ಕಡಿಮೆ ಖರ್ಚಿನಲ್ಲಿ ಸಿ.ಎನ್.ಸಿ ಹಾಬಿಂಗ್

@@NEWS_SUBHEADLINE_BLOCK@@

Udyam Prakashan Kannad    23-Sep-2020   
Total Views |

1_1  H x W: 0 x
ಗಿಯರ್, ಒಳ ಮತ್ತು ಹೊರ ಸ್ಲ್ಪೈನ್ ಮತ್ತು ಲೀಭರ್ ಇತ್ಯಾದಿಗಳನ್ನು ತಯಾರಿಸಲು ಹಾಬಿಂಗ್ ಮತ್ತು ಶೇಪಿಂಗ್ ಈ ಗಿಯರ್ ಪ್ರೊಸೆಸಿಂಗ್ ಮಶಿನ್ ಬಳಸಲಾಗುತ್ತದೆ. ಹಾಬಿಂಗ್ ಮತ್ತು ಶೇಪಿಂಗ್ ಎಂಬ ಸಾಮಾನ್ಯವಾಗಿ ಬಳಸುವ ಮಶಿನ್ ಅಲ್ಲದಾಗಿದ್ದು ಅದನ್ನು ಕೇವಲ ಗಿಯರ್ ಪ್ರಕ್ರಿಯೆಗೋಸ್ಕರವೇ ತಯಾರಿಸಲಾಗಿರುತ್ತವೆ. ಕಾರ್ಯವಸ್ತು ಮತ್ತು ಕಟರ್ ನ ತಿರುಗುವಿಕೆ ಇದರ ಸಿಂಕ್ರೊನೈಸೇಶನ್ ಬಳಸಿ ಈ ಮಶಿನ್ ನಲ್ಲಿ ಗಿಯರ್ ತಯಾರಿಸಲಾಗುತ್ತವೆ. ಶೇವಿಂಗ್ ಮಶಿನ್ ಮತ್ತು ಗಿಯರ್ ಗ್ರೈಂಡಿಂಗ್ ಮಶಿನ್ ಗಳನ್ನು ಗಿಯರ್ ಸರ್ಪೇಸ್ ಫಿನಿಶ್ ಮಾಡಲು ಬಳಸಲಾಗುತ್ತದೆ.
ಎಲ್ಲ ಗ್ರಿಯರ್ ಹಾಬಿಂಗ್ ಮಶಿನ್ ಗಳು ಸಾಂಪ್ರದಾಯಿಕ ಯಾಂತ್ರಿಕವಿರಲಿ ಅಥವಾ ಸಿ.ಎನ್.ಸಿ. ಇರಲಿ, ಅವುಗಳು ಮುಂದೆ ನೀಡಿರುವ ಪಟ್ಟಿಯಲ್ಲಿ ಮತ್ತು ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಐದು ಘಟಕಗಳಿಂದ ಕೂಡಿರುತ್ತವೆ.
1. ಕಾರ್ಯವಸ್ತು ತಿರುಗಿಸಲು ಒಂದು ವರ್ಕ್ ಸ್ಪಿಂಡಲ್. (ನೀಲಿ ಬಣ್ಣದಲ್ಲಿ ತೋರಿಸಲಾಗಿದೆ)
2. ಕಟಿಂಗ್ ಟೂಲ್ ತಿರುಗಿಸಲು ಕಟರ್ ಸ್ಪಿಂಡಲ್, ಅಂದರೆ ಹಾಬ್. (ನೇರಳೆ ಬಣ್ಣದಲ್ಲಿ ತೋರಿಸಲಾಗಿದೆ.)

2_1  H x W: 0 x 
3. ವರ್ಕ್ ಸ್ಪಿಂಡಲ್ ಮತ್ತು ಕಟರ್ ಸ್ಪಿಂಡಲ್ ಗೆ ನಿರ್ದೋಷವಾದ ಗುಣಾಕಾರದಲ್ಲಿ ತಿರುಗಿಸುವ ವ್ಯವಸ್ಥೆ. ಗಿಯರ್ ನ ಹಲ್ಲುಗಳ ಸಂಖ್ಯೆ ಮತ್ತು ಹಾಬ್ ಗಳ ಕಚ್ಚುಗಳ ಸಂಖ್ಯೆ (ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ) ಇದರಲ್ಲಿ ಈ ಗುಣಾಕಾರವು ಅವಲಂಬಿಸಿರುತ್ತದೆ. ಸಾಂಪ್ರದಾಯಿಕ ಹಾಬಿಂಗ್ ಮಶಿನ್ ನಲ್ಲಿ ಈ ಗುಣಾಕಾರವು ಸಾಮಾನ್ಯವಾಗಿ ಇಂಡೆಕ್ಸ್ ಗಿಯರ್ ಟ್ರೇನ್ ಎಂದು ಗುರುತಿಸಲಾಗುವ ಗಿಯರ್ ನ ಶ್ರೇಣಿಯ ಮೂಲಕ ಲಭಿಸುತ್ತದೆ.
4. ಕಾರ್ಯವಸ್ತುವಿನ ಫೇಸ್ ನಲ್ಲಿ ಹಾಬ್ ಎಲ್ಲೆಡೆಯಲ್ಲಿಯೂ ತಿರುಗಿಸುವ (ಹಸಿರು ಬಣ್ಣದಲ್ಲಿ ತೋರಿಸಲಾಗಿದೆ) ವ್ಯವಸ್ಥೆ. ಹೆಲಿಕಲ್ ಗಿಯರ್ ತುಂಡು ಮಾಡುವಾಗ ಹಾಬ್ ಕಾರ್ಯವಸ್ತುವಿನಲ್ಲಿಯೇ ತಿರುಗುತ್ತದೆ. ಆಗ ವರ್ಕ್ ಸ್ಪಿಂಡಲ್ ನ್ನು ನಿರ್ದೋಷವಾದ ಗುಣಾಕಾರದಲ್ಲಿ ತಿರುಗಿಸಲು ಇಂಡೆಕ್ಸ್ ಗಿಯರ್ ನಲ್ಲಿ ಬಳಸುತ್ತಾರೆ. ಅದೇ ರೀತಿಯಲ್ಲಿ ಗಿಯರ್ ನ ಇನ್ನೊಂದು ಶ್ರೇಣಿಯನ್ನೂ ಬಳಸಲಾಗುತ್ತದೆ. ಈ ಗುಣಾಕಾರವು ಗಿಯರ್ ನ ಹಲ್ಲುಗಳ ನಿರ್ಮಿತಿಯಲ್ಲಿ ಮಾಡಲಾಗುವ ಹೆಲಿಕ್ಸ್ ಕೋನಕ್ಕೆ ಅನುಸಾರವಾಗಿ ನಿರ್ಧರಿಸಲಾಗುತ್ತದೆ. ಗಿಯರ್ ಟ್ರೇನ್ ನ ಈ ಶ್ರೇಣಿಯು ಸಾಮಾನ್ಯವಾಗಿ ಡಿಫರನ್ಶಿಯಲ್ ಗಿಯರ್ ಟ್ರೇನ್ ಎಂದೂ ಗುರುತಿಸಲಾಗುತ್ತದೆ.
5. ಅನೇಕ ಗಾತ್ರದ ಕಾರ್ಯವಸ್ತುಗಳು ಮತ್ತು ಹಾಬ್ ಗಳಿಗೆ, ಹಾಬ್ ಮತ್ತು ಕಾರ್ಯವಸ್ತುವಿನಲ್ಲಿ ಕೇಂದ್ರೀಯ ದೂರವನ್ನು ಅಳವಡಿಸುವ ಒಂದು ವ್ಯವಸ್ಥೆ.
ಸಾಂಪ್ರದಾಯಿಕ ಗಿಯರ್ ಹಾಬಿಂಗ್ ಮಶಿನ್ ನಲ್ಲಿ ಈ ಎಲ್ಲ ರೀತಿಯ ಪರಸ್ಪರ ಸಂಬಂಧಪಟ್ಟ ಚಟುವಟಿಕೆಗಳನ್ನು ಒಂದೇ ಪ್ರಮುಖ ಮೋಟರ್ ಮತ್ತು ಮೆಕ್ಯಾನಿಕಲ್ ಕೈನಾಮೆಟಿಕ್ಸ್ ಬಳಸಲಾಗುವ ಕ್ಲಚ್ ಮೂಲಕ ಮಾಡಲಾಗುತ್ತದೆ.
ಹಾಬ್ ನ ಲೀಡ್ ಕೋನ ಮತ್ತು ಗಿಯರ್ ನ ಹಲ್ಲುಗಳ ನಿರ್ಮಾಣದಲ್ಲಿ ಮಾಡಬೇಕಾಗಿರುವ ಹೆಲಿಕ್ಸ್ ಕೋನಗಳಿಗೆ ಅನುಸಾರವಾಗಿ ಹಾಬ್ ಹೆಡ್ ನ (ಯಾವುದರಲ್ಲಿ ಹಾಬ್ ಮತ್ತು ಹಾಬ್ ಸ್ಪಿಂಡಲ್ ಮೌಂಟ್ ಮಾಡಲಾಗುತ್ತದೆಯೋ) ಕೋನವನ್ನು ಕೈಯಿಂದಲೇ (ಮ್ಯಾನ್ಯುವಲಿ) ಸೆಟ್ ಮಾಡಬೇಕಾಗುತ್ತದೆ. ಈ ಕೋನವನ್ನು ಸ್ವಿವೆಲಿಂಗ್ ಕೋನ ಎಂಬುದಾಗಿ ಹೇಳುತ್ತಾರೆ.
 
ಮಶಿನ್ ನಲ್ಲಿ ತಯಾರಿಸಲಾಗುವ ಪ್ರತಿಯೊಂದು ಬೇರೆ ಬೇರೆ ಕಾರ್ಯವಸ್ತುವಿಗೋಸ್ಕರ ಇಂಡೆಕ್ಸ್ ಗಿಯರ್ ಮತ್ತು ಡಿಫರನ್ಶಿಯಲ್ ಗಿಯರ್ ನ ನಿರ್ದೋಷವಾದ ಗುಣಾಕಾರದ ಮಾಪನವನ್ನು ಮಾಡುವುದು, ವಿಶೇಷವಾಗಿ ನಿಪುಣತನದ ಕೆಲಸವಾಗಿದೆ. ವಿವಿಧ ಉತ್ಪಾದಕರ ಮಶಿನ್ ಗಳ ಸ್ಥಿರವಾದ ಅಂಕೆ-ಸಂಖ್ಯೆಗಳು ಬೇರೆಬೇರೆ ಇರುತ್ತವೆ ಮತ್ತು ಹಲವಾರು ಅನುಭವವುಳ್ಳ ಸೆಟರ್ ಗಳೇ ಈ ಗುಣಾಕಾರವನ್ನು ಹುಡುಕುವಲ್ಲಿ ಸಮರ್ಥರಾಗಿರುತ್ತಾರೆ. ಜಟಿಲವಾದ ಕೈನಾಮೆಟಿಕ್ಸ್ ಮತ್ತು ಡ್ರೈವಿಂಗ್ ಯಂತ್ರಣೆಯಲ್ಲಿರುವ ಯಂತ್ರಭಾಗಗಳ ಬೃಹತ್ ಸಂಖ್ಯೆಯಿಂದ ಮೆಕ್ಯಾನಿಕಲ್ ಭಾಗಗಳ ಸವೆತ ಮತ್ತು ನಷ್ಟವಾಗುವ ಪ್ರಮಾಣವು ಹೆಚ್ಚು ಇರುತ್ತದೆ. ಇದರಿಂದಾಗಿ ಮಶಿನ್ ಹಾಳಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಸಾಂಪ್ರದಾಯಿಕವಾದ ಮಶಿನ್ ನಲ್ಲಾಗುವ ಆಗುವ ಹಾಬಿಂಗ್ ವೀಕ್ಷಿಸಲು ಪಕ್ಕದಲ್ಲಿರುವ QR ಕೋಡನ್ನು ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
 
 
ಸಿ.ಎನ್.ಸಿ. ಗಿಯರ್ ಹಾಬಿಂಗ್ ಮಶಿನ್ ನಲ್ಲಿ ಸಾಂಪ್ರದಾಯಿಕವಾದ ಮಶಿನ್ ನ ಈ ಎಲ್ಲ ಕೊರತೆಗಳನ್ನು ನೀಗಿಸಲಾಗಿದೆ. ಸಿ.ಎನ್.ಸಿ. ಗಿಯರ್ ಹಾಬಿಂಗ್ ಮಶಿನ್ ನಲ್ಲಿ ಎಲ್ಲ ಅಕ್ಷಗಳಿಗೋಸ್ಕರ ಹಾಗೆಯೇ ವರ್ಕ್ ಸ್ಪಿಂಡಲ್ ಮತ್ತು ಕಟರ್ ಸ್ಪಿಂಡಲ್ ಗಳಿಗೋಸ್ಕರವೂ ನೇರವಾಗಿ ಡ್ರೈವ್ ಗಳಿವೆ.
ಕಟರ್ ಸ್ಪಿಂಡಲ್ ಮತ್ತು ವರ್ಕ್ ಸ್ಪಿಂಡಲ್ ನಲ್ಲಿರುವ ಗುಣಾಕಾರ ಸಿ.ಎನ್.ಸಿ.ಯಲ್ಲಿರುವ ಇಲೆಕ್ಟ್ರಾನಿಕ್ ಗಿಯರ್ ಬಾಕ್ಸ್ (EGB) ಎಂಬ ಸಾಮಗ್ರಿಯ ಮೂಲಕ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ಇಂಡೆಕ್ಸ್ ಮತ್ತು ಡಿಫರನ್ಶಿಯಲ್ ಗಿಯರ್ ಯಂತ್ರಣೆಯ ಆವಶ್ಯಕತೆಯು ಇಲ್ಲದಂತಾಗುತ್ತದೆ. ಸಿ.ಎನ್.ಸಿ. ಮಶಿನ್ ನಲ್ಲಿ ಆಗುವ ಹಾಬಿಂಗ್ ನ ವೀಕ್ಷಿಸಲು ಪಕ್ಕದಲ್ಲಿ ನೀಡಿರುವ QR ಕೋಡನ್ನು ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.
 
 
ಪ್ರತಿಯೊಂದು ಡ್ರೈವ್ ಅಕ್ಷಕ್ಕೋಸ್ಕರ ಸ್ವತಂತ್ರ ಮತ್ತು ನೇರವಾದ ಡ್ರೈವ್ ಇರುವುದರಿಂದ ಕ್ಲಚ್ ನ ಆವಶ್ಯಕತೆ ಇರುವುದಿಲ್ಲ. ಚಿತ್ರ ಕ್ರ. 2 ರಲ್ಲಿ ಸಿ.ಎನ್.ಸಿ. ಹಾಬಿಂಗ್ ಮಶಿನ್ ನ ಕಾಲ್ಪನಿಕ ಚಿತ್ರವನ್ನು ತೋರಿಸಲಾಗಿದೆ.
ಸಾಂಪ್ರದಾಯಿಕ ಮಶಿನ್ ನ ಜಾಗದಲ್ಲಿ ಸಿ.ಎನ್.ಸಿ. ಗಿಯರ್ ಹಾಬರ್ ಬಳಸುವುದರಿಂದ ಲಭಿಸುವ ಲಾಭಗಳ ಕುರಿತಾದ ಮಾಹಿತಿಯನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
ಗುಣಮಟ್ಟ, ಉತ್ಪಾದಕತೆ, ನಿರ್ವಹಣೆ ಮತ್ತು ಆಪರೇಶನ್ ಸಹಜವಾಗಿ ಮಾಡುವ ಕುರಿತಾದ ಎಲ್ಲ ಲಾಭಗಳು ಮತ್ತು ನಿಪುಣ ಕೆಲಸಗಾರರ ಆವಶ್ಯಕತೆ ಇಲ್ಲದಿರುವುದು, ಇದರ ಹೊರತಾಗಿ ಆಗುವ ಲಾಭದ ಕಡೆಗೆ ಗಮನ ಹರಿಸಿದಾಗ ಎಲ್ಲ ಗಿಯರ್ ಉತ್ಪಾದಕರಿಗೆ ಸಿ.ಎನ್.ಸಿ. ಗಿಯರ್ ಹಾಬಿಂಗ್ ಮಶಿನ್ ಗಳೇ ಬೇಕಾಗಿರುತ್ತವೆ. ಆದರೆ ಒಂದು ಹೊಸದಾದ ಸಿ.ಎನ್.ಸಿ. ಹಾಬಿಂಗ್ ಮಶಿನ್ ಖರೀದಿಸಲು ಬೃಹತ್ ಪ್ರಮಾಣದ ಬಂಡವಾಳವನ್ನು ಹೂಡಬೇಕಾಗುತ್ತದೆ.
ಬಂಡವಾಳ ಹೂಡಿದಲ್ಲಿ ಸಿಗುವ ಮರುಪಾವತಿ (ROI) ಮತ್ತು ಬ್ರೇಕ್ ಇವನ್ ಕಾಸ್ಟ್ ಗಮನಿಸಿದಲ್ಲಿ, ತುಂಬಾ ಕಡಿಮೆ OEM ಮತ್ತು MSME ಇದರ ವ್ಯವಹಾರದ ಪರ್ಯಾಯದ ಕುರಿತು ವಿಚಾರ ಮಾಡುತ್ತಾರೆ. ಇದರ ಹೊರತಾಗಿ ಅದು ಮಾರುಕಟ್ಟೆಯಲ್ಲಿ ವಿಶ್ವಾಸವುಳ್ಳ, ಹೆಸರಾಂತ ಕಂಪನಿಗಳಿಂದ ಅದರ ಹಳೆಯ ಮಶಿನ್ ಸಾಂಪ್ರದಾಯಿಕ ಮಶಿನ್, ಸಿ.ಎನ್.ಸಿ. ಮಶಿನ್ ನಲ್ಲಿ ರೂಪಾಂತರಿಸುತ್ತಾರೆ. ಭಾರತದಲ್ಲಿ ಸಾಂಪ್ರದಾಯಿಕ ಹಾಬಿಂಗ್, ಶೇಪಿಂಗ್ ಮತ್ತು ಶೇವಿಂಗ್ ಮಶಿನ್ ನಲ್ಲಿ ರೀಕಂಡಿಶನಿಂಗ್, ರೆಟ್ರೊಫಿಟಿಂಗ್ ಮತ್ತು ಮತ್ತೆ ರಚಿಸಿ ಅವರಿಗೆ ಸಿ.ಎನ್.ಸಿ ಮಶಿನ್ ನಲ್ಲಿ ರೂಪಾಂತರಿಸುವ ಪರಿಸ್ಥಿತಿ ಉಂಟಾದಾಗ ಆರ್ಕ್ ಮ್ಯಾಕ್ ಟೆಕ್ ಇದು ಎಲ್ಲದರಲ್ಲಿಯೂ ವಿಶ್ವಾಸಾರ್ಹವಾದ ಬ್ರಾಂಡ್ ನ ಹೆಸರು ತುಂಬಾ ಮುಂದೆ ಇದೆ.

ಪ್ರಾರಂಭದ ಕೆಲವು ವರ್ಷಗಳು
ಆರ್ಕ್ ಮ್ಯಾಕ್ ಟೆಕ್ ನ ಪ್ರವಾಸವು ಸುಮಾರು 15 ವರ್ಷಗಳ ಹಿಂದೆ ಪ್ರಾರಂಭವಾಯಿತು. 2005 ರಲ್ಲಿ ಆರ್ಕ್ ಮ್ಯಾಕ್ ಟೆಕ್ ನ ಸಂಸ್ಥಾಪಕರು ಅವರ ತಾಂತ್ರಿಕ ವಿಚಾರಗಳಿಗೆ ಸವಾಲುಗಳನ್ನು ಒಡ್ಡಬಹುದು ಮತ್ತು ಉದ್ಯಮಗಳ ಆಯಾಸವನ್ನು ನೀಗಿಸುವಂತಹ ಒಂದು ವ್ಯಾವಹಾರಿಕವಾದ ಮಾಡೆಲ್ ನ್ನು ಸಂಶೋಧಿಸುತ್ತಿದ್ದರು. ಗಿಯರ್ ಪ್ರಕ್ರಿಯೆಗೆ ಮಶಿನ್ ನಲ್ಲಿ ಕೆಲಸ ಮಾಡುವಲ್ಲಿ ಅವರಿಗೆ ಆಳವಾದ ಅನುಭವವಿತ್ತು. ಹೆಚ್ಚಾಗಿ ಗಿಯರ್ ಉತ್ಪಾದಕರಿಗೆ ಸಾಂಪ್ರದಾಯಿಕ ಮಶಿನ್ ಬಳಸುವಾಗ ಕಡಿಮೆ ಉತ್ಪಾದಕತೆ, ಗುಣಮಟ್ಟದ ಸಮಸ್ಯೆಗಳು ಮತ್ತು ನಿರ್ವಹಣೆಯಲ್ಲಿ ಅಡಚಣೆಗಳು ಇಂತಹ ಅನೇಕ ಅಂಶಗಳು ಅವರು ಮಾಡಿರುವ ಸಮೀಕ್ಷೆಯಲ್ಲಿ ಗಮನಕ್ಕೆ ಬಂದವು. ಸಾಂಪ್ರದಾಯಿಕವಾದ ಮಶಿನ್ ಗಳಲ್ಲಿ ಕಟಿಂಗ್ ಸ್ಪೀಡ್ ನಲ್ಲಿ ಬದಲಾವಣೆಗಳನ್ನು ಮಾಡಲು ಜಟಿಲವಾದ ಅಂಕೆ-ಸಂಖ್ಯೆಗಳ ಮತ್ತು ಚೇಂಜ್ ಗಿಯರ್ ಯಂತ್ರಣೆಯ ತಿಳುವಳಿಕೆ ಇವುಗಳೊಂದಿಗೆ ನಿಪುಣ ಆಪರೇಟರ್ ರ ಆವಶ್ಯಕತೆಯೂ ಇರುತ್ತದೆ. ಹಾಗೆಯೇ ಯಾಂತ್ರಿಕ ಕ್ಲಚ್, ಬ್ರೇಕ್ ಮತ್ತು ವರ್ಟಿಕಲ್ ಅಕ್ಷಗಳಿಗೋಸ್ಕರ ಸೂಕ್ತವಾದ ವ್ಯವಸ್ಥೆ ಇರುವ ಫ್ಲೈ ವೀಲ್ ಇರುತ್ತದೆ. ಈ ಎಲ್ಲ ಘಟಕಗಳಿಗೆ ತುಂಬಾ ಮುತುವರ್ಜಿಯನ್ನು ವಹಿಸಿ ನಿರ್ವಹಣೆಯನ್ನು ಮಾಡಬೇಕಾಗುತ್ತದೆ.
ಅಲ್ಲದೇ ಬಳಕೆಗಾರರಿಗೆ ಮಶಿನ್ ನ ಆಪ್ಟಿಮೈಜ್ಡ್ ಬಳಕೆಯನ್ನು ಮಾಡುವುದು ತುಂಬಾ ಕಷ್ಟಕರವಾಗುತ್ತದೆ.
 

4_1  H x W: 0 x 
ಆರ್ಕ್ ಮ್ಯಾಕ್ ಟೆಕ್ ಇವರು ಗುಣಮಟ್ಟ ಮತ್ತು ಉತ್ಪಾದಕತೆ ಇವೆರಡರ ಕುರಿತು ಯಾವುದೇ ರೀತಿಯ ಹೊಂದಾಣಿಕೆಯನ್ನು ಮಾಡದೇ ಹೊಸ ಸಿ.ಎನ್.ಸಿ. ಮಶಿನ್ ನ ಎಲ್ಲ ವೈಶಿಷ್ಟ್ಯಗಳನ್ನು ಉಪಲಬ್ಧ ಮಾಡಿ ಸದ್ಯಕ್ಕೆ ಗ್ರಾಹಕರಲ್ಲಿರುವ ಸಾಂಪ್ರದಾಯಿಕವಾದ ಮಶಿನ್ ಕಸ್ಟಮೈಜ್ಡ್ ಮಾಡುವುದನ್ನು ನಿರ್ಧರಿಸಿದರು. ಯಾವುದೇ ಸವಾಲುಗಳನ್ನು ಎದುರಿಸಲು ಸಮರ್ಥವಾದ ತಾಂತ್ರಿಕ ತಂಡದೊಂದಿಗೆ, ಆರ್ಕ್ ಮ್ಯಾಕ್ ಟೆಕ್ ಇವರು ಸಾಂಪ್ರದಾಯಿಕ ಮಶಿನ್ ನನ್ನು 3 ಅಕ್ಷೀಯ ಮತ್ತು 5/6 ಅಕ್ಷೀಯ ಸಿ.ಎನ್.ಸಿ. ಮಶಿನ್ ಗೆ ಸಫಲವಾಗಿ ರೂಪಾಂತರಿಸಿದರು.
5/6 ಅಕ್ಷಗಳುಳ್ಳ ಸಿ.ಎನ್.ಸಿ. ಮಶಿನ್ DIN 7 ಶ್ರೇಣಿಯ ಗುಣಮಟ್ಟದ ಕಾರ್ಯವಸ್ತುವನ್ನು ತಯಾರಿಸುವಲ್ಲಿ ಅರ್ಹವಾಗಿವೆ. ಅದು ಕೂಡಾ ಉಚ್ಚಮಟ್ಟದ ಉತ್ಪಾದಕತೆ ಮತ್ತು ಕನಿಷ್ಠ ನಿರ್ವಹಣೆಯೊಂದಿಗೆ. ಈ ಮಶಿನ್ ಬಳಸಲು ಸುಲಭ, ಹಾಗೆಯೇ ನಿರ್ವಹಣೆ ಇಲ್ಲದಂತಹದ್ದಾಗಿವೆ ಮತ್ತು ಡೆಶ್ ಬೋರ್ಡ್ ನಲ್ಲಿ ಕೇವಲ ಗಿಯರ್, ಟೂಲ್, ಯಂತ್ರಣೆಯ ವೇಗ ಮತ್ತು ಫೀಡ್ ರೇಟ್ ಇವುಗಳ (ಡಾಟಾ) ಸೇರಿಸಿ ಪಾರ್ಟ್ ಪ್ರೊಗ್ರಾಮ್ ಸ್ವಯಂಚಾಲಿತವಾಗಿ ನಿರ್ಮಿಸುವುದೂ ಸಾಧ್ಯವಿದೆ.

6_1  H x W: 0 x 
 
ಆರ್ಕ್ ಮ್ಯಾಕ್ ಟೆಕ್ ಇವರಿಂದ ಅಭಿವೃದ್ಧಿ ಪಡಿಸಿರುವ ಮಶಿನ್, ಹೊಸ ಮಶಿನ್ ನೊಂದಿಗೆ ತಕ್ಷಣ ಹೋಲಿಕೆಯನ್ನು ಮಾಡಲಾರಂಭಿಸಿದರು. ಈ ಮಶಿನ್ ತುಂಬಾ ಕಡಿಮೆ ಕಾಲಾವಧಿಯಲ್ಲಿ ಜನಪ್ರಿಯವಾಯಿತು. ಇದರ ಕಾರಣವೆಂದರೆ ಹಳೆಯ ಮಶಿನ್ ಯಾವುದೇ ಮಾಡೆಲ್ ಮತ್ತು ಸೈಜ್ ನಲ್ಲಿದ್ದರೂ ಕೂಡಾ ಕಸ್ಟಮೈಜ್ಡ್ ಮಾಡಬಹುದಾಗಿದೆ. ಅದರ ಬೆಲೆ ಕೂಡಾ ಹೊಸ ಮಶಿನ್ ನ ಹೋಲಿಕೆಯಲ್ಲಿ ಮೂರನೇ ಒಂದು ಪಟ್ಟು ಬೆಲೆಯಲ್ಲಿ. ಭಾರತದಲ್ಲಿ ದೊಡ್ಡ OEM ಕೂಡಾ ಈ ಪರ್ಯಾಯದ ಆಯ್ಕೆ ಮಾಡಲು ಪ್ರಾರಂಭಿಸಿದರು. ಆರ್ಕ್ ಮ್ಯಾಕ್ ಟೆಕ್ ನಿಂದ ಅಭಿವೃದ್ಧಿ ಮಾಡಿರುವ ಸಿ.ಎನ್.ಸಿ. ಮಶಿನ್ ಸಂಪೂರ್ಣ ವರ್ಕ್ ಶಾಪ್ ನಲ್ಲಿ ಕಾಲೂರಲು ಪ್ರಾರಂಭಿಸಿದರು. ಈ ಅಭಿವೃದ್ಧಿ ಪಡಿಸಿರುವ ಮಶಿನ್ ನಲ್ಲಿ ಉತ್ಪಾದಿಸಿರುವ ಗಿಯರ್ ಗಳ ಗುಣಮಟ್ಟದಿಂದಾಗಿ ಟೂಲಿಂಗ್ ನ ಬೆಲೆ ಮತ್ತು ಸೈಕಲ್ ಟೈಮ್ ಕಡಿಮೆಯಾಯಿತು. ಹಾಗೆಯೇ ಉತ್ಪಾದಕತೆ ಮತ್ತು ಲಾಭವೂ ಹೆಚ್ಚಾಯಿತು. ಯಾವುದೇ ಹೆಚ್ಚುವರಿ ಉಪಸಾಧನೆಗಳ ಹೊರತಾಗಿ ಟೇಪರ್ ಮತ್ತು ಕ್ರೌನಿಂಗ್ ಮಾಡುವುದು, ಇದೇ ಅಭಿವೃದ್ಧಿ ಮಾಡಿರುವ ಮಶಿನ್ ನ ಪ್ರಮುಖವಾದ ವೈಶಿಷ್ಟ್ಯವಾಗಿದೆ.

ವೈಶಿಷ್ಟ್ಯಗಳು
⦁ ಗ್ರಾಹಕರಿಗೆ ಅನುಗುಣವಾಗಿ (ಕಸ್ಟಮೈಜ್ಡ್) ವೈಶಿಷ್ಟ್ಯಗಳು.
⦁ 5/6 ಅಕ್ಷೀಯ ಸಿ.ಎನ್.ಸಿ.ಯಲ್ಲಿ ರೂಪಾಂತರಿಸಲು ಬೇಕಾಗುವ ಸಮಯ 4 ತಿಂಗಳುಗಳಾಗಿದೆ. ಮಶಿನ್ ನ ವ್ಯವಸ್ಥೆ, ಅಪ್ ಗ್ರೆಡೇಶನ್, ಪರೀಕ್ಷೆ ಮತ್ತು ಗ್ರಾಹಕರಿಗೆ ಮಶಿನ್ ಕಳುಹಿಸುವುದು ಇವೆಲ್ಲವೂ ಒಳಗೊಂಡಿರುವ ಗ್ರಾಹಕರಿಗೆ ಬೇಕಾದಂತೆ ಉಪಾಯಗಳಿರುವ ಸಂಪೂರ್ಣವಾದ ಪ್ಯಾಕೇಜ್.

7_1  H x W: 0 x 
 
ಮೂಲ ಮಶಿನ್ ನಲ್ಲಿ ಬುಶ್ ಸ್ಪಿಂಡಲ್ ನ ವ್ಯವಸ್ಥೆ ಇರುವ ಸಾಧ್ಯತೆ ಇದೆ. ಬುಶ್ ಸ್ಪಿಂಡಲ್ ಗೆ ನಿರಂತರವಾಗಿ ಲುಬ್ರಿಕೇಶನ್ ಬೇಕಾಗಿರುತ್ತದೆ. ಸ್ಪಿಂಡಲ್ ನಲ್ಲಿರುವ ಬುಶ್ ಹಳೆಯದಾದಲ್ಲಿ ಸವೆಯುತ್ತವೆ, ಇದರ ಪರಿಣಾಮದಿಂದಾಗಿ ಕಟಿಂಗ್ ಟೂಲ್ ನಲ್ಲಿ ರನ್ ಔಟ್ ಬರಲಾರಂಭಿಸುತ್ತವೆ. ಉಚ್ಚಮಟ್ಟದ ಆರ್.ಪಿ.ಎಮ್. ನಲ್ಲಿ ಬುಶ್ ಸ್ಪಿಂಡಲ್ ಬಿಸಿಯಾಗುತ್ತದೆ. ಆದ್ದರಿಂದ ಯಂತ್ರಣೆಯ ವೇಗದಲ್ಲಿ ಮಿತಿ ಇರುತ್ತದೆ. ಅಭಿವೃದ್ಧಿ ಪಡಿಸಿರುವ ಮಶಿನ್ ನಲ್ಲಿ ಅದರ ಜಾಗದಲ್ಲಿ ಬೇರಿಂಗ್ ಸ್ಪಿಂಡಲ್ ಇರುತ್ತದೆ, ಇದು ಇದರಲ್ಲಿ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಮುತುವರ್ಜಿ ವಹಿಸಬಲ್ಲದು. ಸ್ಪಿಂಡಲ್ ನ ವೇಗ 1000 ಆರ್.ಪಿ.ಎಮ್. ತನಕ ಹೆಚ್ಚಿಸಬಹುದಾಗಿದೆ. ಇದು ಮುಂಚೆ ಗರಿಷ್ಠ 400 ಆರ್.ಪಿ.ಎಮ್.ತನಕ ಇತ್ತು.
⦁ ಹಾಬಿಂಗ್ ಮಶಿನ್ ಗೋಸ್ಕರ ಡಿಸೈನ್ ಮಾಡಿರುವ ಹಾಬ್ ಹೆಡ್ (ಚಿತ್ರ ಕ್ರ. 4).
⦁ ಸ್ಪಿಂಡಲ್ ನಲ್ಲಿ ಮ್ಯಾನ್ಯುವಲ್ ಕ್ಲಾಂಪಿಂಗ್ ಗೋಸ್ಕರ ಮೋರ್ಸ್ ಟೇಪರ್ ಬೋರ್, ಹಾಗೆಯೇ ವಿಶಿಷ್ಟ ಗ್ರಾಹಕರ ಆವಶ್ಯಕತೆಗೆ ತಕ್ಕಂತೆ ಕಟರ್ ಆರ್ಬರ್ ನ ಹೈಡ್ರಾಲಿಕ್ ಕ್ಲಾಂಪಿಂಗ್ ಗೋಸ್ಕರ ISO ಟೈಪ್ ಬೋರ್ ಟೇಪರ್ ಇಂತಹ ಎರಡು ವ್ಯವಸ್ಥೆಗಳಿವೆ.
⦁ ಕಟರ್ ಆರ್ಬರ್ ಕ್ಲಾಂಪಿಂಗ್ ನ ವ್ಯವಸ್ಥೆ ಮೋರ್ಸ್ ಟೇಪರ್ ನಿಂದ ISO ಹೈಡ್ರಾಲಿಕ್ ನ ವಿಧದಲ್ಲಿ ಬದಲಾಯಿಸುವುದು ಸಾಧ್ಯ.
ಮ್ಯಾನ್ಯುವಲ್ ಸ್ವಿವೆಲಿಂಗ್ ಅಕ್ಷ ಸಿ.ಎನ್.ಸಿ. ಅಕ್ಷದಲ್ಲಿ ಬದಲಾಯಿಸಲಾಗುತ್ತದೆ. ಸಿ.ಎನ್.ಸಿ. ಮೂಲಕ ಸ್ವಿವೆಲಿಂಗ್ ಅಕ್ಷದ ಸುತ್ತುವಿಕೆ ಸ್ವಯಂಚಾಲಿತ ಮಾಡಿದ್ದರಿಂದ ಹಾಬ್ ಕೋನ ಸೆಟ್ ಮಾಡುವಂತಹ ಕ್ಲಿಷ್ಟವಾದ ಪ್ರಕ್ರಿಯೆಯು ಇಲ್ಲದಂತಾಗುತ್ತದೆ.


8_1  H x W: 0 x 
 
⦁ ರೇಡಿಯಲ್ ಮತ್ತು ಎಕ್ಸಿಸ್ ನಂತಹ ಹೈಡ್ರಾಲಿಕ್ ಅಕ್ಷಗಳು ಸಿ.ಎನ್.ಸಿ. ಅಕ್ಷಗಳಲ್ಲಿ ರೂಪಾಂತರಿಸಲ್ಪಡುತ್ತವೆ. ಇದರಿಂದಾಗಿ ಹೊಸ ಮತ್ತು ಅಭಿವೃದ್ಧಿ ಮಾಡಿರುವ ಮಶಿನ್ ನಲ್ಲಿ ರೇಪಿಡ್ ಹೆಚ್ಚಾಗುತ್ತದೆ. 
ಒಂದು ವೇಳೆ ರೋಟರಿ ಟೇಬಲ್ ವರ್ಮ್ ವೀಲ್ ನ ಬ್ಯಾಕ್ ಲೇಶ್ ಸಮಾನವಿಲ್ಲದಿದ್ದಲ್ಲಿ ಮತ್ತು ಸಾಂಪ್ರದಾಯಿಕ ಮಶಿನ್ ನ ನಿಯಂತ್ರಣೆಯಲ್ಲಿ ಇರದಿದ್ದಲ್ಲಿ ವರ್ಮ್ ವೀಲ್ ಬದಲಾಯಿಸಲ್ಪಡುತ್ತದೆ. ವರ್ಮ್ ವೀಲ್ ನ ಸೆಂಟರ್ ದೂರ, ವರ್ಮ್ ಶಾಫ್ಟ್, ವರ್ಮ್ ವೀಲ್ ಸೆಂಟರ್ ನ ಎತ್ತರ, ವರ್ಮ್ ವೀಲ್ ನ ಲೋಹಶಾಸ್ತ್ರ ಮತ್ತು ವರ್ಮ್ ಶಾಫ್ಟ್ ಇಂತಹ ಅನೇಕ ಡಿಸೈನ್ ಗಳ ಪ್ಯಾರಾಮೀಟರ್ ತಯಾರಿಸುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಲಾಯಿತು. ಆರ್ಕ್ ಮ್ಯಾಕ್ ಟೆಕ್ ಇವರು ವರ್ಮ್ ವೀಲ್ ವರ್ಮ್ ಶಾಫ್ಟ್ ನ ಡಿಸೈನ್ ಮಾಡಲಾಯಿತು. ನಂತರ ಆಂತರರಾಷ್ಟ್ರೀಯ ಪೂರೈಕೆಗಾರರಿಂದ ತಯಾರಿಲಾಯಿತು. ಅಲ್ಲದೇ ಮಶಿನ್ ನಲ್ಲಿ ಸಫಲವಾಗಿ ಅಸೆಂಬಲ್ ಮಾಡಲಾಯಿತು. ವರ್ಮ್ ವೀಲ್ ಹಾಗೆಯೇ ಬ್ಯಾಕ್ ಲ್ಯಾಶ್ ಸೆಟಿಂಗ್ ನಲ್ಲಿ ಬ್ಲ್ಯೂ ಮ್ಯಾಚಿಂಗ್ ಪಡೆಯಲು ಸಂಪೂರ್ಣವಾದ ಪ್ರಕ್ರಿಯೆಯ ಟೇಬಲ್ ವರ್ಮ್ ವೀಲ್ ಅಸೆಂಬ್ಲಿಯೂ ತುಂಬಾ ಮಹತ್ವದ್ದಾಗಿದೆ. ಆರ್ಕ್ ಮ್ಯಾಕ್ ಟೆಕ್ ಇವರು ಅವರ ನಿರಂತರವಾದ ಪ್ರಯತ್ನಗಳಿಂದಾಗಿ ಮತ್ತು ಶ್ರಮದಿಂದಾಗಿ ಈ ಕುರಿತು ವಿಸ್ತಾರವಾಗಿ ತಿಳಿದುಕೊಂಡರು.
⦁ ತಮ್ಮ ದೇಶದಲ್ಲಿ ಅಭಿವೃದ್ಧಿ ಪಡಿಸಿರುವ ಮೆನ್ಯು ಡ್ರಿವನ್ ಪ್ರೊಗ್ರಾಮಿಂಗ್. ಬಳಕೆಗಾರರಿಗೆ ಕನಿಷ್ಠ ಪ್ರಮಾಣದಲ್ಲಿ ಹಸ್ತಕ್ಷೇಪ ಮಾಡಿ ಮಶಿನ್ ನಡೆಯಬೇಕಾಗುತ್ತದೆ.

10_1  H x W: 0  
 
 

9_1  H x W: 0 x 
⦁ ಆಟೊಲೋಡರ್, ಸಂಪೂರ್ಣ ಮಶಿನ್ ಗಾರ್ಡಿಂಗ್, ಫಿಕ್ಸ್ಚರ್, ರಿವಾಲ್ವಿಂಗ್ ಸೆಂಟರ್, ಫಿಕ್ಸ್ಚರ್ ಕ್ಲಾಂಪಿಂಗ್ ಯುನಿಟ್, ಡಿಬರಿಂಗ್ ಯುನಿಟ್ ಮತ್ತು ಹಾಬ್ ಆರ್ಬರ್ ಇತ್ಯಾದಿ ವೈಶಿಷ್ಟ್ಯಗಳು ಗ್ರಾಹಕರ ಆವಶ್ಯಕತೆಗೆ ಅನುಸಾರವಾಗಿ ಮಶಿನ್ ನೊಂದಿಗೆ ಸಂಪೂರ್ಣ ಪ್ಯಾಕೇಜ್ ನಲ್ಲಿ ಕೂಡಿರುತ್ತವೆ.
⦁ IoT 4.0 ಇದು ಅತ್ಯಾಧುನಿಕ ಮತ್ತು ಜನರ ಮೆಚ್ಚುಗೆಯನ್ನು ಪಡೆಯುವ ಒಂದೇ ಒಂದು ಹೊಸದಾದ ಅಭಿವೃದ್ಧಿಯಾಗಿದೆ ಮತ್ತು ಇದರ ಕುರಿತು ತುಂಬಾ ಗ್ರಾಹಕರು ಆಸಕ್ತಿವನ್ನು ವಹಿಸುತ್ತಾರೆ.

ಗ್ರಾಹಕರ ಪ್ರತಿಕ್ರಿಯೆಗಳು
ಆರ್ಕ್ ಮ್ಯಾಕ್ ಟೆಕ್ ಇವರು ಗಿಯರ್ ಪ್ರೊಸೆಸಿಂಗ್ ಮಶಿನ್ ಗೆ ಸಂಬಂಧಪಟ್ಟ ಎಲ್ಲ ರೀತಿಯ ರೀ-ಇಂಜಿನಿಯರಿಂಗ್ ಮಾಡುತ್ತಾರೆ. ಭಾರತದಲ್ಲಿ ಒಬ್ಬ ಹೆಸರಾಂತ OEM ಗ್ರಾಹಕರಿಗೆ ಆರ್ಕ್ ಮ್ಯಾಕ್ ಟೆಕ್ ನ 25 ಕ್ಕಿಂತ ಹೆಚ್ಚು ಹಾಬಿಂಗ್ ಮಶಿನ್ ಗಳನ್ನು ರಿ-ಅಸೆಂಬ್ಲಿಂಗ್ ಮಾಡುವಾಗ ಹಳೆಯ ವರ್ಮ್ ವೀಲ್ ಗಳನ್ನು ಬದಲಾಯಿಸಿ ಕೊಟ್ಟೆವು. ಈ ಬದಲಾವಣೆಯ ನಂತರ ಆ OEM ಗೆ DIN 7 ಗುಣಮಟ್ಟದಲ್ಲಿ ಅಳವಡಿಸಬಲ್ಲ ಕಾರ್ಯವಸ್ತುವನ್ನು ಯೋಗ್ಯ ಬೆಲೆಯಲ್ಲಿ ತಯಾರಿಸಲಾಯಿತು. ಇದರಿಂದಾಗಿ ಅವರ ಉತ್ಪಾದನೆಯ ಸಾಮರ್ಥ್ಯವು ಹೆಚ್ಚಾಯಿತು ಮತ್ತು ಆ ಕಂಪನಿಯ ವ್ಯವಹಾರವೂ ಜಾಣತನದಿಂದ ಮಾಡಲಾರಂಭಿಸಿದರು. ಈ OEM ಬುಲ್ ಗಿಯರ್ ಗೋಸ್ಕರ 10 ಮೊಡ್ಯುಲ್ ಗಳ ಸಾಂಪ್ರದಾಯಿಕವಾದ ಮಶಿನ್ ಬಳಸುತ್ತಿದ್ದರು. ಇದರಲ್ಲಿ ಒಂದು ಮಶಿನ್ ಆಟೊಲೋಡರ್ ನ ಪೂರ್ವಸಿದ್ಧತೆಯ ಪ್ರಕಾರ 6 ಅಕ್ಷೀಯ ಸಿ.ಎನ್.ಸಿ.ಯಲ್ಲಿ ರೂಪಾಂತರಿಸಲ್ಪಟ್ಟಿತ್ತು. ಹೈಡ್ರಾಲಿಕ್ ಫಿಕ್ಸ್ಚರ್ ಮತ್ತು ಸ್ವಯಂಚಾಲಿತ ಸ್ವಿವೆಲಿಂಗ್ ಅಕ್ಷದೊಂದಿಗೆ ಕಾರ್ಯವಸ್ತು ಕ್ಲಾಂಪಿಂಗ್ ಯುನಿಟ್ ನಿಂದಾಗಿ ಕೆಲಸದಲ್ಲಿ ಸುಲಭತೆ ವೃದ್ಧಿಸಿತು ಮತ್ತು ಉತ್ಪಾದನೆಯೂ ಎರಡುವರೆ ಪಟ್ಟು ಜಾಸ್ತಿಯಾಯಿತು.
ಗ್ರಾಹಕರಿಗೆ ಎದುರಿಸಬೇಕಾದ ಸಮಸ್ಯೆಗಳನ್ನು ಮತ್ತು ಆರ್ಕ್ ಮ್ಯಾಕ್ ಟೆಕ್ ಮೂಲಕ ಯೋಜಿಸಿರುವ ಮತ್ತು ಸಾಧಿಸಿರುವ ಅಂಶಗಳನ್ನು ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿದೆ.

10_1  H x W: 0
 
ಗ್ರಾಹಕರಿಗೆ ಲಭಿಸುವ ಲಾಭಗಳು
ಅಭಿವೃದ್ಧಿ ಮಾಡಿರುವ ಮಶಿನ್ ಗಳು ನಿರ್ವಹಣೆ ರಹಿತ ಮತ್ತು ನಡೆಸಲು ಸುಲಭವಾಗಿವೆ. ಸ್ಪಿಂಡಲ್ ಯಂತ್ರಣೆಯ ವೇಗ ಹೆಚ್ಚಾಗಿದ್ದರಿಂದ ಮಶಿನ್ ಇಂತಹ ಯಂತ್ರಣೆಯ ವೇಗ ಮತ್ತು ಫೀಡ್ ರೇಟ್ ನಲ್ಲಿ ನಡೆಸುವುದು ಸಾಧ್ಯವಾಯಿತು. ಇದರಿಂದಾಗಿ ಅನೇಕ ಕಾರ್ಯವಸ್ತುಗಳಿಗೆ ಬೇಕಾಗುವ ಸೈಕಲ್ ಟೈಮ್ ಈ ಹಿಂದಿನ ಹೋಲಿಕೆಯಲ್ಲಿ ಮೂರರಿಂದ ನಾಲ್ಕು ಪಟ್ಟು ಕಡಿಮೆ ಆಯಿತು. ಉತ್ಪಾದಕತೆಯಲ್ಲಿ ಗಮನಾರ್ಹವಾದ ಹೆಚ್ಚಳವೂ ಕಂಡುಬಂತು. ಇದನ್ನು ಹೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳಲು ಕೋಷ್ಟಕ ಕ್ರ. 3 ರಲ್ಲಿ ನೀಡಿರುವ ಅಂಶಗಳನ್ನು ನೋಡಿರಿ.

12_1  H x W: 0  
 
ಆರ್ಬರ್ ನ ಕ್ಲಾಂಪಿಂಗ್ ಮತ್ತು ಟೇಲ್ ಸ್ಟಾಕ್ ನ ಚಟುವಟಿಕೆಗಳು ಸ್ವಯಂಚಾಲಿತವಾಗಿರುವುದರಿಂದ ಸೆಟಿಂಗ್ ಗೆ ಬೇಕಾಗುವ ಕಾಲಾವಧಿ ಗಮನಾರ್ಹವಾಗಿ ಕಡಿಮೆಯಾಯಿತು. ಇದರಿಂದಾಗಿ ಉತ್ಪಾದಕತೆಯೂ ವೃದ್ಧಿಸಿತು. ಟ್ಯಾಂಜೆನ್ಶಿಯಲ್ ಅಕ್ಷದ ಸ್ವಯಂಚಾಲಿತ ಚಟುವಟಿಕೆಗಳಿಂದಾಗಿ ಕಟರ್ ಹಾಬ್ ನ ಸವೆತವು ಒಂದೇ ರೀತಿಯಲ್ಲಾಯಿತು. ಇದರಿಂದಾಗಿ ಟೂಲ್ ನ ಬಾಳಿಕೆಯಲ್ಲಿ ಹೆಚ್ಚಳವಾಯಿತು. ಬಳಸಲು ಸುಲಭವಾದ ಮೆನ್ಯು ಡ್ರಿವನ್ ಪ್ರೊಗ್ರಾಮಿಂಗ್ ಮತ್ತು ಮಶಿನ್ ನ ದೃಢವಾದ ಕಟ್ಚುವಿಕೆ ಇವುಗಳಿಂದಾಗಿ ಮಶಿನ್ ತುಂಬಾ ಸಹಜವಾಗಿ ನಡೆಯಲಾರಂಭಿಸಿತು. ಗ್ರಾಹಕರಿಗೆ ಸಿ.ಎನ್.ಸಿ. ಮಶಿನ್ ನಿಂದಾಗಿ ಸಾಕಷ್ಟು ಹೆಚ್ಚು ಪ್ರಮಾಣದಲ್ಲಿ ಲಾಭವಾಯಿತು ಮತ್ತು ಅದು ಕೂಡಾ ಹೊಸ ಸಿ.ಎನ್.ಸಿ. ಮಶಿನ್ ನ ಮೂರನೇ ಒಂದು ಪಟ್ಟು ಕಡಿಮೆ ಬೆಲೆಯಲ್ಲಿ. ಈ ರೀತಿಯಲ್ಲಿ ಜಾಗತಿಕ ಮಟ್ಟದ ಉತ್ಪಾದನೆಗಳನ್ನು ಯೋಗ್ಯವಾದ ಬೆಲೆಯಲ್ಲಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಆಶ್ವಾಸನೆಯನ್ನಿಟ್ಟುಕೊಂಡು ತಯಾರಿಸುವುದು ಸಾಧ್ಯವಾಗಿದ್ದರಿಂದ ಗ್ರಾಹಕರಿಗೆ ಅವರು ಖರ್ಚು ಮಾಡಿರುವ ದುಡ್ಡಿನ ಸಂಪೂರ್ಣವಾದ ಮರುಪಾವತಿ ಸಿಕ್ಕಿದ್ದರಿಂದ ಅವರೂ ಸಂತುಷ್ಟರಾದರು.

 
 
 

10_1  H x W: 0  
 ಅಮಿತ್ ಕರ್ಣ
 ವ್ಯವಸ್ಥಾಪಕರು, ಉತ್ಪಾದನೆ ಮತ್ತು ಅಸೆಂಬ್ಲಿ
 ಆರ್ಕ್ ಮ್ಯಾಕ್ ಟೆಕ್ ಪ್ರೈ.ಲಿ. 
 9527160212
 [email protected]
ಅಮಿತ್ ಕರ್ಣ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದು, ಆರ್ಕ್ ಮ್ಯಾಕ್ ಟೆಕ್ ಪ್ರೈ. ಲಿ. ಕಂಪನಿಯ ಉತ್ಪಾದನೆ ಮತ್ತು ಅಸೆಂಬ್ಲಿ ವಿಭಾಗದ ವ್ಯವಸ್ಥಾಪಕರಾಗಿದ್ದಾರೆ. ಅವರಿಗೆ ಈ ಕ್ಷೇತ್ರದಲ್ಲಿ 9 ವರ್ಷಗಳ ಅನುಭವವಿದೆ.
@@AUTHORINFO_V1@@