ಫಾನುಕದ ಸ್ಮಾರ್ಟ್ ಸರ್ವೋ ಕಂಟ್ರೋಲ್

@@NEWS_SUBHEADLINE_BLOCK@@

Lohkarya - Udyam Prakashan    23-Nov-2021   
Total Views |
ಫಾನುಕ ಕಂಪನಿಯು ಹೊಸದಾಗಿ ನಿರ್ಮಿಸಿರುವ ಸ್ಮಾರ್ಟ್ ಸರ್ವೋ ಕಂಟ್ರೋಲ್ ನಲ್ಲಿರುವ ವೈಶಿಷ್ಟ್ಯಗಳಿಂದಾಗಿ ಮಶಿನ್ ನಲ್ಲಿರುವ ಅನೇಕ ರೀತಿಯ ನಿಯಂತ್ರಣೆಯ ಕೆಲಸದಲ್ಲಿ ಸುಧಾರಣೆಗಳನ್ನು ಸಾಧ್ಯವಾಗಿದೆ. ಸ್ಮಾರ್ಟ್ ಉತ್ಪಾದನೆಯಲ್ಲಿ ಸ್ಮಾರ್ಟ್ ಸರ್ವೋ ಕಂಟ್ರೋಲ್ ನ ಕೆಲಸದ ವೈಶಿಷ್ಟ್ಯಗಳ ವಿವರವಾದ ಮಾಹಿತಿ, ಹಾಗೆಯೇ ಗುಣಮಟ್ಟ ಮತ್ತು ಸಂಖ್ಯೆಗಳ ಕುರಿತು ಮಶಿನ್ ನ ಚಟುವಟಿಕೆಗಳನ್ನು ಸುಧಾರಿಸಲು ಮತ್ತು ಇದನ್ನು ವ್ಯಾವಹಾರಿಕವಾದ ರೀತಿಯಲ್ಲಿ ಹೇಗೆ ಬಳಸಬಹುದು, ಎಂಬುದರ ಕುರಿತಾದ ವಿಮರ್ಶೆಯನ್ನು ಮಾಡಿರುವ ಲೇಖನ.
 

Fanuca Smart Servo Contro 
 
ಭಾರತದಲ್ಲಿ ಉತ್ಪಾದನೆಯ ಕ್ಷೇತ್ರವು ಪ್ರಗತಿ ಹೊಂದಿರುವ ಕ್ಷೇತ್ರಗಳಲ್ಲಿ ಒಂದೆಂದು ಮೂಡಿಬಂದಿದೆ. ದೇಶವನ್ನು ಮ್ಯಾನ್ಯುಫ್ಯಾಕ್ಚರಿಂಗ್ ಹಬ್ ಎಂಬುದಾಗಿ ವಿಶ್ವದ ನಕಾಶೆಯಲ್ಲಿ ತಲುಪಿಸಲು ಮತ್ತು ಅರ್ಥಿಕ ವ್ಯವಸ್ಥೆಗೆ ಜಾಗತಿಕ ಮನ್ನಣೆಯನ್ನು ನೀಡುವಲ್ಲಿ ಭಾರತ ಸರ್ಕಾರವು ‘ಮೇಕ್ ಇನ್ ಇಂಡಿಯಾ’ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. 2022 ರ ತನಕ ಉತ್ಪಾದನೆಯ ವಲಯದಲ್ಲಿ ಜಿ.ಡಿ.ಪಿ.ಯ ಪ್ರಸ್ತುತ ಶೇಕಡಾ 15 ಏರಿಕೆಯು ಶೇಕಡಾ 25 ರಷ್ಟು ಹೆಚ್ಚಿಸುವ ಗುರಿಯು ಸರಕಾರದ್ದಾಗಿದೆ.
 
ಭಾರತೀಯ ಉತ್ಪಾದಕರು ಪ್ರಗತಿಪರ ಉತ್ಪಾದನೆಯ ಪ್ರಕ್ರಿಯೆಯನ್ನು ಅಂಗೀಕರಿಸಿದಲ್ಲಿ ಮಾತ್ರವೇ ಈ ಸ್ವಪ್ನವನ್ನು ಪೂರ್ತಿಗೊಳಿಸಬಹುದು. ಜಾಗತಿಕ ಸ್ತರದ ಮಾರುಕಟ್ಟೆಯ ಹೋಲಿಕೆಯಲ್ಲಿ ಅವರಿಗೆ ಕೇವಲ ಉತ್ಪಾದನೆಯ 
 

Fanuca Smart Servo Contro 
 
ಖರ್ಚಿನ ಕುರಿತು, ಅಲ್ಲದೇ ಗುಣಮಟ್ಟ ಮತ್ತು ಸಂಖ್ಯೆ (ಕ್ವಾಲಿಟಿ ಎಂಡ್ ಕ್ವಾಂಟಿಟಿ) ಇವುಗಳ ನಿಟ್ಟಿನಲ್ಲಿಯೂ ಇರುವ ಸ್ಪರ್ಧೆಯನ್ನು ಎದುರಿಸುವುದು ಸುಲಭವಾಗಬಲ್ಲದು.
 
ಅತ್ಯಾಧುನಿಕ ಸಿ.ಎನ್.ಸಿ. ಮಶಿನ್ ಮತ್ತು ತಂತ್ರಜ್ಞಾನದಲ್ಲಾದ ಪ್ರಗತಿಯಿಂದಾಗಿ ಗರಿಷ್ಠ ಪ್ರಮಾಣದ ಉತ್ಪಾದಕತೆಯನ್ನು ಪಡೆಯುವುದು ಸಾಧ್ಯವಾಗಿದೆ. ಇದಕ್ಕೋಸ್ಕರ ಬಳಸಬಹುದಾದಂತಹ ಅನೇಕ ವೈಶಿಷ್ಟ್ಯಗಳು (ಫೀಚರ್) ಭಾರತೀಯ ಉತ್ಪಾದಕರ ತನಕ ತಲುಪಿವೆ. ಫಾನುಕದಂತಹ ಮುಂಚೂಣಿಯಲ್ಲಿರುವ ಸಿ.ಎನ್.ಸಿ. ಉತ್ಪಾದಕರು ಸಿ.ಎನ್.ಸಿ. ನಿಯಂತ್ರಕಗಳಲ್ಲಿ (ಕಂಟ್ರೋಲರ್) ಅನೇಕ ರೀತಿಯ ಸ್ಮಾರ್ಟ್ ವೈಶಿಷ್ಟ್ಯಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಉತ್ಪಾದನೆಯ ಗುಣಮಟ್ಟ ಮತ್ತು ಸಂಖ್ಯೆಯಲ್ಲಿ ಹೆಚ್ಚಳವಾಗಲು ಲಭ್ಯವಿರುವ ಮಶಿನ್ ಟೂಲ್ ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಲು ಈ ವೈಶಿಷ್ಟ್ಯಗಳನ್ನು ಬಳಸುವುದು ಅತ್ಯಾವಶ್ಯಕವಾಗಿದೆ.
 
ಸ್ಮಾರ್ಟ್ ಸರ್ವೋ ಕಂಟ್ರೋಲರ್ ನ ವೈಶಿಷ್ಟ್ಯಗಳು
 
ತೂಕ, ಉಷ್ಣಾಂಶ, ಮಶಿನ್ ನ ಜಾಗ, ಸವೆತ ಮುಂತಾದ ಅಂಶಗಳಲ್ಲಾಗುವ ಬದಲಾವಣೆಗಳಿಂದಾಗಿ ಮಶಿನ್ ನ ಗುಣಮಟ್ಟವು ಕಾಲಾಂತರದಲ್ಲಿ ಬದಲಾಗುತ್ತದೆ. ಆದರೆ ಸ್ಮಾರ್ಟ್ ಸರ್ವೋ ಕಂಟ್ರೋಲ್ ನಲ್ಲಿರುವ ವೈಶಿಷ್ಟ್ಯಗಳಿಂದಾಗಿ ಮಶಿನ್ ನ ವಿವಿಧ ನಿಯಂತ್ರಣೆಯ ಕೆಲಸದಲ್ಲಿ ಸುಧಾರಣೆಗಳನ್ನು ಮಾಡಬಹುದಾಗಿದೆ. ಪರಿಸ್ಥಿತಿಗೆ ಅನುಸಾರವಾಗಿ ಮಶಿನ್ ನಲ್ಲಿ ಉಂಟಾಗಿರುವ ಬದಲಾವಣೆಗಳೊಂದಿಗೆ ರಿಯಲ್ ಟೈಮ್ ನಲ್ಲಿ ಸ್ವಯಂಚಾಲಿತವಾಗಿ ಸರಿಹೊಂದಾಣಿಸಿಕೊಳ್ಳುವ ಕ್ಷಮತೆಯಿಂದಾಗಿ ಈ ವೈಶಿಷ್ಟ್ಯಗಳನ್ನು ಸ್ಮಾರ್ಟ್ ಎಂಬುದಾಗಿ ಕರೆಯಲಾಗುತ್ತದೆ. ಈ ಮುಂದೆ ನೀಡಿರುವ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಬಳಸಿ ಕನಿಷ್ಠ ಸೈಕಲ್ ಟೈಮ್, ಉಚ್ಚಮಟ್ಟದ ನಿಖರತೆ ಮತ್ತು ಯಂತ್ರಣೆಯಲ್ಲಿರುವ ಗುಣಮಟ್ಟವನ್ನು ನಿರಂತರವಾಗಿ ಪಡೆಯಬಹುದಾಗಿದೆ.
 
• ಸ್ಮಾರ್ಟ್ ಸ್ಪಿಂಡಲ್ ಲೋಡ್ ಮೀಟರ್
• ಸ್ಮಾರ್ಟ್ ರಿಜಿಡ್ ಟ್ಯಾಪಿಂಗ್
• ಸ್ಮಾರ್ಟ್ ಫೀಡ್ ಎಕ್ಸಿಸ್ ಎಕ್ಸಿಲರೇಶನ್/ ಡೆಸಿಲರೇಶನ್ 
 

Fanuca Smart Servo Contro 
 
• ಸ್ಮಾರ್ಟ್ ಓವರ್ ಲ್ಯಾಪ್
• ಸ್ಮಾರ್ಟ್ ಬ್ಯಾಕ್ ಲ್ಯಾಶ್ ಕಾಂಪೆನ್ಶೇಶನ್
• ಸ್ಮಾರ್ಟ್ ಮಶಿನಿಂಗ್ ಪಾಯಿಂಟ್ ಕಂಟ್ರೋಲ್
• ಸ್ಮಾರ್ಟ್ ಸ್ಪಿಂಡಲ್ ಲೋಡ್ ಕಂಟ್ರೋಲ್
 
ಸ್ಮಾರ್ಟ್ ಮ್ಯಾನ್ಯುಫ್ಯಾಕ್ಚರಿಂಗ್ ಗೆ ಕುರಿತಾದ ಈ ಲೇಖನದಲ್ಲಿ ಮೇಲೆ ನೀಡಿರುವ ‘ಸ್ಮಾರ್ಟ್ ಸರ್ವೋ ಕಂಟ್ರೋಲ್’ನಲ್ಲಿರುವ ಕೆಲಸದ ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಹಾಗೆಯೇ ಗುಣಮಟ್ಟ ಮತ್ತು ಸಂಖ್ಯೆಯ ಕುರಿತು ಮಶಿನ್ ನ ಚಟುವಟಿಕೆಯನ್ನು ಸುಧಾರಿಸುವಲ್ಲಿ ಇದೊಂದು ವ್ಯಾವಹಾರಿಕ ಉಪಯೋಗವನ್ನು ಹೇಗೆ ಮಾಡಲಾಗುತ್ತದೆ, ಎಂಬುದರ ಕುರಿತೂ ಮಾಹಿತಿಯನ್ನು ವಿಸ್ತಾರವಾಗಿ ತಿಳಿಸಲಾಗಿದೆ.
 
ಸ್ಮಾರ್ಟ್ ಸ್ಪಿಂಡಲ್ ಲೋಡ್ ಮೀಟರ್
 
ಸುಲಭವಾಗಿ ಹೇಳುವುದಾದಲ್ಲಿ ಪಾರಂಪಾರಿಕವಾದ ಸ್ಪಿಂಡಲ್ ಲೋಡ್ ಮೀಟರ್, ಸ್ಪಿಂಡಲ್ ನಲ್ಲಿರುವ ತಾತ್ಕಾಲಿಕ ಲೋಡ್ ತೋರಿಸುತ್ತದೆ. ಪಾರಂಪಾರಿಕ ಸ್ಪಿಂಡಲ್ ಲೋಡ್ ಮೀಟರ್ ಮೂಲಕ ಕೇವಲ ಸ್ಪಿಂಡಲ್ ಭಾರದ ನಿರೀಕ್ಷಣೆಯನ್ನು ಮಾಡಿ ಡ್ರೈವ್ ನಲ್ಲಿ ಹೆಚ್ಚುವರಿ ಭಾರ ಇರುವುದು ಗಮನಕ್ಕೆ ಬರುತ್ತದೆ. ಆದರೆ ಪಾರಂಪಾರಿಕ ಸ್ಪಿಂಡಲ್ ಲೋಡ್ ಮೀಟರ್ ಸ್ಪಿಂಡಲ್ ನ ವೇಗ ಮತ್ತು ಸ್ಪಿಂಡಲ್ ನ ಕಂಟಿನ್ಯುವಸ್ ಅಥವಾ ಹೆಚ್ಚುವರಿ ಪವರ್ ಇವುಗಳಲ್ಲಿರುವ ಸಂಬಂಧ ಇದೂ ಅತ್ಯಂತ ಮಹತ್ತರವಾದ ಅಂಶವನ್ನು ತೋರಿಸುವುದಿಲ್ಲ. ಸ್ಪಿಂಡಲ್ ಪವರ್ ಚಲನೆಗೆ ಅನುಸಾರವಾಗಿ ಬದಲಾಗುತ್ತಿರುವುದರಿಂದ ಇದು ಮಹತ್ತರವಾದ ಅಂಶವಾಗಿದೆ. ಆದರೂ ಕೂಡಾ ಫಾನುಕದ ಸ್ಮಾರ್ಟ್ ಸ್ಪಿಂಡಲ್ ಲೋಡ್ ಮೀಟರ್ ಗರಿಷ್ಠ ಉತ್ಪಾದನೆಯ ಕ್ಷಮತೆಯನ್ನು ನೀಡುವಲ್ಲಿ ಆಪರೇಟರ್ ಗೆ ಸಹಾಯ ಮಾಡುತ್ತದೆ. 
 

 Example of output and lo 
 
ಚಿತ್ರ ಕ್ರ. 1 : ಔಟ್ ಪುಟ್ ಮತ್ತು ಲೋಡ್ ಮೀಟರ್ ನ ಉದಾಹರಣೆ 
 
ಸ್ಪಿಂಡಲ್ ಚಲನೆ – ಟಾರ್ಕ್ ಗುಣವೈಶಿಷ್ಟ್ಯಗಳು (ಕರೇಕ್ಟರಿಸ್ಟಿಕ್) ಕಂಟಿನ್ಯುವಸ್ ರೇಟೆಡ್ ಔಟ್ ಪುಟ್ (S1) ತೋರಿಸುತ್ತದೆ. ಹಾಗೆಯೇ S2/S3/S6 ಗುಣವೈಶಿಷ್ಟ್ಯಗಳು ನಿರಂತರವಾಗಿ ನಿರ್ಧಾರಿತ ಔಟ್ ಪುಟ್ ನಲ್ಲಿರುವ ಸ್ಪಿಂಡಲ್ ಓವರ್ ಲೋಡಿಂಗ್ ತೋರಿಸುತ್ತದೆ. ಸ್ಪಿಂಡಲ್ ಮೋಟರ್ S1 ಈ ನಿರ್ಧಾರಿತ ಮೌಲ್ಯದಲ್ಲಿಯೇ ಓವರ್ ಲೋಡ್ ಮಾಡಬಹುದಾಗಿದೆ. ಆದರೆ ಅದಕ್ಕೋಸ್ಕರ ಮೋಟರ್ ಓವರ್ ಲೋಡ್ ಮಾಡಿದನಂತರ ಅದನ್ನು ಹವಾಮಾನದಲ್ಲಿರುವ ಉಷ್ಣಾಂಶದೊಂದಿಗೆ ಸರಿಹೊಂದಾಣಿಸಿ ಅದನ್ನು ತಂಪಾಗಿರಿಸಲು ಸಾಕಷ್ಟು ಸಮಯವನ್ನು ನೀಡುವ ಅಗತ್ಯವಿರುತ್ತದೆ.
 
ಉದಾಹರಣೆ, 3.7 kW ನಿರಂತರವಾಗಿ ನಿರ್ಧಾರಿತ ಔಟ್ ಪುಟ್ ಇರುವ ಸ್ಪಿಂಡಲ್ ನಲ್ಲಿ 7.5 kW ಪವರ್ ನ ಆವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಯಂತ್ರಣೆಯ ಕೆಲಸವನ್ನು ನಿರ್ವಹಿಸಬಹುದು. ಆದರೆ ಸ್ಪಿಂಡಲ್ ಹವಾಮಾನದಲ್ಲಿರುವ ಉಷ್ಣಾಂಶದೊಂದಿಗೆ ಸರಿಹೊಂದಾಣಿಸುವ ತನಕ ತಂಪಾಗಿ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಸಮಯವು ಲಭಿಸಬಲ್ಲದು, ಎಂಬುದರ ಕುರಿತು ವಿಶೇಷವಾಗಿ ಮುತುವರ್ಜಿಯನ್ನು ವಹಿಸಿ ಅತ್ಯಂತ ಸ್ವಲ್ಪ ಕಾಲಾವಧಿಗೋಸ್ಕರ ಈ ರೀತಿಯ ಯಂತ್ರಣೆಯನ್ನು ಮಾಡಬಲ್ಲೆವು.
 
ಮೇಲಿನ ವರ್ಣನೆಯಿಂದ ಈ ಕೆಲಸವು ತುಂಬಾ ಸುಲಭ ಮತ್ತು ಸಹಜವಾಗಿದೆ, ಎಂಬುದಾಗಿ ಅನಿಸಿದರೂ ಕೂಡಾ ಸ್ಪಿಂಡಲ್ ಮೋಟರ್ ನ ಚಲನೆ-ಟಾರ್ಕ್ ಇಂತಹ ಗುಣವೈಶಿಷ್ಟ್ಯಗಳಿಂದ ಸ್ಪಿಂಡಲ್ ಓವರ್ ಲೋಡ್ ನ ಲೆಕ್ಕಾಚಾರವನ್ನು ಮಾಡುವುದು ಮತ್ತು ಅದರ ನಂತರ ಸ್ಪಿಂಡಲ್ ಎಷ್ಟು ಸಮಯ ನಡೆಸುವುದು ಅಥವಾ ನಿಲ್ಲಿಸುವುದು ಎಂಬುದನ್ನು ನಿರ್ಧರಿಸುವುದು ಆಪರೇಟರ್ ಗೆ ಸಾಧ್ಯವಿರುದಿಲ್ಲ. 
 

Using the Motor Power in  
 
ಚಿತ್ರ ಕ್ರ. 2 : ಮೋಟರ್ ಪವರ್ ನ್ನು ಸೂಕ್ತ ರೀತಿಯಲ್ಲಿ ಬಳಸಿ ಯಂತ್ರಣೆಯನ್ನು ಮಾಡುವುದು 
 
ಸಾಮಾನ್ಯವಾಗಿ ಆಪರೇಟರ್/ ಸಿ.ಎನ್.ಸಿ. ಪ್ರೊಗ್ರಾಮರ್ ಅವರ ಸ್ವಂತದ್ದೇ ಆದ ಅನುಮಾನ ಅಥವಾ ಅನುಭವಗಳಿಗೆ ಹೊಂದಿಕೊಂಡು ಸ್ಪಿಂಡಲ್ ಲೋಡ್ ನ ಕುರಿತಾದ ಕೆಲವಾರು ಅಂಶಗಳನ್ನು ವಿಮರ್ಶಿಸಿಯೇ ಕೆಲಸ ನಿರ್ವಹಿಸುತ್ತಾರೆ. ಪಾರಂಪಾರಿಕ ಸ್ಪಿಂಡಲ್ ಲೋಡ್ ಮೀಟರ್ ನಲ್ಲಿರುವ ರೀಡಿಂಗ್ ನ್ನು ಸ್ಪಿಂಡಲ್ ನ ಗರಿಷ್ಠ ಔಟ್ ಪುಟ್ ನ 60 ರಿಂದ 70 ಶೇಕಡಾ ಮೌಲ್ಯದಷ್ಟು ಸೀಮಿತವಾಗಿಡುತ್ತಾರೆ. S2/ S3/ S6 ಗುಣವೈಶಿಷ್ಟ್ಯಗಳ ಕುರಿತು ವಿಚಾರ ಮಾಡಿದಾಗ ನೇರವಾಗಿ ಆ ಸ್ಪಿಂಡಲ್ ಅದಕ್ಕಿಂತ ತುಂಬಾ ಹೆಚ್ಚು ಚಲನೆ ಇರುವ ಮತ್ತು ಸಮಯವನ್ನು ನೀಡಲು ಸಕ್ಷಮವಾಗಿರಬಲ್ಲವು. ಸೈಕಲ್ ಟೈಮ್ ಹೆಚ್ಚುವುದು, ಉತ್ಪಾದನೆಯ ಕ್ಷಮತೆಯು ಕಡಿಮೆಯಾಗುವುದು ಮತ್ತು ಹೂಡಿರುವ ಬಂಡವಾಳದ ಬಳಕೆ ಕಡಿಮೆಯಾಗುವುದು ಮುಂತಾದ ಪರಿಣಾಮಗಳಿರುತ್ತವೆ.
 
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಫಾನುಕ ಇವರು ಸ್ಪಿಂಡಲ್ ಸ್ಮಾರ್ಟ್ ಲೋಡ್ ಮೀಟರ್ ಅಭಿವೃದ್ಧಿ ಪಡಿಸಿದ್ದಾರೆ. ಎಲ್ಲ ಹೊಸ ಫಾನುಕ ಸಿ.ಎನ್.ಸಿ.ಯಲ್ಲಿ ಈ ಸ್ಮಾರ್ಟ್ ಲೋಡ್ ಮೀಟರ್ ಗೆ ಒಂದು ಸ್ಟ್ಯಾಂಡರ್ಡ್ ಫೀಚರ್ ರೂಪದಲ್ಲಿ ಅಳವಡಿಸಲಾಗಿದೆ. ಫಾನುಕ ಸ್ಪಿಂಡಲ್ ಸ್ಮಾರ್ಟ್ ಲೋಡ್ ಮೀಟರ್ ಈ ಮುಂದಿನ ಅಂಶಗಳನ್ನು ತೋರಿಸುತ್ತದೆ.
 
 
Proper use of motor power
 
 ಚಿತ್ರ ಕ್ರ. 3 : ಮೋಟರ್ ಪವರ್ ನ್ನು ಸೂಕ್ತ ರೀತಿಯಲ್ಲಿ ಬಳಸಿ ಮಾಡಲಾಗುವ ಯಂತ್ರಣೆ
 
• ಪ್ರೆಝಂಟ್ : ಲೋಡ್ ಮೀಟರ್ ಪ್ರಸ್ತುತ ಮೌಲ್ಯ (ಫಾನುಕ ಸ್ಪಿಂಡಲ್ ಸ್ಮಾರ್ಟ್ ಲೋಡ್ ಮೀಟರ್ ಯಾವಾಗಲೂ ಕಂಟಿನ್ಯುವಸ್ ನಿರ್ಧಾರಿತ ಔಟ್ ಪುಟ್ 100% ಇರುವುದಾಗಿ ಊಹಿಸುತ್ತೇವೆ.)
• ಗರಿಷ್ಠ : ಪ್ರಸ್ತುತ ಚಲನೆಗೋಸ್ಕರ ಲೋಡ್ ನ ಗರಿಷ್ಠ ಮೌಲ್ಯ
• ಉಳಿದಿರುವ ಕಾಲಾವಧಿ : ಪ್ರಸ್ತುತ ಲೋಡ್ ನಲ್ಲಿ ಯಂತ್ರಣೆಗೋಸ್ಕರ ತಗಲುವ ಸಮಯ.
• ಚಿತ್ರ ಕ್ರ. 1 ರಲ್ಲಿ ಸಿ.ಎನ್.ಸಿ. ಸ್ಕ್ರೀನ್ ನಲ್ಲಿ ಫಾನುಕ ಸ್ಪಿಂಡಲ್ ಸ್ಮಾರ್ಟ್ ಲೋಡ್ ಮೀಟರ್ ಹೇಗೆ ಕಾಣುತ್ತದೆ, ಎಂಬುದನ್ನು ತೋರಿಸಲಾಗಿದೆ. ಲೋಡ್ ಮೀಟರ್ ಮುಂದಿನಂತೆ ವೀಕ್ಷಿಸಬಹುದು.
• ಬಾರ್ ಗ್ರಾಫ್ ಫಾರ್ಮೆಟ್
• ಅಂಕೆ-ಸಂಖ್ಯೆಗಳ ಮೌಲ್ಯದ ಫಾರ್ಮೆಟ್
 
‘ಬಾರ್ ಗ್ರಾಫ್ ಪಾರ್ಮೆಟ್’ ಪ್ರಸ್ತುತ ಲೋಡ್ ತಿಳಿ ನೀಲಿ ಬಣ್ಣದಿಂದ ನಿರ್ದೇಶಿಸುತ್ತದೆ. ಆದರೆ 100% (ಕಂಟಿನ್ಯುವಸ್ ಔಟ್ ಪುಟ್) ನಿರ್ದೇಶಿಸಬಲ್ಲ ನೀಲಿ ಬಾರ್ ಸ್ಪಿಂಡಲ್ ಚಲನೆಗೆ ಅನುಸಾರವಾಗಿ ಬದಲಾಗುತ್ತದೆ.
 
‘ಅಂಕೆ-ಸಂಖ್ಯೆಗಳ ಮೌಲ್ಯದ ಫಾರ್ಮೆಟ್’ ಸ್ಪಿಂಡಲ್ ನಲ್ಲಿರುವ ಪ್ರಸ್ತುತ ಲೋಡ್ ನೊಂದಿಗೆ ಆ ಚಲನೆಯಲ್ಲಿ ಸಾಧ್ಯವಿರುವ ಗರಿಷ್ಠ ಔಟ್ ಪುಟ್ ನಿರ್ದೇಶಿಸುತ್ತದೆ. ಇದರಿಂದ ಆಪರೇಟರ್ ಗೆ ಪ್ರಸ್ತುತ ಲೋಡ್ ಮತ್ತು ಗರಿಷ್ಠ ಲೋಡ್ ಇವುಗಳಲ್ಲಿರುವ ಅನುಪಾತವು ನಿಖರವಾಗಿ ಮತ್ತು ಸ್ಪಷ್ಟವಾಗಿ ತಿಳಿಯಬಲ್ಲದು. ಇದರ ಹೊರತಾಗಿ ಅದರಿಂದ ಸ್ಪಿಂಡಲ್ ಪ್ರಸ್ತುತ ಲೋಡ್ ನಲ್ಲಿಯೇ ನಡೆಸಲು ಇನ್ನೂ ಎಷ್ಟು ಸಮಯವು ಉಳಿದಿದೆ, ಎಂಬುದನ್ನೂ ತಿಳಿಸುತ್ತದೆ. ಸ್ಪಿಂಡಲ್ 100 ಶೇಕಡಾಗಿಂತ ಹೆಚ್ಚು ಅಂದರೆ S2/ S3/ S6 ಗುಣವೈಶಿಷ್ಟ್ಯಗಳಲ್ಲಿ ನಡೆಸಲಾಗುವಾಗ, ಉಳಿದಿರುವ ಸಮಯವನ್ನೂ ತೋರಿಸುತ್ತದೆ.
 
ಸ್ಪಿಂಡಲ್ ಸ್ಮಾರ್ಟ್ ಲೋಡ್ ಮೀಟರ್ ಇದ್ದಲ್ಲಿ ಯಾವುದೇ ವೇಗದಲ್ಲಿ ಲೋಡ್ ನ ಸ್ಥಿತಿಯು ನಿರ್ದೋಷವಾಗಿ ಗಮನಕ್ಕೆ ಬರುತ್ತದೆ. ಪ್ರಸ್ತುತ ಔಟ್ ಪುಟ್ ಮತ್ತು ಕಂಟಿನ್ಯುವಸ್ ನಿಗದಿತ ಔಟ್ ಪುಟ್ ಇವುಗಳ ಅನುಪಾತ ಮತ್ತು ಪ್ರಸ್ತುತ ಔಟ್ ಪುಟ್ ಮತ್ತು ಹೆಚ್ಚುವರಿ ಔಟ್ ಪುಟ್ ಇವುಗಳ ಅನುಪಾತವನ್ನು ಒಟ್ಟಾಗಿಯೇ ನೋಡಬಹುದು. ಈ ರೀತಿಯಲ್ಲಿ ಸ್ಪಷ್ಟವಾಗಿ ತೋರಿಸಲಾಗಿರುವ ಮಾರ್ಗಸೂಚಿ ಸೂಚನೆಗಳ ಸಹಾಯದಿಂದ ಆಪರೇಟರ್ ಸ್ಪಿಂಡಲ್ ನಲ್ಲಿರುವ ಗರಿಷ್ಠ ಲೋಡ್ ಹಾಗೆಯೇ ಓವರ್ ಲೋಡ್ ಸ್ಥಿತಿಯಲ್ಲಿ ನಡೆಸುವ ಸಮಯವು ಸಹಜವಾಗಿಯೇ ಮಶಿನ್ ನಲ್ಲಿಯೇ ನಿರ್ಧರಿಸಬಲ್ಲೆವು ಮತ್ತು ಉತ್ಪಾದನೆಯ ಕ್ಷಮತೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಬಲ್ಲೆವು.
 
ಡಿಸ್ಪ್ಲೇಯ ಬಳಕೆ
 
ಸ್ಪಿಂಡಲ್ ಸ್ಮಾರ್ಟ್ ಲೋಡ್ ಮೀಟರ್ ಬಳಸಿ ಯಂತ್ರಣೆಗೆ (ಚಿತ್ರ ಕ್ರ. 2 ಮತ್ತು 3) ತಗಲುವ ಸಮಯವನ್ನು ಈ ಕೆಳಗಿನಂತೆ ಕಡಿಮೆ ಮಾಡಬಹುದು.
 
1. ಎಲ್ಲಕ್ಕಿಂತಯೂ ಹೆಚ್ಚು ಮಟೀರಿಯಲ್ ತೆಗೆಯಬೇಕಾಗಿರುವ ಮತ್ತು ಎಲ್ಲಕ್ಕಿಂತಲೂ ಹೆಚ್ಚು ಸಮಯ ತಗಲುವ ಕೆಲಸಗಳನ್ನು ಮೊತ್ತಮೊದಲಾಗಿ ಅರಿತುಕೊಳ್ಳಿರಿ. ಉದಾಹರಣೆ, ಡೈ ಮಶಿನಿಂಗ್ ನಲ್ಲಿರುವ ರಫಿಂಗ್ ಅಥವಾ ಟರ್ನಿಂಗ್ ಸೆಂಟರ್ ನಲ್ಲಿರುವ ಹೆಚ್ಚು ಮಟೀರಿಯಲ್ ತೆಗೆಯುವ ಕೆಲಸ.
2. ಈ ಕೆಲಸಕ್ಕೋಸ್ಕರ ಒಂದು ಯೋಗ್ಯ ರೀತಿಯ ಟೂಲ್ ಆಯ್ಕೆ ಮಾಡಿರಿ ಮತ್ತು ಇನ್ಸರ್ಟ್/ ಟೂಲ್ ಗಳಿಗೆ ಅನುಸಾರವಾಗಿ ಯಂತ್ರಣೆಯ ಪ್ಯಾರಾಮೀಟರ್ ನಿಗದಿಸಿರಿ.
ಎ. ಸ್ಪಿಂಡಲ್ ನ ವೇಗ
ಬಿ. ಡೆಪ್ಥ್ ಆಫ್ ಕಟ್
ಸಿ. ಮಶಿನಿಂಗ್ ಫೀಡ್ ರೇಟ್
3. ಮೇಲಿನ ಯಂತ್ರಣೆಯ ಪ್ಯಾರಾಮೀಟರ್ ಗಳಿಗೆ ಅನುಸಾರವಾಗಿ ಟರ್ನಿಂಗ್, ಮಿಲ್ಲಿಂಗ್ ಈ ರೀತಿಯ ಕೆಲಸಗಳಿಗೊಸ್ಕರ ಯೋಗ್ಯ ಸೂತ್ರಗಳನ್ನು ಬಳಸಿ ಸ್ಪಿಂಡಲ್ ನ ಭಾರದ ಗಣನೆಯನ್ನು ಮಾಡಬಹುದು.
4. ಗಣನೆ ಮಾಡಿರುವ ವೌಲ್ಯದ ಸಂದರ್ಭವನ್ನು ಪಡೆದು ಯಂತ್ರಣೆಯ ಕೆಲಸವನ್ನು ಪ್ರಾರಂಭಿಸಿರಿ. ಹೆಚ್ಚು ಪ್ರಮಾಣದಲ್ಲಿ ಮಟೀರಿಯಲ್ ಹೊರ ತೆಗೆಯುವ ಕೆಲಸದಲ್ಲಿ ಸರ್ಫೇಸ್ ಫಿನಿಶ್ ಆವಶ್ಯಕವಿರುವುದಿಲ್ಲ. ಆದರೆ ಕಡಿಮೆ ಸೈಕಲ್ ಟೈಮ್ ಇದೇ ಗುರಿಯಾಗಿರುತ್ತದೆ. ಇದರಿಂದಾಗಿ ಡೆಪ್ಥ್ ಆಫ್ ಕಟ್ ಅಥವಾ ಯಂತ್ರಣೆಯ ಫೀಡ್ ರೇಟ್ ಹೆಚ್ಚಿಸಿ ಇದನ್ನು ಸಾಧಿಸಬಹುದು. ಆದರೆ ಇದನ್ನು ಮಾಡುತ್ತಿರುವಾಗ ಪ್ಯಾರಾಮೀಟರ್ ಕಟಿಂಗ್ ಟೂಲ್ ನ ಸ್ಪೆಸಿಪಿಕೇಶನ್ ಗಿಂತ ಹೆಚ್ಚಾಗಬಾರದು, ಎಂಬುದರ ಕುರಿತಾಗಿ ಮುಂಜಾಗ್ರತೆಯನ್ನು ವಹಿಸುವುದು ಅತ್ಯಗತ್ಯವಾಗಿದೆ.
5. ಅದರ ನಂತರ ಸ್ಮಾರ್ಟ್ ಲೋಡ್ ಮೀಟರ್ ಬಳಸಿ ಅದೇ ವೇಗದಲ್ಲಿ ಸ್ಪಿಂಡಲ್ ಗೆ ಈ ಮುಂದಿನಂತೆ ಹಂತಹಂತವಾಗಿ ಓವರ್ ಲೋಡ್ ಮಾಡಬೇಕು.
ಎ. ಡೆಪ್ಥ್ ಆಫ್ ಕಟ್ ಹೆಚ್ಚಿಸಿ.
ಬಿ. ಯಂತ್ರಣೆಯ ಫೀಡ್ ರೇಟ್ ಹೆಚ್ಚಿಸಿ.
6. ಸ್ಮಾರ್ಟ್ ಲೋಡ್ ಮೀಟರ್ ತಕ್ಷಣ ಪ್ರಸ್ತುತ ಲೋಡ್ ತೋರಿಸುತ್ತದೆ. ಹಾಗೆಯೇ ಗರಿಷ್ಠ ಔಟ್ ಪುಟ್ ಮತ್ತು ನಿರಂತರ ಔಟ್ ಪುಟ್ ನ ದೂರವೂ ಉಳಿದಿರುವ ಸಮಯದೊಂದಿಗೆ ತೋರಿಸಬಲ್ಲದು. 
7. 5-ಎ ಮತ್ತು 5-ಬಿ ಈ ಸ್ಟೇಪ್ ನ ಪುನರಾವರ್ತಿಯನ್ನು ಮಾಡಿರಿ. (ಟೂಲ್ ಸ್ಪೆಸಿಫಿಕೇಶನ್ ನಿರ್ಧರಿಸಿ) ಮತ್ತು ಸ್ಮಾರ್ಟ್ ಲೋಡ್ ಮೀಟರ್ ರೀಡಿಂಗ್ ನ ಸ್ಪಿಂಡಲ್ ಓವರ್ ಲೋಡ್ ಗೋಸ್ಕರ ನಿಖರವಾದ ಮಾರ್ಗಸೂಚಿ ಎಂಬುದಾಗಿ ಬಳಸಿ ಕಡಿಮೆ ಸೈಕಲ್ ಟೈಮ್ ನಲ್ಲಿ ಹೆಚ್ಚು ಮಟೀರಿಯಲ್ ಹೊರ ತೆಗೆಯುವುದು ಮತ್ತು ಮಶಿನ್ ಸಂಪೂರ್ಣವಾಗಿ ಬಳಸಿರಿ. ಫಾನುಕ ಸಿ.ಎನ್.ಸಿ.ಯೊಂದಿಗೆ ಲಭ್ಯವಿರುವುದು ಸ್ಮಾರ್ಟ್ ಸರ್ವೋ ಇದರದ್ದೊಂದು ವೈಶಿಷ್ಟ್ಯವಾಗಿದೆ. ಇದನ್ನು ಬಳಸಿ ಮಶಿನ್ ನ ಉತ್ಪಾದನೆಯ ಕ್ಷಮತೆಯನ್ನು ಸಹಜವಾಗಿ ಹೆಚ್ಚಿಸುವುದು ಸಾಧ್ಯವಾಗಿದೆ.
 
9970800185
ವಿವೇಕಾನಂದ ಚಿಖಲೆ ಇವರು ಇಲೆಕ್ಟ್ರಾನಿಕ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರಿಗೆ ಮಶಿನ್ ಟೂಲ್ ವಲಯದಲ್ಲಿ 18 ವರ್ಷಕ್ಕಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ.
 
@@AUTHORINFO_V1@@