ಅಕ್ಷಗಳಿರುವ ಮಶಿನ್ ನ ಝೀರೋ ಸ್ಥಾನಕ್ಕೋಸ್ಕರ ಪ್ರೊಗ್ರಾಮ್

@@NEWS_SUBHEADLINE_BLOCK@@

Lohkarya - Udyam Prakashan    19-May-2021   
Total Views |
ಪ್ರತಿಯೊಂದು ಸಿ.ಎನ್.ಸಿ. ಮಶಿನ್ ನಲ್ಲಿ ಅಕ್ಷವು ಮಶಿನ್ ನ ಝೀರೋ ಸ್ಥಾನದಲ್ಲಿ ಬರುವುದು ಅತ್ಯಾವಶ್ಯಕವಾಗಿರುತ್ತದೆ. ಸಾಮಾನ್ಯವಾಗಿ ಅಕ್ಷ ಮಶಿನ್ ಝೀರೋ ಸ್ಥಾನಕ್ಕೆ ನಿಯಂತ್ರಕದಲ್ಲಿರುವ (ಕಂಟ್ರೋಲರ್) ಬಟನ್ ಮ್ಯಾನ್ಯುವಲಿ ಒತ್ತಿ ಅಳವಡಿಸಬಹುದು. ಹೊಸದಾಗಿ ಅಭಿವೃದ್ಧ ಪಡಿಸಲಾಗಿರುವ ನಿಯಂತ್ರಕದಲ್ಲಿ ಅಕ್ಷದ ರೆಫರನ್ಸ್ ನ ಸ್ಥಾನದಲ್ಲಿ ಅಳವಡಿಸಲು ಕೆಲವು ನಿರ್ದಿಷ್ಟ G ಕಮಾಂಡ್ ಗಳನ್ನು ನಿರ್ಧರಿಸಲಾಗಿವೆ. ಈ ಲೇಖನದಲ್ಲಿ ಪ್ರಸ್ತುತ ಕಮಾಂಡ್ ನ ಅರ್ಥ, ಕ್ರಿಯೆ ಮತ್ತು ಉದಾಹರಣೆಯನ್ನು ನೀಡಿ ಅದರ ಕುರಿತಾದ ಮಾಹಿತಿಯನ್ನು ನೀಡಲಾಗಿದೆ.
ಪ್ರೊಗ್ರಾಮ್ G27, G28, G29, G30
G27 ಮಶಿನ್ ಝೀರೋ ರೆಫರನ್ಸ್ ಪೊಸಿಶನ್ ರಿಟರ್ನ್ ಚೆಕ್
G28 ರಿಟರ್ನ್ ಟೂ ಪ್ರೈಮರಿ ಮಶಿನ್ ಝೀರೋ ರೇಫರನ್ಸ್ ಪೋಸಿಶನ್
G29 ರಿಟರ್ನ್ ಫ್ರಮ್ ಮಶಿನ್ ಝೀರೋ ರೇಫರನ್ಸ್ ಪೋಸಿಶನ್
G30 ರಿಟರ್ನ್ ಟೂ ಸೆಕಂಡರಿ ಮಶಿನ್ ಝೀರೋ ರೇಫರನ್ಸ್ ಪೋಸಿಶನ್
ಮೇಲಿನ ನಾಲ್ಕು ಕಮಾಂಡ್ ಗಳನ್ನು ಮಶಿನ್ ನ ಝೀರೋ ರೇಫರನ್ಸ್ ಪೋಸಿಶನ್ ನಲ್ಲಿ ಬಳಸಲಾಗುತ್ತದೆ. G28 ಗರಿಷ್ಠ ಎರಡು ಮತ್ತು ಮೂರು ಅಕ್ಷಗಳ ಸಿ.ಎನ್.ಸಿ. ಪ್ರೊಗ್ರಾಮಿಂಗ್ ನಲ್ಲಿ ಬಳಸಲಾಗುತ್ತದೆ. ಇದರ ಪ್ರಮುಖ ಕಾರಣವೆಂದರೆ ಕೆಲಸ ನಡೆಯುತ್ತಿರುವ ಟೂಲ್, ಮಶಿನ್ ಝೀರೋ ಸ್ಥಾನದಲ್ಲಿ ಅಳವಡಿಸುವುದು ಮತ್ತು G28 ರಲ್ಲಿ ತಿಳಿಸಿದಂತೆ ಒಂದು ಅಥವಾ ಎರಡು ಅಕ್ಷಗಳಲ್ಲಿ ಅದನ್ನು ಝೀರೋ ರೆಫರನ್ಸ್ ಮಾಡುವುದೇ ಸರಿ.
G27 ರಿಂದ G30 ಈ ಎಲ್ಲ ಕಮಾಂಡ್ ಗಳನ್ನು ಫಾನುಕ್ ಗ್ರೂಪ್ ಇವರು ಡಿಸೈನ್ ಮಾಡಿರುವ ಗ್ರೂಪ್ 00 ರಲ್ಲಿ ಸೇರಿರುತ್ತವೆ.
• ಈ ಕಮಾಂಡ್ ನಾನ್ ಮೋಡಲ್ ಅಥವಾ ವನ್ ಶಾಟ್ G ಕೋಡ್ ಈ ಗ್ರೂಪ್ ನಲ್ಲಿ ಸೇರಿರುತ್ತವೆ.
• ಈ ಕೋಡ್ ಗಳ ಬಳಕೆಯ ಕುರಿತು ಒಂದು ಮಹತ್ವದ ಸೂಚನೆ : ಈ ಗ್ರೂಪ್ ನಲ್ಲಿರುವ ಪ್ರತಿಯೊಂದು G ಕೋಡ್ ಬಳಸುತ್ತಿರುವಾಗ, ಬಳಸುತ್ತಿರುವ ಪ್ರತಿಯೊಂದು ಬ್ಲಾಕ್ ನಲ್ಲಿ ಆ ಕಮಾಂಡ್ ನೀಡುವುದು ಅತ್ಯಾವಶ್ಯಕವಾಗಿದೆ. ಒಂದು ವೇಳೆ G28 ಈ ಕಮಾಂಡ್ Z ಅಕ್ಷಕ್ಕೋಸ್ಕರ ಒಂದು ಬ್ಲಾಕ್ ನಲ್ಲಿ ಬಳಸಿದ್ದಲ್ಲಿ ಮತ್ತು ಅದರ ನಂತರ ಮುಂದಿನ ಬ್ಲಾಕ್ ನಲ್ಲಿ X ಮತ್ತು Y ಗೋಸ್ಕರ ಬಳಸುವುದಾದಲ್ಲಿ ಅದು ಮತ್ತೆ ಪ್ರತಿಯೊಂದು ಬ್ಲಾಕ್ ನಲ್ಲಿ ನೀಡಬೇಕಾಗುತ್ತದೆ.
ಉದಾಹರಣೆ :
N10 G28 Z (ಮಶಿನ್ ಝೀರೋ ರಿಟರ್ನ್ Z ಅಕ್ಷ)
N20 G28 XY (ಮಶಿನ್ ಝೀರೋ ರಿಟರ್ನ್ X, Y ಅಕ್ಷ)
N20 ಬ್ಲಾಕ್ ನಲ್ಲಿರುವ G28 ಒಂದು ವೇಳೆ ಬಿಟ್ಟುಬಿಟ್ಟಲ್ಲಿ ಅಥವಾ ಮರೆತಲ್ಲಿ ಹಿಂದಿನ ಮೋಶನ್ ಕಮಾಂಡ್ ನಂತೆ ಚಟುವಟಿಕೆಗಳಾಗಬಲ್ಲವು. (G00 ಅಥವಾ G01)
• G28 ಕಮಾಂಡ್ ನೀಡುವಾಗ ಕನಿಷ್ಠ ಒಂದು ಅಕ್ಷವನ್ನು ನೀಡುವುದು ಆವಶ್ಯಕವಾಗಿದೆ.
N10 G28.. ಅರ್ಥರಹಿತ ಕಮಾಂಡ್
N20 G28X..ಅರ್ಥವುಳ್ಳ ಕಮಾಂಡ್ ಕೇವಲ X ಅಕ್ಷ
G30 G28Y... ಅರ್ಥಪೂರ್ಣವಾದ ಕಮಾಂಡ್ ಕೇವಲ Y ಅಕ್ಷ
G40 G28Z... ಅರ್ಥಪೂರ್ಣ ಕಮಾಂಡ್ ಕೇವಲ Z ಅಕ್ಷ
N50 G28 XYZ ಎಲ್ಲ ಅಕ್ಷಗಳು ಮಶಿನ್ ಝೀರೋ ರೆಫರನ್ಸ್ ಪೋಸಿಶನ್ ನಲ್ಲಿ ಸೇರ್ಪಡೆಯಾಗಬಲ್ಲವು.
• ಫಾನುಕ ಡಿಸೈನ್ ಮತ್ತು ವ್ಯಾಖ್ಯೆಯಂತೆ G28 ಮತ್ತು G30 ಇದರಲ್ಲಿ ಒಂದು ನಡುವಿನ ಪಾಯಿಂಟ್ ಗೆ ಮಶಿನ್ ಝೀರೋ ಕಡೆಗೆ ಹೋಗುತ್ತಿರುವಾಗ ನಿರ್ಧಾರಿತ ವೇಗವಿರುತ್ತದೆ.
G28 ಮತ್ತು G30 ರೊಂದಿಗೆ ಇರುವ ಕೋ-ಆರ್ಡಿನೇಟ್ ವ್ಯಾಲ್ಯೂ ನಡುವಿನಲ್ಲಿರುವ ಬಿಂದುವನ್ನು ತೋರಿಸುತ್ತದೆ.
• G90 ಎಬ್ ಸಲ್ಯೂಟ್ ಮತ್ತು G91 ಇನ್ಕ್ರಿಮೆಂಟಲ್ ಇವುಗಳ ಪರಿಣಾವು CHK MAR G28 ಅಥವಾ G30 ಪ್ರಕ್ರಿಯೆಯಲ್ಲಿ ಉಂಟಾಗುತ್ತದೆ.
• G28 ಕಮಾಂಡ್ ನಿಂದಾಗಿ ಟೂಲ್ ಮಶಿನ್ ಝೀರೋ ಕಡೆಗೆ ಹೋಗುತ್ತಿರುವಾಗ ಒಂದು ನಡುವಿನ ಪಾಯಿಂಟ್ ನಿಂದ ಹೋಗುತ್ತದೆ.
ಪ್ರೊಗ್ರಾಮ್ G90
• G00 X 6.0 Y 6.0 ಮಶಿನ್ ಹೋಲ್
(ಈ ಪೋಸಿಶನ್ ಗೆ ರಂಧ್ರಗಳನ್ನು ಮಾಡುವುದಿದೆ) (ಚಿತ್ರ ಕ್ರ. 1)
 

1_1  H x W: 0 x 
 
• G28 X 6.0 Y 6.0 ಮಶಿನ್ ಝೀರೋ ರಿಟರ್ನ್
ಮೇಲಿನ ಪ್ರೊಗ್ರಾಮ್ ಸುರಕ್ಷಿತ ಜಾಗದಲ್ಲಿ ನಡುವಿನ ಪಾಯಿಂಟ್ ಅನುಸರಿಸಿ
G90
G00 X 6.0 Y6.0 (ಮಶಿನ್ ಹೋಲ್)
G28 X 14.0 Y 6.0 (ಮಶಿನ್ ಝೀರೋ ಮೋಶನ್)
ಮೇಲಿನ ಪ್ರೊಗ್ರಾಮ್ ಗಿಂತ ಸುರಕ್ಷಿತ ಪ್ರೊಗ್ರಾಮ್ ಮುಂದಿನಂತೆ ಮಾಡಬಹುದು.
G90
G00 X 6.0 Y 6.0 (ಮಶಿನ್ ಹೋಲ್)
X 14.0 (ಸುರಕ್ಷಿತ ಜಾಗ)
G28 X 14 Y6.0 (ಮಶಿನ್ ಝೀರೋ ರಿಟರ್ನ್)
ಪ್ರೊಗ್ರಾಮ್ ಫಾರ್ಮೆಟ್ G91 G28 X (U)… Z (W)… ಇಂಕ್ರಿಮೆಂಟಲ್
X…Z…G90 ಗೋಸ್ಕರ ನಡುವಿನ ಪೋಸಿಶನ್ ಎಬ್ ಸಲ್ಯೂಟ್
U… W… G90/G91 ಗೋಸ್ಕರ ನಡುವಿನ ಪೋಸಿಶನ್
ಎಬ್ ಸಲ್ಯೂಟ್/ ಇಂಕ್ರಿಮೆಂಟಲ್
ಪ್ರೋಗ್ರಾಮ್ G28
G90 G00 X14.4 Y9.0 (ಕರಂಟ್ ಪಾಯಿಂಟ್ XY) (ಚಿತ್ರ ಕ್ರ. 2)

2_1  H x W: 0 x 
 
Z2.0 (ಕರಂಟ್ ಪಾಯಿಂಟ್ Z)
G01 Z-13.3 F150.0
G28 X14.4 Y9.0 Z2.0 (ಇಂಟರ್ ಮೀಡಿಯೆಟ್ ಪಾಯಿಂಟ್)
ಮೇಲಿನ ಉದಾಹರಣೆ ರಿಟ್ರ್ಯಾಕ್ಟ್ ಮೋಡ್ ನೊಂದಿಗೆ
ರಿಟ್ರ್ಯಾಕ್ಟ್ ಮೋಡ್ ನೊಂದಿಗೆ ಪ್ರೊಗ್ರಾಮ್ (ಚಿತ್ರ ಕ್ರ. 3)

3_1  H x W: 0 x 
 
G90 G00 X14.4 Y9.0
Z2.0
G01 Z-13.3 F150
G00 Z2.0 (ಸುರಕ್ಷಿತವಾದ ರಿಟ್ರ್ಯಾಕ್ಟ್)
G28 X14.4 Y9.0 Z2.0 (ಇಂಟರ್ ಮೀಡಿಯೆಟ್ ಪಾಯಿಂಟ್)
ಅದೇ ಪ್ರೊಗ್ರಾಮ್ ಇನ್ ಕ್ರಿಮೆಂಟಲ್ ಝೀರೋ ರಿಟರ್ನ್ ನಲ್ಲಿ
(ಚಿತ್ರ ಕ್ರ. 4 ಮತ್ತು 5)
 

4_1  H x W: 0 x 
 
 
 
 
5_1  H x W: 0 x
 
 
 
G90 G00 X14.4 Y9.0
Z2.0
G01 Z-13.3 F150.0
G00 Z2.0 (ಸುರಕ್ಷಿತ ರಿಟ್ರ್ಯಾಕ್ಟ್)
G91 G28 X0 Y0 Z0 (ಇಂಟರ್ ಮೀಡಿಯೆಟ್ ಪಾಯಿಂಟ್)
G90 (ಎಬ್ ಸಲ್ಯೂಟ್ ಮೋಡ್ ಮತ್ತೆ ತರುವುದು)
G29 ರಿಟರ್ನ್ ಫ್ರಮ್ ಮಶಿನ್ ಝೀರೋ
• ವರ್ಚುವಲ್ ಅಪೊಸಿಟ್ G28
ಈ ಕಮಾಂಡ್ ನಿಂದಾಗಿ ಟೂಲ್ ಹಿಂಭಾಗದ ಇಂಟರ್ ಮೀಡಿಯೆಟ್ ಪಾಯಿಂಟ್ ನಿಂದ ಕರಂಟ್ ಟೂಲ್ ಪೋಸಿಶನ್ ಮೂಲಕ ಮಶಿನ್ ಝೀರೋಗೆ ತಲುಪಬಲ್ಲದು.
ಪ್ರೊಗ್ರಾಮ್ ಫಾರ್ಮೆಟ್
G29 X(U)...Z(W)...
X...Z...G90 ಗೋಸ್ಕರ ಟಾರ್ಗೇಟ್ ಪಾಯಿಂಟ್ ಎಬ್ ಸಲ್ಯೂಟ್
U...W...G90/G91 ಟಾರ್ಗೆಟ್ ಪಾಯಿಂಟ್ ಇನ್ ಕ್ರಿಮೆಂಟಲ್
ಟೂಲ್ ನಂಬರ್ ಒಂದು ಕೆಲಸ ನಿರ್ವಹಿಸುತ್ತಿದೆ (ವರ್ಕಿಂಗ್)
G90 G00 X50.0 Y30.0
Z2.0
G01 Z-15.0 F150.0 ಟೂಲ್ ಕಾರ್ಯವಸ್ತುವಿನ ಕೆಳಗೆ G28 X50 Y30.0
Z2.0 XY ಕರಂಟ್ ಪೊಸಿಶನ್ ಮೂಲಕ Z2.0 ಮೊದಲಾಗಿ
M06 ಟೂಲ್ ಕ್ರಮಾಂಕ ಎರಡು ನಡೆಯುತ್ತಿರುವುದು
...
G90 G29 X75.0 Y40.0 Z2.0
ಕೋಆರ್ಡಿನೇಟ್ ಹೊಸ ಟಾರ್ಗೇಟ್ ಸ್ಥಾನವನ್ನು ತೋರಿಸುತ್ತದೆ.
ಪ್ರತ್ಯಕ್ಷ ಮಶಿನ್ ನಲ್ಲಿ ಏನು ನಡೆಯಬಲ್ಲದು ಎಂಬುದನ್ನು ನೋಡಿರಿ.
1. ಮೊದಲ ಟೂಲ್ ನಿಂದ Z-15.0 ಈ ಆಳದಲ್ಲಿ X50 Y30 ಯಂತ್ರಣೆಯಯಾಗಬಲ್ಲದು.
2. ಟೂಲ್ ಕ್ರಮಾಂಕ 1 Z2.0 ನಷ್ಟು ದೂರದಲ್ಲಿ ರಿಟ್ರ್ಯಾಕ್ಟ್ ಆಗಬಲ್ಲದು. ಈ ಪೋಸಿಶನ್ ನಿಂದ ಮೂರೂ ಅಕ್ಷಗಳು ಮಶಿನ್ ಝೀರೋದಲ್ಲಿ ಮತ್ತೆ ಬರಬಲ್ಲವು.
3. ಟೂಲ್ ಕ್ರಮಾಂಕ 2 ಕೆಲಸಗಳನ್ನು ಮಾಡಬಲ್ಲದು. G29 ಟಾರ್ಗೆಟ್ ನ ಜಾಗವನ್ನು ತೋರಿಸುತ್ತದೆ.
X75.0 Y40.0 ಮತ್ತು Z2.0
4. ಕಂಟ್ರೋಲ್ ಕಳೆದ ಸಮಯದ ಇಂಟರ್ ಮೀಡಿಯೆಟ್ ಬಿಂದು (X50 Y30 Z2.0) ಬಳಸಿ ಟೂಲ್ ಮೊದಲು ಪೊಸಿಶನ್ ಗೆ ತರಲಾಗುತ್ತದೆ.
5. ಅದರ ನಂತರ ಪ್ರತ್ಯಕ್ಷ ಟಾರ್ಗೆಟ್ ಗೆ X75.0 Y40.0 Z2.0 ಬರಬಲ್ಲದು.
ಮಹತ್ವದ ಸೂಚನೆ : ಸಾಮಾನ್ಯವಾಗಿ G29 ಈ ಕಮಾಂಡ್ ಪ್ರೊಗ್ರಾಮ್ ನಲ್ಲಿ ಬಳಸಲಾಗುತ್ತದೆ. ಕಾರಣ G29 ಈ ವರ್ಚುವಲ್ ಅಪೋಸಿಟ್ G28 ಇರುತ್ತದೆ.
G27 ಮಶಿನ್ ಝೀರೋ ರಿಟರ್ನ್ ಪೋಸಿಶನ್ ಚೆಕ್
• ಪ್ರಸ್ತುತ ಪ್ರಗತಿಗೊಂಡಿರುವ ಪ್ರೊಗ್ರಾಮ್ ನಿಂದ ಈ ಕಮಾಂಡ್ ನಿಂದ ಪ್ರತ್ಯಕ್ಷವಾಗಿ ಯಾವುದೇ ಉಪಯೋಗವಿಲ್ಲ.
• ಹಳೆಯ ಕಂಟ್ರೋಲ್ ನಲ್ಲಿ G92 ಅಥವಾ G50 ಪೋಸಿಶನ್ ರಜಿಸ್ಟರ್ ಬಳಸುವಲ್ಲಿ G27 ಉಪಯೋಗಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ ವರ್ಕ್ ಆಫ್ ಸೆಟ್ ನ ವ್ಯವಸ್ಥೆ ಇರುವಲ್ಲಿ ಈ ಕಮಾಂಡ್ ನ ಉಪಯೋಗವಾಗುತ್ತದೆ.
• G92 ರಜಿಸ್ಟರ್ ನಲ್ಲಿ X, Y, Z ಕೋಆರ್ಡಿನೇಟ್ ಭಾಗವನ್ನು ಝೀರೋದಿಂದ ಕರಂಟ್ ಟೂಲ್ ಪೊಸಿಶನ್ ತನಕದ ಸ್ಟೋರ್ ಮಾಡಲಾಗಿರುತ್ತದೆ.
• ಮಹತ್ವದ ಅಂಶವೆಂದರೆ ಈ ಕೋಆರ್ಡಿನೇಟ್ ಮಶಿನ್ ಝೀರೋದಿಂದ ಇರುವುದಿಲ್ಲ.
ಪ್ರೊಗ್ರಾಮ್ ಫಾರ್ಮೆಟ್ G27 X(U)…Z(W)…
X…Z… ಎಬ್ ಸಲ್ಯೂಟ್ ಕಮಾಂಡ್ ನಲ್ಲಿ ರೆಫರನ್ಸ್ ಪೊಸಿಶನ್ (G90) ಇನ್ ಕ್ರಿಮೆಂಟಲ್ ಕಮಾಂಡ್ ನಲ್ಲಿ ರೆಫರನ್ಸ್ ಪೊಸಿಶನ್ (G91)
U...W...G90/G91 ರೆಫರನ್ಸ್ ಪೊಸಿಶನ್ ಇನ್ ಕ್ರಿಮೆಂಟಲ್ ಕಮಾಂಡ್
G27 ಬಳಸಿ ಪ್ರೊಗ್ರಾಮ್ : G90 ಎಬ್ ಸಲ್ಯೂಟ್ ಮೋಡ್ (ಚಿತ್ರ ಕ್ರ. 6)
 

6_1  H x W: 0 x 
 
G92 X300 Y200 Z100.0 ಮಶಿನ್ ಝೀರೊ ಕರಂಟ್ ಟೂಲ್ ಲೊಕೇಶನ್
G00 X20 Y15 Z2.0 ಪ್ರಾರಂಭದ ಬಿಂದು ಕಟಿಂಗ್ ಗೋಸ್ಕರ
G01 Z-5.0 F12.0 ಮಶಿನ್ ಎಬ್ ಸಲ್ಯೂಟ್ ಆಳ 5 ಮಿ.ಮೀ.
G91 G01 X 40 F150.0 ಮಶಿನ್ ಪಾರ್ಟ್ ಇನ್ ಕ್ರಿಮೆಂಟಲ್ ಕಮಾಂಡ್ ಮೋಡ್ ನಲ್ಲಿ ಕಟ್ ¼
Y30.0 ಮಶಿನ್ ಪಾರ್ಟ್ ಇನ್ ಕ್ರಿಮೆಂಟಲ್ ಕಮಾಂಡ್ ಮೋಡ್ ನಲ್ಲಿ ಕಟ್ 2/4
X40.0 ಮಶಿನ್ ಪಾರ್ಟ್ ಇನ್ ಕ್ರಿಮೆಂಟಲ್ ಕಮಾಂಡ್ ಮೋಡ್ ನಲ್ಲಿ ಕಟ್ 3/4
Y30.0 ಮಶಿನ್ ಪಾರ್ಟ್ ಇನ್ ಕ್ರಿಮೆಂಟಲ್ ಕಮಾಂಡ್ ಮೋಡ್ ನಲ್ಲಿ ಕಟ್ 4/4
G00 Z7 ರಿಟ್ರ್ಯಾಕ್ಟ್ 7 ಮಿ.ಮೀ.
G27 x 280.0 Y145.0 Z96.0 ಮಶಿನ್ ಝೀರೋದಲ್ಲಿ ಮೋಶನ್ ನಿಲ್ಲುತ್ತದೆ.
ಮೇಲಿನ ಪ್ರೊಗ್ರಾಮ್ ನಲ್ಲಿ G27 ಬ್ಲಾಕ್ ನೋಡಿರಿ.
ಯಂತ್ರಣೆಯು ಪೂರ್ತಿಯಾದ ನಂತರ ಎಲ್ಲ ಅಕ್ಷಗಳನ್ನು G27 ರಲ್ಲಿ ತಿಳಿಸಿರುವ ಬಿಂದುವಿನಲ್ಲಿ ತಲುಪಿ ನಿಲ್ಲುತ್ತವೆ. ಈ ಬಿಂದು ಮಶಿನ್ ಝೀರೊ ದ ಕುರಿತು ಇನ್ ಕ್ರಿಮೆಂಟಲ್ ಕಮಾಂಡ್ ಮೋಡ್ ನಲ್ಲಿರುತ್ತದೆ. ಇದರಲ್ಲಿ ಎಲ್ಲ ಅಕ್ಷಗಳು ಪ್ರತ್ಯಕ್ಷವಾಗಿ ಮಶಿನ್ ಝೀರೊ ತನಕ ತಲುಪಿವೆಯೇ ಇಲ್ಲವೇ ಎಂಬ ಪ್ರಶ್ನೆ ಇದರಲ್ಲಿದೆ.
ಆದರೆ ಬ್ಲಾಕ್ ಪೂರ್ತಿಯಾದ ನಂತರ G27 ಪರೀಕ್ಷೆಯನ್ನು ಮಾಡುತ್ತದೆ ಮತ್ತು ಒಂದು ವೇಳೆ ಮಶಿನ್ ಝೀರೊ ಬಿಂದುವಿನ ತನಕ ತಲುಪಿದಲ್ಲಿ ಅಕ್ಷದ ಖಾತರಿಯನ್ನು ನೀಡುವಂತಹ ದೀಪಗಳು ಪ್ರಾರಂಭಗೊಳ್ಳುತ್ತವೆ. ಒಂದುವೇಳೆ ಅಕ್ಷವು ಝೀರೋ ಮಶಿನ್ ನಲ್ಲಿ ತಲುಪದಿದ್ದಲ್ಲಿ ಕಂಟ್ರೋಲ್ ಅಲಾರ್ಮ್ ನೀಡಬಲ್ಲದು ಮತ್ತು ಮುಂದಿನ ಪ್ರಕ್ರಿಯೆಯು ನಿಲ್ಲಬಲ್ಲದು.
G27 ತಿಳಿದುಕೊಳ್ಳಲು ಎಲ್ಲಕ್ಕಿಂತಲೂ ಸುಲಭವಾದ ಉಪಾಯವೆಂದರೆ ಸಂಪೂರ್ಣ ಪ್ರೊಗ್ರಾಮ್ ಎಬ್ ಸಲ್ಯೂಟ್ ಮೋಡ್ ನಲ್ಲಿ ರೂಪಾಂತರಿಸಿರಿ.
G90 ಎಬ್ ಸಲ್ಯೂಟ್ ಮೋಡ್
G92 X300.0 Y200.0 Z100.0
ಪ್ರಸ್ತುತ ಟೂಲ್ ಲೊಕೇಶನ್ ಮಶಿನ್ ಝೀರೋ
G00 X20.0 Y15.0 Z2.0 ಕಟಿಂಗ್ ಗೋಸ್ಕರ ಪ್ರಾರಂಭ
G01 Z-5.0 F120.0 ಎಬ್ ಸಲ್ಯೂಟ್ ಆಳ 5 ಮಿ.ಮೀ.ನಲ್ಲಿ ಮಶಿನ್
G01 X60.0 F150.0 ಮಶಿನ್ ಪಾರ್ಟ್ ಎಬ್ ಸಲ್ಯೂಟ್ ಮೋಡ್ ಕಟ್ 1/4
Y 45.0 ಮಶಿನ್ ಪಾರ್ಟ್ ಎಬ್ ಸಲ್ಯೂಟ್ ಮೋಡ್ ಕಟ್ 2/4
Y20.0 ಮಶಿನ್ ಪಾರ್ಟ್ ಎಬ್ ಸಲ್ಯೂಟ್ ಮೋಡ್ ಕಟ್ 3/4
Y15.0 ಮಶಿನ್ ಪಾರ್ಟ್ ಎಬ್ ಸಲ್ಯೂಟ್ ಮೋಡ್ ಕಟ್ 4/4
G00 X2.0 ರಿಟ್ರ್ಯಾಕ್ಟ್ 2 ಮಿ.ಮೀ.ನಲ್ಲಿ
G27 X280.0 Y185.0 Z98.0 ಮಶಿನ್ ಝೀರೋದಲ್ಲಿ ಮೋಶನ್ ನಿಲ್ಲುತ್ತದೆಯೇ? ಎಂಬುದನ್ನು ಪರಿಶೀಲಿಸಿರಿ.
ಕೊನೆಯ ಎರಡು X, Y, Z ಪೊಸಿಶನ್ ಬರೆಯಿರಿ. (G27 ಗಿಂತ ಹೆಚ್ಚಿದ್ದು)
ಇದು ಈ ಮುಂದಿನಂತಿದೆ X20.0 Y15.0 Z2.0
ಅದರ ನಂತರ G92 ನಲ್ಲಿರುವ ಅಕ್ಷಗಳಿಗೆ ಅನುಸಾರವಾಗಿ ಮೌಲ್ಯವನ್ನು ಕಳೆಯಿರಿ.
XX, YY, ZZ
G27 ಬಳಕೆಗೋಸ್ಕರ ಸೂಚನೆ
• G27, G40 ಮೋಡ್ ನಲ್ಲಿ ಬಳಸಬೇಕು. (ಕಟರ್ ತ್ರಿಜ್ಯ)
• ಮಶಿನ್ ಲಾಕ್ ಆಗಿರುವಾಗ G27 ಅನ್ವಯಿಸುವುದಿಲ್ಲ. ಆಫ್ ಸೆಟ್ ಕ್ಯಾನ್ಸಲ್
• G91 ಇನ್ ಕ್ರಿಮೆಂಟಲ್ ಕಮಾಂಡ್ ಮೋಡ್ ಪ್ರೊಗ್ರಾಮಿಂಗ್ ಹೆಚ್ಚು ಲಾಭಕಾರಿಯಾಗುತ್ತದೆ.
• ಸಾಮಾನ್ಯವಾದ ಬಳಕೆಯಲ್ಲಿ ಮಶಿನನ್ ಝೀರೋ ಗೆ ತಿರುಗಿ ಬರುವಲ್ಲಿ G28 ಬಳಸಬೇಕು. ಇದರಲ್ಲಿ ಪೊಸಿಶನ್ ಪರೀಕ್ಷೆಯು ಒಳಗೊಂಡಿರುತ್ತದೆ. (ಬಿಲ್ಟ್ ಇನ್)
• ಮಿಲ್ಲಿಂಗ್ ಮತ್ತು ಟರ್ನಿಂಗ್ ನಲ್ಲಿ ಇದನ್ನು ಬಳಸಲಾಗುತ್ತದೆ.
G30 ಸೆಕಂಡರಿ ಮಶಿನ್ ಝೀರೋ ರಿಟರ್ನ್
ಹೆಚ್ಚಿನ ವರ್ಟಿಕಲ್ ಮಶಿನ್ ಗಳಲ್ಲಿ ಕೇವಲ ಒಂದು ಮಶಿನ್ ಝೀರೋ ಇರುತ್ತದೆ. ಒಂದು ಮಶಿನ್ ಝೀರೋ ಅಂದರೆ ಪ್ರೈಮರಿ ಮಶಿನ್ ಝೀರೋ. ಪೇಲೆಟ್ ಚೇಂಜರ್ಇರುವ ಹಾರಿಝಾಂಟಲ್ ಮಶಿನಿಂಗ್ ಸೆಂಟರ್ ಗೋಸ್ಕರ ಇನ್ನೊಂದು ಸೆಕಂಡರಿ ಮಶಿನ್ ಝೀರೋ ಲೊಕೇಶನ್ ನ ಆವಶ್ಯಕತೆ ಇರುತ್ತದೆ. ಇದನ್ನು ಎರಡು ಸ್ವತಂತ್ರ ಪೆಲೇಟ್ ಅಲೈನ್ ಮಾಡಲು ಬಳಸಲಾಗುತ್ತದೆ. G28 ಮತ್ತು G30 ರ ಕೆಲಸವು ಸಮಾನವೇ ಆಗಿರುತ್ತದೆ.
G28 ರಿಟರ್ನ್ ಟೂ ಪ್ರೈಮರಿ ಮಶಿನ್ ಝೀರೋ
G29 ರಿಟರ್ನ್ ಟೂ ಸೆಕಂಡರಿ ಮಶಿನ್ ಝೀರೋ
@@AUTHORINFO_V1@@