ವೇಗದ ಡ್ರಿಲ್ಲಿಂಗ್ ಗೋಸ್ಕರ ಕಾರ್ಬೈಡ್ ಇಂಡೆಕ್ಸೆಬಲ್ ಹೆಡ್

@@NEWS_SUBHEADLINE_BLOCK@@

Lohkarya - Udyam Prakashan    09-Jun-2021   
Total Views |
ಉದ್ಯಮಗಳನ್ನು ಯಶಸ್ವಿಯಾಗಿ ನಡೆಸುವಾಗ, ನಿರ್ಮಿತಿಯಲ್ಲಿ ಯಂತ್ರಸಾಮಗ್ರಿಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿದಲ್ಲಿ ಉತ್ಪಾದನೆಗಳ ಬೆಲೆಯನ್ನು ಕಡಿಮೆ ಮಾಡುವುದು ಸಾಧ್ಯ. ಇದರಿಂದಾಗಿ ಸ್ಪರ್ಧೆಯಲ್ಲಿಯೂ ಮುಂದಾಗಬಹುದು. ಇದಕ್ಕೋಸ್ಕರ ಕಡಿಮೆ ಸಮಯದಲ್ಲಿ ಹೆಚ್ಚು ಯಂತ್ರಣೆಯನ್ನು ಮಾಡುವುದು ಇದೊಂದು ಸುಲಭವಾದ ಸೂಚನೆಯಾಗಿದೆ. ಹೆಚ್ಚಿನ ಯಂತ್ರಭಾಗಗಳ ಉತ್ಪಾದನೆಯಲ್ಲಿ ಅನೇಕ ವಿಧದ ರಂಧ್ರಗಳಿಗೆ ಡ್ರಿಲ್ಲಿಂಗ್ ಮಾಡುವುದು ಅತ್ಯಾವಶ್ಯಕವಾಗಿರುತ್ತದೆ. ಮೊದಲಾಗಿ ಸುಲಭವೆಂದು ಅನಿಸುವ ಈ ಕೆಲಸದಲ್ಲಿ ಡ್ರಿಲ್ ಮೊಂಡಾಗುವುದು, ಡ್ರಿಲ್ ಮಶಿನ್ ನಿಂದ ತೆಗೆದು ಹರಿತ ಮಾಡುವುದು, ಮತ್ತೆ ಡ್ರಿಲ್ ಅಳವಡಿಸುವಾಗ ನಿರ್ದೋಷವಾದ ಯಂತ್ರಣೆಯನ್ನು ಮಾಡುವಲ್ಲಿ ಅದರ ಅಳತೆಯನ್ನು ಸರಿಯಾಗಿ ಮಾಡಿ ನಂತರವೇ ಯಂತ್ರಣೆಯನ್ನು ಮಾಡುವುದು ಇಂತಹ ಅನೇಕ ಕೆಲಸಗಳಲ್ಲಿ ತುಂಬಾ ಸಮಯವು ವ್ಯರ್ಥವಾಗುತ್ತದೆ ಮತ್ತು ಉತ್ಪಾದಕತೆಯು ಕಡಿಮೆಯಾಗುವ ಅನೇಕ ಉದಾಹರಣೆಗಳಿವೆ. ಇದರೊಂದಿಗೆ ಯಾವಾಗಲೂ ಬಳಸಲಾಗುವ ಸ್ಟೀಲ್ ನ ಡ್ರಿಲ್ ನ ಫೀಡ್ ರೇಟ್ ಹೆಚ್ಚು ಅಳವಡಿಸುವುದು ಸೂಕ್ತವಲ್ಲ.
 
 
ಅನೇಕ ಬಾರಿ ಮಾಡಬೇಕಾಗಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಕಾರ್ಬೈಡ್ ಇಂಡೆಕ್ಸೆಬಲ್ ಹೆಡ್ ಡ್ರಿಲ್ ಮೈಸ್ಟರ್ (ಚಿತ್ರ ಕ್ರ. 1) ಅಭಿವೃದ್ಧಿಗೊಳಿಸಲಾಗಿದೆ.
 

rtyhujio_1  H x 
 
ಡ್ರಿಲ್ ಮೈಸ್ಟರ್ ಶ್ರೇಣಿಯಲ್ಲಿ ಡ್ರಿಲ್, 6 ಮಿ.ಮೀ. ನಿಂದ 25 ಮಿ.ಮೀ. ಈ ಆಕಾರದಲ್ಲಿ 0.1 ಮಿ.ಮೀ.ನ ಪಟ್ಟಿನಲ್ಲಿ ವ್ಯಾಸದ ಮತ್ತು 1.5D, 3D, 5D, 8D ಹಾಗೆಯೇ 12D ಇಷ್ಟು ಉದ್ದದಲ್ಲಿ ಲಭ್ಯವಿವೆ. (ಇದರಿಂದಾಗಿ 1.5 ರಿಂದ 12 ತನಕದ L/D ಅನುಪಾತವಿರುವ ರಂಧ್ರಗಳಿಗೆ ಸಹಜವಾಗಿ ಯಂತ್ರಣೆಯನ್ನು ಮಾಡಬಹುದಾಗಿದೆ). ಸ್ಟೀಲ್, ಕಾಸ್ಟ್ ಆಯರ್ನ್, ಸ್ಟೇನ್ ಲೆಸ್ ಸ್ಟೀಲ್ ಇಂತಹ ವಿವಿಧ ಯಂತ್ರಭಾಗಗಳಿಗೋಸ್ಕರ ಈ ಡ್ರಿಲ್ ತುಂಬಾ ಉಪಯುಕ್ತವಾಗಿದೆ.
ಡ್ರಿಲ್ ಮೈಸ್ಟರ್ ನ ವೈಶಿಷ್ಟ್ಯಗಳೆಂದರೆ ಸ್ಟೀಲ್ ನಿಂದ ತಯಾರಿಸಿರುವ ಡ್ರಿಲ್ ನ ತುದಿಗೆ ಒಂದು ಹೊಸ ವಿಧದ ಕಾರ್ಬೈಡ್ ಇನ್ಸರ್ಟ್ ಅಳವಡಿಸಲಾಗಿರುತ್ತದೆ. ಈ ವ್ಯವಸ್ಥೆಯಿಂದಾಗಿ ಎರಡು ರೀತಿಯ ಲಾಭಗಳಿವೆ. ಸ್ಟೀಲ್ ನ ಡ್ರಿಲ್ ಬಳಸಿ ಲಭಿಸುವ ಯಂತ್ರಣೆಯಲ್ಲಿ ಫ್ಲೆಕ್ಸಿಬಿಲಿಟಿಯನ್ನು ಕಾಪಾಡಲಾಗುತ್ತದೆ. ಇದರೊಂದಿಗೆ ಕಾರ್ಬೈಡ್ ಇನ್ಸರ್ಟ್ ನಿಂದಾಗಿ ಹೆಚ್ಚು ಫೀಡ್ ರೇಟ್ ಅಳವಡಿಸಿ ಹೆಚ್ಚು ವೇಗವಾಗಿ ಯಂತ್ರಣೆಯನ್ನು ಮಾಡುವುದು ಸಾಧ್ಯ. ಸಾಮಾನ್ಯವಾದ ಡ್ರಿಲ್ ಬಳಸಿ, ಕಾಸ್ಟಿಂಗ್ ನಂತಹ ಭಾಗಗಳಿಗೆ ಯಂತ್ರಣೆಯನ್ನು ಮಾಡುವಾಗ ಅಂದಾಜು 0.25 ರಿಂದ 0.30 ಮಿ.ಮೀ./ಸುತ್ತು ಇಷ್ಟು ಪ್ರಮಾಣದಲ್ಲಿ ಫೀಡ್ ರೇಟ್ ಇಡಬಹುದು. ಆದರೆ ಕಾರ್ಬೈಡ್ ಇಂಡೆಕ್ಸೆಬಲ್ ಹೆಡ್ ಬಳಸಿ ಇದೇ ಯಂತ್ರಣೆ 0.45-0.6 ಮಿ.ಮೀ./ಸುತ್ತು ಇಷ್ಟು ಫೀಡ್ ರೇಟ್ ಅಳವಡಿಸಿ, ಅಂದರೆ ಇನ್ನಷ್ಟು ವೇಗವಾಗಿ ಮಾಡಬಹುದು. ಅಂದರೆ ಇದರಿಂದಾಗಿ ಉತ್ಪಾದಕತೆಯೂ ವೃದ್ಧಿಸುತ್ತದೆ. ಇದರ ಹೊರತಾಗಿ ಒಂದು ವೇಳೆ ಸಂಪೂರ್ಣವಾದ ಕಾರ್ಬೈಡ್ ಟೂಲ್ ಬಳಸಿದಲ್ಲಿ ಒಟ್ಟು ಖರ್ಚು ಹೆಚ್ಚುತ್ತದೆ.
 

uykjkik_1  H x  
 
ಈ ಡ್ರಿಲ್ ಮೈಸ್ಟರ್ ನಿಂದಾಗಿ ಟೂಲ್ ನ ಇನ್ವೆಂಟರಿಯನ್ನು ಕಡಿಮೆ ಇಡುವುದು ಸಾಧ್ಯ. ಪ್ರತ್ಯಕ್ಷವಾಗಿ ಯಂತ್ರಣೆಯನ್ನು ಮಾಡುವಾಗ ಒಂದು ಸ್ಟೋರ್ ನಲ್ಲಿ ಒಂದು ಮತ್ತು ರಿಗ್ರೈಂಡಿಂಗ್ ಗೋಸ್ಕರ ಒಂದು ಹೀಗೆ ಕನಿಷ್ಠ ಮೂರು ಟೂಲ್ ಗಳನ್ನು ಬಳಸಲು ಸಿದ್ಧ ಪಡಿಸಬೇಕಾಗುತ್ತದೆ, ಎಂಬುದು ಒಟ್ಟಾರೆ ಸಮೀಕ್ಷೆ ಮಾಡಿದಲ್ಲಿ ಗಮನಕ್ಕೆ ಬರುತ್ತಿದೆ. ಈ ಪರಿಸ್ಥಿತಿಯಲ್ಲಿ ಸಂಪೂರ್ಣ ಟೂಲ್ ಗಳ ಬದಲಾಗಿ ಕೇವಲ ಡ್ರಿಲ್ ಮೈಸ್ಟರ್ ನ ಕಾರ್ಬೈಡ್ ಇಂಡೆಕ್ಸೆಬಲ್ ಹೆಡ್ ಸ್ಟಾಕ್ ನಲ್ಲಿ ಅಳವಡಿಸಿ ಕೆಲಸ ನಿರ್ವಹಿಸಲಾಗುತ್ತದೆ. ಯಂತ್ರಣೆಯನ್ನು ಮಾಡುವಾಗ ಕಾರ್ಬೈಡ್ ಇಂಡೆಕ್ಸೆಬಲ್ ಹೆಡ್ ಒಂದೇ ಕೀಲಿಯ ಸಹಾಯದಿಂದ ಜಾಗದಲ್ಲಿಯೇ ಬದಲಾಯಿಸಬಹುದು. ಇದರಿಂದಾಗಿ ಟೂಲ್ ರಿಸೆಟಿಂಗ್ ಮಾಡಬೇಕಾಗುವುದಿಲ್ಲ ಮತ್ತು ಅದರಲ್ಲಿ ಸಮಯದ ಉಳಿತಾಯವೂ ಆಗುತ್ತದೆ.
 
 
ಇನ್ನಿತರ ವೈಶಿಷ್ಟ್ಯಗಳು 
• ಡ್ರಿಲ್ ಮೈಸ್ಟರ್ ನ ದೊಡ್ಡ ಹೆಲಿಕಲ್ ಎಂಗಲ್ ನಿಂದಾಗಿ ಮತ್ತು ಉಚ್ಚಮಟ್ಟದ ಪಾಲಿಶ್ ಮಾಡಿರುವ ಫ್ಲ್ಯೂಟ್ ನಿಂದಾಗಿ (ಚಿತ್ರ ಕ್ರ. 2) ಯಂತ್ರಣೆಯನ್ನು ಮಾಡುವಾಗ ಚಿಪ್ ಬೇಗನೆ ಹೊರಗೆ ಸರಿಯುತ್ತದೆ. ಈ ವ್ಯವಸ್ಥೆಯಿಂದಾಗಿ ವಿಶೇಷವಾಗಿ 5D, 8D ಆಳವಿರುವ ರಂಧ್ರಗಳ ಯಂತ್ರಣೆಯನ್ನು ಮಾಡುವಾಗ ಯಂತ್ರಭಾಗಗಳು ಹಾಳಾಗುವುದಿಲ್ಲ.
• ಎಲ್ಲ ಡ್ರಿಲ್ ಮೈಸ್ಟರ್ ನ ಶ್ಯಾಂಕ್ ಗಳ ಆಕಾರಕ್ಕೆ ಅನುಸಾರವಾಗಿ 16, 20, 25 ಮಿ.ಮೀ. ಮತ್ತು ಫ್ಲೇಟ್ ಕಾಟರ್ ಆಕಾರದಿಂದ ತಯಾರಿಸಿದ್ದರಿಂದ ಅದು ವಿವಿಧ ಪವರ್ ಚಕ್ ಹೋಲ್ಡರ್ ಮತ್ತು ಕಾಲೆಟ್ ಚಕ್ ಹೋಲ್ಡರ್ ನಲ್ಲಿ ಸಹಜವಾಗಿ ಅಳವಡಿಸಬಹುದಾಗಿದೆ.
• ತಪ್ಪಾಗಿರುವ ಡ್ರಿಲ್ ಮೈಸ್ಟರ್ ನ ಫ್ಲಂಜ್ ಹೋಲ್ಡರ್ ಗೆ ಅಂಟಿಕೊಳ್ಳುತ್ತದೆ. (ಚಿತ್ರ ಕ್ರ. 3) ಯಂತ್ರಣೆಯನ್ನು ಮಾಡುವಾಗ ಆಫ್ ಸೆಟ್ ನಲ್ಲಿ ನಿಖರತೆಯು ಲಭಿಸುತ್ತದೆ.
• ಬ್ಯಾಕ್ ಸ್ಟಾಪರ್ ನಿಂದಾಗಿ ಯಂತ್ರಣೆಯನ್ನು ಮಾಡುವಾಗ ಫೀಡ್ ರೇಟ್ ಹೆಚ್ಚು ಕಾಪಾಡಬಹುದು.
 
mjhmhj_1  H x W
 
ಡ್ರಿಲ್ ಮೈಸ್ಟರ್ ಬಳಸುವಾಗ ವಹಿಸಬೇಕಾದ ಮುತುವರ್ಜಿ
• ಕೂಲಂಟ್ ನ ಪ್ರವಾಹ (ಫ್ಲೊ) ಮತ್ತು ಕೂಲಂಟ್ ನ ಒತ್ತಡ (ಪ್ರೆಶರ್) ಯೋಗ್ಯ ರೀತಿಯಲ್ಲಿ ಕಾಪಾಡಬೇಕು.
• ಡ್ರಿಲ್ ನ ರನ್ ಔಟ್ ಮತ್ತು ಅಲೈನ್ ಮೆಂಟ್ 0.02 ಮಿ.ಮೀ.ನಲ್ಲಿಯೇ ಅಳವಡಿಸಬೇಕು.
• ರಂಧ್ರಗಳ ವ್ಯಾಸದ 8 ಪಟ್ಟು ಆಳದಂತಹ (8D) ಆಳವಾದ ಯಂತ್ರಣೆಯನ್ನು ಮಾಡುವಾಗ ಸಾಧ್ಯವಾದಷ್ಟು ಮಟ್ಟಿಗೆ ಮುಂಚೆಯೆ ರಂಧ್ರಗಳ ವ್ಯಾಸದ 1.5 ಪಟ್ಟು ಆಳದ (1.5D) ಯಂತ್ರಣೆಯನ್ನು ಮಾಡಿ ಅಥವಾ ಯಂತ್ರಣೆಯನ್ನು ಮಾಡುವಾಗ ಪ್ರಾರಂಭದಲ್ಲಿ 50% ಫೀಡ್ ರೇಟ್ ಅಳವಡಿಸಬೇಕು.
 
 
ಡ್ರಿಲ್ ಮೈಸ್ಟರ್ ನಲ್ಲಿ ಕಾರ್ಬೈಡ್ ಇಂಡೆಕ್ಸೆಬಲ್ ಹೆಡ್ ಅಳವಡಿಸುವ ಪದ್ಧತಿ
ಈ ಡ್ರಿಲ್ ನಲ್ಲಿ ಇಂಡೆಕ್ಸೆಬಲ್ ಹೆಡ್ ಅಳವಡಿಸುವುದು ಮತ್ತು ತೆಗೆಯುವುದು (ಚಿತ್ರ ಕ್ರ. 4) ಅತ್ಯಂತ ಸುಲಭವಾಗಿದೆ. ಇಂಡೆಕ್ಸೆಬಲ್ ಹೆಡ್ ಗೋಸ್ಕರ ನೀಡಿರುವ ಕೀಲಿಯಿಂದ ಹೆಡ್ ದೃಢವಾಗಿ ಅಳವಡಿಸಲಾಗುತ್ತದೆ. ಸಾಮಾನ್ಯವಾಗಿ ಬಳಕೆಯಲ್ಲಿರುವ RHS ಥ್ರೆಡಿಂಗ್ ಇದರಲ್ಲಿ ಇರುವುದರಿಂದ ಅಳವಡಿಸುವುದು ಮತ್ತು ತೆಗೆಯುವುದು ಈ ಪ್ರಕ್ರಿಯೆನ್ನು ಸಹಜವಾಗಿ ನಿರ್ವಹಿಸಬಹುದು.
 

ik67tutyh_1  H  
 

k,jnmhjn_1  H x 
 
 
ವ್ಯಾಸದಲ್ಲಿ -0.3+0.15 ವ್ಯತ್ಯಾಸ ಇದ್ದಲ್ಲಿ ರಂಧ್ರಗಳ ಸರ್ಫೇಸ್ ಫಿನಿಶ್ ರಫ್ ಇದ್ದಲ್ಲಿ ಯಂತ್ರಣೆಯನ್ನು ಮಾಡುವಾಗ ಶಬ್ದ ಉಂಟಾದಲ್ಲಿ, ಅಲ್ಲದೇ ಡ್ರಿಲ್ ಹೆಡ್ ಬಿಸಿಯಾದಲ್ಲಿ ಡ್ರಿಲ್ ಮೈಸ್ಟರ್ ಬದಲಾಯಿಸಬೇಕು.
 
 
ಡ್ರಿಲ್ ಮೈಸ್ಟರ್ ನಲ್ಲಿ ಸಾಲಿಡ್ ಡ್ರಿಲ್ ನ ಫ್ಲೆಕ್ಸಿಬಿಲಿಟಿ ಮತ್ತು ಇಂಡೆಕ್ಸೆಬಲ್ ಡ್ರಿಲ್ ನ ಕಾರ್ಯಕ್ಷಮತೆ ಇವುಗಳ ಕಾಂಬಿನೇಶನ್ ಯೋಗ್ಯ ರೀತಿಯಲ್ಲಿ ಆಗಿರುತ್ತದೆ. ಇದರಿಂದಾಗಿ ಹೆಚ್ಚು ಉತ್ಪಾದಕತೆಯನ್ನು ಪಡೆಯಲು ಡ್ರಿಲ್ಲಿಂಗ್ ನಲ್ಲಿ ಕಾರ್ಬೈಡ್ ಟೂಲ್ ಗಳನ್ನು ಬಳಸುವ ಬದಲಾಗಿ ಕಾರ್ಬೈಡ್ ಇಂಡೆಕ್ಸೆಬಲ್ ಹೆಡ್ ಮಿಲ್ ಬಳಸಿ ಕಡಿಮೆ ಖರ್ಚಿನಲ್ಲಿ ಮತ್ತು ಸಹಜವಾಗಿ ಯಂತ್ರಣೆಯನ್ನು ಮಾಡುವುದು ಸಾಧ್ಯವಾಯಿತು.
ಪುಣೆಯ ಸಮೀಪದಲ್ಲಿರುವ ಒಂದು ಕಂಪನಿಯಲ್ಲಿ ವಿ.ಎಮ್.ಸಿ.ಯಲ್ಲಿ ನಕಲ್ ಜಾಯಿಂಟ್ ಈ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವಾಗ ಸಾಮಾನ್ಯವಾದ ಟೂಲ್ ನ ಬದಲಿಗೆ ಟಂಗಾಲೈ ಇವರ ಟೂಲ್ ಬಳಸಿ ಮಾಡಿದ ನಂತರ ಉತ್ಪಾದಕತೆಯಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ. ಯಂತ್ರಣೆಯ ಸಮಯವು ಕಡಿಮೆಯಾಗಿದ್ದರಿಂದ ಉತ್ಪಾದಕೆಯಲ್ಲಿ ಹೆಚ್ಚಳವಾಗಿ ಟೂಲ್ ಗಳ ಬಾಳಿಕೆಯೂ ವೃದ್ಧಿಸಿರುವುದು ಗಮನಕ್ಕೆ ಬರುತ್ತಿದೆ.
 
ಜಯ್ ಶಾಹ ಇವರು ಟಂಗಾಲೈ ಇಂಡಿಯಾ ಪ್ರೈ.ಲಿ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಅನುಭವವಿದೆ.
9769444547
@@AUTHORINFO_V1@@