ಉಪಕರಣಗಳ ನಿರ್ವಹಣೆ ಮತ್ತು ಕ್ಯಾಲಿಬ್ರೇಶನ್

@@NEWS_SUBHEADLINE_BLOCK@@

Lohkarya - Udyam Prakashan    30-Jan-2021   
Total Views |
Wrong Method
 
ಕಳೆದ 15 ವರ್ಷಗಳಿಂದ ನಾವು ‘ಉಪಕರಣಗಳ (ಇನ್ ಸ್ಟ್ರುಮೆಂಟ್ಸ್) ಕ್ಯಾಲಿಬ್ರೇಶನ್’ ಮಾಡುವ ವ್ಯವಸಾಯ ಮಾಡುತ್ತಿದ್ದೇವೆ. ಅನೇಕ MSME ಗಳಲ್ಲಿ ಹಾಗೆಯೇ ಬೃಹತ್ ಕಾರ್ಖಾನೆಗಳಲ್ಲಿರುವ ಉತ್ಪಾದನೆಯ ಪ್ರಕ್ರಿಯೆಯಲ್ಲಿರುವ ಕ್ಯಾಲಿಬ್ರೇಶನ್ ನ ಕೆಲಸದ ಮುತುವರ್ಜಿಯ ಜವಾಬ್ದಾರಿಯನ್ನು ನಾವು ನಿಭಾಯಿಸುತ್ತಿದ್ದೇವೆ. ಹೆಚ್ಚಾಗಿ ಎಲ್ಲೆಡೆ ಬಳಸಲಾಗುವ ಆದರೆ ತಪ್ಪಾಗಿರುವ ರೀತಿಗಳನ್ನು ಈ ಕೆಲಸವನ್ನು ನಿರ್ವಹಿಸುವಾಗ ನಾವು ಗಮನಿಸಿದೆವು. ಈ ತಪ್ಪಾದ ರೀತಿಯಿಂದಾಗಿ ಉಪಕರಣಗಳಲ್ಲಿ ಮತ್ತು ಉತ್ಪಾದನೆಗಳಲ್ಲಿ ವಿಪರೀತವಾದ ಪರಿಣಾಮ ಉಂಟಾಗುತ್ತದೆ. ಈ ಲೇಖನದಲ್ಲಿ ನಾವು ನಿರಂತರವಾಗಿ ಬಳಸಲಾಗುವಂತಹ ಮಾಪನದ ಉಪಕರಣಗಳ ಕುರಿತಾಗಿ ನಾವು ಮಾಡಿರುವ ನಿರೀಕ್ಷಣೆಗಳನ್ನು ಓದುಗರಿಗೆ ನೀಡುತ್ತಿದ್ದೇವೆ.

ಮಾಪನದ ಉಪಕರಣಗಳ ಯೋಗ್ಯ ಮತ್ತು ಪರಿಣಾಮಕಾರಿಯಾದ ನಿರ್ವಹಣೆ

Wrong Method 

Correct method 
ನಮ್ಮ ಗ್ರಾಹಕರೊಬ್ಬರಲ್ಲಿರುವ ಉಪಕರಣಗಳು ಆಗಾಗ ಹಾಳಾಗುತ್ತಿದ್ದವು. ಅವರು ನಮ್ಮನ್ನು ಕರೆದು ಅವರಲ್ಲಿ ಉಪಕರಣಗಳು ಹಾಳಾಗುವ ಸಮಸ್ಯೆಯನ್ನು ವಿವರಿಸಿದರು. ಅವರೊಂದಿಗೆ ಚರ್ಚೆ ಮಾಡಿದ ನಂತರ ಅವರು ಹೇಳಿದರು, “ನಮ್ಮಲ್ಲಿರುವ ಉಪಕರಣಗಳು ಯೋಗ್ಯ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವುದಿಲ್ಲ ಅಥವಾ ರೀಡಿಂಗ್ ನಲ್ಲಿ ರಿಪಿಟ್ಯಾಬಿಲಿಟಿ ಇಲ್ಲದಿರುವುದರಿಂದ ನಮ್ಮ ಆಪರೇಟರ್ ಆಗಾಗ ದೂರು ನೀಡುತ್ತಿದ್ದಾರೆ. ನಮ್ಮಲ್ಲಿರುವ ಉಪಕರಣಗಳು ಆಗಾಗ ಹಾಳಾಗುತ್ತಿವೆ. ಅವುಗಳನ್ನು ಆಗಾಗ ದುರಸ್ತಿ ಮಾಡಬೇಕಾಗುತ್ತದೆ.’’ ಅವರ ಈ ಸಮಸ್ಯೆಯನ್ನು ನಾವು ಗಮನಿಸಿದೆವು. ನಂತರ ನಾವು ಅವರ ಕಾರ್ಖಾನೆಗೆ ಭೇಟಿ ನೀಡಿ ಆಪರೇಟರ್ ಆ ಉಪಕರಣಗಳನ್ನು ಹೇಗೆ ಬಳಸುತ್ತಾರೆ, ಅವರು ಉಪಕರಣಗಳನ್ನು ಸುರಕ್ಷಿತವಾದ ಸ್ಥಳದಲ್ಲಿ ಇಡುತ್ತಾರೆಯೇ, ಎಂಬುದನ್ನು ಪರಿಶೀಲಿಸಿದೆವು. ಉಪಕರಣಗಳ ನಿರ್ವಹಣೆಯು ಸೂಕ್ತ ರೀತಿಯಲ್ಲಿ ಅಗುವುದಿಲ್ಲ, ಎಂಬ ಅಂಶವು ಆ ಭೇಟಿಯಲ್ಲಿ ಗಮನಕ್ಕೆ ಬಂತು.
 
ಅದರ ನಂತರ ನಾವು ಗ್ರಾಹಕರಲ್ಲಿ ಕೆಲಸ ಮಾಡುತ್ತಿರುವ ಸಂಬಂಧಪಟ್ಟ ಎಲ್ಲ ಕೆಲಸಗಾರರಿಗೆ ಉಪಕರಣಗಳನ್ನು ನಿರ್ವಹಿಸುವಾಗ ಯಾವ ರೀತಿಯ ಮುತುವರ್ಜಿಯನ್ನು ವಹಿಸಬೇಕು, ಅವುಗಳನ್ನು ಹೇಗೆ ನಿರ್ವಹಿಸಬೇಕು, ಈ ಕುರಿತಾದ ತರಬೇತಿಯನ್ನು ನೀಡಿದೆವು.
ಉಪಕರಣಗಳ ನಿರ್ವಹಣೆಯಲ್ಲಿರುವ ಹಲವಾರು ಮಹತ್ವದ ಅಂಶಗಳು
• ಮಾಪನವನ್ನು ಮಾಡಲು ಯಾವುದೇ ಉಪಕರಣಗಳನ್ನು ಬಳಸುವ ಮುಂಚೆ ಅದರ ರಿಪಿಟ್ಯಾಬಿಲಿಟಿಯ ಸಾಮರ್ಥ್ಯವನ್ನು ಪರಿಶೀಲಿಸಬೇಕು ಮತ್ತು ಅದು ಅದರಲ್ಲಿರುವ ಪೂರ್ತಿ ಸಾಮರ್ಥ್ಯದೊಂದಿಗೆ ಗರಿಷ್ಠ ಮಿತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತದೆಯೇ, ಎಂಬುದನ್ನು ವೀಕ್ಷಿಸಬೇಕು.
• ಉಪಕರಣಗಳಲ್ಲಿ ಯಾವುದೇ ರೀತಿಯ ನಷ್ಟ ಆಗಬಾರದು, ಎಂಬುದಕ್ಕಾಗಿ ಆ ಉಪಕರಣಗಳನ್ನು ಪ್ಲಾಸ್ಟಿಕ್ ನ ಅಥವಾ ಮರದ ಪೆಟ್ಟಿಗೆಯಲ್ಲಿ ಇಡಬೇಕು.

Wrong method 
 
 
• ಒಂದು ವೇಳೆ ನಾವು ಡಯಲ್ ಕ್ಯಾಲಿಪರ್ ಜಾ ಸರಿಸಲು ಒಂದು ಬಟನ್ ನೀಡಲಾಗಿರುತ್ತದೆ. ಅದನ್ನು ಹೆಬ್ಬೆರಳಿನಿಂದ ಒತ್ತಿ ಕ್ಯಾಲಿಪರ್ ನ ಅಲುಗಾಡುವ ಭಾಗವನ್ನು ಹಿಂದೆ-ಮುಂದೆ ಮಾಡಲಾಗುತ್ತದೆ. ಆದರೆ ಹೆಚ್ಚಾಗಿ ಕ್ಯಾಲಿಪರ್ ಹಿಡಿಯಲು ಆಪರೇಟರ್ ಅಲುಗಾಡುವ ಸ್ಕೇಲ್ ಕೈಯಿಂದ ಹಿಡಿಯುತ್ತಾನೆ ಮತ್ತು ಗಡಿಬಿಡಿಯಲ್ಲಿ ಅದನ್ನು ಹಿಂದೆ-ಮುಂದೆ ಮಾಡುತ್ತಾನೆ. ಇದರಿಂದಾಗಿ ಕ್ಯಾಲಿಪರ್ ನ ಒಳಗೆ ಇರುವ ಗೇರ್ ಅಸೆಂಬ್ಲಿ ಹಾಳಾಗುತ್ತದೆ. ಡಯಲ್ ಕ್ಯಾಲಿಪರ್ ಹಿಡಿಯಲು ಅಯೋಗ್ಯ ಮತ್ತು ಯೋಗ್ಯವಾದ ಪದ್ಧತಿಯನ್ನು ಚಿತ್ರ ಕ್ರ. 1 ಮತ್ತು 2 ರಲ್ಲಿ ತೋರಿಸಲಾಗಿದೆ.
 
• ಒಂದು ವೇಳೆ ಹೊರ (ಎಕ್ಸ್ಟರ್ನಲ್) ಮೈಕ್ರೋಮೀಟರ್ ನ ವಿಚಾರವನ್ನು ಮಾಡಿದಲ್ಲಿ, ಆಪರೇಟರ್ ರೇಚೆಟ್ ನ ಬದಲಾಗಿ ಥಿಂಬಲ್ ಹಿಡಿದು ಮೈಕ್ರೋಮೀಟರ್ ಬಳಸುತ್ತಾರೆ. ಅನೇಕ ಸಲ ಆಪರೇಟರ್ ರೇಚೆಟ್ ಅದರ ಮಿತಿಗಿಂತ ಹೆಚ್ಚು ತಿರುಗಿಸುತ್ತಾನೆ. ಇದರಿಂದಾಗಿ ರೇಚೆಟ್ ಸ್ಪ್ರಿಂಗ್ ಹಾಳಾಗುತ್ತದೆ. ಹೊರ ಮೈಕ್ರೋಮೀಟರ್ ಹಿಡಿಯುವ ಅಯೋಗ್ಯ ಮತ್ತು ಯೋಗ್ಯವಾದ ರೀತಿಯನ್ನು ಚಿತ್ರ ಕ್ರ. 3 ಮತ್ತು 4 ರಲ್ಲಿ ನೀಡಲಾಗಿದೆ.
• ಹೆಚ್ಚಾಗಿ ಹೈಟ್ ಗೇಜ್ ಹಿಡಿಯಲು ಅಥವಾ ಅದನ್ನು ಎತ್ತಲು ಆಪರೇಟರ್ ಬೇಸ್ ನ ಬದಲಾಗಿ ಕಾಲಮ್ ಬಳಸುತ್ತಾನೆ. ಇದರಿಂದಾಗಿ ಗೇಜ್ ನ ಲಂಬತ್ವವು (ಪರ್ಪೆಂಡಿಕ್ಯುಲ್ಯಾರಿಟಿ) ಹಾಳಾಗುತ್ತದೆ. ಹೈಟ್ ಗೇಜ್ ಹಿಡಿಯುವ ಅಯೋಗ್ಯ ಮತ್ತು ಯೋಗ್ಯ ರೀತಿಯನ್ನು ಚಿತ್ರ ಕ್ರ. 5 ಮತ್ತು 6 ರಲ್ಲಿ ನೀಡಲಾಗಿದೆ.
 
• ಕಂಪ್ಯಾರೇಟರ್ ಸ್ಟ್ಯಾಂಡ್ ಬೇಸ್ ನ ಕುರಿತು ವಿಚಾರ ಮಾಡಿದಲ್ಲಿ, ಇಲ್ಲಿಯೂ ಆಪರೇಟರ್ ಬೇಸ್ ನ ಬದಲಾಗಿ ಕಾಲಮ್ ಬಳಸಿ ಸ್ಟ್ಯಾಂಡ್ ಹಿಡಿಯುತ್ತಾನೆ ಅಥವಾ ಎತ್ತುತ್ತಾನೆ. ಇದರಿಂದಾಗಿ ಲಂಬತ್ವವು ಹಾಳಾಗುತ್ತದೆ. ಬೇಸ್ ನ ಒಂದೇ ಭಾಗವನ್ನು ಬಳಸಿದ್ದರಿಂದ ಅದರಲ್ಲಿ ಡೆಂಟ್, ಕುಳಿಗಳು ಉಂಟಾಗುತ್ತವೆ ಮತ್ತು ಅದರಲ್ಲಿ ಯೋಗ್ಯವಾದ ಸಮತಟ್ಟು (ಫ್ಲ್ಯಾಟ್ ನೆಸ್) ಆಗುವುದಿಲ್ಲ. ಆದ್ದರಿಂದಲೇ ಬೇಸ್ ನ ಸಮತಟ್ಟುತನವನ್ನು ಕಾಪಾಡಲು ಅದನ್ನು ನಿಯಮಿತವಾಗಿ ಲ್ಯಾಪಿಂಗ್ ಮಾಡುವುದು ಅತ್ಯಾವಶ್ಯಕವಾಗಿದೆ.
• ಮಾಪನವನ್ನು ಮಾಡಿದ ನಂತರ ಉಪಕರಣವನ್ನು ಒಂದು ಬಾಕ್ಸ್ ನಲ್ಲಿ ಇಡಬೇಕು. ತುಂಬಾ ಸಲ ಉಪಕರಣವು ನೆಲದಲ್ಲಿ ಬೀಳುತ್ತದೆ ಮತ್ತು ಹಾಳಾಗುತ್ತದೆ. ತುಕ್ಕು ಹಿಡಿಯುವುದನ್ನು ತಡೆಯಲು, ವಿಶೇಷವಾಗಿ ಮಳೆಗಾಲದಲ್ಲಿ ಆಪರೇಟರ್ ಉಪಕರಣ ಮತ್ತು ಗೇಜ್ ನಲ್ಲಿ ಪೆಟ್ರೋಲಿಯಮ್ ಜೆಲಿಯನ್ನು ಹಚ್ಚಬೇಕು.
• ಆಗಾಗ ಮಶಿನ್ ಬೆಡ್ ನಲ್ಲಿ ಅಥವಾ ಟೇಬಲ್ ನಲ್ಲಿ ಉಪಕರಣಗಳನ್ನು ಇಡಲಾಗುತ್ತದೆ. ಇದು ಮಾತ್ರ ತಪ್ಪಾದ ರೀತಿಯಾಗಿದೆ.

correct method
 
ಕ್ಯಾಲಿಬ್ರೇಶನ್ ಅಂದರೆ ಏನು ?
ಕ್ಯಾಲಿಬ್ರೇಶನ್ ಮಾಡಬೇಕಾಗಿರುವ ಉಪಕರಣದಿಂದ ಮಾಡಿರುವ ರೀಡಿಂಗ್ ಮತ್ತು ಅದಕ್ಕಿಂತ ಹತ್ತು ಪಟ್ಟು ನಿರ್ದೋಷವಾಗಿರುವ ಮಾಸ್ಟರ್ ಉಪಕರಣದಿಂದ ಮಾಡಿರುವ ರೀಡಿಂಗ್ ಇದನ್ನು ಹೋಲಿಸಿ ಕ್ಯಾಲಿಬ್ರೇಶನ್ ಮಾಡಬೇಕಾಗಿರುವ ಉಪಕರಣದಲ್ಲಿರುವ ಕೊರತೆಗಳನ್ನು ಅಥವಾ ಡೇವಿಯೇಶನ್ ಇವುಗಳ ಮಾಪನವನ್ನು ಮಾಡುವ ಪ್ರಕ್ರಿಯೆ ಅಂದರೆ ಕ್ಯಾಲಿಬ್ರೇಶನ್.

Wrong method Correct method
 
ಕ್ಯಾಲಿಬ್ರೇಶನ್ ಪ್ರಕ್ರಿಯೆ ರೀತಿ
1. ಉಪಕರಣಗಳನ್ನು ಪ್ರಯೋಗ ಶಾಲೆಗೆ ತರಲಾಗುತ್ತದೆ.
2. ಉಪಕರಣಗಳನ್ನು ಎಸಿಟೋನ್ ಅಥವಾ ಪೆಟ್ರೋಲ್ ಅಥವಾ ಐಸೋಪ್ರೊಪಾಯಿಲ್ ಅಲ್ಕೋಹೋಲ್ ನಿಂದ (IPA) ಶುಚಿಗೊಳಿಸಲಾಗುತ್ತದೆ. ಗೇಜ್ ನಲ್ಲಿರುವ ತುಕ್ಕನ್ನು ತೆಗೆಯಲು ಸೂಕ್ಷ್ಮವಾದ ಗ್ರೇಡ್ ನ ಫೈನ್ ಪೇಪರ್ ಬಳಸಲಾಗುತ್ತದೆ.
3. ಕ್ಯಾಲಿಬ್ರೇಶನ್ ಸಾಫ್ಟ್ ವೇರ್ ನಲ್ಲಿ ಉಪಕರಣಗಳ ವಿವರಣೆಗಳನ್ನು ನೊಂದಾಯಿಸಲಾಗುತ್ತದೆ. ಇದರಲ್ಲಿ ಗ್ರಾಹಕರ ಹೆಸರು, ವಿಳಾಸ, ಉಪಕರಣಗಳ ರೇಂಜ್, ಆಕಾರ, ಲೀಸ್ಟ್ ಕೌಂಟ್, ಮೇಕ್, ಐ.ಡಿ. ಕ್ರಮಾಂಕ, ಅನುಕ್ರಮಾಂಕ, ಸ್ಥಾನ, ಕ್ಯಾಲಿಬ್ರೇಶನ್ ನ ರಿಪಿಟ್ಯಾಬಿಲಿಟಿ ಇತ್ಯಾದಿ ಎಲ್ಲ ರೀತಿಯ ಅಂಶಗಳು ಇರುತ್ತವೆ.
4. ಈ ನೊಂದಣಿಗಳನ್ನು ಮಾಡುವಾಗ ಕ್ಯಾಲಿಬ್ರೇಶನ್ ನ ಈ ಹಿಂದಿನ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ. ಇದರಲ್ಲಿ ಮಾಪನ ಮಾಡುವ ಜಾಗದಲ್ಲಿ ಯಾವುದೇ ಕುಳಿಗಳು ಅಥವಾ ಎನಾದರೂ ಹಾಳಾಗಿದೆಯೇ, ಉಪಕರಣಗಳ ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಮತ್ತು ಒಟ್ಟಾರೆ ಅವುಗಳು ಸುಸ್ಥಿತಿಯಲ್ಲಿ ಇವೆಯೇ, ಎಂಬುದನ್ನು ನೋಡಲಾಗುತ್ತದೆ.
5. ಉಪಕರಣ ಮತ್ತು ಮಾಸ್ಟರ್, ಪ್ರಯೋಗ ಶಾಲೆಯಲ್ಲಿ ಹವಾಮಾನದೊಂದಿಗೆ ಸರಿಹೊಂದಾಣಿಕೆಯಾಗಲು ಮತ್ತು ಸ್ಥಿರವಾದ ಉಷ್ಣಾಂಶದಲ್ಲಿ ಬರಲು 2-4 ಗಂಟೆಗಳಷ್ಟು ಕಾಲ ದಾರಿ ನೋಡಬೇಕಾಗುತ್ತದೆ.
6. ಕ್ಯಾಲಿಬ್ರೇಶನ್ ನ ಕೆಲಸದ ರೀತಿಯಲ್ಲಿ ನಮೂದಿಸಿದಂತೆ ವಿವಿಧ ಪ್ಯಾರಾಮೀಟರ್ ಗಳ ಮಾಪನವನ್ನು ಮಾಡಲು ಪ್ರಾರಂಭಿಸಲಾಗುತ್ತದೆ.

Dial Gauge Calibration 
 
7. ಸಾಮಾನ್ಯವಾದ ರೂಢಿಯಂತೆ ರೀಡಿಂಗ್ ಮಿತಿಯಲ್ಲಿ ಇದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದು ಮಿತಿಯಲ್ಲಿ ಇಲ್ಲದಿದ್ದಲ್ಲಿ ಗ್ರಾಹಕರಿಗೆ ಉಪಕರಣಗಳನ್ನು ದುರಸ್ತಿ ಮಾಡಲು ಅಥವಾ ಉಪಕರಣಗಳನ್ನು ಬದಲಾಯಿಸಲು ಸೂಚಿಸಲಾಗುತ್ತದೆ.
8. ಕ್ಯಾಲಿಬ್ರೇಶನ್ ನ ವರದಿಯ ತಾಂತ್ರಿಕ ವ್ಯವಸ್ಥಾಪನೆಯ ಮೂಲಕ ಪರಿಶೀಲನೆಯನ್ನು ಮಾಡಿ ಅದರಲ್ಲಿ ಅವರ ಸಹಿಯನ್ನು ಪಡೆಯಲಾಗುತ್ತದೆ.

ಕ್ಯಾಲಿಬ್ರೇಶನ್ ವರದಿ ಕುರಿತು ತಿಳಿದುಕೊಳ್ಳುವುದು
ಕ್ಯಾಲಿಬ್ರೇಶನ್ ವರದಿಯ ಕೈ ಸೇರಿದ ನಂತರ ಬಳಕೆಗಾರರಿಗೆ ಅದರಲ್ಲಿ ಅನೇಕ ಅಂಶಗಳು ತಿಳಿಯುವುದಿಲ್ಲ. ಕ್ಯಾಲಿಬ್ರೇಶನ್ ನ ವರದಿಗಳನ್ನು ಹೇಗೆ ತಿಳಿದುಕೊಳ್ಳಬೇಕು, ಹೇಗೆ ಪರಿಶೀಲಿಸಬೇಕು ಎಂಬುದನ್ನು ಚಿತ್ರ ಕ್ರ. 8 ರಲ್ಲಿ ನೀಡಿರುವ ಮಾದರಿ ಕ್ಯಾಲಿಬ್ರೇಶನ್ ವರದಿ ಮತ್ತು ಸಂಜ್ಞೆಗಳನ್ನು ವೀಕ್ಷಿಸಿರಿ.
A)…. ಕ್ಯಾಲಿಬ್ರೇಟ್ ಮಾಡಲಾಗಿದೆ : ಇದು ಕ್ಯಾಲಿಬ್ರೇಶನ್ ಮಾಡಿರುವ ದಿನಾಂಕ.
B)... ಈ ದಿನದಂದು ಅನುಷ್ಠಾನಗೊಳಿಸಲಾಯಿತು : ಈ ವರದಿಯನ್ನು ನೀಡಿರುವ ದಿನಾಂಕ.
C) ದೃಢೀಕರಣ ಪತ್ರದ ಕ್ರಮಾಂಕ : ಇದು ವಿಶಿಷ್ಟವಾದ (ಯುನಿಕ್) ದೃಢೀಕರಣ ಪತ್ರದ ಕ್ರಮಾಂಕವಾಗಿದೆ.
D)... ಮುಂದಿನ ಕ್ಯಾಲಿಬ್ರೇಶನ್ ಗೆ ನಿರ್ಧರಿಸಿರುವ ದಿನಾಂಕ : ಈ ದಿನಾಂಕದಂದು ಮತ್ತೆ ಕ್ಯಾಲಿಬ್ರೇಶನ್ ಮಾಡುವುದಿದೆ.
E) ಐಡಿ ಕ್ರಮಾಂಕ : ಈ ಗ್ರಾಹಕನು ನೀಡಿರುವ ಯುನಿಕ್ ಗುರುತು ಕ್ರಮಾಂಕ ಇದೆ.
F) ಅನುಕ್ರಮಾಂಕ : ಇದು ಉಪಕರಣದ ಅನುಕ್ರಮಾಂಕವಾಗಿದೆ.
G) CCSPL ಐಡಿ ಕ್ರಮಾಂಕ : ಇದು ನಮ್ಮ ಪ್ರಯೋಗ ಶಾಲೆಯಲ್ಲಿ ನೀಡಿರುವ ಯುನಿಕ್ ಗುರುತು ಕ್ರಮಾಂಕವಾಗಿದೆ.
H) ಪರಿಸರದ ಸ್ಥಿತಿ : ಕ್ಯಾಲಿಬ್ರೇಶನ್ ಮಾಡುವಾಗ ಇರುವ ಉಷ್ಣಾಂಶ ಮತ್ತು ಆರ್ದ್ರತೆ.
I) ರೆಫರನ್ಸ್ ಸ್ಟ್ಯಾಂಡರ್ಡ್ : ವಿಶಿಷ್ಟ ಉಪಕರಣಗಳಿಗೋಸ್ಕರ ರಾಷ್ಟ್ರೀಯ ಅಥವಾ ಆಂತಾರಾಷ್ಟ್ರೀಯ ಸ್ಟ್ಯಾಂಡರ್ಡ್ (ದಾಖಲೆ) ಕ್ರಮಾಂಕ. ಇದು ಭಾರತೀಯ/ ಜರ್ಮನ್/ ಅಮೇರಿಕನ್/ ಬ್ರಿಟಿಶ್ ಸ್ಟ್ಯಾಂಡರ್ಡ್ ಗಳು ಇರಬಲ್ಲದು.
Calibration Certifcate 
 
J) ಕ್ಯಾಲಿಬ್ರೇಶನ್ ನ ಕಾರ್ಯಪದ್ಧತಿ : ವಿಶಿಷ್ಟ ಉಪಕರಣಗಳ ಕ್ಯಾಲಿಬ್ರೇಶನ್ ಮಾಡುವ ಕಾರ್ಯಪದ್ಧತಿಯ ಕ್ರಮಾಂಕವಾಗಿರುತ್ತದೆ. ಇದರಲ್ಲಿ ಕ್ಯಾಲಿಬ್ರೇಶನ್ ನ ವಿಸ್ತೃತವಾದ ಪ್ರಕ್ರಿಯೆಯು ಇರುತ್ತದೆ.
K) ಉಪಕರಣಗಳನ್ನು ಗುರುತಿಸುವ ಚಿಹ್ನೆ (ಟ್ರೆಸೆಬಿಲಿಟಿ) : ಒಂದೇ ವಿಶಿಷ್ಟ ಉಪಕರಣದ ಕ್ಯಾಲಿಬ್ರೇಶನ್ ಮಾಡಲು ನಮ್ಮ ಮಾಸ್ಟರ್ ಉಪಕರಣವನ್ನು ಬಳಸಲಾಗುತ್ತದೆ, ಅದರ ವಿವರಗಳು. ಇದರಲ್ಲಿ ಹೆಸರು, ಐಡಿ ಕ್ರಮಾಂಕ, ದೃಢೀಕರಣ ಪತ್ರ ಕ್ರಮಾಂಕ, ನಾವು ಎಲ್ಲಿಂದ ಮಾಸ್ಟರ್ ನ ಕ್ಯಾಲಿಬ್ರೇಶನ್ ಮಾಡಿದ್ದೆವೋ ಆ ಲ್ಯಾಬ್ ನ ದೃಢೀಕರಣ ಪತ್ರದ ಕ್ರಮಾಂಕ, ಅದರ ಮುಂದಿನ ಕ್ಯಾಲಿಬ್ರೇಶನ್ ಮಾಡುವ ದಿನಾಂಕ (ಡ್ಯೂ ಡೇಟ್) ಇತ್ಯಾದಿಗಳಿರುತ್ತವೆ.
L) ಮಾಪನದ ಅನಿಶ್ಚಿತತೆ : ಇದು ಮಾಪನದ ಫಲಿತಾಂಶಗಳೊಂದಿಗೆ ಸಂಬಂಧಪಟ್ಟ ಪ್ಯಾರಾಮೀಟರ್ ಆಗಿದೆ. ಮಾಪನ ಮಾಡಿರುವ ಮೌಲ್ಯಗಳನ್ನು ಅಳೆಯಲಾಗುವ ಡೈಮೆನ್ಶನ್ ಗಳನ್ನು ಎಷ್ಟು ಪ್ರಮಾಣದಲ್ಲಿ ವಿಸ್ತರಿಸುವುದು ಯೋಗ್ಯವೋ ಅದಕ್ಕೆ ಮನ್ನಣೆಯನ್ನು ನೀಡುವುದನ್ನು ಇದರಿಂದ ತೋರಿಸಲಾಗುತ್ತದೆ.
M) ಕ್ಯಾಲಿಬ್ರೇಶನ್ ನ ಫಲಿತಾಂಶ : ಕ್ಯಾಲಿಬ್ರೇಶನ್ ಮಾಡಿರುವ ಉಪಕರಣಗಳ ವಿವಿಧ ಪ್ಯಾರಾಮೀಟರ್ ಗಳ ಕ್ಯಾಲಿಬ್ರೇಟೆಡ್ ಮೌಲ್ಯಗಳನ್ನು ಇದರಲ್ಲಿ ನೀಡಲಾಗಿದೆ.
 
ಈ ಮಾಪನದಲ್ಲಿ ಪರಿಶೀಲಿಸಿದ ಆಕಾರವು ಸ್ಪೆಸಿಫೈಡ್ ಮಿತಿಯಲ್ಲಿದೆ. ಆದ್ದರಿಂದ ಗೇಜ್ ಸರಿ ಇದೆ. ಒಂದು ವೇಳೆ ಗೇಜ್ ನ ಸವೆತವು ಮಿತಿಯನ್ನು (ವೇರ್ ಲಿಮಿಟ್) ದಾಟಿದಲ್ಲಿ, ಗೇಜ್ ಸರಿ ಇಲ್ಲ ಎಂದು ಇರುತ್ತದೆ.
ಕ್ಯಾಲಿಬ್ರೇಶನ್ ವರದಿಯು ಗ್ರಾಹಕರ ಕೈಸೇರಿದಾಗ ಮತ್ತು ಗ್ರಾಹಕರು ಆ ವರದಿಯನ್ನು ಅತ್ಯಂತ ಸೂಕ್ಷ್ಮವಾಗಿ ನೋಡುತ್ತಾನೆ. ಆಗಲೂ ಆ ಉಪಕರಣವು ಬಳಸಲು ಯೋಗ್ಯವಾಗಿದೆ ಅಥವಾ ಇಲ್ಲ, ಎಂಬುದನ್ನು ಅವನಿಗೆ ನಿರ್ಧರಿಸುವುದು ಸಾಧ್ಯವಿಲ್ಲ. ಕೆಲವೇ ಉಪಕರಣಗಳ ಕುರಿತು ರೆಫರನ್ಸ್ ಸ್ಟ್ಯಾಂಡರ್ಡ್ (ಭಾರತೀಯ/ ಆಂತಾರಾಷ್ಟ್ರೀಯ ಸ್ಟ್ಯಾಂಡರ್ಡ್) ಅದರ ಎಕ್ಸೆಪ್ಟನ್ಸ್ (ಸ್ವೀಕೃತಿಯ) ಮಾನದಂಡಗಳನ್ನು ಸ್ಪಷ್ಟವಾಗಿ ಹೇಳಲಾಗಿರುತ್ತವೆ. ನಾವು ವರ್ನಿಯರ್ ಕ್ಯಾಲಿಪರ್ ನ ಉದಾಹರಣೆಯನ್ನು ನೋಡೋಣ.
‘ಎ’ ಗ್ರಾಹಕನು 0.04 ಮಿ.ಮೀ. ಎಂಬ ತುಂಬಾ ಕಡಿಮೆ ಟಾಲರನ್ಸ್ ಇರುವ ಯಂತ್ರಭಾಗಗಳಿಗೆ ಕ್ಯಾಲಿಪರ್ ಬಳಸುತ್ತಾರೆ. ‘ಬಿ’ ಗ್ರಾಹಕನು 0.50 ಮಿ.ಮೀ. ಅಂದರೆ ಹೋಲಿಕೆಯಲ್ಲಿ ಸಾಮಾನ್ಯವಾದ ಟಾಲರನ್ಸ್ ಇರುವ ಯಂತ್ರಭಾಗಗಳಿಗೆ ಕ್ಯಾಲಿಪರ್ ಬಳಸುತ್ತಾನೆ. ‘ಎ’ ಗ್ರಾಹಕನ ಸ್ವೀಕೃತಿಯ ಮಾನದಂಡಗಳು (ಎಕ್ಸೆಪ್ಟನ್ಸ್ ಕ್ರೈಟೇರಿಯಾ) 0.02 ಮಿ.ಮೀ. ಮತ್ತು ‘ಬಿ’ ಗ್ರಾಹಕನ ಮಾನದಂಡವು 0.10 ಮಿ.ಮೀ. ಇರಬಲ್ಲದು. ಆದ್ದರಿಂದಲೇ ಆಯಾ ಯಂತ್ರಭಾಗಗಳ ಕ್ಲಿಷ್ಟತೆಯಲ್ಲಿ ಸ್ವೀಕೃತಿಯ ಮಾನದಂಡಗಳು ಅವಲಂಬಿಸಿರುತ್ತವೆ. ಇದರಿಂದಾಗಿ ಗ್ರಾಹಕನು ಪ್ರತಿಯೊಂದು ಉಪಕರಣದ ಸ್ವೀಕೃತಿಯ ಮಾನದಂಡಗಳನ್ನು ನಿರ್ಧರಿಸಿ ಅದನ್ನು ಅದರ ಹಿಸ್ಟರಿ ಕಾರ್ಡ್ ನಲ್ಲಿ ನೊಂದಾಯಿಸುವುದು ಅತ್ಯಾವಶ್ಯಕವಾಗಿದೆ.
 
ನಾವು 0.0005 ಮಿ.ಮೀ. ರೆಝೋಲ್ಯುಶನ್ ಇರುವ ಡಯಲ್ ಬಳಸಿ 0.1 ಮಿ.ಮೀ. ಟಾಲರನ್ಸ್ ಇರುವ ಕಾರ್ಯವಸ್ತುವಿನ ಮಾಪನವನ್ನು ಮಾಡುತ್ತಿದ್ದಲ್ಲಿ ನಾವು ಹೆಚ್ಚು ಉಚ್ಚಮಟ್ಟದ ನಿಖರತೆ ಇರುವ ಉಪಕರಣಗಳನ್ನು ಬಳಸುತ್ತೇವೆ, ಎಂಬುದಾಗಿ ತಿಳಿಯಲಾಗುತ್ತದೆ.
ತಾವು 0.1 ಮಿ.ಮೀ. ಟಾಲರನ್ಸ್ ಇರುವ ಕಾರ್ಯವಸ್ತುಗಳಿಗೋಸ್ಕರ 0.1 ಮಿ.ಮೀ. ರೆಝೋಲ್ಯುಶನ್ ಇರುವ ಡಯಲ್ ಬಳಸುತ್ತಿದ್ದಲ್ಲಿ ತಾವು ತುಂಬಾ ಕಡಿಮೆ ನಿಖರತೆ ಇರುವ ಉಪಕರಣಗಳನ್ನು ಬಳಸುತ್ತಿದ್ದಿರಿ, ಎಂಬುದಾಗಿ ತಿಳಿಯಲಾಗುತ್ತದೆ. ಈ ಕೆಲಸದಲ್ಲಿ 0.01/ 0.001 ಮಿ.ಮೀ. (M10) ರೆಝೋಲ್ಯುಶನ್ ನ ಉಪಕರಣಗಳನ್ನು ಬಳಸುವುದು ಸೂಕ್ತವಾಗಿದೆ.
 
ಮಾಪನದ ಉಪಕರಣಗಳ ಕ್ಯಾಲಿಬ್ರೇಶನ್ ನ ರಿಪಿಟ್ಯಾಬಿಲಿಟಿಯನ್ನು ನಿರ್ಧರಿಸುವುದು
ಉಪಕರಣ/ ಗೇಜ್ ನ ಕ್ಯಾಲಿಬ್ರೇಶನ್ ಹೇಗೆ ನಿರ್ಧರಿಸಬೇಕು, ಎಂಬ ಪ್ರಶ್ನೆಯು ಗ್ರಾಹಕರು ನಮಗೆ ಆಗಾಗ ಕೇಳುತ್ತಿರುತ್ತಾರೆ. ಗ್ರಾಹಕರಿಗೆ ಉಪಕರಣಗಳ ಬಳಕೆಗೆ ಅನುಸಾರವಾಗಿ ಕ್ಯಾಲಿಬ್ರೇಶನ್ ನ ರಿಪಿಟ್ಯಾಬಿಲಿಟಿ ನಿರ್ಧರಿಸುವ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಯಾವಾಗಲಾದರೂ ಒಮ್ಮೆ ಬಳಸಲಾಗುವ ಉಪಕರಣಗಳ ಕ್ಯಾಲಿಬ್ರೇಶನ್ ನ ರಿಪಿಟ್ಯಾಬಿಲಿಟಿ ಒಂದು ವರ್ಷದ ತನಕ ಇರಬಲ್ಲದು ಮತ್ತು ನಿರಂತರವಾಗಿ ಬಳಸಲಾಗುವ ಉಪಕರಣಗಳಿಗೆ ಅದು ಒಂದು ವರ್ಷಕ್ಕಿಂತ ಕಡಿಮೆ ಇರುವುದು ಸಾಧ್ಯ.
ಹೊಸ ಮತ್ತು ಬಳಕೆಯಲ್ಲಿರುವ ಇಂತಹ ಎರಡೂ ವಿಧದ ಉಪಕರಣಗಳಿಗೋಸ್ಕರ ಕ್ಯಾಲಿಬ್ರೇಶನ್ ಮಾಡುವುದು ಆವಶ್ಯಕವಾಗಿದೆ. ಕಾರಣ ಹೊಸ ಉಪಕರಣಗಳಲ್ಲಿ ಯಾವುದೇ ರೀತಿಯ ಕೊರತೆಗಳಿದ್ದಲ್ಲಿ ಅದರಿಂದಾಗಿ ಉತ್ಪಾದನೆಯಲ್ಲಿ ಪರಿಣಾಮ ಉಂಟಾಗಬಲ್ಲದು.
ಉಪಕರಣಗಳನ್ನು ಕ್ಯಾಲಿಬ್ರೇಟ್ ಮಾಡದಿದ್ದಲ್ಲಿ ಏನಾಗಬಹುದು?
ಆಪರೇಟರ್ ಕ್ಯಾಲಿಬ್ರೇಟ್ ಮಾಡದೇ ಇರುವ ಉಪಕರಣ ಅಥವಾ ಗೇಜ್ ಬಳಸಿದಲ್ಲಿ ಈ ಮುಂದಿನ ಸಮಸ್ಯೆಗಳು ಉದ್ಭವಿಸಬಲ್ಲವು.
 
ಎ. ಉತ್ಪಾದನೆಯ ರಿಜೆಕ್ಷನ್
ಬಿ. ಆಪರೇಟರ್ ಅಥವಾ ಗುಣಮಟ್ಟದ ಭರವಸೆ (QA) ಇಂಜಿನಿಯರ್ ಗೆ ಇರುವ ಆತ್ಮವಿಶ್ವಾಸವು ಇಲ್ಲದಂತಾಗುತ್ತದೆ.
ಸಿ. ISO/ IATF/ ಗ್ರಾಹಕರು ಆಡಿಟ್ ನಲ್ಲಿ ‘ಸಾದೃಶ್ಯತೆ ಇಲ್ಲ (NC)’ ಎಂಬುದಾಗಿ ದೃಢೀಕರಿಸಲ್ಪಡುತ್ತದೆ.
ಡಿ. ಗ್ರಾಹಕರ ಆರ್ಡರ್ ಕಳೆದುಕೊಳ್ಳುವ ಸಾಧ್ಯತೆ.
ಇ. ಕಾರ್ಖಾನೆಯಲ್ಲಿ ಅಪಘಾತದ ಸಾಧ್ಯತೆ.
ತಾವು ಮಾಡಿರುವ ಉತ್ಪಾದನೆಯ ಗುಣಮಟ್ಟದ ಖಾತರಿಯನ್ನು ನೀಡುವುದಾದಲ್ಲಿ, ಅದಕ್ಕೋಸ್ಕರ ಬಳಸಲಾಗಿರುವ ಪ್ರಕ್ರಿಯೆಯೊಂದಿಗೆ ತಪಾಸಣೆಗೋಸ್ಕರ ಬಳಸಲಾಗುವ ಉಪಕರಣಗಳನ್ನು ಯೋಗ್ಯ ವೇಳೆಯಲ್ಲಿ ಕ್ಯಾಲಿಬ್ರೇಟ್ ಮಾಡುವುದು, ಹಾಗೆಯೇ ಕಾರ್ಖಾನೆಯಲ್ಲಿ ಅದನ್ನು ಮುತುವರ್ಜಿ ವಹಿಸಿ ನಿರ್ವಹಿಸುವುದೂ ಅತ್ಯಾವಶ್ಯಕವಾಗಿದೆ.
 
ರಾಹುಲ್ ಖೈರ್ ನಾರ್ ಇವರು ಕ್ಯಾಲ್-ಟೆಕ್ ಕ್ಯಾಲಿಬ್ರೇಶನ್ ಸರ್ವಿಸೆಸ್ ಪ್ರೈ.ಲಿ. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರಿಗೆ ಆ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿರುವ ಸುಮಾರು 12 ವರ್ಷಗಳ ಅನುಭವವಿದೆ.
 7774084722
 
@@AUTHORINFO_V1@@