ವೌಚರ್ ಉಪಯೋಗ ಮತ್ತು ಮಹತ್ವ

@@NEWS_SUBHEADLINE_BLOCK@@

Lohkarya - Udyam Prakashan    09-Jun-2021   
Total Views |
ಈ ಹಿಂದಿನ ಲೇಖನದಲ್ಲಿ ಟ್ಯಾಲಿಯಲ್ಲಿ ಲೆಜರ್ ಅಕೌಂಟ್, ಅದರ ಗುಂಪು ಹಾಗೆಯೇ ಇನ್ನಿತರ ಮಾಸ್ಟರ್ ಗಳನ್ನು ಹೇಗೆ ತಯಾರಿಸಲಾಗುತ್ತವೆ ಮತ್ತು ಉದ್ಯಮಿಗಳ ನಿಟ್ಟಿನಲ್ಲಿ ಅದರ ಮಹತ್ವದ ಕುರಿತು ತಿಳಿದುಕೊಂಡೆವು. ಈಗ ಇನ್ನಿತರ ಹಲವಾರು ವಿಸ್ತಾರವಾದ ಮಾಹಿತಿಯ ಕುರಿತು (ಮಾಸ್ಟರ್ ಡೆಟಾ) ಈ ಲೇಖನದಲ್ಲಿ ತಿಳಿದುಕೊಳ್ಳೋಣ.
 
 
ಪ್ರಾರಂಭದ ಲೇಖನದಲ್ಲಿ ನಾವು ವ್ಯವಸಾಯಕ್ಕೆ ಸಂಬಂಧಪಟ್ಟು ಉಂಟಾಗಿರುವ ಎಲ್ಲ ರೀತಿಯ ಹಣಕಾಸಿನ ಕುರಿತಾದ ಚಟುವಟಿಕೆಗಳು ಮಾಡುತ್ತವೆಯೋ, ಅದನ್ನು ನಾವು ವ್ಯವಹಾರ ಅಥವಾ ಟ್ರ್ಯಾನ್ಸ್ಯಾಕ್ಷನ್ ಎಂದು ಕರೆಯುತ್ತೇವೆ. ಇದನ್ನು ನೊಂದಾಯಿಸುವುದು ಅಕೌಂಟಿಂಗ್ ನ ನಿಟ್ಟಿನಲ್ಲಿ ಮೊದಲ ಹಂತವಾಗಿರುತ್ತದೆ. ಇಂತಹ ಪ್ರಾಥಮಿಕ ನೊಂದಣಿಗಳನ್ನು ಜರ್ನಲ್ ಎಂಟ್ರಿ ಎಂಬುದಾಗಿ ಅನೇಕ ರೀತಿಯ ರಜಿಸ್ಟರ್ ಗಳಲ್ಲಿ ಮಾಡಲಾಗುತ್ತದೆ, ಎಂಬುದನ್ನೂ ತಿಳಿದುಕೊಂಡೆವು. ಈ ರೀತಿಯ ನೊಂದಾಣಿಕೆಗಳನ್ನು ಮಾಡುವ ಮುಂಚೆ ಯಾವ ವ್ಯವಹಾರಗಳ ನೊಂದಾಣಿಕೆಯನ್ನು ಮಾಡಬೇಕೋ, ಅದರ ಎಲ್ಲ ಮಹತ್ವದ ಮಾಹಿತಿಯನ್ನು ಒಂದು ವಿಶಿಷ್ಟ ರೀತಿಯ ಫಾರ್ಮೆಟ್ ನ್ನು ಕಾಗದದಲ್ಲಿ ತಯಾರಿಸಿರುವ ಒಂದು ಡಾಕ್ಯುಮೆಂಟ್ ನಲ್ಲಿ ಬರೆಯಲಾಗುತ್ತದೆ. ಇಂತಹ ಡಾಕ್ಯುಮೆಂಟ್ ಅಕೌಂಟಿಂಗ್ ನ ಭಾಷೆಯಲ್ಲಿ ಇದನ್ನು ವೌಚರ್ ಎಂಬುದಾಗಿ ಹೇಳಲಾಗುತ್ತದೆ. ಇತ್ತೀಚೆಗೆ ಡಿಜಿಟಲ್ ನ ಯುಗದಲ್ಲಿ ಕ್ಯಾಶ್ ಮೆಮೋದಂತಹ ಕಡಿಮೆ ಮೊತ್ತದ ಮತ್ತು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುವ ಡಾಕ್ಯುಮೆಂಟ್ ಪಾಯಿಂಟ್ ಆಫ್ ಸೇಲ್ಸ್ (POS) ಮಶಿನ್ ನ ಮೂಲಕ ಟ್ಯಾಲಿಯಲ್ಲಿ ಇಂಪೋರ್ಟ್ ಮಾಡಲಾಗುತ್ತವೆ, ನಂತರ ಅವುಗಳನ್ನು ಮುದ್ರಿಸಲಾಗುತ್ತದೆ. ಇಂತಹ ಅಪವಾದಗಳನ್ನು ಹೊರತು ಪಡಿಸಿ ಆಡಿಟ್ ಮತ್ತು ವ್ಯವಹಾರಗಳನ್ನು ಯೋಗ್ಯ ರೀತಿಯಲ್ಲಿ ನಿಯಂತ್ರಿಸುವ ನಿಟ್ಟಿನಲ್ಲಿ ಅಕೌಂಟ್ಸ್ ಖಾತೆಯಲ್ಲಿ ಮುಂಚೆ ಡಾಕ್ಯುಮೆಂಟ್ ತಯಾರಿಸಲಾಗುತ್ತದೆ. ಈ ಕೆಲಸದಲ್ಲಿ ಅಧಿಕಾರಸ್ಥರಾದವರು ಸಹಿಯನ್ನು ಮಾಡುವ ಮೂಲಕ ಮನ್ನಣೆಯನ್ನು ಪಡೆಯಲಾಗುತ್ತದೆ. ನಂತರ ಅದನ್ನು ಲೆಕ್ಕಾಚಾರದಲ್ಲಿ ನೊಂದಾಯಿಸಲಾಗುತ್ತದೆ. ವಿಶಿಷ್ಟ ಹಣಕಾಸು ವ್ಯವಹಾರಗಳು ಮತ್ತು ಅದರ ಅಕೌಂಟಿಂಗ್ ನಲ್ಲಿರುವ ನೊಂದಣಿಗಳು, ಇವೆರಡರಲ್ಲಿಯೂ ವೌಚರ್ ಇದೊಂದು ಮೂಲಭೂತ ಅಂಶವಾಗಿದೆ. ಇನ್ನೊಂದು ಮಹತ್ವದ ಅಂಶವೆಂದರೆ, ಅಕೌಂಟಂಟ್ ತಯಾರಿಸುವ ವ್ಯವಹಾರಗಳ ದಾಖಲೆಯು ಕಾಗದಗಳಲ್ಲಿ ಲಭ್ಯವಾಗುತ್ತದೆ.
 
 
ಪ್ರಸ್ತುತ ಈ ದಾಖಲೆಗಳು ಕಾನೂನು ಪ್ರಕಾರ ಪರಿಪೂರ್ಣವಾಗಲು ವೌಚರ್ ತಯಾರಿಸಿದ ನಂತರ ಅದಕ್ಕೆ ಹಿರಿಯ ಅಧಿಕಾರಿಗಳಿಂದ ಮನ್ನಣೆಯನ್ನು ಪಡೆಯಬೇಕಾಗುತ್ತದೆ. ಇದರ ಕುರಿತಾದ ವೌಚರ್ ನಲ್ಲಿ ಅವರ ಸಹಿಯನ್ನೂ ಪಡೆಯಲಾಗುತ್ತದೆ. ಸಹಿ ಮಾಡುವ ಮುಂಚೆ ಸಂಬಂಧಪಟ್ಟ ಅಧಿಕಾರಿಯು ವೌಚರ್ ಗೆ ಪೂರಕವಾಗಿರುವ (ಸಪೋರ್ಟಿಂಗ್) ಯಾವ ದಾಖಲೆಗಳನ್ನು ಜೋಡಿಸಲಾಗಿದೆ, ಎಂಬುದನ್ನು ಪರಿಶೀಲಿಸುತ್ತಾರೆ. ವೌಚರ್ ನ್ನು ಕಂಪನಿಯಲ್ಲಿಯೇ ತಯಾರಿಸಿರುವುದರಿಂದ ಇದನ್ನು ಒಳ ದಾಖಲೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಆದರೆ ಅದಕ್ಕೆ ಲಗತ್ತಿಸಿರುವ ಪೂರಕ ದಾಖಲೆಗಳು ಸಾಮಾನ್ಯವಾಗಿ ಎಕ್ಸ್ ಟರ್ನಲ್ ಡಾಕ್ಯುಮೆಂಟ್ಸ್ (ಹೊರ ದಾಖಲೆಗಳೆಂದು) ಎಂದು ತಿಳಿಯಲಾಗುತ್ತದೆ. ಈ ರೀತಿಯ ಹೊರ ದಾಖಲೆಗಳನ್ನು ವ್ಯವಹಾರದಲ್ಲಿ ಹೊರಗಿನ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಪಡೆಯುವುದನ್ನು ಅಪೇಕ್ಷಿಸಲಾಗಿದೆ. ಉದಾಹರಣೆ, ಪರ್ಚೇಸ್ ವೌಚರ್ ಗೆ ಜೋಡಿಸಿರುವ ಪೂರಕ ದಾಖಲೆಗಳು ಅಂದರೆ ಪೂರೈಕೆಗಾರರ ಬಿಲ್ ಮತ್ತು ಚಲನ್ ಹಾಗೆಯೇ ಸ್ಟೋರ್ ವಿಭಾಗದಿಂದ ಅಕೌಂಟ್ಸ್ ವಿಭಾಗಕ್ಕೆ ಲಭಿಸಿರುವ ಗೂಡ್ಸ್ ರಿಸೀಟ್ ನೋಟ್ (GRN) ಪ್ರತಿಯಾಗಿರುತ್ತದೆ. ಜಾಗದ ಬಾಡಿಗೆ ನೀಡಿರುವ ಕುರಿತಾದ ಬ್ಯಾಂಕ್ ಪೆಮೆಂಟ್ ವೌಚರ್ ಇದ್ದಲ್ಲಿ, ಮಾಲಿಕರಿಂದ ನೀಡಲಾಗಿರುವ ಬಾಡಿಕೆಯ ರಶೀದಿ ಇದು ವೌಚರ್ ನಲ್ಲಿ ಪೂರಕವಾದ ಡಾಕ್ಯುಮೆಂಟ್. ಕೆಲಸಗಾರರು ನೀಡಿರುವ ಪ್ರವಾಸದ ಖರ್ಚಿನ ಬಿಲ್ ನ ಪೆಮೆಂಟ್ ಮಾಡುವಾಗ ತಯಾರಿಸಲಾಗಿರುವ ಕ್ಯಾಶ್ ವೌಚರ್ ಆಗಿದ್ದು, ಅದಕ್ಕೆ ಪೂರಕವಾಗಿರುವ ಹಾಟೇಲ್ ಬಿಲ್, ಪ್ರವಾಸದ ಟಿಕೇಟು ಚೀಟಿ ಈ ವಿಧದ ದಾಖಲೆಗಳನ್ನು ಜೋಡಿಸಲಾಗಿರುತ್ತದೆ. ಸಪೋರ್ಟಿಂಗ್ ಕುರಿತು ಟ್ಯಾಲಿಯಲ್ಲಿ ಉಪಯುಕ್ತವಾಗಿರುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಅದರ ಕುರಿತು ಅರಿತುಕೊಳ್ಳುವುದು ತುಂಬಾ ಮಹತ್ವದ್ದಾಗಿದೆ. ವಿಸ್ತಾರವಾದ ಮಾಹಿತಿಯಲ್ಲಿರುವ ಸೆಟಿಂಗ್ ಮತ್ತು ಕಸ್ಟಮೈಜೆಶನ್ ಉಪಯೋಗಿಸಿ ಈ ಸಪೋರ್ಟಿಂಗ್ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಟ್ಯಾಲಿಯಲ್ಲಿ ಸಂಬಂಧಪಟ್ಟ ವೌಚರ್ ನ ಡಾಟಾದೊಂದಿಗೆ ಯಾವುದೇ ಕಮೆಂಟ್ ಗಳನ್ನು ಜೋಡಿಬಲ್ಲೆವು. ಅಂದರೆ ಯಾವುದೇ ವೌಚರ್ ನ ಸಪೋರ್ಟಿಂಗ್ ದಾಖಲೆಗಳನ್ನು ನೋಡುವುದಾದಲ್ಲಿ ವೌಚರ್ ಬಾಕ್ಸ್ ಫೈಲ್ ಹುಡುಕುವ ಆವಶ್ಯಕತೆ ಇರುವುದಿಲ್ಲ. ಪ್ರಸ್ತುತ ಇದನ್ನು ಕ್ಲೌಡ್ ಕಂಪ್ಯೂಟಿಂಗ್ ಮತ್ತು ವರ್ಕ್ ಫ್ರಮ್ ಹೋಮ್ ನ ಯುಗದಲ್ಲಿ ಇಂತಹ ಬಾಕ್ಸ್ ಫೈಲ್ ಗಳನ್ನು ನೋಡುವುದು ಸಾಧ್ಯವಾಗುವುದಿಲ್ಲ. ಮಹತ್ವದ ಅಂಶವೆಂದರೆ ಅಕೌಂಟಿಂಗ್ ವೌಚರ್ ಇದು ಟ್ಯಾಲಿ ಅಥವಾ ಇನ್ನಿತರ ಯಾವುದೇ ಸಾಫ್ಟ್ ವೇರ್ ನಲ್ಲಿ ಅಕಾಂಟಿಂಗ್ ನ ನೊಂದಣಿಗಳನ್ನು ಮಾಡುವಲ್ಲಿ ಮೊದಲ ಮತ್ತು ತುಂಬಾ ಮಹತ್ವದ ಡಾಕ್ಯುಮೆಂಟ್ ಆಗಿರುತ್ತದೆ. ಟ್ಯಾಲಿಯಲ್ಲಿ ಅದಕ್ಕೋಸ್ಕರವೇ ವೌಚರ್ ಎಂಟ್ರಿ ಮಾಡಲು ಸ್ಕ್ರೀನ್ ಎಂಡ್ ಡಾಟಾ ಕುರಿತಾದ ಕೆಲಸದ ರೀತಿಯನ್ನು ನಿರ್ಧರಿಸಲು ಅನೇಕ ವಿಧಗಳನ್ನು ವಿಸ್ತಾರವಾಗಿರುವ ಮಾಹಿತಿಗೆ ಪರ್ಯಾಯವನ್ನು ಆಯ್ಕೆ ಮಾಡುವ ವ್ಯವಸ್ಥೆಯನ್ನು ನೀಡುತ್ತದೆ.
 
 
ವೌಚರ್ ಎಂಟ್ರಿ ಇದು ಅಕೌಂಟ್ಸ್ ವಿಭಾಗದಲ್ಲಿ ಪ್ರತಿದಿನವೂ ಮಾಡುವ ಕೆಲಸವಾಗಿದೆ, ಎಂಬುದನ್ನು ಉದ್ಯಮಿಗಳು ಮತ್ತು ಅವರ ಅಕೌಂಟಂಟ್ ವಿವರವಾಗಿ ತಿಳಿದುಕೊಳ್ಳಬೇಕು. ಅಕೌಂಟ್ಸ್ ಡಿಪಾರ್ಟ್ ಮೆಂಟ್ ನಲ್ಲಿ ಲಭ್ಯವಿರುವ ಮ್ಯಾನ್ ಅವರ್ಸ್ ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗಂಟೆಗಳು ಈ ಕೆಲಸದಲ್ಲಿ ವ್ಯಯವಾಗುತ್ತವೆ. ಹಾಗೆಯೇ ಅಕೌಂಟಿಂಗ್ ನ ನಿಪುಣತೆ ಮತ್ತು ಆಡಿಟ್ ನ ನಿಯಮಗಳ ಬಳಕೆಯು ಅತಿ ಹೆಚ್ಚು ಪ್ರಮಾಣದಲ್ಲಿ ಇದೇ ಕೆಲಸಕ್ಕೆ ಮಾಡಲಾಗುತ್ತದೆ. ಒಮ್ಮೆ ವೌಚರ್ ಎಂಟ್ರಿ ಯೋಗ್ಯವಾಗಿ ಮಾಡಿದಲ್ಲಿ ಅಕೌಂಟಿಂಗ್ ನ ನಿಯಮಗಳಿಗೆ ಅನುಸಾರವಾಗಿ ಮುಂದಿನ ಪ್ರಕ್ರಿಯೆಯನ್ನು ಟ್ಯಾಲಿಯಲ್ಲಿಯೇ ಮಾಡಲಾಗುತ್ತದೆ. ಇದರಿಂದಾಗಿ ತಮಗೆ ಬೇಕಾದಂತೆ ಅದರ ವರದಿಯನ್ನು ತಯಾರಿಸುವುದೂ ಸಾಧ್ಯ. ಅದೂ ಕೂಡಾ ರಿಯಲ್ ಟೈಮ್ ಬೇಸಿಸ್ ನಲ್ಲಿ ಲಭಿಸುತ್ತವೆ. ವೌಚರ್ ಎಂಟ್ರಿಯ ಕೆಲಸವನ್ನು ಅಕೌಂಟ್ಸ್ ಡಿಪಾರ್ಟ್ ಮೆಂಟ್ ನಲ್ಲಿ ಯಾವ ರೀತಿಯಲ್ಲಿ ನಿರ್ವಹಿಸಲಾಗುತ್ತದೆಯೋ, ಆ ರೀತಿಯನ್ನು ಟ್ಯಾಲಿಯಲ್ಲಿ ಸಂಬಂಧಪಟ್ಟ ವಿಸ್ತಾರವಾದ ಮಾಹಿತಿಯ ರಚನೆಯಲ್ಲಿ ಯಾವ ರೀತಿಯಲ್ಲಿ ತಯಾರಿಸಲಾಗಿದೆ, ಇದರಲ್ಲಿ ಅವಲಂಬಿಸಿರುತ್ತದೆ, ಎಂಬುದನ್ನು ಗಮನದಲ್ಲಿಡಬೇಕು. ಈ ರಚನೆಯು ವ್ಯವಹಾರಕ್ಕೆ ಸಂಬಂಧಪಟ್ಟ ಹಣಕಾಸು ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಮತ್ತು ನಿರ್ದೋಷವಾಗಿ ಸಿಗಬೇಕು, ಎಂಬುದಕ್ಕೋಸ್ಕರ ಆವಶ್ಯಕವಿರುವ ಎಲ್ಲ ಡಾಟಾ ಎಂಟ್ರಿಯನ್ನು ಮಾಡುವ ನಿಟ್ಟಿನಲ್ಲಿ ಸಕ್ಷಮವಾಗಿರುವುದೂ ಅತ್ಯಂತ ಅಗತ್ಯದ್ದಾಗಿದೆ.
 
 
ವೌಚರ್ ಕುರಿತು ವಿಸ್ತಾರವಾದ ಮಾಹಿತಿಯಲ್ಲಿ, ವೌಚರ್ ನ ಯಾವ್ಯಾವ ವಿಧಗಳನ್ನು ವ್ಯವಹಾರದಲ್ಲಿ ಬಳಸಬೇಕು ಮತ್ತು ವೌಚರ್ ನ ಪ್ರತಿಯೊಂದು ವಿಧಕ್ಕೆ ಡಾಟಾ ಎಂಟ್ರಿ ಸ್ಕ್ರೀನ್ ಹೇಗೆ ಕಾಣಬೇಕು, ಎಂಬುದನ್ನು ಮೊದಲಾಗಿಯೇ ನಿರ್ಧರಿಸಬೇಕಾಗುತ್ತದೆ. ಟ್ಯಾಲಿ EP ಯಲ್ಲಿ ವೌಚರ್ ಒಟ್ಟು 28 ವಿಧದಲ್ಲಿ ಮೊದಲಿನಿಂದಲೇ ತಯಾರಿಸಲಾಗಿರುತ್ತದೆ. ಉದಾಹರಣೆ, ಪೇಮೆಂಟ್, ರಿಸೀಟ್, ಸೇಲ್ಸ್, ಪರ್ಚೆಸ್, ಜರ್ನಲ್, ಡೆಬಿಟ್ ನೋಟ್, ಕ್ರೆಡಿಟ್ ನೋಟ್, ಸ್ಟಾಕ್ ಜರ್ನಲ್, ಡಿಲಿವರಿ ನೋಟ್, ಕಾಂಟ್ರಾ ಮುಂತಾದವುಗಳು. ಇಂತಹ ಪ್ರಮುಖ ವಿಧಗಳೊಂದಿಗೆ ಅಳವಡಿಸಿರುವ ಇತರ ಪ್ರಮುಖ ವಿಧಗಳನ್ನು ಬಳಕೆಗಾರರು ತಯಾರಿಸಬಲ್ಲರು. ಉದಾಹರಣೆ, ಸೇಲ್ಸ್ ನ ವೌಚರ್ ಗಳಲ್ಲಿ ಕ್ಯಾಶ್ ಸೇಲ್ಸ್ ಮತ್ತು ಕ್ರೆಡಿಟ್ ಸೇಲ್ಸ್ ಎಂಬ ಎರಡು ವಿಧಗಳನ್ನು ತಯಾರಿಸಬಹುದಾಗಿದೆ. ಯಾವುದೇ ವಿಧದ ವೌಚರ್ ಗೆ ವೌಚರ್ ಕ್ರಮಾಂಕವನ್ನು ಸಾಫ್ಟ್ ವೇರ್ ನಿಂದ ತಯಾರಿಸುವುದೇ, ವೌಚರ್ ನ ಪುಸ್ತಕದಲ್ಲಿರುವ ಕ್ರಮಾಂಕವನ್ನು ಅಕೌಂಟ್ಸ್ ಡಿಪಾರ್ಟ್ ಮೆಂಟ್ ನಿಂದ ಬರೆದಿರುವ ಆಯಾ ಕ್ರಮಾಂಕದಿಂದ ವೌಟರ್ ಎಂಟ್ರಿಯನ್ನು ಮಾಡಬಹುದು. ಇದನ್ನು ವಿಸ್ತಾರವಾದ ಮಾಹಿತಿಯಲ್ಲಿ ಫೀಡ್ ಮಾಡಬೇಕಾಗುತ್ತದೆ. ಆಡಿಟ್ ನ ನಿಟ್ಟಿನಲ್ಲಿ ಕಾಗದದಲ್ಲಿರುವ ಮುಂಚೆಯೇ ಬರೆದಿರುವ ತಯಾರಾಗಿರುವ ವೌಚರ್ ಇರುವುದು ಹೆಚ್ಚು ಸೂಕ್ತವಾಗಿರುತ್ತದೆ. ಕಾರಣ, ಒಂದುವೇಳೆ ನಡುವೆಯೇ ಯಾವುದೇ ವೌಚರ್ ಸೇರಿಸಿ ಅಥವಾ ಫೀಡ್ ಮಾಡಿರುವ ವೌಚರ್ ಡಿಲೀಟ್ ಮಾಡಿ ಲೆಕ್ಕಾಚಾರದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ವೌಚರ್ ಕಾನ್ ಫಿಗರೇಶನ್ ಮೆನ್ಯು ಬಳಸಿ ಪ್ರತಿಯೊಂದು ವಿಧಕ್ಕೋಸ್ಕರ ಡಾಟಾ ಎಂಟ್ರಿ ಸ್ಕ್ರೀನ್ ಹೇಗೆ ಕಾಣಬೇಕು, ಎಂಬುದನ್ನೂ ನಿರ್ಧರಿಸಬಹುದಾಗಿದೆ. ಬ್ಯಾಂಕ್ ಪೆಮೆಂಟ್ ವೌಚರ್ ನೊಂದಿಗೆ ಚೆಕ್ ಪ್ರಿಂಟಿಂಗ್ ನ ಪರ್ಯಾಯವನ್ನು ಜೋಡಿಸಬಹುದಾಗಿದೆ. ಅಂದರೆ ಪೆಮೆಂಟ್ ವೌಚರ್ ಫೀಡ್ ಮಾಡದೇ ಚೆಕ್ ಮುದ್ರಿಸುವುದು ಅಸಾಧ್ಯ. ಟ್ಯಾಲಿ ಮಾಸ್ಟರ್ ನಲ್ಲಿರುವ ಈ ಒಂದು ಸೆಟಿಂಗ್ ನಿಂದಾಗಿ ಚೆಕ್ ಆಯಾ ಪಾರ್ಟಿಗೆ ನೀಡಲಾಯಿತು, ಆದರೆ ಅದನ್ನು ಲೆಕ್ಕಾಚಾರದಲ್ಲಿ ಸೇರಿಸಲಾಗಿಲ್ಲ, ಎಂಬ ಸ್ಥಿತಿಯು ಎಂದಿಗೂ ಆಗಬಾರದು. ರಿಟೇಲ್ ವ್ಯವಹಾರಗಳಲ್ಲಿ ಎಲ್ಲಿ POS ಮಶಿನ್ ಮೂಲಕ ಮಾರಾಟವಾಗುವಲ್ಲಿ ಈ ರೀತಿಯ ಮಶಿನ್ ಔಟ್ ಪುಟ್ ಟ್ಯಾಲಿಯಲ್ಲಿ ಇಂಪೋರ್ಟ್ ಮಾಡುವಂತಹ ಸೆಟಿಂಗ್ ಮತ್ತು ಇನ್ನಿತರ ಕಸ್ಟಮೈಜೆಶನ್ ಮಾಡಬಹುದಾಗಿದೆ. ಇದರಿಂದಾಗಿ ಡಾಟಾ ಎಂಟ್ರಿ ಮಾಡಲು ಖರ್ಚಾಗುವ ಸಮಯದಲ್ಲಿ ಉಳಿತಾಯವಾಗಬಲ್ಲದು. ಹಾಗೆಯೇ ರಿಯಲ್ ಟೈಮ್ ಬೇಸಿಸ್ ನಲ್ಲಿ ಅಕೌಂಟಿಂಗ್ ಮತ್ತು ಸ್ಟಾಕ್ ಎಂಟ್ರಿಯೂ ತನ್ನಷ್ಟಕ್ಕೆ ಆಗುತ್ತದೆ. ಮಾಸ್ಟರ್ ಸೆಟಿಂಗ್ ಮೂಲಕ ವಿವಿಧ ಪ್ರೈಸ್ ಲೀಸ್ಟ್ ಅಂದರೆ ಹೋಲ್ ಸೆಲ್, ರಿಟೇಲ್ ಈ ಸ್ಟಾಕ್ ಮತ್ತು ಇನ್ವೈಸಿಂಗ್ ಮೆನ್ಯೂ ನೊಂದಿಗೆ ಜೋಡಿಸಿ ಅದರಂತೆಯೇ ವಿಶಿಷ್ಟ ಮೊತ್ತದಲ್ಲಿ ಬಿಲ್ ಗಳನ್ನು ತಯಾರಿಸುವುದು ಸಾಧ್ಯ.
 
 
ವೌಚರ್ ನ ವಿಧದಂತೆ ವೌಚರ್ ನಲ್ಲಿರುವ ಮೊದಲ ಅಕೌಂಟಿಂಗ್ ನ ಪರಿಣಾಮಗಳಿಗೋಸ್ಕರ ಡೆಬಿಟ್ ಅಥವಾ ಕ್ರೆಡಿಟ್ ಈ ಡಾಟಾ ಎಂಟ್ರಿ ಸ್ಕ್ರೀನ್ ನಲ್ಲಿ ತನ್ನಷ್ಟಕ್ಕೆ ನಿರ್ಧರಿಸಲಾಗುತ್ತದೆ ಮತ್ತು ಬಳಕೆಗಾರರು ಅದರ ನಂತರ ಉಳಿದಿರುವ ಲೆಜರ್ ಅಕೌಂಟ್ಸ್ ಆಯ್ಕೆ ಮಾಡಿ ಅವರಿಗೆ ಎಷ್ಟು ಮೊತ್ತದ ಡೆಬಿಟ್ ಅಥವಾ ಕ್ರೆಡಿಟ್ ನೀಡುವುದು, ಇದನ್ನು ಫೀಡ್ ಮಾಡಬಲ್ಲರು. ವೌಚರ್ ಎಂಟ್ರಿ ಮಾಡಲಾಗಿದೆ, ಎಂಬುದನ್ನು ಬಳಕೆಗಾರರು ಟ್ಯಾಲಿಯಲ್ಲಿ ಫೀಡ್ ಮಾಡಿದ ನಂತರ ವೌಚರ್ ನಲ್ಲಿರುವ ಡೆಬಿಟ್ ಮತ್ತು ಕ್ರೆಡಿಟ್ ಪರಿಣಾಮಗಳನ್ನು ಟ್ಯಾಲಿಯಲ್ಲಿ ಕೂಡಿಸಲಾಗುತ್ತದೆ. ಕೂಡಿಸಿರುವ ಒಟ್ಟು ಮೊತ್ತವು ಒಂದೇ ರೀತಿ ಇದ್ದಲ್ಲಿ ಆ ವೌಚರ್ ನ್ನು ಅಕೌಂಟಿಂಗ್ ಡಾಟಾದಲ್ಲಿ ಅಳವಡಿಸಲಾಗುತ್ತದೆ. ಅಂದರೆ ವೌಚರ್ ಎಂಟ್ರಿಯ ಹಂತದಲ್ಲಿಯೇ ಡೆಬಿಟ್ ಮತ್ತು ಕ್ರೆಡಿಟ್ ಇವೆರಡೂ ಒಂದೇ ರೀತಿಯಲ್ಲಿವೆ ಎಂಬುದನ್ನು ಖಾತರಿ ಮಾಡಿದ್ದರಿಂದ ಟ್ಯಾಲಿಯಲ್ಲಿರುವ ಟ್ರಯಲ್ ಬ್ಯಾಲೆನ್ಸ್ ಮತ್ತು ಅದಕ್ಕೆ ಆಧರಿಸಿರುವ ಬ್ಯಾಲೆನ್ಸ್ ಶೀಟ್ ಇವೆರಡರಲ್ಲಿ ಶಾಶ್ವತವಾಗಿ ಸರಿಹೊಂದಾಣಿಕೆ ಇರುತ್ತದೆ. ವೌಚರ್ ಎಂಟ್ರಿ ಟ್ಯಾಲಿಯಲ್ಲಿ ಫೀಡ್ ಆದಲ್ಲಿ ಸಂಬಂಧಪಟ್ಟ ಲೆಜರ್ ಅಕೌಂಟ್ ನಲ್ಲಿ ಸಾಫ್ಟ್ ವೇರ್ ನಿಂದಲೇ ಪೋಸ್ಟಿಂಗ್ ತಕ್ಷಣ ಮತ್ತು ತನ್ನಷ್ಟಕ್ಕೆ ಆಗುತ್ತದೆ. ಇದರಿಂದಾಗಿ ಯಾವ ದಿನಾಂಕದ ತನಕ ಅಥವಾ ಯಾವ ಕ್ಷಣದ ತನಕ ಮಾಡಿರುವ ಹಣಕಾಸಿನ ವ್ಯವಸಾರಗಳ ನೊಂದಣಿಯನ್ನು ಟ್ಯಾಲಿಯಲ್ಲಿ ಮಾಡಿದಲ್ಲಿ ಅಲ್ಲಿಯ ತನಕ ಬ್ಯಾಲೆನ್ಸ್ ಶೀಟ್, ಲಾಭ-ನಷ್ಟದ ವರದಿ ಮತ್ತು ಇನ್ನಿತರ ವರದಿಗಳನ್ನು ಟ್ಯಾಲಿಯಿಂದ ವೌಚರ್ ಎಂಟ್ರಿಯ ನಂತರ ತಕ್ಷಣ ಲಭಿಸಬಲ್ಲವು.
ಟ್ಯಾಲಿಯಲ್ಲಿರುವ ವಿಸ್ತಾರವಾದ ಮಾಹಿತಿಯ ಕುರಿತು ಮಹತ್ವದ ಮಾಹಿತಿಯನ್ನು ನಾವು ತಿಳಿದುಕೊಂಡೆವು. ಮರ ಕಡಿಯುವವನಿಗೆ ಕಟ್ಟಿಗೆಯನ್ನು ತುಂಡು ಮಾಡುವ ಕೆಲಸದೊಂದಿಗೆ ಆಗಾಗ ಗರಗಸವನ್ನೂ ಚೂಪು ಮಾಡಬೇಕಾಗುತ್ತದೆ. ಹಾಗೆಯೇ ಉದ್ಯಮಿಗಳು ಮತ್ತು ಅಕೌಂಟಂಟ್ ಇವರು ಟ್ಯಾಲಿಯಲ್ಲಿರುವ ವಿಸ್ತಾರವಾದ ಮಾಹಿತಿಯನ್ನು ಆಗಾಗ ಪರಿಶೀಲಿಸಿ ಅದರಲ್ಲಿ ವ್ಯವಹಾರದಲ್ಲಿ ಬದಲಾಗಿರುವ ಬೇಡಿಕೆಗಳಿಗೆ ಅನುಸಾರವಾಗಿ ಹಲವಾರು ಬದಲಾವಣೆಗಳನ್ನು ಮಾಡುವುದು ಅತ್ಯಾವಶ್ಯಕವಾಗಿದೆಯೇ, ಎಂಬುದನ್ನು ವೀಕ್ಷಿಸುವುದೂ ಅತ್ಯಾವಶ್ಯಕವಾಗಿದೆ.
 
 
ಮುಂದಿನ ಸಂಚಿಕೆಯಲ್ಲಿ ನಾವು ಟ್ಯಾಲಿಯಿಂದ ಲಭಿಸಬಲ್ಲ ಎಲ್ಲಕ್ಕಿಂತಲೂ ಮಹತ್ವದ ರಿಪೋರ್ಟ್ ಅಂದರೆ ಬ್ಯಾಲೆನ್ಸ್ ಶೀಟ್ ಮತ್ತು ಲಾಭ-ನಷ್ಟದ ವರದಿಗಳು ಹೇಗಿರುತ್ತವೆ ಎಂಬದನ್ನು ತಿಳಿದುಕೊಳ್ಳೋಣ. ಹಾಗೆಯೇ ಟ್ಯಾಲಿಯಿಂದ ಇತರ ಯಾವ ವರದಿಗಳು ಲಭಿಸಬಲ್ಲವು ಮತ್ತು ತಮಗೆ ಬೇಕಾದಂತೆ ಮತ್ತು ಬೇಕಾದಾಗ, ಬೇಕಾಗಿರುವ ಮಾಹಿತಿಯನ್ನು ಈ ವರದಿಗಳಿಂದ ಹೇಗೆ ಪಡೆಯಬಹುದು, ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.
 
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.
9822475611
@@AUTHORINFO_V1@@