ಎಲ್ಲ ಬದಿಗಳು ಕಠಿಣವಿರುವ ಮ್ಯಾಗ್ನೆಟಿಕ್ ‘ವಿ’ ಬ್ಲಾಕ್

@@NEWS_SUBHEADLINE_BLOCK@@

Lohkarya - Udyam Prakashan    06-Oct-2021   
Total Views |
ಯಾವಾಗಲೂ ಬಳಸಲಾಗುವ ಕನ್ವೆನ್ಶನಲ್ ಮೆಕ್ಯಾನಿಕಲ್ ವರ್ಕ್ ಹೋಲ್ಡಿಂಗ್ ಡಿವೈಸೆಸ್ ಗಳನ್ನು ಬಳಸುವಾಗ ಕಾರ್ಯವಸ್ತುಗಳನ್ನು ಹಿಡಿಯಲು ಬೇಕಾಗುವ ಸಮಯವನ್ನು ಕಡಿಮೆ ಮಾಡಬಹುದು. ಅದಕ್ಕೋಸ್ಕರ ಅಯಸ್ಕಾಂತೀಯ (ಮ್ಯಾಗ್ನೆಟಿಕ್) ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಮ್ಯಾಗ್ನೆಟಿಕ್ ವರ್ಕ್ ಹೋಲ್ಡಿಂಗ್ ನಲ್ಲಿ ಅನೇಕ ವಿಧಗಳಿವೆ. ಪ್ರಮುಖವಾಗಿ ಇನ್ಸ್ಪೆಕ್ಷನ್, ಮಶಿನಿಂಗ್ ಮತ್ತು ಲಿಫ್ಟಿಂಗ್ ಮ್ಯಾಗ್ನೆಟಿಕ್ ವರ್ಕ್ ಹೋಲ್ಡಿಂಗ್ ಗಳನ್ನು ಬಳಸಲಾಗುತ್ತದೆ. ‘ವಿ ಬ್ಲಾಕ್’ ಈ ಉಪಕರಣಗಳು ಈ ವಲಯದಲ್ಲಿ ಎಲ್ಲರ ಮೂಲ ಬೇಡಿಕೆಗಳಿರುವ ಉಪಕರಣಗಳಾಗಿದೆ. ಕೇವಲ ಪರೀಕ್ಷೆಗೆ ಅಲ್ಲದೇ ಇನ್ನಿತರ ಜಾಬ್ ಗಳ ಕೆಲಸ ನಿರ್ವಹಿಸಲು, ಅವುಗಳನ್ನು ಹಿಡಿಯಲು ಈ ರೀತಿಯ ವಿವಿಧ ಕಡೆಗಳಲ್ಲಿ ‘ವಿ ಬ್ಲಾಕ್’ ಬಳಸಲಾಗುತ್ತದೆ.
‘ವಿ ಬ್ಲಾಕ್’ನ ವಿಧಗಳು
 
‘ವಿ ಬ್ಲಾಕ್’ನಲ್ಲಿ ಮ್ಯಾಗ್ನೆಟಿಕ್ ‘ವಿ ಬ್ಲಾಕ್’ ಮತ್ತು ನಾನ್ ಮ್ಯಾಗ್ನೆಟಿಕ್ ‘ವಿ ಬ್ಲಾಕ್’ ಎಂಬ ಎರಡು ವಿಧಗಳಿರುತ್ತವೆ. ನಾನ್ ಮ್ಯಾಗ್ನೆಟಿಕ್ ‘ವಿ ಬ್ಲಾಕ್’ನಲ್ಲಿ ಕಾರ್ಯವಸ್ತುವನ್ನು ಕ್ಲ್ಯಾಂಪ್ ನಿಂದ ಬಿಗಿ ಮಾಡಿ ಹಿಡಿಯಲಾಗುತ್ತದೆ ಮತ್ತು ಪರಿಶೀಲಿಸಲಾಗುತ್ತದೆ.
ಮ್ಯಾಗ್ನೆಟಿಕ್ ‘ವಿ ಬ್ಲಾಕ್’
       
ಪ್ರಾರಂಭದಲ್ಲಿ ಸಾಮಾನ್ಯವಾದ ಕಬ್ಬಿಣದ ಬ್ಲಾಕ್ ನೊಂದಿಗೆ ಮ್ಯಾಗ್ನೆಟ್ ನ ಅಸೆಂಬ್ಲಿ ತಯಾರಿಸಿ ಮಾಡಿದ ‘ವಿ ಬ್ಲಾಕ್’ ಮಟೀರಿಯಲ್ ಮೃದು (ಸಾಫ್ಟ್) ಆಗಿರುತ್ತಿತ್ತು. ಪ್ರಿಸಿಜನ್ ನ ಕೆಲಸದಲ್ಲಿ ಸ್ಟ್ಯಾಂಡರ್ಡ್ ರೂಮ್ ನಲ್ಲಿ ಒಂದೇ ರೀತಿಯ ವ್ಯಾಸದ/ ಆಕಾರದ ಕಾರ್ಯವಸ್ತುವಿನ ಪರೀಕ್ಷೆಯನ್ನು ಮಾಡಲಾಗುತ್ತದೆ. ನಂತರ ಬ್ಲಾಕ್ ನ ಸರ್ಫೇಸ್ ನಲ್ಲಿ ಲೈನ್ ಮಾರ್ಕ್ ಗಳು ಉಂಟಾಗಿ ಹೊಂಡಗಳು ಉಂಟಾಗುತ್ತವೆ. ಪರೀಕ್ಷೆ ಮಾಡುವವನಿಗೆ ಈ ಅಂಶವು ಗಮನಕ್ಕೆ ಬರುವ ತನಕ ಕಾರ್ಯವಸ್ತು ಲೈನ್ ನಲ್ಲಿ ಮುಂದೆ ಸರಿದ ನಂತರ ರಿಜೆಕ್ಟ್ ಆಗುತ್ತಿತ್ತು. ಇದರಿಂದಾಗಿ ಹಾರ್ಡನ್ ‘ವಿ ಬ್ಲಾಕ್’ ನ ಅಭಿವೃದ್ಧಿಯಾಗುತ್ತದೆ. ಉತ್ಪಾದಕರು ‘ವಿ ಬ್ಲಾಕ್’ನಲ್ಲಿರುವ ದೊಡ್ಡ ಬ್ಲಾಕ್ ನ ಕಠಿಣತೆಯನ್ನು ವೃದ್ಧಿಸಲು ಆ ಭಾಗದಲ್ಲಿ ಎರಲ್ಡೈಟ್ ನ ಸಹಾಯದಿಂದ ಹಾರ್ಡನ್
 

Rigid magnetic moments_1&  
 
ಪಟ್ಟಿಯನ್ನು ಅಂಟಿಸಿ ಪ್ರಿಸಿಜನ್ ಕೆಲಸಕ್ಕೋಸ್ಕರ ಅಥವಾ ಪರೀಕ್ಷೆಯ ಕೆಲಸಕ್ಕೋಸ್ಕರ ಅದಕ್ಕೆ ಫಿನಿಶ್ ಗ್ರೈಂಡಿಂಗ್ ಮಾಡಲಾಗುತ್ತದೆ. ‘ವಿ ಬ್ಲಾಕ್’ ಲೆಗ್ಜ್ ನ ಜಾಗದಲ್ಲಿ ಉಂಟಾಗುವ ಸವೆತ ಅಥವಾ ನಷ್ಟವನ್ನು ತಡೆಯಲು ಅದಕ್ಕೂ ಹಾರ್ಡನ್ ಪಟ್ಟಿಯನ್ನು ಅಂಟಿಸಲು ಪ್ರಾರಂಭಿಸಲಾಯಿತು. ಈ ರೀತಿಯಲ್ಲಿ ಭಾರತದಲ್ಲಿ ಹಾರ್ಡನ್ ಮ್ಯಾಗ್ನೆಟಿಕ್ ‘ವಿ ಬ್ಲಾಕ್’ ಎಂಬ ಕಲ್ಪನೆಯು (ಅಂದರೆ ದೊಡ್ಡ ‘ವಿ’ ಮತ್ತು ಲೆಗ್ಜ್ ಬಾಟಮ್ ಹಾರ್ಡನ್) ಅಸ್ತಿತ್ವಕ್ಕೆ ಬಂತು.
ಮುಂದೆ ಅದರಲ್ಲಿ ಕೆಲಸವನ್ನು ನಿರ್ವಹಿಸುವಾಗ ಉಂಟಾಗುವ ಗಡಿಬಿಡಿ ಅಥವಾ ಕೊನೆಯಲ್ಲಿ ಯಾವುದೇ ವಸ್ತು ಅಪ್ಪಳಿಸಿದರೂ ಕೂಡಾ ಈ ಪಟ್ಟಿಯು ಹೊರಟು ಹೋಗುವಂತಹ ಸಮಸ್ಯೆಯು ಉಂಟಾಗುತ್ತದೆ. ಒಂದು ವೇಳೆ ಈ ಪಟ್ಟಿಯು ಹೊರಟು ಹೋದರೂ ಕೂಡಾ ‘ವಿ ಬ್ಲಾಕ್’ ವ್ಯರ್ಥವಾಗುವುದಿಲ್ಲ. ಪಟ್ಟಿ ತೆಳ್ಳಗೆ ಇರುವುದರಿಂದ ಹಿಡಿಯುವುದು ಅಸಾಧ್ಯ, ಎಂಬುದೇ ಮೊದಲ ಪ್ರಮುಖ ಅಂಶ. ಇನ್ನೊಂದು ಅಂಶವೆಂದರೆ ಸ್ಕ್ರೂಯಿಂಗ್ ಮಾಡಿದ ನಂತರ ಈ ಪಟ್ಟಿಯು ಹೊರಟು ಹೋಗಲಾರದು. ಇದಕ್ಕೋಸ್ಕರ ಅದರಲ್ಲಿ 100% ಸಮತಲತೆಯನ್ನು ಉಂಟು ಮಾಡುವುದು ಮತ್ತು ಶಾಶ್ವತವಾಗಿ ಕಾಪಾಡುವುದು ದುಸ್ಸಾಧ್ಯ.
ಪಟ್ಟಿಯು ಹೊರಟು ಹೋದ ನಂತರವೂ ಅದು ಸಂಪೂರ್ಣವಾಗಿ ಹೊರಟು ಹೋಗುವುದಿಲ್ಲ. ಕೆಳ ಅಥವಾ ಅಕ್ಕಪಕ್ಕದಲ್ಲಿ ಸ್ವಲ್ಪ ಭಾಗವು (ಪೋರ್ಶನ್) ಹೊರಟು ಹೋದರೆ ಮತ್ತು ಏರ್ ಗ್ಯಾಪ್ ಉಂಟಾದಲ್ಲಿ ಆ ಪಟ್ಟಿಯನ್ನು ಪರಿಶೀಲಿಸುವಾಗ ಮೈಕ್ರಾನ್ ನ ಪ್ರಮಾಣದಲ್ಲಿ ಒತ್ತಲ್ಪಡುತ್ತದೆ. ಕಾರ್ಯವಸ್ತುವನ್ನು ತೆಗೆದಾಗ ಅದು ಪೂರ್ವ ಸ್ಥಿತಿಗೆ ಬರುತ್ತದೆ. ಕಾರ್ಯವಸ್ತುವಿನಲ್ಲಿ ಎರರ್ ಗಳು ಹೆಚ್ಚಾಗುತ್ತವೆ. ಈ ವಿಧದ ಸಮಸ್ಯೆಗಳು ಉದ್ಭವಿಸಿದ್ದರಿಂದ ಗುಣಮಟ್ಟದ ವಿಭಾಗದಲ್ಲಿ ನುರಿತರು ಮಾಡಿರುವ ಸಂಶೋಧನೆಯಿಂದ ‘ವಿ ಬ್ಲಾಕ್’ನಲ್ಲಿರುವ ಪಟ್ಟಿಯಲ್ಲಿ ಸೂಕ್ಷವಾದ ಬಿರುಕುಗಳು ಉದ್ಭವಿಸಿ 2 ಮೈಕ್ರಾನ್ ಗಳಷ್ಟು ಪ್ರಮಾಣದಲ್ಲಿ ಎರರ್ ಗಳು ಉಂಟಾಗುವುದು ಗಮನಕ್ಕೆ ಬಂತು. ಇದರಿಂದಾಗಿ ಈ ವಿಧದ ಎರರ್ ಗಳನ್ನು ದೂರ ಮಾಡಲು ನಾವು ಸಂಶೋಧನೆಯನ್ನು ಮಾಡಿದೆವು. ಅಲ್ಲದೇ ಅದರಲ್ಲಿರುವ ಪಟ್ಟಿಯನ್ನು ಬೇರ್ಪಡಿಸುವ ತೀರ್ಮಾನವನ್ನು ಕೈಗೊಂಡೆವು. ಅದರಿಂದ ‘ಆಲ್ ಸೈಡ್ಸ್ ಹಾರ್ಡನ್ಡ್ ಎಂಡ್ ಗ್ರೌಂಡ್’ ಈ ಹೊಸ ವಿಧದ ‘ವಿ ಬ್ಲಾಕ್’ ಉತ್ಪಾದನೆಯ ಪ್ರಾರಂಭವಾಯಿತು.
ಎಲ್ಲ ಬದಿಗಳಲ್ಲಿ ಹಾರ್ಡನ್ ಮಾಡಿರುವ ‘ವಿ ಬ್ಲಾಕ್’
ಹೊಸ ವಿಧದಲ್ಲಿ ದೊಡ್ಡ ‘ವಿ’ ಯೊಂದಿಗೆ ಚಿಕ್ಕ ‘ವಿ’ ಪಿನ್ ಅಥವಾ ಚಿಕ್ಕ ಜಾಬ್ ನ ಪರೀಕ್ಷೆ ಮಾಡಲು ಅದನ್ನು ಬಳಸಲು ಪ್ರಾರಂಭವಾಯಿತು. ಯಾವಾಗಲೂ ಹಾರ್ಡನ್ ‘ವಿ ಬ್ಲಾಕ್’ಗಿಂತ ಇದರ ಬಾಳಿಕೆಯು ಕನಿಷ್ಠ 40-50% ಹೆಚ್ಚು ಲಭಿಸುತ್ತದೆ. ಎಲ್ಲಕ್ಕಿಂತಲೂ ಪ್ರಮುಖ ವೈಶಿಷ್ಟ್ಯವೆಂದರೆ ಇದು ಹಳೆಯ ಪದ್ಧತಿಯ ಹಾರ್ಡನ್ ‘ವಿ ಬ್ಲಾಕ್’ನ ಬೆಲೆಯಲ್ಲಿ ಲಭ್ಯವಿದೆ.
9359104060
ಸಂದೇಶ ಶಹಾ ಇವರು ಅಪ್ ಟೆಕ್ ಇಂಜಿನಿಯರಿಂಗ್ ಕಂಪನಿಯ ಮಾಲಿಕರಾಗಿದ್ದಾರೆ. ಈ ಕಂಪನಿಯು ಮ್ಯಾಗ್ನೆಟಿಕ್ ಉತ್ಪಾದನೆಗಳು ಮತ್ತು ಪರೀಕ್ಷೆಯ ಉಪಕರಣಗಳನ್ನು ನಿರ್ಮಿಸುತ್ತದೆ. ಅವರಿಗೆ ಈ ವಲಯದಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ.
@@AUTHORINFO_V1@@