ಬ್ರೋಚಿಂಗ್ ಇದೊಂದು ಯಂತ್ರಣೆಯ ವಿಶೇಷವಾದ ಪ್ರಕಾರವಾಗಿದೆ. ಇದನ್ನು ಪ್ರಮುಖವಾಗಿ ಒಳಭಾಗದಲ್ಲಿರುವ ಕಚ್ಚುಗಳಿಗೆ ಅಂದರೆ ಕೀ-ವೆ ಅಥವಾ ಸ್ಲ್ಪೈನ್ ನ ಯಂತ್ರಣೆಗೋಸ್ಕರ ಬಳಸಲಾಗುತ್ತದೆ. ಅನೇಕ ಸಲ ಹಲವಾರು ಘಟಕಗಳ ಸರ್ಫೇಸ್ ನಲ್ಲಿ ಕಚ್ಚುಗಳ ಯಂತ್ರಣೆಯನ್ನು ಈ ರೀತಿಯಲ್ಲಿ ಮಾಡಲಾಗುತ್ತದೆ.
ಬ್ರೋಚಿಂಗ್ ಇದು ಯಂತ್ರಣೆಯಲ್ಲಿ ಮಾಡಲಾಗುವ ಒಂದು ಪ್ರಕ್ರಿಯೆಯಾಗಿದೆ. ಮಟೀರಿಯಲ್ ತೆಗೆಯಲು ಬ್ರೋಚ್ ಎಂಬ ಒಂದು ಹಲ್ಲುಗಳಿರುವ ಟೂಲ್ ಇದಕ್ಕೋಸ್ಕರ ಬಳಸಲಾಗುತ್ತದೆ. ಬ್ರೋಚಿಂಗ್ ನಲ್ಲಿ ಎರಡು ವಿಧಗಳಿವೆ.
1. ಲಿನಿಯರ್ (ಏಕ ರೇಖೀಯ)
2. ರೋಟರಿ (ಚಕ್ರಾಕಾರದ್ದು)
ಲಿನಿಯರ್ ಬ್ರೋಚಿಂಗ್ ನಲ್ಲಿ ಕಾರ್ಯವಸ್ತುವಿನ ಸರ್ಫೇಸ್ ನಿಂದ ಬ್ರೋಚ್ ಒಂದೇ ರೇಖೆಯಲ್ಲಿ ತಳ್ಳಲಾಗುತ್ತದೆ ಅಥವಾ ಎಳೆಯಲಾಗುತ್ತದೆ ಮತ್ತು ಕಾರ್ಯವಸ್ತುವನ್ನು ಕತ್ತರಿಸಲಾಗುತ್ತದೆ. ಯಂತ್ರಣೆಯ ಪ್ರಕ್ರಿಯೆ ಬ್ರೋಚ್ ನ ಒಂದೇ ಪಾಸ್ ನಲ್ಲಿ ಮಾಡಲಾಗುತ್ತದೆ.
ಒಂದೇ ತುದಿ (ಪಾಯಿಂಟ್) ಇರುವ ಅನೇಕ ಕಟಿಂಗ್ ಟೂಲ್ ಗಳನ್ನು ವಿಶಿಷ್ಟ ರೀತಿಯಲ್ಲಿ ಅಳವಡಿಸಿರುವ ಸೆಟ್ ಅಂದರೆ ಬ್ರೋಚ್ ಎಂದೂ ಹೇಳಬಹುದು. ಬ್ರೋಚಿಂಗ್ ನ ಪ್ರಕ್ರಿಯೆಯು ಯಾವುದೊಂದು ಶೇಪರ್ ನ ಅನೇಕ ಸೈಕಲ್ ಗಳಿಂದ ಮಾಡಿರುವ ಕೆಲಸಗಳೊಂದಿಗೆ ಸರಿಸಮಾನವಾಗಿರುತ್ತದೆ, ಎಂದು ಹೇಳಬಹುದು.
ಮೂರು ರೀತಿಯ ಕೆಲಸಗಳನ್ನು ಮಾಡಲು ಬ್ರೋಚಿಂಗ್ ನ್ನು ಮೂರು ಸ್ವಷ್ಟವಾದ ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೇ ರಫಿಂಗ್ ಗೋಸ್ಕರ (ಪ್ರಾಥಮಿಕ ಕೆಲಸಕ್ಕೋಸ್ಕರ), ಎರಡನೇ ಕೆಲಸ ಪೂರ್ತಿಗೊಳಿಸಲು (ಸೆಮಿ ಫಿನಿಶಿಂಗ್ ಗೋಸ್ಕರ) ಮತ್ತು ಕೊನೆಯದಾಗಿ ಮೂರನೇ ನಿರ್ದೋಷವಾದ ಕೆಲಸಕ್ಕೆ (ಫಿನಿಶಿಂಗ್ ಗೋಸ್ಕರ) ಈ ರೀತಿಯ ಮೂರು ವಿಭಾಗಗಳಿವೆ.
ಯಂತ್ರಣೆಯನ್ನು ಮಾಡಿರುವ ಸರ್ಫೇಸ್ ನ ಚಿತ್ರ ಬ್ರೋಚ್ ನ ಸರ್ಫೇಸ್ ಚಿತ್ರಕ್ಕೆ ವಿರುದ್ಧವಾಗಿ (ಇನ್ವರ್ಟ್) ಇರುತ್ತದೆ. ಪ್ರತಿಯೊಂದು ಹಲ್ಲಿನಿಂದ ತೆಗೆಯಲಾಗುವ ಮಟೀರಿಯಲ್ ನ ಪ್ರಮಾಣ ಮತ್ತು ಆಕಾರ (ಚಿಪ್ ಸೈಜ್) ಆ ಹಲ್ಲುಗಳಲ್ಲಿರುವ ಕೋನಕ್ಕೆ ಅವಲಂಬಿಸಿರುತ್ತದೆ. ಕಾರ್ಯವಸ್ತು ಒಂದೇ ಜಾಗದಲ್ಲಿ ಸ್ಥಿರವಾಗಿಟ್ಟು ಬ್ರೋಚ್ ಅಲುಗಾಡಿಸಬಹುದಾಗಿದೆ ಅಥವಾ ಅದನ್ನು ಈ ಕ್ರಿಯೆಯ ವಿರುದ್ಧವಾಗಿಯೂ ಮಾಡಬಹುದಾಗಿದೆ. ಕೆಲಸಕ್ಕೋಸ್ಕರ ಬೇಕಾಗಿರುವ ಎಲ್ಲ ಅಂಶಗಳು ಮತ್ತು ಸೌಲಭ್ಯಗಳು ಬ್ರೋಚ್ ನಲ್ಲಿಯೇ ಒಳಗೊಂಡಿರುವುದರಿಂದ ಹೊರಭಾಗದಲ್ಲಿ ಕ್ಲಿಷ್ಟ ರೀತಿಯಲ್ಲಿ ಅಲುಗಾಡಿಸುವುದು ಅಥವಾ ನುರಿತ ಮಾನವ ಸಂಪನ್ಮೂಲಗಳ ಆವಶ್ಯಕತೆ ಇರುವುದಿಲ್ಲ. ಬ್ರೋಚಿಂಗ್ ಗೆ ಸಂಬಂಧಪಟ್ಟ ಪ್ರಕ್ರಿಯೆಗೆ ಅವಲಂಬಿಸಿಯೂ ಇರುವುದಿಲ್ಲ. (ಚಿತ್ರ ಕ್ರ. 1 ಮತ್ತು 2) ಉದಾಹರಣೆ, ಸರ್ಫೇಸ್ ಬ್ರೋಚಿಂಗ್ ಇದು ಸುಲಭವಾದ ಪ್ರಕ್ರಿಯೆಯಾಗಿದೆ. ಕಾರಣ ಅದರಲ್ಲಿ ಒಂದಾದರೆ ಸ್ಥಿರವಾದ ಸರ್ಫೇಸ್ ಬ್ರೋಚ್ ನಿಂದ ಕಾರ್ಯವಸ್ತುವನ್ನು ಎಳೆಯಲಾಗುತ್ತದೆ ಅಥವಾ ಕಾರ್ಯವಸ್ತು ಸ್ಥಿರವಾಗಿಟ್ಟು ಅದರಿಂದ ಬ್ರೋಚ್ ಎಳೆಯಲಾಗುತ್ತದೆ.
ಉಪಯೋಗ
ಯಾವುದೇ ಕಾರ್ಯವಸ್ತುವಿನಲ್ಲಿ ಒಳ ಕಚ್ಚುಗಳನ್ನು ತಯಾರಿಸಲು ಮೂಲತಃ ಬ್ರೋಚಿಂಗ್ ಪ್ರಕ್ರಿಯೆಯ ಅಭಿವೃದ್ಧಿಯನ್ನು ಮಾಡಲಾಯಿತು. ಈ ಪೂರ್ಣ ಪ್ರಕ್ರಿಯೆಯ ಹೆಚ್ಚಿನ ಸಮಯವು ಬ್ರೋಚ್ ಹಿಂದೆ ಬರಲು (ರಿಟರ್ನ್ ಸ್ಟ್ರೋಕ್) ಮತ್ತು ಕಾರ್ಯವಸ್ತು ಅಳವಡಿಸುವುದು ಅಥವಾ ಇಳಿಸುವುದು (ಲೋಡಿಂಗ್ ಅಥವಾ ಅನ್ ಲೋಡಿಂಗ್) ಇದಕ್ಕೆ ಬಳಸಬೇಕಾಗುತ್ತದೆ.
ಬ್ರೋಚಿಂಗ್ ನಲ್ಲಿರುವ ಮಿತಿ1. ಯಂತ್ರಣೆ ಮಾಡಲಾಗುವ ಸರ್ಫೇಸ್ ನಲ್ಲಿ ಯಾವುದೇ ಉಬ್ಬುಗಳು, ಹೊಂಡಗಳು ಅಥವಾ ಇನ್ನಿತರ ಅಡಚಣೆಗಳು ಇರಬಾರದು.
2. ಕತ್ತರಿಸುವ ಭಾಗವು ವಕ್ರಾಕಾರವಾಗಿದ್ದರೂ ಅದು ಒಂದೇ ಮಟ್ಟದಲ್ಲಿರಬೇಕು.
3. ಸಂಬಂಧಪಟ್ಟ ಕಾರ್ಯವಸ್ತು ಬ್ರೋಚಿಂಗ್ ಪ್ರಕ್ರಿಯೆಯಲ್ಲಿ ಅಳವಡಿಸಲ್ಪಡುವ ಫೋರ್ಸ್ ಸಹಿಸುವಷ್ಟು ದೃಢವಾಗಿರಬೇಕು.
4. ಕಾರ್ಯವಸ್ತುವಿಗೆ ಒಳಭಾಗದಲ್ಲಿ ಬ್ರೋಚಿಂಗ್ ಮಾಡುವುದಾದಲ್ಲಿ ಅದರ ಸರ್ಫೇಸ್ ನಲ್ಲಿ ಬ್ರೋಚ್ ಪ್ರವೇಶಿಸಲು ಮೂಲತಃ ಒಂದು ರಂಧ್ರವಿರುವುದು ಅತ್ಯಾವಶ್ಯಕವಾಗಿದೆ.
ಟಾಲರನ್ಸ್ ಸಾಮಾನ್ಯವಾಗಿ ±0.05 ಮಿ.ಮೀ. ಇರುತ್ತದೆ. ಆದರೆ ಉಚ್ಚಮಟ್ಟದ ನಿಖರತೆಯನ್ನು ನಿರೀಕ್ಷಿಸಿದ್ದಲ್ಲಿ ±0.01 ಮಿ.ಮೀ.ನ ಟಾಲರನ್ಸ್ ಕಾಪಾಡಬಹುದಾಗಿದೆ.
ಬ್ರೋಚಿಂಗ್ ನ ಸಂದರ್ಭದಲ್ಲಿ ಯಂತ್ರಣೆಯ ಸಾಮರ್ಥ್ಯ ರೇಟಿಂಗ್ (ಯಾವುದೇ ಸರ್ಫೇಸ್ ನಲ್ಲಿ, ಉದಾಹರಣೆ, ಕಟಿಂಗ್ ನಂತಹ ಯಂತ್ರಣೆಯ ಪ್ರಕ್ರಿಯೆ ಎಷ್ಟು ಮಾಡಬೇಕು ಎಂಬುದರ ಅನುಪಾತ) ಕಾರ್ಯವಸ್ತುವಿನ ಹಾರ್ಡ್ ನೆಸ್ ನೊಂದಿಗೆ ತುಂಬಾ ಹತ್ತಿರದ ಸಂಬಂಧವಿರುತ್ತದೆ. ಸ್ಟೀಲ್ ನ ಕುರಿತು ಹೇಳುವುದಾದಲ್ಲಿ ಸ್ಟೀಲ್ ನ ಹಾರ್ಡ್ ನೆಸ್ 16 ಮತ್ತು 24 HRC ನ ನಡುವೆ ಇರುವುದನ್ನು ಸೂಕ್ತ ಎಂದು ತಿಳಿಯಲಾಗಿದೆ. ಹಾರ್ಡ್ ನೆಸ್ 35 HRC ಗಿಂತ ಹೆಚ್ಚು ಇದ್ದಲ್ಲಿ ಬ್ರೋಚ್ ನ ಚೂಪುತನವು ಬೇಗನೇ ಮೊಂಡಾಗುತ್ತದೆ. ಚಿತ್ರ ಕ್ರ. 3 ರಲ್ಲಿ ಬ್ರೋಚ್ ಟೂಲ್ ಮತ್ತು ಬ್ರೋಚ್ ಬಳಸಿ ಯಂತ್ರಣೆ ಮಾಡುವಂತೆ ಅನೇಕ ಆಕಾರಗಳನ್ನು ತೋರಿಸಲಾಗಿದೆ.
ಬ್ರೋಚ್ ನ ವರ್ಗೀಕರಣ
ಬಳಕೆ : ಒಳ ಅಥವಾ ಸರ್ಫೇಸ್ ನಲ್ಲಿ
ಉದ್ದೇಶ : ಸಿಂಗಲ್ ಅಥವಾ ಕಾಂಬಿನೇಶನ್
ಚಟುವಟಿಕೆ : ಪುಶ್, ಪುಲ್ ಅಥವಾ ಸ್ಟೆಶನರಿ
ರಚನೆ : ಸಾಲಿಡ್, ಬಿಲ್ಟ ಅಪ್, ಹಾಲೋ ಅಥವಾ ಶೆಲ್
ಕೆಲಸ : ರಫಿಂಗ್, ಸೈಜಿಂಗ್ ಅಥವಾ ಬರ್ನಿಶಿಂಗ್
ಬಹುತೇಕ ಎಲ್ಲ ಬ್ರೋಟ್ ಹೈ ಸ್ಪೀಡ್ ಸ್ಟೀಲ್ (HSS) ಅಥವಾ ಅಲಾಯ್ ಸ್ಟೀಲ್ ನಿಂದ ತಯಾರಿಸಲ್ಟಿರುತ್ತವೆ. HSS ಬ್ರೋಚ್ ನ ಬಾಳಿಕೆಯನ್ನು ಹೆಚ್ಚಿಸಲು ಅದರಲ್ಲಿ ಅನೇಕ ಸಲ TiN ನ ಕೋಟಿಂಗ್ ಗೆ ಮಾಡಲಾಗುತ್ತದೆ. ಈ ಕೋಟಿಂಗ್ ಕೇವಲ ಕೆಲವೇ ಮೈಕ್ರಾನ್ ಗಳಷ್ಟು ದಪ್ಪವಾಗಿರುತ್ತದೆ. ಬ್ರೋಚ್ ದೊಡ್ಡ ಆಕಾರದ್ದು ಇದ್ದಲ್ಲಿ ಬಿಲ್ಟ ಅಪ್ ಅಥವಾ ಮಾಡ್ಯುಲರ್ ರೀತಿಯ ತಯಾರಿಕೆಗೆ ಅನುಸಾರವಾಗಿ ಅದರ ಬೆಲೆಯನ್ನು ಕಡಿಮೆ ಮಾಡಬಹುದು. ಈ ರೀತಿಯಲ್ಲಿ ಬ್ರೋಚ್ ನ ಅನೇಕ ತುಂಡುಗಳನ್ನು ಮಾಡಿ ಜೋಡಿಸಲಾಗುತ್ತದೆ. ಇದರ ಪರಿಣಾಮದಿಂದಾಗಿ ಹಾಳಾದ ಭಾಗ ಅಥವಾ ಸವೆದ ಭಾಗವನ್ನು ಮಾತ್ರ ಬದಲಾಯಿಸಬಹುದು. ಸಂಪೂರ್ಣ ಬ್ರೋಚ್ ಹೊಸದಾಗಿ ಅಳವಡಿಸಬೇಕಾಗುವುದಿಲ್ಲ.
ಸರ್ಫೇಸ್ ಬ್ರೋಚ್ಸರ್ಫೇಸ್ ಬ್ರೋಚ್ ನ ಕುರಿತು ಸಾಮಾನ್ಯವಾದ ಉದಾಹರಣೆ, ಸ್ಲೇಬ್ ಬ್ರೋಚ್. ಈ ಟೂಲ್ ಸಮತಟ್ಟಾದ ಸರ್ಫೇಸ್ ಕತ್ತರಿಸಲು ಎಲ್ಲೆಡೆಯಲ್ಲಿಯೂ ಬಳಸಲಾಗುತ್ತದೆ. ಎಲ್ಲಿ ಉತ್ಪಾದನೆಯ ವೇಗವು ಹೆಚ್ಚು ಇರುತ್ತದೆಯೋ, ಅಲ್ಲಿ ಕಾರ್ಯವಸ್ತುವಿನಲ್ಲಿ ವಿವಿಧ ಆಕಾರದ ಕಚ್ಚುಗನ್ನು (ಸ್ಲಾಟ್) ಮಾಡಲು ಬ್ರೋಚ್ ಬಳಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಕಚ್ಚುಗಳನ್ನು ಮಾಡುವುದಾದಲ್ಲಿ ಮಿಲ್ಲಿಂಗ್ ಮಶಿನ್ ನ ಹೋಲಿಸಿದಲ್ಲಿ ಕಚ್ಚಿನ ಬ್ರೋಚಿಂಗ್ ಪ್ರಕ್ರಿಯೆ ಹೆಚ್ಚು ವೇಗವುಳ್ಳದ್ದಾಗಿದೆ. ಕಾರಣ ಒಂದೇ ಬ್ರೋಚಿಂಗ್ ಮಶಿನ್ ನಲ್ಲಿ ಒಂದರ ನಂತರ ಇನ್ನೊಂದು, ಹೀಗೆ ಅನೇಕ ವಿಧದ ಬ್ರೋಚ್ ಗಳನ್ನು ಬಳಸಿ ಕಾರ್ಯವಸ್ತುವಿನಲ್ಲಿ ಕೆಲಸವನ್ನು ನಿರ್ವಹಿಸಲಾಗುತ್ತದೆ.
ಎಂಡೋಸ್ಪಿಯರ್ (ಅಂತರ್ಗೋಲ) ಅಥವಾ ಕಾನ್ ವೆಕ್ಸ್ (ಬಹಿರ್ಗೋಲ) ಸರ್ಫೇಸ್ ಹಾಗೆಯೇ ಕ್ಯಾಮ್, ಕಂಟೂರ್ ಮತ್ತು ಅನಿಯಮಿತ ಆಕಾರದ ಸರ್ಫೇಸ್ ನಲ್ಲಿ ಕೆಲಸ ನಿರ್ವಹಿಸಲು ಕಂಟೂರ್ ಬ್ರೋಚ್ ಉಪಯುಕ್ತವಾಗಿದೆ.
ಪಾಟ್ ಬ್ರೋಚ್ ನ ರಚನೆ ಇಂಟರ್ನಲ್ ಬ್ರೋಚ್ ನ ವಿರುದ್ಧವಾಗಿರುತ್ತದೆ. ಸಿಲಿಂಡ್ರಿಕಲ್ ಕಾರ್ಯವಸ್ತುವಿನ ಹೊರ ಬದಿಯ ವ್ಯಾಸದಲ್ಲಿ ಕೆಲಸ ನಿರ್ವಹಿಸಲು ಈ ಬ್ರೋಚ್ ಬಳಸುತ್ತಾರೆ. ಬ್ರೋಚ್ ಯಾವುದರಲ್ಲಿ ಅಳವಡಿಸಲ್ಪಟ್ಟಿದೆಯೋ, ಆ ಫಿಕ್ಸ್ಚರ್ ಪಾಟ್ ಅಂದರೆ ಆಳವಾದ ಪಾತ್ರೆಯಂತೆ ಕಾಣುವುದರಿಂದ ಅದಕ್ಕೆ ಪಾಟ್ (ಮಡಿಕೆ) ಬ್ರೋಚ್ ಎಂಬ ಹೆಸರು ನೀಡಲಾಗಿದೆ. ಈ ಪಾಟ್ ನ ಪೂರ್ತಿ ಉದ್ದದಲ್ಲಿ, ಕಾನ್ಸೆಟ್ರಿಕ್ ರೀತಿಯಿಂದ ಒಂದೇ ಬಾರಿ ಅನೇಕ ಬ್ರೋಚಿಂಗ್ ಟೂಲ್ ಅಳವಡಿಸಲಾಗುತ್ತದೆ. ಈ ಬ್ರೋಚ್ ಸ್ಥಿರವಾಗಿರುತ್ತದೆ ಮತ್ತು ಅದರಿಂದ ಕಾರ್ಯವಸ್ತು ಎಳಯಲಾಗುತ್ತದೆ ಅಥವಾ ತಳ್ಳಲಾಗುತ್ತದೆ. ಹಲವಾರು ವಿಧದ ಇನ್ವೋಲ್ಯುಟ್ ಗಿಯರ್ ನ ಕಟಿಂಗ್ ಗೋಸ್ಕರ ಈ ಹಾಬಿಂಗ್ ಮಶಿನ್ ನ ಬದಲಾಗಿ ಪಾಟ್ ಬ್ರೋಚಿಂಗ್ ನ ರೀತಿಯನ್ನು ಬಳಸುತ್ತಾರೆ. ಹೊರಗಿನ ಸರ್ಫೇಸ್ ನಲ್ಲಿರುವ ಸ್ಲ್ಪೈನ್ ಹಾಗೆಯೇ ಕಚ್ಚುಗಳನ್ನು ಮಾಡಲು ಇದೇ ಯಂತ್ರಣೆಯು ಉಪಯುಕ್ತವಾಗಿದೆ.
ಸ್ಟ್ರೇಡಲ್ ಬ್ರೋಚ್ ನಲ್ಲಿ ಎರಡು ಸ್ಲೇಬ್ ಬ್ರೋಚ್ ಗಲನ್ನು ಒಟ್ಟಾಗಿ ಬಳಸಲಾಗುತ್ತದೆ. ಕಾರ್ಯವಸ್ತುವಿನಲ್ಲಿ ವಿರುದ್ಧ ಬದಿಯಲ್ಲಿ ಸಮಾನಾಂತರ ಸರ್ಫೇಸ್ ಒಂದೇ ಸೈಕಲ್ ನಲ್ಲಿ ಕತ್ತರಿಸಲು ಇದನ್ನು ಬಳಸಲಾಗುತ್ತದೆ.
ಒಳ ಬ್ರೋಚಿಂಗ್ಒಳ ಭಾಗದಲ್ಲಿ ಬ್ರೋಚಿಂಗ್ ಪ್ರಾರಂಭಿಸುವಾಗ (ಚಿತ್ರ ಕ್ರ. 4) ಕಾರ್ಯವಸ್ತುವನ್ನು ಒಂದು ವಿಶಿಷ್ಟವಾದ ರಚನೆಯಲ್ಲಿ ಹೋಲ್ಡಿಂಗ್ ಫಿಕ್ಸ್ಚರ್ ನಲ್ಲಿ ಹಿಡಿಯಲಾಗುತ್ತದೆ. ಬ್ರೋಚಿಂಗ್ ಮಶಿನ್ ನಲ್ಲಿಯೇ ಅಳವಡಿಸಲಾಗಿರುವ ಈ ಫಿಕ್ಸ್ಚರ್ ಗೆ ವರ್ಕ್ ಹೋಲ್ಡರ್ ಅಥವಾ ಮ್ಯಾಂಡ್ರೆಲ್ ಎಂದು ಹೇಳುತ್ತಾರೆ. ಬ್ರೋಚಿಂಗ್ ಮಶಿನ್ ಹಾರಿಝಾಂಟಲ್ ಅಥವಾ ವರ್ಟಿಕಲ್ ಇರುವ ಸಾಧ್ಯತೆ ಇದೆ. ಮಶಿನ್ ಯಾವುದೇ ಇದ್ದರೂ ಕೂಡಾ ಬ್ರೋಚ್ ನ ಚಿಕ್ಕ ಬದಿ (ಸ್ಮಾಲ್ ಎಂಡ್) ಕಾರ್ಯವಸ್ತುವಿನ ಹತ್ತಿರ ಬರುವಂತೆ ಕಾರ್ಯವಸ್ತುವನ್ನು ವರ್ಕ್ ಹೋಲ್ಡರ್ ನಲ್ಲಿ ಅಳವಡಿಸಲಾಗಿರುತ್ತದೆ. ಒಂದೇ ಸೈಕಲ್ ನಂತರ ಬ್ರೋಚಿಂಗ್ ಮಶಿನ್ ನ ಪುಲರ್ ಮೂಲಕ ಬ್ರೋಚ್ ನ ಮುಂಭಾಗವನ್ನು (ಪೈಲಟ್ ಎಂಡ್) ಹಿಡಿಯಲಾಗುತ್ತದೆ. ಪುಲರ್ ಮೂಲಕ ಕಾರ್ಯವಸ್ತುವಿನಿಂದ ಬ್ರೋಚ್ ಪೂರ್ಣವಾಗಿ ಎಳೆಯಲಾಗುತ್ತದೆ. ಇದರ ನಂತರ ಕಾರ್ಯವಸ್ತು ಮಶಿನ್ ನಿಂದ ಹೊರಗೆ ತೆಗೆಯಲಾಗುತ್ತದೆ. ಬ್ರೋಚ್ ಎತ್ರಿ ಮತ್ತೆ ಎಲಿವೆಟರ್ ಗೆ (ವರ್ಟಿಕಲ್ ಮಶಿನ್ ನಲ್ಲಿ) ಅಳವಡಿಸಲಾಗುತ್ತದೆ. ಬ್ರೋಚ್ ನ ಚಟುವಟಿಕೆ ಸಾಮಾನ್ಯವಾಗಿ ಲಿನಿಯರ್ ಅಂದರೆ ಒಂದೇ ರೇಖೆಯಲ್ಲಿರುತ್ತದೆ. ಆದರೆ ಹಲವಾರು ಸಲ ಸ್ಪೈರಲ್ ಸ್ಲ್ಪೈನ್ ತಯಾರಿಸಲು ಅದನ್ನು ವರ್ತುಲಾಕಾರವಾಗಿ ತಿರುಗಿಸಬಹುದಾಗಿದೆ. ಇದಕ್ಕೆ ಗನ್ ಬೇರಲ್ ರೈಫಲಿಂಗ್ ಎಂದು ಹೇಳುತ್ತಾರೆ. ಅನೇಕ ವಿಧದ ಬ್ರೋಚಿಂಗ್ ಮಶಿನ್ ನಲ್ಲಿ ಬ್ರೋಚ್ ಕಾರ್ಯವಸ್ತುವಿನಿಂದ ಮುಂದೆ ತಳ್ಳಲಾಗುತ್ತದೆ. ವರ್ಕ್ ಹೋಲ್ಡಿಂಗ್ ಸಲಕರಣೆಗೆ ಒಂದು ಉದ್ದದ ಗೈಡ್ ಸ್ಲಾಟ್ (ಮಾರ್ಗದರ್ಶಕ ಕಚ್ಚು) ಮಾಡುತ್ತಾರೆ ಮತ್ತು ಅದರಿಂದಾಗಿ ಬ್ರೋಚ್ ನಲ್ಲಿ ಚಟುವಟಿಕೆಯಾಗುತ್ತದೆ.
ಮಾಡ್ಯುಲರ್ ಬ್ರೋಚ್ಸಾಲಿಡ್ ವಿಧದ ಬ್ರೋಚ್ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದು ಹೆಸರಿಗೆ ತಕ್ಕಂತೆ ಯಾವುದೇ ಒಳಭಾಗದ ಟೊಳ್ಳುತನ ಇಲ್ಲದಿರುವ ಒಂದೇ ದೃಢವಾದ ತುಂಡಿನಿಂದ ತಯಾರಿಸಲಾಗಿರುತ್ತದೆ. ಬ್ರೋಚ್ ನ ಸವೆತವು ಬೇಗನೇ ಆಗುವ ಸಾಧ್ಯತೆ ಇದ್ದಲ್ಲಿ ಅಲ್ಲಿ ಶೆಲ್ ಬ್ರೋಚ್ ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸಾಲಿಡ್ ಬ್ರೋಚ್ ನಂತೆಯೇ ಇರುತ್ತದೆ. ಆದರೆ ಅದರ ನಡುವಿನಲ್ಲಿ ಒಂದು ರಂಧ್ರವನ್ನು ನೀಡಲಾಗಿರುತ್ತದೆ. ಈ ರಂಧ್ರದಿಂದ ಅದು ಆರ್ಬರ್ ನಲ್ಲಿ ಅಳವಡಿಸಲಾಗುತ್ತದೆ.
ದೊಡ್ಡ ಆಕಾರದಲ್ಲಿರುವ ಒಳಭಾಗದ ಬ್ರೋಚಿಂಗ್ ಮಾಡಲು ಮಾಡ್ಯುಲರ್ ಬ್ರೋಚ್ ಎಲ್ಲೆಡೆಯಲ್ಲಿಯೂ ಬಳಸಲಾಗುತ್ತದೆ. ಈ ಬ್ರೋಚ್ ಶೇಲ್ ಬ್ರೋಚ್ ನಂತೆಯೇ ಇರುತ್ತದೆ. ಆದರೆ ಅದರ ತಯಾರಿಕೆ ತುಂಡು ತುಂಡಾಗಿ ಮಾಡಲಾಗಿರುತ್ತದೆ. ಈ ತಯಾರಿಕೆಯಿಂದ ಅದರ ನಿರ್ಮಾಣಕ್ಕೆ, ಹಾಗೆಯೇ ಅವುಗಳನ್ನು ಮತ್ತೆ ಚೂಪು ಮಾಡಲು ಕಡಿಮೆ ಖರ್ಚು ಬರುತ್ತದೆ. ಇದರ ಹೊರತಾಗಿ ಸಾಲಿಡ್ ಬ್ರೋಚ್ ಹೋಲಿಸಿದಲ್ಲಿ ಅದು ಹೆಚ್ಚು ಫ್ಲೆಕ್ಸಿಬಲ್ ಇರುತ್ತವೆ.
ಒಳ ಸರ್ಫೇಸ್ ನಲ್ಲಿ ಕೆಲಸ ನಿರ್ವಹಿಸಲು ಕೀ-ವೆ ಬ್ರೋಚ್ ನ ಬಳಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. ಬ್ರೋಚ್ ಗೆ ಸರಿಯಾಗಿ ಆಧಾರ ನೀಡಲು ಮತ್ತು ಬ್ರೋಚ್ ನ ಚಟುವಟಿಕೆಗಳ ದಾರಿಯಲ್ಲಿ ಕಾರ್ಯವಸ್ತುವನ್ನು ಸರಿಯಾಗಿ ಹಿಡಿಯಲು ಒಂದು ವಿಶೇಷವಾದ ಫಿಕ್ಸ್ಚರ್ ಬಳಸಲಾಗುತ್ತದೆ. ಅದಕ್ಕೆ ಹಾರ್ನ್ ಅಥವಾ ಮ್ಯಾಂಡ್ರೆಲ್ ಎಂಬ ಹೆಸರಿದೆ.
ಸ್ಲ್ಪೈನ್ ಕಟಿಂಗ್ ನ ಕೆಲಸಕ್ಕಾಗಿ ಕಾನ್ಸೆಂಟ್ರಿಸಿಟಿ ಎಂಬ ಹೆಸರಿನ ವಿಶಿಷ್ಟವಾದ ಬ್ರೋಚ್ ಉಪಯೋಗಿಸಲಾಗುತ್ತದೆ. ತುಂಬಾ ನಿಖರತೆಯಿಂದ ಕಾನ್ಸೆಂಟ್ರಿಸಿಟಿಯನ್ನು ಪಡೆಯಲು ಮೈನರ್ ಡೈಮೀಟರ್ (ಲಘು ವ್ಯಾಸ) ಹಾಗೆಯೇ ಸ್ಲ್ಪೈನ್ ನ ಹೊರ ರೇಖೆಯನ್ನು ಸರಿಯಾಗಿ ಕತ್ತರಿಸುವುದೂ ಆವಶ್ಯಕವಾಗಿದೆ. ಈ ಕೆಲಸವನ್ನು ಬ್ರೋಚ್ ನಿಂದ ಮಾಡಬಹುದಾಗಿದೆ.
ಬ್ರೋಚ್ ನ ರಚನೆಇಂಟರ್ನಲ್ ಬ್ರೋಚ್ ನ ಜಾಮೆಟ್ರಿಯ ರಚನೆಯನ್ನು ಚಿತ್ರ ಕ್ರ. 2 ರಲ್ಲಿ ಪ್ರತಿನಿಧಕವಾದ ಸ್ವರೂಪದಲ್ಲಿ ನೀಡಲಾಗಿದೆ. ಇನ್ನಿತರ ವಿಧದ ಬ್ರೋಚ್ ಕೂಡಾ ಸಾಮಾನ್ಯವಾಗಿ ಇದೇ ರಚನೆಯಲ್ಲಿರುತ್ತದೆ.
ಹಲವಾರು ಸರ್ಕ್ಯುಲರ್ (ಉರುಟಾದ) ಬ್ರೋಚ್ ನಲ್ಲಿ ಫಿನಿಶಿಂಗ್ ಹಲ್ಲುಗಳ ಹೊರತಾಗಿ ಬರ್ನಿಶಿಂಗ್ ಹಲ್ಲುಗಳನ್ನು ನೀಡಲಾಗಿರುತ್ತದೆ. ಈ ಹಲ್ಲುಗಳು ನಿಜವಾದ ಹಲ್ಲುಗಳಲ್ಲದೇ, 0.025 ರಿಂದ 0.076 ಮಿ.ಮೀ. ಹೆಚ್ಚು ವ್ಯಾಸವಿರುವ (ಓವರ್ ಸೈಜ್ಡ್) ಉರುಟಾದ ಹೋಳುಗಳಾಗಿರುತ್ತವೆ. ಇದರಿಂದಾಗಿ ರಂಧ್ರಗಳಿಗೆ ಆವಶ್ಯಕವಿರುವ ಆಕಾರದಲ್ಲಿ ಬರ್ನಿಶ್ ಮಾಡಲಾಗುತ್ತದೆ. ಈ ಕ್ರಿಯೆಯು ಪ್ರಮುಖವಾಗಿ ನಾನ್ ಫೇರಸ್ ಮತ್ತು ಕಾಸ್ಟ್ ಆಯರ್ನ್ ಪ್ರಕಾರದ ಕಾರ್ಯವಸ್ತುಗಳಿಗೆ ಮಾಡಲಾಗುತ್ತದೆ.
ಹಲ್ಲುಗಳ ರಚನೆ, ಅದರ ತಾಕತ್ತು, ಕಾರ್ಯವಸ್ತುವಿನ ಸಂಪರ್ಕದಲ್ಲಿ ಬರುವ ಹಲ್ಲುಗಳ ಸಂಖ್ಯೆ ಈ ಅಂಶಗಳು ಹಲ್ಲುಗಳ ಪಿಚ್ ನಲ್ಲಿ ಅವಲಂಬಿಸಿರುತ್ತವೆ. ಪಿಚ್ ನ ಗಣಿತವು ಕಾರ್ಯವಸ್ತುವಿನ ಉದ್ದಕ್ಕೆ ಅನುಸಾರವಾಗಿ ನಿರ್ಧರಿಸಲಾಗುತ್ತದೆ. ಕಾರಣ ಯಾವುದೇ ಪರಿಸ್ಥಿತಿಯಲ್ಲಿ ಬ್ರೋಚ್ ನ ಕನಿಷ್ಠ ಎರಡು ಹಲ್ಲುಗಳ ಕಾರ್ಯವಸ್ತುವಿನ ಸಂಪರ್ಕದಲ್ಲಿರುವುದು ಅತ್ಯಾವಶ್ಯಕವಾಗಿದೆ. ಒಂದೇ ಬ್ರೋಚ್ ನ ಎಲ್ಲ ಹಲ್ಲುಗಳ ಪಿಚ್ ಒಂದೇ ರೀತಿಯಲ್ಲಿರುತ್ತದೆ.
ಬ್ರೋಚಿಂಗ್ ಮಶಿನ್
ಪುಶ್ ಬ್ರೋಚಿಂಗ್, ಪುಲ್-ಡೌನ್ ಬ್ರೋಚಿಂಗ್, ಪುಲ್-ಅಪ್ ಬ್ರೋಚಿಂಗ್ ಅಥವಾ ಸರ್ಫೇಸ್ ಬ್ರೋಚಿಂಗ್ ನ ಕೆಲಸಕ್ಕೋಸ್ಕರ ವರ್ಟಿಕಲ್ ಬ್ರೋಚಿಂಗ್ ಮಶಿನ್ ನ ರಚನೆ ಮಾಡಬಹುದಾಗಿದೆ.
ಪುಶ್ ಬ್ರೋಚಿಂಗ್ ಮಶಿನ್ (ಗೈಡೆಡ್ ರೇಮ್ ಇರುವಂತಹದ್ದು) ಯಾವುದೇ ಆರ್ಬರ್ ಪ್ರೆಸ್ ನಂತೆಯೇ ಇರುತ್ತದೆ. ಈ ಮಶಿನ್ ನ ಸಾಮರ್ಥ್ಯವು ಸಾಮಾನ್ಯವಾಗಿ 5 ರಿಂದ 50 ಟನ್ ಇರುತ್ತದೆ. ಎರಡು ರೇಮ್ ಇರುವ ಪುಲ್-ಡೌನ್ ಮಶಿನ್ ಬ್ರೋಚಿಂಗ್ ಮಶಿನ್ ಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಾಣಸಿಗುತ್ತದೆ. ಈ ರೀತಿಯ ಮಶಿನ್ ಎರಡೂ ರೇಮ್ ಟೇಬಲ್ ನ ಕೆಳಗೆ ಇರುತ್ತದೆ. ಪುಲ್-ಅಪ್ ಮಶಿನ್ ನ ರೇಮ್ ಟೇಬಲ್ ನ ಮೇಲೆ ಇರುತ್ತದೆ. ಪುಲ್-ಅಪ್ ಮಶಿನ್ ನಲ್ಲಿ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ರೇಮ್ ಇರುತ್ತದೆ. ಸರ್ಫೇಸ್ ಬ್ರೋಚಿಂಗ್ ನ ಕೆಲಸಗಳನ್ನು ಹೆಚ್ಚಾಗಿ ವರ್ಟಿಕಲ್ ಮಶಿನ್ ನಲ್ಲಿಯೇ ಮಾಡಲಾಗುತ್ತದೆ. ಬ್ರೋಚ್ ನ ಯಾವ ಭಾಗವನ್ನು ಮಶಿನ್ ನಲ್ಲಿ ಹಿಡಿದಿಡಲಾಗಿರುತ್ತದೆಯೋ, ಅದು ಮಶಿನ್ ನ ಹೋಲ್ಡರ್ ಡಿಸೈನ್ ನಂತೆಯೇ ಇರಬೇಕಾಗುತ್ತದೆ. ಇದರಿಂದಾಗಿ ಒಂದು ಮಶಿನ್ ಗೆ ಬಳಸಲಾಗುವ ಬ್ರೋಚ್ ಇನ್ನೊಂದು ವಿಧದ ಮಶಿನ್ ನಲ್ಲಿ ಅಳವಡಿಸಬಹುದೋ, ಎಂಬುದನ್ನು ನೋಡಬೇಕಾಗುತ್ತದೆ.
ಕೇಸ್ ಸ್ಟಡಿ 2
ಬ್ರೋಚಿಂಗ್ ಟೂಲ್ ಬಳಸಿ ಮಾಡಿರುವ ಒಂದು ಇಂಟರ್ನಲ್ ಯಂತ್ರಣೆಯ ಉದಾಹರಣೆಯನ್ನು ನೋಡೋಣ. ಚಿತ್ರ ಕ್ರ. 5 ರಲ್ಲಿ ಬ್ರೋಚಿಂಗ್ ಮಶಿನ್ ಗೆ ಜೋಡಿಸಿರುವ ಒಂದು ಮ್ಯಾಂಡ್ರೇಲ್ ತೋರಿಸಲಾಗಿದೆ. ಈ ಮ್ಯಾಂಡ್ರೆಲ್ ಗೆ ಜೋಡಿಸಲು ಮಶಿನ್ ಉತ್ಪಾದಕರು ಮಶಿನ್ ನಲ್ಲಿ ನೀಡಿರುವ ರಂಧ್ರಗಳಲ್ಲಿ (ರೆಫರನ್ಸ್ ಹೋಲ್) ಒಂದು ಪಿನ್ ಅಳವಡಿಸಲಾಗಿದೆ. ಮ್ಯಾಂಡ್ರೆಲ್ ಸರಿಯಾಗಿ ಅಳವಡಿಸಲು (ಮೌಂಟ್ ಮಾಡಲು) ಅದರಲ್ಲಿ ಒಂದು ಗೈಡ್ ಮಾಡಲಾಗಿರುತ್ತದೆ. ಹಾಗೆಯೇ ಅದನ್ನು ಅದೇ ಜಾಗದಲ್ಲಿ ದೃಢವಾಗಿ ಅಳವಡಿಸಲು (ಲಾಕ್ ಮಾಡಲು) ಮೂರರಿಂದ ನಾಲ್ಕು ಕ್ಲ್ಯಾಂಪಿಂಗ್ ರಂಧ್ರಗಳನ್ನು ನೀಡಲಾಗಿರುತ್ತದೆ. ಚಿತ್ರ ಕ್ರ. 6 ರಲ್ಲಿ ತೋರಿಸಿದಂತೆ ಕಪಲಿಂಗ್ ಹಾಫ್ ತೋರಿಸಲಾಗಿದೆ. ಚಿತ್ರ ಕ್ರ. 7 ರಲ್ಲಿ ತೋರಿಸಿರುವ ಇಂಪೆಲರ್ ನ ಬಳಕೆಯನ್ನು ಬ್ರೋಚ್ ನೊಂದಿಗೆ ಮಾಡಿ, ಇಂಟರ್ನಲ್ ಕೀ-ವೇ ಯಂತ್ರಣೆಯನ್ನು ಮಾಡಲಾಗುತ್ತದೆ. ಚಿತ್ರ ಕ್ರ. 8 ರಲ್ಲಿ ತೋರಿಸಿರುವ ಶಿಮ್ ನ ದಪ್ಪವೂ ಒಂದೇ ರೀತಿಯಲ್ಲಿರುತ್ತದೆ. ಅದರ ಒಂದು ತುದಿಯಲ್ಲಿ ಒಂದು ಸ್ಟಾಪ್ ನೀಡಲಾಗಿರುತ್ತದೆ. ಮಾಡಲಾಗಿರುವ ಕಚ್ಚುಗಳ ಆಳವನ್ನು ಹೆಚ್ಚಿಸಲು ಇಂತಹ ಶಿಮ್ ಗಳನ್ನು ಉಪಯೋಗಿಸಲಾಗುತ್ತದೆ. ಆಗತ್ಯಕ್ಕೆ ತಕ್ಕಂತೆ ಅದು ಮ್ಯಾಂಡ್ರೆಲ್ ನ ಕಚ್ಚಿನಲ್ಲಿ ಅಳವಡಿಸಲಾಗುತ್ತದೆ. ಕಚ್ಚುಗಳ ಆಳ ಹೆಚ್ಚು ಮಾಡುವುದಾದರೆ ಈ ರೀತಿಯ ವಿಶಿಷ್ಟ ದಪ್ಪವಿರುವ ಶಿಮ್ ಬಳಸಲಾಗುತ್ತದೆ. ಅಂದರೆ ಯಾವುದೇ ವಿಶಿಷ್ಟ ಅಗಲ ಮತ್ತು ಆಳದ ಕಚ್ಚುಗಳನ್ನು ತಯಾರಿಸಲು ತಯಾರಿಸಿರುವ ಬ್ರೋಚ್ ಇನ್ನಿತರ ಕಾರ್ಯವಸ್ತುಗಳಲ್ಲಿಯೂ ಒಂದೇ ಅಗಲದ್ದಾಗಿರುತ್ತವೆ, ಅದರೆ ಹೆಚ್ಚು ಆಳವಿರುವ ಕಚ್ಚುಗಳನ್ನು ಮಾಡಲು ಬಳಸಲಾಗುತ್ತದೆ. ಯಾವ ಕಾರ್ಯವಸ್ತುವಿನಲ್ಲಿ ಕೆಲಸ ಮಾಡಲಾಗುತ್ತದೆಯೋ, ಅದರ ಒಳ ಭಾಗದಲ್ಲಿ ವ್ಯಾಸಕ್ಕೆ ಸುಲಭವಾಗುವಂತೆ ಮ್ಯಾಂಡ್ರೆಲ್ ಬದಲಾಯಿಸಿ ಅಳವಡಿಸುವುದೂ ಸಾಧ್ಯವಾಗಿದೆ. ಈ ರೀತಿಯಲ್ಲಿ ಮ್ಯಾಂಡ್ರೇಲ್ ಮತ್ತು ಶಿಮ್ ಸೂಕ್ತವಾಗಿ ಬಳಸಿ ವಿಶಿಷ್ಟ ಅಗಲವಿರುವ ಕಚ್ಚುಗಳನ್ನು ಮಾಡಲು ಇರುವ ಬ್ರೋಚ್ ವಿವಿಧ ಕಾರ್ಯವಸ್ತುಗಳಲ್ಲಿ ಉಪಯೋಗಿಸಬಹುದಾಗಿದೆ.
ಡಾ. ಮೋಹನ್ ಖಿರೆ
ವಿಶ್ರಾಂತ ಪ್ರಾಂಶುಪಾಲರು
9325058114
[email protected] ಡಾ. ಮೋಹನ ಖಿರೆ ಇವರು ಕಿರ್ಲೋಸ್ಕರ ಬ್ರದರ್ಸ್ ಎಂಬ ಕಂಪನಿಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಸಾಂಗಲಿಯ ವಾಲಚಂದ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸುಮಾರು 25 ವರ್ಷಗಳ ಕಾಲಾವಧಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ ಇನ್ನಿತರ ಎರಡು ಖಾಸಗಿ ಇಂಜಿನಿಯರಿಂಗ್ ಇನ್ ಸ್ಟಿಟ್ಯೂಟ್ ಗಳಲ್ಲಿ ಪ್ರಿನ್ಸಿಪಾಲ್ ಎಂಬ ಹುದ್ದೆಯಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ.