ಸ್ಲೈಡಿಂಗ್ ಹೆಡ್ ಆಟೊಮ್ಯಾಟ್

@@NEWS_SUBHEADLINE_BLOCK@@

Lohkarya - Udyam Prakashan    11-Mar-2021   
Total Views |

1_1  H x W: 0 x
ಗಡಿಯಾರದ ನಿರ್ಮಿತಿಯ ಉದ್ಯಮವು ಸ್ವಿಜರ್ಲ್ಯಾಂಡ್ ನಲ್ಲಿ ಪ್ರಸಿದ್ಧವಾಗಿದೆ. ಗಡಿಯಾರದಲ್ಲಿರುವ ಚಿಕ್ಕ ಮತ್ತು ಉದ್ದದ ದಂಡಗೋಲಾಕಾರದ ಶಾಫ್ಟ್ ನಂತಹ ಯಂತ್ರಭಾಗಗಳನ್ನು ತಯಾರಿಸುವಾಗ ಉತ್ಪಾದಕರಿಗೆ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಕಾರಣ ಪಾರಂಪಾರಿಕ ಲೇಥ್ ನಲ್ಲಿ ಎರಡು ಸೆಂಟರ್ ಗಳಲ್ಲಿ ಇಂತಹ ಚಿಕ್ಕ ಯಂತ್ರಭಾಗಗಳನ್ನು ಹಿಡಿದಿಟ್ಟು ಅವುಗಳ ಟರ್ನಿಂಗ್ ಮಾಡುವಾಗ ಟೇಲ್ ಸ್ಟಾಕ್ ನ ಒತ್ತಡದಿಂದಾಗಿ, ಅವುಗಳು ಬಗ್ಗುತ್ತವೆ. (ಚಿತ್ರ ಕ್ರ. 1)

2_1  H x W: 0 x 
 
ಸ್ಥಿರವಾದ ಹೆಡ್ ಸ್ಟಾಕ್ ಇರುವ ಪಾರಂಪಾರಿಕ ಲೇಥ್ ನಲ್ಲಿ ಕಾರ್ಯವಸ್ತುವನ್ನು ಚಕ್ ನಲ್ಲಿ ಅಥವಾ ಚಕ್ ಮತ್ತು ಟೇಲ್ ಸ್ಟಾಕ್ ಬಳಸಿ ಸೆಂಟರ್ ನಲ್ಲಿ ಹಿಡಿಯಲಾಗುತ್ತವೆ. ಕಟಿಂಗ್ ಟೂಲ್ ಕಾರ್ಯವಸ್ತುವಿನ ಉದ್ದದ ಹಾಗೆಯೇ ಅಗಲದ ಅಕ್ಷದಿಂದ ಸರಿಸಲಾಗುತ್ತದೆ. ಆದರೆ ಮೇಲೆ ಉಲ್ಲೇಖಿಸಿದಂತೆ ಈ ರೀತಿಯಲ್ಲಿ ಸಪೂರ (ಸ್ಲೆಂಡರ್) ವ್ಯಾಸದ ಶಾಫ್ಟ್ ತಯಾರಿಸುವಾಗ ಅನೇಕ ತೊಡಕುಗಳು ಉದ್ಭವಿಸುತ್ತವೆ. ಇದನ್ನು ನೀಗಿಸಲು ಟರ್ನಿಂಗ್ ನ ಒಂದು ಹೊಸ ತಂತ್ರದ ವಿಕಾಸವನ್ನು ಮಾಡಲಾಯಿತು. ಆದ್ದರಿಂದ ಈ ಯಂತ್ರಕ್ಕೆ ‘ಸ್ವಿಸ್ ಟೈಪ್ ಟರ್ನಿಂಗ್’ (ಸ್ಲೈಡಿಂಗ್ ಹೆಡ್) ಎಂಬುದಾಗಿ ಗುರುತಿಸಲಾಗುತ್ತದೆ.

ಸ್ಲೆಂಡರ್ (ಸಪೂರವಾದ) ಶಾಫ್ಟ್ ಅಂದರೆ ವ್ಯಾಸ :
ಉದ್ದ ಇವುಗಳ ಅನುಪಾತ 1:5 ಗಿಂತ ಹೆಚ್ಚು ಇರುವ ಶಾಫ್ಟ್. ಉದಾಹರಣೆ, ಟರ್ನಿಂಗ್ ಮಾಡಬೇಕಾಗಿರುವ ಯಂತ್ರಭಾಗದ ವ್ಯಾಸ 10 ಮಿ.ಮೀ. ಮತ್ತು ಉದ್ದ 50 ಮಿ.ಮೀ.ಗಿಂತ ಹೆಚ್ಚು ಇದ್ದಲ್ಲಿ ಇಂತಹ ಯಂತ್ರಭಾಗಗಳನ್ನು ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನಲ್ಲಿ ನಿರ್ಮಿಸುವುದು ಸುಲಭ. ಸ್ಲೆಂಡರ್ ಶಾಫ್ಟ್ ಹೇಗಿದೆ ಎಂಬುದು ಚಿತ್ರ ಕ್ರ. 2 ರಿಂದ ಸ್ಪಷ್ಟವಾಗುತ್ತದೆ. ಚಿತ್ರ ಕ್ರ. 2 ಮತ್ತು ಅದರ ವ್ಯಾಖ್ಯೆಯನ್ನು ವೀಕ್ಷಿಸಿದ ನಂತರ ಪಾರಂಪಾರಿಕ ಲೇಥ್ ನಲ್ಲಿ ಸ್ಲೆಂಡರ್ ವ್ಯಾಸದ ಶಾಫ್ಟ್ ತಯಾರಿಸುವಾಗ ಉದ್ಭವಿಸುವ ತೊಡಕುಗಳ ನೈಜತೆ ಕಂಡುಬರುತ್ತದೆ. ಆದ್ದರಿಂದ ಸ್ಲೆಂಡರ್ ಶಾಫ್ಟ್ ತಯಾರಿಸುವಾಗ ಸ್ವಿಸ್ ಟೈಪ್ ಟರ್ನಿಂಗ್ ರೀತಿಯನ್ನು ಅನುಸರಿಸಲಾಗುತ್ತದೆ.

3_1  H x W: 0 x
 
 
ಸ್ವಿಸ್ ಟೈಪ್ ಟರ್ನಿಂಗ್ ಮತ್ತು ಪಾರಂಪಾರಿಕ ಟರ್ನಿಂಗ್ ನಲ್ಲಿರುವ ವ್ಯತ್ಯಾಸ
• ಹೆಡ್ ಸ್ಟಾಕ್ ತಿರುಗುವ ಬಾರ್ ನೊಂದಿಗೆ ದೂರದ ಅಕ್ಷದಲ್ಲಿ ಸರಿಯಬಹುದಾದಂತಹ ರಚನೆ. (ಚಿತ್ರ ಕ್ರ. 3)
• ತಿರುಗುವ ರಾಡ್ ನಿಖರವಾದ ಟಾಲರನ್ಸ್ಇರುವ ಗೈಡ್ ಬುಶ್ ನಿಂದ ಸರಿಯಬಹುದಾದಂತಹ ರಚನೆ. ಈ ಗೈಡ್ ಬುಶ್ ನ ಹತ್ತಿರ ಕಟಿಂಗ್ ಟೂಲ್ ನ್ನು ಅಳವಡಿಸಲಾಗುತ್ತದೆ. (ಚಿತ್ರ ಕ್ರ. 3)

4_1  H x W: 0 x 
 
• ಪಾರಂಪಾರಿಕ ಟರ್ನಿಂಗ್ ನಲ್ಲಿ ಫೀಡ್ ರೇಟ್ ದೂರದ ಅಕ್ಷದಲ್ಲಿ ಮತ್ತು ತುಂಡಿನ ಆಳ ಕ್ರಾಸ್ ಅಕ್ಷದಲ್ಲಿ ಇಂತಹ ಕಟಿಂಗ್ ಟೂಲ್ ನ ಎರಡು ಏಕರೇಖೆಯ ಚಟುವಟಿಕೆಗಳಾಗುತ್ತದೆ. ಸ್ವಿಸ್ ಟರ್ನಿಂಗ್ ನ ಹೊಸ ರಚನೆಯಲ್ಲಿ ಮಾತ್ರ ಫೀಡ್ ರೇಟ್ ನೀಡುವ ಕೆಲಸವನ್ನು ಸರಿಯುವ ಹೆಡ್ ಸ್ಟಾಕ್ ನಿಂದ ಮಾಡಲಾಗುತ್ತದೆ. ಕಟಿಂಗ್ ಟೂಲ್ ನಿಂದ ಕೇವಲ ತುಂಡಿನ ಆಳವನ್ನು ಪಡೆಯಲಾಗುತ್ತದೆ.
• ಪಾರಂಪಾರಿಕ ರೀತಿಯಲ್ಲಿ ಟರ್ನಿಂಗ್ ಮಾಡುವಾಗ ಟೂಲ್ ಚಕ್, ಕಾಲೇಟ್ ಅಥವಾ ಸೆಂಟರ್ ನಿಂದ ದೂರ ಸರಿದಂತೆ ನಿಖರತೆಯ ಪ್ರಮಾಣವೂ ಬದಲಾಗುತ್ತದೆ. ಆದರೆ ಸ್ವಿಸ್ ಟರ್ನಿಂಗ್ ನಲ್ಲಿ ಎಲ್ಲ ಕಟಿಂಗ್, ಗೈಡ್ ಬುಶ್ ನಿಂದ ನಿರಂತರವಾಗಿ ಒಂದೇ ರೀತಿಯಲ್ಲಿ ವಿಶಿಷ್ಟವಾದ ದೂರವನ್ನು ಮಾಡಲಾಗುತ್ತದೆ. ಇದರಿಂದಾಗಿ ಪ್ರತಿಯೊಂದು ಯಂತ್ರಭಾಗಗಳಲ್ಲಿ ಸಮಾನವಾದ ನಿಖರತೆಯು ಲಭಿಸುತ್ತದೆ. ಇದರ ಪರಿಣಾಮದಿಂದಾಗಿ ಸೂಕ್ಷ ವ್ಯಾಸವಿರುವ ಯಂತ್ರಭಾಗಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸುವಾಗ ಗಾತ್ರದಲ್ಲಿ ನಿರಂತರತೆಯನ್ನು ಪಡೆಯುವುದು ಸ್ವಿಸ್ ಟರ್ನಿಂಗ್ ನಿಂದ ಸಾಧ್ಯವಾಗುತ್ತದೆ.

5_1  H x W: 0 x 
 
ಒಂದೇ ಸ್ಪಿಂಡಲ್ ಆಟೊಮ್ಯಾಟ್ ನಂತೆಯೇ ಸ್ವಿಸ್ ಟೈಪ್ ಆಟೊಮ್ಯಾಟ್ ನಲ್ಲಿಯೂ ಒಂದೇ ರೇಖೆಯ ಚಟುವಟಿಗಳಿಗೋಸ್ಕರ ಕ್ಯಾಮ್ ಬಳಸಲಾಗುತ್ತವೆ. (ಚಿತ್ರ ಕ್ರ. 4) ನಂತರ ಸಿ.ಎನ್.ಸಿ.ಯು ಕ್ಯಾಮ್ ನ ಜಾಗವನ್ನು ಆಕ್ರಮಿಸಿತು. ಇದರ ಹೊರತಾಗಿ ಸರ್ವೊ ಮೋಟರ್, ಬಾಲ್ ಸ್ಕ್ರೂ, ಚಟುವಟಿಕೆಗಳ ವಿಶ್ಲೇಷಣೆ ಮಾಡುವಂತಹ ರಿಜಾಲ್ವರ್ ಇಂತಹ ಹೊಸ ತಂತ್ರಗಳು ಸೇರ್ಪಡೆಯಾದ್ದರಿಂದ ಸ್ವಿಸ್ ಟೈಪ್ ಆಟೊಮ್ಯಾಟ್ ಹೆಚ್ಚು ನಿರ್ದೋಷವಾಯಿತು ಮತ್ತು ಅದರ ಉತ್ಪಾದನೆಯಲ್ಲಿಯೂ ಹೆಚ್ಚಳವಾಯಿತು.

6_1  H x W: 0 x 
 
ಆವಶ್ಯಕತೆಗೆ ತಕ್ಕಂತೆ ವಿವಿಧ ಯಂತ್ರಭಾಗಗಳ ಜಾಮೆಟ್ರಿಕಲ್ ರಚನೆ ಹೆಚ್ಚು ಕ್ಲಿಷ್ಟವಾಗಲಾರಂಭಿಸಿತು. ಅದರ ನಂತರ ಟರ್ನಿಂಗ್, ಮಿಲ್ಲಿಂಗ್, ಥ್ರೆಡ್ ಕಟಿಂಗ್, ಡ್ರಿಲ್ಲಿಂಗ್, ಬೋರಿಂಗ್, ಪಾಲಿಗಾನ್ ಮೇಕಿಂಗ್ ಮುಂತಾದ ಅನೇಕ ಪ್ರಕ್ರಿಯೆಗಳನ್ನು ಮಾಡುವುದು ಆವಶ್ಯಕವಾಯಿತು. ಇದರಿಂದಾಗಿ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನ ಮೂಲಭೂತ ರಚನೆಯಲ್ಲಿಯೂ ಕ್ರಾಂತಿಕಾರಿಯಾದ ಬದಲಾವಣೆಗಳಾದವು. ಉದಾಹರಣೆ, ಹೆಚ್ಚುವರಿ ಸಿ.ಎನ್.ಸಿ. ಅಕ್ಷ (ಚಿತ್ರ ಕ್ರ. 5), ಪ್ರಮುಖ ಮತ್ತು ಸಬ್-ಸ್ಪಿಂಡಲ್ ನಲ್ಲಿ ಅಳವಡಿಸಲಾಗುವ ಟೂಲ್ ಗಳ ಸಂಖ್ಯೆ ಇತ್ಯಾದಿ. ಸರ್ಫೇಸ್ ಫಿನಿಶ್, ಕಚ್ಚಾ ವಸ್ತುಗಳಿಗೆ ಅನುಸಾರವಾಗಿ ಎಲ್ಲ ಮಶಿನ್ ಗಳಲ್ಲಿ ಸ್ಟೇಶನರಿ ಗೈಡ್ ಬುಶ್ ಅಥವಾ ತಿರುಗುವ (ರಿವಾಲ್ವಿಂಗ್) ಗೈಡ್ ಬುಶ್ ತಯಾರಿಸಲಾಗುತ್ತದೆ.
ಮೂಲಭೂತ ಮೂರು ಏಕರೇಖೀಯ ಅಕ್ಷಗಳಿರುವ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಮತ್ತು ಹೆಚ್ಚುವರಿ ಅಕ್ಷವಿರುವ ಮಶಿನ್ ಇವುಗಳ ಕುರಿತು ತಿಳಿದುಕೊಳ್ಳೋಣ.

7_1  H x W: 0 x 
 
ಮೂರು ಅಕ್ಷೀಯ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್
ಮೂರು ಅಕ್ಷಿಯ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನ (ಸಿ.ಎನ್.ಸಿ. ಥ್ರಿ ಎಕ್ಸಿಸ್ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್) ಸಾಮಾನ್ಯವಾದ ರಚನೆಯು ಚಿತ್ರ ಕ್ರ. 6 ದಲ್ಲಿ ತೋರಿಸಿದಂತಿದೆ. ಆದರೆ ಇದರಲ್ಲಿ Z ಅಕ್ಷವಿರುವುದಿಲ್ಲ.
1. ಇದು ಮೂರು ಏಕರೇಖೆಯ ಅಕ್ಷವಿರುವ ಆಟೊಮ್ಯಾಟ್ ಆಗಿರುತ್ತದೆ.
2. ಹೆಡ್ ಸ್ಟಾಕ್ Z1 ಅಕ್ಷದಲ್ಲಿ ಅಡ್ಡಕ್ಕೆ ಸರಿಯುತ್ತದೆ. (ಕೆಂಪು ಬಣ್ಣದಲ್ಲಿ ತೋರಿಸಿರುವ ಬಾಣ)
3. ಗ್ಯಾಂಗ್ ಟೂಲ್ ಅಡ್ಡದಲ್ಲಿ ಎರಡು ಅಕ್ಷಗಳಲ್ಲಿ ಅಲುಗಾಡುತ್ತವೆ.
• X1 – ಕ್ಷಿತಿಜ ಸಮಾನಾಂತರ
• Y1 – ಲಂಬ (ಬಿಳಿ ಬಣ್ಣದ ಬಾಣ)
4. ಟೂಲ್ ನ ಈ ರಚನೆಗೆ ಗ್ಯಾಂಗ್ ಟೂಲ್ ಎಂದು ಹೇಳಲಾಗುತ್ತದೆ. ಅದು ಒಂದು ಸ್ಲೈಡ್ ನಲ್ಲಿ ಅಳವಡಿಸಲಾಗಿರುತ್ತದೆ.

8_1  H x W: 0 x 
 
ಎ. ಸ್ಕ್ವೇರ್ ಶ್ಯಾಂಕ್ ಟರ್ನಿಂಗ್ ಟೂಲ್, ಇದರಲ್ಲಿ ಒಂದು ಪಾರ್ಟಿಂಗ್ ಟೂಲ್ ಇರುವುದೂ ಆವಶ್ಯಕವಾಗಿದೆ.
ಬಿ. ಕ್ರಾಸ್ ಮಿಲ್ಲಿಂಗ್, ಡ್ರಿಲ್ಲಿಂಗ್ ಗೋಸ್ಕರ ರೌಂಡ್ ಶ್ಯಾಂಕ್ ಲೈವ್ ಆಗಿರುವುದು ಅಗತ್ಯವಾಗಿರುತ್ತದೆ. ಪ್ರಮುಖವಾದ ಸ್ಪಿಂಡಲ್ ನಲ್ಲಿ C ಅಕ್ಷ ಇರುವುದೂ ಅತ್ಯಾವಶ್ಯಕವಾಗಿದೆ.
ಸಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ ಮತ್ತು ಮುಖ್ಯ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಲಾಗಿದೆ.
ಡಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ ಮತ್ತು ಸಬ್ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಲಾಗಿದೆ.
(ಈ ಟೂಲ್ ನ್ನು ಹೆಚ್ಚುವರಿ ಎಂಬುದಾಗಿ ತಿಳಿಯಲಾಗುತ್ತದೆ. ಕಾರಣ ಮಶಿನ್ ಗೆ ಸಬ್ ಸ್ಪಿಂಡಲ್ ಇದ್ದಲ್ಲಿ ಮತ್ತು ಸಂಬಂಧಪಟ್ಟ ಯಂತ್ರಭಾಗಗಳಲ್ಲಿ ಸಾಮಾನ್ಯವಾದ ಕೆಲಸ ಮತ್ತು ಪ್ರಕ್ರಿಯೆಯನ್ನು ಮಾಡುವ ಅಗತ್ಯವಿದ್ದಲ್ಲಿ ಈ ಟೂಲ್ ಬಳಸಲಾಗುತ್ತದೆ. ಇದರ ಕುರಿತು ವಿಸ್ತಾರವಾದ ಮಾಹಿತಿಯನ್ನು ಈ ಮುಂದೆ ನೀಡಲಾಗಿದೆ.)
ಮೇಲಿನ ಸಿ ಮತ್ತು ಡಿ ಅಂಶಗಳಲ್ಲಿ ಉಲ್ಲೇಖಿಸಿರುವ ಟೂಲ್ ಗಳಿಗೋಸ್ಕರ ಸ್ಥಿರ ಎಂಬ ಶಬ್ದವನ್ನು ಬಳಸಲಾಗಿದೆ. ಇದರ ಅರ್ಥವೆಂದರೆ, ಈ ಟೂಲ್ ನಲ್ಲಿ ಮೋಟರ್ ಡ್ರೈವ್ ಇಲ್ಲದಿರುವುದರಿಂದ ಅದು ತಿರುಗಲಾರದು. ಅದು ಒಂದೇ ಸ್ಥಾನದಲ್ಲಿ ಸ್ಥಿರವಾಗಿದ್ದು ಗೈಡ್ ಬುಶ್ ನಲ್ಲಿರುವ ತಿರುಗುವ ಯಂತ್ರಭಾಗಗಳ ಯಂತ್ರಣೆಯನ್ನು ಮಾಡುತ್ತದೆ. ಈ ಪ್ರಕ್ರಿಯೆ ಯಂತ್ರಭಾಗಗಳ ಮಧ್ಯದಲ್ಲಿರುವ ಅಕ್ಷದ ಕುರಿತು ಮಾಡಲಾಗುತ್ತದೆ.
4 ಅಕ್ಷೀಯ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್
4 ಅಕ್ಷೀಯ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನ ರಚನೆಯು ಈ ಮುಂದಿನಂತೆ ಇರುತ್ತದೆ. (ಚಿತ್ರ ಕ್ರ. 6)
1. ಈ ಆಟೊಮ್ಯಾಟ್ ಅಂದರೆ 4 ಏಕರೇಖೀಯ ಅಕ್ಷವಿರುವ ಮಶಿನ್.
2. ಹೆಡ್ ಸ್ಟಾಕ್ Z1 ಅಕ್ಷದಲ್ಲಿ ಅಡ್ಡಕ್ಕೆ ಸರಿಯುತ್ತದೆ. (ಕೆಂಪು ಬಣ್ಣದ ಬಾಣ)
3. ಸಬ್ ಸ್ಪಿಂಡಲ್ Z2 ಅಕ್ಷದಲ್ಲಿ ಅಡ್ಡಕ್ಕೆ ಸರಿಯುತ್ತದೆ. (ಕೆಂಪು ಬಣ್ಣದ ಬಾಣ)
4. ಗ್ಯಾಂಗ್ ಟೂಲ್ ಅಡ್ಡದ 2 ಅಕ್ಷಗಳಲ್ಲಿ ಅಲುಗಾಡುತ್ತವೆ.
• X – ದಿಗಂತಕ್ಕೆ ಸಮಾನಾಂತರ
• Y – ಲಂಬ (ಬಿಳಿ ಬಣ್ಣದ ಬಾಣ)
5. ಟೂಲ್ ನ ಈ ರಚನೆಗೆ ಗ್ಯಾಂಗ್ ಎಂಬು ಹೇಳುತ್ತಾರೆ. ಅದು ಒಂದು ಸ್ಲೈಡ್ ನಲ್ಲಿ ಅಳವಡಿಸಲಾಗಿರುತ್ತದೆ.
6. ಗ್ಯಾಂಗ್ ಟೂಲಿಂಗ್ ನಲ್ಲಿ ಮುಂದಿನ ಟೂಲ್ ಇರುತ್ತದೆ.

9_1  H x W: 0 x 
 
ಎ. ಸ್ಕ್ವೇರ್ ಶ್ಯಾಂಕ್ ಟರ್ನಿಂಗ್ ಟೂಲ್. ಅದರಲ್ಲಿರುವ ಒಂದು ಪಾರ್ಟಿಂಗ್ ಟೂಲ್ ಇರುವುದು ಅತ್ಯಾವಶ್ಯಕವಾಗಿರುತ್ತದೆ.
ಬಿ. ಕ್ರಾಸ್ ಮಿಲ್ಲಿಂಗ್, ಡ್ರಿಲ್ಲಿಂಗ್ ಗೋಸ್ಕರ ರೌಂಡ್ ಶ್ಯಾಂಕ್ ಲೈವ್ ಇರುವುದು ಅಗತ್ಯದ್ದಾಗಿರುತ್ತದೆ. ಪ್ರಮುಖ ಸ್ಪಿಂಡಲ್ ನಲ್ಲಿ C ಅಕ್ಷ ಇರುವುದೂ ಅಷ್ಟೇ ಆವಶ್ಯಕವಾಗಿದೆ.
ಸಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ, ಮುಖ್ಯ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಿರುವುದು.
ಡಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ ಮತ್ತು ಸಬ್ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಿರುವುದು.
5 ಅಕ್ಷೀಯ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ (ಚಿತ್ರ ಕ್ರ. 7)

10_1  H x W: 0  
 
1. ಈ ಆಟೊಮ್ಯಾಟ್ ನ 5 ಏಕರೇಖೀಯ ಅಕ್ಷ ಇರುತ್ತವೆ.
2. ಹೆಡ್ ಸ್ಟಾಕ್ Z1 ಅಕ್ಷದಲ್ಲಿ ಅಡ್ಡಕ್ಕೆ ಸರಿಯುತ್ತದೆ. (ಕೆಂಪು ಬಣ್ಣದ ಬಾಣ)
3. ಸಬ್ ಸ್ಪಿಂಡಲ್ Z2 ಅಕ್ಷದಲ್ಲಿ ಅಡ್ಡಕ್ಕೆ ಸರಿಯುತ್ತದೆ. (ಕೆಂಪು ಬಣ್ಣದ ಬಾಣ)
4. ಗ್ಯಾಂಗ್ ಟೂಲ್ ಅಡ್ಡಕ್ಕೆ 2 ಅಕ್ಷಗಳಲ್ಲಿ ಅಲುಗಾಡುತ್ತದೆ.
• X – ದಿಗಂತಕ್ಕೆ ಸಮಾನಾಂತರ.
• Y – ಲಂಬ (ಬಿಳಿ ಬಣ್ಣದ ಬಾಣ)
5. ಸಬ್ ಸ್ಪಿಂಡಲ್ ನಲ್ಲಿ ಹಿಡಿದಿಟ್ಟಿರುವ ಯಂತ್ರಭಾಗಗಳಲ್ಲಿ ಕತ್ತರಿಸಿ ತೆಗೆದಿರುವ (ಪಾರ್ಟೆಡ್) ಭಾಗಗಳ ತುದಿಯ ಸರ್ಫೇಸ್ ನಲ್ಲಿ ಎಂಡ್ ವರ್ಕಿಂಗ್ ಟೂಲ್ ಕೆಲಸ ನಿರ್ವಹಿಸುತ್ತದೆ. ಇದರ ಕೆಲಸ X2 ರೇಖೀಯ ಅಕ್ಷದಲ್ಲಿರುತ್ತದೆ. (ಕೆಂಪು ಬಣ್ಣದ ಮೇಲ್ಮೈಗೆ ಸಮಾನಾಂತರದ ಅಕ್ಷ)
6. ಟೂಲ್ ನ ಈ ರಚನೆಗೆ ಗ್ಯಾಂಗ್ ಎಂದು ಹೇಳುತ್ತಾರೆ. ಅದು ಒಂದು ಸ್ಲೈಡ್ ನಲ್ಲಿ ಅಳವಡಿಸಲಾಗಿರುತ್ತದೆ.
7. ಗ್ಯಾಂಗ್ ಟೂಲಿಂಗ್ ನಲ್ಲಿ ಈ ಮುಂದಿನ ಟೂಲ್ ಗಳು ಒಳಗೊಂಡಿರುತ್ತವೆ.

11_1  H x W: 0  
 
ಎ. ಸ್ಕ್ವೇರ್ ಶ್ಯಾಂಕ್ ಟರ್ನಿಂಗ್ ಟೂಲ್. ಅದರಲ್ಲಿ ಒಂದು ಪಾರ್ಟಿಂಗ್ ಟೂಲ್ ಇರುವುದು ಅಗತ್ಯವಾಗಿದೆ.
ಬಿ. ಕ್ರಾಸ್ ಮಿಲ್ಲಿಂಗ್, ಡ್ರಿಲ್ಲಿಂಗ್ ಗೋಸ್ಕರ ರೌಂಡ್ ಶ್ಯಾಂಕ್ ಲೈವ್ ಇರುವುದೂ ಅತ್ಯಾವಶ್ಯಕ. ಮುಖ್ಯ ಸ್ಪಿಂಡಲ್ ನಲ್ಲಿ C ಅಕ್ಷ ಇರುವುದು ಆವಶ್ಯಕ.
ಸಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ, ಮುಖ್ಯ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಿರುವುದು.
ಡಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ, ಸಬ್ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಲ್ಪಟ್ಟಿರುವುದು.
ಇ. ರೌಂಟ್ ಶ್ಯಾಂಕ್ ಲೈವ್, ಎಂಡ್ ವರ್ಕಿಂಗ್, ಸಬ್ ಸ್ಪಿಂಡಲ್ ನಲ್ಲಿ C2 ಅಕ್ಷ ಇರುವುದು ಆವಶ್ಯಕ.

12_1  H x W: 0
6. ಅಕ್ಷೀಯ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ (ಚಿತ್ರ ಕ್ರ. 9)
1. ಈ ಆಟೊಮ್ಯಾಟ್ ಅಂದರೆ 6 ಏಕರೇಖೀಯ ಅಕ್ಷವಿರುವ ಮಶಿನ್.
2. ಹೆಡ್ ಸ್ಟಾಕ್ Z1 ಅಕ್ಷದಲ್ಲಿ ಅಡ್ಡಕ್ಕೆ ಸರಿಯುತ್ತದೆ. (ಕೆಂಪು ಬಣ್ಣದ ಬಾಣ)
3. ಸಬ್ ಸ್ಪಿಂಡಲ್ Z2 ಅಕ್ಷದಲ್ಲಿ ಅಡ್ಡಕ್ಕೆ ಸರಿಯುತ್ತದೆ. (ಕೆಂಪು ಬಣ್ಣದ ಬಾಣ)
4. ಗ್ಯಾಂಗ್ ಟೂಲ್ ಅಡ್ಡಕ್ಕೆ 2 ಅಕ್ಷಗಳಲ್ಲಿ ಅಲುಗಾಡುತ್ತದೆ.
• X1- ದಿಗಂತಕ್ಕೆ ಸಮಾನಾಂತರ.
• Y1- ಲಂಬ (ಬಿಳಿ ಬಣ್ಣದ ಬಾಣ)
5. ಸಬ್ ಸ್ಪಿಂಡಲ್ ಹಿಡಿದಿರುವ ಘಟಕಗಳನ್ನು ಕತ್ತರಿಸಿ ತೆಗೆದಿರುವ ಭಾಗಗಳ ಮೇಲ್ಮೈಯಲ್ಲಿ ಎಂಡ್ ವರ್ಕಿಂಗ್ ಟೂಲ್ ಕೆಲಸ ನಿರ್ವಹಿಸುತ್ತದೆ. ಈ ಕೆಲಸವು X2 ಮತ್ತು Y2 ರೆಖೀಯ ಅಕ್ಷಗಳಲ್ಲಿ ನಡೆಯುತ್ತದೆ. (ಕೆಂಪು ಬಣ್ಣದ ಬಾಣ).
6. ಟೂಲ್ ನ ಈ ರಚನೆಯನ್ನು ಗ್ಯಾಂಗ್ ಎಂದು ಹೇಳುತ್ತಾರೆ. ಅದು ಒಂದು ಸ್ಲೈಡ್ ನಲ್ಲಿ ಅಳವಡಿಸಲ್ಪಟ್ಟಿರುತ್ತದೆ.
7. ಗ್ಯಾಂಗ್ ಟೂಲಿಂಗ್ ನಲ್ಲಿ ಈ ಮುಂದೆ ನೀಡಿರುವ ಟೂಲ್ ಗಳಿರುತ್ತವೆ.
ಎ. ಸ್ಕ್ವೇರ್ ಶ್ಯಾಂಕ್ ಟರ್ನಿಂಗ್ ಟೂಲ್. ಅದರಲ್ಲಿ ಒಂದು ಪಾರ್ಟಿಂಗ್ ಟೂಲ್ ಇರುವುದು ಅಗತ್ಯವಾಗಿದೆ.
ಬಿ. ಕ್ರಾಸ್ ಮಿಲ್ಲಿಂಗ್, ಡ್ರಿಲ್ಲಿಂಗ್ ಗೋಸ್ಕರ ರೌಂಡ್ ಶ್ಯಾಂಕ್ ಲೈವ್ ಇರುವುದೂ ಅತ್ಯಾವಶ್ಯಕ. ಮುಖ್ಯ ಸ್ಪಿಂಡಲ್ ನಲ್ಲಿ C ಅಕ್ಷ ಇರುವುದು ಆವಶ್ಯಕ.
ಸಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ, ಮುಖ್ಯ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಲ್ಪಟ್ಟಿರುತ್ತದೆ.
ಡಿ. ರೌಂಡ್ ಶ್ಯಾಂಕ್ ಅಕ್ಷೀಯ ಸ್ಥಿರ, ಸಬ್ ಸ್ಪಿಂಡಲ್ ನ ದಿಕ್ಕಿನಲ್ಲಿ ಅಳವಡಿಸಲ್ಪಟ್ಟಿರುತ್ತದೆ.
ಇ. ರೌಂಡ್ ಶ್ಯಾಂಕ್ ಲೈವ್, ಎಂಡ್ ವರ್ಕಿಂಗ್ ಟೂಲ್, ಸಬ್ ಸ್ಪಿಂಡಲ್ ನಲ್ಲಿ C2 ಅಕ್ಷ ಇರುವುದು ಅಗತ್ಯ.
ಹೆಚ್ಚು ಕ್ಲಿಷ್ಟವಾದ ಮತ್ತು ತೊಡಕುಗಳುಳ್ಳ ಪ್ರಕ್ರಿಯೆಯನ್ನು ನಿರ್ವಹಿಸುವುದು ಸಾಧ್ಯವಾಗಲು ಮಶಿನ್ ನ ಒಟ್ಟಾರೆ ರಚನೆಯೂ ಫ್ಲೆಕ್ಸಿಬಲ್ ಇರುವುದು ಅತ್ಯಾವಶ್ಯವಾಗಿದೆ. ಇದಕ್ಕೋಸ್ಕರ ಉತ್ಪಾದಕರಿಂದ ಸಬ್ ಸ್ಪಿಂಡಲ್ ನ ಬಾಡಿಯಲ್ಲಿ ಎರಡು ಲೈವ್ ಟೂಲ್ ನೀಡಲಾಗಿದೆ. ಇದರಿಂದಾಗಿ ಮುಖ್ಯ ಸ್ಪಿಂಡಲ್ ನಲ್ಲಿ ಹಿಡಿದಿರುವ ಯಂತ್ರಭಾಗಗಳ ಮೇಲ್ಮೈಯ ನಡುವಿನಲ್ಲಿ ರಂಧ್ರಗಳನ್ನು ಮಾಡುವುದು ಸಾಧ್ಯವಾಗುತ್ತದೆ. ಇದಕ್ಕೋಸ್ಕರ ವಿಶಿಷ್ಟ ಕೋನದಲ್ಲಿ ಕೆಲಸ ನಿರ್ವಹಿಸಿ ಆ ಸ್ಥಿತಿಯಲ್ಲಿ ಲಾಕ್ ಆಗುವಂತಹ, ಸ್ಪಿಂಡಲ್ ಇಂಡೆಕ್ಸಿಂಗ್ ನ ವ್ಯವಸ್ಥೆಯನ್ನು ಬಳಸಲಾಗುತ್ತದೆ.
ಗ್ಯಾಂಗ್ ಟೂಲಿಂಗ್ ಕುರಿತಾದ ವಿವರಗಳನ್ನು ಈ ತನಕ ತಿಳಿದುಕೊಂಡೆವು. ಆದರೆ ತಂತ್ರಜ್ಞಾನದಲ್ಲಾದ ಬದಲಾವಣೆಗಳನ್ನು ಅನುಸರಿಸಿ ಹಲವಾರು ಉತ್ಪಾದಕರು ಗ್ಯಾಂಗ್ ಟೂಲಿಂಗ್ ಬದಲಾಗಿ ಟರೇಟ್ ಬಳಸುವುದನ್ನು ಪ್ರಾರಂಭಿಸಿದರು. ಆದರೆ ಕೆಲವರು ತಮ್ಮ ರಚನೆಯಲ್ಲಿ ಟರೇಟ್ ಮತ್ತು ಗ್ಯಾಂಗ್ ಟೂಲಿಂಗ್ ಸೇರಿಸಿ ಒಟ್ಟು ಬಳಸಿದರು. (ಚಿತ್ರ ಕ್ರ. 10)

13_1  H x W: 0
 
ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ನ ಆಯ್ಕೆ
ಇತ್ತೀಚೆಗೆ 42 ಮಿ.ಮೀ. ವ್ಯಾಸದ ತನಕದ ಬಾರ್ ನ ಯಂತ್ರಣೆಯನ್ನು ಮಾಡಬಲ್ಲ ಸಿ.ಎನ್.ಸಿ. ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಗಳು ಲಭ್ಯವಿವೆ. ಈ ವಿಧದಲ್ಲಿ ಯೋಗ್ಯ ಮಶಿನ್ ಚುನಾಯಿಸುವಾಗ ಈ ಕೆಳಗಿನ ಅಂಶಗಳ ಕುರಿತು ವಿಚಾರ ಮಾಡಬೇಕು.
• ಯಂತ್ರಭಾಗದ ಗರಿಷ್ಠ ವ್ಯಾಸ.
• ಒಂದೇ ಚಕಿಂಗ್ ನಲ್ಲಿ ಸಾಧ್ಯವಿರುವ ಉದ್ದ.
• ಆಟೊಮ್ಯಾಟ್ ನಲ್ಲಿ ಮಾಡಬಲ್ಲ ಕೆಲಸಗಳು.
• ಆಟೊಮ್ಯಾಟ್ ನಲ್ಲಿ ಅಳವಡಿಸಬಲ್ಲ ಟೂಲ್ ಗಳ ಸಂಖ್ಯೆ.
• ಸೆಕಂಡರಿ ಪ್ರಕ್ರಿಯೆಗಳ ಆವಶ್ಯಕತೆ ಏನಿದೆ?
• ಆಟೊಮ್ಯಾಟ್ ನಲ್ಲಿ ಸಾಧ್ಯವಿರುವ ಯಂತ್ರಭಾಗಗಳ ಸಂಖ್ಯೆ.
@@AUTHORINFO_V1@@