ಈ ಹಿಂದಿನ ಲೇಖನದಲ್ಲಿ ನಾವು ಪ್ಯಾರಾಮೆಟ್ರಿಕ್ ಡ್ರಾಯಿಂಗ್ ಎಂಬ ಅತ್ಯಾಧುನಿಕ ತಂತ್ರದ ಕುರಿತು ತಿಳಿದುಕೊಂಡೆವು. ಪ್ಯಾರಾಮೆಟ್ರಿಕ್ ಡ್ರಾಯಿಂಗ್ ನಿಂದಾಗಿ ನಾವು ನಮ್ಮ ಕೆಲಸದಲ್ಲಿ ಸಮಯದ ಉಳಿತಾಯವನ್ನು ಮಾಡಬಲ್ಲೆವು. ಹಾಗೆಯೇ ದೋಷಗಳ ಸಾಧ್ಯತೆಯೂ ತುಂಬಾ ಕಡಿಮೆಯಿತ್ತು. ಇದರಲ್ಲಿರುವ ಎಲ್ಲಕ್ಕಿಂತಲೂ ಮಹತ್ವದ ಅಂಶವೆಂದರೆ ಡ್ರಾಯಿಂಗ್ ನ ದೃಢೀಕರಣವನ್ನು ಮಾಡಲು ಇದರಿಂದ ಸಹಾಯವಾಗುತ್ತದೆ. ಈ ಲೇಖನದಲ್ಲಿ ನಾವು ಡ್ರಾಯಿಂಗ್ ತಯಾರಿಸುವ ಮುಂಚಿನ ಸಿದ್ಧತೆಯ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
ಕ್ರಿಕೆಟ್ ನಲ್ಲಿ ಪಿಚ್ ತುಂಬಾ ಮಹತ್ವದ್ದಾಗಿರುತ್ತದೆ. ಹಾಗೆಯೇ ಡ್ರಾಯಿಂಗ್ ತಯಾರಿಸುವ ಮುಂಚೆ ಅದಕ್ಕೆ ನಿರ್ಧರಿಸಿರುವ ಪಿಚ್ ಅಂದರೆ ಟೆಂಪ್ಲೇಟ್ ಯೋಗ್ಯವಾಗಿರುವುದೂ ಅತ್ಯಾವಶ್ಯಕವಾಗಿದೆ. ಲಘು ಉದ್ಯಮಿಗಳಲ್ಲಿರುವ ಉತ್ಪಾದನೆಗಳಲ್ಲಿ ಶಾಫ್ಟ್ ತಯಾರಿಸುವುದು, ಪಿನ್ ತಯಾರಿಸಿವುದು, ಕೆಲವೊಮ್ಮ ಅಸೆಂಬ್ಲಿ ಇಂತಹ ವೈವಿಧ್ಯತೆಗಳಿರುತ್ತವೆ. ಗ್ರಾಹಕರಿಗೆ ಬೇಕಾದಂತೆ ಕೆಲಸದ ಪದ್ಧತಿ ಮತ್ತು ಸ್ಟ್ಯಾಂಡರ್ಡ್ ಗಳು ಬದಲಾಗುತ್ತವೆ. ಇದಕ್ಕೋಸ್ಕರ ಬೇಕಾಗುವ ಡ್ರಾಯಿಂಗ್ ನ ಸ್ಟ್ಯಾಂಡರ್ಡ್ ಗಳಲ್ಲಿಯೂ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆದ್ದರಿಂದ ಒಂದು ಶಾಶ್ವತವಾದ ಡ್ರಾಯಿಂಗ್ ಫೈಲ್ ತಯಾರಿಸಿ ಇಡುವುದು ಸೂಕ್ತವಾಗಿದೆ. ಕ್ಯಾಡ್ ನಲ್ಲಿ ಡ್ರಾಯಿಂಗ್ ನ ಫೈಲ್ ಗಳನ್ನು ಹುಡುಕಲು ವಿಶಿಷ್ಟ ರೀತಿಯ ಎಕ್ಸ್ ಟೆನ್ಶನ್ ಬಳಸಲಾಗುತ್ತದೆ. ಇದರಿಂದ ನಾವು ಈ ಫೈಲ್ ಯಾವುದೇ ರೀತಿಯಲ್ಲಿ ಮತ್ತು ಯಾಕೋಸ್ಕರ ಇದೆ ಎಂಬುದನ್ನು ತಕ್ಷಣ ಗುರುತಿಸಬಲ್ಲೆವು. ಕ್ಯಾಡ್ ಡ್ರಾಯಿಂಗ್ ಫೈಲ್ ಗೆ ‘dwg’ ಎಂದು ಹೇಳಲಾಗುತ್ತದೆ. ಹಾಗೆಯೇ ಟೆಂಪ್ಲೇಟ್ ಗೆ ‘dwt’ ಎಂಬ ಎಕ್ಸ್ ಟೆನ್ಶನ್ ಬಳಸಲಾಗುತ್ತದೆ.
(ಸೂಚನೆ : ‘ಟೆಂಪ್ಲೇಟ್’ ಈ ಫೈಲ್ ಕೂಡ್ ಒಂದು ವಿಧದ ಡ್ರಾಯಿಂಗ್ ಫೈಲ್ ಆಗಿದೆ).
ಟೆಂಪ್ಲೇಟ್ ತಯಾರಿಸುವಾಗ ಈ ಮುಂದಿನ ಅಂಶಗಳ ಕುರಿತು ವಿಚಾರ ಮಾಡಬೇಕು.
• ಶೀಟ್ ನ ಆಕಾರ (ಶೀಟ್ ಸೈಜ್) : ಡ್ರಾಯಿಂಗ್ ತೆಗೆಯಬೇಕಾಗಿರುವ ಶೀಟ್ ನ ಅಳತೆ –A0, A1, A2, A3, A4.
• ಟೈಟಲ್ ಬ್ಲಾಕ್ : ಇದರಲ್ಲಿ ಡ್ರಾಯಿಂಗ್ ಕುರಿತಾದ ತಾಂತ್ರಿಕ ಮಾಹಿತಿ ಮತ್ತು ಇನ್ನಿತರ ತತ್ಸಮ ವಿಶ್ಲೇಷಣೆಯು ಒಳಗೊಂಡಿರುತ್ತದೆ. (ಚಿತ್ರ ಕ್ರ. 1).
• ಮಾಪನದ ಪದ್ಧತಿ (ಡೈಮೆನ್ಶನಲ್ ಸ್ಟೈಲ್)
• ಎರೋ ಸ್ಟೈಲ್
• ಟೆಕ್ಸ್ಟ್ ಸ್ಟೈಲ್ (ಅಕ್ಷರಗಳ ವಿಧ)
• ಯುನಿಟ್ ಆಫ್ ಮೆಜರ್ : ಮಿ.ಮೀ. ಅಥವಾ ಇಂಚು ಮುಂತಾದವುಗಳು
• ಪ್ರಮಾಣ (ರೇಶಿಯೋ)
ಚಿತ್ರ ಕ್ರ. 1 : ಟೈಟಲ್ ಬ್ಲಾಕ್ ನ ಮಾದರಿ
ಗ್ರಾಹಕರ ಪದ್ಧತಿಗೆ ಅನುಸಾರವಾಗಿ ಮತ್ತು ಮಾನದಂಡಗಳಿಗೆ ಅನುಸಾರವಾಗಿ ಅವುಗಳಿಗೋಸ್ಕರ ಇರುವ ವಿಶಿಷ್ಟ ರೀತಿಯ ಅಂಶಗಳ ಟೆಂಪ್ಲೇಟ್ ಗಳು ಒಳಗೊಂಡಿವೆ. ಅದಕ್ಕೆ ಅಪೇಕ್ಷಿಸಲಾಗಿರುವ ರೀತಿಯನ್ನು ಟೆಂಪ್ಲೇಟ್ ಫೈಲ್ ನ ಮಾಧ್ಯಮದಿಂದ ಶೇಖರಿಸಿ ಇಡಬಹುದಾಗಿದೆ ಮತ್ತು ಅದನ್ನು ಅವಶ್ಯಕತೆಗೆ ತಕ್ಕಂತೆ ಬಳಸಬಹುದು.
ಟೆಂಪ್ಲೆಟ್ ತಯಾರಿಸಿದರಿಂದ ನೇರವಾಗಿ ಅಥವಾ ಅಪರೋಕ್ಷವಾಗಿ ಲಭಿಸುವ ಲಾಭಗಳು
• ಈ ಎಲ್ಲ ನಿರ್ಧಾರಗಳಿಂದಾಗಿ ಕೆಲಸದಲ್ಲಿರುವ ರಿಪಿಟ್ಯಾಬಿಲಿಟಿಯು ಕಡಿಮೆಯಾಗುತ್ತದೆ.
• ಸಮಯದಲ್ಲಿ ಬೃಹತ್ ಪ್ರಮಾಣದ ಉಳಿತಾಯವಾಗುತ್ತದೆ.
• ಯಾವಾಗಲೂ ಉದ್ಭವಿಸುವ ಚಿಕ್ಕ-ಪುಟ್ಟ ತಪ್ಪುಗಳು ಕಡಿಮೆಯಾಗುತ್ತವೆ.
• ಡಾಕ್ಯುಮೆಂಟೇಶನ್ ಮಾಡುವಾಗ ಅದರ ಲಾಭವಾಗುತ್ತದೆ.
• ಹೊಸ ಸಾಫ್ಟ್ ವೇರ್ ಬಳಸುವವನಿಗೆ ಅದನ್ನು ತಿಳಿದುಕೊಳ್ಳುವುದು ಸುಲಭವಾಗುತ್ತದೆ.
ಟೆಂಪ್ಲೇಟ್ ತಯಾರಿಸುವಾಗ ಟೈಟಲ್ ಬ್ಲಾಕ್ ಗೆ ತುಂಬಾ ಮಹತ್ವವಿದೆ. ಒಬ್ಬ ಗ್ರಾಹಕನಿಂದ ಬೇರೆಬೇರೆ ರೀತಿಯ ಡ್ರಾಯಿಂಗ್ ತಯಾರಿಸಲ್ಪಡುತ್ತವೆ. ಅದೇ ಸಮಯದಲ್ಲಿ ಟೆಂಪ್ಲೇಟ್ ಅದೇ ಇಟ್ಟು ಕೇವಲ ಟೈಟಲ್ ಬ್ಲಾಕ್ ನಲ್ಲಿ ಬದಲಾವಣೆಗಳನ್ನು ಮಾಡಬೇಕು. ಇದಕ್ಕೋಸ್ಕರ ಟೈಟಲ್ ಬ್ಲಾಕ್ ಮಾಡುವಾಗ ಅದನ್ನು ‘BLOCK’ ಈ ಕಮಾಂಡ್ ನಿಂದ ಮಾಡಿರಬೇಕು. (ಹೋಮ್ – Home ಪರ್ಯಾಯದಲ್ಲಿ ಕ್ರಿಯೇಟ್- Create ಎಂಬ ಹೆಸರಿನ ಉಪ-ಪರ್ಯಾಯವನ್ನು ಆಯ್ಕೆ ಮಾಡಬೇಕು ಅಥವಾ ಕಮಾಂಡ್ ಲೈನ್ ನಲ್ಲಿ ಬ್ಲಾಕ್ (BLOCK) ಬರೆದಿರುವಾಗ ಈ ಕಮಾಂಡ್ ಕಾಣಬಲ್ಲದು).
ಕಾರಣ ಅದರಿಂದ ಎಲ್ಲ ಮಾಹಿತಿ ಸಂಕಲಿತ ಪದ್ಧತಿಯಲ್ಲಿ ಉಳಿಯುತ್ತದೆ ಮತ್ತು ಅದರಲ್ಲಿ ಬದಲಾವಣೆಗಳನ್ನು ಮಾಡುವುದು ಸುಲಭವಾಗುತ್ತದೆ.
ಟೈಟಲ್ ಬ್ಲಾಕ್ ನಲ್ಲಿ ಅಪೇಕ್ಷಿಸಿರುವ ಮಾಹಿತಿ ಈ ಕೆಳಗಿನಂತಿದೆ (ಚಿತ್ರ ಕ್ರ. 1)
• ವಸ್ತುಗಳ ಹೆಸರು ಮತ್ತು ಕ್ರಮಾಂಕ
• ವಸ್ತುಗಳನ್ನು ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳು, ಅದರ ಕುರಿತಾದ ಮಾಹಿತಿ.
• ಪ್ರಮಾಣ
• ಡ್ರಾಯಿಂಗ್ ತಯಾರಿಸುವವನ ಹೆಸರು, ಪರಿಶೀಲಿಸುವವನ ಹೆಸರು, ಒಪ್ಪಿಗೆಯನ್ನು ನೀಡಿರುವ ವ್ಯಕ್ತಿಯ ಹೆಸರು ಮುಂತಾದವುಗಳು.
• ಡ್ರಾಯಿಂಗ್ ಮಾಡುವ ರೀತಿ (ಫರ್ಸ್ಟ್/ ಥರ್ಡ್ ಎಂಗಲ್)
• ರಿವಿಜನ್ ಕ್ರಮಾಂಕ
• ದುರುಸ್ತಿಯ ಸೂಚನೆಗಳು
• ಶೀಟ್ ಕ್ರಮಾಂಕ
ಡ್ರಾಯಿಂಗ್ ನಲ್ಲಿರುವ ವಿವಿಧ ಆಬ್ಜೆಕ್ಟ್ ಗಳ ಗುಂಪು ಅಂದರೆ ಬ್ಲಾಕ್. ಈಗ ಬ್ಲಾಕ್ ಕಮಾಂಡ್ ಹೇಗೆ ಬಳಸಬೇಕು ಎಂಬುದರ ಕುರಿತು ನಾವು ಚುಟುಕಾಗಿ ತಿಳಿದುಕೊಳ್ಳೋಣ.
• ಮೊದಲಾಗಿ ಒಟ್ಟು ತಮಗೆ ಬೇಕಾಗಿರುವ ಆಬ್ಜೆಕ್ಟ್ ಗಳನ್ನು ತಯಾರಿಸಿಕೊಳ್ಳಬೇಕು.
• ಬ್ಲಾಕ್ ಕಮಾಂಡ್ ಬಳಸಬೇಕು.
• ಬ್ಲಾಕ್ ನ ಹೆಸರನ್ನು ನಿರ್ಧರಿಸಬೇಕು.
• ಒಟ್ಟಾಗಿ ಅಪೇಕ್ಷಿಸಲಾಗಿರುವ ವಸ್ತುಗಳನ್ನು ಆಯ್ಕೆ ಮಾಡಬೇಕು.
• ಬ್ಲಾಕ್ ನ ಜಾಗವನ್ನು ನಿರ್ಧರಿಸಬೇಕು.
ಈ ರೀತಿಯಲ್ಲಿರುವ ನಿಮ್ಮ ಸಮೂಹ ಅಂದರೆ ಬ್ಲಾಕ್ ತಯಾರಾಗುತ್ತದೆ. ತಯಾರಾಗಿರುವ ಬ್ಲಾಕ್ ನಾವು ಕಾಲಾಂತರದಲ್ಲಿ ಆವಶ್ಯಕತೆಗೆ ಅನುಸಾರವಾಗಿ ಬದಲಾಯಿಸಬಲ್ಲೆವು. ಈ ಕಮಾಂಡ್ ಬಳಸಿ ನಾವು ಟೈಟಲ್ ಬ್ಲಾಕ್ ತಯಾರಿಸಿದೆವು.
ಬ್ಲಾಕ್ ಕಮಾಂಡ್ ಬಳಸಿ ನಾವು ಇನ್ನೂ ಹಲವಾರು ರೀತಿಯ ಲಾಭಗಳನ್ನು ಈ ಮುಂದಿನಂತೆ ಪಡೆಯಬಲ್ಲೆವು.
• ಯಾವಾಗಲೂ ಬಳಸಲು ಬೇಕಾಗುವ ವಿವಿಧ ಆಕಾರಗಳು.
• ಚಿಹ್ನೆ (Symbols) ತಯಾರಿಸಿ ಇಡಬಲ್ಲೆವು.
• ವಿಶಿಷ್ಟ ಸೂಚನೆಗಳು.
• ಅಂಕೆಗಳು, ಅಕ್ಷರಗಳು ಮತ್ತು ಶಬ್ದಗಳು ಮುಂತಾದವುಗಳು.
ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಬ್ಲಾಕ್ ಲೈಬ್ರರಿಯಲ್ಲಿ ಚಿಹ್ನೆ, ಆಕಾರ ಹಾಗೆಯೇ ಹಲವಾರು ವಿಶಿಷ್ಟ ರೀತಿಯ ಸೂಚನೆಗಳನ್ನು ಸೇರಿಸಬಹುದು.
ಚಿತ್ರ ಕ್ರ. 2 : ಬ್ಲಾಕ್ ನ ಲೈಬ್ರರಿ
ಈ ಎಲ್ಲವನ್ನೂ ಸೇರಿಸಿ ನಾವು ‘ಬ್ಲಾಕ್ ಲೈಬ್ರರಿ’ ತಯಾರಿಸಬಲ್ಲೆವು. ಈ ಲೈಬ್ರರಿ ವಿಶಿಷ್ಟ ಟೆಂಪ್ಲೇಟ್ ಎಂಬುದಾಗಿಯೂ ಸೇವ್ ಮಾಡಬಲ್ಲೆವು. ಅಂತಿಮವಾಗಿ ಈ ಲೈಬ್ರರಿ ಒಂದು ವಿಧದ ಡ್ರಾಯಿಂಗ್ ಫೈಲ್ ಆಗಿರುತ್ತದೆ. ತಮ್ಮ ಆವಶ್ಯಕತೆಗೆ ಅನುಸಾರವಾಗಿ ಯೋಗ್ಯ ಜಾಗದಲ್ಲಿ ಈ ಫೈಲ್ ಬಳಸಬಲ್ಲೆವು. ಯಾವಾಗಲೂ ಬೇಕಾಗುವ ಬೇರೆಬೇರೆ ವಿಧದ ವಿಶಿಷ್ಟ ಆಕಾರ, ಚಿಹ್ನೆಗಳು ಮುಂತಾದವುಗಳನ್ನು ಬೇಕಾದಾಗ ಬೇಕಾದಲ್ಲಿ ಬಳಸಬಲ್ಲೆವು. ಕೇವಲ ಅದಕ್ಕೋಸ್ಕರ ಫೋಲ್ಡರ್ ಸ್ಟಕ್ಚರ್ ಬಳಸಬೇಕು. ಅಂದರೆ ನಾವು ತಯಾರಿಸಿರುವ ‘ಬ್ಲಾಕ್ ಲೈಬ್ರರಿ’ ಸಹಜವಾಗಿ ಕೈಗೆಟಕಬಲ್ಲದು ಮತ್ತು ಇದರಿಂದಾಗಿ ವೇಳೆಯ ಉಳಿತಾಯವೂ ಆಗಬಲ್ಲದು.
ಇದೇ ರೀತಿಯ ಇನ್ನಷ್ಟು ಕಲ್ಪನೆಗಳನ್ನು ಅಂದರೆ ಕ್ಯಾಡ್ ನಲ್ಲಿರುವ ಅತ್ಯಾಧುನಿಕ ಕಮಾಂಡ್ ಗಳು, ಡ್ರಾಯಿಂಗ್, ಕನ್ವರ್ಜನ್ಸ್, ಎಕ್ಸಟರ್ನಲ್ ರೆಫರನ್ಸೆಸ್ ಮುಂತಾದವುಗಳನ್ನು ನಾವು ಮುಂದಿನ ಸಂಚಿಕೆಯಲ್ಲಿ ಓದಲಿದ್ದೇವೆ.
9823389389
ಅಮಿತ್ ಘೋಲೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರು ಎಟ್ ಲಾಸ್ ಕ್ಯಾಪ್ಕೋ, ಥಿಸೆನ್ ಕ್ರುಪ್ ಇಂತಹ ಮಲ್ಟಿನ್ಯಾಶನಲ್ ಕಂಪನಿಗಳಲ್ಲಿ ಡಿಸೈನ್ ವಿಭಾಗದಲ್ಲಿ ಅನೇಕ ವರ್ಷಗಳ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ ನಂತರ ಅವರು ‘ಇಮ್ಯಾಜಿಕಾ ಟೆಕ್ನೋಸಾಫ್ಟ್’ ಎಂಬ ಇಂಜಿನಿಯರಿಂಗ್ ಡಿಸೈನ್ ಸೊಲ್ಯುಶನ್ ಮತ್ತು ಕಾರ್ಪೊರೇಟ್ ತರಬೇತಿಯನ್ನು ನೀಡುವ ಕನ್ಸಲ್ಟನ್ಸಿಯನ್ನು ಸ್ಥಾಪಿಸಿದರು.