ಹಾರಿಝಾಂಟಲ್ ಬೋರಿಂಗ್ ಮಿಲ್ ಮಶಿನ್

@@NEWS_SUBHEADLINE_BLOCK@@

Lohkarya - Udyam Prakashan    09-Jun-2021   
Total Views |
ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು (ಮಾಸ್) ಮಾಡುವುದಾದಲ್ಲಿ ಸಾಮಾನ್ಯವಾಗಿ ಹಾರಿಝಾಂಟಲ್ ಮಶಿನಿಂಗ್ ಸೆಂಟರ್ (ಎಚ್.ಎಮ್.ಸಿ.) ಬಳಸಲಾಗುತ್ತದೆ. ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗುವ ಯಂತ್ರಭಾಗಗಳ ಉತ್ಪಾದನೆಯಲ್ಲಿ ಸಕ್ರಿಯವಾಗಿಲ್ಲದಿರುವ, ಆದರೆ ದೊಡ್ಡ ಯಂತ್ರಭಾಗಗಳ (ಹೆವಿ ಯಂತ್ರಭಾಗಗಳು/ ಸ್ಟ್ರಕ್ಚರಲ್ ಭಾಗಗಳು ಮತ್ತು ಇತರ) ಯಂತ್ರಣೆಯನ್ನು ಮಾಡಬಲ್ಲ ಕೈಗಾರಿಕೋದ್ಯಮಿಗಳ ಒಂದು ದೊಡ್ಡ ಗುಂಪು ಉದ್ಯಮ ಕ್ಷೇತ್ರದಲ್ಲಿದೆ. ಈ ವಿಧದ ಕೆಲಸಗಳಿಗೋಸ್ಕರ ಇಂದಿಗೂ ಪಾರಂಪಾರಿಕ ಮಶಿನ್ ಗಳನ್ನೇ ಬಳಸಲಾಗುತ್ತಿದೆ. ಈ ಸಮಸ್ಯೆಯನ್ನು ನೀಗಿಸುವ ಪ್ರಯತ್ನವನ್ನು ‘ಹುರ್ಕೋ’ ಕಂಪನಿಯು ಮಾಡುತ್ತಿದೆ. ಬೃಹದಾಕಾರದ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವ ಉದ್ಯಮಿಗಳಿಗೋಸ್ಕರ ನಾವು ಹಾರಿಝಾಂಟಲ್ ಬೋರಿಂಗ್ ಮಿಲ್ ಅಭಿವೃದ್ಧಿ ಪಡಿಸುವ ವಿಚಾರವನ್ನು ಮಾಡಿದೆವು.
 

hdgfd_1  H x W: 
 
ಹಾರಿಝಾಂಟಲ್ ಮಿಲ್ಲಿಂಗ್ ಮಶಿನ್ ಮತ್ತು ಬೋರಿಂಗ್ ಮಿಲ್ ನಲ್ಲಿ ಇರುವ ಎಲ್ಲಕ್ಕಿಂತಲೂ ದೊಡ್ಯ ವ್ಯತ್ಯಾಸವೆಂದರೆ, ಕೆಲಸದ ವ್ಯಾಪ್ತಿ ಮತ್ತು ಕಾರ್ಯವಸ್ತುಗಳ ಗಾತ್ರ. ಉದಾಹರಣೆ, ವಸ್ತ್ರೋದ್ಯೋಗದಲ್ಲಿ ಮಶಿನ್ ಬಾಡಿ, ಪ್ರೆಸ್ ಬಾಡಿ ಮತ್ತು ಇನ್ನಿತರ ಬೃಹದಾಕಾರದ ಯಂತ್ರಭಾಗಗಳ ಯಂತ್ರಣೆ ಎಚ್.ಎಮ್.ಸಿ.ಯಲ್ಲಿ ಮಾಡುವುದು ಅಸಾಧ್ಯ. ಕಾರಣ ಮಶಿನ್ ನ ಭಾರವನ್ನು ಸಹಿಸಬಲ್ಲ ಮಿತಿ ಮತ್ತು ಕಾರ್ಯವಸ್ತುವಿನ ಗಾತ್ರ. ಈ ಪರಿಸ್ಥಿತಿಯಲ್ಲಿ ಹಾರಿಝಾಂಟಲ್ ಬೋರಿಂಗ್ ಮಿಲ್ ಉಪಯುಕ್ತವಾಗುತ್ತದೆ. ವಾಹನೋದ್ಯೋಗದಲ್ಲಿ ಮತ್ತು ಇತರೇ ಉದ್ಯಮಗಳಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡಬಲ್ಲ ಯಂತ್ರಭಾಗಗಳಿಗೋಸ್ಕರ ಎಚ್.ಎಮ್.ಸಿ. ಬಳಸಲಾಗುತ್ತದೆ. ಆದರೆ ಬೃಹದಾಕಾರದ ಯಂತ್ರಭಾಗಗಳ ಉತ್ಪಾದನೆಯಲ್ಲಿ ಬೋರಿಂಗ್ ಮಿಲ್ ಬಳಸಲಾಗುತ್ತದೆ. ಬೋರಿಂಗ್ ಮಿಲ್ ನ ರಚನೆಯು ದೃಢವಾಗಿ (ರಿಜಿಡ್ ಕನ್ ಸ್ಟ್ರಕ್ಷನ್) ಮತ್ತು ಅದರಲ್ಲಿರುವ ಗಿಯರ್ ಹೆಡ್ ಸ್ಪಿಂಡಲ್, ವೈಡ್ ಬಾಕ್ಸ್ ಗೈಡ್ ವೇಸ್ ಇವುಗಳಿಂದಾಗಿ ಹೆವಿ ಯಂತ್ರಭಾಗಗಳ ಉತ್ಪಾದನೆಗಳಿಗೆ ಇದು ಸೂಕ್ತವಾದ ಪರ್ಯಾಯವಾಗಿದೆ.
 
 
ಬೃಹತ್ ಪ್ರಮಾಣದಲ್ಲಿ ಬೇಡಿಕೆ ಇರುವಾಗಲೂ ಕೂಡಾ ನಾವು ಈ ಯೋಜನೆಯನ್ನು ತಡವಾಗಿಯೇ ಕೈಗೆತ್ತಿಕೊಂಡೆವು, ಎಂಬುದಾಗಿ ಹೇಳಬಹುದು. ಯಾವುದೇ ಹೊಸ ಪ್ರಕ್ರಿಯೆಯನ್ನು ಅವಲಂಬಿಸುವಾಗ ಆ ಪ್ರತಿಯೊಂದು ಹೊಸ ಪ್ರಕ್ರಿಯೆಯಲ್ಲಿ ಅನೇಕ ಸವಾಲುಗಳಿರುತ್ತವೆ. ಈ ಸ್ಥಿತಿಯಲ್ಲಿ ನಾವು HBM ಸರಣಿಯನ್ನು ಅಭಿವೃದ್ಧಿ ಪಡಿಸುತ್ತಿದ್ದೆವು. ಆಗ ನಾವು ನಮ್ಮದೇ ಆದ HMX ಸರಣಿಯೊಂದಿಗೆ ಸ್ಪರ್ಧಿಸುತ್ತಿದ್ದೆವೋ ಎಂಬುದಾಗಿ ಅನಿಸುತ್ತಿತ್ತು. HBM ಮತ್ತು HMX ಈ ಎರಡೂ ಮಶಿನ್ ಗಳು ವಿವಿಧ ಕಲ್ಪನೆಗಳನ್ನು ಬಳಸಿ ತಯಾರಿಸಿದ್ದರೂ ಕೂಡಾ ಆ ಸಮಯದಲ್ಲಿ ಅವರಲ್ಲಿರುವ ಸ್ಪರ್ಧೆಯ ಕುರಿತು ವಿಚಾರ ಮಾಡಲಾಗಿತ್ತು. ಹೊಸ ಉತ್ಪಾದನೆಗೆ ಮಾರುಕಟ್ಟೆಯಲ್ಲಿ ಹೇಗೆ ಪ್ರತಿಕ್ರಿಯೆಯು ಲಭಿಸಬಲ್ಲದು, ಎಂಬುದು ಮಾತ್ರ ಇನ್ನೊಂದು ಸವಾಲಾಗಿತ್ತು. ನಮ್ಮ ಅಭಿಪ್ರಾಯದಂತೆ ನಮ್ಮ ಈ ಮಶಿನ್ ಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಲಭಿಸಿತು. ವಿದೇಶದಲ್ಲಿ ಈ ತನಕ ಸುಮಾರು 20 ಮಶಿನ್ ಗಳ ಮಾರಾಟ ಮಾಡಲಾಗಿದೆ.
 
 
mjnhbgfv_1  H x
 
HBMX ಶ್ರೇಣಿಯಲ್ಲಿ ಮಶಿನ್ (ಚಿತ್ರ ಕ್ರ. 1) ಬೃಹತ್ ಪ್ರಮಾಣದ ಯಂತ್ರಣೆ ಮಾಡುವ ಕೈಗಾರಿಕೋದ್ಯಮಗಳನ್ನು ಗುರಿಯಾಗಿರಿಸಲಾಗುತ್ತದೆ. ಉದಾಹರಣೆ, ಮಶಿನ್ ಟೂಲ್ ನಿರ್ಮಾಪಕರು, ವಸ್ತ್ರೋದ್ಯೋಗದಲ್ಲಿರುವ ಮಶಿನ್ ಮತ್ತು ಪ್ರಿಂಟಿಂಗ್ ಮಶಿನ್ ಗಳ ನಿರ್ಮಿತಿಯನ್ನು ಮಾಡುವ ಕಂಪನಿಗಳು.
ಮೇಲೆ ಉಲ್ಲೇಖಿಸಿದಂತೆ ಕೈಗಾರಿಕೋದ್ಯಮಗಳಲ್ಲಿ ಹಾರಿಝಾಂಟಲ್ ಬೋರಿಂಗ್ ಮಿಲ್ ಮಶಿನ್ ಪ್ರಮುಖ ಮಶಿನ್ ಎಂಬುದಾಗಿಯೇ ಬಳಸಲಾಗುತ್ತದೆ. ಇದರಲ್ಲಿ 2500 Nm ತನಕದ ಟಾರ್ಕ್ ತಯಾರಿಸಬಲ್ಲ ಗಿಯರ್ ಹೆಡ್ ಸ್ಪಿಂಡಲ್ ಗಳಿವೆ. ಇದರ ಕ್ವಿಲ್ ನ ಉದ್ದವು 900 ಮಿ.ಮೀ. ಇರುತ್ತದೆ. ಇದರಿಂದಾಗಿ ಯಂತ್ರಣೆಯಲ್ಲಿ ಹೆಚ್ಚು ಅವಕಾಶವು ಲಭಿಸುತ್ತದೆ. ಇದರಲ್ಲಿ ಸಂಪರ್ಕದ ಕ್ಷೇತ್ರ (ಕಾಂಟ್ಯಾಕ್ಟ್ ಏರಿಯಾ) ಹೆಚ್ಚಾಗಿರುತ್ತದೆ ಮತ್ತು ಉಚ್ಚಮಟ್ಟದ ಪ್ಯಾರಾಮೀಟರ್ ನಲ್ಲಿ ಯಂತ್ರಣೆಯನ್ನು ಮಾಡುವಾಗ ಉಂಟಾಗುವ ಥ್ರಸ್ಟ್ ಮತ್ತು ಕಂಪನಗಳು (ವೈಬ್ರೇಶನ್) ಸಹಜವಾಗಿಯೇ ಹೀರಲ್ಪಡುತ್ತವೆ.
 
 
ಈ ಉತ್ಪಾದನೆಯ ಪ್ರಮುಖ ವೈಶಿಷ್ಟ್ಯಗಳು
ಅಕ್ಷಗಳ ಉದ್ದ : HBMX ಇದರಲ್ಲಿ X, Y, Z ಅಕ್ಷಗಳ ಉದ್ದವು ಅನುಕ್ರಮವಾಗಿ 2400 ಮಿ.ಮೀ., 2100 ಮಿ.ಮೀ., 1500 ಮಿ.ಮೀ. ಮತ್ತು W ಅಕ್ಷದ (ಸ್ಪಿಂಡಲ್ ನಿಂದ ಹೊರಗೆ ಬರುವ ಕ್ವಿಲ್) ವ್ಯಾಸವು 135 ಮಿ.ಮೀ. ಮತ್ತು ಉದ್ದವು 900 ಮಿ.ಮೀ. ಇರುತ್ತದೆ.
 
ಟೇಬಲ್ ನ ಸರ್ಫೇಸ್ : ಟೇಬಲ್ ನ ಕೆಲಸವನ್ನು ನಿರ್ವಹಿಸುವ ಸರ್ಫೇಸ್ 1800 ಮೀ.ಮೀ.x 2000 ಮಿ.ಮೀ. ಇರುವುದರಿಂದ ಬೃಹದಾಕಾರದ ಯಂತ್ರಭಾಗಗಳ ಯಂತ್ರಣೆಯನ್ನು ಮಾಡಬಲ್ಲೆವು.
 
 tfrdsya_1  H x
ಕ್ವಿಲ್ : HBMX ನಲ್ಲಿ 135 ಮಿ.ಮೀ. ವ್ಯಾಸ ಮತ್ತು 900 ಮಿ.ಮೀ. ಉದ್ದವಿರುವ ಮುಂದೆ ಸರಿಯಬಲ್ಲ ಕ್ವಿಲ್ (ಚಿತ್ರ ಕ್ರ. 2) ಇರುತ್ತದೆ. ಇದರಿಂದಾಗಿ ಟೂಲ್ ಗಳಿಗೆ ಚಿಕ್ಕದಾಗಿರುವ ಜಾಗಗಳ ತನಕ ತಲುಪಲು ಉದ್ದದ ಟೂಲಿಂಗ್ ನ ಆವಶ್ಯಕತೆ ಇರುತ್ತದೆ.
 
ಗಿಯರ್ ಹೆಡ್ ಸ್ಪಿಂಡಲ್ : ನಮ್ಮ ಬೋರಿಂಗ್ ಮಿಲ್ ಡಿಸೈನ್ ನಲ್ಲಿ ಎರಡು ರೀತಿಯ ವೇಗವಿರುವ ಗಿಯರ್ ಹೆಡ್ ಸ್ಪಿಂಡಲ್ (ಚಿತ್ರ ಕ್ರ. 3) ನೀಡಲಾಗಿವೆ. ಹೈ ಗಿಯರ್ ಗೋಸ್ಕರ 10-1500 ಆರ್.ಪಿ.ಎಮ್. ಮತ್ತು ಲೋ ಗಿಯರ್ ಗೋಸ್ಕರ 10-350 ಆರ್.ಪಿ.ಎಮ್. ಈ ರೀತಿಯ ವೇಗವಿರುತ್ತದೆ. 548 Nm ದಿಂದ 2500 Nm ಟಾರ್ಕ್ ತಯಾರಿಸಲಾಗುತ್ತದೆ. ಈ ಸ್ಪಿಂಡಲ್ ನಲ್ಲಿ ಶಾಶ್ವತವಾಗಿ ಗ್ರೀಸ್ ಪ್ಯಾಕ್ ಮಾಡಿರುವ ABEC 7 ಪ್ರಿಸಿಜನ್ ಕ್ಲಾಸ್ ಎಂಗ್ಯುಲರ್ ಕಾಂಟ್ಯಾಕ್ಟ್ ಹೈಬ್ರೀಡ್ ಸಿರಾಮಿಕ್ ಬೇರಿಂಗ್ ನೀಡಲಾಗಿದೆ.
 
ಫೀಡ್ ರೇಟ್ : ಇದರಲ್ಲಿ 10 ಮೀ./ ನಿಮಿಷ ರೇಪಿಡ್ ಟ್ರಾವರ್ಸ್ ಮತ್ತು 7.6 ಮೀ./ ನಿಮಿಷ ಫೀಡ್ ರೇಟ್ ಇರುತ್ತದೆ.

 
ಬಾಲ್ ಸ್ಕ್ರೂ : HBMX ನಲ್ಲಿ X, Y, Z ಅಕ್ಷಗಳಲ್ಲಿ 80 ಮಿ.ಮೀ. ಬಾಲ್ ಸ್ಕ್ರೂ ಮತ್ತು W ಅಕ್ಷಗಳಿಗೋಸ್ಕರ 63 ಮಿ.ಮೀ. ಬಾಲ್ ಸ್ಕ್ರೂ ನೀಡಲಾಗಿರುತ್ತದೆ.
poiuyt_1  H x W 
 
ರೋಟರಿ ಟೇಬಲ್ : HBMX ನಲ್ಲಿ ಒಂದು ನಾಲ್ಕನೇ ಅಕ್ಷದ ಕಂಟೂರಿಂಗ್ ರೋಟರಿ ಟೇಬಲ್ (ಚಿತ್ರ ಕ್ರ. 4) ನೀಡಲಾಗಿರುತ್ತದೆ. (ಕೇವಲ ಸ್ಥಿತಿಯಲ್ಲಿ ಇರುವುದಿಲ್ಲ). ಇದರ ರಿಪಿಟ್ಯಾಬಿಲಿಟಿ 18 ಮೈಕ್ರಾನ್ ನಷ್ಟು ಇರುತ್ತದೆ.
 
ಭಾರ : ಗರಿಷ್ಠ 10,000 ಕಿ.ಗ್ರಾಂ. ಭಾರದ ಕಾರ್ಯವಸ್ತು ಈ ಮಶಿನ್ ನಲ್ಲಿ ಅಳವಡಿಸಲಾಗುತ್ತದೆ ಮತ್ತು ಮಶಿನ್ ನ ಒಟ್ಟು ಭಾರ 26,000 ಕಿ.ಗ್ರಾಂ. ಇದೆ.
 
ಎಪ್ರೋಚ್ : ಅನೇಕ ಬಾರಿ ಬೋರಿಂಗ್ ಆಪರೇಶನ್ ಮಾಡುವಾಗ, ಪ್ರವೇಶ (ಎಪ್ರೋಚ್) ಪಡೆಯಲು ದೊಡ್ಡ ಆಕಾರದ ಅಥವಾ ವಿಶೇಷ ಬೋರಿಂಗ್ ಬಾರ್ ಬಳಸುವುದು ಅವಶ್ಯಕವಿರುತ್ತದೆ. ಇದರಿಂದಾಗಿ ಬೋರಿಂಗ್ ಆಪರೇಶನ್ ನ ಒಟ್ಟು ಖರ್ಚು ಕೂಡಾ ಹೆಚ್ಚಾಗುತ್ತದೆ. ಬೋರಿಂಗ್ ಮಿಲ್ ನಲ್ಲಿ ಉಪಲಬ್ಧವಿರುವ W ಅಕ್ಷ ಬಳಸುವುದರಿಂದ ಯಾವುದೇ ವಿಶೇಷ ಬೋರಿಂಗ್ ಟೂಲ್ ಬಳಸದೇ ಯಂತ್ರಣೆಗೋಸ್ಕರ ಸುಲಭವಾಗಿ ಪ್ರವೇಶ ಲಭಿಸುತ್ತದೆ. ಇದರಿಂದಾಗಿ ಯಂತ್ರಣೆಯ ಖರ್ಚು ಹೆಚ್ಚುವುದಿಲ್ಲ. ಚಿಪ್ ಬ್ರೇಕಿಂಗ್ ಮತ್ತು ಕಟಿಂಗ್ ಟೂಲ್ ನ ಬಾಳಿಕೆಯನ್ನು ಹೆಚ್ಚಿಸಲು ಕೂಲಂಟ್ ಥ್ರೂ ಸ್ಪಿಂಡಲ್ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ.

dhtgfd_1  H x W 
 
ಬಾಕ್ಸ್ ಗೈಡ್ ವೇ : ಇದರಲ್ಲಿ ಮೂರೂ ಅಕ್ಷಗಳಿಗೋಸ್ಕರ 155 ಮಿ.ಮೀ. ಅಗಲದ ಕಠಿಣತೆಯನ್ನು ಮಾಡಿರುವ ಬಾಕ್ಸ್ ಗೈಡ್ ವೇ (ಚಿತ್ರ ಕ್ರ. 5) ನೀಡಲಾಗಿದೆ. ಇದರಿಂದಾಗಿ ಆಳವಾದ ಸೀಳನ್ನು ಮಾಡುವಾಗ ಕಂಪನಗಳನ್ನು ಹೀರಿಕೊಳ್ಳುತ್ತದೆ.
 
ಆರುಪಾರಾಗಿರುವ ಕೂಲಂಟ್ ನ ಪ್ರವಾಹ : 15 ಬಾರ್ ಒತ್ತಡದಿಂದ ಸ್ಪಿಂಡಲ್ ನ ಆರುಪಾರು (ಥ್ರೂ) ಕೂಲಂಟ್ ನ ಪ್ರವಾಹವು ಲಭಿಸುತ್ತದೆ. ಇದರಿಂದಾಗಿ ಆಳವಾಗಿ ಮಿಲ್ಲಿಂಗ್ ಆಪರೇಶನ್ ನಲ್ಲಿ ಚಿಪ್ ಹೊರಗೆ ತೆಗೆಯಲು ಸಹಾಯವಾಗುತ್ತದೆ ಮತ್ತು ಕಟಿಂಗ್ ಟೂಲ್ ನ ಬಾಳಿಕೆಯು ವೃದ್ಧಿಸುತ್ತದೆ.
 
ರೇಖೀಯ ಗ್ಲಾಸ್ ಸ್ಕೇಲ್ : ಉಚ್ಚ ಉಷ್ಣಾಂಶದ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಥರ್ಮಲ್ ಸ್ಟ್ಯಾಬಿಲಿಟಿ ಕಾಪಾಡುವಲ್ಲಿ ಮತ್ತು ನಿಖರತೆಯನ್ನು ವೃದ್ಧಿಸುವಲ್ಲಿ ಎಲ್ಲ ಮೂರೂ ಅಕ್ಷಗಳಲ್ಲಿ ರೇಖೀಯ ಗ್ಲಾಸ್ ಸ್ಕೇಲ್ ನೀಡಲಾಗಿದೆ.
 
ಎ.ಟಿ.ಸಿ. : ಇದರಲ್ಲಿ 60 ಟೂಲ್ ಗಳ ಸ್ಟ್ಯಾಂಡರ್ಡ್ ಆಟೊಮ್ಯಾಟಿಕ್ ಟೂಲ್ ಚೇಂಜರ್ (ಎ.ಟಿ.ಸಿ.) ಮತ್ತು 90 ಟೂಲ್ ಗಳ ಪರ್ಯಾಯ ವ್ಯವಸ್ಥೆಯ ಎ.ಟಿ.ಸಿ. ಇದೆ. ಇದರಿಂದಾಗಿ ಯಂತ್ರಣೆಯನ್ನು ಮಾಡುತ್ತಿರುವಾಗ ಅನೇಕ ಟೂಲ್ ಗಳನ್ನು ಒಟ್ಟುಗೂಡಿಸುವುದು ಸುಲಭ ಸಾಧ್ಯ.
 
ಹುರ್ಕೋ ವಿಮ್ಯಾಕ್ಸ್ ಸಿ.ಎನ್.ಸಿ. ಕಂಟ್ರೋಲರ್ : ಸಂಭಾಷಣೆಯ ಮೂಲಕ ಮತ್ತು ಎನ್.ಸಿ. ಮೋಡ್ ಅಥವಾ ಇವೆರಡರ ಮೂಲಕ ಟೂಲ್ ದಾರಿಯ ನಿರ್ಮಿತಿಯನ್ನು ಮಾಡುವುದು ಸಾಧ್ಯ. ಯಂತ್ರಣೆಯ ಆವಶ್ಯಕತೆ ಇರುವ ಯಾವುದೇ ಯಂತ್ರಭಾಗಗಳಿಗೋಸ್ಕರ ಪ್ರಕ್ರಿಯೆಯಲ್ಲಿ ತಗಲುವ ಒಟ್ಟು ಸಮಯವನ್ನು ಕಡಿಮೆ ಮಾಡಲು ಅಂತಿಮ ಬಳಕೆಗಾರರಿಗೆ ಸಾಮರ್ಥ್ಯವನ್ನು ನೀಡುತ್ತದೆ. +3 ಹುರ್ಕೋ ನಿಯಂತ್ರಕ (ಕಂಟ್ರೋಲರ್) ಬಳಸಿ ಲಭಿಸುವ ಲಾಭದ ಕುರಿತು ಹೆಚ್ಚು ಸ್ಪಷ್ಟತೆ ಸಿಗುವಲ್ಲಿ http://www.HurcoCanHelp.com ಈ ಲಿಂಕ್ ನಲ್ಲಿ ಕ್ಲಿಕ್ ಮಾಡಿರಿ.

nbgvfcd_1  H x  
 
ಕಾಲಮ್ : ಉಚ್ಚಮಟ್ಟದ ಫೀಡ್ ರೇಟ್ ದಿಂದಾಗಿ ಯಂತ್ರಣೆಯನ್ನು ಮಾಡುವಾಗ ವಿಶೇಷವಾಗಿ ಉಚ್ಚಮಟ್ಟದ ಪ್ಯಾರಾಮೀಟರ್ ನೊಂದಿಗೆ ರಫಿಂಗ್ ನಲ್ಲಿ ದೃಢತೆಗೋಸ್ಕರ ಮಶಿನ್ ನಲ್ಲಿ ದೃಢವಾಗಿರುವ (ಮೇಸಿವ್) ಕಾಲಮ್ ನೀಡಲಾಗಿವೆ.
 
ಎಲ್ಲಕ್ಕಿಂತಲೂ ಹೆಚ್ಚು ಮೆಚ್ಚುಗೆ ಗಳಿಸಿದ ನಿಯಂತ್ರಕ : ನಮ್ಮ ಮ್ಯಾಕ್ಸ್ 5 ಈ ನಿಯಂತ್ರಕಗಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು ಅದರಲ್ಲಿ ಅಲ್ಟಿಮೋಶನ್/4 ಜಿಬಿ ಪ್ರೊಗ್ರಾಮ್ ಮೆಮರಿ, 128 ಜಿಬಿ ಮಶಿನ್ ಮೆಮರಿ, ಅಪಡೆಟೆಡ್ ಪ್ರೊಸೆಸರ್, 3D ಸಿಮ್ಯುಲೇಶನ್ ಗ್ರಾಫಿಕ್ಸ್, ಇಂಟರಪ್ಟ್ ಫಂಕ್ಷನ್ ಇಂತಹ ಹಲವಾರು ಅಭಿವೃದ್ಧಿಗೊಂಡ ವೈಶಿಷ್ಟ್ಯಗಳಿವೆ. ಇದರಿಂದಾಗಿ ಈ ನಿಯಂತ್ರಕವು ಬಳಕೆಗಾರರಿಗೆ ತುಂಬಾ ಫ್ಸೆಕ್ಸಿಬಲ್ ಮತ್ತು ಅನುಕೂಲಕರವಾಗುತ್ತದೆ. 2017 ರಲ್ಲಿ ಮ್ಯಾಕ್ಸ್ 5 ನಿಯಂತ್ರಕವನ್ನು ಗರಿಷ್ಠ ಪ್ರಮಾಣದ ನಿಯಂತ್ರಕವೆಂದು ಸನ್ಮಾನಿಸಲಾಯಿತು.
 
ಟೂಲ್ ಚೇಂಜ್ ಆಪ್ಟಿಮೈಜೇಶನ್ : ಟೂಲ್ ಚೇಂಜ್ ಆಪ್ಟಿಮೈಜೇಶನ್ ಯಂತ್ರಭಾಗಗಳು, ಯಂತ್ರಣೆಯ ಪ್ರೊಗ್ರಾಮ್ ನ ವಿಶ್ಲೇಷಣೆಯನ್ನು ಮಾಡುತ್ತವೆ ಮತ್ತು ಉಚ್ಚಮಟ್ಟದ ಕಾರ್ಯಸಾಮರ್ಥ್ಯಕ್ಕೋಸ್ಕರ ಟೂಲ್ ಗಳ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಪುನರ್ ರಚಿಸಿ ? ಟೂಲ್ ಬದಲಾವಣೆಯ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
 
ಎನ್.ಸಿ.ಕೋಡ್ : ಹುರ್ಕೋ ಕಂಟ್ರೋಲ್ ಇಂಡಸ್ಟ್ರಿ ಸ್ಟ್ಯಾಂಡರ್ಡ್, ಪಾನುಕ್, ಸೀಮೆನ್ಸ್ ಮತ್ತು ಇತರ ಅನೇಕ ಕಂಟ್ರೋಲ್ ನೊಂದಿಗೆ ಬಳಸಲಾಗುವ ಎನ್.ಸಿ.ಕೋಡ್ ನೊಂದಿಗೆ ಸರಿಹೊಂದಾಣಿಸಲ್ಪಡುತ್ತದೆ. (ಇದನ್ನು EIA/ ISO ಅಥವಾ G ಕೋಡ್ ಕೂಡಾ ಎಂಬುದಾಗಿ ಹೇಳಲಾಗುತ್ತದೆ). ತಮ್ಮಲ್ಲಿ ಲಭ್ಯವಿರುವ ಎನ್.ಸಿ. ಪ್ರೊಗ್ರಾಮ್ ಕೂಡಾ ಹುರ್ಕೋ ದಲ್ಲಿ ಬಳಸಬಹುದಾಗಿದೆ. ಫಾನುಕದ ಅನುಭವವಿರುವ ಮಶಿನ್ ಆಪರೇಟರ್ ಗೆ ಎನ್.ಸಿ. ಮೋಡ್ ನಲ್ಲಿ ಹುರ್ಕೋ ಮಶಿನ್ ಆಪರೇಟ್ ಮಾಡುವುದು ಸುಲಭ ಎಂದೆನಿಸಬಹುದು.
 
 
ಎನ್.ಸಿ.ಎಡಿಟರ್ : ಎನ್.ಸಿ. ಪ್ರೊಗ್ರಾಮ್ ಬರೆಯುವುದು ಅಥವಾ ಅದನ್ನು ಎಡಿಟ್ ಮಾಡುವುದಕ್ಕೋಸ್ಕರ ಶಕ್ತಿಶಾಲಿಯಾದ ಎನ್.ಸಿ. ಎಡಿಟರ್ ಇದು ಎಲ್ಲಕ್ಕಿಂತಲೂ ಶೀಘ್ರವಾದ ಉಪಾಯವಾಗಿದೆ. ಎಡಿಟರ್ ಕೆಂಪು ಬಣ್ಣವು ತಪ್ಪಾದ ವಾಕ್ಯದ ಬಳಕೆಯನ್ನು (ಸಿಂಟೆಕ್ಸ್) ತೋರಿಸುತ್ತದೆ. ಅಲ್ಲದೇ ರಿಯಲ್ ಟೈಮ್ ನಲ್ಲಿ ಹಸಿರು ಬಣ್ಣದಲ್ಲಿ ಸೂಚನೆಗಳನ್ನು ನೀಡುತ್ತದೆ. ಕರ್ಸರ್ ಅಲುಗಾಡಿಸಿದಲ್ಲಿ ಪ್ರತಿಯೊಂದು ಕೋಡ್ ನ ಅರ್ಥವೂ ಹುರ್ಕೋ ಎನ್. ಎಡಿಟರ್ ತಿಳಿಸುತ್ತದೆ.
 
 
ನಾವು ಯಾವುದರ ಸಂಭಾಷಣೆಯೆ ರೀತಿಯಲ್ಲಿ (ಕಮ್ಯುನಿಕೇಟಿವ್) ಪ್ರೊಗ್ರಾಮ್ ಮಾಡಲಾರೆವೋ, ಇಂತಹ ಕಂಟೂರ್ ಮತ್ತು 3D ವೈಶಿಷ್ಟ್ಯಗಳಿರುವ ಎನ್.ಸಿ. ಪ್ರೊಗ್ರಾಮ್ ನ ಎಲ್ಲ ಅಥವಾ ವಿಶಿಷ್ಟ ಭಾಗಕ್ಕೆ ಸಂಭಾಷಣಾತ್ಮಕವಾದ ಪ್ರೊಗ್ರಾಮ್ ನಲ್ಲಿ ಅಳವಡಿಸಲು ಇದು ನಮಗೆ ಅನುಮತಿಯನ್ನು ನೀಡುತ್ತದೆ.
ಸಮಯದ ಉಳಿತಾಯ, ಸುಲಭವಾದ ಪ್ರೊಗ್ರಾಮಿಂಗ್ ಮಾಡುವುದು ಮತ್ತು ಪ್ರಸ್ತುತ ಪ್ರೊಗ್ರಾಮ್ ಎಡಿಟ್ ಸುಲಭವಾಗುವುದು ಇಂತಹ ಅನೇಕ ಲಾಭಗಳು ಇದರಿಂದ ಲಭಿಸುತ್ತವೆ. ಕಾಪಿ/ ಕಟ್/ ಪೇಸ್ಟ್ ಮತ್ತು ಫೈಂಡ್/ರಿಪ್ಲೇಸ್ ಇಂತಹ ಪ್ರಗತಿ ಹೊಂದಿರುವ ವೈಶಿಷ್ಟ್ಯಗಳು ವೇಗ ಮತ್ತು ಸುಲಭತೆಯನ್ನು ನೀಡುತ್ತವೆ. ಹುರ್ಕೋ ಕಂಟ್ರೋಲ್ ಮೂಲಕ ಸಂಪೂರ್ಣ ಮ್ಯಾಕ್ರೋ B ಮತ್ತು ಎನ್.ಸಿ. ಪ್ರೊಗ್ರಾಮ್ ಮೂಲಕ ಬಳಸಿರುವ ಸುಮಾರು ಎಲ್ಲ G ಮತ್ತು M ಕೋಡ್ ಗಳನ್ನು ಬಳಸುವುದು ಸಾಧ್ಯ.
ಅಲ್ಟಿಮೋಶನ್ ಸಾಫ್ಟ್ ವೇರ್ : ಉತ್ಕೃಷ್ಟ ಮೋಶನ್ ಮತ್ತು ಜರ್ಕ್ ನಿಯಂತ್ರಣೆ ಮಾಡಬಹುದಾಗಿದೆ. ಅದರಲ್ಲಿ 0.44 mS ಬ್ಲಾಕ್ ಪ್ರೊಸೆಸಿಂಗ್ ಸ್ಪೀಡ್ ನೊಂದಿಗೆ 10,000 ಬ್ಲಾಕ್ಸ್ ಗಳ ವೆರಿಯೇಬಲ್ ಲುಕ್ ಅಹೇಡ್ ಫಂಕ್ಷನ್ ಇರುತ್ತದೆ. ಟೂಲ್ ನ ದಾರಿಗೆ ರೇಶನಲ್ (ತರ್ಕಶುದ್ಧವಾದ) ಮಾಡುವ ಕ್ಷಮತೆಯೂ ಅದರಲ್ಲಿದೆ. ಮಶಿನ್ ಸ್ಲೈಡ್ ನ ಎಕ್ಸಿಲರೇಶನ್ ಮತ್ತು ಡಿಸಿಲರೇಶನ್ ನಲ್ಲಿರುವ ವಿಲಕ್ಷಣವಾದ ನಿಯಂತ್ರಕದೊಂದಿಗೆ ಉಚ್ಚ ವೇಗ, ಯಂತ್ರಣೆಯ ಸಾಮರ್ಥ್ಯವನ್ನು ಉಂಟು ಮಾಡುತ್ತದೆ ಮತ್ತು ಅದರ ಫಲಿತಾಂಶಕ್ಕೆ ಅನುಸಾರವಾಗಿ ಯಂತ್ರಣೆಯ ಸಮಯ ಕಡಿಮೆಯಾಗುತ್ತದೆ. ಸರ್ಫೇಸ್ ಫಿನಿಶ್ ಮತ್ತು ನಿಖರತೆಯು ವೃದ್ಧಿಸುತ್ತದೆ.
ನಾವು ಯಾವಾಗಲೂ ಹೊಸ ಸುಧಾರಣೆ ಮತ್ತು ಅಬಿವೃದ್ಧಿಯನ್ನು ಮಾಡುವಲ್ಲಿ ಕಟಿಬದ್ಧರಾಗಿದ್ದೇವೆ.
 
ಮಯಂಕ ತ್ರಿಪಾಠಿ ಇವರು ಹುರ್ಕೋ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಪ್ರಾಡಕ್ಟ್ ಸ್ಪೆಶಾಲಿಸ್ಟ್ ಆಗಿದ್ದಾರೆ. ಅವರಿಗೆ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಸೇಲ್ಸ್ ಮತ್ತು ಅಪ್ಲಿಕೇಶನ್ ನಲ್ಲಿ 11 ವರ್ಷ ಕಾಲಾವಧಿಯ ಅನುಭವವಿದೆ.
9600017434
@@AUTHORINFO_V1@@