ಕಚ್ಚುಗಳ ಯಂತ್ರಣೆ

@@NEWS_SUBHEADLINE_BLOCK@@

Udyam Prakashan Kannad    28-Sep-2020   
Total Views |


ಸಿ.ಎನ್.ಸಿ. ಲೇಥ್ ಬಳಸಿ ಕಚ್ಚುಗಳ (ಸ್ಲಾಟ್ ಗಳ) ಯಂತ್ರಣೆಯನ್ನು ಮಾಡುವುದು, ಅನೇಕ ಹಂತಗಳಲ್ಲಿ ಪೂರ್ಣಗೊಳ್ಳುವ ಯಂತ್ರಣೆಯ ಪ್ರಕ್ರಿಯೆಯಾಗಿದೆ. ಕ್ಲಿಯರನ್ಸ್ ರೆಸೆಸ್ ಕಚ್ಚುಗಳು, ಆಯಿಲ್ ಕಚ್ಚುಗಳೆಂಬ ಎರಡು ವಿಧಗಳು ಕಚ್ಚುಗಳಲ್ಲಿವೆ. ಎರಡು ಭಾಗಗಳು ಒಂದರಲ್ಲೊಂದು ದೃಢವಾಗಿ ಅಳವಡಿಸಲ್ಪಡುವುದು, ಆಯಿಲ್ ಗೆ (ಲುಬ್ರಿಕಂಟ್) ಕಚ್ಚುಗಳು, ಪುಲೀ ಅಥವಾ ವಿ ಬೆಲ್ಟ್ ಕಚ್ಚುಗಳು, ಓ-ರಿಂಗ್ ಗೆ ಕಚ್ಚುಗಳು ಈ ರೀತಿಯಲ್ಲಿ ಇನ್ನಿತರ ಅನೇಕ ಅಪ್ಲಿಕೇಶನ್ ಗಳಿಗೆ ಕಚ್ಚುಗಳನ್ನು ಬಳಸಲಾಗುತ್ತದೆ.
ದಂಡಗೋಲಾಕಾರದ ಭಾಗಗಳಲ್ಲಿ ಒಂದು ನಿರ್ದಿಷ್ಟ ಆಳದ ಕಚ್ಚುಗಳನ್ನು ಮಾಡುವುದನ್ನು ಗ್ರೂವಿಂಗ್ ಎಂದು ಹೇಳಲಾಗುತ್ತದೆ. ಇಂತಹ ಕಚ್ಚುಗಳನ್ನು ಮಾಡಲು ಒಂದು ವಿಶೇಷವಾದ ಟೂಲ್ ಅಂದರೆ ಟೂಲ್ ಹೋಲ್ಡರ್ ನಲ್ಲಿ ಅಳವಡಿಸಿರುವ ಕಾರ್ಬೈಡ್ ಇನ್ಸರ್ಟ್ ನ ಆವಶ್ಯಕತೆ ಇರುತ್ತದೆ. ಇದನ್ನು ಗ್ರೂವಿಂಗ್ ಟೂಲ್ ಎಂದು ಕರೆಯುತ್ತಾರೆ. ಈ ಟೂಲ್ ಗಳ ಡಿಸೈನ್ ನಲ್ಲಿ ಅನೇಕ ಚಿಪ್ ಗಳನ್ನು ಅಳವಡಿಸಲಾಗಿರುತ್ತದೆ.

ಕಚ್ಚುಗಳನ್ನು ಮಾಡುವುದು (ಗ್ರೂವಿಂಗ್)
 

2_1  H x W: 0 x 
ಕಚ್ಚುಗಳನ್ನು ಮಾಡಲು ಎರಡು ವಿಧದ ಕಟಿಂಗ್ ಟೂಲ್ ಗಳನ್ನು ಬಳಸಲಾಗುತ್ತದೆ.
1. ಹೊರ ಭಾಗದಲ್ಲಿರುವ ಕಚ್ಚುಗಳಿಗಿರುವ ಟೂಲ್.
2. ಒಳ ಭಾಗದಲ್ಲಿರುವ ಕಚ್ಚುಗಳಿಗಿರುವ ಟೂಲ್
ಈ ಎರಡೂ ವಿಧದಲ್ಲಿ ಅನೇಕ ರೀತಿಯ ಮತ್ತು ಆಕಾರದ ಇನ್ಸರ್ಟ್ ಗಳು ಇರುತ್ತದೆ. ಕಟಿಂಗ್ ನ ದಿಕ್ಕು ಟರ್ನಿಂಗ್ ಮತ್ತು ಕಚ್ಚುಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ. ಕಚ್ಚುಗಳನ್ನು ಮಾಡಲು ಬೇಕಾಗಿರುವ ಟೂಲ್ ಒಂದೇ ದಿಕ್ಕಿನಲ್ಲಿ ಕೆಲಸ ನಿರ್ವಹಿಸುತ್ತದೆ. ಆದರೆ ಟರ್ನಿಂಗ್ ಟೂಲ್ ಅನೇಕ ದಿಕ್ಕುಗಳಲ್ಲಿ ಕೆಲಸ ನಿರ್ವಹಿಸುತ್ತದೆ.

ಕಚ್ಚುಗಳಿಗೆ ಮಾನದಂಡ (ಕ್ರೈಟೇರಿಯಾ)
ಕಚ್ಚುಗಳಿಗೆ ಈ ಕೆಳಗಿನ ಅಂಶಗಳು ಮಹತ್ವದ್ದಾಗಿವೆ.
1. ಕಚ್ಚುಗಳ ಆಕಾರ.
2. ಕಾರ್ಯವಸ್ತುವಿನಲ್ಲಿರುವ ಕಚ್ಚುಗಳ ಸ್ಥಾನ.
3. ಕಚ್ಚುಗಳ ಮಾಪನ ಮತ್ತು ಟಾಲರನ್ಸ್.

1. ಕಚ್ಚುಗಳ ವಿಧಗಳು : ಕಚ್ಚುಗಳ ಕಾರಣ ಮತ್ತು ಪಾರ್ಟ್ ಡ್ರಾಯಿಂಗ್ ನಿಂದ ಕಚ್ಚುಗಳ ಆಕಾರವನ್ನು ನಿರ್ಧರಿಸಲಾಗುತ್ತದೆ. ಕಚ್ಚುಗಳ ಆಕಾರದಿಂದಲೇ ಇನ್ಸರ್ಟ್ ನಿರ್ಧರಿಸಲಾಗುತ್ತದೆ. ಚಿತ್ರ ಕ್ರ. 1 ರಲ್ಲಿ ಇನ್ಸರ್ಟ್ ನ ಹಲವಾರು ನಿಗದಿತ ಆಕಾರಗಳನ್ನು ತೋರಿಸಲಾಗಿದೆ. 
 
4_1  H x W: 0 x
 
 
3_1  H x W: 0 x
 
2. ಇನ್ಸರ್ಟ್ ನ ಮಾಪನಗಳು : ಎಲ್ಲ ರೀತಿಯ ಯಂತ್ರಣೆಯಲ್ಲಿ ಉಪಲಬ್ಧವಿರುವ ಗ್ರೂವಿಂಗ್ ಇನ್ಸರ್ಟ್ ನ ಅಗಲಕ್ಕಿಂತ ಕಚ್ಚುಗಳ ಅಗಲವು ಹೆಚ್ಚು ಇರುತ್ತದೆ. (ಚಿತ್ರ ಕ್ರ. 2) ಸಾಮಾನ್ಯವಾಗಿ ಟೂಲಿಂಗ್ ಕೆಟಲಾಗ್ ನಲ್ಲಿ ಈ ಮುಂದಿನಂತೆ ಇನ್ಸರ್ಟ್ ಗಳು ಲಭ್ಯವಿವೆ. 1 ಮಿ.ಮೀ., 2 ಮಿ.ಮೀ. 3 ಮಿ.ಮೀ. ಅಥವಾ 1/32, 1/64/ 1/16 1/8 ಇಂಚು. ಉದಾಹರಣೆ, 0.276 ಇಂಚುಗಳ ಕಚ್ಚು 0.250 ಇಂಚು ಇನ್ಸರ್ಟ್ ನಿಂದ ಮಾಡಬಹುದಾಗಿದೆ. ಇದರಿಂದಾಗಿ ರಫಿಂಗ್ ಮತ್ತು ಪಿನಿಶಿಂಗ್ ಎಂಬ ಎರಡು ಕಟ್ ಗಳಾಗಬಹುದು.
3. ಕಚ್ಚುಗಳ ಸ್ಥಾನ : ಕಾರ್ಯವಸ್ತುವಿನಲ್ಲಿರುವ ಕಚ್ಚುಗಳ ಸ್ಥಾನವು ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಮೂರರಲ್ಲಿ ಒಂದೇ ಸಮೂಹದಲ್ಲಿ ಇರುತ್ತದೆ.
• ದಂಡ ಗೋಲಾಕಾರದಲ್ಲಿರುವ ಕಚ್ಚುಗಳು : ವ್ಯಾಸದ ಕಟಿಂಗ್
• ಕೋನಗಳಲ್ಲಿರುವ ಕಚ್ಚುಗಳು : ಟೇಪರ್ ಕಟಿಂಗ್
• ಫೇಸ್ ನಲ್ಲಿರುವ ಕಚ್ಚುಗಳು : ಶೋಲ್ಡರ್ ಕಟಿಂಗ್ ನಂತಹ ಮೂರೂ ಗ್ರೂವ್ ನಲ್ಲಿ ಹೊರಗಿನಿಂದ (ಎಕ್ಸ್ಟರ್ನಲ್) ಅಥವಾ ಒಳಗಿನಿಂದ (ಇಂಟರ್ನಲ್) ಕಚ್ಚುಗಳಿರುತ್ತವೆ.
 
6_1  H x W: 0 x
 


5_1  H x W: 0 x 
 
4. ಕಚ್ಚುಗಳ ಮಾಪನಗಳು : ಕಚ್ಚುಗಳ ಮಾಪನದಲ್ಲಿ ಅಗಲ, ಆಳ, ಮೂಲೆಗಳ ವರ್ಣನೆ ಈ ಅಂಶಗಳು ಮಹತ್ವದ್ದಾಗಿವೆ. ಕಚ್ಚುಗಳ ಅಗಲಕ್ಕಿಂತ ಹೆಚ್ಚು ಅಗಲವಿರುವ ಇನ್ಸರ್ಟ್ ನಿಂದ ಕಚ್ಚು ಮಾಡುವುದು ಅಸಾಧ್ಯ. ಕಚ್ಚುಗಳ ಮಾಪನದಿಂದ ಯಂತ್ರಣೆಯ ರೀತಿಯನ್ನು ನಿರ್ಧರಿಸಲಾಗುತ್ತದೆ. ಚಿತ್ರ ಕ್ರ. 4 ರಲ್ಲಿ ಎರಡು ವಿಧದ ಕಚ್ಚುಗಳ ಮಾಪನವನ್ನು ಹೇಗೆ ಮಾಡಲಾಗುತ್ತದೆ, ಎಂಬುದನ್ನು ತೋರಿಸಲಾಗಿದೆ.
ಕಚ್ಚುಗಳ ಆಳ : ಆಳವನ್ನು ಎರಡು ವಿಧದಲ್ಲಿ ತೋರಿಸಲಾಗುತ್ತದೆ. ಇದನ್ನು ಚಿತ್ರ ಕ್ರ. 5 ರಲ್ಲಿ ತೋರಿಸಲಾಗಿದೆ.
ಸಾಮಾನ್ಯವಾದ ಕಚ್ಚುಗಳ ಪ್ರೊಗ್ರಾಮಿಂಗ್ : ಎಲ್ಲಕ್ಕಿಂತಲೂ ಸುಲಭವೆಂದರೆ ಕಟಿಂಗ್ ಟೂಲ್ ಗಳ ಅಗಲದ ಆಕಾರದ ಕಚ್ಚು. ಚಿತ್ರ ಕ್ರ. 6 ರಲ್ಲಿ ಈ ರೀತಿಯ ಕಚ್ಚುಗಳನ್ನು ತೋರಿಸಲಾಗಿದೆ.
 
5_1  H x W: 0 x

7_1  H x W: 0 x
  
ಈ ಕೆಳಗಿನ ಪ್ರೊಗ್ರಾಮ್ ನಲ್ಲಿ 0.125 ಇಂಚು ಸ್ಕ್ವೇರ್ ಗ್ರೂವಿಂಗ್ ಇನ್ಸರ್ಟ್ ಬಳಸಲಾಗಿದೆ. ಇದರಿಂದಾಗಿ ಅದೇ ಅಗಲದ ಕಚ್ಚುಗಳು ತಯಾರಾಗುತ್ತವೆ.
 

9_1  H x W: 0 x 
ಟೂಲ್ ನಂಬರ್ T08 ಬಳಸಲಾಗಿದೆ.
03401 ಸಾಮಾನ್ಯವಾದ ಕಚ್ಚು
G20 (ಆಂಗ್ಲ ಯುನಿಟ್ ಇನ್ ಪುಟ್) 
...
...
N33 T0800 M42 ................ಟೂಲ್ ನಂಬರ್ 8 ಕಾರ್ಯಗತ (ಎಕ್ಟಿವ್)
N34 G97 S650 M03 .................................... 650 ಆರ್.ಪಿ.ಎಮ್.
N35 G00 X3.1 Z-0.625 T0808 M08........................... ಪ್ರಾರಂಭ
N36 G01 X2.637 F0.003............................... ಆಳದ ತನಕ ಫೀಡ್
N37 G04 X0.4................................................ ಬುಡದ ತನಕ ಡ್ವೆಲ್
N38 X3.1 F0.05 ................................................ ಕಚ್ಚಿನಿಂದ ಹಿಂದೆ
N39 G00 X6.0 Z3.0 T0800 M09................. ಕ್ಲಿಯರ್ ಪೊಸಿಶನ್
N40 M30................................................................... ಪ್ರೊಗ್ರಾಮ್
%

ಕಾರ್ಯವಸ್ತು ವ್ಯಾಸದ ಕ್ಲಿಯರನ್ಸ್ : (3.1-2.952)/2=0.074
ಪ್ರತ್ಯಕ್ಷ ಕಚ್ಚುವಿನ ಯಂತ್ರಣೆ N36 ಗೆ ಆಗುತ್ತದೆ. ಫೀಡ್ ರೇಟ್ 0.003 ಇಂಚು/ರಿವೊ.
ಮುಂದಿನ ಬ್ಲಾಕ್ N37 ಡ್ವೆಲ್ (0.4 ಸೆಕಂಡುಗಳು) ತೋರಿಸುತ್ತದೆ.

ಕಚ್ಚುಗಳನ್ನು ಮಾಡುವಾಗ ಗಮನದಲ್ಲಿಡಬೇಕಾದ ಅಂಶಗಳು
⦁ ಕಚ್ಚುಗಳ ಯಂತ್ರಣೆಯನ್ನು ಕಡಿಮೆ ಫೀಡ್ ರೇಟ್ ದಲ್ಲಿ ಮಾಡುತ್ತಾರೆ.
⦁ ಟೂಲ್ ನ ಅಗಲ 0.125 ಪ್ರೊಗ್ರಾಮ್ ನಲ್ಲಿ ಎಲ್ಲಿಯೂ ಬರುವುದಿಲ್ಲ. ಇದರ ಅರ್ಥವೇ ಕಚ್ಚುಗಳ ಅಗಲ ಮತ್ತು ಆಕಾರ ಇನ್ಸರ್ಟ್ ಟೂಲ್ ನಂತೆಯೇ ಆಗುತ್ತದೆ.
⦁ ಟೂಲ್ ಬದಲಾಯಿಸಿದರೂ ಕೂಡಾ ಪ್ರೊಗ್ರಾಮ್ ಅಲ್ಲಿಯೇ ನಿಲ್ಲುತ್ತದೆ.

ಸೂಕ್ಷ್ಮವಾದ ಮತ್ತು ನಿಖರವಾದ ಗ್ರೂವಿಂಗ್ ನ ತಂತ್ರ

9_1  H x W: 0 x 
 
ಸಾಮಾನ್ಯವಾದ ಕಚ್ಚುಗಳ (ಒಳ/ ಹೊರ) ಬದಿಗಳು ಒರಟಾಗಿರುತ್ತವೆ. ಕಚ್ಚುಗಳ ಹೊರ ಮೂಲೆಗಳು ಚೂಪಾಗಿರುತ್ತವೆ. ಈ ಕಚ್ಚುಗಳ ಅಗಲ ಇನ್ಸರ್ಟ್ ಗೆ ಅವಲಂಬಿಸಿರುತ್ತದೆ. ಇದರಿಂದಾಗಿ ಯಂತ್ರಣೆಯನ್ನು ಮಾಡುವ ಕಾರ್ಯವಸ್ತುವಿನಲ್ಲಿ ಈ ರೀತಿಯ ಕಚ್ಚುಗಳನ್ನು ಮಾಡಲಾಗುವುದಿಲ್ಲ. ಚಿತ್ರ ಕ್ರ. 7 ರಲ್ಲಿ ಇರುವ ಕಚ್ಚು ಪ್ರಿಸಿಶನ್ ಕಚ್ಚಾಗಿದೆ.
ಪ್ರಿಸಿಶನ್ ಗ್ರುವ್ ಪ್ರೊಗ್ರಾಮ್ : 03602
ಮೂಲೆಗಳನ್ನು ತುಂಡರಿಸುವುದು : 0.012x45˚ ಡಿಗ್ರಿ
ಕಟಿಂಗ್ ನ ರೀತಿ : ಒಂದು ಪ್ಲಂಜ್ ರಫ್ ಕಟ್ ಮತ್ತು ಎರಡು ಫಿನಿಶ್ ಕಟ್ (ಪ್ರತಿಯೊಂದು ವಾಲ್ ಗೆ ಒಂದು)
ಬುಡದಲ್ಲಿರುವ ವ್ಯಾಸದಲ್ಲಿ ಹೆಚ್ಚಳ : 0.006 ಸ್ಟಾಕ್.
ಚೂಪಾಗಿರುವ ಮೂಲೆಗಳು/ ತುದಿ 0.12 ಚ್ಯಾಂಫರ್ ನಿಂದ Ø4.0 ಗೆ ತುಂಡು ಮಾಡಲಾಗಿವೆ.
 
 
11_1  H x W: 0
ಕಚ್ಚುಗಳ ಟಾಲರನ್ಸ್ : ಕಚ್ಚುಗಳ ಟಾಲರನ್ಸ್ ಶ್ರೇಣಿ (ರೇಂಜ್) 0.0 ರಿಂದ + 0.001 ರಷ್ಟು ಇರುತ್ತದೆ. ಕಚ್ಚುಗಳ ಅಗಲದಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಪರಿಣಾಮವನ್ನುಂಟು ಮಾಡುವ ಘಟಕವೆಂದರೆ ಟೂಲ್ ನ ಸವೆತ. ಇನ್ಸರ್ಟ್ ನ ಬಳಕೆಯು ಹೆಚ್ಚಾದಂತೆ ಅದರ ಸವೆತವೂ ಹೆಚ್ಚಾಗುತ್ತದೆ. ಅದರ ಎಡ್ಜ್ ಗಳ ಅಗಲ ಕಡಿಮೆ ಆಗಲಾರಂಭಿಸಲಾಗುತ್ತವೆ. ಇದರಿಂದಾಗಿ ತಯಾರಾಗುವ ಕಚ್ಚುಗಳು ಯೋಗ್ಯವಾದ ಮಾಪನದಲ್ಲಿ ತಯಾರಾಗುವುದಿಲ್ಲ. ಇದರೊಂದಿಗೆ ಬಳಸಲಾಗುವ ಇನ್ಸರ್ಟ್ ಒಂದು ವೇಳೆ ಕ್ಲೋಜ್ ಟಾಲರನ್ಸ್ ತಯಾರಿಸಲಾಗಿದ್ದರೂ ಕೂಡಾ ಅದಕ್ಕೆ ಮಿತಿ ಇರುತ್ತದೆ. ಇದರಿಂದಾಗಿ ಇನ್ಸರ್ಟ್ ಬದಲಾಯಿಸಿದಲ್ಲಿ ಕಚ್ಚುಗಳ ಅಗಲವು ಬದಲಾಯಿಸುತ್ತದೆ. ಕಾರಣ ಹೊಸ ಇನ್ಸರ್ಟ್ ನ ಮಾಪನವು ಮೊದಲ ಇನ್ಸರ್ಟ್ ನಂತೆ ಇರುವುದು ಅಸಾಧ್ಯ. ಅದಕ್ಕೆ ಸುಲಭವಾದ ಉಪಾಯವೆಂದರೆ, ಫಿನಿಶಿಂಗ್ ಆಪರೇಶನ್ ಗೋಸ್ಕರ ಹೆಚ್ಚು ಆಫ್ ಸೆಟ್ ಅಳವಡಿಸುವುದು.
N16 Z-0.687
N17 G01 X3.976 Z-0.625 F0.002
N18 X3.826 F0.003
N19 X4.1 Z-0.6083 F0.04
ಈ ಪಾಯಿಂಟ್ ಗೆ ಕಚ್ಚುಗಳ ಎಡಬದಿಯು ಫಿನಿಶ್ ಆಗಿದೆ. ಬಲ ಬದಿಯ ಯಂತ್ರಣೆಯನ್ನು ಮಾಡಲು ಟೂಲ್ ನ ಬಲ ಬದಿಯ ತುದಿಯಿಂದ ಕೆಲಸ ಮಾಡುವುದು ಮಹತ್ವದ್ದಾಗಿದೆ. ಇದಕ್ಕೋಸ್ಕರ ಎಲ್ಲಕ್ಕಿಂತಲೂ ಸುಲಭವಾದ ಪ್ರೊಗ್ರಾಮ್ ಇನ್ಕ್ರಿಮೆಂಟಲ್ ಮೋಡ್ ನಲ್ಲಿ Z ಅಕ್ಷ ಇನ್ಕ್ರಿಮೆಂಟಲ್ ಮಾಪನಗಳನ್ನು ಅಳವಡಿಸಬೇಕು. ಅದಕ್ಕೋಸ್ಕರ W ಈ ಅಕ್ಷರವನ್ನು ಬಳಸಲಾಗುತ್ತದೆ.
N50 W0.0787 T0313
N51 X3.976 W-0.062 F 0.002
N50 ಬ್ಲಾಕ್ ನಲ್ಲಿ ಟೂಲ್ ಗಳ ಒಟ್ಟು ದೂರ = ಬಲಬದಿಯಲ್ಲಿ ಮಟೀರಿಯಲ್ + ಚ್ಯಾಂಫರ್ + ಕ್ಲಿಯರನ್ಸ್
0.0167 + 0.012 + 0.050.
N51 ಬ್ಲಾಕ್ ನಲ್ಲಿ ಚ್ಯಾಂಫರ್ ಪೊಸಿಶನ್ ಮತ್ತು ಎಬ್ ಸ್ಲ್ಯೂಟ್ ಮೋಡ್ X ಅಕ್ಷಕ್ಕೋಸ್ಕರ ಮತ್ತು ಇನ್ಕ್ರಿಮೆಂಟಲ್ ಮೋಡ್ Z ಅಕ್ಷಕ್ಕೋಸ್ಕರ.
ಕಚ್ಚು ಬಲ ಬದಿಗೆ ಸಂಪೂರ್ಣವಾಗಿ ಮಾಡಲು ಬುಡದಲ್ಲಿ ವ್ಯಾಸದ ಕಟ್ ಪೂರ್ತಿಗೊಳಿಸಿ. ಬ್ಲಾಕ್ N52 ಅದರ ನಂತರ 0.003 ಇದರ ಸ್ಟಾಕ್ ತೆಗೆಯುವುದು ಪ್ರಾರಂಭಿಸಿರು. ಈ ಪ್ರಕ್ರಿಯೆಗೆ ಕಚ್ಚುಗಳ ಬಾಟಮ್ ಸ್ವಿಪಿಂಗ್ ಎಂದು ಹೇಳುತ್ತಾರೆ.
N52 X3.82 F0.003
N53 Z-0.6247 T0303
N54 X4.1 Z-0.6083 F0.04
N55 G00 X 10.0 Z2.0 T0300 M09
N56 M30
%

ಸಂಪೂರ್ಣ ಪ್ರೊಗ್ರಾಮ್ (ಪ್ರಿಸಿಶನ್ ಕಚ್ಚು) 03602
N41 T03000142
N42 G96 S400 M03
N43 G00 X4.1Z-0.6083 T 0303 M08 (ಆಫ್ ಸೆಟ್ 03)
N44 G01 X3.826 F0.004
N45 G00 X4.1
N46 Z-0.657
N47 G01 X3.976 Z-0.625 F0.002
N48 X3.826 F0.003
N49 X4.1 Z-0.6033 F0.04
N50 W0.0787 T0313
N51 X3.976 W-0.062 F0.002
N52 X3.82 F0.003
N53 Z-0.6247 T0303
N54 X4.1 Z-0.6083 F0.04
N55 G00 X6.0 Z3.0 T0300 M09
N56 M30
%

 

11_1  H x W: 0  
 ಸತೀಶ ಜೋಶಿ
 ಲೇಖಕರು ಮತ್ತು ಸಲಹೆಗಾರರು 
 8625975219
 [email protected]
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
@@AUTHORINFO_V1@@