ತಪಾಸಣೆಯ ಉಪಕರಣಗಳ ಕ್ಯಾಲಿಬ್ರೇಶನ್

@@NEWS_SUBHEADLINE_BLOCK@@

Lohkarya - Udyam Prakashan    30-Jan-2021   
Total Views |
ಭಾರತೀಯ ಸಂಸ್ಕೃತಿಯಲ್ಲಿ ಋಷಿಗಳ ಕುಲ ಮತ್ತು ಸ್ತ್ರೀ ಮೂಲವನ್ನು ಹುಡುಕಬಾರದು, ಎಂದು ಹೇಳಲಾಗುತ್ತದೆ. ಆದರೆ ಕಾರ್ಖಾನೆಗಳಲ್ಲಿರುವ ತಪಾಸಣೆಯನ್ನು ಮಾಡಲು ಬಳಸಲಾಗುವ ಉಪಕರಣಗಳ ಕುರಿತಾದ ಮಾತ್ರ ಅದರ ಕುಲ ಮತ್ತು ಮೂಲದ ತಿಳಿವಳಿಕೆ ಇರುವುದು ಸಾಲದು. ಆ ಉಪಕರಣಗಳು ತಮ್ಮ ಗುಣಗಳಿಗೆ ಅನುಸಾರವಾಗಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಮಾತ್ರ ಅವುಗಳನ್ನು ತಮ್ಮದೆಂದು ತಿಳಿಯಲಾಗುತ್ತದೆ. ಕೈಗಾರಿಕೋದ್ಯಮಗಳಲ್ಲಿ ಉತ್ಪಾದನೆಗಳ ಗುಣಮಟ್ಟಕ್ಕೋಸ್ಕರ ಮಾಪನಗಳಲ್ಲಿ ನಿಖರತೆಗೆ ತುಂಬಾ ಮಹತ್ವವನ್ನು ನೀಡಲಾಗಿದೆ. ಕ್ಯಾಲಿಬ್ರೇಟ್ ಮಾಡಿ ನಿರ್ದೋಷತೆಯುಳ್ಳ ಮಾಪನಗಳ ಉಪಕರಣಗಳನ್ನು ಬಳಸುವುದು, ಉತ್ಪಾದನೆಯ ಗುಣಮಟ್ಟಕ್ಕೋಸ್ಕರ ಆವಶ್ಯಕವಿರುತ್ತದೆ.
 
ಇಂಜಿನಿಯರಿಂಗ್ ವಸ್ತುಗಳ ಉತ್ಪಾದನೆಗಳನ್ನು ಮಾಡುವ ಕಾರ್ಖಾನೆಯಲ್ಲಿ ಮಾಪನಕ್ಕೋಸ್ಕರ ಗೇಜ್ ಮತ್ತು ಉಪಕರಣಗಳನ್ನು (ಇನ್ ಸ್ಟ್ರುಮೆಂಟ್ಸ್) ಬಳಸಲಾಗುತ್ತದೆ. ಈ ಮಾಪನದ ನಿಖರತೆಯೊಂದಿಗೆ ಅದರ ರಾಷ್ಟ್ರೀಯ ಮತ್ತು ಆಂತಾರಾಷ್ಟ್ರೀಯ ಸ್ವೀಕೃತಿಯ ಆವಶ್ಯಕತೆಯು ಇರುತ್ತದೆ. ಇದಕ್ಕೋಸ್ಕರವೇ ISO 9000 ವ್ಯವಸ್ಥಾಪನೆಯ ವ್ಯವಸ್ಥೆಯಲ್ಲಿ ಉಪಕರಣಗಳ ಕ್ಯಾಲಿಬ್ರೇಶನ್ ನ ಆವಶ್ಯಕತೆ ಪ್ರಮುಖವಾಗಿ ಹೇಳಲಾಗಿದೆ.
 
ಭಾರತೀಯ ಕಾರ್ಖಾನೆಗಳಲ್ಲಿ 90 ರ ದಶಕದಲ್ಲಿ ISO 9000 ಎಂಬ ವ್ಯವಸ್ಥೆಯ ಪ್ರಣಾಳಿಕೆಯು ಅನ್ವಯಿಸುವ ಪ್ರಕ್ರಿಯೆಯು ಪ್ರಾರಂಭಗೊಂಡಿತ್ತು. ಇದರೊಂದಿಗೆ ಗೇಜ್ ಮತ್ತು ಉಪಕರಣಗಳ ಕ್ಯಾಲಿಬ್ರೇಶನ್ ನ ಅಗತ್ಯವು ಬೃಹತ್ ಪ್ರಮಾಣದಲ್ಲಿ ವೃದ್ಧಿಸುತ್ತಾ ಹೋಯಿತು. ಕ್ಯಾಲಿಬ್ರೇಶನ್ ಮಾಡುವಾಗ ಉಪಕರಣಗಳ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಾಪನಗಳ ಟ್ರೆಸೆಬಿಲಿಟಯ ಆವಶ್ಯಕತೆ ಇರುತ್ತದೆ. ಈ ಮಾಪನಗಳ ಅಂತಾರಾಷ್ಟ್ರೀಯ ಟ್ರೆಸೆಬಿಲಿಟಿಗೋಸ್ಕರ ಇಂಟರ್ ನ್ಯಾಶನಲ್ ಸಿಸ್ಟಮ್ ಆಫ್ ಯುನಿಟ್ (SI ಯುನಿಟ್) ಎಂಬ ಅತ್ಯಾಧುನಿಕ ಮೆಟ್ರಿಕ್ ಪ್ರಣಾಳಿಕೆಯನ್ನು ಬಳಸಲಾಗುತ್ತದೆ. ಇದಕ್ಕೋಸ್ಕರ ನಾವು ಮೊದಲಾಗಿ SI ಯುನಿಟ್ ಹಾಗೆಯೇ ಅಂತಾರಾಷ್ಟ್ರೀಯ ಮಾಪನದ ಟ್ರೆಸೆಬಿಲಿಟಿಯ ಕುರಿತು ಇನ್ನಷ್ಟು ಹೆಚ್ಚು ವಿಸ್ತಾರವಾಗಿ ತಿಳಿದುಕೊಳ್ಳೋಣ.

1_1  H x W: 0 x

ಇಂಟರ್ ನ್ಯಾಶನಲ್ ಸಿಸ್ಟಮ್ ಆಫ್ ಯುನಿಟ್ಸ್
SI ಯುನಿಟ್ ನ್ನು ಪ್ರಮಾಣೀಕೃತವಾದ ಪ್ರಮಾಣಗಳ ಪ್ರಣಾಳಿಕೆ ಎಂದು ಗುರುತಿಸಲಾಗಿದೆ. ಮಾಪನದ ಪರಿಮಾಣಗಳಿಗೆ SI ಯುನಿಟ್ ಇದು ಜಗತ್ತಿನಲ್ಲಿ ಹೆಚ್ಚಿನ ದೇಶಗಳಲ್ಲಿ ಅಧಿಕೃತವಾದ ಗುಣಮಟ್ಟವು ಲಭಿಸುವ ಒಂದೇ ಒಂದು ಮಾಪನದ ಯಂತ್ರಣೆಯಾಗಿದೆ. SI ಬೇಸ್ ಯುನಿಟ್ ಆಧುನಿಕ ಮೆಟ್ರಾಲಾಜಿಯ ಮೂಲಭೂತವಾದ ಭಾಗವಾಗಿದೆ.
 
SI ಯುನಿಟ್ ನಲ್ಲಿ ಪಾರಿಭಾಷಿತವಾದ ಮಾನದಂಡಗಳ ಯುನಿಟ್ ನಲ್ಲಿ ಒಟ್ಟು ಏಳು ಪರಿಮಾಣಗಳು ಮೂಲಭೂತವಾದ ಪರಿಮಾಣಗಳೆಂದು (ಯುನಿಟ್) ನಿರ್ಧರಿಸಲಾಗಿವೆ. ಇವುಗಳ ಮೂಲಕ ಇನ್ನಿತರ SI ಯುನಿಟ್ ಗಳನ್ನು ನಿಶ್ಚಿತಗೊಳಿಸಲಾಗಿದೆ. ಮೂಲಭೂತವಾದ SI ಯುನಿಟ್ ನಲ್ಲಿ ಸೆಕಂಡು (s) ಇದು ಭೌತಿಕ ಪರಿಮಾಣದ ಸಮಯ ಅಥವಾ ಕಾಲಕ್ಕೋಸ್ಕರ, ಉದ್ದವನ್ನು ಅಳೆಯಲು ಮೀಟರ್ (m), ಕಿಲೋ (kg) ಎಂಬ ವಸ್ತುಮಾನವನ್ನು ಅಳತೆ ಮಾಡಲು, ವಿದ್ಯುತ್ ಪ್ರವಾಹಕ್ಕೋಸ್ಕರ ಅಂಪಿಯರ್ (A), ಉಷ್ಣಾಂಶವನ್ನು ಅಳೆಯಲು ಕೆಲ್ವಿನ್ (˚K) (ಥರ್ಮೋಡೈನ್ಯಾಮಿಕ್ ಉಷ್ಣಾಂಶ), ಮೋಲ್ ಇದೊಂದು ಪದಾರ್ಥಗಳ ಪ್ರಮಾಣ ಮತ್ತು ಕ್ಯಾಂಡೆಲಾ ಇದು ಬೆಳಕಿನ ತೀವ್ರತೆಯನ್ನು ಅಳೆಯುವ ಘಟಕಗಳಾಗಿವೆ. ಈ ರೀತಿಯ ಎಲ್ಲ ಮೂಲಭೂತ SI ಯುನಿಟ್ ಗಳನ್ನು ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸಿ ಅದರ ಚಿತ್ರಗಳನ್ನು ವಿವಿಧ ದೇಶಗಳಲ್ಲಿ ಲಭ್ಯ ಮಾಡಿ ಕೊಡುವ ಕೆಲಸವನ್ನು ಅಂತಾರಾಷ್ಟ್ರೀಯ ಭಾರ ಮತ್ತು ಮಾಪನಗಳ ಬ್ಯೂರೋ (BIPM) ಎಂಬ ಪ್ಯಾರಿಸ್ ನಲ್ಲಿರುವ ಸಂಸ್ಥೆಯು ನಿರ್ವಹಿಸುತ್ತದೆ.

3_1  H x W: 0 x 
 
ಮಾಪನಗಳಿಗೆ ರಾಷ್ಟ್ರೀಯ ಅಥವಾ ಆಂತಾರಾಷ್ಟ್ರೀಯ ಟ್ರೆಸೆಬಿಲಿಟಿ
BIPM ಮೂಲಕ ಸದಸ್ಯ ರಾಷ್ಟ್ರಗಳು ಮಾಪನ ಶಾಸ್ತ್ರ (ಮೆಟ್ರಾಲಾಜಿ) ಮತ್ತು ಮಾಪನಗಳ ಮಾನದಂಡಗಳಿಗೆ (ಸ್ಟ್ಯಾಂಡರ್ಡ್) ಸಂಬಂಧಪಟ್ಟ ವಿಷಯಗಳಲ್ಲಿ ಒಟ್ಟಾಗಿ ಸೇರಿಯೇ ಕೆಲಸ ನಿರ್ವಹಿಸುತ್ತಾರೆ. ಭಾರತ ದೇಶವು ಕೂಡಾ ಈ ಸಂಸ್ಥೆಯ ಸದಸ್ಯ ದೇಶವಾಗಿದೆ.
 
ತಂತಮ್ಮ ದೇಶಗಳ ಮಾಪನಗಳು ಹೊರ ದೇಶಗಳಿಗೆ ಟ್ರೆಸೆಬಲ್ ಆಗಲು ಪ್ರತಿಯೊಂದು ದೇಶದಲ್ಲಿ ರಾಷ್ಟ್ರೀಯ ಮೆಟ್ರಾಲಾಜಿ ಸಂಸ್ಥೆ (NMI) ಕಾರ್ಯನಿರತವಾಗಿರುತ್ತದೆ. ಇಂತಹ ಸಂಸ್ಥೆಯು ತಮ್ಮ ರಾಷ್ಟ್ರೀಯ ಮಾಪನಗಳು, ಆಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕ್ಯಾಲಿಬ್ರೇಟ್ ಮಾಡಿ ಅವುಗಳ ಟ್ರೆಸೆಬಿಲಿಟಿಯನ್ನು ತಮ್ಮ ದೇಶದಲ್ಲಿಯೂ ಲಭ್ಯ ಮಾಡಿಕೊಡುವ ಕೆಲಸವನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಇಂತಹ ಕೆಲಸವನ್ನು ನಿರ್ವಹಿಸುವ ರಾಷ್ಟ್ರೀಯ ಭೌತಿಕ ಪ್ರಯೋಗ ಶಾಲೆಯು ಹೊಸ ದೆಹಲಿಯಲ್ಲಿದೆ (NPL). ಈ ಸಂಸ್ಥೆಯು ತಮ್ಮ ದೇಶದಲ್ಲಿರುವ ರಾಷ್ಟ್ರೀಯ ಮಾಪನಗಳ ಟ್ರೆಸೆಬಿಲಿಟಿಯನ್ನು, BIPM ಫ್ರಾನ್ಸ್ ಇವರೊಂದಿಗೆ ಮಾಡುತ್ತಿದೆ. ಇಂತಹ ಟ್ರೆಸೆಬಲ್ ಮಾಪನಗಳು ಭಾರತದಲ್ಲಿ ಔದ್ಯೋಗಿಕ ಮಾಪನಗಳಿಗೋಸ್ಕರ ಲಭ್ಯ ಮಾಡಿಕೊಡುತ್ತಾರೆ.
 
ಪ್ರಸ್ತುತ ಔದ್ಯೋಗಿಕ ಕಾರ್ಖಾನೆಗಳಲ್ಲಿ ಬಳಸಲಾಗುವ ಗೇಜ್ ಮತ್ತು ಉಪಕರಣಗಳನ್ನು ರಾಷ್ಟ್ರೀಯ ಮಾಪನಗಳೊಂದಿಗೆ ಕ್ಯಾಲಿಬ್ರೇಟ್ ಮಾಡುವುದೂ ಅತ್ಯಾವಶ್ಯಕವಾಗಿರುತ್ತದೆ. ಆದರೆ ಯಾವುದೇ ದೇಶದಲ್ಲಿರುವ ಎಲ್ಲ ರೀತಿಯ ಉಪಕರಣಗಳನ್ನು ರಾಷ್ಟ್ರೀಯ ಮೆಟ್ರಾಲಾಜಿ ಸಂಸ್ಥೆಯು ಇವರ ಒಂದೇ ಒಂದು ಪ್ರಯೋಗ ಶಾಲೆಯಲ್ಲಿ ಕ್ಯಾಲಿಬ್ರೇಟ್ ಮಾಡಲಾರಂಭಿಸಿದಲ್ಲಿ ಇಂತಹ ಪ್ರಯೋಗಶಾಲೆಗಳಲ್ಲಿರುವ ಸಂಪನ್ಮೂಲಗಳ ಕೊರತೆಯು ಕಂಡುಬರಬಲ್ಲದು. ಇದಕ್ಕೋಸ್ಕರ ಪ್ರತಿಯೊಂದು ದೇಶದಲ್ಲಿಯೂ ಎರಡನೇ ಹಂತದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನೇಕ ಕ್ಯಾಲಿಬ್ರೇಶನ್ ಪ್ರಯೋಗ ಶಾಲೆಗಳು (ಲ್ಯಾಬೋರೇಟರಿ) ದೇಶದಾದ್ಯಂತ ಹರಡಿರುವ ಔದ್ಯೋಗಿಕ ಸಂಸ್ಥೆಗಳಿಗೆ ಕ್ಯಾಲಿಬ್ರೇಶನ್ ನ ಸೇವೆಯನ್ನು ನೀಡುತ್ತಿವೆ. ಈ ಎಲ್ಲ ರೀತಿಯ ಕ್ಯಾಲಿಬ್ರೇಶನ್ ನ ಸೇವೆಯನ್ನು ನೀಡುವ ಪ್ರಯೋಗ ಶಾಲೆಗಳು ಆ ದೇಶದಲ್ಲಿರುವ ರಾಷ್ಟ್ರೀಯ ಮೆಟ್ರಾಲಾಜಿ ಸಂಸ್ಥೆಯೊಂದಿಗೆ ತಮ್ಮ ಉಪಕರಣಗಳ ಕ್ಯಾಲಿಬ್ರೇಟ್ ಮಾಡಿ ರಾಷ್ಟ್ರೀಯ ಮಾಪನಗಳೊಂದಿಗೆ ಟ್ರೆಸೆಬಿಲಿಟಿಯನ್ನು ಸಾಧಿಸುತ್ತಾರೆ. ನಂತರ ಇವುಗಳನ್ನು ಔದ್ಯೋಗಿಕ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಾರೆ. ದೇಶದಾದ್ಯಂತ ಕ್ಯಾಲಿಬ್ರೇಶನ್ ಸೇವೆಯನ್ನು ಪೂರೈಸುವ ಇಂತಹ ಎಲ್ಲ ಕ್ಯಾಲಿಬ್ರೇಶನ್ ಪ್ರಯೋಗ ಶಾಲೆಗಳು ISO/IEC17025 ಎಂಬ ಆಂತಾರಾಷ್ಟ್ರೀಯ ವ್ಯವಸ್ಥಾಪನೆಯ ಪ್ರಣಾಳಿಕೆಗೆ ಅನುಸಾರವಾಗಿಯೇ ಕೆಲಸ ನಿರ್ವಹಿಸುತ್ತವೆ. ಇದರ ದೃಢೀಕರಣ ಪತ್ರವನ್ನು ಆಯಾ ದೇಶದಲ್ಲಿ ಮನ್ನಣೆ ಪಡೆದ ರಾಷ್ಟ್ರೀಯ ಸಂಸ್ಥೆಗಳಿಂದಲೇ ಪಡೆಯುತ್ತಾರೆ. ಭಾರತದಲ್ಲಿ ಈ ಕೆಲಸವನ್ನು ನ್ಯಾಶನಲ್ ಎಕ್ರಿಡಿಟೇಶನ್ ಬೋರ್ಡ್ ಫಾರ್ ಕ್ಯಾಲಿಬ್ರೇಶನ್ ಮತ್ತು ಟೆಸ್ಟಿಂಗ್ ಲ್ಯಾಬೋರೇಟರಿಜ್ (NABL) ಎಂಬ ಹೊಸ ದೆಹಲಿಯಲ್ಲಿರುವ ಸಂಸ್ಥೆಯಿಂದಲೇ ಮಾಡಲಾಗುತ್ತದೆ. ಇಂದಿನ ತನಕ ನಮ್ಮ ದೇಶದಲ್ಲಿ ಒಟ್ಟು ಸುಮಾರು 1025 ಕ್ಯಾಲಿಬ್ರೇಶನ್ ಪ್ರಯೋಗ ಶಾಲೆಗಳಿಗೆ NABL ಈ ಸಂಸ್ಥೆಯು ಮನ್ನಣೆಯನ್ನು ನೀಡಿದೆ. ಈ ಎಲ್ಲ ಪ್ರಯೋಗ ಶಾಲೆಗಳ ಮೌಲ್ಯಮಾಪನವನ್ನು (ಆಡಿಟ್) ಎರಡು ವರ್ಷಗಳಿಗೊಮ್ಮೆ NABL ಮಾಡುತ್ತದೆ.
ಮೇಲಿನಂತೆ ದೇಶದಾದ್ಯಂತ ಎಲ್ಲ ಔದ್ಯೋಗಿಕ ಸಂಸ್ಥೆಗಳಲ್ಲಿ ಬಳಸಲಾಗುತ್ತಿರುವ ಉಪಕರಣಗಳಿಗೆ ರಾಷ್ಟ್ರೀಯ ಮತ್ತು ಆಂತಾರಾಷ್ಟ್ರೀಯ ಮಾಪನಗಳ ಟ್ರೆಸೆಬಿಲಿಟಿ ಉಪಲಬ್ಧವಾಗುತ್ತಿದೆ (ಚಿತ್ರ ಕ್ರ. 1).
ಮಾಪನದ ತಂತ್ರಜ್ಞಾನ ಮತ್ತು ಮೆಟ್ರಾಲಾಜಿ ಕ್ಯಾಲಿಬ್ರೇಶನ್ ನ ಪ್ರಕ್ರಿಯೆ
ಕ್ಯಾಲಿಬ್ರೇಶನ್ ಪ್ರಕ್ರಿಯೆಯಲ್ಲಿ, ಮಾಪನದ ಉಪಕರಣಗಳ ಹೋಲಿಕೆಯನ್ನು ಇನ್ನೊಂದು ಪ್ರಸಿದ್ಧವಾದ ನಿಖರತೆಯ ಸ್ಟ್ಯಾಂಡರ್ಡ್ ಗಳೊಂದಿಗೆ ಮಾಡಲಾಗುತ್ತದೆ ಮತ್ತು ಮಾಪನದ ಉಪಕರಣಗಳ ನಿರ್ದೋಷತ್ವವನ್ನು ನಿರ್ಧರಿಸಲಾಗುತ್ತದೆ. ಕ್ಯಾಲಿಬ್ರೇಶನ್ ಗೋಸ್ಕರ ಬಳಸಲಾಗುವ ಸ್ಟ್ಯಾಂಡರ್ಡ್ ಗಳು ಮೇಲೆ ಉಲ್ಲೇಖಿಸಿದಂತೆ ರಾಷ್ಟ್ರೀಯ ಸ್ಟ್ಯಾಂಡರ್ಡ್ ಗಳಿಗೆ ಟ್ರೆಸೆಬಲ್ ಆಗಿರುತ್ತವೆ. ಇದರ ಹೋಲಿಕೆಯನ್ನು ನಿಯಂತ್ರಿಸಲ್ಪಟ್ಟ ಉಷ್ಣಾಂಶ ಮತ್ತು ಆರ್ದ್ರತೆ ನಿಯಂತ್ರಿಸಿರುವ ಕೊಠಡಿಯಲ್ಲಿ ನುರಿತ ಮಾನವ ಸಂಪನ್ಮೂಲಗಳನ್ನು ಬಳಸಿ ಮಾಡಲಾಗುತ್ತದೆ. ಈ ರೀತಿಯಲ್ಲಿ ಎಲ್ಲ ರೀತಿಯ ಮುತುವರ್ಜಿಯನ್ನು ವಹಿಸಿ ಕ್ಯಾಲಿಬ್ರೇಶನ್ ಪ್ರಕ್ರಿಯೆಯಲ್ಲಿ ಮಾಪನದ ಅನಿಶ್ಚಿತತೆಯನ್ನು (ಮೆಜರ್ ಮೆಂಟ್ ಅನ್ಸರ್ಟನಿಟಿ) ಕನಿಷ್ಠ ಪ್ರಮಾಣದಲ್ಲಿ ಇಡಲಾಗುತ್ತದೆ.
ಮಾಪನದ ಉಪಕರಣಗಳ ಕ್ಯಾಲಿಬ್ರೇಶನ್ ನ ಕಾಲಾವಧಿಯನ್ನು ನಿರ್ಧರಿಸಲು ನಿರ್ದೇಶಕ ತತ್ವಗಳು
 

4_1  H x W: 0 x 
 
• ಉಪಕರಣಗಳ ವಿಧಗಳು
• ಉತ್ಪಾದಕರ ಶಿಫಾರಸ್ಸು
• ಈ ಹಿಂದಿನ ಕ್ಯಾಲಿಬ್ರೇಶನ್ ರೆಕಾರ್ಡ್ ಗಳಿಂದ ಲಭಿಸಿರುವ ಟ್ರೆಂಡ್ ಡಾಟಾ
• ನಿರ್ವಹಣೆ ಮತ್ತು ಸರ್ವಿಸಿಂಗ್ ನ ರೆಕಾರ್ಡ್ ಗಳ ಕುರಿತಾದ ಹಿನ್ನೆಲೆ
• ಬಳಕೆಯ ವಿಸ್ತಾರ ಮತ್ತು ತೀವ್ರತೆ
• ಸವೆತ ಮತ್ತು ಬದಲಾವಣೆಯಾಗುವಿಕೆ.
• ಇನ್ನಿತರ ಮಾಪನಗಳ ಉಪಕರಣಗಳು, ವಿಶೇಷವಾಗಿ ಮಾಪನದ ಮಾನದಂಡಗಳೊಂದಿಗೆ (ರೆಫರನ್ಸ್ ಸ್ಟ್ಯಾಂಡರ್ಡ್ಸ್) ಕ್ರಾಸ್-ತಪಾಸಣೆಯ ರಿಪಿಟ್ಯಾಬಿಲಿಟಿ.
• ಕಾರ್ಖಾನೆಯಲ್ಲಿರುವ ತಪಾಸಣೆಯ ರಿಪಿಟ್ಯಾಬಿಲಿಟಿ ಮತ್ತು ಔಪಚಾರಿಕತೆ.
• ಪರಿಸರದ ಸ್ಥಿತಿ (ಹವಾಮಾನ, ಉಷ್ಣಾಂಶ, ಆರ್ದ್ರತೆ, ಕಂಪನಗಳು ಇತ್ಯಾದಿ)
• ಮಾಪನಗಳ ನಿರ್ದೋಷತೆಯ ಆವಶ್ಯಕತೆ.
• ಮಾಪನವನ್ನು ಮಾಡುವ ಉಪಕರಣಗಳು ದೋಷವುಳ್ಳದ್ದಾಗಿರುವುದರಿಂದ ಮಾಪನವು ತಪ್ಪಾಗಿ ಆಗುತ್ತದೆ. ಇದರಿಂದಾಗಿ ನಷ್ಟ ಪರಿಹಾರದ ಮೌಲ್ಯ.
ಉದ್ದವನ್ನು ಅಳೆಯಲು ಕಾರ್ಖಾನೆಯಲ್ಲಿ ಬಳಸಲಾಗುವ ಸಾಮಾನ್ಯವಾದ ಉಪಕರಣಗಳ ಕ್ಯಾಲಿಬ್ರೇಶನ್ ನ ಕೆಲಸ ಮತ್ತು ಅದಕ್ಕೋಸ್ಕರ ಲ್ಯಾಬೋರೇಟರಿಯಲ್ಲಿ ಬಳಸಲಾಗುವ ಸ್ಟ್ಯಾಂಡರ್ಡ್ ಉಪಕರಣಗಳ ಪರಿಚಯವನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
ಕ್ಯಾಲಿಬ್ರೇಶನ್ ಯಾವಾಗಲೂ ವಿಶಿಷ್ಟವಾಗಿ ನಿಯಂತ್ರಿಸಲ್ಪಟ್ಟ ಹವಾಮಾನದಲ್ಲಿಯೇ ಮಾಡಲಾಗುತ್ತದೆ. ಇಂತಹ ನಿಯಂತ್ರಿತ ಹವಾಮಾನವಿರುವಾಗ ಕ್ಯಾಲಿಬ್ರೇಶನ್ ನಲ್ಲಿ ಆವಶ್ಯಕವಿರುವ ನಿಖರತೆಯು ಲಭಿಸುತ್ತದೆ. ಇದರಲ್ಲಿ ಹವಾಮಾನದ ಉಷ್ಣಾಂಶ, ಆರ್ದ್ರತೆ ಇತ್ಯಾದಿ ಅಂಶಗಳನ್ನು ನಿಯಂತ್ರಿಸಲಾಗುತ್ತದೆ.
ಉದ್ದವನ್ನು ಅಳತೆ ಮಾಡಲು ಕ್ಯಾಲಿಬ್ರೇಶನ್ ನ ಲ್ಯಾಬೋರೇಟರಿಗೋಸ್ಕರ ನಿಗದಿಸಿರುವ ಹವಾಮಾನ ನಿಯಂತ್ರಣೆಯ ನಿಯಮಗಳು
• ಸರಾಸರಿ ಉಷ್ಣಾಂಶ : 20˚ ± 1˚ ಸೆಂ. ಮೊದಲ ಹಂತ
• 20˚ ± 2˚ ಸೆಂ. ಎರಡನೇ ಹಂತ
• 20˚ ± 3˚ ಸೆಂ. ಮೂರನೇ ಹಂತ
ಹವಾಮಾನದಲ್ಲಿ ಉಂಟಾಗುವ ಬದಲಾವಣೆಗಳ ಪ್ರತಿಯೊಂದು ಗಂಟೆಯ ಮೌಲ್ಯ 1˚ ಸೆಂ.ಗಿಂತ ಕಡಿಮೆ ಇರಲೇಬೇಕು.
• ಗಾಳಿಯ ಒತ್ತಡ : ಘನ +ve
• ಆರ್ದ್ರತೆ : RH 50 ± 10%
• ಶಬ್ದದ ಸ್ತರ : ಗರಿಷ್ಠ 60 dB
• ಬೆಳಕಿನ ತೀವ್ರತೆ : 450 – 700 Lux
• ಕಂಪನಗಳು : ಇರುವುದಿಲ್ಲ.
• ಶುಚಿತ್ವ : ಕ್ಲಾಸ್ 1 lac
 
@@AUTHORINFO_V1@@