ಹೆಲಿಕ್ಸ್ ಕೋನದ ಮಹತ್ವ

@@NEWS_SUBHEADLINE_BLOCK@@

Lohkarya - Udyam Prakashan    10-Oct-2021   
Total Views |
 
Significance of helix ang
 
 ಟೂಲ್ ಗಳ ಮಧ್ಯ ರೇಖೆಯ ಕುರಿತು ಕಟಿಂಗ್ ಎಡ್ಜ್ ಕೋನ ಎಂಬುದಾಗಿ (ಚಿತ್ರ ಕ್ರ. 1) ಎಂಡ್ ಮಿಲ್ ನ ಹೆಲಿಕ್ಸ್ ಕೋನವನ್ನು ಕರೆಯಲಾಗಿದೆ. ನೀಡಲಾಗಿರುವ ಸೀಳಿನ ಆಳಕ್ಕೋಸ್ಕರ ಕಟಿಂಗ್ ಎಡ್ಡ್ ನ ಸಂಪರ್ಕದಲ್ಲಿ ಎಷ್ಟು ಉದ್ದದ ಕಾರ್ಯವಸ್ತು ಇರಬಲ್ಲದು, ಎಂಬುದನ್ನು ಹೆಲಿಕ್ಸ್ ಕೋನದಿಂದಲೇ ನಿರ್ಧರಿಸಲಾಗುತ್ತದೆ. ಅದರ ಪ್ರಭಾವವು ಪ್ರಮುಖವಾಗಿ ಚಿಪ್ ನ ಪ್ರವಾಹದಲ್ಲಿ, ಕಟಿಂಗ್ ಫೋರ್ಸ್ ನಲ್ಲಿ ಮತ್ತು ಇದರಿಂದಾಗಿ ಸಹಜವಾಗಿಯೇ ಟೂಲ್ ಗಳ ಚಟುವಟಿಕೆಯಲ್ಲಿ ಬೀರಲ್ಪಡುತ್ತದೆ. ಹೆಲಿಕ್ಸ್ ಕೋನ ಎಷ್ಟು ದೊಡ್ಡದೋ, ಅಷ್ಟೇ ಕಟಿಂಗ್ ಎಡ್ಜ್ ಗಳ ಉದ್ದವು ಹೆಚ್ಚು ಮತ್ತು ಅಷ್ಟೇ ಟೂಲ್ ನ ಕೋನದ ಬಾಳಿಕೆಯೂ ಹೆಚ್ಚು. ಹಾಗೆಯೇ ದೊಡ್ಡ ಕೋನ ಇದ್ದರೂ ಕೂಡಾ, ಕಾರ್ಯವಸ್ತುವಿನಲ್ಲಿ ಪ್ರವೇಶ ಮತ್ತು ಅದರಿಂದ ಹೊರಗೆ ಬರುವುದು ಸಹಜವಾಗಿರುತ್ತದೆ. ಇದರಿಂದಾಗಿ ಎಂಡ್ ಮಿಲ್ ಮತ್ತು ಕಾರ್ಯವಸ್ತುಗಳು ಒಂದೊಂದರಿಂದ ದೂರಕ್ಕೆ ಒಯ್ಯಬಲ್ಲ ರೇಡಿಯಲ್ ಫೋರ್ಸ್ ಕಡಿಮೆಯಾಗುತ್ತದೆ.
 
 
Significance of helix ang
 
ಚಿತ್ರ ಕ್ರ. 1
 
ಇದರ ಪರಿಣಾಮವೆಂಬುದಾಗಿ ಯಂತ್ರಣೆ ಕ್ರಿಯೆ ಉಚ್ಚಮಟ್ಟದ್ದಾಗುತ್ತದೆ ಮತ್ತು ಅದರಲ್ಲಿ ಸ್ಥಳಾಂತರದ ಸ್ಥಿತಿಯ ಕಡಿಮೆಯಾಗುತ್ತದೆ. ಅನೇಕ ಬಾರಿ ಫಿನಿಶಿಂಗ್ ಗೋಸ್ಕರ ದೊಡ್ಡ ಮತ್ತು ರಫಿಂಗ್ ಗೋಸ್ಕರ ಚಿಕ್ಕ ಹೆಲಿಕ್ಸ್ ಕೋನದ ಶಿಫಾರಸ್ಸು ಮಾಡಲಾಗುತ್ತದೆ. ಚಿಕ್ಕ ಕೋನದಿಂದ ರಫಿಂಗ್ ನಲ್ಲಿ ಆತ್ಯಾವಶ್ಯಕವಾಗಿರುವ ಹೆಚ್ಚು ಶಕ್ತಿಯು ಲಭಿಸುತ್ತದೆ.
ಹೆಲಿಕ್ಸ್ ಕೋನ ಹೆಚ್ಚಾದಂತೆ ಕಟಿಂಗ್ ಎಡ್ಡ್ ನ ಕಾರ್ಯವಸ್ತುವಿನ ಸಂಪರ್ಕದಲ್ಲಿ ಉಂಟಾಗುವ (ಎಂಗೇಜ್ ಮೆಂಟ್) ಉದ್ದವು ಕಡಿಮೆಯಾಗುತ್ತದೆ, ಎಂಬ ಒಂದು ಸಾಮಾನ್ಯ (ಚಿತ್ರ ಕ್ರ. 2) ನಿಯಮವಾಗಿದೆ. ಚಿಕ್ಕ ಮತ್ತು ದೊಡ್ಡ ಹೆಲಿಕ್ಸ್ ಕೋನದ ಅನೇಕ ಲಾಭಗಳು, ಹಾಗೆಯೇ ಮಿತಿಗಳಿವೆ. ಇದರಿಂದಾಗಿ ಯಾವುದೇ ಯಂತ್ರಣೆಯ ಕೆಲಸದಲ್ಲಿ ಪ್ರಭಾವ ಬೀರಬಲ್ಲದು.
 
 
Significance of helix ang
 
ಚಿತ್ರ ಕ್ರ. 2 : ಕಟಿಂಗ್ ಎಡ್ಜ್ ನ ಉದ್ದ ಹೆಲಿಕ್ಸ್ ನ ಕೋನಕ್ಕೆ ಅನುಸಾರವಾಗಿ
ಹೇಗೆ ಬದಲಾಯಿಸಲಾಗುತ್ತದೆ ಎಂಬುದನ್ನು ತೋರಿಸುವ ಚಿತ್ರ
 
ಚಿಕ್ಕ ಹೆಲಿಕ್ಸ್ ಕೋನ (40° ಗಿಂತ ಕಡಿಮೆ)
ಲಾಭಗಳು
 
ವೃದ್ಧಿಸುತ್ತಿರುವ ಬಲ : ಇದರಲ್ಲಿ ಕೋರ್ ದೊಡ್ಡದಾಗಿರುವುದರಿಂದ ಸ್ಥಳಾಂತರದಲ್ಲಿ ಅಥವಾ ಒತ್ತಡದಲ್ಲಿ ಟೂಲ್ ಬಗ್ಗಬಲ್ಲಂತಹ ಬಲದ ಪ್ರತಿಕಾರವನ್ನು ಮಾಡಬಲ್ಲ ಒಂದು ದೃಢವಾದ ಟೂಲ್ ತಯಾರಾಗುತ್ತದೆ.
 
ಕಡಿಮೆ ಲಿಫ್ಟಿಂಗ್ : ಕಡಿಮೆ ಸುರಕ್ಷಿತವಾಗಿರುವ ಸೆಟಿಂಗ್ ನಲ್ಲಿ ವರ್ಕ್ ಟೇಬಲ್ ದಿಂದ ಯಂತ್ರಭಾಗಗಳನ್ನು ಎತ್ತಲ್ಪಡುವ ಸಾಧ್ಯತೆಯು ಚಿಕ್ಕ ಕೋನದಿಂದಾಗಿ ಕಡಿಮೆಯಾಗುತ್ತದೆ.
 
ಬೃಹದಾಕಾರದ ಚಿಪ್ ಹೊರಗೆ ತೆಗೆಯುವುದು : ಚಿಕ್ಕ ಹೆಲಿಕ್ಸ್ ಕೋನದಿಂದಾಗಿ ಟೂಲ್ ಒಂದು ದೊಡ್ಡ ಚಿಪ್ ತಯಾರಿಸಬಲ್ಲದು ಮತ್ತು ಬೃಹತ್ ಪ್ರಮಾಣದಲ್ಲಿ ಮಟೀರಿಯಲ್ ಹೊರಗೆ ತೆಗೆಯಲಾಗುತ್ತದೆ.
ಮಿತಿಗಳು
 
ಒರಟುತನದ ಫಿನಿಶ್ : ಚಿಕ್ಕ ಹೆಲಿಕ್ಸ್ ಕೋನವಿರುವ ಎಂಡ್ ಮಿಲ್ ನಲ್ಲಿರುವ ಚಿಪ್ ದೊಡ್ಡ ಆಕಾರದ್ದಾಗಿರುತ್ತದೆ. ಆದರೆ ಒಮ್ಮೊಮ್ಮೆ ಚಿಪ್ ಹೊರಗೆ ತೆಗೆಯಲು ತೊಡಕು ಉಂಟಾಗಬಲ್ಲದು. ಈ ಅಕಾರ್ಯಕ್ಷಮತೆಯಿಂದಾಗಿ ಯಂತ್ರಭಾಗದ ಫಿನಿಶ್ ಕಡಿಮೆ ಗುಣಮಟ್ಟದ್ದಾಗಬಲ್ಲದು.
 
ಕಡಿಮೆ ಫೀಡ್ ರೇಟ್ : ಚಿಕ್ಕ ಹೆಲಿಕ್ಸ್ ಕೋನವಿರುವ ಎಂಡ್ ಮಿಲ್ ನಲ್ಲಿ ರೇಡಿಯಲ್ ಫೋರ್ಸ್ ಹೆಚ್ಚಿರುತ್ತದೆ. ಇದರಿಂದಾಗಿ ಎಂಡ್ ಮಿಲ್ ಕಡಿಮೆ ಫೀಡ್ ರೇಟ್ ನಿಂದ ನಡೆಸುವುದು ಅತ್ಯಾವಶ್ಯಕವಾಗಿರುತ್ತದೆ.
 
 
Significance of helix ang
 
ಚಿತ್ರ ಕ್ರ. 3
ದೊಡ್ಡ ಹೆಲಿಕ್ಸ್ ಕೋನ (40° ಗಿಂತ ಹೆಚ್ಚು)
ಲಾಭಗಳು
 
• ಕಡಿಮೆ ರೇಡಿಯಲ್ ಫೋರ್ಸ್ : ಶಿಯರಿಂಗ್ ನ ಕ್ರಿಯೆಯು ಒಳ್ಳೆಯದಾಗಿ ಆಗುತ್ತಿರುವುದರಿಂದ ಟೂಲ್ ಸುಲಲಿತವಾಗಿ ನಡೆಯುತ್ತದೆ, ಶಬ್ದವೂ ಕಡಿಮೆ ಬರುತ್ತದೆ, ತೆಳ್ಳಗಿನ ಬದಿ (ವಾಲ್) ಇರುವ ಅಪ್ಲಿಕೇಶನ್ ನಲ್ಲಿ ಸ್ಥಳಾಂತರವೂ ಕಡಿಮೆಯಾಗುತ್ತದೆ ಮತ್ತು ಹೆಚ್ಚು ಸ್ಥಿರತೆಯೂ ಲಭಿಸುತ್ತದೆ.
• ಕಾರ್ಯಕ್ಷಮವಾಗಿ ಚಿಪ್ ಹೊರಗೆ ತೆಗೆಯುವುದು : ಹೆಲಿಕ್ಸ್ ಕೋನವು ಹೆಚ್ಚಾದಂತೆ ಕಟಿಂಗ್ ಎಡ್ಜ್ ನ ಎಂಗೇಜ್ ಮೆಂಟ್ ನ ಉದ್ದವು ಕಡಿಮೆಯಾಗುತ್ತದೆ ಮತ್ತು ಅಕ್ಷೀಯ ಬಲವು ಹೆಚ್ಚುತ್ತದೆ. ಇದರಿಂದಾಗಿ ಚಿಪ್ ಎತ್ತಲ್ಪಟ್ಟು ದೂರಕ್ಕೆ ಹೋಗುತ್ತವೆ ಮತ್ತು ಕಾರ್ಯಕ್ಷಮವಾಗಿ ಹೊರಗೆ ತೆಗೆಯಲ್ಪಡುತ್ತವೆ.
• ಯಂತ್ರಭಾಗಗಳ ಫಿನಿಶ್ ನಲ್ಲಿ ಸುಧಾರಣೆ : ರೇಡಿಯಲ್ ಬಲವು ಕಡಿಮೆ ಇರುವುದರಿಂದ ಉಚ್ಚಮಟ್ಟದ ಹೆಲಿಕ್ಸ್ ಕೋನವಿರುವ ಟೂಲ್ ನ ಶಿಯರಿಂಗ್ ನ ಕ್ರಿಯೆಯು ಒಳ್ಳೆಯದಾಗಿರುತ್ತದೆ. ಇದರಿಂದಾಗಿ ಮಟೀರಿಯಲ್ ಸಹಜವಾಗಿ ತುಂಡು ಮಾಡುವುದು ಸಾಧ್ಯವಾಗುತ್ತದೆ ಮತ್ತು ಸರ್ಫೇಸ್ ಫಿನಿಶ್ ನಲ್ಲಿ ಸುಧಾರಣೆಯಾಗುತ್ತದೆ.
 
ಮಿತಿಗಳು
 
• ದುರ್ಬಲವಾದ ಯಂತ್ರಣೆಯ ಹಲ್ಲುಗಳು : ಹೆಲಿಕ್ಸ್ ಕೋನ ದೊಡ್ಡದಾಗಿದ್ದಲ್ಲಿ ಟೂಲ್ ನ ಹಲ್ಲುಗಳು ತೆಳ್ಳಗೆ ಮತ್ತು ದುರ್ಬಲವಾಗುತ್ತವೆ.
• ಸ್ಥಳಾಂತರದ ಅಪಾಯ : ದೊಡ್ಡ ಹೆಲಿಕ್ಸ್ ಕೋನವಿರುವ ಟೂಲ್ ನ ಚಿಕ್ಕ ಹಲ್ಲುಗಳ ಸ್ಥಳಾಂತರದ ಅಥವಾ ಒತ್ತಡದಿಂದಾಗಿ ಟೂಲ್ ಬಗ್ಗುವಂತಹ ಅಪಾಯವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ದೊಡ್ಡ ಹೆಲಿಕ್ಸ್ ಕೋನವಿರುವ ಟೂಲ್ ಎಷ್ಟು ವೇಗವಾಗಿ ನಡೆಸಲ್ಪಡುತ್ತದೆ ಎಂಬುದಕ್ಕೆ ಮಿತಿ ಇರುತ್ತದೆ.
• ಟೂಲ್ ತುಂಡಾಗುವಲ್ಲಿ ಹೆಚ್ಚಾಗುತ್ತಿರುವ ಅಪಾಯ : ಒಂದು ವೇಳೆ ಸ್ಥಳಾಂತರವು ಯೋಗ್ಯ ರೀತಿಯಲ್ಲಿ ಮಾಡದಿದ್ದಲ್ಲಿ, ಅದರ ಪರಿಣಾಮವು ಗುಣಮಟ್ಟ ಮತ್ತು ಟೂಲ್ ತುಂಡಾಗುವಲ್ಲಿ ಉಂಟಾಗಬಲ್ಲದು.
• ಎಂಡ್ ಮಿಲ್ ನಲ್ಲಿರುವ ಹೆಲಿಕ್ಸ್ ಕೋನವು ಎಂಡ್ ಮಿಲ್ ನ ಎಲ್ಲಕ್ಕಿಂತಲೂ ಮಹತ್ವದ ವೈಶಿಷ್ಟ್ಯವಾಗಿದೆ. ಆದರೆ ಈ ಕುರಿತು ಸಾಕಷ್ಟು ಮಾಹಿತಿ ಇಲ್ಲದಿರುವುದರಿಂದ ಅದರಲ್ಲಿ ಬೇಕಾದಷ್ಟು ಗಮನವನ್ನು ಹರಿಸಲಾಗುವುದಿಲ್ಲ, ಎಂಬ ಅಂಶವು ಇಷ್ಟು ವರ್ಷಗಳ ಅನುಭವದಿಂದಾಗಿ ನನ್ನ ಗಮನಕ್ಕೆ ಬಂತು.
• ಯಂತ್ರಣೆಯನ್ನು ಮಾಡುವಾಗ ಸಂಪರ್ಕದಲ್ಲಿ ಬರುವ ಕಟಿಂಗ್ ಎಡ್ಜ್ ನ ಉದ್ದದಲ್ಲಿ ಹೆಲಿಕ್ಸ್ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ, ಎಂಬುದನ್ನು ನೋಡೋಣ.
 

Significance of helix ang 
 
ಚಿತ್ರ ಕ್ರ. 4

ಲೇಖನದಲ್ಲಿ ಬಳಸಿರುವ ಮೂಲಭೂತ ಸಂಜ್ಞೆಗಳು
 
ap : ಸೀಳಿನ ಅಕ್ಷೀಯ ಆಳ
ae : ಸೀಳಿನ ರೇಡಿಯಲ್ ಆಳ
hx : ಹೆಲಿಕ್ಸ್ ಕೋನ
θ = (90°-hx)
LCE = ಕಟಿಂಗ್ ಎಡ್ಜ್ ನ ಉದ್ದ
Z = ಹಲ್ಲುಗಳ ಸಂಖ್ಯೆ
LCEZ = ಪ್ರತಿ ಹಲ್ಲುಗಳಿಗೆ ಕಟಿಂಗ್ ಎಡ್ಜ್ ನ ಉದ್ದ
ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಎರಡು ಉದಾಹರಣೆಗಳಿಂದ ಕಡಿಮೆ ಹೆಲಿಕ್ಸ್ ಕೋನದಲ್ಲಿ, ಕಟಿಂಗ್ ಎಡ್ಜ್ ನ ಉದ್ದವು ಹೆಚ್ಚುತ್ತದೆ, ಎಂಬುದು ಗಮನಕ್ಕೆ ಬರುತ್ತದೆ. ಒಂದು ವೇಳೆ ಉದಾಹರಣೆ 2 ರಲ್ಲಿರುವ ಕೇಸ್ 1 ರಂತೆಯೇ 31.64 ಮಿ.ಮೀ.ನಷ್ಟು ap ಪಡೆಯುವುದು ಅತ್ಯಗತ್ಯವಾಗಿದೆ.
LCE = ap/sin (60)
LCE = 31.64/ sin (60)
LCE = 36.53 ಮಿ.ಮೀ.
ಇದರಿಂದ ಸಮಾನವಾದ ap ಯಲ್ಲಿ ಹೆಲಿಕ್ಸ್ ಕೋನ ಕಡಿಮೆಯಾದಲ್ಲಿ LCE ಕಡಿಮೆಯಾಗುತ್ತದೆ, ಎಂಬ ಅಂಶವೂ ಗಮನಕ್ಕೆ ಬರುತ್ತದೆ.
ಹೆಲಿಕ್ಸ್ ಕಟಿಂಗ್ ಎಡ್ಜ್ ನ ಉದ್ದದೊಂದಿಗೆ ಸಂಬಂಧವಿದೆ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಆಗ ಎರಡು ಬೇರೆಬೇರೆ ಸ್ಥಿತಿಗಳಲ್ಲಿ (ಶೋಲ್ಡರ್ ಮಿಲ್ಲಿಂಗ್ ಮತ್ತು ಸ್ಲಾಟ್ ಮಿಲ್ಲಿಂಗ್) ಇದರ ಮಹತ್ವವನ್ನು (ಚಿತ್ರ ಕ್ರ. 3) ತಿಳಿದುಕೊಳ್ಳೋಣ.
 
 
redistribution of hx_1&nb
 
ಚಿತ್ರ ಕ್ರ. 5 : hx ನ ಪುನರ್ಗಣನೆ
 
ಸ್ಲಾಟ್ ಮಿಲ್ಲಿಂಗ್
 
ನಾವು 12 ಮಿ.ಮೀ. ವ್ಯಾಸದ ಒಂದು ಯಂತ್ರಭಾಗದಲ್ಲಿ ಸ್ಲಾಟ್ ಮಾಡುತ್ತಿದ್ದೇವೆ ಮತ್ತು ನಮಗೆ 4 ಫ್ಲ್ಯೂಟ್ ಇರುವ ಎಂಡ್ ಮಿಲ್ ಬಳಸಿ 12 ಮಿ.ಮೀ. ನ ಒಂದು ಸ್ಲಾಟ್ ತಯಾರಿಸುವುದಿದೆ, ಎಂಬುದಾಗಿ ತಿಳಿಯಿರಿ. ಈಗ ಕೇಸ್ 1 ರಲ್ಲಿ ನಾವು ತಿಳಿದುಕೊಂಡಂತೆ ಟೂಲ್ ನ ಹೆಲಿಕ್ಸ್ ಕೋನ 50° ಇದೆ ಮತ್ತು LCE 49.22 ಮಿ.ಮೀ. ಇದೆ.
 
 
Significance of helix ang
 
ಚಿತ್ರ ಕ್ರ. 6

ಎರಡನೇ ಫ್ಲ್ಯೂಟ್ ತುಂಡು ಮಾಡಲು ಪ್ರಾರಂಭಿಸುವ ಮುನ್ನ ಪ್ರತಿಯೊಂದು ಫ್ಲ್ಯೂಟ್ ಗೆ ಸಂಬಂಧಪಟ್ಟ ಗರಿಷ್ಠ ap ಅಂದರೆ apz ಇದೆ ಮತ್ತು ಕಟಿಂಗ್ ಎಡ್ಜ್ ನ ಗರಿಷ್ಠ ಉದ್ದವು LCEz ಇರುತ್ತದೆ.
ಈಗ ಸಾಮಾನ್ಯವಾಗಿರುವ ತ್ರಿಕೋನದ ಕೋನವನ್ನು ಬಳಸಿ (ಚಿತ್ರ ಕ್ರ. 4) ಈ ಮುಂದಿನ ಸಮೀಕರಣವನ್ನು ಬಿಡಿಸೋಣ.
 
ಉದಾಹರಣೆ 3
 
ವ್ಯಾಸ (Dc) = 12 ಮಿ.ಮೀ.
ಹೆಲಿಕ್ಸ್ ಕೋನ (ಪಂ) 50°
θ = 40°
apz = tan (40) * π * 12/4 = 7.91 ಮಿ.ಮೀ.
LCEz = apz/ sin (40) = 12.305 ಮಿ.ಮೀ.
ಈ ಸ್ಥಿತಿಯಲ್ಲಿ ಹಲ್ಲುಗಳು ಒಂದರಲ್ಲೊಂದು ಬಿಳುವುದಿಲ್ಲ (ಸೊನ್ನೆ ಓವರ್ ಲ್ಯಾಪ್), ಇದರಿಂದಾಗಿ ಸೂಕ್ಷ್ಮ ರೀತಿಯ ಕಂಪನಗಳು ಸೊನ್ನೆಯಾಗಿವೆ. ಈ ಸ್ಥಿತಿಯಲ್ಲಿ ತುಂಡು ಮಾಡುವಾಗ ಫ್ಲ್ಯೂಟ್ ಓವರ್ ಲ್ಯಾಪ್ ಆಗುತ್ತದೆ. ಇದರಿಂದಾಗಿ ಸೂಕ್ಷ್ಮ ಕಂಪನಗಳ ಉಂಟಾಗುತ್ತವೆ. ಇದನ್ನು ತಡೆಯಲು ನಾವು ಒಂದೋ ಹೆಲಿಕ್ಸ್ ಎಂಗಲ್ (hx) ಅಥವಾ ಟೂಲ್ ನ ವ್ಯಾಸ ಇವುಗಳಲ್ಲಿ ಸುಧಾರಣೆಯನ್ನು ಮಾಡಬಲ್ಲೆವು.
ವ್ಯಾಸ (Dc) = 12 ಮಿ.ಮೀ.
apz = 12 ಮಿ.ಮೀ.
ಹೆಲಿಕ್ಸ್ ಕೋನ (hx) = 50°
Θ = 40°
ಉದಾಹರಣೆ 3 ರಿಂದ hx 50° ಇರುವುದರಿಂದ ಸೊನ್ನೆ ಓವರ್ ಲ್ಯಾಪ್ ಗೋಸ್ಕರ apz 7.91 ಮಿ.ಮೀ. ಇದೆ, ಎಂಬುದು ನಮಗೆ ತಿಳಿದಿದೆ. 12 ಮಿ.ಮೀ. ವ್ಯಾಸ, ಸೊನ್ನೆ ಓವರ್ ಲ್ಯಾಪ್ ಇದ್ದಲ್ಲಿ apz = 12 ಮಿ.ಮೀ. ಗೋಸ್ಕರ, ನಾವು hx ನ ಪುನರ್ಗಣನೆಯನ್ನು (ಚಿತ್ರ ಕ್ರ. 5) ಮಾಡೋಣ.
tan (Ѳ) = apz/(π X D/4) = 1.2727
Ѳ = 51.84°
hx = 38.16°

ಉದಾಹರಣೆ 4
 
ವ್ಯಾಸ (Dc) = 12 ಮಿ.ಮೀ., apz = 6 ಮಿ.ಮೀ.
ಹೆಲಿಕ್ಸ್ ಕೋನ (hx) = 50°
Ѳ = 40°
ಉದಾಹರಣೆ 3 ರಿಂದ hx 50° ಇದ್ದಲ್ಲಿ ಸೊನ್ನೆ ಓವರ್ ಲ್ಯಾಪ್ ಗೋಸ್ಕರ apz 7.91 ಮಿ.ಮೀ. ಇದೆ, ಎಂಬುದು ನಮಗೆ ತಿಳಿದಿದೆ. 12 ಮಿ.ಮೀ. ವ್ಯಾಸ ಮತ್ತು ಸೊನ್ನೆ ಓವರ್ ಲ್ಯಾಪ್ ಇದ್ದಲ್ಲಿ apz = 6 ಮಿ.ಮೀ.ಗೋಸ್ಕರ ನಾವು hx ನ ಪುನರ್ಗಣನೆಯನ್ನು (ಚಿತ್ರ ಕ್ರ. 6) ಮಾಡೋಣ.
tan (Ѳ) = apz/(π * D/4)
tan (Ѳ) = 6/(π * 12/4)
tan (Ѳ) = 0.6364
Ѳ = tan-1(0.6364)
Ѳ = 32.47°
hx = 57.53°
 

Significance of helix ang 

ಒಂದು ವೇಳೆ ಯಂತ್ರಭಾಗಗಳಲ್ಲಿ ID ಆಕಾರದ ಸ್ಲಾಟ್ ಮಾಡುವುದಾದಲ್ಲಿ ಹಲ್ಲುಗಳ ಓವರ್ ಲ್ಯಾಪಿಂಗ್ ನಿಂದಾಗಿ ಉಂಟಾಗುವ ಸೂಕ್ಷ್ಮ ಕಂಪನಗಳನ್ನು ಖಾತರಿಯಾಗಿ ತಡೆಯುವಲ್ಲಿ ಹೆಲಿಕ್ಸ್ ಕೋನ 38.16° ಯಲ್ಲಿ ಅಳವಡಿಸಬೇಕಾಗುತ್ತದೆ.
ಹಲ್ಲುಗಳನ್ನು ಓವರ್ ಲ್ಯಾಪಿಂಗ್ ಮಾಡದೇ ಫ್ಲ್ಯೂಟ್ ಗಳ ಸಂಖ್ಯೆಗಳ ಅನೇಕ ಪರ್ಯಾಯಗಳನ್ನು ಬಳಸಿ ಗರಿಷ್ಠ ಎಷ್ಟು ಆಳದ ತನಕ ಯಂತ್ರಣೆಯನ್ನು ಮಾಡಬಲ್ಲಿರಿ, ಎಂಬುದನ್ನು ಅನೇಕ ಪೂರೈಕೆದಾರರ ಮೂಲಕ ನೀಡಲಾಗಿರುವ ಸ್ಟ್ಯಾಂಡರ್ಡ್ ಹೆಲಿಕ್ಸ್ ಕೋನಗಳ ಕುರಿತು ತೋರಿಸಲಾಗಿದೆ. ಫ್ಲ್ಯೂಟ್ ನ ಸಂಖ್ಯೆಗೆ ಅನುಸಾರವಾಗಿ ಅಂಕೆ-ಸಂಖ್ಯೆಗಳು ಬದಲಾಗುತ್ತವೆ. ಕೋಷ್ಟಕ ಕ್ರ. 1 ರಲ್ಲಿ ತೋರಿಸಿದಂತೆ 3 ಫ್ಲ್ಯೂಟ್ ಗಳಿಗೆ ಫ್ಲ್ಯೂಟ್ ಮತ್ತು ಹೆಲಿಕ್ಸ್ ಕೋನ ಇವುಗಳಲ್ಲಿರುವ ಸಂಬಂಧವನ್ನು ತೋರಿಸಲಾಗಿದೆ.

ಉತ್ಪಾದಕತೆಯಲ್ಲಿ ಮುಂದಿನ ಉಪಾಯಗಳ ಮೂಲಕ ಸುಧಾರಣೆಗಳನ್ನು ಮಾಡಬಲ್ಲಿರಿ.
ಶೋಲ್ಡರ್ ಮಿಲ್ಲಿಂಗ್
 
• ಅಪ್ಪಳಿಸುವಿಕೆಯಿಂದ ನಿರಂತರವಾಗಿ ಉಂಟಾಗುವ ಶಬ್ದದಿಂದಾಗಿ ಹಾರ್ಮೋನಿಕ್ಸ್ ನಿಂದಾಗಿ ಉದ್ಭವಿಸುವ ಕಂಪನಗಳನ್ನು ಕಡಿಮೆ ಮಾಡಲು ವೆರಿಯೇಬಲ್ ಇಂಡೆಕ್ಸ್ ಬಳಸುವುದು.
• ಕಟಿಂಗ್ ಎಡ್ಜ್ ದೃಢಪಡಿಸಲು ಎಡ್ಜ್ ಉರುಟುತನವನ್ನು ನೀಡುವ ಮೌಲ್ಯ (ಎಡ್ಜ್ ರೌಂಡಿಂಗ್ ವ್ಯಾಲ್ಯೂ) ಜೋಡಿಸಬಹುದು.
• ಮಶಿನ್ ನ FRF ನ ಗಣನೆಯನ್ನು ಮಾಡಿ ಸುರಕ್ಷಿತವಾದ ಝೋನ್ ನಲ್ಲಿ ಯಂತ್ರಣೆಯನ್ನು ಮಾಡಿದ್ದರಿಂದ ಕಂಪನಗಳ ಡ್ಯಾಂಪನಿಂಗ್ ಮಾಡಬಹುದು.
 
 
 Shoulder Milling_1 
 
ಚಿತ್ರ ಕ್ರ. 7 : ಶೋಲ್ಡರ್ ಮಿಲ್ಲಿಂಗ್

ಈಗ ನಾವು ಶೋಲ್ಡರ್ ಮಿಲ್ಲಿಂಗ್ (ಚಿತ್ರ ಕ್ರ. 7) ವೀಕ್ಷಿಸಿದಲ್ಲಿ ಮತ್ತು ಸಂಪೂರ್ಣ ಎಡ್ಜ್ ಬಳಸಿ ಪೀಲ್ ಮಿಲ್ಲಿಂಗ್ ಮತ್ತು ಸ್ಲೈಸಿಂಗ್ ಮಾಡುವಾಗ ಹಲ್ಲುಗಳನ್ನು ಓವರ್ ಲ್ಯಾಪ್ ಮಾಡದಿರುವ ಮಹತ್ವವನ್ನು ತಿಳಿದುಕೊಳ್ಳೋಣ. ಇದರಿಂದಾಗಿ ಉಚ್ಚ ಅಕ್ಷೀಯ ಸೀಳಿನೊಂದಿಗೆ ಕಂಪನಗಳು ಸೂಕ್ಷ್ಮವಾಗುತ್ತವೆ.
ಇದು ಟ್ರೈಕೈಡಲ್ ಪಾಥ್ ನಂತೆಯೇ ಇದೆ. ಇದರಲ್ಲಿ ಮುಂದಿನ ಪ್ಯಾರಾಮೀಟರ್/ ಕೆಲಸದ ರೀತಿಯನ್ನು ಬಳಸಲಾಗುತ್ತದೆ.
• ಕಡಿಮೆ ರೇಡಿಯಲ್ ಸೀಳಿನ ಆಳ.
• ಕಟಿಂಗ್ ನ ಹೆಚ್ಚು ಆಳ.
• ಉಚ್ಚಮಟ್ಟದ ಯಂತ್ರಣೆಯ ವೇಗ.
• ಸ್ಪೈರಲ್ ಕಟರ್.
• ಸಾಮಾನ್ಯವಾಗಿ ಸೆಮಿಫಿನಿಶಿಂಗ್ ತೆಗೆದಲ್ಲಿ ಇಂತಹ ರಫಿಂಗ್ ರೀತಿ.
ಕಡಿಮೆ ae% ಬಳಸಿ ಎಂಗೇಜ್ ಮೆಂಟ್ ಕೋನ ಬೀಟಾ (β) ತುಂಬಾ ಚಿಕ್ಕದಾಗಿ ಇಡಬಹುದಾಗಿದೆ. ಇದರಿಂದಾಗಿ ನಾವು ಸ್ಪಿಂಡಲ್ ಗೆ ತೊಂದರೆ ಮಾಡದೇ ಮಿಲ್ಲಿಂಗ್ ನ ಸಮಯದಲ್ಲಿ ಗರಿಷ್ಠ LCE (ಚಿತ್ರ ಕ್ರ. 7) ಬಳಸಬಲ್ಲೆವು. ಈ ಕಾರ್ಯವಸ್ತುವಿನ ಮಟೀರಿಯಲ್ ಮತ್ತು ಟೂಲ್ ಗಳ ಪಿಚ್ ನಲ್ಲಿ ಅವಲಂಬಿಸಿರುತ್ತದೆ.
ಚಿತ್ರ ಕ್ರ. 8 ರಲ್ಲಿ ರೇಡಿಯಲ್ ಎಂಗೇಜ್ ಮೆಂಟ್ (ae/D) ಅನುಪಾತವು 50% ದಿಂದ 10% ನಲ್ಲಿ ತಲುಪುತ್ತದೆ, ಹಾಗೆಯೇ ಎಂಗೇಜ್ ಮೆಂಟ್ ಕೋನ ಕಡಿಮೆಯಾಗುತ್ತದೆ, ಎಂಬುದನ್ನು ವೀಕ್ಷಿಸೋಣ.
 

Significance of helix ang    
ಕೋಷ್ಟಕ ಕ್ರ. 2 ರಲ್ಲಿ ಮಟೀರಿಯಲ್ ನ ವಿವಿಧ ಗುಂಪುಗಳಿಗೆ ಯಂತ್ರಣೆಯನ್ನು ಮಾಡುವಾಗ ಕೆಲಸ ಮಾಡಲು ಸುರಕ್ಷಿತ (ae/D) ಮಿತಿಯನ್ನು ತೋರಿಸಲಾಗಿದೆ.
ಈ ಮುಂದಿನ ಪ್ರಗತಿಯ ರೀತಿಯಲ್ಲಿ ಅಂದರೆ ಸ್ಪಿಂಡಲ್ ನಲ್ಲಿರುವ ಭಾರವನ್ನು ಕಡಿಮೆ ಮಾಡುವುದು ಮತ್ತು ಪಿಚ್ ಮತ್ತು ಹಲ್ಲುಗಳ ಸಂಖ್ಯೆನ್ನು ಆಧರಿಸಿ ಪ್ರತಿಯೊಂದು ಸೀಳಿನಲ್ಲಿ ಎಷ್ಟು ಹಲ್ಲುಗಳು ಇರಬಲ್ಲವು, ಇವುಗಳ ಲೆಕ್ಕಾಚಾರವನ್ನು ಮಾಡುವುದು.
ಕೋಷ್ಟಕ ಕ್ರ. 3 ರಲ್ಲಿ ಸಂಪರ್ಕವನ್ನು ಹೊಂದಿರುವ ಹಲ್ಲುಗಳ ಸಂಖ್ಯೆ ಮತ್ತು ಪಿಚ್ ಗೆ ಸಂಬಂಧಪಟ್ಟ 4/5/6/7 ಫ್ಲ್ಯೂಟ್ ನ ಎಂಡ್ ಮಿಲ್ ನ ವಿವಿಧ ಪರ್ಯಾಯಗಳಿಗೆ ಎಂಗೇಜ್ ಮೆಂಟ್ ಕೋನಗಳ ರೇಂಜ್ ತೋರಿಸಲಾಗಿದೆ.
ಈ ಮಾಹಿತಿಯು ಲಭ್ಯವಾದ ನಂತರ ಕನಿಷ್ಠ 1 ಹಲ್ಲು ಸಂಪರ್ಕದಲ್ಲಿದೆ ಮತ್ತು ಸ್ಪಿಂಡಲ್ ಲೋಡ್ ಕನಿಷ್ಠ ಪ್ರಮಾಣದಲ್ಲಿದೆ, ಇದನ್ನು ಖಾತರಿ ಮಾಡಲು (ae/D) ಅನುಪಾತವನ್ನು ಸರಿಹೊಂದಾಣಿಸಿ ನೋಡಬಹುದು.
ಮೇಲಿನ ಮಾಹಿತಿಯ ಮೂಲಕ ಮಿಲ್ಲಿಂಗ್ ನಲ್ಲಿರುವ ಹೆಲಿಕ್ಸ್ ಕೋನದ ಮಹತ್ವವು ಸ್ಪಷ್ಟವಾದಲ್ಲಿ ಮತ್ತು ಕಾರ್ಖಾನೆಯಲ್ಲಿರುವ ಬಳಕೆಗಾರರಿಗೆ ಅದು ಸಹಾಯಕವಾಗಬಲ್ಲದು ಎಂಬುದನ್ನು ಅಪೇಕ್ಷಿಸಲಾಗಿದೆ.
 

Significance of helix ang 
 
ಚಿತ್ರ ಕ್ರ. 8 : ರೇಡಿಯಲ್ ಎಂಗೇಜ್ ಮೆಂಟ್ ಅನುಪಾತದ ಎಂಗೇಜ್ ಮೆಂಟ್ ಕೋನದಲ್ಲಿರುವ ಪರಿಣಾಮ

8879091256
ಪ್ರೀತಮ್ ಆರ್ಯನ್ ವೇತಿಲ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರಿಗೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸುದೀರ್ಘ ಅನುಭವವಿದೆ. ಸದ್ಯಕ್ಕೆ ಅವರು ‘ರೋಜ್ ಪ್ಲಾಸ್ಟಿಕ್ ಇಂಡಿಯಾ ಪ್ರೈ.ಲಿ.’ ಈ ಕಂಪನಿಯಲ್ಲಿ ಸೇಲ್ಸ್ ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
@@AUTHORINFO_V1@@