• ಕಡಿಮೆ ಉಷ್ಣಾಂಶದ ಉತ್ಪತ್ತಿ.
• ಟೂಲ್ ಮತ್ತು ಕಾರ್ಯವಸ್ತುಗಳ ಪರಸ್ಪರ ಸಂಪರ್ಕವು ಇಲ್ಲದಿರುವುದರಿಂದ ಫೋರ್ಸ್ ಅಥವಾ ಸ್ಟ್ರೇಸ್ ನ ಅಭಾವ.
• ತೊಡಕುಗಳಿರುವ ಮತ್ತು ಒಳಭಾಗದಲ್ಲಿರುವ ವಕ್ರತೆ ಇರುವ ಭಾಗಗಳಲ್ಲಿ ಹೊರ ವಕ್ರತೆ ಮತ್ತು ಒಳ ವಕ್ರತೆಯನ್ನು ಟೂಲ್ ಬಳಸಿ ಸುಲಭ ರೀತಿಯಲ್ಲಿ ಉತ್ಪಾದನೆ.
ECM ಯಂತ್ರವನ್ನು ವಿದ್ಯುತ್ ರಾಸಾಯನಿಕ ಡಿಬರಿಂಗ್, ವಿದ್ಯುತ್ ರಾಸಾಯನಿಕ ಗ್ರೈಂಡಿಂಗ್, ವಿದ್ಯುತ್ ಕ್ರೋಮಿಜಮ್ ಮತ್ತು ಮಟೀರಿಯಲ್ ಡಿಪಾಜಿಶನ್ ಮುಂತಾದ ವಿವಿಧ ಕೆಲಸಗಳಿಗೋಸ್ಕರ ಬಳಸಲಾಗುತ್ತದೆ. ECM ಯಂತ್ರ ಮರೀನ್ ವಾಲ್ವ್, ಸುಪರ್ ಕೆಪ್ಯಾಸಿಟರ್, ಎನರ್ಜಿಯನ್ನು ಶೇಖರಿಸುವ ಉಪಕರಣಗಳು ಮತ್ತು SUPL ಸೆಲ್ಸ್ ಗೆ ಸಂಬಂಧಪಟ್ಟದ್ದಾಗಿದೆ. ಈ ಯಂತ್ರಗಳನ್ನು ಬಳಸುವುದರಿಂದ ಲಭಿಸುವ ವಿಶೇಷ ಲಾಭಗಳೆಂದರೆ ಇದರ ಭಾಗಗಳಲ್ಲಿರುವ ಬ್ಯಾಟರಿಯ ಬಾಳಿಕೆ, ಅಂದರೆ ಆಯುಷ್ಯವು ತಮಗೆ ತಿಳಿಯಬಲ್ಲದು. ಹಾಗೆಯೇ ಸುಪರ್ ಕ್ಯಾಪಾಸಿಟರ್ ನಂತರ ಭಾಗಗಳ ಕುರಿತಾಗಿ ಈ ಭಾಗಗಳ ಸಾಮರ್ಥ್ಯವನ್ನೂ ನಿರ್ಧರಿಸಬಹುದು.
ಇನ್ನೊಂದು ಅಂಶವೆಂದರೆ ಮಟೀರಿಯಲ್ ವೇಗವಾಗಿ ತೆಗೆಯಲು (ಮಟೀರಿಯಲ್ ರಿಮೂವಲ್ ರೇಟ್ MRR) ಮತ್ತು ಟೂಲ್ ಗಳ ಸವೆತದ ಕಡಿಮೆ ಅನುಪಾತಕ್ಕೋಸ್ಕರ ECM ಮತ್ತು ಇಲೆಕ್ಟ್ರಿಕಲ್ ಡಿಸ್ಚಾರ್ಜ್ ಮಶಿನಿಂಗ್ ಒಟ್ಟಾಗಿಯೇ ಬಳಸುವುದು. ಇದನ್ನು ಹೈಬ್ರಿಡ್ ಮಶಿನಿಂಗ್ ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ ಟೂಲ್ ಮತ್ತು/ ಅಥವಾ ಕಾರ್ಯವಸ್ತುವಿನಲ್ಲಿ ಕಂಪನಗಳನ್ನು ತಯಾರಿಸಲು ಅಲ್ಟ್ರಾಸಾನಿಕ್ ತರಂಗಗಳನ್ನು ಬಳಸಲಾಗುತ್ತದೆ.
ಪ್ರಿಸೈಜ್ ವಿದ್ಯುತ್ ರಾಸಾಯನಿಕ ಯಂತ್ರಣೆ (PECM)
PECM ಅಂದರೆ ಪಾರಂಪಾರಿಕ ಯಂತ್ರಣೆಯಿಂದ ಯಾವ ಭಾಗಗಳನ್ನು ತಯಾರಿಸಲಾಗುವುದಿಲ್ಲವೋ, ಅವುಗಳ ಯಂತ್ರಣೆಯನ್ನು ಮಾಡಲು ಬಳಸಲಾಗುವ ಒಂದು ಪ್ರಗತಿಪರ ತಂತ್ರವಾಗಿದೆ. ಇದು ವಿದ್ಯುತ್ ಇಲೆಕ್ಟ್ರಾಲಿಸಿಸ್ ರೀತಿಯಲ್ಲಿ ಕೆಲಸ ಮಾಡಬಲ್ಲ ತುಂಬಾ ನಿಖರವಾದ ತಂತ್ರವಾಗಿದೆ. ಯಾವ ಮಿಶ್ರ ಲೋಹಗಳ ಯಂತ್ರಣೆಯನ್ನು ಮಾಡುವುದು ಕಷ್ಟಕರವಾಗಿದೆಯೋ, ಅವುಗಳ ಥರ್ಮಲ್ ಗುಣಧರ್ಮ, ದೃಢತೆ ಮತ್ತು ಹಾರ್ಡ್ ನೆಸ್ ಎಷ್ಟಿದ್ದರೂ ಕೂಡಾ ಅವುಗಳ ಮಶಿನಿಂಗ್ PECM ನಿಂದ ಮಾಡಬಹುದಾಗಿದೆ. ಅಸ್ತಿತ್ವದಲ್ಲಿರುವ ಎಲ್ಲ ಲೋಹಗಳು ಮತ್ತು ಅವುಗಳಿಂದ ತಯಾರಿಸಿರುವ ಮಿಶ್ರ ಲೋಹಗಳಿಗೆ ಈ ಪ್ರಕ್ರಿಯೆಯಿಂದ ಯಂತ್ರಣೆಯನ್ನು ಮಾಡುವುದು ಸಾಧ್ಯ.
ಕ್ಲೋಟ್
ಈ ಪ್ರಕ್ರಿಯೆಯ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಮಾಡಲು, MRR ಇದೊಂದೇ ಮಹತ್ವದ ಗುಣಧರ್ಮವಾಗಿದೆ. ಈ ಹಿಂದಿನ PECM ಯಂತ್ರದಲ್ಲಿ ಇಲ್ಲದಿರುವ ಕಂಪನಗಳಾಗಬಲ್ಲ ಅಕ್ಷ ಮತ್ತು ಪಲ್ಸೆಟಿಂಗ್ ವಿದ್ಯುತ್ ಪೂರೈಕೆ ಇಂತಹ ಲಾಭಗಳು ಇತ್ತೀಚಿನ ಪ್ರಗತಿಪರ ಯಂತ್ರಗಳಲ್ಲಿವೆ. ಈ ಹೊಸ ಹೊಸ ವೈಶಿಷ್ಟ್ಯಗಳಿಂದಾಗಿ ಹಲವಾರು ಮೈಕ್ರೋಮೀಟರ್ ನ ಪ್ರಕ್ರಿಯೆಯಲ್ಲಿ ದೂರ ದೂರವಿರುವ ಭಾಗಗಳಿಗೂ ಯಂತ್ರಣೆಯನ್ನು ಮಾಡಬಹುದು. ಹಾಗೆಯೇ ತೊಡಕುಗಳುಳ್ಳ ಹೊರ ಮತ್ತು ಒಳ ಆಕಾರವಿರುವ ಭಾಗಗಳ ಯಂತ್ರಣೆಯನ್ನು ಮಾಡುವುದೂ ಸುಲಭಸಾಧ್ಯವಾಗುತ್ತದೆ.
PECM ನಿಂದ ಲಭಿಸುವ ಲಾಭಗಳು
• ಪ್ರಕ್ರಿಯೆಯಲ್ಲಿರುವ ನಾವೀನ್ಯತೆ
• ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುವುದೂ ಸಾಧ್ಯ.
• ಹೊಸ ಎಕ್ಸಾಟಿಕ್ ಮಿಶ್ರ ಲೋಹಗಳಿಗೆ ಯಂತ್ರಣೆಯನ್ನು ಮಾಡುವುದೂ ಸಾಧ್ಯ.
• ಮಟೀರಿಯಲ್ ಕತ್ತರಿಸಲ್ಪಡುವುದಿಲ್ಲ, ಹಾಗೆಯೇ ಕರಗುವುದಿಲ್ಲ.
ಸರ್ಫೇಸ್ ನಲ್ಲಿರುವ ಇಂಟಿಗ್ರೇಶನ್
• ಕಾರ್ಯವಸ್ತುವಿಗೆ ಥರ್ಮಲ್ ಅಥವಾ ಯಾಂತ್ರಿಕ ಫೋರ್ಸ್ ಅಳವಡಿಸಲಾಗುವುದಿಲ್ಲ.
• ಟೂಲ್ ನ ಸವೆತವು ತುಂಬಾ ಕಡಿಮೆ.
ಡಿಸೈನ್ ನಲ್ಲಿ ಸ್ವತಂತ್ರತೆ
• ಸಾಮಾನ್ಯವಾದ ಟೂಲ್ ತಲುಪುವುದು ಅಸಾಧ್ಯವಿರುವಲ್ಲಿ ಈ ರೀತಿಯ ಡಿಸೈನ್ ಮಾಡುವುದು ಸಾಧ್ಯ.
• ತೊಡಕುಗಳುಳ್ಳ ಕಂಟೂರ್ಸ್ ತಯಾರಿಸುವುದು ಸಾಧ್ಯವಾಗಿದೆ.
• 3-D ಉತ್ಪಾದನೆಗಳನ್ನು ಒಂದೇ ಹಂತದಲ್ಲಿ ತಯಾರಿಸುವುದು ಸಾಧ್ಯ.
.
ಯಂತ್ರಣೆಯಲ್ಲಿರುವ ನಿಖರತೆ
• ತೆಳ್ಳಗಿನ ಮತ್ತು ಸಡಿಲವಾಗಿರುವ ಭಾಗಗಳ ಯಂತ್ರಣೆಯನ್ನು ಮಾಡಬಹುದು.
• ಮೈಕ್ರೋ ಸ್ಟ್ರಕ್ಚರ್ ತಯಾರಿಸಬಹುದು.
• ಪ್ರಕ್ರಿಯೆಯಲ್ಲಿ ಸ್ಥಿರತೆಯು ಹೆಚ್ಚು ಉಚ್ಚಮಟ್ಟದ್ದಾಗುತ್ತದೆ.
ಉದಾಹರಣೆ
ಪಾರ್ಟಿಕಲ್ ರಿಎನ್ಫೋರ್ಸ್ಡ್ ಅಲ್ಯುಮಿನಿಯಮ್ ಮ್ಯಾಟ್ರಿಕ್ಸ್ ಕಂಪೋಜಿಟ್ ನ (AMC) ಜೆಟ್ ವಿದ್ಯುತ್ ರಾಸಾಯನಿಕ ಮಶಿನಿಂಗ್ (ECM) ಜೆಟ್ ECM ನಲ್ಲಿ 20 ಮೀಟರ್/ ಸೆಕಂಡುಗಳಷ್ಟು ವೇಗವಾಗಿ ತಾಜಾ ಇಲೆಕ್ಟ್ರೋಲೈಟ್ ಪೂರೈಸಲು ಒಂದು ಸೂಕ್ಷ್ಮವಾದ ರಂಧ್ರಗಳಿರುವ ನೋಜಲ್ ಬಳಸಲಾಗಿರುತ್ತದೆ. ಇಲೆಕ್ಟ್ರೋಲೈಟ್ ನ ಪ್ರವಾಹವು ಕಾರ್ಯವಸ್ತುವಿನೆಡೆಗೆ ವರ್ಟಿಕಲ್ ಆಗಿ ಇರುತ್ತದೆ. ಹೆಚ್ಚು ವೇಗದಿಂದಾಗಿ ಹೊಸದಾದ ಇಲೆಕ್ಟ್ರೋಲೈಟ್ ನ ಪೂರೈಕೆಯು ಕಾರ್ಯವಸ್ತುಗಳ ತನಕ ತಲುಪುತ್ತದೆ. ಇದರಿಂದಾಗಿ ಸರ್ಫೇಸ್ ನ ಗುಣಮಟ್ಟವು ತುಂಬಾ ಉಚ್ಚಮಟ್ಟದಲ್ಲಿ ಲಭಿಸುತ್ತದೆ. AMC ಯಲ್ಲಿ ಮೂಲಭೂತ ಮಿಶ್ರ ಲೋಹಗಳು ಅಲ್ಯುಮಿನಿಯಮ್ EN AW 2017 ಇರುತ್ತದೆ. ಅದರಲ್ಲಿ ಒಂದು ಮೈಕ್ರಾನ್ ನಷ್ಟು ವ್ಯಾಸವಿರುವ SiC ಕಣಗಳ ರಿಎನ್ಫೋರ್ಸ್ ಮೆಂಟ್ ಮಾಡಲಾಗಿರುತ್ತದೆ.
ಸಮಸ್ಯೆಗಳು
AMC ಯಲ್ಲಿ ಕಠಿಣವಾಗಿರುವ ಸಿರಾಮಿಕ್ ಕಣಗಳಿರುವ ಮೃದುವಾದ ಅಲ್ಯುಮಿನಿಯಮ್ ಮ್ಯಾಟ್ರಿಕ್ಸ್ ಗಳಿರುತ್ತವೆ. ಇದರಿಂದಾಗಿ ಟೂಲ್ ಹೆಚ್ಚು ಪ್ರಮಾಣದಲ್ಲಿ ಸವೆಯುತ್ತದೆ. ಹಾಗೆಯೇ, ಒಂದು ವೇಳೆ ಪಾರಂಪಾರಿಕ ಯಂತ್ರಣೆಯನ್ನು ಬಳಸಿದಲ್ಲಿ ಗಮನಾರ್ಹವಾದ ಯಾಂತ್ರಿಕ
ಮತ್ತು ಥರ್ಮಲ್ ಹಾನಿಯಾಗುತ್ತದೆ. ಈ ಹಾನಿಯಿಂದಾಗಿ AMC ನ ಸೂಕ್ಷ್ಮ ರಚನೆಯನ್ನು ಬದಲಾಯಿಸುವುದು ಸಾಧ್ಯ.
ಉಪಾಯಗಳು
ಒಳ ವ್ಯಾಸ 100 ಮೈಕ್ರಾನ್ ಇರುವ ನೋಜಲ್ ಬಳಸಲಾಗಿದೆ. ಇಲೆಕ್ಟ್ರೋಲೈಟ್ ಎಂಬುದಾಗಿ ಇಲೆಕ್ಟ್ರಿಕ್ ಕಂಡಕ್ಟಿವಿಟಿ185 mS/ ಸೆ.ಮಿ. ಇರುವ ಸೋಡಿಯಮ್ ಕ್ಲೋರೈಡ್ ಅಥವಾ ಸೋಡಿಯಮ್ ನೈಟ್ರೈಟ್ ನ ನೀರಿನಲ್ಲಿರುವ ದ್ರಾವಣ 25˚ ಸೆಂ. ಉಷ್ಣಾಂಶದಲ್ಲಿಯೂ ಬಳಸಲಾಗಿದೆ. ಈ ಇಲೆಕ್ಟ್ರೋಲೈಟ್ pH- ನ್ಯುಟ್ರಲ್ ವಾಗಿವೆ. ವರ್ಕಿಂಗ್ ಗ್ಯಾಪ್ 100 ಮೈಕ್ರಾನ್ ಇದೆ. 10, 15, 20 ಅಥವಾ 25 ವೋಲ್ಟ್ ನಷ್ಟು ವೋಲ್ಟೇಜ್ ನೀಡಬಹುದಾಗಿದೆ. ಬಿಂದುಗಳ ಯಂತ್ರಣೆಗೋಸ್ಕರ ತಗಲುವ ಸಮಯ 0.5, 1, 1.5 ಅಥವಾ 2 ಸೆಕಂಡುಗಳು. ಪ್ರಕ್ರಿಯೆಯಲ್ಲಿ ಬಿಂದುಗಳ ಯಂತ್ರಣೆ (ಪಾಯಿಂಟ್ ಮಶಿನಿಂಗ್) ಬಳಸಲಾಗುತ್ತದೆ. ಇದರಿಂದಾಗಿ ಕಾರ್ಯವಸ್ತುವಿನಲ್ಲಿ ಕ್ಲೋಟ್ (ಟೊಪ್ಪಿಗೆಯ ಆಕಾರದಲ್ಲಿರುವ ಕುಳಿಗಳು) ತಯಾರಾಗುತ್ತವೆ. ಎರಡೂ ಇಲೆಕ್ಟ್ರೋಲೈಟ್ ಗಳಿಂದಾಗಿ ತಯಾರಾಗಬಲ್ಲ ಕ್ಲೋಟ್ ಗಳ ವ್ಯಾಸವು ಸಮಾನವಾಗಿರುತ್ತದೆ. ಆದರೆ ಸೋಡಿಯಮ್ ಕ್ಲೊರೈಡ್ ಬಳಸುತ್ತಿರುವಾಗ ಕ್ಲೋಟ್ ಗಳ ಆಳವು ಗಮನಾರ್ಹವಾಗಿರುತ್ತದೆ. ಯಂತ್ರಣೆಗೆ ತಗಲುವ ಸಮಯ 1.5 ರಿಂದ 2 ಸೆಕಂಡುಗಳಷ್ಟಿರುತ್ತದೆ. ಯಂತ್ರಣೆಯ ಸಮಯ ಮತ್ತು ವೋಲ್ಟೇಜ್ ಹೆಚ್ಚಾದಲ್ಲಿ ಕ್ಲೋಟ್ ನ ವ್ಯಾಸ ಮತ್ತು ಆಳವು ಹೆಚ್ಚಾಗುತ್ತದೆ.
ಕ್ಲೋಟ್
ಇಲೆಕ್ಟ್ರೋಲೈಟ್ ಜೆಟ್ ನ ಜಾಮೆಟ್ರಿಯಿಂದಾಗಿ ಇಲೆಕ್ಟ್ರೋ ಕೆಮಿಕಲ್ ತೆಗೆಯುವ ಕೆಲಸವು ಅದರ ನಿರ್ಧಾರಿತ ಭಾಗದಲ್ಲಿ ಆಗುತ್ತದೆ. ಸೋಡಿಯಮ್ ನೈಟ್ರೇಟ್ ಇಲೆಕ್ಟ್ರೋಲೈಟ್ ಬಳಕೆಯಲ್ಲಿ ರಿಪ್ರಾಡಕ್ಷನ್ ನ ಕ್ಷಮತೆಯುಳ್ಳ ಡಿಪಾಜಿಶನ್ ಗೋಸ್ಕರ ವೋಲ್ಟೇಜ್ 10 ವೋಲ್ಟ್ ಗಿಂತ ಹೆಚ್ಚು ಅಳವಡಿಸಬೇಕಾಗುತ್ತದೆ. ಒಂದು ವೇಳೆ ಸಿಲಿಕಾನ್ ಕಾರ್ಬೈಡ್ ಕಣಗಳ ಪ್ರಮಾಣವು 10 ಶೇಕಡಾದಿಂದ 5 ಶೇಕಡಾದಷ್ಟು ಬದಲಾದಲ್ಲಿ ಯಂತ್ರಣೆಯ ಫಲಿತಾಂಶ ಹೆಚ್ಚು ಗಮನಾರ್ಹವಾಗಿ ಬದಲಾಗಲಾರದು.
ಲಾಭಗಳು
ಇಲೆಕ್ಟ್ರೋಲೈಟ್ ಜೆಟ್ ನ ಚಟುವಟಿಕೆಯಿಂದ ಸೂಕ್ಷ್ಮ ರಚನೆಗಳ ಮತ್ತು ಸೂಕ್ಷ್ಮ ಜಾಮೆಟ್ರಿಯ ನಿರ್ಮಿತಿಯು ಲೋಹಗಳ ಭಾಗಗಳಲ್ಲಿ ವೇಗವಾಗಿ ಮತ್ತು ಫ್ಲೆಕ್ಸಿಬಲ್ ಆಗುತ್ತದೆ. ಇದರಿಂದ ಲಭಿಸಿರುವ ಇನ್ನೊಂದು ಲಾಭವೆಂದರೆ, ಇಲೆಕ್ಟ್ರೋಲೈಟ್ ನ ಬಳಕೆಯು ಕಡಿಮೆಯಾಗುತ್ತದೆ. ಈ ಪದ್ಧತಿಯು ಎನೋಡಿಕ್ ಡಿಪಾಝಿಶನ್ ನಲ್ಲಿ ಅವಲಂಬಿಸಿರುವುದರಿಂದ ಅದು ಹಾರ್ಡ್ ನೆಸ್ ಮತ್ತು ಮಟೀರಿಯಲ್ ನ ಬಲದಲ್ಲಿಯೂ ಅವಲಂಬಿಸಿರುವುದಿಲ್ಲ. ಅದರಿಂದಾಗಿ ಕಾರ್ಯವಸ್ತುವಿನ ರಚನೆಯಲ್ಲಿ ಕಡಿಮೆ ಪ್ರಮಾಣದ ಪರಿಣಾಮವು ಉಂಟಾಗುತ್ತದೆ. ಸೋಡಿಯಮ್ ನೈಟ್ರೇಟ್ ಬಳಸಿದಲ್ಲಿ ಪೆಸಿವೇಶನ್ ನ ಪರಿಣಾಮವು ಕಂಡಿಬರುತ್ತದೆ.
9038888077
ಹರಿ ಶಂಕರ್ ಇವರು ಮೀಡಿಯಾ ಉದ್ಯಮಿ ಮತ್ತು ಮಾರ್ಕೇಟಿಂಗ್ ಕಮ್ಯುನಿಕೇಶನ್ ತಜ್ಞರಾಗಿದ್ದಾರೆ. ಅವರು ಮೀಡಿಯಾ ವಲಯದಲ್ಲಿ ಕಳೆದ 21 ವರ್ಷಗಳ ಕಾಲಾವಧಿಯಲ್ಲಿ ಕಾರ್ಯನಿರತರಾಗಿದ್ದಾರೆ. ಇದರೊಂದಿಗೆ ಅವರಿಗೆ ಗ್ರೊಯಿಂಗ್ ಮ್ಯಾನ್ಯುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿಯೂ ಅನುಭವವನ್ನು ಹೊಂದಿದ್ದಾರೆ.