ಮಿಲ್ಲಿಂಗ್ ಪ್ರಕ್ರಿಯೆ ಬಳಸಿ ಕಂಟೂರಿಂಗ್ ಮಾಡುವಾಗ ಮೊದಲಾಗಿ Z ಅಕ್ಷದ ಆಳವನ್ನು ನಿರ್ಧರಿಸಿ ಅದರ ನಂತರ X ಮತ್ತು Y ಅಥವಾ ಎರಡೂ ಅಕ್ಷಗಳಿಗೆ ವೇಗವನ್ನು ನೀಡಲಾಗುತ್ತದೆ. ಕಟಿಂಗ್ ಟೂಲ್ ನ ವೇಗಕ್ಕೆ ಅನುಸರಿಸಿ ಟೂಲ್ ಮಾರ್ಗ (ಪಾಥ್) ಎಲ್ಲ ರೀತಿಯ ಕಂಟೂರಿಂಗ್ ಕೆಲಸದಲ್ಲಿ ಇರುತ್ತದೆ. ಸಿ.ಎನ್.ಸಿ. ಲೇಥ್ ಮಶಿನ್ ಅಥವಾ ಸಿ.ಎನ್.ಸಿ. ಮಶಿನಿಂಗ್ ಸೆಂಟರ್ ಇದರಲ್ಲಿರುವ ಯಾವುದೇ ಮಶಿನ್ ನಲ್ಲಿ ಟೂಲ್ ನ ತುದಿಯು ಕಂಟೂರ್ ನ ಟ್ಯಾಂಜೆಂಟ್ ಇರಬೇಕಾಗುತ್ತದೆ. ಟೂಲ್ ನ ವೇಗವು ತಯಾರಾಗಿರುವ ಮಾರ್ಗದಲ್ಲಿ ಕಟರ್ ನ ಮಧ್ಯಬಿಂದು (ಸೆಂಟರ್ ಪಾಯಿಂಟ್) ಮತ್ತು ಕಂಟೂರ್ ನ ಮಾರ್ಗ ಇದರ ದೂರವು ಸಮಾನವಾಗಿರಬೇಕು, ಇದೇ ಇದರ ಅರ್ಥ. ಇದಕ್ಕೆ ಸಮಾನ ದೂರ ಇರುವ ಟೂಲ್ ಮಾರ್ಗ (ಇಕ್ವಿಡಿಸ್ಟಂಟ್ ಟೂಲ್ ಪಾಥ್) ಎಂಬು ಹೇಳುತ್ತಾರೆ.
ಚಿತ್ರ ಕ್ರ. 1 ಮತ್ತು 2 ರಲ್ಲಿ ತೋರಿಸಿದನ್ನು ವೀಕ್ಷಿಸಿದಲ್ಲಿ ಈ ಕೆಳಗಿನ ಅಂಶಗಳು ಗಮನಕ್ಕೆ ಬರಬಲ್ಲವು.
1. ಯಂತ್ರಣೆಯನ್ನು ಮಾಡುವಾಗ ಕಂಟೂರ್, ಕಟರ್ ನ ತ್ರಿಜ್ಯದಷ್ಟು ದೂರದಲ್ಲಿ ಕಾಂಪೆನ್ಸೇಟ್ ಆಗಿರಬೇಕು. ಅಂದರೆ ಕಟರ್ ನ ಮಧ್ಯಬಿಂದು ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಇರಬೇಕಾಗುತ್ತದೆ.
2. ಯಂತ್ರಣೆಯ ಆವಶ್ಯಕತೆಯನ್ನು ಡ್ರಾಯಿಂಗ್ ನಲ್ಲಿ ತೋರಿಸಲಾಗಿರುವುದಿಲ್ಲ. ಡ್ರಾಯಿಂಗ್ ನಲ್ಲಿ ಎಲ್ಲ ಮಾಪನಗಳು ಯಂತ್ರಭಾಗದ ಕಂಟೂರ್ ನ್ನು ಹಿಡಿದಿಡುತ್ತವೆ. ಟೂಲ್ ನ ಮಧ್ಯಬಿಂದುವಿನೊಂದಿಗೆ ಅದರ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ, ಎಂಬ ವಿಶೇಷವಾದ ಅಂಶವು ಗಮನಕ್ಕೆ ಬರುತ್ತದೆ.
3. ಡ್ರಾಯಿಂಗ್ ನಿಂದ ಟೂಲ್ ನ ಮಧ್ಯಬಿಂದುವಿನ ಸ್ಥಾನ (ಸೆಂಟರ್ ಪೊಜಿಶನ್) ಯಂತ್ರಭಾಗಗಳ ಕಂಟೂರ್ ಸಂದರ್ಭದೊಂದಿಗೆ ಹೇಗೆ ಪಡೆಯಬೇಕು, ಅಲ್ಲದೇ ಅದಕ್ಕೋಸ್ಕರ ಅದರ ಮೌಲ್ಯಗಳ ಲೆಕ್ಕಾಚಾರವನ್ನು ಮಾಡಿ ಪಡೆಯಬೇಕಾಗಬಹುದು, ಎಂಬ ಪ್ರಶ್ನೆಯೂ ತಮ್ಮ ಎದುರಿನಲ್ಲಿ ಮೂಡುತ್ತದೆ.
ಒಂದು ವೇಳೆ ಬಳಕೆಯಲ್ಲಿರುವ ಸಿ.ಎನ್.ಸಿ. ಪ್ರಣಾಳಿಕೆಯು ಅಪ್ ಟೂ ಡೇಟ್ ಇದ್ದಲ್ಲಿ ಮತ್ತು ಅದರಲ್ಲಿ ಕಟರ್ ರೇಡಿಯಸ್ ಕಾಂಪೇನ್ಶೇಶನ್ ಅಥವಾ ಕಟರ್ ರೇಡಿಯಲ್ ಆಫ್ ಸೆಟ್ ಎಂಬ ಹೆಸರಿನ ವಿಶೇಷವಾಗಿ ಅಭಿವೃದ್ಧಿ ಮಾಡಿರುವ ಫೀಚರ್ ಇದ್ದಲ್ಲಿ, ಸಿ.ಎನ್.ಸಿ. ಪ್ರಣಾಳಿಕೆಯೇ ಅದರ ಮೌಲ್ಯವನ್ನು ತೆಗೆಯಬಲ್ಲದು ಮತ್ತು ಮುಂದಿನ ವ್ಯವಸ್ಥೆಯನ್ನು ಮಾಡಬಲ್ಲದು. ಸಿ.ಎನ್.ಸಿ. ಟರ್ನಿಂಗ್ ನಲ್ಲಿ ಈ ಫೀಚರ್ ನ ಹೆಸರು ಟೂಲ್ ನೋಸ್ ರೇಡಿಯಸ್ ಆಫ್ ಸೆಟ್ ಅಥವಾ ಟೂಲ್ ನೋಸ್ ರೇಡಿಯಸ್ ಕಾಂಪೇನ್ಶೇಶನ್ ಎಂಬುದಾಗಿರುತ್ತದೆ. ಇಂತಹ ಅಭಿವೃದ್ಧಿಯಾಗಿರುವ ವೈಶಿಷ್ಟ್ಯಗಳಿಂದಾಗಿ ಪ್ರೊಗ್ರಾಮ್ ಮಾಡಬಲ್ಲೆವು ಮತ್ತು ಅದರ ನಂತರ ಕಂಟ್ರೋಲ್ ಮುಂದಿನ ಆವಶ್ಯಕ ಎಲ್ಲ ಮಾಪನಗಳನ್ನು ಮತ್ತು ಹೊಂದಾಣಿಕೆಯನ್ನು ಮಾಡುತ್ತದೆ. ಈ ಕುರಿತು ಇನ್ನಷ್ಟು ತಿಳಿದುಕೊಳ್ಳುವಲ್ಲಿ ಚಿತ್ರ ಕ್ರ. 3 ರಲ್ಲಿ ನೀಡಿರುವ ಉದಾಹರಣೆಯಲ್ಲಿರುವ ಹಲವಾರು ಅಂಶಗಳನ್ನು ನೋಡಬೇಕು.
1. ಕ್ಲೈಂಬ್ ಮಿಲ್ಲಿಂಗ್ ಮೋಡ್ ನಲ್ಲಿ ಯಂತ್ರಣೆಯು ಹೊರಭಾಗದಲ್ಲಿ ಆಗಬಲ್ಲದು.
2. ಟೂಲ್ ಮೊದಲಾಗಿ Y ಅಕ್ಷದಲ್ಲಿ ಕೆಲಸ ನಿರ್ವಹಿಸಬಲ್ಲದು.
3. ಕಾರ್ಯವಸ್ತುವಿನ ಬುಡದ ಎಡ ಮೂಲೆಯನ್ನು ಪ್ರೊಗ್ರಾಮ್ ಝೀರೋ ಎಂಬುದಾಗಿ ಆಯ್ಕೆ ಮಾಡಲಾಗಿದೆ.
4. P1, P2, P3, P4, P5 ಬಿಂದುಗಳನ್ನು ಡ್ರಾಯಿಂಗ್ ನಲ್ಲಿ ತೋರಿಸಲಾಗಿವೆ.
5. ಈ ಬಿಂದುಗಳಿಗೆ ಅನುಸಾರವಾಗಿ ಕೊ-ಆರ್ಡಿನೇಟ್ ಟೇಬಲ್ ತಯಾರಿಸಲಾಗಿದೆ.
ಈ ಬಿಂದುಗಳಿಗೆ ಕಂಟೂರ್ ಚೇಂಜ್ ಪಾಯಿಂಟ್ ಎಂದು ಹೇಳುತ್ತಾರೆ. ಕಟರ್ ನ ಮಾರ್ಗಕ್ಕಾಗಿ ಇದರ ಆವಶ್ಯಕತೆ ಇರುತ್ತದೆ. ಕೋಷ್ಟಕ ಕ್ರ. 1 ರಲ್ಲಿ P3 ಈ ಬಿಂದುವಿನ Y ಅಕ್ಷದಲ್ಲಿರುವ ಮೌಲ್ಯ ಡ್ರಾಯಿಂಗ್ ನಲ್ಲಿ ಇಲ್ಲ. ಇದರಿಂದಾಗಿ ಈ ಮೌಲ್ಯವನ್ನು ತೆಗೆಯಲು ತ್ರಿಕೋನಮಿತಿಯನ್ನು (ಟ್ರಿಗ್ನಾಮೆಟ್ರಿ) ಉಪಯೋಗಿಸಬೇಕಾಗುತ್ತದೆ. ಇದರ ಕುರಿತು ಕೆಳಗಿನಂತೆ ತಿಳಿದುಕೊಳ್ಳೋಣ.
ಮೊದಲಾಗಿ a ನ ಮೌಲ್ಯವನ್ನು ತೆಗೆಯಬೇಕಾಗಬಹುದು. (ಚಿತ್ರ ಕ್ರ. 4)
a = 2.25 X tan 18°
= 0.7311
ಇದರಿಂದ P3 (Y) = 1.125 +0.7311 = 1.8561
ಈ ರೀತಿಯಲ್ಲಿ P3 (Y) ಕೊ-ಆರ್ಡಿನೇಟ್ ತೆಗೆಯಬಹುದು.
ಆಫ್ ಸೆಟ್ ನ ವಿಧ
ಆಫ್ ಸೆಟ್ ಮೆಮರಿ A, B, C ಇದು ಫಾನುಕ ನಿಯಂತ್ರಕದಲ್ಲಿರುವ ನಿಯಂತ್ರಣೆಯಲ್ಲಿರುವ ಪರ್ಯಾಯವಾಗಿದೆ.
• ಪರ್ಯಾಯ A : ಒಂದೇ ಮೌಲ್ಯ. ಕೇವಲ ಅಗಲ ಮತ್ತು ವ್ಯಾಸ ಒಂದೇ ಅಂಕೆ.
• ಪರ್ಯಾಯ B : ಉದ್ದ ಮತ್ತು ಜಾಮೆಟ್ರಿಗೋಸ್ಕರ. ಇದರಲ್ಲಿ T1, H1, D1 ಬಳಸಬಲ್ಲೆವು.
• ಪರ್ಯಾಯ C : ಎಕ್ಸ್ ಟೆಂಡೆಡ್ ವೇರ್ ಕಾಂಪೆನ್ಶೇಶನ್. ಈ ವಿಧದಲ್ಲಿ ಆಫ್ ಸೆಟ್ ಪೇಜ್ ನಲ್ಲಿ ಮುಂದಿನ ಮಾಹಿತಿಯನ್ನು ತೋರಿಸಲಾಗುತ್ತದೆ. ಉದ್ದ, ಸವೆತವಾದ ಉದ್ದ, ಕಾಂಪೆನ್ಶೇಶನ್ ಜಾಮೆಟ್ರಿ, ಕಾಂಪೆನ್ಶೇಶನ್ ಜಾಮೆಟ್ರಿ ವೇರ್, ಸಿ.ಎನ್.ಸಿ. ನಿಯಂತ್ರಕ, ಕಂಟೂರ್ ಬದಲಾಯಿಸಲು ಆವಶ್ಯಕವಿರುವ ಆಪ್ ಸೆಟ್ ಮುಂದಿನ ಮೂರು ಅಂಶಗಳಿಂದ ತೆಗೆಯಲಾಗುತ್ತದೆ ಅಥವಾ ಅದರ ಮಾಪನವನ್ನು ಮಾಡಲಾಗುತ್ತದೆ.
• ಡ್ರಾಯಿಂಗ್ ಕಂಟೂರ್ ನಲ್ಲರುವ ಪಾಯಿಂಟ್
• ಕಟರ್ ಮೋಶನ್ ಗೆ ನಿರ್ಧರಿಸಿರುವ ದಿಕ್ಕು
• ಕಂಟ್ರೋಲ್ ಸಿಸ್ಟಮ್ ಮೆಮರಿಯಲ್ಲಿ ಶೇಖರಿಸಿರುವ ಕಟರ್ ನ ತ್ರಿಜ್ಯ
ಕಟರ್ ರೇಡಿಯಸ್ ಆಫ್ ಸೆಟ್ ಬಳಸುವ ಕಾರಣಗಳು
• ಕಟರ್ ತ್ರಿಜ್ಯದ ನಿಖರವಾದ ಆಕಾರದವು ತಿಳಿದಿರಬೇಕು.
• ಕಟರ್ ನ ಸವೆತಕ್ಕೋಸ್ಕರ ಹೊಂದಾಣಿಕೆ.
• ರಫಿಂಗ್ ಮತ್ತು ಫಿನಿಶಿಂಗ್ ಆಪರೇಶನ್
• ಯಂತ್ರಣೆಯಲ್ಲಿರುವ ಟಾಲರನ್ಸ್ ಕಾಪಾಡುವುದು.
ಕಟಿಂಗ್ ಮೋಶನ್ ನ ದಿಕ್ಕು
ದಿಕ್ಕು CW ಅಥವಾ CCW ಇಲ್ಲದೇ ಅದು ಬಲಬದಿಯಿಂದ ಅಥವಾ ಎಡಬದಿಯಿಂದ ಇರುತ್ತದೆ. ಕಟರ್ ರೇಡಿಯಸ್ ಆಫ್ ಸೆಟ್ ಯಶಸ್ವಿಯಾಗಿ ಬಳಸಲು ನಾಲ್ಕು ಮಹತ್ವದ ಹಂತಗಳಿವೆ.
1. ಆಫ್ ಸೆಟ್ ಹೇಗೆ ಪ್ರಾರಂಭಿಸುವುದು.
2. ಆಫ್ ಸೆಟ್ ಹೇಗೆ ಬದಲಾಯಿಸುವುದು.
3. ಆಫ್ ಸೆಟ್ ಹೇಗೆ ನಿಲ್ಲಿಸುವುದು.
4. ಆಫ್ ಸೆಟ್ ನ ಪ್ರಾರಂಭ ಮತ್ತು ಕೊನೆ ಇದನ್ನು ಹೇಗೆ ಪರಿಶೀಲಿಸಬೇಕು, ಎಂಬುದನ್ನು ತಿಳಿದುಕೊಳ್ಳುವುದು.
ಕಟರ್ ರೇಡಿಯಸ್ ಆಫ್ ಸೆಟ್ ಗೋಸ್ಕರ ಬಳಸಲಾಗುವ
G ಫಂಕ್ಷನ್ (ಚಿತ್ರ ಕ್ರ. 5)
G40 ಕಟರ್ ರೇಡಿಯಸ್ ಆಫ್ ಸೆಟ್ ಕ್ಯಾನ್ಸಲ್
G41 ಕಟರ್ ರೇಡಿಯಸ್ ಆಫ್ ಸೆಟ್ ಎಡಬದಿಗೆ.
G42 ಕಟರ್ ರೇಡಿಯಸ್ ಆಫ್ ಸೆಟ್ ಬಲಬದಿಗೆ.
ಪ್ರೊಗ್ರಾಮ್ ಫಾರ್ಮೆಟ್
G40/ G41/ G42 S...B...M...
S – ಸ್ಪಿಂಡಲ್ ವೇಗ/ ಕಟಿಂಗ್ ವೇಗ
M – ಸೂಚನೆ (ಇನ್ ಸ್ಟ್ರಕ್ಷನ್)
B – ಸೂಚನೆ
ಉದಾಹರಣೆ
ರೇಡಿಯಸ್ ಕಾಂಪೆನ್ಶೇಶನ್ ನೊಂದಿಗೆ ಯಂತ್ರಣೆ ಟೂಲ್ ರೇಡಿಯಸ್ 10 ಮಿ.ಮೀ. ಟೂಲ್ ನಂಬರ್ 1
ಪ್ರೊಗ್ರಾಮ್ (ಚಿತ್ರ ಕ್ರ. 6)
G92 X 0Y0Z0
G90 G17 S100 T1 D1 M03 ಟೂಲ್
ಆಫ್ ಸೆಟ್ ಸ್ಪಿಂಡಲ್ ಪ್ರಾರಂಭ ಪ್ಲೇನ್ G17
G41 G01 X 40 X30 Y30 F125 Y70
ಕಾಂಪೆನ್ಶೇಶನ್ ಪ್ರಾರಂಭ
X 90
Y30
X 40
G40 G00 X0 Y0 – ಕಾಂಪೆನ್ಶೇಶನ್ ಕ್ಯಾನ್ಸಲ್
M30 – ಪ್ರೊಗ್ರಾಮ್ ಎಂಡ್
ಟೂಲ್ ರೇಡಿಯಸ್ 10 ಮಿ.ಮೀ. ಟೂಲ್ ನಂಬರ್ 01
ಪ್ರೊಗ್ರಾಮ್ (ಚಿತ್ರ ಕ್ರ. 7)
G92 X0 Y0 Z0
G90 G17 F150 S100 T1 D1 M03 – ಟೂಲ್ ಆಫ್ ಸೆಟ್ ಸ್ಪಿಂಡಲ್ ಪ್ರಾರಂಭ
G42 G01 X 30 Y30 – ಕಾಂಪೆನ್ಶೇಶನ್ ಪ್ರಾರಂಭ
X50
Y60
X80
X100 Y40
X140
X120 Y70
X30
Y30
G40 G00 X0 Y0 ಕಾಂಪೆನ್ಶೇಶನ್ ಕ್ಯಾನ್ಸಲ್
M30 - ಪ್ರೊಗ್ರಾಮ್ ಎಂಡ್