ಟ್ರಯಲ್ ಬ್ಯಾಲೆನ್ಸ್ ನಲ್ಲಿ ಕ್ರೆಡಿಟ್ ನ ಮಂಡನೆ

@@NEWS_SUBHEADLINE_BLOCK@@

Lohkarya - Udyam Prakashan    03-Feb-2021   
Total Views |

1_1  H x W: 0 x
ಜರ್ನಲ್ ಎಂಟ್ರಿ ಇದು ಪ್ರತಿಯೊಂದು ವ್ಯವಹಾರದ ಲೆಕ್ಕಾಚಾರದಲ್ಲಿ ನೊಂದಾಯಿಸುವ ಮೊದಲ ಹಂತವಾಗಿದೆ. ಈ ರೀತಿಯಲ್ಲಿ ಡಬಲ್ ಎಂಟ್ರಿ ತತ್ವದಂತೆ ದಿನಾಂಕಕ್ಕೆ ಅನುಸಾರವಾಗಿ ಪ್ರಾಥಮಿಕವಾದ ನೊಂದಾಣಿಕೆಯನ್ನು ಯಾವ ಪುಸ್ತಕದಲ್ಲಿ ಮಾಡಲಾಗುತ್ತದೆಯೋ, ಆ ಪುಸ್ತಕಗಳಿಗೆ ರಜಿಸ್ಟರ್ ಎಂದು ಹೇಳಲಾಗುತ್ತದೆ, ಎಂಬುದನ್ನು ಲೋಹಕಾರ್ಯದ ಜನವರಿ 2021 ಸಂಚಿಕೆಯಲ್ಲಿ ಪ್ರಕಟಿಸಲಾಗಿರುವ ಲೇಖನದಲ್ಲಿ ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಜರ್ನಲ್ ಹೊರತಾಗಿ ಇನ್ನು ಯಾವ ರಜಿಸ್ಟರ್ ಲೆಕ್ಕಾಚಾರದ ಪುಸ್ತಕಗಳಲ್ಲಿ ಸೇರಿರುತ್ತವೆ, ಹಾಗೆಯೇ ವಿವಿಧ ರಜಿಸ್ಟರ್ ಗಳಿಂದ ಲೆಡ್ಜರ್ ಪೋಸ್ಟಿಂಗ್ ಮಾಡಿ ವರ್ಷದ ಕೊನೆಯಲ್ಲಿ ಫೈನಲ್ ಅಕೌಂಟ್ಸ್ ತಯಾರಿಸಲು ಪ್ರತಿಯೊಂದು ಲೆಡ್ಜರ್ ಅಕೌಂಟ್ ನಲ್ಲಿ ನಗದು ಉಳಿಕೆ ಎಷ್ಟಿದೆ, ಹಾಗೆಯೇ ಉಳಿದಿರುವುದು ಡೆಬಿಟ್ ಆಗಿದೆಯೇ ಅಥವಾ ಕ್ರೆಡಿಟ್ , ಟ್ರಾಯಲ್ ಬ್ಯಾಲೆನ್ಸ್ ನಿಂದ ಹೇಗೆ ಮಂಡಿಸಬಹುದು, ಎಂಬುದರ ಕುರಿತು ತಿಳಿದುಕೊಳ್ಳಲಿದ್ದೇವೆ.
ವ್ಯವಸಾಯದಲ್ಲಿ ಮಾಡಲಾಗುವ ಹಣಕಾಸಿನ ವ್ಯವಹಾರಗಳು ಅವುಗಳ ನಿರ್ಧಾರಿತ ವಿಧಗಳಲ್ಲಿರುತ್ತವೆ. ಬ್ಯಾಂಕ್ ನಲ್ಲಿರುವ ನಗದು, ಚೆಕ್ ಜಮೆ ಮಾಡುವುದು, ಬ್ಯಾಂಕಿನಿಂದ ತರಲಾದ ನಗದು, ಚೆಕ್ ಮೂಲಕ ಪಡೆದ ಮುಂಗಡ ಮೊತ್ತ, ನಗದಿ ಜಮೆ, ನಗದು ಖರ್ಚು, ನಗದಿ ಮಾರಾಟ, ನಗದು ಖರೀದಿ, ಎರವಲಾಗಿ ಮಾರಾಟ, ಎರವಲಾಗಿ ಖರೀದಿ, ಸಣ್ಣ ಪುಟ್ಟ ನಗದಿ ಖರ್ಚು ಮುಂತಾದವುಗಳು. ಲೆಕ್ಕಾಚಾರದ ಪ್ರಾಥಮಿಕ ನೊಂದಾಣಿಕೆಯನ್ನು ಮಾಡುವಾಗ ಪ್ರತಿಯೊಂದು ವ್ಯವಹಾರಕ್ಕೆ ಸಂಬಂಧಿಸಿರುವುದನ್ನು ಜರ್ನಲ್ ನಲ್ಲಿ ಎಂಟ್ರಿ ಮಾಡಲಾಗುತ್ತದೆ. ಅದನ್ನು ಜರ್ನಲ್ ನ ರಜಿಸ್ಟರ್ ನಲ್ಲಿ ನೊಂದಣಿ ಮಾಡುವುದಕ್ಕಿಂತ ಒಂದೇ ರೀತಿಯ ಎಲ್ಲ ವ್ಯವಹಾರಗಳ ನೊಂದಾಣಿಕೆಯನ್ನು ಆಯಾ ವ್ಯವಹಾರಗಳಿಗೆಂದು ಮೀಸಲಾಗಿಟ್ಟಿರುವ ಒಂದು ವಿಶಿಷ್ಟ ರಜಿಸ್ಟರ್ ನಲ್ಲಿ ಮಾಡಲಾಗುತ್ತದೆ. ಇದರಿಂದಾಗಿ ಬರವಣಿಗೆಯ ಕೆಲಸವು ತುಂಬಾ ಕಡಿಮೆಯಾಗುತ್ತದೆ. ಹಾಗೆಯೇ ಒಂದೇ ರೀತಿಯ ಎಲ್ಲ ವ್ಯವಹಾರಗಳು ದಿನಾಂಕಕ್ಕೆ ಅನುಸಾರವಾಗಿ ಒಂದೇ ರಜಿಸ್ಟರ್ ನಲ್ಲಿ ಓದಲು ಸಿಗುತ್ತವೆ. ಉದಾಹರಣೆ, ಚಿಕ್ಕ-ಪುಟ್ಟ ನಗದಿ ಖರ್ಚು, ಅಂದರೆ ಪೆಟಿ ಕ್ಯಾಶ್ ನಿಂದ ಪ್ರತಿದಿನವೂ ತುಂಬಾ ಖರ್ಚು ಮಾಡಲಾಗುತ್ತದೆ. ಅಕೌಂಟಿಂಗ್ ನ ನಿಯಮದಂತೆ ಇಂತಹ ಪ್ರತಿಯೊಂದು ವ್ಯವಹಾರಗಳಲ್ಲಿ ನಗದಿ ಉಳಿಕೆಯ (ರಿಯಲ್ ಕ್ಯಾಟಗರಿಯಲ್ಲಿರುವ ಅಕೌಂಟ್) ಸಂಬಂಧವು ಇರುತ್ತದೆ. ಇದರಿಂದಾಗಿ ಪ್ರತಿಯೊಂದು ವ್ಯವಹಾರವನ್ನು ನೊಂದಾಯಿಸುವಾಗ ಪ್ರತಿ ಸಲ ಜರ್ನಲ್ ರಜಿಸ್ಟರ್ ನಲ್ಲಿ ಜರ್ನಲ್ ಎಂಟ್ರಿ ಮಾಡಿಯೇ, ಪ್ರತಿಯೊಂದು ಎಂಟ್ರಿಯಲ್ಲಿರುವ ನಗದಿ ಉಳಿಕೆಯ ಖಾತೆಯಲ್ಲಿ ಕ್ರೆಡಿಟ್ ಮಾಡುವುದಕ್ಕಿಂತ ಈ ರೀತಿಯ ಎಲ್ಲ ವ್ಯವಹಾರಗಳನ್ನು ಪೆಟಿ ಕ್ಯಾಶ್ ರಜಿಸ್ಟರ್ ನಲ್ಲಿ ನೊಂದಾಯಿಸಲಾಗುತ್ತದೆ. ತಿಂಗಳ ಕೊನೆಯಲ್ಲಿ ಈ ಎಲ್ಲ ಖರ್ಚುಗಳನ್ನು ಒಟ್ಟು ಮಾಡಿ ಅದರ ಒಂದೇ ನೊಂದಣಿಯನ್ನು ನಗದಿಯ ಉಳಿಕೆಯ ಖಾತೆಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.
 
ಅಲ್ಲದೇ ವಿವಿಧ ಖರ್ಚುಗಳ ಖಾತೆಗಳ ಕಾಲಮ್ ಗಳಲ್ಲಿ ಇರುವ ಬೇರೆಬೇರೆ ಒಟ್ಟು ಲೆಕ್ಕವನ್ನು ಆಯಾ ಖರ್ಚಿನ ಖಾತೆಯಲ್ಲಿ ಡೆಬಿಟ್ ಮಾಡಲಾಗುತ್ತದೆ. ಡೆಬಿಟ್ ಮಾಡಲಾಗಿರುವ ಎಲ್ಲ ಖರ್ಚುಗಳ ಖಾತೆಗಳಲ್ಲಿರುವ ಒಟ್ಟು ಮೊತ್ತವು ನಗದಿ ಉಳಿಕೆಯ ಖಾತೆಯಲ್ಲಿ ಕ್ರೆಡಿಟ್ ಮಾಡಿರುವ ಮೊತ್ತದಷ್ಟೇ ಇರುತ್ತದೆ, ಎಂಬುದರ ಕುರಿತು ನೊಂದಾಯಿಸುವ ಮುಂಚೆ ಖಾತರಿ ವಹಿಸಲಾಗುತ್ತದೆ. ಕೇವಲ ಇದೇ ರೀತಿಯಲ್ಲಿ ಒಂದೇ ವಿಧದ, ಆದರೆ ನಿಯಮಿತಾಗಿರುವ ವ್ಯವಹಾರಗಳಿಗೆ ಬೇರೆಬೇರೆ ರಜಿಸ್ಟರ್ ಇಡಲಾಗುತ್ತದೆ. ಉದಾಹರಣೆ, ಖರೀದಿ (ಪರ್ಚೆಸ್) ರಜಿಸ್ಟರ್, ಮಾರಾಟ (ಸೇಲ್) ರಜಿಸ್ಟರ್, ಬ್ಯಾಂಕ್ ಬುಕ್, ಕ್ಯಾಶ್ ಬುಕ್ ಇತ್ಯಾದಿ. ಈ ಪ್ರತಿಯೊಂದು ವಿಧದ ರಜಿಸ್ಟರ್ ನಲ್ಲಿ ಸಂಬಂಧಪಟ್ಟ ಎಲ್ಲ ವ್ಯವಹಾರಗಳ ಪ್ರಾಥಮಿಕ ನೊಂದಣಿಯನ್ನು ದಿನಾಂಕಕ್ಕೆ ಅನುಸಾರವಾಗಿ ಮಾಡಲಾಗುತ್ತದೆ. ಹಲವಾರು ವ್ಯವಹಾರಗಳು ಯಾವಾಗಲಾದರೂ ಒಮ್ಮೆಯೇ ಆಗುತ್ತವೆ. ಉದಾಹರಣೆ, ಜಮೀನಿನ ಮಾರಾಟ, ಸವಕಳಿ (ಡೆಪ್ರಿಸಿಯೇಶನ್) ನೊಂದಾಯಿಸುವುದು ಇತ್ಯಾದಿ. ರಜಿಸ್ಟರ್ ನಲ್ಲಿ ಯಾವ ವಿಧದ ವ್ಯವಹಾರಗಳನ್ನು ನೊಂದಾಯಿಸುತ್ತೇವೆ, ಎಂಬುದಕ್ಕಿಂತ ವ್ಯವಹಾರಗಳು ಬೇರೆಬೇರೆ ಇರುವುದರಿಂದ ನಿಯಮಿತವಾಗಿ ಮಾಡಲಾಗುವ ವ್ಯವಹಾರಗಳಿಗೆ ಇರುವ ರಜಿಸ್ಟರ್ ನಲ್ಲಿ ನೊಂದಾಯಿಸುವುದು ಅಸಾಧ್ಯ. ಇಂತಹ ಬೇರೆಬೇರೆ ವ್ಯವಹಾರಗಳೇ ಕೇವಲ ಜರ್ನಲ್ ರಜಿಸ್ಟರ್ ನಲ್ಲಿ ನೊಂದಾಯಿಸಲಾಗುತ್ತವೆ. ಈ ಪದ್ಧತಿಯಿಂದಾಗಿ ಅಕೌಂಟಿಂಗ್ ಎಂಟ್ರಿಯ ಒಟ್ಟು ಸಂಖ್ಯೆಯಲ್ಲಿ ತುಂಬಾ ಉಳಿತಾಯವಾಗುತ್ತದೆ ಮತ್ತು ಅನೇಕ ದೋಷಗಳು ಇಲ್ಲದಂತಾಗುತ್ತವೆ.
 
ರಜಿಸ್ಟರ್ ನಲ್ಲಿ ಡಬಲ್ ಎಂಟ್ರಿಯ ತತ್ವದಂತೆ ಪ್ರಾಥಮಿಕವಾದ ನೊಂದಣಿಯನ್ನುಮಾಡಿದ ನಂತರವೇ ಲೆಕ್ಕಾಚಾರದ ಇನ್ನೊಂದು ಹಂತದಲ್ಲಿ ಈ ಜರ್ನಲ್ ಎಂಟ್ರಿಯ ಲೇಜರ್ ಪೋಸ್ಟಿಂಗ್ ಮಾಡಲಾಗುತ್ತದೆ. ಈ ಎರಡನೇ ಹಂತವು ತುಂಬಾ ಮಹತ್ವದ್ದಾಗಿರುತ್ತದೆ. ಕಾರಣ, ಲೆಕ್ಕಾಚಾರದ ಪ್ರಾಥಮಿಕ ನೊಂದಣಿಯನ್ನು ರಜಿಸ್ಟರ್ ನಲ್ಲಿ ದಿನಾಂಕಕ್ಕೆ ಅನುಸಾರವಾಗಿ ಮಾಡಲಾಗಿದ್ದರೂ ಕೂಡಾ ವಿಶಿಷ್ಟ ಖಾತೆಯಲ್ಲಿ, ಎಲ್ಲ ರಜಿಸ್ಟರ್ ಗಳಿಂದ ಯಾವ ನೊಂದಣಿಗಳಾಗಿವೆ ಎಂಬುದರ ಮಾಹಿತಿಯು ಒಂದೇ ಜಾಗದಲ್ಲಿ ಸಿಗುವುದು ಅಸಾಧ್ಯ. ಉದಾಹರಣೆ, ಪ್ರಸ್ತುತ ದಿನದ ಕೊನೆಯಲ್ಲಿ ಯಾರೊಬ್ಬ ಗ್ರಾಹಕರಿಂದ ಎಷ್ಟು ಮೊತ್ತವು ಬರಬೇಕಾಗಿದೆ, ಬ್ಯಾಂಕ್ ನ ಸಾಲದ ಮರುಪಾವತಿ ಎಷ್ಟು ಬಾಕಿ ಇದೆ, ಇಂತಹ ಅನೇಕ ವಿಶಿಷ್ಟ ಅಕೌಂಟ್ ಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕು, ಎಂಬುದಕ್ಕಾಗಿ ಪ್ರತಿಯೊಂದು ಖಾತೆಗೋಸ್ಕರ (ಅಕೌಂಟ್ ಗೋಸ್ಕರ) ಬೇರೆ ಬೇರೆ ಪುಟವಿರುವ ಲೆಡ್ಜರ್ ಬುಕ್ ಅಂದರೆ ಲೆಕ್ಕಪತ್ರವನ್ನು ಬಳಸಲಾಗುತ್ತದೆ. ಪ್ರತಿಯೊಂದು ರಜಿಸ್ಟರ್ ನಿಂದ ಲೆಡ್ಜರ್ ನಲ್ಲಿರುವ ಅಕೌಂಟ್ ನಲ್ಲಿ ನೊಂದಾಯಿಸುವ ಪ್ರಕ್ರಿಯೆಯು ಲೆಕ್ಕಾಚಾರದ ನೊಂದಣಿಯನ್ನು ಮಾಡುವ ಇನ್ನೊಂದು ಹಂತವಾಗಿರುತ್ತದೆ. ಇದನ್ನೇ ಲೆಡ್ಜರ್ ಪೋಸ್ಟಿಂಗ್ ಎಂದು ಹೇಳುತ್ತಾರೆ. ಲೆಡ್ಜರ್ ಕುರಿತಾಗಿ ತಿಳಿದುಕೊಳ್ಳಲು ಎಲ್ಲರೂ ಬಳಸುತ್ತಿರುವ ಬ್ಯಾಂಕ್ ಪಾಸ್ ಬುಕ್ ನ ಉದಾಹರಣೆಯನ್ನು ನೋಡಿದರೂ ಸಾಕು. ಬ್ಯಾಂಕ್ ನಮಗೆ ನೀಡಿರುವ ಪಾಸ್ ಬುಕ್ ಅಂದರೆ ಬೇರೆ ಏನೂ ಅಲ್ಲದೇ, ಬ್ಯಾಂಕ್ ನಲ್ಲಿರುವ ಕಸ್ಟಮರ್ ಲೆಡ್ಜರ್ ನಲ್ಲಿ ನಿಮ್ಮ ಹೆಸರಿನಲ್ಲಿರುವ ಪುಟವಾಗಿದೆ. ಇದರಿಂದಾಗಿ ಎಷ್ಟು ಹಣವನ್ನು ನೀವು ಬ್ಯಾಂಕ್ ನಲ್ಲಿ ಜಮೆ ಮಾಡುತ್ತಿರೋ, ಅಷ್ಟೇ ಮೊತ್ತವನ್ನು ಪಾಸ್ ಬುಕ್ ನಲ್ಲಿ ಕ್ರೆಡಿಟ್ (ಡಿಪಾಜಿಟ್) ಎಂಬ ಕಾಲಮ್ ನಲ್ಲಿ ತೋರಿಸಲಾಗುತ್ತದೆ. (ಕ್ರೆಡಿಟ್ ದ ಗಿವರ್ ಎಂಬ ನಿಯಮದಂತೆ). ಎಷ್ಟು ಹಣವನ್ನು ನೀವು ಬ್ಯಾಂಕಿನಿಂದ ತೆಗೆಯುತ್ತಿರೋ, ಅಷ್ಟೇ ಮೊತ್ತವನ್ನು ಪಾಸ್ ಬುಕ್ ನಲ್ಲಿ ಡೆಬಿಟ್ (ವಿಡ್ರಾವಲ್) ಎಂಬ ಕಾಲಮ್ ನಲ್ಲಿ ತೋರಿಸಲಾಗುತ್ತದೆ. (ಡೆಬಿಟ್ ದ ರಿಸೀವರ್ ಎಂಬ ನಿಯಮದಂತೆ). ನಿಮ್ಮ ಲೆಕ್ಕಾಚಾರದ ಪುಸ್ತಕದಲ್ಲಿಯೂ ಬ್ಯಾಂಕ್ ನಲ್ಲಿ ಯಾವ ರಜಿಸ್ಟರ್ ಇಡಲಾಗುತ್ತದೆಯೋ (ಬ್ಯಾಂಕ್ ಬುಕ್) ಅದರಲ್ಲಿ ಈ ಎಲ್ಲ ಅಷ್ಟೇ ಮೊತ್ತದ ವ್ಯವಹಾರಗಳನ್ನು, ಅಷ್ಟೇ ಮೊತ್ತದ, ಆದರೆ ಬ್ಯಾಂಕ್ ಪಾಸ್ ಬುಕ್ ನಲ್ಲಿ ಯಾವ ಕಾಲಮ್ ನಲ್ಲಿ ತೋರಿಸಲಾಗಿದೆಯೋ, ಅದರ ವಿರುದ್ಧ ಬದಿಯಲ್ಲಿ ಹೀಗೆಯೇ ನೊಂದಾಯಿಸಲಾಗುತ್ತದೆ. ಅಂದರೆ ಬ್ಯಾಂಕ್ ನಲ್ಲಿ ಹಣ ತುಂಬಿಸಿದ್ದಲ್ಲಿ ಡೆಬಿಟ್ ದ ಸಿರೀವರ್ ಎಂಬ ನಿಯಮದಂತೆ ಬ್ಯಾಂಕಿನ ಖಾತೆಯಲ್ಲಿ ಆ ಮೊತ್ತವು ಡೆಬಿಟ್ ಕಾಲಮ್ ನಲ್ಲಿ ನೊಂದಾಯಿಸಲಾಗುತ್ತದೆ. ಇದನ್ನು ಮೇಲೆ ತಿಳಿಸಿದಂತೆ ಪಾಸ್ ಬುಕ್ ನಲ್ಲಿ ಮಾತ್ರ ಕ್ರೆಡಿಟ್ ಎಂಬ ಕಾಲಮ್ ನಲ್ಲಿ ತೋರಿಸಲಾಗಿರುತ್ತದೆ.
 
ಈ ರೀತಿಯಲ್ಲಿ ರಜಿಸ್ಟರ್ ನಿಂದ ಲೆಡ್ಜರ್ ಪೋಸ್ಟಿಂಗ್ ಮಾಡಿದ ನಂತರ ಲೆಡ್ಜರ್ ಪುಸ್ತಕದಲ್ಲಿ ಪ್ರತಿಯೊಂದು ಖಾತೆಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ನ ಪರಿಣಾಮವನ್ನುಂಟು ಮಾಡುವ ಎಲ್ಲ ರೀತಿಯ ನೊಂದಣಿಗಳು ಯಾವ ರಜಿಸ್ಟರ್ ನಿಂದ ಮಾಡಲಾಗಿವೆ, ಎಂಬುದನ್ನು ದಿನಾಂಕಕ್ಕೆ ಅನುಸಾರವಾಗಿ ತಿಳಿದುಕೊಳ್ಳಬೇಕು. ಹಾಗೆಯೇ ಯಾವುದೇ ದಿನಾಂಕದಂದು ವಿಶಿಷ್ಟ ಖಾತೆಯಲ್ಲಿ ಮಾಡಲಾಗಿರುವ ಡೆಬಿಟ್ ಮತ್ತು ಕ್ರೆಡಿಟ್ ವ್ಯವಹಾರಗಳ ಒಟ್ಚು ಮೊತ್ತ ಮತ್ತು ಅದರಲ್ಲಿರುವ ವ್ಯತ್ಯಾಸ ಅಂದರೆ ಆ ಖಾತೆಯಲ್ಲಿ ಎಷ್ಟು ಮೊತ್ತವು ಉಳಿದಿದೆ ಎಂಬುದೂ ಗಮನಕ್ಕೆ ಬರುತ್ತದೆ. ಡೆಬಿಟ್ ಮತ್ತು ಕ್ರೆಡಿಟ್ ಎರಡೂ ಕಾಲಮ್ ನಲ್ಲಿರುವ ಒಟ್ಟು ಮೊತ್ತದ ವ್ಯತ್ಯಾಸ ಅಂದರೆ ಆ ಖಾತೆಯಲ್ಲಿ ಆ ದಿನಾಂಕದ ಉಳಿಕೆ ಹೇಗೆ ತಿಳಿಯುತ್ತದೆಯೋ, ಹಾಗೆಯೇ ಯಾವ ಕಾಲಮ್ ನಲ್ಲಿ ಮೊತ್ತವು ಜಾಸ್ತಿ ಇದೆ ಎಂಬದನ್ನೂ ತಿಳಿದುಕೊಂಡು ಉಳಿದಿರುವ ಮೊತ್ತ ಡೆಬಿಟ್ ಆಗಿದೆಯೇ, ಕ್ರೆಡಿಟ್ ಆಗಿದೆಯೇ ಇದನ್ನೂ ನಿರ್ಧರಿಸಬಹುದು. ಉದಾಹರಣೆ, ಯಾರೋ ಒಬ್ಬ ಗ್ರಾಹಕನು ವರ್ಷದ ಪ್ರಾರಂಭದಲ್ಲಿ ರೂ.15,000 ಎರವಲಾಗಿ ಮಾರಾಟ ಮಾಡಿದ್ದರಿಂದ ಅವನ ಖಾತೆಯಲ್ಲಿ ಡೆಬಿಟ್ ಎಂಬುದಾಗಿ ನೊಂದಣಿ ಮಾಡಿದ್ದಲ್ಲಿ, ಅವನಿಂದ ರೂ. 12,000 ಮರಳಿ ಪಡೆಯಲಾಗಿದೆ, ಇಲ್ಲಿ ರೂಪಾಯಿ 3,000 ಡೆಬಿಟ್ ಬ್ಯಾಲೆನ್ಸ್, ಅಂದರೆ ಬರಬೇಕಾಗಿರುವ ಮೊತ್ತವು ಕಾಣಲಿದೆ. ಈ ರೀತಿಯಲ್ಲಿ ಲೆಡ್ಜರ್ ನಿಂದ ಯಾವುದೇ ಖಾತೆಯಲ್ಲಿ ಎಂದು ಎಷ್ಟು ಮೊತ್ತ ಉಳಿದಿದೆ ಮತ್ತು ಉಳಿಕೆಯು ಯಾವುದರಲ್ಲಿ, ಅಂದರೆ ಡೆಬಿಟ್ ಅಥವಾ ಕ್ರೆಡಿಟ್ ನಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.
ಯಾವುದೇ ಖಾತೆಯಲ್ಲಿರುವ ಬ್ಯಾಲೆನ್ಸ್ ಅಂದರೆ ಉಳಿದಿರುವ ಮೊತ್ತವನ್ನು ತೆಗೆಯಲು ಪ್ರಕ್ರಿಯೆಯನ್ನು ಅಕೌಂಟಿಂಗ್ ನ ಭಾಷೆಯಲ್ಲಿ ಬ್ಯಾಲೆನ್ಸಿಂಗ್ ಆಫ್ ಅಕೌಂಟ್ ಎಂಬುದಾಗಿ ಹೇಳಲಾಗುತ್ತದೆ. ಯಾವುದೇ ಖಾತೆಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ನ ಒಟ್ಟು ಮೊತ್ತವು ಸಮಾನವಾಗಿದ್ದಲ್ಲಿ ಸಹಜವಾಗಿಯೇ ಆ ಖಾತೆಯಲ್ಲಿ ಉಳಿದಿರುವ ಮೊತ್ತವು ಸೊನ್ನೆ ಆಗಿರುತ್ತದೆ. ಇಂತಹ ಖಾತೆಯು ಆ ದಿನಾಂಕದಂದು ಲೆಕ್ಕಾಚಾರದ ದೃಷ್ಟಿಯಲ್ಲಿ ಪೂರ್ಣವಾಗಿದೆ, ಎಂಬುದಾಗಿ ತಿಳಿಯಲಾಗುತ್ತದೆ. ಆದ್ದರಿಂದ ಅದರ ಕುರಿತು ಹೆಚ್ಚು ವಿಚಾರ ಮಾಡುವ ಆವಶ್ಯಕತೆ ಇರುವುದಿಲ್ಲ.
 
ವರ್ಷದ ಕೊನೆಯಲ್ಲಿ ಫೈನಲ್ ಅಕೌಂಟ್ಸ್ ತಯಾರಿಸುವಾಗ ಆ ದಿನಾಂಕದಂದು ಯಾವ ಖಾತೆಯಲ್ಲಿ ಯಾವುದೇ ಮೊತ್ತ ಉಳಿದಿಲ್ಲ, ಅಂದರೆ ಬಾಕಿ ಮೊತ್ತ ಇಲ್ಲ, ಇಂತಹ ಖಾತೆಗಳ ಕುರಿತು ವಿಚಾರ ಮಾಡುವ ಆವಶ್ಯಕತೆ ಇರುವುದಿಲ್ಲ.
ವರ್ಷದ ಕೊನೆಯಲ್ಲಿ ಫೈನಲ್ ಅಕೌಂಟ್ಸ್ ತಯಾರಿಸುವ ಮುಂಚೆ ಲೆಡ್ಜರ್ ನಲ್ಲಿ ಎಲ್ಲ ಖಾತೆಗಳ ಬ್ಯಾಲೆನ್ಸಿಂಗ್ ಮಾಡಲಾಗುತ್ತದೆ. ಒಂದೇ ವರದಿಯಲ್ಲಿ ಲೆಡ್ಜರ್ ನಲ್ಲಿರುವ ಅನುಕ್ರಮಕ್ಕೆ ಅನುಸಾರವಾಗಿ ಪ್ರತಿಯೊಂದು ಖಾತೆಯ ಹೆಸರು ಬರೆದು ಆಯಾ ಹೆಸರಿನ ಮುಂದೆ ಆಯಾ ಖಾತೆಯಲ್ಲಿ ವರ್ಷದ ಕೊನೆಯಲ್ಲಿ ಉಳಿದಿರುವ ಮೊತ್ತವನ್ನು ಆಯಾ ಕಾಲಮ್ ನಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಬರೆಯಲಾಗುತ್ತದೆ. ಈ ವರದಿಯನ್ನು ಟ್ರಾಯಲ್ ಬ್ಯಾಲೆನ್ಸ್ ಎಂದು ಹೇಳಲಾಗುತ್ತದೆ. ಫೈನಲ್ ಅಕೌಂಟ್ಸ್ ತಯಾರಿಸುವ ಪ್ರಕ್ರಿಯೆಯಲ್ಲಿ ಇದೊಂದು ಮಹತ್ವದ ಹಂತವಾಗಿದೆ.
ರಜಿಸ್ಟರ್ಸ್, ಲೆಡ್ಜರ್ ಪೋಸ್ಟಿಂಗ್ ಮತ್ತು ಟ್ರಯಲ್ ಬ್ಯಾಲೆನ್ಸ್ ಕುರಿತಾದ ಎಲ್ಲ ರೀತಿಯ ಅಕೌಂಟಿಂಗ್ ನ ಥಿಯರಿ ಮುಂತಾದ ಅಂಶಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳಲಿದ್ದೇವೆ. ಈ ಹಿಂದೆ ಎಲ್ಲ ಕೆಲಸಗಳನ್ನು ಕೈಯಿಂದ ಬರೆಯಲಾಗುತ್ತಿತ್ತು. ಇಂದು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಕಂಪ್ಯೂಟರೈಜ್ಡ್ ಅಕೌಂಟಿಂಗ್ ನ ಕಾಲದಲ್ಲಿ ಈ ಪ್ರಕ್ರಿಯೆಯು ಹೇಗೆ ನಡೆಯುತ್ತದೆ. ಅಲ್ಲದೆ ಒಂದು ಸಲ ಟ್ರಯಲ್ ಬ್ಯಾಲೆನ್ಸ್ ವರದಿ ತಯಾರಿಸಿದ ನಂತರ ಆ ವರದಿಯಿಂದ ಫೈನಲ್ ಅಕೌಂಟ್ಸ್ ನಲ್ಲಿ ಲೆಡ್ಜರ್ ಅಕೌಂಟ್ಸ್ ವಿಭಾಗಿಸಿ ಲಾಭ-ನಷ್ಟದ ವರದಿ ಮತ್ತು ಬ್ಯಾಲೆನ್ಸ್ ಶೀಟ್ ಹೇಗೆ ತಯಾರಿಸಲಾಗುತ್ತದೆ, ಮುಂತಾದ ಮಹತ್ವದ ಅಂಶಗಳ ಕುರಿತು ವಿಸ್ತಾರವಾಗಿ ತಿಳಿದುಕೊಳ್ಳಲಿದ್ದೇವೆ.
9822475611
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.
@@AUTHORINFO_V1@@