ಇಂಡಸ್ಟ್ರಿ 4.0 ಗೆ ಸಿದ್ಧರಾಗುವಾಗ (ಭಾಗ 1)

@@NEWS_SUBHEADLINE_BLOCK@@

Lohkarya - Udyam Prakashan    12-Mar-2021   
Total Views |
ಈ ಲೇಖಮಾಲೆಯಲ್ಲಿ ನಾವು ಇಂಡಸ್ಟ್ರೀ 4.0 ಮತ್ತು IoT ಈ ಕುರಿತಾದ ವಿವರಗಳನ್ನು ತಿಳಿದುಕೊಳ್ಳಲು ಪ್ರಾರಂಭಿಸಿದ್ದೇವೆ. ನವಂಬರ್ 2020 ರ ಸಂಚಿಕೆಯಲ್ಲಿ 4.0 ಮತ್ತು ಅದರ ತಾಂತ್ರಿಕ ಅಂಶಗಳನ್ನು ಮತ್ತು ಅದರಲ್ಲಿರುವ ಪ್ರಮುಖ ವಿಷಯವಾಗಿರುವ IoT ಇವುಗಳ ಪರಿಚಯವನ್ನು ಮಾಡಿಕೊಳ್ಳುವಾಗ IoT ಯ ಗುಣಮಟ್ಟದ ತಪಾಸಣೆಯಲ್ಲಿ ಆಗುವ ಬಳಕೆಯನ್ನು ಉದಾಹರಣೆಯೊಂದಿಗೆ ತಿಳಿದುಕೊಂಡಿದ್ದೇವೆ. ಈ ಲೇಖನದಲ್ಲಿ ಪ್ರಮುಖವಾಗಿ ನಾವು ಇಂಡಸ್ಟ್ರಿ 4.0 ಗೋಸ್ಕರ ತಾವು ಅಪೇಕ್ಷಿಸಿದಂತೆ ಯಾವ ಯಾವ ಸಿದ್ಧತೆ ಅಥವಾ ಪೂರ್ವಸಿದ್ಧತೆಯ ಮಾಪನವನ್ನು ಹೇಗೆ ಮಾಡಬೇಕು ಎಂಬುದರ ಕುರಿತು ತಿಳಿದುಕೊಳ್ಳಲಿದ್ದೇವೆ.

ಇಂಡಸ್ಟ್ರೀ 4.0 ಗೋಸ್ಕರ ಸಿದ್ಧರಾಗಲು ಮೌಲ್ಯಮಾಪನ
1. ಮೌಲ್ಯಮಾಪನದಲ್ಲಿರುವ ಹಿನ್ನೆಲೆ
ಇಂಡಸ್ಟ್ರೀ 4.0 ಇದು ಯಾಂತ್ರಿಕ ಮತ್ತು ಪೂರಕ ಉದ್ಯಮಗಳಲ್ಲಿ ಎಲ್ಲೆಡೆಯಲ್ಲಿಯೂ ಆಮೂಲಾಗ್ರವಾಗಿ ಬದಲಾವಣೆಗಳನ್ನು ಮಾಡುವಂತಹದ್ದಾಗಿದೆ. ಇದರಲ್ಲಿ ಕೇವಲ ಅತ್ಯಾಧುನಿಕ ತಂತ್ರದ ಬಳಕೆಯನ್ನು ಮಾಡಿ ಉತ್ಪಾದನೆಯ ಪ್ರಕ್ರಿಯೆಯನ್ನು ಸುಧಾರಿಸುವುದನ್ನು ಅಪೇಕ್ಷಿಸಲಾಗಿಲ್ಲ. ಇದರ ಹೊರತಾಗಿ ಜೀವನದ ಎಲ್ಲ ಹಂತಗಳಲ್ಲಿ (ಲೈಫ್ ಸೈಕಲ್, ಅಂದರೆ ಯಾವುದೇ ರೀತಿಯ ಕಲ್ಪನೆಗಳಿಂದ ವಸ್ತುವಿನ ಉತ್ಪಾದನೆ, ಸರಬರಾಜು, ಗ್ರಾಹಕರಿಂದ ಆಗುತ್ತಿರುವ ಬಳಕೆ ಮತ್ತು ಕೊನೆಯಲ್ಲಿ ಸೂಕ್ತವಾಗಿ ಅಂತಿಮ ಕೆಲಸ ಇಂತಹ ಎಲ್ಲ ಹಂತಗಳಲ್ಲಿ) ವಿವಿಧ ಅತ್ಯಾಧುನಿಕ ತಂತ್ರಗಳು ಮತ್ತು ವಿಶೇಷವಾಗಿ ಮಾಹಿತಿ ಮತ್ತು ತಂತ್ರಜ್ಞಾನವನ್ನು ಬಳಸಿ ಉದ್ಯಮಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಘಟಕದ ಸರ್ವಾಂಗೀಣ ಬದಲಾವಣೆಯನ್ನು ಮಾಡುವುದನ್ನು ಅಪೇಕ್ಷಿಸಲಾಗಿದೆ. ಇಂಡಸ್ಟ್ರೀ 4.0 ಗೆ ಅನುಸಾರವಾಗಿ ಸಂಪೂರ್ಣವಾಗಿ ಅಭಿವೃದ್ಧಿ ಮಾಡಿರುವ ಯಾವುದೇ ಇಂಜಿನಿಯರಿಂಗ್ ಉದ್ಯಮದ ಒಟ್ಟು ಕಾರ್ಯಸಾಮರ್ಥ್ಯದಲ್ಲಿ ಅಂದಾಜು ಶೇಕಡಾ 30 ರಿಂದ 40 ರಷ್ಟು ಹೆಚ್ಚಳವು ಕಂಡುಬರುತ್ತಿದೆ. ಆದರೆ ಅದರ ಉತ್ಪಾದನೆಯ ಖರ್ಚಿನಲ್ಲಿ ಅಂದಾಜು ಶೇಕಡಾ 25 ರಷ್ಟು ಉಳಿತಾಯವಾಗಬಹುದು. ಇದರಿಂದ ಆ ಉದ್ಯಮದ ವಹಿವಾಟಿನಲ್ಲಿ ಶೇಕಡಾ 30 ರಷ್ಟು ಹೆಚ್ಚಳವು ಕಂಡುಬರಬಲ್ಲದು, ಎಂಬ ವಿಶ್ವಾಸವಿದೆ. 2011 ರಲ್ಲಿ ಜರ್ಮನಿಯಲ್ಲಿ ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಕಲ್ಪನೆ ಮತ್ತು ಕಾರ್ಯತಂತ್ರವನ್ನು (ಎಕ್ಷನ್ ಪ್ಲೇನ್) ಪ್ರಸ್ತುತ ಪಡಿಸಲಾಯಿತು. ಆದರೂ ಕೂಡಾ ಜರ್ಮನಿಯಲ್ಲಿರುವ ಹೆಚ್ಚಿನ ಲಘು, ಮಧ್ಯಮ ಮತ್ತು ಬೃಹತ್ ಉದ್ಯಮಗಳಲ್ಲಿ ಈ ಕಲ್ಪನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಗೊಂದಲ, ಅನುಮಾನ ಮತ್ತು ಹೆದರಿಕೆಯೂ ಇತ್ತು. ನಾಲ್ಕನೇ ಕ್ರಾಂತಿಯ ನಿಟ್ಟಿನಲ್ಲಿ ಸಾಗುತ್ತಿರುವ ಪ್ರವಾಸದಲ್ಲಿ ನಾವು ಖಂಡಿತವಾಗಿಯೂ ಜಗತ್ತಿನೆಲ್ಲೆಡೆ ಇರುವ ಇನ್ನಿತರ ಉದ್ಯಮಗಳು, ವಿಶೇಷವಾಗಿ ಸ್ಪರ್ಧಕರು ಎಷ್ಟು ಪ್ರಮಾಣದಲ್ಲಿ ಮುಂದೆ ಅಥವಾ ಹಿಂದೆ ಇದ್ದಾರೆ, ಎಂಬ ಮಹತ್ವದ ಪ್ರಶ್ನೆಯು ಸಹಜವಾಗಿಯೇ ಎಲ್ಲರೆದುರೂ ಇತ್ತು. ಈ ರೀತಿಯ ಸುಧಾರಣೆಗಳ ಪ್ರವಾಸದಲ್ಲಿ ಯಾರು ಎಷ್ಟು ಪ್ರಮಾಣದಲ್ಲಿ ಸಿದ್ಧತೆಯನ್ನು ಹೊಂದಿದ್ದಾರೆ, ಎಂಬುದು ಸ್ಪಷ್ಟವಾಗಿ ಗಮನಕ್ಕೆ ಬರುತ್ತಿರಲಿಲ್ಲ.
ಸಮೀಕ್ಷೆ
ಇದಕ್ಕೋಸ್ಕರ VDMA (ಜರ್ಮನಿಯಲ್ಲಿರುವ ಇಂಜಿನಿಯರಿಂಗ್ ಮತ್ತು ಉತ್ಪಾದನೆಯ ಉದ್ಯಮಗಳ ಸಂಘಟನೆ) ಈ ಸಂಸ್ಥೆಯು 2015 ರಲ್ಲಿ ಜರ್ಮನಿಯ ಆಖೇನ್ ವಿಶ್ವವಿದ್ಯಾಲಯದಲ್ಲಿ ಇನ್ ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಮ್ಯಾನೆಜ್ ಮೆಂಟ್ ಮತ್ತು ಕೊಲೋನ್ ನಲ್ಲಿರುವ ಇನ್ ಸ್ಟಿಟ್ಯೂಟ್ ಆಫ್ ಇಕಾನಾಮಿಕ್ ರಿಸರ್ಚ್ ಇವರ ಸಹಭಾಗಿತ್ವದಲ್ಲಿ ಒಂದು ವಿವರವಾದ ಸಮೀಕ್ಷೆಯನ್ನು ಮಾಡಿಲಾಯಿತು. ಈ ಸಮೀಕ್ಷೆಯಿಂದ ಜರ್ಮನಿಯಲ್ಲಿ ಅಂದಾಜು 600 ಲಘು, ಮಧ್ಯಮ ಮತ್ತು ದೊಡ್ಡ ಕೈಗಾರಿಕೋದ್ಯಮಿಗಳಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಕ್ರಿಯೆಯನ್ನು ಪಡೆಯಲಾಯಿತು. ಇದರಲ್ಲಿ ಕೇವಲ 20 ರಷ್ಟು ಸಿಬ್ಬಂದ್ಧಿಗಳಿರುವ ನಟ್, ಬೋಲ್ಟ್ ನಂತಹ ಬಿಡಿ ಭಾಗಗಳನ್ನು ತಯಾರಿಸುವ ಲಘು ಉದ್ಯಮಗಳಿಂದ ಸಾವಿರಾರು ಕೆಲಸಗಾರರಿರುವ ಮತ್ತು ವಿವಿಧ ಕಡೆಗಳಲ್ಲಿ ಉತ್ಪಾದನೆಯ ಶಾಖೆಗಳಿರುವ ಮಶಿನ್ ಉತ್ಪಾದಕರೊಂದಿಗೆ ಎಲ್ಲರೂ ಸಹಭಾಗಿಗಳಾಗಿದ್ದರು. ಈ ಸಮೀಕ್ಷೆಯಿಂದ ಆಕ್ಟೋಬರ್ 2015 ನ ಅಂದಾಜಿಗೆ ಒಂದು ಸುದೀರ್ಘವಾದ ವರದಿಯನ್ನು ಪ್ರಕಟಿಸಲಾಯಿತು. ಆ ವರದಿಯ ಅಭ್ಯಾಸವನ್ನು ಮಾಡುವುದು ನಮಗೋಸ್ಕರ ಖಂಡಿತವಾಗಿಯೂ ಹುಮ್ಮಸ್ಸನ್ನು ಉಂಟುಮಾಡುತ್ತದೆ. ಈ ಸಮೀಕ್ಷೆಯಲ್ಲಿ ಪ್ರತಿಯೊಂದು ಉದ್ಯಮಗಳನ್ನು ಈ ಮುಂದಿನ ಆರು ನಿಯತಾಂಕಗಳನ್ನು ಆವಲಂಬಿಸಿ ಮೌಲ್ಯಮಾಪನವನ್ನು ಮಾಡಲಾಗಿದೆ.
• ಕಾರ್ಖಾನೆಗಳಲ್ಲಿರುವ ಆಧುನಿಕತೆ (ಸ್ಮಾರ್ಟ್ ಫ್ಯಾಕ್ಟರಿ)
• ಪ್ರಕ್ರಿಯೆಯಲ್ಲಿರುವ ಆಧುನಿಕತೆ (ಸ್ಮಾರ್ಟ್ ಆಪರೇಶನ್)
• ಉತ್ಪಾದಿಸಿರುವ ವಸ್ತುಗಳಲ್ಲಿರುವ ಆಧುನಿಕತೆ (ಸ್ಮಾರ್ಟ್ ಪ್ರೊಡಕ್ಟ್)
• ನೀತಿ ಮತ್ತು ಸಂಘಟನೆ (ಸ್ಟ್ರ್ಯಾಟಿಜಿ ಮತ್ತು ಆರ್ಗನೈಸೇಶನ್)
• ಮಾನವ ಸಂಪನ್ಮೂಲಗಳು (ಎಂಪ್ಲಾಯಿ)
• ಮಾಹಿತಿಯಲ್ಲಿ ಆಧರಿಸಿರುವ ಸೇವೆಗಳು (ಡಾಟಾ ಡ್ರಿವನ್ ಸರ್ವಿಸ್)

1_1  H x W: 0 x 
 
ಇದರಲ್ಲಿ ಮೊದಲ ಮೂರು ನಿಯತಾಂಕಗಳು ಪ್ರಮುಖವಾಗಿ ತಾಂತ್ರಿಕ ಅಂಶಗಳ ಸಮೀಕ್ಷೆಯನ್ನು ಮಾಡುತ್ತವೆ. ಆದರೆ ಮುಂದಿನ ಮೂರು ನಿಯತಾಂಕಗಳು ಉದ್ಯಮದಲ್ಲಿರುವ ಎಲ್ಲ ಮಶಿನ್ ತಂತ್ರದ ಹೊಂದಾಣಿಕೆಯನ್ನು ಮಾಡುವ ಮಾನವ ಮತ್ತು ಕಂಪ್ಯೂಟರ್ ನ ಘಟಕಗಳ ಮೌಲ್ಯಮಾಪನವನ್ನು ಮಾಡುತ್ತವೆ. (ಚಿತ್ರ ಕ್ರ. 1).
ಸಮೀಕ್ಷೆ ಮಾಡಲಾಗಿರುವ ಪ್ರತಿಯೊಂದು ಉದ್ಯಮದ ಸಿದ್ಧತೆಯನ್ನು ಹೋಲಿಸಿದಾಗ ಅದನ್ನು ತಿಳಿದುಕೊಳ್ಳಲು ಈ ಕೆಳಗಿನ ಆರು ಸಿದ್ಧತೆಯ ಹಂತಗಳನ್ನು ಮನ್ನಿಸಲಾಯಿತು.
• ಔಟ್ ಸೈಡರ್
• ಬಿಗಿನರ್
• ಇಂಟರ್ ಮೀಡಿಯೇಟ್
• ಎಕ್ಸ್ ಪಿರಿಯನ್ಸಡ್ (ಅನುಭವಿ)
• ನಿಪುಣರು (ಎಕ್ಸ್ ಪರ್ಟ್)
• ಟಾಪ್ ಪರ್ಫಾರ್ಮನ್ಸ್ (ತುಂಬಾ ಕಾರ್ಯಕ್ಷಮತೆಯುಳ್ಳ)

2_1  H x W: 0 x 
ಸಮೀಕ್ಷೆಯಲ್ಲಿ ಸೇರಿಸಿರುವ ಪ್ರತಿಯೊಂದು ಉದ್ಯಮದ ಈ ಆರು ನಿಯತಾಂಕಗಳ ಮೌಲ್ಯಮಾಪನವನ್ನು ಸ್ವತಂತ್ರವಾಗಿ ಮಾಡಿ ಅದಕ್ಕೆ ಆಯಾ ನಿಯತಾಂಕಗಳ ಕುರಿತಾದ ಸಿದ್ಧತೆಯ ಹಂತವನ್ನು (ಚಿತ್ರ ಕ್ರ. 2) ನಿರ್ಧರಿಸಲಾಗುತ್ತದೆ. ಉದ್ಯಮಗಳ ಮೌಲ್ಯಮಾಪನದ ಚಿತ್ರ ಮತ್ತು ಪ್ರಮುಖವಾದ ಪರಿಶೀಲನೆಯನ್ನು ತಿಳಿದುಕೊಳ್ಳುವ ಮೊದಲು ನಾವು ಈ ನಿಯತಾಂಕಗಳನ್ನು ಮತ್ತು ಸಿದ್ಧತೆಯ ಹಂತಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಸಿದ್ಧತೆಯ ಮೌಲ್ಯಮಾಪನದ ನಿಯತಾಂಕಗಳು
1. ಕಾರ್ಖಾನೆಯಲ್ಲಿರುವ ಅತ್ಯಾಧುನಿಕತೆ (ಸ್ಮಾರ್ಟ್ ಫ್ಯಾಕ್ಟರಿ) :
ಇದರಲ್ಲಿ ವಸ್ತುಗಳ ಪ್ರತ್ಯಕ್ಷ ಉತ್ಪಾದನೆಯು ಗರಿಷ್ಠ ಪ್ರಮಾಣದಲ್ಲಿ ಸ್ವಯಂಚಾಲಿತ ಮತ್ತು ಫ್ಲೆಕ್ಸಿಬಲ್ ಸ್ಪರೂಪದಲ್ಲಿ (ಗ್ರಾಹಕರಿಗೆ ಬೇಕಾಗುವಂತೆ ಮತ್ತು ಅಷ್ಟೇ ಗುಣ ವೈಶಿಷ್ಟ್ಯಗಳು ಬೇಕಾಗುವಷ್ಟು ಪ್ರಮಾಣದಲ್ಲಿ) ಮಾಡುವುದನ್ನು ಅಪೇಕ್ಷಿಸಲಾಗಿದೆ. ಇದಕ್ಕೋಸ್ಕರ ಮೂಲಭೂತ ಉತ್ಪಾದನೆಯ ಯಂತ್ರಣೆಯನ್ನು ನವೀಕರಿಸುವುದು, ಫ್ಯಾಕ್ಟರಿಯಲ್ಲಿ ಪದ್ಧತಿಯನ್ನು ಸ್ಥಾಪಿಸುವುದು, ತಯಾರಾಗುವ ಮಾಹಿತಿಯನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸುವುದು ಮತ್ತು ಸಾಧ್ಯವಾದಲ್ಲಿ ಉತ್ಪಾದನೆಯ ಪ್ರಕ್ರಿಯೆಯಲ್ಲಿ ಡಿಜಿಟಲ್ ಸ್ವರೂಪವನ್ನು ಬಳಸಿ ಉತ್ಪಾದನೆಯನ್ನು ಹೆಚ್ಚು ಕಾರ್ಯಕ್ಷಮತೆಯುಳ್ಳದ್ದು ಹೇಗಾಗಬಹುದು, ಎಂಬುದರ ಅಂದಾಜನ್ನು ಪಡೆಯುವುದು.

3_1  H x W: 0 x
2. ಪೂರಕವಾಗಿರುವ ಪ್ರಕ್ರಿಯೆಗಳಲ್ಲಿ ಅತ್ಯಾಧುನಿಕತೆ (ಸ್ಮಾರ್ಟ್ ಆಪರೇಶನ್) :
ಉತ್ಪಾದನೆಯ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಖಾನೆಗಳೊಂದಿಗೆ ಇನ್ನಿತರ ಪೂರಕ ಪ್ರಕ್ರಿಯೆಗಳೂ (ಉದಾಹರಣೆ, ಸಪ್ಲೈ ಚೈನ್, ನಿರ್ವಹಣೆ, ಗುಣಮಟ್ಟದ ತಪಾಸಣೆ, ಸಾಗಾಣಿಕೆ ಮತ್ತು ಸಂದೇಶ ವಾಹಕ ಮುಂತಾದವುಗಳು) ಅಷ್ಟೇ ಪ್ರಮಾಣದಲ್ಲಿ ಆಧುನಿಕವಾಗಿರುವುದು ಅಗತ್ಯದ್ದಾಗಿದೆ. ಇದಕ್ಕೋಸ್ಕರ ಈ ಎಲ್ಲ ಘಟಕಗಳ ಯೋಗ್ಯ ಮತ್ತು ವೇಗವಾಗಿ ಸುಸೂತ್ರವಾಗಿ ಮಾಡುವುದು ತುಂಬಾ ಮಹತ್ವದ್ದಾಗಿದೆ. ಇದರಂತೆ ಕ್ಲೌಡ್ ಮತ್ತು ಆತ್ಯಾಧುನಿಕ ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆ, ಮಾಹಿತಿಯ ಸುರಕ್ಷಿತತೆ, ವಿವಿಧ ಘಟಕಗಳಲ್ಲಿ ಅದರ ವಿನಿಯಮ ಮತ್ತು ಅದರ ಮೂಲಕ ಪ್ರತಿಯೊಂದು ಪ್ರಕ್ರಿಯೆಯ ಸ್ವಯಂಚಾಲನೆ ಈ ಅಂಶಗಳ ಮೌಲ್ಯಮಾಪನವನ್ನು ಮಾಡಲಾಗುತ್ತದೆ.
3. ಉತ್ಪಾದಿಸಿರುವ ವಸ್ತುಗಳಲ್ಲಿರುವ ಆಧುನಿಕತೆ (ಸ್ಮಾರ್ಟ್ ಪ್ರೊಡಕ್ಟ್) :
ಸ್ಮಾರ್ಟ್ ಉತ್ಪಾದನೆಯ ಪ್ರಕ್ರಿಯೆಯಿಂದ ತಯಾರಾಗುವ ಉತ್ಪಾದಿಸಲ್ಪಟ್ಟ ವಸ್ತುಗಳೂ ಕೂಡಾ ಅಷ್ಟೇ ಸ್ಮಾರ್ಟ್ ಆಗಿರುವುದು ಆವಶ್ಯಕವಾಗಿದೆ. ಇದರ ಅರ್ಥವೆಂದರೆ, ಆ ವಸ್ತುವನ್ನು ಬಳಸುತ್ತಿರುವಾಗ ಅದರ ಕುರಿತಾದ ಉಪಯುಕ್ತವಾದ ಮಾಹಿತಿಯು ಗ್ರಾಹಕರು, ಉತ್ಪಾದಕರು ಮತ್ತು ಇನ್ನಿತರ ಸಂಬಂಧಪಟ್ಟ ಘಟಕಗಳಿಗೆ ತಕ್ಷಣ ಲಭಿಸುವುದೂ ಆವಶ್ಯಕವಾಗಿದೆ. ಇದಕ್ಕೋಸ್ಕರ ಅಂತಹ ಉತ್ಪಾದಿಸಲ್ಪಟ್ಟ ವಸ್ತುಗಳಲ್ಲಿ ಸೂಕ್ತವಾದಂಹ ಸೆನ್ಸರ್, ಮಾಹಿತಿಯ ಪ್ರೊಸೆಸರ್ ಮತ್ತು ಸಂದೇಶವನ್ನು ಸಾಗಿಸುವ ಪ್ರಣಾಳಿಕೆ ಸೇರಿಸುವುದು ಮತ್ತು ಅದರೊಂದಿಗೆ ಇದಕ್ಕಿಂತಲೂ ನಿಮಿಷಕ್ಕೋಸ್ಕರ ತಯಾರಾಗುವ ಮಾಹಿತಿಯ ಪರೀಕ್ಷೆಯನ್ನು ಮಾಡುವಲ್ಲಿ ಸಕ್ಷಮರಾಗುವುದು ಅಗತ್ಯವಾಗಿದೆ.
4. ನೀತಿಗಳು ಮತ್ತು ಸಂಘಟನೆ (ಸ್ಟ್ರ್ಯಾಟಿಜಿ ಮತ್ತು ಆರ್ಗನೈಸೇಶನ್) :
ಮೇಲಿನ ಮೂರೂ ನಿಯತಾಂಕಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಲು ಈ ನಿಯತಾಂಕಗಳೂ ಅತ್ಯಾವಶ್ಯಕವಾಗಿವೆ. ಉದ್ಯಮದ ನಿರ್ವಹಣಾ ವ್ಯವಸ್ಥಾಪಕರು ಮತ್ತು ಮಾಲಿಕರಿಗೆ ಇಂಡಸ್ಟ್ರೀ 4.0 ಯ ಕುರಿತು ಎಷ್ಟು ತಿಳುವಳಿಕೆ ಇದೆ, ಎಂಬುದನ್ನು ಈ ಮಾಪನವು ನಿಯತಾಂಕಗಳನ್ನು ನಿರ್ಧರಿಸುತ್ತದೆ. ತಮ್ಮ ಉದ್ಯಮಕ್ಕೆ ಸೂಕ್ತವಾಗಿರುವ ಇಂಡಸ್ಟ್ರಿ 4.0 ಗೆ ದೀರ್ಘಕಾಲದ ನೀತಿಯನ್ನು ರೂಪಿಸುವುದು, ಅದಕ್ಕೋಸ್ಕರ ಆವಶ್ಯಕವಿರುವ ನಾವೀನ್ಯಪೂರ್ಣವಾದ ತಂತ್ರವನ್ನು ಯೋಜಿಸುವುದು, ಅದಕ್ಕೋಸ್ಕರ ಸಂಪನ್ಮೂಲಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಬಂಡವಾಳವನ್ನು ಹೂಡುವುದು, ಅಲ್ಲದೇ ಅದನ್ನು ಸೂಕ್ತವಾದ ವೇಳೆಯಲ್ಲಿ ಉಪಲಬ್ಧ ಮಾಡಿಕೊಡುವುದು ಮತ್ತು ಎಲ್ಲ ನೀತಿಗಳನ್ನು ನಿಖರವಾಗಿ ಕಾರ್ಯಗತಗೊಳಿಸುವುದು, ಇವೆಲ್ಲವನ್ನೂ ಈ ನಿಯತಾಂಕಗಳಲ್ಲಿ ಪರಿಶೀಲಿಸಲಾಗುತ್ತದೆ.

5. ಮಾನವ ಸಂಪನ್ಮೂಲ (ಎಂಪ್ಲಾಯಿ) :
ಯಾವುದೇ ಉದ್ಯಮವು ಮನುಷ್ಯನಿಂದ, ಮನುಷ್ಯನ ಸಹಾಯದಿಂದ, ಮನುಷ್ಯನು ಮಾಡಿರುವ ಚಟುವಟಿಕೆಗಳಿಂದಲೇ ನಡೆಯುತ್ತಿರುತ್ತದೆ. ಇದರಿಂದಾಗಿ ಯಾವುದೇ ಉದ್ಯಮದಲ್ಲಿ ಸಹಭಾಗಿಯಾಗಿರುವ ವ್ಯಕ್ತಿಯು ಅದಕ್ಕೋಸ್ಕರ ಮಹತ್ವದ ಪಾತ್ರವನ್ನು ವಹಿಸುತ್ತಾನೆ. ಇದರಿಂದಾಗಿ 4.0 ಗೋಸ್ಕರ ಸಿದ್ಧರಾಗಿರುವಾಗ ಪ್ರತಿ ವರ್ಷವೂ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಆಯಾ ಉದ್ಯಮದಲ್ಲಿ ಸಹಭಾಗಿಗಳಾಗಿರುವ ಮಾನವ ಸಂಪನ್ಮೂಲವು (ಕೆಲಸಗಾರರು ಮತ್ತು ವ್ಯವಸ್ಥಾಪನೆಯು ಎಲ್ಲರಿಗೂ) ಯಾವ ಯಾವ ಕೌಶಲ್ಯವು ಬೇಕಾಗಬಹುದು ಮತ್ತು ಅದನ್ನು ಪಡೆಯುವಲ್ಲಿ ಯಾವ ರೀತಿಯ ದಾರಿಯನ್ನು ಹುಡುಕಬೇಕಾಗುತ್ತದೆ. ಅದರೊಂದಿಗೆ ಈ ಮಾನವ ಸಂಪನ್ಮೂಲವು ಸಾಕಷ್ಟು ಪ್ರಮಾಣದಲ್ಲಿ ಯಾವ ರೀತಿಯಲ್ಲಿ ಕ್ಷಮತೆಯುಳ್ಳದ್ದಾಗಿದೆ, ಎಂಬುದನ್ನು ಈ ನಿಯತಾಂಕಗಳಿಂದ ಮಾಪನ ಮಾಡಲಾಗುತ್ತದೆ.
6. ಮಾಹಿತಿಗೆ ಸಂಬಂಧಪಟ್ಟ ಸೇವೆ (ಡಾಟಾ ಡ್ರಿವನ್ ಸರ್ವಿಸ್) :
ಉತ್ಪಾದನೆಯ ಪ್ರಕ್ರಿಯೆ ಮತ್ತು ಅದರಿಂದ ತಯಾರಾಗುವ ಉತ್ಪಾದನೆಗಳು ಸ್ಮಾರ್ಟ್ ಆಗಿದ್ದಲ್ಲಿ, ಉತ್ಪಾದಕರು ಮತ್ತು ಗ್ರಾಹಕರಲ್ಲಿರುವ ಸಂಬಂಧ ಕೇವಲ ನೇರವಾದ ಖರೀದಿ ಮತ್ತು ಮಾರಾಟಕ್ಕೆ ಸೀಮಿತವಾಗದೇ, ಅದರಲ್ಲಿ ಎಷ್ಟೋ ಹೊಸತನವು ತಯಾರಾಗುತ್ತವೆ. ಕೇವಲ ವಸ್ತುಗಳು ಮಾರಾಟಕ್ಕೆ ಯೋಗ್ಯವಿರದೇ ಆ ವಸ್ತುಗಳಿಗೆ ಸಂಬಂಧಪಟ್ಟ ಇನ್ನಿತರ ಪೂರಕವಾದ ಅಂಶಗಳು, ಸೇವೆ, ವೈಶಿಷ್ಟ್ಯಗಳು ಇಂತಹ ಅನೇಕ ಮೌಲ್ಯಗಳೂ ಮಾರಾಟಕ್ಕೆ ಯೋಗ್ಯವಾಗಿವೆ, ಎಂಬುದನ್ನು ಗಮನಿಸಬೇಕು. ಅದಕ್ಕೆ ಅನುಸಾರವಾಗಿ ವ್ಯವಸಾಯದ ಹೊಸ, ಕಾಲಕ್ಕೆ ತಕ್ಕಂತೆ ರೂಪಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸಿ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವುದು, ಇತ್ಯಾದಿ ಅಂಶಗಳ ಮಾಪನವನ್ನು ಈ ನಿಯತಾಂಕದಲ್ಲಿ ಮಾಡಲಾಗುತ್ತದೆ.
ಸಿದ್ಧತೆಯ ಹಂತಗಳು :
1. ಔಟ್ ಸೈಡರ್ : ಮೇಲೆ ನಮೂದಿಸಿರುವ ಯಾವುದೇ ನಿಯತಾಂಕಗಳ ಕನಿಷ್ಠ ಪ್ರಮಾಣದಲ್ಲಿ ಈಡೇರಿಸದೇ ಇರುವವರು ಅಥವಾ ಇಂಡಸ್ಟ್ರಿ 4.0 ಕುರಿತು ಸಂಪೂರ್ಣವಾಗಿ ತಿಳುವಳಿಕೆ ಇಲ್ಲದಿರುವ ಉದ್ಯಮಗಳು ಈ ಹಂತದಲ್ಲಿ ಇರುತ್ತವೆ.
 
2. ಬಿಗಿನರ್ : ಈ ಹಂತದಲ್ಲಿರುವ ಉದ್ಯಮಗಳಿಗೆ ಇಂಡಸ್ಟ್ರಿ 4.0 ಕುರಿತು ಸ್ವಲ್ಪ ಮಾಹಿತಿಯು ಇರುತ್ತದೆ. ಅವರು ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಎಲ್ಲಿಯಾದರೂ ಪ್ರಾಯೋಗಿಕ ತತ್ವದಲ್ಲಿ ಅತ್ಯಾಧುನಿಕ ತಂತ್ರವನ್ನು ಬಳಸಿರುತ್ತಾರೆ. ಪ್ರಾಥಮಿಕ ಗುಣಮಟ್ಟದ IT ಯಂತ್ರಣೆಯನ್ನು ನಿರ್ಮಿಸಲಾಗಿರುತ್ತದೆ. ಆದರೆ ಇದಕ್ಕಿಂತ ಹೆಚ್ಚು ಅಭಿವೃದ್ಧಿಯನ್ನು ಮಾಡಲಾಗಿಲ್ಲ.
 
3. ಇಂಟರ್ ಮಿಡಿಯೆಟ್ : ಇಂಡಸ್ಟ್ರಿ 4.0 ಗೆ ಅನುಸಾರವಾಗಿ ಉತ್ಪಾದನೆ ಮತ್ತು ಉತ್ಪಾದನೆಯಾಗಿರುವ ವಸ್ತುಗಳು ಇವೆರಡಕ್ಕೋಸ್ಕರ ನೀತಿಗಳು, ಸಂಶೋಧನೆ ಮತ್ತು ಕಾರ್ಯಗತ ಮಾಡುವಿಕೆ ಈ ಎಲ್ಲ ಹಂತಗಳಲ್ಲಿ ಯಾವುದೇ ರೀತಿಯ ನಿಖರವಾದ ಹೆಜ್ಜೆಗಳನ್ನು ಹಾಕುವ ಉದ್ಯಮಿಗಳ ಒಂದು ತಂಡವೂ ಇದೆ. ಮಾಡಿರುವ ಉಪಾಯಗಳ ಫಲಿತಾಂಶವು ಇನ್ನೂ ಸಂಪೂರ್ಣವಾಗಿ ಅವರಿಗೆ ಲಭಿಸಿರುವುದಿಲ್ಲ. ಆದರೆ ಆ ನಿಟ್ಟಿನಲ್ಲಿ ಅವರ ಪ್ರಯತ್ನವು ನಡೆಯುತ್ತಿರುತ್ತದೆ.
 
4. ಅನುಭವ (ಎಕ್ಸ್ ಪಿರಿಯನ್ಸ್ಡ್) : ಈ ವಿಧದ ಉದ್ಯಮಗಳ ತಂಡವು ಇಂಡಸ್ಟ್ರಿ 4.0 ಗೆ ಉಪಾಯಗಳನ್ನು ಸಂಪೂರ್ಣವಾದ ನೀತಿಗಳೊಂದಿಗೆ ಕಾರ್ಯಗತಗೊಳಿಸಿ ಅದರಿಂದ ಲಭಿಸುವ ಲಾಭಗಳನ್ನು ಅನುಭವಿಸುತ್ತಾರೆ. ಅರ್ಥಾತ್ ಈ ಉದ್ಯಮಗಳಿಗೆ ಇನ್ನೂ ತುಂಬಾ ಸುಧಾರಣೆಯನ್ನು ಮಾಡುವಲ್ಲಿ ಅವಕಾಶವಿರುತ್ತದೆ. ಇದರಿಂದಾಗಿ ಅವರಿಗೆ ಇನ್ನಿತರ ರೀತಿಯ ಇನ್ನಷ್ಟು ಲಾಭಗಳು ಸಿಗಬಲ್ಲವು. (ಉದಾಹರಣೆ, ಉತ್ಪಾದನೆಯನ್ನು ಕ್ಷಮತೆಯುಳ್ಳದ್ದಾಗಿ ಮಾಡಿ ಖರ್ಚಿನಲ್ಲಿ ಕಡಿತ ಮಾಡಿದ್ದಲ್ಲಿ, ಆದರೆ ಇನ್ನೂ ಅನೇಕ ಮಾರಾಟದ ಪರ್ಯಾಯಗಳನ್ನು ಉಪಯೋಗಿಸಿ ಹೊಸಹೊಸದಾದ ರೀತಿಯಿಂದ ಲಾಭವನ್ನು ಪಡೆಯುವ ಸಾಧ್ಯತೆಯೂ ಉಳಿದಿರಬಹುದು.)
 
5. ಎಕ್ಸ್ ಪರ್ಟ್ (ನುರಿತ) : ಈ ಹಂತದಲ್ಲಿರುವ ಉದ್ಯಮವು ಇಂಡಸ್ಟ್ರಿ 4.0 ಗೋಸ್ಕರ ಆರು ಪ್ರಕಾರದ ನಿಯತಾಂಕಗಳನ್ನು ಪೂರ್ತಿಗೊಳಿಸಿ ಯಾವುದೇ ಪ್ರಮಾಣದಲ್ಲಿ ಎಲ್ಲ ರೀತಿಯ ಲಾಭವನ್ನು ಪಡೆಯುತ್ತಿರುತ್ತಾರೆ.
 
6. ಉಚ್ಚ ಕಾರ್ಯನಿರ್ವಹಣೆ (ಟಾಪ್ ಪರ್ಫಾರ್ಮನ್ಸ್) : ಹೆಸರಿಗೆ ತಕ್ಕಂತೆ ಈ ಹಂತದಲ್ಲಿ ಉದ್ಯಮಗಳು ಕೇವಲ ಉಚ್ಚಮಟ್ಟದ್ದಾಗಿರುವುದಿಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿ ಉಚ್ಚಮಟ್ಟದ ಚಟುವಟಿಕೆಗಳನ್ನು ಇಂಡಸ್ಟ್ರಿ 4.0 ನ ಸಾಧ್ಯವಾದಷ್ಟು ಲಾಭಗಳನ್ನು ಸಂಪೂರ್ಣವಾಗಿ ಪಡೆಯುತ್ತಿರುತ್ತಾರೆ. ಅರ್ಥಾತ್, ಈ ಉದ್ಯಮಗಳು ಇನ್ನಿತರ ಉದ್ಯಮಗಳಿಗೋಸ್ಕರ ಮಾರ್ಗದರ್ಶಕ ಮತ್ತು ಆದರ್ಶಪ್ರಾಯವಾಗಿರುತ್ತವೆ. ಪ್ರಾಥಮಿಕ ಮತ್ತು ದೂರದಂತಹ ಎರಡೂ ಹಂತಗಳಲ್ಲಿರುವ ಉದ್ಯಮಗಳು ಪ್ರವೇಶದ ಹಂತದಲ್ಲಿರುವವರು ಎಂಬ ಅಂಕಣದಲ್ಲಿ ತಿಳಿಯಲಾಗುತ್ತದೆ. ಮಧ್ಯಮ ಹಂತದಲ್ಲಿರುವ ಉದ್ಯಮಗಳ ಅಭ್ಯಾಸವನ್ನು ಮಾಡಿರುವವರು ಈ ಅಂಕಣದಲ್ಲಿರುತ್ತಾರೆ. ಹಾಗೆಯೇ ಅನುಭವಿ, ನುರಿತ ಮತ್ತು ಉಚ್ಚಮಟ್ಟ ಚಟುವಟಿಕೆಯನ್ನು ನಿರ್ವಹಿಸುವ ಮೂರೂ ಹಂತಗಳಲ್ಲಿರುವ ಉದ್ಯಮಿಗಳ ಮುಖಂಡರನ್ನು ಈ ಅಂಕಣದಲ್ಲಿ ಗುರುತಿಸಲಾಗುತ್ತದೆ. (ಚಿತ್ರ ಕ್ರ. 1).
7. ಜರ್ಮನಿಯಲ್ಲಿ ಮಾಡಲಾಗಿರುವ ಸಮೀಕ್ಷೆಯ ವರದಿಯಲ್ಲಿರುವ ಎಲ್ಲ ನಿಯತಾಂಕಗಳನ್ನು ಇಲ್ಲಿ ಪ್ರಸ್ತುತ ಪಡಿಸದೇ ಇದ್ದರೂ ಕೂಡಾ, ಭಾರತೀಯ ಉದ್ಯಮಿಗಳು ಎರಡು ಪ್ರಮುಖ ಅಂಶಗಳನ್ನು ಗಮನಿಸಿ ಮಂಡಿಸಬೇಕು, ಎಂಬುದನ್ನು ಗಮನಿಸಬೇಕು.
 
• ಮೊದಲನೆಯ ಅಂಶವೆಂದರೆ, 2015 ರ ಕೊನೆಯ ತನಕ ಶೇಕಡಾ 89 ಉದ್ಯೋಗಗಳು ಪ್ರವೇಶಿಸಬಲ್ಲವರು (ಬಿಗಿನರ್) ಈ ಅಂಕಣದಲ್ಲಿ, ಹಾಗೆಯೇ ಕೇವಲ ಶೇಕಡಾ 2 ರಷ್ಟು ಉದ್ಯಮಗಳು ಮುಂದಾಳುತನದ ಅಂಕಣದಲ್ಲಿ ಇದ್ದವು.
• ಚಿಂತೆಯನ್ನುಂಟು ಮಾಡುವ ಎರಡನೆಯ ಅಂಶವೆಂದರೆ, ಉದ್ಯಮಗಳು ಎಷ್ಟು ದೊಡ್ಡದಾಗಿರುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ಇಂಡಸ್ಟ್ರಿ 4.0 ಗೋಸ್ಕರ ಸಿದ್ಧರಾಗುವ ಸಾಮರ್ಥ್ಯವೂ ಗಮನಾರ್ಹವಾಗಿ ಹೆಚ್ಚುತ್ತಿರುವುದು ಕಂಡುಬರುತ್ತದೆ.
ಈ ಪ್ರಸ್ತುತಿಗೆ ಅನುಸಾರವಾಗಿ ಭಾರತೀಯ ಉತ್ಪಾದನೆ ಉದ್ಯಮದ ವಿಂಗಡಣೆಯು ಲಭ್ಯವಿಲ್ಲದಿದ್ದರೂ ಕೂಡಾ ಉಚ್ಚಮಟ್ಟದ ಮೂಲಭೂತ ಸೌಲಭ್ಯಗಳ ಅಭಾವ, ಸರ್ಕಾರಿ ಮತ್ತು ಹಣಕಾಸು ವ್ಯವಸ್ಥೆಯಿಂದ ನಿರ್ಮಾಣವಾಗುವ ತೊಂದರೆಗಳು, ಅಲ್ಲದೇ ಪರಿಪೂರ್ಣವಾದ ತರಬೇತಿಯನ್ನು ಪಡೆದಿರುವ ನುರಿತ ಕೆಲಸಗಾರರ ಕೊರತೆ ಮತ್ತು ಇನ್ನೊಂದೆಡೆ ಲಕ್ಷ-ಲಕ್ಷದ ಸಂಖ್ಯೆಯಲ್ಲಿ ತರಬೇತಿ ಇಲ್ಲದ ಅಥವಾ ಅರ್ಧಂಬರ್ಧ ತರಬೇತಿ ಪಡೆದಿರುವ ಮಾನವ ಸಂಪನ್ಮೂಲಗಳ ಉಪಲಬ್ಧತೆ, ಇಂತಹ ಬೇರೆ ಬೇರೆ ವಿಚಾರಗಳಿರುವ ಸ್ಥಿತಿಯು ಭಾರತೀಯ ಉತ್ಪಾದನೆಯ ಕ್ಷೇತ್ರದಲ್ಲಿ ಕಂಡುಬರುವುದೂ ಖಂಡಿತ. ಸದ್ಯ ಬಹುಸಂಖ್ಯ ಭಾರತೀಯ ಉದ್ಯಮಗಳು ಎರಡನೆ ಮತ್ತು ಮೂರನೆ ಕ್ರಾಂತಿಯ ಸ್ಪರ್ಧೆಯಲ್ಲಿ ಬರಬಲ್ಲರು. (ಚಿತ್ರ ಕ್ರ. 3) ಈ ಪರಿಸ್ಥಿತಿಯಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಅಧರಿಸಿರುವ ಉತ್ಪಾದನೆಯ ಪ್ರಕ್ರಿಯೆ ಮತ್ತು ವ್ಯವಸಾಯಗಳ ಸ್ಪರೂಪದ ಕುರಿತು ವಿಚಾರ ಮಾಡುವುದು ಖಂಡಿತವಾಗಿಯೂ ಕ್ಲಿಷ್ಟವಾಗಿದೆ. ನಾಲ್ಕನೇ ಔದ್ಯೋಗಿಕ ಕ್ರಾಂತಿಯನ್ನು ಸಕ್ಷಮವಾಗಿ ಎದುರಿಸಲು ಭಾರತೀಯ ಉದ್ಯಮಗಳಿಗೆ ತನ್ನದೇ ಆದ ವಿಶೇಷವಾದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಿದ್ಧತೆಯ ಪ್ರತಿಯೊಂದು ನಿಯತಾಂಕಗಳಿಗೆ ವಿಶೇಷವಾಗಿ ಭಾರತೀಯ ಉತ್ತರವನ್ನು ಹುಡುಕಬೇಕಾಗಬಹುದು. ಇದಕ್ಕೋಸ್ಕರ ಮುಂದಿನ ಅಂಶಗಳ ಕುರಿತು ವಿಚಾರ ಮಾಡಬೇಕು.
 
1. ತಮ್ಮೊಂದಿಗೆ ಸ್ಪರ್ಧೆಯನ್ನು ಮಾಡುವ ಉದ್ಯಮಗಳ ಮತ್ತು ಪೂರಕವಾಗಿರುವ ಉದ್ಯಮಗಳ ಸಿದ್ಧತೆಯ ಕುರಿತಾದ ಅಭ್ಯಾಸವನ್ನು ಪಾರದರ್ಶಕವಾಗಿ ಮಾಡುವುದು.
2. ತಮ್ಮ ಸಿದ್ಧತೆಯನ್ನು ವೃದ್ಧಿಸಲು ತಮ್ಮ ಉದ್ಯಮ ಮತ್ತು ಸುತ್ತಮುತ್ತಲಿರುವ ಪರಿಸ್ಥಿತಿಯೊಂದಿಗೆ ಸರಿಹೊಂದಾಣಿಸುವಂತಹ ತಾತ್ಕಾಲಿಕ ಮತ್ತು ದೀರ್ಘಕಾಲೀನ ಉಪಾಯಗಳನ್ನು ಮಾಡುವುದು.
ಈ ಎರಡು ಅಂಶಗಳನ್ನು ಕಟ್ಟುನಿಟ್ಟಾಗಿ ಮತ್ತು ವಿಚಾರಪೂರ್ವಕವಾಗಿ ಕಾರ್ಯಗತಗೊಳಿಸಬೇಕು.
‘ಇಂಡಸ್ಟ್ರಿ 4.0 ಮತ್ತ IoT’ ಈ ಲೇಖಮಾಲೆಯಲ್ಲಿ ಪ್ರತಿಯೊಂದು ಲೇಖನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಲೇಖನದ ಮೊದಲ ಭಾಗದಲ್ಲಿ ಹೊಸದಾದ ತಾಂತ್ರಿಕ ಮಾಹಿತಿ, ಎರಡನೇ ಭಾಗದಲ್ಲಿ ನೇರವಾಗಿ ಕಾರ್ಯಗತಗೊಳಿಸಲಾಗಿರುವ ಅದಕ್ಕೆ ಸಂಬಂಧಪಟ್ಟ ಉದಾಹರಣೆಯನ್ನು ನೊಡಲಿದ್ದೇವೆ.
@@AUTHORINFO_V1@@