್ಳುವ ಹುಮ್ಮಸ್ಸು ಮತ್ತು ದೂರದೃಷ್ಟಿ ಇವುಗಳೇ ಯಶಸ್ಸನ್ನು ಪಡೆಯುವ ಮೂಲಮಂತ್ರವಾಗಿದೆ.
 

fgdhjkl;_1  H x 
ಚಿತ್ರ ಕ್ರ. 5 : ಸಾಫ್ಟ್ ವೇರ್ ನಲ್ಲಿ ಸಹಜವಾಗಿ ತುಂಬಿಸಬಹುದಾದ ಮಾಹಿತಿ
 
 
ಉದಾಹರಣೆ
ಮಹಾರಾಷ್ಟ್ರದ ನಾಶಿಕ್ ನಗರದ ಸಮೀಪದಲ್ಲಿರುವ ಅಂಬಡ್ ಎಂಬಲ್ಲಿರುವ ಪಾಂಚಾಳ್ ಇಂಜಿನಿಯರ್ಸ್ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಟೂಲ್ ವ್ಯವಸ್ಥಾಪನೆಗೆ ಝೋಲರ್ ಇಂಡಿಯಾ ಪ್ರೈ. ಲಿ. ಈ ಕಂಪನಿಯ ಸ್ಮಾರ್ಟ್ ಸ್ಟೊರೇಜ್ ಮತ್ತು ಇನ್ವೆಂಟರಿ ವ್ಯವಸ್ಥಾಪನೆಯ ಸಿಸ್ಟಮ್ ಕಾರ್ಯಗತ ಮಾಡಲಾಗಿದೆ. ಈ ಸಿಸ್ಟಮ್ ಎರಡು ವರ್ಷಗಳಿಂದ ಬಳಸುತ್ತಿರುವುದರಿಂದ ಕಂಪನಿಯ ರೂಪೇಶ್ ಜಾಧವ ಇವರು ಹಲವಾರು ಅಂಶಗಳನ್ನು ತಿಳಿಸಿದರು. ಕಂಪನಿಯ ಒಟ್ಟಾರೆ ಕಾರ್ಯ ಚಟುವಟಿಕೆಗಳ ಕುರಿತು ಅವರು ಹೇಳುತ್ತಾರೆ, “ನಮ್ಮ ಕಂಪನಿಯಲ್ಲಿ ಸಿಲಿಂಡರ್, ಏರ್ ಕಾಂಪ್ರೆಸರ್, ಗಿಯರ್ ಅಸೆಂಬ್ಲಿ ಮುಂತಾದ ಯಂತ್ರಭಾಗಗಳ ಮಶಿನಿಂಗ್ ಕೆಲಸವನ್ನು ಮಾಡಲಾಗುತ್ತದೆ. ಕಂಪನಿಯಲ್ಲಿ ಎರಡು ಶಾಪ್ ಗಳಿದ್ದು ಒಂದೇ ಶಾಪ್ ನಲ್ಲಿ ಮೂರು ಎಚ್.ಎಮ್.ಸಿ. ಮತ್ತು ಮೂರು ವಿ.ಟಿ.ಎಲ್. ಮಶಿನ್ ಗಳಿವೆ. ಆದರೆ ಇನ್ನೊಂದು ಶಾಪ್ ನಲ್ಲಿ ಒಂದೊಂದು ಸಿ.ಎನ್.ಸಿ. ಮತ್ತು ಎರಡು ವಿ.ಎಮ್.ಸಿ. ಮಶಿನ್ ಗಳಿವೆ. ಈ ಹಿಂದೆ ಟೂಲ್ ವ್ಯವಸ್ಥಾಪನೆಗೋಸ್ಕರ ಮ್ಯಾನ್ಯುವಲ್ ಪದ್ಧತಿಯನ್ನು ಬಳಸಲಾಗುತ್ತಿತ್ತು. ನಮ್ಮ ಶಾಪ್ ನಲ್ಲಿ ಸಾಮಾನ್ಯವಾಗಿ ಬೇರೆಬೇರೆ 10 ರಿಂದ 12 ವಿಧದ ಟೂಲ್ ಗಳಿವೆ. ಇವುಗಳ ಸಂಖ್ಯೆಯೂ ಸುಮಾರು 400 ರಷ್ಟು ಇದೆ. ಇದರ ಹೊರತಾಗಿ ಸ್ಪೆಶಲ್ ಟೂಲ್ ಗಳಿರುತ್ತವೆ. ಇದಕ್ಕೋಸ್ಕರ ನಾವು ಬೇರೆಯೇ ಕೆಟೆಗರಿ ಮಾಡಿದ್ದೇವೆ. ಅವುಗಳ ಸಂಖ್ಯೆಯೂ ಸುಮಾರು 100 ರಷ್ಟು ಇರುತ್ತದೆ. ಅಸೆಂಬ್ಲಿ ಬದಲಾಯಿಸುವಾಗ ಟೂಲ್ ಕೂಡಾ ಬದಲಾಯಿಸಲಾಗುತ್ತದೆ. ರೀಗ್ರೈಂಡಿಂಗ್ ಮಾಡಿರುವ ಟೂಲ್ ನ ಆವಶ್ಯಕತೆಯು ಹೇಗೆ ಇರುತ್ತದೆಯೋ, ಹಾಗೆಯೇ ಅದನ್ನು ತಯಾರಿಸಲಾಗುತ್ತದೆ. ಪ್ರತಿ ತಿಂಗಳಿಗೆ ಹೊಸ ಹೊಸ ಗ್ರಾಹಕರಿಗೆ ಅನುಸಾರವಾಗಿ ನಾವು ಸಾಮಾನ್ಯವಾಗಿ 8 ರಿಂದ 10 ಹೊಸ ಟೂಲ್ ಗಳನ್ನು ತರಿಸುತ್ತೇವೆ.”
 
  
“ಈ ಹಿಂದೆ ಈ ಕೆಲಸವನ್ನು ನಿರ್ವಹಿಸುತ್ತಿರುವ ಕೆಲಸಗಾರರಿಗೆ ಮಾತ್ರ ಆ ಟೂಲ್ ಗಳ ಮಾಹಿತಿಯು ಇರುತ್ತಿತ್ತು. ಆದರೆ ನಾವು ಝೋಲರ್ ಸಿಸ್ಟಮ್ ಕಾರ್ಯಗತಗೊಳಿದ ನಂತರ ಟೂಲ್ ನ ಎಲ್ಲ ರೀತಿಯ ಮಾಹಿತಿ (ಡಾಟಾ) ಸಿಸ್ಟಮ್ ನಲ್ಲಿ ಲಭ್ಯವಾಯಿತು. ಇದರಿಂದಾಗಿ ಕೆಲಸಗಾರರಲ್ಲಿ ಅವಲಂಬಿಸಿರುವುದು ಈಗ ಸಂಪೂರ್ಣವಾಗಿ ಇಲ್ಲದಂತಾಯಿತು. ಟೂಲ್ ಗಳ ಎಲ್ಲ ರೀತಿಯ ಮಾಹಿತಿಯು ಸಾಫ್ಟ್ ವೇರ್ ನಲ್ಲಿ ಇರುವುದರಿಂದ ಹೊಸದಾಗಿ ಸೇರ್ಪಡೆಯಾಗುವ ಕೆಲಸಗಾರರಿಗೂ ಯಾವುದೇ ಮಶಿನ್ ನಲ್ಲಿ ಯಾವುದೇ ಟೂಲ್ ಬಳಸಲಾಗುತ್ತಿದೆ, ಎಂಬುದನ್ನು ಅರಿತುಕೊಳ್ಳುವುದು ಸುಲಭ ಸಾಧ್ಯವಾಯಿತು. ಒಂದು ವೇಳೆ ಟೂಲ್ ತುಂಡಾದಲ್ಲಿ ಅಥವಾ ಅದಕ್ಕೆ ರಿಗ್ರೈಂಡಿಂಗ್ ಮಾಡುವ ಅವಶ್ಯಕತೆ ಇದ್ದರೂ ಕೂಡಾ ಅದಕ್ಕೆ ತಕ್ಕಂತೆ ಅದನ್ನು ಸಿಸ್ಟಮ್ ನಲ್ಲಿ ನೊಂದಾಯಿಸಲಾಗುತ್ತದೆ. ಈ ಹಿಂದೆ ಈ ರೀತಿಯ ನೊಂದಣಿಗಳನ್ನು ರಜಿಸ್ಟರ್ ನಲ್ಲಿ ಕೈಯಿಂದಲೇ ಮಾಡಬೇಕಾಗುತ್ತಿತ್ತು. ಹೊಸ ಸಿಸ್ಟಮ್ ನಲ್ಲಿ ಎಲ್ಲಿಯ ತನಕ (ಯಾವುದೇ ಮಶಿನ್ ನಲ್ಲಿ ಟೂಲ್ ಬೇಕಾಗಿದೆಯೋ, ಅದರ ಬೇಡಿಕೆ ಪ್ರಮಾಣ ಎಷ್ಟಿದೆ, ಯಾವ ಕೆಲಸಕ್ಕೆ ಅದರ ಆವಶ್ಯಕತೆ ಇದೆ ಇತ್ಯಾದಿ) ಎಲ್ಲ ಅಂಶಗಳನ್ನು ಪೂರ್ತಿಗೊಳಿಸಲಾಗುವುದಿಲ್ಲವೋ, ಅಲ್ಲಿಯ ತನಕ ಸಂಬಂಧಪಟ್ಟ ಟೂಲ್ ಸ್ವೀಕರಿಸಲಾಗುವುದಿಲ್ಲ ಅಥವಾ ಹೊಸದಾಗಿ ನೀಡಲಾಗುವುದಿಲ್ಲ. ಈ ಎಲ್ಲ ಸಿಸ್ಟಮ್ ಗಳಿಂದಾಗಿ ತಪ್ಪಾದ ಟೂಲ್ ನೀಡಲಾಗುವುದು ಅಥವಾ ನೀಡಿರುವ ಟೂಲ್ ಸ್ಟೋರ್ ಗೆ ಹಿಂತಿರುಗಿಸುವುದು, ಇಂತಹ ಎಲ್ಲ ಕೆಲಸಗಳು ನಿಂತುಹೋದವು.
 
 
ಹೊಸದಾಗಿ ಮಾಡಿರುವ ಸಿಸ್ಟಮ್ ನಲ್ಲಿ ಅಲ್ಪ ಪ್ರಮಾಣದಲ್ಲಿ ತೊಡಕುಗಳು ಅಥವಾ ಸಮಸ್ಯೆಗಳು ಉದ್ಭವಿಸುವಾಗ ಝೋಲರ್ ಕಂಪನಿಯಿಂದ ಆವಶ್ಯಕವಿರುವ ಸಹಾಯವನ್ನು ಆನ್ ಲೈನ್ ಮಾಡಲಾಗುತ್ತದೆ. ಝೋಲರ್ ನ ಸಿಸ್ಟಮ್ ಬಳಸಲು ನಾವು ಕೆಲಸಗಾರರ ನೇಮಕಾತಿಯನ್ನು ಮಾಡಿದೆವು. ಆದ್ದರಿಂದ ಬರುವ ಮತ್ತು ನೀಡಲಾಗುವ ಪ್ರತಿಯೊಂದು ಟೂಲ್ ಗಳ ಕುರಿತಾದ ಖಾತರಿಯನ್ನು ಮಾಡಿಯೇ ನೊಂದಣಿಯನ್ನು ಸಂಬಂಧಪಟ್ಟ ಸಾಫ್ಟ್ ವೇರ್ ನಲ್ಲಿ ಮಾಡಲಾಗುತ್ತದೆ. ಒಂದು ವೇಳೆ ಟೂಲ್ ಹಾಳಾಗಿದ್ದರೂ ಕೂಡಾ ಅದಕ್ಕೆ ತಕ್ಕಂತೆ ಅದರ ಕುರಿತಾದ ಬೇಡಿಕೆಯ ಇ-ಮೇಲ್ ಪರ್ಚೆಸ್ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಅದರ ನಂತರ ಹೊಸ ಟೂಲ್ ತರುವುದರ ಕುರಿತು ಸಂಬಂಧಪಟ್ಟ ವಿಭಾಗವು ನಿರ್ಧರಿಸುತ್ತದೆ. ಸಿಸ್ಟಮ್ ಹೊಸದಾಗಿ ಅಳವಡಿಸಿದ ನಂತರ ಪ್ರಾರಂಭದಲ್ಲಿ ಒಮ್ಮೆಯೇ ಶಾಪ್ ನಲ್ಲಿ ಎಷ್ಟು ಟೂಲ್ ಗಳಿವೆ, ಯಾವ ವಿಧದ ಟೂಲ್ ಗಳ ಸಂಖ್ಯೆಯು ಎಷ್ಟು ಇದೆ, ಮುಂತಾದ ಮಾಹಿತಿಯನ್ನು ಅಳವಡಿಸಬೇಕಾಯಿತು. ಈಗ ಮಾತ್ರ ಅದರಿಂದ ಬೇಕಾಗಿರುವ ಔಟ್ ಪುಟ್ ಲಭಿಸಲು ಪ್ರಾರಂಭವಾಯಿತು.”
 
 
sdfghyjuki_1  H
ಚಿತ್ರ ಕ್ರ. 6 : ಸಾಫ್ಟ್ ವೇರ್ ನಿಂದ ಲಭಿಸುವ ವರದಿಯ ಮಾದರಿ
 
 
ಲಾಭಗಳು
• ಝೋಲರ್ ಕಂಪನಿಯ ಸಿಸ್ಟಮ್ ನಿಂದಾಗಿ ಸಾಮಾನ್ಯವಾಗಿ 5 ರಿಂದ 8% ಟೂಲ್ ಇನ್ವೆಂಟರಿ ಕಡಿಮೆಯಾಯಿತು.
• ಸಿಸ್ಟಮ್ ನಿಂದಾಗಿ ವಿಶೇಷ ಟೂಲ್ ಗಳ ಬಳಕೆಯಲ್ಲಿಯೂ ತುಂಬಾ ಲಾಭವಾಯಿತು. ಟೂಲ್ ಯಾವುದೇ ಮಶಿನ್ ನಲ್ಲಿ ಇದೆ, ಎಂಬುದನ್ನು ಈ ಮುಂಚೆ ಹುಡುಕಲಾಗುತ್ತಿತ್ತು. ಆದರೆ ಹೊಸ ಸಿಸ್ಟಮ್ ನಿಂದಾಗಿ ಈ ಹುಡುಕಾಟವು ಕಡಿಮೆಯಾಯಿತು.
• ಈ ಹಿಂದೆ ಟೂಲ್ ಸೆಟಿಂಗ್ ಗೋಸ್ಕರ ಸುಮಾರು ಒಂದು ಗಂಟೆಯ ಕಾಲಾವಧಿಯು ಬೇಕಾಗುತ್ತಿತ್ತು, ಆದರೆ ಪ್ರಸ್ತುತ ಸಿಸ್ಟಮ್ ನಿಂದಾಗಿ ಈ ಕೆಲಸವು ಸುಮಾರು 20 ನಿಮಿಷಗಳಲ್ಲಿ ಪೂರ್ತಿಯಾಯಿತು. ಇದರಿಂದಾಗಿ ಸಮಯದ ಉಳಿತಾಯವಾಯಿತು.
• ಯಾವ ಮಶಿನ್ ನಲ್ಲಿ ಟೂಲ್ ಗಳ ಬಳಕೆಯು ಹೆಚ್ಚು ಪ್ರಮಾಣದಲ್ಲಿ ಆಗುತ್ತಿದೆ ಎಂಬ ಮಾಹಿತಿಯು ಲಭಿಸುವಲ್ಲಿ ಸುಲಭತೆಯು ಉಂಟಾಯಿತು.
• ಸಿಸ್ಟಮ್ ನಿಂದಾಗಿ ಮಶಿನ್ ನಲ್ಲಿ ಉಂಟಾಗುವ ಟೂಲ್ ಗಳ ಮತ್ತು ಇನ್ಸರ್ಟ್ ಗಳ ಇನ್ವೆಂಟರಿ ಕಡಿಮೆಯಾಗಲು ಸಹಾಯವಾಯಿತು. ಈ ಹಿಂದೆ ನಾವು ಸಾಮಾನ್ಯವಾಗಿ 100 ಇನ್ಸರ್ಟ್ ಗಳನ್ನು ತರಿಸುತ್ತಿದ್ದೆವು, ಆದರೆ ಈಗ ಕೇವಲ 60 ಟೂಲ್ ಗಳನ್ನು ತರಿಸುತ್ತಿದ್ದೇವೆ.
 
 
 
ಅಭಿಷೇಕ್ ತೋಡ್ ಕರ್ ಮಾಳಿ ಇವರು ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯನಿಕೇಶನ್ ಇಂಜಿನಿಯರ್ ಪದವೀಧರರು. ಅವರಿಗೆ ಈ ಕ್ಷೇತ್ರದಲ್ಲಿ 7 ವರ್ಷಕ್ಕಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ. ಪ್ರಸ್ತುತ ಇವರು ಝೋಲರ್ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಪ್ರಾಡಕ್ಷನ್ ವ್ಯವಸ್ಥಾಪಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
9823877280
@@AUTHORINFO_V1@@