ಸಂಪಾದಕೀಯ

@@NEWS_SUBHEADLINE_BLOCK@@

Lohkarya - Udyam Prakashan    13-Nov-2021   
Total Views |
 
 

Editorial_1  H
 
ಸಂಪಾದಕೀಯ 
 
 
‘ಲೋಹಕಾರ್ಯ’ ಮಾಸ ಪತ್ರಿಕೆಯ ಓದುಗರಿಗೆ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯಗಳು. ಕಳೆದ ಸುಮಾರು ಒಂದುವರೆ ವರ್ಷ ಕೊರೋನಾ ಸೋಂಕಿನಿಂದ ಬಳಲುತ್ತಾ ಕಷ್ಟಕರವಾದ ಮತ್ತು ಚಿಂತೆಯನ್ನೆದುರಿಸುವ ಕಾಲಾವಧಿಯಾಗಿತ್ತು. ಕೊರೋನಾ ಸೋಂಕಿನಿಂದ ಎಲ್ಲರ ದೈನಂದಿನ ಕಾರ್ಯಕಲಾಪಗಳಲ್ಲಿ ಗಂಭೀರವಾಗ ಪರಿಣಾಮಗಳುಂಟಾದವು. ಮೂರನೇ ಅಲೆಯ ಕುರಿತಾದ ಅನುಮಾನಗಳು ಮತ್ತು ಹೆದರಿಕೆಯು ಈ ದೀಪಾವಳಿಯ ಶುಭ ಸಮಯದಲ್ಲಿ ದೀಪಬೆಳಗಿಸಿ ದೂರಗೊಳಿಸೋಣ. ಮುಂಬರುವ ವರ್ಷವು ಎಲ್ಲ ಓದುಗರು, ಜಾಹಿರಾತುದಾರರು, ಚಂದಾದಾರರು ಮತ್ತು ಲೇಖಕರೆಲ್ಲರಿಗೂ ಒಳ್ಳೆಯ ಆರೋಗ್ಯ ಮತ್ತು ಏಳಿಗೆಯನ್ನುಂಟು ಮಾಡಲಿ ಎಂಬುದಾಗಿ ತುಂಬು ಹೃದಯದಿಂದ ಹಾರೈಸುತ್ತೇವೆ.
 
ದೀಪಾವಳಿಯ ಮುಹೂರ್ತದಲ್ಲಿ ಅನೇಕರು ಹೊಸ ಉದ್ದಿಮೆಗಳನ್ನು ಪ್ರಾರಂಭಿಸುತ್ತಾರೆ. ಕೆಲವರು ತಮ್ಮ ಉದ್ದಿಮೆಗಳನ್ನು ವಿಸ್ತರಿಸುತ್ತಾರೆ. ಹೊಸ ವ್ಯವಸಾಯ ಮತ್ತು ವಿಸ್ತಾರದ ಯೋಜನೆಯನ್ನು ಮಾಡುತ್ತಿರುವಾಗ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳ ಕುರಿತು ಅಭ್ಯಾಸ ಮಾಡಿ ಮಾರುಕಟ್ಟೆಯ ನಿಲುವು ಹೇಗಿದೆ ಎಂಬುದರ ಕುರಿತು ಹೆಚ್ಚು ಒತ್ತನ್ನು ನೀಡಲಾಗುತ್ತದೆ. ಉತ್ಪಾದನೆಗಳ ವಿಕಾಸ, ಕಾರಖಾನೆಗಳಲ್ಲಿ ಬದಲಾವಣೆಗಳು, ಪ್ರಕ್ರಿಯೆಯಲ್ಲಿ ಬದಲಾವಣೆಗಳು, ಉತ್ಪಾದನೆಗಳ ಮಾರಾಟ ಮತ್ತು ಸೇಲ್ಸ್ ಇಂತಹ ಅನೇಕ ತುಂಬಾ ಮಹತ್ವಪೂರ್ಣವಾದ ಘಟಕಗಳೆಡೆಗೆ ಹೆಚ್ಚು ಗಮನ ಹರಿಸಲಾಗುತ್ತದೆ. ಕೋವಿಡ್ ಸೋಂಕಿನ ನಂತರ ವಿಶ್ವದಾದ್ಯಂತ ಎಲ್ಲ ಕಾರಖಾನೆಗಳಲ್ಲಿ ಮಾನವನು ಮಾಡುತ್ತಿರುವ ಎಲ್ಲ ವ್ಯವಹಾರಗಳಲ್ಲಿ ನಿರ್ಬಂಧಗಳನ್ನು ಹೇರಲಾಯಿತು. ಇದರಿಂದಾಗಿ ನಿರ್ಮಿತಿಯ ವಲಯದಲ್ಲಿ ಎಂದಿಗೂ ಅನುಭವಿಸದೇ ಇರುವಂತಹ ‘ಡಿಜಿಟಲ್ ಪ್ಲೇಟ್ ಫಾರ್ಮ್’ನ ಬಳಕೆಯು ವೃದ್ಧಿಸಿರುವುದನ್ನು ಎಲ್ಲರೂ ಗಮನಿಸಿದ್ದಾರೆ. ಹೊಸ ವ್ಯವಹಾರಗಳ ಯೋಜನೆಯನ್ನು ಮಾಡುತ್ತಿರುವಾಗ ಅಥವಾ ಉದ್ದಿಮೆಗಳನ್ನು ವಿಸ್ತರಿಸುವಾಗ ಉದ್ಯಮಿಗಳ ಅನೇಕ ರೀತಿಯ ಹೊಸ ಹೊಸ ದಾರಿಗಳನ್ನು ಗುರುತಿಸಿ ನಿರಂತರವಾಗಿ ಉತ್ಪಾದನೆಗಳನ್ನು ಮಾಡುವಲ್ಲಿ ಒತ್ತು ನೀಡುವಲ್ಲಿ ಮುತುವರ್ಜಿಯನ್ನು ವಹಿಸಬೇಕು, ಅಲ್ಲದೇ ಅದರಲ್ಲಿ ಹೆಚ್ಚಳವನ್ನು ಮಾಡುವ ನಿಟ್ಟಿನಲ್ಲಿ ಗಮನ ಹರಿಸಿಯೇ ಮುಂದುವರಿಯಬೇಕು. ಮಾಸ ಪತ್ರಿಕೆಯ ಕುರಿತು ನಾವು ಅನೇಕ ಕಾರಖಾನೆಗಳಿಗೆ ಭೇಟಿ ನೀಡುತ್ತಿರುತ್ತೇವೆ. ಕಾರಖಾನೆಗಳಲ್ಲಿ ಮಾಲಿಕರಿರಲಿ ಅಥವಾ ಕೆಲಸಗಾರರಿರಲಿ, ಕಾರಖಾನೆಗಳಲ್ಲಿ ಮಾನವನಿಂದ ಮಾಡಲಾಗುವ ಕೆಲಸಗಳ ಕುರಿತಾದ ಬದಲಾವಣೆಗಳನ್ನು ಮಾಡುತ್ತಿರುವುದು ಗಮನಾರ್ಹವಾದ ಅಂಶವಾಗಿದೆ. ಬದಲಾಗುತ್ತಿರುವ ಪರಿಸ್ಥಿತಿಯಂತೆ ತಾವೂ ಅಪ್ ಟೂ ಡೆಟ್ ಆಗಿರಬೇಕು, ಎಂಬ ಅಂಶವನ್ನು ಎಲ್ಲರೂ ವ್ಯಕ್ತ ಪಡಿಸಿದರು. ಹಲವಾರು ಯುವಕ ಇಂಜಿನಿಯರ್ ಮತ್ತು ಕೆಲಸಗಾರರೊಂದಿಗೆ ಮಾತುಕತೆಯನ್ನು ಮಾಡುತ್ತಿರುವಾಗ, ಸ್ವಂತದ್ದೇ ಆದ ‘ಸ್ಟಾರ್ಟ್ ಅಪ್’ ಪ್ರಾರಂಭಿಸುವಲ್ಲಿ ಎಲ್ಲರೂ ಸಿದ್ಧರಾಗಿರುವುದು ಕಂಡುಬಂತು. ಯುವಕರು ಸ್ಟಾರ್ಟ್ ಅಪ್ ಕುರಿತು ವಿಚಾರ ಮಾಡುತ್ತಿರುವುದರಿಂದ ಲಘು ಮಧ್ಯಮ ವಲಯವು ಇನ್ನಷ್ಟು ಮುನ್ನುಗ್ಗುವ ಸಾಧ್ಯತೆಯು ಹೆಚ್ಚು ಮಹತ್ವದ್ದಾಗಿದೆ ಎಂಬ ಅನಿಸಿಕೆ. ಈ ಯುವಕರ ಅಭಿಪ್ರಾಯದ ಪ್ರಕಾರ ಆರ್ಟಿಫಿಶಿಯಲ್ ಇಂಟೆಲಿಜನ್ಸ್, ಇಂಡಸ್ಟ್ರಿ 4.0, ಮಶಿನ್ ಲರ್ನಿಂಗ್ ಇಂತಹ ಪ್ರಗತಿಪರ ತಂತ್ರವನ್ನು ಪ್ರಭಾವಶಾಲಿಯಾಗಿ ದೈನಂದಿನ ಕೆಲಸಹಕಾರ್ಯಗಳಲ್ಲಿ ಸುಲಭವಾಗಿ ಮತ್ತು ಸಹಜವಾಗಿ ಬಳಸುವುದು ಸಾಧ್ಯವಾಗಬಲ್ಲದು. ಈ ಪ್ರಗತಿಪರ ತಂತ್ರವನ್ನು ಕಾರಖಾನೆಗಳಲ್ಲಿ ಅಳವಡಿಸಿದಲ್ಲಿ ಕಡಿಮೆ ಸಮಯದಲ್ಲಿ ಉಚ್ಚ ಗುಣಮಟ್ಟದ ಕೆಲಸಗಳನ್ನು ನಿರ್ವಹಿಸುವುದು ಸಾಧ್ಯ. ಆದರೆ ಅದಕ್ಕೋಸ್ಕರ ನುರಿತ ಮಾನವ ಸಂಪನ್ಮೂಲಗಳ ಆವಶ್ಯಕತೆ ಕಂಡು ಬರಲಿದೆ. 
 
ಸ್ಪರ್ಧೆಯೊಂದಿಗೆ ಮುನ್ನುಗ್ಗುತ್ತಿರುವ ವಿಶ್ವದಲ್ಲಿ ಹೊಸ ಉದ್ಯಮಿಗಳು ಜಾಗತಿಕ ಮಾರುಕಟ್ಟೆಯೊಂದಿಗೆ ಹೆಣೆಯಲ್ಪಟ್ಟು ತಮ್ಮ ಉದ್ಯಮಗಳಲ್ಲಿ ಅಗಾಧವಾದ ಪ್ರಗತಿಯನ್ನು ಮಾಡುವಲ್ಲಿ ಆವಶ್ಯಕವಿರುವ ಜ್ಞಾನ ಮತ್ತು ಮಾಹಿತಿಯನ್ನು ನೀಡುವ ಕೆಲಸವನ್ನು ‘ಲೋಹಕಾರ್ಯ’ ಮಾಸ ಪತ್ರಿಕೆಯ ಕಳೆದ ಮೂರು ವರ್ಷಗಳಿಂದ ಮಾಡುತ್ತಿದ್ದೇವೆ. ಇದೇ ರೀತಿಯ ಜ್ಞಾನ ಪ್ರಸಾರದ ಅಂಗವಾಗಿಯೇ ಸಿ.ಎನ್.ಸಿ. ಎಂಬ ಅಂಕಣದಲ್ಲಿ ಟೂಲ್ ಪ್ರೀಸೆಟರ್, ಟ್ಯೂಬ್ ಪಾರ್ಟಿಂಗ್ ಎಸ್.ಪಿ.ಎಮ್., ಸ್ಮಾರ್ಟ್ ಸರ್ವೋ ಕಂಟ್ರೋಲ್ ಮತ್ತು ಮಶಿನಿಂಗ್ ಸೆಂಟರ್ ನಲ್ಲಿ ಪವರ್ ಮತ್ತು ಟಾರ್ಕ್ ನ ಆಪ್ಟಿಮೈಜೆಶನ್ ಇವೆಲ್ಲದರ ಕುರಿತಾದ ನಾಲ್ಕು ಲೇಖನಗಳನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಟೂಲಿಂಗ್ ಈ ವಿಭಾಗದಲ್ಲಿ ಕ್ರ್ಯಾಂಕ್ ಶಾಫ್ಟ್ ನಂತರ ಯಂತ್ರಭಾಗಗಳ ಆಯಿಲ್ ಹೋಲ್ ಡ್ರಿಲ್ಲಿಂಗ್ ಪ್ರಕ್ರಿಯೆಯ ಕುರಿತು ವಿಸ್ತಾರವಾದ ಮಾಹಿತಿಯನ್ನು ನೀಡುವ ಲೇಖನದೊಂದಿಗೆ ಬರ್ ತೆಗೆದು ಹಾಕಲು ಟೂಲಿಂಗ್ ಪದ್ಧತಿಯಲ್ಲಿ ಮಾಡಿರುವ ಬದಲಾವಣೆಗಳ ವಿವರಣೆಯನ್ನು ನೀಡಲಾಗಿದೆ. ಇಲೆಕ್ಟ್ರೋ ಕೆಮಿಕಲ್ ಮಶಿನಿಂಗ್ ಸಂದರ್ಭದಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಲಾಗುವ ಯಂತ್ರಣೆಯ ಪ್ರಕ್ರಿಯೆಯ ಮಾಹಿತಿಯನ್ನು ನೀಡುವ ಲೇಖನವನ್ನು ಈ ಸಂಚಿಕೆಯನ್ನು ನೀಡಲಾಗಿದೆ. ಈ ರೀತಿಯಲ್ಲಿ ವಿವಿಧ ಮಾಹಿತಿಯನ್ನೊಳಗೊಂಡಿರುವ ಲೇಖನಗಳೊಂದಿಗೆ ಆರ್ಥಿಕ ಯೋಜನೆ, ಪ್ರೊಗ್ರಾಮಿಂಗ್ ಮತ್ತು ಇಂಜಿನಿಯರಿಂಗ್ ಡ್ರಾಯಿಂಗ್ ಈ ಕುರಿತಾದ ಲೇಖನಗಳು ಓದುಗರಿಗೆ ಉಪಯುಕ್ತವಾಗಬಲ್ಲವು. 
 
ಲಘು ಮಧ್ಯಮ ಉದ್ಯಮಿಗಳಿಗೆ ಮತ್ತು ಕೆಲಸಗಾರರಿಗೆ ಹೊಸ ಹೊಸ ತಂತ್ರಜ್ಞಾನ ಮತ್ತು ಉತ್ಪಾದಿಸಲ್ಪಡುವ ವಸ್ತುಗಳ ಮಾಹಿತಿಯ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಮಾತೃಭಾಷೆಯಲ್ಲಿ ನೀಡುವ ವಿಚಾರವನ್ನು ಮಾಡಿ ಈ ಮಾಸ ಪತ್ರಿಕೆಯನ್ನು ಪ್ರಾರಂಭದಲ್ಲಿ ಮರಾಠಿ ಭಾಷೆಯಲ್ಲಿ, ಕಾಲ ಕ್ರಮೇಣ ಕನ್ನಡ, ಹಿಂದಿ ಮತ್ತು ಗುಜರಾತಿ ಭಾಷೆಗಳಲ್ಲಿಯೂ ಪ್ರಕಟಿಸಲಾಯಿತು. ‘ಲೋಹಕಾರ್ಯ’ ಈ ಮಾಸ ಪತ್ರಿಕೆಯು ನಾಲ್ಕನೇ ವರ್ಷದಲ್ಲಿ ಕಾಲೂರುತ್ತಿದೆ. ಈ ಯಶಸ್ಸಿನ ಪ್ರವಾಸದಲ್ಲಿ ಸಹಕರಿಸಿರುವ ಓದುಗರು, ಜಾಹಿರಾತುದಾರರು, ಚಂದಾದಾರರು ಮತ್ತು ಲೇಖಕರಿಗೆ ತುಂಬು ಹೃದಯದ ಕೃತಜ್ಞತೆಗಳು. ತಾವೆಲ್ಲರೂ ನೀಡಿರುವ ಸಹಕಾರವು ಅತ್ಯಮೂಲ್ಯವಾಗಿದೆ. ಲೋಹಕಾರ್ಯದಲ್ಲಿ ಪ್ರಕಟಿಸಲಾಗುತ್ತಿರುವ ಲೇಖನಗಳು ಇನ್ನಷ್ಟು ಉಚ್ಚಗುಣಮಟ್ಟದ್ದಾಗಲು ತಮ್ಮೆಲ್ಲರ ಸಹಕಾರ ಬೇಕು ಮತ್ತು ಅದನ್ನು ತಾವೆಲ್ಲರೂ ನೀಡಬಲ್ಲರಿ, ಎಂಬ ಆತ್ಮವಿಶ್ವಾಸವು ನಮಗಿದೆ. 
 
ಸಯಿ ವಾಬಳೆ
 
@@AUTHORINFO_V1@@