4 ಅಕ್ಷೀಯ ಸಿ.ಎನ್.ಸಿ. ಟೂಲ್ ಗ್ರೈಂಡಿಂಗ್ ಮಶಿನ್

@@NEWS_SUBHEADLINE_BLOCK@@

Lohkarya - Udyam Prakashan    06-Jan-2021   
Total Views |
ಕಟಿಂಗ್ ಟೂಲ್ ಗಳಿಗೆ ಸಿ.ಎನ್.ಸಿ. ರೀಗ್ರೈಂಡಿಂಗ್ ಮಾಡುವಂತಹ ಕೆಲವು ಕಂಪನಿಗಳು ಮತ್ತು ಟೂಲ್ ಗಳನ್ನು ಬಳಸುವವರ ಏಕಸ್ವಾಮ್ಯತ್ವವು (ಮೊನೋಪೊಲಿ) ಯಾವಾಗಲೂ ಕಂಡುಬರುತ್ತದೆ. ಕಾರಣ ಇಂತಹ ಕೆಲಸಗಳಿಗೋಸ್ಕರ ದೊಡ್ಡ ಬಂಡವಾಳವನ್ನು ಹೂಡುವುದು ಅವರಿಗೆ ಸಾಧ್ಯವಿದ್ದು, ಅವರ ದೃಷ್ಟಿಯಲ್ಲಿ ಅದು ಸರಿಯಾದ ಅಂಶವಾಗಿದೆ. ತಮ್ಮಲ್ಲಿರುವ ಕಟಿಂಗ್ ಟೂಲ್ ಗಳಿಗೆ ಸುಲಭವಾಗಿ, ಅಗ್ಗದಲ್ಲಿ ಮತ್ತು ನಿರ್ದೋಷವಾಗಿ ತಾವೇ ಚೂಪುತನವನ್ನು ಮಾಡಲು ತಾವೇ ಸಿದ್ಧಿರಾಗಿರುವ ಎಲ್ಲ ಕಂಪನಿಗಳಿಗೋಸ್ಕರ ಮ್ಯಾಕ್ 26 ಇಂತಹ 4 ಅಕ್ಷೀಯ ಸಿ.ಎನ್.ಸಿ. ಟೂಲ್ ಗ್ರೈಂಡಿಂಗ್ ಮಶಿನ್ ತಯಾರಿಸಲಾಗಿದೆ. ಮ್ಯಾಕ್ 26 ಈ ಮಶಿನ್ ನಲ್ಲಿ ಟೂಲ್ ಗಳಿಗೆ ಚೂಪುತನವನ್ನು ಮಾಡಲು ಕುಶಲ ಮಾನವ ಸಂಪನ್ಮೂಲಗಳ ಅಥವಾ ವಿಶೇಷವಾದ ಜ್ಞಾನದ ಆವಶ್ಯಕತೆ ಇಲ್ಲ. ಈ ಮಶಿನ್ ನಲ್ಲಿ ಪ್ರೊಗ್ರಾಮಿಂಗ್ ಸಾಫ್ಟ್ ವೇರ್ ನ ಸೂಚನೆಗಳಿಗೆ ಅನುಸಾರವಾಗಿ ಒಂದು ನಿರ್ದೋಷವಾದ ಇಲೆಕ್ಟ್ರಾನಿಕ್ ಪ್ರೋಬ್ ಮೂಲಕ, ಚೂಪು ಮಾಡಬೇಕಾದ ಟೂಲ್ ಗಳನ್ನು ಸ್ವಯಂಚಾಲಿತವಾಗಿ ಸೂಕ್ತ ಜಾಗದಲ್ಲಿ ಇಡಲಾಗುತ್ತವೆ. HSS ಮತ್ತು ಕಾರ್ಬೈಡ್ ಎರಡೂ ಲೋಹಗಳಲ್ಲಿ ಟ್ವಿಸ್ಟ್ ಡ್ರಿಲ್, ಎಂಡ್ ಮಿಲ್, ಟ್ಯಾಪ್, ರೀಮರ್ ಕೌಂಟರ್ ಸಿಂಕ್ ಇವುಗಳ ರೀಗ್ರೈಂಡಿಂಗ್ ಗೆ ಪ್ರತಿಯೊಂದು ಟೂಲ್ ಪ್ರೊಗ್ರಾಮ್ ಒಂದೇ ವಿಶಿಷ್ಟವಾದ ಲೈಬ್ರೆರಿಯಲ್ಲಿ ಒಟ್ಟು ಮಾಡಿ ಇಡಬಹುದು ಮತ್ತು ಬೇಕಾದಾಗ ಶಾರ್ಪ್ ಮಾಡುವ ಮುಂದಿನ ಸೈಕಲ್ ಗೆ ಪ್ರೊಗ್ರಾಮ್ ಮಶಿನ್ ನಲ್ಲಿ ನಡೆಸಬಹುದು.

1_1  H x W: 0 x 
3D ಗ್ರಾಫಿಕ್ ಇಂಟರ್ ಫೇಸ್ ನೊಂದಿಗೆ ಪ್ಯಾರಾಮೆಟ್ರಿಕ್ ಟೂಲ್ ಪ್ರೊಗ್ರಾಮಿಂಗ್ ಸಾಫ್ಟ್ ವೇರ್
ಮೊನಚುತನವನ್ನು ಮಾಡುವ (ಶಾರ್ಪ್ ನೆಸ್) ಪ್ಯಾರಾಮೀಟರ್, ಟೂಲ್ ಜಾಮೆಟ್ರಿಯ ಆಧಾರದಲ್ಲಿ ಸಹಜವಾಗಿ ಒಟ್ಟು ಮಾಡಬಹುದು. ಪ್ಯಾರಾಮೆಟ್ರಿಕ್ ಪ್ರೊಗ್ರಾಮಿಂಗ್ ಸಾಫ್ಟ್ ವೇರ್ ಪೂರ್ವ ನಿರ್ಧಾರಿತ ಪಟ್ಟಿ ಮತ್ತು ರೂಪ ಇವೆಲ್ಲವನ್ನೂ ಹೊಂದಿಸಿ ನಡೆಯುವಂತಹ (ಮೆನ್ಯೂ ಡ್ರಿವನ್ ಮತ್ತು ಇಮೇಜ್ ಇಂಟರಾಕ್ಷನ್) ಸಾಫ್ಟ್ ವೇರ್. ಯಾವುದೇ ಸಾಮಾನ್ಯ ಆಪರೇಟರ್ ಈ ಸಾಫ್ಟ್ ವೇರ್ ಸಹಜವಾಗಿ ಬಳಸಬಲ್ಲನು. ಇದರಲ್ಲಿ ಪ್ರೆಸೆಂಟೇಶನ್ ವಿಂಡೋ ತೆರೆದ ನಂತರ ಕೆಲಸಕ್ಕೆ ಅನೇಕ ಟೂಲ್ ಗಳು ಕಾಣುತ್ತವೆ. ಸೂಕ್ತವಾದ ಪರ್ಯಾಯವನ್ನು ಆಯ್ಕೆ ಮಾಡಿದ ನಂತರ ಎಷ್ಟು ಮಟೀರಿಯಲ್ ತೆಗೆಯಬೇಕು, ಎಂಬುದು ಆಪರೇಟರ್ ಗೆ ತಿಳಿಯುತ್ತದೆ. 4 ಅಕ್ಷೀಯ ಸಿ.ಎನ್.ಸಿ. ಟೂಲ್ ಗ್ರೈಂಡಿಂಗ್ ಮಶಿನ್ ನ ಕೆಲಸವನ್ನು ವೀಕ್ಷಿಸಲು ಪಕ್ಕದಲ್ಲಿ ನೀಡಿರುವ QR ಕೋಡು ಮೊಬೈಲ್ ನಿಂದ ಸ್ಕಾನ್ ಮಾಡಿರಿ.

2_1  H x W: 0 x 
 
ಮಶಿನ್ ಜೊತೆಗೆ ನೀಡಲಾಗುವ ಉಪಸಾಧನಗಳು
  • 3 ಮಿ.ಮೀ.ನಿಂದ 26 ಮಿ.ಮೀ. ವ್ಯಾಸದ ತನಕ ಮೊನಚು ಮಾಡಲು ಕಾಲೆಟ್ ಹೋಲ್ಡರ್ ಸ್ಪಿಂಡಲ್ ಮತ್ತು ಪ್ರಿಸಿಶನ್ ಕಾಲೆಟ್.
  • ಕಾರ್ಬೈಡ್ ಡ್ರಿಲ್ ಮೊನಚು ಮಾಡಲು ಡೈಮಂಡ್ ಗ್ರೈಂಡಿಂಗ್ ವೀಲ್.
  • ಕಾರ್ಬೈಡ್ ಎಂಡ್ ಮಿಲ್ ಮೊನಚು ಮಾಡಲು ಡೈಮಂಡ್ ಗ್ರೈಂಡಿಂಗ್ ವೀಲ್.
  • ಕಾರ್ಬೈಡ್ ಎಂಡ್ ಮಿಲ್ ಶ್ಯಾಂಕ್ ಗ್ರೈಂಡಿಂಗ್ ಮತ್ತು ಹೊರ ವ್ಯಾಸ (O.D.) ಗ್ರೈಂಡಿಂಗ್ ಇವುಗಳಿಗೆ ಡೈಮಂಡ್ ಗ್ರೈಂಡಿಂಗ್ ವೀಲ್.
ಲಭ್ಯವಿರುವ ಸಾಫ್ಟ್ ವೇರ್ ನಲ್ಲಿ ಮಾಡಬಹುದಾದ ಕೆಲಸಗಳು
•HSS ಕಾರ್ಬೈಡ್ ಟ್ವಿಸ್ಟ್ ಡ್ರಿಲ್ ಗಳನ್ನು ಮೊನಚು ಮಾಡುವುದು.
•2, 3, 4 ಫ್ಲ್ಯೂಟ್ ಗಳಿರುವ HSS ಮತ್ತು ಕಾರ್ಬೈಡ್ ಸ್ಕ್ವೇರ್ ಎಂಡ್ ಮಿಲ್ ಮೊನಚು ಮಾಡುವುದು.
•ಟ್ಯಾಪ್ ಮೊನಚು ಮಾಡುವುದು. (ಕೇವಲ ಚ್ಯಾಂಫರ್) ಕೌಂಟರ್ ಸಿಂಕ್ ಮೊನಚು ಮಾಡುವುದು.
•ರೀಮರ್ ಮೊನಚು ಮಾಡುವುದು (ಕೇವಲ ಚ್ಯಾಂಫರ್)
•ಎನ್ ಗ್ರೆವಿಂಗ್ ಟೂಲ್ ಮೊನಚು ಮಾಡುವುದು ಮತ್ತು ಅದರ ಉತ್ಪಾದನೆ
•ಎಂಡ್ ಮಿಲ್ ನ ಶ್ಯಾಂಕ್ ನ ಗ್ರೈಂಡಿಂಗ್ ಮತ್ತು ಹೊರ ವ್ಯಾಸದ ಗ್ರೈಂಡಿಂಗ್
ಮಶಿನ್ ನ ವೈಶಿಷ್ಟ್ಯಗಳು
•ಟೂಲ್ ನ ವ್ಯಾಸ : 3 ರಿಂದ 26 ಮಿ.ಮೀ.
•ಟೂಲ್ ಗಳ ಉದ್ದ : 35 ರಿಂದ 200 ಮಿ.ಮೀ.
•ಗ್ರೈಂಡಿಂಗ್ ವೀಲ್ ಮೋಟರ್ ಪವರ್ : 1Hp
•ಗ್ರೈಂಡಿಂಗ್ ವೀಲ್ ಮೋಟರ್ ನ ವೇಗ : 4200 ಆರ್.ಪಿ.ಎಮ್.
•ಸ್ಕ್ರೂ ಮತ್ತು ನಿರ್ದೋಷವಾದ ಗೈಡ್ ನೊಂದಿಗೆ ಸ್ಟೆಪ್ ಮೋಟರ್
•X ಅಕ್ಷದ ಚಟುವಟಿಕೆ : 300 ಮಿ.ಮೀ.
•Y ಅಕ್ಷದ ಚಟುವಟಿಕೆ : 130 ಮಿ.ಮೀ.
•C ಅಕ್ಷದ ಚಟುವಟಿಕೆ : -5˚ ಯಿಂದ 180˚
•A ಅಕ್ಷದ ಚಟುವಟಿಕೆ : ∞
•ರನ್ ಔಟ್ ನ ತಪಾಸಣೆಯೊಂದಿಗೆ ಟೂಲ್ ಹುಡುಕುವುದು ಮತ್ತು ಸ್ವಯಂಚಾಲಿತವಾಗಿ ಸ್ಥಾನವನ್ನು ನಿರ್ಧರಿಸಲು ಇಲೆಕ್ಟ್ರಾನಿಕ್ ಪ್ರೋಬ್

3_1  H x W: 0 x 
 
•15’’ ಕಲರ್ಡ್ ಡಿಸ್ಪ್ಲೇ ಇರುವ ಕಂಪ್ಯೂಟರ್
•ಟೂಲ್ ಲೋಡಿಂಗ್/ ಅನ್ ಲೋಡಿಂಗ್ ನ ಕೆಲಸಕ್ಕೋಸ್ಕರ ಡೋರ್ ಲಾಕ್ ನೊಂದಿಗೆ ಲೆಕ್ಸನ್ ಗಾಜಿನ ಮತ್ತು ಸರಿಯುವ ಬಾಗಿಲು ಇರುವ ಆಯಿಲ್ ನ ಸೋರುವಿಕೆ ರಹಿತವಾದ ಕೇಸಿಂಗ್.
•ಒಳಗೆ ದೀಪ
•3 ಬಣ್ಣಗಳಿರುವ ಸಿಗ್ನಲಿಂಗ್ ದೀಪ
•ಭಾರ 300 ಕಿ.ಗ್ರಾಂ.
•ಸ್ಟ್ಯಾಂಡರ್ಡ್ 900 x 900 x 1560 ಮಿ.ಮೀ.
ಲಾಭಗಳು
•ಟೂಲ್ ಸೆಟಪ್ ನ ಸಾಫ್ಟ್ ವೇರ್ ಬಳಸಲು ಸುಲಭ.
•ರೀಗ್ರೈಂಡಿಂಗ್ ಗೋಸ್ಕರ ಟೂಲ್ ಸೆಟಪ್ ಮಾಡಲು ಡಬಲ್ ಪ್ರೋಬ್.
ಕೇಸ್ ಸ್ಟಡಿ
ಮುಂಬಯಿಯಲ್ಲಿರುವ ಕಂಪನಿಯೊಂದರಲ್ಲಿ ಈ ಹಿಂದೆ ಕಾರ್ಬೈಡ್ ಟೂಲ್ ಗಳ ರೀಶಾರ್ಪನಿಂಗ್ ಮ್ಯಾನ್ಯುಯಲಿ ಮಾಡಲಾಗುತ್ತಿತ್ತು. ಆದರೆ, ಲಕ್ಷ್ಮೀ ಇಲೆಕ್ಟ್ರೋ ಕಂಟ್ರೋಲ್ಸ್ ಕಂಪನಿಯ 4 ಅಕ್ಷಗಳಿರುವ ಮ್ಯಾಕ್ 26 ಸಿ.ಎನ್.ಸಿ. ಮಶಿನ್ ಖರೀದಿಸಿದ ನಂತರ ಈ ಕೆಲಸವು ಸ್ವಯಂಚಾಲಿತವಾಗಿ ಆಗಲಾರಂಭಿಸಿತು. ಮ್ಯಾನ್ಯುವಲ್ ಮಶಿನ್ ನಲ್ಲಿ ಕೆಲಸ ನಿರ್ವಹಿಸಲು 20 ನಿಮಿಷಗಳ ಕಾಲಾವಧಿಯು ಬೇಕಾಗುತ್ತಿತ್ತು, ಆದರೆ ಈಗ ಈ ಕೆಲಸವು 5 ನಿಮಿಷಗಳಲ್ಲಿಯೇ ಆಗುತ್ತದೆ. ಇದರಿಂದಾಗಿ ಕೆಲಸದಲ್ಲಿ ಸುಮಾರು 75% ಸಮಯದ ಉಳಿತಾಯವಾಯಿತು. ಮಶಿನ್ ನಲ್ಲಿರುವ ಪ್ಯಾರಾಮೆಟ್ರಿಕ್ ಟೂಲ್ ಸಾಫ್ಟ್ ವೇರ್ ನಲ್ಲಿ ಟೂಲ್ ನ ಜಾಮೆಟ್ರಿಕಲ್ ಮೌಲ್ಯಗಳು ಸೇರಿಸಿದರಿಂದ ಟೂಲ್ ಗಳ ಪ್ರೊಫೈಲ್ ಮತ್ತು ಜಾಮೆಟ್ರಿ ನಿರ್ದೋಷವಾಗಿ ಲಭಿಸುತ್ತದೆ. ಇದರಿಂದಾಗಿ ಎಲ್ಲ ಟೂಲ್ ಗಳ ಎಲ್ಲ ಸೆಟಿಂಗ್ ಒಂದೇ ಮಶಿನ್ ನಲ್ಲಿ ಆಗಲಾರಂಭಿಸಿದವು. ಇದರಿಂದಾಗಿ ಸಮಯ ಮತ್ತು ಖರ್ಚು ಕಡಿಮೆ ಆಗಿ ಎರಡರಲ್ಲಿಯೂ ಉಳಿತಾಯವಾಯಿತು.
@@AUTHORINFO_V1@@