ಸಿ.ಎನ್.ಸಿ. ಟರ್ನಿಂಗ್ ಸೆಂಟರ್ : ಹಾರಿಝಾಂಟಲ್ ಮತ್ತು ವರ್ಟಿಕಲ್

@@NEWS_SUBHEADLINE_BLOCK@@

Lohkarya - Udyam Prakashan    06-May-2021   
Total Views |

1_1  H x W: 0 x
 
ಟರ್ನಿಂಗ್ ಸೆಂಟರ್ ನ್ನು ಅನೇಕ ಸಿಲಿಂಡ್ರಿಕಲ್ ಆಕಾರದ ಕಾರ್ಯವಸ್ತುಗಳ ಯಂತ್ರಣೆಗೋಸ್ಕರ ಬಳಸಲಾಗುತ್ತದೆ, ಎಂಬುದು ಎಲ್ಲರಿಗೂ ತಿಳಿದ ಅಂಶವಾಗಿದೆ. ಅನೇಕ ಗಾತ್ರಗಳಿಗೆ, ಮಟೀರಿಯಲ್, ಭಾರ, ಉದ್ದ ಮತ್ತು ವ್ಯಾಸವಿರುವ ಯಂತ್ರಭಾಗಗಳ ವಿವಿಧ ಕೆಲಸಗಳಿಗೋಸ್ಕರ ಬಳಸಲಾಗುತ್ತದೆ. ಅದರಿಂದ ಉಚ್ಚಮಟ್ಟದ ಕಾರ್ಯಸಾಮರ್ಥ್ಯ ಮತ್ತು ದೀರ್ಘ ಬಾಳಿಕೆಯನ್ನು ಪಡೆಯುವಲ್ಲಿ ಇನ್ನಿತರ ಅನೇಕ ರೀತಿಯ ಗುಣಮಟ್ಟವಿರುವ ಬೇಡಿಕೆಗಳನ್ನೂ ಪೂರ್ತಿಗೊಳಿಸುವುದು ಅತ್ಯಾವಶ್ಯಕವಾಗಿರುತ್ತದೆ. ತಾಂತ್ರಿಕ ದೃಷ್ಟಿಯಲ್ಲಿ ಈ ಕಾರ್ಯವಸ್ತುಗಳಿಗೆ ಯಂತ್ರಣೆಯನ್ನು ಮಾಡಲು ಅನೇಕ ವಿಧದ ಸಾಮರ್ಥ್ಯವಿರುವ ಮಶಿನ್ ಗಳು ಮತ್ತು ಹೆಚ್ಚುವರಿ ಉಪಸಾಧನಗಳು ಅಗತ್ಯದ್ದಾಗಿವೆ. ಉದಾಹರಣೆ, ಕಾರ್ಯವಸ್ತುವನ್ನು ಹಿಡಿಯುವ ಸಾಮಗ್ರಿಗಳು (ಟೂಲ್ ಹೋಲ್ಡರ್ಸ್), ಟೇಲ್ ಸ್ಟಾಕ್ ಮತ್ತು ಸ್ಟೆಡಿ ರೆಸ್ಟ್. ಇದರ ಹೊರತಾಗಿ ಗುಣಮಟ್ಟ ಮತ್ತು ಸುರಕ್ಷೆಯನ್ನು ನಿರ್ಧರಿಸಲು ಹಲವಾರು ಇನ್ ಪುಟ್ ಮತ್ತು ಔಟ್ ಪುಟ್ ಗಳ ಘಟಕಗಳಿಗೆ ವರ್ಕ್ ಪ್ರೋಬ್ ಮತ್ತು ಟೂಲ್ ಪ್ರೋಬ್ ಇವುಗಳ ಅಗತ್ಯವಿರುತ್ತದೆ.
 

2_1  H x W: 0 x 
 
ಸೂಕ್ತವಾದ ಟರ್ನಿಂಗ್ ಸೆಂಟರ್ ನ ಆಯ್ಕೆಯನ್ನು ಮಾಡುವಲ್ಲಿ ಉಪಯುಕ್ತವಾಗಿರುವ ಕೆಲವು ಅಂಶಗಳನ್ನು ಈ ಲೇಖನದಲ್ಲಿ ವಿಸ್ತಾರವಾಗಿ ನೀಡಲಾಗಿದೆ.
• ಹಾರಿಝಾಂಟಲ್ ಮತ್ತು ವರ್ಟಿಕಲ್ ಟರ್ನಿಂಗ್ ಸೆಂಟರ್ ನ ರಚನೆಯಲ್ಲಿರುವ ಪ್ರಮುಖ ಅಂಶಗಳು.
• ಉತ್ಕೃಷ್ಟ ಫಲಿತಾಂಶವನ್ನು ನೀಡುವ ಕೆಲಸಗಳು. (ಆಪರೇಶನ್ಸ್)
• ಹಾರಿಝಾಂಟಲ್ ಮತ್ತು ವರ್ಟಿಕಲ್ ಟರ್ನಿಂಗ್ ಸೆಂಟರ್ ನಲ್ಲಿರುವ ಪ್ರತಿಯೊಂದು ಯಂತ್ರಭಾಗದ ಬೆಲೆಗೆ ಸಂಬಂಧಪಟ್ಟ ಘಟಕಗಳು.
• ಮಶಿನ್ ನ ಆಯ್ಕೆ ಮಾಡಲು ಹಲವಾರು ಮಾರ್ಗಸೂಚಿ ತತ್ವಗಳು.
ಹಾರಿಝಾಂಟಲ್ ಮತ್ತು ವರ್ಟಿಕಲ್ ಟರ್ನಿಂಗ್ ಸೆಂಟರ್ ನ ರಚನೆಯಲ್ಲಿರುವ ಪ್ರಮುಖ ಅಂಶಗಳು
ಹಾರಿಝಾಂಟಲ್ ಮತ್ತು ವರ್ಟಿಕಲ್ ಈ ಎರಡೂ ರೀತಿಯ ಲೇಥ್ ನಲ್ಲಿ ಮೂಲಭೂತ ಅಕ್ಷಗಳ ಕೆಲಸ ರೀತಿಯು ಸರಿಸಮಾನವಾಗಿರುತ್ತದೆ. ರಚನೆಯಲ್ಲಿರುವ ವ್ಯತ್ಯಾಸ ಕೇವಲ ಮಶಿನ್ ನ ಸಾಮರ್ಥ್ಯದೊಂದಿಗೆ ಸರಿಹೊಂದಿಸಲು ಮತ್ತು ಸ್ಪಿಂಡಲ್ ಗೆ ವರ್ಟಿಕಲ್ ಮತ್ತು ಹಾರಿಝಾಂಟಲ್ (ಕೆಲವು ಮಿತಿಗಳೊಂದಿಗೆ) ಅಳವಡಿಸಲು ಮಾತ್ರ ಇರುತ್ತವೆ. ಮೊತ್ತ ಮೊದಲಾಗಿ ಹಾರಿಝಾಂಟಲ್ ರಚನೆಯ ಕುರಿತು ತಿಳಿದುಕೊಳ್ಳೋಣ.
ಹಾರಿಝಾಂಟಲ್ ರಚನೆ

3_1  H x W: 0 x 
• ಬೆಡ್ : ಫೈನ್ ಗ್ರೇಡ್ 25 ಕಾಸ್ಟ್ ಆಯರ್ನ್ ಬಳಸಿ ಬಾಕ್ಸ್ ನಂತಹ ರಚನೆಯಲ್ಲಿ ಕಾಸ್ಟಿಂಗ್ ಮಾಡಿ ಬೆಡ್ ತಯಾರಿಸಲಾಗುತ್ತದೆ. ಅದರಲ್ಲಿ ದೃಢತೆ ಇರಬೇಕು ಎಂಬುದಕ್ಕೋಸ್ಕರ ಅದರಲ್ಲಿ ಬಲಿಷ್ಠವಾದ ರಿಬ್ ನೀಡಲಾಗಿರುತ್ತದೆ. ಅದರಲ್ಲಿ ಹೀಟ್ ಟ್ರೀಟ್ ಮೆಂಟ್ ಪ್ರಕ್ರಿಯೆಯನ್ನು ಮಾಡಲಾಗಿರುತ್ತದೆ. ಚಿಪ್ ನ ಪ್ರವಾಹ ಮತ್ತು ವಿಲೆವಾರಿ ಮಾಡುವುದು ಸುಲಭವಾಗುವಂತೆ ಬೆಡ್ ನ ವಿನ್ಯಾಸವನ್ನು ಮಾಡಲಾಗಿರುತ್ತದೆ. ಯಂತ್ರಣೆಯ ಜಾಗದ ಕೆಳಭಾಗದ ಚಿಪ್ ಪ್ಯಾನ್ ಸ್ವತಂತ್ರವಾಗಿ ಇಡಲಾಗಿರುತ್ತದೆ. ಚಿಪ್ ನ ಪ್ರವಾಹವು ಮಶಿನ್ ನ ಒಂದು ಬದಿಯಲ್ಲಿ ಅಥವಾ ಹಿಂಭಾಗದಲ್ಲಿ ಪಡೆಯುವ ವ್ಯವಸ್ಥೆಯು ಇರುತ್ತದೆ.
 

4_1  H x W: 0 x 
• ಸ್ಪಿಂಡಲ್ : ಕಾರ್ಟ್ರಿಜ್ ನಂತಹ ಸ್ಪಿಂಡಲ್ ಒಂದು ನಿಯಂತ್ರಿತ ಶುಚಿಯಾಗಿರುವ ಹವಾಮಾನದಲ್ಲಿ ಒಟ್ಟಾಗಿ ಜೋಡಿಸಿ (ಅಸೆಂಬಲ್) ಅದರ ಪರೀಕ್ಷೆಯನ್ನು ಮಾಡಲಾಗುತ್ತದೆ. ಎಕ್ಸಿಯಲ್ ಮತ್ತು ರೇಡಿಯಲ್ ಈ ಎರಡೂ ಬದಿಗಳಲ್ಲಿ ಸ್ಪಿಂಡಲ್ ಅಸೆಂಬ್ಲಿಯು ಹೆಚ್ಚು ದೃಢವಾಗಲು ಯೋಗ್ಯವಾದ ಬೇರಿಂಗ್ ಕಾಂನ್ಫಿಗರೇಶನ್ ಇರುತ್ತದೆ. ಬೇರಿಂಗ್ ನಲ್ಲಿ ಅದರ ಸಂಪೂರ್ಣ ಬಾಳಿಕೆಗೋಸ್ಕರ ಸಾಕಷ್ಟು ಗ್ರೀಸ್ ನ್ನು, ಲುಬ್ರಿಕಂಟ್ ಎಂಬುದಾಗಿ ಸೇರಿಸಲಾಗುತ್ತದೆ. ಉಚ್ಚಮಟ್ಟದ ಟಾರ್ಕ್ ಇರುವ ಸ್ಪಿಂಡಲ್ ಮೋಟರ್, ಬೃಹತ್ ಪ್ರಮಾಣದಲ್ಲಿ ಮಟೀರಿಯಲ್ ತೆಗೆಯಲು ಶಕ್ತಿಯನ್ನು ನೀಡುತ್ತದೆ.
 

5_1  H x W: 0 x 
 
• ಅಕ್ಷ : X ಮತ್ತು Z ಅಕ್ಷಗಳಲ್ಲಿ ಉಚ್ಚಮಟ್ಟದ ನಿಖರತೆ ಇರುವ ದೊಡ್ಡ ವ್ಯಾಸದ ಬಾಲ್ ಸ್ಕ್ರೂ ನೀಡಲಾಗಿರುತ್ತದೆ. ಅವುಗಳ ಎರಡೂ ತುದಿಗಳಿಗೆ ನಿರ್ದೋಷವಾದ ಶ್ರೇಣಿಯ ಬಾಲ್ ಸ್ಕ್ರೂ ಸಪೋರ್ಟ್ ಬೇರಿಂಗ್ ನಿಂದ ಆಧಾರವನ್ನು ನೀಡಲಾಗುತ್ತದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳ ಪ್ರಭಾವವನ್ನು ಕಡಿಮೆ ಮಾಡಲು ಬಾಲ್ ಸ್ಕ್ರೂನಲ್ಲಿ ಮೊದಲೇ ಸಾಕಷ್ಟು ಒತ್ತಡವನ್ನು ನೀಡಲಾಗುತ್ತದೆ. ಸ್ಥಿರತೆಯನ್ನು ನಿರ್ಧರಿಸಲು ಗೈಡ್ ವೇ ಯನ್ನು ತುಂಬಾ ದೂರದಲ್ಲಿ ನೀಡಲಾಗಿರುತ್ತದೆ. ಅವುಗಳು ಸಂಪೂರ್ಣವಾಗ ಸುರಕ್ಷಿತವಾಗಿರುತ್ತವೆ. ಕಠಿಣತೆ ಮತ್ತು ಗ್ರೈಂಡಿಂಗ್ ಮಾಡಿರುವ ಸ್ಟೀಲ್ ನ ಪಟ್ಟಿಗಳನ್ನು ಬಳಸಿ ಬಾಕ್ಸ್ ನಂತಹ ಅಥವಾ ಲೀನಿಯರ್ ಮೋಶನ್ (LM) ಅಥವಾ ರೋಲರ್ ಗೈಡ್ ವೆ ತಯಾರಿಸಲಾಗುತ್ತದೆ. ಬಾಕ್ಸ್ ಗೈಡ್ ವೆಯೊಂದಿಗೆ ಸಂಪರ್ಕವನ್ನುಂಟು ಮಾಡಬಲ್ಲ ಮಾರ್ಗದಲ್ಲಿ ಟರ್ಸೈಟ್ ಬಾಂಡಿಂಗ್ ಮಾಡಲಾಗುತ್ತದೆ. ಅಲ್ಲದೇ ಕೈಯಿಂದ ಸ್ಕ್ರೇಪಿಂಗ್ ಮಾಡಿ ಅದನ್ನು ಪೂರ್ತಿಗೊಳಿಸಲಾಗುತ್ತದೆ. ಹೀಗೆ ಮಾಡಿದ್ದರಿಂದ ಅದರ ಸವೆತ ಮತ್ತು ಘರ್ಷಣೆಯನ್ನು ತಡೆಯಬಲ್ಲ ವೈಶಿಷ್ಟ್ಯತೆಯಿಂದಾಗಿ ಉತ್ಕೃಷ್ಟ ಗುಣಮಟ್ಟದ್ದಾಗುತ್ತವೆ.
 

6_1  H x W: 0 x 
 
• ಟೇಲ್ ಸ್ಟಾಕ್ : ಟೇಲ್ ಸ್ಟಾಕ್ ನಲ್ಲಿ ಒಂದು ಹೌಸಿಂಗ್ ನಲ್ಲಿ ಅಳವಡಿಸಲ್ಪಡುವ ಮತ್ತು ಹೈಡ್ರಾಲಿಕ್ ಬಲದಿಂದ ನಡೆಸಲಾಗುವ ಕ್ವಿಲ್ ಇರುತ್ತದೆ. ಕ್ವಿಲ್ ಮತ್ತು ಬಾಡಿ ಸ್ವತಂತ್ರವಾಗಿ ಚಟುವಟಿಕೆಯನ್ನು ಮಾಡುತ್ತದೆ. ಟೇಲ್ ಸ್ಟಾಕ್ V ಆಕಾರದ ಮತ್ತು ಸಮತಟ್ಟಾದ ಗೈಡ್ ವೇಯಲ್ಲಿ ಅಳವಡಿಸಲಾಗಿರುತ್ತದೆ. ಒಂದರಿಂದ ಇನ್ನೊಂದು ಸಾಕಷ್ಟು ದೂರ ಇರುವ ಗೈಡ್ ವೇ ಮತ್ತು ಟೇಲ್ ಸ್ಟಾಕ್ ನ ಹೆವಿ-ಡ್ಯೂಟಿ ಡಿಸೈನ್, ದೃಢತೆಯ ಖಾತರಿಯನ್ನು ನೀಡುತ್ತವೆ. ಫೂಟ್ ಪೆಡಲ್ ಅಥವಾ ಪ್ರೊಗ್ರಾಮ್ ಕ್ವಿಲ್ ನ್ನು ಸಕ್ರಿಯ ಮಾಡುತ್ತದೆ. ಇದರ ಹೊರತಾಗಿ ಪ್ರೊಗ್ರಾಮ್ ಮಾಡಲು ಯೋಗ್ಯವಾಗಿರುವ ಟೇಲ್ ಸ್ಟಾಕ್ ನ್ನೂ ಪರ್ಯಾಯವೆಂದು ನೀಡಬಹುದು.
 
• ಟರೇಟ್ : ಎರಡೂ ದಿಕ್ಕುಗಳಲ್ಲಿ ತಿರುಗುವ ಟೂಲ್ ಟರೇಟ್ ಕನಿಷ್ಠ ಇಂಡೆಕ್ಸಿಂಗ್ ನ ವೇಳೆಯಲ್ಲಿ ಯಾವುದೇ ದಿಕ್ಕಿನಲ್ಲಿ ಇಂಡೆಕ್ಸಿಂಗ್ ಮಾಡಬಹುದು. ಅದು ಪೂರ್ತಿಯಾಗಿ ಮುಚ್ಚಿಲ್ಪಟ್ಟಿದ್ದು ಅಥವಾ ದೃಢವಾಗಿರುತ್ತದೆ. ಅಲ್ಲದೇ ಅದಕ್ಕೆ ಆಯಿಲ್ ಬಾಥ್ ನಂತಹ ಲುಬ್ರಿಕಂಟ್ ನೀಡಲಾಗಿರುತ್ತದೆ. ಮೂರು ಭಾಗಗಳಿಂದ ತಯಾರಿಸಿರುವ ಹರ್ಥ್ ಕಪಲಿಂಗ್ ನಿಂದಾಗಿ ಟೂಲ್ ಡಿಸ್ಕ್ ನ್ನು ಎತ್ತದೇ ಇಂಡೆಕ್ಸಿಂಗ್ ಮಾಡಬಹುದು. ಇದರಿಂದಾಗಿ ರಿಪಿಟ್ಯಾಬಿಲಿಟಿ, ಸ್ಥಾನದ ನಿಖರತೆ ಮತ್ತು ದೃಢತೆ ನಿರ್ಧರಿಸಲ್ಪಡುತ್ತದೆ.

ವರ್ಟಿಕಲ್ ರಚನೆ VTL

7_1  H x W: 0 x 
• ಬೆಡ್ : ಬೆಡ್ ಮತ್ತು ಕಾಲಮ್ ಕಾಸ್ಟಿಂಗ್ 25 ಗ್ರೇಡ್ ಕಾಸ್ಟ್ ಆಯರ್ನ್ ಗಳದ್ದಾಗಿರುತ್ತವೆ. ವಿವಿಧ ಯಂತ್ರಣೆಯ ಸ್ಥಿತಿಗಳಲ್ಲಿ ಉಚ್ಚಮಟ್ಟದ ದೃಢತೆಯು ಲಭಿಸಲು ಅದರ ರಚನೆಯನ್ನು ದೃಢವಾದ ರಿಬ್ ಇರುವ ಬಾಕ್ಸ್ ನಲ್ಲಿ ಮಾಡಲಾಗುತ್ತದೆ. ನಂತರ ಅದರಲ್ಲಿ ಹೀಟ್ ಟ್ರೀಟ್ ಮೆಂಟ್ ಪ್ರಕ್ರಿಯೆಯನ್ನು ಮಾಡಲಾಗಿರುತ್ತದೆ. ಸ್ಟ್ರಕ್ಚರ್ ಫೈನೈಟ್ ಎಲಿಮೆಂಟ್ ಮೆಥಡ್ (FEM) ಈ ತಂತ್ರವನ್ನು ಬಳಸಿ ಆಪ್ಟಿಮೈಜ್ ಮಾಡಲಾಗುತ್ತದೆ. ವರ್ಚುವಲ್ ಪ್ರೊಟೊಟೈಪಿಂಗ್ ಮಾಡಿರುವುದರಿಂದ ಡಿಸೈನ್, ಟೂಲ್ ನ ತುದಿಯಲ್ಲಿ ಹೆಚ್ಚುವರಿ ದೃಢತೆ, ಕಡಿಮೆ ಕಂಪನಗಳು ಮತ್ತು ಕಡಿಮೆ ಪ್ರಮಾಣದ ವಿದ್ಯುತ್ ಶಕ್ತಿಯ ಬಳಕೆ, ಇವೆಲ್ಲವನ್ನೂ ಮಾಡಲಾಗಿದೆ.

8_1  H x W: 0 x 
 
• ಅಕ್ಷ : X ಮತ್ತು Z ಅಕ್ಷಗಳಲ್ಲಿ ಉಚ್ಚ ನಿಖರತೆಯಿಂದ ಗ್ರೈಂಡಿಂಗ್ ಮಾಡಿರುವ ದೊಡ್ಡ ವ್ಯಾಸದ ಬಾಲ್ ಸ್ಕ್ರೂ ನೀಡಲಾಗಿರುತ್ತದೆ. ಅದರ ಎರಡೂ ತುದಿಗಳಿಗೆ ಪ್ರಿಸಿಜನ್ ಶ್ರೇಣಿಯ ಬಾಲ್ ಸ್ಕ್ರೂ ಸಪೋರ್ಟ್ ಬೇರಿಂಗ್ ಮೂಲಕ ಆಧಾರವನ್ನು ನೀಡಲಾಗುತ್ತದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯ ಪ್ರಭಾವವನ್ನು ಕಡಿಮೆ ಮಾಡಲು ಬಾಲ್ ಸ್ಕ್ರೂ ನಲ್ಲಿ ಮೊದಲಾಗಿಯೇ ಒತ್ತಡವನ್ನು ನೀಡಲಾಗಿರುತ್ತದೆ. ಹೆವಿ ಡ್ಯೂಟಿ LM ಗೈಡ್ ವೇ ಒಂದಕ್ಕೊಂದರಿಂದ ಹೆಚ್ಚು ದೂರದಲ್ಲಿ ಇಟ್ಟಿರುವುದರಿಂದ ಸ್ಥಿರತೆಯನ್ನು ನಿರ್ಧರಿಸಲ್ಪಡುತ್ತದೆ. ಟೆಲಿಸ್ಕೋಪಿಕ್ ಕವರ್ ನ ಸಹಾಯದಿಂದ ಬಾಲ್ ಸ್ಕ್ರೂ ಮತ್ತು LM ಗೈಡ್ ವೇಯನ್ನು ರಕ್ಷಿಸಲಾಗುತ್ತದೆ. LM ಗೈಡ್ ವೇ ಮತ್ತು ಬಾಲ್ ಸ್ಕ್ರೂ ಈ ಎರಡಕ್ಕೂ ಯೋಗ್ಯ ಪ್ರಮಾಣದಲ್ಲಿ ಸ್ವಯಂಚಾಲಿತವಾಗಿ ಲುಬ್ರಿಕಂಟ್ ನೀಡಲಾಗುತ್ತದೆ.
 
• ಸ್ಪಿಂಡಲ್ : ಕಾರ್ಟ್ರಿಜ್ ನಂತಹ ಸ್ಪಿಂಡಲ್ ನಿಯಂತ್ರಿಸಲ್ಪಟ್ಟ ಹವಾಮಾನದಲ್ಲಿ ಜೋಡಿಸಿ ಪರೀಕ್ಷಿಸಲಾಗುತ್ತದೆ. ಎಕ್ಸಿಯಲ್ ಮತ್ತು ರೇಡಿಯಲ್ ಎರಡೂ ಬದಿಗಳಲ್ಲಿ ಸ್ಪಿಂಡಲ್ ಅಸೆಂಬ್ಲಿಗೆ ಹೆಚ್ಚು ದೃಢತೆಯನ್ನು ನೀಡಲು ಯೋಗ್ಯವಾದ ಬೇರಿಂಗ್ ಕಾಂಫಿಗರೇಶನ್ ಇರುತ್ತದೆ. ಬೇರಿಂಗ್ ನಲ್ಲಿ ಅದರ ಪೂರ್ಣ ಬಾಳಿಕೆಗೋಸ್ಕರ ಸಾಕಷ್ಟು ಗ್ರೀಸ್ ನ್ನು ಲುಬ್ರಿಕಂಟ್ ಎಂಬುದಾಗಿ ಹಾಕಲಾಗುತ್ತದೆ. ಉಚ್ಚಮಟ್ಟದ ಟಾರ್ಕ್ ಇರುವ ಸ್ಪಿಂಡಲ್ ಮೋಟರ್, ಬೃಹತ್ ಪ್ರಮಾಣದಲ್ಲಿ ಮಟೀರಿಯಲ್ ತೆಗೆಯಲು ಶಕ್ತಿಯನ್ನು ನೀಡುತ್ತದೆ. ಚಟುವಟಿಕೆಗೆ ಖಾತರಿ ಸಿಗಬೇಕು ಎಂಬುದಕ್ಕಾಗಿ ಎಲ್ಲ ಸ್ಪಿಂಡಲ್ ಯುನಿಟ್ ಪರೀಕ್ಷೆಯನ್ನು ನಿಯಂತ್ರಿತ ಹವಾಮಾನದಲ್ಲಿ ಮಾಡಲಾಗುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ಸ್ಪಿಂಡಲ್ ಉಷ್ಣತೆಯನ್ನು ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ಉಷ್ಣತೆಯ ಸ್ಥಿರವಾಗಿ ಬೇರಿಂಗ್ ನ ಬಾಳಿಕೆಯು ಆಪ್ಟಿಮೈಜ್ ಆಗುತ್ತದೆ.
 
• ಓವರ್ ಲೋಡ್ ಟ್ರಿಪಿಂಗ್ ಕ್ಲಚ್ : ಅಪಘಾತವಾದಲ್ಲಿ ಉಂಟಾಗುವ ನಷ್ಟವನ್ನು ಕಡಿಮೆ ಮಾಡಲು ಎರಡೂ ಅಕ್ಷಗಳಲ್ಲಿ ಓವರ್ ಲೋಡ್ ಟ್ರಿಪ್ ಕ್ಲಚ್ ಅಳವಡಿಸಲಾಗಿರುತ್ತದೆ. ಸ್ಲೈಡ್ ಯುನಿಟ್ ನಲ್ಲಿ ಉಂಟಾಗುವ ಗುರುತ್ವಾಕರ್ಷಣೆಯಿಂದ ಉಂಟಾಗುವ ಪರಿಣಾಮವನ್ನು ತಡೆಯಲು Z ಅಕ್ಷಕ್ಕೋಸ್ಕರ ಹೈಡ್ರಾಲಿಕ್ ಕೌಂಟರ್ ಬ್ಯಾಲೆನ್ಸ್ ನೀಡಲ್ಪಡುತ್ತದೆ. ಹೀಗೆ ಮಾಡಿದ್ದರಿಂದ ಯಂತ್ರಣೆಗೋಸ್ಕರ ಹೆಚ್ಚುವರಿ ಮೋಟರ್ ಟಾರ್ಕ್ ಲಭ್ಯವಾಗಬಲ್ಲದು. Z ಅಕ್ಷದ ಕ್ಲಚ್ ಟ್ರಿಪ್ ಆದಲ್ಲಿ ಸ್ಲೈಡ್ ಕೆಳಗೆ ಬರಬಲ್ಲದು, ಅಲ್ಲದೇ ಇದನ್ನು ತಡೆಯುವುದೂ ಸಾಧ್ಯ.
ಟರ್ನಿಂಗ್ ಸೆಂಟರ್ ನ ಉಚ್ಚಮಟ್ಟದ ಚಟುವಟಿಕೆಗೆ ಹಾರಿಝಾಂಟಲ್ ಮತ್ತು ವರ್ಟಿಕಲ್ ನ ಬಳಕೆ
ಮೊದಲಾಗಿ ಹಾರಿಝಾಂಟಲ್ ಮಶಿನ್ ನ ಉಪಯೋಗವನ್ನು ತಿಳಿದುಕೊಳ್ಳೋಣ.
ಹಾರಿಝಾಂಟಲ್ ಮಶಿನ್

9_1  H x W: 0 x 
ಬೃಹತ್ ಪ್ರಮಾಣದ ಉತ್ಪಾದನೆಯಲ್ಲಿ (ಮಾಸ್ ಪ್ರೊಡಕ್ಷನ್) ಕಂಪನಗಳನ್ನು ತಡೆಯಲು, ಹಾಗೆಯೇ ಉಚ್ಚ ಗುಣಮಟ್ಟ ಮತ್ತು ಸುಧಾರಿಸಿರುವ ಟೂಲ್ ನ ಬಾಳಿಕೆಯನ್ನು ಪಡೆಯುವಲ್ಲಿ ಮತ್ತು ಕಾರ್ಯವಸ್ತುಗಳನ್ನು ಸಮತೋಲನೆಯಿಂದ ಹಿಡಿಯಲು ಕ್ರ್ಯಾಂಕ್ ಶಾಫ್ಟ್ ಎರಡೂ ಸೆಂಟರ್ ನಲ್ಲಿ (ಬಿಟ್ ವಿನ್ ಸೆಂಟರ್) ಹಿಡಿಯಲ್ಪಡುತ್ತದೆ. ಕಾರ್ಯವಸ್ತುವಿನ ಒಂದು ಬದಿಯಲ್ಲಿ ಯಂತ್ರಣೆಯನ್ನು ಮಾಡಿದ ನಂತರ ಎರಡನೇ ಬದಿಯಲ್ಲಿ ಯಂತ್ರಣೆಯನ್ನು ಮಾಡಲು, ಕಾರ್ಯವಸ್ತುವನ್ನು ಪ್ರಮುಖ ಸ್ಪಿಂಡಲ್ ನಿಂದ ಸಬ್ ಸ್ಪಿಂಡಲ್ ನಲ್ಲಿ ಸ್ವಯಂಚಾಲಿತವಾಗಿ ಹಸ್ತಾಂತರಿಸಲಾಗುತ್ತದೆ. ಇದಕ್ಕೋಸ್ಕರ ಸಬ್ ಸ್ಪಿಂಡಲ್ ನೊಂದಿಗೆ ನಿರ್ವಹಿಸಲಾಗುವ ಟರ್ನಿಂಗ್ ಸೆಂಟರ್ ನಲ್ಲಿ ಎರಡೂ ಸ್ಪಿಂಡಲ್ ಗಳ ನಡುವೆ ಸಿಂಕ್ರೊನೈಜೆಶನ್ ಮಾಡಲಾಗುತ್ತದೆ. ಮುಖ್ಯ ಸ್ಪಿಂಡಲ್ ನಲ್ಲಿ ಅಥವಾ ಸಬ್ ಸ್ಪಿಂಡಲ್ ನಲ್ಲಿ ಡ್ರಿಲ್ ಮಾಡಿರುವ ರಂಧ್ರಗಳು ಮತ್ತು ಕಚ್ಚುಗಳು (ಸ್ಲಾಟ್) ಇವುಗಳ ಓರಿಯೆಂಟೇಶನ್ ನ ಮುತುವರ್ಜಿಯನ್ನು ಎರಡೂ ಸ್ಪಿಂಡಲ್ ನಲ್ಲಿರುವ ಸಿಂಕ್ರೋನೈಜೆಶನ್ ಮೂಲಕ ಮಾಡಲಾಗುತ್ತದೆ.
 
ವಿಶೇಷವಾಗಿ ಸಮತೋಲಿಸಿರುವ ಕಾರ್ಯವಸ್ತುವನ್ನು ಹಿಡಿಯುವ ವ್ಯವಸ್ಥೆಯಿಂದ ಟ್ರಕ್ ನ ಎಕ್ಸೆಲ್ ಎರಡೂ ಸೆಂಟರ್ ನಲ್ಲಿ (ಬಿಟ್ ವಿನ್ ಸೆಂಟರ್) ಹಿಡಿಯಲಾಗುತ್ತದೆ.
ಸಬ್ ಸ್ಪಿಂಡಲ್ ನೊಂದಿಗೆ ಟರ್ನ್ ಮಿಲ್ ಸೆಂಟರ್ ಉದ್ದದ ಕಾರ್ಯವಸ್ತುಗಳಿಗೆ ಆಧಾರವನ್ನು ನೀಡಲು ಲೈವ್ ಸೆಂಟರ್ ಎಂಬುದಾಗಿ ಬಳಸಲಾಗುತ್ತದೆ.
ವರ್ಟಿಕಲ್ ಮಶಿನ್

10_1  H x W: 0  
ವರ್ಟಿಕಲ್ ಟರ್ನಿಂಗ್ ಲೇಥ್ (VTL) ರಚನೆಯಲ್ಲಿ ಪಾರಂಪಾರಿಕವಾದ ಲೇಥ್ ಅದರ ಹೆಡ್ ಸ್ಟಾಕ್ ನ ಬದಿಯಲ್ಲಿ ನಿಲ್ಲಿಸಲಾಗುತ್ತದೆ. VTL ಬಳಸಿದ್ದರಿಂದ ಉತ್ಪಾದನೆ ಮತ್ತು ಬೆಲೆಯಲ್ಲಿ ಹೆಚ್ಚಿನ ಲಾಭವು ಸಿಗುತ್ತದೆ. ಬ್ರೇಕ್ ಡಿಸ್ಕ್, ಪಂಪ್ ಹೌಸಿಂಗ್, ವಿಮಾನಗಳ ಬಿಡಿ ಭಾಗಗಳು, ಭಾರಿ ಅಥವಾ ಬೃಹತ್ ಸಾಮಗ್ರಿಗಳ ಯಂತ್ರಭಾಗಗಳು, ವಿದ್ಯುತ್ ಕ್ಷೇತ್ರದ ಯಂತ್ರಭಾಗಗಳು ಮುಂತಾದ ಕಾಸ್ಟಿಂಗ್ ನಿಂದ ಮಾಡಲಾಗುವ ಟರ್ನಿಂಗ್ ಗೆ ಅವುಗಳು ತುಂಬಾ ಉಪಯುಕ್ತವಾಗಿವೆ. VTL ನ ರಚನೆಯು ದೊಡ್ಡ RAM ನಂತಹ ಮಶಿನ್ ನಂತೆಯೂ ಇರುತ್ತದೆ. ಈ ಲೇಥ್ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಗೋಸ್ಕರ ಬಳಸಲಾಗುವುದಿಲ್ಲ. ಆದರೆ ಮಧ್ಯಮ ಮತ್ತು ದೊಡ್ಡ ಯಂತ್ರಭಾಗಗಳ ಹೆವಿ ಡ್ಯೂಟಿ ಮತ್ತು ಹೆಚ್ಚು ಶಕ್ತಿ ಬೇಕಾಗಿರುವ ಯಂತ್ರಣೆಗೋಸ್ಕರ ಇದು ಆದರ್ಶಪ್ರಾಯವಾಗಿದೆ.
 
 
11_1  H x W: 0
 
• VTL ಮಶಿನ್ ನ ಪ್ರಮುಖವಾದ ಲಾಭವೆಂದರೆ ಹೆವಿ ಡ್ಯೂಟಿ ಕಾರ್ಯವಸ್ತುಗಳನ್ನು ಅದರಲ್ಲಿ ಯಂತ್ರಣೆಗೋಸ್ಕರ ಸಹಜವಾಗಿ ಅಳವಡಿಸಬಹುದು. ಅದನ್ನು ಲೋಡ್ ಅಥವಾ ಅನ್ ಲೋಡ್ ಮಾಡುವುದು ಸುಲಭ ಸಾಧ್ಯವಾಗುತ್ತದೆ. ಬೃಹತ್ ಭಾಗಗಳನ್ನು ಮಶಿನ್ ನಲ್ಲಿ ಹಿಡಿದಿಡಲು ಗುರುತ್ವಾಕರ್ಷಣೆಯೂ ಮಹತ್ವಪೂರ್ಣವಾಗ ಘಟಕವಾಗಿದೆ. ಸಾಮಾನ್ಯವಾಗಿ ಅತ್ಯಲ್ಪ ಪ್ರಮಾಣದಲ್ಲಿ ಕ್ಲ್ಯಾಂಪಿಂಗ್ ಮಾಡುವುದೂ ಅಗತ್ಯದ್ದಾಗಿದೆ.
• ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡಲು ಪ್ರಮುಖ ಸ್ಪಿಂಡಲ್ ಬಳಸಲಾಗುತ್ತದೆ. ಆದ್ದರಿಂದ VTL ಸ್ವಯಂಚಾಲನೆಗೋಸ್ಕರ ಹೆಚ್ಚು ಫ್ಲೆಕ್ಸಿಬಲ್ ಆಗಿರುತ್ತವೆ. ಮಲ್ಟಿ ಟಾಸ್ಕಿಂಗ್ ಸಾಮರ್ಥ್ಯದಿಂದಾಗಿ ಚಕ್ ನಲ್ಲಿ ಹಿಡಿದಿಟ್ಟು ಯಂತ್ರಣೆಯನ್ನು ಮಾಡುವ ಕಾರ್ಯವಸ್ತುಗಳನ್ನು ತಯಾರಿಸಲು ಕಾರ್ಯಕ್ಷಮತೆಯುಳ್ಳ ಪ್ರಕ್ರಿಯೆ ಸೆಂಟರ್ ನ ಬೇಡಿಕೆಯೂ ಹೆಚ್ಚುತ್ತಿದೆ.

12_1  H x W: 0  
• ಫೌಂಡ್ರಿಯಲ್ಲಿ VTL ಇದ್ದಲ್ಲಿ ಅದು ಲಾಭಕಾರಿ ಮತ್ತು ಕಾರ್ಯಕ್ಷಮತೆಯುಳ್ಳ ಯಂತ್ರಶಾಲೆಯೂ ಆಗಬಲ್ಲದು.
• ಉತ್ಪಾದನೆಯ ಕುರಿತು VTL ಸಾಮಾನ್ಯವಾಗಿ ಆವರ್ತನೆಯ ಸಮಯದಲ್ಲಿ ಸುಧಾರಣೆಯಾಗುತ್ತದೆ. ಕಾರಣ ಗುರುತ್ವಾಕರ್ಷಣೆಯ ಲೋಡಿಂಗ್ ನಿಂದಾಗಿ ಉಚ್ಚ ಪ್ಯಾರಾಮೀಟರ್ ಬಳಸಲು ಸಹಕರಿಸುತ್ತದೆ.
 
13_1  H x W: 0
 
ಗುರುತ್ವಾಕರ್ಷಣೆಯ ಮೂಲಕ ಲೋಡಿಂಗ್ ಮತ್ತು ಕಾರ್ಯವಸ್ತು ಹಿಡಿಯಲು ಯೋಗ್ಯ ವ್ಯವಸ್ಥೆ, ಇಂತಹ ಸೌಲಭ್ಯಗಳಿಂದಾಗಿ ಹೆವಿ ವಾಹನಗಳ ಬ್ರೇಕ್ ಡ್ರಮ್ ನ ಯಂತ್ರಣೆಯನ್ನು VTL ನಲ್ಲಿ ಮಾಡಬಹುದಾಗಿದೆ. ಕಾಸ್ಟಿಂಗ್ ಮಾಡಿರುವ ಹೆವಿ ಯಂತ್ರಭಾಗಗಳಲ್ಲಿ ಒಳ ಬೋರಿಂಗ್, ಗ್ರೂವಿಂಗ್ ಮತ್ತು ಥ್ರೆಡಿಂಗ್ ಮಾಡುವುದು ಅತ್ಯಾವಶ್ಯಕವಾಗಿದೆ. ಅದಕ್ಕೋಸ್ಕರ RAM ಈ ವಿಧದ VTL ಯೋಗ್ಯವಾಗಿರುತ್ತದೆ.
ಹಾರಿಝಾಂಟಲ್ ಮತ್ತು ವರ್ಟಿಕಲ್ ಟರ್ನಿಂಗ್ ಸೆಂಟರ್ ನ ಪ್ರತಿಯೊಂದು ಯಂತ್ರಭಾಗಗಳ ಬೆಲೆಯಲ್ಲಿ ವಿಭಿನ್ನ ಘಟಕಗಳು
 
 
14_1  H x W: 0
• ಹಾರಿಝಾಂಟಲ್ ಟರ್ನಿಂಗ್ ಸೆಂಟರ್ ನಲ್ಲಿ ಉದ್ದದ ಕಾರ್ಯವಸ್ತುಗಳ ಯಂತ್ರಣೆಗೋಸ್ಕರ ಬಿಟ್ ವಿನ್ ಸೆಂಟರ್ ಲೋಡಿಂಗ್ ಮಾಡಬಹುದಾಗಿದೆ. ಇದರಿಂದಾಗಿ ಅದು VTL ಗಿಂತ ಹೆಚ್ಚು ಲಾಭಕಾರಿಯಾಗಿರುತ್ತದೆ. ಬೆಡ್ ನಲ್ಲಿರುವ ಮತ್ತು ಕ್ಯಾರೇಜ್ ನಲ್ಲಿರುವ ಸ್ವಿಂಗ್ ಗೆ ಮಿತಿಗಳಿದ್ದರೂ ಕೂಡಾ ಬಿಟ್ ವಿನ್ ಸೆಂಟರ್ ಲೋಡಿಂಗ್ ನಿಂದ 1000 ಮಿ.ಮೀ. ನಿಂದ 3000 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಇಂತಹ ಶ್ರೇಣಿಯಲ್ಲಿರುವ ಉದ್ದಕ್ಕೆ ಯಂತ್ರಣೆಯನ್ನು ಮಾಡುವುದು ಸಾಧ್ಯವಿರುತ್ತದೆ. ಆದರೆ ಈ ಕುರಿತು VTL ನಲ್ಲಿ ಯಾವುದೇ ಪರ್ಯಾಯಗಳು ಲಭ್ಯವಿಲ್ಲ.
 
 
15_1  H x W: 0
 

16_1  H x W: 0  
 
• ಕೇವಲ ಚಕ್ ನಲ್ಲಿ ಹಿಡಿಯಲ್ಪಡುವ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡಬೇಕಾಗಿರುವಾಗ ಬೃಹತ್ ಕಾರ್ಯವಸ್ತುಗಳಿಗೆ VTL ಬಳಕೆಯಲ್ಲಿ ದೊಡ್ಡ ಸ್ವಿಂಗ್ ವ್ಯಾಸ ಮತ್ತು ದೊಡ್ಡ ಟರ್ನಿಂಗ್ ವ್ಯಾಸವು ಸಿಗುವುದರಿಂದ ಖರ್ಚು ಕಡಿಮೆಯಾಗುತ್ತದೆ. ಉಚ್ಚಮಟ್ಟದ ಪ್ಯಾರಾಮೀಟರನ್ನು ಬಳಸುವುದು ಸಾಧ್ಯವಿರುವುದರಿಂದ ಆವರ್ತನೆಯ ಸಮಯವು ಕಡಿಮೆ ಮಾಡಬಲ್ಲದು ಮತ್ತು ಲಭ್ಯವಿರುವ ಸೌಲಭ್ಯಗಳನ್ನು ಬಳಸಿ ಹೆಚ್ಚು ಉತ್ಪಾದನೆಯನ್ನು ಮಾಡುವುದು ಸಾಧ್ಯವಿದೆ.
 
17_1  H x W: 0
 
ಮಶಿನ್ ನ ಆಯ್ಕೆಗೋಸ್ಕರ ಹಲವಾರು ಮಾರ್ಗದರ್ಶಕ ತತ್ವಗಳು
ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುವುದಾದಲ್ಲಿ ಪ್ರತಿಯೊಂದು ಸೆಕಂಡುಗಳ ಉಳಿತಾಯ ಮತ್ತು ಟೂಲ್ ಗಳ ಬಾಳಿಕೆಯಲ್ಲಿ ಸ್ವಲ್ಪ ಹೆಚ್ಚಳದಿಂದ ಉತ್ಪಾದಕತೆಯು ವೃದ್ಧಿಸುತ್ತದೆ. ಉತ್ಪಾದನೆಯ ಪ್ರಮಾಣವು ಹೆಚ್ಚಿದ್ದಲ್ಲಿ ಸಿ.ಎನ್.ಸಿ. ಮಶಿನ್ ನ ಕಾರ್ಯಕ್ಷಮತೆಯೂ ಅಷ್ಟೇ ಮಹತ್ವದ್ದಾಗಿರುತ್ತದೆ.
• ಬೃಹತ್ ಪ್ರಮಾಣದಲ್ಲಿ ಮಾಡಲಾಗುವ ಉತ್ಪಾದನೆ : ಬೃಹತ್ ಪ್ರಮಾಣದಲ್ಲಿ ಮಾಡಲಾಗುವ ಉತ್ಪಾದನೆಗೋಸ್ಕರ ಮಶಿನ್ ಖರೀದಿಸುವ ಕುರಿತು ವಿಚಾರ ಮಾಡುತ್ತಿದ್ದಲ್ಲಿ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡಲು ಎಲ್ಲ ರೀತಿಯ ವ್ಯವಸ್ಥೆಗಳಿರುವ ಯೋಗ್ಯ ಮಶಿನ್ ನ ಚುನಾಯಿಸಬೇಕು. ಅದರಲ್ಲಿ ಲೋಡಿಂಗ್ ಮತ್ತು ಅನ್-ಲೋಡಿಂಗ್ ನ ವ್ಯವಸ್ಥೆ, ಆವಶ್ಯಕವಿರುವ ಸ್ಪಿಂಡಲ್ ಪವರ್ ಟಾರ್ಕ್, ಟೂಲ್ ಗಳನ್ನು ಹಿಡಿಯಬಲ್ಲ ಟೂಲ್ ಟರೇಟ್, ಟೂಲ್ ನ ದಾರಿಯಲ್ಲಿ ಯಾವುದೇ ರೀತಿಯ ಅಡೆತಡೆಗಳಿಲ್ಲದಿರುವುದು, ಕೂಲಂಟ್ ಗೆ ಯೋಗ್ಯವಾದ ಒತ್ತಡ, ಚಿಪ್ ಕನ್ವೇಯರ್ (ಬದಲಿ ವ್ಯವಸ್ಥೆ) ಮತ್ತು ಆವಶ್ಯಕವಿದ್ದಲ್ಲಿ ಟೂಲ್ ಅಥವಾ ಕಾರ್ಯವಸ್ತು ಪ್ರೋಬ್ ಮತ್ತು ರೇಖೀಯ ಸ್ಕೇಲ್ ಮುಂತಾದ ವೈಶಿಷ್ಟ್ಯಗಳು ಒಳಗೊಂಡಿರುತ್ತವೆ.
 
• ಯಾರೇ ನೀಡಿರುವ ಕಾರ್ಯವಸ್ತುಗಳಿಗೋಸ್ಕರ ಅತಿ ಹೆಚ್ಚು ಸಾಮರ್ಥ್ಯವಿರುವ ಮಶಿನ್ ಆಯ್ಕೆ ಮಾಡಿದಲ್ಲಿ, ಪ್ರತಿಯೊಂದು ಯಂತ್ರಭಾಗದ ಮಶಿನ್ ನ ಬೆಲೆಯಲ್ಲಿ ಹೆಚ್ಚಳವಾಗಬಲ್ಲದು, ಅದರೆ ವಿದ್ಯುತ್ ಶಕ್ತಿಯ ಬಳಕೆಯೂ ಹೆಚ್ಚಾಗುತ್ತದೆ. ಅಲ್ಲದೇ ಜಾಗವೂ ಹೆಚ್ಚು ಬೇಕಾಗುತ್ತದೆ. ಇದಲ್ಲದೇ ಲುಬ್ರಿಕಂಟ್ ಆಯಿಲ್, ಕೂಲಂಟ್ ಮತ್ತು ಕಟಿಂಗ್ ಟೂಲ್ ಇಂತಹ ಘಟಕಗಳೂ ಹೆಚ್ಚು ಪ್ರಮಾಣದಲ್ಲಿ ಬಳಸಲ್ಪಡುತ್ತವೆ.
• ಚಿಕ್ಕ ಯಂತ್ರಭಾಗಗನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸಲು ಕಡಿಮೆ ಆವರ್ತನೆಯ ಸಮಯ (ಸೈಕಲ್ ಟೈಮ್) : ಸಾಕಷ್ಟು ಸ್ಪಿಂಡಲ್ ಪವರ್, ಫೂಟ್ ಪ್ರಿಂಟ್, ಹೆಚ್ಚು ರೇಪಿಡ್ ವೇಗ, ವೇಗವುಳ್ಳ ಟೂಲ್ ಇಂಡೆಕ್ಸಿಂಗ್ ಮತ್ತು ಸ್ಪಿಂಡಲ್ ನ ವೇಗದ ಎಕ್ಸಿಲರೇಶನ್ ಮತ್ತು ಡೆಸಿಲರೇಶನ್ ಇರುವ ಮಶಿನ್ ಗಳನ್ನು ಹುಡುಕಬೇಕು. ಇದರಿಂದಾಗಿ ಉತ್ಪಾದಕತೆಯಲ್ಲಿ ಸುಧಾರಣೆಯಾಗಿ ಅನುತ್ಪಾದಕತೆಯ (ಯಂತ್ರಣೆಯಾಗದಿರುವ ಸಮಯ) ಸಮಯವೂ ಕಡಿಮೆ ಮಾಡುವುದು ಸುಲಭ ಸಾಧ್ಯ.

18_1  H x W: 0  
 
• ಹೆವಿ ಯಂತ್ರಭಾಗಗಳನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸಲು ಕಡಿಮೆ ಆವರ್ತನೆಯ ಸಮಯ (ಸೈಕಲ್ ಟೈಮ್) : ಸಾಕಷ್ಟು ಸ್ಪಿಂಡಲ್ ಪವರ್ ಮತ್ತು ಟಾರ್ಕ್ (ಗಿಯರ್ ಬಾಕ್ಸ್ ಅಥವಾ ಕಡಿಮೆ ಮೂಲಭೂತ ಆರ್.ಪಿ.ಎಮ್. ಮತ್ತು ಅತ್ಯುಚ್ಚ ಟಾರ್ಕ್ ಇರುವಂತಹ ಸ್ಪಿಂಡಲ್ ಮೋಟರ್), ಫೂಟ್ ಪ್ರಿಂಟ್, ಸಾಕಷ್ಟು ಪ್ರಮಾಣದ ರೇಪಿಡ್ ದರವಿರುವ ಮಶಿನ್ ಗಳನ್ನು ಹುಡುಕಬೇಕು. ಅತ್ಯುಚ್ಚ ಪವರ್ ಮತ್ತು ಟಾರ್ಕ್ ಇರುವ ಸ್ಪಿಂಡಲ್ ಮೋಟರ್ ಉಚ್ಚಮಟ್ಟದ ಯಂತ್ರಣೆಯ ಪ್ಯಾರಾಮೀಟರ್ ಬಳಸಿ ಯಂತ್ರಣೆಯ ಸಮಯವನ್ನು ಕಡಿಮೆ ಮಾಡಬಹುದು. ಇದೇ ಕಾರಣದಿಂದಾಗಿ ಉತ್ಪಾದಕತೆಯಲ್ಲಿ ಸುಧಾರಣೆಯಾಗುತ್ತದೆ.
• ಬ್ಯಾಚ್ ನ ಉತ್ಪಾದನೆ : ಒಂದು ವೇಳೆ ಬೇರೆಬೇರೆ ವ್ಯಾಸಗಳಿರುವ ಮತ್ತು ಉದ್ದವಿರುವ ಯಂತ್ರಭಾಗಗಳ ಬ್ಯಾಚ್ ನ ಉತ್ಪಾದನೆಗೋಸ್ಕರ ಮಶಿನ್ ಖರೀದಿಸುವ ವಿಚಾರವನ್ನು ಮಾಡುತ್ತಿದ್ದಲ್ಲಿ,
• ಚಿಕ್ಕ ಕಾರ್ಯವಸ್ತುಗಳಿಗೆ ತುಂಬಾ ದೊಡ್ಡ ಮಶಿನ್ ನ ಉಪಯೋಗವಾಗುವುದಿಲ್ಲ. ಚಿಕ್ಕ ಮಶಿನ್ ದೊಡ್ಡ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡಲಾರದು. ಇದರಿಂದಾಗಿ ವ್ಯಾಸ, ಉದ್ದ ಮತ್ತು ಅದರಲ್ಲಿ ಮಾಡಲಾಗುವಂತಹ ಆಪರೇಶನ್ ನ ನಿಟ್ಟಿನಲ್ಲಿ ಯಂತ್ರಭಾಗಗಳನ್ನು ವರ್ಗೀಕರಿಸಬೇಕು. ಹಾಗೆಯೇ ಕಾರ್ಯವಸ್ತುಗಳಿಗೆ ಅನೇಕ ರೀತಿಯಲ್ಲಿ ಚಿಕ್ಕ ಬ್ಯಾಚ್ ನಲ್ಲಿ ಯಂತ್ರಣೆಯನ್ನು ಮಾಡಬಹುದು. ಅದಕ್ಕೆ ಅದೇ ರೀತಿಯ ಮಶಿನ್ ನ ಆಯ್ಕೆಯನ್ನು ಮಾಡಬೇಕು.
• ತಾವು ನಿರ್ಮಿಸುತ್ತಿರುವ ಉತ್ಪಾದನೆಗಳಿಗೆ ಚಿಕ್ಕ ಬ್ಯಾಚ್ ನಲ್ಲಿ ಯಂತ್ರಭಾಗಗಳನ್ನು ತಯಾರಿಸಲು ಯಂತ್ರಣೆಯನ್ನು ಮಾಡುವುದಾದಲ್ಲಿ ಬಳಕೆಗಾರರಿಗೆ ಆ ಯಂತ್ರಭಾಗಗಳ ಆಕಾರದ ಕುರಿತು ತಿಳುವಳಿಕೆ ಇರುತ್ತದೆ. ಆದ್ದರಿಂದ ಹೊಸ ಉತ್ಪಾದನೆಗಳ ಅಭಿವೃದ್ಧಿಯು ಆಗುವುದಿಲ್ಲ, ಅ ತನಕ ಸಾಮಾನ್ಯವಾಗಿ ಉತ್ಪಾದನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಗಳಾಗುವುದಿಲ್ಲ. ಇದರಿಂದಾಗಿ ಈ ಪರಿಸ್ಥಿತಿಯಲ್ಲಿ ಬಳಕೆಗಾರರು ಅವರಲ್ಲಿರುವ ಶೇಕಡಾ 70 ರಿಂದ 80 ರಷ್ಟು ಯಂತ್ರಭಾಗಗಳ ಮುತುವರ್ಜಿಯನ್ನು ವಹಿಸಬಹುದಾದಂತಹ ಒಂದು ಸಾಮಾನ್ಯ ಮಶಿನ್ ಖರೀದಿಸುವ ಯೋಜನೆಯ ಕುರಿತು ವಿಚಾರ ಮಾಡಬಲ್ಲರು. ಹಾಗೆಯೇ ಇನ್ನುಳಿದ ಚಿಕ್ಕ ಅಥವಾ ದೊಡ್ಡ ಆಕಾರದ ಯಂತ್ರಭಾಗಗಳಿಗೆ ಇನ್ನಿತರ ಕಡೆಯಿಂದ ಯಂತ್ರಣೆಯನ್ನು ಮಾಡಕೊಳ್ಳಬಲ್ಲರು.
• ಕಾರ್ಯವಸ್ತುಗಳಿಗೆ ಯಂತ್ರಣೆಯನ್ನು ಮಾಡುವ ಯೋಗ್ಯ ಸ್ಪೆಸಿಫಿಕೇಶನ್ ಇರುವ ಮಶಿನ್ ನ ಆಯ್ಕೆಯನ್ನು ಮಾಡುವಾಗ ಕೆಲವು ವೈಶಿಷ್ಟ್ಯಗಳ ಕುರಿತು ವಿಚಾರ ಮಾಡಬೇಕು. ಲೋಡಿಂಗ್ ಮತ್ತು ಅನ್ ಲೋಡಿಂಗ್ ಗೋಸ್ಕರ ಸುಲಭತೆ, ಆವಶ್ಯಕವಿರುವ ಸ್ಪಿಂಡಲ್ ಪವರ್ ಅಥವಾ ಟಾರ್ಕ್, ಅಗತ್ಯವಿರುವ ಟೂಲ್ ಹಿಡಿಯಬಲ್ಲ ಟೂಲ್ ಟರೇಟ್, ಕೂಲಂಟ್ ನಲ್ಲಿ ಸಾಕಷ್ಟು ಪ್ರಮಾಣದ ಒತ್ತಡ, ಚಿಪ್ ಕನ್ವೆಯರ್ (ಪರ್ಯಾಯದ್ದು) ಮತ್ತು ಆವಶ್ಯಕವಿದ್ದಲ್ಲಿ ಟೂಲ್ ಅಥವಾ ಕಾರ್ಯವಸ್ತು ಪ್ರೋಬ್ ಮತ್ತು ರೇಖೀಯ ಸ್ಕೇಲ್.
ಸಿ.ಎನ್.ಸಿ. ಟರ್ನಿಂಗ್ ಸೆಂಟರ್ ನ ಮೂಲಭೂತ ವೈಶಿಷ್ಟ್ಯಗಳ ಕುರಿತು ಮಾಡಿರುವ ವಿಶ್ಲೇಷಣೆ ಮಶಿನ್ ಆಯ್ಕೆ ಮಾಡುವಾಗ ಉಪಯುಕ್ತವಾಗಬಲ್ಲದು ಎಂಬುದನ್ನು ಅಪೇಕ್ಷಿಸಲಾಗಿದೆ.
@@AUTHORINFO_V1@@