ಪೊಸಿಶನ್ ಕಾಂಪ್ರೆನ್ಶೇಶನ್

@@NEWS_SUBHEADLINE_BLOCK@@

Lohkarya - Udyam Prakashan    09-Jun-2021   
Total Views |
ಸಿ.ಎನ್.ಸಿ. ಪ್ರೊಗ್ರಾಮಿಂಗ್ ನಲ್ಲಿ ವಿವಿಧ ಸಂದರ್ಭ ಬಿಂದುಗಳಲ್ಲಿ (ರೆಫರನ್ಸ್ ಪಾಯಿಂಟ್) ಸಂಬಂಧವು ಈ ಹಿಂದೆ ಸೆಟ್ ಮಾಡಿರುವ ಅಂಕೆ-ಸಂಖ್ಯೆಗಳಂತೆ ತೋರಿಸಲಾಗುತ್ತದೆ. ಮಶಿನ್ ನಲ್ಲಿ ಕಾರ್ಯವಸ್ತುವಿನ ಪ್ರೊಗ್ರಾಮಿಂಗ್ ಮಾಡುತ್ತಿರುವಾಗ ಹೆಚ್ಚಿನ ಅಳತೆಗಳು ನಿರ್ದೋಷವಾಗಿ ತಿಳಿದಿರುತ್ತವೆ, ಆದರೆ ಕೆಲವುಗಳ ಅಂದಾಜಿರುತ್ತದೆ, ಆದರೆ ಹಲವಾರು ಅಳತೆಗಳು ತಿಳಿದಿರುವುದಿಲ್ಲ. ತಿಳಿದಿರುವ ಹಲವಾರು ಅಳತೆಗಳು ಕಾರ್ಯವಸ್ತುವಿನಲ್ಲಿರುವ ವ್ಯತ್ಯಾಸದಂತೆ ಬದಲಾಗುತ್ತವೆ. ಉದಾಹರಣೆ, ಕಾಸ್ಟಿಂಗ್. ಇದರಿಂದಾಗಿ ಪ್ರೊಗ್ರಾಮರ್ ಗೆ ಪ್ರೊಗ್ರಾಮ್ ಮಾಡುವುದು ದುಸ್ಸಾಧ್ಯವಾಗುತ್ತದೆ. ಈ ತೊಂದರೆಯನ್ನು ಕಡಿಮೆ ಮಾಡಲು ನಿಯಂತ್ರಕದಲ್ಲಿ ಕರೆಕ್ಟಿವ್ (ಸುಧಾರಣಾತ್ಮಕವಾದ) ಸೌಲಭ್ಯ (ಇದರಿಂದಾಗಿ ಮಶಿನ್ ನಿರ್ದೋಷವಾದ ರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಸೆಟ್ ಮಾಡಬಹುದು) ಇರುವುದು ಸೂಕ್ತವಾಗುತ್ತದೆ. ಪ್ರಸ್ತುತ ಅಭಿವೃದ್ಧಪಡಿಸಿದ ನಿಯಂತ್ರಕಗಳಲ್ಲಿ ಈ ವ್ಯವಸ್ಥೆಯು ಈ ಮುಂದಿನಂತೆ ಇರುತ್ತದೆ.
 
 

dsftgyhujk_1  H 
 
1. ಅನೇಕ ಕೋರ್ಡಿನೇಟ್ ಸಿಸ್ಟಮ್ (ಉದಾಹರಣೆ, ಕಾರ್ಟೇಶಿಯಮ್, ಪೋಲರ್)
2. ಆಫ್ ಸೆಟ್
3. ಕಾಂಪೆನ್ಸೇಶನ್
ಇಂತಹ ಸುಧಾರಣಾತ್ಮಕವಾದ ಸೌಲಭ್ಯಗಳು ಪ್ರಮುಖವಾಗಿ ಅಡಗಿವೆ. ಇವುಗಳನ್ನು ಸಪೋರ್ಟ್ ಟೂಲ್ ಎಂಬುದಾಗಿಯೂ ಹೇಳಲಾಗುತ್ತದೆ. ಹೆಸರಿಗೆ ತಕ್ಕಂತೆ ಇದರಲ್ಲಿ ಪ್ರತ್ಯಕ್ಷ ಟೂಲ್ ಪೋಜಿಶನ್ ಮತ್ತು ಥಿಯಾರಿಟಿಕಲ್ ಅಥವಾ ತಿಳಿದುಕೊಂಡಿರುವ ಟೂಲ್ ಪೊಜಿಶನ್ ನಲ್ಲಿರುವ ವ್ಯತ್ಯಾಸಗಳನ್ನು ದುರಸ್ತಿ ಮಾಡಿ ಟೂಲ್ ನ ಸ್ಥಾನವನ್ನು ನಿರ್ದೋಷವಾಗಿ ಮಾಡಲಾಗುತ್ತದೆ. ಪ್ರಸ್ತುತ ತುಂಬಾ ಹೆಚ್ಚು ಅಭಿವೃದ್ಧಿಯಾದ ಸಿ.ಎನ್.ಸಿ. ಸಿಸ್ಟಮ್ ನಲ್ಲಿಯೂ ಈ ರೀತಿಯು ಲಭ್ಯವಿದೆ.
 
 
ಪೊಜಿಶನ್ ಕಾಂಪೆನ್ಶೇಶನ್ ನ ಕೆಲಸ
ಪೊಜಿಶನ್ ಕಾಂಪೆನ್ಶೇಶನ್ ನ ಪ್ರಮುಖ ಕೆಲಸವೆಂದರೆ ಮಶಿನ್ ಝೀರೋ ಮತ್ತು ಪ್ರೊಗ್ರಾಮ್ ಝೀರೋ ನಲ್ಲಿರುವ ವ್ಯತ್ಯಾಸವನ್ನು ದುರಸ್ತಿ ಮಾಡುವುದು. ಎರಡು ಸಂದರ್ಭ ಬಿಂದುಗಳಲ್ಲಿರುವ ದೂರವನ್ನು ಬದಲಾಯಿಸುವಂತಹದ್ದಾಗಿದೆ ಮತ್ತು ದೂರವು ತಿಳಿಯದೇ ಇರುವ ಜಾಗದಲ್ಲಿ ಪ್ರತ್ಯಕ್ಷ ಕೆಲಸದಲ್ಲಿ ಇದನ್ನು ಬಳಸಲಾಗುತ್ತದೆ. ಪೊಜಿಶನ್ ಕಾಂಪೆನ್ಶೇಶನ್ ಬಳಸಿ, ಪ್ರೊಗ್ರಾಮ್ ನಲ್ಲಿ ಶಾಶ್ವತವಾದ ಬದಲಾವಣೆಗಳನ್ನು ಮಾಡುವುದು, ಫಿಕ್ಚ್ಸರ್ ಸೆಟಪ್ ರಿಅಲೈನ್ ಮಾಡುವುದು, ಮುಂತಾದ ಅಂಶಗಳನ್ನು ತಡೆಯಬಹುದು.
ಉದಾಹರಣೆ, ಕಾಸ್ಟಿಂಗ್ ನಲ್ಲಿ ಕಾರ್ಯವಸ್ತುಗಳಿಗೋಸ್ಕರ ಪ್ರೊಗ್ರಾಮ್ ಮಾಡುತ್ತಿರುವಾಗ ಪ್ರೊಗ್ರಾಮ್ ಝೀರೋ ಕಾಸ್ಟಿಂಗ್ ನೊಂದಿಗೆ ಬದಲಾಗುತ್ತದೆ. ಕಾರಣ ಮೊದಲ ಕಾಸ್ಟಿಂಗ್ ನಿಂದ ಪ್ರೊಗ್ರಾಮ್ ಝೀರೋ ಪಡೆದಿರಲಾಗುತ್ತದೆ. ಪ್ರತಿಯೊಂದು ಕಾಸ್ಟಿಂಗ್ ನಲ್ಲಿ ಉದ್ಭವಿಸುವ ವ್ಯತ್ಯಾಸದಿಂದಾಗಿ ಪ್ರೊಗ್ರಾಮ್ ಝೀರೋ, ಅದರಂತೆಯೇ ಬದಲಾಯಿಸಬೇಕಾಗುತ್ತದೆ. ಸಾಮಾನ್ಯವಾಗಿ ಯಂತ್ರಭಾಗಗಳನ್ನು ಟೇಬಲ್ ನಲ್ಲಿರುವ ಫಿಕ್ಚ್ಸರ ನಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಸಂಪೂರ್ಣ ಸೆಟಪ್ ಕಾಂಪೆನ್ಸೇಟ್ ಮಾಡಲಾಗಿರುತ್ತದೆ. ಇದೇ ಕಾರಣದಿಂದಾಗಿ ಇದನ್ನು ಪೊಜಿಶನ್ ಕಾಂಪೆನ್ಶೇಶನ್ ಫಿಕ್ಚ್ಸರ್ ಆಫ್ ಸೆಟ್ ಅಥವಾ ಟೇಬಲ್ ಆಫ್ ಸೆಟ್ ಎಂಬುದಾಗಿಯೂ ಹೇಳಲಾಗುತ್ತದೆ.
 
ಪ್ರೊಗ್ರಾಮಿಂಗ್ ಕಮಾಂಡ್
ಪಾನುಕ ಅಥವಾ ಇತರ ಫಾನುಕದಂತಹ ನಿಯಂತ್ರಕದಲ್ಲಿ ಈ ಕೆಲಸಕ್ಕೋಸ್ಕರ ಮುಂದಿನ ನಾಲ್ಕು G ಕಮಾಂಡ್ ಲಭ್ಯವಿವೆ.
 
• ಈ ವ್ಯಾಖ್ಯೆ +ve ಕಾಂಪೆನ್ಶೇಶನ್ ಮೌಲ್ಯದಲ್ಲಿ ಅಧರಿಸಿವೆ.
• ಮೇಲ್ಕಾಣಿಸಿದ ಯಾವುದೇ ಕಮಾಂಡ್ ಮೋಡಲ್ ಇರುವುದಿಲ್ಲ.
• ಈ ಕಮಾಂಡ್ ನೀಡಿರುವ ಬ್ಲಾಕ್ ಗೋಸ್ಕರವೇ ಕಾರ್ಯಗತವಾಗಿರುತ್ತವೆ.
• ಹೆಚ್ಚು ಬ್ಲಾಕ್ ನಲ್ಲಿ ಬೇಕಾದಲ್ಲಿ ಪ್ರತಿಯೊಂದು ಬ್ಲಾಕ್ ನಲ್ಲಿ ಅವುಗಳನ್ನು ಬರೆಯಬೇಕಾಗುತ್ತವೆ.
 
 
ಪ್ರೊಗ್ರಾಮಿಂಗ್ ಫಾರ್ಮೆಟ್
G91 G00 G45 X H G91 - ಇನ್ಕ್ರಿಮೆಂಟಲ್
ಅಥವಾ
G91 G00 G45 X D G00 - ರೆಪಿಡ್
ಪ್ರತಿಯೊಂದು G ಕೋಡ್ (G45 ರಿಂದ G48) ಯುನಿಕ್ ಪೊಜಿಶನ್ ಕಾಂಪೆನ್ಶೇಶನ್ ನಂಬರ್ ನಿಂದ ಜೋಡಿಸಲಾಗುತ್ತದೆ. ಇದಕ್ಕೋಸ್ಕರ H ಅಕ್ಷರವನ್ನು ಬಳಸಲಾಗುತ್ತದೆ.
ಕೆಲವು ಫಾನುಕ ನಿಯಂತ್ರಕಗಳಲ್ಲಿ D ಅಕ್ಷರವನ್ನು ಬಳಸಲಾಗುತ್ತದೆ. ಪೊಜಿಶನ್ ಕಾಂಪೆನ್ಶೆನ್ ನಿಂದ ಪ್ರಮುಖ ಕೆಲಸ ಮಶಿನ್ ಝೀರೋ ಮತ್ತು ಪ್ರೊಗ್ರಾಮ್ ಝೀರೋ ಇದರಲ್ಲಿ ದೂರ (ಚಿತ್ರ ಕ್ರ. 1) ದುರಸ್ತಿ ಮಾಡಿ ಸರಿ ಮಾಡುವುದು. ಸಾಮಾನ್ಯ ಬಳಸುವುದು ಮಶಿನ್ ಝೀರೋ ಪೋಜಿಶನ್ ನಿಂದ್ ಟೂಲ್ ನ ಚಟುವಟಿಕೆ ಪ್ರಾರಂಭಿಸುವಾಗ ಆಗುತ್ತದೆ.
 

poiujhgfdsa_1   
 
N1 G20
N2 G17 G80 T01
N3 M06
N4 G90 G00 G45 X0 H31 (ಅಕ್ಷದಲ್ಲಿ ಚಟುವಟಿಕೆ ಇರುವುದಿಲ್ಲ)
N5 G45 Y0 H32 (Y ಅಕ್ಷದಲ್ಲಿ ಚಟುವಟಿಕೆಗಳಿಲ್ಲ)
N6
ಈ ಉದಾಹರಣೆಯಲ್ಲಿ ಮಶಿನ್ ಝೀರೋದಿಂದ (ಪ್ರಸ್ತುತ ಟೂಲ್ ಪೋಜಿಶನ್) ಪ್ರೊಗ್ರಾಮ್ ಝೀರೋ ತನಕ (ಟಾರ್ಗೇಟ್ ಪಾಯಿಂಟ್) ವೇಗವನ್ನು ತಯಾರಿಸಲಾಗಿದೆ.
ಬ್ಲಾಕ್ N4 ರಲ್ಲಿ G90 ಅಬ್ ಸಲ್ಯೂಟ್ ಮೋಡ್ ಸೆಟ್ ಮಾಡಲಾಗಿದೆ. ನಿಯಂತ್ರಣೆಯ ವ್ಯವಸ್ಥೆ H31 ಗೆ ಸೆಟ್ ಮಾಡಲಾಗಿದೆ, ಎಂಬುದಾಗಿ ತಿಳಿಯಿರಿ. ನಿಯಂತ್ರಕದಲ್ಲಿ ಬ್ಲಾಕ್ ಓದಲಾಗುತ್ತದೆ ಮತ್ತು G90 ಅಬ್ ಸಲ್ಯೂಟ್ ಮೋಡ್ ನಲ್ಲಿ ಹೋಗಿ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಬಲ್ಲದು. ಅಬ್ ಸಲ್ಯೂಟ್ ಝೀರೋ ಇರುವುದರಿಂದ ನಿಯಂತ್ರಕವು ಎನೂ ಮಾಡುವುದಿಲ್ಲ. ಇದರಲ್ಲಿ ಯಾವುದೇ ಚಟುವಟಿಕೆ ಇರಲಾರದು. ಒಂದು ವೇಳೆ G90 ಬದಲಾಯಿಸಿ G91 (ಇನ್ ಕ್ರಿಮೆಂಟ್ ಮೋಡ್) ಅಳವಡಸಿದಲ್ಲಿ ಚಟುವಟಿಕೆಯಾಗಬಲ್ಲದು. (X ಅಕ್ಷ –ve ದಿಕ್ಕಿನಲ್ಲಿ) ಇದೇ ರೀತಿಯಲ್ಲಿ ವೇಗವು Y ಅಕ್ಷದಲ್ಲಿ ಆಗಬಲ್ಲದು. ಚುಟುಕಾಗಿ ಹೇಳುವುದಾದರೆ, ಪೋಜಿಶನ್ ಕಾಂಪೆನ್ಸೇಶನ್ ಕಮಾಂಡ್ ಕೆವಲ G91 ಇನ್ ಕ್ರಿಮೆಂಟಲ್ ಮೋಡ್ ನಲ್ಲಿಯೇ ಬಳಸಿರಿ.
 
 
ಚಟುವಟಿಕೆಗಳ ಉದ್ದದ ಅಳತೆ (ಮೋಶನ್ ಲೆಂಥ್ ಕ್ಯಾಲ್ ಕ್ಯುಲೇಶನ್)
G45 ಕಮಾಂಡ್ ನಿಂದ ಸಿಂಗಲ್ ಇನ್ಕ್ರೀಜ್ ಪ್ರೊಗ್ರಾಮ್ ಮಾಡಬಹುದಾಗಿದೆ. ಆದರೆ G46 ರಿಂದ ಸಿಂಗಲ್ ಡಿಕ್ರೀಸ್ ಪ್ರೊಗ್ರಾಮ್ ಮಾಡಬಹುದಾಗಿದೆ. ಪ್ರತಿಯೊಂದು ಕಮಾಂಡ್ ವಿಶಿಷ್ಟ ಅಕ್ಷ ಮತ್ತು ಒಂದು ಯುನಿಕ್ H ಎಡ್ರೆಸ್ ನೊಂದಿಗೆ ಕಟ್ಟಿಡಲಾಗುತ್ತದೆ, ಎಂಬುದನ್ನು ನಾವು ನೋಡಿದೆವು. ಈಗ ನಾವು H ಎಡ್ರೆಸ್ ಗೋಸ್ಕರ ಉಪಲಬ್ಧವಿರುವ ಕಾಂಬಿನೇಶನ್ ನೋಡೋಣ.
• ಇನ್ಕ್ರೀಜ್ ಅಥವಾ ಡಿಕ್ರೀಸ್ G45 ಅಥವಾ G46 ಬಳಸಿ ಪ್ರೋಗ್ರಾಮ್ ಮಾಡುವುದು ಸಾಧ್ಯ.
• ಎಕ್ಸಿಸ್ ಟಾರ್ಗೇಟ್ ಗೆ ಝೀರೋ ಮೌಲ್ಯ +ve ಮೌಲ್ಯ ಅಥವಾ –ve ಮೌಲ್ಯಇರಬಲ್ಲದು.
• ಕಾಂಪ್ರೆನ್ಶೇಶನ್ ಟೂಲ್ ಜೀರೋ +ve ಅಥವಾ –ve ಇರಬಲ್ಲದು.
 
 
ಪ್ರೊಗ್ರಾಮಿಂಗ್ ಮಾಡುತ್ತಿರುವಾಗ ಹಲವಾರು ನಿಗದಿತ ಸ್ಟ್ಯಾಂಡರ್ಡ್ ಗಳನ್ನು ತಯಾರಿಸಿ ಅದಕ್ಕೆ ಅನುಸಾರವಾಗಿ ಕೆಲಸ ಮಾಡುವುದು ಸೂಕ್ತವಾಗಿದೆ. ಉದಾಹರಣೆ, ವರ್ಟಿಕಲ್ ಮಶಿನಿಂಗ್ ಸೆಂಟರ್ ನಲ್ಲಿ ಮಶಿನ್ ಝೀರೋದಿಂದ ಪ್ರೊಗ್ರಾಮ್ ಝೀರೋ ತನಕ ಕಾಂಪೆನ್ಶೇಶನ್ ಅಳೆಯಲಾಗುತ್ತದೆ. ಅಂದರೆ ಆಪರೇಟರ್ ನ ದೃಷ್ಟಿಯಲ್ಲಿ –ve ಎಂಬ ದಿಕ್ಕು. ಇದರ ಅರ್ಥವೆಂದರೆ –ve ಕಾಂಪೆನ್ಶೇಶನ್ ಮೌಲ್ಯ ಸ್ಟ್ಯಾಂಡರ್ಡ್ ಮಾಡಬೇಕಾಗುತ್ತದೆ.
ಬ್ಲಾಕ್ ನಲ್ಲಿರುವ ಮಾಹಿತಿಯನ್ನು ನಿಯಂತ್ರಕ ಯಾವ ರೀತಿಯಲ್ಲಿ ಓದುತ್ತದೆ ಮತ್ತು ಕೆಲಸ ನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಪೊಜಿಶನ್ ಕಾಂಪೆನ್ಶೇಶನ್ ನ H ಎಡ್ರೆಸ್ ನ ಮೆಮರಿಯಲ್ಲಿ ಶೇಖರಿಸಿದ (ಸೇವ್) ಮೌಲ್ಯವನ್ನು ಉಪಯೋಗಿಸಲಾಗುತ್ತದೆ. ಒಂದು ವೇಳೆ ಮೌಲ್ಯವು ಸೊನ್ನೆಯಾಗಿದ್ದಲ್ಲಿ ಕಾಂಪೆನ್ಶೇಶನ್ ಆಗುವುದಿಲ್ಲ. ಆದರೆ H ಮೌಲ್ಯ –ve ಇದ್ದಲ್ಲಿ ಅದು ಅಕ್ಷದ ಟಾರ್ಗೇಟ್ ಪಾಯಿಂಟ್ ಮೌಲ್ಯದಲ್ಲಿ ಪಡೆಯಲಾಗುತ್ತದೆ. ಅದರಂತೆಯೇ ಚಟುವಟಿಕೆ ಮತ್ತು ದಿಕ್ಕನ್ನು ಪಡೆಯಲಾಗುತ್ತದೆ.
 
 
ಉದಾಹರಣೆ, ಮೆಮರೀ ರಜಿಸ್ಟರ್ H31 ನಲ್ಲಿ -100 ಮಿ.ಮೀ. (-ve) ಈ ಮೌಲ್ಯವನ್ನು ಶೇಖರಿಸಿದ್ದು ಮಶಿನ್ ನ ಪ್ರಸ್ತುತ ಲೊಕೇಶನ್ ಝೀರೋ ಪೋಜಿಶನ್ ಇದೆ ಮತ್ತು ನಿಯಂತ್ರಕದಲ್ಲಿರುವ ಅಕ್ಷದ ಸೆಟಿಂಗ್ ಝೀರೋ ಸೆಟ್ ಮಾಡಲಾಗಿದೆ. ಆದರೆ ಬ್ಲಾಕ್
G91 G00 G45 X0 H31 ಇದನ್ನು ಈ ಮುಂದಿನಂತೆ ಓದಬಹುದು.
-100.0 + 0 = -100.00
ಪರಿಣಾಮವೆಂದು ಒಟ್ಟು ಚಟುವಟಿಕೆ -100 ಮಿ.ಮೀ. X ಅಕ್ಷದಲ್ಲಿ ಆಗಬಲ್ಲದು. ಒಂದು ವೇಳೆ X ನ ಮೌಲ್ಯ ಸೊನ್ನೆ ಇರದೇ ಇತರ ಮೌಲ್ಯವಿದ್ದಲ್ಲಿ...
ಉದಾಹರಣೆ, G91 G00 G45 X 10.0 H31 ಈ ಬ್ಲಾಕ್
-100 +10 = -90.00 ಎಂಬುದಾಗಿ ಓದಲಾಗುತ್ತದೆ.
ಈಗ ಮುಂದಿನ ಉದಾಹರಣೆಯನ್ನು ನೋಡಿರಿ.
G 91 G00 G45 X-10 H31
ಈ ಬ್ಲಾಕ್ ನಲ್ಲಿ ಚಟುವಟಿಕೆ +ve X ದಿಕ್ಕಿನಲ್ಲಿ ಇರಬಲ್ಲದು ಮತ್ತು ಫಲಿತಾಂಶವು X ಅಕ್ಷದಲ್ಲಿ ಓವರ್ ಟ್ರಾವಲ್ ಆಗಬಲ್ಲದು. ಅಂದರೆ X ನ ಮೌಲ್ಯ –ve ಇರುವುದರಿಂದ G45 ಕಮಾಂಡ್ ಬಳಸಲಾರೆವು. ಆದರೆ G46 ಕಮಾಂಡ್ ಬಳಸಬೇಕು.
G91 G00 G46 X-10 H31 ಇದನ್ನು ಓದುವುದು
-100.0 + (-10) = -100.00 + -10 = -110.00 ಎಂಬುದಾಗಿ ಮಾಡಲಾಗುತ್ತದೆ.
 
ಉದಾಹರಣೆ
ಝೀರೋ, +ve ಮತ್ತು –ve ಟಾರ್ಗೇಟ್ ಲೊಕೇಶನ್ ನಲ್ಲಿ ಪಡೆದಿರುವ ಪೊಜಿಶನ್ ಕಾಂಪೆನ್ಶೇಶನ್ ನ ಮೌಲ್ಯ
H 98 = -250.00
H99 = -150.00
 

asrdgfthygu_1   
 
ಪ್ರೊಗ್ರಾಮ್ : 02201 (G45 ಮತ್ತು G46 ಟೆಸ್ಟ್)
N1 G21 G17
N2 G92 X0 Y0 Z0
N3 G90 G00 G45 X 0 H98 (ಎಬ್ ಸಲ್ಯೂಟ್ X0 ಟಾರ್ಗೇಟ್)
N4 G46 Y0 H99 (ಎಬ್ ಸಲ್ಯೂಟ್ Y0 ಟಾರ್ಗೇಟ್)
N5 G28 X0 Y0. ರಿಟರ್ನ್ X0 Y0.
N6 G91 G00 G45 X0 H98 (ಇನ್ ಕ್ರಿಮೆಂಟಲ್ X0 ಟಾರ್ಗೇಟ್)
N7 G46 Y0 H99 (ಇನ್ ಕ್ರಿಮೆಂಟಲ್ Y0 ಟಾರ್ಗೇಟ್)
N8 G28 X0 Y0
N9 G90 G00 G45 X9.0 H98 (ಅಬ್ ಸಲ್ಯೂಟ್ X +ve ಟಾರ್ಗೇಟ್)
N10 G46 Y17.0 H99 (ಎಬ್ ಸಲ್ಯೂಟ್ Y +ve ಟಾರ್ಗೇಟ್)
N11 G28 X0 Y0
N12 G91 G00 G45 X9.0 H98
(ಇನ್ ಕ್ರಿಮೆಂಟಲ್ X +ve ಟಾರ್ಗೇಟ್)
N13 G46 Y17.0 H99 (ಇನ್ ಕ್ರಿಮೆಂಟಲ್ Y +ve ಟಾರ್ಗೇಟ್)
N14 G28 X0 Y0
N15 G90 G00 G45 X-15.0 H98
(ಎಬ್ ಸಲ್ಯೂಟ್ X -ve ಟಾರ್ಗೇಟ್)
N16 G46 Y-13.0 H99 (ಎಬ್ ಸಲ್ಯೂಟ್ Y -ve ಟಾರ್ಗೇಟ್)
N17 G28 X0 Y0
N18 G91 G00 G45 X-15.0 H98
 

sadfvghj_1  H x 
 
(ಇನ್ ಕ್ರಿಮೆಂಟಲ್ X -ve ಟಾರ್ಗೇಟ್)
N19 G46 Y-13.0 H99 (ಇನ್ ಕ್ರಿಮೆಂಟಲ್ Y -ve ಟಾರ್ಗೇಟ್)
N20 G28 X0 Y0
N21 M30
%
ನಿಯಂತ್ರಕವು ಯಾವ ರೀತಿಯಲ್ಲಿ ಮೇಲಿನ ಪ್ರೊಗ್ರಾಮ್ ಕಾರ್ಯಗತಗೊಳಿಸುತ್ತದೆ, ಎಂಬುದನ್ನು ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿದೆ.
G45 ಮತ್ತು G46 ಈ ಕಮಾಂಡ್ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುತ್ತವೆ. G45 ಸಿಂಗಲ್ ಇನ್ ಕ್ರೀಸ್ ಮತ್ತು G46 ಸಿಂಗಲ್ ಡಿಕ್ರೀಸ್.
G47 ಡಬಲ್ ಇನ್ ಕ್ರೀಸ್ ಮತ್ತು G48 ಡಬಲ್ ಡಿಕ್ರೀಸ್ ಇವುಗಳನ್ನು ಬಳಸಲಾಗುವುದಿಲ್ಲ. ಬಿಡಿಬಿಡಿಯಾಗಿರುವ ಕಟರ್ ತ್ರಿಜ್ಯ ಆಫ್ ಸೆಟ್ ಇರುವ ಜಾಗದಲ್ಲಿ ಹಲವಾರು ಸಮಯದಲ್ಲಿ ಯಾವಾಗಲಾದರೂ ಇದನ್ನು ಬಳಸಲಾಗುತ್ತಿತ್ತು. ಇದರಿಂದಾಗಿ ಈ ಕುರಿತು ಹೆಚ್ಚು ಬರೆದಿಲ್ಲ.
 
 
 
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
8625975219
@@AUTHORINFO_V1@@