ಪರೀಕ್ಷೆಯ ಫಿಕ್ಸ್ಚರ್

@@NEWS_SUBHEADLINE_BLOCK@@

Lohkarya - Udyam Prakashan    13-May-2021   
Total Views |
ಪರೀಕ್ಷೆಯ (ಇನ್ ಸ್ಪೇಕ್ಷನ್ ಅಥವಾ ಚೆಕಿಂಗ್) ಫಿಕ್ಸ್ಟರ್ ಗೆ ಹೆಚ್ಚು ಮಹತ್ವವಿದೆ. ತಾವು ತಯಾರಿಸಿರುವ ಉತ್ಪಾದನೆಯು ನೀಡಿರುವ ನಿಯತಾಂಕಗಳಂತೆ ತಯಾರಿಸಲಾಗಿದೆಯೇ, ಎಂಬುದನ್ನು ಪರಿಶೀಲಿಸಿಯೇ ಗ್ರಾಹಕರರಿಗೆ ನೀಡಲಾಗುತ್ತದೆ. ತಮ್ಮ ದೈನಂದಿನ ಜೀವನದಲ್ಲಿಯೂ ಯಾವುದೇ ವಸ್ತುಗಳನ್ನು ಖರೀದಿಸುವಾಗ ಅದನ್ನು ಪರಿಶೀಲಿಸುತ್ತೇವೆ.
 
ಒಂದು ವೇಳೆ ನಮಗೆ ಮಿಕ್ಸರ್ ಖರೀದಿ ಮಾಡುವುದಾದಲ್ಲಿ ಅದನ್ನು ಹೇಗೆ ಪರಿಶೀಲಿಸಬೇಕು? ನಾವು ಸಾಮಾನ್ಯವಾಗಿ ಯಾವ ಕಂಪನಿಯಿಂದ ಅದನ್ನು ನಿರ್ಮಿಸಲಾಗಿದೆ, ಅದರ ಬ್ರಾಂಡ್ ನ ಹೆಸರನ್ನು ನೋಡುತ್ತೇವೆ. ಕಾರಣ ಆ ವಸ್ತುವಿನ ಸ್ಟ್ಯಾಂಡರ್ಡ್ ಗಳನ್ನು ಯಾವ ಕಂಪನಿಯು ಅನುಸರಿಸುತ್ತದೆ, ಅದರ ಬಾಳಿಕೆ ಹೇಗಿದೆ, ಅದರ ಕುರಿತಾದ ಸೇವೆ ಹೇಗಿದೆ, ಮುಂತಾದ ಅಂಶಗಳನ್ನು ನಾವು ಪರಿಶೀಲಿಸಿ, ನಂತರವೇ ಅದನ್ನು ಖರೀದಿಸುತ್ತೇವೆ. ಈ ಮಿಕ್ಸರ್ ಹೇಗೆ ನಡೆಯುತ್ತದೆ, ಎಷ್ಟು ವೇಗವಾಗಿ ನಡೆಯುತ್ತಿದೆ, ಅದರಲ್ಲಿ ತಿರುಗುವ ಶಕ್ತಿ ಎಷ್ಟಿದೆ, ಅದರಲ್ಲಿ ಶಬ್ದ ಎಷ್ಟು ಪ್ರಮಾಣದಲ್ಲಿ ಇದೆ, ಈ ರೀತಿಯ ಎಲ್ಲ ನಿಯತಾಂಕಗಳನ್ನು ಪರಿಶೀಲಿಸುವುದು ಮಾತ್ರವಲ್ಲದೇ ಅದರ ಜವಾಬ್ದಾರಿಯೂ ಉತ್ಪಾದಕರದ್ದೇ ಆಗಿರುತ್ತದೆ. ಗ್ರಾಹಕರ ವಿಶ್ವಾಸವನ್ನು ಗಳಿಸುವಲ್ಲಿ ಪರೀಕ್ಷೆ ಒಂದು ಪರ್ಯಾಯವಾಗಲಾರದು.
 
ಡ್ರಾಯಿಂಗ್ ನಲ್ಲಿ ನೀಡಿರುವ ಮಹತ್ವದ ಮಾಪನಗಳನ್ನು ಪರಿಶೀಲಿಸಲು ತಯಾರಿಸಿರುವ ಸಾಮಗ್ರಿ ಅಂದರೆ ಪರೀಕ್ಷೆಯ ಫಿಕ್ಚ್ಸರ್. ನಾವು ಯಂತ್ರಣೆಗೋಸ್ಕರ ಫಿಕ್ಸ್ಚರ್ ಬಳಸಿದ್ದರಿಂದ ಕಾರ್ಯವಸ್ತುವಿನ ಆವರ್ತನೆಯ ಸಮಯವು ತುಂಬಾ ಕಡಿಮೆಯಾಗುತ್ತದೆ. ಅಂದರೆ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ, ಎಂಬುದೇ ಇದರ ಅರ್ಥ. ಎಷ್ಟು ವೇಗದಲ್ಲಿ ಉತ್ಪಾದನೆಯಾಗುತ್ತದೆಯೋ, ಅಷ್ಟೇ ವೇಗದಲ್ಲಿ ಪರೀಕ್ಷೆಯನ್ನು ಮಾಡುವುದನ್ನೂ ಅಪೇಕ್ಷಿಸಲಾಗಿದೆ. ಪರೀಕ್ಷೆಯ ಫಿಕ್ಸ್ಚರ್ ನಿಂದಾಗಿ ಪರಿಶೀಲನೆಯೂ ಹೆಚ್ಚು ಶೀಘ್ರವಾಗಿ ನಿರ್ವಹಿಸುವುದು ಸಾಧ್ಯ.
ಪರೀಕ್ಷೆಯ ಫಿಕ್ಸ್ಚರ್ ನ ವಿಧಗಳು
1. ಡಯಲ್ ನಂತಹ ಫಿಕ್ಸ್ಚರ್ ನ ವಿಧಗಳು : ಕಾರ್ಯವಸ್ತುವಿನಲ್ಲಿ ಒಂದು ವೇಳೆ ಯಾವುದೇ ಅಳತೆಯು ± 0.2 ಮಿ.ಮೀ.ಗಿಂತ ಹೆಚ್ಚು ನಿಖರವಾಗಿದ್ದಲ್ಲಿ, ಡಯಲ್ ಬಳಸಬೇಕಾಗುತ್ತದೆ. ಕಾಂನ್ಸೆಂಟ್ರಿಸಿಟಿಯ ಪರೀಕ್ಷೆ ಮಾಡುವಾಗ ಡಯಲ್ ನೊಂದಿಗೆ ಫಿಕ್ಸ್ಚರ್ ಉಪಯೋಗಿಸಲಾಗುತ್ತದೆ.
2. ರಿಸೀವಿಂಗ್ ವಿಧದ ಫಿಕ್ಸ್ಚರ್ : ಕಾರ್ಯವಸ್ತುಗಳಲ್ಲಿರುವ ಅಳತೆಗಳು ಹೆಚ್ಚು ನಿಖರವಾಗಿ ಇರದಿದ್ದಲ್ಲಿ ಮತ್ತು ಕೇವಲ ಕಾರ್ಯವಸ್ತುವಿನ ಜೋಡಣೆಯು ಸುಲಭವಾಗಿ ಆಗಲು ನಿಖರತೆಯು ಬೇಕಾಗಿದ್ದಲ್ಲಿ, ಈ ರೀತಿಯ ಫಿಕ್ಸ್ಚರ್ ಬಳಸಲಾಗುತ್ತದೆ. ಚುಟುಕಾಗಿ ಹೇಳುವುದಾದಲ್ಲಿ ಯಾವ ಭಾಗವು ಕಾರ್ಯವಸ್ತುವಿನಲ್ಲಿ ಅಳವಡಿಸಲ್ಪಡುತ್ತದೆಯೋ, ಅದೇ ರೀತಿಯ ಭಾಗವನ್ನು ಅದರಲ್ಲಿ ಅಳವಡಿಸುವುದು ಸಾಧ್ಯವೇ ಎಂಬುದನ್ನುನೋಡಬೇಕು.
 
3. ವಿಜ್ಯುವಲ್ ಚೆಕಿಂಗ್ ಫಿಕ್ಸ್ಚರ್ : ಎರಕ ಹಾಕಿರುವ ಭಾಗದಲ್ಲಿ ಬಾಸ್ ಹಾಗೆಯೇ ವಿವಿಧ ಆಕಾರಗಳಿರುತ್ತವೆ. ಇಂತಹ ಆಕಾರಗಳಿಗೆ ಹೆಚ್ಚು ನಿಖರತೆಯ ಆವಶ್ಯಕತೆ ಇರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಆ ಆಕಾರವನ್ನು ಸೂಕ್ತ ಜಾಗದಲ್ಲಿ ಅಳವಡಿಸಲಾಗಿದೆಯೇ ಇಲ್ಲವೇ, ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಇದಕ್ಕೋಸ್ಕರ ಅದೇ ಆಕಾರದ ಟೆಂಪ್ಲೇಟ್ ಗಳನ್ನು ಬಳಸಲಾಗುತ್ತದೆ.
 
4. ಲೀಕೇಜ್ ಟೆಸ್ಟಿಂಗ್ ಫಿಕ್ಸ್ಚರ್ : ಲೀಕೇಜ್ ಅಂದರೆ ಸೋರುವಿಕೆ. ಸಿಲಿಂಡರ್ ಬ್ಲಾಕ್, ಸಿಲಿಂಡರ್ ಹೆಡ್ ಇಂತಹ ಯಂತ್ರಭಾಗಗಳಿಂದ ಸೋರುವಿಕೆಯಾಗುವುದು ಸೂಕ್ತವಲ್ಲ. ಇದರಿಂದಾಗಿ ಇಂತಹ ಭಾಗಗಳಿಗೆ ಲೀಕೇಜ್ ಟೆಸ್ಟಿಂಗ್ ಫಿಕ್ಸ್ಚರ್ ಬಳಸುವುದು ಅನಿವಾರ್ಯವಾಗಿರುತ್ತದೆ.
 
5. ಟೆಸ್ಟ್ ರಿಗ್ : ಇದೊಂದು ಫಿಕ್ಸ್ಚರ್ ನ ವಿಧ. ಉದಾಹರಣೆ, ವಾಹನಗಳ ಬಾಗಿಲನ್ನು ತೆರೆಯುವ ಮತ್ತು ಮುಚ್ಚುವ ಸಾಮರ್ಥ್ಯವು ಒಂದು ಲಕ್ಷದಷ್ಟು ಇದ್ದಲ್ಲಿ, ಉತ್ಪಾದಕರಿಗೆ ಮಾದರಿಯ ವಾಹನವನ್ನು ತಯಾರಿಸುವಾಗ ಆ ಸಾಮರ್ಥ್ಯವನ್ನು ಸಾಬೀತು ಪಡಿಸುವುದು ಕಡ್ಡಾಯವಾಗಿದೆ. ಇದನ್ನು ಟೆಸ್ಟ್ ರಿಗ್ ಎಂದು ಹೇಳಲಾಗುತ್ತದೆ.
 
6. ರಾ ಪಾರ್ಟ್ ಚೆಕಿಂಗ್ ಫಿಕ್ಸ್ಚರ್ : ರಾ ಪಾರ್ಟ್ ಅಂದರೆ ಕಚ್ಚಾ ವಸ್ತುಗಳು. ಕಾಸ್ಟಿಂಗ್, ಫೋರ್ಜಿಂಗ್ ಮಾಡಿರುವ ಭಾಗಗಳಿಗೆ ನಾವು ರಾ ಪಾರ್ಟ್ ಎಂದು ಹೇಳುತ್ತೇವೆ. ಇಂತಹ ಭಾಗಗಳ ಪರೀಕ್ಷೆ ಮಾಡಲು ಬಳಸಲಾಗುವ ಫಿಕ್ಸ್ಚರ್ ನ್ನು ರಾ ಪಾರ್ಟ್ ಚೆಕಿಂಗ್ ಫಿಕ್ಸ್ಚರ್ ಎಂದು ಹೇಳಲಾಗುತ್ತದೆ. ಸಿಲಿಂಡರ್ ಬ್ಲಾಕ್, ಸಿಲಿಂಡರ್ ಹೆಡ್, ಕನೆಕ್ಟಿಂಗ್ ರಾಡ್, ವೀಲ್ ಹಬ್ ಇಂತಹ ಅನೇಕ ರೀತಿಯ ಕ್ಲಿಷ್ಟ ಮತ್ತು ತೊಡಕುಗಳುಳ್ಳ ಭಾಗಗಳ ಯಂತ್ರಣೆಯ ಮುಂಚಿನ ಪರೀಕ್ಷೆಗೆ ಈ ವಿಧದ ಫಿಕ್ಸ್ಚರ್ ಗಳ ಆವಶ್ಯಕತೆ ಇರುತ್ತದೆ. ಇದರಿಂದಾಗಿ ಯಂತ್ರಣೆಯನ್ನು ಪ್ರಾರಂಭಿಸುವ ಮುಂಚೆಯೇ ಕಾರ್ಯವಸ್ತುವಿನಲ್ಲಿ ಯಾವುದೇ ರೀತಿಯ ದೋಷಗಳು ಕಂಡುಬಂದಲ್ಲಿ ಸೂಕ್ತ ಸಮಯದಲ್ಲಿಯೇ ಅದರ ಕುರಿತಾಗಿ ದೋಷಗಳನ್ನು ಸಹಜವಾಗಿ ನೀಗಿಸುವುದು ಸಾಧ್ಯವಾಗುತ್ತದೆ. ಪರೀಕ್ಷೆಯ ಫಿಕ್ಸ್ಚರ್ ತಯಾರಿಸುವಾಗ ಈ ಮುಂದೆ ನೀಡಿರುವ ಹಲವಾರು ಪ್ರಮುಖ ಅಂಶಗಳ ಕುರಿತು ವಿಚಾರ ಮಾಡಬೇಕಾಗುತ್ತದೆ.
 
1. ಮಶಿನಿಂಗ್ ಫಿಕ್ಸ್ಚರ್ ನಲ್ಲಿ ಕಾರ್ಯವಸ್ತು ಲೊಕೇಟ್ ಮತ್ತು ರೆಸ್ಟ್ ಮಾಡಲಾಗಿರುವಾಗ, ಅದೇ ರೀತಿಯಲ್ಲಿ ಈ ಪರೀಕ್ಷೆಯ ಫಿಕ್ಸ್ಚರ್ ನಲ್ಲಿ ಲೊಕೇಟ್ ಮತ್ತು ರೆಸ್ಟ್ ಮಾಡಬೇಕಾಗುತ್ತದೆ. ಕ್ಲ್ಯಾಂಪಿಂಗ್ ನ್ನು ಕೂಡಾ ಸಾಮಾನ್ಯವಾಗಿ ಇದೇ ರೀತಿಯಲ್ಲಿ ಮಾಡಲಾಗುತ್ತದೆ.
 
2. ಕಾರ್ಯವಸ್ತುಗಳು ಅದರೊಂದಿಗೆ ಜೋಡಿಸಲ್ಪಡುವಂತಹ ಉತ್ಪಾದನೆಗಳಲ್ಲಿ ಹೇಗೆ ತಯಾರಿಸಲಾಗುತ್ತದೆ, ಆ ಕಾರ್ಯವಸ್ತುಗಳ ಕೆಲಸ ಯಾವುದಾಗಿದೆ, ಅಳತೆಯ ನಿಖರತೆ ಮತ್ತು ಪರಸ್ಪರ ಸಂಬಂಧಗಳ ಆವಶ್ಯಕತೆ ಎಷ್ಟಿದೆ, ಈ ಅಂಶಗಳಲ್ಲಿ ವಸ್ತುಗಳ ಯಂತ್ರಣೆಯ ಪ್ರಕ್ರಿಯೆಯು ಅವಲಂಬಿಸಿರುತ್ತದೆ. ಯಂತ್ರಣೆಯ ಪ್ರಕ್ರಿಯೆಯ ವಿಚಾರವನ್ನು ಮಾಡಿಯೇ ಫಿಕ್ಸ್ಚರ್ ನ ಯೋಜನೆಯನ್ನು ಮಾಡಲಾಗುತ್ತದೆ.
 
3. ಪರೀಕ್ಷೆಯ ಫಿಕ್ಸ್ಚರ್ ನಲ್ಲಿ ಕಾರ್ಯವಸ್ತುವನ್ನು ಪರಿಶೀಲಿಸುವಾಗ ಅದರ ಡಿರ್ಟಾರ್ಶನ್ ಆಗಬಾರದು, ಎಂಬುದರ ಕುರಿತು ಮುತುವರ್ಜಿ ವಹಿಸುವುದು ಅತ್ಯಾವಶ್ಯಕವಾಗಿದೆ.
 
4. ಪರೀಕ್ಷೆಯ ಫಿಕ್ಸ್ಚರ್ ನಲ್ಲಿ ಅಲುಗಾಡುವಂತಹ ಭಾಗಗಳು ಕನಿಷ್ಠ ಪ್ರಮಾಣದಲ್ಲಿರಬೇಕು. ಅಲುಗಾಡುವಂತಹ ಭಾಗಗಳು ಜಾಸ್ತಿ ಪ್ರಮಾಣವು ಹೆಚ್ಚು ಇದ್ದಲ್ಲಿ, ನಿಖರತೆಯಲ್ಲಿ ವಿಪರೀತ ಪರಿಣಾಮ ಉಂಟಾಗುತ್ತದೆ. ಪರಸ್ಪರ ತಿಕ್ಕಲ್ಪಡುವವ ಭಾಗಗಳ ಸವೆತವಾಗುವುದರಿಂದ ಇದು ಸಂಭವಿಸುತ್ತದೆ.
 
5. ಯಂತ್ರಣೆಗೋಸ್ಕರ ಫಿಕ್ಸ್ಚರ್ ಗಿಂತ ಪರೀಕ್ಷೆಯ ಫಿಕ್ಸ್ಚರ್ ನ ನಿಖರತೆಯು ಉಟ್ಟಮಟ್ಟದ್ದಾಗಿರುತ್ತದೆ. ಕಾರ್ಯವಸ್ತುವಿನಲ್ಲಿ ನೀಡಿರುವ ಟಾಲರನ್ಸ್ ನ್ನು ಪರೀಕ್ಷೆಯ ಫಿಕ್ಸ್ಚರ್ ನಲ್ಲಿ 10% ಟಾಲರನ್ಸ್ ನಷ್ಟು ನೀಡಲಾಗಿರುತ್ತದೆ. ಎರಡು ರಂಧ್ರಗಳ ದೂರವು ± 0.2 ಮಿ.ಮೀ.ಇದ್ದಲ್ಲಿ ಪರೀಕ್ಷೆಯ ಫಿಕ್ಸ್ಚರ್ ನಲ್ಲಿ ಇದೇ ದೂರವು ± 0.02 ಮಿ.ಮೀ. ನಲ್ಲಿ ನಿಯಂತ್ರಿಸಲಾಗುತ್ತದೆ.
 
6. ಪರೀಕ್ಷೆಯ ಫಿಕ್ಸ್ಚರ್ ನಲ್ಲಿ ಕ್ಯಾಲಿಬ್ರೇಶನ್ ನಿಗದಿತ ಕಾಲಾವಧಿಯಲ್ಲಿಯೇ ಮಾಡಬೇಕು. ಅದರಂತೆ ಒಂದು ವೇಳೆ ಹಲವಾರು ಅಪಘಾತಗಳಾಗಿದ್ದಲ್ಲಿ ಮಾತ್ರ ಕ್ಯಾಲಿಬ್ರೇಶನ್ ಮಾಡದೇ ಪರೀಕ್ಷೆಯ ಫಿಕ್ಸ್ಟರ್ ಬಳಸಬಾರದು.
ಪರೀಕ್ಷೆಯ ಫಿಕ್ಸ್ಚರ್ ನಿಂದಾಗಿ ಉತ್ಪಾದಿಸಲಾಗಿರುವ ಕಾರ್ಯವಸ್ತುಗಳ ಗುಣಮಟ್ಟದಲ್ಲಿ ನಿರಂತರವಾಗಿ ಪರಿಶೀಲಿಸುವುದು ಸಾಧ್ಯವಾಗುತ್ತದೆ. ಇದರಿಂದಾಗಿ ಅಸೆಂಬ್ಲಿ ಮಾಡುವಾಗ ಸಹಜತೆಯು ಲಭಿಸುತ್ತದೆ.
ಈಗ ಒಂದು ಚಿಕ್ಕ ಮತ್ತು ಸುಲಭವಾದ ಪರೀಕ್ಷೆಯ ಫಿಕ್ಸ್ಚರ್ ನೋಡೋಣ.
ಚಿತ್ರ ಕ್ರ. 1 ರಲ್ಲಿ ತೋರಿಸಿರುವ ಯಂತ್ರಭಾಗಗಳ ಪರೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ, ಅಂದರೆ ಅದರ ಗುಣಮಟ್ಟವನ್ನು ಹೇಗೆ ನೋಡಬೇಕು, ಎಂಬುದನ್ನು ನೋಡೋಣ.
 

1_1  H x W: 0 x 
 
ಚಿತ್ರ ಕ್ರ.1 ರಲ್ಲಿ ಯಂತ್ರಭಾಗಗಳು ಮತ್ತು ಫಿಕ್ಸ್ಚರ್ ಇವೆರಡರ ಚಿತ್ರಗಳು ಕಂಡುಬರುತ್ತಿವೆ. ಇದರಲ್ಲಿ ತೋರಿಸಿರುವ ಫಿಕ್ಸ್ಚರ್ ಗುಣಮಟ್ಟವನ್ನು ಪರಿಶೀಲಿಸಲು ಮಾಡಿರುವ ಪಿಕ್ಸ್ಚರ್ ಆಗಿದೆ. ಯಂತ್ರಭಾಗಗಳನ್ನು ನೋಡಿದಾಗ, ಅದರಲ್ಲಿ ಒಂದು ವ್ಯಾಸ ಬೋರ್ ಮಾಡಿರುವುದು ಕಂಡುಬರುತ್ತದೆ. ಅಂತೆಯೇ ಒಂದು ಫೇಸ್ ನಲ್ಲಿ ನಾಲ್ಕು ರಂಧ್ರಗಳು ಕಾಣಸಿಗುತ್ತವೆ. ಹಾಗೆಯೇ ಸಾಮಾನ್ಯವಾಗಿ ಅರ್ಧ ಗೋಲಾಕಾರದಂತಹ ಒಂದು ಕಚ್ಚು ಕಾಣುತ್ತದೆ. ಪಕ್ಕದಲ್ಲಿರುವ ಫಿಕ್ಸ್ಚರ್ ವೀಕ್ಷಿಸಿದಲ್ಲಿ ಅದರಲ್ಲಿ ಏನೇನು ಪರಿಶೀಲಿಸಬೇಕು, ಎಂಬುದನ್ನು ತಿಳಿದುಕೊಳ್ಳೋಣ.

2_1  H x W: 0 x 
 
ಚಿತ್ರ ಕ್ರ. 2 ರಲ್ಲಿ ಯಂತ್ರಭಾಗಗಳ ಒಳ ವ್ಯಾಸವು ಫಿಕ್ಸ್ಚರ್ ನಲ್ಲಿರುವ ಲೊಕೇಟರ್ ನಲ್ಲಿ ಸರಿಯಾಗಿ ಅಳವಡಿಸುವುದು ಅಗತ್ಯವಾಗಿದೆ. ಲೊಕೇಶನ್ ನಲ್ಲಿ ಈ ಯಂತ್ರಭಾಗಗಳು ಸೂಕ್ತ ರೀತಿಯಲ್ಲಿ ಅಳವಡಿಸಲ್ಪಡಬೇಕು, ಎಂಬುದಕ್ಕಾಗಿ ಲೊಕೇಟರ್ ಗೆ ಚ್ಯಾಂಫರ್ ನೀಡಲಾಗಿದೆ. ಇದರಿಂದಾಗಿ ಯಂತ್ರಭಾಗಗಳನ್ನು ಸಹಜವಾಗಿ ಫಿಕ್ಸ್ಚರ್ ನಲ್ಲಿ ಅಳವಡಿಸುವುದು ಮತ್ತು ತೆಗೆಯುವುದು ಸುಲಭ ಸಾಧ್ಯ. ಇದೇ ಚಿತ್ರದಲ್ಲಿ ನಾಲ್ಕು ಪಿನ್ ಗಳು ಕಾಣುತ್ತಿವೆ. ಇವುಗಳಲ್ಲಿ ಟೇಪರ್ ಇರುವ ಪಿನ್ ನ್ನು ಟೇಪರ್ ಲೊಕೇಟಿಂಗ್ ಪಿನ್ ಎಂದು ಕರೆಯಲಾಗುತ್ತದೆ. ಯಂತ್ರಭಾಗಗಳನ್ನು ದೊಡ್ಡ ವ್ಯಾಸದಲ್ಲಿ, ಲೊಕೇಟರ್ ನಲ್ಲಿ ಅಳವಡಿಸಿದ ನಂತರ ಮೊದಲಾಗಿ ಟೇಪರ್ ಪಿನ್ ಅಳವಡಿಸಲಾಗುತ್ತದೆ ನಂತರ ಒಂದರ ನಂತರ ಇನ್ನೊಂದು ಪಿನ್ ರಂಧ್ರಗಳಲ್ಲಿ ಸೇರಿಸಿ ಯಂತ್ರಭಾಗಗಳ ರಂಧ್ರಗಳು ಸರಿಯಾಗಿವೆಯೇ, ಎಂಬುದನ್ನು ನೋಡಲಾಗುತ್ತದೆ. ಹಾಗೆಯೇ ಲೊಕೇಶನ್ ವರ್ತುಲಾಕಾರದ ದಿಕ್ಕಿನಲ್ಲಿ ಇದ್ದಲ್ಲಿ ಅದನ್ನು ಓರಿಯೆಂಟೇಶನ್ ಎಂದು ಕರೆಯಲಾಗುತ್ತದೆ. ಟೇಪರ್ ಪಿನ್ ಓರಿಯೆಂಟೇಶನ್ ಗೋಸ್ಕರವೇ ಇರುತ್ತದೆ. ಅದರಂತೆಯೇ ಕೆಳಗೆ ‘ಎ’ ಮತ್ತು ‘ಬಿ’ ಎಂಬ ಪಿನ್ ಗಳು, ಫಿಕ್ಸ್ಚರ್ ನಲ್ಲಿರುವ ಸ್ಕ್ರೂನ ಸಹಾಯದಿಂದ ಬಿಗಿಯಾಗಿ ಅಳವಡಿಸಲ್ಪಟ್ಟಿರುವುದು ಗಮನಕ್ಕೆ ಬರುತ್ತದೆ. ಈ ಪಿನ್ ಗಳು ಯಂತ್ರಭಾಗಗಳ ಫೇಸ್ ನಲ್ಲಿರುವ ವರ್ತುಲಾಕಾರದ ಕಚ್ಚನ್ನು ಪರಿಶೀಲಿಸುವುದಕ್ಕೋಸ್ಕರವೇ ಇರುತ್ತವೆ. ಈ ಯಂತ್ರಭಾಗಗಳ ಪರೀಕ್ಷೆಯನ್ನು ಮಾಡುತ್ತಿರುವಾಗ ಒಂದು ಪಿನ್ ಲೊಕೇಟ್ ಮಾಡಿದಲ್ಲಿ ಇನ್ನಿತರ ಮೂರೂ ಪಿನ್ ಗಳನ್ನು ಅದರಲ್ಲಿಯೇ ಸರಿಯಾಗಿ ಅಳವಡಿಸಲ್ಪಟ್ಟಲ್ಲಿ, ಸಂಪೂರ್ಣವಾಗ ಫೇಸ್ ತನಕ ಹೋದಲ್ಲಿ ಮಾತ್ರ ಆ ಯಂತ್ರಭಾಗಗಳು ಸರಿಯಾಗಿವೆ, ಎಂಬುದಾಗಿ ನಾವು ತಿಳಿಯುತ್ತೇವೆ.
 

3_1  H x W: 0 x 
 
ಚಿತ್ರ ಕ್ರ. 3 ರಲ್ಲಿ ಯಂತ್ರಭಾಗಳನ್ನು ಫಿಕ್ಸ್ಚರ್ ನಲ್ಲಿ ಸರಿಯಾಗಿ ಅಳವಡಿಸಿರುವುದು ಕಂಡುಬರುತ್ತಿದೆ. ಮೇಲಿನ ಫಿಕ್ಸ್ಚರ್ ನಿಂದಾಗಿ ಯಂತ್ರಭಾಗಗಳ ಗುಣಮಟ್ಟದ ಪರೀಕ್ಷೆಯನ್ನು ಅತ್ಯಂತ ವೇಗವಾಗಿ ಮತ್ತು ಹೆಚ್ಚು ಸುಲಭವಾಗಿ ಮಾಡುವುದು ಸಾಧ್ಯವಾಗುತ್ತದೆ. ಯಂತ್ರಭಾಗಗಳ ಪರೀಕ್ಷೆಯ ಕೆಲಸವನ್ನು ಅರೆ ಕೌಶಲ್ಯವಿರುವ ಕೆಲಸಗಾರರೂ ಕೂಡಾ ನಿರ್ವಹಿಸಬಲ್ಲರು.
@@AUTHORINFO_V1@@