ಪ್ಲೇನ್ ನ ಆಯ್ಕೆ

@@NEWS_SUBHEADLINE_BLOCK@@

Lohkarya - Udyam Prakashan    16-Mar-2021   
Total Views |
ಸಿ.ಎನ್.ಸಿ.ಮಶಿನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಸರ್ಕ್ಯುಲರ್ ಇಂಟರ್ ಪೊಲೇಶನ್ ಮಾಡುವ ಪರಿಸ್ಥಿತಿಯು ಉದ್ಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ಲೇನ್ ನ ಆಯ್ಕೆ ಇದೊಂದು ಅತ್ಯಂತ ಮಹತ್ವದ ಅಂಶವಾಗಿದೆ. ಸಿ.ಎನ್.ಸಿ. ಮಶಿನ್ ಪ್ರಾರಂಭಿಸುವಾಗ ನಿಗದಿತ G ಕೋಡ್ ತನ್ನಷ್ಟಕ್ಕೆ ಪ್ರಾರಂಭವಾಗುತ್ತವೆ. ಈ ರೀತಿಯಲ್ಲಿ ತನ್ನಷ್ಟಕ್ಕೆ ಪ್ರಾರಂಭವಾಗುವ ಎಲ್ಲ G ಕೋಡ್ ನ್ನು ಡಿಫಾಲ್ಟ್ G ಕೋಡ್ ಎಂದು ಹೇಳಲಾಗುತ್ತದೆ.

1_1  H x W: 0 x
 
 
ಪ್ಲೇನ್ ಅಂದರೆ ಏನು?
ಸರ್ಫೇಸ್ ಅಂದರೆ ಪ್ಲೇನ್. ನೇರವಾದ ರೇಖೆಯಿಂದ ಜೋಡಿಸಲಾಗುವ ಯಾವುದೇ ಬಿಂದು ಸಂಪೂರ್ಣವಾಗಿ ಆ ಸರ್ಫೇಸ್ ನಲ್ಲಿಯೇ ನಿಲ್ಲುತ್ತದೆ.
ಪ್ಲೇನ್ ನಲ್ಲಿ ಮಾಡಲಾಗುವ ಯಂತ್ರಣೆ
ಕಟಿಂಗ್ ಟೂಲ್ ನ ದಾರಿಯು ಸರಳ ರೇಖೆ ಮತ್ತು ಆರ್ಕ್ ಇವುಗಳ ಏಕೀಕರಣವಾಗಿರುತ್ತದೆ.
ಸಿ.ಎನ್.ಸಿ. ಮಿಲ್ಲಿಂಗ್ ಮಶಿನ್ ನಲ್ಲಿ G17 X-Y ಪ್ಲೇನ್ ಕೋಡ್ ಮಶಿನ್ ಪ್ರಾರಂಭಿಸಿದ ನಂತರ ತನ್ನಷ್ಟಕ್ಕೆ ಪ್ರಾರಂಭವಾಗುತ್ತದೆ. ಹಾಗೆಯೇ ಸಿ.ಎನ್.ಸಿ. ಲೇಥ್ ನಲ್ಲಿ G18 Z-Y ಪ್ಲೇನ್ ಈ ಕೋಡನ್ನು ಮಶಿನ್ ಪ್ರಾರಂಭಿಸಿದ ನಂತರ ತನ್ನಷ್ಟಕ್ಕೆ ಪ್ರಾರಂಭವಾಗುತ್ತದೆ.
ಸಿ.ಎನ್.ಸಿ. ಲೇಥ್ ನಲ್ಲಿರುವ ಎಲ್ಲ ಕೆಲಸಗಳನ್ನು X ಮತ್ತು Z ಅಕ್ಷದಲ್ಲಿ ಮಾಡಲಾಗುವುದರಿಂದ ಮತ್ತು ಮಶಿನ್ ಪ್ರಾರಂಭಗೊಳ್ಳುವುದರಿಂದ G18 Z-X ಪ್ಲೇನ್ ತನ್ನಷ್ಟಕ್ಕೆ ಪ್ರಾರಂಭವಾದಲ್ಲಿ ಪ್ಲೇನ್ ಬದಲಾಯಿಸುವ ಪರಿಸ್ಥಿತಿಯು ನಿರ್ಮಾಣವಾಗುವುದಿಲ್ಲ. ಸರ್ಕ್ಯುಲರ್ ಇಂಟರ್ ಪೊಲೇಶನ್ X ಮತ್ತು Y ಈ ಅಕ್ಷದಲ್ಲಿ ಮಾಡಬೇಕಾದಾಗ, ಅದಕ್ಕೋಸ್ಕರ ಸರ್ಕ್ಯುಲರ್ ಇಂಟರ್ ಪೊಲೇಶನ್ ನ ಪ್ರಾರಂಭದ ಬಿಂದು ಮತ್ತು ಅಂತಿಮ ಬಿಂದು ಇವೆರಡೂ X-Y ಅಕ್ಷದಲ್ಲಿ ಇದ್ದಲ್ಲಿ ಸಿ.ಎನ್.ಸಿ. ಮಶಿನ್ ಯೋಗ್ಯ ಮತ್ತು ಬೇಕಾಗಿರುವ ಆರ್ಕ್ ಮತ್ತು ವರ್ತುಲವನ್ನು ಕತ್ತರಿಸಬಲ್ಲದು. ಆದರೆ ಸಿ.ಎನ್.ಸಿ. ಮಿಲ್ ಬೆಡ್ ನಲ್ಲಿ 2D ಡೋಮ್ ನ ಆಕಾರದಲ್ಲಿ ಯಂತ್ರಣೆಯನ್ನು ಮಾಡುವುದಾದಲ್ಲಿ ಅದಕ್ಕೆ ಪ್ರಚಲಿತವಿರುವ ಸಾಮಾನ್ಯವಾದ ಸಿ.ಎನ್.ಸಿ. ಯಂತ್ರಣೆಯ ರೀತಿಯು ಸೂಕ್ತವಿರುವುದಿಲ್ಲ.
ಈ ವಿಧದ ಯಂತ್ರಣೆಯನ್ನು ನಿರ್ವಹಿಸಲು ಎರಡು ಪರ್ಯಾಯಗಳು ಉಪಲಬ್ಧವಿವೆ.
1. ಯಂತ್ರಭಾಗಗಳನ್ನು ಮಿಲ್ ನ ಬೆಡ್ ನಲ್ಲಿ ಫಿಟ್ ಮಾಡಿರಿ. ಸಾಮಾನ್ಯ X ಮತ್ತು Y ಅಕ್ಷಗಳಲ್ಲಿ ಡೋಮ್ ಯಂತ್ರಣೆಯನ್ನು ಮಾಡಬಹುದು.
2. G17 X-Y ಪ್ಲೇನ್ ನಿಂದ ಇನ್ನೊಂದು ಪ್ಲೇನ್ ಆಯ್ಕೆ ಮಾಡುವುದು, ಆರ್ಕ್ ನ ಯಂತ್ರಣೆಯನ್ನು ಯಾವ ದಿಕ್ಕಿನಲ್ಲಿ ಮಾಡಬೇಕಾಗಿದೆ, ಇದರಲ್ಲಿ ಅವಲಂಬಿಸಿರುತ್ತದೆ. (ಚಿತ್ರ ಕ್ರ. 1).
G17 – X ಮತ್ತು Y ಅಕ್ಷದ ಪ್ಲೇನ್
G18 – X ಮತ್ತು Z ಅಕ್ಷದ ಪ್ಲೇನ್
G19 – Y ಮತ್ತು Z ಅಕ್ಷದ ಪ್ಲೇನ್

2_1  H x W: 0 x 
 
ಫಾರ್ಮೆಟ್ 1
 
G17 G02/ G03 X-Y-I-J-F
G18 G02/G03 X-Z-I-K-F
G19 G02/G03 Y-Z-I-K-F
ಫಾರ್ಮೆಟ್ 1 ರಲ್ಲಿ ಆರ್ಕ್ ನಿರ್ಧರಿಸಲು ಮೊದಲು ಮಧ್ಯದ ಬಿಂದುವನ್ನು ನಿರ್ಧರಿಸಬೇಕು. ಅದಕ್ಕೋಸ್ಕರ I.J.K. ಯನ್ನು ಬಳಸಬೇಕು. ಮಧ್ಯಬಿಂದು ಪ್ರಸ್ತುತ ಪ್ಲೇನ್ ನಲ್ಲಿಯೇ ಆಯ್ಕೆ ಮಾಡಬೇಕಾಗುತ್ತದೆ.
I, J, K- X, Y, Z ನೊಂದಿಗೆ ಸಂಬಂಧಪಟ್ಟದ್ದಾಗಿದೆ. ಮಧ್ಯ ಬಿಂದುವಿನಿಂದ ಅಕ್ಷ ಮತ್ತು ಯಾವ ದೂರವನ್ನು ಆಯ್ಕೆ ಮಾಡಬೇಕು, ಎಂಬುದನ್ನು ನಿರ್ಧರಿಸಲಾಗುತ್ತದೆ. ಉದಾಹರಣೆ, (G17) X, Y ಪ್ಲೇನ್ ಗೋಸ್ಕರ I ಮತ್ತು J. ಇದರೊಂದಿಗೆ I, J, K ಅಬ್ಸಲ್ಯೂಟ್ ಅಥವಾ ಇನ್ ಕ್ರಿಮೆಂಟಲ್ (ಚಿತ್ರ ಕ್ರ. 2) ಈ ಎರಡರಲ್ಲಿ ಒಂದೇ ಮೋಡ್ ನಲ್ಲಿ ಆಯ್ಕೆ ಮಾಡಬಹುದುದು. ಇದಕ್ಕೋಸ್ಕರ ಸ್ವತಂತ್ರ G ಕೋಡ್ ಬಳಸಬೇಕಾಗುತ್ತದೆ.
G20
G21

3_1  H x W: 0 x 
ಫಾರ್ಮೆಟ್ 2
G17 G02/G03 X-Y-R-F
G18 G02/G03 X-Z-R-F
G19 G02/G03 Y-Z-R-F
ಈ ಫಾರ್ಮೆಟ್ ನಲ್ಲಿ R ನೇರವಾದ ಬಳಕೆಯು ಅಪೇಕ್ಷಿಸಿರುವ ತ್ರಿಜ್ಯದ ಆರ್ಕ್ ಗೋಸ್ಕರ ಮಾಡಲಾಗುತ್ತದೆ. ಆರ್ಕ್ ನ ಯಂತ್ರಣೆಯು ಕೇವಲ ಪ್ರಾರಂಭದ ಬಿಂದು, ಅಂತಿಮ ಬಿಂದು ಮತ್ತು ತ್ರಿಜ್ಯ ಇದರಿಂದ ಮಾಡಬೇಕಾಗುತ್ತದೆ. ಇದಕ್ಕೆ ಎರಡು ಪರ್ಯಾಯಗಳಿವೆ. (ಚಿತ್ರ ಕ್ರ. 3)
1. ಆರ್ಕ್ ಸ್ವೀಪ್ 180° ಗಿಂತ ಕಡಿಮೆ.
2. ಆರ್ಕ್ ಸ್ವೀಪ್ 180° ಗಿಂತ ಹೆಚ್ಚು.
ತ್ರಿಜ್ಯದ ಮೌಲ್ಯದ +Ve ಅಥವಾ -Ve ಚಿಹ್ನೆ ಯಾವ ಆರ್ಕ್ ನಲ್ಲಿ ಯಂತ್ರಣೆಯನ್ನು ಮಾಡಬೇಕು, ಎಂಬುದನ್ನು ನಿರ್ಧರಿಸುತ್ತದೆ.
ತ್ರಿಜ್ಯದ ಮೌಲ್ಯದ +Ve ಅಥವಾ -Ve ಗುರುತು ಯಾವ ಆರ್ಕ್ ನ ಯಂತ್ರಣೆಯನ್ನು ಮಾಡುವುದಿದೆ, ಎಂಬುದನ್ನು ನಿರ್ಧರಿಸುತ್ತದೆ.
R ನ +Ve ಮೌಲ್ಯ : ಆರ್ಕ್ ಸ್ವೀಪ್ 180° ಗಿಂತ ಕಡಿಮೆ.
R ನ +Ve ಮೌಲ್ಯ : ಆರ್ಕ್ ಸ್ವೀಪ್ 180° ಗಿಂತ ಹೆಚ್ಚು.
ಉದಾಹರಣೆ 1
(G17 ಕ್ಕೋಸ್ಕರ)

4_1  H x W: 0 x 
 
X-Y ಪ್ಲೇನ್ ನಲ್ಲಿ ಆರ್ಕ್ ಮಧ್ಯವಾಗಿದ್ದು (1.0, 0.0) ತ್ರಿಜ್ಯ 2.0’’ ಅಗಿದೆ. ಪ್ರಾರಂಭದ ಬಿಂದು (3.0, 0.0) ಇದ್ದು ಸ್ವೀಪ್ 90° CCW ಆಗಿದೆ. ಫೀಡ್ ರೇಟ್ 10 ಯುನಿಟ್/ ನಿಮಿಷವಾಗಿದೆ. ಇದಕ್ಕೋಸ್ಕರ ಆರ್ಕ್ ಯಂತ್ರಣೆಯನ್ನು ಮಾಡುವ ಪ್ರೊಗ್ರಾಮ್. ಈ ಉದಾಹರಣೆಗೋಸ್ಕರ ಪ್ರೊಗ್ರಾಮ್ ಎರಡು ರೀತಿಯಿಂದ ಬರೆಯಲಾಗುತ್ತದೆ. (ಕೋಷ್ಟಕ ಕ್ರ. 1).
ಉದಾಹರಣೆ 2
(G18 ಗೋಸ್ಕರ)
ಟರ್ನಿಂಗ್ ಮಶಿನ್ ನಲ್ಲಿ ಮಶಿನ್ ಪ್ರಾರಂಭಿಸಿದ ನಂತರ ತಕ್ಷಣವೇ ತನ್ನಷ್ಟಕ್ಕೆ G18 ಪ್ರಾರಂಭಗೊಳ್ಳುತ್ತದೆ. ಇದರಿಂದಾಗಿ ಬೇರೆ G18 ಕಮಾಂಡ್ ನೀಡಬೇಕಾಗುವುದಿಲ್ಲ. ಬೇಕಾಗಿರುವ ಪ್ರೊಗ್ರಾಮ್ ಮಾಡಿದಲ್ಲಿ ಕೆಲಸ ನಿರ್ವಹಿಸಬಹುದು.

5_1  H x W: 0 x 
 
ಚಿತ್ರ ಕ್ರ. 4 ರಲ್ಲಿ ಬಿಂದು P2 ರಿಂದ P3 ಮತ್ತು ಅದರ ನಂತರ P3 ರಿಂದ P4 ತನಕದ ಪ್ರೊಗ್ರಾಮ್ ನೀಡಲಾಗಿದೆ.
G02 X 25.0 Z-10.0 R5.0 F0.25
G03 X39.0 Z-17.0 R7.0
ಅಬ್ ಸಲ್ಯೂಟ್ ಮೋಡ್ (G90)
N1 G17 G21 G54 G95
N2 T01 M06 G43 M08
N3 S1000 M03 Z50
N4 G90 G00 X30 Y10
N5 G90 Z-22 F50
N6 G01 X50 Y10
N7 G01 X50 Y30
N8 G01 X70 Y30
N9 G01 X70 Y10
N10 G01 X90 Y10
N11 G03 X110 Y30 R20 F10
N12 G01 X110 Y90
N13 G03 X90 Y110 R20 F10
N14 G01 X30 Y110
N15 G03 X10 Y90 R20 F10
N16 G01 X10 Y30
N17 G03 X30 Y10 R20 F10
N18 G90 G00 Z50
N19 G90 G00 X110 Y110 F50
N20 M05
N21 M09
N22 M30
@@AUTHORINFO_V1@@