ಸಂಪಾದಕೀಯ

@@NEWS_SUBHEADLINE_BLOCK@@

Lohkarya - Udyam Prakashan    08-Oct-2021   
Total Views |
‘ಫೋರ್ಡ್’ ಈ ಅಮೇರಿಕನ್ ಕಂಪನಿಯು ಚೆನ್ನೈ ಮತ್ತು ಸಾನಂದ್ (ಗುಜರಾತ್) ಎಂಬಲ್ಲಿರುವ ವಾಹನಗಳ ಉತ್ಪಾದನೆಯ ಯೋಜನೆಗಳನ್ನು ಮುಚ್ಚುವುದಾಗಿ ಸಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಘೋಷಿಸಿದೆ. ಅಮೇರಿಕನ್ ವಾಹನ ಉತ್ಪಾದಕರು ಭಾರತದಲ್ಲಿ ಅವರ ಕಾರ್ಖಾನೆಗಳನ್ನು ಮುಚ್ಚುವ ವಿಷಯವಂತೂ ಹೊಸದೇನಲ್ಲ. ಈ ಹಿಂದೆ ಮಾನ್ ಟ್ರಕ್, ಜನರಲ್ ಮೋಟರ್ಸ್, ಹಾರ್ಲೇ ಡೆವಿಡ್ ಸನ್ ಮತ್ತು UM ಮೋಟರ್ ಸೈಕಲ್ ಈ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪಾದನೆಯನ್ನು ನಿಲ್ಲಿಸಿವೆ. ಈ ಪಟ್ಟಿಯಲ್ಲಿ ಫೋರ್ಡ್ ಕಂಪನಿಯ ಹೆಸರೂ ಸೇರ್ಪಡೆಯಾಗಿದೆ. ಇದಕ್ಕೆ ಕಾರಣಗಳೇನಿರಬಹುದು? ಭಾರತದ ಮಾರುಕಟ್ಟೆಯನ್ನು ಅರಿತುಕೊಳ್ಳುವಲ್ಲಿ ಇರುವ ನೀತಿ-ಕೆಲಸದ ರೀತಿಯಲ್ಲಾದ ದೋಷಗಳು, ಮಾರಾಟದ ನಂತರದ ದುಬಾರಿ ಸೇವೆ, ಭಾರತದ ಗ್ರಾಹಕರನ್ನು ಆಕರ್ಷಿಸುವ ಹೊಸ ಹೊಸ ಮಾಡೆಲ್ ಗಳನ್ನು ಪ್ರಸ್ತುತ ಪಡಿಸುವಲ್ಲಾದ ವೈಫಲ್ಯ, ಎಲ್ಲೆಡೆಯೂ ಬಿಡಿ ಭಾಗಗಳ ಅಭಾವ, ಈ ರೀತಿಯ ಅನೇಕ ಕಾರಣಗಳನ್ನು ವಾಹನೋದ್ಯೋಗದಲ್ಲಿರುವ ತಜ್ಞರು ವ್ಯಕ್ತಪಡಿಸುತ್ತಾರೆ. ಭಾರತದಲ್ಲಿ ಕೈಗಾರಿಕೋದ್ಯಮಗಳನ್ನು ವಿಸ್ತರಿಸುವ ಕುರಿತು ವಿಚಾರ ಮಾಡಿದಲ್ಲಿ, ಚಿಕ್ಕ, ಕಡಿಮೆ ಬೆಲೆಯ ವಾಹನಗಳಿಗೆ ಹೆಚ್ಚು ಬೇಡಿಕೆ ಇದೆ. ಈ ವಿಚಾರತಾದ ವಿಚಾರದಿಂದಲೇ ಮಾರುತಿ ಸುಝುಕಿ ಮತ್ತು ಹ್ಯುಂಡಾಯಿ ಇವರು ಭಾರತದಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಭಾರತದಲ್ಲಿ ಮಾರಾಟವಾಗುವ ಮೊದಲ 10 ವಾಹನಗಳ ಪಟ್ಟಿಯಲ್ಲಿ ಕೇವಲ ಮಾರುತಿ ಮತ್ತು ಹ್ಯುಂಡಾಯಿ ಇವರ ವಾಹನಗಳಿವೆ. ಈ ರೀತಿಯಲ್ಲಿ ಪೈಪೊಟಿಯನ್ನು ಮಾಡಿ ತಳವೂರಬಲ್ಲ ಮತ್ತು ಮಾರುಕಟ್ಟೆಯನ್ನು ತನ್ನ ಸ್ವಾಧೀನ ಪಡಿಸಬಲ್ಲ ಯಾವುದೇ ವಾಹನವನ್ನು ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸುವಲ್ಲಿ ಫೋರ್ಡ್ ಅಸಮರ್ಥವಾಯಿತು. ಇದೇ ಫೋರ್ಡ್ ಮಾಡಿರುವ ಮೊದಲ ತಪ್ಪು. ‘ಕಿಯಾ’ ಮೋಟರ್ಸ್ ನಂತಹ ಕಂಪನಿಗಳು 2-3 ವರ್ಷಗಳ ಕಾಲಾವಧಿಯಲ್ಲಿಯೇ ಎಲ್ಲರಿಗೂ ಕೈಗೆಟಕುವಂತಹ ಹೊಸ ಹೊಸ ಮಾಡೆಲ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಪಡಿಸಿದರು. ಫೋರ್ಡ್ ಮಾತ್ರ 15 ವರ್ಷ ಹಳೆಯ ಮಾಡೆಲ್ ಗಳಲ್ಲಿಯೇ ಅವಲಂಬಿಸಿ ಮುನ್ನಡೆಯಿತು. ಮಾರುಕಟ್ಟೆಯ ಪ್ರವಾಹದಲ್ಲಿ ಮುನ್ನುಗ್ಗಿದವರು ಉಳಿದರು, ಇನ್ನಿತರರು ಹೊರಳಾಡುತ್ತಾ ಹಿಮ್ಮೆಟ್ಟಿದರು. ಇದೇ ಪರಿಸ್ಥಿತಿಯನ್ನು ಫೋರ್ಡ್ ಎದುರಿಸಿತು!
 
ನಿಂತು ಹೋದ ಕಂಪನಿಗಳ ಕುರಿತು ಆಳವಾಗಿ ವಿಚಾರ ಮಾಡಿದಾಗ, ಸಹಜವಾದ ಮತ್ತು ಸುಸ್ಪಷ್ಟವಾದ ಕಾರಣಗಳು ಗಮನಕ್ಕೆ ಬರುತ್ತಿವೆ. ಇದರಿಂದಾಗಿ ವಾಹನೋದ್ಯೋಗದಲ್ಲಿ ಈ ಕಂಪನಿಗಳೊಂದಿಗೆ ಅವಲಂಬಿಸಿದ್ದ ಲಘು, ಮಧ್ಯಮ ಕಾರ್ಖಾನೆಗಳ ಆರ್ಥಿಕ ಸ್ಥಿತಿಯಲ್ಲಿ ದೀರ್ಘಕಾಲಾವಧಿಯ ಗಂಭೀರ ಪರಿಣಾಮವು ಉಂಟಾಯಿತು. ಉದ್ಯಮವು ಚಿಕ್ಕ ಮಟ್ಟದ್ದಾಗಿರಲಿ ಅಥವಾ ಬೃಹತ್ ಪ್ರಮಾಣದಲ್ಲಿರಲಿ, ಮಾರುಕಟ್ಟೆಯ ಆವಶ್ಯಕತೆಗಳು, ಗ್ರಾಹಕರ ಮೆಚ್ಚುಗೆ, ಮಾರಾಟದ ನಂತರದ ಸೇವೆ, ಉತ್ಪಾದನೆಗಳಲ್ಲಿ ನಿರಂತರವಾಗಿ ಮಾಡಲಾಗುವ ಸುಧಾರಣೆ ಮುಂತಾದ ವಿಚಾರಗಳೇ ಮೂಲಭೂತವಾದ ಅಂಶಗಳಾಗಿವೆ. ಅದ್ದರಿಂದಅತ್ಯಾವಶ್ಯಕವಾದ ಅಂಶಗಳ ಕುರಿತು ಕೈಗಾರಿಕೋದ್ಯಮಿಗಳು ಗಂಭೀರವಾಗಿ ವಿಚಾರ ಮಾಡುವುದು ಅತ್ಯಗತ್ಯದ ವಿಷಯವಾಗಿದೆ. ಕೊರೋನಾದಂತಹ ಗಂಭೀರ ಪರಿಸ್ಥಿತಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ಎದುರಿಸಲು ಉದ್ಯಮಿಗಳು ಅವರ ಪ್ರಚಲಿತ ಕೆಲಸದ ರೀತಿಯಲ್ಲಿ ಕಾರ್ಯಕ್ಷಮತೆಯ ಕೊರತೆಯೇ ಕಾರಣವಾಗಿರುವ ಘಟಕಗಳನ್ನು ಬದಿಗಿಟ್ಟು ಉತ್ಪಾದನೆಯನ್ನು ಮುನ್ನಡೆಸಲು ಇಂಡಸ್ಟ್ರಿ 4.0 ನಂತಹ ತಂತ್ರಜ್ಞಾನವನ್ನು ಪ್ರಭಾವಶಾಲಿಯಾಗಿ ಬಳಸುವುದು ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ಉತ್ಪಾದಕರು, ಪೂರೈಕೆಗಾರರು ಮತ್ತು ಗ್ರಾಹಕರು ಸೂಕ್ತ ರೀತಿಯ ಸಂಭಾಷಣೆಯನ್ನು ಮುಂದುವರಿಸಿದಲ್ಲಿ ಇದು ಸಾಧ್ಯ. ಇನ್ನೊಂದು ಉದಾಹರಣೆಯೆಂದರೆ, ಹೆಚ್ಚುತ್ತಿರುವ ಇಂಧನದ ಬೆಲೆಯನ್ನು ಗಮನಿಸಿ, ಕಳೆದ 5-6 ತಿಂಗಳ ಕಾಲಾವಧಿಯಲ್ಲಿ ಇಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ. ಮಾರುಕಟ್ಟೆಯ ಬೇಡಿಕೆಯ ಕುರಿತು ವಿಚಾರ ಮಾಡಿ ಅದಕ್ಕೆ ಅನುಸಾರವಾಗಿ ಕೈಗಾರಿಕೋದ್ಯಮಿಗಳು ತಮ್ಮ ಉದ್ಯಮಗಳಲ್ಲಿ ಬದಲಾವಣೆಗಳನ್ನು ಮಾಡುವುದು ಅತ್ಯಾವಶ್ಯಕವಾಗಿದೆ. ಉದ್ಯಮಗಳಲ್ಲಿ ಈ ರೀತಿಯ ಬದಲಾವಣೆಯು ಕಾಲಾಂತರವಾಗಿ ಆಗುತ್ತಿದ್ದರೂ ಕೂಡಾ ಅದರ ಕುರಿತಾದ ಯೋಜನೆಯನ್ನು ಮುಂಗಡವಾಗಿ ಮಾಡಿ, ಆ ನಿಟ್ಟಿನಲ್ಲಿ ತಮ್ಮ ಉದ್ಯಮಗಳ ರಚನೆಯನ್ನು ಮಾಡಿದಲ್ಲಿ ಮುಂದಾಗುವ ನಷ್ಟದ ಅಪಾಯವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಮಾರುಕಟ್ಟೆಯ ಬೇಡಿಕೆಯನ್ನು ಅರಿತು ತಮ್ಮಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವುದು ಹೇಗೆ ಆಗತ್ಯದ್ದಾಗಿದೆಯೋ, ಹಾಗೆಯೇ ಹೊರಗಿರುವ ಪ್ರತಿಕೂಲ ಪರಿಸ್ಥಿತಿಯ ಕುರಿತು ಅಂಜಿಕೆಯನ್ನು ಮಾಡದೇ, ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲ ಮತ್ತು ಕ್ಷಮತೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸುವುದೂ ಅಷ್ಟೇ ಮಹತ್ವದ್ದಾಗಿದೆ. ಇತ್ತೀಚೆಗೆ ಏರ್ಪಡಿಸಲಾಗಿದ್ದ ಪ್ಯಾರಾ ಓಲಿಂಪಿಕ್ ಸ್ಪರ್ಧೆಯಲ್ಲಿ ಭಾರತೀಯ ತಂಡವು ಗಳಿಸಿರುವ ಪದಕಗಳೇ ಇದಕ್ಕೆ ಸಾಕ್ಷಿಯಾಗಿದೆ. ತಮ್ಮಲ್ಲಿರುವ ಕೊರತೆಗಳನ್ನು ನೀಗಿಸಿ ಗುರಿಯನ್ನು ಸಾಧಿಸುವ ಇಚ್ಛೆ ಮತ್ತು ಸೂಕ್ತ ರೀತಿಯಲ್ಲಿ ಮಾಡಲಾಗಿರುವ ಪ್ರಯತ್ನಗಳಿಂದಾಗಿಯೇ ನಮ್ಮ ದೇಶದ ಆಟಗಾರರು ವಿಶ್ವ ದಾಖಲೆಗಳನ್ನು ಮಾಡಿರುವುದು ಗಮನಕ್ಕೆ ಬರುತ್ತಿದೆ. ಕೊರೋನಾ ಪರಿಸ್ಥಿತಿಯ ನಂತರದ ಸಮಯದಲ್ಲಿ ನಾವೂ ಅವರನ್ನು ಹಿಂಬಾಲಿಸುವ ಆವಶ್ಯಕತೆ ಇದೆ. ಇದೇ ರೀತಿಯ ಅನೇಕ ಪ್ರಯತ್ನಗಳೊಂದಿಗೆ ಟೆಕ್ನಿಕ್ ವಿಷಯದಲ್ಲಿ ಸೂಕ್ತ ಮಾಹಿತಿಯನ್ನು ನೀಡುವ ಕೆಲಸವನ್ನು ‘ಲೋಹಕಾರ್ಯ’ ಈ ಮಾಸ ಪತ್ರಿಕೆಯಿಂದ ಮಾಡಲಾಗುತ್ತಿದೆ. ಸಿ.ಎನ್.ಸಿ.ಯ ಅಂಕಣದಲ್ಲಿ ವುಡ್ ರಫ್ ಕಿ-ವೆಯ ಯಂತ್ರಣೆಗೋಸ್ಕರ ನಿರ್ಮಿಸಲಾಗುವ ಎಸ್.ಪಿ.ಎಮ್. ಕುರಿತಾದ ಮಾಹಿತಿಯನ್ನು ಈ ಸಂಚಿಕೆಯಲ್ಲಿ ಓದಬಲ್ಲಿರಿ. ಬೃಹದಾಕಾರದ ಯಂತ್ರಭಾಗಗಳ ಅಳತೆಯನ್ನು ಮಾಡುವಾಗ ಅನೇಕ ಸಮಸ್ಯೆಗಳಿರುತ್ತವೆ. ಈ ಅಳತೆಗಳ ಹಳೆಯ ಮತ್ತು ಹೊಸ ಪದ್ಧತಿಗಳನ್ನು ತಿಳಿಸುವ ಲೇಖನವನ್ನೂ ಈ ಸಂಚಿಕೆಯಲ್ಲಿ ನೀಡಲಾಗಿದೆ. ಇದರೊಂದಿಗೆ ಕಟ್ ಟ್ಯಾಪಿಂಗ್ ಮತ್ತು ಫಾರ್ಮ್ ಟ್ಯಾಪಿಂಗ್, ಮ್ಯಾಗ್ನೆಟಿಕ್
 
ವಿ-ಬ್ಲಾಕ್, ಸ್ಪಾಟ್ ಫೇಸಿಂಗ್, ಸ್ಲಾಟ್ ಯಂತ್ರಣೆ ಮುಂತಾದವುಗಳ ಕುರಿತು ವಿಸ್ತಾರವಾದ ತಾಂತ್ರಿಕ ಮಾಹಿತಿ ಮತ್ತು ಅದರಲ್ಲಿ ಅಡಗಿರುವ ಸೂಕ್ಷ ಅಂಶಗಳನ್ನು ತಿಳಿದುಕೊಳ್ಳುವಲ್ಲಿ ಈ ಸಂಚಿಕೆಯು ಒದುಗರಿಗೆ ಉಪಯುಕ್ತವಾಗಬಲ್ಲದು, ಎಂಬ ಅನಿಸಿಕೆ ನಮ್ಮದು.
 
ಸಯಿ ವಾಬಳೆ
@@AUTHORINFO_V1@@