ಇಲೆಕ್ಟ್ರಿಕಲ್ ವಾಹನಗಳು : ಪ್ರಸ್ತುತ ಆವಶ್ಯಕತೆ

@@NEWS_SUBHEADLINE_BLOCK@@

Lohkarya - Udyam Prakashan    08-Jun-2021   
Total Views |

ವಾಯು ಮಾಲಿನ್ಯ ಮತ್ತು ಇಂಧನಕ್ಕೋಸ್ಕರ ಮಾಡಲಾಗುವ ಸಿಕ್ಕಾಪಟ್ಟೆ ಖರ್ಚು ಇದು ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ತಡೆಗಟ್ಟಲು ಅದರಲ್ಲಿರುವ ಸಾಗಾಣಿಕೆ ಮತ್ತು ವಿನಿಮಯ ಮಾಡುವ ಸಾಮಗ್ರಿಗಳ ಪಾಲು ತುಂಬಾ ದೊಡ್ಡದಾಗಿರುವುದನ್ನು ಗಮನಿಸಿ ಜಗತ್ತಿನೆಲ್ಲೆಡೆ ಇಲೆಕ್ಟ್ರಿಲ್ ವಾಹನಗಳು ಪ್ರಸ್ತುತ ಪರಿಸ್ಥಿತಿಯ ಬೇಡಿಕೆಯಾಗಿದೆ. ಭಾರತದಲ್ಲಿ ಆ ಕುರಿತು ಮಾಡಲಾಗುವ ಪ್ರಯತ್ನ ಮತ್ತು ಅದರ ಉತ್ಪಾದನೆಯ ಕ್ಷೇತ್ರದಲ್ಲಾಗುವ ಸಂಭಾವ್ಯ ಪರಿಣಾಮಗಳ ಕುರಿತು ಈ ಲೇಖನದಲ್ಲಿ ವಿಸ್ತಾರವಾದ ಅಂಶಗಳನ್ನು ವರ್ಣಿಸಲಾಗಿದೆ.
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪರಿಸರ ಮಾಲಿನ್ಯವಿರುವ ನಗರಗಳಲ್ಲಿ 16 ನಗರಗಳು ಭಾರತದಲ್ಲಿವೆ. ದೆಹಲಿಯಂತಹ ನಗರಗಳಲ್ಲಿ ವಾಯು ಮಾಲಿನ್ಯದಿಂದಾಗಿ ತಮ್ಮ ಮುಂದಿರುವ ಯಾವುದೂ ಕಾಣುವುದಿಲ್ಲ, ಇಂತಹ ಒಂದು ಅತಿ ಗಂಭೀರ ಪರಿಸ್ಥಿತಿ ಇದೆ. ಮಾಲಿನ್ಯದ ಸಮಸ್ಯೆಯನ್ನು ಕಡಿಮೆ ಮಾಡಲುವಲ್ಲಿ ಜಗತ್ತಿನೆಲ್ಲೆಡೆ ವಿವಿಧ ಹಂತಗಳಲ್ಲಿ ಅನೇಕ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತವಾದ ಉಪಾಯವನ್ನು ಸೂಚಿಸುವ ಜಾಗತಿಕ ಪ್ಯಾರೀಸ್ ಒಪ್ಪಂದದಲ್ಲಿ ಭಾರತವೂ ಸೇರ್ಪಡೆಯಾಗಿ ತಮ್ಮ ಸಹಿಯನ್ನು ಮಾಡಿದೆ. ಈ ಒಪ್ಪಂದಕ್ಕೆ ಅನುಸಾರವಾಗಿ 2030 ರ ತನಕ ಪ್ರತಿಯೊಂದು ದೇಶದಲ್ಲಿ ಅವರಲ್ಲಿರುವ ಕಾರ್ಬನ್ ವಾಯುವಿನ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದನ್ನು ಅಪೇಕ್ಷಿಸಲಾಗಿದೆ. ಇದಕ್ಕೋಸ್ಕರ ಮಾಲಿನ್ಯವನ್ನು ಮಾಡುವಂತಹ ಘಟಕಗಳನ್ನು ಕಡಿಮೆ ಮಾಡುವುದೂ ಅತ್ಯಾವಶ್ಯಕವಾಗಿದೆ. ಮಾಲಿನ್ಯದಲ್ಲಿ ಸಾರಿಗೆ ಅಥವಾ ಕಮ್ಯುನಿಕೇಶನ್ ಮಾಡುವಂತಹ ಸಾಮಗ್ರಿಗಳ (ಟ್ರಾನ್ಸ್ಪೋರ್ಟೇಶನ್) ಪಾಲು ಬಹು ದೊಡ್ಡದ್ದಾಗಿರುವುದರಿಂದ ಕಳೆದ ದಶಕದಿಂದ ಸರ್ಕಾರವು ವಿದ್ಯುತ್ತಿನಲ್ಲಿ ನಡೆಯಬಲ್ಲ ವಾಹನಗಳಿಗೆ (ಇಲೆಕ್ಟ್ರಿಕಲ್ ವೆಹಿಕಲ್, EV) ಪ್ರೋತ್ಸಾಹನೆಯನ್ನು ನೀಡಲು ಪ್ರಾರಂಭಿಸಿದರು. ಇದರೊಂದಿಗೆ ಹೆಚ್ಚಿನ ದೇಶಗಳಲ್ಲಿ ವಾಹನಗಳಿಗೆ ಬೇಕಾಗುವ ಇಂಧನವು ಬೃಹತ್ ಪ್ರಮಾಣದಲ್ಲಿ ಆಮದು ಮಾಡಲಾಗುತ್ತದೆ. ಭಾರತಲ್ಲಿ ವಾಹನಗಳಿಗೆ ಬೇಕಾಗುವ ಒಟ್ಟು ಇಂಧನದಲ್ಲಿ 82 % ಆಯಿಲ್ ಆಮದು ಮಾಡಲಾಗುತ್ತದೆ. ಜಗತ್ತಿನಲ್ಲಿ ಸೂಪರ್ ಪವರ್ ಸ್ಥಾನವನ್ನು ಗಿಟ್ಟಿಸುವ ಸ್ಪರ್ಧೆಯಲ್ಲಿ ಇದೊಂದು ಮಹತ್ತರವಾದ ಅಂಶವಾಗಿದೆ. ಪ್ರತಿಯೊಂದು ದೇಶವೂ ಇಂಧನಗೋಸ್ಕರ ಇನ್ನಿತರ ದೇಶಗಳೊಂದಿಗಿರುವ ಅವಲಂಬಿತ್ವವನ್ನು ಕಡಿಮೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಅಮೆರಿಕಾ, ಚೀನಾ, ರಶಿಯಾ ಇಂತಹ ದೇಶಗಳಿಂದ ಪ್ರಾರಂಭಿಸಿ ಎಲ್ಲ ರಾಷ್ಟ್ರಗಳೂ ಇದಕ್ಕೋಸ್ಕರ ಪರದಾಡುತ್ತಿದ್ದಾರೆ. ಇದರಿಂದಾಗಿ ಇಲೆಕ್ಟ್ರಿಕಲ್ ವಾಹನಗಳ ನಿರ್ಮಿತಿಯಲ್ಲಿ ಎಲ್ಲರೂ ಗಮನವನ್ನು ಹರಿಸುತ್ತಿರುವುದು ಗಮನಕ್ಕೆ ಬರುತ್ತಿದೆ.
 
uygfyjd_1  H x
 
ಪೂರಕ ಸರ್ಕಾರದ ನೀತಿಗಳು
ಪ್ರಸ್ತುತ ತಮ್ಮ ಅಕ್ಕಪಕ್ಕದಲ್ಲಿ ವಿದ್ಯುತ್ತಿನಿಂದ ನಡೆಯಬಲ್ಲ (ಇಲೆಕ್ಟ್ರಿಕಲ್) ದ್ವಿಚಕ್ರ ವಾಹನಗಳು ಮತ್ತು ಬಸ್ ಗಳ ಪ್ರಮಾಣವು ವೃದ್ಧಿಸುತ್ತಿರುವುದು ಕಂಡುಬರುತ್ತಿದೆ. ಕಾರಣ ಸರ್ಕಾರದ ಹಂತದಲ್ಲಿ ದ್ವಿಚಕ್ರ ವಾಹನಗಳು ಮತ್ತು ಬಸ್ ಇವುಗಳ ಬಳಕೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತಿದೆ. ಇಲೆಕ್ಟ್ರಿಕಲ್ ವಾಹನಗಳು ಮತ್ತು ಅದಕ್ಕೋಸ್ಕರ ಬೇಕಾಗುವ ತಂತ್ರಜ್ಞಾನವು ನಮ್ಮ ದೇಶದಲ್ಲಿಯೇ ಅಭಿವೃದ್ಧಿಸಲ್ಪಡಬೇಕು, ಎಂಬುದಕ್ಕಾಗಿ ವಾಹನಗಳ ಮತ್ತು ಅದರ ಯಂತ್ರಭಾಗಗಳ ನಿರ್ಮಿತಿಯನ್ನು ಮಾಡಬಲ್ಲ ಕೈಗಾರಿಕೋದ್ಯಮಿಗಳಿಗೆ ಸರ್ಕಾರವು ಉತ್ತೇಜನವನ್ನು ನೀಡುತ್ತಿದೆ. ಪ್ರಸ್ತುತ ಪ್ರಚಲಿತವಿರುವ ವಾಹನಗಳ ಉತ್ಪಾದಕರು IC ಇಂಜಿನ್ ನ ಭಾಗಗಳನ್ನು (ಕಂಪೋನಂಟ್) ತಯಾರಿಸುತ್ತಾರೆ. ಅವರಿಗೂ ಇಲೆಕ್ಟ್ರಿಕಲ್ ವಾಹನಗಳ ಭಾಗಗಳನ್ನು ತಯಾರಿಸುವ ಕರೆಯನ್ನು ಸರ್ಕಾರವು ನೀಡುತ್ತಿದೆ. ಇದಕ್ಕೋಸ್ಕರ ಸರ್ಕಾರವು 2015 ರಲ್ಲಿ ಫಾಸ್ಟರ್ ಅಡಾಪ್ಶನ್ ಎಂಡ್ ಮ್ಯಾನ್ಯುಫ್ಯಾಕ್ಟರಿಂಗ್ ಆಫ್ ಇಲೆಕ್ಟ್ರಿಕ್ ವೆಹಿಕಲ್ಸ್ ಅಂದರೆ ಫೇಮ್ ಇಂಡಿಯಾ ಎಂಬ ಯೋಜನೆಯನ್ನು ಪ್ರಾರಂಭಿಸಿದರು. ಇದಕ್ಕೆ ಮುಂಚೆ 2013 ರಲ್ಲಿ ಸರ್ಕಾರವು ನ್ಯಾಶನಲ್ ಇಲೆಕ್ಟ್ರಿಕ್ ಮೊಬಿಲಿಟಿ ಎಂಬ ಯೋಜನೆಯನ್ನು ಪ್ರಸ್ತುತ ಪಡಿಸಿದರು. ಈ ಯೋಜನೆಯ ಮೊದಲ ಫೇಸ್ ನಲ್ಲಿ ಸರ್ಕಾರವು 800 ಕೋಟಿ ರೂಪಾಯಿಗಳ ಮೊತ್ತವನ್ನು ಮೀಸಲಾಗಿರಿಸಿತು. ತಂತ್ರಜ್ಞಾನದ ವಿಕಾಸ, ಇಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವವರಿಗೆ ಇನ್ಸೆಂಟಿವ್, ಚಾರ್ಜಿಂಗ್ ಸ್ಟೇಶನ್, ಪಯ್ ಲಟ್ ಪ್ರೊಜೆಕ್ಟ್ ಇಂತಹ ಕೆಲಸಗಳಿಗೋಸ್ಕರ ಈ ನಿಧಿಯನ್ನು ಬಳಸಲಾಯಿತು. ಈ ಫೇಸ್ 1 ರಿಂದ ಗ್ರಾಹಕರು ಈ ವಾಹನಗಳ ಅನುಭವವನ್ನು ಪಡೆದರು. ಅಲ್ಲದೇ ಸರ್ಕಾರವೂ ಈ ಕುರಿತು ಅದರಿಂದ ಅಂದಾಜನ್ನು ಪಡೆಯಿತು. ಈ ಎಲ್ಲ ಅಂಶಗಳ ವಿಚಾರ ಮಾಡಿ ಫೇಮ್ ಇಂಡಿಯಾ ಯೋಜನೆಯ ಎರಡನೇ ಫೇಸ್ ನಲ್ಲಿ ಎಪ್ರಿಲ್ 2019 ರಲ್ಲಿ ಸರ್ಕಾರವು 10 ಸಾವಿರ ಕೋಟಿಗಳಷ್ಟು ದೊಡ್ಡ ಮೊತ್ತವನ್ನು ಮೀಸಲಾಗಿರಿಸಿತು. ಇದರಲ್ಲಿ ಸರ್ಕಾರವು 7000 ಇಲೆಕ್ಟ್ರಿಕಲ್ ಬಸ್, 10 ಲಕ್ಷ ದ್ವಿಚಕ್ರ ವಾಹನಗಳು, 5 ಲಕ್ಷ ತ್ರಿಚಕ್ರ ವಾಹನಗಳು ಮತ್ತು 50 ಸಾವಿರ ನಾಲ್ಕು ಚಕ್ರ ವಾಹನಗಳ ಖರೀದಿಗೋಸ್ಕರ ಇನ್ಸೆಂಟಿವ್ ನೀಡುವುದನ್ನು ನಿರ್ಧರಿಸಿತು.
 

ujhfgr4y6tdh_1   
 
ಮಹಿಂದ್ರಾ, ಟಾಟಾ, ಬಜಾಜ್, ಟಿವಿಎಸ್, ಹ್ಯುಂದಾಯಿ, ಎಮ್.ಜಿ. ಇಂತಹ ವಿವಿಧ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಇಲೆಕ್ಟ್ರಿಕ್ ವಾಹನಗಳನ್ನು ಪ್ರಸ್ತುತಪಡಿಸಿದರು. ಈ ವಾಹನಗಳ ನಿರ್ಮಿತಿಯೊಂದಿಗೆ ಅದಕ್ಕೆ ಬೇಕಾಗುವ ತಂತ್ರಜ್ಞಾನವನ್ನೂ ತಮ್ಮಲ್ಲಿ ತಯಾರಾಗಬೇಕು, ಎಂಬುದಕ್ಕಾಗಿ ಫೇಮ್ ನ ಯೋಜನೆಯಲ್ಲಿ ಸರ್ಕಾರವು ಒತ್ತನ್ನು ನೀಡಿತು. ಇಲೆಕ್ಟ್ರಿಲ್ ವಾಹನಗಳಲ್ಲಿ ಪ್ರಮುಖವಾಗಿ ಮೋಟರ್, ಬ್ಯಾಟರಿ, ಚಾರ್ಜರ್, AC-DC ಕನ್ವರ್ಟರ್ ಮುಂತಾದ ಭಾಗಗಳಿರುತ್ತವೆ. ಪ್ರತಿಯೊಂದು ಭಾಗಕ್ಕೆ ಅನುಸಾರವಾಗಿ ಸರ್ಕಾರವು ಕಾಲ ಮಿತಿಯನ್ನು ನೀಡಿದೆ. ಪ್ರಾರಂಭದಲ್ಲಿ ಯಾವುದೇ ಭಾಗವನ್ನು ಆಮದು ಮಾಡಿದ್ದಲ್ಲಿ, ಅದನ್ನು ಎಷ್ಟು ಕಾಲಾವಧಿಯ ತನಕ ಅಮದು ಮಾಡುವುದು ಎಂಬುದಕ್ಕೆ ಕಾಲದ ಮಿತಿಯನ್ನು ಸರ್ಕಾರವು ನಿಗದಿಸಿತು. ಆಯಾ ನಿಗದಿತ ಕಾಲಾವಧಿಯಲ್ಲಿ ಆ ಬಿಡಿಭಾಗಗಳ ನಿರ್ಮಿತಿಯನ್ನು ತಮ್ಮಲ್ಲಿಯೇ ಮಾಡಬೇಕು, ಎಂಬುದಕ್ಕಾಗಿ ಸರ್ಕಾರವು ಕೆಲವು ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮ ಮತ್ತು ನೀತಿಗಳನ್ನು ಪಾಲಿಸಿದಲ್ಲಿ ಮಾತ್ರ ಕೈಗಾರಿಕೋದ್ಯಮಿಗಳಿಗೆ ಇನ್ಸೆಂಟಿವ್ ಸಿಗಬಲ್ಲದು, ಎಂಬುದನ್ನು ತಿಳಿಸಲಾಯಿತು.
 
 
ಪ್ರಚಲಿತ IC ಇಂಜಿನ್ ಮತ್ತು EV

frdrsf_1  H x W
ಸುಮಾರು 1910 ರಲ್ಲಿ IC ಇಂಜಿನ್ ಗಳ ಸಂಶೋಧನೆಯೂ ಆಗಲಿಲ್ಲ, ಆಗ ತಯಾರಾಗುತ್ತಿದ್ದ ಎಲ್ಲ ನಾಲ್ಕು ಚಕ್ರಗಳಿರುವ ವಾಹನಗಳಿಗೆ ವಿದ್ಯುತ್ ಮೋಟರ್ ಬಳಸಿಯೇ ನಡೆಯಲಾಗುತ್ತಿತ್ತು. ಆದರೆ ಆ ಕಾಲದಲ್ಲಿ ಲಭ್ಯವಿದ್ದ ತಂತ್ರಜ್ಞಾನಕ್ಕೆ ಅನುಸಾರವಾಗಿ ಯಾವ ಬ್ಯಾಟರಿಗಳನ್ನು ಬಳಸಲಾಗುತ್ತಿದ್ದವೋ, ಆ ಬ್ಯಾಟರಿಗಳ ಭಾರವು ತುಂಬಾ ಹೆಚ್ಚು ಇರುತ್ತಿತ್ತು. 500 ಕಿಲೋಮೀಟರ್ ದೂರದ ಪ್ರವಾಸವನ್ನು ಮಾಡಲು ಈ ಬ್ಯಾಟರಿಯನ್ನು ಬಳಸಲಾಗುತ್ತಿತ್ತು. ಅದನ್ನು ಯಾವುದೊಂದು ಅನೆಯನ್ನು ವಾಹನದಲ್ಲಿ ಕೂರಿಸಿ ಒಯ್ಯುವ ಉದಾಹರಣೆಯೆಂಬುದಾಗಿ ಹೇಳಬಹುದು. ಆದರೆ 35 ಲೀಟರ್ ಪೆಟ್ರೋಲ್ ಟ್ಯಾಂಕ್ ನಲ್ಲಿ 500 ಕಿಲೋಮೀಟರ್ ದೂರವನ್ನು ಸಹಜವಾಗಿ ಒಯ್ಯುವ IC ಇಂಜಿನ್ ನಲ್ಲಿರುವ ತಂತ್ರಜ್ಞಾನದ ಉದಯವಾಯಿತು ಮತ್ತು ಎಲ್ಲ ಸ್ವಯಂಚಾಲಿತ ವಾಹನಗಳು ಪೆಟ್ರೋಲ್, ಡಿಸೆಲ್ ನಂತಹ ಜೈವಿಕ ಇಂಧನಗಳಲ್ಲಿ ನಡೆಯಲಾರಂಭಿಸಿದವು. ಕಾಲಕ್ಕೆ ತಕ್ಕಂತೆ ಮತ್ತು ತಂತ್ರಜ್ಞಾನಕ್ಕೆ ಅನುಸಾರವಾಗಿ ಅದರಲ್ಲಿ ಅನೇಕ ರೀತಿಯ ಬದಲಾವಣೆಗಳಾದವು. ಪ್ರತಿಯೊಂದು ವಾಹನದಲ್ಲಿ ಪರಿಪೂರ್ಣವಾದ ತಂತ್ರಜ್ಞಾನವು ಅಳವಡಿಸಲ್ಪಟ್ಟಿತು.
 

hghjfd_1  H x W 
 
ಪ್ರಚಲಿತ ವಾಹನಗಳು ಮತ್ತು EV ಇವುಗಳಲ್ಲಿ ಮೂಲಭೂತ ವ್ಯತ್ಯಾಸವೆಂದರೆ, ಪ್ರಚಲಿತ ವಾಹನಗಳಲ್ಲಿರುವ IC ಇಂಜಿನ್ ಮತ್ತು ಪವರ್ ಟ್ರೇನ್ ನ ಜಾಗವನ್ನು ಇಲೆಕ್ಟ್ರಿಕ್ ಮೋಟರ್ ಆಕ್ರಮಿಸಿದೆ. ವಾಹನದಲ್ಲಿರುವ ಫ್ಯುಯೇಲ್ ಪೈಪ್ ನಿಂದ ಹಿಡಿದು ಸೈಲೆನ್ಸರ್ ತನಕದ ಎಲ್ಲ ಯಂತ್ರಭಾಗಗಳ ಪಂಕ್ತಿಯು ಇಲ್ಲದಂತಾಯಿತು. ಮೋಟರ್ ಗಳಿಗೆ ಬೇಕಾಗುವ ಎನರ್ಜಿಯನ್ನು ಬ್ಯಾಟರಿಯಿಂದ ಪಡೆಯಲಾಯಿತು. EV ಯಲ್ಲಿ ಕ್ಲಚ್ ಇಲ್ಲದಿರುವುದರಿಂದ ಕ್ಲಚ್ ಗೆ ಸಂಬಂಧಪಟ್ಟ ಎಲ್ಲ ಯಂತ್ರಭಾಗಗಳು ಕಡಿಮೆಯಾದವು. ಇದರೊಂದಿಗೆ ಗೇರ್ ಬಾಕ್ಸ್ ಇಲ್ಲದಿರುವುದರಿಂದ ಅದರಲ್ಲಿರುವ ಸುಮಾರು 100 ಬಿಡಿಭಾಗಗಳು ಕಡಿಮೆಯಾದವು. ಸಾಮಾನ್ಯವಾಗಿ ಪ್ರಚಲಿತ ವಾಹನಗಳಲ್ಲಿ 40 ಶೇಕಡಾ ಯಂತ್ರಭಾಗಗಳನ್ನು EV ಯಲ್ಲಿ ಬಳಸಲಾಗುತ್ತದೆ. ಆದರೆ EV ಯಲ್ಲಿರುವ ಬ್ಯಾಟರಿಯ ಹೆಚ್ಚುವರಿ ಭಾರದಿಂದಾಗಿ ವಾಹನದ ರಚನೆಯಲ್ಲಿ ಮತ್ತು ಇನ್ನಿತರ ಟ್ರಾನ್ಸ್ ಮಿಶನ್ ಗೆ ಸಂಬಂಧಪಟ್ಟ ಭಾಗಗಳಲ್ಲಿ ಆವಶ್ಯಕವಿರುವ ಬದಲಾವಣೆಗಳನ್ನು ಮಾಡಲಾಗಿವೆ.
 

ujhgghn_1  H x  
 
ಇಲೆಕ್ಟ್ರಿಕ್ ವಾಹನಗಳು ಡ್ರೈವ್ ಮೋಡ್ ಮತ್ತು ಸ್ಪೋರ್ಟ್ ಮೋಡ್ ಎಂಬ ಎರಡು ವಿಧಗಳಲ್ಲಿರುತ್ತವೆ. ಈ ಪ್ರತಿಯೊಂದು ವಿಧದಲ್ಲಿ ಬಳಕೆಗೆ ಅನುಸಾರವಾಗಿ ಪ್ಯಾರಾಮೀಟರ್ ಗಳ ಸೆಟ್ ನಿರ್ಧರಿಸಲಾಗಿರುತ್ತವೆ. ಇದರಿಂದಾಗಿ ವಾಹನಗಳನ್ನು ಸುಲಭವಾಗಿ ಬಳಸಬಹುದು, ಇದೇ ಇದರಲ್ಲಿ ಅಡಗಿರುವ ಕಾರಣವಾಗಿದೆ. ಡ್ರೈವ್ ಮೋಡ್ ನ ಪ್ರಮುಖ ಕಾರಣವೆಂದರೆ ಅಳವಡಿಸಿರುವ ಬ್ಯಾಟರಿಯ ಸಾಮರ್ಥ್ಯದಲ್ಲಿ ಗರಿಷ್ಠ ಕಿಲೋಮೀಟರ್ ದೂರದ ಪ್ರವಾಸವನ್ನು ಮಾಡುವುದಾಗಿರುತ್ತದೆ. ಡ್ರೈವ್ ಮಾಡುವಾಗ ಚಾಲಕನಿಗೆ ವಾಹನದ ಇಂಜಿನ್ ನಿಂದ ಗರಿಷ್ಠ ಕಾರ್ಯಕ್ಷಮತೆಯ ಆಪೇಕ್ಷೆ ಇರುತ್ತದೆ, ಆಗ ಈ ರೀತಿಯ ವಾಹನಗಳಿಗೆ ಸ್ಪೋರ್ಟ್ ಮೋಡ್ ಎಂಬ ವಿಧವೂ ಸೂಕ್ತವಾಗಿದೆ.
 
 
ಪ್ರಸ್ತುತ ಲಭ್ಯವಿರುವ ವಾಹನಗಳಲ್ಲಿ ವಾಹನವು ನಡೆಯುತ್ತಿರುವಾಗ ತಯಾರಾಗುವ ಯಾಂತ್ರಿಕ ಶಕ್ತಿಯನ್ನು ಬಳಸಿ ಅಲ್ಟರ್ ನೇಟರ್ ಅಥವಾ ಮ್ಯಾಗ್ನೆಟೋ (ದ್ವಿಚಕ್ರ ವಾಹನಗಳಿಗೆ) ಬಳಸಿ ವಾಹನದಲ್ಲಿರುವ 6 ಅಥವಾ 12 ವೋಲ್ಟ್ ನ ಬ್ಯಾಟರಿಯನ್ನು ರೀಚಾರ್ಜ್ ಮಾಡಲಾಗುತ್ತದೆ. (EV ಯಲ್ಲಿ ಈ ಕೆಲಸವನ್ನು DCDC ಕನ್ವರ್ಟರ್ ನಿಂದಲೇ ಮಾಡಲಾಗುತ್ತದೆ. ಪ್ರಮುಖ ಬ್ಯಾಟರಿಯಲ್ಲಿರುವ ಹೈ ವೋಲ್ಟೇಜ್ ನ ರೂಪಾಂತರವನ್ನು DCDC ಕನ್ವರ್ಟರ್ ಮೂಲಕ ಲೋ ವೋಲ್ಟೇಜ್ ನಲ್ಲಿ ಮಾಡಲಾಗುತ್ತದೆ. ಇದನ್ನು 12 ವೋಲ್ಟ್ ಬ್ಯಾಟರಿಗೆ ನೀಡಲಾಗುತ್ತದೆ).
EV ಯಲ್ಲಿ ರಿಜನರೇಟಿಂಗ್ ಬ್ರೆಕಿಂಗ್ ಎಂಬ ಕಲ್ಪನೆಯನ್ನು ಬಳಸಲಾಗಿರುತ್ತದೆ. (ಈ ಕಲ್ಪನೆಯಲ್ಲಿ ವಾಹನದ ಬ್ರೇಕ್ ಒತ್ತಲ್ಪಟ್ಟಾಗ ವ್ಯರ್ಥವಾಗುವ ಕೈನ್ಯಾಟಿಕ್ ಶಕ್ತಿಯನ್ನು ಬಳಸಲಾಗುತ್ತದೆ). ಇದರಲ್ಲಿ ವಾಹನವು ಆನ್ ಆಗಿರುವಾಗ ಬ್ಯಾಟರಿಯಿಂದ ಮೋಟರ್ ಕಡೆಗೆ ವಿದ್ಯುತ್ ಪ್ರವಾಹವು ಆಗುತ್ತಿರುತ್ತದೆ, ಆಗ ಬ್ರೇಕ್ ಒತ್ತಲ್ಪಟ್ಟಾಗಿ ಇದಕ್ಕೆ ವಿರುದ್ಧವಾದ ಪ್ರಕ್ರಿಯೆಯಾಗಿ ಮೋಟರ್ ನಿಂದ ಬ್ಯಾಟರಿಯೆಡೆಗೆ ವಿದ್ಯುತ್ ಪ್ರವಾಹವು ಪ್ರಾರಂಭಗೊಳ್ಳುತ್ತದೆ. ಇದರಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ರಿಚಾರ್ಜಿಂಗ್ ಆಗುತ್ತಿರುತ್ತದೆ.
ದೂರ, ಚಾರ್ಜಿಂಗ್ ಮತ್ತು ಪ್ರಾರಂಭದಲ್ಲಿರುವ ವಾಹನ ಬೆಲೆ ಇಂತಹ ಒಂದೆರಡು ಅಡಚಣೆಗಳನ್ನು ಬಿಟ್ಟಲ್ಲಿ ನಿಧಾನವಾಗಿ ಎಲ್ಲರ ಒತ್ತು ಖಂಡಿತವಾಗಿಯೂ ಇಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವಲ್ಲಿ ಇರಬಲ್ಲದು. ಆದರೆ ಇದಕ್ಕೋಸ್ಕರ ಸ್ವಲ್ಪ ಕಾಲಾವಧಿಯು ಬೇಕಾಗಬಲ್ಲದು, ಇಂದು ಮಾತ್ರ ಖಂಡಿತ.
 
 
EV ಯಲ್ಲಿರುವ ಬ್ಯಾಟರಿ
EV ಗೆ ಶಕ್ತಿಯನ್ನು ಪೂರೈಸುವ ಬ್ಯಾಟರಿಯೂ ಆ ಯಂತ್ರಣೆಗೆ ತುಂಬಾ ಮಹತ್ವದ ಭಾಗವಾಗಿದೆ, ಆದರೆ ಈ ವಾಹನಗಳ ಬೆಲೆಯೂ ಹೆಚ್ಚು ಇರುವ ಕಾರಣವಾಗಿದೆ. ಹೋಲಿಸಿವುದಾದಲ್ಲಿ ಪ್ರಸ್ತುತ ವಾಹನಗಳಲ್ಲಿ 6 ರಿಂದ 12 ವೋಲ್ಟ್ ಬ್ಯಾಟರಿ ಇರುತ್ತದೆ. ಆದರೆ EV ವಾಹನಗಳಲ್ಲಿರುವ 100 ರಿಂದ 400 ವೋಲ್ಟ್ ನ ಬ್ಯಾಟರಿ ಇರುತ್ತದೆ. ಇದರಿಂದಾಗಿ ಇಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವಾಗ ಎಲ್ಲರಿಗೂ ಕೇವಲ ವಾಹನಗಳ ಬ್ಯಾಟರಿಯ ಸಾಮರ್ಥ್ಯದ ಕುರಿತು ಅನೇಕ ಪ್ರಶ್ನೆಗಳು ಕಾಡುತ್ತವೆ. ಉದಾಹರಣೆ, ಕಂಪನಿಯು ಉಲ್ಲೇಖಿಸಿದಂತೆ ಈ ವಾಹನಗಳು ಪ್ರತ್ಯಕ್ಷವಾಗಿ ಎಷ್ಟು ದೂರದ ತನಕ ಚಲಿಸುತ್ತವೆಯೇ? ಬ್ಯಾಟರಿ ಗೋಸ್ಕರ ಪಾಸ್ಟ್ ಚಾರ್ಜಿಂಗ್ ನ ಸೌಲಭ್ಯ ಇದೆಯೇ, ಅಥವಾ ಬ್ಯಾಟರಿ ಚಾರ್ಜಿಂಗ್ ಮುಗಿದ ನಂತರ ಅದು ತಕ್ಷಣ ಬದಲಾಯಿಸಿ ಸಿಗಬಲ್ಲದೇ, ಚಾರ್ಜಿಂಗ್ ಮಾಡಲು ಸ್ಟೇಶನ್ ಗಳಿವೆಯೇ, ಮುಂತಾದ ಅನೇಕ ಅನುಮಾನಗಳಿರುತ್ತವೆ.

gfdgfs_1  H x W 
 
ಬ್ಯಾಟರಿಯ ಭಾರ ಮತ್ತು ಮಟೀರಿಯಲ್
ಇತ್ತೀಚೆಗೆ ಲಿಥಿಯಮ್ ಆಯರ್ನ್ ನ ಬ್ಯಾಟರಿಯನ್ನು ಬಳಸಲಾಗುತ್ತದೆ. ಈಗ ಅದರಲ್ಲಿ ಲಿಥಿಯಮ್ ಸಲ್ಫರ್, ಲಿಥಿಯಮ್ ಪಾಸ್ಫೇಟ್, ಲಿಥಿಯಮ್ ಪಾಸ್ಫರಸ್ ಈ ತಂತ್ರಜ್ಞಾನವು ಎಷ್ಟು ಕಾರ್ಯಕ್ಷಮತೆಯಿಂದ ಕೂಡಿರಬಲ್ಲದು, ಎಂಬ ಪರೀಕ್ಷೆಗಳು ನಡೆಯುತ್ತಿವೆ. ಬ್ಯಾಟರಿಯ ಕಾರ್ಯಸಾಮರ್ಥ್ಯ ಅದರ ಭಾರ ಮತ್ತು ಅದರಿಂದ ತಯಾರಾಗುವ ಶಕ್ತಿ ಇವುಗಳ ಅನುಪಾತದಲ್ಲಿ ನಿರ್ಧರಿಸಲಾಗುತ್ತದೆ. ತಜ್ಞರ ವಿಚಾರಗಳಂತೆ 2025 ರಲ್ಲಿ EV ಯ ಬೆಲೆ, ಪ್ರಚಲಿತ IC ವಾಹನಗಳಷ್ಟೇ ಇರಬಲ್ಲವು. ಬ್ಯಾಟರಿಯಲ್ಲಿರುವ ಲಿಥಿಯಮ್ ಇದು ಶೇಕಡಾ 100 ರಷ್ಟು ಆಮದು ಮಾಡಲಾಗುವ ಘಟಕವಾಗಿದೆ. ಇದರಿಂದಾಗಿ ಬ್ಯಾಟರಿಯ ಶೇಕಡಾ 100 ರಷ್ಟು ನಿರ್ಮಿತಿಯು ನಮ್ಮ ದೇಶದಲ್ಲಿಯೇ ಪ್ರಾರಂಭಗೊಂಡಿಲ್ಲ. ಬ್ಯಾಟರಿಯ ಅಸೆಂಬ್ಲಿಯನ್ನು ನಮ್ಮಲ್ಲಿ ಮಾಡಲಾಗುತ್ತದೆ. ಲಿಥಿಯಮ್ ಬ್ಯಾಟರಿಯಲ್ಲಿರುವ ಪ್ರಮುಖ ಘಟಕ ಅಂದರೆ ಅದರಲ್ಲಿರುವ ಸೆಲ್. ಆ ಸೆಲ್ ನ ಪ್ಯಾಕೇಜ್ ಮಾಡಿ ಬ್ಯಾಟರಿ ಮೊಡ್ಯುಲ್ ತಯಾರಾಗುತ್ತವೆ. ಅನೇಕ ಮೊಡ್ಯುಲ್ ಗಳನ್ನು ಒಟ್ಟು ಮಾಡಿ ಬ್ಯಾಟರಿಯ ಸೆಟ್ ತಯಾರಾಗುತ್ತದೆ. ಬ್ಯಾಟರಿಯಲ್ಲಿರುವ ಎಲ್ಲ ಸೆಲ್ ಗಳನ್ನು ಆಮದು ಮಾಡಲಾಗುತ್ತದೆ. ಹಲವಾರು ಕಂಪನಿಗಳು ಈ ಸೆಲ್ ಭಾರತದಲ್ಲಿ ತಯಾರಿಸುತ್ತೇವೆ, ಎಂಬುದಾಗಿ ಪ್ರಕಟಿಸಿದ್ದಾರೆ. ಆ ಬ್ಯಾಟರಿಗಳಿಗೋಸ್ಕರ ಒಂದು ವ್ಯವಸ್ಥಾಪನೆಯ ವ್ಯವಸ್ಥೆಯ ಆವಶ್ಯಕತೆ ಇರುತ್ತದೆ. ಅದನ್ನು ನಿರಂತರವಾಗಿ ಮಾನಿಟರಿಂಗ್ (ಸೆಲ್ ನ ಉಷ್ಣಾಂಶ, ಅದರ ವೊಲ್ಟೇಜ್ ಲೆವಲ್) ಮಾಡಬೇಕಾಗುತ್ತದೆ. ವಾಹನಗಳ ಬೆಲೆಯು ಸಾಮಾನ್ಯರ ಕೈಗೆಟಕುವಂತೆ ಆದಾಗ ದೂರದ ಅಂಶವು ಅಷ್ಟೇನು ಮಹತ್ವದ್ದಾಗಿರಲಾರದು. ಆಗ ಗ್ರಾಹಕರು EV ಖರೀದಿಗೆ ಪ್ರಾಧಾನ್ಯತೆಯನ್ನು ನೀಡಬಲ್ಲರು, ಕಾರಣ ಪ್ರತಿಯೊಂದು ಕಿಲೋಮೀಟರ್ ಗೆ ಆಗುವ ಇಂಧನದ ಖರ್ಚಿನ ಪ್ಯಾರಾಮೀಟರ್ ನಲ್ಲಿ EV ಎಂದಿಗೂ ಯೋಗ್ಯವಾಗಬಲ್ಲದು. ಉದಾಹರಣೆ, ಪ್ರಸ್ತುತ ಒಂದು ಬಾರಿ ಚಾರ್ಜಿಂಗ್ ಮಾಡಿದ ನಂತರ ಪ್ರವಾಸ ಮಾಡಲಾಗುವ ದೂರ ಮತ್ತು ಅದರ ಖರ್ಚಿನ ಕುರಿತು ವಿಚಾರ ಮಾಡಿದಲ್ಲಿ EV ಆ ಖರ್ಚು ಸುಮಾರು ಒಂದು ರೂಪಾಯಿ ಪ್ರತಿ ಕಿಲೋಮೀಟರ್ ಇರಬಲ್ಲದು. ಅದೇ ಖರ್ಚು ಪ್ರಸ್ತುತ 4 ರಿಂದ 5 ರೂಪಾಯಿಗಳಷ್ಟು ಇರುತ್ತದೆ.
 
 
ಬ್ಯಾಟರಿಯ ಸಾಮರ್ಥ್ಯ ಮತ್ತು ರೀಚಾರ್ಜಿಂಗ್
EV ಯಲ್ಲಿ ಎಲ್ಲಕ್ಕಿಂತಲೂ ತುಂಬಾ ಹೆಚ್ಚಾಗಿ ತೊಂದರೆಯನ್ನು ಉಂಟುಮಾಡುವ ಪ್ರಶ್ನೆ ಅಂದರೆ ಒಂದು ಬಾರಿ ಚಾರ್ಜಿಂಗ್ ಮಾಡಿದ ನಂತರ ಆ ವಾಹನವು ಎಷ್ಟು ಕಿಲೋಮೀಟರ್ ದೂರದ ತನಕ ಹೋಗಬಲ್ಲದು ಮತ್ತು ಚಾರ್ಜ್ ಮುಗಿಯುವ ಮುಂಚೆ ಆ ಬ್ಯಾಟರಿಯ ರೀಚಾರ್ಜಿಂಗ್ ಮಾಡುವ ವ್ಯವಸ್ಥೆ ಇದೆಯೇ? ಎಂಬ ವಿಚಾರವನ್ನು ಮಾಡಿದಲ್ಲಿ ಜೈವ ಇಂಧನದಲ್ಲಿ ನಡೆಯುವ ವಾಹನಗಳಿಗೆ ಎಲ್ಲಿ ಬೇಕಾದಲ್ಲಿ ಇಂಧನವನ್ನು ತುಂಬಿಸಿ ವಾಹನದಲ್ಲಿ ಮುಂದಿನ ಪ್ರವಾಸ ಮಾಡುವುದು ಸಾಧ್ಯವಿದೆ, ಆ ರೀತಿಯ ಸೌಲಭ್ಯವು ಬ್ಯಾಟರಿ ಚಾರ್ಜಿಂಗ್ ಕುರಿತಾದ ಸೌಲಭ್ಯವು ಸದ್ಯಕ್ಕಂತೂ ಲಭ್ಯವಿಲ್ಲ. ಅಲ್ಲಲ್ಲಿ ಚಾರ್ಜಿಂಗ್ ಸ್ಟೇಶನ್ ಗಳನ್ನು ಪ್ರಾರಂಭಿಸುವಲ್ಲಿ ಸರ್ಕಾರದ ಹಂತದಲ್ಲಿ ಪ್ರಯತ್ನವನ್ನು ಮಾಡಲಾಗುತ್ತಿದೆ. ಸರ್ಕಾರವು ಇದರ ಕುರಿತಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹಿಸಲು ಪ್ರತಿ 25 ಕಿಲೋಮೀಟರ್ ದೂರದಲ್ಲಿ ಚಾರ್ಜಿಂಗ್ ಸ್ಟೇಶನ್ ಗಳನ್ನು ನಿರ್ಮಿಸಲಾಗುತ್ತದೆ. 2026 ರ ತನಕ ಸಂಪೂರ್ಣ ಭಾರತದ ದೇಶದಲ್ಲಿ 4 ಲಕ್ಷ DC ಚಾರ್ಜರ್ ಗಳನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ವಾಹನಗಳನ್ನು ಉತ್ಪಾದಿಸುವ ಕಂಪನಿಗಳೂ ಬ್ಯಾಟರಿ ಚಾರ್ಜಿಂಗ್ ಗೋಸ್ಕರ ಬೇಕಾಗಿರುವ ನಿಯತಾಂಕಗಳನ್ನು ಕಾರ್ಯಗತಗೊಳಿಸುವುದು ಅತ್ಯಾವಶ್ಯಕವಾಗಿದೆ. ಅಂದರೆ ಎಲ್ಲ ರೀತಿಯ ವಾಹನಗಳ ಬ್ಯಾಟರಿಗಳು ಉಪಲಬ್ಧವಿರುವ ಚಾರ್ಜಿಂಗ್ ಸ್ಟೇಶನ್ ನಲ್ಲಿ ರೀಚಾರ್ಜ್ ಮಾಡಲು ಬರಲೇಬೇಕು. ಇದು ಮಾತ್ರ ಆಗುತ್ತಿಲ್ಲ. ಪ್ರತಿಯೊಂದು ಉತ್ಪಾದಕರ ಚಾರ್ಜಿಂಗ್ ವ್ಯವಸ್ಥೆಯು ಬೇರೆಬೇರೆ ಇರುತ್ತದೆ. ಭಾರತದಲ್ಲಿ ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್ (CCS) ಪ್ರಮುಖವಾಗಿ ಬಳಸಲಾಗುತ್ತದೆ. ಹಾಗೆಯೇ AC ಚಾರ್ಜಿಂಗ್, DC ಚಾರ್ಜಿಂಗ್ ನಲ್ಲಿ ವ್ಯತ್ಯಾಸವಿದೆ. ಅಂದರೆ ಗೃಹಬಳಕೆಯ ಗ್ರಾಹಕರು DC ಚಾರ್ಜಿಂಗ್ ವ್ಯವಸ್ಥೆಯನ್ನು ತಮ್ಮ ಮನೆಗೆ ಒಯ್ಯಲಾರರು. ಇದರಿಂದಾಗಿ DC ಚಾರ್ಜರ್ ನಿಂದ ಅವರಿಗೆ ಯಾವುದೇ ರೀತಿಯ ಉಪಯೋಗವಿಲ್ಲ. ಒಟ್ಟಾರೆ ರೀಚಾರ್ಜಿಂಗ್ ವ್ಯವಸ್ಥೆಯ ಪೂರ್ಣ ಇಕೋಸಿಸ್ಟಮ್ ಅಭಿವೃದ್ಧಿಯಾಗುವ ಆವಶ್ಯಕತೆ ಇದೆ. ಈ ಇಕೋಸಿಸ್ಟಮ್ ನಲ್ಲಿ ಯಾವ ಪ್ರಮಾಣದಲ್ಲಿ ಚಾರ್ಜಿಂಗ್ ನ ಬೇಡಿಕೆಯು ಹೆಚ್ಚಾಗುತ್ತದೆಯೋ, ಅದೇ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯ ಉಪಲಬ್ಧತೆಯು ಇರುವುದು ಭಾರತದಂತಹ ಪ್ರಗತಿಪರ ದೇಶದಲ್ಲಿ ಒಂದು ಸವಾಲಾಗಿದೆ.
ಇದಕ್ಕೋಸ್ಕರ ಬ್ಯಾಟರಿ ಸ್ವಾಪಿಂಗ್ ನ ಪರ್ಯಾಯವು ಶೀಘ್ರವಾಗಿ ಚರ್ಚಿಸಲಾಗುತ್ತಿದೆ. ಅಂದರೆ ಯಾವ ರೀತಿಯಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಹೋಗಿ ಪೆಟ್ರೋಲ್ ತುಂಬಿಸುತ್ತೇವೆಯೋ, ಅದೇ ರೀತಿಯಲ್ಲಿ ಚಾರ್ಜಿಂಗ್ ಸ್ಟೇಶನ್ ಗೆ ಹೋಗಿ ಬ್ಯಾಟರಿ ಕೊಟ್ಟು ಸಂಪೂರ್ಣವಾಗಿ ಚಾರ್ಜ್ ಮಾಡಿರುವ ಇನ್ನೊಂದು ಬ್ಯಾಟರಿಯನ್ನು ವಾಹನದಲ್ಲಿ ಅಳವಡಿಸುವುದು. ಇತ್ತೀಚೆಗೆ ಯುರೋಪ್ ದೇಶಗಳಲ್ಲಿ ಈ ಸೌಲಭ್ಯವನ್ನು ನೀಡಲು ಪ್ರಾರಂಭಿಸಲಾಗಿದೆ.
 
 
ಉತ್ಪಾದನೆಯ ಕ್ಷೇತ್ರದಲ್ಲಾಗುವ ಪರಿಣಾಮ
EV ಯಲ್ಲಿರುವ ಹೆಚ್ಚಿನ ಯಂತ್ರಭಾಗಗಳ ದುಬಾರಿಯಾಗಿದ್ದು ಅವುಗಳನ್ನು ಆಮದು ಮಾಡಲಾಗುತ್ತದೆ. ಈ ಯಂತ್ರಭಾಗಗಳನ್ನು ಭಾರತದಲ್ಲಿ ತಯಾರಿಸುವಲ್ಲಿ ಬಹುದೊಡ್ಡ ಸುವರ್ಣಾವಕಾಶ ಭಾರತೀಯ ಉದ್ಯಮಿಗಳಿಗೆ ಸಿಗುತ್ತಿದೆ. EV ಯಲ್ಲಿರುವ ಬ್ಯಾಟರಿಯಂತೆ ಭಾಗಗಳ ಪುರರ್ಬಳಕೆಯನ್ನು ಮಾಡುವಂತಹ ತಂತ್ರಜ್ಞಾನವು ಅಭಿವೃದ್ಧಿಯಾದಂತೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ನಿರ್ಮಾಣವಾಗಬಲ್ಲವು. ವಾಹನೋದ್ಯೋಗದಲ್ಲಿ ಇದಕ್ಕೆ ಬೇಕಾಗುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಆವಶ್ಯಕತೆ ಇದೆ. ಇದಕ್ಕೋಸ್ಕರ ವಿವಿಧ ಸಾಮಗ್ರಿಗಳು ಬೇಕಾಗಿವೆ. ಇದರ ಕುರಿತಾಗಿ ಸಂಶೋಧನೆಯನ್ನು ಮಾಡಬೇಕು. ಹಾಗೆಯೇ ಮಾನವ ಸಂಪನ್ಮೂಲಗಳ ಸಿದ್ಧತೆ ಮತ್ತು ಪೂರೈಕೆಯ ಸರಪಳಿಯನ್ನು (ಸಪ್ಲೈ ಚೈನ್) ವಿಕಸಿಸಬೇಕು. ವಾಹನೋದ್ಯೋಗದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು,
ಡೀಲರ್ ಗೆ ಕೂಡಾ ಎಲ್ಲ ರೀತಿಯ ವಿಚಾರಗಳನ್ನು ಮಾಡಿ ಅವರಿಗೂ ತರಬೇತಿಯನ್ನು ನೀಡಬೇಕು. ನುರಿತ ಸಿಬ್ಬಂಧಿಯನ್ನು ಅಣಿಗೊಳಿಸುವ ಕೆಲಸವಂತೂ ಬಹುದೊಡ್ಡದಾಗಿದೆ. ಇದಕ್ಕೋಸ್ಕರ ನಾವು ವಿವಿಧ ಸ್ತರಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದೇವೆ. ಭಾರತದಂತಹ ದೇಶದಲ್ಲಿ ಮುಂದಿನ ಎರಡು ದಶಕಗಳಲ್ಲಾದರೂ IC ಇಂಜಿನ್ ಮತ್ತು EV ಮಶಿನ್ ಇವೆರಡೂ ಕೈಗೂಡಿಸಿ ಮುನ್ನುಗ್ಗಲಿವೆ. ಆದರೆ ಇಲೆಕ್ಟ್ರಿಕಲ್ ವಾಹನಗಳ ಲಾಭವು ಮನದಟ್ಟಾದಂತೆ ಬ್ಯಾಟರಿಯ ಬೆಲೆಯೂ ಕಡಿಮೆಯಾಗಬಲ್ಲದು. ಅದರಲ್ಲಿರುವ ತಂತ್ರಜ್ಞಾನವು ಬದಲಾಗಬಲ್ಲದು, ಇದಕ್ಕೆ ಅನುಸಾರವಾಗಿ ಇಲೆಕ್ಟ್ರಿಕಲ್ ವಾಹನಗಳಿಗೆ ಇನ್ನಷ್ಟು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.
ಕಳೆದ ವರ್ಷದಲ್ಲಿ ನಮ್ಮಲ್ಲಿ ಇಲೆಕ್ಟ್ರಿಕಲ್ ವಾಹನಗಳ ಖರೀದಿ, ವಿಶೇಷವಾಗಿ ನಾವು ನೆಕ್ಸಾನ್ EV ಪ್ರಸ್ತುತ ಪಡಿಸಿದ ನಂತರ ಪ್ರತಿ ತಿಂಗಳಿಗೆ ನಿರಂತರವಾಗಿ ಗ್ರಾಹಕರ ಬೇಡಿಕೆಯಲ್ಲಿ ಹೆಚ್ಚಳ ಆಗುತ್ತಿರುವುದು ಗಮನಾರ್ಹ ಅಂಶವಾಗಿದೆ. ಮಾರ್ಚ್ ತಿಂಗಳ ತನಕದ ಒಂದು ವರ್ಷದ ಕಾಲಾವಧಿಯಲ್ಲಿ ನೆಕ್ಸಾನ್ EV ಯ ವಾಹನಗಳ ಮಾರಾಟದಲ್ಲಿ ಗಮನಾರ್ಹವಾದ ಹೆಚ್ಚಳವಾಯಿತು. ನೆಕ್ಸಾನ್ EV ಯ ಜನಪ್ರಿಯತೆ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಇದನ್ನು ಗಮನಿಸಿ ಟಾಟಾ ಮೋಟರ್ಸ್ ಇವರೂ ಉತ್ಪಾದನೆಯ ಸಾಮರ್ಥ್ಯವನ್ನು ನಿಧಾನವಾಗಿ ಹೆಚ್ಚಿಸಿದ್ದಾರೆ. ಮಾರುಕಟ್ಟೆಯಲ್ಲಿ ಈ ವಾಹನಗಳ ಬೇಡಿಕೆಯು ನಿಧಾನವಾಗಿ ಹೆಚ್ಚುತ್ತಿದೆ, ಇದು ಮಾತ್ರ ಖಂಡಿತ. ಭವಿಷ್ಯತ್ಕಾಲದಲ್ಲಿ ಟಾಟಾ ಮೋಟರ್ಸ್ ಇದೇ ರೀತಿಯಲ್ಲಿ ಇಲೆಕ್ಟ್ರಿಕಲ್ ವಾಹನಗಳ ನಿರ್ಮಿತಿಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಇಕೋಸಿಸ್ಟಮ್ ನ ಅಭಿವೃದ್ಧಿಯ ಕೆಲಸವನ್ನು ಕೈಗೊಳ್ಳಲಿದ್ದಾರೆ.
 
 
ವಾಹನೋದ್ಯೋಗದಲ್ಲಿ ಆಗುತ್ತಿರುವ ಕ್ರಾಂತಿಕಾರಿಯಾದ ಬದಲಾವಣೆಗಳಿಂದಾಗಿ ದೊಡ್ಡ ಉದ್ಯಮಗಳೊಂದಿಗೆ ಲಘು ಮಧ್ಯಮ ಉದ್ಯಮಿಗಳಿಗೂ ತಮ್ಮ ಉತ್ಪಾದನೆಯ ಪ್ರಣಾಳಿಕೆಯಲ್ಲಿ ಮತ್ತು ವ್ಯವಸಾಯದ ನೀತಿಗಳಲ್ಲಿ ಖಂಡಿತವಾಗಿಯೂ ಅತ್ಯಾವಶ್ಯಕವಾದ ಬದಲಾವಣೆಗಳನ್ನು ಮಾಡಬೇಕಾಗಬಹುದು. ತಾಂತ್ರಿಕ ಶಿಕ್ಷಣದ ಕ್ಷೇತ್ರದಲ್ಲಿಯೂ ಈ ತಂತ್ರಜ್ಞಾನವನ್ನು ಅರಿತು ಅದರಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್, ಟೆಕ್ನಿಶಿಯನ್ ಇವರನ್ನು ಸನ್ನದ್ಧರನ್ನಾಗಿ ಮಾಡುವ ಸವಾಲಂತೂ ಎಲ್ಲರ ಮುಂದಿದೆ. ಇಂದಿನ ತನಕ ಮಾಡಲಾಗಿರುವ ಅನೇಕ ಬದಲಾವಣೆಗಳನ್ನು ನಾವು ಹೇಗೆ ನೋಡಿದೆವೋ, ಹಾಗೆಯೇ ಈ ರೀತಿಯ ಬದಲಾವಣೆಗಳನ್ನೂ ಈ ಮುಂದಿನ ಕಾಲಾವಧಿಯಲ್ಲಿ ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಒಂದು ಪಾಲಾಗಿ ಮುಂದೆ ಬರಲಿವೆ, ಇದು ಮಾತ್ರ ನಿಜವಾದ ಅಂಶವೇ ಸರಿ.
 
 
 ಭಗವಾನ್ ಭೋಸಲೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಟಾಟಾ ಮೋಟರ್ಸ್ ಲಿ.
ನಲ್ಲಿ ಅವರು ಡೆಪ್ಯುಟಿ ಜನರಲ್ ಮ್ಯಾನೆಜರ್ ಈ ಹುದ್ದೆಯಲ್ಲಿ ಕಾರ್ಯನಿರತರಾಗಿದ್ದಾರೆ.
ವಾಹನಗಳ ನಿರ್ಮಿತಿ ಕ್ಷೇತ್ರದಲ್ಲಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅವರು ನೆಕ್ಸಾನ್ EV ಯ ನಿರ್ಮಿತಿಯ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
7276099293
@@AUTHORINFO_V1@@