ಥಿಯರಿ ಆಫ್ ಕನ್ ಸ್ಟ್ರೆಂಟ್ಸ್ (ನಿರ್ಬಂಧಗಳ ಸಿದ್ಧಾಂತ)

@@NEWS_SUBHEADLINE_BLOCK@@

Lohkarya - Udyam Prakashan    30-Jan-2021
Total Views |

1_1  H x W: 0 x
 
 
 
 
 
ದೀಪಕ ದೇವಧರ : ಪ್ರಭುದೇಸಾಯಿಯವರೇ, ನಿಮ್ಮ ಕಂಪನಿಯಲ್ಲಿ ನಿರ್ಬಂಧಗಳ ಸಿದ್ಧಾಂತವನ್ನು (ಥಿಯರಿ ಆಫ್ ಕನ್ ಸ್ಟ್ರೆಂಟ್) ಹೇಗೆ ಅವಲಂಬಿಸಬೇಕು, ಎಂದು ತಮಗೆ ಅನಿಸುತ್ತದೆ?
ಪರಾಗ್ ಪ್ರಭುದೇಸಾಯಿ : ಬುಲೋಜ್ ಪೇಂಟ್ ಇಕ್ವಿಪ್ ಮೆಂಟ್ ಪ್ರೈ.ಲಿ. ಈ ಕಂಪನಿಯು ಸರ್ಫೇಸ್ ಕೋಟಿಂಗ್ ಕ್ಷೇತ್ರದಲ್ಲಿ ಸ್ಟ್ಯಾಂಡರ್ಡ್ ಗನ್ ನಿಂದ ಪ್ರಾರಂಭಿಸಿ ‘ಟರ್ನ್ ಕಿ’ ಪ್ರೊಜೆಕ್ಟ್ ಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದೆ. ಠಾಣೆ ಮತ್ತು ಪುಣೆಯಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಪ್ಲಾಂಟ್ ಇದ್ದು ನಮ್ಮ ಅಕ್ವಾ ಕ್ಲೀನ್ ಸಿಸ್ಟಮ್ ಪ್ರೈ.ಲಿ. ಎಂಬ ಇನ್ನೊಂದು ಕಂಪನಿಯು ಪಾರ್ಟ್ಸ್ ಕ್ಲೀನಿಂಗ್ ಗೆ ಸಂಬಂಧಪಟ್ಟ ಕೆಲಸವನ್ನು ನಿರ್ವಹಿಸುತ್ತದೆ.
ನಮ್ಮ ಕಂಪನಿಯಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಾವು ವಸ್ತುಗಳನ್ನು ಉತ್ಪಾದಿಸುವುದರೊಂದಿಗೆ ಅನೇಕ ಯೋಜನೆಗಳನ್ನೂ ಪೂರ್ತಿಗೊಳಿಸುತ್ತಿದ್ದೇವೆ. ಸ್ಪ್ರೇ ಗನ್, ಪ್ರೆಶರ್ ಫೀಡ್ ಕಂಟೇನರ್, ಪೇಂಟ್ ಶಾಪ್ ಇವುಗಳು ನಮ್ಮಲ್ಲಿರುವ ಸ್ಟ್ಯಾಂಡರ್ಡ್ ಉತ್ಪಾದನೆಗಳು. ನಾವು ಪೆಂಟಿಂಗ್ ಪ್ಲಾಂಟ್ ಗೆ ಸಂಬಂಧಪಟ್ಟ ಟರ್ನ್ ಕೀ ಪ್ರೊಜೆಕ್ಟ್ ಗಳನ್ನು ಮಾಡುತ್ತೇವೆ. ಪ್ರತಿಯೊಬ್ಬ ಗ್ರಾಹಕರಿಗೆ ಅನುಸಾರವಾಗಿ ಪ್ರತಿಯೊಂದು ಪ್ರೊಜೆಕ್ಟ್ ಕಸ್ಟಮೈಜ್ಡ್ ಇರುತ್ತದೆ. ಇದರಿಂದಾಗಿ ಉತ್ಪಾದನೆಗಳು ಮತ್ತು ಪ್ರೊಜೆಕ್ಟ್ ಈ ಎರಡೂ ವಿಷಯಗಳೆಡೆಗೆ ಒಂದೇ ದೃಷ್ಟಿಯಿಂದ ವೀಕ್ಷಿಸುವುದು ಅಸಾಧ್ಯವಾಗಿದೆ ಅಥವಾ ಹಾಗೆ ನೋಡುವುದು ಸೂಕ್ತವಲ್ಲ.
ಅನೇಕ ಸಲ ಮಟೀರಿಯಲ್ ನ ಅಭಾವ ಇರುತ್ತಿತ್ತು. ಕೆಲವೊಮ್ಮೆ ಹೆಚ್ಚುವರಿ ಮಟೀರಿಯಲ್ ಇರುತ್ತಿತ್ತು. ನಮ್ಮಲ್ಲಿ ಇನ್ವೆಂಟರಿಯಲ್ಲಿ ಯಾವುದೇ ರೀತಿಯ ಹಿಡಿತ ಇರಲಿಲ್ಲ. ಹೆಚ್ಚಾಗಿ ಎಲ್ಲ ರೀತಿಯ ಬಿಲ್ಲಿಂಗ್ ನ ಕೆಲಸವು ಪ್ರತಿ ತಿಂಗಳ ಕೊನೆಯ ವಾರದಲ್ಲಿಯೇ ಆಗುತ್ತಿತ್ತು. ತಾವು ನಮ್ಮ ಉತ್ಪಾದನೆಗಳನ್ನು ಖರೀದಿಸಿರಿ, ಎಂಬುದಾಗಿ ಒತ್ತಾಯಿಸುತ್ತಿದ್ದೆವು. ಇದರಿಂದಾಗಿ ನಮಗೆ ನಗದಿ ಹಣದ ಪ್ರವಾಹದ (ಕ್ಯಾಶ್ ಫ್ಲೋ) ಅಡಚಣೆಯನ್ನು ಎದುರಿಸಬೇಕಾಗುತ್ತಿತ್ತು. ಮಾಹಿತಿಯ ವ್ಯವಸ್ಥಾಪನೆಗೋಸ್ಕರ ನಮ್ಮಲ್ಲಿ ಎಕ್ಸೆಲ್ ನಲ್ಲಿ ಕೆಲಸ ನಿರ್ವಹಿಸುವ ವ್ಯವಸ್ಥೆಯು ಕಾರ್ಯಗತವಾಗಿತ್ತು. ನಮ್ಮಲ್ಲಿ ERP ಈ ಪ್ರಣಾಳಿಕೆಯು ಕಾರ್ಯಗತವಾಗಿದ್ದರೂ ಕೂಡಾ ಅದರ ಇಂಟಿಗ್ರೇಶನ್ ಅಷ್ಟೇನೂ ಉಚ್ಚಮಟ್ಟದ್ದಾಗಿ ಇರಲಿಲ್ಲ. ಇದರಲ್ಲಿ ಎಂಟ್ರಿ ಸರಿಯಾಗಿ ಅಗುತ್ತಿರಲಿಲ್ಲ. ಈ ಅಂಶವು ಕೇವಲ ಉತ್ಪಾದನೆ ಮಾಡಿರುವ ವಸ್ತುಗಳು ಕುರಿತಾದ ಸಂಬಂಧಪಟ್ಟದ್ದು. ಪ್ರೊಜೆಕ್ಟ್ ಗಳ ಕುರಿತು ಹೇಳುವುದಾದರೆ, ಹೊಸ ಪ್ರೊಜೆಕ್ಟ್ ನಮ್ಮಲ್ಲಿಗೆ ಬಂದಾಗ ಗ್ರಾಹಕರಿಗೆ ಅದನ್ನು ನಿಗದಿತ ಸಮಯದಲ್ಲಿ ಪೂರ್ತಿ ಮಾಡಿಕೊಡುವುದು ಅದ್ಯ ಕರ್ತವ್ಯವು ನಮ್ಮದಾಗಿದೆ. ಇದಕ್ಕೋಸ್ಕರ ಅದರಲ್ಲಿರುವ ಪ್ರತಿಯೊಂದು ಕೆಲಸಕ್ಕೆ ತಗಲುವ ಸಮಯವನ್ನು (ಟೈಮ್ ಲೈನ್) ನಿರ್ಧರಿಸಬೇಕಾಗುತ್ತಿತ್ತು. ಇದು ಮಾತ್ರ ಬಹು ದೊಡ್ಡ ಸವಾಲಾಗಿತ್ತು. ಇದಕ್ಕೋಸ್ಕರ ಯಾವುದೇ ಕಂಪನಿಯಲ್ಲಿ ಎರಡು ವಿಧದ ಪ್ರವಾಹಗಳು (ಫ್ಲೋ) ಇರುತ್ತವೆ. ಡಾಕ್ಯುಮೆಂಟ್ ಫ್ಲೋ ಮತ್ತು ಮಟೀರಿಯಲ್ ಎಂಬ ಎರಡು ಪ್ರವಾಹಗಳಿರುತ್ತವೆ. ಎರಡೂ ಪ್ರವಾಹಗಳ ಒಟ್ಟಾಗಿಯೇ ಮುಂದುವರಿಸುತ್ತಿದ್ದಲ್ಲಿ ಮಾತ್ರ ಉತ್ಪಾದನೆಗಳು ಅಥವಾ ಆ ಪ್ರೊಜೆಕ್ಟ್ ನಿಗದಿತ ವೇಳೆಯಲ್ಲಿ ಪೂರ್ತಿಯಾಗುತ್ತದೆ.
 
ಸಚಿನ್ ಶೇಟೆ ಮತ್ತು ಯಜ್ಞ ಎಂತ್ರಪ್ರನ್ಯುವರ್ಸ್ ತಂಡದೊಂದಿಗೆ ಚರ್ಚೆಯನ್ನು ಮಾಡಲಾಯಿತು. ನಮ್ಮಲ್ಲಿರುವ ಎಲ್ಲ ರೀತಿಯ ಪ್ರಸ್ತುತ ವ್ಯವಸ್ಥೆಗಳನ್ನು ಬದಲಾಯಿಸುವ ಆವಶ್ಯಕತೆ ಇದೆ, ಎಂಬ ಅಂಶವು ಈ ಚರ್ಚೆಯಿಂದ ಗಮನಕ್ಕೆ ಬಂತು. ಇದಕ್ಕೋಸ್ಕರ ಅವರ ತಂಡವು ನಮ್ಮೊಂದಿಗೆ ಕೆಲಸ ನಿರ್ವಹಿಸಿ ಅಪೇಕ್ಷಿಸಿರುವ ಬದಲಾವಣೆಗಳನ್ನು ಮಾಡಲು ಬದ್ಧರಾಗಿದ್ದಾರೆ. ಅದಕ್ಕೋಸ್ಕರವೇ ನಮ್ಮ ಕಾರ್ಖಾನೆಯಲ್ಲಿ ನಿರ್ಬಂಧಗಳ ಸಿದ್ಧಾಂತವನ್ನು ಅವಲಂಬಿಸುವುದನ್ನು ನಿರ್ಧರಿಸಿದೆವು.
ದೀಪಕ ದೇವಧರ್ : ಸಚಿನ್ ಇವರೇ, ಬುಲೋಜ್ ಕಂಪನಿಯಲ್ಲಿರುವ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದ ನಂತರ ತಾವು ಅದರ ಕುರಿತು ಯಾವ ರೀತಿಯಲ್ಲಿ ವಿಚಾರ ಮಾಡಿದಿರಿ? ಇದಕ್ಕೆ ಸಂಬಂಧಪಟ್ಟ ನಿರ್ಬಂಧಗಳ ಸಿದ್ಧಾಂತವು ಹೇಗೆ ಅನ್ವಯಿಸುತ್ತದೆ, ಎಂಬುದನ್ನು ಚುಟುಕಾಗಿ ವಿವರಿಸಿರಿ.
ಸಚಿನ್ ಶೇಟೆ : ಬುಲೋಜ್ ಕಂಪನಿಯಲ್ಲಿ ಇರುವ ಎಲ್ಲ ರೀತಿಯ ಸಮಸ್ಯೆಗಳನ್ನು ನೋಡಿದ ನಂತರ ಅನೇಕ ಅಂಶಗಳು ನಮ್ಮ ಗಮನಕ್ಕೆ ಬಂದವು. ಅವರಲ್ಲಿರುವ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದೇ ಲಿಂಕೇಜ್ (ಸಂಯೋಜನೆ) ಇದೆ. ಅದರ ಕಾಜ್ ಅ್ಯಂಡ್ ಇಫೆಕ್ಟ್ ಎನಾಲಿಸಿಸ್ ಮಾಡಲಾಯಿತು. ಇದರಿಂದ ನಮಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಮೂಲ ಕಾರಣ (ರೂಟ್ ಕಾಜ್) ತಿಳಿಯಿತು. ಸಮಸ್ಯೆಯ ಮೂಲ ಕಾರಣ ಪ್ರಾಡಕ್ಷನ್ ಮ್ಯಾನೆಜರ್ ಎದುರು ಇರುವ ಡ್ಯುಯೆಲ್ ಸಿಸ್ಟಮ್ ಗಳಲ್ಲಿ ಕಂಡುಬಂತು. ಒಂದೆಡೆ ಮ್ಯಾನೆಜ್ ಮೆಂಟ್ ಗೆ ಖುಷಿಯಾಗಿಡಲು ಗರಿಷ್ಠ ಪ್ರಮಾಣದಲ್ಲಿ ಗನ್ ಗಳ ನಿರ್ಮಿತಿಯನ್ನು ಮಾಡಬೇಕಾಗುತ್ತಿತ್ತು. ಇನ್ನೊಂದೆಡೆ ಗ್ರಾಹಕರು ನೀಡಿರುವ ಬೇಡಿಕೆಯ ಬ್ಯಾಚ್ ಸೈಜ್ ಕಡಿಮೆ ಇರುವ 5 ಅಥವಾ 7 ಗನ್ ಗಳ ಆರ್ಡರ್ ಗಳು ಬೃಹತ್ ಪ್ರಮಾಣದಲ್ಲಿದ್ದವು. ಅವರು ನೀಡಿರುವ ಆರ್ಡರ್ ಗಳನ್ನು ನಿಗದಿತ ವೇಳೆಯಲ್ಲಿ ತಲುಪಿಸಬೇಕಾಗುತ್ತಿತ್ತು. ಮ್ಯಾನೆಜ್ ಮೆಂಟ್ ನ್ನು ಖುಷಿಯಾಗಿಡಲು ಗರಿಷ್ಠ ಪ್ರಮಾಣದಲ್ಲಿ ಗನ್ ಗಳ ನಿರ್ಮಿತಿಯನ್ನು ಮಾಡುವುದು ಒಂದು ಪ್ಯಾರಾಮೀಟರ್. ಆದ್ದರಿಂದ ಆ ಪರಿಸ್ಥಿತಿಯಲ್ಲಿ ಮಶಿನ್ ನ ಕಾರ್ಯಕ್ಷಮತೆಯನ್ನು ನಿರಂತರವಾಗಿ ಎಕ್ಟಿವ್ ಇಡಬೇಕಾಗುತ್ತಿತ್ತು. ಆದರೆ ಇನ್ನೊಂದು ರೀತಿಯಲ್ಲಿ ವಿಚಾರ ಮಾಡಿದರೆ ಚಿಕ್ಕ ಬ್ಯಾಚ್ ನ ಸೈಜ್ ಇರುವ ಆರ್ಡರ್ ಸ್ವೀಕರಿಸಿದಲ್ಲಿ ಅದಕ್ಕೆ ಸಂಬಂಧಪಟ್ಟ ಕೆಲಸವನ್ನು ನಿಗದಿತ ಸಮಯದಲ್ಲಿ ಪೂರ್ತಿ ಮಾಡುವ ಜವಾಬ್ದಾರಿಯೂ ಇರುತ್ತದೆ. ಈ ಸಮಸ್ಯೆಗಳಲ್ಲಿ ಅಲ್ಲಿರುವ ಪ್ರಾಡಕ್ಷನ್ ಮ್ಯಾನೆಜರ್ ಸಿಲುಕ್ಕಿದ್ದನು. ನಮ್ಮಲ್ಲಿರುವ ಉದ್ಯಮಗಳಲ್ಲಿ ಯಾವ ಮಟೀರಿಯಲ್ ಲಭ್ಯವಿದೆಯೋ ಅದನ್ನೇ ಪುಶ್ ಮಾಡುವಂತಹ ಒಂದು ರೂಢಿ ಇದೆ, ಇದೇ ಇನ್ನೊಂದು ಕಾರಣ ಎಂಬುದು ನಮ್ಮ ಗಮನಕ್ಕೆ ಬಂತು. ಇದರಿಂದಾಗಿ ಯಾವ ಮಟೀರಿಯಲ್ ಲಭ್ಯವಿಲ್ಲವೋ ಅದಕ್ಕೆ ಸಂಬಂಧಪಟ್ಟ ಉತ್ಪಾದನೆಯು ಹಿಂದುಳಿಯುತ್ತದೆ.
 
ಈ ರೀತಿಯ ಎಲ್ಲ ಅಂಶಗಳ ಕುರಿತು ವಿಚಾರ ಮಾಡಿ ನಾವು ಒಂದು ಗುರಿಯನ್ನು ನಿರ್ಧರಿಸಿದೆವು. ಬುಲೋಜ್ ನಲ್ಲಿರುವ ಉತ್ಪಾದನೆಗಳ ಲೀಡ್ ಟೈಮ್ (ಲೀಡ್ ಟೈಮ್ ಅಂದರೆ, ಆರ್ಡರ್ ಸಿಕ್ಕಿದ ದಿನದಿಂದ ಅದು ಡಿಸ್ಪೇಚ್ ಮಾಡುವ ತನಕದ ಕಾಲಾವಧಿ) ಕಡಿಮೆ ಮಾಡುವುದು. ಲೀಡ್ ಟೈಮ್ ಕಡಿಮೆ ಮಾಡಿದಲ್ಲಿ ತನ್ನಷ್ಟಕ್ಕೆ ಗರಿಷ್ಠ ಪ್ರಮಾಣದಲ್ಲಿ ಕ್ಷಮತೆಯನ್ನು ಬಳಸುವ ಕಾಲಾವಧಿಯು ಲಭಿಸುತ್ತದೆ. ಬುಲೋಜ್ ನಲ್ಲಿ ಆನ್ ಟೈಮ್ ಪರ್ಫಾರ್ಮನ್ಸ್ ನ ರೇಟ್ ಕೂಡಾ ಆಪೇಕ್ಷೆಗಿಂತ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇತ್ತು. ಲೀಡ್ ಟೈಮ್ ಕಡಿಮೆ ಮಾಡಿದ್ದರಿಂದ ತಮ್ಮಲ್ಲಿರುವ ಲಭ್ಯತೆ, ಡ್ಯೂ ಡೇಟ್ ಪರ್ಫಾರ್ಮನ್ಸ್ ಮತ್ತು ಕ್ಷಮತೆಯೂ ಹೆಚ್ಚಾಗಲಿದೆ, ಎಂಬ ಅಂಶವು ವಿಶೇಷವಾಗಿ ಗಮನಕ್ಕೆ ಬಂತು.
 
ಪ್ರೊಜೆಕ್ಟ್ ಗಳ ಕುರಿತು ನಾವು ಆಳವಾದ ವಿಶ್ಲೇಷಣೆಯನ್ನು ಮಾಡುವ ಪ್ರಯತ್ನವನ್ನು ಮಾಡಿದೆವು. ಡಿಸೈನ್ ವಿಭಾಗವು ಎಷ್ಟು ವೇಗವಾಗಿ (ಪೇಸ್) ಕೆಲಸ ನಿರ್ವಹಿಸುತ್ತಾರೋ, ಅಷ್ಟೇ ಪ್ರಮಾಣದಲ್ಲಿ ಅವರ ಔಟ್ ಪುಟ್ ವೃದ್ಧಿಸಲಿದೆ, ಎಂಬುದು ನಮ್ಮ ಗಮನಕ್ಕೆ ಬಂತು. ಇದರಿಂದಾಗಿ ಡಿಸೈನ್ ವಿಭಾಗದಲ್ಲಿ ಸುಧಾರಣೆಗಳನ್ನು ಮಾಡುವುದನ್ನು ನಾವು ನಿರ್ಧರಿಸಿದೆವು. ಅದಕ್ಕೆ ಅನುಸಾರವಾಗಿ ನಾವು ಯೋಜನೆಯನ್ನು ರೂಪಿಸಿದೆವು. ಇವೆಲ್ಲಕ್ಕೋಸ್ಕರ ಈ ಥಿಯರಿಯನ್ನು ಹೇಗೆ ಅನುಷ್ಠಾನಗೊಳಿಸಿದೆವು ಎಂಬುದರ ಕುರಿತು ಈಗ ನಾವು ತಿಳಿದುಕೊಳ್ಳೋಣ. ಆದರೆ ಅದಕ್ಕಿಂತ ಮುಂಚೆ ನಿರ್ಬಂಧಗಳ ಸಿದ್ಧಾಂತದ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
 
ನಿರ್ಬಂಧಗಳ ಸಿದ್ಧಾಂತ ಎಂಬುದೊಂದು ಹೋಲಿಸ್ಟಿಕ್ ಥಿಯರಿಯಾಗಿದೆ. ಸಮಸ್ಯೆಯ ಕಾರಣ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು (ಕಾಜ್ ಎಂಡ್ ಇಫೆಕ್ಟ್ ನ ರಿಲೇಶನ್) ಅರಿತುಕೊಂಡು, ಪ್ರಮುಖ ಸಮಸ್ಯೆಯೆಡೆಗೆ ಗಮನವನ್ನು ಕೇಂದ್ರೀಕರಿಸಿ, ಕನ್ ಸ್ಟ್ರೇಂಟ್ ಏನಿದೆ ಎಂಬುದು ತಿಳಿದಾಗ ಈ ಥಿಯರಿಯನ್ನು ಪ್ರತ್ಯಕ್ಷವಾಗಿ ಅವಲಂಬಿಸುವುದು ಇನ್ನಷ್ಟು ಸುಲಭವಾಗುತ್ತದೆ.
 
ಯಾವುದೇ ಉತ್ಪಾದನೆಯಲ್ಲಿ ಚೈನ್ ಕುರಿತು ವಿಚಾರ ಮಾಡಿದಾಗ, ಒಂದೇ ಮಶಿನ್ ನಿಂದ ಹೊರಬರುವ ಔಟ್ ಪುಟ್, ಇನ್ನೊಂದು ಮಶಿನ್ ಗೆ ಬೇಕಾಗುವ ಇನ್ ಪುಟ್ ಆಗಿರುತ್ತದೆ. ಎರಡನೇ ಮಶಿನ್ ನ ಔಟ್ ಪುಟ್ ಮೂರನೇ ಮಶಿನ್ ನ ಇನ್ ಪುಟ್. ಯಾವುದೇ ಚೈನ್ ನಲ್ಲಿರುವ ಸಾಮರ್ಥ್ಯವು ಅದರಲ್ಲಿರುವ ದುರ್ಬಲತೆಯಿಂದ ನಿರ್ಧರಿಸಲ್ಪಡುತ್ತದೆ. ಕಾರ್ಖಾನೆಯಲ್ಲಿರುವ ಕಾರ್ಯ ಸಾಮರ್ಥ್ಯವು ಅಲ್ಲಿರುವ ಕಡಿಮೆ ಕ್ಷಮತೆಯುಳ್ಳ ಇಕ್ವಿಪ್ ಮೆಂಟ್ ಗಳಲ್ಲಿ ಅವಲಂಬಿಸಿ ಇರುತ್ತದೆ. ಕಡಿಮೆ ಕಾರ್ಯ ಕ್ಷಮತೆಯುಳ್ಳ ಮಶಿನ್ ಗಳ ಸುತ್ತಮುತ್ತ ಬೃಹತ್ ಪ್ರಮಾಣದಲ್ಲಿ ಮಟೀರಿಯಲ್ ಸಾಲಾಗಿ (ಕ್ಯೂ) ಇರುವುದು ಕಂಡುಬರುತ್ತದೆ. ಅಂದರೆ ಇಂತಹ ಮಶಿನ್ ಗಳ ಕಾರ್ಯಸಾಮರ್ಥ್ಯವು ಇನ್ನಿತರ ಮಶಿನ್ ಗಳಿಗಿಂತ ಕಡಿಮೆ ಇರುವುದೇ ನಮ್ಮ ಅಡಚಣೆ ಅಂದರೆ ಕನ್ ಸ್ಟ್ರೇಂಟ್. ಈ ಸಂಪೂರ್ಣ ಥಿಯರಿ ಇಂತಹ ಕನ್ ಸ್ಟ್ರೇಂಟ್ ಗೆ ಅಧರಿಸಿದೆ. ಮೊದಲು ಕನ್ ಸ್ಟ್ರೇಂಟ್ ಯಾರು ಅಥವಾ ಏನಿದೆ ಎಂಬುದನ್ನು ಹುಡುಕಬೇಕು. ಕಾರ್ಖಾನೆಗಳಲ್ಲಿ ಸುಧಾರಣೆಗಳನ್ನು ಮಾಡಲು ಕೇವಲ ಕನ್ ಸ್ಟ್ರೇಂಟ್ ನಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಇದನ್ನು ಬಿಟ್ಟು ಇನ್ನಿತರ ಅಂಶಗಳ ಕಡೆಗೆ ಗಮನ ಹರಿಸಿದಲ್ಲಿ ಅದು ವ್ಯರ್ಥವಾಗುತ್ತದೆ. ಕನ್ ಸ್ಟ್ರೇಂಟ್ ತಿಳಿದಕೊಂಡ ನಂತರ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಆ ಕನ್ ಸ್ಟ್ರೇಂಟ್ ದೂರ ಮಾಡುವ ಬದಲಾಗಿ ಅದರ ವ್ಯವಸ್ಥಾಪನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಅನುಷ್ಠಾನಗೊಳಿಸಬಹುದು, ಈ ಕುರಿತು ಥಿಯರಿಯು ಮಾರ್ಗದರ್ಶನವನ್ನು ನೀಡುತ್ತದೆ.
ಸಂಶೋಧಿಸಿರುವ ಕನ್ ಸ್ಟ್ರೇಂಟ್ ನ ವ್ಯವಸ್ಥಾಪನೆಯ ನಿಟ್ಟಿನಲ್ಲಿ ಐದು ಫೋಕಸಿಂಗ್ ಸ್ಟೆಪ್ಸ್ ಈ ಥಿಯರಿಯಲ್ಲಿ ಹೇಳಲಾಗಿದೆ.
 
1. ಮೊದಲಾಗಿ ಕನ್ ಸ್ಟ್ರೇಂಟ್ ಎಲ್ಲಿದೆ ಎಂಬುದನ್ನು ಹುಡುಕಿರಿ.
2. ಆ ಕನ್ ಸ್ಟ್ರೇಂಟ್ ಹೇಗೆ ಎಕ್ಸ್ ಪ್ಲ್ಯೊಟ್ ಮಾಡುವುದು ಎಂಬುದನ್ನು ನಿರ್ಧರಿಸಿರಿ. ಅದನ್ನು ಶೇಕಡಾ 100 ರಷ್ಟು ಬಳಸಬಹುದು ಎಂಬುದರ ಕುರಿತು ವಿಚಾರ ಮಾಡಿರಿ.
3. ಸಬಾರ್ಡಿನೇಟ್ ಎವರಿಥಿಂಗ್ ಎಲ್ಸ್. ಎಲ್ಲೆಲ್ಲಿ ಹೆಚ್ಚು ಕ್ಷಮತೆಯುಳ್ಳ ಮಶಿನ್ ಗಳು ಕೆಲಸವನ್ನು ನಿರ್ವಹಿಸುತ್ತವೆಯೋ, ಅಲ್ಲಿಲ್ಲಿ ವೇಗವನ್ನು ಕಡಿಮೆ ಮಾಡಿರಿ ಮತ್ತು ಕನ್ ಸ್ಟ್ರೇಂಟ್ ಗೋಸ್ಕರ ಆವಶ್ಯಕವಿರುವ ವೇಗದಲ್ಲಿ ಇನ್ನಿತರ ಎಲ್ಲ ಅಂಶಗಳು ಕೆಲಸವನ್ನು ನಿರ್ವಹಿಸಬಲ್ಲವು, ಎಂಬುದನ್ನು ಖಾತರಿ ಮಾಡಿರಿ. ಈ ಹಂತದ ಕೆಲಸವು ಕಷ್ಟಕರವಾಗಿದ್ದರೂ ಕೂಡಾ ಅದನ್ನು ನಿರ್ವಹಿಸುವುದು ಅತ್ಯಗತ್ಯವಾಗಿದೆ.
4. ನಂತರ ಆರ್ಡರ್ ನ ಸಂಖ್ಯೆ ಮತ್ತು ಲಭ್ಯವಿರುವ ಸಾಮರ್ಥ್ಯ ಇದರಲ್ಲಿ ಇನ್ನಷ್ಟು ವ್ಯತ್ಯಾಸವಿದ್ದಲ್ಲಿ, ಹುಡುಕಿರುವ ಕನ್ ಸ್ಟ್ರೇಂಟ್ ನ ಸಾಮರ್ಥ್ಯವನ್ನು ವೃದ್ಧಿಸಬೇಕು.
5. ಮೇಲಿನ ಎಲ್ಲ ರೀತಿಯ ಹಂತಗಳನ್ನು ಪೂರ್ತಿ ಮಾಡಿದ ನಂತರ, ಮೊದಲು ಹುಡುಕಿರುವ ಕನ್ ಸ್ಟ್ರೇಂಟ್ ಗಳು ಈಗ ಅಸ್ತಿತ್ವದಲ್ಲಿಲ್ಲ. ಈ ಸ್ಥಿತಿಯಲ್ಲಿ ಮೇಲೆ ತಿಳಿಸಿರುವ ಎಲ್ಲ ಹಂತಗಳನ್ನು ಮತ್ತೆ ಅವಲಂಬಿಸಿಬೇಕು. ಇದರಿಂದಾಗಿ ಇನ್ನು ಯಾವುದೇ ರೀತಿಯ ಕನ್ ಸ್ಟ್ರೇಂಟ್ ಇದ್ದರೂ ಕೂಡಾ ಅದನ್ನು ಹುಡುಕುವುದು ಸುಲಭವಾಗುತ್ತದೆ, ಎಂಬ ಅಂಶವು ತಮ್ಮ ಗಮನಕ್ಕೆ ಬರಬಲ್ಲದು.
ಥಿಯರಿ ಆಫ್ ಕನ್ ಸ್ಟ್ರೇಂಟ್ ನಲ್ಲಿ ಥ್ರೂಪುಟ್, ಬಂಡವಾಳದ ಹೂಡಿಕೆ ಮತ್ತು ಆಪರೇಟಿಂಗ್ ಎಕ್ಸ್ ಪೆನ್ಸೆಸ್ ಈ ಮೂರು ವಿಧದ ಪ್ರಮುಖ ಘಟಕಗಳಿವೆ. ಥ್ರೂಪುಟ್ ಅಂದರೆ ವಸ್ತುಗಳ ಬೆಲೆಯನ್ನು ಕಳೆದು ಕೇವಲ ವೆರಿಯೇಬಲ್ ಖರ್ಚು. ಯಾವ ಬೆಲೆಯಿಂದಾಗಿ ಆಪರೇಟಿಂಗ್ ಎಕ್ಸ್ ಪೆನ್ಸೆಸ್ ಹೆಚ್ಚಾಗುತ್ತದೆಯೇ, ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಬೆಲೆಯಲ್ಲಿ ಥ್ರೂಪುಟ್ ನಲ್ಲಿ ಹೆಚ್ಚಳವಾಗಬೇಕು ಎಂಬುದಾಗಿ ನಾವು ಹೇಳುತ್ತೇವೆ. ಆಪರೇಟಿಂಗ್ ಎಕ್ಸ್ ಪೆನ್ಸೆಸ್ ಒಂದು ನಿಗದಿಸಿರುವ ಮಿತಿಗಿಂತ ಕಡಿಮೆ ಮಾಡಬಲ್ಲೆವು. ಆದರೆ ಅದನ್ನು ಸೊನ್ನೆ ಮಾಡುವುದು ಅಸಾಧ್ಯ. ಇದರಿಂದಾಗಿ ಥ್ರೂಪುಟ್ ಹೆಚ್ಚಿಸುವಲ್ಲಿ ಹೆಚ್ಚು ಗಮನವನ್ನು ಹರಿಸುತ್ತೇವೆ. ಇದನ್ನು ಮಾಡುವಾಗ ಆಪರೇಟಿಂಗ್ ಕಾಸ್ಟ್ ಸ್ಥಿರವಾಗಿರಬೇಕು ಮತ್ತು ಬಂಡವಾಳದ ಹೂಡಿಕೆಯು ಕಡಿಮೆಯಾಗಬೇಕು. ಕನಿಷ್ಠ ಪ್ರಮಾಣದ ಇನ್ವೆಂಟರಿಯಲ್ಲಿ ಗರಿಷ್ಠ ಪ್ರಮಾಣದ ಉತ್ಪಾದನೆಯನ್ನು ಮಾಡುವಲ್ಲಿ, ವಿಶೇಷವಾಗಿ ಗಮನವನ್ನು ಕ್ರೇಂದ್ರೀಕರಿಸಬೇಕು. ಈ ಥಿಯರಿಯನ್ನು ಬಳಸಿ ನಮಗೆ ನಗದಿಯ ಲಭ್ಯತೆ (ಕ್ಯಾಶ್ ಜನರೇಶನ್) ಮಾಡುವುದು ಸಾಧ್ಯವಿದೆ. ನಾವು ಲೀಡ್ ಟೈಮ್ ಕಡಿಮೆ ಮಾಡುತ್ತೇವೆ, ಅಂದರೆ ಪ್ಲಾಂಟ್ ನ ಕ್ಷಮತೆಯನ್ನು ವೃದ್ಧಿಸುತ್ತೇವೆ. ಒಂದು ವೇಳೆ ಈ ಹಿಂದೆ ಆರ್ಡರ್ ಗಳನ್ನು 10 ದಿನಗಳಲ್ಲಿ ಪೂರ್ತಿಗೊಳಿಸುತ್ತಿದ್ದಲ್ಲಿ, ಈಗ ಅದನ್ನು 7 ದಿನಗಳಲ್ಲಿಯೇ ಪೂರ್ತಿಸಬಲ್ಲಿರಿ. ಇದರಿಂದಾಗಿ ನೀವು ಗರಿಷ್ಠ ಪ್ರಮಾಣದ ಆರ್ಡರ್ ಗಳನ್ನು ಪೂರ್ತಿ ಮಾಡಬಲ್ಲಿರಿ ಅಲ್ಲದೇ ಇದರಿಂದಾಗಿ ನಿಮ್ಮ ಕಾರ್ಖಾನೆಯಲ್ಲಿ ಹೆಚ್ಚು ಪ್ರಮಾಣದ ನಗದಿಯ ಲಭ್ಯವಾಗಬಲ್ಲದು, ಇದೇ ಇದರ ಅರ್ಥ.
 
ನಗದಿಯ ಲಭ್ಯತೆಯ ಕುರಿತು ವಿಚಾರ ಮಾಡುವಾಗ ಥಿಯರಿ ಆಫ್ ಕನ್ ಸ್ಟ್ರೇಂಟ್ ಬಳಸಿ ಅದನ್ನು ಹೇಗೆ ನಿರ್ವಹಿಸುವುದು, ಎಂಬದರ ಕುರಿತು ವಿವರಿಸುತ್ತೇನೆ. ಮೊದಲಾಗಿ ಡ್ಯೂ ಡೆಟ್ ಗೆ ಅನುಸಾರವಾಗಿ ಎಲ್ಲ ಪ್ರಾಡಕ್ಟ್ ಗಳ ಆರ್ಡರ್ ಗಳನ್ನು ಪ್ರಾಧಾನ್ಯತೆಯಿಂದ (ಪ್ರಿಯಾರಿಟಿ) ನಿರ್ಧರಿಸುವುದು. ಅದೇ ಕ್ರಮದಲ್ಲಿ ಎಲ್ಲ ಆರ್ಡರ್ ಗಳ ಕುರಿತಾದ ಕೆಲಸವನ್ನು ನಿರ್ವಹಿಸಬೇಕು. ಡ್ಯೂ ಡೇಟ್ ಗೆ ಅನುಸಾರವಾಗಿ ಯಾವ ದಿನಾಂಕಕ್ಕೆ ನಾವು ನಿರ್ಧರಿಸಿರುವ ಕನ್ ಸ್ಟ್ರೇಂಟ್ ನಿಂದ ಆಯಾ ಉತ್ಪಾದನೆಯ ಪ್ರಕ್ರಿಯೆಯಾಗಲಿದೆ, ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಂದರೆ ಕನ್ ಸ್ಟ್ರೇಂಟ್ ನಲ್ಲಿ ಪ್ರಕ್ರಿಯೆ ಮಾಡುವ ಅಗತ್ಯವಿದೆ ಎಂಬುದು ನಿರ್ಧರಿಸಲ್ಪಡುತ್ತದೆ. ಯೋಜನೆಗಳಿಗೆ ಅನುಸಾರವಾಗಿ ಲಭ್ಯವಿರುವ ಕೆಲಸಗಳ ಪ್ರಸ್ತುತ ಸ್ಥಿತಿಯಿಂದ ವರ್ಗೀಕರಣವನ್ನು ಮಾಡುವುದೂ ಸಾಧ್ಯ. ಇಂತಹ ಒಂದು ದಿನಾಂಕಕ್ಕೆ ಇಂತಹ ಒಂದು ಪ್ರಕ್ರಿಯೆಯನ್ನು ಮಾಡುವ ಅಗತ್ಯವಿದೆ. ಆ ಪ್ರಕ್ರಿಯೆಯು ಆ ದಿನಾಂಕದ ನಂತರ ಬೇರೆ ಬಣ್ಣದಲ್ಲಿ ತೋರಿಸಲ್ಪಡುತ್ತದೆ. ಯಾವುದೇ ಒಂದು ಆರ್ಡರ್ ನ ದಿನಾಂಕವು ಸಮೀಪದಲ್ಲಿ ಬಂದಿದ್ದಲ್ಲಿ ಅದನ್ನು ಬೇರೆ ಬಣ್ಣದಿಂದ ತೋರಿಸಲಾಗಿದೆ. ಕೆಲವು ಆರ್ಡರ್ ಗಳಿಗೆ ತುಂಬಾ ದಿನಗಳಿದ್ದಲ್ಲಿ ಅದಕ್ಕೋಸ್ಕರ ಬೇರೆ ಬಣ್ಣವನ್ನು ನೀಡಲಾಗಿದೆ. ಇಂತಹ ವಿವಿಧ ಬಣ್ಣಗಳ ವರ್ಗೀಕರಣವನ್ನು ಮಾಡಲಾಗುತ್ತದೆ. ಇದರಿಂದಾಗಿ ಆರ್ಡರ್ ಕಡೆಗೆ ನಮ್ಮ ತಂಡದ ಪ್ರತಿಯೊಬ್ಬನು ಗಮನ ಇಡುತ್ತಾನೆ. ಅಲ್ಲದೇ ಡ್ಯೂ ಡೇಟ್ ನ ಮುಂಚೆ ಆ ಆರ್ಡರ್ ಗಳನ್ನು ಪೂರ್ತಿಗೊಳಿಸುವುದು ಸಾಧ್ಯವಾಗುತ್ತದೆ.
 
ಆರ್ಡರ್ ಪಡೆಯುವಾಗ ತಮಗೆ ಪೂರಕವಾಗುವಂತಹ ಚುನಾಯಿಸಿರುವ ಆರ್ಡರ್ ಗಳನ್ನು ಪಡೆಯುವುದು ಸಾಧ್ಯವಾಗುವ ರೀತಿಯಲ್ಲಿ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಕಾರಣ ಅದರಲ್ಲಿ ಹೆಚ್ಚು ಲಾಭವಾಗುತ್ತದೆ. ಇಂತಹ ಪ್ರಯತ್ನವನ್ನು ನಾವು ಬುಲೋಜ್ ನಲ್ಲಿ ಮಾಡಿದೆವು. ಮೊದಲು ನಾವು ಟೋಟಲ್ ಕಾಸ್ಟ್ ನ್ನು ವೆರಿಯೇಬಲ್ ಕಾಸ್ಟ್, ಟ್ರೂಲಿ ವೆರಿಯೇಬಲ್ ಕಾಸ್ಟ್ ಮತ್ತು ಫಿಕ್ಸ್ಡ್ ಕಾಸ್ಟ್ ಎಂಬ ಮೂರು ಭಾಗಗಳಲ್ಲಿ ವರ್ಗೀಕರಿಸಿದೆವು. ಆರ್ಡರ್ ಸಿಲೆಕ್ಷನ್ ನಲ್ಲಿ ಮೊದಲ ಅಂಶವೆಂದರೆ ಆ ಆರ್ಡರ್ ನಿಂದ ಎಷ್ಟು ಥ್ರೂಪುಟ್ ಲಭಿಸಬಲ್ಲದು ಎಂಬುದಾಗಿದೆ. ಉಳಿದ ಎಲ್ಲ ಇನ್-ಡೈರೆಕ್ಟ್ ಖರ್ಚುಗಳನ್ನು ಬದಿಗಿರಿಸಿದೆವು. ಅದರೊಂದಿಗೆ ಪ್ರತಿ ವಾರಕ್ಕೆ ಮಾಡಲಾಗುವ ಉತ್ಪಾದನೆಯ ಥ್ರೂಪುಟ್ ಇದು ಆಪರೇಟಿಂಗ್ ಖರ್ಚಿಗಿಂತ ಹೆಚ್ಚಿರಬೇಕು. ಈ ರೀತಿಯ ಶಿಸ್ತನ್ನು ನಾವು ಬುಲೋಜ್ ನಲ್ಲಿ ಅನ್ವಯಿಸಿದೆವು.
ದೀಪಕ ದೇವಧರ : ಪರಾಗ್ ಇವರೇ, ಥ್ರೂಪುಟ್ ಹೆಚ್ಚಿಸಲು ತಾವು ಏನು ಮಾಡಿದಿರಿ ಮತ್ತು ಅದನ್ನು ಮಾಡುವಾಗ ತಮಗೆ ಯಾವ ಸಮಸ್ಯೆಗಳನ್ನು ಎದುರಿಸಬೇಕಾಯಿತು?
ಪರಾಗ್ ಪ್ರಭುದೇಸಾಯಿ : ನಮಗೆ ಇದು ಮಾತ್ರ ನಿಜವಾಗಿಯು ಹೊಸದಾದ ವಿಷಯವಾಗಿತ್ತು. ಇದೊಂದು ವಿಶಿಷ್ಟ ರೀತಿಯ ಬೇರೆಯೇ ಆದ ವ್ಯವಸ್ಥೆ ಆಗಿರುವುದರಿಂದ ನಮಗೆ ಸ್ವಂತಕ್ಕೆ ಮೊದಲಾಗಿ ಅರಿತುಕೊಳ್ಳುವುದು ಅತ್ಯಾವಶ್ಯಕವಾಗಿತ್ತು. ಇದರಲ್ಲಿ ಮೊತ್ತಮೊದಲಾಗಿ ಒಂದು ಗುರಿಯನ್ನು ನಿಗದಿಸುವುದು ಅಗತ್ಯವಾಗಿದೆ. ನಾವು ಇದನ್ನು ಮಾಡುವುದೆಂದು ನಿರ್ಧರಿಸಿದಾಗ ಇದಕ್ಕೋಸ್ಕರ IT ಇನ್ಫ್ರಾಸ್ಟ್ರಕ್ಚರ್ ಅಗತ್ಯವಿದೆ, ಎಂಬುದು ಗಮನಕ್ಕೆ ಬಂತು. ಬುಲೋಜ್ ನಲ್ಲಿ ERP ಯನ್ನು ಬಳಸುತ್ತಿದ್ದೆವು. ಎಲ್ಲ ರೀತಿಯ ಡಾಕ್ಯುಮೆಂಟೇಶನ್ ನ ಡಾಟಾ ERP ಯಲ್ಲಿಯೇ ಇತ್ತು. ಉತ್ಪಾದಿಸಿರುವ ವಸ್ತುಗಳು ಅಥವಾ ಪ್ರೊಜೆಕ್ಟ್ ERP ಅಥವಾ IT ಬಳಸಿ ಮಾಡುವುದಾದಲ್ಲಿ ಬಿಲ್ ಆಫ್ ಮಟೀರಿಯಲ್ ಅಥವಾ ಎಲ್ಲ ಡ್ರಾಯಿಂಗ್ ಗಳು ನಿರ್ದೋಷವಾಗಿ ಇರಬೇಕು, ಎಂಬುದು ಇನ್ನೊಂದು ಮಹತ್ವದ ಅಂಶ. ಪ್ರತ್ಯಕ್ಷವಾಗಿ ಇರುವ ಮಟೀಯಲ್ ನ ಸಂಗ್ರಹಣೆ ಮತ್ತು ಸಿಸ್ಟಮ್ ನಲ್ಲಿ ತೋರಿಸಲಾಗುವ ಸಂಗ್ರಹಣೆ ಇವುಗಳ ರಿಕನ್ಸಿಲಿಯೇಶನ್ ಮಾಡಿ ಸಂಗ್ರಹಣೆಯ ಅಂಕೆ-ಸಂಖ್ಯೆಗಳನ್ನು ನಿಖರವಾಗಿ ಇಡಬೇಕು. ಪರ್ಚೇಸ್ ಆರ್ಡರ್, ಸೇಲ್ ಆರ್ಡರ್ ನ ಮಾಹಿತಿಯು ಸರಿಯಾಗಿ ಇರಬೇಕು. ಪ್ರತಿಯೊಂದು ಆರ್ಡರ್ ನ ಸ್ಥಿತಿಯು ಏನಿದೆ, ಪೆಂಡಿಂಗ್ ಆರ್ಡರ್ ಗಳು ಎಷ್ಟಿವೆ, ಗ್ರಾಹಕರಿಗೆ ಉತ್ಪಾದನೆಗಳನ್ನು ತಲುಪಿಸುವ ದಿನಾಂಕ ಯಾವುದು, ಇತ್ಯಾದಿ ಅಂಶಗಳ ಕಡೆಗೆ ಸೂಕ್ಷ್ಮವಾಗಿ ಗಮನ ಹರಿಸಬೇಕು.
 
ಥಿಯರಿ ಆಫ್ ಕನ್ ಸ್ಟ್ರೇಂಟ್ ನಿಂದಾಗಿ ನಮಗೆ ಸಂಪೂರ್ಣ ಕಂಪನಿಯಲ್ಲಿ ಉತ್ಪಾದನೆಗಳದ್ದಾಗಿರಲಿ ಅಥವಾ ಪ್ರೊಜೆಕ್ಟ್ ನದ್ದಾಗಿರಲಿ ಪ್ರಕ್ರಿಯೆಯನ್ನು ನಿರ್ಧರಿಸುವುದು ಸಾಧ್ಯವಾಯಿತು. ಪ್ರತಿಯೊಬ್ಬರ ಜಾಬ್ ರೋಲ್, ಅವರ KRA, KPI ಇಂತಹ ಅಂಶಗಳನ್ನು ನಿಗದಿಸಲಾಯಿತು. ಥ್ರೂಪುಟ್ ಮತ್ತು ಆನ್ ಟೈಮ್ ಡಿಲಿವರಿಯ ಗುರಿಯನ್ನು ಕಂಪನಿಯಲ್ಲಿರುವ ಎಲ್ಲರಿಗೂ ನೀಡಲಾಯಿತು. ಯೋಜನೆಯನ್ನು ಮಾಡುವಾಗ ಬಫರ್ ಕುರಿತು (ಕಚ್ಚಾ ವಸ್ತುಗಳ ಬಫರ್ ಮತ್ತು ಸೆಮಿ ಫಿನಿಶ್ಡ್ ಮತ್ತ ಆವಶ್ಯಕತೆಗೆ ತಕ್ಕಂತೆ ವಸ್ತುಗಳ ಬಫರ್) ವಿಚಾರ ಮಾಡಿ ಅದನ್ನು ಯೋಜನೆಯಲ್ಲಿ ಅಳವಡಿಸುವ ವ್ಯವಸ್ಥೆಯಿಂದಾಗಿ ಕೆಲಸವು ಸುಲಲಿತವಾಗಿ ನಡೆಯಿತು.
 
ಈ ವ್ಯವಸ್ಥೆಯ ಅನುಷ್ಠಾನವು ನಮಗೋಸ್ಕರ ಹೊಸದಾಗಿದ್ದರೂ ಕೂಡಾ ನಮ್ಮಲ್ಲಿರುವ ಪ್ರತಿಯೊಬ್ಬರಿಗೂ ಅದರ ಕುರಿತು ಆಳವಾದ ಅಭ್ಯಾಸವನ್ನು ಮಾಡುವುದು ಅಷ್ಟೇ ಅಗತ್ಯದ ವಿಷಯವಾಗಿತ್ತು. ಸಂಪೂರ್ಣ ತಂಡವನ್ನು ಒಂದೇ ಪ್ಲ್ಯಾಟ್ ಫಾರ್ಮ್ ನಲ್ಲಿ ತರುವುದೂ ಮಹತ್ವದ ವಿಷಯವೇ ಆಗಿತ್ತು. ಗೇಟ್ ನಲ್ಲಿರುವ ಭದ್ರತೆಯನ್ನು ಕಾಪಾಡುವ ವ್ಯಕ್ತಿಯಿಂದ ಹಿಡಿದು ಉನ್ನತ ಅಧಿಕಾರದಲ್ಲಿರುವ ವ್ಯಕ್ತಿಗಳ ತನಕ ಥ್ರೂಪುಟ್ ಎಂಬ ಕಲ್ಪನೆಯನ್ನು ಮನವರಿಕೆಯಾಗುವಂತೆ ವಿವರಿಸಲಾಯಿತು. ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಾಗ ಹಿರಿಯ ವ್ಯವಸ್ಥಾಪನೆಯು ಅದರಲ್ಲಿ ಸಕ್ರಿಯವಾದ ಸಹಭಾಗಿತ್ವವನ್ನು ಮಾಡುವುದು ಮಹತ್ವದ್ದಾಗಿರುತ್ತದೆ. ನಿಮಗೆ ನಿಮ್ಮ ಕೆಲಸದ ನೀತಿಗಳಲ್ಲಿ ಸೂಕ್ತ ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಥಿಯರಿ ಆಫ್ ಕನ್ ಸ್ಟ್ರೇಂಟ್ ನಂತೆಯೇ ಕಾರ್ಖಾನೆಯಲ್ಲಿ ವೆಟಿಂಗ್ ಟೈಮ್ ಕಡಿಮೆ ಇರಬೇಕು. ಪ್ರತ್ಯಕ್ಷವಾಗಿ ಯಾವುದೇ ಪ್ರಕ್ರಿಯೆಗೋಸ್ಕರ ಟಚ್ ಟೈಮ್ ಅಂದರೆ ಅದರ ಕೆಲಸವು ತುಂಬಾ ಕಡಿಮೆಯೇ ಇರುತ್ತದೆ. ಆದರೆ ನೀವು ಅದಕ್ಕೋಸ್ಕರ ಕಾಯುತ್ತಿರುತ್ತೀರಿ. ಯಾವುದೇ ಮಟೀರಿಯಲ್, ಡಾಕ್ಯುಮೆಂಟ್ ಬರಬೇಕಾಗಿರುತ್ತದೆ, ಇದಕ್ಕೆ ತಗಲುವ ಸಮಯವನ್ನು ಕಡಿಮೆ ಮಾಡಲು ನಿಮ್ಮಲ್ಲಿ ಪೂರಕ ಯಂತ್ರಣೆಗಳು ಇರಬೇಕು. ಇದಕ್ಕೋಸ್ಕರ ಪ್ರತಿಯೊಬ್ಬರೂ ಶಿಸ್ತನ್ನು ಪಾಲಿಸಬೇಕು. ಕಂಪನಿಯಲ್ಲಿ ಎಲ್ಲ ರೀತಿಯ ಮಾಹಿತಿಯು ಪ್ರತಿದಿನವೂ, ನಿಗದಿಸಿರುವ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಸೇರಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ವ್ಯವಸ್ಥೆಯು ಎಷ್ಟೇ ದೃಢವಾಗಿದ್ದರೂ ಕೂಡಾ ಅದರಿಂದ ಅಪೇಕ್ಷಿಸಿರುವ ಫಲಿತಾಂಶವು ಲಭಿಸಲಾರದು.
ಥಿಯರಿ ಆಫ್ ಕನ್ ಸ್ಟ್ರೇಂಟ್ ಗೆ ಅನುಸಾರವಾಗಿ ಸಮಯ ಮತ್ತು ಖರ್ಚು ಇವುಗಳಲ್ಲಿ ಒಂದನ್ನೇ ಆಯ್ಕೆ ಮಾಡುವ ಪರಿಸ್ಥಿತಿ ಬಂದಾಗ ಮೊದಲು ಸಮಯಕ್ಕೆ ಪ್ರಾಧಾನ್ಯತೆಯನ್ನು ನೀಡಬೇಕು. ಕಾರಣ ನಿಮ್ಮಲ್ಲಿ ಹೆಚ್ಚು ಸಮಯವು ಲಭ್ಯವಾದಲ್ಲಿ ಅದರಿಂದ ನೀವು ಜಾಸ್ತಿ ಹಣವನ್ನು ಗಳಿಸಬಲ್ಲಿರಿ. ಬುಲೋಜ್ ನಲ್ಲಿ ಈ ಕೆಲಸವನ್ನು ಪ್ರತ್ಯಕ್ಷವಾಗಿ ಕೈಗೆತ್ತಿಗೊಳ್ಳಲಾಯಿತು.
 
ನಮ್ಮಲ್ಲಿ ವಸ್ತುಗಳನ್ನು ಉತ್ಪಾದಿಸುವಾಗ ಅಸೆಂಬ್ಲಿಯ ಜಾಗದಲ್ಲಿ ತೆಗೆದುಕೊಂಡು ಹೋಗಿ ಅನೇಕ ಅಂಶಗಳು ಅಲ್ಲಿಯೇ ನಿಲ್ಲುತ್ತಿದ್ದವು. ಅಸೆಂಬ್ಲಿಯಿಂದ ಯಾವುದು ಮುಂದೆ ಸರಿಯಬೇಕಾಗಿತ್ತೋ, ಅದೇ ನಮ್ಮ ಅಂತಿಮವಾದ ಫ್ಲೋ ಆಗಿತ್ತು. ಅದಕ್ಕೆ ಮುಂಚೆ ಮಟೀರಿಯಲ್ ಬಂದು ಬಿದ್ದಿದಿರುತ್ತಿತ್ತು. ಅಸೆಂಬ್ಲಿಯಲ್ಲಿ ಯಾವುದೇ ಕೆಲಸವನ್ನು ನಿರ್ವಹಿಸದೇ ಇದ್ದಲ್ಲಿ ಇನ್ವೆಂಟರಿ ಮತ್ತು ಕ್ಯಾಶ್ ಗೆ ಸಂಬಂಧಪಟ್ಟ ಸಮಸ್ಯೆಗಳು ಉದ್ಭವಿಸುತ್ತಿದ್ದವು. ಯೋಜನೆಯಲ್ಲಿ ನಮಗೆ ಈ ಕನ್ ಸ್ಟ್ರೇಂಟ್ ಊಹಿಸಬೇಕಾಗುತ್ತಿತ್ತು. ಇದಕ್ಕೋಸ್ಕರ ನಾವು ‘ಫುಲ್ ಕಿಟ್’ ಪ್ರಣಾಳಿಕೆಯನ್ನು ಅವಲಂಬಿಸಿದೆವು. ಯಾವುದೇ ಅಸೆಂಬ್ಲಿ ಪ್ರಾರಂಭಿಸುವ ಮುಂಚೆ ಅದಕ್ಕೆ ಬೇಕಾಗುವ ಶೇಕಡಾ 100 ರಷ್ಟು ಮಟೀರಿಯಲ್ ಲಭ್ಯವಿರುವ ಕುರಿತು ಖಾತರಿ ವಹಿಸಿದೆವು.
ಯಜ್ಞ ಇವರ ತಂಡವು ನಮಗೋಸ್ಕರ ಎಕ್ಸೆಲ್ ಗೆ ಆಧರಿಸಿರುವ ಒಂದು ಪ್ಲಾನಿಂಗ್ ಶೀಟ್ ತಯಾರಿಸಿದರು. ನಮ್ಮಲ್ಲಿರುವ ವ್ಯವಸ್ಥೆಗೆ ಅದನ್ನು ಇಂಟಿಗ್ರೇಟ್ ಮಾಡಿದರು. ಈಗ ನಮ್ಮಲ್ಲಿ ಎಲ್ಲ ರೀತಿಯ ಡಾಟಾ ERP ಯಿಂದಲೇ ಲಭಿಸುತ್ತದೆ.
 
ಕಲರ್ ಸಿಸ್ಟಮ್ ನಿಂದಾಗಿ ಕಾರ್ಖಾನೆಯಲ್ಲಿ ಮಾಡಲಾಗುವ ಕೆಲಸಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಾರದರ್ಶಕತೆಯು ಉಂಟಾಯಿತು. ಅನೇಕ ರೀತಿಯಲ್ಲಿ ವರ್ಗೀಕರಣ ಮಾಡಿ ಅದನ್ನು ವಿವಿಧ ಬಣ್ಣಗಳಿಂದ ತೋರಿಸಲಾಯಿತು. ಅದರ ಡಿಸ್ಪ್ಲೆಯನ್ನು ಕಾರ್ಖಾನೆಯಲ್ಲಿ ಅಳವಡಿಸಿರುವ ಟಿವಿಯಲ್ಲಿ ತೋರಿಸಿದೆವು. ಪ್ರತಿ ದಿನವೂ ನಮ್ಮ ಉತ್ಪಾದಿತ ವಸ್ತುಗಳು ಮತ್ತು ಯೋಜನೆಯ ಕುರಿತಾದ ಕೆಲಸಗಳ ಪ್ರಸ್ತುತ ಸ್ಥಿತಿಯನ್ನು ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ. ಅದಕ್ಕೆ ಅನುಸಾರವಾಗಿ ಯಾವ ಜಾಗದಲ್ಲಿ ಯಾವ ಕೃತಿಯನ್ನು ಮಾಡಬೇಕು, ಎಂಬುದರ ಕುರಿತು ಮೊದಲೇ ತಿಳಿಯುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಎಲ್ಲ ರೀತಿಯ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ಪಡೆಯುವುದು ಸಾಧ್ಯವಾಯಿತು. ಕೇವಲ ಅದಕ್ಕೋಸ್ಕರ ಡಾಟಾ ಎಂಟ್ರಿಯ ಕೆಲಸವು ಅತ್ಯಂತ ಮಹತ್ವದ್ದಾಗಿದೆ. ಈ ಸಿಸ್ಟಮ್ ನಲ್ಲಿ ಒಂದು ವಾರದ ಸ್ಕೋರ್ ಕಾರ್ಡ್ ಕೂಡಾ ಲಭಿಸುತ್ತದೆ. ಉತ್ಪಾದನೆಗಳಿಗೆ ಅನುಸಾರವಾಗಿ ಅದರ ಥ್ರೂಪುಟ್ ಏನಿರಬಹುದು ಎಂಬ ಅಂದಾಜು ಕಾರ್ಡ್ ನಲ್ಲಿ ಸಿಗುತ್ತದೆ. ಇದರ ಮೇಲ್ವಿಚಾರಣೆಯನ್ನು ಪ್ರತಿ ವಾರದಲ್ಲಿ ಮಾಡಬೇಕಾಗುತ್ತದೆ. ಇದರಿಂದಾಗಿ ನಮ್ಮ ಸ್ಥಿತಿಯು ಏನಿದೆ, ಎಲ್ಲಿದೆ ತಲುಪಬಲ್ಲದು, ಮುಂದಿನ ವಾರದಲ್ಲಿ ಎಲ್ಲಿ ಮತ್ತು ಎಷ್ಟು ಗಮನ ಹರಿಸಬೇಕು, ಇತ್ಯಾದಿ ಅಂಶಗಳನ್ನು ತಿಳಿದುಕೊಳ್ಳುವುದು ಸಾಧ್ಯ.
 
ಇದರಿಂದಾಗಿ ನಮ್ಮ ಮಾರಾಟವು ಪ್ರತಿ ವರ್ಷ ಶೇಕಡಾ 20 ರಷ್ಟು ಹೆಚ್ಚಾಗುತ್ತಿದೆ. ಹಾಗೆಯೇ ಇನ್ವೆಂಟರಿಯ ಸ್ತರವು ಶೇಕಡಾ 15 ರಷ್ಟು ಪ್ರತಿ ವರ್ಷವೂ ಕಡಿಮೆಯಾಗುತ್ತಿದೆ. ಉತ್ಪಾದನೆಗಳ ಲಭ್ಯತೆಯು ಶೇಕಡಾ 95 ರಷ್ಟು ಲಭಿಸಿತು.
ಸಚಿನ್ ಶೇಟೆ : ಪ್ರತಿ ದಿನವೂ ನಾವು ಬರುತ್ತಿರುವ ಸವಾಲು, ಸ್ಪರ್ಧೆಗಳನ್ನು ಧೈರ್ಯದಿಂದ ಎದುರಿಸಬೇಕು. ಯಾವುದೇ ಒಂದು ವಿಷಯವು ತಮಗೆ ಇಷ್ಟವಾದಲ್ಲಿ ಮಾತ್ರ ಅದನ್ನು ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸುವಾಗ ಹಲವಾರು ಕಠೋರವಾದ ನಿರ್ಧಾರಗಳನ್ನು ಕೈಗೆತ್ತಿಗೊಳ್ಳಬೇಕು. ಇದರಿಂದಾಗಿ ಎಲ್ಲ ಕೆಲಸಗಳು ಸುಲಲಿತವಾಗಿ ನಡೆಯಬಲ್ಲವು, ಎಂಬುದು ಇನ್ನೊಂದು ಮಹತ್ವದ ಅಂಶವಾಗಿದೆ.
ಶಬ್ದ ನಿರೂಪಣೆ : ಸಯಿ ವಾಬಳೆ,
ಸಹಾಯಕ ಸಂಪಾದಕರು, ಉದ್ಯಮ ಪ್ರಕಾಶನ ಪ್ರೈ.ಲಿ.
@@AUTHORINFO_V1@@