ಕ್ಲ್ಯಾಂಪಿಂಗ್ ನಲ್ಲಿ ಸ್ವಯಂಚಾಲನೆ

@@NEWS_SUBHEADLINE_BLOCK@@

Lohkarya - Udyam Prakashan    15-Mar-2021   
Total Views |
ಕ್ಲ್ಯಾಂಪಿಂಗ್ ನಲ್ಲಿ ಯಾವುದೇ ಕಾರಖಾನೆಯಲ್ಲಿ ಯಂತ್ರಣೆಯನ್ನು (ಮಶಿನಿಂಗ್) ಮಾಡುತ್ತಿರುವಾಗ, ನಾವು ಕಾರ್ಯವಸ್ತುವನ್ನು ಲೇಥ್ನ ಚಕ್ ನಲ್ಲಿ ಹಿಡಿಯುತ್ತೇವೆ ಅಥವಾ ಯಾವುದೇ ಮಶಿನ್ ನ ಟೇಬಲ್ ನಲ್ಲಿ ಫಿಕ್ಸ್ಚರ್ ಹಿಡಿಯುತ್ತೇವೆ. ಈ ಕಾರ್ಯವಸ್ತುವನ್ನು ದೃಢ ಅಥವಾ ಸಡಿಲಾಗಿಸುವ ಕ್ರಿಯೆಯನ್ನು ಮಾಡುತ್ತಿರುವಾಗ ಕೆಲಸಗಾರರಿಗೆ ಒತ್ತಡವು ಉಂಟಾಗುವ ಸಾಧ್ಯತೆಯು ಇರುತ್ತದೆ. ಇದರಿಂದಾಗಿ ಸಮಯವು ಹೆಚ್ಚು ವ್ಯರ್ಥವಾಗುತ್ತದೆ ಮತ್ತು ಹಿಡಿದಿಡುವ ಗುಣಮಟ್ಟವು ನಿರಂತರವಾಗಿ ಒಂದೇ ರೀತಿಯಲ್ಲಿ ನಿಲ್ಲುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಸ್ವಯಂಚಾಲನೆಯು ತುಂಬಾ ಅಗತ್ಯವಾಗಿದೆ.
ಸ್ವಯಂಚಾಲನೆಯ ಲಾಭಗಳು ಖರ್ಚಿನ ಕಡಿತ

1_1  H x W: 0 x 
ಮೊದಲಾಗಿ ನಟ್ ಅಥವಾ ಬೋಲ್ಟ್ ನಲ್ಲಿ ಸಹಾಯದಿಂದ ಕಾರ್ಯವಸ್ತುವನ್ನು ಬಿಗಿಯಾಗಿ ಹಿಡಿದಿಡಲಾಗುತ್ತದೆ. ಮಶಿನಿಂಗ್ ನ ಪ್ರಕ್ರಿಯೆ ಆದ ನಂತರ ನಟ್ ಅಥವಾ ಬೋಲ್ಟ್ ಸಡಿಲಾಗಿಸಿ ಕಾರ್ಯವಸ್ತುವಿನ ಹಿಡಿತವನ್ನು ಶಿಥಿಲವಾಗಿ ಮಾಡಲಾಗುತ್ತದೆ ಮತ್ತು ಅದನ್ನು ಫಿಕ್ಸ್ಚರ್ ನಿಂದ ತೆಗೆಯಲಾಗುತ್ತದೆ. ಒಂದು ನಟ್ ಅಥವಾ ಬೋಲ್ಟ್ ಬಿಗಿ ಮಾಡಲು ಮತ್ತು ನಂತರ ಅದನ್ನು ಸಡಿಲಿಸಲು ಸಾಮಾನ್ಯವಾಗಿ 20 ರಿಂದ 30 ಸೆಕಂಡುಗಳು ಬೇಕಾಗುತ್ತವೆ. ಅಂದರೆ ಯಾವುದೇ ಫಿಕ್ಸ್ಚರ್ ಗೆ ಒಂದು ವೇಳೆ 4 ನಟ್ ಅಥವಾ ಬೋಲ್ಟ್ ನಲ್ಲಿದ್ದಲ್ಲಿ, ಈ ಕೆಲಸಕ್ಕೆ ಅಂದಾಜು 2 ನಿಮಿಷಗಳು ಬೇಕಾಗಬಹುದು. ಈ 2 ನಿಮಿಷಗಳ ಕಾಲಾವಧಿಯಲ್ಲಿ ಮಶಿನ್ ಕೇವಲ ಐಡಲ್ ಆಗುತ್ತದೆ. ಇದರ ಪರಿಣಾಮದಿಂದ ಆ ಶಿಫ್ಟ್ ನಲ್ಲಿ ಉತ್ಪಾದನೆಯು ಕಡಿಮೆ ಆಗುತ್ತದೆ. ಸ್ವಯಂಚಾಲನೆಯಿಂದ ಇದರಲ್ಲಿ ತುಂಬಾ ಸಮಯದ ಉಳಿತಾಯವೂ ಆಗುತ್ತದೆ. ಮಶಿನ್ ಗೆ ಒಂದು ಗಂಟೆಗೆ ತಗಲುವ ಖರ್ಚಿನ ಕುರಿತು ವಿಚಾರ ಮಾಡಿದರೆ, ಈ ಉಳಿತಾಯವು ತುಂಬಾ ಮಹತ್ವದ್ದಾಗಿದೆ ಮತ್ತು ಲಾಭದಾಯಕವಾಗುತ್ತದೆ.
 
 
ಕೆಲಸಗಾರರಿಗೆ ಉಂಟಾಗುವ ಒತ್ತಡವು ಕಡಿಮೆ
ಮೇಲಿನ ಉದಾಹರಣೆಯನ್ನು ಗಮನಿಸಿದಂತೆ, ಒಂದು ಕಾರ್ಯವಸ್ತುವಿಗೆ 4 ನಟ್ ಅಥವಾ ಬೋಲ್ಟ್ ಇದ್ದಲ್ಲಿ ಮತ್ತು ಒಂದು ಶಿಫ್ಟ್ನಲ್ಲಿ 100 ಕಾರ್ಯವಸ್ತುಗಳ ಉತ್ಪಾದನೆಯು ಆಗುತ್ತಿದ್ದಲ್ಲಿ ಕೆಲಸಗಾರರಿಗೆ 400 ಸಲ ನಟ್ ಬಿಗಿ ಮತ್ತು ಸಡಿಲ ಮಾಡಬೇಕಾಗುತ್ತದೆ. ಇದರ ಪರಿಣಾಮದಿಂದಾಗಿ ಕೆಲಸಗಾರರಿಗೆ ಆಯಾಸ ಉಂಟಾಗಿ ಶಿಷ್ಟ್ ನ ಕೊನೆಯ ಹಂತದಲ್ಲಿ ಅವರಿಂದ ಕಾರ್ಯವಸ್ತುವು ಸರಿಯಾಗಿ ಬಿಗಿಮಾಡದೇ ಇರುವ ಸಾಧ್ಯತೆಯು ಇರುತ್ತದೆ. ಸ್ವಯಂಚಾಲನೆಯಿಂದ ಕೆಲಸಗಾರರಿಗೆ ಉಂಟಾಗುವ ಒತ್ತಡವು ಕಡಿಮೆ ಆಗುತ್ತದೆ ಮತ್ತು ಉತ್ಪಾದನೆಯೂ ಹೆಚ್ಚಾಗುತ್ತದೆ.
 
2_1  H x W: 0 x
 
ಕ್ಲ್ಯಾಂಪಿಂಗ್ ನ ಗುಣಮಟ್ಟದಲ್ಲಿ ಹೆಚ್ಚಳ
ಕೆಲಸಗಾರರಿಗೆ ಉಂಟಾಗುವ ಒತ್ತಡದಿಂದಾಗಿ ಕ್ಲ್ಯಾಂಪಿಂಗ್ ನ ಗುಣಮಟ್ಟದಲ್ಲಿ ವ್ಯತ್ಯಾಸವೂ ಉಂಟಾಗುತ್ತದೆ. ಹಲವಾರು ಸಲ ಕಾರ್ಯವಸ್ತುವು ನಿರ್ಧರಿಸಿರುವ ಬಲದಿಂದಲೇ ಬಿಗಿ ಮಾಡಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಹೆಚ್ಚು ಒತ್ತಡ ನೀಡಿದಲ್ಲಿ ಕಡಿಮೆ ದಪ್ಪದ ಕಾರ್ಯವಸ್ತುವು ತಾತ್ಕಾಲಿಕವಾಗಿ ಅಂಕು-ಡೊಂಕಾಗಿ, ಮಶಿನಿಂಗ್ ನಂತರ ಅದರ ಆಕಾರವು ಹಾಳಾಗುತ್ತದೆ. ಕಾರ್ಯವಸ್ತುವಿನ ಗುಣಮಟ್ಟದಲ್ಲಿ ತಕ್ಷಣ ಪರಿಣಾವು ಕಂಡುಬರುತ್ತದೆ. ವಿವಿಧ ಪ್ಯಾರಾಮೀಟರ್ ಗಳಲ್ಲಿ ಗುಣಮಟ್ಟದ ನಿರಂತರತೆಯು ಹಾಳಾಗುತ್ತದೆ ಮತ್ತು ಕಾರ್ಯವಸ್ತುವನ್ನು ಎಸೆಯಬೇಕಾಗುತ್ತದೆ. ಸ್ವಯಂಚಾಲನೆಯಿಂದ ಅಗತ್ಯವಿರುವಷ್ಟೇ ಒತ್ತಡ ಮತ್ತು ಬಿಗಿ ಮಾಡಲು ಬೇಕಾಗುವ ನಿರಂತರತೆಯೂ ನಿರ್ದೋಷವಾಗಿ ಲಭಿಸುತ್ತದೆ.
ಒಳ್ಳೆಯ ಫಿಕ್ಸ್ಚರ್ ನ ವಿಶೇಷವಾದ ಗುಣಗಳು
1. ಕೆಲಸಗಾರರಿಗೆ ಕಾರ್ಯವಸ್ತುವನ್ನು ಇಡುವುದು ಅಥವಾ ಬಿಗಿ ಮಾಡುವುದು ಸುಲಭವಾಗಬೇಕು.
2. ಕಾರ್ಯವಸ್ತು ಅಪೇಕ್ಷಿಸಿರುವ ಸ್ಥಳದಲ್ಲಿಯೇ ರೆಸ್ಟಿಂಗ್, ಲೊಕೇಶನ್ ಆಗಬೇಕು ಮತ್ತು ಅದರಲ್ಲಿ ನಿರಂತರತೆಯೂ ಇರಬೇಕು.
3. ಕಾರ್ಯವಸ್ತು ಸಾಕಷ್ಟು ತಾಕತ್ತಿನಿಂದ ಬಿಗಿ ಮಾಡಬೇಕು. ಇದರಿಂದಾಗಿ ಕಾರ್ಯವಸ್ತು ತನ್ನ ಜಾಗವನ್ನು ಸ್ವಲ್ಪವೂ ಬಿಡಬಾರದು ಅಥವಾ ಅಲುಗಾಡಬಾರದು.
4. ಕಾರ್ಯವಸ್ತು ಅದರ ನೈಸರ್ಗಿಕವಾದ ಅವಸ್ಥೆಯಲ್ಲಿ ಅಂದರೆ ಸ್ವಲ್ಪವೂ ಅಂಕು-ಡೊಂಕು ಆಗದೇ ಬಿಗಿಯಾಗಬೇಕು.
ಸ್ವಯಂಚಾಲನೆಯ ವಿಧಗಳು

3_1  H x W: 0 x 
1. ಹೆಚ್ಚು ಒತ್ತಡದ ಗಾಳಿಯನ್ನು ಬಳಸಿ (ನ್ಯುಮ್ಯಾಟಿಕ್ ಅಂದರೆ ಕಾಂಪ್ರೆಸ್ಡ್ ಎಯರ್ ಬಳಸಿ)
ಕಾರಖಾನೆಯಲ್ಲಿ ಅನೇಕ ಸಲ 4 ರಿಂದ 5 ಬಾರ್ (ಕಿ.ಗ್ರಾಂ./ ಸೆಂ.ಮೀ.2) ಒತ್ತಡವಿರುವ ಗಾಳಿಯು ಕಾಂಪ್ರೆಸರ್ ನ ಸಹಾಯದಿಂದ ಉಪಲಬ್ಧವಾಗುತ್ತದೆ. ಆ ಗಾಳಿಯು ಒಂದು ವೇಳೆ 50 ಮಿ.ಮೀ. ವ್ಯಾಸದ ಸಿಲಿಂಡರ್ ನಲ್ಲಿ ಬಳಸಿದಲ್ಲಿ 100 ಕಿ.ಗ್ರಾಂ.ನ ಒತ್ತಡವನ್ನು ಪಡೆಯಬಹುದು. ಕಡಿಮೆ ತಾಕತ್ತಿನಿಂದ ಕಾರ್ಯವಸ್ತುವನ್ನು ಬಿಗಿ ಮಾಡುವ ಅಗತ್ಯವು ಎಲ್ಲಿ ಇದೆಯೇ, ಅಲ್ಲಿ ಈ ವಿಧದ ಸ್ವಯಂಚಾಲನೆಯನ್ನು ಮಾಡಬೇಕು ಎಂಬುದನ್ನು ಸೂಚಿಸಲಾಗಿದೆ. ಉದಾಹರಣೆ, ಅಲ್ಯುಮಿನಿಯಮ್ ನ ಕಾರ್ಯವಸ್ತು ಅಥವಾ ಕಡಿಮೆ ದಪ್ಪದ ಕಾರ್ಯವಸ್ತು ಅಥವಾ ಚಿಕ್ಕ ಆಕಾರದ ಡ್ರಿಲಿಂಗ್ ನ ಕಾರ್ಯವಸ್ತು.
2. ಉಚ್ಚ ಒತ್ತಡದ ಆಯಿಲ್ ಬಳಸಿ
(ಹೈಡ್ರಾಲಿಕ್ ಪಾವರ್ ಪ್ಯಾಕ್)
ಭಾರತದಲ್ಲಿ ಹಲವೆಡೆ 40 ರಿಂದ 200 ಬಾಲ್ (ಕಿ.ಗ್ರಾಂ./ ಸೆಂ.ಮೀ.2) ಒತ್ತಡ ಇರುವ ಆಯಿಲ್ ಬಿಗಿ ಮಾಡಲು ಬಳಸಲಾಗುತ್ತದೆ. ಎಷ್ಟು ಹೆಚ್ಚು ಒತ್ತಡವೋ ಅಷ್ಟೇ ಸಿಲಿಂಡರ್ ಚಿಕ್ಕದಾಗುತ್ತದೆ. ಆದರೆ ಇದರಲ್ಲಿ ಆಯಿಲ್ ಬಿಸಿಯಾಗಿ ಆಯಿಲ್ ನ ಸೋರುವಿಕೆ ಆಗುವ ಸಾಧ್ಯತೆಯೂ ಇರುತ್ತದೆ. ಈ ರೀತಿಯಲ್ಲಿ ಆಯಿಲ್ ನ ಒತ್ತಡ ಪಿಸ್ಟನ್ ನ ಎರಡೂ ಬದಿಗಳಲ್ಲಿ ಉಪಯೋಗಿಸಬಹುದು. ಇದರಿಂದಾಗಿ ವೇಗವು ಹೆಚ್ಚಾಗಿ ಸಮಯದ ಉಳಿತಾಯವಾಗುತ್ತದೆ ಮತ್ತು ಹೊರಗಿನ ಕಲ್ಮಶ, ಕೂಲಂಟ್ ಸಿಲಿಂಡರ್ ನಲ್ಲಿ ಸೇರುವ ಸಾಧ್ಯತೆಯೂ ಇರುವುದಿಲ್ಲ. ಅದಕ್ಕೋಸ್ಕರವೇ ಈ ಸಿಲಿಂಡರ್ ಹೆಚ್ಚು ಕೂಲಂಟ್ ಇರುವ ಯಂತ್ರಗಳಲ್ಲಿ ಬಳಸಲಾಗುತ್ತದೆ, ಇದೇ ಇದರಲ್ಲಿರುವ ದೊಡ್ಡ ಲಾಭವಾಗಿದೆ. ಈ ವಿಧದ ಸ್ವಯಂಚಾಲನೆಯಲ್ಲಿ ಪಾವರ್ ಪ್ಯಾಕ್ನ ಪ್ರಾರಂಭಕ್ಕೆ ಬೇಕಾಗುವ ದೊಡ್ಡ ಬೆಲೆ ಮತ್ತು ಆಯಿಲ್ ಬಿಸಿಯಾಗುವ ಸಾಧ್ಯತೆ, ಈ ಎರಡು ಮಿತಿಗಳಿರುತ್ತವೆ, ಈ ಅಂಶವನ್ನೂ ಗಮನಿಸಬೇಕು.
3. ಹೆಚ್ಚು ಒತ್ತಡ ಇರುವ ಗಾಳಿ/ ಆಯಿಲ್ ಬಳಸುವುದು (ಹೈಡ್ರೋ-ನ್ಯುಮ್ಯಾಟಿಕ್)

4_1  H x W: 0 x 
 
ಈ ವಿಧದಲ್ಲಿ ಹೈಡ್ರೊ-ನ್ಯುಮ್ಯಾಟಿಕ್ ಇಂಟೆನ್ಸಿಫಯರ್ ಬಳಸಲಾಗುತ್ತದೆ. ಯಾವ ರೀತಿಯಲ್ಲಿ ಚಿಕ್ಕ ಕಲ್ಲಿನ ಆಧಾರಕ್ಕೆ ಹಾರೆಯನ್ನು ಬಳಸಿ ದೊಡ್ಡ ಕಲ್ಲುಗಳನ್ನು ಅಲುಗಾಡಿಸುತ್ತೇವೆಯೋ, ಹಾಗೆಯೇ ಹೈಡ್ರೊ- ನ್ಯುಮ್ಯಾಟಿಕ್ ಇಂಟೆನ್ಸಿಫಯರ್ ಗೆ ಆಯಿಲ್ ಸಮತೋಲನೆ ಎಂದು ಹೇಳಬಹುದು. ಇದರಲ್ಲಿ ಗಾಳಿಯ ಪ್ರವಾಹವು ಆಯಿಲ್ ನ ಪ್ರವಾಹಕ್ಕಿಂತ 30 ರಿಂದ 40 ಪಟ್ಟು ದೊಡ್ಡದಾಗಿರುತ್ತದೆ. ಇದರಿಂದಾಗಿ ಆಯಿಲ್ ನಲ್ಲಿ ಗಾಳಿಯ ಒತ್ತಡವು 30 ರಿಂದ 40 ಪಟ್ಟು ಇರುತ್ತದೆ. 5 ಬಾರ್ ಒತ್ತಡ ಇರುವ ಗಾಳಿಯನ್ನು ಬಳಸಿ 150 ರಿಂದ 200 ಬಾರ್ ಒತ್ತಡದ ಆಯಿಲ್ ಪಡೆಯಬಹುದು. ಹೆಚ್ಚಾಗಿರುವ ಆಯಿಲ್ ನ ಒತ್ತಡದಿಂದಾಗಿ ಸಿಲಿಂಡರ್ ಚಿಕ್ಕದಾಗುತ್ತದೆ. ಅದನ್ನು ಯಂತ್ರದ ಬದಿಯಲ್ಲಿ ಸ್ವಲ್ಪ ದೂರದಲ್ಲಿ ಇಡಬಹುದು ಮತ್ತು ಫಿಕ್ಸ್ಚರ್ ನಲ್ಲಿ ಜಾಗ ಕಡಿಮೆ ಇರುವಲ್ಲಿ ಸಣ್ಣ ಆಕಾರದ ಹೆಚ್ಚು ಸಾಮರ್ಥ್ಯ ಇರುವ ಸಿಲಿಂಡರ್ ಉಪಯೋಗಿಸಲಾಗುತ್ತದೆ. ಇದಕ್ಕೋಸ್ಕರ ಪವರ್ ಪ್ಯಾಕ್ ಬೇಕಾಗುವುದಿಲ್ಲ. ಈ ರೀತಿಯಲ್ಲಿ ಕಡಿಮೆ ಬೆಲೆ ಮತ್ತು ಆಯಿಲ್ ಬಿಸಿಯಾಗದಿರುವುದು, ಇಂತಹ ಎರಡು ರೀತಿಯ ಲಾಭಗಳು ಲಭಿಸುತ್ತವೆ. ಈ ವಿಧದಲ್ಲಿ ಸಿಲಿಂಡರ್ ನ ಒಂದು ಬದಿಯಲ್ಲಿ ಆಯಿಲ್ ಇರುತ್ತದೆ ಮತ್ತು ಇನ್ನೊಂದು ಬದಿಯಲ್ಲಿ ಹಿಂದಕ್ಕೆ ಬರುವುದಕ್ಕೋಸ್ಕರ ಒಂದು ಸ್ಪ್ರಿಂಗ್ ಅಳವಡಿಸಲಾಗಿರುತ್ತದೆ. ಸ್ಪ್ರಿಂಗ್ ನ ಬದಿಗಳಲ್ಲಿ ಗಾಳಿಯು ಒಳಗೆ ಮತ್ತು ಹೊರಗೆ ಚಲಿಸುತ್ತಿರುತ್ತದೆ. ಇದರೊಂದಿಗೆ ಸಿಲಿಂಡರ್ ನಲ್ಲಿ ಕೂಲಂಟ್ ಹೋಗುವ ಸಾಧ್ಯತೆಯೂ ಇರುತ್ತದೆ. ಅದಕ್ಕೋಸ್ಕರವೇ ಹೆಚ್ಚು ಕೂಲಂಟ್ ಉಪಯೋಗಿಸಲ್ಪಡುವಂತಹ ಯಂತ್ರದಲ್ಲಿ ಈ ರೀತಿಯನ್ನು ಉಪಯೋಗಿಸಲು ಮಿತಿಗಳಿರುತ್ತವೆ.
ಸ್ವಯಂಚಾಲನೆಯ ರೀತಿಯನ್ನು ಆಯ್ಕೆ ಮಾಡುವ ಪ್ಯಾರಾಮೀಟರ್ಸ್
1. ಒಂದೇ ಶಿಫ್ಟ್ ನಲ್ಲಾಗುವ ಉತ್ಪಾದನೆ ಅಥವಾ ಕಾರ್ಯವಸ್ತುವಿನ ಸೈಕಲ್ ಟೈಮ್
ಎ. ಒಂದೇ ಶಿಪ್ಟ್ ನಲ್ಲಿ ಕೇವಲ 10-20 ಕಾರ್ಯವಸ್ತುಗಳ ಉತ್ಪಾದನೆ ಆಗುತ್ತಿದ್ದಲ್ಲಿ ಸ್ವಯಂಚಾಲನೆಯನ್ನು ಮಾಡುವುದು ತುಂಬಾ ಅಗತ್ಯವಾಗಿದೆ.
ಬಿ. 50 ರಿಂದ 200 ಕಾರ್ಯವಸ್ತುಗಳ ಉತ್ಪಾದನೆಯನ್ನು ಒಂದೇ ಶಿಫ್ಟ್ನಲ್ಲಿ ಮಾಡುತ್ತಿದ್ದಲ್ಲಿ ಹೈಡ್ರೋ-ನ್ಯುಮ್ಯಾಟಿಕ್ ಹೆಚ್ಚು ಸುಲಭವಾಗಬಹುದು.
ಸಿ. ಅತ್ಯಂತ ಕಡಿಮೆ ಸಮಯದಲ್ಲಿ (ಒಂದು ಅಥವಾ ಎರಡು ನಿಮಿಷಗಳು) ಕಾರ್ಯವಸ್ತು ತಯಾರಾಗುತ್ತಿದ್ದಲ್ಲಿ ಹೈಡ್ರಾಲಿಕ್ ಅಥವಾ ನ್ಯುಮ್ಯಾಟಿಕ್ ರೀತಿಯನ್ನು ಬಳಸಬೇಕು.
2. ಆಗುತ್ತಿರುವ ಖರ್ಚು
ಎ. ಕೇವಲ ಗಾಳಿಯ ಒತ್ತಡವನ್ನು ಬಳಸಿ ಮಾಡಿರುವ (ನ್ಯುಮ್ಯಾಟಿಕ್) ಮಶಿನಿಂಗ್ನ ಬೆಲೆಯು ಎಲ್ಲಕ್ಕಿಂತಲೂ ಕಡಿಮೆ ಇರುತ್ತದೆ.
ಬಿ. ಉನ್ನತ ಒತ್ತಡವಿರುವ ಆಯಿಲ್ (ಹೈಡ್ರಾಲಿಕ್ ಪಾವರ್ಪ್ಯಾಕ್) ಬಳಸಿ ಮಾಡಲಾಗಿರುವ ಸ್ವಯಂಚಾಲನೆಯು ಎಲ್ಲಕ್ಕಿಂತಲೂ ದುಬಾರಿಯಾಗಿರುತ್ತದೆ.
ಸಿ. ಹೈಡ್ರೋ-ನ್ಯುಮ್ಯಾಟಿಕ್ ಇಂಟೆನ್ಸಿಫೈಯರ್ ಬಳಸಿ ಮಾಡಿರುವ ಸ್ವಯಂಚಾಲನೆಯ ಖರ್ಚು ಮೀಡಿಯಮ್ ಆಗಿರುತ್ತದೆ.
3. ಕ್ಲಾಂಪಿಂಗ್ ಫೋರ್ಸ್
ಎ. ಕೇವಲ ಗಾಳಿಯ ಒತ್ತಡ ಬಳಸುವ ಸಿಲಿಂಡರ್ (ನ್ಯುಮ್ಯಾಟಿಕ್) 200 ರಿಂದ 300 ಕಿ.ಗ್ರಾಂ. ಶಕ್ತಿಯಷ್ಟು ಬಳಸಬಹುದು.
ಬಿ. ಹೆಚ್ಚು ಶಕ್ತಿಗೆ ಸುಮಾರು 500 ಕಿ.ಗ್ರಾಂ. ಫೋರ್ಸ್ ತನಕದ ಪವರ್, ಉಚ್ಚ ಪವರ್ ನ ಆಯಿಲ್ ಅಥವಾ ಗಾಳಿ ಹಾಗೆಯೇ ಆಯಿಲ್ ಇಂಟೆನ್ಸಿಫೈಯರ್ ಬಳಸಬೇಕಾಗುತ್ತದೆ.
 
5_1  H x W: 0 x
 
4. ಸಿಲಿಂಡರ್ ಅಳವಡಿಸಲು
ಉಪಲಬ್ಧವಿರುವ ಜಾಗ
ಕೇವಲ ಗಾಳಿಯ ಒತ್ತಡ (ನ್ಯುಮ್ಯಾಟಿಕ್) ತುಂಬಾ ಕಡಿಮೆ (ಸಾಧಾರಣವಾಗಿ 5 ಬಾರ್) ಇರುವುದರಿಂದ ಸಿಲಿಂಡರ್ಗೆ ಹೆಚ್ಚು ಜಾಗವು ಬೇಕಾಗುತ್ತದೆ. ಆದರೆ ಇನ್ನಿತರ ಎರಡು ವಿಧಗಳಲ್ಲಿ ಹೆಚ್ಚು ಒತ್ತಡ (ಸಾಧಾರಣವಾಗಿ 150 ಬಾರ್) ಇರುವುದರಿಂದ ಜಾಗವು ಕಡಿಮೆ ಬೇಕಾಗುತ್ತದೆ.
5. ಸಿಲಿಂಡರ್ ಸ್ಟ್ರೋಕ್
ಹೈಡ್ರೋ-ನ್ಯುಮ್ಯಾಟಿಕ್ ಈ ವಿಧದಲ್ಲಿ ಸಿಲಿಂಡರ್ನ ಸ್ಟ್ರೋಕ್ 50 ಮಿ.ಮೀ.ಗಳಷ್ಟು ಇರುತ್ತದೆ. ಇನ್ನಿತರ ಎರಡು ವಿಧದಲ್ಲಿ ದೊಡ್ಡ ಸ್ಟ್ರೋಕ್ ಲಭಿಸುತ್ತದೆ.
6. ಸಿಲಿಂಡರ್ ನ ಶಕ್ತಿ

6_1  H x W: 0 x 
ಇದನ್ನು ಆಯ್ಕೆ ಮಾಡುವಾಗ ಹಳೆಯ ಫಿಕ್ಸ್ಚರ್ ಕುರಿತಾದ ಸಂದರ್ಭವನ್ನು ಪಡೆಯುವುದು ಯೋಗ್ಯವಾಗಿದೆ. ಇಲ್ಲಿ ಬಳಸಿರುವ ಸ್ಟಡ್ ಸೈಜ್ ನಿಂದ (ಕೋಷ್ಟಕ ಕ್ರ. 1) ನಮಗೆ ಬಲದ ಆವಶ್ಯಕತೆಯು ಕಂಡುಬರುತ್ತದೆ. ಉದಾಹರಣೆ,
7. ಸಿಲಿಂಡರ್ ನ ಆಯ್ಕೆ
ಎ. ಹೈಡ್ರೋ-ನ್ಯುಮ್ಯಾಟಿಕ್ ರೀತಿಯನ್ನು ಉಪಯೋಗಿಸಿದಲ್ಲಿ ಸ್ಪ್ರಿಂಗ್ನಿಂದ ಹಿಂದೆ ಬರುತ್ತಿರುವ (ಸಿಂಗಲ್ ಎಕ್ಟಿಂಗ್) ಸಿಲಿಂಡರ್ ಬಳಸಬೇಕಾಗುತ್ತದೆ.
ಬಿ. ಹೈಡ್ರೋಲಿಕ್ ಪಾವರ್ ಪ್ಯಾಕ್ ರೀತಿಯನ್ನು ಉಪಯೋಗಿಸಿದಲ್ಲಿ ಆಯಿಲ್ ನ ಸಹಾಯದಿಂದ ಹಿಂದೆ-ಮುಂದೆ ಸರಿಯುವ (ಡಬಲ್ ಎಕ್ಟಿಂಗ್) ಸಿಲಿಂಡರ್ ಉಪಯೋಗಿಸುವುದು ಸೂಕ್ತವಾಗಿದೆ.
ಸ್ವಯಂಚಾಲನೆಯ ಮಿತಿಗಳು
1. ಖಾತರಿ ಇರುವ ಕ್ಲ್ಯಾಂಪಿಂಗ್
ಕೇವಲ ಗಾಳಿಯ (ನ್ಯುಮ್ಯಾಟಿಕ್) ಮಶಿನಿಂಗ್ ನಲ್ಲಿ ಹಲವಾರು ಸಲ ಗಾಳಿಯು ಕಾಂಪ್ರೆಸ್ ಆಗುವಂತಹ ಗುಣಧರ್ಮಗಳಿಂದಾಗಿ ಅಕಸ್ಮಾತ್ತಾಗಿ ತುಂಬಾ ಬಲದಿಂದಾಗಿ ಕಾರ್ಯವಸ್ತು ಅಲುಗಾಡುವುದು ಸಾಧ್ಯವಿದೆ. ಇಂತಹ ಸಾಧ್ಯತೆಯು ಹೈಡ್ರಾಲಿಕ್ ನಲ್ಲಿ ಬಹಳಷ್ಟು ಕಡಿಮೆ ಇರುತ್ತದೆ. ಕಾರಣ ಆಯಿಲ್ ಗೆ ಒತ್ತಡ ನೀಡಲ್ಪಡುವುದಿಲ್ಲ. ಹೈಡ್ರೋ-ನ್ಯುಮ್ಯಾಟಿಕ್ ನಲ್ಲಿ ಈ ಸಾಧ್ಯತೆಯು ಎರಡೂ ತುದಿಗಳಲ್ಲಿರುತ್ತದೆ.
2. ಪ್ರಕ್ರಿಯೆಗಳ ಕ್ರಮ
ಕಾರ್ಯವಸ್ತುವು ಸರಿಯಾಗಿ ಅಳವಡಿಸಲು ಒಮ್ಮೊಮ್ಮೆ ಕ್ಲಾಂಪಿಂಗ್ ನ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಈ ಕ್ರಮವು ನಿರಂತರವಾಗಿ ಉಳಿಯಲು ಬೇರೆಯೇ ವಾಲ್ವ್ ಬಳಸಬೇಕಾಗುತ್ತದೆ. ಇಂತಹ ವಾಲ್ವ್ ಉಪಯೋಗಿಸುವುದು ಹೈಡ್ರೋ-ನ್ಯುಮ್ಯಾಟಿಕ್ ನಲ್ಲಿ ಸಾಧ್ಯವಿಲ್ಲ.

7_1  H x W: 0 x 
 
3. ಆಯಿಲ್ ಬಿಸಿಯಾಗುವ ಸಾಧ್ಯತೆ
ಈ ಅಡಚಣೆಯು ಕೇವಲ ಹೈಡ್ರಾಲಿಕ್ ರೀತಿಯಲ್ಲಿರುತ್ತದೆ. ನ್ಯುಮ್ಯಾಟಿಕ್ ಮತ್ತು ಹೈಡ್ರೋ-ನ್ಯುಮ್ಯಾಟಿಕ್ ನಲ್ಲಿ ಈ ಅಡಚಣೆಯು ಉಂಟಾಗುವುದಿಲ್ಲ. ಹೈಡ್ರಾಲಿಕ್ ನ ರೀತಿಯ ಉಪಯೋಗದಲ್ಲಿ (ಒತ್ತಡ ಮತ್ತು ನಿರಂತರತೆ) ಆಯಿಲ್ ಬಿಸಿ ಆಗುವ ಸ್ತರದಲ್ಲಿ ಬದಲಾವಣೆಯಾಗುತ್ತದೆ. ಒಂದು ವೇಳೆ ಅದು ಪ್ರಮಾಣಕ್ಕಿಂತ ಜಾಸ್ತಿ ಬಿಸಿಯಾಗುವ ಸಾಧ್ಯತೆಯು ಕಂಡುಬಂದಲ್ಲಿ ಅದನ್ನು ತಂಪುಗೊಳಿಸಲು ಸರ್ಕ್ಯುಟ್ನಲ್ಲಿ ಬೇರೆಯೇ ರಚನೆಯನ್ನು ಮಾಡಬೇಕಾಗುತ್ತದೆ.
4. ಪಿಸ್ಟನ್ ಹಿಂದೆ ಸರಿಯುವ ವೇಗ

8_1  H x W: 0 x 
ಯಂತ್ರಣೆಯು ಪೂರ್ಣವಾದ ನಂತರ ಪಿಸ್ಟನ್ ಹಿಂದೆ ಸರಿಯದಿದ್ದಲ್ಲಿ ಕಾರ್ಯವಸ್ತುವನ್ನು ಸಹಜವಾಗಿ ಫಿಕ್ಸ್ಟರ್ ನಿಂದ ಹೊರಗೆ ತೆಗೆಯುವುದು ಸಾಧ್ಯವಿಲ್ಲ. ಹೈಡ್ರೋ- ನ್ಯುಮ್ಯಾಟಿಕ್ ರೀತಿಯ ರಚನೆಯಲ್ಲಿ ಪಿಸ್ಟನ್ ಆಯಿಲ್ ಮತ್ತು ಸ್ಪ್ರಿಂಗ್ ಗಳಿಂದಾಗಿ ಹಿಂದೆ ಸರಿಯುತ್ತದೆ. ಸಾಕಷ್ಟು ಮುತುವರ್ಜಿ ವಹಿಸದಿದ್ದಲ್ಲಿ ಪಿಸ್ಟನ್ ಹಿಂದೆ ಹೋಗುವ ವೇಗವೂ ತುಂಬಾ ಕಡಿಮೆ ಆಗುತ್ತದೆ.
 
ಲಘು ಉದ್ಯಮಗಳಲ್ಲಿ ಸಾಮಾನ್ಯವಾಗಿ ಗಾಳಿ ಅಥವಾ ಆಯಿಲ್ ಬಳಸಿ ಮಾಡಿರುವ ಸ್ವಯಂಚಾಲನೆಯು (ಹೈಡ್ರೋ-ನ್ಯುಮ್ಯಾಟಿಕ್) ಹೆಚ್ಚು ಉಪಯುಕ್ತ ಮತ್ತು ಲಾಭಕಾರಿಯಾಗುತ್ತದೆ, ಎಂಬುದರ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

9_1  H x W: 0 x
 
ಗಾಳಿ-ಆಯಿಲ್ ನ ಇಂಟೆನ್ಸಿಫಯರ್
ಮಿಲ್ಲಿಂಗ್, ಡ್ರಿಲ್ಲಿಂಗ್, ಬೋರಿಂಗ್ ಇಂತಹ ಪಾರಂಪಾರಿಕ ಮಶಿನ್ ಗಳಲ್ಲಿ ಕತ್ತರಿಸುವ ಟೂಲ್ ಗಳು ಯಾವಾಗಲೂ ಅಕ್ಷದ ಸುತ್ತಮುತ್ತ ತಿರುಗುತ್ತಿರುತ್ತವೆ ಮತ್ತು ಕಾರ್ಯವಸ್ತು ಸ್ಥಿರವಾಗಿರುತ್ತದೆ. ಇಂತಹ ಮಶಿನ್ ನಲ್ಲಿ ಹೈಡ್ರಾಲಿಕ್ ಪಾವರ್ ಪ್ಯಾಕ್ ಇರುವುದಿಲ್ಲ. ಇದರಿಂದಾಗಿ ಇಂತಹ ಇಂಟೆನ್ಸಿಫಯರ್ ಬಳಸುವುದು ತುಂಬಾ ಕಡಿಮೆ ಖರ್ಚಿದ್ದಾಗಿರುತ್ತದೆ. ಈ ಇಂಟೆನ್ಸಿಫಯರ್ ನಲ್ಲಿ ಗಾಳಿಯ ಪಿಸ್ಟನ್, ಆಯಿಲ್ ನ ಪಿಸ್ಟನ್ 30 ರಿಂದ 40 ಪಟ್ಟು ದೊಡ್ಡದಾಗಿರುತ್ತದೆ. ಇದರಿಂದಾಗಿ ಆಯಿಲ್ ನ ಒತ್ತಡವು ಆ ಪ್ರಮಾಣದಲ್ಲಿಯೇ ಹೆಚ್ಚಾಗಿರುತ್ತದೆ.

10_1  H x W: 0  
 
ಗಾಳಿಯ ಒತ್ತಡದಿಂದಾಗಿ ಗಾಳಿಯ ಪಿಸ್ಟನ್ ಮುಂದೆ ತಳ್ಳಲ್ಪಡುತ್ತದೆ. ಇದರಿಂದಾಗಿ ಆಯಿಲ್ ನ ಪಿಸ್ಟನ್ ಆಯಿಲ್ ಹೊರಗೆ ತಳ್ಳುತ್ತದೆ. ಈ ಆಯಿಲ್ ಸಿಲಿಂಡರ್ನ ಪಿಸ್ಟನ್ ಮುಂದೆ ತಳ್ಳುತ್ತದೆ ಮತ್ತು ಕಾರ್ಯವಸ್ತು ದೃಢವಾಗಿ ಬಿಗಿ ಮಾಡಲ್ಪಡುತ್ತದೆ. ಇಂಟೆನ್ಸಿಫಯರ್ ನ ಆಯಿಲ್ ಹೊರಗೆ ತಳ್ಳುವ ಸಾಮರ್ಥ್ಯವು ಸಿಲಿಂಡರ್ನ ಆಯಿಲ್ ಪಡೆಯುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿರಬೇಕು, ಎಂಬುದನ್ನು ನಿರೀಕ್ಷಿಸಲಾಗಿದೆ.
ಗಾಳಿಯ ಒತ್ತಡವನ್ನು ತೆಗೆದಲ್ಲಿ ಸಿಲಿಂಡರ್ ನಲ್ಲಿರುವ ಸ್ಪ್ರಿಂಗ್ ನಿಂದಾಗಿ ಮತ್ತು ಇಂಟೆನ್ಸಿಫಯರ್ ನಲ್ಲಿರುವ ಸ್ಪ್ರಿಂಗ್ ನಿಂದಾಗಿ ಎರಡೂ ಪಿಸ್ಟನ್ ಗಳು ಹಿಂದಕ್ಕೆ ತಳ್ಳಲ್ಪಡುತ್ತವೆ ಮತ್ತು ಮುಂದೆ ಸಿಲಿಂಡರ್ ನಲ್ಲಿ ತುಂಬಿರುವ ಆಯಿಲ್ ಮತ್ತೆ ಇಂಟೆನ್ಸಿಫಯರ್ ನ ಕಡೆಗೆ ತಳ್ಳಲ್ಪಡುತ್ತದೆ.
ಮೇಲಿನ ಕೆಲಸವು ಸರಿಯಾಗಿ ಮುಂದುವರಿಯಲು ಆಯಿಲ್ ನ ಬದಿಯಲ್ಲಿ ಸ್ವಲ್ಪವೂ ಗಾಳಿ ಇರಬಾರದು. ಕಾರಣ ಗಾಳಿ ಇದು ಕಾಂಪ್ರೆಸೆಬಲ್ ದ್ರವವಾಗಿರುವುದರಿಂದ ಇಂಟೆನ್ಸಿಫಯರ್ ಸರಿಯಾಗಿ ಆಗುವುದಿಲ್ಲ.
ಸ್ವಲ್ಪ ಸಮಯದ ನಂತರ ಸಿಲಿಂಡರ್ ನಿಂದ ಆಯಿಲ್ ನ ಸೋರುವಿಕೆಯು ಆರಂಭವಾದಲ್ಲಿ ಅಲ್ಲಿಂದ ಗಾಳಿ ಒಳಗೆ ಎಳೆಯಲ್ಪಡುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಸೋರಿರುವಷ್ಟು ಆಯಿಲ್ ತುಂಬಲು ಬಾಟಲಿಯನ್ನು ಅಳವಡಿಸಲಾಗಿದೆ.
ಆಯಿಲ್ ತುಂಬಿಸಲು ಬಾಟ್ಲಿಯಲ್ಲಿರುವ ಆಯಿಲ್ ನ ಮಟ್ಟವು ಒಳಗಿನ ಆಯಿಲ್ ನ ಮಟ್ಟದಿಂದ ಈ ಕೆಳಗಿನ ಅಂಶಗಳನ್ನು ತೋರಿಸುತ್ತದೆ.
1. ಆಯಿಲ್ ನ ಮಟ್ಟವು ನಿರಂತರವಾಗಿ ಕಡಿಮೆ ಆಗುವುದು. ಸಿಲಿಂಡರ್ ನಲ್ಲಿ ಹೆಚ್ಚು ಒತ್ತಡದ ಜಾಗದಲ್ಲಿ ಎಲ್ಲಾದರೂ ಆಯಿಲ್ ಸೋರುತ್ತಿದೆ, ಎಂಬುದೇ ಇದರ ಅರ್ಥವಾಗಿದೆ.
2. ಕಾರ್ಯವಸ್ತುವಿಗೆ ಕ್ಲ್ಯಾಂಪಿಂಗ್ ಮಾಡಿದ ನಂತರ ಆಯಿಲ್ ನ ಮಟ್ಟವು ಹೆಚ್ಚಾಗುವುದು. ಒಳಗಿನ ಹೆಚ್ಚು ಒತ್ತಡದ ಸೀಲ್ ಸರಿಯಾಗಿ ಕೆಲಸವನ್ನು ನಿರ್ವಹಿಸುವುದಿಲ್ಲ ಮತ್ತು ಅಲ್ಲಿಂದಲೇ ಬಾಟ್ಲಿಯೊಳಗೆ ಆಯಿಲ್ ಸೇರುತ್ತಿದೆ, ಎಂಬುದೇ ಇದರ ಎರಡನೇ ಅರ್ಥ.

11_1  H x W: 0  
 
3. ಆಯಿಲ್ ನ ಮಟ್ಟವು ಮೇಲೆ - ಕೆಳಗೆ ಆಗುತ್ತಿರುವುದು. ಆಯಿಲ್ ನ ಪಕ್ಕದಲ್ಲಿ ಗಾಳಿ ಇರುವಾಗ ಗಾಳಿಯು ಸಂಕುಚಿತ ಅಥವಾ ಹರಡುವುದರಿಂದ ಬಾಟ್ಲಿಯಲ್ಲಿರುವ ಆಯಿಲ್ ನ ಮಟ್ಟವು ಮೇಲೆ-ಕೆಳಗೆ ಆಗುತ್ತಿರುತ್ತದೆ.
ಹೈಡ್ರೋ-ನ್ಯುಮ್ಯಾಟಿಕ್ ಸಿಲಿಂಡರ್ ನ
ವಿವಿಧ ಪ್ರಕಾರಗಳು
ಎ. ಪುಶ್ ಟೈಪ್ : ಹೊರಗೆ ಬರುತ್ತಿರುವ ಪಿಸ್ಟನ್ ನ ಪ್ರಭಾವದಿಂದಾಗಿ (ಪುಶ್ ಟೈಪ್) ಕಾರ್ಯವಸ್ತುವು ಬಿಗಿಯಾಗುತ್ತದೆ. ಈ ಸಿಲಿಂಡರ್ ಹಳೆಯ ಫಿಕ್ಸ್ಚರ್ ನಲ್ಲಿ ಉಪಲಬ್ಧವಿರುವ ಜಾಗದಲ್ಲಿ ಅಳವಡಿಸುವುದು ತುಂಬಾ ತೊಂದರೆಯನ್ನುಂಟು ಮಾಡುತ್ತದೆ. ಆದರೆ ಹೊಸ ಪಿಕ್ಸ್ಚರ್ ನ ಡಿಸೈನ್ ಮಾಡುವಾಗ ಈ ಸಿಲಿಂಡರ್ ಬಳಸುವುದೇ ಸೂಕ್ತವಾಗಿದೆ.
ಬಿ. ಪುಲ್ ಟೈಪ್ : ಒಳಗೆ ಎಳೆಯಲ್ಪಡುವ ಪಿಸ್ಟನ್ ನ ಪ್ರಭಾವದಿಂದಾಗಿ (ಪುಲ್ ಟೈಪ್) ಕಾರ್ಯವಸ್ತುವನ್ನು ಬಿಗಿ ಮಾಡಬಹುದು. ಹಲವಾರು ಸಲ ಕಾರ್ಯವಸ್ತುವಿನಲ್ಲಿರುವ ಟೊಳ್ಳಾದ ಜಾಗದಿಂದ ಅಥವಾ ರಂಧ್ರದಿಂದ ಕಾರ್ಯವಸ್ತುವನ್ನು ಬಿಗಿ ಮಾಡಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ‘C’ ಆಕಾರದ ವಾಶರ್ ಈ ಸಿಲಿಂಡರ್ ನ ಜೊತೆಗೆ ಬಳಸಿ ಸ್ವಯಂಚಾಲನೆಯನ್ನು ಮಾಡಬೇಕಾಗುತ್ತದೆ.
ಸಿ. ಹಾಲೋ (ರಂಧ್ರಗಳಿರುವ) ಪಿಸ್ಟನ್ : ಈ ವಿಧದಲ್ಲಿ ಟೊಳ್ಳಾಗಿರುವ ಪಿಸ್ಟನ್ ನಿಂದ ಬಿಗಿ ಮಾಡುವಂತಹ ಸ್ಟಡ್ ಅಥವಾ ಬೋಲ್ಟ್ ಆರುಪಾರಾಗಿ ಅಳವಡಿಸಿ ಬಳಸಬಹುದು. ಇದರಲ್ಲಿ ಹೊರಗೆ ಬರುವಂತಹ ಪಿಸ್ಟನ್ನ ಪ್ರಭಾವದಿಂದ (ಪುಶ್ ಟೈಪ್) ಕಾರ್ಯವಸ್ತುವನ್ನು ಬಿಗಿ ಮಾಡಲಾಗುತ್ತದೆ. ಕೈಯಿಂದ ಬಿಗಿ ಮಾಡುವಂತಹ ಫಿಕ್ಸ್ಚರ್ನ ಸ್ವಯಂಚಾಲನೆಯನ್ನು ಮಾಡುತ್ತಿರುವಾಗ ಈ ಸಿಲಿಂಡರ್ ಬಳಸುವುದು ತುಂಬಾ ಸುಲಭವಾಗುತ್ತದೆ. ಸ್ಟಡ್ ನಉದ್ದವನ್ನು ಹೆಚ್ಚಿಸಿ ಈ ಸಿಲಿಂಡರ್ ಅಳವಡಿಸಿದಲ್ಲಿ ಸ್ವಯಂಚಾಲನೆಯಾಗುತ್ತದೆ.
ಡಿ. ಸ್ವಿಂಗ್ ಟೈಪ್ : ಒಳಗೆ ಎಳೆಯಲ್ಪಡುವಾಗ ಮೊದಲಾಗಿ ಅಕ್ಷದ ಸುತ್ತಮುತ್ತ ತಿರುಗುವ ಮತ್ತು ನಂತರ ನೇರವಾದ ರೇಖೆಯಲ್ಲಿ ಒಳಗೆ ಎಳೆಯಲ್ಪಡುವ ಸಿಲಿಂಡರ್ (ಸ್ವಿಂಗ್ ಟೈಪ್) ಯಾವ ಜಾಗದಲ್ಲಿ ಕಾರ್ಯವಸ್ತುವನ್ನು ತೆಗೆಯುವಾಗ ಮತ್ತು ಅಳವಡಿಸುವಾಗ ಬಿಗಿ ಮಾಡುವಂತಹ ಪಟ್ಟಿಗಳಿಂದಾಗಿ (ಕ್ಲಾಂಪಿಂಗ್ ಸ್ಟ್ರಾಪ್) ಅಡಚಣೆಯು ಉಂಟಾಗುವಂತಹ ಜಾಗದಲ್ಲಿ ಈ ಸಿಲಿಂಡರ್ ಬಳಸುವುದು ಸೂಕ್ತವಾಗಿರುತ್ತದೆ.
 
@@AUTHORINFO_V1@@