ಇಂಡಸ್ಟ್ರಿ 4.0 ಗೆ ಸಿದ್ಧರಾಗುವಾಗ (ಭಾಗ 3)

@@NEWS_SUBHEADLINE_BLOCK@@

Lohkarya - Udyam Prakashan    17-May-2021   
Total Views |
ಇಂಡಸ್ಟ್ರಿ 4.0 ಅಂದರೆ ಏನು ಮತ್ತು ಅದಕ್ಕೋಸ್ಕರ ಮಾಡಲಾಗಿರುವ ಸಿದ್ಧತೆಯ ಅಳತೆಯನ್ನು ಹೇಗೆ ಮಾಡಬಹುದು ಎಂಬುದನ್ನು ‘ಲೋಹಕಾರ್ಯ’ದ ಎಪ್ರಿಲ್ 2021 ರ ಸಂಚಿಕೆಯಲ್ಲಿ ತಿಳಿದುಕೊಂಡೆವು. ಒಂದು ಆನೆ ಮತ್ತು ಏಳು ಕುರುಡರ ಕಥೆಯಂತೆ ಅಲ್ಪ ಪ್ರಮಾಣದಲ್ಲಿರುವ ಅವಸ್ಥೆಯು ಇಂಡಸ್ಟ್ರಿ 4.0 ಇದರದ್ದಾಗಿದೆ. ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಈ ಕಲ್ಪನೆಯ ಮಿತಿಯು ತುಂಬಾ ದೊಡ್ಡದಾಗಿರುವುದರಿಂದ ಇದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅಷ್ಟೇನು ಸುಲಭವಾಗಿಲ್ಲ. ಆದರೆ ಇಂಡಸ್ಟ್ರಿ 4.0 ಈ ಕಲ್ಪನೆಯು ತಮ್ಮ ಉದ್ಯಮಗಳಿಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಆಯಾ ಉದ್ಯಮಿಗಳು ತಿಳಿದುಕೊಂಡಲ್ಲಿ ಅದರ ಕುರಿತು ಹೆಚ್ಚು ವಿಚಾರ ಮಾಡುವ ಆವಶ್ಯಕತೆ ಇರುವುದಿಲ್ಲ.
ಹಿನ್ನೆಲೆ

1_1  H x W: 0 x 
 
ಇನ್ನಷ್ಟು ಚುಟುಕಾಗಿ ಹೇಳುವುದಾದಲ್ಲಿ, ಇಂಡಸ್ಟ್ರಿ 4.0 ಅಂದರೆ ಇಲೆಕ್ಟ್ರಾನಿಕ್ ಸಂದೇಶ ಸಾಗಾಟ ಮತ್ತು ಮಾಹಿತಿ ತಂತ್ರಜ್ಞಾನದ ಯಾಂತ್ರಿಕ ಮತ್ತು ಉತ್ಪಾದನೆಯ ಉದ್ಯಮ ಕ್ಷೇತ್ರವನ್ನು ಒಂದುಗೂಡಿಸುವ ದಾರಿಯಾಗಿದೆ. ಈ ರೀತಿಯಲ್ಲಿ ಒಂದುಗೂಡಿಸಿ ಹೊಸತನ, ಕಾರ್ಯಸಾಮರ್ಥ್ಯ ಮತ್ತು ವ್ಯವಸಾಯದಲ್ಲಿ ಅವಕಾಶಗಳನ್ನು ವೃದ್ಧಿಸುವ ಕ್ರಾಂತಿ ಅಂದರೆ ಇಂಡಸ್ಟ್ರಿ 4.0 ಎಂದು ಹೇಳಬಹುದು. ಅತ್ಯಾಧುನಿಕ ಇಲೆಕ್ಟ್ರಾನಿಕ್ ಯಂತ್ರಣೆಯಿಂದ ಯಾವುದೇ ವಸ್ತು ಮತ್ತು ಅದರ ಪ್ರಕ್ರಿಯೆಯ ಕುರಿತಾದ ಅಳತೆಯನ್ನು ಮಾಡುವುದು ಹೆಚ್ಚು ಸುಲಭವಾಗುತ್ತದೆ. ಇದರಿಂದ ಮಾಹಿತಿಯ ಭಾಂಡಾರವೇ ತಮ್ಮ ಕೈಸೇರುತ್ತದೆ. ಸಂದೇಶದ ಸಾಗಾಟವು ಅತಿ ಹೆಚ್ಚು ವೇಗದಲ್ಲಿ ಮತ್ತು ಅಗ್ಗವಾಗುತ್ತಿರುವುದರಿಂದ ಇದನ್ನು ಕ್ಷಣಮಾತ್ರದಲ್ಲಿ ಎಷ್ಟೇ ದೂರದಲ್ಲಿರುವ ವ್ಯವಸ್ಥೆಯ ಕಡೆಗೆ ಕಳುಹಿಸುವುದು ಸಾಧ್ಯವಾಗಿದೆ. ಅಲ್ಲದೇ ಕ್ಲೌಡ್ ತಂತ್ರಜ್ಞಾನದಿಂದಾಗಿ ಪ್ರತಿಯೊಂದು ನಿಮಿಷದಲ್ಲಿ ತಯಾರಾಗುವಂತಹ ಮಾಹಿತಿಯ ಸಾಗರವನ್ನು ಸುಲಲಿತವಾಗಿ ಸಂಗ್ರಹಿಸುವುದು, ನಿರ್ವಹಿಸುವುದು, ಅದರ ಕುರಿತು ಆಳವಾದ ಅಭ್ಯಾಸವನ್ನು ಮಾಡುವುದೂ ಸಹಜವಾಗಿ ಸಾಧ್ಯವಾಗಿದೆ. ಇವೆಲ್ಲದರ ಫಲಿತಾಂಶವೆಂದರೆ ಯಾಂತ್ರಿಕ ಅಥವಾ ಉತ್ಪಾದನೆಗೆ ಸಂಬಂಧಪಟ್ಟ ಉದ್ಯಮಗಳು ಅಥವಾ ಅದರಲ್ಲಿರುವ ಯಾವುದೇ ವಸ್ತುಗಳು ಬೇರೆಬೇರೆಯಾಗಿರದೇ ಒಂದು ವಿಸ್ತಾರವಾದ ಜಾಲದ ಒಂದು ಭಾಗಗಳಾಗಿವೆ. ಈ ಜಾಲದಿಂದ ಲಭಿಸುವಂತಹ ಹೊಸಹೊಸ ಜೋಡಣೆಯ ಮತ್ತು ಸಂಪರ್ಕದ ಉಪಯೋಗವನ್ನು ನಾವು ಎಷ್ಟು ಹೆಚ್ಚಾಗಿ ಮಾಡಿಕೊಳ್ಳುತ್ತೇವೆಯೋ, ಅಷ್ಟೆ ಮಟ್ಟದಲ್ಲಿ ಈ ಇಂಡಸ್ಟ್ರಿ 4.0 ಇದರ ಕ್ರಾಂತಿಯಲ್ಲಿ ಯಶಸ್ವಿಯಾಗಬಲ್ಲೆವು. 
 
ಇದು ಹೀಗೆ ಇದ್ದರೂ ಕೂಡಾ ಇಂಡಸ್ಟ್ರಿ 4.0 ರ ಸಂಪರ್ಕದ ಜಾಲದಲ್ಲಿ ಸಹಭಾಗಿಯಾಗಲು ಹೆಚ್ಚಿನ ಲಘು, ಮಧ್ಯಮ ಉದ್ಯಮಿಗಳು ಅನುಮಾನವನ್ನು ವ್ಯಕ್ತಪಡಿಸುತ್ತಾರೆ. ಮಾರುಕಟ್ಟೆಯಲ್ಲಿರುವ ಅತಿಯಾದ ಸ್ಪರ್ಧೆ, ಪ್ರತಿ ವರ್ಷಕ್ಕೆ ಅಲ್ಲದೇ ಪ್ರತಿ ತಿಂಗಳಿಗೂ ಉಗಮವಾಗುತ್ತಿರುವ ನೂತನ ರೀತಿ-ಪದ್ಧತಿಗಳು ಮತ್ತು ತಮ್ಮಲ್ಲಿ ಸೀಮಿತವಾಗಿರುವ ಸಂಪನ್ಮೂಲಗಳು, ಇಂತಹ ಸವಾಲುಗಳಿಂದಾಗಿ ಇಂಡಸ್ಟ್ರಿ 4.0 ಎಂಬುದನ್ನು ಪರಿಶೀಲಿಸುವುದು ಮತ್ತು ಅದರಿಂದ ಗರಿಷ್ಠ ಪ್ರಮಾಣದ ಲಾಭವನ್ನು ಗಳಿಸುವುದು ಲಘು, ಮಧ್ಯಮ ಉದ್ಯಮಿಗಳಿಗೆ ಇನ್ನಷ್ಟು ತೊಡಕನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ VDMA ಎಂಬ ಜರ್ಮನ್ ಮೆಕ್ಯಾನಿಕಲ್ ಮತ್ತು ಉತ್ಪಾದನೆಯ ಕ್ಷೇತ್ರದಲ್ಲಿರುವ ಉದ್ಯಮಗಳ ಸಂಘಟನೆಯು ಪ್ರಕಟಿಸಿರುವ ಮಾರ್ಗಸೂಚಿ ತತ್ವಗಳು ತುಂಬಾ ಮಹತ್ವದ್ದಾಗಿವೆ. ಅರ್ ಬರ್ಗ್, ಹಾವೆ, ಶುಂಕ ಮತ್ತು ಎಸ್.ಎಮ್.ಎಸ್. ಈ ನಾಲ್ಕು ಕಂಪನಿಗಳಲ್ಲಿ VDMA ಯ ಮುಂದಾಳುತನದಲ್ಲಿ ಏರ್ಪಡಿಸಲಾದ ವಿಚಾರ ಸಂಕೀರಣದಲ್ಲಿ ಈ ತತ್ವಗಳ ಕುರಿತು ಚರ್ಚಿಸಲಾಯಿತು. ನಂತರ ಈ ಸಂಘಟನೆಯು ಅದನ್ನು 2016 ರಲ್ಲಿ ಪ್ರಕಟಿಸಿದರು. ಯಾವುದೇ ಉದ್ಯಮಿಗೆ ತಮ್ಮ ಉದ್ಯಮಗಳಿಗೋಸ್ಕರ ಸುಸಂಗತವಾದಂತಹ ಇಂಡಸ್ಟ್ರಿ 4.0 ಎಂಬ ವ್ಯಾಖ್ಯೆಯನ್ನು ತಯಾರಿಸಲು, ಅದಕ್ಕೆ ಅನುಸಾರವಾಗಿ ಅಪೇಕ್ಷಿಸಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲೂ, ಲಭಿಸಬಲ್ಲ ಲಾಭಗಳ ಕುರಿತಾದ ನಿಖರವಾದ ಅಂದಾಜನ್ನು ಮಾಡಲು ಮತ್ತು ಇವೆಲ್ಲವನ್ನು ನಿರ್ವಹಿಸಲು ಸೂಕ್ತವಾದ ದಾರಿಯನ್ನು ಹುಡುಕುವಲ್ಲಿ ಈ ತತ್ವಗಳು ಅತ್ಯಂತ ಉಪಯುಕ್ತವಾಗಿವೆ.

ಇಂಡಸ್ಟ್ರಿ 4.0 ರ ಮಾರ್ಗಸೂಚಿಯ ತತ್ವಗಳು
ಈ ತತ್ವಗಳ ಕುರಿತಾದ ಮಾರ್ಗದರ್ಶಕ ಅಂಶಗಳ ಯೋಜನೆ ಮತ್ತು ಕಾರ್ಯಗತಗೊಳಿಸುವ ಪ್ರಕ್ರಿಯೆ ಎಂಬ ಎರಡು ಹಂತಗಳಿವೆ. ಮೊದಲನೆಯ ಹಂತದಲ್ಲಿ ‘ಏನು ಮಾಡಬೇಕು’ ಎಂಬುದನ್ನು ತಿಳಿಸುತ್ತದೆ. ಎರಡನೇ ಹಂತದಲ್ಲಿ ‘ಹೇಗೆ ಮಾಡಬೇಕು’ ಎಂಬುದನ್ನು ತಿಳಿಸುತ್ತದೆ. (ಚಿತ್ರ ಕ್ರ. 1). ಈ ಲೇಖನದಲ್ಲಿ ನಾವು ಮಾರ್ಗದರ್ಶಕ ಅಂಶಗಳ ಯೋಜನೆಯ ಕುರಿತು ವಿಸ್ತಾರವಾಗಿ ತಿಳಿದುಕೊಳ್ಳೋಣ. ಇಂಡಸ್ಟ್ರಿ 4.0 ಇದರ ಪರಿಣಾಮವು ಕೇವಲ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಅವಲಂಬಿಸಿರದೇ, ಅದರಿಂದ ತಯಾರಾಗುವ ಉತ್ಪಾದನೆಗಳಲ್ಲಿಯೂ ಅವಲಂಬಿಸಿದೆ, ಎಂಬುದನ್ನು ಗಮನಿಸಬೇಕು. ಇಂಡಸ್ಟ್ರಿ 4.0 ಅನುಸಾರವಾಗಿ ಉತ್ಪಾದನೆಯ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಪಟ್ಟ ವಿವಿಧ ಪೂರಕ ಅಂಶಗಳ ಅಭಿವೃದ್ಧಿಯು ಹಂತ ಹಂತವಾಗಿ ಆಗಲೇ ಬೇಕು. ಆದರೆ ಅದರಂತೆ ಆ ಪ್ರಕ್ರಿಯೆಯಿಂದ ಹೊರ ಬರುವ ಉತ್ಪಾದನೆ, ಅಂದರೆ ತಯಾರಾಗುವಂತಹ ವಸ್ತುಗಳು ಅಥವಾ ಯಂತ್ರಣೆ ಅಥವಾ ಸೇವೆಗಳಂತಹ ಅಂಶಗಳನ್ನೂ ಅನೇಕ ರೀತಿಯಲ್ಲಿ ಬದಲಾಯಿಸಬೇಕು. ಉತ್ಪಾದನೆಯ ಪ್ರಕ್ರಿಯೆಯಲ್ಲಿ ಮಾಡಲಾಗುವ ಸುಧಾರಣೆಗಳಿಂದ ಪ್ರಮುಖವಾಗಿ ಈ ಮುಂದಿನ ಲಾಭಗಳನ್ನು ನಿರೀಕ್ಷಿಸಲಾಗಿದೆ.
1. ಉತ್ಪಾದಕತೆಯಲ್ಲಿ ಹೆಚ್ಚಳ
2. ಖರ್ಚಿನಲ್ಲಿ ಕಡಿತ
3. ಸ್ಟಾಂಡರ್ಡ್ಸ್ ಅಥವಾ ಆಯಾಮಗಳನ್ನು ಪಾಲಿಸುವುದು
4. ಜಾಗತಿಕ ಗುಣಮಟ್ಟದ ಪ್ರಕ್ರಿಯೆ
ಇನ್ನೊಂದೆಡೆ ಉತ್ಪಾದನೆಗಳಲ್ಲಿ ಮಾಡಲಾಗುವ ಸುಧಾರಣೆಗಳಿಂದ ಮುಂದಿನ ಲಾಭಗಳನ್ನು ಅಪೇಕ್ಷಿಸಲಾಗಿದೆ.
1. ಗುಣಮಟ್ಟದಲ್ಲಿ ಸುಧಾರಣೆ
2. ಮಾರಾಟದ ನಂತರ ಹೊಸಹೊಸ ಸೇವೆಗಳು
3. ಗ್ರಾಹಕರು ಅಥವಾ ಬಳಕೆಗಾರರ ತನಕ ಸಂಪರ್ಕ
4. ಹೊಸತನದಿಂದ ಕೂಡಿರುವ ಉತ್ಪಾದನೆಯ ಸಾಮರ್ಥ್ಯ
ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮಾರ್ಗಸೂಚಿ ತತ್ವಗಳ ಯೋಜನೆಯಲ್ಲಿ ಉತ್ಪಾದನೆ ಮತ್ತು ಉತ್ಪಾದನೆಯ ಪ್ರಕ್ರಿಯೆ ಇದಕ್ಕೋಸ್ಕರ ಬೇರೆಬೇರೆ ಯೋಜನೆಗಳನ್ನು ನಿಗದಿ ಪಡಿಸಲಾಯಿತು. ಅದು ಸಮಗ್ರವಾಗಬಲ್ಲದು ಎಂಬ ನಿಟ್ಟಿನಲ್ಲಿ ಪ್ರತಿಯೊಂದು ಯೋಜನೆಯಲ್ಲಿ ಆರು ಪ್ರಮುಖ ಅಂಶಗಳ ಕುರಿತು ವಿಚಾರ ಮಾಡಲಾಗಿದೆ. ಪ್ರತಿಯೊಂದು ಉದ್ಯಮವು ತಮ್ಮ ಉತ್ಪಾದನೆಯ ಪ್ರಕ್ರಿಯೆಗೆ ಅನುಸಾರವಾಗಿ ಈ ಅಂಶಗಳನ್ನು ಅನುಷ್ಠಾನಗೊಳಿಸುವುದನ್ನು ಅಪೇಕ್ಷಿಸಲಾಗಿದೆ. ಯಾರೇ ಉದ್ಯಮಿಯು ತಮ್ಮ ಉದ್ಯಮದ ಯೋಜನೆಯಲ್ಲಿ ಈ ಎಲ್ಲ ಅಂಶಗಳ ಕುರಿತು ವಿಚಾರ ಮಾಡಬಲ್ಲರು. ಇಂಡಸ್ಟ್ರಿ 4.0 ಅನುಷ್ಠಾನಗೊಳಿಸುವಾಗ ಯಾವ ಯಾವ ಹೊಸ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಎಂಬುದರ ಕುರಿತು ಮುನ್ಸೂಚನೆಯು ಉದ್ಯಮಿಗಳಿಗೆ ತಿಳಿಯಬಲ್ಲದು. ಅಂದರೆ ಉದ್ಯಮಗಳ ವಿಧಗಳಿಗೆ ಅನುಸಾರವಾಗಿ ಈ ಅಂಶಗಳು ಬೇರೆಬೇರೆ ಉದ್ಯಮಗಳಿಗೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಅನ್ವಯಿಸುತ್ತವೆ. ಉದಾಹರಣೆ, ಯಾವುದೇ ಒಂದು ಅಂಶವು ಯಂತ್ರಗಳ ಉದ್ಯಮದಲ್ಲಿ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಯಾಗಿ ಅದನ್ನು ತಮ್ಮಲ್ಲಿ ಕಾರ್ಯಗತಗೊಳಿಸುವುದು ಸೂಕ್ತವಾಗಬಲ್ಲದು. ಆದರೆ ಒಂದು ವೇಳೆ ಅದೇ ಅಂಶವನ್ನು ಮೋಲ್ಡಿಂಗ್ ಉದ್ಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅನ್ವಯಿಸವಾಗಬಲ್ಲದು. ಅಂತಿಮವಾದ ಈ ಯೋಜನೆಗೆ ಅನುಸಾರವಾಗಿ ತಮ್ಮ ಉದ್ಯಮಗಳ ಕುರಿತಾದ ವಿಮರ್ಶೆಯನ್ನು ಮಾಡಿ ಅದರಲ್ಲಿರುವ ಅಂಶಗಳನ್ನು ತಮ್ಮ ಉತ್ಪಾದನೆಯಲ್ಲಿ ಮತ್ತು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಸೂಕ್ತ ರೀತಿಯಲ್ಲಿ ಸೇರ್ಪಡಿಸುವುದು, ಅಂದರೆ ತಮ್ಮ ಉದ್ಯಮದಲ್ಲಿ ನಾಲ್ಕನೇ ಉದ್ಯಮದ ಕ್ರಾಂತಿಯನ್ನು ತಯಾರಿಸುವುದು.
 
 
ಉತ್ಪಾದನೆಗೋಸ್ಕರದ ಯೋಜನೆ
2_1  H x W: 0 x 
 
ಉತ್ಪಾದಿಸಲಾಗಿರುವ ವಸ್ತುಗಳು ಅಥವಾ ಯಂತ್ರಣೆಯಲ್ಲಿ ಅಥವಾ ಸೇವೆಯ ಕುರಿತಾದ ಕ್ರಾಂತಿಯನ್ನು ಮಾಡುತ್ತಿರುವಾಗ ಅದರಲ್ಲಿ ಸೇರ್ಪಡಿಸಬೇಕಾಗಿರುವಂತಹ ಆರು ಅಂಶಗಳು ಈ ಕೆಳಗಿನಂತಿವೆ.
1. ಸೆನ್ಸರ್, ಎಕ್ಚುಯೇಟರ್
ಸೆನ್ಸರ್, ಎಕ್ಚುಯೇಟರ್ ಇದು ಯಾವುದೇ ನಿರ್ಜೀವ ವಸ್ತುಗಳ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಎಂದು ಹೇಳಬಹುದು. ಅವುಗಳನ್ನು ಸಾಕಷ್ಟು ಹೆಚ್ಚು ಪ್ರಮಾಣದಲ್ಲಿ ಬಳಸಿದಲ್ಲಿ ವಸ್ತುಗಳು ಇನ್ನಷ್ಟು ಸ್ವಯಂಚಾಲಿತವಾಗುತ್ತವೆ. ಇದರಿಂದಾಗಿ ಉಪಯುಕ್ತವಾಗಿರುವ ಮಾಹಿತಿ ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತದೆ. ಯಾವುದೇ ಉತ್ಪಾದನೆಯಲ್ಲಿ ಯಾವುದೇ ರೀತಿಯ ಅಳತೆಯನ್ನು
 
 
3_1  H x W: 0 x
 
ಅಥವಾ ಕಾರ್ಯವನ್ನು ಮಾಡುವ ವ್ಯವಸ್ಥೆ ಇಲ್ಲದಿರುವುದು, ಆ ವಸ್ತುಗಳಿಗೆ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆದು, ಅದಕ್ಕೆ ಅನುಸಾರವಾಗಿ ಸೂಕ್ತ ಕ್ರಮವನ್ನು ಕೈಗೊಳ್ಳುವಲ್ಲಿ ಸಕ್ಷಮವಾಗಿರುವಂತಹ ಪ್ರವಾಸವನ್ನು ಅಪೇಕ್ಷಿಸಲಾಗಿದೆ. 19 ನೇ ಶತಮಾನದಲ್ಲಿ ತಯಾರಿಸಲಾಗಿರುವ ಮೊದಲ ಡಿಸೆಲ್ ಇಂಜಿನ್ ನಿಂದ ಪ್ರಾರಂಭಿಸಿ (ಇದು ಕೇವಲ ಒಂದು ಯಂತ್ರವಾಗಿತ್ತು) 21 ನೇ ಶತಮಾನದಲ್ಲಿ ತಯಾರಿಸಿರುವ ಕಾರ್ ನಲ್ಲಿರುವ ಸೆನ್ಸರ್, ಇಂಜಿನ್ ಕಂಟ್ರೋಲ್ ಯುನಿಟ್ (ECU) ಮತ್ತು ಅನೇಕ ರೀತಿಯ ಸುರಕ್ಷೆಯ ಯಂತ್ರಣೆಗಳಿರುವ ಇಂಜಿನ್ ತನಕದ ಪ್ರವಾಸವೇ ಇದರ ಯೋಗ್ಯ ಉದಾಹರಣೆ. ಉದಾಹರಣೆ, ಇಂಜಿನ್ ಸ್ವಯಂಚಾಲಿತವಾಗಿರುವುದು ಎಷ್ಟು ಸ್ವಾಭಾವಿಕವೋ, ವಾಹನಗಳ ಟಾಯರ್ ಗಳನ್ನು ಅಷ್ಟೇ ಸ್ಮಾರ್ಟ್ ಅಥವಾ ಸ್ವಯಂಚಾಲಿತ ಮಾಡುವುದು ಆವಶ್ಯಕವಿಲ್ಲ.
2. ಸಂದೇಶದ ಸಾಗಾಟ ಮತ್ತು ಸಂಪರ್ಕದ ಸಾಮರ್ಥ್ಯ
ಈ ಅಂಶಗಳು ಒಳಗೊಂಡಿರುವುದರಿಂದ ಉತ್ಪಾದಿಸಲ್ಪಟ್ಟ ವಸ್ತುಗಳನ್ನು ಹೊರ ಜಗತ್ತಿನೊಂದಿಗೆ ಜೋಡಿಸುವುದು ಸಾಧ್ಯವಾಗುತ್ತದೆ ಮತ್ತು IoT ಗೋಸ್ಕರ ಅರ್ಹವಾಗುತ್ತದೆ. ಇಂಡಸ್ಟ್ರಿ 4.0 ಗೋಸ್ಕರ ಮಾತ್ರ ಇದೊಂದು ತುಂಬಾ ಮಹತ್ವದ ಅಂಶವಾಗಿದೆ. ಆಧುನಿಕ ಕಾಲದಲ್ಲಿ ಎನರ್ಜಿ ಮೀಟರ್ ಇದೇ ಇದಕ್ಕೆ ಸೂಕ್ತವಾದ ಉದಾಹರಣೆಯಾಗಿದೆ. ಈ ಹಿಂದೆ ಸಂಪೂರ್ಣವಾಗಿ ಯಾಂತ್ರಿಕ ರೀತಿಯಲ್ಲಿ ವಿದ್ಯುತ್ ಬಳಕೆಯ ಅಂಕೆ-ಸಂಖ್ಯೆಗಳನ್ನು ತೋರಿಸುವಂತಹ ಈ ಮೀಟರ್ ಈಗ ಇಂಟರ್ ನೆಟ್ ಅಥವಾ ಬ್ಲ್ಯೂಟುಥ್ ಇಂತಹ ಮಾಧ್ಯಮಗಳಿಂದ ಅನೇಕ ರೀತಿಯ ಮಾಹಿತಿಯನ್ನು ನೀಡಬಲ್ಲದು.
3. ಮಾಹಿತಿಯ ವಿನಿಮಯ ಮತ್ತು ಶೇಖರಣೆ
ಉತ್ಪಾದಿಸಲ್ಪಟ್ಟಿರುವ ವಸ್ತುಗಳಲ್ಲಿ ಮಾಹಿತಿಯನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಶೇಖರಿಸುವುದು ಸಾಧ್ಯ ಮತ್ತು ಎಷ್ಟು ವಿವಿಧ ರೀತಿಗಳಲ್ಲಿ ಹಸ್ತಾಂತರಿಸಬಹುದು ಎಂಬ ವಿಚಾರವೇ ಮಹತ್ವದ್ದಾಗಿದೆ. ಮೊಬೈಲ್ ಹ್ಯಾಂಡ್ ಸೆಟ್ ಕುರಿತು ಈ ಅಂಶವು ಗಮನಕ್ಕೆ ಬರುತ್ತಿದೆ. 20 ವರ್ಷಗಳ ಮುಂಚೆ ಮೊಬೈಲ್ ನಲ್ಲಿ ಕೇವಲ 250 ಕ್ರಮಾಂಕಗಳನ್ನು ಸಂಗ್ರಹಿಸುವುದು ಸಾಧ್ಯವಾಗಿತ್ತು. ಆದರೆ ಸದ್ಯಸ್ಥಿತಿಯಲ್ಲಿ ಎಷ್ಟು ಬೇಕೋ ಅಷ್ಟು ಕ್ರಮಾಂಕಗಳನ್ನು ಸಂಗ್ರಹಿಸಬಹುದು, ಅಲ್ಲದೇ ಸಾವಿರಾರು ಚಿತ್ರಗಳನ್ನು ಮತ್ತು ಪದ್ಯಗಳನ್ನು ಸಂಗ್ರಹಿಸುವುದು ಸಾಧ್ಯವಾಗಿದೆ. ಈ ರೀತಿಯಲ್ಲಿ ಸಂಗ್ರಹಿಸಿರುವ ಪದ್ಯಗಳು, ಚಿತ್ರಗಳು ಅಥವಾ ಕ್ರಮಾಂಕಗಳನ್ನು ಇನ್ನೊಂದು ಹ್ಯಾಂಡ್ ಸೆಟ್ ಗೆ ಅಥವಾ ಕಂಪ್ಯೂಟರ್ ಗಳಿಗೆ ವರ್ಗಾಯಿಸುವುದೂ ಸಾಧ್ಯವಾಗಿದೆ.
4. ಪರಿಶೀಲನೆ, ನಿರ್ಣಯ ಮತ್ತು ಅಂದಾಜು ಇವುಗಳ ಸಾಮರ್ಥ್ಯ
ಯಾವುದೇ ವಸ್ತುವನ್ನು ನಿರಂತರವಾಗಿ ಪರಿಶೀಲಿಸಿ ಅದರ ಕುರಿತು ಪ್ರಸ್ತುತ ಸ್ಥಿತಿಯ ಕುರಿತು ನಿರ್ಣಯವನ್ನು ಕೈಗೊಳ್ಳುವ ಮತ್ತು ಅದಕ್ಕೆ ಅನುಸಾರವಾಗಿ ಸಂಭವಿಸಬಲ್ಲ ಅಪಾಯಗಳ ಅಂದಾಜನ್ನು ಪಡೆಯುವ ಸಾಮರ್ಥ್ಯವನ್ನು ಅಪೇಕ್ಷಿಸಲಾಗಿದೆ. ತಾಂತ್ರಿಕ ಭಾಷೆಯಲ್ಲಿ ಇದನ್ನು ರಿಯಲ್ ಟೈಮ್ ಡಾಟಾ ಮಾನಿಟರಿಂಗ್ (RTDM) ಮತ್ತು ಡೈಗ್ನೋಸ್ಟಿಕ್ ಮತ್ತು ಪ್ರೊಗ್ನೋಸ್ಟಿಕ್ಸ್ (DP) ಎಂದು ಕರೆಯಲಾಗುತ್ತದೆ. ವಸ್ತುಗಳಲ್ಲಿರುವ ತಾಂತ್ರಿಕ ಅಡಚಣೆಗಳನ್ನು ತಿಳಿದುಕೊಳ್ಳುವಲ್ಲಿ ಮತ್ತು ಅದರ ಸೂಕ್ತ ರೀತಿಯ ನಿರ್ವಹಣೆಯನ್ನು ಮಾಡಲು ಮತ್ತು ಯಾವುದೇ ಅನಿರೀಕ್ಷಿತವಾದ ಅಡೆತಡೆ ಅಥವಾ ಅಪಾಯಗಳನ್ನು ತಡೆಯಲು ಈ ರೀತಿಯ ಸಾಮರ್ಥ್ಯವು ಹೆಚ್ಚು ಉಪಯುಕ್ತವಾಗಿರುತ್ತದೆ. ಇಲ್ಲಿ ಇನ್ನೊಂದು ಇಂಜಿನ್ ನ ಉದಾಹರಣೆಯನ್ನು ನೋಡೋಣ. ಇಂದು ಯಾವುದೇ ಕಾರ್ ನಲ್ಲಿರುವ ಇಂಜಿನ್ ಅದರಲ್ಲಿರುವ ಹಲವಾರು ಕನಿಷ್ಠ ಪ್ರಮಾಣದ ಸಮಸ್ಯೆಗಳ ಕುರಿತು (ಹವಾಮಾನದಲ್ಲಾಗುವ ಹೆಚ್ಚಳ, ಆಯಿಲ್ ನ ಸ್ತರವು ಕಡಿಮೆಯಾಗುವುದು ಮುಂದಾದವುಗಳು) ಸ್ವಂತವೇ ಪರೀಕ್ಷೆ ಮತ್ತು ಅಂದಾಜು ಮಾಡಬಹುದಾಗಿದೆ.
5. ಪೂರಕ ಮಾಹಿತಿಯ ಸೇವೆ
ಉತ್ಪಾದಿಸಲ್ಪಟ್ಟ ವಸ್ತುಗಳು, ಅದರಿಂದ ಅಪೇಕ್ಷಿಸಿರುವ ಕೆಲಸಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಂತಹ ಯಾವ ಯಾವ ಸೇವೆಗಳನ್ನು ನೀಡಬಲ್ಲವು ಎಂಬುದರ ಕುರಿತು ವಿಚಾರ ಮಾಡಲಾಗಿದೆ. ಸ್ಮಾರ್ಟ್ ಫೋನ್ ನ ಉದಾಹರಣೆಯು ಮತ್ತೆ ಇಲ್ಲಿ ಅನ್ವಯಿಸುತ್ತದೆ. ಮೊಬೈಲ್ ಸೆಟ್ ಇದು ಹಲವಾರು ವರ್ಷಗಳ ಹಿಂದೆ ಕೇವಲ ಸಂದೇಶವನ್ನು ಸಾಗಿಸುವ ಒಂದು ಯಂತ್ರವಾಗಿತ್ತು. ಅಭಿವೃದ್ಧಿಯಾದ ತಂತ್ರಜ್ಞಾನದಿಂದಾಗಿ ಅದರಲ್ಲಿ ಗಡಿಯಾರ, ಕ್ಯಾಮೆರಾ, ರೆಕಾರ್ಡರ್, ಬ್ಲ್ಯೂಟುಥ್, ರೇಡಿಯೋ, ಇಂಟರ್ ನೆಟ್ ಮತ್ತು ಪ್ರಸ್ತುತ ಸಾವಿರಾರು ಅಪ್ ಗಳು ಇಂತಹ ಅನೇಕ ಸೌಲಭ್ಯಗಳು ಒಳಗೊಂಡಿವೆ. ಇವುಗಳೆಲ್ಲವೂ ಬಹೂಪಯೋಗಿ ಮತ್ತು ಒಂದು ರೀತಿಯಲ್ಲಿ ಸ್ಮಾರ್ಟ್ ಯಂತ್ರವಾಗಿದೆ. ಈ ಎಲ್ಲ ಪವಾಡಗಳು ಅದರಲ್ಲಿರುವ ಸಂದೇಶವನ್ನು ಸಾಗಿಸುವ ಮೂಲ ಕೆಲಸದ ಹೊರತಾಗಿ ಅನೇಕ ಪೂರಕ ಮಾಹಿತಿಗೆ ಸಂಬಂಧಪಟ್ಟದ್ದಾಗಿವೆ, ಅಲ್ಲದೇ ಅದಕ್ಕೆ ಆಧರಿಸಿರುವ ಸೇವೆಗಳನ್ನು ಸೇರ್ಪಡಿಸಿದ್ದರಿಂದಲೇ ಸಾಧ್ಯವಾಗಿದೆ.
6. ಅನೇಕ ವಿಧದ ವ್ಯವಸಾಯದ ಸ್ವರೂಪ
ಇಂದಿಗೂ ಬಹುಸಂಖ್ಯೆಯಲ್ಲಿರುವ ಯಾಂತ್ರಿಕ ಉದ್ಯಮಗಳ ಆದಾಯದ ಸಾಧನವೆಂದರೆ, ವಸ್ತು ಅಥವಾ ಯಂತ್ರಣೆಯನ್ನು ಉತ್ಪಾದಿಸಿ ಅವುಗಳ ಮಾರಾಟವನ್ನು ಮಾಡುವುದು ಮತ್ತು ಅದರಿಂದ ಲಾಭವನ್ನು ಗಳಿಸುವುದೇ ಆಗಿದೆ. ಆದರೆ ಮೇಲೆ ಉಲ್ಲೇಖಿಸಿದಂತೆ ಉತ್ಪಾದನೆಯಾದ ವಸ್ತುಗಳು ಅಥವಾ ಯಂತ್ರಣೆಯು ಹೇಗೆ ಪ್ರಗತಿಯನ್ನು ಸಾಧಿಸಿತೋ, ಹಾಗೆಯೇ ಆ ವಸ್ತುಗಳನ್ನು ಮತ್ತು ಅವುಗಳಿಗೆ ಸಂಬಂಧಪಟ್ಟ ಪೂರಕ ಅಂಶಗಳನ್ನೂ ಗ್ರಾಹಕರ ತನಕ ತಲುಪಿಸುವ ಪರ್ಯಾಯಗಳೂ ವೃದ್ಧಿಸುತ್ತಿವೆ. ಕೇವಲ ವಸ್ತುಗಳ ಮಾರಾಟವನ್ನು ಮಾಡದೇ, ಅದಕ್ಕೆ ಸಂಬಂಧಪಟ್ಟ ಪೂರಕವಾದ ಸೇವೆಗಳನ್ನು ನೀಡುವುದು, ಗ್ರಾಹಕರಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ಸಹಕರಿಸುವುದು, ಪ್ರತಿಯೊಬ್ಬ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ವಿಶೇಷವಾದ ಉತ್ಪಾದನೆಯನ್ನು ಮಾಡುವುದು, ಈ ರೀತಿಯಲ್ಲಿ ವ್ಯವಸಾಯದ ವಿವಿಧ ಹೊಸ ಹೊಸ ಸ್ಪರೂಪದ ವ್ಯವಹಾರಗಳು ರೂಢಿಯಾಗಬಲ್ಲವು. ಏಸ್ ಮೈಕ್ರೋಮ್ಯಾಟಿಕ್ ನಂತಹ ಮಶಿನ್ ಟೂಲ್ ಕ್ಷೇತ್ರದಲ್ಲಿರುವ ಕಂಪನಿಯು ಕೇವಲ ಮಶಿನ್ ಗಳ ನಿರ್ಮಿತಿಯನ್ನು ಮಾಡದೇ, ಅನೇಕ ರೀತಿಯ ಮಾನಿಟರಿಂಗ್ (ನಿರೀಕ್ಷಣೆ) ಸಾಫ್ಟ್ ವೇರ್ (ಉದಾಹರಣೆ, ಎನರ್ಜಿ ಮಾನಿಟರಿಂಗ್, ಟೂಲ್ ಮಾನಿಟರಿಂಗ್ ಇತ್ಯಾದಿ) ತಯಾರಿಸುವುದು, ಮಹೀಂದ್ರಾದಂತಹ ಟ್ರ್ಯಾಕ್ಟರ್ ತಯಾರಿಸುವ ಕಂಪನಿಯು ಟ್ರ್ಯಾಕ್ಟರ್ ಅಥವಾ ಇನ್ನಿತರ ಸಾಮಗ್ರಿಗಳನ್ನು ಬಾಡಿಗೆಗೆ ನೀಡುವುದು, ಮುಂತಾದವುಗಳು ಯಶಸ್ಸನ್ನು ಪಡೆದಿರುವ ಉದಾಹರಣೆಗಳಾಗಿವೆ.
ಉತ್ಪಾದನೆಯ ಪ್ರಕ್ರಿಯೆಯ ರೂಪರೇಖೆ
ಉತ್ಪಾದನೆಯ ಪ್ರಕ್ರಿಯೆಯಲ್ಲಿ ಕ್ರಾಂತಿಯನ್ನು ಮಾಡುವಾಗ ಅದರಲ್ಲಿ ಸೇರಿಸಬೇಕಾಗಿರುವ ಅಂಶಗಳನ್ನು ಈ ಮುಂದೆ ನೀಡಲಾಗಿದೆ. (ಚಿತ್ರ ಕ್ರ. 3)
1. ಮಾಹಿತಿಯಲ್ಲಿ ಮಾಡಲಾಗುವ ಪ್ರಕ್ರಿಯೆ
ಕಾರ್ಖಾನೆಯಲ್ಲಿ ವಸ್ತುಗಳ ಉತ್ಪಾದನೆಯನ್ನು ಮಾಡುತ್ತಿರುವಾಗ ಬೃಹತ್ ಪ್ರಮಾಣದ ಮಾಹಿತಿಯು ತಯಾರಾಗುತ್ತದೆ. ನಂತರ ಅದನ್ನು ಅನೇಕ ಹಂತಗಳಲ್ಲಿ ಕಳುಹಿಸಲಾಗುತ್ತದೆ. ಕೇವಲ ಸಾಕಷ್ಟು ಮಾಹಿತಿಯನ್ನು ತಯಾರಿಸಿ ಉತ್ಪಾದನೆಯ ಪ್ರಕ್ರಿಯೆಯನ್ನು ಹೆಚ್ಚು ಕಾರ್ಯಕ್ಷಮ ಮಾಡುವುದು ಉಪಯುಕ್ತವಾಗಲಾರದು, ಹೊರತಾಗಿ ಈ ಮಾಹಿತಿಗೆ ಯೋಗ್ಯ ರೀತಿಯ ಪ್ರಕ್ರಿಯೆಯನ್ನು ಮಾಡಿ ಅದನ್ನು ವರ್ಗೀಕರಿಸಿ ಅದರಿಂದ ಸ್ಪಷ್ಟವಾದ ತೀರ್ಮಾನವನ್ನು ಕೈಗೊಳ್ಳಬಹುದು. ಅಂದರೆ ಮಾಹಿತಿಯನ್ನು ಜ್ಞಾನದಲ್ಲಿ ರೂಪಾಂತರಿಸಬೇಕು. ಹಿಂದಿನಿಂದಲೂ ಕಾರ್ಖಾನೆಯಲ್ಲಿ ಪ್ರತಿದಿನದ ಕೆಲಸದ ವರದಿಗಳಿಂದ ದೊಡ್ಡ ದೊಡ್ಡ ಗಾತ್ರದ ತಯಾರಾಗುವ ಫೈಲ್ ಗಳ ಅಟ್ಟಿಗಳನ್ನು ನಾವು ನೋಡಿದ್ದೇವೆ. ಆದರೆ ಮಾಹಿತಿಯನ್ನು ಒಟ್ಟು ಸೇರಿಸಿ ಮತ್ತು ಅದರ ಕುರಿತಾದ ಅಭ್ಯಾಸವನ್ನು ಮಾಡಿ ಕೆಲಸದ ಗುಣಮಟ್ಟ, ಕೆಲಸದ ನಿರ್ವಹಣೆಯ ನೈಜಸ್ಥಿತಿ, ಅಡಚಣೆಗಳು, ಆಗಬಲ್ಲ ಖರ್ಚು ಇಂತಹ ಅನೇಕ ರೀತಿಯ ಅಂಶಗಳ ಪರಸ್ಪರ ಇರುವ ಸಂಬಂಧವನ್ನು ಕಡಿಮೆ ಪ್ರಮಾಣದಲ್ಲಿ ಸರಿಹೊಂದಾಣಿಸಲಾಗುತ್ತದೆ. ಇಂಡಸ್ಟ್ರಿ 4.0 ದಲ್ಲಿ ಮಾಹಿತಿಯನ್ನು ಈ ಕಾರಣಗಳಿಂದಲೇ ಗರಿಷ್ಠ ಪ್ರಮಾಣದಲ್ಲಿ ಬಳಸುವುದು ಮತ್ತು ಅದರ ವಿಮರ್ಶೆಯನ್ನು ಮಾಡುವುದನ್ನು ಅಪೇಕ್ಷಿಸಲಾಗಿದೆ.
2. ಮಶಿನ್ ಗಳಲ್ಲಿರುವ ಸಂದೇಶದ ಸಾಗಾಣಿಕೆ
ಈ ಅಂಶವೆಂದರೆ IoT ಯ ಮೂಲ ರೂಪವಾಗಿದೆ. ಬಹು ಸಂಖ್ಯೆಯಲ್ಲಿರುವ ಭಾರತೀಯ ಲಘು, ಮಧ್ಯಮ ಉದ್ಯಮಗಳಲ್ಲಿ ಒಂದು ಮಶಿನ್ ಇನ್ನೊಂದು ಮಶಿನ್ ನೊಂದಿಗೆ ಆಗುತ್ತಿರುವ ನೇರವಾದ ಸಂದೇಶದ ಸಾಗಾಟವು ಗಮನಕ್ಕೆ ಬರುವುದಿಲ್ಲ. ಇದ್ದರೂ ಕೂಡಾ ಅದು ಫೀಲ್ಡ್ ಬಸ್, ಮಾಡ್ ಬಸ್ ಇಂತಹ ಔದ್ಯೋಗಿಕ ಸಂದೇಶದ ಸಾಗಾಟವನ್ನು ಮಾಧ್ಯಮ ಮೂಲಕ ಯಾವುದೊಂದು ಸ್ಥಳೀಯ ನಿಯಂತ್ರಣೆಗಳಿಂದ ಮಾಡಲಾಗುತ್ತದೆ. ನಂತರ ಮಶಿನ್ ಇಂಟರ್ ನೆಟ್ ನೊಂದಿಗೆ ಜೋಡಿಸಲ್ಪಟ್ಟು ಕಾರ್ಖಾನೆಯಲ್ಲಿ ನಿಜವಾಗಿಯೂ IoT ಸ್ಥಾಪಿಸಲಾಗುತ್ತದೆ. ಆ ಮಶಿನ್ ನ ಪರಿಶೀಲನೆ ಮತ್ತು ನಿಯಂತ್ರಣೆಯನ್ನು ಇನ್ನಿತರ ಆಪರೇಟರ್ ಅಥವಾ ಸ್ವಯಂಚಾಲಿತ ಯಂತ್ರಣೆಯಿಂದ ಮಾಡುವುದನ್ನು ಇಂಡಸ್ಟ್ರಿ 4.0 ದಲ್ಲಿ ಅಪೇಕ್ಷಿಸಲಾಗಿದೆ.
3. ವಿಭಾಗಗಳಲ್ಲಿರುವ ಸಂದೇಶ ಸಾಗಾಣಿಕೆ
ಅನೇಕ ಉದ್ಯಮಗಳಲ್ಲಿ ಕಾರ್ಖಾನೆ ಮತ್ತು ಇನ್ನಿತರ ವಿಭಾಗಗಳು ಅಥವಾ ಯಂತ್ರಣೆ (ಉದಾಹರಣೆ, ಸಂಶೋಧನೆ, ಡಿಸೈನ್, ಆಡಳಿತ, ಹಣಕಾಸು ವಿಭಾಗ ಮುಂತಾದವುಗಳು) ಇವುಗಳಲ್ಲಿ ಸ್ವಲ್ಪ ಪ್ರಮಾಣದ ದೂರವಿರುತ್ತದೆ. ಸಂದೇಶದ ಸಾಗಾಟವು ಆಗುತ್ತಿದ್ದರೂ ಕೂಡಾ ಅದನ್ನು ಇ-ಮೇಲ್ ಅಥವಾ ಪ್ರತ್ಯಕ್ಷ ಭೇಟಿಯ ಮಾಧ್ಯಮವನ್ನು ಬಳಸಿ ಮಾಡಲಾಗುತ್ತದೆ. ಇದರಿಂದ ಉದ್ಯಮಗಳ ಸಾಮರ್ಥ್ಯವು ಹೆಚ್ಚುವಲ್ಲಿ ಗರಿಷ್ಠ ಪ್ರಮಾಣದ ಮಿತಿಗಳಿರುತ್ತವೆ. ಇದನ್ನು ತಡೆಯಲು ಎಲ್ಲ ಉದ್ಯಮಗಳಲ್ಲಿ ಒಂದು ಸರಿಸಮಾನವಾಗಿ ಮಾಹಿತಿಯನ್ನು ನೀಡುವ ಮತ್ತು ಪಡೆಯುವ ವ್ಯವಸ್ಥೆ ಇರುವುದು ಮತ್ತು ಯಾವುದೇ ಸೆಂಟ್ರಲೈಜ್ಡ್ ಸರ್ವರ್ ನ (ಮಾಹಿತಿಯನ್ನು ಸಂಗ್ರಹಿಸುವ) ಸಹಾಯದಿಂದ ಎಲ್ಲ ವಿಭಾಗಗಳಲ್ಲಿರುವ ಸಂದೇಶದ ಸಾಗಾಣಿಕೆಯನ್ನು ಸುಸೂತ್ರವಾಗಿ ಮಾಡುವುದು ತುಂಬಾ ಅಗತ್ಯದ್ದಾಗಿದೆ. ಈ ಸಂದೇಶದ ಸಾಗಾಣಿಕೆಯು ಎಷ್ಟು ಹೆಚ್ಚು ಪಾರದರ್ಶಕ ಮತ್ತು ವ್ಯಕ್ತಿಗತವಾಗಬಲ್ಲವೋ, ಅಷ್ಟೇ ಉತ್ಪಾದನೆಯ ಪ್ರಕ್ರಿಯೆಯನ್ನು ಸಕ್ಷಮ ಮಾಡುವಲ್ಲಿ ಅದು ಪೂರಕವಾಗಬಲ್ಲದು. ಕಂಪನಿಯು ತಮ್ಮ ಎಲ್ಲ ರೀತಿಯ ವ್ಯವಹಾರಗಳಿಗೋಸ್ಕರ ಸ್ವಂತದ್ದೇ ಆದ ಒಂದು ಅಪ್ ತಯಾರಿಸುವುದು, ಇದು ಎಲ್ಲೆಡೆಯಲ್ಲಿ ಗಮನಕ್ಕೆ ಬರುವಂತಹ ಸುಲಭ ಮತ್ತು ಪ್ರಾಥಮಿಕ ಹಂತದ ಉದಾಹರಣೆಯಾಗಿದೆ.
4. ಉದ್ಯಮಗಳಲ್ಲಿರುವ ಸಂದೇಶದ ಸಾಗಾಣಿಕೆಯ ವ್ಯವಸ್ಧೆ
ಈ ಅಂಶವು ಮೇಲಿನ ಎರಡೂ ಅಂಶಗಳೊಂದಿಗೆ ಸಂಬಂಧಪಟ್ಟದ್ದಾಗಿದ್ದರೂ ಕೂಡಾ ಅದು ವಿಶೇಷವಾಗಿ ಸಂದೇಶದ ಸಾಗಾಟಕ್ಕೆ ತಯಾರಿಸಿರುವ ಮೂಲಭೂತ ಸೌಲಭ್ಯ ಮತ್ತು ಯಂತ್ರಣೆಯ ಕುರಿತಾಗಿದೆ. ಈ ಯಂತ್ರಣೆಯು ಎಷ್ಟು ಆಧುನಿಕ ಮತ್ತು ಉದ್ಯಮಕ್ಕೆ ಅನುಗುಣವಾಗಿರಬಲ್ಲವು, ಅಷ್ಟೇ ಕಾರ್ಖಾನೆಯಲ್ಲಿರುವ ಸಂದೇಶದ ಸಾಗಾಟವು ಸುಲಭವಾಗಬಲ್ಲದು. ಸ್ಥಳೀಯ ಹಂತದಲ್ಲಿ ಸರ್ವರ್ ಬಳಸುವುದು, ಆವಶ್ಯಕತೆಗೆ ತಕ್ಕಂತೆ ಇಂಟರ್ ನೆಟ್ ಸೇವೆ ಮತ್ತು ಕ್ಲೌಡ್ ಸೇವೆಗಳನ್ನು ಬಳಸುವುದು, ತಮ್ಮ ಉದ್ಯಮದೊಂದಿಗೆ ತಮ್ಮ ಪೂರೈಕೆಗಾರರು, ಪಾಲುಗಾರರು ಮತ್ತು ಗ್ರಾಹಕರು ಇವರೊಂದಿಗೆ ಸಂದೇಶದ ಸಾಗಾಟವು ಸುಲಭವಾಗಲು ವ್ಯವಸ್ಥೆಯನ್ನು ನಿರ್ಮಿಸುವುದು, ಇಂತಹ ಅನೇಕ ಹಂತಗಳಿಂದ ಈ ಸಂದೇಶ ಸಾಗಾಟದ ಯಂತ್ರಣೆಯನ್ನು ಅಭಿವೃದ್ಧಿಗೊಳಿಸಬಹುದು. ಸರಕುಗಳ ಶೇಖರಣೆಯಿಂದಾಗಿ ಆರ್ಡರ್ ತನಕ ಮತ್ತು ಪೂರೈಕೆದಾರರ ಚೈನ್ ನಿಂದ ಎಲ್ಲ ರೀತಿಯ ಹಣಕಾಸು ವ್ಯವಹಾರಗಳ ತನಕ ಎಲ್ಲ ಅಂಶಗಳನ್ನು ಸುಸಜ್ಜಿತ ಸಂದೇಶ ಸಾಗಾಟದ ಯಂತ್ರಣೆಯ ಸಹಾಯದಿಂದ ಸ್ವಯಂಚಾಲಿತ ರೀತಿಯಲ್ಲಿ ನಿರ್ವಹಿಸಬಹುದು. ಅಮೆಝಾನ್ ನಂತಹ ಉದ್ಯಮವನ್ನು ಇದಕ್ಕೆ ಸ್ಟಾಂಡರ್ಡ್ ಎಂಬುದಾಗಿ ನಿಗದಿಸಬೇಕು.
5. ಮಾನವ–ಮಶಿನ್ ಇವುಗಳ ಪರಸ್ಪರ ಸಂಬಂಧ
ಈ ಅಂಶವು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಹೆಚ್ಚು ಮಹತ್ವದ್ದಾಗಿದೆ. ಮಶಿನ್ ಮತ್ತು ಯಂತ್ರಣೆಯೊಂದಿಗೆ ಉಂಟಾಗುವ ಮಾನವನ ಸಂಬಂಧವು ಎಷ್ಟು ಸುಲಲಿತ ಮತ್ತು ಪಾರದರ್ಶಕವಾಗುತ್ತದೆಯೋ, ಅಷ್ಟೇ ಉತ್ಪಾದನೆಯ ಪ್ರಕ್ರಿಯೆಯ ಕೆಲಸದ ಸಾಮರ್ಥ್ಯವು ಹೆಚ್ಚಾಗುತ್ತದೆ. ಅಲ್ಲದೇ ಕೆಲಸ ನಿರ್ವಹಿಸುವವರಿಗೆ ಸ್ವಸ್ಥತೆಯನ್ನು ನೀಡುತ್ತದೆ. ಪಾರಂಪಾರಿಕವಾದ ಮಶಿನ್ ಗಳಲ್ಲಿ ಪ್ರಸ್ತುತ ದೀಪಗಳು, ಬಟನ್ ಮತ್ತು ಹಿಡಿಗಳಿಂದ ಮಾನವ ಮತ್ತು ಮಶಿನ್ ಗಳಲ್ಲಿ ನಿರ್ಮಾಣವಾಗುವ ಸಂವಾದದಲ್ಲಿ ನಿಧಾನವಾಗಿ ಬದಲಾವಣೆಯಾಗುತ್ತಿದೆ. ಟಚ್ ಸ್ಕ್ರೀನ್ (ಸ್ಪರ್ಶದಿಂದ ನಡೆಯಬಲ್ಲ) ಪ್ಯಾನೆಲ್, ಮೊಬೈಲ್ ಅಪ್ ಇಂತಹ ಹೊಸ ಹೊಸ ಮಾಧ್ಯಮಗಳ ಸಂಬಂಧವೂ ಬದಲಾಗುತ್ತಿದೆ. ವರ್ಚುವಲ್ ಮತ್ತು ಆಗ್ ಮೆಂಟೆಡ್ ರಿಯಾಲಿಟಿ ಎಂಬ ತಂತ್ರದಿಂದಾಗಿ ಈ ಕುರಿತು ಒಂದು ಕ್ರಾಂತಿಯೇ ನಡೆಯುತ್ತಿದೆ.
6. ಚಿಕ್ಕದಾದ ಆದರೆ ಲಾಭಕಾರಿಯಾದ ಅಪ್
ಎರಡನೇ ಉದ್ಯಮದ ಕ್ರಾಂತಿಯಲ್ಲಿ ಮಾಸ್ ಪ್ರಾಡಕ್ಷನ್ ನ ತಂತ್ರದಿಂದಾಗಿ ವಸ್ತುಗಳನ್ನು ಕಡಿಮೆ ಖರ್ಚಿನಲ್ಲಿ ನಿರ್ಮಿಸುವುದು ಸಾಧ್ಯವಾಗಿದೆ. ಆದರೆ ಅದರಲ್ಲಿ ವಸ್ತುಗಳ ರಚನೆ ಮತ್ತು ಕೆಲಸದ ರೀತಿಯಲ್ಲಿ ಬದಲಾವಣೆಗಳನ್ನು ಮಾಡಲು ಸಾಕಷ್ಟು ಅವಕಾಶ ಇರಲಿಲ್ಲ. ಇತ್ತೀಚೆಗೆ ಪ್ರತಿ ವರ್ಷ, ಪ್ರತಿಯೊಂದು ಪ್ರದೇಶ ಮತ್ತು ಬಳಕೆಗಾರರಿಗೆ ಅನುಗುಣವಾಗಿ ಉತ್ಪಾದಿತ ವಸ್ತುಗಳ ಅಪೇಕ್ಷಿತ ರಚನೆ ಮತ್ತು ಕೆಲಸದ ರೀತಿಯಲ್ಲಿ ಬದಲಾವಣೆಗಳಾಗುತ್ತವೆ. ಇಂತಹ ಪ್ರತಿಯೊಂದು ಬದಲಾವಣೆಗೆ ಅನುಸಾರವಾಗಿ ವಿವಿಧ ರಚನೆಯಿಂದ ಕೂಡಿರುವ ವಸ್ತುಗಳನ್ನು ಲಾಭಕಾರಿಯಾಗಿ ನಿರ್ಮಿಸುವುದೂ ಅಷ್ಟೇ ಅಗತ್ಯದ್ದಾಗಿದೆ. ಇದಕ್ಕೋಸ್ಕರ ವಸ್ತುಗಳ ರಚನೆಯಲ್ಲಿ ಗರಿಷ್ಠ ಪ್ರಮಾಣದ ಮಾಡ್ಯುಲರ್ ಮತ್ತು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಫ್ಲೆಕ್ಸಿಬಿಲಿಟಿ ಇರುವುದು ಅತ್ಯಾವಶ್ಯಕವಾಗಿದೆ. ಪ್ರತಿದಿನ ಬಳಸುವಂತಹ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಸೆಟ್ ಇದೇ ಇದಕ್ಕೋಸ್ಕರದ ಯಶಸ್ವಿ ಉದಾಹರಣೆಯಾಗಿದೆ. ಜಗತ್ತಿನೆಲ್ಲೆಡೆ ಒಂದೇ ಕಂಪನಿಯು ಕಂಪ್ಯೂಟರ್ ಅಥವಾ ಮೊಬೈಲ್ ಗಳು ಅನೇಕ ಆವೃತ್ತಿಗಳಲ್ಲಿ ಮತ್ತು ಮಾಡೆಲ್ ಗಳಲ್ಲಿ ಲಭ್ಯವಿವೆ. ಅಲ್ಲದೇ ಅವುಗಳ ಪೂರೈಸುವಂತಹ ಬೆಲೆಯಲ್ಲಿ. ಇದಕ್ಕೋಸ್ಕರ ಕಂಪ್ಯೂಟರ್ ಕಂಪನಿಗಳು ಮಾಡಿರುವ ಕಂಪ್ಯೂಟರ್ ಗಳ ವೈಶಿಷ್ಟ್ಯಪೂರ್ಣವಾದ ರಚನೆ ಮತ್ತು ಸಹಜವಾಗಿ ನಿಯಂತ್ರಿಸಬಲ್ಲ ಪಾರ್ಟ್ಸ್ ಗಳ ಉತ್ಪಾದನೆಯ ಪ್ರಕ್ರಿಯೆಯೂ ಕಾರಣವಾಗಿದೆ.
ಈ ರೀತಿಯಲ್ಲಿ ಇಂಡಸ್ಟ್ರಿ 4.0 ಗೋಸ್ಕರ ಉತ್ಪಾದನೆ ಮತ್ತು ಉತ್ಪಾದನೆಯ ಪ್ರಕ್ರಿಯೆಯ ಮಾರ್ಗಸೂಚಿಯ ತತ್ವಗಳ ಯೋಜನೆಯನ್ನು ಸಂಕ್ಷಿಪ್ತವಾಗಿ ತಿಳಿದುಕೊಂಡೆವು. ಇಂಡಸ್ಟ್ರಿ 4.0 ಇದರೆಡೆಗೆ ಪ್ರವಾಸವನ್ನು ಮಾಡಲು ಇಚ್ಛಿಸುವ ಪ್ರತಿಯೊಬ್ಬ ಉದ್ಯಮಿಯು ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ಕೆಲಸವನ್ನು ನಿರ್ವಹಿಸುವ ತಂಡವು ಈ ಯೋಜನೆಯ ಅಭ್ಯಾಸವನ್ನು ಮಾಡಬೇಕು. ಅದರಲ್ಲಿರುವ ತತ್ವಗಳನ್ನು ತಮ್ಮ ಉದ್ಯಮಗಳಲ್ಲಿ ಅನ್ವಯಿಸುವ ರೀತಿಯನ್ನು ಗಮನಿಸಬೇಕು ಮತ್ತು ಅದಕ್ಕೆ ಅನುಸಾರವಾಗಿ ಹಂತ ಹಂತವಾಗಿ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದರ ಕುರಿತು ಸ್ವಂತದ್ದೇ ಆದ ಕೆಲಸದ ಯೋಜನೆಯನ್ನು ತಯಾರಿಸಬೇಕು. ಮುಂದಿನ ಲೇಖನದಲ್ಲಿ ಈ ಅಂಶಗಳು ಉತ್ಪಾದನೆ ಮತ್ತು ಉತ್ಪಾದನೆಯ ಪ್ರಕ್ರಿಯೆ ಈ ಎರಡಕ್ಕೂ ಹೇಗೆ ಕಾರ್ಯಗತಗೊಳಿಸಬೇಕು, ಎಂಬುದನ್ನು ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ.
ಸಂದರ್ಭ
1. VDMA ಈ ಕಂಪನಿಯು (ಜರ್ಮನ್ ಮೆಕ್ಯಾನಿಕಲ್ ಮತ್ತು ಉತ್ಪಾದನೆಯ ಉದ್ಯಮಗಳ ಸಂಘಟನೆ) 2016 ರಲ್ಲಿ ಲಘು, ಮಧ್ಯಮ ಉದ್ಯಮಗಳ ಮಾರ್ಗಸೂಚಿಯ ತತ್ವಗಳ ಪತ್ರಿಕೆಯನ್ನು ಪ್ರಸ್ತುತ ಪಡಿಸಿತು.
2. VDMA ಯ ಇಂಡಸ್ಟ್ರಿ 4.0 ಗೋಸ್ಕರ ವಿಚಾರ ಸಂಕೀರಣದ ಅಂತರ್ಜಾಲ industrie40.vdma.org
@@AUTHORINFO_V1@@