ಲಾಭಕಾರಿಯಾದ ಯಂತ್ರಣೆಗೆ ಟರ್ನ್ ಮಿಲ್ ಸೆಂಟರ್

@@NEWS_SUBHEADLINE_BLOCK@@

Lohkarya - Udyam Prakashan    15-Apr-2021   
Total Views |

1_1  H x W: 0 x
ಸುಮಾರು 14 ವರ್ಷಗಳ ಹಿಂದಿನ ವಿಚಾರ. ನಾನು, ಇಮ್ತಿಯಾಜ್ ಮುಜಾವರ್, ಅಮೋಲ್ ಗೋಂಗಾಣೆ ಮತ್ತು ಪ್ರದೀಪ್ ಪಾಟೀಲ್ ಒಟ್ಟಾಗಿಯೇ ಕಾಲೇಜ್ ನಲ್ಲಿ ಕಲಿಯುತ್ತಿದ್ದೆವು. ಎಲ್ಲರೂ ಒಟ್ಟಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾದೆವು. ಪದವೀಧರರಾದ ನಂತರ ಎಲ್ಲರೂ ಸೇರಿ ಒಂದು ವ್ಯವಸಾಯವನ್ನು ಪ್ರಾರಂಭಿಸುವ ಕುರಿತು ವಿಚಾರ ಮಾಡಿದೆವು. ಪಾರಂಪರಿಕವಾದ ಲೇಥ್ ಮಶಿನ್ ನಿಂದ ವ್ಯವಸಾಯವನ್ನು ಪ್ರಾರಂಭಿಸಲಾಯಿತು. ಕಾಲಕ್ರಮೇಣ ಮಶಿನ್ ಗಳ ಸಂಖ್ಯೆಯು ಹೆಚ್ಚಾಯಿತು. ನಂತರ ಸಿ.ಎನ್.ಸಿ. ಮಶಿನ್ ಸೇರ್ಪಡೆಯಾಯಿತು. ಈ ರೀತಿಯಲ್ಲಿ ಲಘು ಉದ್ಯಮಗಳ ವಿಕಾಸವಾಯಿತು. ಮಾರುಕಟ್ಟೆಯಲ್ಲಿರುವ ಎಲ್ಲ ಪ್ರತಿಸ್ಪರ್ಧಿಗಳೂ ವ್ಯವಸಾಯದಲ್ಲಿ ಇದೇ ರೀತಿಯಲ್ಲಿ ಬದಲಾವಣೆಗಳನ್ನು ಮಾಡಲಾರಂಭಿಸಿದರು, ಎಂಬ ಅಂಶವು ಗಮನಕ್ಕೆ ಬರುತ್ತಿದೆ. ಈ ರೀತಿಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಉದ್ಯಮಗಳ ವಿಸ್ತಾರದಲ್ಲಿ ಯಾವುದೇ ರೀತಿಯ ಅಚ್ಚರಿಯೂ ಇಲ್ಲ. ಆದರೆ ಉದ್ಯಮಿಗಳಿಗೆ ತಮ್ಮ ಗುರುತು ಪರಿಚಯವನ್ನು ಮಾರುಕಟ್ಟೆಯಲ್ಲಿ ಸ್ಥಿರಪಡಿಸುವುದಾದಲ್ಲಿ ಹೊಸ ಸವಾಲುಗಳನ್ನು ಸ್ವೀಕರಿಸಿ, ಲಭ್ಯವಾಗುವ ಅವಕಾಶಗಳನ್ನು ಉಪಯೋಗಿಸಬೇಕು. ಅಲ್ಲದೇ ಇದರಿಂದಾಗಿ ಅನೇಕ ಅವಕಾಶಗಳು ಲಭಿಸಬಲ್ಲವು ಮತ್ತು ಉದ್ಯಮಗಳಲ್ಲಿ ಮುನ್ನೆಜ್ಜೆಯನ್ನು ಇಡುವುದು ಸಾಧ್ಯ, ಎಂಬುದರ ಕುರಿತು ಖಾತರಿಯಾಗುತ್ತದೆ. ಇದಕ್ಕೋಸ್ಕರ ಹೊಸದಾಗಿ ಪ್ರಾರಂಭಿಸಿರುವ ಉದ್ಯಮದಲ್ಲಿ ಸೂಕ್ಷವಾಗಿ ಸಮೀಕ್ಷೆ ಮಾಡಲಾಯಿತು.
 
ಇದೇ ಕಾಲಾವಧಿಯಲ್ಲಿ ನಮ್ಮ ಉದ್ಯಮಗಳಲ್ಲಿ ಅನೇಕರು ಸಿ.ಎನ್.ಸಿ. ಟರ್ನ್ ಮಿಲ್ ಬಳಸುತ್ತಿದ್ದರು. ಸಾಮಾನ್ಯವಾಗಿ ಅದರಲ್ಲಿ ಕಾಸ್ಟ್ ಆಯರ್ನ್, ಸ್ಟೀಲ್ ನಂತಹ ಲೋಹಗಳಿಂದ ತಯಾರಿಸಿರುವ ಅನೇಕ ಯಂತ್ರಭಾಗಗಳಿಗೆ ಯಂತ್ರಣೆಯನ್ನು ಮಾಡಲಾಗುತ್ತಿತ್ತು. ಈ ಲೋಹಗಳ ಕಠಿಣತೆ ಸುಮಾರು 25-30 HRC ಯಷ್ಟು ಇತ್ತು. ನೀವು ಈಗ ವಿ.ಎಮ್.ಸಿ. ಅಥವಾ ಎಚ್.ಎಮ್.ಸಿ.ಯಂತಹ ಮಶಿನ್ ಗಳಲ್ಲಿ ಬಂಡವಾಳ ಹೂಡಿರಿ, ಎಂಬುದಾಗಿ ಅನೇಕರು ನಮಗೆ ಸಲಹೆಯನ್ನು ನೀಡಿದರು. ಅಂದರೆ ನಿಮ್ಮ ಉದ್ಯಮವು ಅನೇಕ ಆಲ್ ರೌಂಡ್ ಆಗಿ ಅದರಲ್ಲಿ ಪರಿಪೂರ್ಣತೆಯು ಉಂಟಾಗುತ್ತದೆ. ಅದರೆ ಇಂತಹ ಸಲಹೆಯಿಂದಾಗಿ ನಮಲ್ಲಿ ಯಾವುದೇ ರೀತಿಯ ಪ್ರಭಾವ ಉಂಟಾಗಿಲ್ಲ, ಅಲ್ಲದೇ ಅದರಿಂದ ಯಾವುದೇ ರೀತಿಯ ಸಮಾಧಾನವೂ ಲಭಿಸಲಿಲ್ಲ. ಅವಾಗಲೇ ಮಾರುಕಟ್ಟೆಯಲ್ಲಿ ಸ್ಟೆನ್ ಲೆಸ್ ಸ್ಟೀಲ್ ಅಥವಾ ಅಲ್ಯುಮಿನಿಯಮ್ ನ ಮಿಶ್ರಲೋಹಗಳು (ಅಲಾಯಿಜ್) ಅಥವಾ ಸುಮಾರು 60-65 HRC ಯಷ್ಟು ಕಠಿಣತೆ ಇರುವಂತಹ ಲೋಹಗಳ ಯಂತ್ರಣೆಯು ನಮ್ಮೆದುರು ಒಂದು ರೀತಿಯ ಸವಾಲೇ ಇತ್ತು. ಅಲ್ಲದೇ ಮುಂಬರುವ ದಿನಗಳಲ್ಲಿ ಟೈಟ್ಯಾನಿಯಮ್, ಇನ್ಕೋನೇಲ್ ಇಂತಹ ಕಠಿಣವಾದ ಲೋಹಗಳ ಯಂತ್ರಭಾಗಗಳ ಯಂತ್ರಣೆಯನ್ನು ಮಾಡಿ ಲಾಭಕಾರಿಯಾದ ವ್ಯವಸಾಯವನ್ನು ಮಾಡುವಂತಹ ಸವಾಲುಗಳು ನಮ್ಮೆದುರು ಬರಲಾರಂಭಿಸಿದವು. ಇದರಿಂದಾಗಿ ನಾವು ಇನ್ನಷ್ಟು ಸುಲಭವಾಗಿ ಹಾರ್ಡ್ ಪಾರ್ಟ್ ಮಶಿನಿಂಗ್ ಮಾಡಬಲ್ಲ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿರುವ ಮಲ್ಟಿ ಎಕ್ಸಿಸ್ ಮಶಿನ್ ನಲ್ಲಿ ಬಂಡವಾಳವನ್ನು ಹೂಡಿ ನಮ್ಮ ವ್ಯವಸಾಯವನ್ನು ಮುನ್ನಡೆಸುವುದನ್ನು ನಿರ್ಧರಿಸಿದೆವು.
 
ಈ ನಿಟ್ಟಿನಲ್ಲಿ ಅನೇಕ ಮಶಿನ್ ಟೂಲ್ ತಯಾರಿಸುವ ಕಂಪನಿಗಳೊಂದಿಗೆ ಸಂಪರ್ಕಿಸಲಾಯಿತು. ಅವರಲ್ಲಿರುವ ಅನೇಕ ರೀತಿಯ ಉತ್ಪಾದನೆಗಳ ಸಮೀಕ್ಷೆಯನ್ನು ಮಾಡಿದೆವು. ಅದೇ ಸಮಯದಲ್ಲಿ ಡಿ.ಎಮ್.ಜಿ. ಮೋರಿ ಈ ಕಂಪನಿಯ ಕೆಲವು ಉತ್ಪಾದನೆಗಳು ನಮ್ಮ ಗಮನಕ್ಕೆ ಬಂದವು. ಈ ಮಶಿನ್ ಗಳೊಂದಿಗೆ ಭಾರತದಲ್ಲಿ ತಯಾರಿಸಿದ ಅದೇ ಆಕಾರದ ಮಶಿನ್ ಗಳನ್ನು ಹೋಲಿಸಿದಾಗ 30-40 ಶೇಕಡಾ ಹೆಚ್ಚು ಬೆಲೆ ಇರುವುದು ಗಮನಕ್ಕೆ ಬಂತು. ಆದರೆ ನಾವು ಅವರ ಟೆಕ್ ಸೆಂಟರ್ ನ ಕೆಲಸದ ತಂಡದೊಂದಿಗೆ ವಿವಿಧ ವೈಶಿಷ್ಟ್ಯಗಳ ಕುರಿತು ವಿಚಾರ ವಿಮರ್ಶೆಯನ್ನು ಮಾಡಿದೆವು. ಅದರಲ್ಲಿರುವ ಸೂಕ್ಷ್ಮ ಅಂಶಗಳನ್ನು ತಿಳಿದುಕೊಂಡೆವು. ಆಗ ನಮಗೆ ಅನೇಕ ಅಂಶಗಳು ಗಮನಕ್ಕೆ ಬಂದವು. ವ್ಯಾಲ್ಯೂ ಫಾರ್ ಮನಿ ಅಂದರೆ ಏನು ಎಂಬುದು ಈ ಚರ್ಚೆಯಿಂದ ತಿಳಿಯಿತು. ಬೆಲೆಯು ಹೆಚ್ಚು ಇದ್ದರೂ ಕೂಡಾ ಈ ಮಶಿನ್ ಗೋಸ್ಕರ ಬಂಡವಾಳ ಹೂಡಿದಲ್ಲಿ, ನಾವು ಮಾಡಿರುವ ಕೆಲಸಕ್ಕೆ ಗ್ರಾಹಕರು ನಮಗೆ ಅಷ್ಟೇ ಮೌಲ್ಯದ ಪ್ರೀಮಿಯಮ್ ನೀಡಬಲ್ಲರು, ಎಂಬ ವಿಚಾರವು ನಮ್ಮ ಮನಸ್ಸಿನಲ್ಲಿ ಮೂಡಿಬಂತು. ಇಂತಹ ಮಶಿನ್ ಗಳಿಂದಾಗಿ ‘ನಿಶ್ ಮಾರ್ಕೆಟ್’ ನಲ್ಲಿ ಕೆಲಸ ಮಾಡಬಲ್ಲೆವು, ಅಲ್ಲದೇ ಯಾರೂ ನಮ್ಮೊಂದಿಗೆ ಸ್ಪರ್ಧಿಸಲಾರರು, ಎಂಬ ಅಂಶವೂ ನಮ್ಮ ಗಮನಕ್ಕೆ ಬಂತು. ಇಂತಹ ಒಂದು ನಿಗದಿತ ಯಂತ್ರಭಾಗವು ಇಂತಹ ಒಂದು ಮಶಿನ್ ನಲ್ಲಿಯೇ ಹೆಚ್ಚು ನಿಖರವಾಗಿ ಮತ್ತು ಲಾಭಕಾರಿಯಾಗಿ ತಯಾರಾಗಬಲ್ಲದು, ಎಂಬ ದೃಢ ವಿಶ್ವಾಸವನ್ನು ನಾವು ಗ್ರಾಹಕರ ಮನಸ್ಸಿನಲ್ಲಿ ನಿರ್ಮಿಸಬಲ್ಲೆವು, ಎಂಬ ಆತ್ಮವಿಶ್ವಾಸವೂ ನಮಗಿತ್ತು. ಆರ್ಥಿಕ ವಿಷಯಗಳಿಗೆ ಅನುಸಾರವಾಗಿ ಈ ಘಟಕಗಳ ವ್ಯವಸಾಯವನ್ನು ವೃದ್ಧಿಸಲು ಯಾವುದೇ ತಡೆಯೊಡ್ಡಲಾರದು, ಎಂಬುದು ಮನದಟ್ಟಾಗಿದ್ದರಿಂದ ನಾವು ಡಿ.ಎಮ್.ಜಿ. ಮೋರಿ ಇವರ NLX2500Y/700 ಈ ಟರ್ನ್ ಮಿಲ್ ಸೆಂಟರ್ ಖರೀದಿಸುವ ನಿರ್ಧಾರವನ್ನು ಕೈಗೆತ್ತಿದೆವು. (ಚಿತ್ರ ಕ್ರ. 1)
 
2_1  H x W: 0 x
ಲಘು ಮತ್ತು ಮಧ್ಯಮ ಉದ್ಯಮಿಗಳ ನಿಟ್ಟಿನಲ್ಲಿ ಹೊಸ ಮಶಿನ್ ಗಳಿಗೆ ಬಂಡವಾಳ ಹೂಡುವಾಗ ಇನ್ನೊಂದು ಮಹತ್ವದ ಅಂಶವು ಕಣ್ಣೆದುರು ಬಂತು. ಇದೆಂದರೆ, ಮಶಿನ್ ನ ಉಚ್ಚಮಟ್ಟದ ಕೆಲಸದ ನಿರ್ವಹಣೆಗೋಸ್ಕರ ಹವಾನಿಯಂತ್ರಿತ ಮತ್ತು ನಿಯಂತ್ರಿತ ಹವಾಮಾನಕ್ಕೋಸ್ಕರ ತಗಲುವ ಅತಿ ಖರ್ಚು. ಆದರೆ ಇದರ ಕುರಿತಾಗಿ ನಮಗೆ ಒಂದು ಸಂತೋಷದ ಸುದ್ದಿ ತಿಳಿದು ಆಶ್ಚರ್ಯ ಉಂಟಾಯಿತು. ಡಿ.ಎಮ್.ಜಿ. ಮೋರಿ ಇವರು ನಮಗೆ ಹೊಣೆಗಾರಿಕೆಯನ್ನು ವಹಿಸಿ ಆಶ್ವಾಸನೆಯನ್ನು ನೀಡಿದರು. ಈ ಮಶಿನ್ ಒಂದು ವೇಳೆ 50° ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ನಡೆಸಿದರೂ ಕೂಡಾ ಅದರಲ್ಲಿ ಲಭಿಸುವ ನಿಖರತೆಯು ಹವಾನಿಯಂತ್ರಿತ ಅಥವಾ ನಿಯಂತ್ರಿಸಲ್ಪಟ್ಟ ಹವಾಮಾನದಲ್ಲಿ ಬಳಸುವಷ್ಟೇ ಖಾತರಿಯನ್ನು ನೀಡಬಲ್ಲದು. ಇದಕ್ಕೆ ಪ್ರಮುಖವಾದ ತಾಂತ್ರಿಕ ಕಾರಣವೆಂದರೆ ಮಶಿನ್ ಬೆಡ್, ಸ್ಪಿಂಡಲ್ ಮತ್ತು ಟರೇಟ್ ಗೆ ಒಳಭಾಗದಿಂದ ತಂಪಾಗಿರಿಸುವ (ಇಂಟರ್ನಲ್ ಕೂಲಿಂಗ್) ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. (ಚಿತ್ರ ಕ್ರ. 2, 3, 4) ಇದರಿಂದಾಗಿ ಸಂಪೂರ್ಣ ಮಶಿನ್ ಹೆಚ್ಚು ಪ್ರಮಾಣದಲ್ಲಿ ಸ್ಟೇಬಲ್ ಆಗುತ್ತದೆ. ಇದೇ ಕಾರಣಕ್ಕೋಸ್ಕರ ಈ ಮಶಿನ್ ನಮ್ಮ ಕಾರ್ಖಾನೆಯಲ್ಲಿ ಅಳವಡಿಸಿ, ಆನ್ ಮಾಡಿದ ನಂತರ ಕಳೆದ ವರ್ಷದಿಂದ ಮುಕ್ತ ವಾತಾವರಣದಲ್ಲಿ ಬಳಸಲಾಗುತ್ತಿದೆ ಮತ್ತು ಅದರಲ್ಲಿ ನಿರಂತರವಾದ ನಿಖರತೆಯು ಲಭಿಸುತ್ತಿದೆ.
 
3_1  H x W: 0 x
ಈ ಮಶಿನ್ ನಲ್ಲಿ ಲಭಿಸುವ 5 ಅಕ್ಷವನ್ನು ಚಿತ್ರ ಕ್ರ. 2 ರಲ್ಲಿ ತೋರಿಸಲಾಗಿದೆ. ಇದರಲ್ಲಿ Y ಅಕ್ಷವು X1 ಮತ್ತು X2 ಈ ಎರಡೂ ಅಕ್ಷಗಳ ಒಟ್ಟಾದ ಚಟುವಟಿಕೆಗಳಿಂದ ಸಿಗುತ್ತದೆ. Y ಅಕ್ಷದಿಂದಾಗಿ ನಾವು ಮಶಿನ್ ನ ಸೆಂಟರ್ ಎಕ್ಸಿಸ್ ಸ್ಥಳಾಂತರಿಸಿ ಕೆಲಸ ನಿರ್ವಹಿಸಬಲ್ಲೆವು. ಇದರಿಂದಾಗಿ ಹಲವಾರು ಕ್ಲಿಷ್ಟವಾಗಿರುವ ಪ್ರೊಫೈಲ್ ಗಳಿಗೆ ಕೂಡಾ ಸಹಜವಾಗಿ ಮಶಿನಿಂಗ್ ಮಾಡಬಹುದಾಗಿದೆ. ಮಶಿನ್ ನಲ್ಲಿ Y ಅಕ್ಷದ ಚಟುವಟಿಯು ಯಾವ ರೀತಿಯಲ್ಲಿ ಆಗುತ್ತದೆ, ಎಂಬುದನ್ನು ವೀಕ್ಷಿಸಲು ಪಕ್ಕದಲ್ಲಿ ನೀಡಿರುವ QR ಕೋಡ್ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
 
 
 
 
ಈ ಮಶಿನ್ ನಲ್ಲಿ ಕೇವಲ ಟೈಟ್ಯಾನಿಯಮ್ ಅಥವಾ ತತ್ಸಮ ಹಾರ್ಡ್ ಪಾರ್ಟ್ ಮಶಿನಿಂಗ್ ಮಾಡಿದಲ್ಲಿ ಮಾತ್ರ ಪೂರೈಸುತ್ತದೆ, ಎಂಬ ಅರಿವು ಪ್ರಾರಂಭದಲ್ಲಿ ನಮ್ಮದಾಗಿತ್ತು. ಆದರೆ ಮಶಿನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಂತೆ ನಮ್ಮ ಈ ಅರಿವು ಇಲ್ಲದಂತಾಯಿತು. ನಾವು ಪಿ.ಸಿ.ಡಿ.ಯಲ್ಲಿ ರಂಧ್ರಗಳಿರುವ ಸಾಮಾನ್ಯವಾದ ಯಂತ್ರಭಾಗಗಳ ಯಂತ್ರಣೆಯನ್ನೂ ಮಾಡುತ್ತೇವೆ. ಈ ಮಶಿನ್ ಗಳಲ್ಲಿ ಕೆಲಸ ನಿರ್ವಹಿಸಿದ ನಂತರ ಆವರ್ತನೆಯ ಸಮಯದಲ್ಲಿ (ಸೈಕಲ್ ಟೈಮ್) ಮತ್ತು ಗುಣಮಟ್ಟದಲ್ಲಿ ಅತಿ ಹೆಚ್ಚು ವ್ಯತ್ಯಾಸವುಂಟಾಗುತ್ತದೆ. ಇದರ ಕಾರಣವೆಂದರೆ ಉಚ್ಚ ಪ್ಯಾರಾಮೀಟರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಟೂಲಿಂಗ್ ಬಳಸಿ ಆವರ್ತನೆಯ ಸಮಯವನ್ನು ಕಡಿಮೆ ಮಾಡುವುದು ಸಾಧ್ಯವಿತ್ತು. ಅಲ್ಲದೇ ಸೆಟಪ್ ಕಡಿಮೆ ಮಾಡಿ ಬ್ಯಾಚ್ ಸೈಜ್ ಮತ್ತು ಇನ್ವೆಂಟರಿ ಕಡಿಮೆ ಮಾಡುವುದು ಸಾಧ್ಯ.
 
ಈ ಮಶಿನ್ ನ ನಿಯಂತ್ರಕವೆಂದರೆ ಒಂದು ಸ್ಟೇಟ್ ಆಫ್ ಆರ್ಟ್ ನಂತಹ ವೈಶಿಷ್ಟ್ಯವಾಗಿದೆ. ಈ ವ್ಯವಸ್ಥೆಯಿಂದಾಗಿ ಇಂದು ನಾವು ಮಶಿನ್ ನೊಂದಿಗೆ ಪ್ರಶ್ನೋತ್ತರದಂತಹ ಸಂಭಾಷಣೆಯನ್ನು ಮಾಡಬಲ್ಲೆವು. ಇದರಲ್ಲಿ ಯಂತ್ರಭಾಗಗಳನ್ನು ಕತ್ತರಿಸುವಾಗ ಅದರ ನೇರ ಪ್ರಸಾರವನ್ನು 3D ಲೈವ್ ಸಿಮ್ಯುಲೇಶನ್ ಸ್ವರೂಪದಲ್ಲಿ ನೋಡಬಲ್ಲೆವು. ಇದರಲ್ಲಿ ಎಲ್ಲ ಕಮಾಂಡ್ ಗಳನ್ನು ಅಳವಡಿಸಲಾಗಿದೆ. ಆಪರೇಟರ್ ನ G ಕೋಡ್, M ಕೋಡ್ ತಿಳಿದುಕೊಳ್ಳುವ ಆವಶ್ಯಕತೆ ಇರುವುದಿಲ್ಲ. ಈ ಕೆಲಸವನ್ನು ಮಶಿನ್ ನಲ್ಲಿಯೇ ಮಾಡಲಾಗುತ್ತದೆ. ನಾವು ಕೇವಲ ಕೋಆರ್ಡಿನೇಟ್ ಕುರಿತು ಮಾತನಾಡುತ್ತೇವೆ. ‘ಟೂಲ್ ನ ಸಹಾಯದಿಂದ ಎಲ್ಲಿಂದ ಎಲ್ಲಿಗೆ ಹೋಗುವುದು ಮತ್ತು ಹೇಗೆ ಹೋಗುವುದು, ಅಂದರೆ ಟೂಲ್ ಪಾಥ್ ಹೇಳುವುದು,’ ಇಷ್ಟೇ. ಇನ್ನಿತರ ಕೆಲಸಗಳನ್ನು ಮಶಿನ್ ನಿರ್ವಹಿಸುತ್ತದೆ.
 
ಗುಣಮಟ್ಟದ ನಿಟ್ಟಿನಲ್ಲಿ ಈ ಮಶಿನ್ ನಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಕಠಿಣ ಯಂತ್ರಭಾಗಗಳಿಗೆ ಯಂತ್ರಣೆಯನ್ನು ಮಾಡಿದ ನಂತರ ಅದರಿಂದ ರೌಂಡ್ ನೆಸ್ ಮತ್ತು ಸರ್ಕ್ಯುಲ್ಯಾರಿಟಿ ಸಿಗುತ್ತದೆ. ಈ ಅಂಶಗಳಲ್ಲಿ ಅಪೇಕ್ಷಿಸಿರುವ ಗುಣಮಟ್ಟವನ್ನು ಪಡೆಯುವಲ್ಲಿ ರಚನೆಯೂ ಹಾಗೆ ಇರಬೇಕಾಗುತ್ತದೆ. ಈ ಮಶಿನ್ ನ ಸ್ಪಿಂಡಲ್ ಮತ್ತು ಟರೇಟ್ ಇವೆರಡೂ ಅಷ್ಟೇ ದೃಢವಾಗಿ ಇರುವುದರಿಂದ ಮತ್ತು ಮೇಲೆ ಉಲ್ಲೇಖಿಸಿದಂತೆ ಅದಕ್ಕೆ ಒಳಭಾಗದಿಂದ ಕೂಲಂಟ್ ನ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಇದಕ್ಕೋಸ್ಕರ ಕಂಪನಿಯು ಖಾತರಿಯನ್ನು ನೀಡಿತ್ತು ಮತ್ತು ಹಿಂದಿನ ವರ್ಷದಿಂದ ನಮ್ಮಲ್ಲಿ ಉತ್ಪಾದನೆಯ ಸಾಮರ್ಥ್ಯದಲ್ಲಿ ಪರಿವರ್ತನೆಯಾಗುತ್ತಿರುವುದು ಗಮನಕ್ಕೆ ಬರುತ್ತಿದೆ.
ಕೇಸ್ ಸ್ಟಡಿ
ಉತ್ಪಾದನೆಯ ಬೆಲೆಯನ್ನು ಹೋಲಿಸಿದಲ್ಲಿ ಹಿಂದಿನ ವರ್ಷದಲ್ಲಿ ಈ ಮಶಿನ್ ನಮ್ಮಲ್ಲಿ ಉಚ್ಚಮಟ್ಟದ ಕೆಲಸವನ್ನು ನಿರ್ವಹಿಸುತ್ತಿದೆ. ಯಾವುದೇ ಯಂತ್ರಭಾಗದ ಟರ್ನಿಂಗ್ ಸೆಂಟರ್ ಮತ್ತು ವಿ.ಎಮ್.ಸಿ.ಯಲ್ಲಿ ಮಾಡಲಾಗುವ ಯಂತ್ರಣೆಗೆ ಎಷ್ಟು ಖರ್ಚು ತಗಲುತ್ತದೆಯೋ, ಅದಕ್ಕಿಂತ ಶೇಕಡಾ 40 ರಷ್ಟು ಕಡಿಮೆ ಖರ್ಚಿನಲ್ಲಿ ಅದೇ ಯಂತ್ರಭಾಗವನ್ನು ಈ ಮಶಿನ್ ನಲ್ಲಿ ಸಹಜವಾಗಿ ತಯಾರಿಸುವುದು ಸಾಧ್ಯ. ಇದರ ಕಾರಣವೆಂದರೆ ಈ ಮಶಿನ್ ನ ಸ್ಪಿಂಡಲ್ ನಲ್ಲಿ ತಯಾರಾಗುವ ಹೆಚ್ಚುವರಿ ಪವರ್ ಅಥವಾ ಟಾರ್ಕ್. ಈ ವೈಶಿಷ್ಟ್ಯಗಳಿಂದಾಗಿ ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಲಾದ ಕಟಿಂಗ್ ಟೂಲ್ ಬಳಸಿ ಹೆಚ್ಚು ಸ್ಪೀಡ್-ಫೀಡ್ ಬಳಸುವುದು ಸುಲಭವಾಗುತ್ತದೆ. ಅಲ್ಲದೇ ಯಂತ್ರಭಾಗಗಳ ಆವರ್ತನೆಯ ಸಮಯವನ್ನು ಹೆಚ್ಚು ಪ್ರಮಾಣದಲ್ಲಿ ಕಡಿತ ಮಾಡುವುದು ಸಾಧ್ಯ. ನಮ್ಮ ಕಾರ್ಖಾನೆಯಲ್ಲಿ ಮಾಡಲಾಗಿರುವ ಒಂದು ಕೇಸ್ ಸ್ಟಡಿಯನ್ನು ಈ ಕೆಳಗೆ ನೀಡುತ್ತಿದ್ದೇವೆ. (ಚಿತ್ರ ಕ್ರ. 5).

6_1  H x W: 0 x 
ನಮ್ಮಲ್ಲಿ ಆಯಿಲ್ ಅಂಡ್ ಗ್ಯಾಸ್ ಉದ್ಯಮಕ್ಕೋಸ್ಕರ ಬೇಕಾಗುವಂತಹ ಸ್ಟೀಲ್ ಒಂದು ಯಂತ್ರಭಾಗವನ್ನು ಯಂತ್ರಣೆಗೋಸ್ಕರ ಬಂದಿತ್ತು. ಅದರ ಕಠಿಣತೆಯು 40 HRC ಇತ್ತು. ಈ ಹಿಂದೆ ನಾವು ಈ ಯಂತ್ರಭಾಗಕ್ಕೆ ಡಿ.ಎಮ್.ಜಿ. ಮೋರಿ ಇವರ ಟರ್ನ್ ಮಿಲ್ ನಲ್ಲಿ ಸೆಂಟರ್ ಡ್ರಿಲ್ಲಿಂಗ್, ಒಂದು ಬೋರ್ ಮತ್ತು ನಂತರ ಥ್ರೆಡಿಂಗ್ ಮಾಡುತ್ತಿದ್ದೆವು. ಅದಕ್ಕೋಸ್ಕರ ನಮಗೆ 278 ಸೆಕಂಡುಗಳ ಕಾಲಾವಧಿಯು ಬೇಕಾಗುತ್ತಿತ್ತು. ಆದರೆ ಅದರ ನಂತರ ನಾವು ಹೆಚ್ಚು ಪ್ರಯೋಗಗಳನ್ನು ಮಾಡಿದೆವು. ಕಟಿಂಗ್ ಟೂಲ್ ನಲ್ಲಿ ಸ್ವಲ್ಪ ಪ್ರಮಾಣದ ಸಂಶೋಧನೆಯನ್ನು ಮಾಡಿದ ನಂತರ ನಮಗೆ ಚ್ಯಾಂಪ್ ಡ್ರಿಲ್ ಎಂಬ ಪರ್ಯಾಯವು ಲಭಿಸಿತು. ಈ ಡ್ರಿಲ್ ನಿಂದ ಸೆಂಟರ್ ಡ್ರಿಲ್, ಕೋನಿಕಲ್ ಡ್ರಿಲ್ ಮತ್ತು ಬೋರಿಂಗ್ ಟೂಲ್ ನ ಕೆಲಸವನ್ನು ಒಟ್ಟಾಗಿಯೇ ಮಾಡಲಾಯಿತು (ಕೋಷ್ಟಕ ಕ್ರ. 1). ಅದೂ ಕೂಡಾ ಉಟ್ಟಮಟ್ಟದ ಕಟಿಂಗ್ ಪ್ಯಾರಾಮೀಟರ್ ನಲ್ಲಿ. ಇದರಿಂದಾಗಿ ಬೋರಿಂಗ್ ಮತ್ತು ಥ್ರೆಡಿಂಗ್ ನಲ್ಲಿ ಅಪೇಕ್ಷಿತ ಗುಣಮಟ್ಟವು ಲಭಿಸಿತು. ಅದಕ್ಕೆ ಬೇಕಾಗುವ ಆವರ್ತನೆಯ ಸಮಯವು ಕೇವಲ 83 ಸೆಕಂಡುಗಳಷ್ಟಾಯಿತು. ಈ ಸ್ಥಿತಿಯಲ್ಲಿ ಉಂಟಾದ ವ್ಯತ್ಯಾಸದ ಲಾಭವು ನಮಗೆ ಇಂದಿಗೂ ಸಿಗುತ್ತಿದೆ.
 

5_1  H x W: 0 x 
 
ಈ ಟರ್ನ್ ಮಿಲ್ ಸೆಂಟರ್ ನಮ್ಮ ಕಾರ್ಖಾನೆಯಲ್ಲಿ ಪ್ರಾರಂಭಿಸಿದ ನಂತರ ನಾವು ಈ ಮಶಿನ್ ನಲ್ಲಿ ಯಾವ ಯಂತ್ರಭಾಗಗಳನ್ನು ತಯಾರಿಸುತ್ತಿದ್ದೆವೆಯೋ, ಅದರಲ್ಲಿ ಹಲವಾರು ಪ್ರಾತಿನಿಧಿಕ ಯಂತ್ರಭಾಗಗಳು, ಅವುಗಳ ಮಟೀರಿಯಲ್ ಮತ್ತು ಅದರಲ್ಲಿ ಲಭಿಸಿರುವ ಸರ್ಫೇಸ್ ಫಿನಿಶ್ ನ ಮೌಲ್ಯವನ್ನು ಚಿತ್ರ ಕ್ರ. 6, 7, ಮತ್ತು 8 ರಲ್ಲಿ ವೀಕ್ಷಿಸಬಹುದು.

7_1  H x W: 0 x 

8_1  H x W: 0 x 
 

9_1  H x W: 0 x 
 
ಈ ಮಶಿನ್ ನಲ್ಲಿ ಕಠಿಣ ಯಂತ್ರಭಾಗದ ಯಂತ್ರಣೆಯನ್ನು ಮಾಡುವಾಗ ಸರ್ಫೇಸ್ ಫಿನಿಶ್ ಉಚ್ಚಮಟ್ಟದಲ್ಲಿ ಲಭಿಸುತ್ತದೆ, ಎಂಬುದು ಎಲ್ಲರಿಗೂ ತಿಳಿದಿರುವ ಅಂಶವಾಗಿದೆ. ಆದರೆ ಮೈಲ್ಡ್ ಸ್ಟೀಲ್ ಗಿಂತ ಕಡಿಮೆ ಕಠಿಣತೆ ಇರುವ ಮೃದು (ಸಾಫ್ಟ್) ಯಂತ್ರಭಾಗದಲ್ಲಿ ಉಚ್ಚಮಟ್ಟದ ಸರ್ಫೇಸ್ ಫಿನಿಶ್ ಮಾಡುವುದು ತುಂಬಾ ಸವಾಲುಗಳುಳ್ಳದ್ದಾಗಿದೆ. ಇಂತಹ ಒಂದು ಯಂತ್ರಭಾಗವನ್ನು ನಾವು ಈ ಮಶಿನ್ ನ ಮೂಲಕ ಯಂತ್ರಣೆಯನ್ನು ಮಾಡಿ ಜರ್ಮನ್ ಕಂಪನಿಗೆ ಪೂರೈಸಿದೆವು. ಅದರ ಮಟೀರಿಯಲ್ ನ ಸ್ಪೆಸಿಫಿಕೇಶನ್ S355J2 ಹೀಗಿದ್ದು ಅದು ಲೋ ಗ್ರೇಡ್ ಮಟೀರಿಯಲ್ ಆಗಿತ್ತು. ಅದರಲ್ಲಿ ನಾವು 0.3-0.4 Ra ನಷ್ಟು ಸರ್ಫೇಸ್ ಫಿನಿಶ್ ಸಾಧಿಸಲಾಗಿದೆ. ಈ ಹಿಂದೆ ನಾವು ಈ ಸರ್ಫೇಸ್ ಫಿನಿಶ್ ತಯಾರಿಸಲು ಗ್ರೈಂಡಿಂಗ್ ಆಪರೇಶನ್ ಮಾಡಬೇಕಾಗುತ್ತಿತ್ತು. ಆದರೆ ಗ್ರೈಂಡಿಂಗ್ ಮಾಡುವಾಗ ಸಾಫ್ಟ್ ಮಟೀರಿಯಲ್ ಗ್ರೈಂಡಿಂಗ್ ವೀಲ್ ಗೆ ಅಂಟುತ್ತಿತ್ತು ಮತ್ತು ಅದು ಮೇಲ್ಭಾಗದಲ್ಲಿಯೇ ಲೋಡ್ ಆಗುತ್ತಿತ್ತು. ಇದರಿಂದಾಗಿ ಆಗಾಗ ಡ್ರೆಸಿಂಗ್ ಮಾಡಬೇಕಾಗುತ್ತಿತ್ತು. ಹಾಗೆಯೇ ಯಂತ್ರಭಾಗಗಳು ಗ್ರೈಂಡಿಂಗ್ ಗೋಸ್ಕರ ತರುವಾಗ ಮತ್ತು ಕೊಂಡು ಹೋಗುವಾಗ ಅದರಲ್ಲಿ ಗೆರೆಗಳು ಅಥವಾ ಕುಳಿಗಳು ಉಂಟಾಗಿ ಹಾಳಾಗುತ್ತಿದ್ದವು. ಗ್ರೈಂಡಿಂಗ್ ಮಾಡುವುದು ಇಲ್ಲದಂತಾಗಿದ್ದರಿಂದ ನಮ್ಮಲ್ಲಿರುವ ಸೆಟಪ್ ಕಡಿಮೆಯಾಯಿತು. (ಚಿತ್ರ ಕ್ರ. 9).
 
10_1  H x W: 0
ಡಿ.ಎಮ್.ಜಿ. ಮೋರಿ ಇವರು ‘ಸಿಲಾಸ್’ ಎಂಬ ಹೆಸರಿನ ಒಂದು ನಿಯಂತ್ರಕವನ್ನು (ಕಂಟ್ರೋಲರ್) ‘ಮಿತ್ಸುಬಿಷಿ’ ಕಂಪನಿಯ ಸಹಾಯದಿಂದ ಅಭಿವೃದ್ಧಿಪಡಿಸಿದರು. ಯಾವುದೇ ಒಂದು ಪ್ರೊಗ್ರಾಮ್ ಎಷ್ಟೂ ಕಠಿಣ, ತೊಡಕುಗಳಿಂದ ಕೂಡಿದ್ದರೂ ಕೂಡಾ ಅದು ‘ಸಿಲಾಸ್’ನ ಸಹಾಯದಿಂದ ಕೇವಲ 10 ನಿಮಿಷಗಳಲ್ಲಿ ಮಾಡಬಹುದಾಗಿದೆ. ಕೆಲವು ಪ್ರೊಗ್ರಾಮ್ ಮಾಡಲು ಸುಮಾರು ಒಂದು ಗಂಟೆಗಿಂತಲೂ ಹೆಚ್ಚು ಸಮಯವು ಬೇಕಾಗುತ್ತದೆ. ಇಂತಹ ಪ್ರೊಗ್ರಾಮ್ ಗಳನ್ನು ಕೂಡಾ 10 ನಿಮಿಷಗಳಲ್ಲಿ ತಯಾರಿಸುವುದು ಸಾಧ್ಯವಾಗಿದೆ. ಇದರಲ್ಲಿ ನಮಗೆ ತುಂಬಾ ಸಮಯದ ಉಳಿತಾಯವಾಯಿತು.
 
ಹಾಗೆಯೇ ನಿಯಂತ್ರಕದ ಸ್ಕ್ರೀನ್ ನಲ್ಲಿ ನಿಖರವಾದ ಚಿತ್ರೀಕರಣ (ಸಿಮ್ಯುಲೇಶನ್) ಕಾಣುತ್ತಿರುವುದರಿಂದ ಮಶಿನ್ ನಲ್ಲಿ ಟೂಲ್ ಎಲ್ಲಿ ಅಪ್ಪಳಿಸುತ್ತದೆ, ಎಂಬುದರ ಕುರಿತಾದ ಸಂದೇಶವು ತಕ್ಷಣ ಸಿಗುತ್ತದೆ. ಇದರಿಂದಾಗಿ ಅಪಘಾತವಾಗುವ ಅಪಾಯವು ಇಲ್ಲದಂತಾಗುತ್ತದೆ. ಅಂದರೆ ಈ ಮಶಿನ್ ಎಕ್ಸಿಡೆಂಟ್ ಪ್ರೂಫ್ ಆಗಿದೆ. ಇದಕ್ಕೋಸ್ಕರ ನಿಮಗೆ ಬೇರೆ ಸಾಫ್ಟ್ ವೇರ್ ಖರೀದಿಸುವ ಆವಶ್ಯಕತೆ ಇರುವುದಿಲ್ಲ.
ಮೊಬೈಲ್ ನಲ್ಲಿ ಸ್ಮಾರ್ಟ್ ಫೋನ್ ಎಂಬ ವಿಧವಿದೆ. ಹಾಗೆಯೇ ಈ ಮಶಿನ್ ನನ್ನು ಸ್ಮಾರ್ಟ್ ಮಶಿನ್ ಎಂದು ಹೇಳಬಹುದು. ‘ಸಿಲಾಸ್’ ಈ ನಿಯಂತ್ರಕದಲ್ಲಿ ಮಶಿನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಉಪಯುಕ್ತವಾದ ಅನೇಕ ರೀತಿಯ ಅಪ್ (ಅಪ್ಲಿಕೇಶನ್) ‘ಸಿಲಾಸ್’ ನಿಯಂತ್ರಕದಲ್ಲಿ ಲೋಡ್ ಮಾಡಲಾಗಿರುತ್ತದೆ. ಇದರಲ್ಲಿ ಕೆಲವು ಪ್ರಮುಖ ಅಪ್ ಗಳನ್ನು ಚಿತ್ರ ಕ್ರ. 10 ರಲ್ಲಿ ತೋರಿಸಲಾಗಿದೆ.
11_1  H x W: 0  
 
 
ಮಶಿನ್ ನಲ್ಲಿ ಪ್ರತಿದಿನದ ಯಂತ್ರಣೆಗೆ ಒಂದೇ ಮಟೀರಿಯಲ್ ಬರಬಲ್ಲದು ಎಂಬ ಸ್ಥಿತಿ ಇರುವುದಿಲ್ಲ. ಅದಕ್ಕೋಸ್ಕರ ಪ್ರತಿಯೊಂದು ಮಟೀರಿಯಲ್ ಗೆ ಯಾವ್ಯಾವ ಪ್ಯಾರಾಮೀಟರ್ ಬಳಸಿ ಅದರ ಯಂತ್ರಣೆಯನ್ನು ಮಾಡಬೇಕು, ಎಂಬ ಅಂಶವು ಎಲ್ಲರಿಗೂ ತಿಳಿದಿದೆ ಎಂಬುದಾಗಿ ಹೇಳಲಾಗುವುದಿಲ್ಲ. ಅದಕ್ಕೆ ಈ ಮಶಿನ್ ನಲ್ಲಿ ಒಂದು ಲೈಬ್ರೆರಿ ನೀಡಲಾಗಿದೆ. ಯಂತ್ರಣೆಯನ್ನು ಮಾಡಬೇಕಾಗಿರುವ ಮಟೀರಿಯಲ್ ನ್ನು ಲೈಬ್ರರಿಯಲ್ಲಿ ಹುಡುಕುವುದು ಸಾಧ್ಯ. ಇದಕ್ಕೆ ಯಾವ ರೀತಿಯ ಕಟಿಂಗ್ ಟೂಲ್ ಬಳಸುವುದು, ಯಾವ ಪ್ಯಾರಾಮೀಟರ್ ಬಳಸುವುದು, ಎಂಬಿತ್ಯಾದಿಗಳನ್ನು ರೇಕ್ ಅಂಗಲ್ ನಿಂದ ಎಲ್ಲ ರೀತಿಯ ವಿಸ್ತಾರವಾದ ಮಾಹಿತಿಯನ್ನು ಮಶಿನ್ ನಿಮಗೆ ನೀಡುತ್ತದೆ. ಇದರ ಕುರಿತಾದ ಎಲ್ಲ ಶಿಫಾರಸ್ಸುಗಳನ್ನು ಮಶಿನ್ ಈ ಲೈಬ್ರೆರಿಯ ಅಪ್ ಮೂಲಕ ನೀಡುತ್ತದೆ. ಇದರಲ್ಲಿ ಸುಮಾರು ಎಲ್ಲ ಮಟೀರಿಯಲ್ ಗಳು ಸೇರ್ಪಡೆಯಾಗಿವೆ.
(ಚಿತ್ರ ಕ್ರ. 11).
 
12_1  H x W: 0
ಟೂಲ್ ನ ಫೋಟೊ, ಡ್ರಾಯಿಂಗ್ ಮಶಿನ್ ನಲ್ಲಿ ಲೋಡ್ ಮಾಡಬಹುದು. ಯಾವುದೇ ಒಂದು ಯಂತ್ರಭಾಗದ ಬ್ಯಾಚ್ ನ ಉತ್ಪಾದನೆಯನ್ನು ಮಾಡುತ್ತಿದ್ದಲ್ಲಿ ಆರು ತಿಂಗಳ ನಂತರ ಮತ್ತೆ ಅದೇ ಯಂತ್ರಭಾಗವು ಯಂತ್ರಣೆಗೋಸ್ಕರ ತರಲಾದಲ್ಲಿ ಈ ಹಿಂದೆ ಯಾವ ಪ್ಯಾರಾಮೀಟರ್ ಗಳನ್ನು ಬಳಸಲಾಗಿದೆ, ಅದರ ಡ್ರಾಯಿಂಗ್, ಟೂಲ್ ಆಫ್ ಸೆಟ್ ಏನಿತ್ತು ಇದರ ಕುರಿತು ಎಲ್ಲ ರೀತಿಯ ಮಾಹಿತಿ (ಡಾಟಾ) ಮಶಿನ್ ನಲ್ಲಿ ಸೇರಿಸಿ ಇಡಲಾಗುತ್ತದೆ. ಇದರಿಂದಾಗಿ ಯಂತ್ರಭಾಗಗಳ ಸೆಟಿಂಗ್ ಮಾಡುವಾಗ ತಗಲುವ ಸಮಯವು ಕಡಿಮೆಯಾಗುತ್ತದೆ.
 
ಯಾವ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಬೇಕು, ಎಂಬುದನ್ನು ಮಶಿನ್ ನಿರ್ವಹಣೆಯ ಕುರಿತಾಗಿ ಹೇಳಲಾಗುತ್ತದೆ. ಹಾಗೆಯೇ ಇದರಲ್ಲಿ ಯಾವ ರೀತಿಯ ನಿರ್ವಹಣೆಯನ್ನು ಮಾಡಬೇಕು, ಎಂಬುದರ ಕುರಿತು ಮಶಿನ್ ಮುಂಗಡವಾಗಿ ಸಂದೇಶವನ್ನು ನೀಡುತ್ತದೆ. ಹಾಗೆಯೇ ಹಲವಾರು ಅಂಶಗಳು ಮಾಡುವುದು ಉಳಿದಿದ್ದಲ್ಲಿ ಆ ಕುರಿತೂ ಸೂಚನೆಯನ್ನು ನೀಡುತ್ತದೆ. ಉದಾಹರಣೆ, ವಿಜ್ಯುವಲ್ ಪರೀಕ್ಷೆ ಮಾಡದಿದ್ದಲ್ಲಿ, ಆಪರೇಟರ್ ಅದಕ್ಕೆ ಸಂಬಂಧಪಟ್ಟ ಕಾರ್ಯನಿರ್ವಹಣೆಯನ್ನು ಮಾಡಿ ಬಟನ್ ಒತ್ತುವ ತನಕ ಸೂಚನೆಯನ್ನು ನೀಡುತ್ತದೆ.
 
ಹಲವಾರು ಅಪ್ಲಿಕೇಶನ್ ಮೂಲಕ ನೀವು ವೇಳಾಪಟ್ಟಿಯನ್ನು ತಯಾರಿಸಬಲ್ಲಿರಿ. ಪ್ಲಾನರ್ ತಯಾರಿಸಬಲ್ಲಿರಿ. ಅಲ್ಲದೇ ಮಶಿನ್ ಗೋಸ್ಕರ ಇಂದು ಎಷ್ಟು ವಿದ್ಯುತ್ ಶಕ್ತಿಯನ್ನು ಬಳಸಲಾಯಿತು, ಮಶಿನ್ ನಲ್ಲಿ ಎಷ್ಟು ಯುನಿಟ್ ವಿದ್ಯುತ್ ಶಕ್ತಿಯನ್ನು ಬಳಸಲಾಗುತ್ತದೆ, ಮಶಿನ್ ನಲ್ಲಿ ಬ್ರೇಕ್ ಡೌನ್ ಎಷ್ಟು ಬಾರಿ ಆಗುತ್ತದೆ, ಮಶಿನ್ ನಲ್ಲಿ ಐಡಲ್ ಟೈಮ್ ಎಷ್ಟು ಇತ್ತು, ರನಿಂಗ್ ಟೈಮ್ ಎಷ್ಟು ಇತ್ತು ಮುಂತಾದ ಮಾಹಿತಿಯನ್ನು ಪೈ ಚಾರ್ಟ್ ನಿಂದ ನೋಡಬಹುದು. ಇದರಿಂದಾಗಿ ಉದ್ಯಮಿಗಳಿಗೆ ತಮ್ಮ ಮಶಿನ್ ಎಷ್ಟು ಮತ್ತು ಹೇಗೆ ಬಳಸಲಾಗಿದೆ, ಮಶಿನ್ ನ OEE ಎಷ್ಟು ಇದೆ, (ಚಿತ್ರ ಕ್ರ. 12) ಇತ್ಯಾದಿ ಮಾಹಿತಿಯು ಆನ್ ಲೈನ್ ಲಭಿಸುತ್ತದೆ.
 
13_1  H x W: 0
ಇನ್ನೊಂದು ಮಹತ್ವದ ಅಂಶವೆಂದರೆ ಕಾರ್ಬನ್ ಎಮಿಶನ್. ಮಶಿನ್ ನ ಕಾರ್ಬನ್ ಎಮಿಶನ್ ಎಷ್ಟು ಮಾಡಲಾಗಿದೆ, ಎಂಬುದನ್ನೂ ಆನ್ ಲೈನ್ ವೀಕ್ಷಿಸಬಹುದು. ಪರಿಸರ ಮಾಲಿನ್ಯದ ಕಾನೂನಿನ ಪ್ರಕಾರ ಅದನ್ನೂ ನೀವು ಪ್ರಸ್ತುತ ಪಡಿಸಬಲ್ಲಿರಿ. ಇದು ತಮ್ಮಲ್ಲಿ ಇಂದಿಗೂ ಕಡ್ಡಾಯ ಮಾಡಲಾಗಿಲ್ಲ. ಆದರೆ ಮುಂಬರುವ 5-10 ವರ್ಷಗಳಲ್ಲಿ ಈ ಕುರಿತು ಅನೇಕ ಕಾನೂನುಗಳು ಅನ್ವಯಿಸಬಲ್ಲವು. ಮಶಿನ್ ಶಾಪ್ ಗಳಿಗೂ ಇಂತಹ ನಿಯಮಗಳನ್ನು ಕಡ್ಡಾಯ ಮಾಡಲಾಗಬಲ್ಲವು. ಇದರ ಕುರಿತು ಈ ಮಶಿನ್ ನಲ್ಲಿ ಅತ್ಯಾವಶ್ಯಕವಾಗಿರುವ ಮುನ್ನೆಚ್ಚರಿಕೆಯನ್ನು ವಹಿಸಲಾಯಿತು.
 
ಇಂಟರ್ ನೆಟ್ ಮೂಲಕ ಮಶಿನ್ ವೈ-ಫೈಗೆ ಜೋಡಿಸಿದಾಗ, ಡಿ.ಎಮ್.ಜಿ. ಮೋರಿಯ ಸರ್ವಿಸ್ ಸೇವೆಯೊಂದಿಗೆ ಮಶಿನ್ ನೇರವಾಗಿ ಜೋಡಿಸಲ್ಪಡುತ್ತದೆ. ಇದನ್ನು ಇಂಡಸ್ಟ್ರಿ 4.0 ಯಲ್ಲಿ ಅಳವಡಿಸಲಾಗಿದೆ. ಸಾಫ್ಟ್ ವೇರ್ ನಲ್ಲಿ ಯಾವುದೇ ರೀತಿಯ ದೋಷಗಳಿದ್ದಲ್ಲಿ ಮಶಿನ್ ನ ನಿಯಂತ್ರಕದಿಂದ ತಾವು ಕುಳಿತಲ್ಲಿಯೇ ಅದನ್ನು ಪರಿಹರಿಸುವುದು ಸಾಧ್ಯ. ಈ ಎಲ್ಲ ಅಪ್ ಗಳಿಂದಾಗಿ ಮಶಿನ್ ಗಳ ಮೇಲ್ವಿಚಾರಣೆಯ ಖರ್ಚು ತುಂಬಾ ಕಡಿಮೆಯಾಗಬಲ್ಲದು.
@@AUTHORINFO_V1@@