ಏರ್ ಇಲೆಕ್ಟ್ರಾನಿಕ್ ಗೇಜಿಂಗ್ ಮತ್ತು ಆನ್ ಲೈನ್ SPC

@@NEWS_SUBHEADLINE_BLOCK@@

Lohkarya - Udyam Prakashan    04-Jan-2021   
Total Views |
Air Electronic Gaging and Online SPC
Air Electronic Gaging and Online SPC 
ಪ್ರಿಸಿಜನ್ ವಸ್ತುಗಳ ತಯಾರಿಕೆಗೆ ನಿರ್ದೋಷವಾದ ಮಾಪನ ಮತ್ತು ಸೂಕ್ಷ್ಮವಾದ ತಪಾಸಣೆಯು ಅತ್ಯಾವಶ್ಯವಾಗಿದೆ. ತಪಾಸಣೆ ಎಷ್ಟು ಆವಶ್ಯಕವಿದ್ದರೂ ಕೂಡಾ ಅದು ನಿಜವಾಗಿಯೂ ಮೌಲ್ಯವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿರುವುದಿಲ್ಲ. ತಪಾಸಣೆಗೆ ಖರ್ಚು ಮಾಡಿರುವ ಸಮಯ ಮತ್ತು ಬೆಲೆ ಇವುಗಳ ಮೂಲ್ಯಮಾಪನ, ಅದರಿಂದ ಸಿಗುವ ಫಲಿತಾಂಶ ಅಂದರೆ ಉತ್ಪಾದನೆಯಲ್ಲಿ ಯಾವುದೇ ಹಾಳಾಗಿರುವ ಯಂತ್ರಭಾಗ ಅಥವಾ ಅಸೆಂಬ್ಲಿಯನ್ನು ಯಶಸ್ವಿಯಾಗಿ ಹುಡುಕುವುದರಿಂದ ಪ್ರಾರಂಭಿಸುವುದೂ ಅಗತ್ಯವಾಗಿದೆ.
 
ಪ್ರಕ್ರಿಯೆಯ ಸಾಮರ್ಥ್ಯವು (Cpk) ಉತ್ಪಾದನೆಯ ಹೆಚ್ಚಿನ ಫೀಚರ್ ಗಳಿಗೆ ಆಧರಿಸಿರಬೇಕು. ಈ ಅಂಶವನ್ನು ಅನುಸರಿಸಿವುದು, ಉತ್ಪಾದನೆಯ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆದ ಮತ್ತು ಸ್ಟ್ಯಾಂಡರ್ಡ್ ರೂಢಿಯಾಗಿದೆ. ಒಮ್ಮೆ ಪ್ರಕ್ರಿಯೆಯ ಸಾಮರ್ಥ್ಯವು ಸ್ಥಿರವಾದಲ್ಲಿ ನಾವು ಶೇಕಡಾ 100 ತಪಾಸಣೆಯ ಹೊರತಾಗಿ ಮಾದರಿ ತಪಾಸಣೆಯನ್ನು ಮಾಡುವ ನಿರ್ಧಾರವನ್ನು ಮಾಡಬಲ್ಲೆವು ಮತ್ತು ತಪಾಸಣೆಯ ಖರ್ಚುನ್ನು ಕೂಡಾ ಕಡಿಮೆ ಮಾಡಬಲ್ಲೆವು.
ಆದರೆ ಎಲ್ಲಿ 1.33/1.67 ಅಥವಾ ಅದಕ್ಕಿಂತ ಹೆಚ್ಚು Cpk ಸ್ಥಿರ ಪಡಿಸುವುದು ಕಠಿಣವಾಗಿರುತ್ತದೆಯೋ, ಇಂತಹ ವೈಶಿಷ್ಟ್ಯಗಳ ಕುರಿತು ಏನು ಮಾಡಬೇಕು? ಅಥವಾ ಯಾವ ಪ್ರಕ್ರಿಯೆಯಲ್ಲಿ ಉತ್ಪಾದನೆಯ ಪ್ರತಿಯೊಂದು ಸೈಕಲ್ (ಗ್ರೈಂಡಿಂಗ್ ನಂತೆ) ಟೂಲಿಂಗ್ ನಲ್ಲಿ ಮಾಪನ ಮಾಡಬಹುದಾದಂತಹ ಬೆಲೆಯಲ್ಲಿ ಸವೆತವಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಇಂತಹ ಪ್ರಕ್ರಿಯೆಯಲ್ಲಿ ಶೇಕಡಾ 100 ತಪಾಸಣೆಯ ಮಾಡಲೇಬೇಕಾಗುತ್ತದೆ. ಅನೇಕ ಬಾರಿ ಪ್ರಿಸಿಶನ್ ಬೋರ್ ಇರುವ ಯಂತ್ರಭಾಗಗಳು ಮತ್ತು ರಾಡ್ ನಲ್ಲಿ ಇದು ಕಂಡುಬರುತ್ತದೆ.
 
Air Electronic Gaging and Online SPC
 
ಪಾರಂಪರಿಕ ರೀತಿಯಲ್ಲಿ ಬೋರ್ ಗೇಜ್, ಮೈಕ್ರೋಮೀಟರ್ (2 ಅಥವಾ 3 ಪಾಯಿಂಟ್ ಉಳ್ಳದ್ದು) ಮತ್ತು ಕೈಯಿಂದ ಬಳಸಲಾಗುವಂತಹ ಪ್ರಸಿಶನ್ ಗೇಜಿಂಗ್ ಗೆ ಸರಿಸಮಾನವಾದ ಉಪಕರಣಗಳನ್ನು ಬಳಸಿ ಮಾದರಿಗಳನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ಕಳೆದ ಅನೇಕ ವರ್ಷಗಳಿಂದ ಏರ್ ಗೇಜಿಂಗ್ ಕೂಡಾ ನಿಧಾನವಾಗಿ, ಆದರೆ ನಿಶ್ಟಿತವಾಗಿಯೂ ಒಂದು ವ್ಯಾವಹಾರಿಕವಾದ ಪರ್ಯಾಯವೆಂದು ಬಳಸಲಾಗುತ್ತಿದೆ. ಇದರಲ್ಲಿ ಮಾಪನದ ಸೈಕಲ್ ತುಂಬಾ ವೇಗವಾದದ್ದು ಮತ್ತು ಮಾಪನವು ತುಂಬಾ ನಿಖರ ಮತ್ತು ರಿಪಿಟ್ಯಾಬಿಲಿಟಿ ಉಳ್ಳದ್ದು ಆಗಿರುವುದರಿಂದ ಶೇಕಡಾ 100 ತಪಾಸಣೆಯನ್ನು ಸಹಜವಾಗಿ ಮಾಡಬಹುದಾಗಿದೆ. ಸ್ಟ್ಯಾಂಡರ್ಡ್ ಏರ್ ಗೇಜಿಂಗ್ ಉತ್ಪಾದಕರು 10 ಮೈಕ್ರಾನ್ ಗಳಿಗಿಂತಲೂ ಕಡಿಮೆ ಮಟ್ಟದ ನಿಖರತೆಯನ್ನು ನೀಡಬಲ್ಲರು.
 
ಯಾರೊಬ್ಬರಿಗೆ ಇದಕ್ಕಿಂತಲೂ ಮುಂದೆ ಹೋಗುವ ಇಚ್ಛೆ ಇದ್ದಲ್ಲಿ ಅವರು ಸುಮಾರು 70 ವರ್ಷಗಳ ಕಾಲಾವಧಿಯಲ್ಲಿ ಮುಂಚೂಣಿಯಲ್ಲಿದ್ದ ಸ್ಟೋಲ್ಜ್ (ಜರ್ಮನಿ) ಇವರಂತಹ ವೈಶಿಷ್ಟ್ಯಗಳುಳ್ಳ ಏರ್ ಇಲೆಕ್ಟ್ರಾನಿಕ್ ಗೇಜಿಂಗ್ ಉತ್ಪಾದಕರ ಕುರಿತು ವಿಚಾರ ಮಾಡಬೇಕು. ಎಲ್ಲಕ್ಕಿಂತಲೂ ಪ್ರಗತಿಪರ ಏರ್ ಗೇಜಿಂಗ್ ತಂತ್ರಜ್ಞಾನವು ವಿಶಿಷ್ಟ ಪರಿಸ್ಥಿತಿಯಲ್ಲಿ 0.05µm ನಷ್ಟು ಪ್ರಣಾಳಿಕೆಯ ರಿಪಿಟ್ಯಾಬಿಲಿಟಿಯ ಸಾಮರ್ಥ್ಯವನ್ನು ನೀಡಬಲ್ಲದು. ಹೆಚ್ಚಾಗಿ ಸ್ಟ್ಯಾಂಡರ್ಡ್ ಕ್ಷೇತ್ರದಲ್ಲಿ ಸ್ಟೋತ್ಝ್ 0.2 ರಿಂದ 1.2 µm ನಷ್ಟು ರಿಪಿಟ್ಯಾಬಿಲಿಟಿಯ ಸಾಮರ್ಥ್ಯವಿರುವ ಪ್ರಣಾಳಿಕೆಯನ್ನು ತಯಾರಿಸುತ್ತದೆ. ಇದರಿಂದಾಗಿ ಅನೇಕ ಮಾಪನಗಳನ್ನು ಸಾಮಾನ್ಯವಾಗಿ ಕೇವಲ ಕೆಲವೇ ಸೆಕಂಡುಗಳಲ್ಲಿ ಮಾಡಬಹುದಾಗಿದ್ದರಿಂದ ಒಂದು ತುಂಬಾ ವೇಗವುಳ್ಳ ಮತ್ತು ನಿರ್ದೋಷವಾದ ಮಾಪನ ಪ್ರಣಾಳಿಕೆಯು ನಮ್ಮ ಕೈಸೇರಿತು, ಎಂದು ತಿಳಿಯಬಹುದು.
 
ವರ್ಕಿಂಗ್ ಪ್ರಿನ್ಸಿಪಲ್

 Air Electronic Gaging and Online SPC 
ನಮಗೋಸ್ಕರ ಏರ್ ಗೇಜಿಂಗ್ ಇದೊಂದು ಹೊಸದಾದ ವಿಚಾರವಾಗಿದೆಯೇ? ಇದರಲ್ಲಿ ಅಡಗಿರುವ ತತ್ವವು ತುಂಬಾ ಸುಲಭವಾಗಿದೆ. ಇದರಲ್ಲಿ ಮಾಹಿತಿ ಇರುವ ಒತ್ತಡದ ಒಂದು ನಿಯಂತ್ರಿತ ಒತ್ತಡದಿಂದ ಕೂಡಿರುವ ಗಾಳಿಯನ್ನು (ಕಾಂಪ್ರೆಸ್ಡ್ ಏರ್ ಜೆಟ್) ಚಿಕ್ಕ ರಂಧ್ರಗಳಿಂದ ಕಳುಹಿಸಲಾಗುತ್ತದೆ. ಅದು ಮುಂದೆ ಹೋಗಿ ಕಾರ್ಯವಸ್ತುವಿನ ಸರ್ಫೇಸ್ ನಲ್ಲಿ ಅಪ್ಪಳಿಸುತ್ತದೆ. ಮಾಪನದ ಪ್ರಣಾಳಿಕೆಯ ರಚನೆಯಲ್ಲಿ ಕಾರ್ಯವಸ್ತುವಿನ ಸರ್ಫೇಸ್ ಮತ್ತು ನೋಜಲ್ ಇವೆರಡರಲ್ಲಿರುವ ದೂರ ತುಂಬಾ ಕಡಿಮೆ ಅಳವಡಿಸಲಾಗಿರುತ್ತದೆ. ಗಾಳಿಯ ಜೆಟ್ ಯಾವಾಗ ಕಾರ್ಯವಸ್ತುವಿನಲ್ಲಿ ಅಪ್ಪಳಿಸಿ ಗಾಳಿಯು ತಿರುಗಿ ಬರುವಾಗ ಅದರ ಪ್ರವಾಹ ಮತ್ತು ಒತ್ತಡ ಇವುಗಳಿಂದ ಉಂಟಾಗುವ ಪರಿಣಾಮಗಳ ಗುಣಧರ್ಮಗಳ ಮಾಪನವನ್ನು ಮಾಡಲಾಗುತ್ತದೆ. ಕಾರ್ಯವಸ್ತು ಮತ್ತು ನೋಜಲ್ ಇವುಗಳಲ್ಲಿರುವ ಪ್ರತ್ಯಕ್ಷವಾದ ದೂರ ಮತ್ತು ಈ ಗುಣಧರ್ಮ ಇವುಗಳಲ್ಲಿ ಒಂದು ದೃಢವಾಗಿರುವ ಪರಸ್ಪರ ಸಂಬಂಧವು ಇರುತ್ತದೆ. ಅದರ ಉಪಯೋಗವು ಕಾರ್ಯವಸ್ತುಗಳ ಡೈಮೆನ್ಶನ್ ಗಳ (ಪರಿಮಾಣ) ಮಾಪನವನ್ನು ಮಾಡಲು ಮಾಡಬಹುದಾಗಿದೆ. ಈ ತತ್ವದಲ್ಲಿ ಅಡಗಿರುವ ವಿಚಾರವನ್ನು ಚಿತ್ರ ಕ್ರ. 1 ರಲ್ಲಿ ತೋರಿಸಲಾಗಿದೆ.
ಪ್ರಣಾಳಿಕೆಯ ಪ್ರತಿಕ್ರಿಯೆಯನ್ನು ನಿರ್ಧರಿಸಲು ನೋಜಲ್ ನ ವ್ಯಾಸ ಹಾಗೆಯೇ ಪ್ಲಗ್ ಅಥವಾ ರಿಂಗ್ ಮತ್ತು ಕಾರ್ಯವಸ್ತು ಇವುಗಳಲ್ಲಿರುವ ಕ್ಲಿಯರನ್ಸ್ ಇವೆರಡೂ ಮಹತ್ವದ್ದಾಗಿವೆ. ಪ್ರಣಾಳಿಕೆಯ ಇನ್ ಪುಟ್ (ಅಂದರೆ ಬಿಟ್ಟಿರುವ ಗಾಳಿಯ ಒತ್ತಡ, ನೋಜಲ್ ನ ವ್ಯಾಸ), ಪ್ರಣಾಳಿಕೆಯ ವೆರಿಯೇಬಲ್ (ಅಂದರೆ ಕಾರ್ಯವಸ್ತುವಿನ ಅಳತೆ ಮಾಡಲಾಗುವ ಪರಿಮಾಣಗಳು) ಮತ್ತು ಪ್ರಣಾಳಿಕೆಯ ಔಟ್ ಪುಟ್ ಅಂದರೆ ಬ್ಯಾಕ್ ಪ್ರೆಶರ್ ಮೌಲ್ಯ ಇವುಗಳಲ್ಲಿ ಇಂಜಿನಿಯರಿಂಗ್ ಸಂಬಂಧವನ್ನು ತೋರಿಸುವ ಗ್ರಾಫ್ ಸ್ಥಾಪಿಸಲು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವವರು ಅನೇಕ ವಿಧದ ನಿರೀಕ್ಷಣೆಯನ್ನು ತುಂಬಾ ಕಾಲದಿಂದ ಮಾಡಿದ್ದಾರೆ. ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಗ್ರಾಫ್ ನಲ್ಲಿ ಇಂತಹ ನಿರೀಕ್ಷಣೆಗಳ ಮಾದರಿ ಫಲಿತಾಂಶವನ್ನು ತೋರಿಸಲಾಗಿದೆ. ಪ್ರತ್ಯಕ್ಷವಾದ ಫಲಿತಾಂಶದಲ್ಲಿ ಅನೇಕ ಬಾರಿ ವೈಯಕ್ತಿಕವಾದ ಮಾಲಿಕತ್ವದ ಹಕ್ಕು ಇರುತ್ತದೆ. ಕಾರಣ ಅದರಲ್ಲಿ ಸಾಧ್ಯವಾಗಬಲ್ಲ ಪ್ರಣಾಳಿಕೆಯ ನಿಖರತೆ ಮತ್ತು ರಿಪಿಟ್ಯಾಬಿಲಿಟಿ ಆ ಫಲಿತಾಂಶಗಳಲ್ಲಿ ಅವಲಂಬಿಸಿರುತ್ತದೆ.

 Air Electronic Gaging and Online SPC
 
ಉಪಯೋಗ
ಏರ್ ಗೇಜಿಂಗ್ ಪ್ರಮುಖವಾಗಿ ಗ್ರೈಂಡಿಂಗ್, ಹೋನಿಂಗ್ ಅಥವಾ ಲ್ಯಾಪಿಂಗ್ ಇಂತಹ ಜಟಿಲವಾದ ಮತ್ತು ಉಚ್ಚಮಟ್ಟದ ಯಂತ್ರಣೆ ಮತ್ತು ಫಿನಿಶಿಂಗ್ ಪ್ರಕ್ರಿಯೆಯನ್ನು ನಿಯಂತ್ರಿಸಲು ಅಭಿವೃದ್ಧಿಪಡಿಸಲಾಗಿದೆ. ಇದರ ಹೊರತಾಗಿ ಅತ್ಯಂತ ಹೆಚ್ಚು ಉಷ್ಣತೆ, ಚಳಿ, ಕಾಸ್ಟಿಕ್, ಸ್ಫೋಟಕ ಮತ್ತು ಆಣ್ವಿಕದಂತಹ ಕಠಿಣವಾದ ಪರಿಸರಕ್ಕೆ ಸಂಬಂಧಪಟ್ಟ ಪರಿಸ್ಥಿತಿಗೋಸ್ಕರವೂ ಯೋಗ್ಯವಾಗಿದೆ. ಮಾಪನವನ್ನು ಮಾಡಲು ಜೆಟ್ ನಿಂದ ಗಾಳಿಯನ್ನು ನೀಡುವಾಗ, ಸ್ಟೆನ್ ಲೆಸ್ ಸ್ಟೀಲ್ ನ ನಲ್ಲಿಗಳನ್ನು ಬಳಸಿ ಎಲ್ಲಾ ಸಾಮಗ್ರಿಗಳನ್ನು ಸುರಕ್ಷಿತವಾದ ಮುಚ್ಚಲ್ಪಟ್ಟ ಜಾಗದಲ್ಲಿ ಇಡಬಹುದು. ಸಾಮಾನ್ಯವಾಗಿ ಏರ್ ಗೇಜಿಂಗ್ ಅಕ್ಷೀಯ ದೃಷ್ಟಿಯಲ್ಲಿ ಸಿಮೆಟ್ರಿಕಲ್ ವೈಶಿಷ್ಟ್ಯಗಳ ಮಾಪನವನ್ನುಮಾಡಲು ಬಳಸಲಾಗುತ್ತದೆ. ಉದಾಹರಣೆ, ಸಿಲಿಂಡರ್, ಬೋರ್, ಶಂಕು ಇತ್ಯಾದಿ.
 
ಏರ್ ಗೇಜಿಂಗ್ ಪ್ರಣಾಳಿಕೆಯ ಘಟಕಗಳು
1. ಪ್ಲಗ್ ಅಥವಾ ರಿಂಗ್ ಗೇಜ್ ಅಥವಾ ಮಾಪನದ ಹೆಡ್

 Air Electronic Gaging and Online SPC 
ಈ ಘಟಕವು ಪ್ರತ್ಯಕ್ಷವಾಗಿ ಮಾಪನ ಮಾಡಲು ಕಾರ್ಯವಸ್ತುವಿನಲ್ಲಿ ತಳ್ಳಿ ಅಥವಾ ಕಾರ್ಯವಸ್ತುವಿನಲ್ಲಿ ಇಡಲಾಗುತ್ತದೆ. ಈ ಪ್ಲಗ್ ಅಥವಾ ರಿಂಗ್ ಆಕಾರದ ಘಟಕ ಕಾರ್ಯವಸ್ತುವಿನ ಯಂತ್ರಚಿತ್ರಕ್ಕೆ ಅನುಸಾರವಾಗಿ ಮತ್ತು ಸಾಮಾನ್ಯ ನೋಜಲ್ ಮತ್ತು ಕಾರ್ಯವಸ್ತುವಿನ ಪರಿಮಾಣದಲ್ಲಿ 50-200µm ನ ಕ್ಲಿಯರನ್ಸ್ ಅಳವಡಿಸಲಾಗುವ ರೀತಿಯಲ್ಲಿ ತಯಾರಿಸಲಾಗುತ್ತದೆ. ಎರಡರ ಆಯ್ಕೆಯನ್ನು ಡಿಸೈನ್ ಡಾಟಾ ಟೇಬಲ್ ನ ಆಧಾರದಲ್ಲಿಯೇ ಮಾಡಲಾಗುತ್ತದೆ. ಈ ಟೇಬಲ್ ಅನೇಕ ರೀತಿಯ ಅನುಭವದ ಅಭ್ಯಾಸವನ್ನು ಮಾಡಿ (ಇಂಪಿರಿಯಲ್ ಸ್ಟಡಿ) ಅದಕ್ಕೆ ಆಧರಿಸಿಯೇ ಅಭಿವೃದ್ಧಿಪಡಿಸಲಾಗುತ್ತದೆ. ಪ್ಲಗ್ ಅಥವಾ ರಿಂಗ್ ನ ಬಾಡಿಯಲ್ಲಿ ಯಂತ್ರಣೆಯ ಮೂಲಕ ಗಾಳಿಯ ದಾರಿಯನ್ನು ತಯಾರಿಸಲಾಗುತ್ತದೆ. ಯಾವ ಪರಿಮಾಣಗಳ ಮಾಪನವನ್ನು ಮಾಡುವುದಿದೆಯೋ, ಅದಕ್ಕೆ ಅನುಸಾರವಾಗಿ ಗಾಳಿಯ ದಾರಿಯು ಸುಲಭ ಅಥವಾ ಜಟಿಲ ಇರಬಲ್ಲವು. ಗಾಳಿಯ ದಾರಿಯ ಡಿಸೈನ್ ನ ತಾಂತ್ರಿಕ ಜ್ಞಾನ , ಅದನ್ನು ತಯಾರಿಸುವ ಸಾಮರ್ಥ್ಯ ಮತ್ತು ಪ್ಲಗ್ ಅಥವಾ ರಿಂಗ್ ವ್ಯಾಸದಲ್ಲಿ ನಿರ್ದೋಷವಾದ ಟಾಲರನ್ಸ್ ಅಳವಡಿಸಲು ಕೇವಲ ಮನ್ನಣೆಯನ್ನು ಹೊಂದಿರುವ ಮತ್ತು ನುರಿತ ಪೂರೈಕೆಗಾರರಿಂದಲೇ ಅದರ ಡಿಸೈನ್ ಮತ್ತು ಉತ್ಪಾದನೆಯನ್ನು ಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಭಾರತದಲ್ಲಿ ಬೆರಳೆಣಿಕೆ ಮಾಡಬಲ್ಲಂತಹ ಕಂಪನಿಗಳು ಉಚ್ಚಮಟ್ಟದ ಏರ್ ರಿಂಗ್ ಮತ್ತು ಪ್ಲಗ್ ಗೇಜ್ ತಯಾರಿಸುವಲ್ಲಿ ನಿಪುಣರಾಗಿದ್ದಾರೆ.
 
2. ಮಾಸ್ಟರ್ ರಿಂಗ್ ಅಥವಾ ಪ್ಲಗ್ : ಇದನ್ನು ಬೇಕಾಗಿರುವ ನಾಮಿನಲ್ ಪರಿಮಾಣಗಳಿಗೆ ಅನುಸಾರವಾಗಿ ನಿಖರವಾಗಿ ತಯಾರಿಸಲಾಗುತ್ತದೆ. ತಿಳಿದಿರುವ ಪರಿಮಾಣಗಳಿಗೆ ಅನುಸಾರವಾಗಿ ಪ್ರಣಾಳಿಕೆಯನ್ನು ಸ್ಥಿರಪಡಿಸಿ ಮತ್ತು ಮತ್ತೆ ಕ್ಯಾಲಿಬ್ರೇಟ್ ಮಾಡಲು ಅದನ್ನು ಬಳಸಲಾಗುತ್ತದೆ. ಪ್ಲಗ್ ಅಥವಾ ರಿಂಗ್ ತಯಾರಿಸುವವರು ನಮಗೋಸ್ಕರ ಯೋಗ್ಯವಾದ ಮಾಸ್ಟರ್ ತಯಾರಿಸಬಲ್ಲರು.
3. ಏರ್ ಲೈನ್ ಮತ್ತು ಕನೇಕ್ಟರ್ : ಪ್ಲಗ್ ಅಥವಾ ರಿಂಗ್ ಏರ್ ಇಲೆಕ್ಟ್ರಾನಿಕ್ ಯುನಿಟ್ ಗೆ ಜೋಡಿಸಲು ಬಳಸಲಾಗುತ್ತದೆ.

Air Electronic Gaging and Online SPC 
 
4. ಏರ್ ಇಲೆಕ್ಟ್ರಾನಿಕ್ ಯುನಿಟ್ : ಏರ್ ಇಲೆಕ್ಟ್ರಾನಿಕ್ ಯುನಿಟ್ ನ ಸುಮಾರು 5-10 ದೊಡ್ಡ ಉತ್ಪಾದಕರಿದ್ದಾರೆ. ಇವರಲ್ಲಿ ಹಲವಾರು ಉತ್ಪಾದಕರು ಸಾಮಾನ್ಯವಾದ ನಾನ್-ಇಲೆಕ್ಟ್ರಾನಿಕ್, ಎನಾಲಾಗ್ ಏರ್ ಗೇಜ್ ಯುನಿಟ್ ಕೂಡಾ ತಯಾರಿಸುತ್ತಾರೆ. ಸ್ಟೋಲ್ಜ್ ನಂತಹ ಸ್ಪೆಶಾಲಿಟಿ ಉತ್ಪಾದಕರು 0.1µm ರಿಪಿಟ್ಯಾಬಿಲಿಟಿಯ ಸಾಮರ್ಥ್ಯವಿರುವ ಯುನಿಟ್ ಗಳನ್ನು ತಯಾರಿಸುತ್ತಾರೆ.
 
ಪ್ಲಗ್ ಮತ್ತು ರಿಂಗ್
ಪ್ಲಗ್ ಮತ್ತು ರಿಂಗ್ ಇದು ಏರ್ ಗೇಜಿಂಗ್ ಪ್ರಣಾಳಿಕೆಯಲ್ಲಿ ಮಾಪನದ ಅನಿಶ್ಚಿತತೆಯುಳ್ಳ ಪ್ರಾಥಮಿಕ ಮೂಲವಾಗಿದೆ. ಅದಕ್ಕೋಸ್ಕರವೇ, ಅದರ ಡಿಸೈನ್ ಮತ್ತು ತಯಾರಿಕೆಯನ್ನು ಮಾಡುವಾಗ ಮುತುವರ್ಜಿ ವಹಿಸುವುದು ಆವಶ್ಯಕವಾಗಿದೆ. ಉಚ್ಚಮಟ್ಟದ ಡಿಸೈನರ್ ತುಂಬಾ ಜಟಿಲವಾದ ಜಾಮೆಟ್ರಿಯ ವೈಶಿಷ್ಟ್ಯಗಳ ಶೀಘ್ರವಾದ ಮಾಪನವನ್ನು ಮಾಡಲು ಅದರ ತಯಾರಿಕೆಯನ್ನು ಮಾಡಬಲ್ಲರು. ಚಿತ್ರ ಕ್ರ. 3 ರಲ್ಲಿ ವಿಶಿಷ್ಟ ಜಾಮೆಟ್ರಿಯ ಮಾಪನವನ್ನು ಮಾಡಲು ತಯಾರಿಸಿರುವ ಮಾದರಿ ಏರ್ ಜೆಟ್ ಡಿಸೈನ್ ತೋರಿಸಲಾಗಿದೆ.
ಉಚ್ಚ ಗುಣಮಟ್ಟದ ಉತ್ಪಾದಕರಲ್ಲಿ ತುಂಬಾ ಜಟಿಲವಾದ ಜಾಮೆಟ್ರಿಯಲ್ಲಿಯೂ ಉತ್ತಮ ರೀತಿಯ ರಿಪಿಟ್ಯಾಬಿಲಿಯ ಸಾಮರ್ಥ್ಯ ಮತ್ತು ನಿಖರತೆಯು ಲಭಿಸಬಲ್ಲದು. ಚಿತ್ರ ಕ್ರ. 4, 5, 6 ಮತ್ತು 7 ರಲ್ಲಿ ತೋರಿಸಿರುವ ಚಿತ್ರಗಳಿಂದ ಉತ್ಪಾದನೆಯಲ್ಲಿ ಒಳಗೊಂಡಿರುವ ತಂತ್ರಜ್ಞಾನದ ಮತ್ತು ವಿಶಿಷ್ಟ ಮಾಹಿತಿಯನ್ನು ಊಹಿಸಬಹುದು. ಉದಾಹರಣೆ, 0.05µm ಗಿಂತ ಕಡಿಮೆ ರಿಪಿಟ್ಯಾಬಿಲಿಟಿಯ ಸಾಮರ್ಥ್ಯವನ್ನು ನೀಡುವ ಗೇಜ್ ಅಥವಾ 0.1 ಮಿ.ಮೀ.ಗಿಂತ ಕಡಿಮೆ ಬೋರ್ ಗೋಸ್ಕರ ತಯಾರಿಸಿರುವ ಪ್ಲಗ್ ಗೇಜ್.
 
ಏರ್ ಇಲೆಕ್ಟ್ರಾನಿಕ್ ಯುನಿಟ್
 
 Air Electronic Gaging and Online SPC
ಯೋಗ್ಯ ಇಲೆಕ್ಟ್ರಾನಿಕ್ ಯುನಿಟ್ ಆಯ್ಕೆ ಮಾಡುವುದು ತುಂಬಾ ಮಹತ್ವದ್ದಾಗಿರುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಎನಾಲಾಗ್ ಅಥವಾ ಸ್ಟ್ಯಾಂಡರ್ಡ್ ಕಾಲಮ್ ಯುನಿಟ್ ಗಳು ಲಭ್ಯವಿವೆ. ಆದರೂ ಕೂಡಾ ಇಂಡಸ್ಟ್ರಿ 4.0 ವನ್ನು ಅನುಸರಿಸುವಂತಹ ಇಂದಿನ ಕಾಲದಲ್ಲಿ ಇಂತಹ ನಿಖರವಾದ ಸಾಮಗ್ರಿಗಳಲ್ಲಿ ಬಂಡವಾಳವನ್ನು ಹೂಡುವಾಗ ಈ ಕೆಳಗಿನ ಇನ್ನಿತರ ಘಟಕಗಳ ಕುರಿತು ವಿಚಾರ ಮಾಡುವುದು ಖಂಡಿತವಾಗಿಯೂ ತುಂಬಾ ಸೂಕ್ತವಾಗಬಲ್ಲದು.
•ಪರಿಮಾಣಗಳ ನಿಯಂತ್ರಣೆಯ ಮಿತಿ ಅಥವಾ ಟಾಲರನ್ಸ್ ಮಿತಿಗಳ ಸಮೀಪವಿರುವಾಗ ತಮ್ಮ ಪ್ರಣಾಳಿಕೆಯು ತಮಗೆ ಕೇವಲ ಪ್ರಸ್ತುತ ಪರಿಮಾಣಗಳನ್ನೇ ತೋರಿಸುತ್ತದೆ. ಅದರಲ್ಲಿ ಅಪಾಯದ ಸೂಚನೆ ಮತ್ತು ಎಚ್ಚರಿಕೆಯನ್ನು ಕಳುಹಿಸುವ ಸಾಮರ್ಥ್ಯ ಇದೆಯೇ?
•ಯಂತ್ರಭಾಗಗಳು ರಿಜೆಕ್ಟ್ ಆದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಮತ್ತೆ ಮಶಿನ್ ಅಥವಾ ಸೆಲ್ ಕಡೆಗೆ ಔಟ್ ಪುಟ್ ಕಳುಹಿಸುವ ಸಾಮರ್ಥ್ಯ ಇದೆಯೇ?
•ತಮ್ಮ ಪ್ರಣಾಳಿಕೆಯಲ್ಲಿ ಆನ್ ಲೈನ್ ಸಂಖ್ಯೆಗಳ ಪ್ರಕ್ರಿಯೆಯ ನಿಯಂತ್ರಣೆ (SPC) ಮಾಡುವ ಸಾಮರ್ಥ್ಯ ಇದೆಯೇ? ಯಂತ್ರಭಾಗಗಳ ಮಾಪನವನ್ನು ಮಾಡುತ್ತಿರುವಾಗ ಪ್ರಕ್ರಿಯೆಯ ಸಾಮರ್ಥ್ಯವನ್ನುಸಾರಾಂಶದೊಂದಿಗೆ ತಮಗೆ ಲೈವ್ ನಿಯಂತ್ರಣದ ಕೋಷ್ಟಕಗಳು ಕಾಣುತ್ತವೆಯೇ?
•ತಮ್ಮ ಪ್ರಣಾಳಿಕೆಯು ತಮಗೆ ಮಾಪನದ ಎಲ್ಲ ರೀತಿಯ ಮಾಹಿತಿಯಲ್ಲಿ (ಡಾಟಾ) ಮುಂದಿನ ವಿಶ್ಲೇಷಣೆಗೋಸ್ಕರ ಪ್ರವೇಶ (ಎಕ್ಸೆಸ್) ನೀಡಬಲ್ಲದೇ? ತಮ್ಮಲ್ಲಿ ಈ ಮಾಹಿತಿಯು ತಮ್ಮ ನೆಟ್ ವರ್ಕ್ ನಲ್ಲಿ ಮತ್ತೆ ಸಂಗ್ರಹಿಸಲು ಕಳುಹಿಸುವ ಸಾಮರ್ಥ್ಯ ಇದೆಯೇ?
•ಶಾಪ್ ಫ್ಲೋರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಆಪರೇಟರ್ ಗೋಸ್ಕರ ತಮ್ಮ ಪ್ರಣಾಳಿಕೆಯಲ್ಲಿರುವ HMI ಯಾವ ಸೌಲಭ್ಯಗಳನ್ನು ನೀಡುತ್ತದೆ?
•ತಮ್ಮ ಪ್ರಣಾಳಿಕೆಯಲ್ಲಿ ಲೈವ್, ಆನ್ ಲೈನ್ ಕೊರತೆಗಳನ್ನು ಸುಧಾರಿಸಲು ಮಶಿನ್ ಕಡೆಗೆ ಮಾಪನದ ಮೌಲ್ಯಗಳು ಪುನಃ ಪ್ರಸಾರಿತಗೊಳಿಸುವುದು ಸಾಧ್ಯವೇ?

 Air Electronic Gaging and Online SPC 
 
ಈ ಮೇಲಿನ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನುಹುಡುಕಿದ್ದರಿಂದ ಮತ್ತು ತಮ್ಮವಿಶಿಷ್ಟ ರೀತಿಯ ಆವಶ್ಯಕತೆಗಳನ್ನುಸೂಕ್ತ ರೀತಿಯಲ್ಲಿ ತಿಳಿದುಕೊಂಡ ನಂತರ ತಮಗೆ ಯೋಗ್ಯ ರೀತಿಯ ಏರ್ ಇಲೆಕ್ಟ್ರಾನಿಕ್ ಯುನಿಟ್ ಆಯ್ಕೆ ಮಾಡುವುದು ಸಾಧ್ಯ.
ಏರ್ ಇಲೆಕ್ಟ್ರಾನಿಕ್ ಯುನಿಟ್ ನ ಉಚ್ಚಮಟ್ಟದ ಶ್ರೇಣಿಯಲ್ಲಿ ತಮಗೆ ಪೂರೈಸುವಂತಹ ಹಲವಾರು ಉತ್ಪಾದನೆಗಳಲ್ಲಿ ಬೇಕಾಗುವಂತಹ ಉಪಕರಣಗಳು ನೋಡಲು ಲಭಿಸಿಬಲ್ಲವು. ಇವುಗಳಿಗೆ ಈ ಪ್ರಣಾಳಿಕೆಯಲ್ಲಿ ಮೇಲೆ ಹೇಳಿರುವ ಎಲ್ಲ ವೈಶಿಷ್ಟ್ಯಗಳ ಒಳಗೊಂಡಿರಬಲ್ಲವು. ಈ ಉಪಕರಣಗಳನ್ನು ಬಳಸಿ ತಮಗೆ ಪೋಕಾಯೋಕೆ ಮಾಡುವ ಸಾಮರ್ಥ್ಯದೊಂದಿಗೆ ಕ್ಷಿಪ್ರವಾದ ಮಾಪನವನ್ನುಮಾಡಬಹುದು. ತಮ್ಮ ಸಿ.ಎನ್.ಸಿ. ಮಶಿನ್ ನಲ್ಲಿ ಮಾಹಿತಿ ಫೀಡ್ ಮಾಡಬಹುದು ಮತ್ತು ತಮ್ಮ ಪ್ರಕ್ರಿಯೆಯ ಸಾಮರ್ಥ್ಯ ಸುಧಾರಿಸುವುದು ಸಾಧ್ಯ. ತಮ್ಮ ಆಪರೇಟರ್ ಮತ್ತು ಗುಣಮಟ್ಟ ಕಂಟ್ರೋಲ್ ಟೀಮ್ ಗೋಸ್ಕರ ಆನ್ ಲೈನ್ SPC ಮತ್ತು ಉತ್ಕೃಷ್ಟ ಡಾಟಾ ಪ್ರೊಸೆಸಿಂಗ್ ಮತ್ತು ಸಂವಾದದ ಸಾಮರ್ಥ್ಯವು ಲಭಿಸಬಲ್ಲದು. ಇದರ ಹೊರತಾಗಿ ಚಿತ್ರ ಕ್ರ. 8 ರಲ್ಲಿ ತೋರಿಸಿದಂತೆ ಸಹಜವಾಗಿ ಗ್ರಾಹಕರಿಗೆ ಬೇಕಾದಂತೆ ಯೂಸರ್ ಇಂಟರ್ ಫೇಸ್ ಸ್ಕ್ರೀನ್ ಲಭ್ಯವಿರಬಲ್ಲವು.
 
ಉದಾಹರಣೆ

 Air Electronic Gaging and Online SPC 
ಪುಣೆಯ ಸಮೀಪದ ಹಡಪಸರ್ ಎಂಬಲ್ಲಿರುವ ಸುಮ್ಯಾಕ್ಸ್ ಎಂಟರ್ ಪ್ರೈಸೆಸ್ ಇವರು ಮುಂಚೂಣಿಯಲ್ಲಿರುವ ಮತ್ತು ಗರಿಷ್ಠ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿರುವ ಕಂಪನಿಯಾಗಿದೆ. ಕಠಿಣ ಟರ್ನಿಂಗ್ ಮತ್ತು ಗ್ರೈಂಡಿಂಗ್ ಇಂತಹ ಹಲವಾರು ವಿಶಿಷ್ಟ ಪ್ರಕ್ರಿಯೆಗಳಿಗೋಸ್ಕರ ಸುಮ್ಯಾಕ್ಸ್ ಗೆ 5 ಮೈಕ್ರಾನ್ ಗಿಂತ ಕಡಿಮೆ ನಿಖರವಾದ ಮಾಪನವನ್ನು ಮಾಡುವ ಸಾಮರ್ಥ್ಯ ಇರುವ ಹೈ ಪ್ರಿಸಿಶನ್ ಉಪಕರಣಗಳಿಗೆ ಬಂಡವಾಳವನ್ನು ಹೂಡುವುದೂ ಅತ್ಯಾವಶ್ಯಕವಾಗಿತ್ತು. ಇದರೊಂದಿಗೆ, ಮಶಿನ್ ಟೂಲ್ ನಡೆಸುವ ಆಪರೇಟರ್ ನಿಂದಲೇ ಶೇಕಡಾ 100 ಆನ್ ಲೈನ್ ಮಾಪನವನ್ನು ಮಾಡುವುದು ಮತ್ತು ಅಷ್ಟೇ ವೇಗದಲ್ಲಿ ಮಾಪನದ ಸೈಕಲ್ ಟೈಮ್ ಇರುವುದೂ ಅದರ ಅಗತ್ಯವಾಗಿತ್ತು.
 
ಸುಮ್ಯಾಕ್ಸ್ ಇವರು 2016 ರಿಂದ ಸ್ಟೋಲ್ಜ್ GmbH ನೊಂದಿಗೆ ಪಾಲುಗಾರಿಕೆಯನ್ನು ಮಾಡಿದ್ದಾರೆ. ಅವರ ಶಾಪ್ ಫ್ಲೋರ್ ನಲ್ಲಿ ಅನೇಕ ರೀತಿಯ ಏರ್ ಗೇಜಿಂಗ್ ಯುನಿಟ್ ಗಳನ್ನು ಅಳವಡಿಸಲಾಗಿದೆ. ಉದಾಹರಣೆ, ಸುಮ್ಯಾಕ್ಸ್ ಇವರು ಸ್ಟೋಲ್ಜ್ ಇವರು ನಿರ್ಮಿಸಿರುವ ಎಂಟ್ರೀ ಲೆವಲ್ ಏರ್ ಗೇಜಿಂಗ್ ಯುನಿಟ್ ನ ರಿಪಿಟ್ಯಾಬಿಲಿಟಿ ಟೆಸ್ಟ್ ಡಾಟಾ ಇದನ್ನು MSM ಎಂದು ಹೇಳುತ್ತಾರೆ. ಇದರ ಕುರಿತಾದ ಮಾಹಿತಿಯನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ. ಈ ಪರೀಕ್ಷೆ 3 ಮಾಸ್ಟರ್ ಬಳಸಿ ತಯಾರಿಸಲಾಯಿತು.
 
•ಮಾಸ್ಟರ್ ಇದು ನಿರ್ಧಾರಿತ ನಾಮಿನಲ್ ಮೌಲ್ಯದಲ್ಲಿದೆ.
•ಮಾಸ್ಟರ್ ಇದು ನಾಮಿನಲ್ ಮೌಲ್ಯಕ್ಕಿಂತ 50µm ಕಡಿಮೆ ಇದೆ.
•ಮಾಸ್ಟರ್ ಇದು ನಾಮಿನಲ್ ಮೌಲ್ಯಕ್ಕಿಂತ 50µm ಹೆಚ್ಚು ಇದೆ.

Air Electronic Gaging and Online SPC
ಈ ಪರೀಕ್ಷೆಗೋಸ್ಕರ ಮೂರು ವಿಭಿನ್ನ MSM ಯುನಿಟ್ ಗಳನ್ನು ಬಳಸಲಾಯಿತು. ಅದರಲ್ಲಿರುವ ಎರಡು ಯುನಿಟ್ ಗಳಲ್ಲಿ ಪ್ರತಿಯೊಂದು 4 ನ್ಯುಮ್ಯಾಟಿಕ್ ಪೋರ್ಟ್ ಗಳು ಇದ್ದವು ಮತ್ತು ಒಂದರಲ್ಲಿ 2 ನ್ಯುಮ್ಯಾಟಿಕ್ ಪೋರ್ಟ್ ಗಳಿದ್ದವು. ಹೀಗೆ ಒಟ್ಟು 10 ಇನ್ ಸ್ಟ್ರುಮೆಂಟ್ಸ್ ಪೋರ್ಟ್ ಕಾಂಬಿನೇಶನ್ ಗಳಿದ್ದವು. ಪ್ರತಿಯೊಂದು ಮಾಸ್ಟರ್ ನ ಪ್ರತಿಯೊಂದು ಪೋರ್ಟ್ ನಲ್ಲಿ 3 ಬಾರಿ ಮಾಪನವನ್ನು ಮಾಡಲಾಯಿತು. ಅಂದರೆ ಈ ಪರೀಕ್ಷೆಯಲ್ಲಿ ಒಟ್ಟು 90 ಮಾಪನಗಳನ್ನು ಮಾಡಲಾಯಿತು, ಇದೇ ಅಂಕೆ-ಸಂಖ್ಯೆಗಳ ದೃಷ್ಟಿಯಲ್ಲಿ ಮಹತ್ವಪೂರ್ಣವಾದ ಅಂಕೆಯಾಗಿದೆ.
ಕೋಷ್ಟಕ ಕ್ರ. 1 ರಲ್ಲಿ ಪ್ರತಿಯೊಂದು ಇನ್ ಸ್ಟ್ರುಮೆಂಟ್ ಪೋರ್ಟ್ ಸಂಯೋಜಿಸಲು ಸರಾಸರಿ ಡೇವಿಯೇಶನ್ ಮತ್ತು ರಿಪಿಟ್ಯಾಬಿಲಿಟಿಯ ವಿವರಗಳನ್ನು ತೋರಿಸಲಾಗಿದೆ.
ತಿಳಿದಿರುವ ಮಾಸ್ಟರ್ ಮೌಲ್ಯದ (ಉಪಕರಣದ ನಿಖರತೆಯನ್ನು ತೋರಿಸುವಂತಹದ್ದು) ಹೋಲಿಕೆಯಲ್ಲಿ ಮಾಪನ ಮಾಡಿರುವ ಸರಾಸರಿ ಡೇವಿಯೇಶನ್ 1.5 µm ಗಿಂತ ಕಡಿಮೆ ಇರುವುದನ್ನು ತೋರಿಸಲಾಗಿದೆ ಮತ್ತು ಅದರ ರಿಪಿಟ್ಯಾಬಿಲಿಟಿಯ ಸಾಮರ್ಥ್ಯ 1.1 µm ಇದೆ.

 Air Electronic Gaging and Online SPC 
ಸುಮ್ಯಾಕ್ಸ್ ಇವರು MSM ಯುನಿಟ್ ನ ಆನ್ ಲೈನ್ SPC ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿ ಅದನ್ನು ಪೂರ್ಣ ಸಾಮರ್ಥ್ಯದೊಂದಿಗೆ ಆನ್ ಲೈನ್ ಕಾರ್ಯಗತಗೊಳಿಸಿದ್ದಾರೆ. ಚಿತ್ರ ಕ್ರ. 9 ರಲ್ಲಿ ತೋರಿಸಿರುವ ಗ್ರಾಫ್ ನಲ್ಲ ಪ್ರಕ್ರಿಯೆಯ ದೀರ್ಘಕಾಲೀನ ಸಾಮರ್ಥ್ಯ ತೋರಿಸಲು ಒಂದು ವಿಶಿಷ್ಟ ಕಾಲಾವಧಿಯಲ್ಲಿ ಅಳತೆ ಮಾಡಲಾಗಿರುವ ಮಾಹಿತಿಯನ್ನು ತೋರಿಸುವ ಕೋಷ್ಟಕವನ್ನು ನೀಡಲಾಗಿದೆ. ಏರ್ ಗೇಜಿಂಗ್ ಯುನಿಟ್ ನಿಂದ ಲಭಿಸುವ ಆನ್ ಲೈನ್ ಮಾಹಿತಿ ಸಿ.ಎನ್.ಸಿ. ಮಶಿನ್ ನ ಕಡೆಗೆ ಪ್ರತಿಯೊಂದು ಯಂತ್ರಭಾಗದಲ್ಲಿರುವ ಕೊರತೆಯನ್ನು ನೀಗಿಸಲು ವಾಪಸ್ ಕಳುಹಿಸುವ ಪ್ರಕ್ರಿಯೆಯನ್ನು ಭಾರತದಲ್ಲಿ ಸುಮ್ಯಾಕ್ಸ್ ಇವರು ಪ್ರಪ್ರಥಮವಾಗಿ ಪ್ರಾರಂಭಿಸಿದರು. ಅವರ ಸೈಟ್ ನಲ್ಲಿ ಡೆಮೋ ಏರ್ಪಡಿಸಲಾಗುತ್ತವೆ. ಅದರಲ್ಲಿ ಈ ಸೆಟಪ್ ಮತ್ತು ಅವರು ಅದನ್ನು ಯಾವ ಮಶಿನ್ ನಲ್ಲಿ ಕಾರ್ಯಗತಗೊಳಿಸಿದ್ದಾರೆ, ಎಂಬುದನ್ನು ಅಲ್ಲಿ ಇರುವ ಪ್ರಕ್ರಿಯೆ ಸಾಮರ್ಥ್ಯದಲ್ಲಿ ನೋಡಬಹುದು.
 
ತೀರ್ಮಾನ
ಏರ್ ಇಲೆಕ್ಟ್ರಾನಿಕ್ ಗೇಜಿಂಗ್ ಇದು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಆಮೂಲಾಗ್ರವಾದ ಬದಲಾವಣೆಗಳನ್ನು ಮಾಡಬಲ್ಲದು.
•ಕೈಯಿಂದ ಬಳಸಬಲ್ಲ ಯೋಗ್ಯವಾದ ಉಪಕರಣಗಳನ್ನು ಬಳಸಿ ಮಾದರಿ ತಪಾಸಣೆಯನ್ನು ಮಾಡಬೇಕಾಗುತ್ತಿತ್ತು. ಹೀಗಿದ್ದರೂ ಕೂಡಾ ಈ ಕಡಿಮೆ ಸೆಕಂಡುಗಳಲ್ಲಿ ಮಾಡಬಹುದಾದ ತಪಾಸಣೆಯ ಸೈಕಲ್ ಟೈಮ್ ನಿಂದಾಗಿ ಶೇಕಡಾ 100 ರಷ್ಟು ತಪಾಸಣೆಯನ್ನು ಮಾಡುವುದೂ ಸಾಧ್ಯ.
•ಕೈಯಿಂದ ಬಳಸಬಹುದಾದಂತಹ ಉಪಕರಣಗಳ ಹೋಲಿಕೆಯಲ್ಲಿ ಉಚ್ಚಮಟ್ಟದ ನಿಖರತೆ ಮತ್ತು ರಿಪಿಟ್ಯಾಬಿಲಿಟಿಯ ಸಾಮರ್ಥ್ಯವು ಲಭಿಸಬಲ್ಲದು.
•ಉತ್ಪಾದನೆಯ ಸೆಲ್ ನಲ್ಲಿ ಏರ್ ಗೇಜಿಂಗ್ ಉಪಕರಣಗಳ ಇಂಟಿಗ್ರೇಟ್ ಮಾಡಬಹುದು. ಹೀಗೆ ಮಾಡಿದ್ದರಿಂದ ರಿಜೆಕ್ಶನ್ ಕಂಡುಬಂದಾಗ ಪೊಕಾಯೋಕೆ ಮಾಡಬಹುದು.
•ಆನ್ ಲೈನ್ ಕೊರತೆಗಳನ್ನು ಸುಧಾರಿಸಲು ನಾವು ಈ ಪ್ರಣಾಳಿಕೆಗೆ ಮಶಿನ್ ನೊಂದಿಗೆ ಇಂಟಿಗ್ರೇಟ್ ಮಾಡಬಹುದು. ಉದಾಹರಣೆ, ಸಿ.ಎನ್.ಸಿ. ಗ್ರೈಂಡಿಂಗ್ ಸೆಲ್ ನಲ್ಲಿ, ಗ್ರೈಂಡಿಂಗ್ ವೀಲ್ ನ ಸವೆತವಾದಂತೆ ನಿಧಾನವಾಗಿ ಕಾರ್ಯವಸ್ತುವಿಗೆ ತುಂಬಾ ಹತ್ತಿರ ಅಳವಡಿಸುದು ಸಾಧ್ಯ. ಕಾರಣ ವೀಲ್ ನ ಸವೆತವಾದದ್ದರಿಂದ ಯಂತ್ರಭಾಗಗಳ ಪರಿಮಾಣದಲ್ಲಿ ಉಂಟಾಗುವ ಬದಲಾವಣೆಗಳು ಪ್ರಣಾಳಿಕೆಗೆ ತಿಳಿಯಬಲ್ಲವು. ವೀಲ್ ನ ಡ್ರೆಸಿಂಗ್ ಮತ್ತೆ ಆಗಬಲ್ಲದು, ಆಗ ಶಾಸ್ತ್ರೀಯ ರೀತಿಯಲ್ಲಿ ಟಾಲರನ್ಸ್ ಸೆಟ್ ಮಾಡಬಹುದು.
•ಇಂಟಿಗ್ರೆಟೆಡ್ ಏರ್ ಗೇಜಿಂಗ್ ಯುನಿಟ್ ಇದ್ದಲ್ಲಿ ತಮ್ಮ ಪ್ರಕ್ರಿಯೆ ಸಾಮರ್ಥ್ಯ ಎರಡು ಅಥವಾ ಅದಕ್ಕಿಂತ ಹೆಚ್ಚು ಮಾಡಬಹುದು.
•ಎಲ್ಲರಿಗೂ ಏರ್ ಗೇಜಿಂಗ್ ಯುನಿಟ್ ನಲ್ಲಿ ಹೂಡಿರುವ ಬಂಡವಾಳದ ಹೊರತಾಗಿ ಕಾರ್ಖಾನೆಯಲ್ಲಿರುವ ಮೂಲಭೂತ ಸೌಲಭ್ಯಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡುವ ಆವಶ್ಯಕತೆ ಇರುವುದಿಲ್ಲ. ಏರ್ ಗೇಜ್ ಕಾರ್ಖಾನೆಯಲ್ಲಿರುವ ಗಾಳಿಯ ನಿಯತಾಂಕಗಳು ಪೂರೈಕೆಯಯಲ್ಲಿ ಅವಲಂಬಿಸಿರುತ್ತವೆ. ಈ ಪರಿಸ್ಥಿತಿಯಲ್ಲಿ ಪೂರೈಕೆಯ ಪಾಯಿಂಟ್ ನಲ್ಲಿ ಯಾವಾಗಲು ಇರುವಂತೆ ಫಿಲ್ಟರ್ ರೆಗ್ಯುಲೇಟರ್ ಯುನಿಟ್ ಅಳವಡಿಸಲಾಗಿರುತ್ತದೆ.
ಸ್ಟೋಲ್ಜ್ ಇದೊಂದು ಏರ್ ಇಲೆಕ್ಟ್ರಾನಿಕ್ ಗೇಜಿಂಗ್ ನ ಮುಂಚೂಣಿಯಲ್ಲಿರುವ ಜರ್ಮನ್ ಬ್ರಾಂಡ್ ಆಗಿದೆ. 1952 ರಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇರುವವರನ್ನು ಈ ಉದ್ಯಮದ ಕ್ಷೇತ್ರದಲ್ಲಿ ಗಣ್ಯರೆಂದು ಗುರುತಿಸಲಾಗುತ್ತಿದೆ. ಸ್ಟೋಲ್ಜ್ ಇವರ ಅಸ್ತಿತ್ವವು ಭಾರತದಲ್ಲಿ ಈ ಹಿಂದೆಯೂ ಕಡಿಮೆ ಪ್ರಮಾಣದಲ್ಲಿತ್ತು. ಹೀರೋ ಮೋಟರ್ಸ್ ಮತ್ತು VE ಕಮರ್ಶಿಯಲ್ ವಾಹನಗಳಂತಹ ದೊಡ್ಡ ಕಾರ್ಖಾನೆಗಳಲ್ಲಿ ತಮ್ಮ ಉತ್ಪಾದನೆಗಳನ್ನು ಪೂರೈಸುತ್ತಿದ್ದರು. ಮೆಟ್ರಾಲಾಜಿ ಉಪಕರಣಗಳ ಮಾರಾಟ ಮತ್ತು ಸರ್ವಿಸಿಂಗ್ ನ ಕ್ಷೇತ್ರದಲ್ಲಿ ಅನುಭವವುಳ್ಳ, ಟ್ರೈಮಾಸ್ಟರ್ ಮೆಟ್ರಾಲಾಜಿ ಎಂಬುದು ಪುಣೆಯಲ್ಲಿರುವ ಕಂಪನಿಯು ಸ್ಟೋಲ್ಜ್ ಕಂಪನಿಯನ್ನು ಭಾರತದಲ್ಲಿ ಪ್ರತಿನಿಧಿಸುತ್ತಿದೆ.
@@AUTHORINFO_V1@@