ಲೋಹಕಾರ್ಯದ ಹಿಂದಿನ ತಿಂಗಳ ಸಂಚಿಕೆಯಲ್ಲಿ ಇಂಡೆಕ್ಸಿಂಗ್ ನ ವಿಧಗಳ ಡ್ರಿಲ್ ಜಿಗ್ ಹೇಗೆ ಕೆಲಸ ನಿರ್ವಹಿಸುತ್ತದೆ, ಎಂಬುದನ್ನು ತಿಳಿದುಕೊಂಡೆವು. ಈ ರೀತಿಯ ಜಿಗ್ ನ ವೈಶಿಷ್ಟ್ಯಗಳನ್ನು ಈ ಮುಂದೆ ನೀಡಲಾಗಿದೆ.
1. ಕಾರ್ಯವಸ್ತುವಿನಲ್ಲಿ ಮಾಡಬೇಕಾಗಿರುವ ಎಲ್ಲ ರಂಧ್ರಗಳನ್ನು ಒಂದೇ ಸೆಟಿಂಗ್ ನಲ್ಲಿ (ವಸ್ತುಗಳನ್ನು ತೆಗೆಯದೇ ಮತ್ತು ಅಳವಡಿಸದೇ) ಮಾಡಿದ್ದರಿಂದ ರಂಧ್ರಗಳಲ್ಲಿರುವ ಪರಸ್ಪರ ಸಂಬಂಧವು ನಿರ್ದೋಷವಾಗಿ ಲಭಿಸುತ್ತದೆ.
2. ಈ ಪರಸ್ಪರ ಸಂಬಂಧವು ಕಾರ್ಯವಸ್ತುವಿನಲ್ಲಿರುವ ರಂಧ್ರಗಳಿಗಿರುತ್ತದೆ. ಅದೇ ಪರಸ್ಪರ ಸಂಬಂಧ ಇಂಡೆಕ್ಸ್ ಪ್ಲೇಟ್ ನಲ್ಲಿರುವ ರಂಧ್ರಗಳಲ್ಲಿಡುವುದು ಅತ್ಯಾವಶ್ಯಕವಾಗಿದೆ. ಈ ವಿಧದ ಜಿಗ್ ದೊಡ್ಡ ಪ್ರಮಾಣದಲ್ಲಿ ಮಾಡಲಾಗುವಂತಹ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಹಾಗೆಯೇ ಈ ರೀತಿಯ ಜಿಗ್ ಗಳನ್ನು ದೊಡ್ಡ ಆಕಾರದ ಕಾರ್ಯವಸ್ತುಗಳಿಗೂ ಬಳಸಲಾಗುತ್ತದೆ. ಉದಾಹರಣೆ, ಕ್ಲಚ್ ಹೌಸಿಂಗ್, ಡಿಫರೆನ್ಷಿಯಲ್ ಹೌಸಿಂಗ್, ಫ್ಲೈ ವೀಲ್ ಇತ್ಯಾದಿ.
ಕಾರ್ಯವಸ್ತು ತುಂಬಾ ದೊಡ್ಡದಿದ್ದಲ್ಲಿ ಮತ್ತು ಹೆವಿಯಾಗಿದ್ದಲ್ಲಿ ಸ್ವಯಂಚಾಲನೆಯನ್ನು ಮಾಡುವುದು ಆವಶ್ಯಕವಾಗಿದೆ. ಫಿಕ್ಸ್ಚರ್ ನ ಇಂಡೆಕ್ಸಿಂಗ್ ಮತ್ತು ಇಂಡೆಕ್ಸ್ ಪಿನ್ ನ ಚಟುವಟಿಕೆಗಳಿಗೆ ಸ್ವಯಂಚಾಲನೆಯನ್ನು ಬಳಸಲಾಗುತ್ತದೆ. ಇಂತಹ ಫಿಕ್ಸ್ಚರ್ ಗಳಲ್ಲಿ ಚಟುವಟಿಕೆಗಳ ಕ್ರಮವನ್ನು ನಿರ್ಧರಿಸುವುದು ತುಂಬಾ ಮಹತ್ವದ್ದಾಗಿದೆ.
ಸಾಮಾನ್ಯವಾಗಿ ಇಂಡೆಕ್ಸ್ ಪಿನ್ ಮತ್ತು ಅದಕ್ಕೋಸ್ಕರ ಬೇಕಾಗುವ ಭಾಗಗಳನ್ನು ಜಿಗ್ ನ ಫಿಕ್ಸ್ ಭಾಗದಲ್ಲಿ ಅಳವಡಿಸಲಾಗಿರುತ್ತದೆ. ಈ ಪಿನ್ ಚಟುವಟಿಕೆ ಮಾಡುವಂತಹ ಇಂಡೆಕ್ಸ್ ಪ್ಲೇಟ್ ನಲ್ಲಿ ಮಾಡಿರುವ ರಂಧ್ರಗಳಲ್ಲಿ ಅಥವಾ ಕಚ್ಚುಗಳಲ್ಲಿ ಅಳವಡಿಸಲ್ಪಡುತ್ತದೆ.
ಇಂಡೆಕ್ಸಿಂಗ್ ನ ಅನೇಕ ವಿಧಗಳ ಮತ್ತು ರಚನೆ
ಈ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿರುವ ಇಂಡೆಕ್ಸಿಂಗ್ ಫಿಕ್ಸ್ಚರ್ ನ ಕಾಲ್ಪನಿಕ ಚಿತ್ರವನ್ನು ಚಿತ್ರ ಕ್ರ. 1 ರಲ್ಲಿ ನೀಡಲಾಗಿದೆ.
ಸ್ಪ್ರಿಂಗ್ ಹೊಂದಿರುವ ಇಂಡೆಕ್ಸ್ ಪಿನ್
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಇಂಡೆಕ್ಸ್ ಪಿನ್ ಕೈಯಿಂದ ಹಿಂದೆ ಎಳೆಯಲಾಗುತ್ತದೆ. ಅದರ ನಂತರ ಇಂಡೆಕ್ಸ್ ಪ್ಲೇಟ್ ತಿರುಗಿಸಲಾಗುತ್ತದೆ. ಇಂಡೆಕ್ಸ್ ಪ್ಲೇಟ್ ಸ್ವಲ್ಪವಾದರೂ ತಿರುಗಿಸಿದರೆ ಮತ್ತು ಇಂಡೆಕ್ಸ್ ಪಿನ್ ಬಿಟ್ಟಲ್ಲಿ ಪಿನ್ ನ ಮುಂಭಾಗವು ಪ್ಲೇಟ್ ನ ಹಿಂಭಾಗದಲ್ಲಿರುವ ಸರ್ಫೇಸ್ ನಲ್ಲಿ ಒರಗುತ್ತದೆ. ಇದರಿಂದಾಗಿ ಕೆಲಸಗಾರರಿಗೆ ಪಿನ್ ಹಿಂದೆ ಎಳೆದು ಹಿಡಿಯಬೇಕಾಗುವುದಿಲ್ಲ. ಇಂಡೆಕ್ಸ್ ಪ್ಲೇಟ್ ತಿರುಗಿಸಿದ್ದರಿಂದ ಎರಡನೇ ರಂಧ್ರವು ಇಂಡೆಕ್ಸ್ ಪಿನ್ ನೊಂದಿಗೆ ಮುಂಭಾಗಕ್ಕೆ ಬರುವಾಗ, ಪಿನ್ ಸ್ಪ್ರಿಂಗ್ ನ ಫೋರ್ಸ್ ನಿಂದಾಗಿ ತನ್ನಷ್ಟಕ್ಕೆ ಇಂಡೆಕ್ಸ್ ಪ್ಲೇಟ್ ನಲ್ಲಿರುವ ರಂಧ್ರದೊಳಗೆ ಹೋಗುತ್ತದೆ. ಇಂಡೆಕ್ಸ್ ಪಿನ್ ಗೆ ಮತ್ತು ಬುಶ್ ಗೆ ನೀಡಿರುವ ಚ್ಯಾಂಫರ್ ನ ಉಪಯೋಗವೂ ಆಗುತ್ತದೆ. ಅರ್ಥಾತ್ ಪಿನ್ ಇಂಡೆಕ್ಸ್ ಪ್ಲೇಟ್ ನಲ್ಲಿರುವ ರಂಧ್ರದೊಳಗೆ ಹೋಗಲು ಕೆಲಸಗಾರರಿಗೆ ಬೇರೆ ಪ್ರಯತ್ನ ಮಾಡಬೇಕಾಗುವುದಿಲ್ಲ. ಇದು ಕೇವಲ ಸ್ಪ್ರಿಂಗ್ ಬಳಸಿದ್ದರಿಂದಲೇ ಸಾಧ್ಯವಾಗುತ್ತದೆ.
ಸರಿಯುವ ಇಂಡೆಕ್ಸ್ ಪಿನ್
ಚಿತ್ರ ಕ್ರ. 2 ರಲ್ಲಿ ತೋರಿಸಿರುವ ಡಿಸೈನ್ ನಲ್ಲಿ ಸ್ಪ್ರಿಂಗ್ ಬಳಸಲಾಗಿಲ್ಲ. ಇದರಿಂದಾಗಿ ಪಿನ್ ಇಂಡೆಕ್ಸ್ ಪ್ಲೇಟ್ ನಲ್ಲಿರುವ ರಂಧ್ರಗಳಲ್ಲಿ ಅಳವಡಿಸಬೇಕಾಗುತ್ತದೆ, ಆಗ ಆದರೆ ಕೆಲಸಗಾರರಿಗೆ ವಿಶೇಷ ಮುತುವರ್ಜಿ ವಹಿಸಬೇಕಾಗುತ್ತದೆ. ಇಂಡೆಕ್ಸ್ ಪಿನ್ ನಲ್ಲಿ ಡೈಮಂಡ್ ನ ಆಕಾರದ ಭಾಗವು ನಿರ್ಧಾರಿತ ಸ್ಥಿತಿಯಲ್ಲಿರುವುದಕ್ಕೋಸ್ಕರ ಪಿನ್ ನಲ್ಲಿ ವಿಶಿಷ್ಟ ರೀತಿಯ ಕಚ್ಚುಗಳನ್ನು ನೀಡಲಾಗಿರುತ್ತದೆ. ಈ ಕಚ್ಚಿನಲ್ಲಿ ಅಳವಡಿಸಲ್ಪಡುವಂತಹ ವಿಶಿಷ್ಟ ಡಾಗ್ ಪಾಯಿಂಟ್ ಸ್ಕ್ರೂ ಅಳವಡಿಸಲಾಗಿರುತ್ತದೆ.
ಬಾಲ್ ಟೈಪ್ ಇಂಡೆಕ್ಸಿಂಗ್
ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಸ್ಪ್ರಿಂಗ್ ನ ಫೋರ್ಸ್ ನಿಂದ ಕಾರ್ಯನಿರತವಾಗಿರುವ ಬಾಲ್ ತೋರಿಸಲಾಗಿದೆ. ಇಂಡೆಕ್ಸ್ ಪ್ಲೇಟ್ ನಲ್ಲಿ ತ್ರಿಕೋನಾಕಾರದ ಹೊಂಡಗಳನ್ನು (ಕೋನಿಕಲ್ ಡಿಂಪಲ್ಸ್) ತಯಾರಿಸಲಾಗಿದೆ. ಇಂಡೆಕ್ಸ್ ಪ್ಲೇಟ್ ತಿರುಗಿಸಿದನಂತರ ಬಾಲ್ ಒತ್ತಲಾಗುತ್ತದೆ. ಪ್ಲೇಟ್ ನಲ್ಲಿರುವ ಎರಡನೇ ಹೊಂಡದ ಎದುರು ಬಾಲ್ ಬಂದ ನಂತರ ಅದು ಮತ್ತೆ ಹೊಂಡದ ಕಡೆಗೆ ಬರುತ್ತದೆ ಮತ್ತು ಇಂಡೆಕ್ಸಿಂಗ್ ನ ಕಾರ್ಯವು ಪೂರ್ಣವಾಗುತ್ತದೆ. ಬಾಲ್ ಕಳಚಬಾರದು ಎಂಬುದಕ್ಕೋಸ್ಕರ ರಿಟೇನಿಂಗ್ ಪ್ಲೇಟ್ ಅಳವಡಿಸಲಾಗಿರುತ್ತದೆ. ಪೋರ್ ವೀಲರ್ ಗಳಲ್ಲಿ ಯಾವ ರೀತಿಯಲ್ಲಿ ಗಿಯರ್ ಬದಲಾಯಿಸುವಾಗ ತಿಳಿಯುತ್ತದೆಯೋ, ಅದೇ ರೀತಿಯ ಅನುಭವವು ಈ ವಿಧದ ಇಂಡೆಕ್ಸಿಂಗ್ ನಲ್ಲಿ ಬಳಸಲಾಗುತ್ತದೆ. ಈ ರೀತಿಯ ಇಂಡೆಕ್ಸಿಂಗ್ ಚಿಕ್ಕ ಕಾರ್ಯವಸ್ತುಗಳಿಗೆ ಬಳಸಲಾಗುತ್ತದೆ. ಯಂತ್ರಣೆಯ ಫೋರ್ಸ್ ಹೆಚ್ಚು ಉಂಟಾದಲ್ಲಿ ಬಾಲ್ ಕೆಳಗೆ ಒತ್ತಲ್ಪಡುತ್ತದೆ. ಇದರಿಂದಾಗಿ ಯಂತ್ರಣೆಯು ಬೇಕಾದಂತೆ ಆಗುವುದಿಲ್ಲ. ಈ ರೀತಿಯನ್ನು ಬಳಸುವುದರಿಂದ ಖರ್ಚು ಕಡಿಮೆಯಾಗುತ್ತದೆ ಮತ್ತು ತಯಾರಿಸಲು ಮತ್ತು ಬಳಸಲೂ ಸುಲಭವಾಗಿರುತ್ತದೆ.
ರೇಕ್ ಮತ್ತು ಪಿನಿಯನ್ ಟೈಪ್ ಇಂಡೆಕ್ಸಿಂಗ್
ಚಿತ್ರ ಕ್ರ. 4 ಅ ಇದರಲ್ಲಿ ತೋರಿಸಿದಂತೆ ಪಿನಿಯನ್ ನಿಂದಾಗಿ ರೇಕ್ (ಪಿನ್) ಮೇಲೆ ಕೆಳಗೆ ಸರಿಯುತ್ತದೆ. ಆಡ್ಡ ಅಥವಾ ನೆಟ್ಟಗಿರುವ ಹಂತದಲ್ಲಿ ಇಂಡೆಕ್ಸ್ ಪ್ಲೇಟ್ ಇದ್ದರೂ ಕೂಡಾ ಈ ರೀತಿಯ ಪರಿಸ್ಥಿತಿಯಲ್ಲಿ ಈ ವಿಧದ ಇಂಡೆಕ್ಸಿಂಗ್ ಬಳಸಲಾಗುತ್ತದೆ. ವಿಶೇಷವಾಗಿ ದೊಡ್ಡ ಕಾರ್ಯವಸ್ತುಗಳಿಗೆ ಇದನ್ನು ಬಳಸಲಾಗುತ್ತದೆ. ಲಿವ್ಹರ್ ಮೇಲೆ ಕೆಳಗೆ ಮಾಡಿದಾಗ ಪಿನ್ ಮೇಲೆ ಕೆಳಗೆ ಸರಿಯುತ್ತದೆ. ಅನೇಕ ಬಾರಿ ಪಿನ್ ಸ್ವಯಂಚಾಲನೆಯಿಂದ ಮೇಲೆ ಕೆಳಗೆ ಮಾಡಲಾಗುತ್ತದೆ. ರೇಕ್ ಮತ್ತು ಪಿನಿಯನ್ ಇದು ಎರಡೂ ಭಾಗಗಳು ಕೇಸ್ ಹಾರ್ಡ್ ಮತ್ತು ಗ್ರೈಂಡಿಂಗ್ ಮಾಡಬೇಕಾಗುವುದರಿಂದ ಇದು ತುಂಬಾ ದುಬಾರಿಯಾಗಿದೆ. ಆದರೆ ಇಂಡೆಕ್ಸಿಂಗ್ ಪಿನ್ ಜಾಗವು ಅಡಚಣೆಯ ಜಾಗದಲ್ಲಿರುತ್ತದೆ, ಆಗ ಈ ವಿಧದ ಡಿಸೈನ್ ಬಳಸಬೇಕಾಗುತ್ತದೆ. ಹೆಚ್ಚು ಉದ್ದದ ಲಿವ್ಹರ್ ನಿಂದಾಗಿ ರೇಕ್ ಸಹಜವಾಗಿ ಕಾರ್ಯಗತವಾಗುತ್ತದೆ. ರೇಕ್, ಪಿನಿಯನ್ ಮತ್ತು ಬುಶ್ ಇದು ಹಾರ್ಡ್ ಮಾಡಬೇಕು. ಚಿತ್ರ ಕ್ರ. 4 ಆ ಇದರಲ್ಲಿ ತೋರಿಸಿದಂತೆ ಒಂದು ವೇಳೆ ಬುಶ್ ಅಳವಡಿಸಿದಲ್ಲಿ ರೇಕ್ ಮೇಲೆ ಬರುವಾಗ ಬುಶ್ ಮೇಲೆ ತಳ್ಳಲ್ಪಟ್ಟು ಕಳಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ರೀತಿಯಲ್ಲಿ ಬುಶ್ ಅಳವಡಿಸಬಾರದು.
ಚಿತ್ರ ಕ್ರ. 4 ಇ ಯಲ್ಲಿ ರೇಕ್ ನ ಮೇಲ್ಭಾಗದ ದಪ್ಪವು ಕಡಿಮೆಯಾಗುತ್ತಾ ಹೋಗುವಂತೆ ಮಾಡಲಾಗಿದೆ. ಹಾಗೆಯೇ ಕಾಲರ್ ಬುಶ್ ಕೂಡಾ ದಪ್ಪ ಕಡಿಮೆಯಾಗುತ್ತಾ ಹೋಗುವಂತೆ ಮಾಡಲಾಗಿದೆ. ಈ ವಿಧದ ಟೇಪರ್ ನೀಡುವ ಕಾರಣವೆಂದರೆ ನೇರವಾದ ವರ್ಟಿಕಲ್ ಉರುಟು ಆಕಾರದ ಪಿನ್ ನಿರಂತರವಾಗಿ ಬಳಸಿದ್ದರಿಂದ ಅದು ಸವೆಯುತ್ತದೆ ಮತ್ತು ಇದರಿಂದಾಗಿ ಸಂಪೂರ್ಣ ರೇಕ್ ಬದಲಾಯಿಸಬೇಕಾಗುತ್ತದೆ. ರೇಕ್ ಬದಲಾಯಿಸುವುದು ತುಂಬಾ ದುಬಾರಿ ಮತ್ತು ತಯಾರಿಸಲು ತುಂಬಾ ಸಮಯವೂ ಬೇಕಾಗುತ್ತದೆ. ಟೇಪರ್ ರೇಕ್ ನೀಡಿದ್ದರಿಂದ ಪಿನ್ ನ ಅಥವಾ ಬುಶ್ ನ ವ್ಯಾಸವು ಚಿಕ್ಕದು ಅಥವಾ ದೊಡ್ಡದಾಗುತ್ತದೆಯೋ, ಹಾಗೆಯೇ ಪಿನ್ ಮುಂದೆ ಮುಂದೆ ಸರಿಯುತ್ತದೆ. ಇದರಿಂದಾಗಿ ಪಿನ್ ಮತ್ತು ಬುಶ್ ನ ಬಾಳಿಕೆಯಲ್ಲಿ ಹೆಚ್ಚಳವಾಗುತ್ತದೆ.
ಇಂಡೆಕ್ಸಿಂಗ್ ಪ್ಲೇಟ್ ನಲ್ಲಿ ಅಳವಡಿಸಿರುವ ಇಂಡೆಕ್ಸಿಂಗ್ ಪಿನ್
ಚಿತ್ರ ಕ್ರ. 5ಅ ರಲ್ಲಿ ಇಂಡೆಕ್ಸ್ ಪಿನ್, ಇಂಡೆಕ್ಸಿಂಗ್ ಪ್ಲೇಟ್ ನಲ್ಲಿ ಅಂದರೆ ಚಟುವಟಿಕೆಯನ್ನು ಮಾಡುವ ಪ್ಲೇಟ್ ನಲ್ಲಿ ಅಳವಡಿಸಲಾಗಿದೆ. ಈ ತನಕ ಇಂಡೆಕ್ಸ್ ಪಿನ್ ಫಿಕ್ಸ್ ಪ್ಲೇಟ್ ನಲ್ಲಿ ಅಳವಡಿಸಲಾಗಿತ್ತು. ಇಂಡೆಕ್ಸ್ ಪ್ಲೇಟ್ ನಲ್ಲಿ ಒಂದೇ ರಂಧ್ರವಿರುತ್ತದೆ ಮತ್ತು ಫಿಕ್ಸ್ ಪ್ಲೇಟ್ ನಲ್ಲಿ ಕಾರ್ಯವಸ್ತುವಿನಲ್ಲಿ ಎಷ್ಟು ರಂಧ್ರಗಳಿರುತ್ತವೆಯೋ, ಅಷ್ಟೇ ರಂಧ್ರಗಳನ್ನು ಮಾಡಬೇಕಾಗುತ್ತದೆ. ಚಿತ್ರ ಕ್ರ. 5ಬ ದಲ್ಲಿ ಟೇಪರ್ ಪಿನ್ ತೋರಿಸಲಾಗಿದೆ.
ಈ ತನಕ ನಾವು ಇಂಡೆಕ್ಸ್ ಪ್ಲೇಟ್ ಗೆ ನೆಟ್ಟಗಿರುವ ಸ್ಥಿತಿಯಲ್ಲಿ ಅಂದರೆ ಕೆಳಗಿನಿಂದ ಅಥವಾ ಹಿಂದಿನಿಂದ ಅಳವಡಿಸಿರುವ ಇಂಡೆಕ್ಸ್ ಪಿನ್ ನೋಡಿದೆವು. ಇಂಡೆಕ್ಸ್ ಪ್ಲೇಟ್ ನ ಮಧ್ಯಭಾಗದ ಕಡೆಗೆ ಹಿಂದೆ-ಮುಂದೆ ಚಲಿಸುವ ಇಂಡೆಕ್ಸ್ ಪಿನ್ ನ ಮಾಹಿತಿಯನ್ನು ಈ ಮುಂದೆ ನೀಡಲಾಗಿದೆ.
ಮಧ್ಯಭಾಗದೆಡೆಗೆ ಹಿಂದೆ-ಮುಂದೆ ಸರಿಯುವ ಇಂಡೆಕ್ಸ್ ಪಿನ್
ಚಿತ್ರ ಕ್ರ. 6ಅ ಇದರಲ್ಲಿ ತೋರಿಸಿದಂತೆ ಇಂಡೆಕ್ಸ್ ಪಿನ್ ನ ಮುಂಭಾಗವು ಸಮಾನಾಂತರವಾದ ಕಚ್ಚಿನಲ್ಲಿ ಲೊಕೇಟ್ ಆಗುತ್ತದೆ. ಈ ಕಚ್ಚು ಕಾಲಾಂತರದಲ್ಲಿ ಸವೆದು ದೊಡ್ಡದಾಗುತ್ತದೆ. ಇದರಿಂದಾಗಿ ಈ ಪಿನ್ ಬದಲಾಯಿಸಬೇಕಾಗುತ್ತದೆ. ಇದಕ್ಕೋಸ್ಕರ ಮೇಲೆ ತಿಳಿಸಿದ ಉಪಾಯವನ್ನು ಮಾಡಬಹುದು. ಪಿನ್ ನ ಮುಂಭಾಗವು ಮೃದುವಾಗಿ ಮಾಡಿದರೆ (ತುದಿಯಲ್ಲಿ ಕಡಿಮೆ ಅಗಲವಿರುವಂತೆ) ಈ ಪಿನ್ ಹೆಚ್ಚು ಕಾಲ ಬಳಸಬಹುದು. ಪಿನ್ ನ ಅಥವಾ ಟೇಪರ್ ಸ್ಲಾಟ್ ನ ಸವೆತವಾದರೂ, ಪಿನ್ ಮುಂದೆ ಮುಂದೆ ಹೋಗುತ್ತದೆ ಮತ್ತು ಇಂಡೆಕ್ಸಿಂಗ್ ನಿರ್ದೋಷವಾಗಿ ಆಗುತ್ತದೆ. (ಚಿತ್ರ ಕ್ರ. 6ಆ).
ಈಗ ನಾವು ತುಂಬಾ ಸುಲಭವಾದ ಮತ್ತು ಅಚ್ಚುಕಟ್ಟಾದ ರೇಚೇಟ್ ಟೈಪ್ ಇಂಡೆಕ್ಸಿಂಗ್ ನ ವ್ಯವಸ್ಥೆಯನ್ನು ನೋಡೋಣ. ಚಿತ್ರ ಕ್ರ. 7 ರಲ್ಲಿ ತಮಗೆ ಕಂಡು ಬರುವಂತೆ ಇಂಡೆಕ್ಸಿಂಗ್ ಕೇವಲ ಒಂದೇ ದಿಕ್ಕಿನಲ್ಲಿ ಆಗುತ್ತದೆ. ಅದು ವಿರುದ್ಧ ದಿಕ್ಕಿನಲ್ಲಿ ತಿರುಗುವುದಿಲ್ಲ. ಚಿತ್ರ ಕ್ರ. 7 ರಲ್ಲಿ ಸ್ಪ್ರಿಂಗ್ ನ ಫೋರ್ಸ್ ನಲ್ಲಿ ಕೆಲಸ ನಿರ್ವಹಿಸುವ ಇಂಡೆಕ್ಸಿಂಗ್ ಪಿನ್ (ಪ್ಲಂಜರ್) ಕಾಣುತ್ತಿದೆ. ಇಂಡೆಕ್ಸ್ ಪ್ಲೇಟ್ ನಲ್ಲಿ ವಿಶಿಷ್ಟವಾದ ಕಚ್ಚುಗಳನ್ನು ಮಾಡಲಾಗಿದೆ. ಈ ಕಚ್ಚುಗಳ ಒಂದು ಭಾಗವು ನೇರವಾಗಿ ಲಂಬರೂಪದಲ್ಲಿದೆ, ಇನ್ನೊಂದು ಸರ್ಫೇಸ್ ಟೇಪರ್ ಆಗಿದೆ.
1. ಟೇಪರ್ ನಿಂದಾಗಿ ಕಾರ್ಯವಸ್ತು ಕೇವಲ ಒಂದೇ ದಿಕ್ಕಿನಲ್ಲಿ ಅಂದರೆ ಗಡಿಯಾರದ ಮುಳ್ಳುಗಳಂತೆ ವಿರುದ್ಧ ದಿಕ್ಕಿನಲ್ಲಿ ತಿರುಗಬಲ್ಲದು. ಚಿತ್ರ ಕ್ರ. 7 ರಲ್ಲಿ ತಿರುಗುವ ದಿಕ್ಕನ್ನು ತೋರಿಸಲಾಗಿದೆ.
2. ಪ್ಲಂಜರ್ ಹೇಗೆ ಸವೆಯುತ್ತದೆಯೋ, ಹಾಗೆಯೇ ಅದು ಮುಂದೆ ಸರಿಯುತ್ತದೆ ಮತ್ತು ಇದರಿಂದಾಗಿ ಅದರ ಸವೆತದ ವಿಪರೀತವಾದ ಪರಿಣಾಮವು ಇಂಡೆಕ್ಸಿಂಗ್ ನ ನಿರ್ದೋಷತ್ವದಲ್ಲಿ ಉಂಟಾಗುವುದಿಲ್ಲ.
ಅರ್ಥಾತ್, ಎಲ್ಲಿ ಯಂತ್ರಣೆಯ ಬಲವು ಕಡಿಮೆ ಇದೆಯೋ, ಈ ಜಾಗದಲ್ಲಿ ಈ ವ್ಯವಸ್ಥೆಯನ್ನು ಬಳಸುವಲ್ಲಿ ಯಾವುದೇ ತೊಂದರೆ ಇಲ್ಲ. ಇದರಲ್ಲಿ ಕೆಲಸಗಾರರಿಗೆ ಕೇವಲ ಕಾರ್ಯವಸ್ತು ಅಥವಾ ಇಂಡೆಕ್ಸ್ ಪ್ಲೇಟ್ ತಿರುಗಿಸುವುದಷ್ಟೇ ಕೆಲಸ ಮಾಡಬೇಕಾಗುತ್ತದೆ. ಇದರಲ್ಲಿ ನಿರ್ವಹಣೆಯ ಖರ್ಚು ನಗಣ್ಯವಾಗಿದ್ದು ದೃಶ್ಯತೆ (ವಿಸಿಬಿಲಿಟಿ) ಉಚ್ಚಮಟ್ಟದ್ದಾಗಿರುತ್ತದೆ. ಕಾರ್ಯವಸ್ತುವಿನಲ್ಲಿರುವ ರಂಧ್ರಗಳಷ್ಟು ಕಚ್ಚುಗಳು ಇಂಡೆಕ್ಸ್ ಪ್ಲೇಟ್ ನಲ್ಲಿ ಮಾಡಬೇಕಾಗುತ್ತವೆ. ಈ ರೀತಿ ಅನೇಕ ವಿಧದ ಇಂಡೆಕ್ಸಿಂಗ್ ಗೋಸ್ಕರ ಬೇಕಾಗುವ ವ್ಯವಸ್ಥೆಗಳನ್ನು ತಾವು ಬಳಸಬಹುದು.
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು,
ARAI SAE
9011018388
[email protected] ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.