ಪ್ರಗತಿ ಆಟೊಮೇಶನ್ ಪ್ರೈ.ಲಿ. ಕಂಪನಿಗೆ ‘ಡಿ.ಎಮ್.ಜಿ.ಮೋರಿ ಪಾಲುದಾರ 2021’ ಪ್ರಶಸ್ತಿ ವಿತರಣೆ

@@NEWS_SUBHEADLINE_BLOCK@@

Lohkarya - Udyam Prakashan    16-Nov-2021
Total Views |
ಪುಣೆ : ಮಶಿನ್ ಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡಿ.ಎಮ್.ಜಿ. ಮೋರಿ ಇವರಿಂದ ಪ್ರತಿ ವರ್ಷವೂ ‘ಡಿ.ಎಮ್.ಜಿ. ಮೋರಿ ಪಾಲುದಾರ ಪ್ರಶಸ್ತಿ’ವನ್ನು ನೀಡಲಾಗುತ್ತಿದೆ. ಪ್ರಸಕ್ತ ವರ್ಷದ ‘ಡಿ.ಎಮ್.ಜಿ.ಮೋರಿ ಪಾರ್ಟ್ ನರ್ ಅವಾರ್ಡ್ 2021’ ಈ ಪ್ರಶಸ್ತಿಯನ್ನು ಮೊತ್ತ ಮೊದಲಾಗಿ ಭಾರತದ ಕಂಪನಿಗೆ ನೀಡಲಾಗುತ್ತಿದೆ. ಗುಣಮಟ್ಟದ ಶ್ರೇಣಿಯಲ್ಲಿ ಬೆಂಗಳೂರಿನ ಮೆ. ಪ್ರಗತಿ ಆಟೊಮೇಶನ್ ಪ್ರೈ.ಲಿ. ಕಂಪನಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಜರ್ಮನಿಯ ಫ್ರಾನ್ಟನ್ ನಲ್ಲಿರುವ ಡೆಕೇಲ್ ಮಾಹೋ ಎಂಬಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಪ್ರಿ EMO ‘ಡಿ.ಎಮ್.ಜಿ. ಮೋರಿ ಪಾರ್ಟನರ್ ಸಮಿಟ್’ ನಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಲೈವ್ ಮತ್ತು ವರ್ಚುವಲ್ ಮಾಧ್ಯಮದಲ್ಲಿ ಏರ್ಪಡಿಸಲಾಗಿತ್ತು.
 

Progress Automation Pvt.
 

Progress Automation Pvt.  

“ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಡಿ.ಎಮ್.ಜಿ. ಮೋರಿಯಂತಹ ಮಶಿನ್ ಉತ್ಪಾದಕ ಕಂಪನಿಯಿಂದ ಗುಣಮಟ್ಟದ ಕುರಿತಾದ ಪ್ರಶಸ್ತಿ ಲಭಿಸಿದ್ದರಿಂದ ನಮಗೆ ಹೆಮ್ಮೆ ಮತ್ತು ಸಂತೋಷ ಉಂಟಾಗಿದೆ. ಡಿ.ಎಮ್.ಜಿ. ಮೋರಿ ಈ ಕಂಪನಿಯ ಉಚ್ಚಗುಣಮಟ್ಟದ ಮಾನದಂಡಗಳಲ್ಲಿ ನಮ್ಮ ಕಂಪನಿಯು ಸೇರ್ಪಡೆಯಾಗಿರುವುದನ್ನು ಅವರಿಂದಲೇ ದೃಢೀಕರಿಸಲ್ಪಟ್ಟಿರುವುದು ನಮಗೋಸ್ಕರ ಗೌರವ ಮತ್ತು ಹೆಮ್ಮೆಯನ್ನುಂಟು ಮಾಡುವ ವಿಷಯ. ಗುಣಮಟ್ಟವನ್ನು ಇನ್ನಷ್ಟು ವೃದ್ಧಿಸಲು ಈ ಪ್ರಶಸ್ತಿಯು ಪ್ರೇರಣೆಯನ್ನು ನೀಡಬಲ್ಲದು,” ಎಂದು ಪ್ರಗತಿ ಆಟೊಮೇಶನ್ ಪ್ರೈ. ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ (ಭಾರತ) ಅತುಲ್ ಭಿರಂಗಿ ಇವರು ಹೇಳಿದರು.
 
“ಡಿ.ಎಮ್.ಜಿ. ಮೋರಿ ಈ ಕಂಪನಿಗೆ ಪೂರೈಕೆದಾರರು ಮತ್ತು ಪಾಲುಗಾರರು ಮಹತ್ವದ್ದಾಗಿದ್ದಾರೆ. ಅದಕ್ಕೋಸ್ಕರ ನಮ್ಮ ಕಂಪನಿಯು ಪ್ರಾರಂಭದಿಂದಲೂ ಉಚ್ಚಗುಣಮಟ್ಟ, ಬಾಳಿಕೆ ಮತ್ತು ಹೊಸ ಹೊಸ ಕಲ್ಪನೆಗಳೆಡೆಗೆ ಗಮನ ಹರಿಸಿದೆ. ಪ್ರಶಸ್ತಿ ಪಡೆದಿರುವ ಎಲ್ಲರೂ ನಮ್ಮ ಆಪೇಕ್ಷೆಗಳನ್ನು ಪೂರ್ತಿಗೊಳಿಸಿದ್ದಾರೆ,” ಎಂಬ ವಿಚಾರವನ್ನು ಡಿ.ಎಮ್.ಜಿ. ಮೋರಿ ಕಂಪನಿ ಲಿ.ನ ಅಧ್ಯಕ್ಷರಾದ ಡಾ. Ing ಮಾಸಾಹಿಕೊ ಮೋರಿ ಇವರು ವ್ಯಕ್ತ ಪಡಿಸಿದರು.
 
ಐದು ಶ್ರೇಣಿಗಳಲ್ಲಿ ಪ್ರಶಸ್ತಿ ಪಡೆದ ಕಂಪನಿಗಳು
 
• ಗುಣಮಟ್ಟ : ಪ್ರಗತಿ ಆಟೊಮೇಶನ್ (ಭಾರತ)
• ಇನೊವೇಶನ್ : ಸೀಮೆನ್ಸ್ ಎಜಿ (ಜರ್ಮನಿ)
• ವಿತರಣೆಯ ಕಾರ್ಯಕ್ಷಮತೆ : ಮಾತ್ಸುಎ ಯಾಮಾಮೋಟೊ (Matsue Yamamoto) (ಜಪಾನ್)
• DMQP (ಡಿ.ಎಮ್.ಜಿ. ಮೋರಿಯಿಂದ ಮನ್ನಣೆ ಪಡೆದಿರುವ ಉತ್ಪಾದನೆಗಳು- ಮಶಿನ್ ಗಳ ಸಹಾಯಕ ಉಪಕರಣಗಳು ಮತ್ತು ಉಪಸಾಧನಗಳು) : ಫುಕ್ಸ್ ಪೆಟ್ರೊಲುಬ್ ಎಸ್ಇ (ಜರ್ಮನಿ)
• ಸಸ್ಟ್ಯಾನಿಬಿಲಿಟಿ : ಇಂಟಿಗ್ರಿಟಿ ನೆಕ್ ಸ್ಟ್ (ಜರ್ಮನಿ)
@@AUTHORINFO_V1@@