ಟರ್ನಿಂಗ್ ಸೆಂಟರ್ ನಲ್ಲಿರುವ ವಿಶೇಷವಾದ ಟೂಲ್ ಹೋಲ್ಡರ್

@@NEWS_SUBHEADLINE_BLOCK@@

Lohkarya - Udyam Prakashan    09-Mar-2021   
Total Views |
ಲಘು ಮಧ್ಯಮ ಉದ್ಯಮಗಳಲ್ಲಿ ಪಾರಂಪರಿಕವಾದ ಲೇಥ್ ಗಳಿಂದ ಪ್ರಾರಂಭಿಸಿ ಸಿ.ಎನ್.ಸಿ. ಲೇಥ್ ಗಳಿಗೋಸ್ಕರ ಹೂಡಲಾಗುವ ಬಂಡವಾಳ ಮತ್ತು ಅದರ ಬಳಕೆಯಲ್ಲಾಗುವ ಬದಲಾವಣೆಗಳು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲೆಡೆಯಲ್ಲಿ ಗಮನಕ್ಕೆ ಬರುತ್ತಿದೆ. ಈ ಬಂಡವಾಳ ಹೂಡಿಕೆಯನ್ನು ಸೂಕ್ತವಾಗಿ ಬಳಸಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುವುದು ಗುರಿಯಾಗಿರುತ್ತದೆ. ಅಲ್ಲದೇ ಹೂಡಿರುವ ಬಂಡವಾಳದ ಭಾರವನ್ನು ಕಡಿಮೆ ಮಾಡಿ ಗರಿಷ್ಠ ಪ್ರಮಾಣದಲ್ಲಿ ಲಾಭಗಳಿಸುವ ಗುರಿಯನ್ನು ಹೆಚ್ಚಾಗಿ ಎಲ್ಲ ಉದ್ಯಮಿಗಳೂ ಅವಲಂಬಿಸುತ್ತಾರೆ. ಇದರ ಹೊರತಾಗಿ ಮಾರುಕಟ್ಟೆಯಲ್ಲಿರುವ ಸ್ಪರ್ಧೆಯೊಂದಿಗೆ ನಿರಂತರವಾಗಿ ಹೊರಾಡುತ್ತಾ, ತಳವೂರಿ ನಿಂತು, ಮೊದಲ ಪಂಕ್ತಿಯಲ್ಲಿ ಬರಲು ಪ್ರಯತ್ನಿಸುವುದು ಕೂಡಾ ಮಹತ್ವದ ಉದ್ದೇಶವಾಗಿದೆ.
 
ಇಂತಹ ಸಿ.ಎನ್.ಸಿ. ಮಶಿನ್ ಗಳಲ್ಲಿ ಉತ್ಪಾದಿಸಲಾಗಿರುವ ಕಾರ್ಯವಸ್ತುಗಳ ಸಂಖ್ಯೆಯು ಬೃಹತ್ ಪ್ರಮಾಣದಲ್ಲಿರುತ್ತದೆ. ಇದನ್ನು ಮಾಸ್ ಪ್ರೊಡಕ್ಷನ್ ಎಂದು ಹೇಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸೈಕಲ್ ಟೈಮ್ ನಲ್ಲಿ ಯಂತ್ರಣೆಗೆ ಬೇಕಾಗುವ ಸಮಯವನ್ನು ಕಡಿಮೆ ಮಾಡುವುದು, ಯಂತ್ರಣೆಯ ಹೊರತಾಗಿರುವ ಸಮಯದ ಕಡೆಗೆ ಗಮನ ಹರಿಸುವುದು ಮತ್ತು ಅದನ್ನು ಕಡಿಮೆ ಮಾಡುವುದು, ಇದೇ ಉತ್ಪಾದಕತೆಯ ಹೆಚ್ಚಳಕ್ಕೆ ಅವಲಂಬಿಸಿರುವ ಒಂದು ದಾರಿಯಾಗಿದೆ. ಕಾರ್ಯವಸ್ತುಗಳನ್ನು ಮಶಿನ್ ನಲ್ಲಿ ಅಥವಾ ಫಿಕ್ಸ್ಚರ್ ನಲ್ಲಿ ಲೋಡಿಂಗ್ ಅಥವಾ ಅನ್-ಲೋಡಿಂಗ್ ಇದರೊಂದಿಗೆ, ಮೊದಲ ಟೂಲ್ ಸ್ಪಿಂಡಲ್ ಎದುರಿನಿಂದ ಬದಿಗೆ ಸರಿಸಿ, ಮುಂದಿನ ಟೂಲ್ ಯಂತ್ರಣೆಗೋಸ್ಕರ ಸ್ಪಿಂಡಲ್ ನ ಎದುರಿಗೆ ತರುವುದು, ಈ ಪ್ರಕ್ರಿಯೆಯಲ್ಲಿಯೂ ತುಂಬಾ ಸಮಯವು ವ್ಯಯವಾಗುತ್ತದೆ. ಇದರಿಂದಾಗಿ ಯಂತ್ರಣೆಯ ಹೊರತಾಗಿ ಗಾಳಿಯಲ್ಲಿ ಟೂಲ್ ನ ಚಟುವಟಿಕೆಯ ಸಮಯವನ್ನು ಕಡಿಮೆ ಮಾಡುವುದು ಇದೊಂದು ಪ್ರಮುಖ ಘಟಕವಾಗಿದೆ. ಸಿ.ಎನ್.ಸಿ.ಯಂತಹ ಮಶಿನ್ ನಲ್ಲಿ ಇಂತಹ ಯಂತ್ರಣೆಯ ಹೊರತಾದ ಸಮಯವನ್ನು ಎರಡು ರೀತಿಯಲ್ಲಿ ವಿವರಿಸಲಾಗಿದೆ.
ಎ. ಚಿಪ್ ಟು ಚಿಪ್ ಟೈಮ್
ಯಾವುದೊಂದು ಸೈಕಲ್ ಟೈಮ್ ನಲ್ಲಿ ಸ್ಪಿಂಡಲ್ ನಲ್ಲಿರುವ ಟೂಲ್ ನ ಪ್ರತ್ಯಕ್ಷವಾದ ಯಂತ್ರಣೆಯ ಕೆಲಸ ಮುಗಿದಾಗಿನಿಂದ ಅದನ್ನು ಟೂಲ್ ಸ್ಪಿಂಡಲ್ ನಿಂದ ಹೊರಗೆ ತೆಗೆದು ಮತ್ತೆ ಮೆಗ್ಯಾಜಿನ್ ನಲ್ಲಿ ಯೋಗ್ಯ ಜಾಗದಲ್ಲಿ ಇಡಲಾಗುತ್ತದೆ. ನಂತರ ಮುಂದಿನ ಯಂತ್ರಣೆಗೋಸ್ಕರ ಟೂಲ್ ಸ್ಪಿಂಡಲ್ ನಲ್ಲಿ ಅಳವಡಿಸಿ, ಮುಂದಿನ ಯಂತ್ರಣೆಯನ್ನು ಪ್ರತ್ಯಕ್ಷವಾಗಿ ಪ್ರಾರಂಭಿಸಲಾಗುತ್ತದೆ. ಇದಕ್ಕೆ ತಗಲುವ ಸಮಯವನ್ನು ಮಶಿನಿಂಗ್ ಸೆಂಟರ್ ನಲ್ಲಿರುವ ‘ಚಿಪ್ ಟೂ ಚಿಪ್ ಟೈಮ್’ ಎಂದು ಹೇಳಲಾಗುತ್ತದೆ. ಟರ್ನಿಂಗ್ ಸೆಂಟರ್ ಕುರಿತಾದ ಸಮಯವೆಂದರೆ ಟರೇಟ್ ನಲ್ಲಿ ಅಳವಡಿಸಿರುವ ಯಾವುದೇ ಟೂಲ್ ನ ಯಂತ್ರಣೆಯ ಕೆಲಸ ಪೂರ್ತಿಯಾದ ನಂತರ ಟರೇಟ್ ಹೋಮ್ ಪೊಸಿಶನ್ ನಲ್ಲಿ ತರಲಾಗುತ್ತದೆ. ಅದರಲ್ಲಿ ಯೋಗ್ಯವಾದ ಸ್ಥಿತಿಯಲ್ಲಿ ತಿರುಗಿಸಿ, ಮುಂದಿನ ಟೂಲ್ ಸ್ಪಿಂಡಲ್ ಎದುರಿಗೆ ತಂದು ಅದರಿಂದ ಯಂತ್ರಣೆಯನ್ನು ಪ್ರಾರಂಭಿಸಲು ಬೇಕಾಗಿರುವ ಸಮಯ.
ಬಿ. ಟೂಲ್ ಟು ಟೂಲ್ ಟೈಮ್
ಟೂಲ್ ಬದಲಾಯಿಸುವ ಪ್ರಕ್ರಿಯೆಯಲ್ಲಿ ಸ್ಪಿಂಡಲ್ ಅಥವಾ ಟರೇಟ್ ಹೋಮ ಪೊಸಿಶನ್ ಗೆ ತಲುಪಿದ ನಂತರ ಮೊದಲ ಟೂಲ್ ಸ್ಪಿಂಡಲ್ ನಿಂದ ತೆಗೆದು ಮುಂದಿನ ಟೂಲ್ ಅದರ ಸ್ಥಾನವನ್ನು ಆಕ್ರಮಿಸಿ ಯಂತ್ರಣೆಗೋಸ್ಕರ ತಯಾರಿಸಲಾಗುವ ಸಮಯವೇ ಟೂಲ್ ಟೂ ಟೂಲ್ ಟೈಮ್. ಈ ಸಮಯದನ್ನು ಕನಿಷ್ಠ ಪ್ರಮಾಣದಲ್ಲಿ ಅಳವಡಿಸುವ ನಿಪುಣತೆಯು ಆ ಮಶಿನ್ ಟೂಲ್ ನ ಡಿಸೈನ್ ಮಾಡುವಾಗಿನ ಅಂಶವಾಗಿದೆ. ಈ ಸಮಯವು ‘ಟೂಲ್ ಗ್ರಿಪರ್’ ಅಥವಾ ‘ಟೂಲ್ ಪೋಸ್ಟ್’ನ ಯೋಗ್ಯ ಸ್ಥಿತಿಗೆ ಬರುವ ವೇಗ, ಅಂದರೆ ಇನರ್ಶಿಯಾದಲ್ಲಿ ಅವಲಂಬಿಸಿರುತ್ತದೆ. ಮಶಿನ್ ಟೂಲ್ ಡಿಸೈನ್ ಮಾಡುವಾಗ ಈ ಸಮಯವನ್ನು ನಿರ್ಧರಿಸದಲ್ಲಿ ಅದನ್ನು ನಂತರ ಬದಲಾಯಿಸುವುದು ಅಸಾಧ್ಯ.
ಟರ್ನಿಂಗ್ ಸೆಂಟರ್ ನಲ್ಲಿರುವ ಚಿಪ್ ಟೂ ಚಿಪ್ ಟೈಮ್ ಈ ಸಮಯದ ಅಳತೆ ಮಾಡುವ ರೀತಿಯನ್ನು ವೀಕ್ಷಿಸಿದಾಗ ಈ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

1_1  H x W: 0 x 
1. ಯಾವುದೇ ಬ್ಲಾಕ್ ನ ಯಂತ್ರಣೆಯು ಪೂರ್ತಿಯಾದ ನಂತರ ಸ್ಪಿಂಡಲ್ ತಿರುಗುವುದು ನಿಲ್ಲುತ್ತದೆ.
2. ಕಮಾಂಡ್ ಗಳಿಗೆ ಅನುಸಾರವಾಗಿ ಟರೇಟ್ X ಮತ್ತು Z ಅಕ್ಷದಲ್ಲಿ ಸ್ವತಂತ್ರವಾಗಿ ಅಥವಾ ಒಟ್ಟಾಗಿ ವೇಗವಾಗಿ ಹಿಂದೆ ಹೋಗಿ ಹೋಮ್ ಪೊಸಿಶನ್ ಗೆ ಬಂದು ನಿಲ್ಲುತ್ತದೆ.
3. ಟರೇಟ್ ತನ್ನ ಅಕ್ಷದ ಸುತ್ತಮುತ್ತ ಗೋಲಾಕಾರವಾಗಿ ತಿರುಗಿ ಮುಂದಿನ ಬ್ಲಾಕ್ ನ ಯಂತ್ರಣೆಗೋಸ್ಕರ ಬೇಕಾಗಿರುವ ಯೋಗ್ಯವಾದ ಟೂಲ್ ಪಡೆದು ಸಿದ್ಧವಾಗುತ್ತದೆ.
4. ಕಮಾಂಡ್ ಗಳಿಗೆ ಅನುಸಾರವಾಗಿ ಟರೇಟ್ X ಮತ್ತು Z ಅಕ್ಷದಲ್ಲಿ ಸ್ವತಂತ್ರವಾಗಿ ಅಥವಾ ಒಟ್ಟಾಗಿ ವೇಗವಾಗಿ ಮುಂದೆ ಸರಿದು, ಅದೇ ಸಮಯದಲ್ಲಿ ಸ್ಪಿಂಡಲ್ ನ ಸುತ್ತುವಿಕೆಯನ್ನು ಪ್ರಾರಂಭಿಸಿ ಮುಂದಿನ ಬ್ಲಾಕ್ ನಲ್ಲಿ ಪ್ರತ್ಯಕ್ಷವಾದ ಯಂತ್ರಣೆಗೆ ಪ್ರಾರಂಭವಾಗುತ್ತದೆ.
ಟರ್ನಿಂಗ್ ಸೆಂಟರ್ ನಲ್ಲಿರುವ ಫೇಸಿಂಗ್, ಸೆಂಟರಿಂಗ್ ಮತ್ತು ಡ್ರಿಲ್ಲಿಂಗ್ ಈ ಮೂರೂ ಪ್ರಕ್ರಿಯೆಗಳಿಗೆ ಬೇಕಾಗುವ ಟೂಲ್ ನ್ನು ಟರೇಟ್ ನಲ್ಲಿ ಅಳವಡಿಸಿರುವುದನ್ನು ಪ್ರಾತಿನಿಧಿಕವಾಗಿ ಚಿತ್ರ ಕ್ರ. 1 ರಲ್ಲಿ ತೋರಿಸಲಾಗಿದೆ.
ಮೇಲೆ ಉಲ್ಲೇಖಿಸಿರುವ ನಾಲ್ಕೂ ಹಂತಗಳನ್ನು ಇದೇ ಕ್ರಮದಲ್ಲಿ ಮುಂದುವರಿಸಲು ಬೇಕಾಗುವ ಕಾಲಾವಧಿಯು ಕೆಲವೇ ಸೆಕಂಡುಗಳದ್ದಾಗಿದ್ದರೂ ಕೂಡಾ ಒಟ್ಟು ಸೈಕಲ್ ಟೈಮ್ ನೊಂದಿಗೆ ಅದರ ಅನುಪಾತವು ಹೆಚ್ಚಾಗಿರುತ್ತದೆ. ಅಂದರೆ ಸೈಕಲ್ ಟೈಮ್ ಕೂಡಾ ಕೆಲವೇ ಸೆಕಂಡುಗಳಾಗಿದ್ದರಿಂದ ಅದರ ಸರಾಸರಿಯು ಹೆಚ್ಚಾಗಿರುತ್ತದೆ. ಅಂದರೆ ಅನೇಕ ಬಾರಿ 20 ರಿಂದ 25 ಸೆಕಂಡುಗಳ ಸೈಕಲ್ ಟೈಮ್ ನಲ್ಲಿ ಈ ಚಿಪ್ ಟೂ ಚಿಪ್ ಟೈಮ್ ಅಂದಾಜು 4 ರಿಂದ 6 ಸೆಕಂಡುಗಳಷ್ಟು ಇರಬಲ್ಲದು, ಅಂದರೆ ಒಟ್ಟು ಸೈಕಲ್ ಟೈಮ್ ಶೇಕಡಾ 20 ರಿಂದ 30 ಇರುತ್ತದೆ.
ಮಹಾರಾಷ್ಟ್ರದ ಇಚಲಕರಂಜಿಯ ಔದ್ಯೋಗಿಕ ಪರಿಸರದಲ್ಲಿ ‘ಮೆಕ್ಯಾಸಾಫ್ಟ್’ ಎಂಬ ಕಂಪನಿಯಲ್ಲಿ ಅತ್ಯಾಧುನಿಕ ಟೂಲ್ ರೂಮ್ ಇದೆ. ಈ ಟೂಲ್ ರೂಮ್ ನ್ನು ಸ್ಥಾಪಿಸುವಾಗ ಅತ್ಯಾಧುನಿಕ ಮತ್ತು ಸುಸಜ್ಜಿತ ಯಂತ್ರಸಾಮಗ್ರಿಗಳಲ್ಲಿ ಬಂಡವಾಳವನ್ನು ಹೂಡುವ ನೀತಿಯನ್ನು ಅವಲಂಬಿಸಲಾಗಿತ್ತು. ಇದರಿಂದಾಗಿ ಪ್ರಾರಂಭದಿಂದಲೂ ಟರ್ನಿಂಗ್ ಸೆಂಟರ್, ಮಶಿನಿಂಗ್ ಸೆಂಟರ್ ಇಂತಹ ಮಶಿನ್ ಗಳನ್ನು ಬಳಸಲಾಗುತ್ತದೆ. ಇಂತಹ ಮಶಿನ್ ಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯನ್ನು ಪಡೆಯುವಾಗ ಮೇಲೆ ತಿಳಿಸಿರುವ ಚಿಪ್ ಟೂ ಚಿಪ್ ಟೈಮ್ ಕಡಿಮೆ ಮಾಡುವ ಸವಾಲುಗಳನ್ನು ಎದುರಿಸಬೇಕಾಗುತ್ತಿತ್ತು. ಈ ಕಂಪನಿಯಲ್ಲಿ ತಮ್ಮದೇ ಆದ ಟೂಲ್ ರೂಮ್ ಇರುವುದರಿಂದ ಎಲ್ಲ ರೀತಿಯ ಸಮಸ್ಯೆಗಳನ್ನು ದೂರಗೊಳಿಸಲು ಅನೇಕ ರೀತಿಯ ಪ್ರಯೋಗ ಮತ್ತು ಪ್ರಯತ್ನವನ್ನು ಮಾಡಲಾಯಿತು.
 
2_1  H x W: 0 x
ಟರೇಟ್ ನ ಗ್ರೂವ್ ನಲ್ಲಿ ಅಳವಡಿಸಬಲ್ಲ ಒಂದು ಚೌಕಟ್ಟಿನ ಆಕಾರದ ಶ್ಯಾಂಕ್ ಪಡೆದು, ಅದರಲ್ಲಿ ಮೇಲೆ ಉಲ್ಲೇಖಿಸಿದಂತೆ ಮಾಡಿರುವ ಟರ್ನಿಂಗ್ ಮತ್ತು ಫೇಸಿಂಗ್ ಟೂಲ್, ಸೆಂಟರ್ ಡ್ರಿಲ್ ಮತ್ತು ಡ್ರಿಲ್ ಈ ಮೂರೂ ಟೂಲ್ ಗಳನ್ನು ಅದೇ ಕ್ರಮದಲ್ಲಿ ಅಳವಡಿಸಲು ನಿಗದಿತ ದೂರದಲ್ಲಿ ಯೋಗ್ಯವಾಗಿರುವ ಪಾಕೇಟ್ ತಯಾರಿಸಲಾಯಿತು. (ಚಿತ್ರ ಕ್ರ. 2)
ಟರ್ನಿಂಗ್ ಸೆಂಟರ್ ನ ಅಳತೆ, ಅದರಲ್ಲಿ ಯಂತ್ರಣೆಯ ಮಾಡಬಲ್ಲ ಕಾರ್ಯವಸ್ತುಗಳ ಜಾಮೆಟ್ರಿ ಮತ್ತು ಯಂತ್ರಣೆಯ ಆವಶ್ಯಕತೆ ಇವುಗಳಗೆ ಅನುಸಾರವಾಗಿ ಟೂಲ್ ನಲ್ಲಿರುವ ದೂರವನ್ನು ನಿರ್ಧರಿಸಲಾಯಿತು. ಇದರಿಂದಾಗಿ ಒಂದು ವೇಳೆ ಯಂತ್ರಣೆಯ ರೀತಿಯಲ್ಲಿ ಬದಲಾವಣೆಯಾದರೂ ಕೂಡಾ ಟರೇಟ್ ತಿರುಗಿಸದೇ ಅಪೇಕ್ಷಿಸಿರುವ ಟೂಲ್ ಕಾರ್ಯವಸ್ತುವಿನ ಸರ್ಫೇಸ್ ನ ಎದುರು ಯಂತ್ರಣೆಗೋಸ್ಕರ ಲಭ್ಯವಾಯಿತು. ಮೇಲೆ ಉಲ್ಲೇಖಿಸಿದಂತೆ ನಾಲ್ಕೂ ಹಂತಗಳನ್ನು ಕ್ರಮಕ್ರಮವಾಗಿ ನಿರ್ವಹಿಸುವ ಆವಶ್ಯಕತೆಯು ಇಲ್ಲದಂತಾಯಿತು. ಅಲ್ಲದೇ ಆದಕ್ಕೋಸ್ಕರ ತಗಲುವ ಸಮಯವೂ ಸಂಪೂರ್ಣವಾಗಿ ಕಡಿಮೆಯಾಯಿತು. ಟರೇಟ್ ಹೋಮ್ ಪೊಸಿಶನ್ ಗೆ ತರದೇ, ಸ್ಪಿಂಡಲ್ ನಿಲ್ಲಿಸದೇ X ಮತ್ತು Z ಅಕ್ಷಗಳ ಚಟುವಟಿಕೆಯಿಂದ ಮುಂದಿನ ಟೂಲ್ ಯಂತ್ರಣೆಗೆ ಸಿದ್ಧವಾಯಿತು. ಇದರಿಂದಾಗಿ ಚಿಪ್ ಟೂ ಚಿಪ್ ಟೈಮ್ ಅನೇಕ ಪಟ್ಟು ಕಡಿಮೆಯಾಗಿ ಉತ್ಪಾದಕತೆಯು ತುಂಬಾ ಪಟ್ಟು ಹೆಚ್ಚಾಯಿತು. ಈ ಉಪಾಯಕ್ಕೆ ಅನುಸಾರವಾಗಿ ತಯಾರಿಸಿರುವ ಮತ್ತು ಪರಿಣಾಮಕಾರಿಯಾಗಿ ಬಳಸಿರುವ ಟೂಲ್ ಚಿತ್ರ ಕ್ರ. 2 ರಲ್ಲಿ ತೋರಿಸಲಾಗಿದೆ.
 
3_1  H x W: 0 x
ಯಾವುದೊಂದು ಕಾರ್ಯವಸ್ತುವಿನಲ್ಲಿ ಈ ರೀತಿಯ ವೈಶಿಷ್ಟ್ಯಪೂರ್ಣವಾದ ಟೂಲ್ ಹೋಲ್ಡರ್ ನ ಸಹಾಯದಿಂದ ಮಾಡಲಾಗುವ ಯಂತ್ರಣೆಯ ಕ್ರಮವನ್ನು ಚಿತ್ರ ಕ್ರ. 3 ರಲ್ಲಿ ಮೂರು ಹಂತಗಳಲ್ಲಿ ತೋರಿಸಲಾಗಿದೆ.
ಈ ರೀತಿಯ ಟೂಲ್ ಹೋಲ್ಡರ್ ತಯಾರಿಸಿ ಶಾಪ್ ಫ್ಲೋರ್ ನಲ್ಲಿ ವಿವಿಧ ಕಾರ್ಯವಸ್ತುಗಳ ಯಂತ್ರಣೆಗೋಸ್ಕರ ಬಳಸಿದ ನಂತರ ಉತ್ಪಾದಕತೆಯಲ್ಲಿ ಪರಿಣಾಮಕಾರಿಯಾದ ಹೆಚ್ಚಳವಾಯಿತು. ಇದರಲ್ಲಿ ಒಂದೇ ಕಾರ್ಯವಸ್ತುವಿಗೆ ಸಂಬಂಧಪಟ್ಟ ಲಾಭಗಳ ಅಂಕೆ-ಸಂಖ್ಯೆಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
 
4_1  H x W: 0 x
ಕಾರ್ಯವಸ್ತುಗಳ ಆವಶ್ಯಕತೆಗೆ ಅನುಸಾರವಾಗಿ ಈ ರೀತಿಯ ಅನೇಕ ಟೂಲ್ ಗಳ ಡಿಸೈನ್ ಮಾಡಿ ಯಶಸ್ವಿಯಾಗಿ ಬಳಸಲಾಗಿದೆ. ಈ ರೀತಿಯ ಟೂಲ್ ಹೋಲ್ಡರ್ ಗಳನ್ನು ಬಳಸುವಾಗ ಕಾರ್ಯವಸ್ತುವಿನ ಆಕಾರ ಮತ್ತು ಮಶಿನ್ ನ ಮಿತಿ ಇವುಗಳ ಕುರಿತು ವಿಚಾರ ಮಾಡಲೇ ಬೇಕು. ಮೆಕ್ಯಾಸಾಫ್ಟ್ ಈ ಕಂಪನಿಯಲ್ಲಿ ಪ್ರಮುಖವಾಗಿ ಪ್ರೆಶರ್ ಡೈ-ಕಾಸ್ಟಿಂಗ್ ನ ಡೈ, ಮೋಲ್ಡ್ ಹಾಗೆಯೇ ಮಶಿನ್ ಟೂಲ್ ಮತ್ತು ಆಟೊಮೊಟಿವ್ ಇಂಡಸ್ಟ್ರಿಗೆ ಅತ್ಯಾವಶ್ಯಕವಿರುವ ಯಂತ್ರಭಾಗಗಳನ್ನು ನಿರ್ದೋಷವಾಗಿ ತಯಾರಿಸಲಾಗುತ್ತದೆ. ಉಚ್ಚಮಟ್ಟದ ಕೆಲಸದ ನಿರ್ವಹಣೆ ಇರುವ ವೈಶಿಷ್ಟ್ಯಪೂರ್ಣವಾದ ಟೂಲ್ ಮತ್ತು ಸ್ವಯಂಚಾಲನೆಯ ತಂತ್ರವನ್ನು ಅಭಿವೃದ್ಧಿಗೊಳಿಸಲಾಗಿದೆ. ಅಲ್ಲದೇ AS9100D ಈ ಸ್ಟ್ಯಾಂಡರ್ಡ್ ಗಳ ಶ್ರೇಣಿಯಂತೆ ಏರೋಸ್ಪೇಸ್ ಗೆ ಬೇಕಾಗಿರುವ ಯಂತ್ರಭಾಗಗಳನ್ನು ಕೂಡಾ ಈ ಕಂಪನಿಯಲ್ಲಿ ತಯಾರಿಸಲಾಗುತ್ತದೆ.
  
@@AUTHORINFO_V1@@