ಹಾಬಿಂಗ್ ಫಿಕ್ಸ್ಚರ್

@@NEWS_SUBHEADLINE_BLOCK@@

Lohkarya - Udyam Prakashan    03-Feb-2021   
Total Views |
2_1 H x W: 0 x
ತಾಂತ್ರಿಕ ಕೆಲಸಗಳಲ್ಲಿ ಗಿಯರ್ ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ. ಬಲ ಮತ್ತು ವೇಗವನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕಳುಹಿಸಬೇಕಾಗುತ್ತದೆ, ಆಗ ಗಿಯರ್ ಬಳಸುವುದು ಅನಿವಾರ್ಯವಾಗಿರುತ್ತದೆ. ಅನೇಕ ಗಿಯರ್ ಗಳನ್ನು ಒಂದೇ ಬಾಕ್ಸ್ ನಲ್ಲಿ ಅಳವಡಿಸಲಾಗಿರುತ್ತದೆ. ಈ ರೀತಿಯ ಬಾಕ್ಸ್ ನ್ನು ಗಿಯರ್ ಬಾಕ್ಸ್ ಎಂದು ಹೇಳಲಾಗುತ್ತದೆ. ಬಲ ಮತ್ತು ವೇಗ ಇವುಗಳು ಹೆಚ್ಚಾಗಿ ವ್ಯತಿರಿಕ್ತ ಪ್ರಮಾಣದಲ್ಲಿರುತ್ತವೆ. ಅಂದರೆ ವೇಗ ಜಾಸ್ತಿ ಇದ್ದಾಗ ಬಲವು ಕಡಿಮೆ ಮತ್ತು ವೇಗ ಕಡಿಮೆ ಇದ್ದರೆ ಬಲ ಹೆಚ್ಚು. ಹೆಚ್ಚು ಬಲದ ಆವಶ್ಯಕತೆ ಇರುವಾಗ ದೊಡ್ಡ ಗಿಯರ್ ಬೇಕಾಗುತ್ತದೆ. ಕಡಿಮೆ ಬಲ ಇರುವಾಗ ಕಡಿಮೆ ಸಾಮರ್ಥ್ಯದ ಗಿಯರ್ ಬೇಕಾಗುತ್ತದೆ. ಇದರಿಂದಾಗಿ ಕಡಿಮೆ ಸಾಮರ್ಥ್ಯದ ಮತ್ತು ಹೆಚ್ಚು ಸಾಮರ್ಥ್ಯವುಳ್ಳ ಎರಡು ರೀತಿಯ ಗಿಯರ್ ಗಳಿಗೋಸ್ಕರ ಯಂತ್ರಣೆಯ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಹಲವಾರು ವರ್ಷಗಳ ಹಿಂದೆ ಅನೇಕ ಲೇಥ್ ಗಳನ್ನು ಒಂದೇ ಮೋಟರ್ ನಲ್ಲಿ ಬೆಲ್ಟ್ ಅಳವಡಿಸಿ ನಡೆಸಲಾಗುತ್ತಿತ್ತು. ಆದರೆ ಈಗ ಪ್ರತಿಯೊಂದು ಲೇಥ್ ಗೆ ಬೇರೆ ಬೇರೆ ಮೋಟರ್ ತಯಾರಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಗಿಯರ್ ಬಾಕ್ಸ್ ತಯಾರಿಸಲಾಗುತ್ತದೆ. ಹೆಚ್ಚಿನ ಎಲ್ಲ ಕ್ಷೇತ್ರಗಳಲ್ಲಿ ಗಿಯರ್ ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದರಿಂದಾಗಿ ಗಿಯರ್ ನ ಕುರಿತಾದ ತಿಳುವಳಿಕೆ ಮತ್ತು ಅದರ ಯಂತ್ರಣೆಯ ಮಾಹಿತಿ ಇರುವುದು ಅತ್ಯಾವಶ್ಯಕವಾಗಿದೆ.
ಗಿಯರ್ ಬೇರೆಬೇರೆ ವಿಧದಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿರುವ ಕೆಲವು ಮಹತ್ವದ ರೀತಿಗಳನ್ನು ಈ ಮುಂದೆ ನೀಡಲಾಗಿದೆ.
1. ಯಂತ್ರಣೆಯನ್ನು (ಮಶಿನಿಂಗ್) ಮಾಡಿ ತಯಾರಿಸಿರುವ ಗಿಯರ್ : ಈ ರೀತಿಯನ್ನು ಹೆಚ್ಚಾಗಿ ಎಲ್ಲೆಡೆಯಲ್ಲಿಯೂ ಬಳಸಲಾಗುತ್ತದೆ.
2. ಕಾಸ್ಟಿಂಗ್ ಮಾಡಿ ತಯಾರಿಸಿರುವ ಗಿಯರ್ : ಉದಾಹರಣೆ, ಕಬ್ಬಿನ ಹಾಲು ತೆಗೆಯುವ ಚಕ್ರದಲ್ಲಿ ಈ ರೀತಿಯ ಗಿಯರ್ ಬಳಸಲಾಗುತ್ತದೆ.
3. ಸ್ಟ್ಯಾಂಪ್ಡ್ ಗಿಯರ್ : ಈ ರೀತಿಯ ಗಿಯರ್ ತೆಳ್ಳಗಿನ ಪ್ಲೇಟ್ ನಿಂದ (ತಗಡು) ತಯಾರಿಸಲಾಗುತ್ತದೆ. ಇಂತಹ ಗಿಯರ್ ಗಳನ್ನು ಚಿಕ್ಕ ಮಕ್ಕಳು ಬಳಸುವ ಆಟಿಕೆಗಳಲ್ಲಿ ಉಪಯೋಗಿಸಲಾಗುತ್ತದೆ. ಈ ಗಿಯರ್ ಗಳು ಸಾಮಾನ್ಯವಾಗಿ ಸಾಕಷ್ಟು ನಿಖರವಾಗಿ ಇರುವುದಿಲ್ಲ. ಆದರೆ ಗಡಿಯಾರದಲ್ಲಿ ಬಳಸಲಾಗುವ ಗಿಯರ್ ಗಳು ನಿರ್ದೋಷವಾಗಿರುತ್ತವೆ. ಗಡಿಯಾರದಲ್ಲಿ ಬಳಸಲಾಗುವ ಗಿಯರ್ ಗಳನ್ನು ಉಚ್ಚಮಟ್ಟದ ಡೈ ಗಳ ಸಹಾಯದಿಂದ ತಯಾರಿಸಲಾಗುತ್ತದೆ. ಡೈಯನ್ನು ಬಳಸುವುದರಿಂದ ಬರ್ ರಹಿತವಾದ ಗಿಯರ್ ಗಳು ಸಿಗುತ್ತವೆ.
4. ರೋಲ್ಡ್ ಗಿಯರ್ : ಸ್ಟೇರಿಂಗ್ ಶಾಫ್ಟ್ ನಲ್ಲಿರುವ ಸ್ಪ್ಲೈನ್ ಈ ರೀತಿಯಲ್ಲಿ ತಯಾರಿಸಲಾಗುತ್ತದೆ.
5. ಪ್ಲಾಸ್ಟಿಕ್ ಮೋಲ್ಡಿಂಗ್ : ದ್ವಿಚಕ್ರ ವಾಹನಗಳಲ್ಲಿ ಸ್ಪೀಡೋಮೀಟರ್ ಕೇಬಲ್ ಗಲಿಗೆ ಇಂತಹ ಗಿಯರ್ ಗಳನ್ನು ಅಳವಡಿಸಲಾಗುತ್ತದೆ.
ಗಿಯರ್ ನ ಯಂತ್ರಣೆಯನ್ನು ಮಾಡುವಲ್ಲಿ ವಿವಿಧ ರೀತಿಗಳಿವೆ.
1. ಗಿಯರ್ ಕಟಿಂಗ್ – ರಫಿಂಗ್
ಎ. ಫಾರ್ಮ್ ಮಿಲ್ಲಿಂಗ್
ಬಿ. ರೇಕ್ ಜನರೇಶನ್
ಸಿ. ಗಿಯರ್ ಶೇಪಿಂಗ್
ಡಿ. ಗಿಯರ್ ಹಾಬಿಂಗ್
2. ಗಿಯರ್ ಕಟಿಂಗ್ – ಫಿನಿಶಿಂಗ್
ಎ. ಶೇವಿಂಗ್
ಬಿ. ಗ್ರೈಂಡಿಂಗ್
ಸಿ. ಬರ್ನಿಶಿಂಗ್
ಡಿ. ಲ್ಯಾಪಿಂಗ್
ಇ. ಹೋನಿಂಗ್
ಗಿಯರ್ ಹಾಬಿಂಗ್ ಇದು ಬೃಹತ್ ಪ್ರಮಾಣದಲ್ಲಿ ಬಳಸಲಾಗುವ ಯಂತ್ರಣೆಯ ಪ್ರಕ್ರಿಯೆಯಾಗಿದೆ. ಗಿಯರ್ ಹಾಬಿಂಗ್ ಮಾಡಲು ಫಿಕ್ಸ್ಚರ್ ಹೇಗಿರುತ್ತದೆ ಮತ್ತು ಹಾಬಿಂಗ್ ಪ್ರಕ್ರಿಯೆಯಲ್ಲಿರುವ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳೊಣ.
ಗಿಯರ್ ಹಾಬಿಂಗ್
ಗಿಯರ್ ತಯಾರಿಸಲು ಮೊದಲಾಗಿ ಹಾಬಿಂಗ್ ಮಶಿನ್ ಕುರಿತು ವಿಚಾರ ಮಾಡಬೇಕು. ಗಿಯರ್ ನಲ್ಲಿರುವ ಹಲ್ಲುಗಳ ಯಂತ್ರಣೆಯನ್ನು ಮಾಡಲು ಬಳಸಲಾಗುವ ಟೂಲ್ ಅಥವಾ ಕಟರ್ ಗೆ ಹಾಬ್ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಯಂತ್ರಣೆಗೆ ಗಿಯರ್ ಹಾಬಿಂಗ್ ಎಂದು ಹೇಳಲಾಗುತ್ತದೆ. ಹಾಬ್ ಬಳಸಲಾಗುವ ಮಶಿನ್ ಗೆ ಹಾಬಿಂಗ್ ಮಶಿನ್ ಎಂದು ಕರೆಯಲಾಗುತ್ತದೆ. ಹಾಬಿಂಗ್ ತುಂಬಾ ವೇಗವಾಗಿ ಕೆಲಸವನ್ನು ನಿರ್ವಹಿಸುವ ಪ್ರಕ್ರಿಯೆಯಾಗಿದೆ. ಗಿಯರ್ ಹಾಬಿಂಗ್ ನಲ್ಲಿ ಕಾರ್ಯವಸ್ತುವಿನಲ್ಲಿ ಉಚ್ಚ ಗುಣಮಟ್ಟವನ್ನು ಪಡೆಯಬಹುದಾಗಿದೆ. ಪ್ರತಿಯೊಂದು ಹಲ್ಲು ಜನರೇಶನ್ ರೀತಿಯಲ್ಲಿ ತಯಾರಾಗುತ್ತದೆ.
ಗಿಯರ್ ಮತ್ತು ಹಾಬ್ ಇವೆರಡೂ ಒಂದೇ ನಿರ್ಧಾರಿತ ವೇಗದಲ್ಲಿ ತಿರುಗುತ್ತಿರುತ್ತವೆ. ಹಾಬ್ ನ ಚಲನೆಯು ಯಂತ್ರಣೆಯ ವೇಗದಲ್ಲಿ (ಕಟಿಂಗ್ ಸ್ಪೀಡ್) ಅವಲಂಬಿಸಿರುತ್ತದೆ. ಸಿಂಗಲ್ ಸ್ಟಾರ್ಟ್ ಹಾಬ್ ನಲ್ಲಿ ಗಿಯರ್ ಒಂದು ಹಲ್ಲು ತಯಾರಾಗುವಾಗ ಹಾಬ್ ನ ಒಂದು ಸುತ್ತು ಪೂರ್ತಿಯಾಗುತ್ತದೆ. ಗಿಯರ್ ಗೆ 20 ಹಲ್ಲುಗಳಿದ್ದಲ್ಲಿ ಹಾಬ್ ಇದು ಗಿಯರ್ ನ 20 ಪಟ್ಟು ವೇಗದಲ್ಲಿ ತಿರುಗುತ್ತದೆ. ಅಂದರೆ ಟೇಬಲ್ ನ ಆರ್.ಪಿ.ಎಮ್. ಹಾಬ್ ನ ಚಲನೆಯಲ್ಲಿ ಅವಲಂಬಿಸಿರುತ್ತದೆ, ಎಂಬುದೇ ಇದರ ಅರ್ಥ.
 
1_1  H x W: 0 x
ಚಿತ್ರ ಕ್ರ. 1 ರಲ್ಲಿ ಹಾಬ್ ಮತ್ತು ಗಿಯರ್ ತೋರಿಸಲಾಗಿದೆ. ಗಿಯರ್ ಬ್ಲಾಂಕ್ ನಲ್ಲಿ ಹಲವಾರು ಹಲ್ಲುಗಳನ್ನು ತುಂಡು ಮಾಡಿರುವುದು ಕಾಣುತ್ತವೆ. ಗಿಯರ್ ವರ್ತುಲಾಕಾರವಾಗಿ ತಿರುಗುವ ದಿಕ್ಕನ್ನು ತೋರಿಸಲಾಗಿದೆ. ಗಿಯರ್ ಬ್ಲಾಂಕ್ ಗಡಿಯಾರದ ಮುಳ್ಳಿನಂತೆ ವಿರುದ್ಧವಾಗಿ (ಎಂಟಿ ಕ್ಲಾಕ್ ವೈಸ್) ತಿರುಗುತ್ತದೆ. ಹಾಬ್ ನ ತಿರುಗುವ ದಿಕ್ಕು ಗಡಿಯಾರದ ಮುಳ್ಳಿನ ದಿಕ್ಕಿನಂತೆ (ಕ್ಲಾಕ್ ವೈಸ್) ತೋರಿಸಲಾಗಿದೆ. ಹಾಗೆಯೇ ಹಾಬ್ ಮೇಲಿಂದ ಕೆಳಗೆ ಬರುತ್ತದೆ. ಹಾಬ್ ಮೇಲಿಂದ ಕೆಳಗೆ ಬರುವಾಗ ಗಿಯರ್ ನ ಹಲ್ಲುಗಳು ಕತ್ತರಿಸಲ್ಪಡುತ್ತವೆ. ಚಿತ್ರ ಕ್ರ. 2 ರಲ್ಲಿ ಹಾಬಿಂಗ್ ಮಶಿನ್ ತೋರಿಸಲಾಗಿದೆ. ಇದರಲ್ಲಿ ಗಿಯರ್ ಮತ್ತು ಹಾಬ್ ಕಾಣುತ್ತದೆ. ಗಿಯರ್ ನ ಬ್ಲಾಕ್ ಮಶಿನ್ ಟೇಬಲ್ ನ ಫಿಕ್ಸ್ಚರ್ ನಲ್ಲಿ ಬಿಗಿಯಾಗಿ ಹಿಡಿದಿಡಲಾಗುತ್ತದೆ. ಹಾಬಿಂಗ್ ಮಾಡುವಾಗ ಯಂತ್ರಣೆಯ ಬಲ ಹೆಚ್ಚು ಇರುವುದರಿಂದ ಫಿಕ್ಸ್ಟರ್ ನ ಹಿಡಿತವು ದೃಢವಾಗಿ ಇರುವುದು ತುಂಬಾ ಆವಶ್ಯಕವಾಗಿದೆ. ಅದರಂತೆಯೇ ಫಿಕ್ಸ್ಚರ್ ನ ಗುಣಮಟ್ಟವು ಉಚ್ಚಮಟ್ಟದ್ದಾಗಿರಬೇಕು. ಚಿತ್ರ ಕ್ರ. 1 ಮತ್ತು 2 ರಲ್ಲಿ ಹಾಬಿಂಗ್ ಹೇಗೆ ಆಗುತ್ತದೆ ಎಂಬುದರ ಕುರಿತು ಪ್ರಾಥಮಿಕವಾದ ಮಾಹಿತಿ ತಿಳಿಯಿತು.
ಗಿಯರ್ ಬ್ಲಾಂಕ್ ನನ್ನು ಮಶಿನ್ ನಲ್ಲಿ ಇಡುವಾಗ ಗಿಯರ್ ನ ಅಪೇಕ್ಷಿಸಿರುವ ಗುಣಮಟ್ಟವನ್ನು ಪಡೆಯಲು ಹಲವಾರು ಅಂಶಗಳು ಮಹತ್ವದ್ದಾಗಿರುತ್ತದೆ.
1. ಗಿಯರ್ ಬ್ಲಾಂಕ್ ನ ರಂಧ್ರಗಳು ಮಶಿನ್ ನ ಅಕ್ಷದೊಂದಿಗೆ ಕಾನ್ಸೆಂಟ್ರಿಕ್ ಆಗಿರಲೇಬೇಕು.
2. ಗಿಯರ್ ಬ್ಲಾಂಕ್ ನ ಸರ್ಫೇಸ್ ಫಿಕ್ಸ್ಚರ್ ನಲ್ಲಿ ತಾಗುವಾಗ ಅದು ಮಶಿನ್ ನ ಅಕ್ಷದೊಂದಿಗೆ ವರ್ಟಿಕಲ್ ಆಗಿರಬೇಕು.

2_1  H x W: 0 x 
 
3. ಹಾಬಿಂಗ್ ಮಾಡುವಾಗ ಯಂತ್ರಣೆ ಬಲವು ಬೃಹತ್ ಪ್ರಮಾಣದಲ್ಲಿ ಕಾರ್ಯನಿರತವಾಗಿ ಇರುವುದರಿಂದ ಗಿಯರ್ ಬ್ಲಾಂಕ್ ದೃಢವಾಗಿ ಹಿಡಿಯಲ್ಪಡದಿದ್ದಲ್ಲಿ ಹಾಬ್ ತುಂಡಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾರ್ಯವಸ್ತು ಬಿಗಿಯಾಗಿ ಹಿಡಿದಿಡಬೇಕಾಗುತ್ತದೆ. ಇದರಿಂದಾಗಿ ಯಂತ್ರಣೆಯು ನಡೆಯುತ್ತಿರುವಾಗ ಅದು ಅಲುಗಾಡುವುದಿಲ್ಲ.
4. ಯಂತ್ರಣೆಯ ಬಲವು ಹೆಚ್ಚು ಇರುವುದರಿಂದ ಅತಿ ಹೆಚ್ಚು ಬಿಸಿಯು ಉಂಟಾಗುತ್ತಿರುತ್ತದೆ. ಇದನ್ನು ತಡೆಯಲು ಕೂಲಂಟ್ ಸಾಕಷ್ಟು ಪ್ರಮಾಣದಲ್ಲಿ ಮತ್ತು ನಿರಂತರವಾಗಿ ಬಳಸಬೇಕಾಗುತ್ತದೆ. ಹಾಬಿಂಗ್ ಫಿಕ್ಸ್ಚರ್ (ಚಿತ್ರ ಕ್ರ. 3) ಹೇಗೆ ಕಾರ್ಯನಿರ್ವಹಿಸುತ್ತದೆ, ಹಾಗೆಯೇ ಅದರಲ್ಲಿ ಬಳಸಲಾಗಿರುವ ಪ್ರಮುಖ ಭಾಗಗಳ ಕೆಲಸ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.
1. ಕಾರ್ಯವಸ್ತುವಿನ ಆಧಾರ (ವರ್ಕ್ ಪೀಸ್ ಸಪೋರ್ಟ್)
ಕಾರ್ಯವಸ್ತುವಿಗೋಸ್ಕರ ಗಿಯರ್ ಬ್ಲಾಂಕ್ ಒಂದು ಆಧಾರವೆಂದು ನೀಡಲಾಗಿದೆ. ಕಾರ್ಯವಸ್ತುವಿನ ಆಧಾರ ಮತ್ತು ಸೆಂಟರಿಂಗ್ ಸಪೋರ್ಟ್ ಅಡಾಪ್ಟರ್ ನಲ್ಲಿ ಸ್ಕ್ರೂನ ಸಹಾಯದಿಂದ ಅಳವಡಿಸಲಾಗಿದೆ. ಕಾರ್ಯವಸ್ತುವಿನ ಆಧಾರ, ಸೆಂಟರಿಂಗ್ ಸಪೋರ್ಟ್ ನ D1 ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ. ಕಾರ್ಯವಸ್ತುವಿನ ಆಧಾರದಲ್ಲಿ ಅಳವಡಿಸಲಾಗಿರುವ ಸ್ಕ್ರೂ ಸೆಂಟರಿಂಗ್ ಸಪೋರ್ಟ್ ನಿಂದ ಆರುಪಾರಾಗಿ ಹೋಗಿ ಅಡಾಪ್ಟರ್ ನಲ್ಲಿ ಅಳವಡಿಸಲಾಗುತ್ತದೆ. ಯಂತ್ರಣೆಯನ್ನು ಮಾಡುವಾಗ ಒಳಭಾಗದಲ್ಲಿ ಬಿದ್ದಿರುವ ಆಯಿಲ್ ಹೊರಗೆ ಹೋಗಲು ಚಿಕ್ಕ ರಂಧ್ರಗಳನ್ನು ನೀಡಲಾಗಿದೆ. ಆಯಿಲ್ ಸಹಜವಾಗಿ ಹೋಗಲು ಒಳ ಭಾಗದಲ್ಲಿ ಓರೆಯಾದ ಸರ್ಫೇಸ್ ನೀಡಲಾಗಿದೆ. ಈ ಭಾಗವನ್ನು ಕಠಿಣ ಮಾಡಬೇಕಾಗುತ್ತದೆ. ಕಾರಣ ಗಿಯರ್ ಬ್ಲಾಂಕ್ ಮೇಲ್ಭಾಗದ ಸರ್ಫೇಸ್ ನಲ್ಲಿ ಇಟ್ಟು ದೃಢವಾಗಿ ಹಿಡಿಯಲು ಮೇಲಿಂದ ಒತ್ತಲಾಗುತ್ತದೆ. ಇದರ D7 ವ್ಯಾಸವು ಸಾಕಷ್ಟು ದೊಡ್ಡದಾಗಿರಬೇಕು, ಆದರೆ ಹಾಬ್ ಮತ್ತು D7 ರಲ್ಲಿ ಕನಿಷ್ಠ ದೂರವನ್ನು ಇಡಬೇಕು. ಇದರಿಂದಾಗಿ ಯಂತ್ರಣೆಯ ಬಲದ ತುಂಬಾ ಹತ್ತಿರವೇ ಗಿಯರ್ ಗೆ ಆಧಾರವು ಸಿಗುತ್ತದೆ. ಇದರಿಂದಾಗಿ ಯಂತ್ರಣೆಯನ್ನು ಮಾಡುವಾಗ ಕಂಪನಗಳು ಬರಲಾರವು ಮತ್ತು ಫಿನಿಶ್ ಕೂಡಾ ಒಳ್ಳೆಯದಾಗುತ್ತದೆ.

3_1  H x W: 0 x
 
2. ಸೆಂಟರಿಂಗ್ ಸಪೋರ್ಟ್
ಹೆಸರಿಗೆ ತಕ್ಕಂತೆ ಇದು ಅಡಾಪ್ಟರ್, ಕಾರ್ಯವಸ್ತುವಿನ ಆಧಾರ ಮತ್ತು ಸಾಲಿಡ್ ಕ್ಲ್ಯಾಂಪಿಂಗ್ ಆರ್ಬರ್ ಈ ಮೂರೂ ಭಾಗಗಳಲ್ಲಿ ಕಾನ್ಸೆಂಟ್ರಿಕ್ ಮಾಡುವ ಕೆಲಸವನ್ನು ನಿರ್ವಹಿಸುತ್ತದೆ. ಸೆಂಟರಿಂಗ್ ಸಪೋರ್ಟ್, ಅಡಾಪ್ಟರ್ ನಲ್ಲಿ ಸ್ಕ್ರೂನ ಸಹಾಯದಿಂದ ಅಳವಡಿಸಲಾಗಿದೆ ಮತ್ತು D2 ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ.
3. ಅಡಾಪ್ಟರ್
ಬೇರೆಬೇರೆ ವ್ಯಾಸವನ್ನು ಹೊಂದಿಸಿಕೊಳ್ಳುವ ಪಾರ್ಟ್ ನ್ನು ಅಡಾಪ್ಟರ್ ಎಂಬುದಾಗಿ ಕರೆಯಲಾಗುತ್ತದೆ. ಅಡಾಪ್ಟರ್ ನ ಮೇಲ್ಭಾಗದಲ್ಲಿ D2 ವ್ಯಾಸ ಮತ್ತು ಕೆಳ ಭಾಗದಲ್ಲಿ ಮಶಿನ್ ಸ್ಪಿಂಡಲ್ ಗೆ ಅನುಗುಣವಾಗಿ ಟೇಪರ್ ಮಾಡಿರುವ ವ್ಯಾಸದಿಂದ ಫಿಕ್ಸ್ಟರ್ ಹಾಬಿಂಗ್ ಮಶಿನ್ ನಲ್ಲಿ ಬಳಸಬಲ್ಲೆವು. ಅಡಾಪ್ಟರ್ ಇದೊಂದು ಫಿಕ್ಸ್ಚರ್ ನ ಭಾಗವಾಗಿದೆ. ಫಿಕ್ಸ್ಚರ್ ಮಶಿನ್ ನಿಂದ ತೆಗೆಯುವಾಗ ಅಡಾಪ್ಟರ್ ಫಿಕ್ಸ್ಟರ್ ನೊಂದಿಗೆ ಇರುತ್ತದೆ.
4. ಸಾಲಿಡ್ ಕ್ಲ್ಯಾಂಪಿಂಗ್ ಆರ್ಬರ್

4_1  H x W: 0 x 
ಇದು ಫಿಕ್ಸ್ಚರ್ ನಲ್ಲಿರುವ ಎಲ್ಲಕ್ಕಿಂತಲೂ ಪ್ರಮುಖವಾದ ಭಾಗವಾಗಿದೆ. ಗಿಯರ್ ಬ್ಲಾಂಕ್ ಫಿಕ್ಸ್ಟರ್ ನಲ್ಲಿ ಇಡುವಾಗ ಆರ್ಬರ್ ಮೇಲೆ ಸರಿಯುತ್ತದೆ. ಮಶಿನ್ ಗೆ ಕಾರ್ಯವಸ್ತುವನ್ನು ಕ್ಲ್ಯಾಂಪ್ ಮಾಡುವ ಕಮಾಂಡ್ ನೀಡಿದಾಗ ಆರ್ಬರ್ ಕೆಳಗೆ ಬರಲಾರಂಭಿಸುತ್ತದೆ. ಮೊದಲು ಕಾರ್ಯವಸ್ತುವಿನ ಆಧಾರದಲ್ಲಿ D3 ವ್ಯಾಸದಲ್ಲಿ ಲೊಕೇಟ್ ಆಗುತ್ತಾ ಕೆಳಗೆ ಬರುತ್ತದೆ ಮತ್ತು ಅದು ಕೆಳಭಾಗದಲ್ಲಿರುವ ಸ್ಪಿಂಡಲ್ ನಲ್ಲಿರುವ ಕಾಲೇಟ್ ನಲ್ಲಿ ಹಿಡಿದಿಡಲಾಗುತ್ತದೆ. ಆರ್ಬರ್ ನ್ನು ಮಶಿನ್ ನ ಮೇಲ್ಭಾಗದ ಸ್ಪಿಂಡಲ್ ನಲ್ಲಿ ಸ್ಕ್ರೂ ನ ಸಹಾಯದಿಂದ ಅಳವಡಿಸಲಾಗುತ್ತದೆ. ಸ್ಪಿಂಡಲ್ ಟೇಪರ್ ಗೆ ಅನುಸಾರವಾಗಿ ಆರ್ಬರ್ ಟೇಪರ್ ನಲ್ಲಿ ಅಳವಡಿಸಲಾಗಿದೆ. ಆರ್ಬರ್ ಗೆ ದೊಡ್ಡದಾದ ಚ್ಯಾಂಫರ್ ಮತ್ತು ಲೀಡ್ ನೀಡಲಾಗಿದೆ. ಆದ್ದರಿಂದ ಲೊಕೇಶನ್ ಸರಿಯಾಗಿ ಆಗುತ್ತದೆ. ದೊಡ್ಡ ಚ್ಯಾಂಫರ್ ನಿಂದಾಗಿ ಕಾರ್ಯವಸ್ತುವಿನ ಕೇಂದ್ರೀಕರಣವು ಸರಿಯಾಗಿ ಆಗುತ್ತದೆ ಮತ್ತು ಲೀಡ್ ನಿಂದಾಗಿ ಲೊಕೇಟಿಂಗ್ ವ್ಯಾಸದಲ್ಲಿ ಕಾರ್ಯವಸ್ತು ಸಹಜವಾಗಿ ಅಳವಡಿಸಲ್ಪಡುತ್ತದೆ. ಲೀಡ್ ಅಂದರೆ ಲೊಕೇಟಿಂಗ್ ವ್ಯಾಸಕ್ಕಿಂತ 0.05-0.08 ಮಿ.ಮೀ. ಚಿಕ್ಕದಾದ ವ್ಯಾಸವಾಗಿರುತ್ತದೆ. ಲೊಕೇಟಿಂಗ್ ವ್ಯಾಸವು ಹೆಚ್ಚು ನಿರ್ದೋಷವಾಗಿದ್ದಲ್ಲಿ ದೊಡ್ಡ ಚ್ಯಾಂಫರ್ ಮತ್ತು ಲೀಡ್ ಇವೆರಡರನ್ನು ಒಟ್ಟಾಗಿ ಬಳಸಬಹುದು. ಹಾಗೆಯೇ ಸ್ವಯಂಚಾಲಿತ ಫಿಕ್ಸ್ಚರ್ ಇರುವಾಗ ದೊಡ್ಡ ಚ್ಯಾಂಫರ್ ಮತ್ತು ಲೀಡ್ ಉಪಯೋಗಿಸಲಾಗುತ್ತದೆ.
5. ಲೊಕೇಟಿಂಗ್ ಬುಶಿಂಗ್
ಈ ಭಾಗವು ಆರ್ಬರ್ ನಲ್ಲಿ D3 ವ್ಯಾಸದಲ್ಲಿ ಲೊಕೇಟ್ ಮಾಡಿಯೇ ಅಳವಡಿಸಲಾಗುತ್ತದೆ. ಆರ್ಬರ್ ನ D5 ವ್ಯಾಸದ ಮಧ್ಯದಲ್ಲಿ ಒಂದು ಸ್ಪ್ರಿಂಗ್ ಪ್ಲಂಜರ್ ಅಳವಡಿಸಲಾಗಿರುತ್ತದೆ. ಅದರಲ್ಲಿರುವ ಬಾಲ್ ನಿಂದ ಲೊಕೇಟಿಂಗ್ ಬುಶ್ ಆರ್ಬರ್ ನಲ್ಲಿ ಹಿಡಿದಿಡಲಾಗಿದೆ. ಇದರಿಂದಾಗಿ ಆರ್ಬರ್ ಮತ್ತು ಲೊಕೇಟಿಂಗ್ ಬುಶಿಂಗ್ ಕಾನ್ಸೆಂಟ್ರಿಕ್ ಆಗಿರುತ್ತದೆ. ಲೊಕೇಟಿಂಗ್ ಬುಶ್ ನಲ್ಲಿ ದೊಡ್ಡ ಚ್ಯಾಂಫರ್ ಮತ್ತು ಲೀಡ್ ನೀಡಲಾಗಿರುವುದರಿಂದ ಲೊಕೇಟಿಂಗ್ ಬುಶ್ ಆರ್ಬರ್ ನೊಂದಿಗೆ ಕೆಳಗೆ ಬಂದಂತೆ ಬುಶ್ ಗಿಯರ್ ಬ್ಲಾಂಕ್ ನ D4 ವ್ಯಾಸದಲ್ಲಿ ಸರಿಯಾಗಿ ಲೊಕೇಟ್ ಆಗುತ್ತದೆ. ಈ ರೀತಿಯಲ್ಲಿ ಮಶಿನ್ ನ ಅಕ್ಷ ಮತ್ತು ಗಿಯರ್ ಬ್ಲಾಂಕ್ ನ ಅಕ್ಷವು ಕಾನ್ಸೆಂಟ್ರಿಕ್ ಮಾಡಲಾಗಿದೆ. ಇದು ಹೆಚ್ಚು ಮಹತ್ವದ್ದಾಗಿದೆ. ಗಿಯರ್ ಗಳಲ್ಲಿರುವ ಹಲ್ಲುಗಳ ಗುಣಮಟ್ಟವು ಇದರಲ್ಲಿಯೇ ಅವಲಂಬಿಸಿರುತ್ತದೆ.
6. ಟಾಪ್ ಕ್ಲ್ಯಾಂಪ್
ಟಾಪ್ ಕ್ಲ್ಯಾಂಪ್ ಆರ್ಬರ್ ನ ಸಮತಟ್ಟಾಗಿರುವ ಸರ್ಫೇಸ್ ನಲ್ಲಿ ಸ್ಕ್ರೂಗಳ ಸಹಾಯದಿಂದ ಅಳವಡಿಸಲಾಗಿದೆ. ಹಾಗೆಯೇ ಅದು ಲೊಕೇಟಿಂಗ್ ಬುಶ್ ನಲ್ಲಿ ಲೊಕೇಟ್ ಮಾಡಲಾಗಿದೆ. ಮಶಿನ್ ನ ಮೇಲ್ಭಾಗದಲ್ಲಿರುವ ಸ್ಪಿಂಡಲ್ ಕೆಳಗೆ ಬರುವಾಗ ಟಾಪ್ ಕ್ಲ್ಯಾಂಪ್ ಕಾರ್ಯವಸ್ತುವನ್ನು ಬಿಗಿಯಾಗಿ ಹಿಡಿಯುತ್ತದೆ. ಟಾಪ್ ಕ್ಲ್ಯಾಂಪ್ ನ ಕೆಳಭಾಗದಲ್ಲಿರುವ ಸರ್ಫೇಸ್ ಮಶಿನ್ ನ ಅಕ್ಷಕ್ಕೆ ವರ್ಟಿಕಲ್ ಆಗಿರುತ್ತದೆ. ಹಾಗೆಯೇ ಈ ಸರ್ಫೇಸ್ ಕಠಿಣವಾಗಿ ಮಾಡಲಾಗಿರುತ್ತದೆ. ಟಾಪ್ ಕ್ಲ್ಯಾಂಪ್ ಮತ್ತು ಕಾರ್ಯವಸ್ತುವಿನ ಆಧಾರ ಇವೆರಡೂ ಭಾಗಗಳ D7 ವ್ಯಾಸ ತುಂಬಾ ಮಹತ್ವದ್ದಾದ ವ್ಯಾಸವಾಗಿದೆ. ಕಾರಣ ಈ ವ್ಯಾಸ ಮತ್ತು ಹಾಬ್ ನ ದೊಡ್ಡದಾದ ವ್ಯಾಸ ಇವೆರಡರಲ್ಲಿ ಸ್ಪಲ್ಪವೇ ದೂರವನ್ನು ಇಡಲಾಗುತ್ತದೆ. ಆದ್ದರಿಂದ ಟಾಪ್ ಕ್ಲ್ಯಾಂಪ್, ಲೊಕೇಟಿಂಗ್ ಬುಶ್ ನಲ್ಲಿ D6 ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ. ಇದರ ವ್ಯಾಸ D7 ಸಾಕಷ್ಟು ಹೆಚ್ಚು ಪಡೆಯಬೇಕಾಗುತ್ತದೆ. ಆದರೆ ಹಾಬ್ ಮತ್ತು D7 ಇದರಲ್ಲಿ ಕನಿಷ್ಠ ದೂರವನ್ನು ಇಡಲಾಗುತ್ತದೆ. ಇದರಿಂದಾಗಿ ಗಿಯರ್ ನ ಯಂತ್ರಣೆಯ ಬಲದ ಹೆಚ್ಚು ಹತ್ತಿರ ಕ್ಲ್ಯಾಂಪ್ ಮಾಡಲಾಗುತ್ತದೆ. ಇದರಿಂದಾಗಿ ಯಂತ್ರಣೆಯನ್ನು ಮಾಡುವಾಗ ಕಂಪನಗಳು ಉಂಟಾಗುವುದಿಲ್ಲ ಮತ್ತು ಫಿನಿಶ್ ಕೂಡಾ ಒಳ್ಳೆಯದಾಗುತ್ತದೆ.
 
ಬೃಹತ್ ಪ್ರಮಾಣದಲ್ಲಿ ಗಿಯರ್ ನ ಬೇಡಿಕೆ ಇರುವುದರಿಂದ ಫಿಕ್ಸ್ಚರ್ ಸ್ವಯಂಚಾಲಿತವಾಗಿರುತ್ತದೆ. ಇದರಿಂದಾಗಿ ಉಚ್ಚಮಟ್ಟದ ಗುಣಮಟ್ಟವು ಲಭಿಸುತ್ತದೆ. ಸಾಮಾನ್ಯವಾದ ಫಿಕ್ಸ್ಚರ್ ಕೂಡಾ ತಯಾರಿಸುವುದು ಸಾಧ್ಯ. ಅದರಲ್ಲಿ ಒಂದು ಲೊಕೇಟರ್ ನಲ್ಲಿ ಗಿಯರ್ ಲೊಕೇಟ್ ಮಾಡಿ ‘C’ ವಾಶರ್ ನ ಸಹಾಯದಿಂದ ಗಿಯರ್ ಕ್ಲ್ಯಾಂಪ್ ಮಾಡಿಯೂ ಈ ಪ್ರಕ್ರಿಯೆಯನ್ನು ಪೂರ್ತಿ ಮಾಡಬಹುದು. ಮಶಿನ್ ನ ಟೇಬಲ್ ನಲ್ಲಿ ಕ್ಲ್ಯಾಂಪ್ ಮಾಡುವಂತೆ ತಯಾರಿಸಬಹುದು.
 
ಚಿತ್ರ ಕ್ರ. 4 ರಲ್ಲಿ ಫಿಕ್ಸ್ಚರ್ ತೋರಿಸಲಾಗಿದೆ. ಫಿಕ್ಸ್ಚರ್ ನ ಬಾಡಿ ಅಡಾಪ್ಟರ್ ನಲ್ಲಿ ಸ್ಕ್ರೂನ ಸಹಾಯದಿಂದ ಅಳವಡಿಸಲಾಗಿದೆ. ಅಡಾಪ್ಟರ್ ಮಶಿನ್ ಸ್ಪಿಂಡಲ್ ನಲ್ಲಿ ಟೇಪರ್ ನಲ್ಲಿ ಅಳವಡಿಸಲಾಗಿದೆ. ಫಿಕ್ಸ್ಚರ್ ಬದಲಾಯಿಸುವಾಗ ಅಡಾಪ್ಟರ್ ತೆಗೆಯಬೇಕಾಗುವುದಿಲ್ಲ. ಕಾರ್ಯವಸ್ತು ಫಿಕ್ಸ್ಟರ್ ಬಾಡಿಯಲ್ಲಿ ಅಳವಡಿಸಲ್ಪಡುತ್ತದೆ ಮತ್ತು ‘C’ ವಾಶರ್ ನ ಸಹಾಯದಿಂದ ಕ್ಲ್ಯಾಂಪ್ ಮಾಡಲಾಗಿದೆ. ಈ ರೀತಿಯಲ್ಲಿ ಸಾಮಾನ್ಯ ಮತ್ತು ಸುಲಭವಾದ ಫಿಕ್ಸ್ಚರ್ ಕೂಡಾ ಬಳಸಬಹುದು. ತಮ್ಮಆವಶ್ಯಕತೆಗೆ ತಕ್ಕಂತೆ ಅದನ್ನು ರೂಪಿಸಬೇಕು. ನಿರ್ದೋಷತೆ ಮತ್ತು ಉತ್ಪಾದನೆಯ ಪ್ರಮಾಣ, ಇದರಲ್ಲಿ ಫಿಕ್ಸ್ಚರ್ ಯಾವ ರೀತಿಯಲ್ಲಿ ತಯಾರಿಸುವುದು, ಎಂಬುದನ್ನು ನಿರ್ಧರಿಸಲಾಗುತ್ತದೆ.
 
ಹಾಬಿಂಗ್ ಇದು ತುಂಬಾ ವೇಗವಾದ ಪ್ರಕ್ರಿಯೆಯಾಗಿದೆ. ಒಂದು ಸಲ 6 ರಿಂದ 8 ಗಿಯರ್ ಒಂದರ ಮೇಲೊಂದು (ಸ್ಟಾಕ್) ಮಾಡಿ ಹಾಬಿಂಗ್ ಮಾಡಿದಲ್ಲಿ ಸಮಯದಲ್ಲಿ ಉಳಿತಾಯವಾಗುತ್ತದೆ. ಹಾಬಿಂಗ್ ಪ್ರಕ್ರಿಯೆಯಿಂದ ಗಿಯರ್ ಗೆ ನಿಖರವಾದ ಪ್ರೊಫೈಲ್ ಸಿಗುತ್ತದೆ. ಸರ್ಫೇಸ್ ಫಿನಿಶ್ ಉಚ್ಚಮಟ್ಟದ್ದು ಲಭಿಸುತ್ತದೆ. ಒಂದೇ ಮೊಡ್ಯುಲ್ ನ ಗಿಯರ್ ಗೋಸ್ಕರ ಒಂದೇ ಹಾಬ್ ಬಳಸುವುದು ಸಾಧ್ಯ. ಇಂಟರ್ನಲ್ ಗಿಯರ್ ಮಾತ್ರ ಹಾಬ್ ನ ಸಹಾಯದಿಂದ ತಯಾರಿಸುವುದು ಅಸಾಧ್ಯ. ಈ ಪ್ರಕ್ರಿಯೆಯಿಂದ 8-9 ಕ್ಲಾಸ್ ನ ಗಿಯರ್ ಗಳು ಲಭಿಸುತ್ತವೆ. ಸಾಮಾನ್ಯವಾದ ಬಳಕೆಗೆ ಆ ಕ್ಲಾಸ್ ಉಪಯುಕ್ತವಾಗಿದೆ. ಗಿಯರ್ ನ ವಿವಿಧ ಯಂತ್ರಣೆಯ ರೀತಿಗಳನ್ನು ಬಳಸಿ ಅನೇಕ ರೀತಿಯ ಕ್ಲಾಸ್ ಗಳನ್ನು ಪಡೆಯುಬಹುದು.
@@AUTHORINFO_V1@@