ಮ್ಯಾನ್ಯುವಲ್ ಮತ್ತು ಕ್ಯಾಮ್ ಪ್ರೊಗ್ರಾಮಿಂಗ್

@@NEWS_SUBHEADLINE_BLOCK@@

Lohkarya - Udyam Prakashan    19-May-2021   
Total Views |
ಕ್ಯಾಮ್ ಅಂದರೆ ಕಂಪ್ಯೂಟರ್ ನ ಸಹಾಯದಿಂದ ಉತ್ಪಾದನೆ ಎಂಬುದು (ಕಂಪ್ಯೂಟರ್ ಎಡೆಡ್ ಮ್ಯಾನ್ಯುಫ್ಯಾಕ್ಚರಿಂಗ್) ಎಲ್ಲರಿಗೂ ತಿಳಿದಿರುವ ಅಂಶವಾಗಿದೆ. ಹಾಗೆಯೇ ಪ್ರಸ್ತುತ ಎಲ್ಲಿ ಲೋಹಗಳ ಯಂತ್ರಣೆಯ ಸಂಬಂಧವಿರುತ್ತದೆಯೋ, ಅಲ್ಲಲ್ಲಿ ಇದನ್ನು ಸಮಾನಾರ್ಥವಾಗಿ ಅಂದರೆ ಕಂಪ್ಯೂಟರ್ ನ ಸಹಾಯದಿಂದ ಯಂತ್ರಣೆಯನ್ನು (ಕಾಂಪ್ಯೂಟರ್ ಎಡೆಡ್ ಮಶಿನಿಂಗ್) ಮಾಡಲಾಗುತ್ತದೆ. ಪಾರಂಪಾರಿಕ ಮ್ಯಾನ್ಯುವಲ್ NC ಪ್ರೊಗ್ರಾಮ್ ಹೋಲಿಸಿದಲ್ಲಿ ಕ್ಯಾಮ್ ಪ್ರೊಗ್ರಾಮಿಂಗ್ ನ ಲಾಭಗಳನ್ನು ತಿಳಿದುಕೊಳ್ಳೋಣ. ಅಲ್ಲದೇ ಅದರ ಕುರಿತು ಆಳವಾದ ಚರ್ಚೆ ಮತ್ತು ವಿಚಾರ ಮಾಡುವ ಮುನ್ನ ಕ್ಯಾಡ್ ಅಥವಾ ಕ್ಯಾಮ್ ನ ಇತಿಹಾಸವನ್ನು ತಿಳಿದುಕೊಳ್ಳೋಣ.
 
ಕ್ಯಾಡ್ ಅಥವಾ ಕ್ಯಾಮ್ ನ ಇತಿಹಾಸವು 1960 ರ ಕಾಲಾವಧಿಯಿಂದ ಪ್ರಾರಂಭವಾಯಿತು. ಈ ಕಾಲಾವಧಿಯಲ್ಲಿ ಅನೇಕ ವಿಶ್ವವಿದ್ಯಾಲಯಗಳು, ಬೃಹತ್ OEM ಮತ್ತು ಸಂರಕ್ಷಣೆಯ ಪ್ರಯೋಗ ಶಾಲೆಗಳು 2D ದೃಶ್ಯಗಳನ್ನು ತಯಾರಿಸುವುದು, ಜಟಿಲವಾದ ಗಣಿತದ ಅಲ್ಗೋರಿದಮ್ ನ ವಿಶ್ಲೇಷಣೆ ಹಾಗೆಯೇ ಪ್ರಾಥಮಿಕ ಸಿ.ಎನ್.ಸಿ. ಮಶಿನ್ ನಡೆಸಲು 2D NC ಟೇಪ್ ನ ನಿರ್ಮಿತಿ ಇಂತಹ ಕೆಲಸಗಳನ್ನು ಮೈನ್ ಫ್ರೇಮ್ ಕಂಪ್ಯೂಟರ್ ಬಳಸಿ ಮಾಡಲು ಪ್ರಾರಂಭಿಸಲಾಗಿತ್ತು. 60 ನೇ ದಶಕ ಕೊನೆಯಲ್ಲಿ ಮತ್ತು 70 ನೇ ದಶಕದ ಪ್ರಾರಂಭದಲ್ಲಿ ಕ್ಯಾಡ್ ಮತ್ತು ಕ್ಯಾಮ್ ತಂತ್ರಕ್ಕೆ ಇಂಟಿಗ್ರೆಟೆಡ್ ದೃಷ್ಟಿಕೋನವು ಲಭಿಸಿತು. 1980 ನೇ ದಶಕದ ಪ್ರಾರಂಭದಲ್ಲಿ ಅಭಿವೃದ್ಧಿ ಮಾಡಿರುವ ಮಾಸ್ಟರ್ ಕ್ಯಾಮ್ ನಂತಹ ಸಾಫ್ಟ್ ವೇರ್ ಯಾವಾಗಲೂ ಒಂದು ಇಂಟಿಗ್ರೇಟೆಡ್ ಕ್ಯಾಡ್ ಅಥವಾ ಕ್ಯಾಮ್ ಸಾಫ್ಟ್ ವೇರ್ ಎಂಬುದಾಗಿ ಪರಿಚಿತವಾಯಿತು. ಆದರೆ ನಾವು ಈ ಪ್ರಾರಂಭದ ವಿಚಾರಗಳಿಂದ ತುಂಬಾ ದೂರ ತಲುಪಿದ್ದೇವೆ. ಆದರೆ ಮೂಲಭೂತ ಅಂಶಗಳು ಇಂದಿಗೂ ಅಷ್ಟೇ ಉಪಯುಕ್ತವಾಗಿವೆ ಮತ್ತು ಹೆಚ್ಚಿನ ಹೊಸ ತಂತ್ರಜ್ಞಾನವು ಅದರಲ್ಲಿಯೇ ಅವಲಂಬಿಸಿದೆ.
ಕ್ಯಾಡ್ ಅಥವಾ ಕ್ಯಾಮ್ ಸರಿಯಾಗಿ ಅರಿತುಕೊಂಡು ಮುಂದಿನ ಉಪ ಶೀರ್ಷಿಕೆಗಳಲ್ಲಿ ಅವುಗಳನ್ನು ವಿಂಗಡಿಸಲಾಗಿದೆ.
2D ಕ್ಯಾಡ್
• ವಿವರವಾದ ರೇಖಾಚಿತ್ರಗಳು (ಡ್ರಾಯಿಂಗ್)
• ಒಟ್ಟುಗೂಡಿಸುವಿಕೆ
3D ಕ್ಯಾಡ್
• ಯಂತ್ರಭಾಗಗಳು ಮತ್ತು ಉತ್ಪಾದನೆಗಳ ಡಿಸೈನ್ ಗಳಿಗೆ ಕ್ಯಾಡ್
• ಮೋಲ್ಡ್ ಟೂಲ್ ಮತ್ತು ಇಲೆಕ್ಟ್ರೋಡ್ ಡಿಸೈನ್ ಗೋಸ್ಕರ ಕ್ಯಾಡ್
• ಬಹೂಪಯೋಗಿ ಅಸೆಂಬ್ಲಿಗೋಸ್ಕರ ಕ್ಯಾಡ್
2.5 ಅಕ್ಷದ ಕ್ಯಾಮ್
• 2D ಪ್ರೊಫೈಲಿಂಗ್
• 2.5 D ಯಂತ್ರಣೆ (ಟರ್ನಿಂಗ್, ಮಿಲ್ಲಿಂಗ್, ವಾಯರ್ ಇಡಿಎಮ್)
3 ಅಕ್ಷದ ಕ್ಯಾಮ್
• 3D ಪ್ರೊಫೈಲಿಂಗ್
• ಕ್ಲಿಷ್ಟ ಸರ್ಫೇಸ್ ಅಥವಾ ಫಿನಿಶ್ ಯಂತ್ರಣೆ
ಬಹು ಅಕ್ಷಗಳಿರುವ ಕ್ಯಾಮ್
• 4 ಮತ್ತು ಅದಕ್ಕಿಂತ ಹೆಚ್ಚು ಅಕ್ಷಗಳು ಆವಶ್ಯಕವಿರುವ ಯಂತ್ರಭಾಗಗಳ ಯಂತ್ರಣೆ
ಕಳೆದ 20 ವರ್ಷಗಳಲ್ಲಿ ಕ್ಯಾಡ್ ಅಥವಾ ಕ್ಯಾಮ್ ಪ್ರಣಾಲಿಕೆಯಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿವೆ. ಇದರಲ್ಲಿ ವೇಗವಾದ ಕಂಪ್ಯೂಟರೈಜೆಶನ್, ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವಲ್ಲಿ ಪ್ರಯತ್ನವನ್ನು ಮಾಡಲಾಗಿದೆ. ಹಿಂದಿನ ಕ್ಯಾಡ್ ಅಥವಾ ಕ್ಯಾಮ್ ವ್ಯವಸ್ಥೆಯಲ್ಲಿ ಎರಡು ಆಯಾಮಗಳಿರುವ ಜಾಮೆಟ್ರಿಯನ್ನು ತಯಾರಿಸುವುದು ಮತ್ತು ಸಂಪಾದನೆಯನ್ನು ಮಾಡುವಲ್ಲಿ ಸೀಮಿತವಾಗಿದ್ದವು. ಅಲ್ಲದೇ ಅದರಲ್ಲಿ ಇನ್ನಿತರ ಯಾವುದೇ ಅಂಶಗಳಿಗಿಂತ ಸ್ವಯಂಚಾಲನೆಯಲ್ಲಿ (ಡ್ರಾಯಿಂಗ್ ತಯಾರಿಸುವಾಗ) ಸುಧಾರಣೆಗಳನ್ನು ಮಾಡುವ ಕಲ್ಪನೆಯೂ ಮಹತ್ವದ್ದಾಗಿತ್ತು. ಯಂತ್ರಭಾಗಗಳ ಡಿಸೈನ್ ಮತ್ತು ನಿರ್ಮಿತಿಯನ್ನು ಮಾಡುವಲ್ಲಿ ಈ ಹಿಂದೆ ಹಲವಾರು ವಾರಗಳ ಕಾಲಾವಧಿಯು ತಗಲುತ್ತಿತ್ತು. ಆದರೆ ಈಗ ಆ ವಾರಗಳ ಕಾಲಾವಧಿಯು ಕಡಿಮೆಯಾಗಿ, ಗಂಟೆಗಳಲ್ಲಿ ಪರಿವರ್ತನೆಯಾಯಿತು, ಕಾಲಾಂತರದಲ್ಲಿ ಅದು ಕೆಲವೇ ನಿಮಿಷಗಳಷ್ಟು ಕಡಿಮೆಯಾಯಿತು. ಅದರಂತೆ ಕ್ಯಾಮ್ ನಲ್ಲಿಯೂ ಈ ಹಿಂದಿಗಿಂತ ಅನೇಕ ಸುಧಾರಣೆಗಳೂ ಆಗಿವೆ. ಈ ಹಿಂದೆ 2D ಯಂತ್ರಣೆಯಲ್ಲಿ ಹೆಚ್ಚು ಒತ್ತನ್ನು ನೀಡಲಾಗುತ್ತಿತ್ತು. ಅದನ್ನು ಹೋಲಿಸಿದಲ್ಲಿ ಈಗ ಕ್ಯಾಮ್ ಅತ್ಯಂತ ಸುಲಭವಾಗಿದೆ. ಅಲ್ಲದೇ ಜಟಿಲವಾದ 3D ಮತ್ತು ಬಹು ಅಕ್ಷೀಯ ಯಂತ್ರಣೆಯನ್ನು ನಿರ್ವಹಿಸುವುದೂ ಸಾಧ್ಯವಾಗಿದೆ. ಟರ್ನಿಂಗ್, ಮಿಲ್ಲಿಂಗ್, ಗ್ರೈಂಡಿಂಗ್, ವಾಯರ್ ಇಡಿಎಮ್, ಸ್ವಿಸ್ ಟರ್ನಿಂಗ್, ಲೇಸರ್ ಕಟಿಂಗ್ ಮುಂತಾದ ಉತ್ಪಾದನೆಯ ಪ್ರಕ್ರಿಯೆಗಳ ಅನೇಕ ಕೆಲಸದ ರೀತಿಗಳು ಪ್ರಸ್ತುತ ಕ್ಯಾಮ್ ಸಾಫ್ಟ್ ವೇರ್ ಮೂಲಕ ಸಹಜವಾಗಿಯೂ ಪ್ರೊಗ್ರಾಮ್ ಮಾಡಲಾಗುತ್ತಿವೆ.
ಕ್ಯಾಡ್ ನ ಹೋಲಿಕೆಯಲ್ಲಿ ಕ್ಯಾಮ್ ಅಥವಾ NC ಪ್ರೊಗ್ರಾಮ್ ಮಶಿನ್ ಟೂಲ್ ನಡೆಸಲು ಬೇಕಾಗುವ ಔಟ್ ಪುಟ್ ಆಗಿರುವುದರಿಂದ ಅದನ್ನು ತಯಾರಿಸಲು ಕ್ಯಾಮ್ ನಲ್ಲಿ ಸಾಕಷ್ಟು ಪ್ರಮಾಣದ ಮಾಹಿತಿಯನ್ನು ಸೇರಿಸುವುದು ಅತ್ಯಾವಶ್ಯಕವಾಗಿದೆ. ಕಟಿಂಗ್ ಟೂಲ್, ಮಟೀರಿಯಲ್, ಮಶಿನ್ ಡಾಟಾ ಇಂತಹ ಪ್ಯಾರಾಮೀಟರ್ ಗಳು ಇದರಲ್ಲಿ ಅನಿವಾರ್ಯವಾಗಿವೆ.
ಮ್ಯಾನ್ಯುವಲ್ ಮತ್ತು ಕ್ಯಾಮ್ ಪ್ರೊಗ್ರಾಮಿಂಗ್
ಮೊದಲು ಪ್ರತಿಯೊಂದು ಸಂಜ್ಞೆಯ ಅರ್ಥ ಏನು ಎಂಬುದನ್ನು ತಿಳಿದುಕೊಳ್ಳೋಣ.
ಮ್ಯಾನ್ಯುವಲ್ ಪ್ರೊಗ್ರಾಮಿಂಗ್ : ಯಂತ್ರಣೆಯ ಪ್ರೊಫೈಲ್, ನಿಯತಾಂಕಗಳು ಮತ್ತು ಯಂತ್ರಭಾಗಗಳು ಅಪೇಕ್ಷಿಸಿರುವ ಟಾಲರನ್ಸ್ ಪಡೆಯಲು, ಸಿ.ಎನ್.ಸಿ. ಮಶಿನ್ ನಡೆಸುವ ಸುಲಭ ಸೂಚನೆಗಳ ಸೆಟ್ (G ಮತ್ತು M ಕೋಡ್) ಕೈಯಿಂದ ಬರೆಯುವಂತಹ ಪಾರಂಪಾರಿಕವಾದ ರೀತಿ.
ಕ್ಯಾಮ್ ಪ್ರೊಗ್ರಾಮಿಂಗ್ : ಯಂತ್ರಣೆಯ ಪ್ರೊಫೈಲ್, ನಿಯತಾಂಕ ಮತ್ತು ಯಂತ್ರಭಾಗಗಳ ಅಪೇಕ್ಷಿಸಿರುವ ಟಾಲರನ್ಸ್ ಪಡೆಯಲು, ಸಿ.ಎನ್.ಸಿ. ಮಶಿನ್ ನಡೆಸುವ ಸುಲಭವಾದ ರೀತಿಯಿಂದ ತುಂಬಾ ಕ್ಲಿಷ್ಟ ಸೂಚನೆಗಳ ಸೆಟ್ (G ಮತ್ತು M ಕೋಡ್, ಮ್ಯಾಕ್ರೋ, ವಿಶೇಷ ರುಟೀನ್, ಟ್ರಾನ್ಸ್ ಫಾರ್ಮೇಶನ್ ಇತ್ಯಾದಿ) ಒಂದು ವಿಶೇಷ ಸಾಫ್ಟ್ ವೇರ್ ಮೂಲಕ ನಿರ್ಮಿಸುವ ಒಂದು ಆಧುನಿಕ ರೀತಿ.
 

1_1  H x W: 0 x 
 
ಕ್ಯಾಡ್ ಅಥವಾ ಕ್ಯಾಮ್ ಪ್ರಣಾಳಿಕೆಯು ಪ್ರಮುಖ ಪ್ರವಾಹದಲ್ಲಿ ಬರುವಲ್ಲಿ ಮ್ಯಾನ್ಯುವಲ್ ಪ್ರೊಗ್ರಾಮಿಂಗ್ ಇದೇ ಪ್ರೊಗ್ರಾಮಿಂಗ್ ನ ಎಲ್ಲರಿಂದಲೂ ಮನ್ನಣೆಯನ್ನು ಪಡೆದಿರುವ ರೀತಿಯಾಗಿದೆ. ಆದರೂ ಕೂಡಾ ಇಂದು ಕೂಡಾ ಅನೇಕ ಜಾಗದಲ್ಲಿ ಮ್ಯಾನ್ಯುವಲ್ ಪ್ರೊಗ್ರಾಮಿಂಗ್ ರೀತಿಯನ್ನು ಬಳಸಲಾಗುತ್ತದೆ. ಈ ರೀತಿಯು ಸುಲಭವಾಗಿದೆ ಮತ್ತು ಯಾರೇ ನಿಪುಣ ಇಂಜಿನಿಯರ್ ಅಥವಾ ತಂತ್ರಜ್ಞರಿಗೆ ಸಾಮಾನ್ಯವಾದ ಪ್ರೊಗ್ರಾಮ್ ಬರೆಯುವಲ್ಲಿ ಅಷ್ಟೇನು ಸಮಯವು ಬೇಕಾಗುವುದಿಲ್ಲ. ಪ್ರಿಜಮ್ಯಾಟಿಕ್ ಯಂತ್ರಭಾಗಗಳ ಯಂತ್ರಣೆಯಲ್ಲಿ, ದೀರ್ಘ ಉತ್ಪಾದನೆಯನ್ನು ನಡೆಸಲು ಮತ್ತು ಕಾರ್ಖಾನೆಯಲ್ಲಿರುವ ಅಪ್ಟಿಮೈಜೆಶನ್ ಗೋಸ್ಕರ ಈ ರೀತಿಯು ಹೆಚ್ಚು ಉಪಯುಕ್ತವಾಗಿರುತ್ತದೆ.
ಕ್ಯಾಮ್ ಪ್ರೊಗ್ರಾಮಿಂಗ್ ಇದು ಈಗ ಪ್ರೊಗ್ರಾಮಿಂಗ್ ನ, ವಿಶೇಷವಾಗಿ ಕ್ಲಿಷ್ಟ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುವಾಗ, ಅನಿವಾರ್ಯ (ಡಿಫ್ಯಾಕ್ಟೋ) ರೀತಿಯನ್ನು ತಯಾರಿಸಲಾಗಿದೆ. ಉದಾಹರಣೆ, ಪೂರೈಸುವಲ್ಲಿ ಸಿ.ಎನ್.ಸಿ. ಮಶಿನ್ ಮತ್ತು ಸಾಫ್ಟ್ ವೇರ್, ಪ್ರೊಗ್ರಾಮಿಂಗ್ ನ ವೃದ್ಧಿಸುತ್ತಿರುವ ವೇಗ, ಪ್ರಕ್ರಿಯೆಯಲ್ಲಿರುವ ಸುರಕ್ಷಿತತೆ ಹೆಚ್ಚಿಸುವ ಆವಶ್ಯಕತೆ, ಸಿ.ಎನ್.ಸಿ. ಮಶಿನ್ ಮತ್ತು ಸಾಫ್ಟ್ ವೇರ್ ಇವುಗಳಿಗೋಸ್ಕರ ಹೂಡಲಾಗುವ ಬಂಡವಾಳದಿಂದ ಲಭಿಸುವ ಲಾಭ.
ಮ್ಯಾನ್ಯುವಲ್ ಮತ್ತು ಕ್ಯಾಮ್ ಪ್ರೊಗ್ರಾಮಿಂಗ್ ನ ಹಲವಾರು ಉದಾಹರಣೆಗಳು
 

2_1  H x W: 0 x 
1. 2D ಯಲ್ಲಿ ಜಾಮೆಟ್ರಿಕಲ್ ಆಕಾರ ಮತ್ತು ನಿಯತಾಂಕಗಳ ಅಳತೆ.
ಎ. ಕ್ಯಾಡ್ ಅಥವಾ ಕ್ಯಾಮ್ : ಸಾಫ್ಟ್ ವೇರ್ ನಲ್ಲಿ ಲಭ್ಯವಿರುವ ಡ್ರಾಯಿಂಗ್ ಟೂಲ್ ಬಳಸಿ ವೇಗವಾಗಿ ತಯಾರಿಸುವುದು ಅಥವಾ ಕ್ಯಾಡ್ ಫೈಲ್ ಆಮದು ಮಾಡುವುದು.
ಬಿ. ಮ್ಯಾನ್ಯುವಲ್ : ಕೈಯಿಂದ ಪ್ರತ್ಯಕ್ಷವಾದ ಪ್ರೊಫೈಲ್ ತೆಗೆಯುವುದು ಅಥವಾ ಮುದ್ರಿಸಿರುವ ಡ್ರಾಯಿಂಗ್ ನ ಸಂದರ್ಭವನ್ನು ಪಡೆಯುವುದು.
2. ಕಾರ್ಯವಸ್ತುಗಳ ಸೆಟಪ್ ಮಾಡುವುದು, ಇದರಲ್ಲಿ ಕಚ್ಚಾ ವಸ್ತುಗಳ ಸ್ಟಾಕ್, ಟೂಲ್ ಹೋಲ್ಡರ್ ಮುಂತಾದ ಅಂಶಗಳ ನಿಖರವಾದ ವಿವರಗಳನ್ನು ಸೇರ್ಪಡಿಸಲಾಗಿರುತ್ತದೆ.
ಎ. ಕ್ಯಾಡ್ ಅಥವಾ ಕ್ಯಾಮ್ : ಡ್ರೇಗ್ ಮತ್ತು ಡ್ರಾಪ್ ಮಾಡಲು ಗ್ರಾಫಿಕ್ ಟೂಲ್ ಗಳ ಬಳಕೆ ಅಥವಾ ಅಲೈನ್ ಮಾಡಲು ಕ್ಲಿಕ್ ಮಾಡುವುದು.
ಬಿ. ಮ್ಯಾನ್ಯುವಲ್ : ವರ್ಚುವಲ್ ಡಾಟಾ ಮತ್ತು ಸಂದರ್ಭ ಬಿಂದುಗಳ ಸ್ಥಾನದ ನಿರ್ಧಾರಕ್ಕೋಸ್ಕರ ಡ್ರಾಯಿಂಗ್ ನಲ್ಲಿರುವ ಸಂದರ್ಭವನ್ನು ಬಳಸುವುದು.
3. ಟರ್ನಿಂಗ್ ಪ್ರೊಫೈಲ್ ಆಯ್ಕೆ ಮಾಡುವುದು.
ಎ. ಕ್ಯಾಡ್ ಅಥವಾ ಕ್ಯಾಮ್ : ಓರೆ ರೇಖೆಗಳನ್ನು ಆಯ್ಕೆ ಮಾಡಲು ಚೇನಿಂಗ್
ಬಿ. ಮ್ಯಾನ್ಯುವಲ್ : ಲಿನಿಯರ್ ಅಥವಾ ರೇಡಿಯಲ್ ನಡೆ, ನಿಯತಾಂಕಗಳು ಮತ್ತು 2D ಸಹ ನಿರ್ದೇಶಕ ಬಿಂದುಗಳಲ್ಲಿ ಡ್ರಾಯಿಂಗ್ ನ ರೂಪಾಂತರತೆ.
4. ಟೂಲ್ ಗಳ ಆಯ್ಕೆ ಮತ್ತು ಮಟೀರಿಯಲ್ ನ ಯಂತ್ರಣೆಯನ್ನು ಮಾಡುವ ಯೋಜನೆ.
ಪ್ರೊಗ್ರಾಮ್ ಮೂಲಕ ಬಳಕೆಗಾರರಿಗೆ ಆವಶ್ಯಕವಿರುವ ಫೀಡ್ ರೇಟ್, ಯಂತ್ರಣೆಯ ವೇಗ, ಸೀಳುಗಳ ಆಳ, ಪ್ರವೇಶದ ನಡೆ ಮತ್ತು ಹಿಮ್ಮೆಟ್ಟುವ ನಡೆ ಇವುಗಳ ದೂರ, ಸುರಕ್ಷಿತವಾದ ದೂರ ಮುಂತಾದವುಗಳನ್ನು ನಿರ್ಧರಿಸಬಲ್ಲೆವು.
ಎ. ಕ್ಯಾಡ್ ಅಥವಾ ಕ್ಯಾಮ್ : GUI ನಿಂದ ಯೋಜನೆಯ ಆಯ್ಕೆಯನ್ನು ಮಾಡುವುದು ಮತ್ತು ಅದನ್ನು ಉಪಯೋಗಿಸುವುದು.
ಬಿ. ಮ್ಯಾನ್ಯುವಲ್ : ಕೋಡ್ ನ ಪ್ರತಿಯೊಂದು ಪಂಕ್ತಿಯನ್ನು ಗಣಿತದ ಮೂಲಕ ಲೆಕ್ಕಾಚಾರ ಮಾಡುವುದು ಮತ್ತು ಅದನ್ನು ಬರೆಯುವುದು.
5. ಲಭ್ಯವಿರುವ ಸ್ಟಾಕ್, ಗೌಜ್ ಮುಂತಾದವುಗಳೊಂದಿಗೆ ಟೂಲ್ ಹೋಲ್ಡರ್ ಅಪ್ಪಳಿಸಬಹುದೇ, ಎಂಬುದನ್ನು ಪರಿಶೀಲಿಸಲು ತಯಾರಿಸಿರುವ ಪ್ರೊಗ್ರಾಮ್ ನ ಸಿಮ್ಯುಲೇಶನ್ ಮಾಡುವುದು.
ಎ. ಕ್ಯಾಡ್ ಅಥವಾ ಕ್ಯಾಮ್ : ಒಂದೇ ಕ್ಲಿಕ್ ನಲ್ಲಿ ಸಿಮ್ಯುಲೇಶನ್
ಬಿ. ಮ್ಯಾನ್ಯುವಲ್ : ಸಾಧ್ಯವಿಲ್ಲ.
6. ಪರಿಶೀಲನೆಯಾದ ನಂತರ NC ಕೋಡ್ ತಯಾರಿಸುವುದು ಸಾಧ್ಯವಿದೆ.
ಎ. ಕ್ಯಾಡ್ ಅಥವಾ ಕ್ಯಾಮ್ : ನಿರ್ದೋಷವಾದ ಮತ್ತು ಪರಿಶೀಲಿಸಿರುವ ಫಲಿತಾಂಶ. ತಕ್ಷಣ ಮತ್ತು ಈ ಹಿಂದಿನ ಆಪರೇಶನ್ ನ ಪರಿಣಾಮ.
ಬಿ. ಮ್ಯಾನ್ಯುವಲ್ : ಯಾವುದೇ ರೀತಿಯಲ್ಲಿ ಹೊಂದಾಣಿಕೆ ಮಾಡಲಾಗುವುದಿಲ್ಲ. ಟೆಕ್ಸ್ಟ್ ಕೈಯಿಂದ ಬರೆಯಲ್ಪಟ್ಟಿರುವುದರಿಂದ ತಪ್ಪುಗಳಾಗುತ್ತವೆ. ದೀರ್ಘ ಪ್ರಕ್ರಿಯೆ.
ಕ್ಯಾಮ್ ಪ್ರೊಗ್ರಾಮಿಂಗ್ ಬಳಸುವ ಆವಶ್ಯಕತೆ
• ನಿಯಂತ್ರಕದಲ್ಲಿ ಮ್ಯಾನ್ಯುವಲ್ ಪ್ರೊಗ್ರಾಮ್ ಬರೆಯಲು ನುರಿತ ಪ್ರೊಗ್ರಾಮರ್ ಅಥವಾ ಮಶಿನ್ ಆಪರೇಟರ್ ಹುಡುಕುವುದು ಇನ್ನಷ್ಟು ಕಠಿಣವಾಗುತ್ತದೆ.
• ಒಮ್ಮೊಮ್ಮೆ ಹಲವಾರು ತುಂಬಾ ಸುಲಭ ಆಪರೇಶನ್ ಗಳಿಗೋಸ್ಕರ G ಕೋಡ್ ನ ನೂರಾರು ಹಂತಗಳನ್ನು ತಯಾರಿಸಬೇಕಾಗುತ್ತದೆ. ಅದನ್ನು ನಿರ್ವಹಿಸುತ್ತಿರುವಾಗ ಎಲ್ಲ ಫೀಡ್ ರೇಟ್/ ಯಂತ್ರಣೆಯ ವೇಗ, ಕೂಲಂಟ್ ಪ್ರಾರಂಭಿಸುವುದು ಮತ್ತು ನಿಲ್ಲಿಸುವುದು, ಟೂಲ್ ಬದಲಾಯಿಸುವುದು, ಯಂತ್ರಣೆಯ ದರ ಮತ್ತು ತುಂಡಿನ ಆಳ, ಟೂಲ್ ಗಳ ತುದಿಯ ವಕ್ರತೆಯ ಅಲೌನ್ಸ್ ಮತ್ತು ಕ್ಲಿಯರನ್ಸ್ ಇವುಗಳ ಗಣನೆ, ಮ್ಯಾನ್ಯುವಲ್ ಪ್ರೊಗ್ರಾಮ್ ನಲ್ಲಿ ಪ್ರೊಗ್ರಾಮರ್ ಗೆ ಸ್ವಂತವೇ ಮಾಡಬೇಕಾಗುತ್ತದೆ. ಇದರಲ್ಲಿ ದೋಷಗಳಾಗುವ ಸಾಧ್ಯತೆಯು ಹೆಚ್ಚಿರುತ್ತವೆ.
 

3_1  H x W: 0 x 
 
• ರಫಿಂಗ್ ಆಪರೇಶನ್ ನಲ್ಲಿ ಅನೇಕ ಪಾಸ್ ಗಳ ಪ್ರೊಗ್ರಾಮ್ ಮಾಡುವುದು ಆವಶ್ಯಕವಾಗಿದೆ. ಪ್ರತಿಯೊಂದು ಹಂತದಲ್ಲಿ ಸ್ವತಂತ್ರ ಸೂಚನೆಗಳನ್ನು ಬರೆಯುವುದು, ಆಫ್ ಸೆಟ್ ಮತ್ತು ಜಾಮೆಟ್ರಿಯ ಗಣನೆಯನ್ನು ಸ್ವಂತವೇ ಅಥವಾ ಗ್ರಾಫಿಕ್ ಟೂಲ್ ಬಳಸಿ ಮಾಡುವುದು ಆವಶ್ಯಕವಾಗಿರುತ್ತದೆ. ಪ್ರಮುಖವಾದ ಅಂಶವೆಂದರೆ, ಮೊದಲನೆಯ ಆಪರೇಶನ್ ನಂತರ ಉಳಿಯುವಂತಹ ಮಟೀರಿಯಲ್ ನ ಸಾಮಾನ್ಯವಾದ ಅನುಮಾನವನ್ನು ಮಾಡಲಾಗುತ್ತದೆ.
 
• ಮ್ಯಾನ್ಯುವಲ್ ಪ್ರೊಗ್ರಾಮ್ ನಲ್ಲಿರುವ ಟೈಪಿಂಗ್ ನ ಒಂದು ತಪ್ಪು ಕೂಡಾ ಸಿ.ಎನ್.ಸಿ. ಮಶಿನ್ ನಲ್ಲಿ ಅತ್ಯಂತ ಗಂಭೀರವಾದ ಅಪಘಾತಗಳಿಗೆ ಕಾರಣವಾಗಬಲ್ಲದು.
• ಹೆಚ್ಚು ದುಬಾರಿಯಾಗಿರುವ ಸಿ.ಎನ್.ಸಿ. ಮಶಿನ್ ಯಂತ್ರಣೆಯ ಕೆಲಸದ ಹೊರತಾಗಿ ನಿಷ್ಕ್ರಿಯವಾಗುವುದಾದಲ್ಲಿ, ದುಬಾರಿಯಾದ ಸಂಪನ್ಮೂಲಗಳ (ನಿಪುಣ ಪ್ರೊಗ್ರಾಮರ್ ಅಥವಾ ಯಂತ್ರಗಳನ್ನು ನಡೆಸುವವರ) ಉಪಯೋಗವನ್ನು NC ಪ್ರೊಗ್ರಾಮ್ ಕೈಯಿಂದಲೇ ಬರೆಯುವುದು, ಖಂಡಿತವಾಗಿಯೂ ಯೋಗ್ಯ ವಿಚಾರವಾಗಿಲ್ಲ.
ಮ್ಯಾನ್ಯುವಲ್ ಪ್ರೊಗ್ರಾಮಿಂಗ್ ಹೋಲಿಸಿದಲ್ಲಿ ಕ್ಯಾಮ್ ಪ್ರೊಗ್ರಾಮಿಂಗ್ ನಿಂದ ಲಭಿಸುವ ಲಾಭಗಳು

4_1  H x W: 0 x 
• ಕ್ಯಾಮ್ ಬಳಸಿ ಮಶಿನ್ ನಲ್ಲಿ ಕಾರ್ಯವಸ್ತುವಿನ ಅಂತಿಮ ಆಕಾರವನ್ನು ತಯಾರಿಸುವುದು, ಟೂಲಿಂಗ್ ಸೂಚಿ ಮತ್ತು ಟೂಲ್ ಪ್ಯಾರಾಮೀಟರ್ ಅಳವಡಿಸುವುದು, ಮಶಿನ್ ನಲ್ಲಿ ಪ್ರಾರಂಭವನ್ನು ಬಿಂದುವಿನಲ್ಲಿ ಸೆಟ್ ಮಾಡುವುದು, ಮುಂತಾದ ಕೆಲಸಗಳನ್ನು ನಾವು ಸುಲಭವಾಗಿ ಮಾಡಬಲ್ಲೆವು. ಮಶಿನ್ ಆನ್ ಮಾಡುವುದು, ಯೋಗ್ಯ ಸ್ಪಿಂಡಲ್ ವೇಗವನ್ನು ಸೆಟ್ ಮಾಡುವುದು, ಆಪ್ಟಿಮೈಜ್ಡ್ ಟೂಲ್ ದಾರಿಯ ಗಣನೆಯನ್ನು ಮಾಡುವುದು ಮತ್ತು ಮಶಿನ್ ನಿಯಂತ್ರಿಸಲು ಆವಶ್ಯಕವಿರುವ ಸಾವಿರಾರು ಪಂಕ್ತಿಗಳ G ಕೋಡ್ ನ ನಿರ್ಮಿತಿಯನ್ನು ಮಾಡುವುದು, ಈ ಎಲ್ಲ ಅಂಶಗಳ ಜವಾಬ್ದಾರಿ ಮತ್ತು ಮುತುವರ್ಜಿಯನ್ನು ಸಾಫ್ಟ್ ವೇರ್ ಪಡೆಯುತ್ತದೆ.
 
• ಕ್ಯಾಮ್ ಸಾಫ್ಟ್ ವೇರ್ ನಲ್ಲಿ ವಿವಿಧ ಅನುಭವದಿಂದ ಲಭಿಸಿರುವ ಡಾಟಾ ಇರುವುದರಿಂದ ಪ್ರೊಗ್ರಾಮ್ ಅತ್ಯಂತ ಹೆಚ್ಚು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡಲಾಗುತ್ತದೆ. ಕ್ಯಾಮ್ ಪ್ರಮಾಣೀಕೃತವಾದ ಪ್ರೊಗ್ರಾಮ್ ನ ಖಾತರಿಯಿಂದಾಗಿ ಆಪರೇಟರ್ ನಿಂದ ಹಸ್ತಕ್ಷೇಪ ಮಾಡಲಾಗಿರುವ ಮತ್ತು ಅದರಿಂದ ಮಾನವನಿಂದ ದೋಷಗಳು ಉಂಟಾಗುವ ಸಾಧ್ಯತೆಯು ತುಂಬಾ ಕಡಿಮೆ ಇರುತ್ತದೆ.
 

5_1  H x W: 0 x 
 
• ಕಂಪ್ಯೂಟರೈಜ್ಡ್ ಮಾಡಿರುವ ಕ್ಯಾಮ್ ಪ್ರೊಗ್ರಾಮ್ ನ ಸಾಫ್ಟ್ ವೇರ್ ನಲ್ಲಿ ಸಿಮ್ಯಲೇಶನ್ ಮಾಡಲಾಗುತ್ತದೆ. ಇದರಿಂದಾಗಿ ಸಿ.ಎನ್.ಸಿ. ಮಶಿನ್ ನಲ್ಲಿ ಪ್ರತ್ಯಕ್ಷವಾಗಿ ಯಂತ್ರಭಾಗಗಳ ಉತ್ಪಾದನೆಯನ್ನು ಮಾಡುವ ಮುಂಚೆ ಹಲವಾರು ಸುಧಾರಣೆಗಳನ್ನು ಅಥವಾ ಬದಲಾವಣೆಗಳನ್ನು ಮಾಡುವುದು ಸಾಧ್ಯ. ಇದರಿಂದಾಗಿ ಸೆಟಪ್ ಗೆ ಬೇಕಾಗುವ ಸಮಯವು ಕಡಿಮೆಯಾಗುತ್ತದೆ. ಸ್ಕ್ರೇಪ್ ಕಡಿಮೆಯಾಗುತ್ತದೆ ಮತ್ತು ಅಪಘಾತಗಳನ್ನು ತಡೆಯಬಹುದು.
• ಕ್ಯಾಮ್ ಪ್ರಣಾಳಿಕೆಯ ಪುನರಾವೃತ್ತಿಯ ಮೂಲಕ ಟೂಲ್ ದಾರಿಯ ಸುಧಾರಣೆ ಮತ್ತು ಯಂತ್ರಣೆಯ ಕ್ರಮವನ್ನು ಸಕ್ಷಮವಾಗಿ ಮಾಡುತ್ತದೆ. ಇದರಿಂದಾಗಿ ಎಲ್ಲಕ್ಕಿಂತಲೂ ಆಪ್ಟಿಮೈಜ್ಡ್ ರೀತಿಯಲ್ಲಿ ಆಯ್ಕೆ ಮತ್ತು ಯಂತ್ರಣೆಗೆ ತಗಲಿರುವ ಸಮಯ ಅಪೇಕ್ಷಿತ ಸಮಯದಷ್ಟು ಇರುವುದು, ಮುಂತಾದ ಅಂಶಗಳು ನಿರ್ಧರಿಸಲಾಗುತ್ತವೆ.

6_1  H x W: 0 x 
 
• ಯಾವ ಪ್ರೊಗ್ರಾಮ್ ನ್ನು ಮ್ಯಾನ್ಯುವಲ್ ಪ್ರೊಗ್ರಾಮಿಂಗ್ ಮೂಲಕ ತಯಾರಿಸುವುದು ವ್ಯವಹಾರದ ನಿಟ್ಟಿನಲ್ಲಿ ಸಾಧ್ಯವಿರುತ್ತದೆಯೋ ಇಂತಹ ಪ್ರೊಗ್ರಾಮ್ ತಯಾರಿಸುವ ಸಾಮರ್ಥ್ಯ.
• ಟೂಲ್ ನ ದಾರಿಯ ಅಳತೆಯು ತುಂಬಾ ಕಡಿಮೆ ಸಮಯದಲ್ಲಿ ಆಗುತ್ತದೆ ಮತ್ತು ಯಂತ್ರಣೆಗೆ ಬೇಕಾಗುವ ಸಮಯದ ಅಂದಾಜನ್ನು ವೇಗವಾಗಿ ಮತ್ತು ನಿರ್ದೋಷವಾಗಿ ಮಾಡುವುದು ಸಾಧ್ಯ.
• ಯಂತ್ರಣೆಯ ಪ್ರಕ್ರಿಯೆಯಲ್ಲಿ ಟೂಲ್ ನಿಂದಾಗಿ ಗಾಳಿಯಲ್ಲಾಗುವ ರೇಪಿಡ್ ಕನಿಷ್ಠ ಪ್ರಮಾಣದಲ್ಲಿ ಇರುವುದರಿಂದ ಸಂಪೂರ್ಣ ಮಶಿನ್ ನ ಕಾರ್ಯಸಾಮರ್ಥ್ಯ ವೃದ್ಧಿಸುತ್ತದೆ.
• ಟೂಲ್ ನ ದಾರಿಯ ಯೋಜನೆಯು ಅನೇಕ ಪರ್ಯಾಯಗಳ ಉಪಲಬ್ಧತೆಯಿಂದಾಗಿ ಕ್ಲಿಷ್ಟ ಪ್ರೊಗ್ರಾಮಿಂಗ್ ಸುಲಭವಾಗುತ್ತದೆ.
• ಗೌಜ್ ಮತ್ತು ಅಪ್ಪಳಿಸುವುದನ್ನು ತಡೆಯಲು 3D ಟೂಲ್ ದಾರಿ ಮತ್ತು ಮಶಿನ್ ಸಿಮ್ಯುಲೇಶನ್
• ಕ್ಯಾಡ್ ಅಥವಾ ಕ್ಯಾಮ್ ಪ್ರಕ್ರಿಯೆಯನ್ನು ಬಳಸುವುದರಿಂದ ಯೋಜನೆ ಮತ್ತು ದಾಖಲೆಗಳ ವ್ಯವಸ್ಥೆಯೂ ಸುಲಭವಾಗುತ್ತದೆ.
• ಕ್ಯಾಡ್ ಅಥವಾ ಕ್ಯಾಮ್ ಸಾಫ್ಟ್ ವೇರ್ ನ ತರಬೇತಿ ಈಗ ಎಲ್ಲಡೆಯಲ್ಲಿ ಪ್ರಚಲಿತವಾಗಿದೆ, ಎಂಬುದನ್ನು ಗಮನಿಸಿದಾಗ ಯಂತ್ರಣೆಯ ಕೆಲಸಗಳನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಿ ಮುಂದಿನ ಹಂತದ ಕಡೆಗೆ ಒಯ್ಯಬಹುದು.
@@AUTHORINFO_V1@@