ಕಚ್ಚುಗಳ ಮಿಲ್ಲಿಂಗ್

@@NEWS_SUBHEADLINE_BLOCK@@

Lohkarya - Udyam Prakashan    06-Oct-2021   
Total Views |

Milling of bricks_1  
             
ಸಾಮಾನ್ಯವಾಗಿ ಮಿಲ್ಲಿಂಗ್ ಗೋಸ್ಕರ ಮಿಲ್ಲಿಂಗ್ ಮಶಿನ್ ಬಳಸಲಾಗುತ್ತದೆ. ಹಲವಾರು ಅನಿವಾರ್ಯ ಪರಿಸ್ಥಿತಿಯಲ್ಲಿ ಟರ್ನಿಂಗ್ ಮಶಿನ್ ನಲ್ಲಿ ಮಿಲ್ಲಿಂಗ್ ಆಪರೇಶನ್ ಮಾಡಿ ಕಠಿಣವೆನಿಸುವ ಕಾರ್ಯವಸ್ತುಗಳನ್ನು (ಉದಾಹರಣೆ 1) ಸಹಜವಾಗಿ ಮಾಡಬಹುದಾಗಿದೆ. ಅದಕ್ಕೋಸ್ಕರ C ಅಕ್ಷ ಮತ್ತು ಲೈವ್ ಟೂಲಿಂಗ್ ಇದನ್ನು ಬಳಸಲಾಗುತ್ತದೆ. ಉದಾಹರಣೆ 2 ರಲ್ಲಿ ಕೋರ್ಡಿನೇಟರ ಸಿಸ್ಟಮ್ ರೊಟೇಶನ್ ಬಳಸಿ 450 ಕೋನದಲ್ಲಿ ಕಾರ್ಯವಸ್ತುವಿನ ವಿಶಿಷ್ಟವಾದ ಆಕಾರವನ್ನು ಮಿಲ್ಲಿಂಗ್ ಮಶಿನ್ ನಲ್ಲಿಯೇ ತಯಾರಿಸಲಾಗುತ್ತದೆ.
ಉದಾಹರಣೆ 1
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಕಾರ್ಯವಸ್ತುವಿನಲ್ಲಿ ಎಕ್ಸಿಯಲ್ ಅಥವಾ ಫೇಸ್ ಮಿಲ್ಲಿಂಗ್ ಮಾಡಬೇಕಾಗಿದೆ. 1 ಇಂಚು ವ್ಯಾಸವಿರುವ ಫೇಸ್ ನಲ್ಲಿ C ಅಕ್ಷ ಬಳಸಿ 1/4” ಅಗಲದ ಕಚ್ಚು ಮಾಡಬೇಕಾಗಿದೆ. ಇದಕ್ಕೋಸ್ಕರ C ಅಕ್ಷದ ಫೀಡ್ ರೇಟ್ ಇಂಚು/ ನಿಮಿಷಗಳಲ್ಲಿ ಮಾಡಬೇಕಾಗುತ್ತದೆ. ಕಂಟ್ರೋಲರ್ ಆಯ್ಕೆ ಮಾಡಿರುವ ಫೀಡ್ ರೇಟ್ ನಂತೆ ಸ್ಪಿಂಡಲ್ ನ ತಿರುಗುವ ವೇಗವನ್ನುನಿರ್ಧರಿಸುತ್ತದೆ. ಅದಕ್ಕೋಸ್ಕರ ಸೆಟಿಂಗ್ 102 C ಅಕ್ಷ ವ್ಯಾಸದಲ್ಲಿರುವ ಮೌಲ್ಯವನ್ನು ಬಳಸಲಾಗುತ್ತದೆ. ಕೋಷ್ಟಕ ಕ್ರ. 1 ರಲ್ಲಿ ಪ್ರೊಗ್ರಾಮ್ ನಲ್ಲಿ ಪ್ಯಾರಾಮೀಟರ್ (ಸಿ.ಎನ್.ಸಿ. ಕಂಟ್ರೋಲರ್ ನಲ್ಲಿರುವ ಸೆಟಿಂಗ್ ಪ್ಯಾರಾಮೀಟರ್ 102) ಒಂದು ಈ ವ್ಯಾಸದ ಮೌಲ್ಯಕ್ಕೆ ಸೆಟ್ ಮಾಡಲಾಗಿದೆ.
 
 
Milling of bricks_1  
ಚಿತ್ರ ಕ್ರ. 1
 
ಚಿತ್ರ ಕ್ರ. 1 ರಲ್ಲಿ N3, N4, N6, N7, N8 ತೋರಿಸಿರುವ ದಾರಿಯು ಪ್ರೊಗ್ರಾಮ್ ನಲ್ಲಿರುವ ಹಂತವಾಗಿದೆ. ಅದರ ವಿವರಣೆಯನ್ನು ಪ್ರೊಗ್ರಾಮ್ ನಲ್ಲಿ ನೀಡಲಾಗಿದೆ. Z-X ಪ್ಲೇನ್ ಬಳಸಿ ಅದರೊಂದಿಗೆ C ಅಕ್ಷವನ್ನು ಪಡೆದು ಅಪೇಕ್ಷಿಸಿರುವ ಫೇಸ್ ನ ಮಿಲ್ಲಿಂಗ್ ಮಾಡಲಾಗಿದೆ.
 

Milling of bricks_1  
 
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಈ ರೀತಿಯ ಕಾರ್ಯವಸ್ತುವಿನಲ್ಲಿ ಎಕ್ಸಿಯಲ್ ಅಥವಾ ಫೇಸ್ ಮಿಲ್ಲಿಂಗ್ ಮಾಡಬಹುದಾಗಿದೆ. ನಿರ್ಧರಿಸಿರುವ ವ್ಯಾಸವಿರುವ ಫೇಸ್ ನಲ್ಲಿ C ಅಕ್ಷವನ್ನು ಬಳಸಿ ಬೇಕಾಗಿರುವ ಅಗಲದ ಕಚ್ಚನ್ನು ತಯಾರಿಸಲಾಗುತ್ತದೆ. ಲೈವ್ ಟೂಲ್ XZ ಪ್ಲೇನ್ ಮತ್ತು C ಅಕ್ಷಕ್ಕೆ ಯೋಗ್ಯವಾಗಿ ಬಳಸಿ ಕಠಿಣವೆನಿಸುವ ಕಾರ್ಯವಸ್ತು ಸಹಜವಾಗಿ ಮಾಡಬಹುದಾಗಿದೆ. ಲೈವ್ ಟೂಲ್ (ತಿರುಗುವ ಟೂಲ್) ಮತ್ತು C ಅಕ್ಷವನ್ನು ಬಳಸಿ ಬೇಕಾಗಿರುವ ಡಿಗ್ರಿಗಳಲ್ಲಿ ಮಿಲ್ಲಿಂಗ್ ಮಾಡಬಹುದಾಗಿದೆ.
 
 
Milling of bricks_1 
 
ಚಿತ್ರ ಕ್ರ. 2

ಉದಾಹರಣೆ 2
ಚಿತ್ರ ಕ್ರ. 1 ರಲ್ಲಿ ಒಂದು ನಿಗದಿಸಿರುವ ಜಾಮೆಟ್ರಿಕ್ ಆಕಾರದ 8 ಜಾಗಗಳಲ್ಲಿ ಯಂತ್ರಣೆಯನ್ನು ಮಾಡಬೇಕಾಗಿದೆ. ಪ್ರತಿ ಎರಡು ಜಾಮೆಟ್ರಿಯ ಆಕಾರಗಳಲ್ಲಿ 45 ಡಿಗ್ರಿ ಕೋನವಿದೆ ಮತ್ತು ಮಧ್ಯದಲ್ಲಿ 21, 10, 10 ಈ ರೀತಿಯಲ್ಲಿ ಪ್ರತಿಯೊಂದು ಭಾಗದ ಮಾಪನಗಳನ್ನು ನೀಡಲಾಗಿದೆ. ಕೋರ್ಡಿನೇಟ್ ಸಿಸ್ಟಮ್ ರೊಟೇಶನ್ ಬಳಸಿ ಪ್ರತಿಯೊಂದು 45 ಡಿಗ್ರಿಯಲ್ಲಿ ಒಂದರಂತೆ 8 ಜಾಮೆಟ್ರಿ ಆಕಾರವನ್ನು ತಯಾರಿಸಲಾಗಿದೆ.
 

Milling of bricks_1  
 
ಚಿತ್ರ ಕ್ರ. 2 ರಲ್ಲಿ ಪ್ರಾರಂಭದಲ್ಲಿ ಬಿಂದು X0 Y0 ಎಂಬುದಾಗಿ ತಿಳಿಯಲಾಗಿದೆ. ಇದರ ಪ್ರೊಗ್ರಾಮ್ ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿದೆ.
8625975219
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
@@AUTHORINFO_V1@@