ಲಾಭಕಾರಿ ಉತ್ಪಾದನೆಗೆ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್

@@NEWS_SUBHEADLINE_BLOCK@@

Lohkarya - Udyam Prakashan    09-Jun-2021   
Total Views |

ಯಂತ್ರಣೆಯ ಪ್ರಕ್ರಿಯೆ
ಲಾಭಕಾರಿ ಉತ್ಪಾದನೆಗೆ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್
ಯಾವ ಕೈಗಾರಿಕೋದ್ಯಮಗಳಲ್ಲಿ ಚಿಕ್ಕ ಯಂತ್ರಭಾಗಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಮತ್ತು ನಿರಂತರವಾದ ನಿಖರತೆಯಿಂದ ಉತ್ಪಾದನೆಯನ್ನು ಮಾಡುವುದನ್ನು ಅಪೇಕ್ಷಿಸಲಾಗಿದೆಯೋ, ಅಂತಹ ಪರಿಸ್ಥಿತಿಯಲ್ಲಿ ಮಾನವನ ನಿಪುಣತೆಯಲ್ಲಿ ಅವಲಂಬಿಸಿ ಇರುವುದು ಮತ್ತು ಮಾನವ ಹಸ್ತಕ್ಷೇಪವು ಕನಿಷ್ಠ ಪ್ರಮಾಣದಲ್ಲಿ ಇರುವುದನ್ನು ಅಪೇಕ್ಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಉಪಯುಕ್ತವಾಗಬಲ್ಲ ಸ್ಲೈಡಿಂಗ್ ಹೆಡ್ ಮಶಿನ್ ಕುರಿತು ಉದಾಹರಣೆಗಳೊಂದಿಗೆ ಈ ಲೇಖನದಲ್ಲಿ ವಿಸ್ತಾರವಾದ ಮಾಹಿತಿಯನ್ನು ನೀಡಲಾಗಿದೆ.
ಯಂತ್ರಣೆಯ ಕ್ಷೇತ್ರದಲ್ಲಿ ಪ್ರಮುಖವಾಗಿ ವಾಹನೋದ್ಯೋಗಕ್ಕೆ ಬೇಕಾಗುವ ಯಂತ್ರಭಾಗಗಳ ನಿರ್ಮಿತಿಯು ಬೃಹತ್ ಪ್ರಮಾಣದಲ್ಲಿ ಆಗುತ್ತಿದೆ. ಸಿ.ಎನ್.ಸಿ. ಲೇಥ್, ವಿ.ಎಮ್.ಸಿ., ಎಚ್.ಎಮ್.ಸಿ. ಇಂತಹ ಅನೇಕ ಮಶಿನ್ ಟೂಲ್, ಅದರಲ್ಲಿಯೂ ಹೊಸಹೊಸ ವೈಶಿಷ್ಟ್ಯಗಳಿಂದ ಕೂಡಿರುವ ಟೂಲ್ ಗಳನ್ನು ಅಭಿವೃದ್ಧಿ ಪಡಿಸಿ ಯಂತ್ರಭಾಗಗಳ ನಿರ್ಮಿತಿಯನ್ನು ಬೃಹತ್ ಪ್ರಮಾಣದಲ್ಲಿ ಮಾಡಲು ಇಂತಹ ಅನೇಕ ರೀತಿಯ ಟೂಲ್ ಗಳನ್ನು ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
 
 
ಯಂತ್ರಭಾಗಗಳ ಉತ್ಪಾದನೆಯ ಸಂಖ್ಯೆಯು ನಿರಂತರವಾಗಿ ವೃದ್ಧಿಸುತ್ತಿದೆ. ಅಲ್ಲದೇ ಇದರಲ್ಲಿ ಮಾನವನ ಹಸ್ತಕ್ಷೇಪವು ಕಡಿಮೆ ಇರುವುದನ್ನು ಅಪೇಕ್ಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಸ್ಲೈಡಿಂಗ್ ಹೆಡ್ ಕುರಿತು ವಿಚಾರ ಮಾಡಲಾಗುತ್ತದೆ. ಆಟೊಮೋಟಿವ್ ಕ್ಷೇತ್ರದೊಂದಿಗೆ ಇಲೆಕ್ಟ್ರಿಕಲ್ ಇಂಡಸ್ಟ್ರಿ, ಲಗೇಜ್ ಇಂಡಸ್ಟ್ರಿ (ಬ್ಯಾಗ್ ಗಳಲ್ಲಿರುವ ಬೀಗಗಳಿಗಿರುವ ಪಿನ್), ಮೆಡಿಕಲ್ ಕ್ಷೇತ್ರ, ಪ್ರೊಸೆಸ್ ಇಂಡಸ್ಟ್ರಿ ಇಂತಹ ಅನೇಕ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ಲೈಡಿಂಗ್ ಹೆಡ್ ಇದು ಅತ್ಯುಪಯುಕ್ತವಾಗಿದೆ. ನಿಪುಣ ಮಾನವ ಸಂಪನ್ಮೂಲಗಳ ಲಭ್ಯತೆಯು ಕಡಿಮೆ ಇರುವಲ್ಲಿ (ವಿಶೇಷವಾಗಿ ಕೋವಿಡ್ ನ ಪರಿಸ್ಥಿತಿಯಲ್ಲಿ ನಾವು ಇದನ್ನು ಅನುಭವಿಸಿದ್ದೇವೆ.) ಈ ಮಶಿನ್ ಹೆಚ್ಚು ಉಪಯುಕ್ತವಾಗಿದೆ.
 

fghjfds_1  H x  
 
20-22 ವರ್ಷಗಳ ಹಿಂದೆ ಸಿ.ಎನ್.ಸಿ. ಲೇಥ್ ಕೂಡಾ ಹೆಚ್ಚು ಬಳಸಲಾಗುತ್ತಿರಲಿಲ್ಲ. ಅದೊಂದು ಬೇರೆಯೇ ರೀತಿಯ ತಾಂತ್ರಿಕ ವಿಷಯವೆಂದು ಭಾವಿಸುವ ಒಂದು ಗುಂಪು ಆ ಕಾಲದಲ್ಲಿತ್ತು. ಆದರೆ ಮಶಿನ್ ನ ಬೆಲೆಯನ್ನು ಕಡಿಮೆ ಮಾಡಿ ‘ಏಸ್’ ಸಮೂಹವು ಸಿ.ಎನ್.ಸಿ. ಮಶಿನ್ ಗಳನ್ನು ಪ್ರಚಲಿತಗೊಳಿಸಿತು. ಸಿ.ಎನ್.ಸಿ. ಮಶಿನ್ ಗಳ ಕುರಿತಾಗಿದ್ದು ಪರಿಸ್ಥಿತಿಯಂತೆಯೇ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನ ಪರಿಸ್ಥಿತಿಯು 4-5 ವರ್ಷಗಳ ಮುಂಚೆಯೂ ಇತ್ತು. ಬೆಲೆ ಜಾಸ್ತಿ ಮತ್ತು ತಮಗೆ ಬಳಸುವಲ್ಲಿ ಯಾವ ಅಡಚಣೆಗಳು ಉದ್ಭವಿಸುತ್ತವೆಯೋ ಎಂಬ ಎರಡು ರೀತಿಯ ಮುಜುಗರವು ಲಘು ಮಧ್ಯಮ ಉದ್ಯಮಿಗಳಲ್ಲಿ ಇತ್ತು. ಆದರೆ ಈಗ ನಿಧಾನವಾಗಿ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಎಂಬ ಕಲ್ಪನೆಯು ಲಘು ಮಧ್ಯಮ ಉದ್ಯಮಗಳಲ್ಲಿ ತಳವೂರುತ್ತಿದೆ. ಉದ್ಯಮಿಗಳು ಈ ಮಶಿನ್ ಖರೀದಿಸಲು ಪ್ರಾರಂಭಿಸಿದ್ದಾರೆ.
ಸ್ಲೈಡಿಂಗ್ ಹೆಡ್ ನ ಮೂಲಭೂತ ಸಿದ್ಧಾಂತ
ಮಶಿನ್ ನಲ್ಲಿ ಕಾಲೇಟ್ ಮತ್ತು ಗೈಡ್ ಬುಶ್ ಇರುತ್ತದೆ. ಗೈಡ್ ಬುಶ್ ನ ಉಪಯುಕ್ತತೆಯು ಯಾವಾಗಲೂ ಇರುತ್ತದೆ, ಎಂಬುದಾಗಿ ಹೇಳಲಾಗುವುದಿಲ್ಲ. ಕಾಲೇಟ್ ಅಥವಾ ಬುಶ್ ನ ತುಂಬಾ ಸಮೀಪಕ್ಕೆ ಬಂದು ಟೂಲ್ ಕೆಲಸ ನಿರ್ವಹಿಸುತ್ತದೆ. ಸ್ಲೈಡಿಂಗ್ ಹೆಡ್ ನಲ್ಲಿ ಟೂಲ್ ಸ್ಥಿರವಾಗಿಯೇ ನಿಲ್ಲುತ್ತದೆ ಮತ್ತು ಬಾರ್ ಹೊರಗೆ ಸರಿಯುತ್ತದೆ ಅಥವಾ ಗೈಡ್ ಬುಶ್ ಇಲ್ಲದಿದ್ದಲ್ಲಿ ಬಾರ್ Z ಅಕ್ಷದ ಹೊರಗೆ ಬರುತ್ತಿರುತ್ತದೆ. ಯಂತ್ರಣೆಯನ್ನು ಮಾಡುತ್ತಿರುವಾಗ ಕಾರ್ಯವಸ್ತುವಿನ ಕೆಂಟಿಲಿವರ್ ಸ್ಥಿತಿಯು ಈ ಮಶಿನ್ ನಲ್ಲಿ ಕನಿಷ್ಠ ಪ್ರಮಾಣದಲ್ಲಿರುತ್ತದೆ.
 
 
ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಅಂದರೆ ಯಂತ್ರಣೆಯಲ್ಲಿ ಹೆಡ್ ಸ್ಟಾಕ್ Z ಅಕ್ಷದಲ್ಲಿ, ಹಾಗೆಯೇ ಟೂಲ್ X ಮತ್ತು Y ದಿಕ್ಕಿನಲ್ಲಿ ಅಲುಗಾಡುತ್ತದೆ. ಇದರಿಂದಾಗಿ ಅದನ್ನು ಸ್ಲೈಡಿಂಗ್ ಹೆಡ್ ಸ್ಟಾಕ್ ಮಶಿನ್ ಎಂಬುದಾಗಿ ಕರೆಯಲಾಗುತ್ತದೆ. ಸಿ.ಎನ್.ಸಿ. ಲೇಥ್ ನಲ್ಲಿ X ಮತ್ತು Y ಎಂಬ ಎರಡು ಅಕ್ಷಗಳಿರುತ್ತವೆ, ಆದರೆ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನಲ್ಲಿ ಒಂದು ಸ್ಪಿಂಡಲ್ ಇದ್ದರೂ ಕೂಡಾ ಅಕ್ಷಗಳು ಮಾತ್ರ ಹೆಚ್ಚು ಇರುತ್ತವೆ. ಬಾರ್ ನಿಂದ ಯಂತ್ರಭಾಗಗಳ ನಿರ್ಮಿತಿಯನ್ನು ಮಾಡುವುದಾದಲ್ಲಿ (ಮ್ಯಾನ್ಯುವಲ್ ಲೋಡಿಂಗ್ ಮಾಡದೇ) ಈ ಮಶಿನ್ ಪ್ರಮುಖವಾಗಿ ಬಳಸಲಾಗುತ್ತದೆ. ಕನಿಷ್ಠ ಒಂದು ಮಿ.ಮೀ. ನಿಂದ 38 ಮಿ.ಮೀ. ವ್ಯಾಸದ ತನಕದ ಯಂತ್ರಭಾಗಗಳನ್ನು ಈ ಮಶಿನ್ ನಲ್ಲಿಯೇ ತಯಾರಿಸಲಾಗುತ್ತದೆ. ವಿವಿಧ ವ್ಯಾಸಗಳಿರುವ ಯಂತ್ರಣೆಯನ್ನು ಮಾಡುವಲ್ಲಿ ಅದರ ಕ್ಷಮತೆಗೆ ಅನುಸಾರವಾಗಿ ಮಶಿನ್ ಲಭ್ಯವಿದೆ.
 
 
20 ಮಿ.ಮೀ. ವ್ಯಾಸದ ಕ್ಷಮತೆಯುಳ್ಳ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಇದು ತುಂಬಾ ಜನಪ್ರಿಯವಾಗಿದೆ. ಕಾರಣ ಹೆಚ್ಚಾಗಿ ಯಂತ್ರಭಾಗಗಳ ಯಂತ್ರಣೆಯನ್ನು ಇದೇ ಮಿತಿಯಲ್ಲಿ ಮಾಡಲಾಗುತ್ತದೆ. 20 ಮಿ.ಮೀ. ವ್ಯಾಸ ಕ್ಷಮತೆಯುಳ್ಳ ಮಶಿನ್ ನಲ್ಲಿ ಗರಿಷ್ಠ ವ್ಯಾಸ 20 ಮಿ.ಮೀ.ನಷ್ಟು (ಕನಿಷ್ಠ 3 ಮಿ.ಮೀ.) ಇರುತ್ತದೆ, ಆದರೆ ಬಾರ್ ಫೀಡರ್ 3 ಮಿ.ಮೀ.ನಷ್ಟು ಬೇಕಾಗುತ್ತದೆ. ಈ ಮಶಿನ್ ನಲ್ಲಿ 0.1 ಮಿ.ಮೀ.ನಷ್ಟು ಯಂತ್ರಣೆಯನ್ನು ಮಾಡಬಹುದಾಗಿದೆ. ಈ ಮಶಿನ್ ನ ಅನೇಕ ಪರ್ಯಾಯಗಳು ಲಭ್ಯವಿವೆ. ಉದಾಹರಣೆ, ಲೈವ್ ಟೂಲ್ ನೊಂದಿಗೆ, ಲೈವ್ ಟೂಲ್ ಹೊರತಾಗಿ, ಫೇಸ್ ಲೈವ್ ನೊಂದಿಗೆ ಆಪರೇಶನ್, ಎಂಗಲ್ ಮಶಿನಿಂಗ್ ನೊಂದಿಗೆ ಮುಂತಾದವುಗಳು. ಯಂತ್ರಭಾಗಗಳ ವಿಧಗಳು, ಅದರ ಆಕಾರ, ಯಂತ್ರಭಾಗಗಳ ಸಂಖ್ಯೆ ಈ ಕುರಿತು ಗ್ರಾಹಕರೊಂದಿಗೆ ಚರ್ಚಿಸುವಾಗ ಫ್ಲೆಕ್ಸಿಬಿಲಿಟಿಯನ್ನು ಗಮನಿಸಿ ಯಂತ್ರಭಾಗಗಳಿಗೆ ಮೀಸಲಾಗಿರುವ ಯಂತ್ರಣೆಯನ್ನು (ಡೆಡಿಕೇಟೆಡ್ ಟು ಕಂಪೋನಂಟ್) ಮಾಡುವುದನ್ನು ನಿರ್ಧರಿಸಲಾಗುತ್ತದೆ ಮತ್ತು ಅದಕ್ಕೆ ಅನುಸಾರವಾಗಿ ಯಾವ ಮಶಿನ್ ಆಯ್ಕೆ ಮಾಡುವುದು ಎಂಬುದರ ಕುರಿತು ನಾವು ಗ್ರಾಹಕರಿಗೆ ಸಲಹೆಯನ್ನು ನೀಡುತ್ತೇವೆ.
 
 
ನಾವು ಈ ಮಶಿನ್ ನಲ್ಲಿ ಸುಮಾರು 8 ಸಾವಿರದಿಂದ 10 ಸಾವಿರ ಕಾರ್ಯವಸ್ತುಗಳ ಬ್ಯಾಚ್ ಇರಬೇಕು ಎಂಬುದಾಗಿ ಗ್ರಾಹಕರಿಗೆ ಸೂಚಿಸುತ್ತೇವೆ. ಇದಕ್ಕಿಂತ ಕಡಿಮೆ ಸಂಖ್ಯೆಯ ಬ್ಯಾಚ್ ಈ ಮಶಿನ್ ನಲ್ಲಿ ಲಾಭಕಾರಿಯಾಗುವುದಿಲ್ಲ. ನಿಜವಾಗಿ ನೋಡಿದಲ್ಲಿ ಸೈಕಲ್ ಟೈಮ್ ನಲ್ಲಿಯೂ ಇವೆಲ್ಲವೂ ಅವಲಂಬಿಸಿರುತ್ತದೆ. ಆದರೆ ಕನಿಷ್ಠ ಸೆಟಪ್ ಅಳವಡಿಸುವುದು, ಈ ಮಶಿನ್ ನ ಒಳ್ಳೆಯ ಅಂಶವಾಗಿದೆ. 5S ಕಲ್ಪನೆಯನ್ನು ಬಳಸಿದಲ್ಲಿ ಸೆಟಪ್ ಬದಲಾಯಿಸಲು 3 ಗಂಟೆಗಳ ಕಾಲಾವಧಿಯು ಸಾಕಾಗುತ್ತದೆ. ಆದರೆ ಇದಕ್ಕೋಸ್ಕರ ಯೋಜನೆಯನ್ನು ಮಾಡುವುದು ಅತ್ಯಾವಶ್ಯಕವಾಗಿದೆ. ಹಾಗೆಯೇ ಒಂದು ಸಲ ಒಂದು ಬ್ಯಾಚ್ ನ ಯಂತ್ರಣೆಯನ್ನು ಮಾಡಲು ಪ್ರಾರಂಭಿಸಿದ ನಂತರ ಆಪರೇಟರ್ ಗೆ ಅದಲ್ಲಿ ತುಂಬಾ ಕಡಿಮೆ ಕೆಲಸಗಳು (ಬಾರ್ ಲೋಡಿಂಗ್, ಟೂಲ್ ನ ಬಳಕೆಯಲ್ಲಿ ಗಮನ ಹರಿಸುವುದು, ಮಾದರಿ ಭಾಗಗಳನ್ನು ಪರಿಶೀಲಿಸುವುದು) ಇರುವುದರಿಂದ ಆಪರೇಟರ್ 3-4 ಮಶಿನ್ ಗಳಲ್ಲಿ ಕೆಲಸವನ್ನು ನಿರ್ವಹಿಸಬಲ್ಲನು.
 
 

tyujikyftdrewq_1 &nb 
 
ಪಾರಂಪಾರಿಕ ರೀತಿಯಲ್ಲದೇ ಸ್ಲೈಡಿಂಗ್ ಹೆಡ್ ಸ್ಟಾಕ್ ಲೇಥ್ ಪದ್ಧತಿಯನ್ನು ಬಳಸಿ ಲಭಿಸುವ ಲಾಭಗಳನ್ನು ಕೋಷ್ಟಕ ಕ್ರ. 1 ನೀಡಲಾಗಿದೆ. ವಾಹನೋದ್ಯೋಗವು ಇದನ್ನು ಗುರುತಿಸಿ ಮತ್ತು ಆ ಕ್ಷೇತ್ರದಲ್ಲಿ ಅನೇಕ ಉದ್ಯಮಿಗಳು ಈ ಮಶಿನ್ ಕಡೆಗೆ ಬರುತ್ತಿದ್ದಾರೆ.
ಮಶಿನ್ ನ ಪ್ರಮುಖ ವೈಶಿಷ್ಟ್ಯಗಳು
1. ಮುಂಭಾಗದಲ್ಲಿರುವ ಸ್ಪಿಂಡಲ್ ಮತ್ತು ಹಿಂಭಾಗದಲ್ಲಿರುವ ಸ್ಪಿಂಡಲ್ ಗೋಸ್ಕರ ಸ್ವತಂತ್ರವಾದ ಟೂಲ್.
2. ಆವರ್ತನೆಯ ಸಮಯವನ್ನು ಕಡಿಮೆ ಮಾಡಲು ಪ್ರಮುಖ ಸ್ಪಿಂಡಲ್ ಮತ್ತು ಸಬ್ ಸ್ಪಿಂಡಲ್ ಇವೆರಡರಲ್ಲಿಯೂ ಒಂದೇ ಸಮಯದಲ್ಲಿ ಕೆಲಸವನ್ನು ನಿರ್ವಹಿಸುವುದು ಸಾಧ್ಯ.
 

ergtyhgrfe_1  H 
 
3. ಸಿ.ಎನ್.ಸಿ. ಲೇಥ್ ಮತ್ತು ಮಿಲ್ಲಿಂಗ್ ನ ಎಲ್ಲ ಕೆಲಸಗಳನ್ನು ಈ ಮಶಿನ್ ನಲ್ಲಿಯೇ ಮಾಡುವುದು ಸಾಧ್ಯ.
4. W.I.P. ಇಳಿತ.
5. ಎರಡು ವಿಧದ ಗೈಡ್ ಗಳಿರುತ್ತವೆ. ಒಂದು ಬುಶ್ ನೊಂದಿಗೆ ಮತ್ತು ಇನ್ನೊಂದು ಬುಶ್ ರಹಿತವಾಗಿ. ಯಾವ ವಿಧದ ಬುಶ್ ಬಳಸುವುದು ಇದು ಮಾತ್ರ ಯಂತ್ರಭಾಗಗಳ ರಚನೆಯಲ್ಲಿ ಅವಲಂಬಿಸಿರುತ್ತದೆ. ಯಂತ್ರಭಾಗಗಳ L/D ರೇಶಿಯೋ ಹೆಚ್ಚು ಇರುತ್ತದೆ. ಇಂತಹ ಯಂತ್ರಭಾಗಗಳಲ್ಲಿ ಉಚ್ಚಮಟ್ಟದ ನಿಖರತೆಯನ್ನು ಪಡೆಯುವಲ್ಲಿ ಗೈಡ್ ಬುಶ್ ನ ಆವಶ್ಯಕತೆ ಇರುತ್ತದೆ. L/D ರೆಶಿಯೋ ಕಡಿಮೆ ಇರುವ ಯಂತ್ರಭಾಗಗಳಿಗೆ ಯಂತ್ರಣೆಯನ್ನು ಮಾಡುವಾಗ ಗೈಡ್ ಬುಶ್ ಬಳಸದಿದ್ದರೂ ನಡೆಯುತ್ತದೆ.
6. ಫೇಸ್ ಮಿಲ್ಲಿಂಗ್ ಮಾಡುವಾಗ ಮಾಡ್ಯುಲರ್ ನೊಂದಿಗೆ ರೋಟರಿ ಟೂಲ್ ಅಂದರೆ ಡಬಲ್ ಫೇಸ್ ಸ್ಪಿಂಡಲ್ ನ ರಚನೆ. ಸಬ್ ಸ್ಪಿಂಡಲ್ ಅಥವಾ ಬ್ಯಾಕ್ ಸ್ಪಿಂಡಲ್ ನ ಲೈವ್ ಟೂಲ್ ಮತ್ತು ಅದರ ಮೊಡ್ಯುಲರ್ ಟೂಲಿಂಗ್ ನೀಡುವುದು ಸಾಧ್ಯವಿದೆ.
 

rgthyujkisa_1   
 
7. ಚಿಪ್ ಕನ್ವೆಯರ್, ಮಿಸ್ಟ್ ಕಲೆಕ್ಟರ್ ನ ಸೌಲಭ್ಯ.
8. ಯಂತ್ರಭಾಗಗಳಿಗೆ ರಿಯರ್ ಡಿಸ್ಚಾರ್ಜ್ ಯುನಿಟ್.
9. ಕಚ್ಚಾ ವಸ್ತುಗಳು ಅಂದರೆ ಬಾರ್ ಮಶಿನ್ ಗೆ ಪೂರೈಸಲಾಗುತ್ತದೆ ಮತ್ತು ಫಿನಿಶ್ ಆಗಿರುವ ಯಂತ್ರಭಾಗಗಳು ಮಶಿನ್ ನ ಹೊರಗೆ ಬರುತ್ತವೆ.
10. ಮಶಿನ್ ನ ಡಿಸೈನ್ ಮತ್ತು ಮಶಿನ್ ನ ಬೆಲೆ ಈ ಎರಡರ ನಿಟ್ಟಿನಲ್ಲಿ ನಾವು ಮಶಿನ್ ನ ಆಪ್ಟಿಮೈಜೆಶನ್ ಮಾಡಿದೆವು. ಅದರ ಪ್ರಮುಖ ಕಾರಣವೆಂದರೆ ಭಾರತದಲ್ಲಿ ನಮ್ಮ ಕಾರ್ಖಾನೆಯು ಮುಂಚಿನಿಂದಲೂ ಕಾರ್ಯಗತವಾಗಿದ್ದರಿಂದ ಬೆಲೆಯ ಲಾಭವನ್ನು ನಾವು ಸ್ಪಲ್ಪ ಪ್ರಮಾಣದಲ್ಲಿ ಗ್ರಾಹಕರಿಗೆ ನೀಡಬಲ್ಲೆವು.
11. ಈ ಹಿಂದೆ ಕೈಗೆಟಕದೇ ಇರುವ ಸ್ಲೈಡಿಂಗ್ ಹೆಡ್ ಮಶಿನ್ ಈಗ ಸಾಮಾನ್ಯ ಗ್ರಾಹಕರಿಗೂ ಕೈಗೆಟುವ ಬೆಲೆಯಲ್ಲಿ ಲಭ್ಯವಾಗಿದೆ.
12. ಈ ಮಶಿನ್ ನಲ್ಲಿ ಮಾನವನ ನಿಪುಣತನದ ಭಾಗವನ್ನು ನಾವು ಕಡಿಮೆ ಮಾಡಿದ್ದೇವೆ. ಸ್ಪೈಡಿಂಗ್ ಹೆಡ್ ಹೇಗೆ ಬಳಸಬೇಕು, ಅದಕ್ಕೋಸ್ಕರ ಬೇಕಾಗುವ ಎಲ್ಲ ರೀತಿಯ ತರಬೇತಿಯನ್ನು ನಾವು ಗ್ರಾಹಕರಿಗೆ ನೀಡುತ್ತೇವೆ. ಇದರಿಂದಾಗಿ ಗ್ರಾಹಕರಿಗೆ ಒಂದು ಅದು ಹೊಸದಾದ ತಂತ್ರಜ್ಞಾನವಾದರೂ ಕೂಡಾ ಅವರಿಗೆ ಅದನ್ನು ಬಳಸುವುದು ಸುಲಭವಾಗುತ್ತದೆ.
ಮಶಿನ್ ನ ಲಾಭಗಳು
1. ಆಪರೇಟರ್ ನ ಸಂಖ್ಯೆಯು ಕಡಿಮೆಯಾಗುತ್ತದೆ.
2. ಕನಿಷ್ಠ ಸೈಕಲ್ ಟೈಮ್
3. ಸ್ಥಳದಲ್ಲಿ ಉಳಿತಾಯ.
4. ವಿದ್ಯುತ್ತಿನ ಬಳಕೆಯು ಕಡಿಮೆಯಾಗುತ್ತದೆ.
5. ಗುಣಮಟ್ಟವು ವೃದ್ಧಿಸುತ್ತದೆ.
6. ಲೇಥ್ ಮಶಿನ್ ಗಿಂತ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನಲ್ಲಿ ಟೂಲ್ ನ ಬಾಳಿಕೆ ಹೆಚ್ಚಾಗುತ್ತದೆ.
ಉದಾಹರಣೆ
ವಿಭಾ ಏಜನ್ಸಿ ಇವರು ನಮ್ಮ ಗ್ರಾಹಕರು. ಈ ಕಂಪನಿಯು ವಾಹನಗಳು, ಸಂರಕ್ಷಣಾ ಕ್ಷೇತ್ರದಲ್ಲಿ ವಿವಿಧ ರೀತಿಯ ಯಂತ್ರಭಾಗಗಳನ್ನು ಟ್ರಾಬ್ ಮತ್ತು ಸಿ.ಎನ್.ಸಿ.ಯಲ್ಲಿ ತಯಾರಿಸುತ್ತಿದ್ದರು. ಅವರಿಗೆ ಈ ಯಂತ್ರಭಾಗಗಳ ನಿರ್ಮಿತಿಯನ್ನು ಮಾಡುವಾಗ ಕನಿಷ್ಠ ಪ್ರಮಾಣದಲ್ಲಿ ಮಾನವ ಸಂಪನ್ಮೂಲವನ್ನು ಬಳಸಬೇಕಾಗಿತ್ತು. ಇದರಲ್ಲಿ ಅನೇಕ ಕಾರಣಗಳಿದ್ದವು. ಇದರಲ್ಲಿ ಅಡಗಿರುವ ಪ್ರಮುಖ ಕಾರಣವೆಂದರೆ ಉತ್ಪಾದನೆಯ ಖರ್ಚನ್ನು ಕಡಿಮೆ ಮಾಡುವುದು, ಸಮಯವನ್ನೂ ಕಡಿತಗೊಳಿಸುವುದು ಮತ್ತು ನಿಖರತೆಯನ್ನು ಅಪೇಕ್ಷಿಸುವ ಪ್ರಮಾಣದಲ್ಲಾದ ಹೆಚ್ಚಳ. ವಿಭಾ ಏಜನ್ಸಿಯ ಗಾಂಧೀ ಇವರೊಂದಿಗೆ ಈ ಕುರಿತು ವಿಚಾರ ವಿಮರ್ಷೆಯನ್ನು ಮಾಡಲಾಯಿತು. ಆಗ ಅವರಿಗೆ ನಾವು ಸ್ಲೈಡಿಂಗ್ ಹೆಡ್ ನ ಪರ್ಯಾಯವನ್ನು ಸೂಚಿಸಿದೆವು. ಅದು ಅವರಿಗೆ ಮನವರಿಕೆಯಾಗಿದ್ದರಿಂದ ಕಳೆದ ವರ್ಷ ಅವರು 7 ಮಶಿನ್ ಗಳನ್ನು ಖರೀದಿಸಿದರು.
 

aefrgthyjuki_1   
 
ಟ್ರಾಬ್, ಸಿ.ಎನ್.ಸಿ.ಯಿಂದ ಸ್ಲೈಡಿಂಗ್ ಹೆಡ್ ತನಕ ಬರುವ ಪ್ರವಾಸದ ಕುರಿತು ಅವರು ನಮ್ಮೊಂದಿಗೆ ಚರ್ಚೆಯನ್ನು ಮಾಡಿದರು. ಆಗ ಟ್ರಾಬ್ ಇದು ಸಿ.ಎನ್.ಸಿ.ಯನ್ನು ಹೋಲಿಸಿದಾಗ ಸ್ಲೈಡಿಂಗ್ ಹೆಡ್ ಮಶಿನ್ ಅವರಿಗೆ ಲಾಭಕಾರಿಯಾಗಿದೆ ಎಂಬುದಾಗಿ ಮನದಟ್ಟಾಯಿತು. ಇದರಿಂದಾಗಿ ಯಂತ್ರಭಾಗಗಳ ಗುಣಮಟ್ಟದೊಂದಿಗೆ ಇನ್ಸರ್ಟ್ ನ ಬಾಳಿಕೆಯಲ್ಲಿಯೂ ಹೆಚ್ಚಳವಾಗಿರುವುದನ್ನು ವಿಶೇಷವಾಗಿ ನಮೂದಿಸಿದರು. ಈ ಮಶಿನ್ ನ ಕುರಿತಾದ ಲೆಕ್ಕಾಚಾರವನ್ನು ಅವರು ನಮ್ಮ ಮುಂದೆ ಮಂಡಿಸಿದರು. ಅವರು ಹೇಳಿದರು, “ಈ ಮಶಿನ್ ಖರೀದಿಸುವಾಗ ಲಘು, ಮಧ್ಯಮ ಉದ್ಯಮಿಗಳ ಮನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅನುಮಾನವಿರುತ್ತದೆ. ಇಷ್ಟು ದುಬಾರಿಯಾದ ಮಶಿನ್ ಖರೀದಿಸಬೇಕೇ, ಬೇಡವೇ? ಕಾರಣ ಸಿ.ಎನ್.ಸಿ. ಮಶಿನ್ ನ ಹೋಲಿಕೆಯಲ್ಲಿ ಈ ಮಶಿನ್ ಗೆ ಪ್ರಾರಂಭದ ಬಂಡವಾಳದ ಹೂಡಿಕೆಯು ಹೆಚ್ಚಾಗಿದೆ. 20 ವರ್ಷಗಳ ಹಿಂದೆ ಸಿ.ಎನ್.ಸಿ. ಮಶಿನ್ ಇದು ಕೇವಲ ದೊಡ್ಡ ಕಂಪನಿಗಳ ಸ್ವಾಮ್ಯತ್ವದ್ದಾಗಿದೆ, ಎಂಬ ಪರಿಸ್ಥಿತಿಯು ಕಂಡುಬರುತ್ತಿತ್ತು. ಆದರೆ ಇಂದು ಸುಮಾರು ಎಲ್ಲ ಲಘು ಮಧ್ಯಮ ಉದ್ಯಮಿಗಳು ಸಿ.ಎನ್.ಸಿ. ಮಶಿನ್ ಗಳನ್ನು ಬಳಸುತ್ತಿರುವುದು ಕಂಡುಬರುತ್ತಿದೆ. ಕಾಲಕ್ಕೆ ತಕ್ಕಂತೆ ಮತ್ತು ಮಾರುಕಟ್ಟೆಯಲ್ಲಿರುವ ಬೇಡಿಕೆಗೆ ಅನುಸಾರವಾಗಿ ಇದರಲ್ಲಿ ಬದಲಾವಣೆಗಳಾಗಿವೆ. ಮಾರುಕಟ್ಟೆಯಲ್ಲಿ ಕಾಲೂರಿ ನಿಲ್ಲುವುದಾದಲ್ಲಿ ಹೊಸ ತಂತ್ರಜ್ಞಾನದಂತೆ ನಾವು ತಮ್ಮನ್ನು ಅಪಡೇಟ್ ಇಡುವುದು ಅತ್ಯಾವಶ್ಯಕವಾಗಿದೆ. ಇದರಿಂದಾಗಿ ಮುಂಬರುವ ಹಲವಾರು ವರ್ಷಗಳ ಕಾಲಾವಧಿಯಲ್ಲಿ ದೊಡ್ಡ ಕಂಪನಿಗಳೊಂದಿಗೆ ಲಘು ಮಧ್ಯಮ ಉದ್ಯಮಿಗಳಲ್ಲಿ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಕಾಣಸಿಗಬಲ್ಲದು.”
 
 
ವಿಭಾ ಏಜನ್ಸಿಯಲ್ಲಿ 7 ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಗಳಿವೆ. ಇದನ್ನು ಕೇವಲ ಮೂರು ಆಪರೇಟರ್ ನಡೆಸುತ್ತಾರೆ. ಇದರ ಕುರಿತಾದ ಲೆಕ್ಕಾಚಾರವನ್ನು ಅವರು ನಮಗೆ ಈ ಮುಂದಿನಂತೆ ವಿವರಿಸಿದರು, “ನಮ್ಮಲ್ಲಿರುವ 2 ಟ್ರಾಬ್ ಮತ್ತು 2 ಸಿ.ಎನ್.ಸಿ. (ಒಬ್ಬ ವ್ಯಕ್ತಿ ಪ್ರತಿ ಮಶಿನ್) ಮಶಿನ್ ನಡೆಸಲು 4 ವ್ಯಕ್ತಿಗಳ ಆವಶ್ಯಕತೆ ಇರುತ್ತದೆ. ಇದಕ್ಕೆ ವಿರುದ್ಧವಾಗಿ 2 ಸ್ಲೈಡಿಂಗ್ ಹೆಡ್ ನಡೆಸಲು ಸರಾಸರಿ ಒಬ್ಬ ವ್ಯಕ್ತಿಯ ಆವಶ್ಯಕತೆ ಇರುತ್ತದೆ. ಇದರಿಂದಾಗಿ ಈ ಮಶಿನ್ ಖರೀದಿ ಮಾಡಿದ ನಂತರ ಆಪರೇಟರ್ ಗೋಸ್ಕರ ಮಾಡಲಾಗುವ ಖರ್ಚಿನಲ್ಲಿ ಬೃಹತ್ ಪ್ರಮಾಣದ ಉಳಿತಾಯವಾಯಿತು. 40 ಸಾವಿರ ಯಂತ್ರಭಾಗಗಳ ಬ್ಯಾಚ್ ಇದ್ದಲ್ಲಿ ಅದು ಲಾಭಕಾರಿಯಾಗುತ್ತದೆ. ಅಲ್ಲದೇ ಈ ಮಶಿನ್ ನಿಂದ ಸಿಗುವ ಯಂತ್ರಭಾಗಗಳ ಗುಣಮಟ್ಟವು ತುಂಬಾ ಉಚ್ಚಮಟ್ಟದ್ದಾಗಿರುವುದನ್ನು ಈ ಮೂಲಕ ನಾನು ತಿಳಿಸುತ್ತೇನೆ. ಈ ಮಶಿನ್ ನಲ್ಲಿ ಆಪರೇಟರ್ ಮಧ್ಯಸ್ಥಿಕೆಯು ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಮತ್ತು ಇನ್ನೊಂದು ಮಹತ್ವದ ಅಂಶವೆಂದರೆ ಕನಿಷ್ಠ ಪ್ರಮಾಣದ ಸೆಟಪ್ ನಲ್ಲಿ ಯಂತ್ರಭಾಗಗಳ ಯಂತ್ರಣೆಯಾಗುತ್ತದೆ. ಹಾಗೆಯೇ ಸೆಟಪ್ ಬದಲಾಯಿಸಲು ಸಮಯವೂ ಕಡಿಮೆ ಬೇಕಾಗುತ್ತದೆ. ಈ ಹಿಂದೆ ಸೆಟಪ್ ಬದಲಾಯಿಸಲು ನಮಗೆ 6-7 ಗಂಟೆಗಳ ಕಾಲಾವಧಿಯು ಬೇಕಾಗುತ್ತಿತ್ತು, ಆದರೆ ಈಗ 3-4 ಗಂಟೆಗಳಲ್ಲಿಯೇ ಸೆಟಪ್ ಬದಲಾಯಿಸಬಹುದಾಗಿದೆ.
ಈ ಹಿಂದೆ ಸಿ.ಎನ್.ಸಿ.ಯಲ್ಲಿ ಒಂದು ಯಂತ್ರಭಾಗಕ್ಕೆ ಥ್ರೆಡಿಂಗ್ ಮಾಡುವಾಗ ನಮಗೆ ಪ್ರತಿ ಟೂಲ್ 1600 ರಷ್ಟು ಬಾಳಿಕೆಯು ಲಭಿಸುತ್ತಿತ್ತು. ಆದರೆ ಈ ಮಶಿನ್ ನಲ್ಲಿ ನಮಗೆ ಪ್ರತಿಯೊಂದು ಟೂಲ್ ಗೆ 4000 ಯಂತ್ರಭಾಗಗಳಷ್ಟು ಬಾಳಿಕೆಯು ಸಿಗುತ್ತದೆ. ಮಶಿನ್ ನಿಂದ ಸಿಗುತ್ತಿರುವ ಈ ಹೆಚ್ಚುವರಿ ಲಾಭಗಳಿಂದಾಗಿ ಒಂದು ವೇಳೆ ಈ ಮಶಿನ್ ನ ಪ್ರಾರಂಭದ ಬೆಲೆಯು ಹೆಚ್ಚು ಇದ್ದರೂ ಕೂಡಾ ಈ ಮಶಿನ್ ನಮಗೆ ಹೆಚ್ಚು ಲಾಭಕಾರಿಯಾಗುತ್ತಿದೆ. ಈ ಮಶಿನ್ ನಮ್ಮ ಕಂಪನಿಯಲ್ಲಿ ಬಂದಾಗಿನಿಂದ ನಮ್ಮ ವ್ಯವಸಾಯದಲ್ಲಿಯೂ ಹೆಚ್ಚಳವಾಗಿದೆ ಮತ್ತು ಇನ್ನಷ್ಟು ಹೊಸ ಹೊಸ ಆರ್ಡರ್ ಗಳು ನಮಗೆ ಸಿಕ್ಕಿದವು.”
 
 
“ಸಾಫ್ಟ್ ಮತ್ತು ಹಾರ್ಡ್ ಎಂಬ ಎರಡು ವಿಧದ ಮಟೀರಿಯಲ್ ಗೋಸ್ಕರ ಈ ಮಶಿನ್ ಉಪಯುಕ್ತವಾಗಿದೆ. ಬಳಸಲು ಈ ಮಶಿನ್ ತುಂಬಾ ಸುಲಭವಾಗಿದ್ದು ಇದರ ಪ್ರೊಗ್ರಾಮಿಂಗ್ ನಲ್ಲಿ ನಮಗೆ ‘ಸುಗಾಮಿ’ಯ ವತಿಯಿಂದ ಆಗಾಗ ಸಹಾಯವಾಗುತ್ತಿದೆ. ಈ ಮಶಿನ್ ನಲ್ಲಿರುವ ಪ್ರೊಗ್ರಾಮಿಂಗ್ ಸಿಸ್ಟಮ್ ಬಳಕೆಗಾರರಿಗೆ ಸುಲಭವಾಗಿದ್ದು ಸ್ಪಲ್ಪ ಪ್ರಮಾಣದಲ್ಲಿ ಕೋರ್ಡಿನೇಟ್ ಬಿಟ್ಟಲ್ಲಿ ಇನ್ನಿತರ ಟರ್ನಿಂಗ್ ಸೆಂಟರ್ ನಂತೆಯೇ ಅದು ಇರುತ್ತದೆ. ಸಿ.ಎನ್.ಸಿ.ಯ ಪ್ರೊಗ್ರಾಮರ್, ಸ್ಲೈಡಿಂಗ್ ಹೆಡ್ ನ ಸೆಟಿಂಗ್ ಮಾಡಬಲ್ಲೆವು, ಈ ರೀತಿಯಲ್ಲಿ ಈ ಮಶಿನ್ ನ ರಚನೆಯು ಇದೆ.”
 
 
“ಪಾರಂಪಾರಿಕ ಪದ್ಧತಿಯ ಹೊರತಾಗಿ ಸ್ಲೈಡಿಂಗ್ ಹೆಡ್ ನಲ್ಲಿ ಯಂತ್ರಣೆಯನ್ನು ಮಾಡುತ್ತಿರುವಾಗ ಆವರ್ತನೆಯ ಸಮಯದಲ್ಲಿ (ಸೈಕಲ್ ಟೈಮ್) ಸುಮಾರು 50% ಹೆಚ್ಚು ಕಡಿತವಾಗಿದೆ. ಯಾವ ಯಂತ್ರಭಾಗವು ಟ್ರಾಬ್, ಸಿ.ಎನ್.ಸಿ., ವಿ.ಎಮ್.ಸಿ. ಮತ್ತು ಕನ್ವೆನ್ಶನಲ್ ಡ್ರಿಲ್ಲಿಂಗ್ ಮಶಿನ್ ಇಂತಹ ನಾಲ್ಕು ಮಶಿನ್ ಗಳಲ್ಲಿ ಯಂತ್ರಣೆಯನ್ನು ಪೂರ್ತಿಯಾಗುತ್ತಿದ್ದಲ್ಲಿ ಅದು ಸ್ಲೈಡಿಂಗ್ ಹೆಟ್ ಆಟೋಮ್ಯಾಟ್ ಈ ಒಂದೇ ಮಶಿನ್ ನಲ್ಲಿ ಯಂತ್ರಣೆಯನ್ನು ಮಾಡಿ ಸಂಪೂರ್ಣ ಯಂತ್ರಭಾಗವು ಒಂದೇ ಸೆಟಪ್ ನಲ್ಲಿ ಪೂರ್ತಿಯಾಗುತ್ತದೆ. ಪಾರಂಪಾರಿಕ ಪದ್ಧತಿಯಲ್ಲಿ ಈ ನಾಲ್ಕು ಮಶಿನ್ ಗಳಲ್ಲಿ ಆ ಯಂತ್ರಭಾಗಗಳ ಆವರ್ತನೆಯ ಸಮಯವು 5 ನಿಮಿಷದ್ದಾಗಿರಬಹುದು, ಆದರೆ ಸ್ಲೈಡಿಂಗ್ ಹೆಡ್ ನಲ್ಲಿ 3 ನಿಮಿಷಗಳಲ್ಲಿ ಅದು ಪೂರ್ತಿಯಾಗುತ್ತದೆ.”
 
 
“ನಮ್ಮಲ್ಲಿ ‘ಸುಗಾಮಿ’ ಇವರ ಎರಡು ಸ್ಪಿಂಡಲ್ ಗಳಿರುವ 5 ಎಕ್ಸಿಸ್ ಮತ್ತು 6 ಎಕ್ಸಿಸ್ ಮಶಿನ್ ಗಳಿವೆ. ಈ ಮಶಿನ್ ನಲ್ಲಿ ಮೊದಲ ಸೆಟಪ್ ಒಂದೇ ಸ್ಪಿಂಡಲ್ ನಲ್ಲಿ, ಹಾಗೆಯೇ ಇನ್ನೊಂದು ಸೆಟಪ್ ಎರಡನೇ ಸ್ಪಿಂಡಲ್ ನಲ್ಲಿ ಒಂದೇ ಬಾರಿ ಆಗಿ ಒಂದೇ ಸಮಯದಲ್ಲಿ 2 ಆಪರೇಶನ್ ಗಳು ಆಗುತ್ತವೆ ಮತ್ತು ಫಿನಿಶ್ ಯಂತ್ರಭಾಗಗಳು ಹೊರಬರುತ್ತವೆ. ಮಶಿನ್ ನಲ್ಲಿ ಲೈವ್ ಟೂಲ್ ನ ಹೆಚ್ಚುವರಿ ವ್ಯವಸ್ಥೆಯನ್ನು ನೀಡಲಾಗಿದ್ದು ಅದರಲ್ಲಿ ಫಾನುಕ ವ್ಯವಸ್ಥೆಯನ್ನು ನೀಡಲಾಗಿದೆ.”
 
 
‘ಸುಗಾಮಿ’ ಈ ಜಪಾನಿ ಉತ್ಪಾದಕರು 2015 ರಿಂದ ಭಾರತದಲ್ಲಿ ಸಿ.ಎನ್.ಸಿ. ಲೇಥ್ ಮತ್ತು 2017 ರಲ್ಲಿ ಸ್ಲೈಡಿಂಗ್ ಹೆಡ್ ನಿರ್ಮಿತಿಯ ಪ್ಲಾಂಟ್ ಪ್ರಾರಂಭಿಸಿದರು. ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಮಶಿನ್ ನಿರ್ಮಿತಿಯ ಕಾರ್ಖಾನೆಗಳನ್ನು (ಮ್ಯಾನ್ಯುಫ್ಯಾಕ್ಚರಿಂಗ್ ಪ್ಲಾಂಟ್) ಪ್ರಾರಂಭಿಸುವ ಕುರಿತು ವಿಚಾರ ವಿಮರ್ಶೆಯನ್ನು ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಚಿಕ್ಕ ಲೇಥ್ ನಿಂದ ದೊಡ್ಡ ಲೇಥ್ ಗಳ ತನಕ ಮತ್ತು ಸಿ.ಎನ್.ಸಿ. ಲೇಥ್ ನಿರ್ಮಿತಿಯನ್ನು ಮಾಡಬಲ್ಲ ಅನೇಕ ಕಾರ್ಖಾನೆಗಳಿವೆ. ಇದರಿಂದಾಗಿ ‘ಸುಗಾಮಿ’ಯು ಭಾರತದಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಿದ್ದಾರೆ. ಇದರ ಕಾರಣವೆಂದರೆ, ಭಾರತವು ಈಗ ಏಶಿಯಾ ಖಂಡದಲ್ಲಿ ಬಹು ದೊಡ್ಡ ಮಾರುಕಟ್ಟೆಯಾಗಿದೆ. ಜಪಾನಿ ತಂತ್ರಜ್ಞಾನವು ಭಾರತೀಯ ಬೆಲೆಯಲ್ಲಿ ಲಭ್ಯವಾಗುತ್ತಿರುವುದರಿಂದ ನಮ್ಮ ಮಶಿನ್ ಗಳಿಗೆ ಭಾರತೀಯ ಉದ್ಯಮಿಗಳಲ್ಲಿ ಹೆಚ್ಚು ಬೇಡಿಕೆ ಇರುತ್ತಿದೆ.
 
 
ಸಂಜಯ್ ಬಬಲೇಶ್ವರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ.
ಸುಗಾಮಿ ಪ್ರಿಸಿಜನ್ ಇಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ. ಈ ಕಂಪನಿಯಲ್ಲಿ ಸೇಲ್ಸ್ ವಿಭಾಗದಲ್ಲಿ (ಪಶ್ಚಿಮ ಭಾರತ) ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ.
ಅವರಿಗೆ ಮಶಿನ್ ಟೂಲ್ ಕ್ಷೇತ್ರದಲ್ಲಿ ಸುಮಾರು 25 ವರ್ಷಗಳ ಅನುಭವವಿದೆ.
9500173271
@@AUTHORINFO_V1@@