ಸಂಪಾದಕೀಯ

@@NEWS_SUBHEADLINE_BLOCK@@

Lohkarya - Udyam Prakashan    12-May-2021
Total Views |

1_1  H x W: 0 x
2019-20 ಈ ಹಣಕಾಸು ವರ್ಷವು ಅನೇಕ ರೀತಿಯಲ್ಲಿ ಅಭೂತಪೂರ್ವವಾಗಿತ್ತು. ಈ ವರ್ಷದಲ್ಲಿ ತಮಗೆ ಮಾನವನ ವ್ಯವಹಾರಗಳ ಸಂಪೂರ್ಣ ವಿಧಾನವೂ ಬದಲಾಗಿರುವುದು ಕಂಡುಬಂತು. ಜಾಗತಿಕ ಸ್ತರದಲ್ಲಿ ಅನೇಕ ಕೈಗಾರಿಕೋದ್ಯಮಿಗಳಿಗೆ ಈ ಸಮಯದಲ್ಲಿ ಎಲ್ಲ ರೀತಿಯ ಹಣಕಾಸಿನ ಸ್ಥಿತಿಯ ಕನಿಷ್ಠ ಅಂಕೆಸಂಖ್ಯೆಗಳನ್ನು ಅನುಭವಿಸಬೇಕಾಯಿತು. ಹೊಟೇಲ್, ಪ್ರವಾಸೋದ್ಯಮ, ಪ್ರವಾಸ ಮುಂತಾದ ಉದ್ಯಮಗಳು ಮಾತ್ರ ಇಂದಿಗೂ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಭಾರತದಲ್ಲಿ ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಲ್ಲೆಡೆಯಲ್ಲಿಯೂ ಲಾಕ್ ಡೌನ್ ಇತ್ತು. ಆದರೆ ಜೂನ್ ತಿಂಗಳ ಕೊನೆಯಲ್ಲಿ ನಿಧಾನವಾಗಿ ಪ್ರಾರಂಭಗೊಂಡಿರುವ ಕೈಗಾರಿಕೋದ್ಯಮಿಗಳು ಭವಿಷ್ಯತ್ಕಾಲದಲ್ಲಿ ಒಳ್ಳೆಯ ಭರವಸೆಯು ಮೂಡಿಬಂತು. ಅದರ ಪರಿಣಾಮವಾಗಿಯೇ ಮಾರ್ಚ್ 2021 ರಲ್ಲಿ GST ಯ ಸಂಗ್ರಹದಲ್ಲಿ 1.24 ಲಕ್ಷ ಕೋಟಿಗಳಷ್ಟು ಹೆಚ್ಚಳವಾಗಿರುವುದು ಗಮನಾರ್ಹ ಅಂಶ. ಹಣಕಾಸು ವರ್ಷ 2019-20 ರಲ್ಲಿ ಉಂಟಾಗಿರುವ ಒಟ್ಟು ಸಂಗ್ರಹದ ಅಂಕೆ-ಸಂಖ್ಯೆಗಳು 11 ಲಕ್ಷ 36 ಸಾವಿರ 803 ಕೋಟಿಗಳಷ್ಟಿತ್ತು. ಅಂದರೆ ಒಟ್ಟು 7 ಶೇಕಡಾ ಇಳಿತವಾಗಿರುವುದು ಗಮನಕ್ಕೆ ಬರುತ್ತಿದೆ. ಭಾರತ ಸರ್ಕಾರದ ಅಂದಾಜಿನಂತೆ 2020-21 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯು 8 ಶೇಕಡಾದಷ್ಟು ಕುಗ್ಗಬಹುದು ಎಂಬುದನ್ನು ಅಂದಾಜಿಸಲಾಗಿದೆ. ಆದರೆ ಅದರೊಂದಿಗೆ ಹಣಕಾಸಿನ ಸಮೀಕ್ಷೆಗೆ ಅನುಸಾರವಾಗಿ 2021-22 ಈ ಹಣಕಾಸು ವರ್ಷದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ 11 ಶೇಕಡಾದಷ್ಟು ಹೆಚ್ಚಳವಾಗಬಲ್ಲದು, ಎಂಬುದಾಗಿ ಅಂದಾಜಿಸಲಾಗಿದೆ. ಇದಕ್ಕೆ ವಿಶ್ವ ಬ್ಯಾಂಕ್ ಇವರು ನೀಡಿರುವ ಅಂದಾಜಿನಿಂದಲೂ (ಇದೇ ಹೆಚ್ಚಳವು 10.1 ಶೇಕಡಾ ಆಗಬಲ್ಲದು ಎಂಬುದಾಗಿ ಹೇಳಲಾಗಿದೆ) ದೃಢಪಟ್ಟಿದೆ.
 
ಟೆಕ್ನಾವಿಯೋ ಎಂಬ ಜಾಗತಿಕ ಸ್ತರದಲ್ಲಿರುವ ತಂತ್ರಜ್ಞಾನ, ಸಂಶೋಧನೆ ಮತ್ತು ಸಲಹೆಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪನಿಯ ಸಮೀಕ್ಷೆಗೆ ಅನುಸಾರವಾಗಿ, ಭಾರತದಲ್ಲಿರುವ ಮಶಿನ್ ಟೂಲ್ ನ ಮಾರುಕಟ್ಟೆಯಲ್ಲಿ ಮುಂದಿನ 4-5 ವರ್ಷಗಳ ಕಾಲಾವಧಿಯಲ್ಲಿ 13 ಶೇಕಡಾದಷ್ಟು ಹೆಚ್ಚಳವಾಗಲಿದೆ. 2025 ರ ತನಕ ಈ ಉದ್ಯಮದಲ್ಲಿ 1.9 ಮಿಲಿಯನ್ ಡಾಲರ್ ನಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ. ಕೊರೋನಾದ ಗಂಭೀರ ಪರಿಸ್ಥಿತಿಯಲ್ಲಿ ಎದುರಾಗಿರುವ ಚಟುವಟಿಕೆಗಳ ಪರಿಣಾಮದಿಂದಾಗಿ ಸದ್ಯಕ್ಕೆ ಈ ಉದ್ಯಮವು ತುಂಬಾ ನಿಧಾನವಾಗಿಯೇ ಮುಂದುವರಿಯುತ್ತಿದೆ. ಆದರೂ ಕೂಡಾ ಇಂಡಸ್ಟ್ರಿ 4.0 ನ ವೃದ್ಧಿಸುತ್ತಿರುವ ಜನಪ್ರಿಯತೆ ಮತ್ತು ಕಂಪ್ಯೂಟರೈಜ್ಡ್ ಉತ್ಪಾದನೆಯ ವ್ಯವಸ್ಥೆಯೆಡೆಗೆ ಹೆಚ್ಚುತ್ತಿರುವ ಒಲವು ಮಾರುಕಟ್ಟೆಗೆ ಆತ್ಯಾವಶ್ಯಕವಾದಿ ವೇಗವನ್ನು ನೀಡಬಲ್ಲದು. ಎಲ್ಲ ರೀತಿಯ ಉದ್ಯಮಗಳಲ್ಲಿ ಸ್ವಯಂಚಾಲನೆಯಲ್ಲಿ ಆಗುತ್ತಿರುವ ಹೆಚ್ಚಳ, ಉತ್ಪಾದನೆಯ ಪ್ರಕ್ರಿಯೆಯಲ್ಲಿ ನಿಖರತೆ ಮತ್ತು ನಿರ್ದೋಷತೆ ಹೆಚ್ಚುತ್ತಿರುವ ಬೇಡಿಕೆ, ಸಿ.ಎನ್.ಸಿ.ಗೆ ಆಧರಿಸಿರುವ ಮಶಿನ್ ಟೂಲ್ ಗಳ ಬೇಡಿಕೆಯನ್ನು ಹೆಚ್ಚಿಸಲು ಪೂರಕವಾಗಲಿವೆ. ಇದರಲ್ಲಿ ದಕ್ಷಿಣ ಏಶಿಯಾ ಪರಿಸರದಲ್ಲಿ ಭಾರತವು ವಾಹನೋದ್ಯೋಗವು ಪ್ರಮುಖ ಉತ್ಪಾದನೆಯ ಕೇಂದ್ರ ಎಂಬುದಾಗಿ ಕಾಲೂರುವ ಸಾಧ್ಯತೆಯ ಪರಿಣಾಮವಾಗಿದೆ. ವಾಹನೋದ್ಯೋಗದೊಂದಿಗೆ ರೈಲ್ವೆ, ನಿರ್ಮಾಣ, ಹಡಗುಗಳ ನಿರ್ಮಾಣ, ವಿಮಾನೋದ್ಯೋಗ ಮತ್ತು ಸೌರಶಕ್ತಿಯ ಉದ್ಯಮ ಇಂತಹ ಉದ್ಯಮಗಳಲ್ಲಿ ಅಪೇಕ್ಷಿಸಿರುವ ಹೆಚ್ಚಳವು ಮಶಿನ್ ಟೂಲ್ ಉದ್ಯಮಕ್ಕೆ ಪೂರಕವಾಗಬಲ್ಲದು, ಎಂಬುದನ್ನು ಅಂದಾಜಿಸಲಾಗಿದೆ.
 
ಈ ಎಲ್ಲ ಅಂಶಗಳನ್ನು ಗಮನಿಸಿ ತಮಗೆಲ್ಲರಿಗೂ ಒಂದು ವಿಷಯವು ಗಮನಕ್ಕೆ ಬರಬಲ್ಲದು, ಭವಿಷ್ಯತ್ಕಾಲದಲ್ಲಿ ಕಾಲೂರಿ ನಿಲ್ಲುವುದಾದಲ್ಲಿ ಮತ್ತು ಹೆಚ್ಚಳವಾಗಬೇಕಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಹಭಾಗಿತ್ವವನ್ನು ತಮ್ಮ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಹೆಚ್ಚಿಸುವುದೊಂದೇ ಪರಿಹಾರವಾಗಿದೆ.
 
ಈ ತನಕ ‘ಲೋಹಕಾರ್ಯ’ದ ಸಂಚಿಕೆಯ ಮೂಲಕ ನಾವು ನಿರಂತರವಾಗಿ ಹೊಸ ಹೊಸ ತಂತ್ರಜ್ಞಾನ, ಹೊಸ ಪ್ರಕ್ರಿಯೆ ಇವುಗಳ ಪರಿಚಯವು ಲಘ ಮಧ್ಯಮ ಉದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವ ತಂತ್ರಜ್ಞರು ಮತ್ತು ಉದ್ಯಮಿಗಳಿಗೆ ಸಿಗಬೇಕು, ಎಂಬದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಈ ಸಂಚಿಕೆಯಲ್ಲಿ ನಾವು ಸಿ.ಎನ್.ಸಿ. ಟರ್ನಿಂಗ್ ನಲ್ಲಿ ಸ್ಥಿರವಾಗುತ್ತಿರುವ ಮಲ್ಟಿ ಸ್ಪಿಂಡಲ್ ಸ್ವಿಸ್ ತಂತ್ರಜ್ಞಾನದ ಕುರಿತು ಮಾಹಿತಿಯನ್ನು ನೀಡುವ ಲೇಖನವನ್ನು ಓದಬಹುದು. ಕಳೆದ 40 ವರ್ಷಗಳ ಕಾಲಾವಧಿಯಲ್ಲಿ ಭಾರತೀಯ ಮಶಿನ್ ಉದ್ಯಮಕ್ಕೆ ಉಚ್ಚ ಗುಣಮಟ್ಟದ ಚಕ್ ಪೂರೈಸುವ ಕಂಪನಿಯ ಲೇಖನದಲ್ಲಿ ಲೇಥ್ ನಲ್ಲಿ ಚಕ್ ನ ನಿರ್ವಹಣೆಯನ್ನು ಹೇಗೆ ಮಾಡಬೇಕು, ಎಂಬುದರ ಕುರಿತು ನಿಖರವಾದ ಲೇಖನವನ್ನು ನೀಡಲಾಗಿದೆ. ಪ್ರಕ್ರಿಯೆಯ ಸುಧಾರಣೆಯ ಅಂಕಣದಲ್ಲಿ ಉತ್ಪಾದಕತೆಯನ್ನು ವೃದ್ಧಿಸಲು ಮಾಡಲಾಗಿರುವ ವಿವಿಧ ಪ್ರಯತ್ನಗಳ ಮಾಹಿತಿಯನ್ನು ನೀಡಲಾಗಿರುವ ಲೇಖನವನ್ನೂ ಓದುಗರಿಗೆ ನೀಡಲಾಗಿದೆ. ಹಾಗೆಯೇ ಟೂಲಿಂಗ್ ನ ಅಂಕಣದಲ್ಲಿ ಡಬಲ್ ಕ್ಲ್ಯಾಂಪಿಂಗ್ ಮತ್ತು ಥ್ರೂ ಕೂಲಂಟ್ ನ ಸಾಮರ್ಥ್ಯವಿರುವ ಟೂಲ್ ಹೋಲ್ಡರ್ ಗಳ ಮಾಹಿತಿಯೊಂದಿಗೆ, ಪ್ರಕ್ರಿಯೆಯ ಸುಧಾರಣೆಗಳನ್ನು ಮಾಡುವ ಟೂಲಿಂಗ್ ಕುರಿತು ಮಾಹಿತಿಯು ಈ ಸಂಚಿಕೆಯಲ್ಲಿ ತಮ್ಮ ಗಮನವನ್ನು ಸೆಳೆಯಲಿದೆ. ನಿಯಮಿತವಾಗಿಯೇ ಪ್ರಕಟಿಸಲಾಗುವ ಆರ್ಥಿಕ ಯೋಜನೆ, ಜಿಗ್ಸ್ ಮತ್ತು ಫಿಕ್ಸ್ಚರ್, ಸಿ.ಎನ್.ಸಿ. ಪ್ರೊಗ್ರಾಮಿಂಗ್, ಇಂಡಸ್ಟ್ರಿ 4.0 ಮತ್ತು IoT ಇಂತಹ ಲೇಖಮಾಲೆಗಳೂ ತಮ್ಮ ದೈನಂದಿನ ಕೆಲಸಗಳಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಉಪಯುಕ್ತವಾಗಲಿವೆ, ಎಂಬ ವಿಶ್ವಾಸವು ನಮಗಿದೆ.
ದೀಪಕ ದೇವಧರ
@@AUTHORINFO_V1@@