ವುಡ್ ರಫ್ ಕಿ-ವೇ ಯಂತ್ರಣೆ

@@NEWS_SUBHEADLINE_BLOCK@@

Lohkarya - Udyam Prakashan    08-Oct-2021   
Total Views |
ವಿವಿಧ ಆಕಾರದ ಕಾರ್ಯವಸ್ತುಗಳಿಗೆ ವುಡ್ ರಫ್ ಕಿ-ವೆ ಯಂತ್ರಣೆಯನ್ನು ಮಾಡಲು ವಿವಿಧ ಎಸ್.ಪಿ.ಎಮ್. ಗಳನ್ನು ಬಳಸಲಾಗುತ್ತದೆ. ಆದರೆ ಅದಕ್ಕೋಸ್ಕರ ಖರ್ಚಾಗುವ ಸಮಯ, ಶ್ರಮ ಮತ್ತು ಖರ್ಚನ್ನು ಗಮನಿಸಿದಲ್ಲಿ ಈ ಕೆಲಸಗಳನ್ನು ಒಂದೇ ಎಸ್.ಪಿ.ಎಮ್.ನಲ್ಲಿ ಮಾಡುವ ವ್ಯವಸ್ಥೆ ಇರುವ ಎಸ್.ಪಿ.ಎಮ್. ಕುರಿತು ವಿಸ್ತಾರವಾದ ಮಾಹಿತಿಯನ್ನು ಈ ಲೇಖನದಲ್ಲಿ ಓದಬಹುದು.
 
Wood rough key way machin 
 
 
 ಈ ಹಿಂದಿನ ಕೆಲವು ಸಂಚಿಕೆಗಳಲ್ಲಿ ನಾವು ಎಸ್.ಪಿ.ಎಮ್. ಅಂಶಗಳ ಸಂದರ್ಭದಲ್ಲಿ ಮಾಡಲಾಗುವ ಯಂತ್ರಣೆಯ ಕುರಿತು ಮಾಹಿತಿಯನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ವುಡ್ ರಫ್ ಆಕಾರದ ಸ್ಲಾಟ್ ಗಳ (ಕೀ-ವೆ) ಯಂತ್ರಣೆಗೆ ಡಿಸೈನ್ ಮಾಡಿ ತಯಾರಿಸಲಾಗಿರುವ ಎಸ್.ಪಿ.ಎಮ್. ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
 
 
machine parts_1 &nbs
 
ಚಿತ್ರ ಕ್ರ. 1 : ಪ್ರಾತಿನಿಧಿಕ ಯಂತ್ರಭಾಗಗಳು
 
ವುಡ್ ರಫ್ ಆಕಾರದ ಕೀ-ವೆಯ ಯಂತ್ರಣೆಯನ್ನು ಮಾಡುವುದು ತುಂಬಾ ಸುಲಭ ಮತ್ತು ಸಾಮಾನ್ಯ ಎಂದೆನಿಸುತ್ತದೆ. ಸಾಮಾನ್ಯವಾಗಿ ಸಿಲಿಂಡ್ರಿಕಲ್ ಆಕಾರದಲ್ಲಿರುವ ಯಂತ್ರಭಾಗಗಳ ಉರುಟು ವ್ಯಾಸದಲ್ಲಿ ಈ ಯಂತ್ರಣೆಯನ್ನು ಮಾಡಲಾಗುತ್ತದೆ. ಯಂತ್ರಭಾಗದಲ್ಲಿರುವ ಈ ಕೀ-ವೆಯನ್ನು ಸಾಮಾನ್ಯವಾಗಿ ಒಂದು ಭಾಗದಿಂದ ಇನ್ನೊಂದು ಭಾಗದೆಡೆಗೆ ಟ್ರಾನ್ಸ್ ಫರ್ ಮಾಡಲು ಬಳಸಲಾಗುತ್ತದೆ. ಆದರೆ ಇಂಜಿನ್ ನಲ್ಲಿರುವ ಕ್ರೇಂಕ್ ಶಾಫ್ಟ್ ಮತ್ತು ಕ್ಯಾಮ್ ಶಾಫ್ಟ್ ನಂತಹ ಯಂತ್ರಭಾಗಗಳಲ್ಲಿ ಈ ರೀತಿಯ ಕೀ-ವೆಗಳಿಗೆ ಈ ಕೆಲಸದ ಹೊರತಾಗಿ ಇನ್ನೂ ಅನೇಕ ರೀತಿಯ ಕೆಲಸಗಳನ್ನು ಮಾಡಬೇಕಾಗುತ್ತದೆ. ಉದಾಹರಣೆ, ಅದರಲ್ಲಿರುವ ರಿಲೆಟಿವ್ ಪೊಸಿಶನ್ ನ ಹೊಂದಾಣಿಕೆಯನ್ನು ಮಾಡಿ ಇನ್ ಲೆಟ್ ಮತ್ತು ಎಕ್ಸಾಸ್ಟ್ ವಾಲ್ವ್ ತೆರೆಯುವ ಮತ್ತು ಮುಚ್ಚುವ ಕೆಲಸವನ್ನು ನಿರ್ದೋಷವಾಗಿ ಮಾಡುವುದು. ಇದಕ್ಕೋಸ್ಕರ ಹಲವಾರು ಮಾನದಂಡಗಳಿಗೆ ಬೇಕಾಗುವ ನಿಖರತೆಯೂ ಅದೇ ಗುಣಮಟ್ಟದಲ್ಲಿ ಇರಬೇಕಾಗುತ್ತದೆ. ಉದಾಹರಣೆ, ಸ್ಲಾಟ್ ನ ಅಳತೆ, ಸ್ಲಾಟ್ ನ ಅಕ್ಷ ಮತ್ತು ಯಂತ್ರಭಾಗಗಳ ಅಕ್ಷದೊಂದಿಗೆ ಇರುವ ಕಾಂನ್ಸೆಟ್ರಿಸಿಟಿ ಮುಂತಾದವುಗಳು. ಚಿತ್ರ ಕ್ರ. 1 ರಲ್ಲಿ ಒಂದು ಪ್ರಾತಿನಿಧಿಕ ಸಿಲಿಂಡ್ರಿಕಲ್ ಯಂತ್ರಭಾಗದ ಮೂಲಕ ಈ ಮಾನದಂಡಗಳನ್ನು ತಿಳಿಸಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ.
 
 
Drive shaft_1  
 
ಚಿತ್ರ ಕ್ರ. 2 : ಡ್ರೈವ್ ಶಾಫ್ಟ್
 
ಯಂತ್ರಭಾಗಗಳ ಜೋಡಣೆ (ಅಸೆಂಬ್ಲಿ) ಮಾಡುವಾಗ ಅನೇಕ ಅಡೆತಡೆಗಳು ಉದ್ಭವಿಸುತ್ತದೆ. ಅನೇಕ ಬಾರಿ ಯೋಗ್ಯ ರೀತಿಯಲ್ಲಿ ಜೋಡಿಸದೇ ಇದ್ದಲ್ಲಿ ಮಶಿನ್ ಪರ್ಫಾರ್ಮನ್ಸ್ ನಲ್ಲಿ ಕೊರತೆಗಳು ಉಂಟಾಗಬಲ್ಲವು. ನಮ್ಮಿಂದ ಅನೇಕ ಎಸ್.ಪಿ.ಎಮ್. ತಯಾರಿಸಿ ಖರೀದಿಸಿರುವ ಒಬ್ಬ ಗ್ರಾಹಕರು ವುಡ್ ರಫ್ ಕೀ-ವೆಗೋಸ್ಕರ ಎಸ್.ಪಿ.ಎಮ್. ತಯಾರಿಸಿ ಕೊಡಿ, ಎಂಬ ಬೇಡಿಕೆಯನ್ನು ತಿಳಿಸಿದರು. ಸಾಮಾನ್ಯವಾಗಿ ಯಾವುದೇ ಎಸ್.ಪಿ.ಎಮ್. ಬಳಸುವುದಾದಲ್ಲಿ ಅದು ಒಂದೇ ರೀತಿಯದ್ದಾಗಿರಬೇಕು. ಅಲ್ಲದೇ ಬೃಹತ್ ಸಂಖ್ಯೆಯಲ್ಲಿರುವ ಯಂತ್ರಭಾಗಗಳ ನಿಗದಿತ ಯಂತ್ರಣೆಗೋಸ್ಕರ ಮಾಡುವುದು ಎಂಬುದಾಗಿ ತಿಳಿಯಲಾಗುತ್ತದೆ. ಈ ಗ್ರಾಹಕರಲ್ಲಿರುವ ಸೂಕ್ಷ್ಮವಾದ ಬೇಡಿಕೆಗಳನ್ನು ನಾವು ಅರಿತುಕೊಂಡೆವು. ಈ ಗ್ರಾಹಕರಿಗೆ ವಿವಿಧ ಆಕಾರದ ಮತ್ತು ಬೇರೆಬೇರೆ ಅಳತೆಯ ಸಿಲಿಂಡ್ರಿಕಲ್ ಆಕಾರದಲ್ಲಿರುವ ಯಂತ್ರಭಾಗಗಳ ಯಂತ್ರಣೆಯನ್ನು ಈ ಎಸ್.ಪಿ.ಎಮ್.ನಲ್ಲಿಯೇ ಮಾಡುದಾಗಿದೆ, ಎಂಬ ಅಂಶವು ನಮ್ಮ ಗಮನಕ್ಕೆ ಬಂತು. ಅವರಲ್ಲಿರುವ ಯಂತ್ರಭಾಗಗಳು (ಚಿತ್ರ ಕ್ರ. 2 ಮತ್ತು 3 ) 150 ಮಿ.ಮೀ.ನಿಂದ 1500 ಮಿ.ಮೀ.ನಷ್ಟು ಉದ್ದದಲ್ಲಿ ಇದ್ದವು. ಯಂತ್ರಭಾಗಗಳ ಬ್ಯಾಚ್ ಸೈಜ್ ಕೂಡಾ ಎಸ್.ಪಿ.ಎಮ್.ನ ಹೋಲಿಕೆಯಲ್ಲಿ ತುಂಬಾ ಕಡಿಮೆ ಇತ್ತು. ಇದರಿಂದಾಗಿ ವಿವಿಧ ಯಂತ್ರಭಾಗಗಳ ಯಂತ್ರಣೆಯನ್ನು ಮಾಡಲು ಬೇರೆಬೇರೆ ಎಸ್.ಪಿ.ಎಮ್. ನ ಬದಲಾಗಿ ಒಂದೇ ಎಸ್.ಪಿ.ಎಮ್.ನಲ್ಲಿ ಎಲ್ಲ ರೀತಿಯ ಯಂತ್ರಣೆಯನ್ನು ಮಾಡುವುದು ಸಾಧ್ಯವಾಗಬೇಕು, ಎಂಬ ಬೇಡಿಕೆಯು ಗ್ರಾಹಕರದ್ದಾಗಿತ್ತು. ವುಡ್ ರಫ್ ಕೀ-ವೆ ಯಂತ್ರಣೆಯು ಎಲ್ಲಕ್ಕಿಂತಲೂ ಸಮಾನವಾದ ಯಂತ್ರಣೆಯ ವಿಧವಾಗಿತ್ತು. ನಮ್ಮ ವಿಚಾರದ ಪ್ರಕಾರ ಎಸ್.ಪಿ.ಎಮ್.ನ ಕಲ್ಪನೆಯನ್ನು ತಯಾರಿಸಿ ಗ್ರಾಹಕರಿಂದ ವಿವಿಧ ಮಾನದಂಡಗಳಿಗೋಸ್ಕರ ಒಪ್ಪಿಗೆಯನ್ನು ಪಡೆಯುವುದು ಮಾತ್ರ ಒಂದು ದೊಡ್ಡ ಸಮಸ್ಯೆಯಾಗಿತ್ತು.
 
 
Cam shaft_1  H
 
ಚಿತ್ರ ಕ್ರ. 3 : ಕ್ಯಾಮ್ ಶಾಫ್ಟ್
 
ಈ ಎಸ್.ಪಿ.ಎಮ್. ನ ಕಲ್ಪನೆಯನ್ನು ನಿರ್ಧರಿಸುವಾಗ ಪ್ರತ್ಯಕ್ಷ ಯಂತ್ರಣೆಯ ದೃಢೀಕರಣವನ್ನು ಮಾಡುವುದರೊಂದಿಗೆ ಇನ್ನಿತರ ಹಲವಾರು ಅಂಶಗಳಿಗೆ ಒತ್ತು ನೀಡಬೇಕು, ಎಂಬ ಅಂಶವೂ ಗಮನಕ್ಕೆ ಬಂತು. ಕಾರಣ ಯಂತ್ರಣೆಯ ನಿಟ್ಟಿನಲ್ಲಿ ಗ್ರಾಹಕರಿಗೆ ಆ ಮಶಿನ್ ತುಂಬಾ ಸುಲಭ ಮತ್ತು ಸರಳವಾದ ಮಾಡಿ ಕೊಡುವುದು ಅತ್ಯಾವಶ್ಯಕವಾಗಿತ್ತುತ. ಇದಕ್ಕೋಸ್ಕರ ನಾವು ಈ ಮುಂದಿನ ಎರಡು ಅಂಶಗಳ ಕುರಿತು ವಿಚಾರ ಮಾಡಿದೆವು.
1. ಬೇರೆ ಬೇರೆ ಯಂತ್ರಭಾಗಗಳ ಯಂತ್ರಣೆಗೋಸ್ಕರ ಕನಿಷ್ಠ ಸಮಯದಲ್ಲಿ ಬದಲಾವಣೆಯನ್ನು ಮಾಡುವುದು. (ಎಸ್.ಎಮ್.ಇ.ಡಿ.- ಸಿಂಗಲ್ ಮಿನಿಟ್ ಎಕ್ಸ್ ಚೆಂಜ್ ಆಫ್ ಡೈ).
2. ಪ್ರತಿಯೊಂದು ಸೆಟಿಂಗ್ ನ ನಂತರ ಮೊದಲನೆಯ ಯಂತ್ರಭಾಗದಲ್ಲಿಯೇ ಅಪೇಕ್ಷಿತ ಗುಣಮಟ್ಟದ ಹಂತವನ್ನು ಪಡೆಯುವುದು. (ರೈಟ್ ಫರ್ಸ್ಟ್ ಟೈಮ್)
ಎಸ್.ಎಮ್.ಇ.ಡಿ.ಯ ಕಲ್ಪನೆಯನ್ನು ನಿರ್ದೋಷವಾಗಿ ಕಾರ್ಯಗತಗೊಳಿಸುವುದಾದಲ್ಲಿ ಎರಡು ಹಂತಗಳಲ್ಲಿ ಕೆಲಸ ಮಾಡುವುದು ಅಗತ್ಯದ್ದಾಗಿತ್ತು. ಮೊದಲನೆಯದಾಗಿ ಸೆಟಿಂಗ್ ಬದಲಾಯಿಸಿದ ನಂತರ ಫಿಕ್ಸ್ಚರ್ ನಲ್ಲಿ ಅಳವಡಿಸಲ್ಪಡುವ ಯಂತ್ರಭಾಗವನ್ನು ಅಪೇಕ್ಷಿತ ಜಾಗದಲ್ಲಿ ಜಾಣತನದಿಂದ ಅಳವಡಿಸುವುದು. ಇನ್ನೊಂದು, ಆ ಯಂತ್ರಭಾಗಕ್ಕೆ ಸರಿಹೊಂದಾಣಿಕೆಯಾಗಬಲ್ಲ ವುಡ್ ರಫ್ ಕಟರ್ ಯಂತ್ರಭಾಗಗಳ ರೆಫರನ್ಸ್ ಯೋಗ್ಯ ಜಾಗದಲ್ಲಿ ಅಳವಡಿಸಲ್ಪಡುವುದು.
ಯಂತ್ರಭಾಗಕ್ಕೆ ಅಪೇಕ್ಷಿಸಲಾಗಿರುವ ಜಾಗದಲ್ಲಿ ಜಾಣತನದಿಂದ ಅಳವಡಿಸುವ ನಿಟ್ಟಿನಲ್ಲಿ ಎಸ್.ಪಿ.ಎಮ್. ಡಿಸೈನ್ ಮಾಡುವಾಗ ಮಶಿನ್ ನ ಬೆಡ್ ನಲ್ಲಿ ಒಂದು ಸಾಮಾನ್ಯವಾದ ಫಿಕ್ಸ್ಟರ್ ಪ್ಲೇಟ್ ಅಳವಡಿಸುವುದನ್ನು ನಿರ್ಧರಿಸಲಾಯಿತು. (ಚಿತ್ರ ಕ್ರ. 4)
 
 
S.P.M_1  H x W:
 
ಚಿತ್ರ ಕ್ರ. 4 : ಎಸ್.ಪಿ.ಎಮ್.ನ ಕಾಲ್ಪನಿಕ ಚಿತ್ರ
 
ಫಿಕ್ಸ್ಚರ್ ಪ್ಲೇಟ್ ನಲ್ಲಿ ಒಂದು ‘T’ ಸ್ಲಾಟ್ ನ ರೆಫರನ್ಸ್ ಪಡೆಯುವುದನ್ನು ನಿರ್ಧರಿಸಲಾಯಿತು. ಅದು ರೆಫರನ್ಸ್ ಆಗಿರುವುದರಿಂದ ಅದರ ಆಕಾರ ಮತ್ತು ಸರ್ಫೇಸ್ ಫಿನಿಶ್ ನ ಅಳತೆಯು ತುಂಬಾ ನಿಖರವಾಗಿ ಮತ್ತು ಕ್ಲೋಜ್ ಟಾಲರನ್ಸ್ ನಿಂದ ನಿಯಂತ್ರಿಸಲಾಯಿತು. ಹೆಚ್ಚಾಗಿ ಯಂತ್ರಭಾಗಗಳ ಸಿಲಿಂಡ್ರಿಕಲ್ ಆಕಾರದಲ್ಲಿ ಇರುವುದರಿಂದ ಅವುಗಳು ‘ವಿ’ ಬ್ಲಾಕ್ ನಲ್ಲಿರುವ ಜೋಡಿಯಲ್ಲಿ ಅಳವಡಿಸುವುದು ತುಂಬಾ ಸುಲಭ ಮತ್ತು ಅನುಕೂಲಕರವಾಯಿತು. ಸ್ಪಿಂಡಲ್ ನ ಸಮೀಪದಲ್ಲಿರುವ ‘ವಿ’ ಬ್ಲಾಕ್ (ಪ್ರೈಮರಿ ‘ವಿ’ ಬ್ಲಾಕ್) ಸಾಧ್ಯವಾದಷ್ಟು ಮಟ್ಟಿಗೆ ಒಂದೇ ಜಾಗದಲ್ಲಿ ಸ್ಥಿರವಾಗಿರಿಸಿ ಯಂತ್ರಭಾಗಗಳ ಉದ್ದಕ್ಕೆ ಅನುಸಾರವಾಗಿ ಜೋಡಿಯಲ್ಲಿರುವ ಇನ್ನೊಂದು ‘ವಿ’ ಬ್ಲಾಕ್ (ಸೆಕಂಡರಿ ‘ವಿ’ ಬ್ಲಾಕ್) ‘T’ ಸ್ಲಾಟ್ ನಲ್ಲಿ ಹಿಂದೆ-ಮುಂದೆ ಸರಿಸಿ ಸ್ಥಿರಪಡಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಇದರಿಂದಾಗಿ ಸೆಟಪ್ ಬದಲಾಯಿಸುವಾಗ ಯಂತ್ರಭಾಗಗಳ ಉದ್ದದಿಂದಾಗಿ ಮಾಡಬೇಕಾಗಿರುವ ಬದಲಾವಣೆಯು ಅಚ್ಚುಕಟ್ಟಾಗಿ ಮತ್ತು ಕಡಿಮೆ ಸಮಯದಲ್ಲಾಯಿತು.
 
 
Time block_1  H
 
ಚಿತ್ರ ಕ್ರ. 5 : ‘ವಿ’ ಬ್ಲಾಕ್
 
‘ವಿ’ ಬ್ಲಾಕ್ ನ ಕೋನವು ವರ್ಟಿಕಲ್ ಅಕ್ಷದೊಂದಿಗೆ ಸಿಮೆಟ್ರಿಕಲ್ ಆಗಿ ಅಳವಡಿಸಿದ್ದರಿಂದ ಯಂತ್ರಭಾಗಗಳ ವ್ಯಾಸದ ಅಳತೆಯು ಹೆಚ್ಚಿತು ಅಥವಾ ಕಡಿಮೆಯಾದರೂ ಕೂಡಾ ಸ್ಪಿಂಡಲ್ ಫೇಸ್ ನ ರೆಫರನ್ಸ್ ನಿಂದ ಯಂತ್ರಭಾಗಗಳ ಅಕ್ಷದ ಸ್ಥಿತಿಯನ್ನು ಬದಲಾಯಿಸದೇ ಅದೇ ಅಳತೆಯಲ್ಲಿ ಇರುತ್ತಿತ್ತು. (ಚಿತ್ರ ಕ್ರ. 5) ಇದರಿಂದಾಗಿ ವ್ಯಾಸದ ನಿರ್ಧಾರಿತ ರೇಂಜ್ ನಲ್ಲಿರುವ ಯಂತ್ರಭಾಗಗಳಿಗೋಸ್ಕರ ಅದೇ ‘ವಿ’ ಬ್ಲಾಕ್ ನಲ್ಲಿ ವುಡ್ ರಫ್ ಕಟರ್ ನ ಸ್ಥಿತಿ ಬದಲಾಯಿಸದೇ ಅಥವಾ ಅಗತ್ಯವಿದ್ದಲ್ಲಿ ಮಾತ್ರ ಇನ್ನೊಂದು ಯೋಗ್ಯ ಕಟರ್ ಅದೇ ಸ್ಥಿತಿಯಲ್ಲಿ ಸೆಟ್ ಮಾಡಿ ಯಂತ್ರಣೆಯನ್ನು ತಕ್ಷಣ ಪ್ರಾರಂಭಿಸುವುದು ಸಾಧ್ಯವಾಯಿತು.
 
 
End Stopper_1  
 
ಚಿತ್ರ ಕ್ರ. 6 : ಎಂಡ್ ಸ್ಟಾಪರ್
 
ಯಂತ್ರಭಾಗಗಳನ್ನು ಫಿಕ್ಸ್ಚರ್ ನಲ್ಲಿ ಅಳವಡಿಸಿದ ನಂತರ ಅದರ ಅಕ್ಷದ ದಿಕ್ಕಿನ ಸ್ಥಿತಿ (ಲಿನಿಯರ್ ಪೊಸಿಶನ್) ದೃಢೀಕರಿಸುವ ನಿಟ್ಟಿನಲ್ಲಿ ಒಂದು ಬ್ರೇಕೆಟ್ ಅಳವಡಿಸಿ ಅದರಲ್ಲಿ ಒಂದು ಥ್ರೆಡಿಂಗ್ ನ ಸ್ಕ್ರೂ ಮತ್ತು ಲಾಕ್ ನಟ್ ನ ರಚನೆಯನ್ನು ಮಾಡಿ ಯಂತ್ರಭಾಗಗಳನ್ನು ಅದರಲ್ಲಿ ಒರಗಿಸಿ ಅಳವಡಿಸಬಲ್ಲ (ಎಂಡ್ ಸ್ಟಾಪರ್) ವ್ಯವಸ್ಥೆಯನ್ನು ಮಾಡಲಾಯಿತು. (ಚಿತ್ರ ಕ್ರ. 6 ನೋಡಿರಿ). ಮೇಲಿನ ಎಲ್ಲ ರಚನೆಗಳ ಸಹಾಯದಿಂದ ಸೆಟಪ್ ಬದಲಾಯಿಸುವಾಗ ಕನಿಷ್ಠ ಸಮಯದಲ್ಲಿ ಪ್ರತಿ ಬಾರಿ ಯಂತ್ರಭಾಗಗಳ ಸ್ಥಿತಿಯನ್ನು ‘T’ ಸ್ಲಾಟ್ ನ ರೆಫರನ್ಸ್ ನಿಂದ ನಿರ್ಧಾರಿತವಾಗಿ ಉಂಟಾಗುವ ಖಾತರಿಯನ್ನು ನೀಡುವುದು ಸಾಧ್ಯವಾಯಿತು..
 

Wood rough cutter_1  
 
ಚಿತ್ರ ಕ್ರ. 7 : ವುಡ್ ರಫ್ ಕಟರ್
 
ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಸವಾಲುಗಳುಳ್ಳ ಇನೊಂದು ಅಂಶವೆಂದರೆ ರೈಟ್ ಫರ್ಸ್ಟ್ ಟೈಮ್. ಪ್ರತಿಯೊಂದು ಸೆಟಿಂಗ್ ನ ನಂತರ ಮೊದಲ ಯಂತ್ರಭಾಗವು ಮೊದಲ ಪ್ರಯತ್ನದಲ್ಲಿಯೇ ಅಪೇಕ್ಷಿಸಲಾಗಿರುವ ನಿಖರ ಗುಣಮಟ್ಟದ ಹಂತವನ್ನು ಉಂಟುಮಾಡುವುದು. ಯಂತ್ರಭಾಗಗಳ ರಚನೆಗೆ ಅನುಸಾರವಾಗಿ ಉರುಟು ವ್ಯಾಸ ಮತ್ತು ಉದ್ದ ಇವೆರಡರಲ್ಲಿ ಬದಲಾವಣೆ ಇರುತ್ತದೆ. ಹಾಗೆಯೇ ಸ್ಲಾಟ್ ನ ಅಪೇಕ್ಷಿತ ಅಳತೆಗೆ ಅನುಸಾರವಾಗಿ ವುಡ್ ರಫ್ ಕಟರ್ ನ ಅಗಲ ಮತ್ತು ವ್ಯಾಸದಲ್ಲಿಯೂ ಬದಲಾವಣೆಯನ್ನು ಅಪೇಕ್ಷಿಸಲಾಗಿರುತ್ತದೆ. ವುಡ್ ರಫ್ ಕಟರ್ ಇದು ಸ್ಪ್ರಿಂಗ್ ಕಾಲೇಟ್ ಇರುವ ಆಟೋಲಾಕ್ ಚಕ್ ನ ಸಹಾಯದಿಂದ ಸ್ಪಿಂಡಲ್ ನಲ್ಲಿ ಹಿಡಿಯಲಾಗುತ್ತದೆ. ಇದರಿಂದಾಗಿ ಕಟರ್ ನ ಸೆಟಿಂಗ್ ಮಾಡುವಾಗ ಅದು ಎಷ್ಟು ಒಳಗೆ ಅಥವಾ ಹೊರಗೆ ಅಳವಡಿಸುವುದು ಆವಶ್ಯಕವಾಗಿದೆ, ಇದೇ ಸೆಟಿಂಗ್ ನಲ್ಲಿರುವ ಮಹತ್ವದ ಅಂಶವಾಗಿರುತ್ತದೆ. ಯೋಗ್ಯ ಕಟರ್ ಚುನಾಯಿಸಿದ ನಂತರ ಚಕ್ ನಲ್ಲಿರುವ ಅದರ ಸ್ಥಿತಿಯನ್ನು ನಿರ್ಧರಿಸಲು ನಾವು ಒಂದು ಬ್ರೆಕೆಟ್ (ಚಿತ್ರ ಕ್ರ. 8) ಡಿಸೈನ್ ಮಾಡಿದೆವು. ಇದರಲ್ಲಿ ಸ್ಪಿಂಡಲ್ ನ ಫೇಸ್ ನ ರೆಫರನ್ಸ್ ಪಡೆದು ಬ್ರೆಕೆಟ್ ನ ಒಂದು ಫೇಸ್ ಅದರಲ್ಲಿ ಒರಗಿಸಿದೆವು. ಬ್ರೆಕೆಟ್ ನ ಇನ್ನೊಂದು ಬದಿಯಲ್ಲಿ ಒಂದು ಪ್ಲಂಜ್ ನಲ್ಲಿ ಟೈಪ್ ಡಯಲ್ ಅಳವಡಿಸುವ ವ್ಯವಸ್ಥೆಯನ್ನು ಮಾಡಿದೆವು. ಮೊದಲ ಕಟರ್ ಸ್ಪಿಂಡಲ್ ನಿಂದ ತೆಗೆಯುವ ಮುಂಚೆ ಅದರ ಫೇಸ್ ನಲ್ಲಿ ಡಯಲ್ ನ ಝೀರೋ ಸೆಟ್ ಮಾಡುವುದು. ನಂತರ ಎರಡನೇ ಕಟರ್ ಸ್ಪಿಂಡಲ್ ನಲ್ಲಿ ಅಳವಡಿಸುವಾಗ ಅದರ ಅಗಲದ ವ್ಯತ್ಯಾಸಕ್ಕೆ ಅನುಸಾರವಾಗಿ ಯೋಗ್ಯವಾದಷ್ಟೇ ರೀಡಿಂಗ್ ನೋಡಿ ಕಟರ್ ನ ಸ್ಥಿತಿಯನ್ನು ಸ್ಪಿಂಡಲ್ ನಲ್ಲಿ ದೃಢೀಕರಿಸುವುದು. ಈ ರಚನೆಯಿಂದಾಗಿ ಕೀ-ವೆಯ ಜಾಗ ನಿಖರವಾಗಿ ಲಭಿಸಿತು. ಕೀ-ವೆಯ ಆಳವನ್ನು ನಿರ್ಧರಿಸುವಾಗ ಮೊದಲ ಯಂತ್ರಭಾಗದಲ್ಲಿ ಒಮ್ಮೆಯೇ ತಿರುಗಬಲ್ಲ ಕಟರ್ ಒರಗಿಸಿ ಆಳದ ಅಳತೆಯನ್ನು ಪ್ರೊಗ್ರಾಮ್ ನಲ್ಲಿ ಫೀಡ್ ಮಾಡುವ ವ್ಯವಸ್ಥೆಯನ್ನು ಮಾಡಲಾಯಿತು. ಈ ರಚನೆಯಿಂದಾಗಿ ಕಟರ್ ನ ಸೆಟಿಂಗ್ ನಿರ್ದೋಷವಾಗಿ ಆಯಿತು.
 
 

Wood Rough Ki-Way Machine
 
ಚಿತ್ರ ಕ್ರ. 8
 
ಗ್ರಾಹಕರಲ್ಲಿರುವ ಹಲವಾರು ಯಂತ್ರಭಾಗಗಳಲ್ಲಿ ವುಡ್ ರಫ್ ಕೀ-ವೆಯ ಅಕ್ಷದ ದಿಕ್ಕಿನಲ್ಲಿ ಇರುವ ಸ್ಥಿತಿ (ಎಕ್ಸಿಯಲ್ ಪೊಸಿಶನ್) ಕೆಲವೇ ಮೈಕ್ರಾನ್ ಗಳಷ್ಟು ನಿಖರವಾಗಿರುವುದನ್ನು ಅಪೇಕ್ಷಿಸಲಾಗಿತ್ತು. ‘ವಿ’ ಬ್ಲಾಕ್ ನ ಜಾಗವನ್ನು ಕೈಯಿಂದ ಅಲುಗಾಡಿಸಿ ಸ್ಥಿರವಾಗಿ ಮಾಡುವಾಗ ಎಷ್ಟು ನಿಖರತೆಯು ಸಾಧ್ಯವಾಗಿದೆ, ಎಂಬುದರ ಖಾತರಿಯನ್ನು ನೀಡುವುದು ಸಾಧ್ಯವಿದ್ದರಿಂದ ನಾವು ಪ್ರೈಮರಿ ‘ವಿ’ ಬ್ಲಾಕ್ ಗೆ ಒಂದು ಸ್ಕ್ರೂ-ಜೇಕ್ ನ ಕಲ್ಪನೆಯ ರಚನೆಯನ್ನು ಸೂಚಿಸಿದೆವು. (ಚಿತ್ರ ಕ್ರ. 9) ಇದರಲ್ಲಿ ‘ವಿ’ ಬ್ಲಾಕ್ ಒಂದು ಭಾಗಕ್ಕೆ ಥ್ರೆಡಿಂಗ್ ಮಾಡಲಾಯಿತು ಮತ್ತು ಅದರಲ್ಲಿ ಅಳವಡಿಸಿಲ್ಪಟ್ಟ ಸ್ಕ್ರೂ ಮಶಿನ್ ನ ಬೆಡ್ ನಲ್ಲಿರುವ ಪ್ಲೇಟ್ ನಲ್ಲಿ ಸಿಲುಕಿಸಿದೆವು. ಕೀ-ವೆಯ ಅಪೇಕ್ಷಿತ ಸ್ಥಿತಿಯಲ್ಲಿರುವ ವ್ಯತ್ಯಾಸವು ಗಮನಕ್ಕೆ ಬಂದ ನಂತರ ‘T’ ನಟ್ ಸ್ವಲ್ಪ ಸಡಿಲ ಮಾಡಿ ಜೇಕ್ ನ ಸ್ಕ್ರೂ ಬಳಸಿ ಅದರ ಸ್ಥಿತಿಯನ್ನು ಯೋಗ್ಯ ಜಾಗಕ್ಕೆ ತರುವಂತಹ ವ್ಯವಸ್ಥೆಯನ್ನು ಮಾಡಲಾಯಿತು. ಈ ರಚನೆಯಿಂದಾಗಿಯೂ ಅಪೇಕ್ಷಿಸಿರುವ ಗುಣಮಟ್ಟದ ಖಾತರಿಯನ್ನು ನೀಡುವುದು ಸಾಧ್ಯವಾಯಿತು.
 

Wood Rough Ki-Way Machine
 
ಚಿತ್ರ ಕ್ರ. 9
 
 
 
 
ಈ ರೀತಿಯಲ್ಲಿ ಸೂಕ್ಷ್ಮವಾದ ಅಂಶಗಳಿಗೆ ಯೋಗ್ಯ ರೀತಿಯ ಪರ್ಯಾಯವನ್ನು ನೀಡಿ ನಾವು ನಮ್ಮ ಗ್ರಾಹಕರ ಮನಸ್ಸಿನಲ್ಲಿರುವ ಎಲ್ಲ ಅನುಮಾನಗಳಿಗೆ ಪರಿಹಾರವನ್ನು ನೀಡಿ ಹೊಸ ಡಿಸೈನ್ ಗೆ ಅವರಿಂದ ಒಪ್ಪಿಗೆಯನ್ನು ಪಡೆದೆವು. ಇದಕ್ಕೆ ಅನುಸಾರವಾಗಿ ನಮ್ಮಲ್ಲಿ ತಯಾರಿಸಿರುವ ಎಸ್.ಪಿ.ಎಮ್. (ಚಿತ್ರ ಕ್ರ. 10) ನಮ್ಮ ಕಾರ್ಖಾನೆಯ ಪರಿಸರದಲ್ಲಿ ಗ್ರಾಹಕರ ಎದುರಲ್ಲಿಯೇ ಬೇರೆಬೇರೆ ಯಂತ್ರಭಾಗಗಳ ಅವಶ್ಯಕವಿರುವ ಪರೀಕ್ಷೆಗಳನ್ನು ಮಾಡಿ ಅವರ ಮೆಚ್ಚುಗೆಯನ್ನು ಪಡೆದೆವು. ನಾವು ತಯಾರಿಸಿರುವ ಎಸ್.ಪಿ.ಎಮ್.ನ ಕೆಲಸವು ಸರಿಯಾಗಿ ತಿಳಿದು ಕೊಳ್ಳಲು ಒಂದು ಯಂತ್ರಭಾಗದಲ್ಲಿ ವುಡ್ ರಫ್ ಕೀ-ವೆಯ ಯಂತ್ರಣೆಯ ಒಂದು ಸೈಕಲ್ ನೊಂದಿಗೆ ವಿಡಿಯೋ ಕ್ಲಿಪ್ ಜೋಡಿಸಿದ್ದೇವೆ. ಅದನ್ನು ವೀಕ್ಷಿಸಲು ಪಕ್ಕದಲ್ಲಿರುವ QR ಕೋಡನ್ನು ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
 
 
Wood Rough Ki-Way Machine
 
ಚಿತ್ರ ಕ್ರ. 10
 
ಇತ್ತೀಚೆಗೆ ನಾವು ಈ ಮಶಿನ್ ಗ್ರಾಹಕರಲ್ಲಿಗೆ ತಲುಪಿಸಿದ್ದೇವೆ. ಈ ಮಶಿನ್ ಗ್ರಾಹಕರಲ್ಲಿ ಯೋಗ್ಯ ಜಾಗದಲ್ಲಿ ಅಳವಡಿಸಿದ ನಂತರವೂ ಇದೇ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಬಲ್ಲದು, ಎಂಬ ಭರವಸೆಯು ನಮಗಿದೆ.
 
9822031792
ವಿವೇಕ ಪಿಟಕೆ ಇವರು ಮೆಟಲರ್ಜಿಯಲ್ಲಿ ಡಿಪ್ಲೋಮಾ ಮತ್ತು ಪದವಿಯನ್ನು ಪಡೆದಿದ್ದಾರೆ. ಅದರ ನಂತರ 1990 ರಲ್ಲಿ ಸ್ವಂತದ್ದೇ ಆದ ‘ಸ್ಪೆಪರ್‌ಮ್ಯಾಕ್ ಇಂಜಿನಿಯರಿಂಗ್ ಸರ್ವಿಸೆಸ್’ ಎಂಬ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯಲ್ಲಿ ಕ್ಯಾಮ್ ಮಿಲಿಂಗ್, ಡೋಮ್ ಗ್ರೈಂಡಿಂಗ್‌ನಂತಹ ಅನೇಕ ಕ್ಲಿಷ್ಟವಾದ ಯಂತ್ರಣೆಯನ್ನು ಮಾಡುವಂತಹ ಎಸ್.ಪಿ.ಎಮ್.ನ ತಯಾರಿಕೆಗೆ ಆದ್ಯತೆಯನ್ನು ನೀಡಲಾಗುತ್ತಿದೆ.
@@AUTHORINFO_V1@@