ವರ್ಕಿಂಗ್ ಕ್ಯಾಪಿಟಲ್ ನ ಪರಿಚಯ

@@NEWS_SUBHEADLINE_BLOCK@@

Udyam Prakashan Kannad    30-Sep-2020   
Total Views |






dfg_1  H x W: 0

ಲಾಕ್ ಡೌನ್ ನಂತರ ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ಚಿಕ್ಕ ಮತ್ತು ಮಧ್ಯಮ ಉದ್ಯಮಿಗಳು ಆರ್ಥಿಕ ವ್ಯವಹಾರದ ಕುರಿತು ಆಳವಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ, ಎಂಬ ಅಂಶದ ಕುರಿತು ಆಗಸ್ಟ್ 2020 ರ ಸಂಚಿಕೆಯಲ್ಲಿ ತಿಳಿದುಕೊಂಡೆವು. ಹಾಗೆಯೇ, ನಿಂತು ಹೋಗಿರುವ ಉದ್ಯಮಗಳನ್ನು ಮತ್ತೆ ಆರಂಭಿಸುವಾಗ ಕಾರ್ಯವಾಹಿ ಬಂಡವಾಳದ (ವರ್ಕಿಂಗ್ ಕ್ಯಾಪಿಟಲ್) ಸೂಕ್ತವಾದ ವ್ಯವಸ್ಥಾಪನೆಯೂ ಎಷ್ಟು ಮಹತ್ವದ್ದಾಗಿದೆ ಎಂಬುದನ್ನೂ ನಾವು ತಿಳಿದುಕೊಂಡೆವು. ಉದ್ಯಮಿಗಳ ಆರ್ಥಿಕ ತಿಳುವಳಿಕೆಯ ಸದ್ಯದ ಸ್ಥಿತಿಯ ಕುರಿತು ನಾವು ಸಹಜವಾಗಿ ವಿಚಾರ ಮಾಡಿದರೆ, ಕಾರ್ಯವಾಹಿ ಬಂಡವಾಳ ಅಂದರೆ ಏನು? ಅದರ ವ್ಯವಸ್ಥೆಯನ್ನು ಹೇಗೆ ಮಾಡಬೇಕಾಗುತ್ತದೆ? ಅದರ ಮೌಲ್ಯಮಾಪನವನ್ನು ಹೇಗೆ ಮಾಡಲಾಗುತ್ತದೆ? ಮತ್ತು ಬ್ಯಾಂಕ್ ಗಳಿಂದ ಬಂಡವಾಳದ ಕುರಿತು ಹೇಗೆ ಸಹಾಯ ನೀಡಲಾಗುತ್ತದೆ, ಇತ್ಯಾದಿ ಅಂಶಗಳ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೆ ಪ್ರಾಮುಖ್ಯತೆ ನೀಡುವುದೂ ಅತ್ಯಾವಶ್ಯಕವಾಗಿದೆ.

ಕಾರ್ಯವಾಹಿ ಬಂಡವಾಳ ಎಂದರೆ ಏನು?
ಯಾವುದೇ ಕೈಗಾರಿಕೋದ್ಯಮಗಳಲ್ಲಿ ಆಸ್ತಿ-ಪಾಸ್ತಿಗಳ ಕುರಿತು ವಿಚಾರ ಮಾಡುವಾಗ ಪ್ರಮುಖವಾಗಿ ಅದನ್ನು ಎರಡು ವಿಭಾಗಗಳಾಗಿ ವಿಂಗಡಿಸುತ್ತೇವೆ. ಮೊದಲಾಗಿ ವ್ಯವಹಾರದಲ್ಲಿ ದೀರ್ಘಕಾಲಾವಧಿಗೆ ಉಪಯೋಗವಾಗುವ ಸ್ಥಿರವಾಗಿರುವ ಆಸ್ತಿ-ಪಾಸ್ತಿ (ಫಿಕ್ಸ್ಡ್ ಎಸೆಟ್). ಉದಾಹರಣೆ, ಆಸ್ತಿ, ಕಟ್ಟಡಗಳು, ಮಶಿನರಿ, ಪೆಟಂಟ್ ಇತ್ಯಾದಿಗಳು ಮತ್ತು ಎರಡನೆಯದಾಗಿ ಎಲ್ಲ ರೀತಿಯ ಕರಂಟ್ ಎಸೆಟ್ ಅಂದರೆ, ಪ್ರತಿದಿನದ ಖರ್ಚಿಗೆ ಬೇಕಾಗುವ ಹಣಕಾಸು, ಕಚ್ಚಾ ವಸ್ತುಗಳು, ಉತ್ಪಾದನೆಯ ಪ್ರಕ್ರಿಯೆಯಲ್ಲಿರುವ ಪೂರ್ತಿ ಮಾಡದೇ ಇರುವ ವಸ್ತುಗಳು, ತಯಾರಿಸಿರುವ ವಸ್ತುಗಳು, ಎರವಲಾಗಿ ಉತ್ಪಾದನೆಗಳನ್ನು ಮಾರಾಟ ಮಾಡಿದ್ದರಿಂದ ಗ್ರಾಹಕರಿಂದ ಮರಳಿ ಪಡೆಯಬೇಕಾದ ಪಾವತಿಗಳ ಮೊತ್ತ ಇತ್ಯಾದಿ.
 
ವಾಹನ ನಡೆಸಲು ಹೇಗೆ ಇಂಧನವು ಅತ್ಯಾವಶ್ಯಕವಾಗಿದೆಯೋ, ಹಾಗೆಯೇ ಉದ್ಯಮಗಳ ಚಕ್ರವು ತಿರುಗುತ್ತಿರಲು ಕಾರ್ಯವಾಹಿ ಬಂಡವಾಳದ ಆವಶ್ಯಕತೆ ಇರುತ್ತದೆ. ಅಂದರೆ ಫ್ಯಾಕ್ಟರಿ ಬಿಲ್ಡಿಂಗ್, ಮಶಿನರಿ ತಮ್ಮಲ್ಲಿದೆ, ಆದರೆ ಅದನ್ನು ಉಪಯೋಗಿಸಲು ಕಚ್ಚಾ ವಸ್ತುಗಳು, ಮಶಿನ್ ನಡೆಸಲು ಕೆಲಸಗಾರರು, ವಿದ್ಯುತ್ ಶಕ್ತಿ, ತಯಾರಾಗಿರುವ ವಸ್ತುಗಳನ್ನು ಎರವಲಾಗಿಯಾದರೂ ಮಾರಾಟ ಮಾಡುವುದು, ಇವೆಲ್ಲದರ ಲೆಕ್ಕಾಚಾರವನ್ನಿಡುವುದು ಇತ್ಯಾದಿ ಕೆಲಸಗಳನ್ನು ನಿರ್ವಹಿಸದಿದ್ದರೆ ಆರ್ಥಿಕ ಚಕ್ರವು ತಿರುಗಲಾರದು. ಅಲ್ಲದೇ ಸ್ಥಿರವಾಗಿರುವ ಆಸ್ತಿ-ಪಾಸ್ತಿಗಳು ಇದ್ದೂ ಇಲ್ಲದಂತೆ. ಈ ರೀತಿಯ ಕರಂಟ್ ಎಸೆಟ್ಸ್ ಖರೀದಿಸಲು ಹಣವನ್ನು ಉದ್ಯಮದಲ್ಲಿ ಬಂಡವಾಳದ ಸ್ವರೂಪದಲ್ಲಿ ತೊಡಗಿಸಬೇಕಾಗುತ್ತದೆ. ಅದಕ್ಕೆ ಕಾರ್ಯವಾಹಿ ಬಂಡವಾಳ ಅಥವಾ ವರ್ಕಿಂಗ್ ಕ್ಯಾಪಿಟಲ್ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ನಗದು, ಬ್ಯಾಂಕ್ ಬ್ಯಾಲೆನ್ಸ್, ಸಾಮಗ್ರಿಯ ಸ್ಟಾಕ್, ಎರವಲಾಗಿ ನೀಡಿರುವ ವಸ್ತುಗಳ ಮೊತ್ತದ ವಸೂಲಿ ಇಂತಹ ಆಸ್ತಿ-ಪಾಸ್ತಿ ಮತ್ತು ಸೊತ್ತುಗಳು ಕರಂಟ್ ವಿಧದ ಸೊತ್ತುಗಳಲ್ಲಿ ಒಳಗೊಂಡಿರುತ್ತವೆ.
ಕಚ್ಚಾ ವಸ್ತುಗಳನ್ನು ನಗದಿಯಲ್ಲಿಯೇ ಖರೀದಿಸಬೇಕು, ಎಂದೇನು ಇಲ್ಲ. ಪೂರೈಕೆದಾರರಿಂದ ಎರವಲಾಗಿಯೂ ವಸ್ತುಗಳನ್ನು ಖರೀದಿಸಬಹುದು. ಕರಂಟ್ ಖರ್ಚುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಗದಿಯಲ್ಲಿಯೇ ಮಾಡಬೇಕು, ಎಂದೂ ಇಲ್ಲ. ಆದರೆ ಅನೇಕ ಸಲ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ತುಂಬಿಸಲು ಅವಕಾಶವು ಸಿಗುತ್ತದೆ. ಹಾಗೆಯೇ ಗ್ರಾಹಕರಿಂದ ಬರುವ ಬೇಡಿಕೆಯನ್ನು (ಆರ್ಡರ್ ಗಳನ್ನು) ಪೂರ್ತಿ ಮಾಡಲು ಮುಂಗಡವಾಗಿ ಹಣವನ್ನೂ ಪಡೆಯಬಹುದು. ಈ ರೀತಿಯಲ್ಲಿ ಅನೇಕ ವಿಧದ ಕರಂಟ್ ಆಸ್ತಿ-ಪಾಸ್ತಿಗಳಿಗೋಸ್ಕರ, ಕರಂಟ್ ಲಿಯಾಬಿಲಿಟಿಗಳನ್ನು ಉಂಟು ಮಾಡಿ ಉದ್ಯಮಿಗಳಿಗೆ ಹಣಕಾಸನ್ನು ಸಿದ್ಧಪಡಿಸುವುದು ಸಾಧ್ಯ. ಅದಕ್ಕೋಸ್ಕರವೇ ಸಾಮಾನ್ಯವಾಗಿ ವ್ಯವಹಾರದಲ್ಲಿ ಕರಂಟ್ ಲಿಯಾಬಿಲಿಟಿಗಳಿರುತ್ತವೆ, ಹಾಗೆಯೇ ಸ್ವಲ್ಪ ಪ್ರಮಾಣದಲ್ಲಿ ಕರಂಟ್ ಸ್ವರೂಪದಲ್ಲಿ ಪಾವತಿಸಬೇಕಾಗಿರುವುದೂ ಇರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಬೃಹತ್ ಪ್ರಮಾಣದಲ್ಲಿ ಬಂಡವಾಳ ಅಂದರೆ ಒಂದು ವೇಳೆ ಕರಂಟ್ ಲಿಯಾಬಿಲಿಟಿಗಳನ್ನು ಲೆಕ್ಕಕ್ಕೆ ಹಿಡಿದರೂ ಕೂಡಾ ವ್ಯವಸ್ಥಾಪನೆಯ ದೃಷ್ಟಿಯಲ್ಲಿ ಕರಂಟ್ ಲಿಯಾಬಿಲಿಟಿಗಳನ್ನು ವಜಾ ಮಾಡಿ ಉಳಿಯುವ ಮೊತ್ತವನ್ನು ಕಾರ್ಯವಾಹಿ ಬಂಡವಾಳವೆಂದು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಬಹುದಾಗಿದೆ.
 
ಕಾರ್ಯವಾಹಿ ಬಂಡವಾಳದಲ್ಲಿ ಯಾವ ಲಿಯಾಬಿಲಿಟಿ ಮತ್ತು ಪಾವತಿಸಬೇಕಾಗಿರುವ ಮೊತ್ತಗಳು ಒಳಗೊಂಡಿವೆ ಎಂಬುದು ತಕ್ಷಣ ಗಮನಕ್ಕೆ ಬರುತ್ತದೆ. ಸದ್ಯಕ್ಕೆ ನಡೆಯುತ್ತಿರುವ ವ್ಯವಹಾರಗಳಲ್ಲಿ ಎಲ್ಲ ರೀತಿಯ ಮೊತ್ತಗಳಲ್ಲಿ ಆಗಾಗ ಬದಲಾವಣೆಯಾಗುತ್ತಿರುತ್ತವೆ. ಇಂದು ಯಾವ ವಸ್ತುಗಳು ತಯಾರಾಗುತ್ತವೆಯೋ, ಅವುಗಳಲ್ಲಿ ಕೆಲವು ವಸ್ತುಗಳ ಮಾರಾಟವು ಮುಂದಿನ ದಿನಗಳಲ್ಲಾಗುತ್ತದೆ ಮತ್ತು ಅದರಿಂದ ಬರುವ ನಗದಿ ಮೊತ್ತವು ವ್ಯವಹಾರಕ್ಕೆ ಬಳಸಬಹುದಾಗಿದೆ. ಅದೇ ನಗದಿ ಮೊತ್ತವನ್ನು ಬಳಸಿ ಇನ್ನೆರಡು ದಿನಗಳ ನಂತರ ವಿದ್ಯುತ್ ಬಿಲ್ ಪಾವತಿಸಲಾಗುತ್ತದೆ. ಹೀಗೆಯೇ ಕರಂಟ್ ವ್ಯವಹಾರದ ಕುರಿತು ಆಗುತ್ತಿರುತ್ತದೆ. ಇಂದು ಬಂದ ನಗದಿಯನ್ನು ನಾಳೆ ಖರ್ಚು ಮಾಡುವ ಪರಿಸ್ಥಿತಿಯು ನಿರಂತರವಾಗಿ ನಡೆಯುತ್ತಿರುತ್ತದೆ. ಯಾವುದೇ ಆಟಗಾರನು ಆಡುತ್ತಿರುವಾಗ ಸ್ಥಿತಿಯಲ್ಲಿ ಪ್ರತಿದಿನವೂ ಬದಲಾವಣೆಯಾಗುವಂತೆ, ಕರಂಟ್ ಲಿಯಾಬಿಲಿಟಿ ಮತ್ತು ಪಾವತಿಸಬೇಕಾದ ಮೊತ್ತಗಳು ಪ್ರತಿದಿನವೂ ಬದಲಾಯಿಸುತ್ತಿರುತ್ತದೆ. ಆದ್ದರಿಂದ ನಿರಂತರವಾಗಿ ವ್ಯವಹಾರದಲ್ಲಿಯೂ ಏರುಪೇರುಗಳು ನಿರಂತರವಾಗಿ ಆಗುತ್ತಿರುತ್ತವೆ. ಆದ್ದರಿಂದ ಇದನ್ನು ಕಾರ್ಯವಾಹಿ ಬಂಡವಾಳ ಎಂಬ ಸೂಕ್ತವಾದ ಹೆಸರು ಬಳಿಸಿದೆ. ಇಂತಹ ಕಾರ್ಯವಾಹಿ ಬಂಡವಾಳದ ಆವಶ್ಯಕತೆಯು ನಿರಂತವಾಗಿರುತ್ತದೆ. ಆದರೆ ಎಲ್ಲ ಘಟಕಗಳು ಸಾಮಾನ್ಯವಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲಾವಧಿಯಲ್ಲಿ ನಡೆಯುತ್ತಿರುವುದನ್ನು ಅಪೇಕ್ಷಿಸಲಾಗುವುದಿಲ್ಲ. ಅಂದರೆ ವರ್ಷದ ಕೊನೆಯಲ್ಲ ಮಾಡಲಾಗುವ ಲೆಕ್ಕಾಚಾರದಲ್ಲಿ ಯಾವ ಗ್ರಾಹಕರಿಂದ ಬರಬೇಕಾಗಿರುವ ಮೊತ್ತಗಳನ್ನು ತೋರಿಸಿದ್ದಲ್ಲಿ, ಆ ಗ್ರಾಹಕರಿಂದ ಬರಬೇಕಾಗಿರುವ ಬಾಕಿ ಮೊತ್ತವು ಮುಂದಿನ ವರ್ಷದಲ್ಲಿ ಬರಬಹುದು ಮತ್ತು ಮುಂದಿನ ವರ್ಷದ ಕೊನೆಯಲ್ಲಿ ಇನ್ನಿತರ ಬಿಲ್ ಗಳ ಮೊತ್ತವು ಆಡಿಟ್ ನಲ್ಲಿ ಬಾಕಿ ಕಾಣಿಸಲಾಗುತ್ತದೆ. ಇದೇ ರೀತಿಯ ವ್ಯವಹಾರವು ಪೂರೈಕೆಗಾರರಿಗೆ ನೀಡಬೇಕಾಗಿರುವ ಹಣ, ಸ್ಟಾಕ್, ಬ್ಯಾಂಕ್ ಬ್ಯಾಲೆನ್ಸ್ ಕುರಿತಾಗಿಯೂ ಕಂಡುಬರಬಹುದು.
ಅದಕ್ಕೋಸ್ಕರವೇ ಅಕೌಂಟಿಂಗ್ ಮಾಡುತ್ತಿರುವಾಗ ಅಸ್ತಿ-ಪಾಸ್ತಿಗಳು ಮತ್ತು ಇನ್ನಿತರ ಮೊತ್ತಗಳನ್ನು ಸರಿಯಾಗಿ ವರ್ಗೀಕರಿಸಬೇಕಾಗುತ್ತದೆ. ಈ ವರ್ಗೀಕರಣದಲ್ಲಿ ಕಡಿಮೆ ಕಾಲಾವಧಿಯ ಅಸ್ತಿ-ಪಾಸ್ತಿ, ಸೊತ್ತುಗಳು ಮತ್ತು ಪಾವತಿಸ ಬೇಕಾಗಿರುವ ಮೊತ್ತ ಅದರೆ ಕರಂಟ್ ಎಂಬ ಹೆಸರಿನಲ್ಲಿ ಅಳವಡಿಸಲಾಗುತ್ತದೆ. ಆದರೆ ದೀರ್ಘ ಕಾಲಾವಧಿಯ ವ್ಯವಹಾರಗಳಲ್ಲಿ ಯಾವ ಸೊತ್ತುಗಳು ಮತ್ತು ಪಾವತಿಸಬೇಕಾಗಿರುವ ಮೊತ್ತಗಳು ಇರುವ ಸಾಧ್ಯತೆ ಇದೆಯೋ, ಅವುಗಳೆಲ್ಲವನ್ನೂ ಫಿಕ್ಸ್ಡ್ ಎಸೆಟ್ಸ್ ಮತ್ತು ದೀರ್ಘಕಾಲಾವಧಿಯಲ್ಲಿ ಪಾವತಿಸಬೇಕಾಗಿರುವ ಮೊತ್ತಗಳಲ್ಲಿ ಸೇರಿಸಲಾಗುತ್ತದೆ.
ಇದೇ ರೀತಿಯಲ್ಲಿ ನಾವು ಕಾರ್ಯವಾಹಿ ಬಂಡವಾಳದಲ್ಲಿ ಕರಂಟ್ ಸ್ವರೂಪದ ಸೊತ್ತುಗಳು ಮತ್ತು ಪಾವತಿಸಬೇಕಾಗಿರುವ ಮೊತ್ತಗಳ ಮೂಲಕ ವ್ಯವಹಾರಗಳನ್ನು ನಡೆಸುವಲ್ಲಿ ಸಹಕಾರವಾಗುತ್ತದೆ. ಹೀಗೆ ಕರಂಟ್ ಎಸೆಟ್ಸ್ ಮತ್ತು ಪಾವತಿಸಬೇಕಾಗಿರುವ ಮೊತ್ತಗಳು ಇವುಗಳ ವ್ಯವಹಾರದ ಚಕ್ರವು ತಿರುಗುತ್ತಾ ಇರುತ್ತದೆ. ಹೀಗೆಯೇ ಎಲ್ಲ ರೀತಿಯ ವ್ಯವಹಾರಗಳೂ ನಡೆಯುತ್ತವೆ.

ಕರಂಟ್ ಸೊತ್ತುಗಳು (ಆಸ್ತಿ-ಪಾಸ್ತಿಗಳು) ಮತ್ತು ಮರುಪಾವತಿಯ ಚಕ್ರ ಅಂದರೆ ವರ್ಕಿಂಗ್ ಕ್ಯಾಪಿಟಲ್ ಸೈಕಲ್
ಕರಂಟ್ ಸೊತ್ತುಗಳು ಮತ್ತು ಮರುಪಾವತಿಯ ಚಕ್ರವು ವ್ಯವಹಾರದಲ್ಲಿ ನಿರಂತರವಾಗಿ ತಿರುಗುತ್ತಿರುತ್ತದೆ. ಅದಕ್ಕೆ ವರ್ಕಿಂಗ್ ಕ್ಯಾಪಿಟಲ್ ಸೈಕಲ್ ಎಂದು ಹೇಳುತ್ತಾರೆ. ಈ ಚಕ್ರದ ತಿರುಗುವ ಪ್ರಾರಂಭವು ವ್ಯವಹಾರದ ಪ್ರಾರಂಭದಿಂದಲೇ ನಡೆಯುತ್ತದೆ. ವ್ಯವಹಾರದಲ್ಲಿ ಮುಂದೆ ಉಂಟಾಗುವ ಎರಿಳಿತಗಳು ಆದಂತೆ ಈ ಚಕ್ರದಲ್ಲಿಯೂ ಬದಲಾವಣೆಗಳಾಗುತ್ತವೆ. ಇನ್ನಷ್ಟು ವಿಸ್ತಾರವಾಗಿ ಹೇಳುವುದಾದರೆ, ವ್ಯವಹಾರವನ್ನು ಅಥವಾ ಉದ್ಯಮವನ್ನು ಪ್ರಾರಂಭಿಸುವಾಗ ಹೂಡಿರುವ ನಗದಿ ಮೊತ್ತವನ್ನು ಬಂಡವಾಳವೆಂದು ಮಾಲಿಕರು ವ್ಯವಹಾರದಲ್ಲಿ ಹೂಡುತ್ತಾರೆ. ಇಲ್ಲಿಂದಲೇ ಮೊದಲ ಚಕ್ರದ ಹಂತವು ಪ್ರಾರಂಭಗೊಳ್ಳುತ್ತದೆ. ಇದರಲ್ಲಿ ಸ್ವಲ್ಪ ನಗದಿ ಹಣದಿಂದ ಕಚ್ಚಾ ವಸ್ತುಗಳನ್ನು ಖರೀದಿಸಲಾಗುತ್ತದೆ. ಅಂದರೆ ನಗದಿ ಹಣವು ಕಚ್ಚಾ ವಸ್ತುಗಳಲ್ಲಿ ರೂಪಾಂತರಿಸಲಾಗುತ್ತದೆ. ಇನ್ನಷ್ಟು ನಗದಿ ಮೊತ್ತವನ್ನು ಬಳಸಿ ವಸ್ತುಗಳಿಗೆ ಪ್ರಕ್ರಿಯೆ ಮಾಡಲು ಕೆಲಸಗಾರರ ನೇಮಕಾತಿಯನ್ನು ಮಾಡಿ ಅವರ ಸಂಬಳವನ್ನು ಮತ್ತು ಕಚ್ಚಾ ವಸ್ತುಗಳ ರೂಪಾಂತರವನ್ನು ವಸ್ತುಗಳಲ್ಲಿ ಮಾಡಲಾಗುತ್ತದೆ. ಇದರಿಂದಾಗಿಯೇ ತಯಾರಿಸಿರುವ ವಸ್ತುಗಳನ್ನು ಎರವಲಾಗಿ ಗ್ರಾಹಕರಿಗೆ ನೀಡಿದ್ದರಿಂದ ಗ್ರಾಹಕರಿಂದ ವಸೂಲಿ ಮಾಡಬೇಕಾದ ಮೊತ್ತವು ಉಂಟಾಗುತ್ತದೆ. ಅಂದರೆ ತಯಾರಿಸಿದ ವಸ್ತುಗಳ ರೂಪಾಂತರವು ವಸೂಲಿಯಲ್ಲಾಗುತ್ತದೆ. ಇಂತಹ ವಸೂಲಿಯ ಹಣವು ಬಂದ ನಂತರ ಅದು ನಗದಿಯಲ್ಲಿ ಮತ್ತೆ ರೂಪಾಂತರಿಸಲ್ಪಡುತ್ತದೆ. ನಂತಹ ಅದೇ ನಗದಿಯನ್ನು ಮತ್ತೆ ಬಳಸಿ ಮತ್ತೆ ಹೊಸದಾಗಿ ಕಚ್ಚಾ ವಸ್ತುಗಳನ್ನು ಖರೀದಿಸಲಾಗುತ್ತದೆ ಮತ್ತು ಕಾರ್ಯವಾಹಿ ಬಂಡವಾಳದ ಚಕ್ರದ ಹೊಸದಾದ ಸೈಕಲ್ ಪ್ರಾರಂಭಗೊಳ್ಳುತ್ತದೆ.
 

dfg_1  H x W: 0 
ಪ್ರತ್ಯಕ್ಷವಾದ ವ್ಯವಹಾರದಲ್ಲಿ ಇದರಲ್ಲಿ ಒಂದು ದೊಡ್ಡ ರೀತಿಯ ಬದಲಾವಣೆಯು ಸಾಮಾನ್ಯವಾಗಿ ಆಗುತ್ತದೆ. ಕಚ್ಚಾ ವಸ್ತುಗಳ ಖರೀದಿ ಮತ್ತು ಇನ್ನಿತರ ದಿನನಿತ್ಯದ ಖರ್ಚುಗಳಿಗೋಸ್ಕರ ಉದ್ಯಮಿಗಳಿಗೆ ಕ್ರೆಡಿಟ್ ಸಿಗಬಹುದು ಮತ್ತು ಕಚ್ಚಾ ವಸ್ತುಗಳ ಮೌಲ್ಯವನ್ನು ನೀಡಲು ಉದ್ಯಮಿಗಳಿಗೆ ಸ್ವಂತದ್ದೇ ಆದ ಬಂಡವಾಳವನ್ನು ಬಳಸಬೇಕಾಗುವುದಿಲ್ಲ. ಪ್ರತಿಯೊಂದು ಉದ್ಯಮವೂ ಯಾವುದೇ ರೀತಿಯ ವಸ್ತುಗಳನ್ನು ಮತ್ತು ಸೇವೆಯನ್ನು ನೀಡುತ್ತಿರುತ್ತಾರೆ. ಇದರಲ್ಲಿಯೇ ಆ ಉದ್ಯಮದ ವರ್ಕಿಂಗ್ ಕ್ಯಾಪಿಟಲ್ ಸ್ವರೂಪ ಮತ್ತು ಅದರ ತಿರುಗುವ ವೇಗವನ್ನು ನಿರ್ಧರಿಸಲಾಗುತ್ತದೆ. ಉದಾಹರಣೆ, ಒಬ್ಬ ಉದ್ಯಮಿಗೆ ಅವರ ಪೂರೈಕೆಗಾರರಿಂದ ಮೂರು ತಿಂಗಳುಗಳ ಕ್ರೆಡಿಟ್ ಸಿಗುತ್ತಿದೆ. ವಸ್ತುಗಳ ಪ್ರಕ್ರಿಯೆ ಆಗಲು ಒಂದು ದಿನ ತಗಲುತ್ತದೆ. ತಯಾರಾಗಿರುವ ವಸ್ತುಗಳ ಮಾರಾಟ ಆಗುವ ತನಕ ಇಂತಹ ವಸ್ತುಗಳ ಎರಡು ತಿಂಗಳ ಕಾಲಾವಧಿಯಲ್ಲಿ ಸ್ಟಾಕ್ ಉಳಿಯುತ್ತದೆ ಮತ್ತು ಆಗಾಗ ಫಾಲೊಅಪ್ ಮಾಡಿ ಸಾಮಾನ್ಯವಾಗಿ ಬಿಲ್ ಗಳ ವಸೂಲಿಯು ಎರಡು ತಿಂಗಳ ಕಾಲಾವಧಿಯಲ್ಲಿ ಆಗಿ ಬಂದಿರುವ ಮೊತ್ತವು ಮತ್ತೆ ನಗದಿಯ ಸ್ಪರೂಪದಲ್ಲಿ ಬರುತ್ತದೆ. ಈ ಉದಾಹರಣೆಯಂತೆ ರನಿಂಗ್ ಕ್ಯಾಪಿಟಲ್ ನ ಚಕ್ರವು ಹೇಗೆ ತಿರುಗುತ್ತಿರುತ್ತದೆ ಎಂಬುದನ್ನು ನೋಡೋಣ. ಮೂರು ತಿಂಗಳ ಕ್ರೆಡಿಟ್ ಪೂರೈಕೆಗಾರರಿಂದ ಸಿಗುವುದರಿಂದ ಉದ್ಯಮಿಗಳಿಗೆ ಸ್ವಂತದ್ದಾದ ಬಂಡವಾಳವನ್ನು ಹೂಡುವ ಸ್ಥಿತಿಯು ವಸ್ತುಗಳನ್ನು ಮಾರಾಟ ಮಾಡಿದ ನಂತರ ಒಂದು ತಿಂಗಳ ನಂತರ ಉದ್ಭವಿಸುತ್ತದೆ. ತಯಾರಿಸಿರುವ ವಸ್ತುಗಳ ಮಾರಾಟ ಆಗಿರುತ್ತದೆ, ಆದರೆ ಬಿಲ್ ಗಳ ಮೊತ್ತ ಮಾತ್ರ ಜಮೆಯಾಗಲು ಇನ್ನೂ ಒಂದು ತಿಂಗಳು ಬಾಕಿ ಇರುತ್ತದೆ. ಇದರಿಂದಾಗಿ ಗ್ರಾಹಕರಿಂದ ಹಣ ಬರುವ ಒಂದು ತಿಂಗಳು ಮುಂಚೆಯೇ ಉದ್ಯಮಿಗಳಿಗೆ ಸ್ವಂತದ್ದಾದ ಬಂಡವಾಳವನ್ನು ಹೂಡಿ ಪೂರೈಕೆಗಾರರ ಹಣವನ್ನು ಪಾವತಿಸಬೇಕಾಗುತ್ತದೆ. ಅಂದರೆ ಈ ಉದ್ಯಮಕ್ಕೋಸ್ಕರ ವರ್ಕಿಂಗ್ ಕ್ಯಾಪಿಟಲ್ ನ ಚಕ್ರ ಒಂದು ತಿಂಗಳ ಸೈಕಲ್ ಪೂರ್ತಿ ಮಾಡುತ್ತದೆ. ಅಂದರೆ ವರ್ಕಿಂಗ್ ಬಂಡವಾಳಕ್ಕೋಸ್ಕರ ಉದ್ಯಮದಲ್ಲಿ ನಗದಿ ಮೊತ್ತವನ್ನು ಹೂಡಿರುವ ದಿನದಿಂದ ಅದು ವಸ್ತುಗಳ ಮಾರಾಟವಾಗಿ ಬಿಲ್ ಗಳ ವಸೂಲಿ ಆಗಿ ವ್ಯವಹಾರದಲ್ಲಿ ಮತ್ತೆ ನಗದಿ ಮೊತ್ತಗಳು ಬರುವ ತನಕ ಎಷ್ಟು ದಿನಗಳು ಬೇಕಾಗುತ್ತವೆ, ಅಷ್ಟೇ ದಿನಗಳು ಆ ವ್ಯವಹಾರಕ್ಕೋಸ್ಕರ ವರ್ಕಿಂಗ್ ಕ್ಯಾಪಿಟಲ್ ನ ಚಕ್ರವು ತಿರುಗಲು ಬೇಕಾಗುತ್ತದೆ, ಎಂಬುದನ್ನು ತಿಳಿಯಲಾಗುತ್ತದೆ. ಈ ಚಕ್ರದ ತಿರುಗುವ ಕಾಲಾವಧಿಯ ವಿವರಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
ಈಗ ಮೇಲಿನ ಉದಾಹರಣೆಯಲ್ಲಿ ಬದಲಾವಣೆಗಳಾಗಿ ಪೂರೈಕೆಗಾರರಿಂದ ಸಿಗುವ ಕ್ರೆಡಿಟ್ ನ ಕಾಲಾವಧಿಯು ಒಂದು ತಿಂಗಳಷ್ಟು ಕಡಿಮೆಯಾಗಿ ಅಂದರೆ ಒಂದು ತಿಂಗಳಾದರೆ ವರ್ಕಿಂಗ್ ಕ್ಯಾಪಿಟಲ್ ನ ಚಕ್ರದ ಕಾಲಾವಧಿಯು ಹೆಚ್ಚಾಗಿ ಅದು 90 ದಿನಗಳದ್ದಾಗಬಹುದು. ಅಂದರೆ ವರ್ಕಿಂಗ್ ಕ್ಯಾಪಿಟಲ್ ನ ವಿವಿಧ ಘಟಕಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಾದರೂ ಕೂಡಾ ಅದೇ ರೀತಿಯಲ್ಲಿ ಒಟ್ಟು ಚಕ್ರದ ಕಾಲಾವಧಿಯಲ್ಲಿಯೂ ಬದಲಾವಣೆಗಳಾಗುತ್ತದೆ.
ವರ್ಕಿಂಗ್ ಕ್ಯಾಪಿಟಲ್ ಕುರಿತು ಮತ್ತು ಅದರ ಸೂಕ್ತವಾದ ನಿರ್ವಹಣೆಯ ಆವಶ್ಯಕತೆಯ ಕುರಿತು ತಿಳಿದುಕೊಂಡ ನಂತರ ಈ ಬಂಡವಾಳದ ಸೈಕಲ್ ಮತ್ತು ಉದ್ಯಮದ ಟರ್ನ್ ಓವರ್ ಇವೆರಡರ ಪರಸ್ಪರ ಸಂಬಂಧ, ಹಾಗೆಯೇ ಇದರ ನಿರ್ವಹಣೆಯನ್ನು ಹೇಗೆ ಮಾಡಬೇಕಾಗುತ್ತದೆ ಮತ್ತು ಅದು ಸೂಕ್ತವಾದ ರೀತಿಯಲ್ಲಿ ಅಗುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಅದರ ಮೌಲ್ಯಮಾಪನವನ್ನು ಹೇಗೆ ಮಾಡಲಾಗುತ್ತದೆ ಮತ್ತು ಬ್ಯಾಂಕ್ ಗಳಿಂದ ಈ ಬಂಡವಾಳದ ಕುರಿತು ಹೇಗೆ ಸಹಾಯ ಮಾಡಲಾಗುತ್ತದೆ, ಇತ್ಯಾದಿ ಅಂಶಗಳ ಕುರಿತಾದ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

 

dfg_1  H x W: 0 
 ಮುಕುಂದ ಅಭ್ಯಂಕರ್
 ಚಾರ್ಟರ್ಡ್ 
 ಅಕೌಂಟಂಟ್
 9822475611
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.
@@AUTHORINFO_V1@@