ಪೂರ್ಣ ಪ್ರಮಾಣದಲ್ಲಿ ಸ್ಪಿಂಡಲ್ ನ ಬಳಕೆ

@@NEWS_SUBHEADLINE_BLOCK@@

Lohkarya - Udyam Prakashan    12-Mar-2021   
Total Views |

3_1 H x W: 0 x
 
 
 
 
 
 1_1 H x W: 0 x
 
ತಮ್ಮ ಉದ್ಯಮಗಳಲ್ಲಿ ವಸ್ತುಗಳ ಸಾಗಾಟವನ್ನು ಮಾಡಲು ಟ್ರಕ್ ಅಥವಾ ಟ್ರೇಲರ್ ಗಳನ್ನು ಬಳಸಲಾಗುತ್ತದೆ. ಇಂತಹ ಕೆಲಸಕ್ಕೋಸ್ಕರ ಅರಣ್ಯದಲ್ಲಿ ಅನೆಗಳನ್ನು ಬಳಸಲಾಗುತ್ತದೆ. ಟ್ರಕ್ ಅಥವಾ ಟ್ರೇಲರ್ ನಲ್ಲಿ ವಸ್ತುಗಳನ್ನು ತುಂಬಿಸುವಾಗ ಆ ಟ್ರಕ್ ನ ಸಾಮರ್ಥ್ಯದಷ್ಟೇ (ಅಥವಾ ಹಲವಾರು ಸಲ ಸಾಮರ್ಥ್ಯಕ್ಕಿಂತ ಹೆಚ್ಚು) ಭಾರದ ವಸ್ತುಗಳನ್ನು ತುಂಬಿಸುವ ಕುರಿತು ಮುತುವರ್ಜಿಯನ್ನು ವಹಿಸಲಾಗುತ್ತದೆ. ಕಾರಣ ವಸ್ತುಗಳ ಸಾಗಾಟಕ್ಕೆ ಎಷ್ಟು ಖರ್ಚು ಮಾಡುತ್ತೇವೋ ಅಷ್ಟೂ ಖರ್ಚನ್ನು ವಸೂಲು ಮಾಡಬೇಕು, ಎಂಬ ಇಚ್ಚೆ ಇರುತ್ತದೆ. ಅದರಂತೆಯೇ ಅರಣ್ಯಗಳಲ್ಲಿ ಆನೆಯು ಮರದ ಒಂದು ದೊಡ್ಡ ತುಂಡನ್ನು ಸಾಗಿಸುತ್ತಿದ್ದಲ್ಲಿ ಅದಕ್ಕೆ ಮರದ ಗೆಲ್ಲನ್ನು ಮಾತ್ರ ಸಾಗಿಸುವುದು ಅದರ ಸಾಮರ್ಥ್ಯದ ಬಳಕೆಯನ್ನು ಕಡಿಮೆ ಮಾಡಲಾಗುತ್ತದೆ, ಎಂಬುದಾಗಿ ತಿಳಿಯಲಾಗುತ್ತದೆ. ಇದನ್ನೇ ನಾವು ನಮ್ಮದೇ ಕಾರ್ಖಾನೆಯಲ್ಲಿರುವ ಸಿ.ಎನ್.ಸಿ. ಮಶಿನ್ ನ ಬಳಕೆಯ ಕುರಿತು ನೋಡಿದಾಗ, ಈ ಮಶಿನ್ ಟ್ರಕ್ ಗಿಂತಲೂ ಹೆಚ್ಚು ದುಬಾರಿಯಾಗಿರುತ್ತದೆ. ಇದನ್ನು ಬಳಸುವಾಗ ಹೆಚ್ಚಾಗಿ ನಾವು ಅದರಲ್ಲಿ ನಿರ್ವಹಿಸಲಾಗುವಂತಹ ಕೆಲಸ ಪ್ರೊಗ್ರಾಮ್ ಹೇಗೆ ಕಾರ್ಯಕ್ಷಮತೆಯುಳ್ಳದ್ದಾಗಿದೆ ಮತ್ತು ನಿರ್ದೋಷದ್ದಾಗಿದೆ, ಎಂಬುದರ ಕುರಿತು ಪ್ರಾಧಾನ್ಯವಾಗಿ ಗಮನ ಹರಿಸುತ್ತೇವೆ. ಯಂತ್ರಭಾಗಗಳನ್ನು ತಯಾರಿಸಲು ಬೇಕಾಗುವ ಸೈಕಲ್ ಟೈಮ್ ಮತ್ತು ಅದಕ್ಕೆ ಸಂಬಂಧಪಟ್ಟ ಖರ್ಚಿನ ಕುರಿತು ಅಷ್ಟೇನು ವಿಚಾರ ಮಾಡಲಾಗುವುದಿಲ್ಲ. ಇದರ ಕುರಿತಾದ ಒಂದು ಉದಾಹರಣೆಯನ್ನು ನೋಡೋಣ.
 
ನಿಮ್ಮಲ್ಲಿರುವ ಸಿ.ಎನ್.ಸಿ. ಲೇಥ್ ನ ಸ್ಪಿಂಡಲ್ ನ ಶಕ್ತಿ ಗರಿಷ್ಠ 15kW ಇದೆ. ಆ ಮಶಿನ್ ನ ಮೌಲ್ಯವು ಪ್ರತಿ ಗಂಟೆಗೆ 200 ರೂಪಾಯಿಗಳಷ್ಟಿದೆ. ಆ ಮಶಿನ್ ನಲ್ಲಿ ಯಂತ್ರಭಾಗದ ಹೆವಿ ರಫ್ ಟರ್ನಿಂಗ್ 10 ನಿಮಿಷದ ಸೈಕಲ್ ಟೈಮ್ ನಲ್ಲಿ ನಡೆಯುತ್ತದೆ. ಮಶಿನ್ ದಿನಂಪ್ರತಿ 20 ಗಂಟೆಗಳ ಕಾಲ ನಡೆಯುತ್ತದೆ.
ಒಂದು ವೇಳೆ ತಾವು 5kW ಶಕ್ತಿ ಇರುವ ಮಶಿನ್ ಬಳಸಿದಾಗ,
1. ಮಶಿನ್ ನ 33% ಸಾಮರ್ಥ್ಯವನ್ನು ಬಳಸುತ್ತೀರಿ.
2. ಒಂದು ದಿನದಲ್ಲಿ ತಾವು ಸುಮಾರು 4000 ರೂಪಾಯಿಗಳಷ್ಟು ಆದಾಯವನ್ನು ಪಡೆಯುತ್ತೀರಿ.
ಹಾಗೆಯೇ ತಾವು 15kW ಶಕ್ತಿ ಇರುವ ಮಶಿನ್ ಬಳಸಿದಾಗ,
1. ಸೈಕಲ್ ಟೈಮ್ 3.3 ನಿಮಿಷಗಳಿಷ್ಟಿರುತ್ತದೆ.
2. ಒಂದೇ ದಿನದಲ್ಲಿ ನೀವು 12,000 ರೂಪಾಯಿಗಳಷ್ಟು ಆದಾಯವನ್ನು ಪಡೆಯಬಲ್ಲಿರಿ.
ನಿಮ್ಮ ಶಾಪ್ ಫ್ಲೋರ್ ನಲ್ಲಿರುವ ಸಿ.ಎನ್.ಸಿ. ಮಶಿನ್ ಲೇಥ್ ನಲ್ಲಿರುವ ಸ್ಪಿಂಡಲ್ ಲೋಡ್ ಮೀಟರ್ ನಲ್ಲಿ (ಚಿತ್ರ ಕ್ರ. 1) ಸಾಮಾನ್ಯವಾಗಿ 30% ದಿಂದ 35% ಸ್ಪಿಂಡಲ್ ಶಕ್ತಿಯನ್ನು ಬಳಸಲಾಗುತ್ತದೆ, ಎಂಬುದನ್ನು ಗಮನಿಸಬಹುದು. ಹೆಚ್ಚಾಗಿ ಸಿ.ಎನ್.ಸಿ. ಪ್ರೊಗ್ರಾಮಿಂಗ್ ನಲ್ಲಿ ಯಂತ್ರಣೆಗೆ (ಕಟಿಂಗ್) ಪ್ಯಾರಾಮೀಟರ್ ನಿರ್ಧರಿಸುವಾಗ ನಾವು ಸ್ಪಿಂಡಲ್ ಶಕ್ತಿಯ ಕುರಿತು ವಿಚಾರ ಮಾಡುವುದಿಲ್ಲ.
ಮೇಲೆ ನೀಡಿರುವ ಉದಾಹರಣೆಗಳಿಂದ ತಾವು ಕೆಲವು ಅಂಶಗಳನ್ನು ಪ್ರಮುಖವಾಗಿ ಗಮನಿಸಿರಬಹುದು.
 

2_1  H x W: 0 x 
 
1. ಒಂದು ವೇಳೆ ನಿಮ್ಮ ಕಾರ್ಖಾನೆಯಲ್ಲಿ ಮಶಿನ್ ನ ಸಾಮರ್ಥ್ಯ ಹೆಚ್ಚು ಇದ್ದಲ್ಲಿ, ನೀವು ಅಗತ್ಯಕ್ಕಿಂತ ಹೆಚ್ಚು ಮಶಿನ್ ಬಳಸುತ್ತಿದ್ದೀರಿ.
2. ಹಾಗೆಯೇ ನೀವು ಸೀಮಿತ ಮಶಿನ್ ಗಳನ್ನು ಬಳಸಿ ಜಾಬ್ ವರ್ಕ್ ಮಾಡುತ್ತಿದ್ದಲ್ಲಿ, ನೀವು ನಿಮ್ಮ ಸಾಮರ್ಥ್ಯಕ್ಕಿಂತ ತುಂಬಾ ಕಡಿಮೆ ಆದಾಯವನ್ನು ಪಡೆಯುತ್ತಿದ್ದೀರಿ.
ತಮ್ಮಲ್ಲಿರುವ ಮಶಿನ್ ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿ ಲಾಭವನ್ನು ಹೇಗೆ ವೃದ್ಧಿಸಬಹುದು, ಎಂಬ ಕುರಿತು ಕೆಲವು ಮಹತ್ವಪೂರ್ಣವಾದ ಅಂಶಗಳನ್ನು ನೋಡೋಣ.
ಮೂಲಭೂತ ತತ್ವಗಳು
ಸ್ಪಿಂಡಲ್ ಮೋಟರ್ ನ ಕುರಿತಾದ ಮಾಹಿತಿಯನ್ನು ಯೋಗ್ಯವಾಗಿ ತಿಳಿದುಕೊಳ್ಳಿರಿ. ಅಲ್ಲದೇ ಸ್ಪಿಂಡಲ್ ನ ಶಕ್ತಿಯನ್ನು ಗರಿಷ್ಠ ಪ್ರಮಾಣದಲ್ಲಿ ಹೇಗೆ ಬಳಸಬಹುದು, ಎಂಬುದನ್ನು ನೋಡಿರಿ.
ಮೋಟರ್
ಮೋಟರ್ ಬಳಸುತ್ತಿರುವಾಗ ಅದರಲ್ಲಿರುವ ವೈಂಡಿಂಗ್ ನಲ್ಲಿ I2R ನಿಯಮಗಳಿಗೆ ಅನುಸಾರವಾಗಿ ಉಷ್ಣಾಂಶವು ತಯಾರಾಗುತ್ತದೆ. ಯಾವಾಗ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆಯೋ, ಆಗ ವೈಂಡಿಂಗ್ ನಲ್ಲಿರುವ ವಿದ್ಯುತ್ (ಕರಂಟ್) ಹೆಚ್ಚು ಇರುತ್ತದೆ. ಇದರಿಂದಾಗಿ ಹೆಚ್ಚು ಉಷ್ಣತೆಯು ತಯಾರಾಗುತ್ತದೆ. ವೈಂಡಿಂಗ್ ನಲ್ಲಿರುವ ಉಷ್ಣರೋಧಕ ಆವರಣ ಗರಿಷ್ಠ 180˚ ಸೆಂ. ಉಷ್ಣಾಂಶದಲ್ಲಿ ಬಾಳಿಕೆ ಬರುತ್ತದೆ. ಅದರ ನಂತರ ವೈಂಡಿಂಗ್ ಸುಟ್ಟು ಹೋಗುವಂತಹ ಅಪಾಯವು (ಚಿತ್ರ ಕ್ರ. 2) ಉದ್ಭವಿಸುತ್ತದೆ.

3_1  H x W: 0 x 
 
ಮೋಟರ್ ಯಾವ ರೀತಿಯಲ್ಲಿ ನಡೆಯುತ್ತಿದೆ, ಎಂಬುದರ ಮೇಲೆ ಮೋಟರ್ ನ ಬಿಸಿಯಾಗುವಿಕೆಯು ಅವಲಂಬಿಸಿರುತ್ತದೆ. ಉದಾಹರಣೆ, ತಮ್ಮ ಮನೆಯಲ್ಲಿ ನೀರಿಗೋಸ್ಕರ ಬಳಸಲಾಗುವ ವಾಟರ್ ಪಂಪ್ ನಿರಂತರವಾಗಿ ಒಂದೇ ಬಲದಲ್ಲಿ ನಡೆಯುತ್ತಿರುತ್ತದೆ. ಸಿ.ಎನ್.ಸಿ. ಮಶಿನ್ ನಲ್ಲಿಯೂ ಮೋಟರ್ ಕೇವಲ ಯಂತ್ರಣೆಯನ್ನು ನಿರ್ವಹಿಸುತ್ತಿರುವಾಗ ಅದರಲ್ಲಿ ಬಲ ಇರುತ್ತದೆ. ಟೂಲ್ ಬದಲಾಯಿಸುವಾಗ, ಕಾರ್ಯವಸ್ತುಗಳನ್ನು ಬದಲಾಯಿಸುವಾಗ ಮೋಟರ್ ಆಫ್ ಆಗಿರುತ್ತದೆ.

4_1  H x W: 0 x 
 
ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಕಾರ್ಯವಸ್ತುವಿನ ಲೋಡಿಂಗ್ ಅಥವಾ ಟೂಲ್ ಬದಲಾವಣೆಯಾಗುತ್ತಿರುವಾಗ ಮೋಟರ್ ನಲ್ಲಿರುವ ಬಲವು ಸೊನ್ನೆ ಇರುತ್ತದೆ. ಹಾಗೆಯೇ ರಫ್ ಯಂತ್ರಣೆಯು ನಡೆಯುತ್ತಿರುವಾಗ ಮೋಟರ್ ಗರಿಷ್ಠ ಪ್ರಮಾಣದ ಬಲದಲ್ಲಿ ಕೆಲಸ ನಿರ್ವಹಿಸುತ್ತದೆ. ಕಚ್ಚುಗಳನ್ನು ತಯಾರಿಸುವಾಗ, ಫಿನಿಶ್ ಯಂತ್ರಣೆಯನ್ನು ನಿರ್ವಹಿಸುತ್ತಿರುವಾಗ, ಹಾಗೆಯೇ ಅಚ್ಚುಗಳನ್ನು ತಯಾರಿಸುವಾಗ ಯಾವ ಪ್ರಮಾಣದಲ್ಲಿ ಮಟೀರಿಯಲ್ ತುಂಡು ಮಾಡುತ್ತೇವೋ, ಅದಕ್ಕೆ ಅನುಸಾರವಾಗಿ ಮಟೀರಿಯಲ್ ನ ಭಾರವು ಹೆಚ್ಚು- ಕಡಿಮೆ ಆಗಿರುವುದು ಗಮನಕ್ಕೆ ಬರುತ್ತದೆ.
ಮೋಟರ್ ರೇಟಿಂಗ್
ಮಶಿನ್ ನೊಂದಿಗೆ ನೀಡಲಾಗುವ ಕ್ಯಾಟೆಲಾಗ್ ಕೋಷ್ಟಕ ಕ್ರ. 1 ಮತ್ತು 2 ರಲ್ಲಿ ನೋಡಬಹುದು.
ಕಂಟಿನ್ಯುವಸ್ ರೇಟಿಂಗ್ : ಗರಿಷ್ಠ ಮೌಲ್ಯದ ಮೋಟರ್ ಸ್ಥಿರ ಮತ್ತು ಸುರಕ್ಷಿತ ಉಷ್ಣಾಂಶದಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ನಡೆಯಬಲ್ಲದು. ಆ ಮೌಲ್ಯವನ್ನೇ ಕಂಟಿನ್ಯುವಸ್ ರೇಟಿಂಗ್ ಎಂದು ಹೇಳಲಾಗುತ್ತದೆ.
ಶಾರ್ಟ್ ಟರ್ಮ್ ರೇಟಿಂಗ್ : ಮೋಟರ್ ನಿಂದ ಸ್ವಲ್ಪ ಕಾಲಾವಧಿಗೆ ಮಾತ್ರ (30/15/10 ನಿಮಿಷ) ಲಭಿಸುವ ಗರಿಷ್ಠ ಬಲವನ್ನು ಶಾರ್ಟ್ ಟರ್ಮ್ ರೇಟಿಂಗ್ ಎಂದು ಗುರುತಿಸಲಾಗುತ್ತದೆ. ಮೋಟರ್ ನಡೆಯುತ್ತಿರುವಾಗ ಅದರ ಉಷ್ಣಾಂಶ ನಿರಂತರವಾಗಿ ವೃದ್ಧಿಸುತ್ತಿರುತ್ತದೆ. ರೇಟಿಂಗ್ ನಲ್ಲಿ ನಿರ್ದೇಶಿಸಿರುವ ಸಮಯಕ್ಕಿಂತ ಹೆಚ್ಚು ಸಮಯ ಅದೇ ಬಲದಲ್ಲಿ ಮೋಟರ್ ನಡೆದಲ್ಲಿ, ಅದು ಸುಡುವ ಅಪಾಯವು ಇರುತ್ತದೆ.
ವೇಗ/ ಬಲದ ಗ್ರಾಫ್
ಬಲ ಮತ್ತು ಟಾರ್ಕ್ ನ ಮೌಲ್ಯವು ಸ್ಥಿರವಾಗಿರುತ್ತದೆ. ಅದು ಸ್ಪಿಂಡಲ್ ನ ವೇಗದಲ್ಲಿ (rpm) ಅವಲಂಬಿಸಿರುತ್ತದೆ. ಗ್ರಾಫ್ ಕ್ರ. 1 ರಲ್ಲಿ ಕೆಂಪು ರೇಖೆಯಿಂದ ಕಂಟಿನ್ಯುವಸ್ ರೇಟಿಂಗ್ ತೋರಿಸಲಾಗಿದೆ. ಹಸಿರು ಬಣ್ಣದಿಂದ ಶಾರ್ಟ್ ಟರ್ಮ್ ರೇಟಿಂಗ್ ತೋರಿಸಲಾಗಿದೆ. ಶಾರ್ಟ್ ಟರ್ಮ್ ರೇಟಿಂಗ್ 30/ 15/ 10 ನಿಮಿಷಗಳಿಗೋಸ್ಕರ ಇದ್ದು ಅದು ಮಶಿನ್ ನ ಗಾತ್ರಕ್ಕೆ ಅವಲಂಬಿಸಿರುತ್ತದೆ.

5_1  H x W: 0 x 
 
ಗ್ರಾಫ್ ಕ್ರ. 1 ಕ್ಕೆ ಆಧರಿಸಿ ಬಲದ ಬಳಕೆಯ ಕುರಿತಾದ ಹಲವಾರು ನಿಯಮಗಳನ್ನು ಈ ಮುಂದೆ ನೀಡಲಾಗಿದೆ.
1. ಮಶಿನ್ ನಡೆಸುವಾಗ ಮೋಟರ್ ರೆಟಿಂಗ್ಸ್ (ಕಂಟಿನ್ಯುವಸ್/ ಶಾರ್ಟ್ ಟರ್ಮ್), ವೇಗ-ಬಲದ ಗ್ರಾಫ್, ಡ್ಯೂಟಿ ಸೈಕಲ್ ನ ಮಾಹಿತಿಯನ್ನು ಬಳಸಿರಿ.
2. ಬಲವನ್ನು ಎಷ್ಟು ಪ್ರಮಾಣದಲ್ಲಿ ಬಳಸುತ್ತೀರಿ ಇದು ಮೋಟರ್ ನ ವೇಗಕ್ಕೆ ಅವಲಂಬಿಸಿರುತ್ತದೆ.
3. ಮೋಟರ್ ನಲ್ಲಿರುವ ಭಾರದ ಕುರಿತು ವಿಚಾರ ಮಾಡುವಾಗ ಕಂಟಿನ್ಯುವಸ್ ರೇಟಿಂಗ್ ನ ಮೌಲ್ಯವನ್ನು 100 ಕ್ಕೆ 100 ಶೇಕಡಾ ಬಳಸಿರಿ.
4. ಶಾರ್ಟ್ ಟರ್ಮ್ ರೇಟಿಂಗ್ ನ ಮೌಲ್ಯವನ್ನೂ ಶೇಕಡಾ 100 ರಷ್ಟು ಬಳಸಬಲ್ಲಿರಿ. ಆದರೆ ನೀಡಿರುವ ಸಮಯದ ಮಿತಿಯನ್ನು ಪಾಲಿಸಿ.
ವೇಗ/ ಬಲದ ಗ್ರಾಫ್ ಹೇಗೆ ಬಳಸುವುದು, ಎಂಬುದನ್ನು ಈ ಮುಂದಿನ ಎರಡು ಉದಾಹರಣೆಗಳಿಂದ ತಿಳಿಯೋಣ.
1. ಒಂದು ವೇಳೆ ರಫ್ ಟರ್ನಿಂಗ್ ಆಪರೇಶನ್ ಗೋಸ್ಕರ 45 ನಿಮಿಷಗಳು ಬೇಕಾದಲ್ಲಿ ಮೋಟರ್ ನಲ್ಲಿ ಯಾವುದೇ ನಷ್ಟವು ಸಂಭವಿಸದೇ, ಸೂಕ್ತ ಸಮಯದಲ್ಲಿ ಕೆಲಸವನ್ನು ಪೂರ್ತಿಗೊಳಿಸಲು ಮೋಟರ್ ನಲ್ಲಿ 11kW ಬಲವು ಲಭ್ಯವಾಗಬಲ್ಲದು.
2. ಒಂದು ವೇಳೆ 10 ನಿಮಿಷಗಳಷ್ಟು ಸಮಯ ಯಂತ್ರಣೆಯ ಮಾಡುವುದಾದಲ್ಲಿ ಅದಕ್ಕೋಸ್ಕರ 250 rpm ವೇಗದಲ್ಲಿ ಗರಿಷ್ಠ 7.5kW ಬಲದ ಮತ್ತು 286 Nm ಟಾರ್ಕ್ ಸಿಗಬಲ್ಲದು.
ಸ್ಪಿಂಡಲ್ ನ ಬಲದ ಲೆಕ್ಕಾಚಾರ
ಯಂತ್ರಣೆಗೋಸ್ಕರ ಆವಶ್ಯಕವಿರುವ ಬಲವು ಈ ಮುಂದಿನ ಘಟಕಗಳಲ್ಲಿ ಅವಲಂಬಿಸಿರುತ್ತದೆ.
1. ಯಂತ್ರಣೆಯ ಪ್ಯಾರಾಮೀಟರ್ F, S, D.
2. ಯಂತ್ರಭಾಗಗಳಲ್ಲಿರುವ ಮಟೀರಿಯಲ್ ಗಳ ಟೆನ್ಸೈಲ್ ಸ್ಟ್ರೆಂಥ್.
3. ಟೂಲ್ ನ ಸಂಪರ್ಕ ಕೋನ (ಅಪ್ರೋಚ್ ಅ್ಯಂಗಲ್)
4. ಮೋಟರ್ ನಿಂದ ಸ್ಪಿಂಡಲ್ ಕಡೆಗೆ ಬಲವನ್ನು ಹಸ್ತಾಂತರಿಸುವ ಸಾಮರ್ಥ್ಯ.
ಮೋಟರ್ ನಿಂದ ಸ್ಪಿಂಡಲ್ ಕಡೆಗೆ ಶಕ್ತಿಯನ್ನು ಹಸ್ತಾಂತರಿಸುವ ಸಾಮರ್ಥ್ಯ 80% ಇದೆ, ಎಂಬುದಾಗಿ ತಿಳಿದಲ್ಲಿ
ಪ್ರತ್ಯಕ್ಷವಾಗಿ ಮೋಟರ್ ನ ಬಲವು P1 = P/0.8

6_1  H x W: 0 x 
 
P = ಸ್ಪಿಂಡಲ್ ನಿಂದ ಸಿಗುವ ಬಲ (kW)
S = ಯಂತ್ರಣೆಯ ವೇಗ (ಮೀಟರ್/ ನಿಮಿಷ)
D = ತುಂಡಿನ ಆಳ (ಮಿ.ಮೀ.)
F = ಫೀಡ್ ರೇಟ್ (ಮಿ.ಮೀ./ಸುತ್ತು)
Kc0.4 = ನಿರ್ದಿಷ್ಟ ಯಂತ್ರಣೆಯ ಬಲ (ಸ್ಪೆಸಿಫಿಕ್ ಕಟಿಂಗ್ ಫೋರ್ಸ್)
θ = ಅಪ್ರೋಚ್ ಅ್ಯಂಗಲ್
ಉದಾಹರಣೆ
ಒಂದು ವೇಳೆ

6_1  H x W: 0 x 
 
D = 4 ಮಿ.ಮೀ., F = 0.3 ಮಿ.ಮೀ./ ಸುತ್ತು, S = 260 ಮೀಟರ್/ ನಿಮಿಷ, Kco.4 = 2200 N/ಮಿ.ಮೀ.2
θ = 95˚ ಅಂಶವಿದ್ದಲ್ಲಿ, ಮೋಟರ್ ನ ಬಲ 17.78 kW ಬೇಕಾಗಬಲ್ಲದು ಮತ್ತು ಯಂತ್ರಣೆಗೋಸ್ಕರ 12.44 kW ಬಲವು ಲಭ್ಯವಾಗಬಲ್ಲದು.
ಸ್ಪಿಂಡಲ್ ಬಲದ ಗರಿಷ್ಠ ಬಳಕೆಯ ನಿಟ್ಟಿನಲ್ಲಿ ಆಪ್ಟಿಮೈಜ್ಡ್ ಪ್ರೊಗ್ರಾಮ್ ಮಾಡಲು ಮುಂದಿನ ಅಂಶಗಳ ಕುರಿತು ವಿಚಾರ ಮಾಡಬೇಕು.
ಪ್ರತಿಯೊಂದು ಆಪರೇಶನ್ ಗೋಸ್ಕರ
1. ಯಂತ್ರಣೆಯ ವೇಗವನ್ನು ನಿರ್ಧರಿಸಿರಿ. ಕಾರ್ಯವಸ್ತುವಿನಲ್ಲಿ ಗರಿಷ್ಠ ಮತ್ತು ಕನಿಷ್ಠ ವ್ಯಾಸವನ್ನು ಗಮನಿಸಿ ಆರ್.ಪಿ.ಎಮ್.ನ ರೇಂಜ್ ನಿರ್ಧರಿಸಿರಿ.
2. ಯಂತ್ರಣೆಯ ವೇಗಕ್ಕೋಸ್ಕರ ಬಲ/ ಟಾರ್ಕ್ ಗ್ರಾಫ್ ನಿಂದ, ಗರಿಷ್ಠ ಬಲ ಮತ್ತು ಎಷ್ಟು ಟಾರ್ಕ್ ಲಭ್ಯವಿದೆ ಎಂಬುದನ್ನು ಶೋಧಿಸಿರಿ.
3. ಇನ್ಸರ್ಟ್ ಗೆ ಸೀಳಿನ ಆಳವನ್ನು ಗರಿಷ್ಠ ಪ್ರಮಾಣಕ್ಕೆ ಸೆಟ್ ಮಾಡಿರಿ. ಅದಕ್ಕೆ ಬೇಕಾಗುವ ಸ್ಪಿಂಡಲ್ ಬಲ ಮತ್ತು ಟಾರ್ಕ್ ನ ಲೆಕ್ಕಾಚಾರವನ್ನು ಮಾಡಿರಿ.
4. ಸೀಳುಗಳ ಗರಿಷ್ಠ ಆಳಕ್ಕೋಸ್ಕರವೂ ಸ್ಪಿಂಡಲ್ ನ ಬಲವನ್ನು ಸಾಕಷ್ಟು ಪ್ರಮಾಣದ ಬಳಕೆ ಇರದಿದ್ದಲ್ಲಿ ಅದರ ಬಳಕೆಯು ಗರಿಷ್ಠ ಪ್ರಮಾಣದಲ್ಲಿ ಆಗುವ ತನಕ ಫೀಡ್ ರೇಟ್ ಹೆಚ್ಚಿಸಬಹುದು.
5. ವಿವಿಧ ರೀತಿಯ ಸಾಮರ್ಥ್ಯವಿರುವ ಮಶಿನ್ ಗೋಸ್ಕರ ಇದೇ ಲೆಕ್ಕಾಚಾರ ವನ್ನು ಬಳಸಿ ಯಾವ ಮಶಿನ್ ಬಳಸಿದಾಗ ಆಪ್ಟಿಮೈಜ್ಡ್ ಖರ್ಚಿನಲ್ಲಿ ಕೆಲಸವನ್ನು ನಿರ್ವಹಿಸುವುದು ಸಾಧ್ಯವಿದೆ, ಎಂಬುದನ್ನು ನೋಡಿರಿ.
ಇದೆಲ್ಲವನ್ನು ಮಾಡಲು ನಿಮಗೆ ಮಶಿನ್ ಗಳ ಪ್ಯಾರಾಮೀಟರ್ ನ ಕುರಿತಾದ ತಿಳಿವಳಿಕೆ ಮತ್ತು ಅದಕ್ಕೋಸ್ಕರ ಅಲ್ಪ ಪ್ರಮಾಣದಲ್ಲಿ ಸಮಯವನ್ನು ಮೀಸಲಾಗಿಡುವ ಆವಶ್ಯಕತೆ ಇದೆ. ಅದನ್ನು ಮಾಡದೇ ಇದ್ದಲ್ಲಿ ಪ್ರತ್ಯಕ್ಷವಾಗಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
1. ಥಂಬ್ ರೂಲ್ ನಂತೆ ಆಯ್ಕೆ ಮಾಡಿರುವ ಕಟಿಂಗ್ ಪ್ಯಾರಾಮೀಟರ್ ನೊಂದಿಗೆ ಪ್ರೊಗ್ರಾಮ್ ಬರೆಯಲಾಗುತ್ತದೆ. (ಉದಾಹರಣೆ, ಎಲ್ಲ ರೀತಿಯ ರಫ್ ಟರ್ನಿಂಗ್ ಗೋಸ್ಕರ 2 ಮಿ.ಮೀ. ಸೀಳಿನ ಆಳ).
2. ತಮಗೆ ಬೇಕಾಗಿರುವ ಗುಣಮಟ್ಟದ ದೃಷ್ಟಿಯಿಂದ ಯಂತ್ರಭಾಗಗಳ ಯಂತ್ರಣೆಯಾಗಿದೆಯೇ, ಇಲ್ಲವೇ ಎಂಬುದನ್ನು ಗಮನಿಸಲಾಗಿದೆ.
3. ಯಂತ್ರಭಾಗವನ್ನು ಕತ್ತರಿಸುವುದು ಪ್ರಾರಂಭವಾಗುತ್ತದೆ.
ಉಪಾಯಗಳನ್ನು ಕಾರ್ಯಗತಗೊಳಿಸುವುದು
F, S, D ಮತ್ತು ಟೂಲ್ ನ ಬಾಳಿಕೆ
ಯಂತ್ರಣೆಯ ವೇಗ (S), ಟೂಲ್ ನ ಬಾಳಿಕೆಯಲ್ಲಿ ಬೃಹತ್ ಪ್ರಮಾಣದ ಪರಿಣಾಮ ಬೀರುತ್ತದೆ. ಫೀಡ್ ರೇಟ್ (F) ಇದು ತುಂಬಾ ಕಡಿಮೆ ಪರಿಣಾಮವನ್ನು ಬೀರುತ್ತದೆ. ಸೀಳಿನ ಆಳದಿಂದಾಗಿ (D) ಟೂಲ್ ನ ಬಾಳಿಕೆಯಲ್ಲಿ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ.
ಉದಾಹರಣೆ,
ಉದಾಹರಣೆ, ಯಂತ್ರಣೆಯ ವೇಗ S, ಶೇಕಡಾ 20 ರಷ್ಟು ಹೆಚ್ಚಿಸಿದಲ್ಲಿ ಟೂಲ್ ನ ಬಾಳಿಕೆಯು ಶೇಕಡಾ 50 ರಷ್ಟು ಕಡಿಮೆಯಾಗುತ್ತದೆ. ಹಾಗೆಯೇ ಯಂತ್ರಣೆಯ ವೇಗ S ಶೇಕಡಾ 50 ರಷ್ಟು ಹೆಚ್ಚಿಸಿದಲ್ಲಿ ಟೂಲ್ ಬಾಳಿಕೆಯು ಶೇಕಡಾ 80 ರಷ್ಟು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

8_1  H x W: 0 x 
 
ಇದರಿಂದಾಗಿ ಸೈಕಲ್ ಟೈಮ್ ಕಡಿಮೆ ಮಾಡಲು ಯಾವಾಗಲೂ ಸೀಳಿನ ಆಳ (D) ಹೆಚ್ಚಿಸಿರಿ ಮತ್ತು ಆವಶ್ಯಕತೆ ಇದ್ದಲ್ಲಿ ಫೀಡ್ ರೇಟ್ (F) ಹೆಚ್ಚಿಸಿರಿ. ಯಂತ್ರಣೆಯ ವೇಗ ಆಯ್ಕೆ ಮಾಡಲು ಟೂಲ್ ಉತ್ಪಾದಕರು ಪೂರೈಸಿರುವ ಕೋಷ್ಟಕವನ್ನು ಬಳಸಿರಿ.
ಎಲ್ಲ ರೀತಿಯ ಲೆಕ್ಕಾಚಾರಗಳನ್ನು ಬಳಕೆಗಾರರಿಗೆ ಸುಲಭವಾಗಿ ನಿರ್ವಹಿಸಲು ಮಾರುಕಟ್ಟೆಯಲ್ಲಿ ಅನೇಕ ಸಾಫ್ಟ್ ವೇರ್ ಗಳು ಉಪಲಬ್ಧವಿವೆ. ಇದರಲ್ಲಿ ಕ್ಯಾಡೆಮ್ ಟೆಕ್ನಾಲಾಜಿಜ್ ಇವರು ತಯಾರಿಸಿರುವ CAPSturn ಸಾಫ್ಟ್ ವೇರ್ ಹೆಚ್ಚು ಉಪಯುಕ್ತವಾಗಿದೆ. ಇದರಲ್ಲಿರುವ ಯಂತ್ರಣೆಯ ಪ್ಯಾರಾಮೀಟರ್ ಗಳ ಮೌಲ್ಯಗಳನ್ನು ಬದಲಾಯಿಸಿದ ನಂತರ ಸೈಕಲ್ ಟೈಮ್ ನಲ್ಲಿ ಬೀರಲ್ಪಡುವ ಪರಿಣಾಮ, ಉತ್ಪಾದನೆಯ ಖರ್ಚಿನಲ್ಲಾಗುವ ಬದಲಾವಣೆ ಸಹಜವಾಗಿ ತಿಳಿಯುತ್ತದೆ. ಈ ಮಾಹಿತಿಯು ಲಭ್ಯವಾಗಿರುವುದರಿಂದ ನಾವು ಸ್ಪಿಂಡಲ್ ಶಕ್ತಿಯನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿ ಸೈಕಲ್ ಟೈಮ್ ಕಡಿಮೆ ಹೇಗೆ ಮಾಡಬಹುದು ಮತ್ತು ಉತ್ಪಾದನೆಯ ಖರ್ಚು ಕೂಡಾ ಹೇಗೆ ಕಡಿಮೆ ಮಾಡಬಹುದು, ಎಂಬುದನ್ನು ಸುಲಭವಾಗಿ ನಿರ್ಧರಿಸಬಲ್ಲೆವು.
@@AUTHORINFO_V1@@