ಕಚ್ಚುಗಳ ಯಂತ್ರಣೆ : 2

@@NEWS_SUBHEADLINE_BLOCK@@

Udyam Prakashan Kannad    30-Sep-2020   
Total Views |

ಹಿಂದಿನ ತಿಂಗಳ ಲೇಖನದಲ್ಲಿ ಸಿ.ಎನ್.ಸಿ. ಲೇಥ್ ಬಳಸಿ ಕಚ್ಚುಗಳ (ಸ್ಲಾಟ್) ಯಂತ್ರಣೆಯಲ್ಲಿರುವ ಅನೇಕ ಹಂತಗಳಲ್ಲಿ ಪೂರ್ಣಗೊಳ್ಳುವ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಗ್ರುವಿಂಗ್ ಟೂಲ್ ನ ಆಯ್ಕೆಯ ಕುರಿತು ತಿಳಿದುಕೊಳ್ಳಲಿದ್ದೇವೆ. ಗ್ರುವಿಂಗ್ ಟೂಲ್ ನ ಆಯ್ಕೆ ಮತ್ತು ಟೂಲ್ ಸ್ಟೇಶನ್ ನಂಬರ್ ನಿರ್ಧರಿಸಿದ ನಂತರ ಪ್ರತ್ಯಕ್ಷವಾಗಿ ಕಚ್ಚುಗಳ ಯಂತ್ರಣೆ ಮಾಡುವ ರೀತಿಯನ್ನು ನಿರ್ಧರಿಸಬೇಕಾಗುತ್ತದೆ. ಇದಕ್ಕೋಸ್ಕರ ಕಚ್ಚುಗಳ ಅಗಲಕ್ಕಿಂತ ಕಡಿಮೆ ಅಗಲವಿರುವ ಇನ್ಸರ್ಟ್ ಆಯ್ಕೆ ಮಾಡುವ ಮುತುವರ್ಜಿಯನ್ನು ಪ್ರಾಮುಖ್ಯವಾಗಿ ವಹಿಸಬೇಕಾಗುತ್ತದೆ. ಈ ಮುಂದಿನ ಉದಾಹರಣೆಯಿಂದ ಈ ಅಂಶವು ಗಮನಕ್ಕೆ ಬರಬಹುದು. ಚಿತ್ರ ಕ್ರ 1 ರಲ್ಲಿ 0.1584’’ ಕಚ್ಚುಗಳ ಅಗಲವು 0.1250’’ ಅಗಲದ ಇನ್ಸರ್ಟ್ ಬಳಸಿ ಎರಡು ಗ್ರುವಿಂಗ್ ತುಂಡುಗಳನ್ನು ಬಳಸಬೇಕಾಗುತ್ತದೆ. ಇದಕ್ಕೋಸ್ಕರ ಈ ಮುಂದಿನ ಸೂತ್ರವನ್ನು ಬಳಸಲಾಗುತ್ತದೆ. 

2_1  H x W: 0 x 

1_1  H x W: 0 x 
 
ಯಂತ್ರಣೆಯನ್ನು ಮಾಡುವಾಗ ಪ್ರತಿಯೊಂದು ಬದಿಯಲ್ಲಿ ಮಟೀರಿಯಲ್ ಒಂದೇ ರೀತಿಯಲ್ಲಿ ತೆಗೆದಲ್ಲಿ ಕಚ್ಚುಗಳ ಯಂತ್ರಣೆಯು ಸೂಕ್ತವಾಗಿ ಆಗುತ್ತದೆ. ಹಾಗೆಯೇ ಸರ್ಫೇಸ್ ಪಿನಿಶ್ ಮತ್ತು ಟೂಲ್ ನ ಬಾಳಿಕೆಯೂ ಹೆಚ್ಚಾಗುತ್ತದೆ. ಯಂತ್ರಣೆಯನ್ನು ಮಾಡುತ್ತಿರುವಾಗ 2 ರ ಬದಲಾಗಿ 3 ಗ್ರುವಿಂಗ್ ತುಂಡು ಮಾಡಲಾಗುತ್ತದೆ. ಅದಕ್ಕೋಸ್ಕರ ಸಿ.ಎನ್.ಸಿ. ಪ್ರೊಗ್ರಾಮರ್ ನು ಈ ಮುಂದಿನ ಎರಡು ಅಂಶಗಳನ್ನು ಗಮನಿಸುವುದು ಆವಶ್ಯಕವಾಗಿದೆ.
• ಕಚ್ಚುಗಳ ಸ್ಥಾನದ (ಪೋಸಿಶನ್) ನಿಯಂತ್ರಣೆ.
• ಕಚ್ಚುಗಳ ಅಗಲದಲ್ಲಿಯೂ ನಿಯಂತ್ರಣೆ.
ಚಿತ್ರ ಕ್ರ. 1 ರಲ್ಲಿ ತೋರಿಸಿದ ಕಚ್ಚುಗಳ ಸ್ಥಾನವು 0.625’’ ಇದ್ದು ಈ ಮಾಪನವು ಕಾರ್ಯವಸ್ತುವಿನ ಫೇಸ್ ನಿಂದಲೇ ಇರುತ್ತದೆ. ಕಚ್ಚುಗಳ ಅಗಲ 0.1584’’ ಇರುತ್ತದೆ. ಆದರೆ ಆಯ್ಕೆ ಮಾಡಿರುವ ಇನ್ಸರ್ಟ್ ನ ಅಗಲವು 0.1250’’ ನಷ್ಟು ಇದ್ದು, ಮೂರು ಹಂತಗಳಲ್ಲಿ ಈ ಯಂತ್ರಣೆಯನ್ನು (ಕಟಿಂಗ್) ಮುಗಿಸಬೇಕು.
ಹಂತ 1 : ಇದರಲ್ಲಿ ಕಚ್ಚುಗಳ ಮಧ್ಯಭಾಗದಲ್ಲಿ ರಫ್ ಪ್ಲಂಜ್ ಮಾಡುವುದು ಅತ್ಯಾವಶ್ಯಕವಾಗಿದೆ. ಇದರಿಂದಾಗಿ ಎರಡೂ ಬದಿಗಳಲ್ಲಿ ಸಮಾನವಾದ ಮಟೀರಿಯಲ್ ಇರಬಹುದು. ಇದನ್ನು ಮಾಡುತ್ತಿರುವಾಗ ಕಚ್ಚುಗಳ ಬುಡದಲ್ಲಿ ಕಡಿಮೆ ಮಟೀರಿಯಲ್ ಇದ್ದು ಇದರ ಕಡೆಗೆ ಗಮನ ಹರಿಸುವುದೂ ಅತ್ಯಾವಶ್ಯಕವಾಗಿದೆ.
ಹಂತ 2 : ಕಚ್ಚುಗಳ ಎಡ ಬದಿಗೆ ಗ್ರೂವಿಂಗ್ ಟೂಲ್ ನ ಕೆಲಸಕ್ಕೆ ಸಂಬಂಧಪಟ್ಟ ಪ್ರೊಗ್ರಾಮ್ ತಯಾರಿಸಬೇಕು. ಇದರಲ್ಲಿ ಮೂಲೆಗಳನ್ನು ತೆಗೆಯುವ ಅಂದರೆ ಚ್ಯಾಂಫರ್ ಪ್ರೊಗ್ರಾಮ್ ಕೂಡಾ ಇರಬೇಕು.
ಹಂತ 3 : ಕಚ್ಚುಗಳ ಬಲ ಬದಿಯಲ್ಲಿ ಗ್ರೂವಿಂಗ್ ಟೂಲ್ ನ ಕೆಲಸಕ್ಕೆ ಪ್ರೊಗ್ರಾಮ್ ಮಾಡಬೇಕು. ಇದರಲ್ಲಿ ಮೂಲೆಗಳನ್ನು ತೆಗೆಯುವ ಅಂದರೆ ಚ್ಯಾಂಫರ್ ಪ್ರೊಗ್ರಾಮ್ ಇರಬೇಕು, ಆದರೆ ಕಚ್ಚುಗಳ ಬುಡವನ್ನು ಎಡಬದಿಗೆ ಸರಿಸಬೇಕು.1_1  H x W: 0 x 
 
ಮೂರನೇ ಹಂತದಲ್ಲಿ ಫಿನಿಶಿಂಗ್ ಗೋಸ್ಕರ ಸ್ಟಾಕ್ ಅಲೌನ್ಸ್ ನ ಕುರಿತು ವಿಚಾರ ಮಾಡುವುದೂ ಅತ್ಯಾವಶ್ಯಕವಾಗಿದೆ.
 
ಫಿನಿಶಿಂಗ್ ಅಲೌನ್ಸ್
 
4_1  H x W: 0 x
ಮೊದಲನೆ ಹಂತದಲ್ಲಿ ಕಚ್ಚುಗಳ ಮಧ್ಯಭಾಗದಲ್ಲಿ ಮೊದಲ ಪ್ಲಂಜ್ ಇರುವುದು ಆವಶ್ಯಕವಾಗಿದೆ. ಆದರೆ Z ಅಕ್ಷದ ಪ್ರಾರಂಭದ ಸ್ಥಾನ ತೆಗೆಯಲು, ಫಿನಿಶಿಂಗ್ ಗೋಸ್ಕರ ಪ್ರತಿಯೊಂದು ಬದಿಯಲ್ಲಿಯೂ ಎಷ್ಟು ಮಟೀರಿಯಲ್ ಬೇಕಾಗಿದೆಯೋ ಅಷ್ಟನ್ನು ತೆಗೆಯಬೇಕು. ಅಂದರೆ Z ನ ಸ್ಥಾನವು ಎಡ ಬದಿಯಿಂದ + 0.0167 ಆಗಬಹುದು. ಒಂದು ವೇಳೆ ಈ ಬದಿಯು Z-0.625 ಇದ್ದಲ್ಲಿ ಗ್ರೂವಿಂಗ್ ಟೂಲ್ ನ ಪ್ರಾರಂಭದಲ್ಲಿರುವ ಸ್ಥಾನ Z-0.6083 ಇರಬಹುದು. ಯಾವಾಗ ಟೂಲ್ ಮೊದಲ ಪ್ಲಂಜ್ ಪೂರ್ಣ ಮಾಡಬಹುದೋ, ಆಗ ಕಚ್ಚುಗಳ ಎರಡೂ ಬದಿಗಳಲ್ಲಿ ಫಿನಿಶಿಂಗ್ ಗೋಸ್ಕರ ಸಮಾನವಾದ ಮಟೀರಿಯಲ್ ಉಳಿದಿರಬಹುದು.
 
ಮಹತ್ವದ ಸೂಚನೆ :

5_1  H x W: 0 x 
ಎಲ್ಲೆಡೆಯಲ್ಲಿಯೂ ಬಂದಿರುವ ಅಂಕೆ-ಸಂಖ್ಯೆಗಳ ಹತ್ತಿರ ಪೂರ್ಣ ಸಂಖ್ಯೆ (ಫಿಗರ್ ರೌಂಡಿಂಗ್ ಆಫ್) ಬಳಸದೇ ಲೆಕ್ಕಾಚಾರದಿಂದ ಬಂದಿರುವ ಅಂಕೆಗಳನ್ನೇ ಬಳಸಬೇಕು.
• X ಅಕ್ಷದ ಮೊದಲನೇ ಸ್ಥಾನ : ಪ್ಲಂಜ್ ನ ಪ್ರಾರಂಭವಾಗುವ ಸ್ಥಾನ.
• X ಅಕ್ಷದ ಎರಡವೇ ಸ್ಥಾನ : ಪ್ಲಂಜಿಂಗ್ ಕಟ್ ವ್ಯಾಸದ ಕೊನೆ.
ಪ್ರಾರಂಭಿಸಲು ಒಳ್ಳೆಯ ಪೊಸಿಶನ್ ಅಂದರೆ ಪ್ರತಿಯೊಂದು ಬದಿಯಲ್ಲಿ 0.050’’ ನಷ್ಟು ದೂರವನ್ನು ಫಿನಿಶ್ ವ್ಯಾಸದಲ್ಲಿ ಅಳವಡಿಸುವುದು. (4.0 + 0.05 x 2 = 4.1)
0.05’’ ಗಿಂತ ಹೆಚ್ಚು ಕ್ಲಿಯರನ್ಸ್ ಇಟ್ಟು ತುಂಡನ್ನು ಬಿಡಬಾರದು. 0.05’’ (1.27 ಮಿ.ಮೀ.) ಕಚ್ಚಿನ ಬುಡದ ವ್ಯಾಸ ಚಿತ್ರ ಕ್ರ. 1 ರಲ್ಲಿ 3.82’’ ನೀಡಲಾಗಿದೆ. ಇದರಿಂದಾಗಿ x3.82 ಅಪೇಕ್ಷಿಸಿರುವ ವ್ಯಾಸವೆಂದು ಪ್ರೊಗ್ರಾಮ್ ಮಾಡಬಹುದು. ಅದು ಪ್ರತಿಯೊಂದು ಬದಿಯಲ್ಲಿ 0.003’’ ಅಂದರೆ ವ್ಯಾಸದಲ್ಲಿ 0.006’’ ನಷ್ಟು ಕಡಿಮೆ ಉಳಿಯಬುದು.
N43 G00 X4.1 Z-0.6033 T0303 
M08 
N44 G01 X 3.826 F 0.004
N45 G00 X 4.1
 

6_1  H x W: 0 x 

ಅನೇಕ ಕಚ್ಚುಗಳು (ಮಲ್ಟಿಪಲ್ ಗ್ರುವ್)
ಒಂದೇ ಭಾಗದಲ್ಲಿ ಸಮಾನ ಆಕಾರದ ಅನೇಕ ಕಚ್ಚುಗಳನ್ನು ಮಾಡುವುದು ಅಂದರೆ ಮಲ್ಟಿಪಲ್ ಗ್ರುವಿಂಗ್. ಈ ಕೆಲಸದ ಪ್ರೊಗ್ರಾಮ್, ಸಬ್ ಪ್ರೊಗ್ರಾಮ್ ನಲ್ಲಿ ಮಾಡಲಾಗುತ್ತದೆ. ಇದರಿಂದಾಗಿ ಪ್ರೊಗ್ರಾಮಿಂಗ್ ನಲ್ಲಿ ತುಂಬಾ ಸಮಯದ ಉಳಿತಾಯವಾಗುತ್ತದೆ. ಇದರಲ್ಲಿ ಕಚ್ಚುಗಳ ಸಂಖ್ಯೆಯು ಜಾಸ್ತಿ ಇರುವುದರಿಂದ ಯಂತ್ರಣೆಯನ್ನು ಮಾಡುವಾಗ ಹೆಚ್ಚು ಪ್ರಮಾಣದಲ್ಲಿ ಮಟೀರಿಯಲ್ ಹೊರ ಬರುತ್ತದೆ. ಈ ಮಟೀರಿಯಲ್ ಆಗಾಗ ತೆಗೆಯುವುದು ಅತ್ಯಾವಶ್ಯಕವಾಗಿದೆ. ಇಲ್ಲದಿದ್ದಲ್ಲಿ ಮಟೀರಿಯಲ್ ಕಚ್ಚುಗಳಲ್ಲಿ ಸಿಕ್ಕಿಕೊಳ್ಳುತ್ತದೆ. ಇದರಿಂದಾಗಿ ಕಚ್ಚುಗಳ ಸರ್ಫೇಸ್ ಫಿನಿಶ್ ಇಲ್ಲದಂತಾಗಿ ಟೂಲ್ ಕೂಡಾ ಬೇಗನೆ ಹಾಳಾಗುತ್ತದೆ. ಗಾಳಿಯ ಒತ್ತಡದಿಂದ ಚಿಪ್ ತೆಗೆಯುವುದು ಸಾಧ್ಯ. ಆದರೆ ಅದಕ್ಕೋಸ್ಕರ ಮೊದಲು ಚಿಪ್ ಹೊರಗೆ ತೆಗೆಯುವುದು ಆವಶ್ಯಕವಾಗಿದೆ. ನಂತರ ಎಲ್ಲ ಚಿಪ್ ಗಳನ್ನು ತೆಗೆಯಬಹುದು. ಇದಕ್ಕೋಸ್ಕರ M10 ಆಪ್ಶನಲ್ ಸ್ಟಾಪ್ ನ ಉಪಯೋಗವು ಸೂಕ್ತವಾಗಿದೆ.

ಫೇಸ್ ನಲ್ಲಿರುವ ಕಚ್ಚುಗಳು
ಅಡ್ಡಕ್ಕೆ ಕಚ್ಚುಗಳನ್ನು ಮಾಡುತ್ತಿರುವಾಗ ಕಟಿಂಗ್ ಇನ್ಸರ್ಟ್ ನ ರೇಡಿಯಲ್ ಕ್ಲಿಯರನ್ಸ್ ನ ಕುರಿತು ವಿಚಾರ ಮಾಡಬೇಕಾಗುತ್ತದೆ. ಫೇಸ್ ನಲ್ಲಿ ಕಚ್ಚುಗಳನ್ನು ಮಾಡುವುದು ಇದೊಂದು ಅಡ್ಡಕ್ಕೆ (ಹಾರಿಝಾಂಟಲ್) ಯಂತ್ರಣೆಯನ್ನು ಮಾಡುವ ಪ್ರಕ್ರಿಯೆಯಾಗಿದೆ. ಇದಕ್ಕೋಸ್ಕರ Z ಅಕ್ಷವನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಇದಕ್ಕೆ ವಿರುದ್ಧವಾಗಿ ವರ್ಟಿಕಲ್ ಗ್ರೂವಿಂಗ್ ನಲ್ಲಿ X ಅಕ್ಷ ಕಾರ್ಯಗತವಾಗುತ್ತದೆ. ಈ ಎರಡೂ ಯಂತ್ರಣೆಯ ಪ್ರಕ್ರಿಯೆಗಳಲ್ಲಿ ಟೂಲ್ ನ ಓರಿಯಂಟೇಶನ್ ಇದೊಂದು ಮಹತ್ವದ ಅಂಶವಾಗಿದೆ. ಯಂತ್ರಣೆಯನ್ನು ಮಾಡುವಾಗ ಇದಕ್ಕೆ ಕಟಿಂಗ್ ಇನ್ಸರ್ಟ್ ನ ರೇಡಿಯಲ್ ಕ್ಲಿಯರನ್ಸ್ ಎಂದು ಹೇಳುತ್ತಾರೆ. ವರ್ಟಿಕಲ್ ಗ್ರೂವಿಂಗ್ ನಲ್ಲಿ ಇದರಿಂದಾಗಿ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಗ್ರೂವಿಂಗ್ ನಲ್ಲಿ ಓರಿಯಂಟೇಶನ್ ಇದೊಂದು ಮಹತ್ವದ ಅಂಶವಾಗಿದೆ. (ಚಿತ್ರ ಕ್ರ. 2)

ತುಂಡುಗಳು ವಿಧಗಳು : ಮೂರು
1. ರಫ್ ಪ್ಲಂಜ್ : ಕಚ್ಚುಗಳ ಮಧ್ಯಭಾಗದಲ್ಲಿ

7_1  H x W: 0 x 
2. ಎರಡು ಫಿನಿಶಿಂಗ್ ಕಟ್
3. ಕಾರ್ನರ್ ಬ್ರೇಕ್ ನೊಂದಿಗೆ
ಇದರ ನಂತರ ರೇಡಿಯಲ್ ಕ್ಲಿಯರನ್ಸ್ ಗಮನಿಸಬೇಕು.

ರೇಡಿಯಲ್ ಕ್ಲಿಯರನ್ಸ್
ಬಹುಶಃ ಎಲ್ಲ ಗ್ರುವಿಂಗ್ ಇನ್ಸರ್ಟ್ ಗಳು ತುಂಬಾ ಎತ್ತರದಿಂದ ಕೂಡಿರುತ್ತವೆ. ಕಾರಣ ಎತ್ತರದಿಂದ ಅವುಗಳ ತಾಕತ್ತು ಹೆಚ್ಚುತ್ತದೆ. ಫೇಸ್ ಗ್ರೂವಿಂಗ್ ಗೋಸ್ಕರ ಗ್ರುವಿಂಗ್ ಇನ್ಸರ್ಟ್ ಕಾರ್ಯವಸ್ತುವಿನ ಫೇಸ್ ನೊಂದಿಗೆ 90˚ ಕೋನದಲ್ಲಿ ಅಳವಡಿಸಲಾಗುತ್ತದೆ. (ಅಂದರೆ ಸ್ಪಿಂಡಲ್ ನ ಮಧ್ಯ ರೇಖೆ).
 
8_1  H x W: 0 x
 
ಆದರ್ಶ ರೀತಿಯ ಗ್ರುವಿಂಗ್ ಇನ್ಸರ್ಟ್ ಗೆ ಸೊನ್ನೆ ರೇಡಿಯಲ್ ಕ್ಲಿಯರನ್ಸ್ ಇರುತ್ತದೆ ಮತ್ತು ಕೆಳಭಾಗದಲ್ಲಿ ಅದು ಕಾರ್ಯವಸ್ತುವಿನೊಂದಿಗೆ ಇಂಟರ್ ಫಿಯರ್ ಆಗುತ್ತದೆ. (ಚಿತ್ರ ಕ್ರ. 3).
ಚಿತ್ರ ಕ್ರ. 4 ರಲ್ಲಿ ಸ್ಟ್ಯಾಂಡರ್ಡ್ ಇನ್ಸರ್ಟ್ ನಲ್ಲಿ ಫೇಸ್ ಗ್ರುವಿಂಗ್ ಗೋಸ್ಕರ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.
ಫೇಸ್ ಗ್ರೂವಿಂಗ್ ಪ್ರೊಗ್ರಾಮ್ ನ ಉದಾಹರಣೆ
ಈ ಕೆಳಗೆ ನೀಡಿರುವ ಪ್ರೊಗ್ರಾಮ್ ನಲ್ಲಿ ಸುಧಾರಿತ ಇನ್ಸರ್ಟ್ ಬಳಸಲಾಗಿದ್ದು 0.012’’ ಚ್ಯಾಂಫರ್ ಗೋಸ್ಕರ ಒಂದೇ ಆಫ್ ಸೆಟ್ ಬಳಸಲಾಗಿದೆ. ಆದರೆ ಇನ್ಸರ್ಟ್ ನ ಕೆಳಭಾಗ ಅಂದರೆ ಟೂಲ್ ಸೆಂಟರ್ ಪಾಯಿಂಟ್ ಅಗಿದೆ.

03603 ಫೇಸ್ ಗ್ರೂವ್
G20 (ಇಂಚಿನಲ್ಲಿರುವ ಮಾಪನಗಳ ಪ್ರೊಗ್ರಾಮಿಂಗ್ ಮಾಡಲು)

....
N21 T0400M42
N22 G96 S450 M03
N23 G00 X 2.1 Z0.05 T0404 M08
N24 G01 Z-0.123 F 0.003
N25 Z0.05 F 0.04
N26 X 1.951
N27 X 2.075 Z- 0.012 F 0.001
N28 I- 0.123 F 0.003
N29 X 2.1 Z0.05 F 0.04
N30 U 0.149
N31 U- 0.124 Z- 0.012 F 0.001
N32 Z- 0.125 F 0.003
N33 X 2.0755
N34 X 2.1 Z 0.05 F 0.04 M09
N35 G00 X 8.0 Z3.0 T0400
N36 M30
%

ಕಾರ್ನರ್ ಗ್ರೂವ್ ಅಥವಾ ನೆಕ್ ಗ್ರೂವ್
ಕಾರ್ನರ್ ಗ್ರೂವ್ ಪ್ರೊಗ್ರಾಮ್ ಮಾಡಲು ಗ್ರೂವಿಂಗ್ ಇನ್ಸರ್ಟ್ ತ್ರಿಜ್ಯ ತಿಳಿದಿರುವುದು ಆವಶ್ಯಕವಾಗಿದೆ.
 
 
9_1  H x W: 0 x
ಉದಾಹರಣೆ, 0.031(1/32) ಚಿತ್ರ ಕ್ರ. 5.
• ತುಂಡುಗಳ ಆಳ : ಡ್ರಾಯಿಂಗ್ ನಲ್ಲಿರುವ ಮಾಹಿತಿಯಿಂದಲೇ ನಿರ್ಧರಿಸಲಾಗುತ್ತದೆ.
• ಸಾಮಾನ್ಯವಾಗಿ ಮೂಲೆಗಳಲ್ಲಿರುವ ಕಚ್ಚುಗಳಿಗೆ ಕನಿಷ್ಠ ಪ್ರಮಾಣದಲ್ಲಿ ಅಂಡರ್ ಕಟ್ ಎಂಬುದಾಗಿ ಉಲ್ಲೇಖಿಸಲಾಗುತ್ತದೆ. ಚಿತ್ರ ಕ್ರ. 5 ರಲ್ಲಿ ಮೂಲೆಗಳಲ್ಲಿರುವ ಕಚ್ಚುಗಳನ್ನು ತೋರಿಸಲಾಗಿದೆ.

ಅಂಡರ್ ಕಟ್ ಪ್ರೊಗ್ರಾಮ್ ನ ಉದಾಹರಣೆ
ಪ್ರೊಗ್ರಾಮ್
03604 ಕಾರ್ನರ್ ಗ್ರೂವ್
G20
....
N217 G505 1000 T0500 M42
N218 G96 S375 M03
N219 X1.08Z-0.95 T0505 M08
N220 G01X0.918 Z-1.031F 0.004
N221 G04X 0.1
N222 X 1.06Z- 0.95 
F0.04
N223 G00X6.0 Z3.0 T0500M09
N224 M30
%

ಮೇಲಿನ ಪ್ರೊಗ್ರಾಮ್ ನಲ್ಲಿರುವ ಬ್ಲಾಕ್ ಕ್ರಮಾಂಕ 219 ಟೂಲ್ ನ ಸೆಂಟರ್ ಸೆಟಪ್ ಪಾಯಿಂಟ್ ನೆಕ್ ಗ್ರೂವ್ ನ ಸೆಂಟರ್ ನಲ್ಲಿ ತರುತ್ತದೆ. (X ಮತ್ತು Z ಗೋಸ್ಕರ ಕ್ಲಿಯರನ್ಸ್ 0.050)
N220 ಮತ್ತು N222 ನಲ್ಲಿ ಎರಡು ಕಟಿಂಗ್ ಮೋಶನ್ ಆಗುತ್ತವೆ.
1. ಗ್ರೂವ್ ನಲ್ಲಿ N220
2. ಗ್ರೂವ್ ನ ಹೊರಗೆ N222
ಎರಡೂ ಚಟುವಟಿಕೆಗಳಲ್ಲಿ ಸರಿಯುವ ದೂರವು ಒಂದೇ ರೀತಿಯಲ್ಲಿರುತ್ತದೆ. 0.1 ಸೆಕಂಡುಗಳ ಡ್ವೆಲ್ N221 ನಲ್ಲಿ ಅಳವಡಿಸಲಾಗುತ್ತದೆ. N220 ಬ್ಲಾಕ್ ಇನ್ ಕ್ರಿಮೆಂಟರ್ ಮೋಡ್ ನಲ್ಲಿ ಈ ಕೆಳಗಿನಂತೆ ಪ್ರೊಗ್ರಾಮ್ ಮಾಡಬಹುದಾಗಿದೆ.
N220 G01 U-0.162 W-0.081 
F0.004
N221 G04 X 0.1
N222 U0.162 W0.081F0.04
ಈ ರೀತಿಯಲ್ಲಿ ನಾವು ಲೇಥ್ ನಲ್ಲಿ ಗ್ರೂವ್ ಕಟಿಂಗ್ ಹೇಗೆ ಮಾಡುವುದು ಎಂಬುದಾಗಿ ತಿಳಿದುಕೊಂಡೆವು. ಗ್ರೂವ್ ಕಟಿಂಗ್ ನ ಸಮಯವನ್ನು ಕಡಿಮೆ ಮಾಡಲು ಹೆಚ್ಚಾಗಿ ಎಲ್ಲ ಕಂಟ್ರೋಲ್ ನಲ್ಲಿ ಹಲವಾರು ವಿಶೇಷವಾದ G ಫಂಕ್ಷನ್ ಗಳಿರುತ್ತವೆ. ಇದನ್ನು ಕಚ್ಚುಗಳ ಯಂತ್ರಣೆಯನ್ನು ಸಹಜವಾಗಿ ಮಾಡಲು, ಉಚ್ಚಮಟ್ಟದಲ್ಲಿ ನಿರ್ವಹಿಸಲು, ಕನಿಷ್ಠ ಸಮಯದಲ್ಲಿ ನಿರ್ವಹಿಸಲು ಬಳಸಲಾಗುತ್ತದೆ. ಫಾನುಕ್ ಕಂಟ್ರೋಲ್ ನಲ್ಲಿ G74 ಮತ್ತು G75 ಈ ಎರಡು ಫಂಕ್ಷನ್ ಗಳನ್ನು ಈ ಕೆಲಸಕ್ಕೋಸ್ಕರ ಬಳಸಲಾಗುತ್ತದೆ. ಅದನ್ನು ಮಲ್ಟಿಪಲ್ ರಿಪಿಟ್ಯಾಬಿಲಿಟಿ ಸೈಕಲ್ ಎಂದು ಹೇಳುತ್ತಾರೆ. ನಾವು ಈ ಹಿಂದಿನ ಹಲವಾರು ಲೇಖನಗಳಲ್ಲಿ ಈ ಕುರಿತು ತಿಳಿದುಕೊಂಡಿದ್ದೇವೆ.

 
 
 
10_1  H x W: 0
 ಸತೀಶ ಜೋಶಿ
 ಲೇಖಕರು ಮತ್ತು
 ಸಲಹೆಗಾರರು
 8625975219
 ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
@@AUTHORINFO_V1@@