ಗುಣಮಟ್ಟದ ಪರೀಕ್ಷೆಯ ವ್ಯವಸ್ಥೆಗೆ IoT

@@NEWS_SUBHEADLINE_BLOCK@@

Lohkarya - Udyam Prakashan    01-Mar-2021   
Total Views |
ಯಾಂತ್ರಿಕ ಅಂದರೆ ಮೆಕ್ಯಾನಿಕಲ್ ಉದ್ಯಮ ಇದು ಮಾನವನ ಇತಿಹಾಸದಲ್ಲಿ ನಿಜವಾಗಿಯೂ ಆದಿ ಉದ್ಯಮ. ಅಶ್ಮಯುಗ, ತಾಮ್ರಯುಗ, ಲೋಹಯುಗ ಇಂತಹ ವಿವಿಧ ಯುಗಗಳಲ್ಲಿ ಹಂತ ಹಂತವಾಗಿ ಮಾನವನೊಂದಿಗೆ ಇದರ ಬೆಳವಣಿಗೆಯಾಯಿತು. ಹದಿನೇಳನೇ ಶತಮಾನದ ತನಕವೂ ಈ ಉದ್ಯಮದಲ್ಲಿ ಸಾಮಾನ್ಯವಾಗಿ ಎಲ್ಲ ಕೆಲಸಗಳನ್ನು ಒಂದಾದರೆ ಮಾನವನು ಸ್ವಂತ ಮಾಡುತ್ತಿದ್ದನು ಅಥವಾ ಬಲಶಾಲಿಯಾದ ಪ್ರಾಣಿಗಳು ಮತ್ತು ಸಣ್ಣ, ಸಾಮಾನ್ಯವಾದ ಮಶಿನ್‌ಗಳ ಸಹಾಯದಿಂದಲೇ ಮಾಡಲಾಗುತ್ತಿತ್ತು. ಹದಿನೆಂಟನೇ ಶತಮಾನದಲ್ಲಿ ಜೆಮ್ಸ್‌ ವಾಟ್ ಎಂಬುವರು ಸ್ಟೀಮ್‌ನ (ಆವಿ, ಹಬೆ) ಅಗಾಧವಾದ ಶಕ್ತಿಯನ್ನು ಗುರುತಿಸಿದರು ಮತ್ತು ಮಶಿನ್‌ಗಳನ್ನು ನಡೆಸುವಲ್ಲಿ ಅದನ್ನು ಉಪಯೋಗಿಸಿದರು. ಇದರಿಂದಾಗಿ ಮಶಿನ್‌ಗಳ ಶಕ್ತಿಯ ಅನೇಕ ಪಟ್ಟುಗಳಷ್ಟು ಜಾಸ್ತಿಯಾಯಿತು. ಈ ಶಕ್ತಿಯು ನಿರಂತರವಾಗಿ ಲಭಿಸಲಾರಂಭಿಸಿತು ಮತ್ತು ಯಾಂತ್ರಿಕ ಉದ್ಯಮದಲ್ಲಿ ನಿಜವಾಗಿ ಕ್ರಾಂತಿಯಾಯಿತು. ಇದೇ ಜಗತ್ತಿನಲ್ಲಾದ ಮೊತ್ತಮೊದಲ ಔದ್ಯೋಗಿಕ ಕ್ರಾಂತಿ.
 
1_1  H x W: 0 x
 
20 ನೇ ಶತಮಾನದ ಪ್ರಾರಂಭದಲ್ಲಿ ಎರಡನೇ ಔದ್ಯೋಗಿಕ ಕ್ರಾಂತಿ ಆಯಿತು. ಆಗ ಹೆನ್ರಿ ಫೋರ್ಡ್ ಇವರ ದೂರದೃಷ್ಟಿಯಿಂದ ಮಾಸ್ ಮ್ಯಾನಿಫ್ಯಾಕ್ಚರಿಂಗ್ ಟೆಕ್ನಿಕ್ ಅಭಿವೃದ್ಧಿಯಾಯಿತು. ಒಂದೇ ರೀತಿಯಲ್ಲಿರುವ ವಸ್ತುಗಳು, ಸಗಟು ನಿರ್ಮಾಣದ ತಂತ್ರಜ್ಞಾನ (Mass Manufacturing Technic), ನಿರಂತರವಾಗಿ, ನಿರ್ದೋಷವಾಗಿ ಮತ್ತು ಅದೂ ಕೂಡಾ ಅತ್ಯಂತ ಕಡಿಮೆ ಮಾನವ ಶಕ್ತಿಯ ಬಳಕೆಯಿಂದ ತಯಾರಾಗಲಾರಂಭಿಸಿದವು. ಇದರಿಂದ ಯಾಂತ್ರಿಕ ಉದ್ಯಮವು ಭರದಿಂದ ಮುನ್ನಡೆಯನ್ನು ಪಡೆಯಿತು. 20ನೇ ಶತಮಾನದ ಉತ್ತರಾರ್ಧದಲ್ಲಿ ಕ್ಯಾಲ್ಕ್ಯುಲೇಟರ್, ಕಂಪ್ಯೂಟರ್, ಇಲೆಕ್ಟ್ರಾನಿಕ್ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಯಿತು. ಇದರಿಂದ ಆಟೊಮೇಶನ್ ಎಂಬ ಮೂರನೇ ಔದ್ಯೋಗಿಕ ಕ್ರಾಂತಿಯ ಉದಯವಾಯಿತು. ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಕಂಟ್ರೋಲರ್‌ಗಳ ಸಹಾಯದಿಂದ ಸ್ವಯಂಚಾಲಿತ (ಆಟೊಮೇಟೆಡ್) ಮಶಿನ್‌ಗಳು ಮತ್ತು ಸ್ವಯಂಚಾಲಿತ ಮ್ಯಾನಿಫ್ಯಾಕ್ಚರಿಂಗ್ ರೀತಿಯ ಪ್ರಾರಂಭವಾಯಿತು. ಇದರಿಂದಾಗಿ ಉತ್ಪಾದಕತೆಯು (ಪ್ರೊಡಕ್ಷನ್) ತುಂಬಾ ಹೆಚ್ಚಾಯಿತು ಮತ್ತು ವಸ್ತುಗಳ ಉತ್ಪಾದನೆಗೋಸ್ಕರ ಮಾನವನ ಪರಾವಲಂಬನೆಯೂ ತುಂಬಾ ಕಡಿಮೆಯಾಯಿತು. ಸದ್ಯಕ್ಕೆ 21 ನೇ ಶತಮಾನದ ಪೂರ್ವಾರ್ಧದಲ್ಲಿ ನಾವು ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಹೊಸ್ತಿಲಲ್ಲಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಜಗತ್ತಿನೆಲ್ಲೆಡೆ ‘ಇಂಡಸ್ಟ್ರೀ 4.0’ (ಚಿತ್ರ ಕ್ರ. 1) ಈ ಹೆಸರಿನ ಒಂದು ಕ್ರಾಂತಿಯ ಕುರಿತು ಚರ್ಚೆಯನ್ನು ಮಾಡಲಾಗುತ್ತಿದೆ. ಇಂಟರ್‌ನೆಟ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಮತ್ತು ಸೂಕ್ಷ್ಮವಾಗಿದ್ದರೂ ಲಾಭವನ್ನುಂಟು ಮಾಡುತ್ತಿರುವ ಇಲೆಕ್ಟ್ರಾನಿಕ್ಸ್‌ ಇವೆಲ್ಲದರ ಸಹಾಯದಿಂದ ಆಗುತ್ತಿರುವ ಮ್ಯಾನಿಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಆಮೂಲಾಗ್ರವಾದ ಬದಲಾವಣೆಗಳೂ ಉಂಟಾಗುತ್ತಿರುವುದು ಗಮನಕ್ಕೆ ಬರುತ್ತಿದೆ.

2_1  H x W: 0 x 
 

3_1  H x W: 0 x 
 
ಇಂಡಸ್ಟ್ರೀ 4.0 ಕುರಿತು ಸಂಕ್ಷಿಪ್ತವಾಗಿ....
ಇಂಡಸ್ಟ್ರೀ 4.0 ಈ ಕಲ್ಪನೆಯು ಮೊತ್ತಮೊದಲಾಗಿ ಜರ್ಮನಿಯಲ್ಲಿ ಮೂಡಿಬಂತು. ಜರ್ಮನಿಯಲ್ಲಿ 2011 ರಲ್ಲಿ ಹ್ಯಾನೋವ್ಹರ್-ಮೆಸ್ಸೀ ಎಂಬ ಜಗದ್ವಿಖ್ಯಾತ ಮ್ಯಾನಿಫ್ಯಾಕ್ಚರಿಂಗ್ ಉದ್ಯಮಗಳಿಗೆ ಸಂಬಂಧಪಟ್ಟ ವಾರ್ಷಿಕ ಪ್ರದರ್ಶನವು ಜರುಗಿತು. ಜರ್ಮನಿಯ ಸರಕಾರ ಮತ್ತು ಬಾಶ್, ಸಿಮೆನ್ಸ್‌ ಇಂತಹ ಬಹು ದೊಡ್ಡ ಜರ್ಮನ್ ಕಂಪನಿಗಳ ಮುಂದಾಳುತನದಲ್ಲಿ ಈ ಪ್ರದರ್ಶನವು ಏರ್ಪಡಿಸಲಾಯಿತು. ನಿರ್ದೋಷವಾದ, ವಿಶ್ವಾಸಪೂರ್ಣವಾದ ಮತ್ತು ತುಂಬಾ ಅಭಿವೃದ್ಧಿಯನ್ನು ಪಡೆದ ದೇಶವೆಂದೂ, ಅಲ್ಲದೇ ಯಂತ್ರ ಮತ್ತು ತಂತ್ರಗಳ ಕುರಿತು ಜರ್ಮನಿ ದೇಶವನ್ನು ಗುರುತಿಸಲಾಗುತ್ತದೆ. ಸ್ವಯಂಚಾಲನೆ ಎಂಬ ಮೂರನೇ ಔದ್ಯೋಗಿಕ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ಈ ದೇಶವು, ಮುಂದಿನ ಹಂತದಲ್ಲಿ ‘ಇಂಡಸ್ಟ್ರೀ 4.0’ ಎಂಬ ನಾಲ್ಕನೇ ಕ್ರಾಂತಿಯ ಕಲ್ಪನೆಯನ್ನು ಪ್ರಸ್ತುತ ಪಡಿಸಿದರು. ಈ ಕ್ರಾಂತಿಯಲ್ಲಿ ಸಂಪೂರ್ಣವಾಗಿ ಉತ್ಪಾದನೆಯ ಪ್ರಕ್ರಿಯೆ, ಉತ್ಪಾದಿಸಲ್ಪಟ್ಟ ವಸ್ತುಗಳು ಮತ್ತು ಅದರೊಂದಿಗೆ ಸಂಬಂಧಪಟ್ಟ ಎಲ್ಲ ಮಾನವನಿಂದ ಮಾಡಲಾಗುವ ಕೆಲಸಗಳನ್ನು ಸಾಕಷ್ಟು ಬುದ್ಧಿವಂತ (ಇಂಟೆಲಿಜೆನ್‌ಸ್‌) ಸ್ವಯಂಚಾಲಿತ, ಇಂಟರ್‌ಕನೆಕ್ಟೆಡ್ ಮತ್ತು ಸುರಕ್ಷಿತವಾಗಿರುವುದನ್ನು ಅಪೇಕ್ಷಿಸಲಾಗಿದೆ. ಇದಕ್ಕೋಸ್ಕರ ಉಪಯೋಗಿಸಲ್ಪಡುವ ಹೆಚ್ಚಿನ ಎಲ್ಲ ಭೌತಿಕ ಯಂತ್ರಣೆಗಳು (ವಾಹನ, ಮನೆ, ಯಂತ್ರ, ಫೋನ್, ಬಟ್ಟೆಬರೆಗಳಂತಹ ಅನೇಕ ವಿಷಯಗಳು) ಸೈಬರ್ ಭೌತಿಕ ಯಂತ್ರಣೆಗಳಲ್ಲಿ ರೂಪಾಂತರಿಸಲ್ಪಡಬಹುದು. ಇದರ ಅರ್ಥವೆಂದರೆ ನಿರ್ಜೀವವೆಂದು ಕಂಡುಬರುವ ಪ್ರತಿಯೊಂದು ವಸ್ತುಗಳು ಮತ್ತು ಯಂತ್ರಣೆಗೂ ಏನನ್ನಾದರೂ ನಿರ್ಧರಿಸುವ ಮತ್ತು ಇನ್ನಿತರ ವಸ್ತುಗಳೊಂದಿಗೆ ಸಂದೇಶಗಳನ್ನು ಸಾಗಿಸುವ ಸಾಮರ್ಥ್ಯವು ಲಭಿಸಬಹುದು. ಇಂತಹ ಬದಲಾವಣೆಗಳಿಂದಾಗಿ ಸದ್ಯಕ್ಕೆ ಮಾನವನು ಮಾಡುತ್ತಿರುವ ಹೆಚ್ಚಿನ ಕೆಲಸಗಳನ್ನು ಸೈಬರ್ ಭೌತಿಕ ಯಂತ್ರಣೆಯು ಮಾಡಲಾರಂಭಿಸಿತು. ಇದರ ಪರಿಣಾಮದಿಂದಾಗಿ ಯಾವುದೇ ಕೈಗಾರಿಕೋದ್ಯಮಗಳಲ್ಲಿ ಮಾನವ ಸಹಯೋಗದ ರೀತಿಯಲ್ಲಿ ಬದಲಾವಣೆಯಾಗಬಹುದು. ಇಂತಹ ಕ್ರಾಂತಿಯ ಸ್ವಲ್ಪಮಟ್ಟದ ಪರಿಣಾಮವು ಇತ್ತಿಚೇಗೆ ಗಮನಕ್ಕೆ ಬರುತ್ತಿದೆ. ಇಂದಿನ ದಿನಗಳಲ್ಲಿ ಮೊಬೈಲ್ ಸಂದೇಶಗಳಿಗೆ ಸೀಮಿತವಾಗಿರದೇ ಒಂದು ರೀತಿಯ ಸ್ಮಾರ್ಟ್ ಮಶಿನ್ ಎಂದು ಹೇಳಬಹುದು. ನಿಜವಾಗಿ ನೋಡಿದಲ್ಲಿ ಮೊಬೈಲ್ ಮಾನವನ ಒಂದು ಹೊಸದಾದ ಇಂದ್ರಿಯವೆಂದೂ ಹೇಳಬಹುದು. ವಾಹನಗಳೂ ಸಾಕಷ್ಟು ಪ್ರಮಾಣದಲ್ಲಿ ಆಟೊಮ್ಯಾಟಿಕ್ ಆಗಿರುವುದೂ ಕಂಡುಬರುತ್ತಿದೆ. ಇತ್ತಿಚೇಗೆ ನಗದಿಯಾಗಿ ಹಣವನ್ನು ಕೊಡುವುದು ಮತ್ತು ಪಡೆಯುವುದು ಕಡಿಮೆಯಾಗಿದೆ. ನಗದಿ ಹಣದ ವ್ಯವಹಾರವು ಆನ್‌ಲೈನ್ ತುಂಬಾ ಜಾಸ್ತಿಯಾಗಿರುವುದು ಗಮನಕ್ಕೆ ಬರುತ್ತಿದೆ. ಮನೆಮನೆಗಳಲ್ಲಿರುವ ಟೀವಿ, ವಾಶಿಂಗ್ ಮಶಿನ್, ರೆಫ್ರಿಜರೇಟರ್ ಇಂತಹ ಉಪಕರಣೆಗಳೂ ಹೆಚ್ಚಾಗಿ ಸ್ಮಾರ್ಟ್ ಆಗುತ್ತಿವೆ. ಇದೇ ರೀತಿಯಲ್ಲಿ ಮ್ಯಾನಿಫ್ಯಾಕ್ಟರಿಂಗ್ ಉದ್ಯಮದ ವಿಚಾರ ಮಾಡಿದಲ್ಲಿ ಕಾರಖಾನೆಗಳು, ಅದರಲ್ಲಿ ಬಳಸಲಾಗುವ ಮಶಿನ್‌ಗಳು, ಇನ್ನಿತರ ಯಂತ್ರೋಪಕರಣಗಳ ಕುರಿತು ಯಾವ ರೀತಿಯ ಕ್ರಾಂತಿ ಆಗಬಹುದು, ಎಂಬುದನ್ನು ಗಮನಿಸಬಹುದು.
 
ಇಂಡಸ್ಟ್ರಿ 4.0 ತಿಳಿದುಕೊಳ್ಳುವಾಗ, ಇಂತಹ ನಾಲ್ಕನೇ ಕ್ರಾಂತಿಯನ್ನು ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸುವಂತಹ ತಾಂತ್ರಿಕ ಅಂಶಗಳನ್ನು ಗಮನಿಸಬೇಕು. ಇದರ ಕುರಿತಾದ ಪ್ರತಿಯೊಂದು ಅಂಶವೂ ಬೇರೆ ಬೇರೆ ಲೇಖನಗಳಲ್ಲಿ ನೀಡುವ ವಿಷಯವಾಗಿದೆ. ಆದರೆ ಈ ಲೇಖನದಲ್ಲಿ ಎಲ್ಲ ಅಂಶಗಳ ಕುರಿತು ಚುಟುಕಾಗಿ ತಿಳಿದುಕೊಳ್ಳೋಣ.

4_1  H x W: 0 x
 
1. ಇಂಟರ್‌ನೆಟ್ ಆಫ್ ಥಿಂಗ್‌ಸ್‌ (IoT)
ಕಂಪ್ಯೂಟರ್‌ನ ಮೂಲಕ ನಾವು ಇತ್ತಿಚೇಗೆ ಇಂಟರ್‌ನೆಟ್ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿದ್ದೇವೆ. ಇದರಲ್ಲಿಯೂ ಗೂಗಲ್, ಅಮೆಝಾನ್ ಇಂತಹ ವಿವಿಧ ಸೇವೆಗಳನ್ನು ಸೋಶಲ್ ಮೀಡಿಯಾದಲ್ಲಿ ಉಪಯೋಗಿಸುತ್ತಿದ್ದೇವೆ. ಇಂತಹ ಕಂಪ್ಯೂಟರ್‌ಗೆ ಸಂಬಂಧಪಟ್ಟ ಇಂಟರ್‌ನೆಟ್‌ನಂತೆಯೇ ಇನ್ನಿತರ ನಿರ್ಜೀವವಾದ ವಸ್ತುಗಳಿಗೆ ಮತ್ತು ಮಶಿನ್‌ಗಳಿಗೂ ಇಂಟರ್‌ನೆಟ್ ತಯಾರಿಸಿದರೆ ಏನಾಗಬಹುದು? ಕಾರಖಾನೆಯಲ್ಲಿರುವ ಯಾವುದೊಂದು ಮಶಿನ್, ಯಾವುದೇ ಪಂಪ್, ನಾಲ್ಕು ಚಕ್ರಗಳಿರುವ ವಾಹನಗಳು, ಮನೆಮನೆಗಳಲ್ಲಿರುವ ಎರ್‌ಕಂಡಿಶನಿಂಗ್ ಯಂತ್ರಗಳು ಮತ್ತು ಪ್ರತಿಯೊಬ್ಬರಲ್ಲಿರುವ ಸ್ಮಾರ್ಟ್ ಫೋನ್ ಇಂತಹ ಉಪಕರಣೆಗಳು ಒಬ್ಬೊಬ್ಬರೊಂದಿಗೆ ಮಾತನಾಡಲು ಪ್ರಾರಂಭಿಸಿದರೆ? ಇಂತಹ ಕಲ್ಪನೆಯಿಂದ ಏನು ತಯಾರಾಗಬಹುದೋ, ಅದನ್ನು ಇಂಟರ್‌ನೆಟ್ ಅಂದರೆ IoT ಎಂದು ಹೇಳಬಹುದು.
 

5_1  H x W: 0 x 
 
2. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ (IoT)
ಮಾನವನಿಗೆ ನೈಸರ್ಗಿಕವಾಗಿ ಬಂದಿರುವ ಬುದ್ಧಿವಂತಿಗೆ ಇದೆಯೋ, ಹಾಗೆಯೇ ಯಾವುದೇ ವಸ್ತುವಿಗೆ ಸೂಕ್ತ ಪ್ರಮಾಣದಲ್ಲಿ ನಿರ್ಣಯವನ್ನು ಪಡೆಯುವ ಸಾಮರ್ಥ್ಯವನ್ನು ನೀಡುವ ಪ್ರಕ್ರಿಯೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಎಂದು ಹೇಳಲಾಗುತ್ತದೆ. ಇಂತಹ ತಂತ್ರಜ್ಞಾನದಿಂದಾಗಿ ಸಂಪೂರ್ಣ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ.

3. ರೊಬೊಟಿಕ್ಸ್‌ ಮತ್ತು ಡ್ರೋನ್
ರೊಬೊಟಿಕ್‌ಸ್‌ ಸದ್ಯಕ್ಕೆ ನಮಗೆಲ್ಲರಿಗೂ ಹೊಸದಾಗಿಲ್ಲ. ಅದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಮತ್ತು IoT ಇಂತಹ ತಂತ್ರಜ್ಞಾನದಿಂದ ರೊಬೊಟಿಕ್‌ನ ಸಾಮರ್ಥ್ಯವು ತುಂಬಾ ಹೆಚ್ಚಾಗಿದೆ. ಪಿಕ್ ಅ್ಯಂಡ್ ಪ್ಲೇಸ್, ಯಂತ್ರಣೆ ಇಂತಹ ರೂಢಿಯಲ್ಲಿರುವ ಕೆಲಸಗಳೊಂದಿಗೆ ಗುಣಮಟ್ಟದ ತಪಾಸಣೆ, ವಾಯುಪಡೆಯ ನಿರೀಕ್ಷಣೆ ಇಂತಹ ವಿವಿಧ ಕೆಲಸಗಳಿಗೆ ರೊಬೊಟಿಕ್‌ಗಳ ಮತ್ತು ಡ್ರೋನ್‌ಗಳ ಬಳಕೆ ಪ್ರಾರಂಭವಾಯಿತು.

6_1  H x W: 0 x 
 
4. ವರ್ಚುವಲ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ
ಆಗ್ಮೆಂಟೆಡ್ ರಿಯಾಲಿಟಿ ಇದೊಂದು ವಿಶೇಷವಾಗಿ ಪರಿಣಾಮಕಾರಿಯಾಗಿರುವ ತಂತ್ರವಾಗಿದೆ. ಕ್ಯಾಮೆರಾ ಮತ್ತು ಇನ್ನಿತರ ಹಲವಾರು ಸೆನ್ಸರ್‌ಗಳ ಸೂಕ್ತವಾದ ಉಪಯೋಗವನ್ನು ಮಾಡಿ ತುಂಬಾ ದೂರದ ದೇಶಗಳಲ್ಲಿರುವ ಯೂವುದೇ ಒಂದು ದೃಶ್ಯವನ್ನು ತಕ್ಷಣ, ನೈಜ ರೂಪದಿಂದಲೇ ಥ್ರಿಡಿಯಲ್ಲಿಯೂ ವೀಕ್ಷಿಸುವಂತಹ ಸಾಮರ್ಥ್ಯವೂ ಇದರಲ್ಲಿದೆ. ವಾಸ್ತವಿಕತೆಗೆ ಪೂರಕವಾಗಿರುವ ಇನ್ನಷ್ಟು ದೃಶ್ಯಗಳ ಕುರಿತಾದ ವಿವರಗಳನ್ನು ನೀಡುವ ಮತ್ತು ದೃಶ್ಯಗಳ ಪರಿಣಾಮಗಳನ್ನು ದೊಡ್ಡ ಪ್ರಮಾಣದಲ್ಲಿ ಪಡೆಯಬಹುದು. ‘ರವಿ ಕಂಡಿಲ್ಲ, ಆದರೆ ಕವಿ ಕಂಡ’ ಎಂಬ ವಾಕ್ಯದಂತೆ ಕವಿಯ ಈ ತಂತ್ರವು ತಮ್ಮ ಸಹಾಯಕ್ಕೆ ಉಪಯೋಗಿಸಲ್ಪಡುತ್ತದೆ.
5. ಬ್ಲಾಕ್‌ಚೇನ್ ತಂತ್ರಜ್ಞಾನ
ವಿಷಯಗಳ ನೊಂದಣಿ ಮಾಡಲು, ವಿವರಗಳನ್ನು ಕಳುಹಿಸಲು ಅಥವಾ ಸಂಗ್ರಹಣೆ ಮಾಡಲು ಹಿಂದಿನ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯಾಗಿರುವ ತಂತ್ರಜ್ಞಾನವು ಇದಾಗಿದೆ. ಉಚ್ಚಮಟ್ಟದ ಸುರಕ್ಷಿತತೆ, ಸೆಂಟ್ರಲೈಜ್‌ಡ್‌ ರೀತಿಯಲ್ಲಿ ಒಟ್ಟಾಗುವ ಮಾಹಿತಿಯ ವ್ಯವಸ್ಥೆ ಅಲ್ಲದೇ ಇನ್ನಿತರ ಹಲವಾರು ವೈಶಿಷ್ಟ್ಯಗಳಿಂದಾಗಿ ಈ ತಂತ್ರಜ್ಞಾನವನ್ನು ಬ್ಯಾಂಕ್‌ಗಳು, ಸಪ್ಲೈಯ್ ಚೈನ್‌ನಲ್ಲಿ ವ್ಯವಸ್ಥೆಯನ್ನು ನೀಡುವಿಕೆ ಮತ್ತು ಪಡೆಯುವಿಕೆಯಂತಹ ಅನೇಕ ಕ್ಷೇತ್ರಗಳಲ್ಲಿ ಲಕ್ಷಗಟ್ಟಲೆ ವ್ಯವಹಾರಗಳನ್ನು ತುಂಬಾ ಸುಲಭವಾಗಿ ಮತ್ತು ಸುರಕ್ಷಿತವಾಗಿ ಕಾರ್ಯಗತಗೊಳಿಸಲು ಉಪಯುಕ್ತವಾಗಿದೆ.

7_1  H x W: 0 x
6. 3D ಪ್ರಿಂಟಿಂಗ್
ಕಾಗದ, ಬಟ್ಟೆ ಅಥವಾ ಯಾವುದೇ ಸರ್ಫೇಸ್‌ನಲ್ಲಿ ಮಾಡಲಾಗುವ ಮುದ್ರಣ (ಪ್ರಿಂಟಿಂಗ್) ತಮಗೆಲ್ಲರಿಗೂ ಹೊಸದಾಗಿಲ್ಲ. ಆದರೆ ಇದೇ ಪ್ರಿಂಟಿಂಗ್ ತಂತ್ರವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿ ಲೋಹ ಅಥವಾ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳ ಮೂಲಕ ಅನೇಕ ಲೆಯರ್‌ಗಳಿರುವ ಪ್ರಿಂಟಿಂಗ್ ಮಾಡುವುದು ಮತ್ತು ಅದರಿಂದ ಯಾವುದೇ ವಸ್ತುಗಳನ್ನು ತಯಾರಿಸುವುದು ಸಾಧ್ಯವಿದೆ. ಇದರಿಂದ ಅಭಿವೃದ್ಧಿ ಪಡಿಸಲ್ಪಟ್ಟ ಎಡಿಟಿವ್ ಮ್ಯಾನಿಫ್ಯಾಕ್ಚರಿಂಗ್ ವಸ್ತುಗಳ ನಿರ್ಮಾಣವುಳ್ಳ ಸಾಮರ್ಥ್ಯಕ್ಕೆ ಹೊಸತನವು ಲಭಿಸಿದೆ.
7. ಡಿಜಿಟಲ್ ಟ್ವಿನ್
ಕಂಪ್ಯೂಟರ್‌ನ ಸಹಾಯದಿಂದ ಯಾವುದೇ ಒಂದು ಮಶಿನ್‌ನ ಅಥವಾ ಪ್ರಣಾಳಿಕೆಯ ಚಟುವಟಿಕೆಗಳನ್ನು ಸಿಮ್ಯುಲೇಶನ್‌ನ ರೂಪದಲ್ಲಿ ನೋಡಬಹುದು. ಇಂತಹ ಸಿಮ್ಯುಲೇಶನ್ ಚಟುವಟಿಕೆಗಳು ಪ್ರತ್ಯಕ್ಷವಾಗಿ ಮಶಿನ್‌ನೊಂದಿಗೆ ಅದಕ್ಕೆ ಜೋಡಿಸಿರುವ ಕಂಪ್ಯೂಟರ್‌ನಲ್ಲಿ ಆಗುತ್ತಿದ್ದಲ್ಲಿ, ಅದರಿಂದ ಮಶಿನ್ ಅಥವಾ ಪ್ರಣಾಳಿಕೆಯನ್ನು ಹೆಚ್ಚು ಪ್ರಭಾವಶಾಲಿಯಾಗಿ ನಿಯಂತ್ರಿಸಬಹುದು.
IoT ಮತ್ತು ನಾವು
ಯೂವುದೇ ಸ್ಪಯಂಚಾಲಿತ ಪ್ರಣಾಳಿಕೆಯಲ್ಲಿ ಆರು ಮುಖ್ಯವಾದ ಘಟಕಗಳಿರುತ್ತವೆ. (ಚಿತ್ರ ಕ್ರ. 2)
1. ಸೆನ್ಸರ್
2. ಅ್ಯಕ್ಚುಎಟರ್
3. ನಿಯಂತ್ರಕಗಳು
4. ಕಂಟ್ರೋಲ್ ಪ್ರೊಗ್ರಾಮ್
5. ಹ್ಯುಮನ್ ಮಶಿನ್ ಇಂಟರ್‌ಫೇಸ್
(ಎಚ್.ಎಮ್.ಐ.)
6. ಕಮ್ಯುನಿಕೇಶನ್
ಸೆನ್ಸರ್ ಇದು ಯಾವುದೇ ಸ್ವಯಂಚಾಲಿತ ಪ್ರಣಾಳಿಕೆಯಲ್ಲಿರುವ ಜ್ಞಾನೇಂದ್ರಿಯ ಎಂದು ಹೇಳಬಹುದು. ಅಕ್ಚುಎಟರ್ ಇದು ಜಾಗ್ರತೆಯನ್ನು ವಹಿಸುವ ಕೆಲಸವನ್ನು ಮಾಡುತ್ತದೆ. ನಿಯಂತ್ರಕ ಇದು ಮೆದುಳು ಎಂದು ಹೇಳಬಹುದು. ಕಂಟ್ರೋಲ್ ಪ್ರೊಗ್ರಾಮ್ ಎಂದರೆ ನಿಯಂತ್ರಣೆಯ ರೂಪದ ಮೆದುಳಿನಲ್ಲಿರುವ ಬುದ್ಧಿವಂತಿಕೆಯೇ ಸರಿ. ಹ್ಯುಮನ್ ಮಶಿನ್ ಇಂಟರ್‌ಫೇಸ್ (ಎಚ್.ಎಮ್.ಐ.) ಅಂದರೆ ಮಶಿನ್ ಮತ್ತು ಮಾನವ ಇವರಿಬ್ಬರ ನಡುವೆ ಇರುವ ಜೋಡಣೆ ಅಥವಾ ಸಂಪರ್ಕದ ವ್ಯವಸ್ಥೆ ಎಂದು ಹೇಳಬಹುದು. ಯಾವುದೇ ವ್ಯಕ್ತಿ (ಆಪರೇಟರ್, ಪ್ರೊಗ್ರಾಮರ್ ಅಥವಾ ಮ್ಯಾನೆಜರ್) ಮತ್ತು ಸ್ವಯಂಚಾಲಿತ ಮಶಿನ್ ಇವೆರಡರ ನಡುವೆ ಸಂಪರ್ಕವನ್ನು ಸಾಧಿಸುತ್ತದೆ. ಕಮ್ಯುನಿಕೇಶನ್ ಈ ಸ್ವಯಂಚಾಲಿತ ಪ್ರಣಾಳಿಕೆಯ ಮೇಲೆ ತಿಳಿಸಿದ ಎಲ್ಲ ಘಟಕಗಳು ಮತ್ತು ಒಂದೇ ಪ್ರಣಾಳಿಕೆಗೆ ಎರಡನೇ ಪ್ರಣಾಳಿಕೆಯೊಂದಿಗೆ ಜೋಡಿಸುವ ಕೆಲಸವನ್ನು ಮಾಡುತ್ತದೆ. ಹಲವಾರು ಪ್ರಣಾಳಿಕೆಗಳು ಸಂಪೂರ್ಣವಾದ ಸ್ವಯಂಚಾಲನೆಯನ್ನು ಮತ್ತು ಇನ್ನುಳಿದವು ಅರ್ಧ ಸ್ವಯಂಚಾಲಿತವಾಗಿರುತ್ತವೆ. ಕೆಲಸ ರೀತಿ, ಅಪೇಕ್ಷಿಸಿರುವ ಗುಣಮಟ್ಟ ಮತ್ತು ಉದ್ಯಮಿಗಳ ಖರ್ಚು ಮಾಡುವ ಸಾಮರ್ಥ್ಯ ಇವೆಲ್ಲದಕ್ಕೆ ಅನುಸಾರವಾಗಿ ಬೇರೆ ಬೇರೆ ವಿಧದ ಸ್ವಯಂಚಾಲಿತ ಪ್ರಣಾಳಿಕೆಗಳನ್ನು ಅವಲಂಬಿಸಲಾಗಿದೆ.
 
ಈ ಸ್ವಯಂಚಾಲಿತ ಪ್ರಣಾಳಿಕೆಗಳ ಮುಂದಿನ ಹಂತವೆಂದರೆ IoT, ವಸ್ತುಗಳ ಇಂಟರ್‌ನೆಟ್. ಇದರಲ್ಲಿ ಕೇವಲ ಹಲವಾರು ನಿರ್ದಿಷ್ಟವಾದ ಮಶಿನ್‌ಗಳಲ್ಲದೇ, ತುಂಬಾ ಮಹತ್ವದ ಎಲ್ಲ ನಿರ್ಜೀವವಾದ ಅಂಶಗಳು ಕೂಡಾ ಸ್ವಲ್ಪ ಪ್ರಮಾಣದಲ್ಲಿ ಸ್ವಯಂಚಾಲಿತವಾಗುತ್ತವೆ ಮತ್ತು ಒಂದೊಂದರೊಂದಿಗೆ ನೇರವಾಗಿ ಸಂವಾದವನ್ನು ಮಾಡುವಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತವೆ. ಡಾಟಾ ಜನರೇಶನ್, ಕನ್ವರ್ಜನ್, ಕಮ್ಯುನಿಕೇಶನ್ ಮತ್ತು ಎನಾಲಿಸಿಸ್ ಇದನ್ನು ಯಾವ ಯಾವ ವಸ್ತುಗಳಲ್ಲಿ ಮಾಡುವುದು ಸಾಧ್ಯವಾಗುತ್ತದೆಯೋ, ಆ ಎಲ್ಲ ವಸ್ತುಗಳನ್ನು IoT ಯಲ್ಲಿ ಸೇರ್ಪಡಿಸಲಾಗುತ್ತವೆ.
 
• ಡಾಟಾ ಜನರೇಶನ್ ಅಂದರೆ ಆ ವಸ್ತುವಿನ ಅಥವಾ ಸುತ್ತಮುತ್ತ ಇರುವ ವಿವಿಧ ಪ್ಯಾರಾಮೀಟರ್‌ಗಳ ಮಾಪನವನ್ನು ಮಾಡಿ ಮಾಹಿತಿಯನ್ನು ತಯಾರಿಸುವುದು ಮತ್ತು ಅದನ್ನು ಸಂಗ್ರಹಿಸುವುದು.
• ಕನ್ವರ್ಜನ್ ಅಂದರೆ ಲಭಿಸಿರುವ ಮಾಹಿತಿಗೆ ಪ್ರಕ್ರಿಯೆಯನ್ನು ಮಾಡಿ, ಅದನ್ನು ತಮಗೆ ಬೇಕಾಗಿರುವ ಸ್ವರೂಪದಲ್ಲಿ ಉಪಲಬ್ಧ ಮಾಡಿಕೊಡುವುದು.
• ಕಮ್ಯುನಿಕೇಶನ್ ಅಂದರೆ ತಮ್ಮಲ್ಲಿರುವ ಮಾಹಿತಿಯನ್ನು ಇನ್ನೊಂದು ವಸ್ತುವಿನ ತನಕ ಅಥವಾ ಕಂಪ್ಯೂಟರ್‌ನ ತನಕ ಅಥವಾ ಸರ್ವ್ಹರ್ ತನಕ ತಲುಪಿಸುವುದು.
• ಎನಾಲಿಸಿಸ್ ಅಂದರೆ ಲಭಿಸಿರುವ ಮಾಹಿತಿಯ ಕುರಿತು ಕೂಲಂಕುಷವಾಗಿ ಅಭ್ಯಾಸ ಮಾಡಿ ಅದನ್ನು ತೀರ್ಮಾನಿಸುವುದು. (ಚಿತ್ರ ಕ್ರ. 3)
IoT ಇರುವ ಯಾವುದೇ ವಸ್ತುವಿನ ಕುರಿತಾದ ಉದಾಹರಣೆಯನ್ನು ನೀಡುವುದಾದಲ್ಲಿ, ಫಿಟ್-ಬಿಟ್, ಗೋ-ಕೀ ಅಥವಾ ಮೂವ್‌ಹ್‌-ನೌ ಇಂತಹ ಫಿಟ್‌ನೆಸ್ ಬ್ಯಾಂಡ್‌ನ ಕುರಿತು ಹೇಳಬಹುದು. ಇಂದಿನ ಕಾಲದಲ್ಲಿ ಕೈಗೆ ಇಂತಹ ಪ್ರಸಿದ್ಧವಾದ ಬ್ರಾಂಡ್ ಕಟ್ಟಿಕೊಂಡು ದಿನವಿಡಿ ಮಾಡುತ್ತಿರುವ ಚಟುವಟಿಕೆಗಳು ಮತ್ತು ವ್ಯಾಯಾಮದ ನೊಂದಣಿಯನ್ನು ತುಂಬಾ ಜನರು ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಇದರಲ್ಲಿ ನಾವು ನಡೆಯುವಾಗ ಇಡುವ ಹೆಜ್ಜೆಗಳು, ರಕ್ತವಾಹಿನಿಗಳ ಬಡಿತ, ಉಷ್ಣಾಂಶ ಇಂತಹ ಅನೇಕ ಅಂಶಗಳ ಮಾಪನವನ್ನು ಮಾಡಿ ಮಾಹಿತಿಯನ್ನು ತಯಾರು ಮಾಡಲಾಗುತ್ತದೆ. ಈ ಬ್ರಾಂಡ್‌ಗಳಲ್ಲಿರುವ ಇಲೆಕ್ಟ್ರಾನಿಕ್ ಚಿಪ್ ತಯಾರಿಸಿದ ಮಾಹಿತಿಯನ್ನು ಡಿಜಿಟಲ್ ಸ್ಪರೂಪದಲ್ಲಿ ರೂಪಾಂತರಿಸುತ್ತದೆ. ನಂತರ ಈ ಮಾಹಿತಿಯನ್ನು ಬೇರೆ ಜಾಗದಲ್ಲಿ ಇಟ್ಟಿರುವ ಯಾವುದೇ ಒಂದು ಸರ್ವರ್‌ಗೆ ವಾಯರ್‌ಲೆಸ್ ಮಾಧ್ಯಮ ಮೂಲಕ ಕಳುಹಿಸಲಾಗುತ್ತದೆ. ಅಲ್ಲಿ ಈ ಮಾಹಿತಿಯನ್ನು ಪರೀಕ್ಷಿಸಿ, ಒಂದು ಗಂಟೆ, ಒಂದು ದಿನ ಅಥವಾ ಹಿಂದಿನ ಹಲವಾರು ದಿನ, ತಿಂಗಳುಗಳಲ್ಲಿ ಆಗಿರುವ ಚಟುವಟಿಕೆಗಳನ್ನು ಮತ್ತು ಎಷ್ಟು ಕ್ಯಾಲರಿಗಳನ್ನು ಬಳಸಲಾಯಿತು, ಎಂಬಿತ್ಯಾದಿ ಸಂಪೂರ್ಣವಾದ ವಿವರಗಳು ತಯಾರಿಸಲ್ಪಡುತ್ತವೆ. ಸದ್ಯಕ್ಕೆ ಇಂತಹ ಕೆಲಸವನ್ನು ಫಿಟ್‌ನೆಸ್ ಬ್ರಾಂಡ್ ಮಾಡಿದರೂ ಕೂಡಾ, ಇದೇ ಚಟುವಟಿಕೆಯನ್ನು ಮಶಿನ್, ಕಾರ್ ಅಥವಾ ಮನೆಮನೆಗಳಲ್ಲಿರುವ ರೆಫ್ರಿಜರೇಟರ್ ಮೂಲಕ ಮಾಡಿದಲ್ಲಿ ಉಂಟಾಗುವ ಕ್ರಿಯೆಯನ್ನು IoT ಎಂದು ಹೇಳಲಾಗುತ್ತದೆ. ಇದೇ ತಂತ್ರಜ್ಞಾನವು IoT ತಂತ್ರಜ್ಞಾನವು ಇಂಡಸ್ಟ್ರೀ 4.0 ಈ ವ್ಯವಸ್ಥೆಯ ಬೆನ್ನೆಲುಬಾಗಿದೆ.
IoT ಇದರ ಕುರಿತು ಈ ತಂತ್ರಜ್ಞಾನವನ್ನು ಯಾವುದೊಂದು ಕಾರಖಾನೆಯಲ್ಲಿ, ಆಫೀಸ್‌ನಲ್ಲಿ ಹೇಗೆ ಕಾರ್ಯಗತ ಮಾಡಲಾಯಿತು ಎಂಬುದರ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು, ಇದೇ ಲೇಖನದಲ್ಲಿ ಮತ್ತು ಮುಂದಿನ ಪ್ರತಿಯೊಂದು ಲೇಖನದಲ್ಲಿ ನೇರವಾಗಿ ಉದಾಹರಣೆಗಳೊಂದಿಗೆ ತಿಳಿದುಕೊಳ್ಳಲಿದ್ದೇವೆ. ಇದರಿಂದಾಗಿ IoT ತಂತ್ರಜ್ಞಾನದ ಕುರಿತಾದ ತಾಂತ್ರಿಕ ಅಂಶಗಳು ತಿಳಿಯುತ್ತವೆ ಮತ್ತು ಇದರೊಂದಿಗೆ ನಮ್ಮ ಅಕ್ಕಪಕ್ಕದಲ್ಲಿರುವ ಪರಿಚಯದ ಉದ್ಯಮಿಗಳು IoT ಯ ಲಾಭಗಳನ್ನು ಪಡೆಯುವಲ್ಲಿ ಹೇಗೆ ಹೆಜ್ಜೆಗಳನ್ನು ಹಾಕುತ್ತಿದ್ದಾರೆ, ಎಂಬದನ್ನು ಗಮನಿಸಬಹುದು. ಪ್ರಸ್ತುತ ಈ ಲೇಖನದಲ್ಲಿ ನಾವು ಕಾರಖಾನೆಯಲ್ಲಿ ಗುಣಮಟ್ಟದ ತಪಾಸಣೆಗೋಸ್ಕರ IoT ತಂತ್ರವನ್ನು ಹೇಗೆ ಬಳಸಲಾಗುತ್ತದೆ, ಎಂಬುದನ್ನು ವೀಕ್ಷಿಸೋಣ.
ಗುಣಮಟ್ಟದ ಪರಿಶೀಲನೆ (ಕ್ವಾಲಿಟಿ ಇನ್‌ಸ್ಪೆಕ್ಷನ್) ವ್ಯವಸ್ಥೆಗೆ IoT
ಯಾವುದೇ ಮಶಿನ್ ತಯಾರಿಸುವುದು, ವಾಹನ ಅಥವಾ ಪ್ರತಿದಿನ ಬಳಸುವಂತಹ ಉಪಕರಣೆಗಳಲ್ಲಿರುವ ಬಿಡಿ ಭಾಗಗಳನ್ನು ತಯಾರಿಸುವುದು ಮತ್ತು ಅದನ್ನು ಜೋಡಿಸುವುದು ಇಂತಹ ಕೆಲಸಗಳನ್ನು ಮಾಡಲು ಸಾವಿರಾರು ಕಾರಖಾನೆಗಳು ಇಂದು ಅಸ್ತಿತ್ವದಲ್ಲಿವೆ. ಮಶಿನ್ ಅಥವಾ ವಾಹನಗಳ ಕಟ್ಟುವಿಕೆ ನಿರ್ದೋಷವಾಗಿ ಆಗಲು ಅದರ ಪ್ರತಿಯೊಂದು ಬಿಡಿ ಬಿಡಿಯಾದ ಯಂತ್ರೋಪಕರಣಗಳನ್ನು ಡಿಝೈನ್‌ನಂತೆಯೇ ತಯಾರಿಸುವುದು ತುಂಬಾ ಅವಶ್ಯಕವಾಗಿರುತ್ತದೆ. ಇದಕ್ಕೋಸ್ಕರ ಪ್ರತಿಯೊಂದು ಬಿಡಿ ಯಂತ್ರೋಪಕರಣಗಳನ್ನು ತಯಾರಿಸಿದ ನಂತರ ಅದರ ಸರಿಯಾದ ಮಾಪನವನ್ನು ಮಾಡಿ ಅಪೇಕ್ಷಿಸಿದಂತೆ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವುದು ಅನಿವಾರ್ಯವಾಗಿರುತ್ತದೆ. ಪ್ರತಿಯೊಂದು ಯಂತ್ರೋಪಕರಣಗಳ ತಪಾಸಣೆಯನ್ನು ಈ ರೀತಿಯಲ್ಲಿ ಮಾಡುವುದರಿಂದ ಸಮಯವು ವ್ಯರ್ಥವಾಗುತ್ತದೆ ಮತ್ತು ಖರ್ಚು ಕೂಡಾ ಹೆಚ್ಚಾಗುತ್ತದೆ. ಆದರೆ ಅದನ್ನು ತಡೆಯುವುದು ಅಸಾಧ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಸ್ವಯಂಚಾಲನೆ ಮತ್ತು IoT ಯನ್ನು ಯೋಗ್ಯವಾಗಿ ಬಳಸಿ ಗುಣಮಟ್ಟದ ತಪಾಸಣೆಯ ಪ್ರಣಾಳಿಕೆಯನ್ನು ಹೆಚ್ಚು ನಿರ್ದೋಷವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಬಹುದು.
 
ಫರ್ನಿಚರ್‌ಗಳ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮದ ಉದಾಹರಣೆಯನ್ನು ನಾವು ನೋಡೋಣ. ಖುರ್ಚಿ, ಟೇಬಲ್, ಬೆಂಚ್, ವರ್ಕ್ ಬೆಂಚ್ ಇಂತಹ ವಿವಿಧ ಫರ್ನಿಚರ್‌ಗಳಿಗೋಸ್ಕರ ಬೇಕಾಗುವ ಬಿಡಿ ಭಾಗಗಳನ್ನು ಒಂದು ಕಂಪನಿಯು ತಯಾರಿಸುತ್ತದೆ. ಮನೆ, ಆಫೀಸ್, ಸಭಾಂಗಣ, ಮಾಲ್ ಅಥವಾ ಶೋರೂಮ್‌ನಂತಹ ಕಮರ್ಶಿಯಲ್ ಸಂಸ್ಥೆಗಳಿಗೆ ಫರ್ನಿಚರ್ ಪೂರೈಸುವಂತಹ ಹೆಚ್ಚಿನ ಎಲ್ಲ ರಾಷ್ಟ್ರೀಯ ಮತ್ತು ಆಂತರರಾಷ್ಟ್ರೀಯ ಕಂಪನಿಗಳಿಗೆ ಬಿಡಿಭಾಗಗಳನ್ನು ಪೂರೈಸಲಾಗುತ್ತದೆ. ಯಾವುದೇ ಫರ್ನಿಚರ್‌ನ ಮುಖ್ಯವಾದ ಸ್ಟ್ರಕ್ಚರಲ್ ಸಪೋರ್ಟ್ ಮೆಂಬರ್‌ಗೆ ಪ್ಲಾಟ್ ನೆಸ್ ನಿರ್ಧರಿಸಿದ ಮಿತಿಯಲ್ಲಿರುವುದು ಮಹತ್ವದ್ದಾಗಿದೆ. ಇದರಿಂದಾಗಿ ಆ ಭಾಗಗಳನ್ನು ಇನ್ನಿತರ ಭಾಗಗಳೊಂದಿಗೆ ಜೋಡಿಸುವುದು ಅವಲಂಬಿಸಿರುತ್ತದೆ. ಯೂವುದೇ ಬಿಡಿಭಾಗವು ಸಾಕಷ್ಟು ಸಮತಲದಲ್ಲಿ ಇರದೇ ಇದ್ದಲ್ಲಿ ಅದರ ಜೋಡಣೆಯು ಸರಿಯಾಗಿ ಆಗುವುದಿಲ್ಲ. ಅಲ್ಲದೇ ಜೋಡಣೆ ಸರಿಯಾಗದೇ ಇದ್ದಲ್ಲಿ ಫರ್ನಿಚರ್ ಸಾಕಷ್ಟು ದೃಢವಾಗುವುದಿಲ್ಲ. ಈ ರೀತಿ ದೃಢತೆ ಇಲ್ಲದ ಫರ್ನಿಚರ್‌ಗಳನ್ನು ಮಾರಾಟ ಮಾಡುವ ಕಂಪನಿಗಳ ವಿಶ್ವಾಸಾರ್ಹತೆಗೆ ತಡೆಯೊಡ್ಡಲ್ಪಡುತ್ತದೆ. ಇದರಿಂದಾಗಿ ಯಾವುದೇ ಭಾಗದಲ್ಲಿ ದೋಷ ಕಂಡುಬಂದಲ್ಲಿ ಅದರೊಂದಿಗಿರುವ ಸಂಪೂರ್ಣ ಲಾಟ್ ಆ ಕಂಪನಿಗಳಿಂದ ತಿರಸ್ಕರಿಸಲ್ಪಡುತ್ತದೆ. ತೊಂದರೆಗಳನ್ನುಂಟು ಮಾಡುವ ರೀತಿಯಲ್ಲಿ ಈ ಬಿಡಿ ಭಾಗಗಳನ್ನು ತಯಾರಿಸುವ ಲಘು, ಮಧ್ಯಮ ಕಂಪನಿಗಳಿಗೆ ದೊಡ್ಡ ಹೊಡೆತವೇ ಸರಿ. ಅದಕ್ಕೋಸ್ಕರ ಸಮತಲದ ಪರೀಕ್ಷೆಯು ತುಂಬಾ ಮಹತ್ವದ ಹೆಜ್ಜೆಯಾಗಿರುತ್ತದೆ.
 
ಫರ್ನಿಚರ್‌ನ ಈ ಬಿಡಿಭಾಗಗಳನ್ನು ಪ್ಲಾಸ್ಟಿಕ್ ಅಥವಾ ಲೋಹಗಳಿಂದ ತಯಾರಿಸಲಾಗಿರುತ್ತದೆ. ಮುಖ್ಯವಾದ ಸ್ಟ್ರಕ್ಚರ್ ಲೋಹಗಳಿಂದ ತಯಾರಿಸಲಾಗುತ್ತದೆ. ಈ ಲೋಹಗಳೆಂದರೆ ಸ್ಟೀಲ್ ಅಥವಾ ಕೆಲವೊಮ್ಮೆ ಅಲ್ಯುಮಿನಿಯಮ್. ಈ ಬಿಡಿ ಭಾಗಗಳನ್ನು ಲೋಹಗಳಿಂದ ತಯಾರಿಸಿರುವ ದಪ್ಪವಾದ ತಗಡುಗಳ ತುಂಡುಗಳನ್ನು ಮಾಡಿ, ನಂತರ ಅವುಗಳನ್ನು ಬೇಕಾದಂತೆ ಬಗ್ಗಿಸಿ, ವೆಲ್ಡಿಂಗ್ ಮಾಡಿ ಜೋಡಿಸಿ ತಯಾರಿಸಲಾಗುತ್ತದೆ. ಅದರ ನಂತರ ಈ ಭಾಗಗಳನ್ನು ಒಂದಕ್ಕೊಂದನ್ನು ಅಥವಾ ಇನ್ನಿತರ ಭಾಗಗಳನ್ನು ಬೋಲ್‌ಟ್‌ ಅಥವಾ ರಿವೆಟ್‌ನ ಸಹಾಯದಿಂದ ಜೋಡಿಸಲಾಗುತ್ತದೆ. ಇದರಲ್ಲಿರುವ ಪ್ರಮುಖವಾದ ಭಾಗವನ್ನು 4-6 ಜಾಗದಲ್ಲಿ ಇನ್ನೊಂದು ಸಮತಲವಿರುವ ಭಾಗದೊಂದಿಗೆ ಜೋಡಿಸಲಾಗುತ್ತದೆ. ಆದ್ದರಿಂದ ಅದರ ಎಲ್ಲ ಬಿಂದುಗಳು ಅಂದಾಜು 50-100 ಮೈಕ್ರಾನ್‌ನಲ್ಲಿ ಒಂದೇ ಸರ್ಫೇಸ್‌ನಲ್ಲಿರುವುದು ಅಗತ್ಯವಾಗಿದೆ. ಪಂಚಿಂಗ್, ಬೆಂಡಿಂಗ್, ವೆಲ್ಡಿಂಗ್ ಇಂತಹ ಅನೇಕ ಪ್ರಕ್ರಿಯೆಗಳಿಂದ ಮುಂದೆ ಸಾಗುವಾಗ ತಯಾರಿಸಲ್ಪಡುವ ಭಾಗಗಳ ಸಮತಲವು ಹಾಳಾಗುತ್ತದೆ. ಅಲ್ಲದೇ ಒಂದು ಸರ್ಫೇಸ್‌ನಲ್ಲಿ ತಮಗೆ ಬೇಕಾಗಿರುವ ಬಿಂದುವಿನಲ್ಲಿ ಪ್ರತ್ಯಕ್ಷವಾಗಿ ಸುಮಾರು 0.5 ರಿಂದ 2 ಮಿ.ಮೀ.ನಷ್ಟು ವ್ಯತ್ಯಾಸವು ಕಂಡು ಬರುತ್ತದೆ. ಈ ಸಮತಲವನ್ನು ಪರೀಕ್ಷಿಸುವ ಕೆಲಸವು ಈ ಕಳೆದ ತುಂಬಾ ವರ್ಷಗಳು ಸಂಪೂರ್ಣವಾಗಿ ಮಾನವಾಧಾರಿತ ರೀತಿಯಲ್ಲಿ ನಡೆಯುತ್ತಿತ್ತು. ಒಬ್ಬ ಆಪರೇಟರ್ ಪ್ರತಿಯೊಂದು ಭಾಗವನ್ನು ಒಂದು ರೆಫರನ್‌ಸ್‌ ಪ್ಲೇನ್‌ನಲ್ಲಿ ಇಟ್ಟು ನಂತರ ಸ್ವಲ್ಪ ಮೇಲೆ ಕೆಳಗೆ ಸರಿಸಿ ಆ ಭಾಗವು ಅಲುಗಾಡುವುದಿಲ್ಲ, ಎಂಬುದರ ಕುರಿತಾದ ಪರೀಕ್ಷೆಯನ್ನು ಮಾಡಬೇಕು. ಈ ಭಾಗವು ಎಷ್ಟು ಮತ್ತು ಹೇಗೆ ಅಲುಗಾಡುತ್ತದೆ, ಇದಕ್ಕೆ ಅನುಸಾರವಾಗಿ ಬೇಕಾಗಿರುವ ಮೂಲೆಯನ್ನು ಒತ್ತಿ ಅಥವಾ ಹೊಡೆದು-ಬಡಿದು ಮತ್ತೆ ಆ ಭಾಗವನ್ನು ಪರೀಕ್ಷಿಸಲಾಗುತ್ತದೆ. ಈ ರೀತಿಯಿಂದ ಪ್ರತಿದಿನ ನೂರಾರು ಭಾಗಗಳನ್ನು ಪರೀಕ್ಷಿಸಿ ಮತ್ತು ದುರಸ್ತಿ ಮಾಡಿ ಮುಂದೆ ಕಳುಹಿಸಲಾಗುತ್ತಿತ್ತು. ತುಂಬಾ ಕಡಿಮೆ ಖರ್ಚಿನಲ್ಲಿ ಪ್ರತಿದಿನವೂ ನೂರಾರು ಭಾಗಗಳನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಇಂತಹ ಸುಲಭವಾದ ರೀತಿಯು ತುಂಬಾ ಉಪಯುಕ್ತವಾಗಿದ್ದರೂ ಅದರಿಂದಾಗಿ ಅನೇಕ ನಷ್ಟಗಳೂ ಉಂಟಾಗುವು ಸಾಧ್ಯತೆಯಿತ್ತು. ತಪಾಸಣೆಯು ಸಂಪೂರ್ಣವಾಗಿ ಆಪರೇಟರ್‌ನ ಸಾಮರ್ಥ್ಯಕ್ಕೆ ಅವಲಂಬಿಸಿದ್ದು ಅವನಿಂದ ಯಾವುದೇ ತಪ್ಪುು ಅಥವಾ ನಿರ್ಲಕ್ಷ್ಯ ಆದಲ್ಲಿ ಪರೀಕ್ಷಿಸಿರುವ ಭಾಗವು ನಿರ್ದೋಷವಾಗಿಯೇ ಇರುತ್ತದೆ, ಎಂಬ ಖಾತರಿ ವಹಿಸುವುದು ಅಸಾಧ್ಯವಾಗಿತ್ತು. ಹಾಗೆಯೇ ಪ್ರತಿಯೊಂದು ಶಿಫ್‌ಟ್‌‌ನಲ್ಲಿ ಯಾವ ವಿಧದ ಎಷ್ಟು ಭಾಗಗಳನ್ನು ಪರೀಕ್ಷಿಸಲಾಯಿತು ಎಂಬುದರ ಕುರಿತು ಬರೆದಿಡುವ ಕೆಲಸವೂ ಆಪರೇಟರ್‌ನಿಂದಲೇ ನಡೆಯುತ್ತಿತ್ತು. ಇದಕ್ಕೋಸ್ಕರ ನುರಿತ ಮತ್ತು ಅನುಭವವುಳ್ಳ ಕೆಲಸಗಾರರ ಅಗತ್ಯವಿರುತ್ತದೆ. ಇದರಿಂದ ಸೂಕ್ತವಾಗಿ ಬರೆದಿಡುವುದು ಆಗದೇ ಇರುವುದು ಅಥವಾ ನೊಂದಾಣಿಕೆ ಅಥವಾ ನಿಜವಾದ ಅಂಕೆ-ಸಂಖ್ಯೆಗಳಲ್ಲಿ ವ್ಯತ್ಯಾಸವು ಕಂಡುಬರುತ್ತಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಯೋಗ್ಯ ರೀತಿಯಲ್ಲಿ ಪರಿಹಾರವನ್ನು ಹುಡುಕಲು ನಾವು ಸ್ವಯಂಚಾಲನೆ ಮತ್ತು IoT ಈ ತಂತ್ರದ ಸೂಕ್ತವಾದ ಸಹಾಯವನ್ನು ಪಡೆದೆವು.
 
ಸಮತಲದ ಮಾಪನವನ್ನು ಮಾಡಲು ಅನೇಕ ತಂತ್ರಗಳು ರೂಢಿಯಲ್ಲಿವೆ. ಸಮತಲವು ಮೈಕ್ರಾನ್‌ನಲ್ಲಿ ಬೇಕಾಗುವುದರಿಂದ ಇಂತಹ ಸೂಕ್ಷ್ಮ ರೀತಿಯ ಮಾಪನಗಳಿಗೋಸ್ಕರ ಕೆಪ್ಯಾಸಿಟಿವ್, ಇಂಡಕ್ಟಿವ್, ಫ್ಲೇಪರ್ ನೋಸಲ್ ಅಥವಾ ಆಪ್ಟಿಕಲ್ ರೀತಿಯಲ್ಲಿ ಪೊಸಿಶನ್ ಸೆನ್ಸರ್ ಬಳಸಲಾಗುತ್ತವೆ. ಇಂತಹ ಪ್ರತಿಯೊಂದು ರೀತಿಯಲ್ಲಿ ಹಲವಾರು ಲಾಭಗಳು ಮತ್ತು ನಷ್ಟವೂ ಇರುತ್ತದೆ. ಹೀಗಿದ್ದರೂ ಕೂಡಾ ಎಲ್ಲ ರೀತಿಯಲ್ಲಿಯೂ ಸೆನ್ಸರ್‌ಗಳ ಬೆಲೆಯು ತುಂಬಾ ಹೆಚ್ಚಾಗಿರುತ್ತದೆ. ತಮಗೆ ಬೇಕಷ್ಟು ಲಾಭವನ್ನು ನೀಡುವ ಯಂತ್ರಣೆಯನ್ನು ತಯಾರಿಸಲು ನಾವು ‘ಸ್ಟ್ರೇನ್ ಗೇಜ್’ ಈ ವಿಧದ ‘ಫೋರ್ಸ್ ಸೆನ್ಸರ್’ನ ಸಹಾಯವನ್ನು ಪಡೆದೆವು. ಫರ್ನಿಚರ್‌ಗಳ ಬಿಡಿ ಭಾಗಗಳ 4-6 ಬಿಂದುಗಳಲ್ಲಿ ಸಮತಲವನ್ನು ಪರೀಕ್ಷಿಸುವುದಾದಲ್ಲಿ ಆ ಬಿಂದುಗಳ ಸ್ಥಾನಕ್ಕೆ ಅನುಸಾರವಾಗಿ ಒಂದು ರೆಫರನ್‌ಸ್‌ ಪ್ಲೇಟ್‌ನಲ್ಲಿ 6 ಸ್ಟ್ರೇನ್ ಗೇಜ್ ಸೆನ್ಸರ್ ಅಳವಡಿಸಿ ಸಮತಲದ ಮಾಪನದ ಯಂತ್ರಣೆಯನ್ನು (ಚಿತ್ರ ಕ್ರ. 4) ತಯಾರಿಸಲಾಗುತ್ತದೆ. ಸ್ಟ್ರೇನ್ ಗೇಜ್ ಸೆನ್ಸರ್ ಕಾರಖಾನೆಯಲ್ಲಿರುವ ಹವಾಮಾನದಲ್ಲಿ ಹಾಳಾಗದೇ ದೀರ್ಘಾವಧಿಯಲ್ಲಿ ಸಾಮರ್ಥ್ಯದಿಂದ ಕೆಲಸ ಮಾಡಬಲ್ಲದು. ಹೀಗಿದ್ದರೂ ಇದರ ಮೂಲಭೂತವಾದ ಅಂಗವಾಗಿರುವ ಸ್ಟ್ರೇನ್ ಗೇಜ್‌ನ ಪಟ್ಟಿಯು ಯೋಗ್ಯವಾದ ಬೆಲೆಯಲ್ಲಿ ಉಪಲಬ್ಧವಿರುತ್ತದೆ, ಇದೇ ಅದರ ಲಾಭವಾಗಿದೆ. ಈ ಸೆನ್ಸರ್‌ಗಳ ಮಾಧ್ಯಮದಿಂದ ನಾವು ನೇರವಾದ ದೂರದ ಮಾಪನವನ್ನು ಮಾಡದೇ, ಅದರಲ್ಲಿ ಉಂಟಾಗುವ ಒತ್ತಡದ ಮಾಪನವನ್ನು ಮಾಡಲಾಗುತ್ತದೆ. ಯಾವ ವಸ್ತುವಿನ ಸಮತಲದ ಮಾಪನವನ್ನು ಮಾಡಬೇಕೋ, ಅದರ ಬಣ್ಣ, ಗಾತ್ರ, ಪದಾರ್ಥ, ವಿದ್ಯುತ್ ಅಥವಾ ಕಾಂತೀಯ ಗುಣಧರ್ಮ ಇಂತಹ ಯಾವುದೇ ಗುಣಧರ್ಮದಲ್ಲಿ ಈ ಮಾಪನವು ಅವಲಂಬಿಸಿರುವುದಿಲ್ಲ, ಇದೇ ಇದರ ಪ್ರಮುಖವಾದ ಲಾಭವಾಗಿದೆ. ಇದರಿಂದಾಗಿ ಕಾಲಕ್ಕೆ ತಕ್ಕಂತೆ ವಸ್ತುಗಳ ಸ್ಪರೂಪದಲ್ಲಿ ಬದಲಾವಣೆಯಾದರೂ ಪ್ರೆಶರ್ ಮೆಜರ್‌ಮೆಂಟ್‌ಗೆ ಯಾವುದೇ ರೀತಿಯ ಪರಿಣಾಮವು ಉಂಟಾಗುವುದಿಲ್ಲ. ಸ್ಟ್ರೇನ್ ಗೇಜ್‌ನಲ್ಲಿ ಎಷ್ಟರ ತನಕ ಯಾವುದೇ ವಸ್ತುವನ್ನು ಒರಗಿಸುವುದಿಲ್ಲವೋ, ಅಷ್ಟರ ತನಕ ಅದರ ರೀಡಿಂಗ್ ಶೂನ್ಯದಷ್ಟು ಇರುತ್ತದೆ. ಮೇಲೆ ತಿಳಿಸಿದ ಯಂತ್ರಣೆಯಲ್ಲಿ ವಸ್ತುಗಳನ್ನು ಪರೀಕ್ಷಿಸುವಾಗ ಎಲ್ಲಿ ಆ ವಸ್ತು ಸೆನ್ಸರ್‌ಗೆ ಸ್ಪರ್ಶ ಮಾಡುವುದಿಲ್ಲವೋ, ಅಲ್ಲಿ ಸೆನ್ಸರ್‌ನ ರೀಡಿಂಗ್ ಶೂನ್ಯದಷ್ಟು ಅಥವಾ ಒಂದು ನಿರ್ದಿಷ್ಟ ಮಿತಿಗಿಂತ ಕಡಿಮೆ ಇರುತ್ತದೆ, ಎಂಬುದೇ ಇದರ ಅರ್ಥವಾಗುತ್ತದೆ. ಆರು ಜಾಗಗಳಲ್ಲಿ ಪ್ರತಿಯೊಂದು ಸೆನ್ಸರ್‌ನ ರೀಡಿಂಗ್ ಆ ನಿರ್ದಿಷ್ಟ ಮಿತಿಗಿಂತ ಹೆಚ್ಚು ಇರುತ್ತದೆಯೋ, ಆಗ ಆ ವಸ್ತು ಎಲ್ಲೆಡೆಯೂ ಒರಗಿಸಲ್ಪಡುತ್ತದೆ. ಈ ರೀತಿಯಲ್ಲಿ ಮಾಡಲಾಗುವ ಮಾಪನದಿಂದ ನಿರ್ದೋಷವಾದ ಸಮತಲವನ್ನು ಪರೀಕ್ಷಿಸಬಹುದು ಮತ್ತು ಅದರೊಂದಿಗೆ ಯಾವ ಜಾಗದಲ್ಲಿ ಸುಧಾರಣೆಯ ಅಗತ್ಯವಿದೆ, ಅದನ್ನೂ ನಿರ್ಧರಿಸಬಹುದು.
 
ತಪಾಸಣೆ ಮಾಡಲ್ಪಡುವ ವಸ್ತು 4-6 ಸ್ಪೇಸರ್‌ನಲ್ಲಿ ಇಡಲಾಗುತ್ತದೆ. ಸ್ಪೇಸರ್ ವರ್ಟಿಕಲ್ ರೌಂಡ್ ಆಕಾರದಲ್ಲಿದ್ದು ಅದರ ವ್ಯಾಸವು ಸ್ಟ್ರೇನ್ ಗೇಜ್‌ನ ವ್ಯಾಸದಷ್ಟಿರುತ್ತದೆ. ಇದರಿಂದಾಗಿ ಪರೀಕ್ಷಿಸಲ್ಪಡುವ ವಸ್ತುಗಳ ಭಾರದಿಂದಾಗಿ ತಯಾರಾಗುವ ಒತ್ತಡ, ಸ್ಟೇನ್ ಗೇಜ್‌ನಲ್ಲಿ ಯೋಗ್ಯವಾಗಿ ಹರಡಲಾಗುತ್ತದೆ. ಸ್ಟೇನ್ ಗೇಜ್‌ನಲ್ಲಿರುವ ಕೇವಲ ಯಾವುದೇ ಒಂದು ಬಿಂದು ಅಥವಾ ರೇಖೆಯಲ್ಲಿ ಒತ್ತಡವು ಉಂಟಾಗುವುದಿಲ್ಲ.
 
ಸಮತಲದ ಮಾಪನಕ್ಕೋಸ್ಕರ ನಾವು ಮಾಡಿರುವ ವ್ಯವಸ್ಥೆಯಲ್ಲಿ ಮೇಲೆ ತಿಳಿಸಿದಂತೆ 6 ಸ್ಟ್ರೇನ್ ಗೇಜ್‌ನ ಯಂತ್ರಣೆ (ಚಿತ್ರ ಕ್ರ. 5) ತಯಾರಿಸಲಾಯಿತು ಮತ್ತು ಈ 6 ಸೆನ್ಸರ್‌ಗಳನ್ನು ಇಲೆಕ್ಟ್ರಾನಿಕ್ ಕಂಟ್ರೋಲಿಂಗ್ ಸರ್ಕಿಟ್‌ಗೆ ADC (ಎನಾಲಾಗ್ ಸಿಗ್ನಲ್‌ನ್ನು ಡಿಜಿಟಲ್ ಸಿಗ್ನಲ್‌ನಲ್ಲಿ ರೂಪಾಂತರಿಸುವ ಚಿಪ್) ಮೂಲಕ (ಚಿತ್ರ ಕ್ರ. 6) ಜೋಡಿಸಲಾಯಿತು. ಕಂಟ್ರೊಲಿಂಗ್ ಸರ್ಕ್ಯುಟ್‌ನಲ್ಲಿರುವ ಮುಖ್ಯ ಕಂಟ್ರೋಲಿಂಗ್ ಚಿಪ್ ಈ 6 ಸೆನ್ಸರ್‌ಗಳಿಂದ ಬರುವ ರೀಡಿಂಗ್‌ಗೆ ಅನುಸಾರವಾಗಿ ಆಪರೇಟರ್‌ನ ಎದುರು ಇರುವ ಪ್ಯಾನೆಲ್‌ನಲ್ಲಿರುವ ದೀಪಗಳನ್ನು ಹಚ್ಚಿ ಸಹಜ ಮತ್ತು ಸುಲಭವಾದ ರೀತಿಯಲ್ಲಿ ಯಂತ್ರೋಪಕರಣಗಳು ನಿರ್ದೋಷ ಅಥವಾ ಸದೋಷವಾಗಿವೆಯೇ (Ok/ Not Ok) ಎಂಬುದನ್ನು (ಚಿತ್ರ ಕ್ರ. 7) ತೋರಿಸುತ್ತದೆ. ಈ ಸರ್ಕಿಟ್‌ನಲ್ಲಿ ಈ ಕಂಟ್ರೋಲರ್‌ನೊಂದಿಗೆ ವೈ-ಫೈ ಸಂದೇಶದ ಪ್ರಸಾರವನ್ನು ಮಾಡಬಲ್ಲ ಕಂಟ್ರೋಲರ್ ಬಳಸಲಾಗಿದೆ. ಅದರ ಸಹಾಯದಿಂದ ಪರೀಕ್ಷಿಸುವ ಪ್ರತಿಯೊಂದು ವಸ್ತುವಿನ ಸಂಪೂರ್ಣವಾದ ಮಾಹಿತಿಯನ್ನು (ನಿರ್ದೋಷ ಅಥವಾ ಸದೋಷ, ಸದೋಷ ಯಂತ್ರಭಾಗಗಳಲ್ಲಿ ಎಲ್ಲಿ ದೋಷಗಳಿರುತ್ತವೆಯೋ, ಆ ಜಾಗ, ಮಾಪನವನ್ನು ಮಾಡುತ್ತಿರುವ ವೇಳೆ, ಪ್ರಸ್ತುತ ಶಿಷ್ಟ್‌‌ನಲ್ಲಿ ಈ ತನಕ ಮಾಪನ ಮಾಡಿರುವ ನಿರ್ದೋಷ ಮತ್ತು ಸದೋಷ ವಸ್ತುಗಳ ಅಂಕೆ- ಸಂಖ್ಯೆ ಇತ್ಯಾದಿ) ಪ್ರಮುಖವಾದ ಕಂಪ್ಯೂಟರ್‌ನ ಕಡೆಗೆ ನಿಯಮಿತವಾಗಿ ಕಳುಹಿಸಲಾಗುತ್ತದೆ. ಇದರಲ್ಲಿ ಎರಡು ರೀತಿಯ ಲಾಭಗಳಾಗುತ್ತದೆ. ತಪಾಸಣೆಯ ಅಂಶಗಳನ್ನು ಬರೆದಿಡಲು ಬೇರೆ ವೇಳೆಯ ಅಗತ್ಯವಿರುವುದಿಲ್ಲ ಮತ್ತು ಇಂತಹ ಅಂಶಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗುವುದೂ ಅಸಾಧ್ಯ. ಇದರ ಹೊರತಾಗಿ ಇಂತಹ ಅನೇಕ ದಿನಗಳ ಮಾಹಿತಿಯ ಅಭ್ಯಾಸವನ್ನು ಮಾಡಿ ಆಗಾಗ ಗಮನಕ್ಕೆ ಬರುವಂತಹ ದೋಷಗಳ ಮೂಲ ಕಾರಣವನ್ನು ಹುಡುಕುವುದು ಸುಲಭವಾಗುತ್ತದೆ.
 
ಸೂಕ್ಷ್ಮವಾಗಿ ವೀಕ್ಷಿಸಿದಾಗ, ಕಡಿಮೆ ಖರ್ಚಿನಲ್ಲಿ ಸಮತಲದ ತಪಾಸಣೆಯ ರೀತಿಯು ಸ್ವಯಂಚಾಲಿತವಾಯಿತು, ಅಲ್ಲದೇ ಇದರ ಹೊರತಾಗಿ ಆ ಮಾಹಿತಿಯು ಒಂದು ಸೆಂಟ್ರಲೈಜ್‌ಡ್‌ ಕಂಪ್ಯೂಟರ್‌ನಲ್ಲಿ ಶೇಖರಿಸಲ್ಪಡಿಸಲಾಯಿತು. ತಪಾಸಣೆ ಆದ ತಕ್ಷಣ ಎಲ್ಲ ವಿವರಗಳು ಕಾರಖಾನೆಯಲ್ಲದೇ, ಮುಖ್ಯ ಸರ್ವರ್‌ಗೆ ಜೋಡಿಸಲ್ಪಟ್ಟಿರುವ ಎಲ್ಲರಿಗೂ, ಬೇರೆ ಬೇರೆ ಪಟ್ಟಣಗಳಲ್ಲಿರುವ ಮ್ಯಾನೆಜರ್ ಸಹಿತವಾಗಿ ಎಲ್ಲರಿಗೂ ಲಭಿಸಲಾರಂಭಿಸಿತು. ಇದರ ಅರ್ಥವೆಂದರೆ, ನಾವು ಈ ತಪಾಸಣೆಯ ರೀತಿಗೆ IoT ಎಂಬ ತಾಂತ್ರಿಕತೆಯನ್ನು ಜೋಡಿಸಿದೆವು. ಡಾಟಾ ಜನರೇಶನ್, ಕನ್ವರ್ಜನ್, ಕಮ್ಯುನಿಕೇಶನ್, ಎನಾಲಿಸಿಸ್ ಈ IoT ಯ ವಿವಿಧ ಹಂತಗಳಲ್ಲಿ ಕಲೆಕ್ಷನ್, ಕನ್ವರ್ಜನ್, ಕಮ್ಯುನಿಕೇಶನ್ ಈ ಮೂರೂ ಹಂತಗಳಲ್ಲಿ ಯೋಗ್ಯವಾದ ಉಪಯೋಗವನ್ನು ನಾವು ಮಾಡಿದೆವು. ಇದಕ್ಕೂ ಮುಂದೆ ಹೋಗಿ ನಾವು ತಪಾಸಣೆಯ ಸಿಸ್ಟಮ್ ಮೊಬೈಲ್ ಅ್ಯಪ್‌ನ ಮೂಲಕ ಇನ್ನಷ್ಟು ಸುಲಭ ಮಾಡಬಹುದು. ಅದರ ಇನ್ನಿತರ ಸ್ವಯಂಚಾಲಿತ ಸಿಸ್ಟಮ್ ಅಥವಾ ಮಶಿನ್‌ನ ಆವಶ್ಯಕತೆಯಂತೇ ಬಳಸಬಹುದು ಅಥವಾ ಶೇಖರಣೆ ಮಾಡಲಾಗುವ ಮಾಹಿತಿಯ ಪರೀಕ್ಷೆಯನ್ನು ಮಾಡಿ ಒಟ್ಟಾರೆ ಉತ್ಪಾದನೆಯ ಪ್ರಣಾಳಿಕೆಯನ್ನು ಹೆಚ್ಚು ಸಮರ್ಥವಾಗಿ ಮಾಡಬಹುದು.
 
ಈ ಲೇಖನದಲ್ಲಿ ನಾವು IoT ಯ ಯೋಗ್ಯವಾದ ಬಳಕೆಯನ್ನು ಮಾಡಿ ಗುಣಮಟ್ಟದ ತಪಾಸಣೆಯ ಪ್ರಣಾಳಿಕೆಯನ್ನು ಹೇಗೆ ಸುಧಾರಿಸಬಹುದು ಮತ್ತು ಅದರಿಂದ ಉಪಯುಕ್ತವಾದ ಮಾಹಿತಿಯನ್ನು ತಯಾರಿಸಿ ಅದನ್ನು ಎಲ್ಲೆಡೆ ತಲುಪಿಸಬಹುದು ಎಂಬುದನ್ನು ತಿಳಿದುಕೊಂಡೆವು. ಮುಂದಿನ ಲೇಖನದಲ್ಲಿ IoT ತಂತ್ರಜ್ಞಾನವನ್ನು ಉಪಯೋಗಿಸಿ ಸಪ್ಲೈ ಚೈನ್ ಮೆನೇಜ್‌ಮೆಂಟ್ ಮತ್ತು ಇನ್‌ವರ್ಡ್ ಆಗುತ್ತಿರುವ ಸಾಮಗ್ರಿಗಳ ಗುಣಮಟ್ಟದ ತಪಾಸಣೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನೋಡೋಣ.
@@AUTHORINFO_V1@@