ಸಿ.ಎನ್.ಸಿ. ಪ್ರೊಗ್ರಾಮಿಂಗ್

@@NEWS_SUBHEADLINE_BLOCK@@

Lohkarya - Udyam Prakashan    25-Nov-2021   
Total Views |
 
CNC Programing 
 
 
ಬೋರಿಂಗ್ ನಲ್ಲಿ ರಂಧ್ರಗಳ ಒಳ ವ್ಯಾಸದಲ್ಲಿರುವ ಮಟೀರಿಯಲ್ ಹೊರ ತೆಗೆಯಲಾಗುತ್ತದೆ. ಇದರಲ್ಲಿ ರಂಧ್ರಗಳ ಆಳವನ್ನು ಹೆಚ್ಚಿಸಲು ಯಾವುದೇ ರೀತಿಯ ಪ್ರಕ್ರಿಯೆಯನ್ನು ಮಾಡಲಾಗುವುದಿಲ್ಲ.
 
ಬೋರಿಂಗ್ ನಲ್ಲಿ ಬಳಸಲಾಗುವ ಬೋರಿಂಗ್ ಬಾರ್ ಇದು ಲೋಹದಿಂದ ತಯಾರಿಸಿರುವ ಬಾರ್ ಆಗಿದ್ದು, ಅದರ ತುದಿಯಲ್ಲಿ ಟೂಲ್ ಅಳವಡಿಸಲಾಗಿರುತ್ತದೆ. ಸಿಲಿಂಡ್ರಿಕಲ್ ಭಾಗದಲ್ಲಿ ಬೋರಿಂಗ್ ಮಾಡುವ ಪ್ರಕ್ರಿಯೆಯನ್ನು ಲೈನ್ ಬೋರಿಂಗ್ ಎಂಬುದಾಗಿ ಕರೆಯಲಾಗುತ್ತದೆ. ಇನ್ನೊಂದು ವಿಧದ ಬೋರಿಂಗ್ ಅಂದರೆ ಬ್ಯಾಕ್ ಬೋರಿಂಗ್. ಇದರಲ್ಲಿ ರಂಧ್ರಗಳ ಹಿಂಭಾಗದಲ್ಲಿ ಯಂತ್ರಣೆಯನ್ನು ಮಾಡಿ ಆಕಾರವನ್ನು ಹೆಚ್ಚಿಸಲಾಗುತ್ತದೆ. ಬೋರಿಂಗ್ ನ ಕೆಲಸವನ್ನು ಮಿಲ್ಲಿಂಗ್ ಮಶಿನ್ ನಲ್ಲಿ ಮತ್ತು ಅದರೊಂದಿಗೆ ಲೇಥ್ ಮಶಿನ್ ನಲ್ಲಿ ಮಾಡಬಹುದಾಗಿದೆ.
 
ಕಾರ್ಯವಸ್ತುವಿನಲ್ಲಿ ಕೇವಲ ಬೋರಿಂಗ್ ನ ಕೆಲಸವನ್ನು ಮಾಡುವಾಗ ಅದರಲ್ಲಿ ಹೆಚ್ಚು ಕ್ಲಿಷ್ಟತೆ ಇರುವ ಸಾಧ್ಯತೆಯು ತುಂಬಾ ಕಡಿಮೆ ಇರುತ್ತದೆ. ಆದರೆ ಬೋರಿಂಗ್ ನೊಂದಿಗೆ ಹೊರ ವ್ಯಾಸದ ಟರ್ನಿಂಗ್, ಕೌಂಟರಿಂಗ್
ಡ್ರಿಲ್ಲಿಂಗ್ ಮುಂತಾದ ಕೆಲಸಗಳಿದ್ದಲ್ಲಿ ಅದರಲ್ಲಿ ಕ್ಲಿಷ್ಟತೆಯು ಇನ್ನಷ್ಟು ಹೆಚ್ಚುತ್ತದೆ. ಉದಾಹರಣೆ,
 
CNC Programing
ಚಿತ್ರ ಕ್ರ. 1
ರಲ್ಲಿ ತೋರಿಸಿರುವ ಕಾರ್ಯವಸ್ತುವಿನಲ್ಲಿ ಬೋರಿಂಗ್ ನೊಂದಿಗೆ ಹೊರ ಟರ್ನಿಂಗ್, ಡ್ರಿಲ್ಲಿಂಗ್ ಇಂತಹ ಕೆಲಸಗಳನ್ನು ಮಾಡಲಾಗುತ್ತದೆ. ಇದರಲ್ಲಿ ಸುಲಭವಾದ ಯಂತ್ರಣೆಯನ್ನು ಮಾಡಲು ಉಪಯುಕ್ತವಾದ ಒಂದು ಪ್ರೊಗ್ರಾಮ್ ಈ ಮುಂದೆ ನೀಡಲಾಗಿದೆ.

Table 01
 
ಸ್ಟೆಪ್ ಕ್ರ. 2 ರಿಂದ (N2) ಈ ಪ್ರೊಗ್ರಾಮ್ ಪ್ರಾರಂಭವಾಗುತ್ತದೆ. ಇದರಲ್ಲಿ R10 ಈ ಕರ್ವ್ ಕತ್ತರಿಸುವುದಿದೆ (ಸ್ಟೆಪ್ ಕ್ರ. N11). ಇದರ ನಂತರ ಹೊರ ವ್ಯಾಸದ ಪ್ರೊಫೈಲ್ ಫೈನ್ ಟರ್ನಿಂಗ್ ಮಾಡಲಾಗುತ್ತದೆ. ನಂತರ ರಂಧ್ರಗಳ ವ್ಯಾಸಕ್ಕೆ ಓಪನ್ ಡ್ರಿಲ್ಲಿಂಗ್ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳಾದ ನಂತಹ ಓಪನ್ ಬೋರಿಂಗ್ ಸ್ಟೆಪ್ ಕ್ರ. N45 ರಿಂದ ಮಾಡಲಾಗುತ್ತದೆ. ಇವೆಲ್ಲವನ್ನು ಮಾಡುತ್ತಿರುವಾಗ ಈ ಮುಂದಿನ ಕ್ರಮದಂತೆ ಯಂತ್ರಣೆಯನ್ನು ಮಾಡುವಲ್ಲಿ ಪ್ರೊಗ್ರಾಮ್ ಮಾಡಬೇಕಾಗುತ್ತದೆ, ಇದರಿಂದಾಗಿ ಎಲ್ಲ ಕೆಲಸಗಳು ಯೋಗ್ಯ ರೀತಿಯಲ್ಲಾಗುತ್ತವೆ.

Table 02
 
1. ಓಪನ್ ಹೊರ ವ್ಯಾಸದ ಪ್ರೊಫೈಲ್ ರಫ್ ಟರ್ನಿಂಗ್.
2. ಹೊರ ವ್ಯಾಸದ ಪ್ರೊಫೈಲ್ ಫೈನ್ ಟರ್ನಿಂಗ್.
3. ಓಪನ್ ಡ್ರಿಲ್ಲಿಂಗ್ ವ್ಯಾಸ
4. ಓಪನ್ ಬೋರಿಂಗ್
ಅಂದರೆ ಎಲ್ಲಕ್ಕಿಂತಲೂ ಕೊನೆಯಲ್ಲಿ ಬೋರಿಂಗ್ ನ ಕೆಲಸವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಪ್ರೊಗ್ರಾಮ್ ನಲ್ಲಿ G70, G71, G74 ಈ ಕ್ಯಾಂಡ್ ಆವರ್ತನೆಗಳನ್ನು ಬಳಸಲಾಗುತ್ತದೆ.

Table 03
 
ನೀಡಿರುವ ಕಾರ್ಯವಸ್ತುವಿನಲ್ಲಿ Ø38, Ø34, Ø24. Ø16 ಈ ರೀತಿಯಲ್ಲಿ ವ್ಯಾಸಗಳಿರುತ್ತವೆ. R10 ಕ್ಕೆ ರೇಡಿಯಲ್ ಕಟ್ ಮಾಡಬೇಕಾಗಿದೆ. ಹಾಗಿದ್ದಲ್ಲಿ Ø12 ನ ಡ್ರಿಲ್ ಮಾಡಬೇಕಾಗಿದೆ. ಇದಕ್ಕೋಸ್ಕರ ಪ್ರೊಗ್ರಾಮ್ ಈ ಮುಂದಿನಂತಿದೆ.

Table 04

8625975219
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
@@AUTHORINFO_V1@@