
ಭಾರತ ಸರ್ಕಾರದ ಭಾಷೆಗಳ ಕುರಿತಾದ ಹೊಸ ನೀತಿಗಳಿಗೆ ಅನುಸಾರವಾಗಿ ಎಲ್ಲ ರೀತಿಯ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಮ್ಮ ದೇಶದ ಸ್ಥಳೀಯ ಭಾಷೆಗಳಲ್ಲಿ ಎಲ್ಲರಿಗೂ ನೀಡುವಲ್ಲಿ ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ. ಉದ್ಯಮ ಪ್ರಕಾಶನವು ಅದೇ ಮಾರ್ಗದಲ್ಲಿ ಕಳೆದ ಐದು ವರ್ಷಗಳ ಕಾಲಾವಧಿಯಲ್ಲಿ ಮುಂದುವರಿಯುತ್ತಿದೆ. ಪರಿಪೂರ್ಣ ತಾಂತ್ರಿಕ ವಿಷಯಗಳಿರುವ ಮಾಸ ಪತ್ರಿಕೆ ಪ್ರಾರಂಭಿಸುವುದು, ಖಂಡಿತವಾಗಿಯೂ ಸಾಹಸದ ಕೆಲಸವೇ ಸರಿ, ಎಂಬುದಾಗಿ ಅನೇಕರು ಪ್ರಾರಂಭದಲ್ಲಿ ನಮ್ಮೊಂದಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಶಾಪ್ ಫ್ಲೋರ್ ನಲ್ಲಿರುವ ವ್ಯಕ್ತಿಗೆ ಅವರ ಭಾಷೆಯಲ್ಲಿ ಇಂಜಿನಿಯರಿಂಗ್ ಕುರಿತಾದ ಜ್ಞಾನ ಮತ್ತು ತಿಳುವಳಿಕೆಯನ್ನು ನೀಡುವ ಗುರಿಯಿಂದಾಗಿ ಪ್ರೇರಣೆಯನ್ನು ಮತ್ತು ಹುಮ್ಮಸ್ಸನ್ನು ಪಡೆದಿರುವ ‘ಉದ್ಯಮ’ದ ತಂಡಕ್ಕೆ ಈ ಸಂಪೂರ್ಣ ಪ್ರವಾಸದಲ್ಲಿ ಅತ್ಯಮೂಲ್ಯ ಸಹಾಯವು ಲಭ್ಯವಾಯಿತು. ಅಲ್ಲದೇ ಇಂದು ಕರ್ನಾಟಕದಲ್ಲಿ ಹೆಚ್ಚಿನ ಔದ್ಯೋಗಿಕ ಕ್ಷೇತ್ರಗಳಲ್ಲಿ ‘ಲೋಹಕಾರ್ಯ’ ಈ ಮಾಸ ಪತ್ರಿಕೆ ತಲುಪಿದೆ. ಈ ಪ್ರವಾಸದಲ್ಲಿ ಅನೇಕ ಅಡೆತಡೆ, ಏರಿಳಿತಗಳನ್ನು ನಾವು ಎದುರಿಸಿದ್ದೇವೆ ಮತ್ತು ಅನುಭವಿಸಿದ್ದೇವೆ. ಆದರೆ ಓದುಗರಿಂದ ನಮಗೆ ಸಿಗುತ್ತಿರುವ ಹುಮ್ಮಸ್ಸುನಿಂದ ಎಲ್ಲ ಅಡೆತಡೆಗಳನ್ನು ಸಹಜವಾಗಿ ದಾಟುವುದು ಸುಲಭವಾಯಿತು. ಮರಾಠಿ ಭಾಷೆಯಲ್ಲಿ ಮೊದಲಾಗಿ ಪ್ರಾರಂಭಿಸಲಾದ ಈ ಮಾಸ ಪತ್ರಿಕೆ ಕನ್ನಡ, ಹಿಂದಿ, ಗುಜರಾತಿ ಭಾಷೆಗಳಲ್ಲಿ ಇನ್ನಷ್ಟು ಹುಮ್ಮಸ್ಸಿನಿಂದ ಮುನ್ನಡೆಯನ್ನು ಸಾಗಿಸಿದ್ದು, ಬೇಗನೆ ತಮಿಳು ಭಾಷೆಯಲ್ಲಿ ಈ ಮಾಸ ಪತ್ರಿಕೆಯನ್ನು ನೀಡುವ ಪ್ರಯತ್ನವು ಸಾಗುತ್ತಿದೆ.
ಈ ರೀತಿಯಲ್ಲಿ ಮುನ್ನಡೆಯನ್ನು ಸಾಧಿಸುತ್ತಿರುವಾಗ ಉದ್ಯಮಿಗಳಿಗೆ ಶಾಪ್ ಫ್ಲೋರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ತಂತ್ರಜ್ಞರನ್ನು ಭೇಟಿ ಮಾಡಿ ಅವರೊಂದಿಗೆ ಸಂಭಾಷಣೆಯನ್ನು ಮಾಡುವ ಅವಕಾಶವು ಸಿಗುತ್ತಿತ್ತು. ವಿಶೇಷವಾಗಿ ಲಘು, ಮಧ್ಯಮ ಉದ್ಯಮಗಳಲ್ಲಿ ಎಲ್ಲರೂ ತುಂಬಾ ಅಡಚಣೆಗಳನ್ನು ಎದುರಿಸುತ್ತಿರುವಾಗ ಪ್ರತಿ ಬಾರಿ ಇಂತಹ ಅಡಚಣೆಗಳನ್ನು ಎದುರಿಸಿ ಮುನ್ನಡೆಯನ್ನು ಹೇಗೆ ಸಾಧಿಸಬಹುದು, ಎಂಬ ಸಕಾರಾತ್ಮಕವಾದ ದೃಷ್ಟಿಕೋನದಿಂದ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಿರುವುದು ಗಮನಕ್ಕೆ ಬರುತ್ತಿದೆ. ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ರೋಗದ ಆಪತ್ತಿನಿಂದ ವ್ಯರ್ಥವಾದ 3-4 ತಿಂಗಳುಗಳು ಸಂಪೂರ್ಣ ಹಣಕಾಸು ವರ್ಷದಲ್ಲಿ ಯಾವ ಪರಿಣಾಮವನ್ನು ಬೀರಿವೆ, ಎಂಬುದನ್ನು ತಿಳಿದುಕೊಳ್ಳುವಲ್ಲಿ ಎಲ್ಲರೂ ವಿಚಾರ ಮಾಡುತ್ತಿದ್ದಾರೆ. ಬೃಹತ್ OEM ನಿಂದ ಚಿಕ್ಕ-ಪುಟ್ಟ ಜಾಬ್ ಶಾಪ್ ಇರುವ ಉದ್ಯಮಿಗಳ ತನಕ ಎಲ್ಲರೂ ನಿರಂತರವಾಗಿ ಶ್ರಮಿಸಿ ಮಾಡಿ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಅನೇಕರು ನಿಗದಿತ ಗುರಿಯನ್ನು ಪೂರ್ತಿಗೊಳಿಸಿ ಹೆಚ್ಚುವರಿ ವ್ಯವಸಾಯವನ್ನು ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂಬರುವ ವರ್ಷದಲ್ಲಿ ಒಳ್ಳೆಯ ಪ್ರತಿಫಲ ಪಡೆಯಲು ಇನ್ನಷ್ಟು ಹುಮ್ಮಸ್ಸಿನಿಂದ ತಮ್ಮಕೆಲಸದಲ್ಲಿ ತೊಡಗಿದ್ದಾರೆ. ಆದರೆ ದುರ್ದೈವವಶಾತ್ ಸಾಂಕ್ರಾಮಿಕ ರೋಗವು ಮತ್ತೆ ತಲೆ ಎತ್ತಿದೆ. ಮಶಿನಿಂಗ್ ಕ್ಷೇತ್ರದ ಪ್ರಗತಿಗೆ ಬೃಹತ್ ಪ್ರಮಾಣದಲ್ಲಿ ವಾಹನೋದ್ಯೋಗವು ಮಾರ್ಚ್ 2021 ರ ಹೋಲಿಕೆಯಲ್ಲಿ ಎಪ್ರಿಲ್ 2021 ರಲ್ಲಿ ತುಂಬಾ ಕಡಿಮೆ ವ್ಯವಹಾರಗಳನ್ನು ಮಾಡಿರುವ ಸ್ಥಿತಿಯು ಗಮನಕ್ಕೆ ಬರುತ್ತಿದೆ. ಒಂದೆಡೆ ಚೀನಾ ದೇಶದೊಂದಿಗಿನ ಸ್ಪರ್ಧೆಯನ್ನು ಎದುರಿಸುತ್ತಿರುವಾಗ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪಾದನೆಯ ಮುನ್ನಡೆಯನ್ನು ಸಾಧಿಸಿರುವ ದೇಶವೆಂದು ಸ್ಥಾನವನ್ನು ಗಿಟ್ಟಿಸಲು ಹುಮ್ಮಸ್ಸನ್ನು ಹೊಂದಿರುವ ಭಾರತೀಯ ಉದ್ಯಮಿಗಳಿಗೆ ಇಂದು ಅವರಿಗೆ ಅವರ ಸಾಮರ್ಥ್ಯಕ್ಕೆ ಸರ್ಕಾರಿ ನೀತಿಗಳಿಂದ ಪೂರಕವಾದ ಸಹಕಾರ ಲಭಿಸುವುದು ಅಗತ್ಯವಾಗಿದೆ. ಕೇವಲ ಸಾಲದ ಬಟವಾಡೆ ಮಾಡುವ ನೀತಿಯನ್ನು ಪ್ರಕಟಿಸಿದ್ದು ಸಾಲದು, ಉದ್ಯಮಗಳ ಹೆಚ್ಚಳಕ್ಕೆ ಬೇಕಾಗುವ ಮೂಲಭೂತ ಸಂಪನ್ಮೂಲ, ವಿದ್ಯುತ್, ಜಮೀನು ಮತ್ತು ನೀರು ಇವುಗಳ ಉಪಲಬ್ಧತೆಯಲ್ಲಿ ತುಂಬಾ ಹೆಚ್ಚು ಕೆಲಸವನ್ನು ಮಾಡಬೇಕಾದ ಆವಶ್ಯಕತೆ ಇದೆ. ಒಂದೆಡೆ ಇಲೆಕ್ಟ್ರಿಕ್ ವಾಹನಗಳಿಗೆ ಪೂರಕವಾದ ನೀತಿಗಳನ್ನು ಪ್ರಸ್ತುತ ಪಡಿಸುತ್ತಿರುವಾಗ ವಿದ್ಯುತ್ ನಿರ್ಮಿತಿಗೆ ಪರ್ಯಾಯವಿರುವ ಮೂಲಗಳನ್ನು ದೃಢಪಡಿಸುವುದು ಮತ್ತು ಅದಕ್ಕೆ ಪೂರಕ ಸಪ್ಲೈ ಚೈನ್ ಸ್ಥಳೀಯ ಹಂತದಲ್ಲಿ ಹೇಗೆ ನಿರ್ಮಿಸಬಲ್ಲೆವು ಎಂಬಿತ್ಯಾದಿ ಅಂಶಗಳ ಕುರಿತು ಪ್ರಯತ್ನಿಸುವುದು ಅತ್ಯಾವಶ್ಯಕ. ಕಾರ್ಯಕುಶಲತೆ ಮತ್ತು ಬುದ್ಧಿವಂತಿಕೆ ಆಧಾರವಾಗಿಟ್ಟುಕೊಂಡು ಭಾರತೀಯ ಉದ್ಯಮಿಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಎದುರಿಸುತ್ತಿರುವ ಅಡಚಣೆಗಳನ್ನು ನೀಗಿಸುವುದು ಸಾಧ್ಯ. ಇಂತಹ ಪ್ರಯತ್ನಕ್ಕೆ ಪೂರಕವಾದ ಮಾಹಿತಿಯನ್ನು ನೀಡುವಲ್ಲಿ ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ‘ಲೋಹಕಾರ್ಯ’ದ ಈ ಸಂಚಿಕೆಯಲ್ಲಿ ಇಲೆಕ್ಟ್ರಿಕ್ ವಾಹನಗಳು ಮತ್ತು ಅದರಿಂದ ಬದಲಾಗುತ್ತಿರುವ ಉದ್ಯಮಗಳ ಕುರಿತು ಚುಟುಕಾದ ಪರಿಚಯವನ್ನು ನೀಡುತ್ತಿದ್ದೇವೆ. ಚಿಕ್ಕ ಯಂತ್ರಭಾಗಗಳು ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುವ ಇಂಪ್ಲಾಂಟ್ಸ್ ಇವುಗಳ ಉತ್ಪಾದನೆಯಲ್ಲಿ ನಿಖರತೆಯನ್ನು ನೀಡುವ ತಂತ್ರಜ್ಞಾನದ ಕುರಿತಾದ ಲೇಖನವು ತಮಗೆ ಖಂಡಿತವಾಗಿಯೂ ಉಪಯುಕ್ತವಾಗಬಲ್ಲದು. ಡ್ರಿಲ್ಲಿಂಗ್ ಮತ್ತು ಬೋರಿಂಗ್ ಈ ಪ್ರಕ್ರಿಯೆಯನ್ನು ಸಿ.ಎನ್.ಸಿ. ಟರ್ನಿಂಗ್ ಸೆಂಟರ್ ನಲ್ಲಿ ನಿರ್ವಹಿಸುತ್ತಿರುವಾಗ ಗಮನದಲ್ಲಿ ಇಡಬೇಕಾದ ಸೂಕ್ಷ್ಮ ಅಂಶಗಳನ್ನು ತಿಳಿಸುವ ಲೇಖನವು, ನೇರವಾಗಿ ಕಾರ್ಯಾಚರಣೆಯಲ್ಲಿ ಸಹಕರಿಸಬಲ್ಲವು, ಎಂಬ ಆಪೇಕ್ಷೆಯನ್ನು ವ್ಯಕ್ತಪಡಿಸುತ್ತೇವೆ. ಇಂಡಸ್ಟ್ರಿ 4.0 ಮತ್ತು IoT, ಆರ್ಥಿಕ ನಿಯೋಜನೆ, ಸಿ.ಎನ್.ಸಿ. ಪ್ರೊಗ್ರಾಮಿಂಗ್ ಈ ಲೇಖಮಾಲೆಯಲ್ಲಿ ತಮಗೆ ಇನ್ನಷ್ಟು ಜ್ಞಾನವು ಲಭಿಸಬಲ್ಲದು. ಮುಂಬರುವ ಸವಾಲುಗಳನ್ನು ಎದುರಿಸಲು ಎಲ್ಲರೂ ತಮ್ಮ ಮತ್ತು ತಮ್ಮ ಕುಟುಂಬದವರ ಮುತುವರ್ಜಿಯನ್ನು ಸೂಕ್ತ ರೀತಿಯಲ್ಲಿ ವಹಿಸಬೇಕು, ಎಂಬುದನ್ನು ಕೋರುತ್ತೇವೆ.
ದೀಪಕ ದೇವಧರ