ಪ್ರೊಟಾನ್ ಮೆಟಲ್ ಕ್ರಾಫ್ಟ್ಸ್ ಪ್ರೈ.ಲಿ. ಈ ಕಂಪನಿಯ ಅಡಿಪಾಯವನ್ನು 2004 ರಲ್ಲಿ ಪುಣೆಯಲ್ಲಿ ಹಾಕಲಾಯಿತು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಪೂರ್ತಿಗೊಳಿಸಿದ ನಂತರ ಅನೇಕ ಕಂಪನಿಗಳಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಅಲ್ಲಿರುವ ಹಿರಿಯ ವ್ಯವಸ್ಥಾಪನೆ ಮತ್ತು ಟೆಕ್ನೊ ಕಮರ್ಶಿಯಲ್ ಕೆಲಸದ ಅನುಭವವನ್ನು ಹೊಂದಿದ್ದರಿಂದ ಈ ಕಂಪನಿಯ ಸ್ಥಾಪನೆಯು ಸುಲಭವಾಯಿತು. 2006 ರಲ್ಲಿ ನಾವು ಹಾಸ್ ಎಂಬ ಕಂಪನಿಯಿಂದ ಮೊದಲ ಮಶಿನಿಂಗ್ ಸೆಂಟರ್ ಆಮದು ಮಾಡಿದೆವು. ಅಲ್ಲಿಂದಲೇ ನಮ್ಮ ವ್ಯವಸಾಯವು ವಾಯುವೇಗದಿಂದ ಪ್ರಾರಂಭಗೊಂಡಿತು. ಕಂಪನಿಯ ಸ್ಥಾಪನೆಯಿಂದ ಈ ತನಕ ನಾವು ವಿವಿಧ ರೀತಿಯ ಯಂತ್ರಭಾಗಗಳ ನಿರ್ಮಾಣ (ಉದಾಹರಣೆ, ಟೊಯೋಟಾ ಕಾರ್ ಗಳಿಗೆ ಬೇಕಾಗಿರುವ ಯಂತ್ರಭಾಗಗಳು, ಡಿಫೆನ್ಸ್ ಟೇಂಕ್ ಗಳಿಗೋಸ್ಕರ ರಬರೈಜ್ಡ್ ರೋಡ್ ವೀಲ್ ಗಳ ಅಭಿವೃದ್ಧಿ ಮತ್ತು ನಿರ್ಮಿತಿ, ಡಿಫೆನ್ಸ್ ಟೇಂಕ್ ಗಳಿಗೋಸ್ಕರ ಟ್ರ್ಯಾಕ್ ಶೂ ಅಸೆಂಬ್ಲಿ) ಮಾಡಿ ಸ್ಥಳೀಯ ಮಾರುಕಟ್ಟೆಯೊಂದಿಗೆ ಜರ್ಮನಿ, ನೆದರ್ ಲ್ಯಾಂಡ್, ಫ್ರಾನ್ಸ್ ಮತ್ತು ಅಮೇರಿಕಾ ಮುಂತಾದ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ.
ನಮ್ಮಲ್ಲಿ ನಿರಂತರವಾಗಿ ಅನೇಕ ವಿಧದ ಯಂತ್ರಭಾಗಗಳು ಅಭಿವೃದ್ಧಿ ಪಡಿಸಲು ಮತ್ತು ನಿರ್ಮಿತಿಗೋಸ್ಕರ (ಚಿತ್ರ ಕ್ರ. 1) ಬರುತ್ತಿರುತ್ತವೆ. ಆಟೊಮೊಬೈಲ್ ನಲ್ಲಿರುವ ಇಲೆಕ್ಟ್ರಾನಿಕ್ ಅಸೆಂಬ್ಲಿಯಲ್ಲಿರುವ ಬುಶ್ (ಚಿತ್ರ ಕ್ರ. 2) ಎಂಬ ಹೆಸರಿನ ಯಂತ್ರಭಾಗವು ನಮ್ಮಲ್ಲಿ ಅಭಿವೃದ್ಧಿ ಪಡಿಸಲು ತರಲಾಯಿತು. ಈ ಬುಶ್ ನೊಂದಿಗೆ ಇನ್ನಷ್ಟು 13 ವಿಧದ ಯಂತ್ರಭಾಗಗಳನ್ನು ನಾವು ಜರ್ಮನಿಗೆ ರಫ್ತು ಮಾಡುತ್ತಿದ್ದೇವೆ.
ಬುಶ್ ನ ಒಳ ವ್ಯಾಸ (ID) ಮತ್ತು ಹೊಸ ವ್ಯಾಸ (OD) ಇವೆರಡೂ ಮಹತ್ವದ ಘಟಕಗಳಾಗಿವೆ. ಈ ಎರಡೂ ಅಳತೆಗೆ ಟಾಲರನ್ಸ್ ತುಂಬಾ ಕಡಿಮೆ ಇರುತ್ತದೆ. ಎರಡೂ ವ್ಯಾಸಗಳ ಕಾಂನ್ಸೆಂಟ್ರಿಸಿಟಿ 30 ಮೈಕ್ರಾನ್ ನಲ್ಲಿ ಇರುವುದೂ ಅತ್ಯಾವಶ್ಯಕವಾಗಿದೆ. ಇದರೊಂದಿಗೆ ಸರ್ಫೇಸ್ ನ ಫಿನಿಶ್ ಕೂಡಾ Rz 6.3 ಅಂದರೆ ಸುಮಾರು 0.8 Ra ಯಷ್ಟು ಇರಬೇಕು, ಎಂಬ ಬೇಡಿಕೆಯು ಗ್ರಾಹಕರಿಂದ ಇತ್ತು. ಒಳ ವ್ಯಾಸವು 16 ಮಿ.ಮೀ.ಇದ್ದು ಅದರಲ್ಲಿ ಬೋರ್ ಗೆ 18 ಮೈಕ್ರಾನ್ ನ ಟಾಲರನ್ಸ್ ನೀಡಲಾಗಿದೆ. ಹೊರ ವ್ಯಾಸ 19 ಮಿ.ಮೀ. ಇದ್ದು ಟಾಲರನ್ಸ್ ಮಾತ್ರ 21 ಮೈಕ್ರಾನ್ ಇದೆ.
ಹಳೆಯ ರೀತಿ
ಈ ಹಿಂದಿನ ರೀತಿಯಲ್ಲಿ ಈ ಬುಶ್ ನ ಯಂತ್ರಣೆಯನ್ನು ನಾವು 2 ಸೆಟಪ್ ನಲ್ಲಿ (ಚಿತ್ರ ಕ್ರ. 3) ಮಾಡುತ್ತಿದ್ದೆವು. ಮೊದಲನೆಯ ಸೆಟಪ್ ನಲ್ಲಿ ಹೊರ ವ್ಯಾಸದ ಯಂತ್ರಣೆ, ಒಂದು ಬದಿಯ ಚಿಕ್ಕ ರಂಧ್ರ, ಡ್ರಿಲ್ಲಿಂಗ್ ಮತ್ತು ಬೋರಿಂಗ್ ಮಾಡಲಾಗುತ್ತಿತ್ತು. ಎರಡನೇ ಸೆಟಪ್ ನಲ್ಲಿ ಬುಶ್ ಗೆ ಹೊರ ವ್ಯಾಸದಲ್ಲಿ ಹಿಡಿದಿಟ್ಟು ಎರಡನೇ ಬದಿಯಲ್ಲಿ ಕೌಂಟರ್ ಬೋರ್ ಮತ್ತು ಫ್ಲಂಜ್ ನ ಯಂತ್ರಣೆಯನ್ನು ಮಾಡಲಾಗುತ್ತಿತ್ತು. ಪ್ರಾರಂಭದಲ್ಲಿ ಹಲವಾರು ಬುಶ್ ಯಂತ್ರಣೆಯನ್ನು ಮಾಡಿದ ನಂತರ ಅದರಲ್ಲಿ ಕಾಂನ್ಸೆಟ್ರಿಸಿಟಿ ಮಾಡುವುದು ಅಸಾಧ್ಯವಾಗಿರುವುದು ನಮ್ಮ ಗಮನಕ್ಕೆ ಬಂತು. ಕಾರ್ಯವಸ್ತುವಿನ ಹೊರ ವ್ಯಾಸವನ್ನು ಹಿಡಿದಿಡುವಾಗ ಚಕ್ ನ ಒತ್ತಡದಿಂದಾಗಿ ಮತ್ತು ವಾಲ್ ಥಿಕ್ ನೆಸ್ ಕಡಿಮೆ ಇರುವುದರಿಂದ ಬುಶ್ ಓವಲ್ ಆಕಾರದ್ದಾಗುತ್ತಿತ್ತು. ಅದರಲ್ಲಿ ಚಕ್ ನ ರಿಪಿಟ್ಯಾಬಿಲಿಟಿ 30 ಮೈಕ್ರಾನ್ ಇರುವುದರಿಂದ ಸಮಸ್ಯೆಗಳು ವೃದ್ಧಿಸುತ್ತಿದ್ದವು.
ಹೊಸ ರೀತಿ
ಜಾಮೆಟ್ರಿಕಲ್ ಟಾಲರನ್ಸ್ ಮತ್ತು ಓವಲ್ ಗೋಸ್ಕರ ಈ ಸಮಸ್ಯೆಯನ್ನು ಹೇಗೆ ಇಲ್ಲದಂತೆ ಮಾಡಬಹುದು, ಎಂಬುದರ ಕುರಿತು ವಿಚಾರ ಮಾಡುತ್ತಿರುವಾಗ, ಈ ಕಾರ್ಯವಸ್ತುಗಳ ಯಂತ್ರಣೆಯನ್ನು 2 ಸೆಟಪ್ ಹೊರತಾಗಿ ಒಂದೇ ಸೆಟಪ್ ನಲ್ಲಿ ಮಾಡಿದಲ್ಲಿ ಏನಾಗಬಹುದು, ಎಂಬ ಪರ್ಯಾಯವು ಕಂಡುಬಂತು. ಈ ಯಂತ್ರಣೆಯನ್ನು ಒಂದೇ ಸೆಟಪ್ ನಲ್ಲಿ ಮಾಡಲು ನಾವು ಬೇಕ್ ಟರ್ನಿಂಗ್ ನ ಟೂಲ್ (ಚಿತ್ರ ಕ್ರ. 4) ನಮ್ಮಲ್ಲಿಯೇ ಅಭಿವೃದ್ಧಿ ಪಡಿಸಿ ಅದರ ನಿರ್ಮಿತಿಯನ್ನು ಮಾಡಲಾರಂಭಿಸಿದೆವು. ಒಂದೇ ಸೆಟಪ್ ನಲ್ಲಿ ಸಂಪೂರ್ಣ ಬುಶ್ ನ ಯಂತ್ರಣೆಯನ್ನು ಮಾಡುವಾಗ ಕಾರ್ಯವಸ್ತು ಬಾರ್ ಸ್ಪರೂಪದಲ್ಲಿರುವ ಭಾಗದಲ್ಲಿಯೇ ಹಿಡಿದಿಟ್ಟು ಫ್ಲಂಜ್ ನ ಯಂತ್ರಣೆಯನ್ನು ಹಿಂಭಾಗದಲ್ಲಿ ಮಾಡಬೇಕು, ಎಂಬುದಕ್ಕಾಗಿ ಈ ಟೂಲ್ ತಯಾರಿಸಲಾಯಿತು. ಇದರಿಂದಾಗಿ ಎಲ್ಲ ಯಂತ್ರಣೆಯ ಒಂದೇ ಸೆಟಪ್ ನಲ್ಲಿ ಮತ್ತು ಕನಿಷ್ಠ ಓವರ್ ಹ್ಯಾಂಗ್ ಅಳವಡಿಸಿ ಮಾಡಲಾಯಿತು. ಈ ಪ್ರಕ್ರಿಯೆಯನ್ನು ವೀಕ್ಷಿಸಲು ಪಕ್ಕದಲ್ಲಿ ನೀಡಿರುವ QR ಕೋಡನ್ನು ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
ಹೊಸ ರೀತಿಯಿಂದಾಗಿ ಲಭಿಸಿರುವ ಲಾಭಗಳು
ಹೊಸ ಟೂಲ್ ನಿಂದಾಗಿ ಬುಶ್ ಸಾಲಿಡ್ ಬಾರ್ ನಲ್ಲಿಯೇ ಹಿಡಿಯಲಾಯಿತು ಮತ್ತು ಕಾಂನ್ಸೆಟ್ರಿಸಿಟಿಯು ಬರದಿರುವ ಸಮಸ್ಯೆ ಇಲ್ಲದಂತಾಯಿತು. ಹಾಗೆಯೇ ಓವಲ್ ಯನ್ನು ನೀಗಿಸುವುದು ಸಾಧ್ಯವಾಯಿತು.
• ಸೈಕಲ್ ಟೈಮ್ ಮತ್ತು ಲೀಡ್ ಟೈಮ್ ಶೇಕಡಾ 30 ರಷ್ಟು ಕಡಿಮೆಯಾಯಿತು.
• ಟರ್ನಿಂಗ್ ನ ಒಂದು ಆಪರೇಶನ್ ಕಡಿಮೆಯಾಯಿತು.
• ಎರಡು ಮಶಿನ್ ಗಳನ್ನು ಬಳಸಿ ಕಾರ್ಯವಸ್ತುವಿನ ಯಂತ್ರಣೆಯನ್ನು ಮಾಡುವ ಬದಲಾಗಿ ಅದನ್ನು ಒಂದೇ ಮಶಿನ್ ನಲ್ಲಿ ಮಾಡಲಾಯಿತು.
• ಉತ್ಪಾದಕತೆಯಲ್ಲಿ ಮತ್ತು ಗುಣಮಟ್ಟದಲ್ಲಿ ಸುಧಾರಣೆಯಾಯಿತು. ಪ್ರತಿ ಗಂಟೆಗೆ 20 ಬುಶ್ ಗಳ ನಿರ್ಮಿತಿಯಾಗುತ್ತಿದ್ದು ಪ್ರತಿ ತಿಂಗಳೂ 3-5 ಸಾವಿರ ಬುಶ್ ಗಳಷ್ಟು ಬೇಡಿಕೆಯು ಗ್ರಾಹಕರಿಂದ ಬರುತ್ತಿದೆ.
• ಟೂಲ್ ಗಳ ನಿರ್ಮಿತಿಗೋಸ್ಕರ ಯಾವುದೇ ರೀತಿಯ ಖರ್ಚು ಇಲ್ಲದಂತಾಯಿತು.