ಎಲ್ಲ ರೀತಿಯ ಸಿ.ಎನ್.ಸಿ. ನಿಯಂತ್ರಕಗಳಲ್ಲಿ G20 ಮತ್ತು G21, ಯುನಿಟ್ ಸಿಲೆಕ್ಷನ್ ಕೋಡ್ ಎಂಬುದಾಗಿ ಬಳಸಲಾಗುತ್ತದೆ. ಡ್ರಾಯಿಂಗ್ ನಿಂದ ಯಾವ ಇನ್ ಪುಟ್ ಗಳಲ್ಲಿ (ಇಂಚು ಅಥವಾ ಮಿ.ಮೀ.) ಅಳತೆಯನ್ನು ಮಾಡಬೇಕಾಗುತ್ತದೆಯೋ, ಅದರಿಂದ G20 ಮತ್ತು G21 ಇವುಗಳ ಆಯ್ಕೆಯನ್ನು ಮಾಡಲಾಗುತ್ತದೆ. ಇಂಚುಗಳಲ್ಲಿ ಇನ್ ಪುಟ್ ಮಾಡುವುದಾದಲ್ಲಿ G20 ಯನ್ನು ಬಳಸಬೇಕಾಗುತ್ತದೆ. G21 ಇದನ್ನು ಮಿ.ಮೀ. ಇನ್ ಪುಟ್ ಗೋಸ್ಕರ ಬಳಸಲಾಗುತ್ತದೆ.
ಮಹತ್ವಪೂರ್ಣವಾದ ಸೂಚನೆ
G20 ಮತ್ತು G21 ಕೋಡ್ ಬಳಸಿ ಇಂಚುಗಳನ್ನು ಮಿ.ಮೀ. ಅಥವಾ ಮಿ.ಮೀ.ಗಳನ್ನು ಇಂಚಿಗೆ ಪರಿವರ್ತಿಸುವುದು ಸಾಧ್ಯವಿಲ್ಲ.
ಪ್ರೊಗ್ರಾಮ್ ನಲ್ಲಿ G20 ಮತ್ತು G21 ಇದ್ದಲ್ಲಿ ಈ ಮುಂದಿನ ಅಂಶಗಳಲ್ಲಿ ಪರಿಣಾಮ ಬೀರುತ್ತದೆ.
1. X, Y, Z ಗೆ ನೀಡಿರುವ ಪೊಸಿಶನಿಂಗ್ ಕಮಾಂಡ್ ಮೌಲ್ಯ (ವ್ಯಾಲ್ಯೂ).
2. ಇನ್ ಕ್ರಿಮೆಂಟಲ್ ನಲ್ಲಿ ಅಲುಗಾಡಬಲ್ಲ ದೂರ.
3. F ಕೋಡ್ ನಿಂದ ನೀಡಿರುವ ಫೀಡ್ ರೇಟ್.
4. ಆಫ್ ಸೆಟ್ ಮೌಲ್ಯ.
5. G21 ಹೆಚ್ಚು ನಿರ್ದೋಷವಾಗಿರುವುದರಿಂದ ಲಾಭಕಾರಿ.
G20 ಯಲ್ಲಿ ಕನಿಷ್ಠ ಮೌಲ್ಯ 0.0001 ಇಂಚು ಇಷ್ಟು ಇರುತ್ತದೆ. ಅದ್ದರಿಂದ ಸಹಜವಾಗಿಯೇ G21 ನಿಂದಾಗಿ ನಿಖರತೆಯು ವೃದ್ಧಿಸುತ್ತದೆ. (1 ಇಂಚು = 25.6. ಮಿ.ಮೀ.)
ಇನ್ನೊಂದು ಮಹತ್ವದ ಸೂಚನೆ
1. G20 ಮತ್ತು G21 ಈ ಎರಡು ಕೋಡ್ ಗಳೂ ಮೋಡಲ್ ಆಗಿವೆ. ಅಂದರೆ G20 ಕೇವಲ G21 ರಿಂದ ರದ್ದು ಪಡಿಸಬಹುದಾಗಿದೆ. ಆದರೆ, G21 ಕೇವಲ G20 ರಿಂದಲೇ ರದ್ದು ಪಡಿಸಬಹುದಾಗಿದೆ.
2. ಪ್ರೊಗ್ರಾಮ್ ನ ಪ್ರಾರಂಭದಲ್ಲಿ ಯುನಿಟ್ ನಿರ್ಧರಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ನಿಯಂತ್ರಕವು (ಕಂಟ್ರೋಲರ್) ಮುಂಚಿನ ಪ್ರೊಗ್ರಾಮ್ ನಿಂದ ಇನ್ ಪುಟ್ ಯುನಿಟ್ (ಇಂಚು/ ಮಿ.ಮೀ.) ಮುಂದುವರಿಯುತ್ತಿರುತ್ತದೆ.
3. ಪ್ರೊಗ್ರಾಮ್ ಪ್ರೊಸೆಸ್ ಮಾಡುವ ಮುಂಚೆ ಯುನಿಟ್ ನಿರ್ಧರಿಸಬೇಕಾಗುತ್ತದೆ. ಪ್ರೊಗ್ರಾಮ್ ನಲ್ಲಿ G20 ಮತ್ತು G21 ಅಥವಾ G21 ನ G20 ಪರಿವರ್ತಿಸಿ ಯುನಿಟ್ ಬದಲಾಯಿಸಲಾಗುವುದಿಲ್ಲ.
ಉದಾಹರಣೆ
G20 ಇಂಚು ಪ್ರೊಗ್ರಾಮ್ ಆಯ್ಕೆ
N2 T02M06
N3 G20
N4 G94 G54 G00 X 15 Y15 Z85
G21 ಮೆಟ್ರಿಕ್ (ಮಿ.ಮೀ.) ಪ್ರೊಗ್ರಾಮಿಂಗ್ ಆಯ್ಕೆ
N2 T02M06
N3 G21
N4 G94 G54 G00 X 15 Y15 Z85
G21 ಪ್ರೊಗ್ರಾಮಿಂಗ್ ಉದಾಹರಣೆ (ಚಿತ್ರ ಕ್ರ. 1)
G21
ಪ್ರೊಗ್ರಾಮ್
N1 T0505
N2 G92 S1500M03
N3 G21 G96S150
N4 G00 X0 Z5
N5 G42 G01 Z0 G95 F0.3
N6 G01 X 23.2
N7 G01 X 40 Z-30
N8 G01 X 58.140 Z - 42
N9 G01 X 70
N10 G40 G00 X 100 Z 100
G97S500
G20 ಪ್ರೊಗ್ರಾಮಿಂಗ್ ಉದಾಹರಣೆ (ಚಿತ್ರ ಕ್ರ. 2)
G20
ಪ್ರೊಗ್ರಾಮ್
N T0101
N2 G97S800 P103
N3 G96 S150 G20
N4 G00 X 0 Z1
N5 G01 Z0 G95 F0.3
N6 G01 X 2 R0.25
N7 G01 Z-1
N8 G02 X 5 Z - 2.5 I1.5 K0
N9 G01 X 6
N10 G00 X 10 Z10
N11 M30
G22 ಸೇಫ್ಟಿ ಝೋನ್ ಪ್ರೊಗ್ರಾಮಿಂಗ್/ ಸ್ಟೋರ್ಡ್ ಚೆಕ್ ಲಿಮಿಟ್ ಕೆಲಸ :
ಈ ರೀತಿಯ ಕಮಾಂಡ್ ನಿಂದಾಗಿ ಬೇಕಾಗಿರುವ ಮಾಪನಕ್ಕೆ ಸಾಫ್ಟ್ ಬಾಕ್ಸ್ ತಯಾರಿಸಬಹುದಾಗಿದೆ. ಇದರಿಂದಾಗಿ ಈ ಬಾಕ್ಸ್ ನ ಒಳಗೆ ಟೂಲ್ ನುಗ್ಗಿಸುವುದನ್ನು ಪ್ರಯತ್ನಿಸಿದಲ್ಲಿ ಅಲಾರ್ಮ್ ಆಗಿ ಮಶಿನ್ ನಿಲ್ಲುತ್ತದೆ. ಅದರ ನಂತರ ಮಶಿನ್ ಮತ್ತೆ ನಡೆಸಲು ಯಾವ ಅಕ್ಷವು ಬಾಕ್ಸ್ ನ ಒಳಗೆ ಸೇರಿದೆಯೋ, ಅದನ್ನು ಕೈಯಿಂದ ತಿರುಗಿಸಿ ಹೊರಗೆ ತೆಗೆಯಬೇಕಾಗುತ್ತದೆ.
G22 ಫಾರ್ಮೆಟ್
X..Y...Z..I..J..K...
ಮಶಿನ್ ಹೋಮ್ ಸ್ಥಾನಕ್ಕೆ ಬಂದ ನಂತರ G22 ಕಮಾಂಡ್ ಕೊಡಬೇಕು. ಮಶಿನ್ ಸೆಟ್ ಆದ ನಂತರ ತಡೆ ಮಾಡಿದ ಭಾಗದಲ್ಲಿ ಟೂಲ್ ಪ್ರವೇಶಿಸಲಾರದು.
G23 ರನ್ನು G22 ರದ್ದು ಪಡಿಸಲು ಬಳಸಲಾಗುತ್ತದೆ.
S = 0 ಕ್ರಿಯಾರಹಿತ (ಡಿಸೆಬಲ್ಡ್)
S = 1 ಪ್ರವೇಶದ ತಡೆಗೆ ಕ್ರಿಯಾಸಹಿತ (ಎನೆಬಲ್ಡ್)
S = 2 ಹೊರ ತೆಗೆಯುವ ತಡೆಗೆ
G25 : ಸ್ಪಿಂಡಲ್ ವೇಗದಲ್ಲಿರುವ ವ್ಯತ್ಯಾಸವನ್ನು ತಿಳಿಯಬಲ್ಲ ವ್ಯವಸ್ಥೆಯನ್ನು ನಿಲ್ಲಿಸುವುದು.
G 25 ರ ಕೆಲಸ : ಸ್ಪಿಂಡಲ್ ವೇಗ ಪ್ರೊಗ್ರಾಮ್ ಮಾಡುತ್ತಿರುವಾಗ ಸುತ್ತುವಿಕೆ/ ನಿಮಿಷ (ಆರ್.ಪಿ.ಎಮ್.) ಈ ಯುನಿಟ್ ಬಳಸಲಾಗುತ್ತದೆ. ಪ್ರೊಗ್ರಾಮ್ ನಲ್ಲಿ ಉದಾಹರಣೆಗೆಂದು S 1000 M03 ಮೌಲ್ಯವನ್ನು ಪಡೆದಲ್ಲಿ ಅದರ ಅರ್ಥ 1000 ಸುತ್ತು/ ನಿಮಿಷ ಎಂದಾಗುತ್ತದೆ. ಅಂದರೆ ಸ್ಪಿಂಡಲ್ ಒಂದೇ ನಿಮಿಷದಲ್ಲಿ 1000 ಬಾರಿ ಸುತ್ತಬೇಕು ಮತ್ತು ಈ ವೇಗವು ಶಾಶ್ವತವಾಗಿ ಉಳಿಯಬೇಕು. ಆದರೆ ಪ್ರತ್ಯಕ್ಷವಾಗಿ ಮಶಿನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಈ ಮೌಲ್ಯವು ಶಾಶ್ವತವಾಗಿ ಉಳಿಯುವುದಿಲ್ಲ. ಅದರಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಕಾರಣ ಕಾರ್ಯವಸ್ತುವಿನಲ್ಲಿರುವ ಮಟೀರಿಯಲ್ ಹೊರಗೆ ಬರುತ್ತಿರುವಾಗ ಹೆಚ್ಚು ಬಲವನ್ನು ಹಚ್ಚಬೇಕಾಗುತ್ತದೆ. ಆದ್ದರಿಂದ ಸ್ಪಿಂಡಲ್ ವೇಗದಲ್ಲಿ ವ್ಯತ್ಯಾಸವುಂಟಾಗುತ್ತದೆ. ಒಂದೇ ನಿಗದಿತ ಮೌಲ್ಯದ ತನಕ ಬದಲಾವಣೆಯು ಸಾಧ್ಯ. ಈ ವ್ಯತ್ಯಾಸ ಹೆಚ್ಚು ಇದ್ದಲ್ಲಿ ನಿಯಂತ್ರಕದಲ್ಲಿ ಈ ಮುಂದಿನಂತೆ ವಿಶೇಷವಾದ ಕಮಾಂಡ್ ಗಳನ್ನು ನೀಡಲಾಗಿರುತ್ತದೆ.
G26 : ಸ್ಪಿಂಡಲ್ ವೇಗದಲ್ಲಿ ವ್ಯತ್ಯಾಸ ಕಂಡುಬರುವಂತಹ ಯಂತ್ರಣೆಯನ್ನು ಪ್ರಾರಂಭಿಸುವುದು.
ಮಹತ್ವದ ಸೂಚನೆ :
G26 ಕಮಾಂಡ್ ಸ್ಪಿಂಡಲ್ ವೇಗದಲ್ಲಿರುವ ವ್ಯತ್ಯಾಸವನ್ನು ಬದಲಾಯಿಸುವುದು ಅಥವಾ ದುರಸ್ತಿ ಮಾಡುವುದು ಸಾಧ್ಯವಿಲ್ಲ. ಆದರೆ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು.
ಪ್ರೊಗ್ರಾಮ್ ಫಾರ್ಮೆಟ್
G26 P… Q… R…
ಸ್ಪಿಂಡಲ್ ವೇಗದಲ್ಲಿರುವ ವ್ಯತ್ಯಾಸ = ಪ್ರೊಗ್ರಾಮ್ ನಲ್ಲಿ ನೀಡಿರುವ ವೇಗ – ಮಶಿನ್ ನಲ್ಲಿರುವ ವೇಗ.
ಒಂದು ವೇಳೆ ನಿಗದಿತ ಮೌಲ್ಯಕ್ಕಿಂತ ವ್ಯತ್ಯಾಸವು ಹೆಚ್ಚು ಇದ್ದಲ್ಲಿ ಅಲಾರ್ಮ್ ಬಾರಿಸುತ್ತದೆ. ಸ್ಪಿಂಡಲ್ ನ ವೇಗದಲ್ಲಿ ವ್ಯತ್ಯಾಸ ಉಂಟಾಗಲು ಸಾಮಾನ್ಯವಾಗಿ ಸ್ಪಿಂಡಲ್ ಹೆಚ್ಚು ಬಿಸಿಯಾಗುವುದೇ (ಓವರ್ ಹೀಟ್) ಪ್ರಮುಖ ಕಾರಣವಾಗಿರುತ್ತದೆ.
ಉದಾಹರಣೆ
ಪ್ರೊಗ್ರಾಮ್ ನಲ್ಲಿ ನೀಡಿರುವ ವೇಗ 1000 ಹಿಡಿದಲ್ಲಿ
G26 P2000 Q5 R10
P 2000 ಅಂದರೆ 2000 ಮಿಲಿ ಸೆಕಂಡುಗಳು
ಒಂದು ವೇಳೆ ಪ್ರೊಗ್ರಾಮ್ ಸ್ಪಿಂಡಲ್ ವೇಗ 2 ಸೆಕಂಡುಗಳಷ್ಟು ನೀಡಿರುವ ಮೌಲ್ಯದ ತನಕ ತಲುಪಿದಲ್ಲಿ, ಅದರ ವ್ಯವಸ್ಥೆಯನ್ನು (ಸಿಸ್ಟಮ್) ಪರಿಶೀಲಿಸಲಾಗುತ್ತದೆ.
Q5 ಅಂದರೆ 1000 ಆರ್.ಪಿ.ಎಮ್.ನ 5% ಅಂದರೆ 1000/100x5 = 50 ಆರ್.ಪಿ.ಎಮ್.
1000-50=950 ಸುತ್ತು/ನಿಮಿಷ. ಒಂದು ವೇಳೆ ಪ್ರೊಗ್ರಾಮ್ ಮಾಡಿರುವ ವೇಗ 950 ರಿಂದ 1000 ಈ ರೇಂಜ್ ನಲ್ಲಿ ಇದ್ದಲ್ಲಿ ಅದು ಪ್ರತ್ಯಕ್ಷ ಸ್ಪಿಂಡಲ್ ವೇಗ ಚೆಕ್ (ಸ್ಪಿಂಡಲ್ ವೇಗದಲ್ಲಿರುವ ವ್ಯತ್ಯಾಸವನ್ನು ತಿಳಿಸುವ ವ್ಯವಸ್ಥೆ) ಪ್ರಾರಂಭಗೊಳ್ಳುತ್ತದೆ.
Q ಮತ್ತು R ನಿರ್ಧರಿಸಲು ಇರುವ ತತ್ವ
Q = (1- A/S) X 100
R = (1 - H/S) X 100
A – ನೇರವಾದ ಸ್ಪಿಂಡಲ್ ವೇಗ
H – ಉಚ್ಚ ವೇಗ
(ಎಷ್ಟು ವೇಗ ಇರುವಾಗ ಸ್ಪಿಂಡಲ್ ಹೆಚ್ಚು ಬಿಸಿಯಾಗಬಲ್ಲದು)
S- ಪ್ರೊಗ್ರಾಮ್ ಮಾಡಿರುವ ಸ್ಪಿಂಡಲ್ ವೇಗ
ಉದಾಹರಣೆ A = 950, H = 900
S = 1000 ಇದ್ದಲ್ಲಿ
Q = (1 - 950/1000 ) X 100 = 5
R = (1 - 900/1000) X 100 = 10